Matthew 15

Matthew 15:4

ಫರಿಸಾಯರು ತಮ್ಮ ಸಂಪ್ರದಾಯಗಳಿಂದ ದೇವರ ವಾಕ್ಯಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬದಕ್ಕೆ ಯೇಸು ಕೊಟ್ಟ ಉದಾಹರಣೆ ಏನು?

ಮಕ್ಕಳು ತಮ್ಮ ತಂದೆತಾಯಿಗಳಿಗೆ ಸಹಾಯ ಮಾಡದಂತೆ ಅವರು ಕೊಡುವ ಹಣವನ್ನು "ದೇವರಿಗೆ ಕೊಟ್ಟಿರುವ ಕಾಣಿಕೆ" ಎಂದು ಫರಿಸಾಯರು ತೆಗೆದುಕೊಳ್ಳುತ್ತಿದ್ದರು [೧೫:೩-೬].

Matthew 15:7

ಫರಿಸಾಯರ ಹೃದಯ ಮತ್ತು ತುಟಿಯ ಬಗ್ಗೆ ಯೆಶಾಯನು ಏನೆಂದು ಪ್ರವಾದಿಸಿದ್ದಾನೆ?

ಫರಿಸಾಯರು ದೇವರನ್ನು ತಮ್ಮ ತುಟಿಯಿಂದ ಘನಪಡಿಸುತ್ತಾರೆ ಆದರೆ ಅವರ ಹೃದಯಗಳು ಆತನಿಂದ ಬಹಳ ದೂರವಾಗಿವೆ ಎಂದು ಯೆಶಾಯನು ಪ್ರವಾದಿಸಿದ್ದಾನೆ [೧೫:೭-೮].

ದೇವರ ವಾಕ್ಯವನ್ನು ಕಲಿಸುವ ಬದಲು ಫರಿಸಾಯರು ಸಿದ್ದಾಂತವೆಂದು ಏನನ್ನು ಕಲಿಸುತ್ತಿದ್ದರು?

ಫರಿಸಾಯರು ಜನರ ಆಜ್ಞೆಗಳನ್ನು ಸಿದ್ದಾಂತವೆಂದು ಕಲಿಸುತ್ತಿದ್ದರು [೧೫:೯].

Matthew 15:10

ಒಬ್ಬ ವ್ಯಕ್ತಿಯನ್ನು ಯಾವುದು ಹಾಳು ಮಾಡುವುದಿಲ್ಲ ಎಂದು ಯೇಸು ಹೇಳಿದ್ದಾನೆ?

ಒಬ್ಬ ವ್ಯಕ್ತಿಯು ತಾನು ತಿನ್ನುವುದು ಅವನನ್ನು ಹಾಳುಮಾಡುವುದಿಲ್ಲ ಎಂದು ಯೇಸು ಹೇಳಿದ್ದಾನೆ [೧೫:೧೧,೧೭,೨೦].

ಒಬ್ಬ ವ್ಯಕ್ತಿಯನ್ನು ಹಾಳು ಮಾಡುವುದು ಏನು ಎಂದು ಯೇಸು ಹೇಳಿದ್ದಾನೆ?

ಒಬ್ಬ ವ್ಯಕ್ತಿಯ ಬಾಯೊಳಗಿಂದ ಬರುವಂಥದ್ದೇ ಅವನನ್ನು ಹಾಳು ಮಾಡುತ್ತದೆ [೧೫:೧೧, ೧೮-೨೦].

Matthew 15:12

ಯೇಸು ಫರಿಸಾಯರನ್ನು ಏನೆಂದು ಕರೆದನು ಮತ್ತು ಅವರಿಗೆ ಏನಾಗುವುದೆಂದು ಹೇಳಿದನು?

ಯೇಸು ಫರಿಸಾಯರನ್ನು ಕುರುಡು ಮಾರ್ಗದರ್ಶಕರು ಎಂದು ಕರೆದನು ಮತ್ತು ಅವರೇ ಗುಂಡಿಯೊಳಗೆ ಬೀಳುತ್ತಾರೆ ಎಂದು ಹೇಳಿದನು [೧೫:೧೪].

Matthew 15:18

ಒಬ್ಬ ವ್ಯಕ್ತಿಯನ್ನು ಹಾಳು ಮಾಡುವ ಯಾವ ಕಾರ್ಯಗಳು ಆತನ ಹೃದಯದಿಂದ ಹೊರಡುತ್ತವೆ?

ಹೃದಯದಿಂದ ಕೆಟ್ಟ ಆಲೋಚನೆಗಳು, ಕೊಲೆ, ಸೂಳೆಗಾರಿಕೆ, ಲೈಂಗಿಕ ಅನೈತಿಕತೆ, ಕಳ್ಳತನ, ಸುಳ್ಳು ಸಾಕ್ಷಿ ಮತ್ತು ದೂಷಣೆಗಳು ಬರುತ್ತವೆ [೧೫:೧೯].

Matthew 15:21

ಕಾನಾನ್ಯ ಸ್ತ್ರೀಯು ಕರುಣೆ ತೋರುವಂತೆ ಕೂಗಿಕೊಂಡಾಗ ಯೇಸು ಮೊದಲನೆಯದಾಗಿ ಏನು ಮಾಡಿದನು?

ಯೇಸು ಆಕೆಗೆ ಒಂದು ಮಾತೂ ಹೇಳಲಿಲ್ಲ [೧೫:೨೩].

Matthew 15:24

ಕಾನಾನ್ಯ ಸ್ತ್ರೀಗೆ ಸಹಾಯ ಮಾಡದಿರುವದಕ್ಕೆ ಯೇಸು ನೀಡಿದ ವಿವರಣೆ ಏನು?

ತನ್ನನ್ನು ಕಳೆದುಹೋಗಿರುವ ಇಸ್ರಾಯೇಲ್ ಜನರ ಬಳಿಗೆ ಕಳುಹಿಸಲಾಗಿದೆ ಎಂದು ಯೇಸು ಹೇಳಿದನು [೧೫:೨೪].

Matthew 15:27

ಕಾನಾನ್ಯ ಸ್ತ್ರೀಯು ತನ್ನನ್ನು ತಗ್ಗಿಸಿಕೊಂಡಾಗ, ಯೇಸು ಆಕೆಗೆ ಏನು ಹೇಳಿದನು ಮತ್ತು ಮಾಡಿದನು?

ಯೇಸು ಆ ಸ್ತ್ರೀಗೆ ನಿನ್ನ ನಂಬಿಕೆ ಬಹಳ ಎಂದು ಹೇಳಿದನು ಮತ್ತು ಆಕೆಯ ಬೇಡಿಕೆಯನ್ನು ಈಡೇರಿಸಿದನು [೧೫:೨೮].

Matthew 15:29

ಗಲಿಲಾಯದಿಂದ ಬಂದ ಜನರ ದೊಡ್ಡ ಗುಂಪಿಗೆ ಯೇಸು ಏನು ಮಾಡಿದನು?

ಯೇಸು, ಮೂಕರನ್ನು, ಕುಂಟರನ್ನು ಮತ್ತು ಕುರುಡರನ್ನು ಗುಣಪಡಿಸಿದನು [೧೫:೩೦-೩೧].

Matthew 15:32

ಜನರಿಗೆ ಕೊಡಲು ಶಿಷ್ಯರ ಬಳಿಯಲ್ಲಿ ಎಷ್ಟು ರೊಟ್ಟಿ ಮತ್ತು ಮೀನುಗಳಿದ್ದವು?

ಜನರಿಗೆ ಕೊಡಲು ಶಿಷ್ಯರ ಬಳಿಯಲ್ಲಿ ಏಳು ರೊಟ್ಟಿ ಮತ್ತು ಕೆಲವು ಚಿಕ್ಕ ಮೀನುಗಳು ಮಾತ್ರವೇ ಇದ್ದವು [೧೫:೩೪].

Matthew 15:36

ಯೇಸು ರೊಟ್ಟಿ ಮತ್ತು ಮೀನುಗಳನ್ನು ಏನು ಮಾಡಿದನು?

ಯೇಸು ರೊಟ್ಟಿ ಮತ್ತು ಮೀನುಗಳನ್ನು ತೆಗೆದುಕೊಂಡು, ದೇವರ ಸ್ತೋತ್ರ ಮಾಡಿದನು, ರೊಟ್ಟಿಗಳನು ಮುರಿದನು ಮತ್ತು ಶಿಷ್ಯರಿಗೆ ಕೊಟ್ಟನು [೧೫:೩೬].

ರೊಟ್ಟಿ ಮತ್ತು ಮೀನುಗಳನ್ನು ಎಷ್ಟು ಜನರು ತಿಂದರು?

ನಾಲ್ಕು ಸಾವಿರ ಗಂಡಸರು, ಜೊತೆಗೆ ಹೆಂಗಸರು ಮತ್ತು ಮಕ್ಕಳು ತಿಂದರು [೧೫:೩೮].

ಎಲ್ಲರೂ ತಿಂದ ಮೇಲೆ ಎಷ್ಟು ಊಟ ಉಳಿಯಿತು?

ಎಲ್ಲರೂ ತಿಂದ ಮೇಲೆ ಏಳು ಪುಟ್ಟಿ ಉಳಿಯಿತು [೧೫:೩೭].