ಒಂದು ಕತ್ತೆಯು ಕಟ್ಟಲ್ಪಟ್ಟಿರುವುದು ಮತ್ತು ಅದರ ಜೊತೆಯಲ್ಲಿ ಅದರ ಮರಿ ಇರುವದನ್ನು ನೋಡುವುದಾಗಿ ಹೇಳಿದನು [೨೧:೨].
ಅರಸನು ಕತ್ತೆಯ ಮೇಲೆ, ಕತ್ತೆಮರಿಯ ಮೇಲೆ ಕುಳಿತುಕೊಂಡು ಬರುವನು ಎಂದು ಹೇಳಿದ್ದಾನೆ [೨೧:೪-೫].
ಜನರು ತಮ್ಮ ಮೇಲ್ಹೊದಿಕೆಗಳನ್ನು ಹಾಸಿದರು ಮತ್ತು ಮರಗಳ ಚಿಗುರನ್ನು ಹಾಕಿದರು [೨೧:೮].
"ದಾವೀದ ಕುಮಾರನಿಗೆ ಜಯ, ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ, ಮೇಲಣ ಲೋಕಗಳಲ್ಲಿ ಜಯ" ಎಂದು ಕೂಗುತ್ತಿದ್ದರು [೨೧:೯].
ದೇವಾಲಯದಲ್ಲಿ ಮಾರುವವರು ಮತ್ತು ಕೊಳ್ಳುವವರನ್ನು ಯೇಸು ಹೊರಗೆ ಹಾಕಿದನು ಮತ್ತು ಚೀನಿವಾರರ ಹಾಗೂ ಪಾರಿವಾಳ ಮಾರುವವರ ಮೇಜುಗಳನ್ನು ಕೆಡವಿ ಬೀಳಿಸಿದನು [೨೧:೧೨].
ಕಳ್ಳರ ಗವಿಯನ್ನಾಗಿ ಮಾಡಿದ್ದಾರೆ ಎಂದು ಯೇಸು ಹೇಳಿದನು [೨೧:೧೩].
ದೇವರು ಮಕ್ಕಳು ಮತ್ತು ಕೂಸುಗಳ ಬಾಯಲ್ಲಿ ದೇವಸ್ತೋತ್ರವನ್ನು ಹುಟ್ಟಿಸಿದ್ದಾನೆ ಎಂದು ಪ್ರವಾದಿಯು ಹೇಳಿರುವ ಮಾತುಗಳನ್ನು ಯೇಸು ತಿಳಿಸಿದನು [೨೧:೧೫-೧೬].
ಯೇಸು ಅಂಜೂರದ ಮರವು ಒಣಗುವಂತೆ ಮಾಡಿದನು ಯಾಕೆಂದರೆ ಅದರಲ್ಲಿ ಫಲ ಇರಲಿಲ್ಲ [೨೧:೧೮-೧೯].
ಯೇಸು ಅವರಿಗೆ ನಿವು ಪ್ರಾರ್ಥನೆಯಲ್ಲಿ ನಂಬಿಕೆಯಿಂದ ಬೇಡಿಕೊಂಡರೆ ಅದು ನಿಮಗೆ ದೊರೆಯುವುದು ಎಂದು ಕಲಿಸಿದನು [೨೧:೨೦-೨೨].
ಯೇಸು ಇವುಗಳನ್ನು ಯಾವ ಅಧಿಕಾರದಿಂದ ಮಾಡುತ್ತಿದ್ದಾನೆ ಎಂಬದನ್ನು ಮಹಾಯಾಜಕರು ಹಾಗೂ ಶಾಸ್ತ್ರಿಗಳು ತಿಳಿದುಕೊಳ್ಳಬೇಕೆಂದಿದ್ದರು [೨೧:೨೩].
ಸ್ನಾನಿಕನಾದ ಯೋಹಾನನಿಗೆ ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಪರಲೋಕದಿಂದ ಬಂದಿತೋ ಅಥವಾ ಮನುಷ್ಯರಿಂದ ಬಂದಿತೋ ಎಂದು ಕೇಳಿದನು [೨೧:೨೫].
ಹಾಗೆ ಹೇಳಿದರೆ ನೀವು ಯಾಕೆ ಅವನನ್ನು ನಂಬಲಿಲ್ಲ ಎಂದು ಯೇಸು ಕೇಳುವನು ಎಂಬದು ಅವರಿಗೆ ಗೊತ್ತಿತ್ತು [೨೧:೨೫].
ಸ್ನಾನಿಕನಾದ ಯೋಹಾನನನ್ನು ಪ್ರವಾದಿ ಎಂದು ಹೇಳುತ್ತಿದ್ದ ಜನರಿಗೆ ಅವರು ಭಯಪಟ್ಟರು [೨೧:೨೬].
ನಾನು ಹೋಗುವುದಿಲ್ಲ ಎಂದು ಮೊದಲು ಹೇಳಿದ ಮಗನು, ನಂತರ ತನ್ನ ಮನಸ್ಸನ್ನು ಬದಲಾಯಿಸಿಕೊಂಡು ತಂದೆ ಹೇಳಿದ ಕೆಲಸವನ್ನು ಮಾಡಿದನು [೨೧:೨೮-೩೧].
ಅವರು ಯೋಹಾನನನ್ನು ನಂಬಿದರು ಆದರೆ ಮಹಾಯಾಜಕರು ಮತ್ತು ಶಾಸ್ತ್ರಿಗಳು ಅವನನ್ನು ನಂಬಲಿಲ್ಲ ಅದಕ್ಕೇ ಯೇಸು ಹೀಗೆ ಹೇಳಿದನು [೨೧:೩೧-೩೨].
ಒಕ್ಕಲಿಗರು ಸೇವಕರನ್ನು ಹೊಡೆದರು, ಕೊಂದರು ಮತ್ತು ಕಲ್ಲೆಸೆದರು [೨೧:೩೫-೩೬].
ಯಜಮಾನನು ಅಂತಿಮವಾಗಿ ತನ್ನ ಮಗನನ್ನೇ ಕಳುಹಿಸಿದನು [೨೧:೩೭].
ಒಕ್ಕಲಿಗರು ಯಜಮಾನನ ಮಗನನ್ನು ಕೊಂದುಬಿಟ್ಟರು [೨೧:೩೮-೩೯].
ಯಜಮಾನನು ಮತ್ತು ಒಕ್ಕಲಿಗರನ್ನು ಸಂಹರಿಸಬೇಕು ಮತ್ತು ಬೇರೆ ಒಕ್ಕಲಿಗರಿಗೆ ಹೊಲವನ್ನು ಕೊಡಬೇಕು ಎಂದು ಜನರು ಹೇಳಿದರು [೨೧:೪೦-೪೧].
ಕಟ್ಟುವವರು ಬೇಡ ಎಂದು ಬಿಟ್ಟ ಕಲ್ಲು ಮೂಲೆಗಲ್ಲಾಗುವುದು [೨೧:೪೨].
ದೇವರ ರಾಜ್ಯವನ್ನು ಫರಿಸಾಯರು ಹಾಗು ಮಹಾಯಾಜಕರಿಂದ ತೆಗೆದುಕೊಳ್ಳಲಾಗುವುದು ಹಾಗೂ ಫಲ ಕೊಡುವ ಸಂತತಿಗೆ ಕೊಡಲಾಗುವುದು ಎಂದು ಯೇಸು ಹೇಳಿದನು [೨೧:೪೩].
ಅವರು ಜನರಿಗೆ ಭಯಪಟ್ಟರು ಯಾಕೆಂದರೆ ಜನ ಯೇಸುವನ್ನು ಪ್ರವಾದಿ ಎಂದು ಹೇಳುತ್ತಿದ್ದರು [೨೧:೪೬].