Matthew 22

Matthew 22:5

ಅರಸನ ಮಗನ ಮದುವೆಯ ಔತಣಕ್ಕೆಂದು ಅರಸನ ಸೇವಕರು ಆಮಂತ್ರಿಸಿದ ಆಮಂತ್ರಣಕಾರರು ಏನು ಮಾಡಿದರು?

ಕೆಲವರು ಆಮಂತ್ರಣವನ್ನು ಗಂಭೀರವಾಗಿ ಪರಿಗಣಿಸದೆ ತಮ್ಮ ಕೆಲಸಗಳಿಗೆ ಹೊರಟುಹೋದರು ಮತ್ತು ಇತರರು ಅರಸನ ಸೇವಕರನ್ನು ಕೊಂದು ಹಾಕಿದರು [೨೨:೨-೬].

ಮೊದಲು ಮದುವೆಗೆ ಆಹ್ವಾನಿಸಿದವರನ್ನು ಅರಸನು ಏನು ಮಾಡಿದನು?

ಅರಸನು ತನ್ನ ಸೈನವನ್ನು ಕಳುಹಿಸಿ ಆ ಕೊಲೆಗಾರರನ್ನು ಕೊಲ್ಲಿಸಿದನು ಮತ್ತು ಅವರ ಪಟ್ಟಣಗಳನ್ನು ಸುಡಿಸಿದನು [೨೨:೭].

Matthew 22:8

ಹೀಗಿರುವಾಗ ಅರಸನು ಯಾರನ್ನು ಮದುವೆಯ ಔತಣಕ್ಕೆ ಕರೆದನು?

ಅರಸನು ಒಳ್ಳೆಯವರು ಕೆಟ್ಟವರು ಎಂದು ನೋಡದೆ ಸಿಗುವ ಎಲ್ಲರನ್ನೂ ಆಹ್ವಾನಿಸಿದನು [೨೨:೯-೧೦].

Matthew 22:13

ಮದುವೆಯ ಬಟ್ಟೆಗಳನ್ನು ಹಾಕಿಕೊಳ್ಳದೆ ಔತಣಕ್ಕೆ ಬಂದವನಿಗೆ ಅರಸನು ಏನು ಮಾಡಿದನು?

ಅರಸನು ಅವನನ್ನು ಹಿಡಿದು ಕಟ್ಟಿ ಕತ್ತಲೆಯ ಕೋಣೆಗೆ ಹಾಕಿಸಿದನು [೨೨:೧-೧೩].

Matthew 22:15

ಫರಿಸಾಯರು ಯೇಸುವಿಗೆ ಏನು ಮಾಡಬೇಕೆಂದು ಪ್ರಯತ್ನಿಸುತ್ತಿದ್ದರು?

ಫರಿಸಾಯರು ಯೇಸುವನ್ನು ಅವನ ಮಾತಿನಲ್ಲಿಯೇ ಸಿಕ್ಕಿಸಲು ಪ್ರಯತ್ನಿಸುತ್ತಿದ್ದರು [೨೨:೧೫].

ಫರಿಸಾಯರ ಶಿಷ್ಯರು ಯೇಸುವಿಗೆ ಕೇಳಿಗೆ ಪ್ರಶ್ನೆ ಏನು?

ಕೈಸರನಿಗೆ ತೆರಿಗೆ ಕೊಡುವುದು ಸರಿಯೋ ಅಥವಾ ತಪ್ಪೋ ಎಂದು ಅವರು ಯೇಸುವನ್ನು ಕೇಳಿದರು [೨೨:೧೭].

Matthew 22:20

ಫರಿಸಾಯರ ಶಿಷ್ಯರು ಕೇಳಿದ ಪ್ರಶ್ನೆಗಳಿಗೆ ಯೇಸು ಹೇಗೆ ಉತ್ತರಿಸಿದನು?

ಯೇಸು ಅವರಿಗೆ ಕೈಸರನದ್ದನ್ನು ಕೈಸರನಿಗೆ ಕೊಡಿರಿ ಮತ್ತು ದೇವರದ್ದನ್ನು ದೇವರಿಗೆ ಕೊಡಿರಿ ಎಂದು ಹೇಳಿದನು [೨೨:೨೧].

Matthew 22:23

ಪುನರುತ್ಥನಾದ ಬಗ್ಗೆ ಸದ್ದುಕಾಯರಿಗಿದ್ದ ನಂಬಿಕೆ ಏನು?

ಪುನರುತ್ಥಾನವು ಇಲ್ಲ ಎಂಬದಾಗಿ ಸದ್ದುಕಾಯರು ನಂಬುತ್ತಿದ್ದರು [೨೨:೨೩].

Matthew 22:25

ಸದ್ದುಕಾಯನ ಕಥೆಯಲ್ಲಿ ಒಬ್ಬ ಸ್ತ್ರೀಗೆ ಎಷ್ಟು ಮಂದಿ ಗಂಡಂದಿರಿದ್ದರು?

ಆ ಸ್ತ್ರೀಗೆ ಏಳು ಮಂದಿ ಗಂಡಂದಿರಿದ್ದರು [೨೨:೨೪-೨೭].

Matthew 22:29

ಸದ್ದುಕಾಯರಿಗೆ ಯಾವ ಎರಡು ಕಾರ್ಯಗಳು ಗೊತ್ತಿಲ್ಲ ಎಂದು ಯೇಸು ಹೇಳಿದನು?

ಸದ್ದುಕಾಯರಿಗೆ ದೇವರ ವಚನಗಳಾಗಲಿ, ದೇವರ ಅಧಿಕಾರವಾಗಲಿ ಗೊತ್ತಿಲ್ಲ ಎಂದು ಯೇಸು ಹೇಳಿದನು [೨೨:೨೯].

ಪುನರುತ್ಥಾನದಲ್ಲಿ ಮದುವೆಯ ಬಗ್ಗೆ ಯೇಸು ಹೇಳಿದನು?

ಪುನರುತ್ಥಾನದಲ್ಲಿ ಮದುವೆ ಮಾಡಿಕೊಳ್ಳುವದಿರುವದಿಲ್ಲ ಎಂದು ಯೇಸು ಹೇಳಿದನು [೨೨:೩೦].

Matthew 22:31

ಶಾಸ್ತ್ರದಿಂದ ಪುನರುತ್ಥಾನವು ಇದೆ ಎಂಬದನ್ನು ಯೇಸು ಹೇಗೆ ತೋರಿಸಿದನು?

ದೇವರು ನಾನು ಅಬ್ರಹಾಮನ, ಇಸಾಕನ ಮತ್ತು ಯಾಕೋಬ ದೇವರು ಅಂದರೆ ಜೀವಿಸುವ ದೇವರು ಎಂದು ಹೇಳಿರುವ ವಚನವನ್ನು ಯೇಸು ತೋರಿಸಿದನು [೨೨:೩೨].

Matthew 22:34

ಫರಿಸಾಯ ವಕೀಲನು ಯೇಸುವಿಗೆ ಯಾವ ಪ್ರಶ್ನೆಯನ್ನು ಕೇಳಿದನು?

ಧರ್ಮಶಾಸ್ತ್ರದಲ್ಲಿ ದೊಡ್ಡದಾದ ಆಜ್ಞೆ ಯಾವುದು ಎಂದು ಕೇಳಿದನು [೨೨:೩೬].

Matthew 22:37

ಯೇಸು ಹೇಳಿದ ಎರಡು ದೊಡ್ಡ ಆಜ್ಞೆಗಳು ಯಾವುವು?

ನಿಮ್ಮ ದೇವರಾದ ಯೆಹೋವನನ್ನು ಪೂರ್ಣ ಪ್ರಾಣದಿಂದಲೂ, ಪೂರ್ಣ ಹೃದಯದಿಂದಲೂ, ಪೂರ್ಣ ಮನಸ್ಸಿನಿಂದಲೂ ಮತ್ತು ಪೂರ್ಣ ಬಲದಿಂದಲೂ ಪ್ರೀತಿಸಬೇಕು ಹಾಗೂ ನಿಮ್ಮ ನೆರೆಯವರನ್ನು ನಿಮ್ಮಂತೆಯೇ ಪ್ರೀತಿಸಬೇಕು ಎಂಬ ಆಜ್ಞೆಗಳೇ ದೊಡ್ಡವುಗಳು ಎಂದು ಯೇಸು ಹೇಳಿದನು [೨೨:೩೭-೩೯].

Matthew 22:41

ಯೇಸು ಫರಿಸಾಯನಿಗೆ ಕೇಳಿದ ಪ್ರಶ್ನೆ ಏನು?

ಕ್ರಿಸ್ತನು ಯಾರ ಮಗನು ಎಂದು ಯೇಸು ಅವರನ್ನು ಕೇಳಿದನು [೨೨:೪೨].

ಫರಿಸಾಯರು ಯೇಸುವಿಗೆ ಕೊಟ್ಟ ಉತ್ತರ ಏನು?

ಕ್ರಿಸ್ತನು ದಾವೀದನ ವಂಶದಲ್ಲಿ ಹುಟ್ಟಿದನು ಎಂಬ ಉತ್ತರವನ್ನು ಫರಿಸಾಯರು ಕೊಟ್ಟರು [೨೨:೪೨].

Matthew 22:43

ಯೇಸು ಫರಿಸಾಯರಿಗೆ ಕೇಳಿದ ಎರಡನೆಯ ಪ್ರಶ್ನೆ ಏನು?

ದಾವೀದನು ತನ್ನ ಮಗನನ್ನು, ಕರ್ತನು, ಒಡೆಯನು ಎಂದು ಕರೆದಿರುವುದು ಹೇಗೆ ಎಂದು ಕೇಳಿದನು [೨೨:೪೩-೪೫].

Matthew 22:45

ಫರಿಸಾಯರು ಯೇಸುವಿಗೆ ಕೊಟ್ಟ ಉತ್ತರ ಏನು?

ಯೇಸುವಿಗೆ ಒಂದು ಮಾತನ್ನೂ ಹೇಳಲು ಅವರಿಂದ ಆಗಲಿಲ್ಲ [೨೨:೪೬].