Matthew 25

Matthew 25:1

ಬುದ್ದಿಯಿಲ್ಲದ ಕನ್ಯೆಯರು ಮದಲಿಂಗನನ್ನು ಭೇಟಿಯಾಗಲು ಹೋದಾಗ ಏನು ಮಾಡಲಿಲ್ಲ?

ಬುದ್ಧಿಯಿಲ್ಲದ ಕನ್ಯೆಯರು ತಮ್ಮ ದೀಪಗಳಿಗೆ ಬೇಕಾಗುವ ಎಣ್ಣೆಯನ್ನು ತೆಗೆದುಕೊಂಡು ಹೋಗಲಿಲ್ಲ [೨೫:೩].

ಬುದ್ಧಿವಂತೆಯರಾದ ಕನ್ಯೆಯರು ಮದಲಿಂಗನನ್ನು ಭೇಟಿಯಾಗಲು ಹೋದಾಗ ಏನು ಮಾಡಿದರು?

ತಮ್ಮ ದೀಪಗಳಿಗೆ ಬೇಕಾಗುವಷ್ಟು ಎಣ್ಣೆಯನ್ನು ತೆಗೆದುಕೊಂಡು ಹೋದರು [೨೫:೪].

Matthew 25:5

ಮದಲಿಂಗನು ಯಾವಾಗ ಬಂದನು ಅದು ನಿಗದಿಯಾಗಿದ್ದ ಸಮಯವಾಗಿತ್ತೇ?

ಮದಲಿಂಗನು ಮಧ್ಯರಾತ್ರಿಯಲ್ಲಿ ಬಂದನು ಅದು ನಿಗದಿಯಾಗಿದ್ದ ಸಮಯವಲ್ಲ [೨೫:೫-೬].

Matthew 25:10

ಮದಲಿಂಗನು ಬಂದಾಗ ಬುದ್ದಿವಂತೆಯರಾದ ಕನ್ಯೆಯರಿಗೆ ಏನಾಯಿತು?

ಮದಲಿಂಗನು ಬಂದಾಗ ಬುದ್ದಿವಂತೆಯರಾದ ಕನ್ಯೆಯರು ಆತನೊಂದಿಗೆ ಮದುವೆಯ ಔತಣಕ್ಕೆ ಹೋದರು [೨೫:೧೦].

ಮದಲಿಂಗನು ಬಂದಾಗ ಬುದ್ದಿಯಿಲ್ಲದ ಕನ್ಯೆಯರಿಗೆ ಏನಾಯಿತು?

ಮದಲಿಂಗನು ಬಂದಾಗ ಬುದ್ದಿಯಿಲ್ಲದ ಕನ್ಯೆಯರು ಎಣ್ಣೆಯನ್ನು ಕೊಳ್ಳಲು ಹೋಗಬೇಕಾಯಿತು ಮತ್ತು ಅವರು ಹಿಂದಿರುಗಿ ಬಂದಾಗ ಔತಣ ನಡೆಯುವ ಸ್ಥಳದ ಬಾಗಿಲು ಮುಚ್ಚಿತ್ತು [೨೫:೮-೧೨].

ಕನ್ಯೆಯರ ಸಾಮ್ಯದಿಂದ ವಿಶ್ವಾಸಿಗಳು ಏನು ಕಲಿತುಕೊಳ್ಳಬೇಕೆಂಬದು ಯೇಸುವಿನ ಬಯಕೆಯಾಗಿದೆ?

ವಿಶ್ವಾಸಿಗಳಿಗೆ ಯಾವ ದಿನ ಅಥವಾ ಗಳಿಗೆ ಎಂಬದು ಗೊತ್ತಿಲ್ಲದಿರುವದರಿಂದ ಎಚ್ಚರವಾಗಿರಬೇಕೆಂದು ಯೇಸು ಹೇಳಿದನು [೨೫:೧೩].

Matthew 25:14

ಐದು ಮತ್ತು ಎರಡು ತಲಾಂತುಗಳನ್ನು ಪಡೆದವರು ತಮ್ಮ ಯಜಮಾನನು ಪ್ರಯಾಣದಲ್ಲಿರುವಾಗ ಏನು ಮಾಡಿದರು?

ಐದು ತಲಾಂತುಪಡೆದವನು ಐದು ಸಂಪಾದನೆ ಮಾಡಿದನು ಮತ್ತು ಎರಡು ತಲಾಂತು ಪಡೆದವನು ಮತ್ತೆರೆಡು ಸಂಪಾದಿಸಿಕೊಂಡನು [೨೫:೧೬-೧೭].

Matthew 25:17

ಒಂದು ತಲಾಂತು ಪಡೆದ ಸೇವಕನು ತನ್ನ ಯಜಮಾನನು ಪ್ರಯಾಣದಲ್ಲಿರುವಾಗ ಅದರಿಂದ ಏನು ಮಾಡಿದನು?

ಒಂದು ತಲಾಂತು ಪಡೆದವನು ಅದನ್ನು ಭೂಮಿಯಲ್ಲಿ ಅಗೆದು ಅಡಗಿಸಿಟ್ಟನು [೨೫:೧೮].

Matthew 25:19

ಯಜಮಾನನು ಎಷ್ಟು ದಿನ ತನ್ನ ಪ್ರಯಾಣದಲ್ಲಿ ಇದ್ದನು?

ಯಜಮಾನನು ದೀರ್ಘಕಾಲ ದೂರ ಪ್ರಯಾಣದಲ್ಲಿ ಇದ್ದನು [೨೫:೧೯].

ಆತನು ಹಿಂದಿರುಗಿದಾಗ, ಎರಡು ಮತ್ತು ಐದು ತಲಾಂತು ಕೊಟ್ಟವನಿಗೆ ಏನು ಮಾಡಿದನು?

ಯಜಮಾನನು ಹೇಳಿದ್ದೇನೆಂದರೆ, "ಭಲಾ ನಂಬಿಗಸ್ತನಾದ ಒಳ್ಳೇ ಆಳು ನೀನು; ಸ್ವಲ್ಪ ಕೆಲಸದಲ್ಲಿ ನಂಬಿಗಸ್ತನಾಗಿದ್ದಿ, ದೊಡ್ಡ ಕೆಲಸದಲ್ಲಿ ನಿನ್ನನ್ನು ಇಡುತ್ತೇನೆ, ನಿನ್ನ ದಣಿಯ ಸೌಭಾಗ್ಯದಲ್ಲಿ ಸೇರು." [೨೫:೨೦-೨೩].

Matthew 25:26

ಆತನು ಹಿಂದಿರುಗಿದಾಗ, ಒಂದು ತಲಾಂತು ಪಡೆದ ಸೇವಕನಿಗೆ ಯಜಮಾನನು ಏನು ಮಾಡಿದನು?

ಯಜಮಾನನು ಹೇಳಿದ್ದೇನೆಂದರೆ, "ಮೈಗಳ್ಳನಾದ ಕೆಟ್ಟ ಆಳು ನೀನು," ಅವನಿಂದ ಆ ತಲಾಂತನ್ನು ತೆಗೆದುಕೊಳ್ಳಿರಿ ಮತ್ತು ಕತ್ತಲೆಯ ಕೋಣೆಗೆ ಅವನನ್ನು ಹಾಕಿರಿ ಎಂದು ಹೇಳಿದನು [೨೫:೨೪-೩೦].

Matthew 25:31

ಮನುಷ್ಯಕುಮಾರನು ಬಂದು ತನ್ನ ಮಹಿಮೆಯ ಸಿಂಹಾಸನದ ಮೇಲೆ ಕುಳಿತುಕೊಳ್ಳುವಾಗ ಏನು ಮಾಡುವನು?

ಮನುಷ್ಯಕುಮಾರನು ಎಲ್ಲಾ ಜನಾಂಗಗಳನ್ನು ಒಟ್ಟುಗೂಡಿಸುವನು ಮತ್ತು ಜನರನ್ನು ಬೇರೆಯಾಗಿ ಬೇರ್ಪಡಿಸುವನು [೨೫:೩೧-೩೨].

Matthew 25:34

ಅರಸನ ಬಲಭಾಗದಲ್ಲಿರುವವರು ಏನನ್ನು ಹೊಂದುತ್ತಾರೆ?

ಅರಸನ ಬಲಭಾಗದಲ್ಲಿರುವವರು ಲೋಕದ ಪ್ರಾರಂಭದಲ್ಲಿ ಅವರಿಗಾಗಿ ಸಿದ್ಧಮಾಡಲಾಗಿರುವ ರಾಜ್ಯವನ್ನು ಹೊಂದುವರು [೨೫:೩೪].

ಅರಸನ ಬಲಗಡೆಯಲ್ಲಿರುವವರು ತನ್ನ ಜೀವಿತದಲ್ಲಿ ಯಾವ ಕಾರ್ಯವನ್ನು ಮಾಡಿದ್ದಾರೆ?

ಅರಸನ ಬಲಗಡೆಯಲ್ಲಿರುವವರು ಹಸಿವೆಯಲ್ಲಿರುವವರಿಗೆ ಊಟ, ಬಾಯಾರಿದವರಿಗೆ ನೀರು ಕೊಟ್ಟಿದ್ದಾರೆ, ಅಪರಿಚಿತರಿಗೆ ಸಹಾಯ ಮಾಡಿದ್ದಾರೆ, ಬಟ್ಟೆಯಿಲ್ಲದವರಿಗೆ ಬಟ್ಟೆ, ಅನಾರೋಗ್ಯದಲ್ಲಿರುವವರಿಗೆ ಆರೈಕೆ ಮತ್ತು ಸೆರೆಯವರನ್ನು ಭೇಟಿ ಮಾಡುವದನ್ನು ಮಾಡುತ್ತಿದ್ದರು [೨೫:೩೫-೪೦].

Matthew 25:41

ಅರಸನ ಎಡಭಾಗದಲ್ಲಿ ಇರುವವರು ಏನು ಹೊಂದುವರು?

ಅರಸನ ಎಡಭಾಗದಲ್ಲಿರುವವರು ಸೈತಾನನು ಮತ್ತು ಅವನ ದೂತರಿಗೆ ಸಿದ್ದವಾಗಿರುವ ನಿತ್ಯವಾದ ಬೆಂಕಿಗೆ ಗುರಿಯಾಗುವರು [೨೫:೪೧].

Matthew 25:44

ಅರಸನ ಎಡಭಾಗದಲ್ಲಿರುವವರ ಜೀವಿತದಲ್ಲಿ ಏನು ಇಲ್ಲದ್ದಾಗಿದೆ?

ಅರಸನ ಎಡಭಾಗದಲ್ಲಿರುವವರು ಹಸಿವೆಯಲ್ಲಿರುವವರಿಗೆ ಆಹಾರ, ಬಾಯಾರಿದವರಿಗೆ ನೀರು ಕೊಡಲಿಲ್ಲ, ನಿರಾಶ್ರಿತರಿಗೆ ಆಶ್ರಯ, ಬಟ್ಟೆಯಿಲ್ಲದವರಿಗೆ ಬಟ್ಟೆ, ಅನಾರೋಗ್ಯದಲ್ಲಿರುವವರಿಗೆ ಆದರಣೆ ಅಥವಾ ಸೆರೆಯಲ್ಲಿರುವವರನ್ನು ಭೇಟಿ ಹೀಗೆ ಯಾವ ಕಾರ್ಯವನ್ನೂ ಮಾಡಿಲ್ಲ [೨೫:೪೨-೪೫].