ಶಾಸ್ತ್ರಿಗಳು ಮತ್ತು ಫರಿಸಾಯರು ಮೋಶೆಯ ಆಸನದಲ್ಲಿ ಕುಳಿತು ಕಲಿಸುವುದರಿಂದ ಅವರು ಹೇಳುವದನ್ನು ಮಾಡಿರಿ ಎಂದು ಯೇಸು ಹೇಳಿದನು [೨೩:೨-೩].
ಯಾಕೆಂದರೆ ಅವರು ಹೇಳುತ್ತಾರಷ್ಟೇ ಆದರೆ ಏನನ್ನೂ ಮಾಡುವದಿಲ್ಲ [೨೩:೩].
ಜನರು ನೋಡಲಿ ಎಂಬ ಉದ್ದೇಶದಿಂದ ಶಾಸ್ತ್ರಿಗಳು ಮತ್ತು ಫರಿಸಾಯರು ಈ ಕಾರ್ಯಗಳನ್ನು ಮಾಡುತ್ತಿದ್ದರು [೨೩:೫].
ಪರಲೋಕದಲ್ಲಿರುವಾತನೇ ನಮ್ಮ ತಂದೆ ಮತ್ತು ಕ್ರಿಸ್ತನೇ ನಮ್ಮ ಬೋಧಕನು ಎಂದು ಯೇಸು ಹೇಳಿದ್ದಾನೆ [೨೩:೮-೧೦].
ತನ್ನನ್ನು ಹೆಚ್ಚಿಸಿಕೊಳ್ಳುವವನು ದೇವರು ತಗ್ಗಿಸುವನು ಮತ್ತು ತನ್ನನ್ನು ತಗ್ಗಿಸಿಕೊಳ್ಳುವವನನ್ನು ದೇವರು ಹೆಚ್ಚಿಸುವನು [೨೩:೧೨].
ಶಾಸ್ತ್ರಿಗಳು ಮತ್ತು ಫರಿಸಾಯರು ಒಬ್ಬನನ್ನು ತಮ್ಮ ಮತದಲ್ಲಿ ಸೇರಿಸಿಕೊಂಡರೆ ಆಗ ಅವನು ಅವರಿಗಿಂತ ಎರಡರಷ್ಟು ಚ್ಚಾಗಿ ನರಕದ ಬಾಧ್ಯಸ್ಥನಾಗಿರುವನು [೨೩:೧೫].
ಯೇಸು ಅವರನ್ನು ಸತತವಾಗಿ ಕಪಟಿಗಳೇ ಎಂದು ಕರೆಯುತ್ತಿದ್ದನು [೨೩:೧೩-೧೫,೨೩,೨೫,೨೭,೨೯].
ಶಾಸ್ತ್ರಿಗಳು ಮತು ಫರಿಸಾಯರ ಬಗ್ಗೆ ಅವರು ಕುರುಡು ಮಾರ್ಗದರ್ಶಕರು ಮತ್ತು ಕುರುಡರಾಗಿರುವ ಮೂರ್ಖರು ಎಂದು ಯೇಸು ಹೇಳಿದ್ದಾನೆ [೨೩:೧೬-೧೯].
ಶಾಸ್ತ್ರಿಗಳು ಮತ್ತು ಫರಿಸಾಯರು ನೀತಿ, ನ್ಯಾಯ, ಕರುಣೆ ಮತ್ತು ನಂಬಿಕೆಯ ಕಾರ್ಯಗಳನ್ನು ಮಾಡುವುದರಲ್ಲಿ ವಿಫಲರಾಗಿದ್ದರು [೨೩:೨೩].
ಶಾಸ್ತ್ರಿಗಳು ಮತ್ತು ಫರಿಸಾಯರು ಪಾತ್ರೆಯ ಹೊರಭಾಗವನ್ನು ಮಾತ್ರ ಶುದ್ಧಮಾಡಿ ಒಳಭಾಗವನ್ನು ಹಾಗೆಯೇ ಬಿಟ್ಟಿದ್ದರು [೨೩:೨೫-೨೬].
ಶಾಸ್ತ್ರಿಗಳು ಮತ್ತು ಫರಿಸಾಯರು ಕಪಟತನ ಮತ್ತು ಅಪರಾಧಗಳಿಂದ ತುಂಬಿದವರಾಗಿದ್ದರು [೨೩:೨೫, ೨೮].
ಶಾಸ್ತ್ರಿಗಳು ಮತ್ತು ಫರಿಸಾಯರ ಪಿತೃಗಳು ದೇವರ ಪ್ರವಾದಿಗಳನ್ನು ಕೊಂದಿದ್ದರು [೨೩:೨೯-೩೧].
ಶಾಸ್ತ್ರಿಗಳು ಮತ್ತು ಫರಿಸಾಯರು ನರಕದ ತೀರ್ಪನ್ನು ಅನುಭವಿಸುವರು [೨೩:೨೩].
ಯೇಸು ಹೇಳಿದ್ದೇನೆಂದರೆ ಅವರು ಕೆಲವರು ಕೊಂದು ಶಿಲುಬೆಗೆ ಹಾಕುವರು, ಹೊಡೆಯುವರು ಮತ್ತು ಪಟ್ಟಣದಿಂದ ಓಡಿಸುವರು [೨೩:೩೪].
ಭೂಮಿಯ ಮೇಲೆ ಸುರಿಸಲಾಗಿರುವ ಎಲ್ಲಾ ನೀತಿವಂತರ ರಕ್ತದ ಅಪರಾಧವು ಶಾಸ್ತ್ರಿಗಳು ಮತ್ತು ಫರಿಸಾಯರ ಮೇಲೆ ಬರುವದು [೨೩:೩೫].
ಈ ಸಂತತಿಯವರಿಗೆ ಈ ಎಲ್ಲಾ ಕಾರ್ಯಗಳು ಸಂಭವಿಸುವವು ಎಂದು ಯೇಸು ಹೇಳಿದನು [೨೩:೩೬].
ಯೇಸು ಯೆರೂಸಲೇಮಿನ ಜನರನ್ನು ಒಟ್ಟುಗೂಡಿಸಲು ಬಯಸಿದನು ಆದರೆ ಅವರು ಅದಕ್ಕೆ ಒಪ್ಪಿಕೊಳ್ಳಲಿಲ್ಲ [೨೩:೩೭].
ಯೆರೂಸಲೇಮಿನ ಮನೆಯು ಈಗ ಬರೀದಾಗಿದೆ [೨೩:೩೮].