Matthew 14

Matthew 14:1

ಯೇಸು ಯಾರೆಂದು ಹೆರೋದನು ಅಂದುಕೊಂಡಿದ್ದನು?

ಸ್ನಾನಿಕನಾದ ಯೋಹಾನನೇ ಯೇಸುವಾಗಿ ಮತ್ತೆ ಎದ್ದು ಬಂದಿದ್ದಾನೆ ಎಂದು ಹೆರೋದನು ಅಂದುಕೊಂಡನು [೧೪:೨].

Matthew 14:3

ಹೆರೋದನ ಯಾವ ಕೆಟ್ಟತನದ ವಿಷಯದಲ್ಲಿ ಸ್ನಾನಿಕನಾದ ಯೋಹಾನನು ಅವನನ್ನು ಗದರಿಸುತ್ತಿದ್ದನು?

ಹೆರೋದನು ತನ್ನ ಅಣ್ಣನ ಹೆಂಡತಿಯನ್ನೇ ಮದುವೆಮಾಡಿಕೊಂಡಿದ್ದನು [೧೪:೪].

ಸ್ನಾನಿಕನಾದ ಯೋಹಾನನನ್ನು ಕೂಡಲೇ ಕೊಲ್ಲಲು ಹೆರೋದನಿಗೆ ಯಾಕೆ ಸಾಧ್ಯವಾಗಲಿಲ್ಲ?

ಜನರು ಸ್ನಾನಿಕನಾದ ಯೋಹಾನನನ್ನು ಪ್ರವಾದಿ ಎಂದು ಭಾವಿಸುತ್ತಿದ್ದರು ಆದ್ದರಿಂದಲೇ ಅವನು ಜನರಿಗೆ ಭಯಪಟ್ಟು ಕೊಲ್ಲಲಾರದೆ ಇದ್ದನು [೧೪:೫].

Matthew 14:6

ಹೆರೋದನ ಜನ್ಮದಿನದಂದು ಹೆರೋದಿತಳು ನಾಟ್ಯವಾಡಿದ ನಂತರ ಅವನು ಏನು ಮಾಡಿದನು?

ಹೆರೋದ್ಯಳು ಏನೇ ಕೇಳಿದರೂ ಕೊಡುವದಾಗಿ ಹೆರೋದನು ಪ್ರಮಾಣ ಮಾಡಿದನು [೧೪:೭].

Matthew 14:8

ಹೆರೋದ್ಯಳು ಏನು ಕೇಳಿದಳು?

ಪರಾತಿನಲ್ಲಿ ಸ್ನಾನಿಕನಾದ ತಲೆಯನ್ನು ತಂದುಕೊಡಬೇಕೆಂದು ಹೆರೋದ್ಯಳು ಕೇಳಿದಳು [೧೪:೮].

ಹೆರೋದನು ಹೆರೋದ್ಯಳ ಮನವಿಯನ್ನು ಈಡೇರಿಸಿದನು ಯಾಕೆ?

ಯಾಕೆಂದರ ಅವನು ಪ್ರಮಾಣ ಮಾಡಿದ್ದನು ಮತ್ತು ಅವನ ಜೊತೆಯಲ್ಲಿ ಊಟಕ್ಕೆ ಕೂತಿದ್ದ ಜನರ ನಿಮಿತ್ತವಾಗಿ ಆಕೆಯ ಮನವಿಯನ್ನು ಈಡೇರಿಸಿದನು [೧೪:೯].

Matthew 14:13

ಜನರು ಗುಂಪಾಗಿ ಆತನನ್ನು ಹಿಂಬಾಲಿಸುವುದನ್ನು ನೋಡಿದಾಗ ಯೇಸುವಿನ ಪ್ರತಿಕ್ರಿಯೆ ಏನಾಗಿತ್ತು?

ಯೇಸು ಅವರನ್ನು ಕರುಣಿಸಿದನು ಮತ್ತು ಅವರ ರೋಗಗಳನ್ನು ಗುಣಪಡಿಸಿದನು [೧೪:೧೪].

Matthew 14:16

ಜನರಿಗೆ ಏನು ಮಾಡಬೇಕೆಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು?

ಜನರಿಗೆ ತಿನ್ನಲು ಕೊಡುವಂತೆ ಯೇಸು ತನ್ನ ಶಿಷ್ಯರಿಗೆ ಹೇಳಿದನು [೧೪:೧೬].

Matthew 14:19

ಶಿಷ್ಯರು ತಂದು ಕೊಟ್ಟ ಐದು ರೊಟ್ಟಿ ಮತ್ತು ಎರಡು ಮೀನುಗಳನ್ನು ಯೇಸು ಏನು ಮಾಡಿದನು?

ಯೇಸು ಅವುಗಳನ್ನು ಮೇಲಕ್ಕೆತ್ತಿ, ಆಶೀರ್ವದಿಸಿದನು ಮತ್ತು ರೊಟ್ಟಿಗಳನ್ನು ಮುರಿದು ಜನರಿಗೆ ಕೊಡುವಂತೆ ಶಿಷ್ಯರ ಕೈಗಳಿಗೆ ಕೊಟ್ಟನು [೧೪:೧೯].

ಎಷ್ಟು ಜನರು ತಿಂದರು ಮತ್ತು ಇನ್ನೂ ಎಷ್ಟು ರೊಟ್ಟಿಗಳು ಮಿಕ್ಕಿದವು?

ಸುಮಾರು ಐದು ಸಾವಿರ ಗಂಡಸರು ತಿಂದರು ಮತ್ತು ಹನ್ನೆರೆಡು ಪುಟ್ಟಿ ರೊಟ್ಟಿ ಮಿಕ್ಕಿತು [೧೪:೨೦-೨೧].

Matthew 14:22

ಯೇಸು ಜನರ ಗುಂಪುಗಳನ್ನು ಕಳುಹಿಸಿದ ನಂತರ ಏನು ಮಾಡಿದನು?

ಯೇಸು ಪ್ರಾರ್ಥನೆ ಮಾಡಲು ಬೆಟ್ಟಕ್ಕೆ ಹೋದನು [೧೪:೨೩].

ಸಮುದ್ರದಲ್ಲಿ ಶಿಷ್ಯರ ನಡುವೆ ಏನು ಸಂಭವಿಸುತ್ತಿತ್ತು?

ಅತಿಯಾದ ಗಾಳಿ ಮತ್ತು ಅಲೆಗಳ ನಿಮಿತ್ತ ಶಿಷ್ಯರ ದೋಣಿಯನ್ನು ನಿಯಂತ್ರಿಸಲು ಆಗುತ್ತಿರಲಿಲ್ಲ [೧೪:೨೪].

Matthew 14:25

ಯೇಸು ಶಿಷ್ಯರ ಬಳಿಗೆ ಹೇಗೆ ಹೋದನು?

ಯೇಸು ನೀರಿನ ಮೇಲೆ ನಡೆದುಕೊಂಡು ಶಿಷ್ಯರ ಬಳಿಗೆ ಹೋದನು [೧೪:೨೫].

ಶಿಷ್ಯರು ಯೇಸುವನ್ನು ನೋಡಿದಾಗ ಏನು ಹೇಳಿದರು?

ಯೇಸು ಶಿಷ್ಯರಿಗೆ ಧೈರ್ಯವಾಗಿರಿ, ಹೆದರಬೇಡಿರಿ ಎಂದು ಹೇಳಿದನು [೧೪:೨೭].

Matthew 14:28

ಯೇಸು ಪೇತ್ರನಿಗೆ ಬಂದು ಏನು ಮಾಡು ಎಂದು ಹೇಳಿದನು?

ಯೇಸು ಪೇತ್ರನಿಗೆ ಬಂದು ನೀರಿನ ಮೇಲೆ ನಡೆ ಎಂದು ಹೇಳಿದನು [೧೪:೨೯].

ಪೇತ್ರನು ನೀರಿನಲ್ಲಿ ಮುಳುಗಲು ಯಾಕೆ ಪ್ರಾರಂಭಿಸಿದನು?

ಪೇತ್ರನಿಗೆ ಹೆದರಿಕೆಯಾದಾಗ ನೀರಿನಲ್ಲಿ ಮುಳುಗಲು ಪ್ರಾರಂಭಿಸಿದನು [೧೪:೩೦].

Matthew 14:31

ಯೇಸು ಮತ್ತು ಪೇತ್ರನು ದೋಣಿಯೊಳಗೆ ಹೋದಾಗ ಏನಾಯಿತು?

ಯೇಸು ಮತ್ತು ಪೇತ್ರನು ದೋಣಿಯೊಳಗೆ ಹೋದಾಗ, ಬಿರುಗಾಳಿ ಶಾಂತವಾಯಿತು [೧೪:೩೨].

ಇದನ್ನು ನೋಡಿದಾಗ ಶಿಷ್ಯರು ಏನು ಮಾಡಿದರು?

ಶಿಷ್ಯರು ಇದನ್ನು ನೋಡಿದಾಗ, ಅವರು ಯೇಸುವನ್ನು ಆರಾಧಿಸಿದರು ಮತ್ತು ಈತನು ದೇವಕುಮಾರನು ಎಂದು ಹೇಳಿದರು [೧೪:೩೩].

Matthew 14:34

ಯೇಸು ಮತ್ತು ಶಿಷ್ಯರು ನದಿಯ ಆಚೆದಡಕ್ಕೆ ಬಂದಾಗ ಜನರು ಏನು ಮಾಡಿದರು?

ಯೇಸು ಮತ್ತು ಶಿಷ್ಯರು ನದಿಯ ಆಚೆದಡಕ್ಕೆ ಬಂದಾಗ, ಅನಾರೋಗ್ಯದಲ್ಲಿರುವವರನ್ನು ಆತನ ಬಳಿಗೆ ಕರೆದುಕೊಂಡು ಬಂದರು [೧೪:೩೫].