ನಾವು ಪಶ್ಚಾತ್ತಾಪಪಟ್ಟು ಮಕ್ಕಳಂತಾದರೆ ಪರಲೋಕ ರಾಜ್ಯವನ್ನು ಸೇರಬಹುದು ಎಂದು ಯೇಸು ಹೇಳಿದನು [೧೮:೩].
ಚಿಕ್ಕಮಗುವಿನಂತ ತನ್ನನ್ನು ತಗ್ಗಿಸಿಕೊಳ್ಳುವವನು ಪರಲೋಕ ರಾಜ್ಯದಲ್ಲಿ ಹೆಚ್ಚಿನವನು ಎಂದು ಯೇಸು ಹೇಳಿದ್ದಾನೆ [೧೮:೪].
ಯೇಸುವಿನಲ್ಲಿ ನಂಬಿಕೆಯನ್ನಿಟ್ಟಿರುವ ಚಿಕ್ಕವನನ್ನು ಪಾಪಕ್ಕೆ ನಡೆಸುವವನು ಬೀಸುವ ಕಲ್ಲನ್ನು ಕತ್ತಿಗೆ ಸುತ್ತಿಕೊಂಡು ಸಮುದ್ರದಲ್ಲಿ ಮುಳುಗುವುದು ಯೋಗ್ಯವಾಗಿದೆ [೧೮:೬].
ನಮ್ಮನ್ನು ಎಡವುವಂತೆ ಮಾಡುವ ಕಾರ್ಯವನ್ನು ನಾವು ತೆಗೆದುಹಾಕಬೇಕೆಂದು ಯೇಸು ಹೇಳಿದ್ದಾನೆ [೧೮:೮-೯].
ನಾವು ಚಿಕ್ಕವರಿಗೆ ಅಡಚಣೆ ಮಾಡಬಾರದು ಯಾಕೆಂದರೆ ಅವರ ದೇವದೂತರು ಯಾವಾಗಲೂ ತಂದೆಯ ಮುಖವನ್ನು ನೋಡುತ್ತಿರುತ್ತಾರೆ [೧೮:೧೦].
ಈ ಚಿಕ್ಕವರಲ್ಲಿ ಒಬ್ಬರು ಸಹ ನಷ್ಟವಾಗಬಾರದೆಂಬದು ತಂದೆಯ ಚಿತ್ತವಾಗಿದೆ [೧೮:೧೨-೧೪].
ಮೊದಲನೆಯದಾಗಿ ನೀವು ಅವನನ್ನು ಏಕಾಂತವಾಗಿ ಕರೆದುಕೊಂಡು ಹೋಗಿ ಅವನ ತಪ್ಪು ಏನು ಎಂಬುದನು ತಿಳಿಸಬೇಕು [೧೮:೧೫].
ಎರಡನೆಯದಾಗಿ ನೀವು ನಿಮ್ಮ ಜೊತೆಯಲ್ಲಿ ಒಂದಿಬ್ಬರನ್ನು ಸಾಕ್ಷಿಗಳಾಗಿ ಕರೆದುಕೊಂಡು ಹೋಗಬೇಕು [೧೮:೧೬].
ಮೂರನೆಯದಾಗಿ, ವಿಷಯವನ್ನು ನೀವು ಸಭೆಗೆ ತಿಳಿಸಬೇಕು [೧೮:೧೭].
ಇಬ್ಬರಾಗಲಿ ಮೂವರಾಗಲಿ ನನ್ನ ಹೆಸರಿನಲ್ಲಿ ಸೇರಿಬರುವ ಸ್ಥಳದಲ್ಲಿ ನಾನು ಬರುತ್ತೇನೆ ಎಂದು ಯೇಸು ವಾಗ್ದಾನ ಮಾಡಿದ್ದಾನೆ [೧೮:೨೦].
ನಾವು ನಮ್ಮ ಸಹೋದರನನ್ನು ಏಳು ಎಪ್ಪತ್ತು ಸಲ ಕ್ಷಮಿಸಬೇಕೆಂದು ಯೇಸು ಹೇಳಿದ್ದಾನೆ [೧೮:೨೧-೨೨].
ಸೇವಕನು ತನ್ನ ಯಜಮಾನನಿಗೆ ಕೋಟ್ಯಾಂತರ ರೂಪಾಯಿ ಕೊಡಬೇಕಾಗಿತ್ತು, ಆದರೆ ಅದನ್ನು ಕೊಡಲು ಅವನಿಂದ ಆಗಲಿಲ್ಲ [೧೮:೨೪-೨೫].
ಯಜಮಾನನು ಕರುಣೆಯಿಂದ ತನ್ನ ಸೇವಕನ ಸಾಲವನ್ನು ಮನ್ನಾ ಮಾಡಿದನು [೧೮:೨೭].
ಅವನು ತಾಳ್ಮೆಯಿಂದಿರಲಿಲ್ಲ ಮತ್ತು ಅವನನ್ನು ಸೆರೆಮನೆಗೆ ಹಾಕಿಸಿದಿದನು [೧೮:೨೮-೩೦].
ಯಜಮಾನನು ತನ್ನ ಸೇವಕನಿಗೆ ನೀನು ನಿನ್ನ ಜೊತೆಸೇವಕನಿಗೆ ಕರುಣೆ ತೋರಿಸಿರಬೇಕಾಗಿತ್ತು ಎಂದು ಹೇಳಿದನು [೧೮:೩೩].
ಆ ಸೇವಕನು ತನ್ನ ಸಾಲವನ್ನೆಲ್ಲಾ ತೀರಿಸುವ ತನಕ ಅವನನ್ನು ಪೀಡಿಸುವವರ ಕೈಗಳಿಗೆ ಒಪ್ಪಿಸಿದನು [೧೮:೩೪].
ನಾವು ನಮ್ಮ ಜೊತೆ ಸಹೋದರನನ್ನು ಪೂರ್ಣ ಹೃದಯದಿಂದ ಕ್ಷಮಿಸದೆ ಹೋದರೆ ಯಜಮಾನನು ತನ್ನ ಸೇವಕನಿಗೆ ಮಾಡಿದ ಕಾರ್ಯವನ್ನೇ ತಂದೆಯು ಅವನಿಗೆ ಮಾಡುವನು [೧೮:೩೫].