Matthew 16

Matthew 16:1

ಫರಿಸಾಯರು ಮತ್ತು ಸದ್ದುಕಾಯರು ಯೇಸುವಿನಿಂದ ಏನನ್ನು ನೋಡಬೇಕೆಂದು ಬಯಸಿದರು?

ಫರಿಸಾಯರು ಮತ್ತು ಸದ್ದುಕಾಯರು ಯೇಸು ಪರಲೋಕದ ಸೂಚಕಕಾರ್ಯವನ್ನು ತೋರಿಸಬೇಕೆಂದು ಬಯಸಿದರು [೧೬:೧].

Matthew 16:3

ಯೇಸು ಫರಿಸಾಯರಿಗೆ ಮತ್ತು ಸದ್ದುಕಾಯರಿಗೆ ಏನು ಕೊಡುವುದಾಗಿ ಹೇಳಿದನು?

ಯೇಸು ಫರಿಸಾಯರಿಗೆ ಮತ್ತು ಸದ್ದುಕಾಯರಿಗೆ ನಿಮಗೆ ಯೋನನ ಸೂಚಕಕಾರ್ಯವನ್ನು ಕೊಡುವೆನು ಎಂದು ಹೇಳಿದನು [೧೬:೪].

Matthew 16:5

ಯೇಸು ತನ್ನ ಶಿಷ್ಯರಿಗೆ ಯಾವ ವಿಷಯದಲ್ಲಿ ಎಚ್ಚರಿಕೆಯಿಂದ ಇರುವಂತೆ ಹೇಳಿದನು?

ಫರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟಿನ ವಿಷಯದಲ್ಲಿ ಎಚ್ಚರಿಕೆಯಿಂದ ಇರುವಂತೆ ಯೇಸು ಹೇಳಿದನು [೧೬:೬].

Matthew 16:11

ಯೇಸು ತನ್ನ ಶಿಷ್ಯರಿಗೆ ಎಚ್ಚರಿಕೆಯಿಂದ ಇರ್ರಿ ಎಂದು ನಿಜವಾಗಿಯೂ ಯಾವುದರ ಬಗ್ಗೆ ಹೇಳಿದನು?

ಫರಿಸಾಯರು ಮತ್ತು ಸದ್ದುಕಾಯರ ಬೋಧನೆಗಳ ವಿಷಯದಲ್ಲಿ ಎಚ್ಚರಿಕೆಯಿಂದ ಇರ್ರಿ ಎಂದು ಯೇಸು ಹೇಳಿದನು [೧೬:೧೨].

Matthew 16:13

ತನ್ನ ಶಿಷ್ಯರು ಕೈಸರೆಯಾದ ಫಿಲಿಪ್ಪಿಗೆ ಬಂದಾಗ ಯೇಸು ತನ್ನ ಶಿಷ್ಯರಿಗೆ ಯಾವ ಪ್ರಶ್ನೆಯನ್ನು ಕೇಳಿದನು?

ಯೇಸು ತನ್ನ ಶಿಷ್ಯರಿಗೆ, "ಜನರು ನನ್ನನ್ನು ಏನನ್ನುತ್ತಾರೆ" ಎಂದು ಕೇಳಿದನು? [೧೬:೧೩].

ಯೇಸು ಯಾರೆಂದು ಕೆಲವರು ಹೇಳುತ್ತಿದ್ದರು?

ಕೆಲವರು ಯೇಸುವನ್ನು ಸ್ನಾನಿಕನಾದ ಯೋಹಾನನು ಅಥವಾ ಎಲೀಯನು ಅಥವಾ ಯೆರೆಮಿಯನು ಅಥವಾ ಪ್ರವಾದಿಗಳಲ್ಲಿ ಒಬ್ಬನು ಎಂದು ಹೇಳುತ್ತಿದ್ದರು [೧೬:೧೪].

ಪೇತ್ರನು ಯೇಸುವಿನ ಪ್ರಶ್ನೆಗೆ ಕೊಟ್ಟ ಉತ್ತರ ಏನು?

"ನೀನು ಕ್ರಿಸ್ತನು, ಜೀವಿಸುವ ದೇವರ ಕುಮಾರನು" ಎಂದು ಪೇತ್ರನು ಉತ್ತರಿಸಿದನು [೧೬:೧೬].

Matthew 16:17

ಯೇಸುವಿನ ಪ್ರಶ್ನೆಗೆ ಪೇತ್ರನಿಗೆ ಉತ್ತರವು ಹೇಗೆ ಗೊತ್ತಾಯಿತು?

ತಂದೆಯು ಅವನಿಗೆ ಪ್ರಕಟಪಡಿಸಿದ್ದರಿಂದ ಪೇತ್ರನು ಯೇಸುವಿನಿನ ಪ್ರಶ್ನೆಗೆ ಉತ್ತರವು ಗೊತ್ತಿತ್ತು [೧೬:೧೭].

Matthew 16:19

ಯೇಸು ಪೇತ್ರನಿಗೆ ಭೂಲೋಕದಲ್ಲಿ ಯಾವ ಅಧಿಕಾರವನ್ನು ಕೊಟ್ಟನು?

ಯೇಸು ಪೇತ್ರನಿಗೆ ಪರಲೋಕದ ಬೀಗದ ಕೈಯನ್ನು ಕೊಟ್ಟನು, ಅದರಿಂದಾಗಿ ಭೂಲೋಕದಲ್ಲಿ ಅವನು ಕಟ್ಟುವುದು ಮತ್ತು ಬಿಚ್ಚುವುದು ಪರಲೋಕದಲ್ಲಿಯೂ ಕಟ್ಟಿರುವುದು ಹಾಗೂ ಬಿಚ್ಚಿರುವುದು [೧೬:೧೯].

Matthew 16:21

ಈ ಸಮಯದಲ್ಲಿ, ಯೇಸು ತನ್ನ ಶಿಷ್ಯರಿಗೆ ಯಾವುದರ ಬಗ್ಗೆ ಹೇಳಲು ಪ್ರಾರಂಭಿಸಿದನು?

ಈ ಸಮಯದಲ್ಲಿ ಯೇಸು ತನ್ನ ಶಿಷ್ಯರಿಗೆ ತಾನು ಯೆರೂಸಲೇಮಿಗೆ ಹೋಗಬೇಕು, ಆನೇಕ ಶ್ರಮೆಗಳನ್ನು ಅನುಭವಿಸಬೇಕು, ಕೊಲ್ಲಲ್ಪಡಬೇಕು ಮತ್ತು ಮೂರನೆಯ ದಿನದಲ್ಲಿ ಎದ್ದು ಬರಬೇಕು ಎಂಬದಾಗಿ ಹೇಳಲು ಪ್ರಾರಂಭಿಸಿದನು [೧೬:೨೧].

ಯೇಸು ತನಗೆ ಸಂಭವಿಸುವ ಕಾರ್ಯಗಳನ್ನು ವಿವರಿಸುವಾಗ ಪೇತ್ರನು ಅಡ್ಡಿಪಡಿಸಿದ್ದಕ್ಕೆ ಯೇಸು ಅವನಿಗೆ ಏನು ಹೇಳಿದನು?

ಯೇಸು ಪೇತ್ರನಿಗೆ, "ಸೈತಾನನೇ ನನ್ನನ್ನು ಬಿಟ್ಟು ತೊಲಗು" ಎಂದು ಹೇಳಿದನು [೧೬:೨೩].

Matthew 16:24

ಯೇಸುವನ್ನು ಹಿಂಬಾಲಿಸಲು ಬಯಸುವವನು ಏನು ಮಾಡಬೇಕು?

ಯೇಸುವನ್ನು ಹಿಂಬಾಲಿಸಲು ಬಯಸುವವನು ತನ್ನನ್ನು ನಿರಾಕರಿಸಿ, ತನ್ನ ಶಿಲುಬೆಯನ್ನು ಹೊತ್ತುಕೊಳ್ಳಬೇಕು [೧೬:೨೪].

ಯೇಸು ಒಬ್ಬ ವ್ಯಕ್ತಿಗೆ ಯಾವುದರಿಂದ ಏನೂ ಲಾಭವಿಲ್ಲ ಎಂದು ಹೇಳಿದನು?

ಇಡೀ ಲೋಕವನ್ನು ಸಂಪಾದಿಸಿಕೊಂಡು ತನ್ನ ಆತ್ಮವನ್ನು ನಷ್ಟಪಡಿಸಿಕೊಂಡರೆ ಅವನಿಗೆ ಏನೂ ಲಾಭವಿಲ್ಲ ಎಂದು ಯೇಸು ಹೇಳಿದನು [೧೬:೨೬].

Matthew 16:27

ಮನುಷ್ಯಕುಮಾರನು ಹೇಗೆ ಬರುವನು ಎಂದು ಯೇಸು ಹೇಳಿದ್ದಾನೆ?

ಮನುಷ್ಯಕುಮಾರನು ತನ್ನ ತಂದೆಯ ಮಹಿಮೆಯೊಡನೆ ದೇವದೂತರ ಸಂಗಡ ಬರುವನು ಎಂದು ಹೇಳಿದ್ದಾನೆ [೧೬:೨೭].

ಮನುಷ್ಯಕುಮಾರನು ಹಿಂದಿರುಗಿ ಬರುವಾಗ ಪ್ರತಿಯೊಬ್ಬನಿಗೂ ಯಾವ ರೀತಿ ಫಲವನ್ನು ಕೊಡುವನು?

ಮನುಷ್ಯಕುಮಾರನು ಬರುವಾಗ ಪ್ರತಿಯೊಬ್ಬನಿಗೂ ಅವನವನ ಕ್ರಿಯೆಗಳಿಗೆ ತಕ್ಕ ಹಾಗೆ ಫಲವನ್ನು ಕೊಡುವನು [೧೬:೨೭].