Matthew 27

Matthew 27:1

ಬೆಳಗ್ಗೆ ಮಹಾಯಾಜಕರು ಮತ್ತು ಹಿರಿಯರು ಯೇಸುವನ್ನು ಎಲ್ಲಿಗೆ ಕರೆದುಕೊಂಡು ಹೋದರು?

ಬೆಳಗ್ಗೆ ಅವರು ಯೇಸುವನ್ನು ದೇಶಾಧಿಪತಿಯಾದ ಪಿಲಾತನ ಬಳಿಗೆ ಕರೆದುಕೊಂಡು ಹೋದರು [೨೭:೨].

Matthew 27:3

ಯೇಸುವನ್ನು ಹಿಡಿದುಕೊಂಡು ಹೋಗುವದನ್ನು ನೋಡುವ ಸಮಯದಲ್ಲಿ ಇಸ್ಕರಿಯೋತ ಯೂದನು ಏನು ಮಾಡಿದನು?

ಅಮಾಯಕನ ರಕ್ತವನ್ನು ಸುರಿಸಿದ್ದಕ್ಕಾಗಿ ಯೂದನು ಪಶ್ಚಾತ್ತಾಪಪಟ್ಟನು, ಬೆಳ್ಳಿ ನಾಣ್ಯವನ್ನು ಹಿಂದಿರುಗಿಸಿದನು ಮತ್ತು ನೇಣು ಬಿಗಿದು ಕೊಂಡು ಸತ್ತನು [೨೭:೩-೫].

Matthew 27:6

ಮಹಾಯಾಜಕರು ಮೂವತ್ತು ಬೆಳ್ಳಿ ನಾಣ್ಯಗಳನ್ನು ಏನು ಮಾಡಿದರು?

ಅವರು ಪರದೇಶಿಗಳನ್ನು ಹೂಣಿಡಲು ಸ್ಥಳವನ್ನು ಖರೀದಿಸಿದರು [೨೭:೬-೭].

Matthew 27:9

ಈ ಘಟನೆಗಳು ಯಾವ ಪ್ರವಾದನೆಯನ್ನು ನೆರವೇರಿಸಿದವು?

ಇವು ಯೆರೆಮಿಯನ ಪ್ರವಾದನೆಯನ್ನು ನೆರವೇರಿಸಿದವು [೨೭:೯-೧೦].

Matthew 27:11

ಪಿಲಾತನು ಯೇಸುವಿಗೆ ಯಾವ ಪ್ರಶ್ನೆಯನ್ನು ಕೇಳಿದನು ಮತ್ತು ಯೇಸು ಅದಕ್ಕೆ ಕೊಟ್ಟ ಉತ್ತರ ಏನು?

ಪಿಲಾತನು ಯೇಸುವಿಗೆ ನೀನು ಯೆಹೂದ್ಯರ ಅರಸನೋ ಎಂದು ಕೇಳಿದನು ಅದಕ್ಕೆ ಯೇಸು, "ನೀನೇ ಹೇಳಿರುವೆ" ಎಂದು ಹೇಳಿದನು [೨೭:೧೧].

ಮಹಾಯಾಜಕರು ಮತ್ತು ಹಿರಿಯರು ಮಾಡಿದ ಆರೋಪಗಳಿಗೆ ಯೇಸು ಏನೆಂದು ಉತ್ತರಿಸಿದನು?

ಯೇಸು ಒಂದು ಮಾತನ್ನು ಸಹ ಹೇಳಲಿಲ್ಲ [೨೭:೧೨-೧೪].

Matthew 27:15

ಪಸ್ಕ ಹಬ್ಬದ ಪದ್ದತಿಯ ಮೇರೆಗೆ ಪಿತಾಲನು ಯೇಸುವಿಗೆ ಏನು ಮಾಡಬೇಕೆಂದಿದ್ದನು?

ಹಬ್ಬದ ಪದ್ದತಿಯ ಮೇರೆಗೆ ಪಿಲಾತನು ಯೇಸುವನ್ನು ಬಿಡುಗಡೆ ಮಾಡಬೇಕೆಂದಿದ್ದನು [೨೭:೧೫-೧೮].

Matthew 27:17

ಪಿಲಾತನು ನ್ಯಾಯಾಸನದ ಮೇಲೆ ಕುಳಿತಿರುವಾಗ ಅವನ ಹೆಂಡತಿಯು ಅವನಿಗೆ ಯಾವ ಸಂದೇಶವನ್ನು ಕಳುಹಿಸಿದಳು?

ನಿರಪರಾಧಿಯಾಗಿರುವ ಈ ವ್ಯಕ್ತಿಗೆ ಏನೂ ಮಾಡಬೇಡಿರಿ ಎಂದು ಆಕೆ ಹೇಳಿದನು [೨೭:೧೯].

Matthew 27:20

ಹಬ್ಬದ ಪದ್ದತಿಯ ಪ್ರಕಾರ ಯೇಸುವಿಗೆ ಬದಲು ಬರಬ್ಬನನ್ನು ಯಾಕೆ ಬಿಡುಗಡೆ ಮಾಡಲಾಯಿತು?

ಯೇಸುವಿಗೆ ಬದಲಾಗಿ ಬರಬ್ಬನನ್ನು ಬಿಡುಗಡೆ ಮಾಡಿರಿ ಎಂದು ಕೇಳಿಕೊಳ್ಳುವಂತೆ ಮಹಾಯಾಜಕರು ಮತ್ತು ಹಿರಿಯರು ಜನರನ್ನು ಪ್ರೇರಿಸಿದರು [೨೭:೨೦].

ಯೇಸುವನ್ನು ಏನು ಮಾಡಬೇಕೆಂದು ಜನರು ಆರ್ಭಟಿಸಿದರು?

ಯೇಸುವನ್ನು ಶಿಲುಬೆಗೆ ಹಾಕಬೇಕೆಂದು ಜನರು ಆರ್ಭಟಿಸಿದಸ್ರು [೨೭:೨೨-೨೩].

Matthew 27:23

ಜನರ ದೊಂಬಿಯಾಗುವದನ್ನು ನೋಡಿದಾಗ ಪಿಲಾತನು ಏನು ಮಾಡಿದನು?

ಪಿಲಾತನು ತನ್ನ ಕೈಗಳನ್ನು ತೊಳೆದುಕೊಂಡನು, ಈತನ ರಕ್ತಾಪರಾಧದಲ್ಲಿ ನನಗೆ ಪಾಲಿಲ್ಲ ಎಂದು ಹೇಳಿ ಜನರಿಗೆ ಯೇಸುವನ್ನು ಒಪ್ಪಿಸಿದನು [೨೭:೨೪].

Matthew 27:25

ಪಿಲಾತನು ಯೇಸುವನ್ನು ಜನರಿಗೆ ಒಪ್ಪಿಸಿದಾಗ ಅವರು ಏನು ಹೇಳಿದರು?

"ಅವನ ರಕ್ತಾಪರಾಧವು ನಮ್ಮ ಮೇಲೆ ಮತ್ತು ನಮ್ಮ ಮಕ್ಕಳ ಮೇಲೆ ಬರಲಿ" ಎಂದು ಹೇಳಿದರು [೨೭:೨೫].

Matthew 27:27

ಶತಾಧಿಪತಿಯ ಸಿಪಾಯಿಗಳು ಆಗ ಯೇಸುವಿಗೆ ಏನು ಮಾಡಿದರು?

ಸಿಪಾಯಿಗಳು ಆತನ ಮೇಲೆ ಕೆಂಪು ಬಟ್ಟೆಯನ್ನು ಹಾಕಿದರು ಮತ್ತು ತಲೆಯ ಮೇಲೆ ಮುಳ್ಳಿನ ಕಿರೀಟವನ್ನು ಇಟ್ಟರು; ಹಾಸ್ಯ ಮಾಡಿದರು, ಮುಖಕ್ಕೆ ಉಗುಳಿದರು, ತಲೆಯ ಮೇಲೆ ಹೊಡೆದರು, ನಂತರ ಶಿಲುಬೆಗೆ ಹಾಕಿಸಲು ಕರೆದುಕೊಂಡು ಹೋದರು [೨೭:೨೭-೩೧].

ಶತಾಧಿಪತಿಯ ಸಿಪಾಯಿಗಳು ಆಗ ಯೇಸುವಿಗೆ ಏನು ಮಾಡಿದರು?

ಸಿಪಾಯಿಗಳು ಆತನ ಮೇಲೆ ಕೆಂಪು ಬಟ್ಟೆಯನ್ನು ಹಾಕಿದರು ಮತ್ತು ತಲೆಯ ಮೇಲೆ ಮುಳ್ಳಿನ ಕಿರೀಟವನ್ನು ಇಟ್ಟರು; ಹಾಸ್ಯ ಮಾಡಿದರು, ಮುಖಕ್ಕೆ ಉಗುಳಿದರು, ತಲೆಯ ಮೇಲೆ ಹೊಡೆದರು, ನಂತರ ಶಿಲುಬೆಗೆ ಹಾಕಿಸಲು ಕರೆದುಕೊಂಡು ಹೋದರು [೨೭:೨೭-೩೧].

Matthew 27:32

ಕುರೇನೇ ಪಟ್ಟಣದ ಸಿಮೋನನಿಂದ ಒತ್ತಾಯವಾಗಿ ಏನು ಮಾಡಿಸಿದರು?

ಯೇಸುವಿನ ಶಿಲುಬೆಯನ್ನು ಹೊರುವಂತೆ ಕುರೇನೇ ಪಟ್ಟಣದ ಸಿಮೋನನನ್ನು ಒತ್ತಾಯಪಡಿಸಿದರು [೨೭:೩೨].

ಯೇಸುವನ್ನು ಶಿಲುಬೆಗೆ ಹಾಕಲು ಎಲ್ಲಿಗೆ ಕರೆದುಕೊಂಡು ಹೋದರು?

ಅವರು ಕಪಾಲ ಸ್ಥಳವೆಂಬ ಗೊಲ್ಗೊಥಾಗೆ ಕರೆದುಕೊಂಡು ಹೋದರು [೨೭:೩೩].

Matthew 27:35

ಯೇಸುವನ್ನು ಶಿಲುಬೆಗೆ ಹಾಕಿದ ನಂತರ ಶಿಷ್ಯರು ಏನು ಮಾಡಿದರು?

ಯೇಸುವಿನ ಬಟ್ಟೆಯನ್ನು ಪಾಲು ಮಾಡಿಕೊಳ್ಳಲು ಅವರು ಚೀಟು ಹಾಕಿದರು ಮತ್ತು ಕುಳಿತು ಆತನಿಗಾಗುವದನ್ನು ನೋಡಿದರು [೨೭:೩೫-೩೬].

ಯೇಸುವಿನ ತಲೆಯ ಮೇಲೆ ಯಾವ ಫಲಕವನ್ನು ಹಾಕಿದರು?

"ಯೆಹೂದ್ಯರ ಅರಸನಾದ ಯೇಸು" ಎಂಬ ಫಲಕವನ್ನು ಆತನ ತಲೆಯ ಮೇಲೆ ಹಾಕಿದರು [೨೭:೩೭].

Matthew 27:38

ಯೇಸುವಿನೊಂದಿಗೆ ಯಾರನ್ನು ಶಿಲುಬೆಗೆ ಹಾಕಿದರು?

ಯೇಸುವಿನ ಬಲಗಡೆಯನ್ನು ಒಬ್ಬನನ್ನು ಮತ್ತು ಎಡಗಡೆಯಲ್ಲಿ ಒಬ್ಬನನ್ನು ಶಿಲುಬೆಗೆ ಹಾಕಿದರು. ಅವರಿಬ್ಬರೂ ಕಳ್ಳರಾಗಿದ್ದರು [೨೭:೩೮].

ಜನರು, ಮಹಾಯಾಜಕರು, ಶಾಸ್ತ್ರಿಗಳು ಮತ್ತು ಹಿರಿಯರು ಯೇಸುವಿಗೆ ಏನು ಮಾಡುವಂತೆ ಹೇಳಿದರು?

ಅವರೆಲ್ಲರೂ ಯೇಸುವಿಗೆ ಶಿಲುಬೆಯ ಮೇಲಿಂದ ಇಳಿದು ಬಂದು ತನ್ನನ್ನು ರಕ್ಷಿಸಿಕೊಳ್ಳುವಂತೆ ಹೇಳಿದರು [೨೭:೩೯-೪೪].

Matthew 27:45

ಆರನೆಯ ತಾಸಿನಿಂದ ಒಂಭತ್ತನೆಯ ತಾಸಿನ ತನಕ ಏನಾಯಿತು?

ಆರನೆಯ ತಾಸಿನಿಂದ ಒಂಭತ್ತನೆಯ ತಾಸಿನ ತನಕ ದೇಶದ ಮೇಲೆ ಕತ್ತಲೆಯು ಆವರಿಸಿಕೊಂಡಿತು [೨೭:೪೫]

ಒಂಭತ್ತನೆಯ ತಾಸಿನಲ್ಲಿ ಯೇಸು ಏನೆಂದು ಕೂಗಿಕೊಂಡನು?

"ನನ್ನ ದೇವರೇ, ನನ್ನ ದೇವರೇ" ಯಾಕೆ ನನ್ನನ್ನು ಕೈಬಿಟ್ಟಿರುವೆ ಎಂದು ಯೇಸು ಕೂಗಿಕೊಂಡನು [೨೭:೪೬].

Matthew 27:48

ಯೇಸು ಮತ್ತೆ ಗಟ್ಟಿಯಾಗಿ ಕೂಗಿಕೊಂಡ ನಂತರ ಏನಾಯಿತು?

ಯೇಸು ತನ್ನ ಆತ್ಮವನ್ನು ಒಪ್ಪಿಸಿಕೊಟ್ಟನು [೨೭:೫೦].

Matthew 27:51

ಯೇಸು ಸತ್ತ ನಂತರ ದೇವಾಲಯದಲ್ಲಿ ಏನಾಯಿತು?

ಯೇಸು ಸತ್ತ ನಂತರ ದೇವಾಲಯದ ಪರದೆಯು ಮೇಲಿಂದ ಕೆಳಗಿನ ತನಕ ಹರಿದು ಎರಡು ಭಾಗವಾಯಿತು [೨೭:೫೧].

ಯೇಸು ಸತ್ತ ನಂತರ ಸಮಾಧಿಗಳಲ್ಲಿ ಏನಾಯಿತು?

ನಿದ್ದೆ ಹೋಗಿದ್ದ ಅನೇಕ ಭಕ್ತರು ಎದ್ದರು ಮತ್ತು ಯೇಸು ಸತ್ತ ನಂತರ ಅನೇಕರಿಗೆ ಕಾಣಿಸಿಕೊಂಡರು [೨೭:೫೨-೫೩].

Matthew 27:54

ಈ ಎಲ್ಲಾ ಘಟನೆಗಳನ್ನು ನೋಡಿದ, ಶತಾಧಿಪತಿಯ ಸಾಕ್ಷಿ ಏನು?

"ನಿಜವಾಗಿಯೂ ಈತನು ದೇವಕುಮಾರನು" ಎಂಬದು ಆತನ ಸಾಕ್ಷಿಯಾಗಿದೆ [೨೭:೫೪].

Matthew 27:57

ಆತನನ್ನು ಶಿಲುಬೆಗೆ ಹಾಕಿದ ನಂತರ, ಯೇಸುವಿನ ದೇಹಕ್ಕೆ ಏನಾಯಿತು?

ಯೇಸುವಿನ ಶಿಷ್ಯರಲ್ಲಿ ಐಶ್ವರ್ಯವಂತನಾಗಿದ್ದ ಯೋಸೇಫನು, ಯೇಸುವಿನ ದೇಹವನ್ನು ಪಿಲಾತನಿಗೆ ಹೇಳಿ ಪಡೆದುಕೊಂಡನು, ಅದನ್ನು ಬಟ್ಟೆಯಲ್ಲಿ ಸುತ್ತಿದನು ಮತ್ತು ತನ್ನ ಹೊಸದಾದ ಸಮಾಧಿಯಲ್ಲಿ ಇರಿಸಿದನು [೨೭:೫೭-೬೦].

Matthew 27:59

ಯೇಸುವಿನ ದೇಹವನ್ನು ಇರಿಸಿದ ಸಮಾಧಿಯ ಬಾಗಿಲಿಗೆ ಅಡ್ಡವಾಗಿ ಏನನ್ನು ಇಡಲಾಯಿತು?

ಯೇಸುವಿನ ದೇಹವನ್ನು ಇರಿಸಿದ ಸಮಾಧಿಯ ಬಾಗಿಲಿಗೆ ಅಡ್ಡವಾಗಿ ದೊಡ್ಡ ಕಲ್ಲನ್ನು ಇಡಲಾಯಿತು [೨೭:೬೦].

Matthew 27:62

ಮಹಾಯಾಜಕರು ಮತ್ತು ಫರಿಸಾಯರು ಮಾರಣೆಯ ದಿನ ಪಿಲಾತನೊಂದಿಗೆ ಯಾಕೆ ಸೇರಿಬಂದರು?

ಯೇಸುವಿನ ದೇಹವನ್ನು ಯಾರೂ ಕದ್ದುಕೊಂಡು ಹೋಗದಂತೆ ಸಮಾಧಿಯ ಭದ್ರಪಡಿಸಬೇಕೆಂಬದು ಮಹಾಯಾಜಕರು ಮತ್ತು ಫರಿಸಾಯರ ಆಲೋಚನೆಯಾಗಿತ್ತು [೨೭:೬೨-೬೪].

Matthew 27:65

ಸಮಾಧಿಯ ಬಳಿಯಲ್ಲಿ ಏನು ಮಾಡಲು ಪಿಲಾತನು ಅವನಿಗೆ ಅನುಮತಿಯನ್ನು ಕೊಟ್ಟನು?

ಕಲ್ಲಿಗೆ ಮುದ್ರೆಯನ್ನು ಹಾಕಲು ಮತ್ತು ಸಮಾಧಿಯ ಬಳಿಯಲ್ಲಿ ಕಾವಲುಗಾರರನ್ನು ಇರಿಸಲು ಪಿಲಾತನು ಅನುಮತಿಸಿದನು [೨೭:೬೫-೬೬].