ದಿನಕ್ಕೆ ಒಂದು ಪಾವಲಿ ಕೊಡುವದಾಗಿ ಹೇಳಿ ಕರೆದುಕೊಂಡು ಬಂದನು [೨೦:೧-೨].
ಸರಿಯಾದದ್ದನ್ನೇ ಅವರಿಗೆ ಕೊಡುವುದಾಗಿ ಹೇಳಿದನು [೨೦:೪-೭].
ಹನ್ನೊಂದನೇ ತಾಸಿನಲ್ಲಿ ಬಂದವರಿಗೆ ಒಂದು ಪಾವಲಿ ಸಿಕ್ಕಿತು [೨೦:೯].
ನಾವು ದಿನವೆಲ್ಲಾ ಕೆಲಸ ಮಾಡಿದ್ದೇವೆ, ಆದರೆ ಒಂದು ತಾಸು ಮಾತ್ರವೇ ಕೆಲಸ ಮಾಡಿದವಂತೆ ಒಂದು ಪಾವಲಿಯನ್ನು ಮಾತ್ರವೇ ಪಡೆದಿದ್ದೇವೆ ಎಂದು ಆರೋಪ ಮಾಡಿದರು [೨೦:೧೧-೧೨].
ನಾನು ಬೆಳಗ್ಗೆ ಕಲಸಕ್ಕ ಕರೆದುಕೊಂಡು ಬಂದವರಿಗೆ ದಿನ ಒಂದು ಪಾವಲಿಯನ್ನು ಕೊಡುವೆನೆಂದು ಹೇಳಿದ ಪ್ರಕಾರವೇ ಕೊಟ್ಟಿದ್ದೇನೆ ಮತ್ತು ಉಳಿದವರಿಗೂ ಹಾಗೆಯೇ ಕೊಡುವುದು ನನ್ನ ಸಂತೋಷವಾಗಿದೆ ಎಂದು ಯಜಮಾನನು ಹೇಳಿದನು [೨೦:೧೩-೧೫].
ನನ್ನನ್ನು ಮಹಾಯಾಜಕರು ಮತ್ತು ಶಾಸ್ತ್ರಿಗಳ ಕೈಗಳಿಗೆ ಒಪ್ಪಿಸಲಾಗುವುದು, ಮರಣದಂಡನೆಯನ್ನು ವಿಧಿಸಿ ಶಿಲುಬೆಗೆ ಹಾಕಲಾಗುವುದು ಮತ್ತು ಮೂರನೆಯ ದಿನದಲ್ಲಿ ನಾನು ಎದ್ದು ಬರುವೆನು ಎಂದು ಯೇಸು ಹೇಳಿದನು [೨೦:೧೭-೧೯].
ತನ್ನ ಇಬ್ಬರು ಮಕ್ಕಳಲ್ಲಿ ಒಬ್ಬನು ಆತನ ಎಡಗಡೆಯಲ್ಲಿ ಮತ್ತು ಇನ್ನೊಬ್ಬನು ಬಲಗಡೆಯಲ್ಲಿ ಕುಳಿತುಕೊಳ್ಳಲು ಆತನ ರಾಜ್ಯದಲ್ಲಿ ಅವಕಾಶ ಕೊಡಬೇಕೆಂದು ಬೇಡಿಕೊಂಡಳು [೨೦:೨೦-೨೧].
ತಂದೆಯು ತಾನಾದುಕೊಂಡಿರುವವರಿಗಾಗಿ ಆ ಸ್ಥಳವನ್ನು ಸಿದ್ಧಮಾಡಿದ್ದಾನೆ ಎಂದು ಯೇಸು ಅವರಿಗೆ ಹೇಳಿದನು [೨೦:೨೩].
ಎಲ್ಲರಲ್ಲಿಯೂ ದೊಡ್ಡವನಾಗಿರಬೇಕೆಂದು ಬಯಸುವವನು ಎಲ್ಲರ ಸೇವಕನಾಗಿರಬೇಕೆಂದು ಯೇಸು ಹೇಳಿದನು [೨೦:೨೬]
ಯೇಸು ತಾನು ಸೇವೆಮಾಡುವದಕ್ಕಾಗಿ ಮತ್ತು ತನ್ನ ಪ್ರಾಣವನ್ನು ಈಡು ಕೊಡಲು ಬಂದಿದ್ದಾನೆ ಎಂಬದಾಗಿ ಹೇಳಿದನು [೨೦:೨೮].
ಇಬ್ಬರು ಕುರುಡರು, "ದಾವೀದನ ಕುಮಾರನೇ ನಮ್ಮನ್ನು ಕರುಣಿಸು" ಎಂದು ಕೂಗಿದರು [೨೦:೩೦].
ಯೇಸು ಅವರನ್ನು ನೋಡಿ ಕನಿಕರಿಸಿದ್ದರಿಂದ ಗುಣಪಡಿಸಿದನು [೨೦:೩೪].