ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯುವುದಿಲ್ಲ, ಎಲ್ಲಾ ಕೆಡವಲ್ಪಡುವದು ಎಂದು ಯೇಸು ಪ್ರವಾದನೆ ಹೇಳಿದನು [೨೪:೨].
ಈ ಕಾರ್ಯಗಳು ಯಾವಾಗ ಆಗುವವು ಮತ್ತು ಇವುಗಳು ಆಗುವದಕ್ಕೆ ಮತ್ತು ಲೋಕದ ಅಂತ್ಯಕ್ಕೆ ಗುರುತು ಏನು ಎಂದು ಕೇಳಿದರು [೨೪:೩].
ಅನೇಕರು ನಾನೇ ಕ್ರೈಸ್ತನು ಎಂದು ಹೇಳುತ್ತಾ ಬಂದು ಜನರನ್ನು ಮೋಸಗೊಳಿಸುವರು [೨೪:೫].
ಯುದ್ಧಗಳು, ಬರಗಾಲಗಳು ಮತ್ತು ಭೂಕಂಪಗಳು ಪ್ರಸವವೇದನೆಯ ಪ್ರಾರಂಭವಾಗಿರುವವು ಎಂದು ಯೇಸು ಹೇಳಿದ್ದಾನೆ [೨೪:೬-೮].
ವಿಶ್ವಾಸಿಗಳು ಹಿಂಸೆಯನ್ನು ಅನುಭವಿಸುವರು, ಕೆಲವರು ಎಡವಿಬೀಳುವರು ಮತ್ತು ಒಬ್ಬರನ್ನೊಬ್ಬರು ಹಿಡಿದುಕೊಡುವರು ಹಾಗೂ ಅನೇಕರ ಪ್ರೀತಿಯು ತಣ್ಣಗಾಗುವುದು ಎಂದು ಹೇಳಿದ್ದಾನೆ [೨೪:೯-೧೨].
ಕಡೇತನಕ ತಾಳಿಕೊಳ್ಳುವವರು ರಕ್ಷಣೆ ಹೊಂದುವರು ಎಂದು ಯೇಸು ಹೇಳಿದ್ದಾನೆ [೨೪:೧೩].
ಅಂತ್ಯವು ಬರುವ ಮೊದಲು ದೇವರ ರಾಜ್ಯದ ಸುವಾರ್ತೆಯನ್ನು ಭೂಲೋಕದ ಕಟ್ಟಕಡೆಯ ತನಕ ಸಾರಲಾಗುವುದು [೨೪:೧೪].
ವಿಶ್ವಾಸಿಗಳು ಬೆಟ್ಟಗಳಿಗೆ ಓಡಿಹೋಗಬೇಕು ಎಂದು ಯೇಸು ಹೇಳಿದ್ದಾನೆ [೨೪:೧೫-೧೮].
ಆ ದಿನಗಳಲ್ಲಿ ಹಿಂಸೆಯು ಅತ್ಯಂತವಾಗಿ ಅಂದರೆ ಲೋಕವು ಪ್ರಾರಂಭಗೊಂಡಂದಿನಿಂದ ಎಂದೂ ಬಂದಿರದ ಹಿಂಸೆಯು ಇರುವುದು [೨೪:೨೧].
ಸುಳ್ಳು ಕ್ರೈಸ್ತರು ಮತ್ತು ಸುಳ್ಳು ಪ್ರವಾದಿಗಳು ಅದ್ಭುತಕಾರ್ಯಗಳು ಮತ್ತು ಸೂಚಕಕಾರ್ಯಗಳನ್ನು ತೋರಿಸಿ ಜನರಿಗೆ ಮೋಸಮಾಡುತ್ತಾರೆ [೨೪:೨೪].
ಮನುಷ್ಯಕುಮಾರನ ಬರೋಣದ ಸಮಯದಲ್ಲಿ ಮಿಂಚು ಮೂಡಣದಲ್ಲಿ ಹುಟ್ಟಿ ಪಡುವಣದವರೆಗೂ ಕಾಣಿಸುವ ಹಾಗೆ ಇರುವದು [೨೪:೨೭].
ಸೂರ್ಯ ಮತ್ತು ಚಂದ್ರರು ಕತ್ತಲಾಗುವರು ಮತ್ತು ನಕ್ಷತ್ರಗಳು ಆಕಾಶದಿಂದ ಕೆಳಗೆ ಬೀಳುವವು [೨೪:೨೯].
ಭೂಲೋಕದ ಕುಲಗಳವರು ತಮ್ಮ ಎದೆಯನ್ನು ಬಡಿದುಕೊಳ್ಳುವರು [೨೪:೩೦].
ದೇವದೂತರು ಬರುವಾಗ ತುತ್ತೂರಿಗಳ ಶಬ್ದವು ಕೇಳಿಸುವುದು [೨೪:೩೧].
ಈ ಕಾರ್ಯಗಳು ಸಂಭವಿಸುವ ತನಕ ಭೂಮಿ ಆಕಾಶಗಳು ಅಳಿದು ಹೋಗುವದಿಲ್ಲ ಎಂದು ಯೇಸು ಹೇಳಿದ್ದಾನೆ [೨೪:೩೪].
ಭೂಮಿ ಆಕಾಶಗಳು ಅಳಿದುಹೋಗುತ್ತವೆ ಆದರೆ ನನ್ನ ಮಾತುಗಳು ಎಂದಿಗೂ ಅಳಿದು ಹೋಗುವದಿಲ್ಲ ಎಂದು ಯೇಸು ಹೇಳಿದ್ದಾನೆ [೨೪:೩೫].
ಈ ಘಟನೆಗಳು ಯಾವಾಗ ಸಂಭವಿಸುತ್ತವೆ ಎಂಬದು ತಂದೆಗೆ ಮಾತ್ರವೇ ಗೊತ್ತು [೨೪:೩೬].
ಜನರು ಅನ್ನಪಾನಗಳನ್ನು ತೆಗೆದುಕೊಳ್ಳುತ್ತಾ, ಮದುವೆ ಮಾಡಿಕೊಳ್ಳುತ್ತಾ, ಮಾಡಿಕೊಡುತ್ತಾ ತಮ್ಮನ್ನು ತೆಗೆದುಕೊಂಡು ಹೋಗುವ ನ್ಯಾಯತೀರ್ಪಿನ ಬಗ್ಗೆ ಅರಿವಿಲ್ಲದವರಾಗಿ ಇರುವರು [೨೪:೩೭-೩೯].
ತನ್ನ ವಿಶ್ವಾಸಿಗಳು ಯಾವಾಗಲೂ ಸಿದ್ಧರಾಗಿರಬೇಕು ಎಂದು ಯೇಸು ಹೇಳಿದ್ದಾನೆ ಯಾಕೆಂದರೆ ಕರ್ತನು ಯಾವಾಗ ಬರುತ್ತಾನೆ ಎಂಬದು ಯಾರಿಗೂ ಗೊತ್ತಿಲ್ಲ [೨೪:೪೨, ೪೪].
ಯಜಮಾನನು ದೂರಹೋಗಿರುವಾಗ ನಂಬಿಗಸ್ತ ಮತ್ತು ಬುದ್ದಿವಂತನಾಗಿರುವ ಸೇವಕನು ಆತನ ಕಾರ್ಯಗಳನ್ನು ನೋಡಿಕೊಳ್ಳುವನು [೨೪:೪೫-೪೬].
ಆತನು ಹಿಂದಿರುಗಿ ಬರುವಾಗ ತನಗಿರುವದೆಲ್ಲದರ ಮೇಲೆ ಆ ಸೇವಕನನ್ನು ನೇಮಿಸುವನು [೨೪:೪೭].
ತನ್ನ ಯಜಮಾನನು ದೂರದಲ್ಲಿರುವಾಗ ದುಷ್ಟನಾಗಿರುವ ಸೇವಕನು ತನ್ನ ಜೊತೆ ಸೇವಕನನ್ನು ಹೊಡೆಯುತ್ತಾನೆ, ಕುಡುಕರೊಂದಿಗೆ ತಿನ್ನುತ್ತಾನೆ ಮತ್ತು ಕುಡಿಯುತ್ತಾನೆ [೨೪:೪೮-೪೯].
ಆತನು ಹಿಂದಿರುಗಿ ಬರುವಾಗ ಆ ಸೇವಕರನ್ನು ತುಂಡಾಗಿ ಕತ್ತರಿಸುವನು ಮತ್ತು ಗೋಳಾಟವು ಹಾಗು ಕಟಕಟನೆ ಹಲ್ಲುಕಡಿಯೋಣವು ಇರುವ ಸ್ಥಳಕ್ಕೆ ಕಳುಹಿಸುವನು [೨೪:೫೧].