Matthew 19

Matthew 19:3

ಯೇಸುವನ್ನು ಪರೀಕ್ಷಿಸಲು ಫರಿಸಾಯರು ಯೇಸುವಿಗೆ ಯಾವ ಪ್ರಶ್ನೆಯನ್ನು ಕೇಳಿದರು?

ಫರಿಸಾಯರು ಕೇಳಿದ್ದೇನೆಂದರೆ, "ಒಬ್ಬನು ಯಾವದಾದರು ಒಂದು ಕಾರಣದಿಂದ ತನ್ನ ಹೆಂಡತಿಯನ್ನು ಬಿಟ್ಟುಬಿಡುವದು ಧರ್ಮವೋ?" [೧೯:೩].

ಸೃಷ್ಟಿಯ ಪ್ರಾರಂಭದಿಂದ ಯಾವುದು ಸತ್ಯವಾಗಿದೆ ಎಂದು ಯೇಸು ಹೇಳಿದ್ದಾನೆ?

ಯೇಸು ಹೇಳಿದ್ದೇನೆಂದರೆ ಸೃಷ್ಟಿಯ ಪ್ರಾರಂಭದಿಂದಲೇ ದೇವರು ಅವರನ್ನು ಗಂಡು ಮತ್ತು ಹೆಣ್ಣಾಗಿ ಮಾಡಿದ್ದಾನೆ [೧೯:೪].

Matthew 19:5

ದೇವರು ಅವರನ್ನು ಗಂಡು ಮತ್ತು ಹೆಣ್ಣಾಗಿ ಮಾಡಿರುವದರಿಂದ, ಪುರುಷನು ಏನು ಮಾಡಬೇಕೆಂದು ಯೇಸು ಹೇಳಿದ್ದಾನೆ?

ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳಬೇಕು ಎಂದು ಯೇಸು ಹೇಳಿದ್ದಾನೆ [೧೯:೫].

ಗಂಡನು ತನ್ನ ಹೆಂಡತಿಯನ್ನು ಸೇರಿಕೊಳ್ಳುವಾಗ ಏನಾಗುವದೆಂದು ಯೇಸು ಹೇಳಿದ್ದಾನೆ?

ಗಂಡನು ಹೆಂಡತಿಯನ್ನು ಸೇರಿಕೊಳ್ಳುವಾಗ, ಅವರು ಒಂದೇ ಶರೀರವಾಗುವರು ಎಂದು ಯೇಸು ಹೇಳಿದ್ದಾನೆ [೧೯:೫-೬].

ದೇವರು ಕೂಡಿಸಿರುವದರಿಂದ ಮನುಷ್ಯನು ಏನು ಮಾಡಬಾರದೆಂದು ಯೇಸು ಹೇಳಿದ್ದಾನೆ?

ದೇವರು ಕೂಡಿಸಿರುವದನ್ನು ಮನುಷ್ಯನು ಬೇರೆ ಮಾಡಬಾರದೆಂದು ಯೇಸು ಹೇಳಿದ್ದಾನೆ [೧೯:೬].

Matthew 19:7

ಮೋಶೆಯು ತ್ಯಾಗಪತ್ರವನ್ನು ಕೊಟ್ಟು ವಿಚ್ಛೇದನ ಕೊಡಬಹುದೆಂದು ಮೋಶೆ ಹೇಳಿದ್ದಾನೆಂದು ಯೇಸು ಯಾಕೆ ಹೇಳಿದನು?

ಯಾಕೆಂದರೆ ಯೆಹೂದ್ಯರು ಕಠಿಣ ಹೃದಯವುಳ್ಳವರಾಗಿದ್ದರು [೧೯:೭-೮].

ಯಾರು ವ್ಯಭಿಚಾರ ಮಾಡುತ್ತಾರೆ ಎಂದು ಯೇಸು ಹೇಳಿದನು?

ಹಾದರದ ಕಾರಣದಿಂದಲ್ಲದೇ ತನ್ನ ಹೆಂಡತಿಗೆ ವಿಚ್ಛೇದನ ಕೊಡುವವನು, ಮತ್ತು ಆಕೆ ಮತ್ತೊಬ್ಬನನ್ನು ಮದುವೆಯಾದರೆ, ಆಕೆಯನ್ನು ಮದುವೆ ಮಾಡಿಕೊಳ್ಳುವವನು ವ್ಯಭಿಚಾರ ಮಾಡುತ್ತಾನೆ ಎಂದು ಯೇಸು ಹೇಳಿದ್ದಾನೆ [೧೯:೯].

Matthew 19:10

ನಪುಂಸಕರು ಯಾರನ್ನು ಅಂಗೀಕರಿಸಿಕೊಳ್ಳುವರು ಎಂದು ಯೇಸು ಹೇಳಿದ್ದಾನೆ?

ಇದನ್ನು ಅಂಗೀಕರಿಸುವ ವರವನ್ನು ಹೊಂದಿದವರು ಮಾತ್ರವೇ ನಪುಂಸಕರಾಗಿ ಅಂಗೀಕರಿಸಿಕೊಳ್ಳುವರು ಎಂದು ಯೇಸು ಹೇಳಿದ್ದಾನೆ [೧೯:೧೦-೧೨].

Matthew 19:13

ಕೆಲವು ಚಿಕ್ಕ ಮಕ್ಕಳನ್ನು ಯೇಸುವಿನ ಬಳಿಗೆ ಕರೆದುಕೊಂಡು ಬಂದಾಗ ಶಿಷ್ಯರು ಏನು ಮಾಡಿದರು?

ಕೆಲವು ಚಿಕ್ಕ ಮಕ್ಕಳನ್ನು ಯೇಸುವಿನ ಬಳಿಗೆ ಕರೆದುಕೊಂಡು ಬಂದಾಗ ಶಿಷ್ಯರು ಅವರನ್ನು ಗದರಿಸಿದರು [೧೯:೧೩].

ಯೇಸು ಚಿಕ್ಕ ಮಕ್ಕಳನ್ನು ನೋಡಿದಾಗ ಏನು ಹೇಳಿದನು?

ಯೇಸು ಚಿಕ್ಕ ಮಕ್ಕಳನ್ನು ನೋಡಿದಾಗ ಅವರನ್ನು ನನ್ನ ಬಳಿಗೆ ಕಳುಹಿಸಿರಿ ಪರಲೋಕ ರಾಜ್ಯವು ಇಂಥವರೇ ಎಂದು ಹೇಳಿದನು [೧೯:೧೪].

Matthew 19:16

ನಿತ್ಯಜೀವವನ್ನು ಪಡೆಯಲು ಏನು ಮಾಡಬೇಕೆಂದು ಯೇಸು ಯೌವನಸ್ಥ ನಾಯಕನಿಗೆ ಹೇಳಿದನು?

ದೇವರ ಆಜ್ಞೆಗಳನ್ನು ಪಾಲಿಸಿದರೆ ನಿತ್ಯಜೀವವನ್ನು ಪಡೆಯಬಹುದು ಎಂದು ಯೇಸು ಅವನಿಗೆ ಹೇಳಿದನು [೧೯:೧೬-೧೭].

Matthew 19:20

ನಾನು ಆಜ್ಞೆಗಳನ್ನು ಪಾಲಿಸುತ್ತಿದ್ದೇನೆ ಎಂದು ಯೌವನಸ್ಥನು ಹೇಳಿದಾಗ ಯೇಸು ಅವನಿಗೆ ಏನು ಹೇಳಿದನು?

ನಾನು ಆಜ್ಞೆಗಳನ್ನು ಪಾಲಿಸುತ್ತಿದ್ದೇನೆ ಎಂದು ಯೌವನಸ್ಥನು ಹೇಳಿದಾಗ ಯೇಸು ಅವನಿಗೆ ನಿನಗಿರುವದನ್ನೆಲ್ಲಾ ಮಾರಿ ಬಡವರಿಗೆ ಹಂಚಿಕೊಡು ಎಂದು ಹೇಳಿದನು [೧೯:೨೦-೨೧].

ತನಗಿರುವದನ್ನು ಮಾರಬೇಕೆಂದು ಯೇಸು ಹೇಳಿದಾಗ ಆ ಯೌವನಸ್ಥನು ಯಾವ ರೀತಿ ಪ್ರತಿಕ್ರಿಯಿಸಿದನು?

ಯೌವನಸ್ಥನು ದುಃಖದಿಂದ ಹೊರಟುಹೋದನು ಯಾಕೆಂದರೆ ಅವನು ಐಶ್ವರ್ಯವಂತನಾಗಿದ್ದನು [೧೯:೨೨].

Matthew 19:23

ಐಶ್ವರ್ಯವಂತನು ಪರಲೋಕ ರಾಜ್ಯವನ್ನು ಸೇರುವ ಬಗ್ಗೆ ಯೇಸು ಏನು ಹೇಳಿದನು?

ಐಶ್ವರ್ಯವಂತನು ದೇವರ ರಾಜ್ಯದೊಳಗೆ ಪ್ರವೇಶಿಸುವುದು ಕಷ್ಟ ಆದರೆ ಒಂಟೆಯು ಸೂಜಿಕಣ್ಣಿನೊಳಗೆ ಹೋಗುವುದು ಸುಲಭ ಎಂದು ಹೇಳಿದನು [೧೯:೨೩-೨೬].

Matthew 19:28

ತನ್ನನ್ನು ಹಿಂಬಾಲಿಸುವ ಶಿಷ್ಯರಿಗೆ ಯೇಸು ಯಾವ ಬಹುಮಾನ ದೊರೆಯುವುದೆಂದು ಹೇಳಿದನು?

ಯೇಸು ತನ್ನ ಶಿಷ್ಯರಿಗೆ ಹೊಸ ಜೀವಿತದಲ್ಲಿ, ಹನ್ನೆರೆಡು ಸಿಂಹಾಸನಗಳ ಮೇಲೆ ಕುಳಿತುಕೊಂಡು, ಇಸ್ರಾಯೇಲಿನ ಹನ್ನೆರೆಡು ಕುಲಗಳಿಗೆ ನ್ಯಾಯತೀರಿಸುವಿರಿ ಎಂದು ವಾಗ್ದಾನಮಾಡಿದನು [೧೯:೨೮].

Matthew 19:29

ಯೇಸು ಕ್ರಿಸ್ತನು ಈಗ ಮೊದಲನೆಯವರು ಮತ್ತು ಕಡೆಯವರಾಗಿರುವವರ ವಿಷಯದಲ್ಲಿ ಏನು ಹೇಳಿದನು?

ಮೊದಲಿನವರು ಕಡೆಯವರಾಗುವರು ಮತ್ತು ಕಡೆಯವರು ಮೊದಲಿನವರಾಗುವರು ಎಂದು ಯೇಸು ಹೇಳಿದ್ದಾನೆ [೧೯:೩೦].