ಪೇತ್ರ, ಯಾಕೋಬ ಮತ್ತು ಯೋಹಾನ ಯೇಸುವಿನ ಜೊತೆಯಲ್ಲಿ ಬೆಟ್ಟದ ಮೇಲೆ ಹೋದರು [೧೭:೧].
ಯೇಸು ರೂಪಾಂತರಗೊಂಡದ್ದರಿಂದ ಆತನ ಮುಖವು ಸೂರ್ಯನ ಹಾಗೆ ಹೊಳೆಯಿತು ಮತ್ತು ಆತನ ಉಡುಪು ಬೆಳಕಿನ ಹಾಗೆ ಬೆಳ್ಳಗಾದವು [೧೭:೨].
ಮೋಶೆ ಮತ್ತು ಎಲೀಯನು ಕಾಣಿಸಿಕೊಂಡು ಯೇಸುವಿನ ಜೊತೆಯಲ್ಲಿ ಮಾತನಾಡಿದರು [೧೭:೩].
ಪೇತ್ರನು ಮೂವರಿಗೆ ಮೂರು ಗುಡಾರಗಳನ್ನು ಮಾಡುವುದಾಗಿ ಹೇಳಿದನು [೧೭:೪].
"ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ; ಈತನ ಮಾತನ್ನು ಕೇಳಿರಿ" [೧೭:೫].
ಮನುಷ್ಯಕುಮಾರನು ಪುನರುತ್ಥಾನಗೊಂಡು ಬರುವ ತನಕ ಈ ದರ್ಶನದ ಬಗ್ಗೆ ಯಾರಿಗೂ ಹೇಳಬೇಡಿರಿ ಎಂದು ಆಜ್ಞಾಪಿಸಿದನು [೧೭:೯].
ಎಲೀಯನು ಬರುತ್ತಾನೆ ಮತ್ತು ಎಲ್ಲವನ್ನೂ ಸರಿಪಡಿಸುತ್ತಾನೆ ಎಂದು ಯೇಸು ಹೇಳಿದನು [೧೭:೧೧].
ಸ್ನಾನಿಕನಾದ ಯೋಹಾನನೇ ಎಲೀಯನು ಮತ್ತು ಜನರು ಅವನಿಗೆ ಬೇಕಾದ್ದನ್ನು ಮಾಡಿದರು ಎಂದು ಯೇಸು ಹೇಳಿದನು [೧೭:೧೦-೧೩].
ಮೂರ್ಛಾರೋಗದಿಂದ ಕಷ್ಟಪಡುತ್ತಿದ್ದ ಹುಡುಗನಿಗೆ ಗುಣಪಡಿಸಲು ಶಿಷ್ಯರಿಂದ ಆಗಲಿಲ್ಲ [೧೭:೧೪-೧೬].
ಯೇಸು ದುರಾತ್ಮನನ್ನು ಗದರಿಸಿದನು ಮತ್ತು ಆ ಕ್ಷಣವೇ ಆ ಹುಡುಗನು ಗುಣವಾದನು [೧೭:೧೮].
ಅವರ ನಂಬಿಕೆ ಕಡಿಮೆಯಾದ್ದರಿಂದ ಗುಣಪಡಿಸಲು ಆಗಲಿಲ್ಲ ಎಂದು ಯೇಸು ಹೇಳಿದನು [೧೭:೨೦].
ನನ್ನನ್ನು ಜನರ ಕೈಗಳಿಗೆ ಒಪ್ಪಿಸಲಾಗುವುದು, ಅವರು ನನ್ನನ್ನು ಕೊಲ್ಲುವರು ಮತ್ತು ನಾನು ಮೂರನೆಯ ದಿನದಲ್ಲಿ ಎದ್ದು ಬರುವೆನು ಎಂದು ಯೇಸು ಹೇಳಿದ ಮಾತುಗಳು ಶಿಷ್ಯರಿಗೆ ಬೇಸರವನ್ನುಂಟು ಮಾಡಿತು [೧೭:೨೨-೨೩].
ಯೇಸು ಪೇತ್ರನಿಗೆ ಸಮುದ್ರಕ್ಕೆ ಹೋಗು ಗಾಳವನ್ನು ಹಾಕು ಮತ್ತು ಮೊದಲು ಸಿಗುವ ಮೀನನ್ನು ತೆಗೆದುಕೊಂಡು ಬಾ ಅದರ ಬಾಯೊಳಗೆ ಸುಂಕದ ನಾಣ್ಯ ಇರುವುದು ಎಂದು ಹೇಳಿದನು [೧೭:೨೭].