ಎರಡು ದಿವಸಗಳಲ್ಲಿ ಪಸ್ಕ ಹಬ್ಬ ಬರುತ್ತಿದೆ ಎಂದು ಯೇಸು ಹೇಳಿದನು [೨೬:೨].
ಯೇಸುವನ್ನು ಬಂಧಿಸಿ ಕೊಲ್ಲಬೇಕೆಂದು ಅವರು ಸಂಚು ರೂಪಿಸುತ್ತಿದ್ದರು [೨೬:೪].
ಹಬ್ಬದ ಸಮಯದಲ್ಲಿ ಯೇಸುವನ್ನು ಕೊಂದರೆ ಜನರು ದಂಗೆ ಏಳಬಹುದೆಂದು ಅವರು ಭಯಪಡುತ್ತಿದ್ದರು [೨೬:೫].
ಶಿಷ್ಯರು ಕೋಪ ಮಾಡಿಕೊಂಡರು ಮತ್ತು ತೈಲವನ್ನು ಹಣಕ್ಕೆ ಮಾರಿ ಬಡವರಿಗೆ ಯಾಕೆ ಕೊಡಲಿಲ್ಲ ಎಂದು ಹೇಳಿದರು [೨೬:೬-೯].
ತನ್ನ ಅತ್ಯಸಂಸ್ಕಾರಕ್ಕಾಗಿ ಆಕೆಯು ತೈಲವನು ಹೊಯ್ದಿದ್ದಾಳೆ ಎಂದು ಯೇಸು ಹೇಳಿದನು [೨೬:೧೨].
ಯೇಸುವನ್ನು ಮಹಾಯಾಜಕರ ಕೈಗಳಿಗೆ ಹಿಡಿದುಕೊಡುವ ಸಲುವಾಗಿ ಯೂದನಿಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ಕೊಡಲಾಯಿತು [೨೬:೧೪-೧೫].
ತನ್ನನ್ನು ಹಿಡಿದುಕೊಡುವ ವ್ಯಕ್ತಿ ಭೂಮಿಯಲ್ಲಿ ಹುಟ್ಟದಿದ್ದರೇನೇ ಚೆನ್ನಾಗಿರುತ್ತಿತ್ತು ಎಂದು ಹೇಳಿದನು [೨೬:೨೪].
"ನೀನೇ ಅದನ್ನು ಹೇಳಿರುವೆ" ಎಂದು ಯೇಸು ಹೇಳಿದನು [೨೬:೨೫].
"ತಕ್ಕೊಂಡು ತಿನ್ನಿರಿ. ಇದು ನನ್ನ ದೇಹ" ಎಂದು ಹೇಳಿದನು [೨೬:೨೬].
ಇದು ಒಡಂಬಡಿಕೆಯನ್ನು ಸೂಚಿಸುವ ನನ್ನ ರಕ್ತವಾಗಿದ್ದು ಪಾಪಗಳ ಕ್ಷಮಾಪಣೆಗಾಗಿ ಸುರಿಸಲ್ಪಡುವದು ಎಂಬದಾಗಿ ಹೇಳಿದನು [೨೬:೨೮].
ಆ ದಿನ ರಾತ್ರಿ ಅವರೆಲ್ಲರೂ ಆತನ ನಿಮಿತ್ತವಾಗಿ ಬಿದ್ದುಹೋಗುವರು ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು [೨೬:೩೦-೩೧].
ಕೋಳಿ ಕೂಗುವ ಮೊದಲು ಪೇತ್ರನು ನನ್ನನ್ನು ಅರಿಯೆನು ಎಂಬದಾಗಿ ಮೂರು ಸಲ ಹೇಳುವನು ಎಂಬದಾಗಿ ಹೇಳಿದನು [೨೬:೩೩-೩೪].
ಯೇಸು ಅವರಿಗೆ ಇಲ್ಲಿಯೇ ಇದ್ದು ಎಚ್ಚರವಾಗಿ ಪ್ರಾರ್ಥನೆಮಾಡಿರಿ ಎಂದು ಹೇಳಿದನು [೨೬:೩೭-೩೮].
ತಂದೆಯೇ ಒಂದುವೇಳೆ ನಿನ್ನ ಚಿತ್ತವಾದರೆ ಈ ಪಾತ್ರೆಯನ್ನು ನನ್ನಿಂದ ತೊಲಗಿಸು ಎಂದು ಬೇಡಿಕೊಂಡನು [೨೬:೩೯].
ತನ್ನ ಚಿತ್ತದಂತಲ್ಲದೆ ತಂದೆಯ ಚಿತ್ತವೇ ಆಗಬೇಕೆಂದು ಯೇಸು ಬೇಡಿಕೊಂಡನು [೨೬:೩೯-೪೨].
ಯೇಸು ಪ್ರಾರ್ಥನೆ ಮಾಡಿ ಹಿಂದಿರುಗಿ ಬಂದಾಗ ಶಿಷ್ಯರು ನಿದ್ದೆ ಮಾಡುತ್ತಿದ್ದರು [೨೬:೪೦,೪೩,೪೫].
ಯೇಸು ತನ್ನ ಶಿಷ್ಯರನ್ನು ಮೂರು ಸಲ ಬಿಟ್ಟು ಹೋಗಿ ಪ್ರಾರ್ಥನೆ ಮಾಡಿದನು [೨೬:೩೯-೪೪].
ಯೇಸುವನ್ನು ಹಿಡಿಯಬೇಕೆಂಬದನ್ನು ತೋರಿಸಲು ಯೂದನು ಆತನಿಗೆ ಮುತ್ತು ಕೊಟ್ಟನು [೨೬:೪೭-೫೦].
ಯೇಸುವನ್ನು ಹಿಡಿದಾಗ ಆತನ ಶಿಷ್ಯರಲ್ಲಿ ಒಬ್ಬನು ತನ್ನ ಕತ್ತಿಯನ್ನು ತೆಗೆದನು ಮತ್ತು ಮಹಾಯಾಜಕನ ಸೇವಕನ ಕಿವಿಯನ್ನು ಕತ್ತರಿಸಿದನು [೨೬:೫೧].
ತಂದೆಯನ್ನು ಬೇಡಿಕೊಂಡರೆ ಆತನು ಹನ್ನೆರೆಡು ಗಣಗಳಿಗಿಂತ ಹೆಚ್ಚು ದೇವದೂತರನ್ನು ಕಳುಹಿಸುವನು ಎಂದು ಯೇಸು ಹೇಳಿದನು [೨೬:೫೩].
ಈ ಘಟನೆಗಳಿಂದ ಶಾಸ್ತ್ರವು ನೆರವೇರಿತು ಎಂಬದಾಗಿ ಯೇಸು ಹೇಳಿದನು [೨೬:೫೪,೫೬].
ಆಗ ಶಿಷ್ಯರೆಲ್ಲರೂ ಆತನನ್ನು ಬಿಟ್ಟು ಓಡಿಹೋದರು [೨೬:೫೬].
ಯೇಸುವನ್ನು ಕೊಲ್ಲಲು ಅವರು ಸುಳ್ಳು ಸಾಕ್ಷಿಯನ್ನು ಎದುರುನೋಡುತ್ತಿದ್ದರು [೨೬:೫೯].
ಮಹಾಯಾಜಕರು ಯೇಸುವಿಗೆ ನೀನು ದೇವರ ಮಗನಾಗಿರುವ ಕ್ರಿಸ್ತನೋ ಅಲ್ಲವೋ ಎಂಬದಾಗಿ ಹೇಳುವಂತೆ ಆಜ್ಞೆ ಕೊಟ್ಟನು [೨೬:೬೩].
"ನೀನೇ ಅದನ್ನು ಹೇಳಿರುವೆ" ಎಂದು ಯೇಸು ಅವನಿಗೆ ಉತ್ತರ ಕೊಟ್ಟನು [೨೬:೬೪].
ಮನುಷ್ಯಕುಮಾರನು ಬಲಗಡೆಯಲ್ಲಿ ಕುಳಿತಿರುವದನ್ನು ಮತ್ತು ಆಕಾಶದಲ್ಲಿ ಇಳಿದುಬರುವದನ್ನು ನೋಡುವದಾಗಿ ಹೇಳಿದನು [೨೬:೬೪].
ಯೇಸು ದೇವದೂಷಣೆ ಮಾಡುತ್ತಿದ್ದಾನೆ ಎಂಬ ಆರೋಪವನ್ನು ಯೇಸು ಅವನ ಮೇಲೆ ಮಾಡಿದನು [೨೬:೬೫].
ಅವರು ಯೇಸುವಿನ ಮುಖದ ಮೇಲೆ ಉಗುಳಿದರು, ಗುದ್ದಿದರು ಮತ್ತು ಆತನ ಕೆನ್ನೆಗೆ ತಮ್ಮ ಕೈಗಳಿಂದ ಹೊಡೆದು ಹಾಸ್ಯ ಮಾಡಿದರು [೨೬:೬೭].
ನನಗೆ ಯೇಸುವಿನ ಪರಿಚಯವಿಲ್ಲ ಎಂದು ಪೇತ್ರನು ಹೇಳಿದನು [೨೬:೭೦,೭೨,೭೪].
ಪೇತ್ರನು ಮೂರನೆಯ ಸಲ ಉತ್ತರವನ್ನು ಕೊಟ್ಟ ನಂತರ ಕೋಳಿ ಕೂಗಿತು [೨೬:೭೪].
ಕೋಳಿ ಕೂಗುವ ಮೊದಲು ಪೇತ್ರನು ನನ್ನನ್ನು ಮೂರು ಸಲ ಅಲ್ಲಗಳೆಯುವನು ಎಂಬದಾಗಿ ಯೇಸು ಹೇಳಿದ್ದನ್ನು ಅವನು ನೆನಪಿಸಿಕೊಂಡನು [೨೬:೭೫].