Matthew 13

Matthew 13:3

ಯೇಸು ಹೇಳಿದ ಬಿತ್ತುವವನ ಸಾಮ್ಯದಲ್ಲಿ, ದಾರಿಯ ಮಗ್ಗುಲಲ್ಲಿ ಬಿದ್ದ ಬೀಜವು ಏನಾಯಿತು?

ದಾರಿಯ ಮಗ್ಗುಲಲ್ಲಿ ಬಿದ್ದ ಬೀಜವನ್ನು ಹಕ್ಕಿಗಳು ಬಂದು ತಿಂದುಬಿಟ್ಟವು [೧೩:೪].

ಯೇಸು ಹೇಳಿದ ಬಿತ್ತುವವನ ಸಾಮ್ಯದಲ್ಲಿ, ಬಂಡೆಯ ನೆಲದ ಮೇಲೆ ಬಿದ್ದ ಬೀಜವು ಏನಾಯಿತು?

ಬಂಡೆಯ ನೆಲದ ಮೇಲೆ ಬಿದ್ದ ಬೀಜಗಳು ಬೇಗನೇ ಮೊಳೆತವು ಆದರೆ ಸೂರ್ಯನ ಕಿರಣಗಳನ್ನು ತಾಳಲಾರದೆ ಒಣಗಿ ಹೋದವು [೧೩:೫-೬].

Matthew 13:7

ಯೇಸು ಹೇಳಿದ ಬಿತ್ತುವವನ ಸಾಮ್ಯದಲ್ಲಿ, ಮುಳ್ಳು ಗಿಡಗಳ ನಡುವೆ ಬಿದ್ದ ಬೀಜಗಳು ಏನಾದವು?

ಮುಳ್ಳುಗಿಡಗಳು ಅಡಗಿಸಿದ್ದರಿಂದ ಅವುಗಳ ನಡುವೆ ಬಿದ್ದ ಬೀಜದಿಂದ ಹುಟ್ಟಿದ ಗಿಡಗಳು ಬೆಳೆಯಲಾಗಲಿಲ್ಲ[೧೩:೭].

ಯೇಸು ಹೇಳಿದ ಬಿತ್ತುವವನ ಸಾಮ್ಯದಲ್ಲಿ, ಒಳ್ಳೆಯ ನೆಲದ ಮೇಲೆ ಬಿದ್ದ ಬೀಜಗಳು ಏನಾದವು?

ಒಳ್ಳೆಯ ನೆಲದಲ್ಲಿ ಬಿದ್ದ ಬೀಜಗಳು ನೂರರಷ್ಟು, ಅರವತ್ತರಷ್ಟು ಮತ್ತು ಮೂವತ್ತರಷ್ಟು ಫಲವನ್ನು ಕೊಟ್ಟವು [೧೩:೮].

Matthew 13:13

ಯೆಶಾಯನ ಪ್ರವಾದನೆಯು ಜನರು ಕೇಳಿಸಿಕೊಳ್ಳುತ್ತಾರೆ ಮತ್ತು ನೋಡುತ್ತಾರೆ ಆದರೆ ಏನು ಮಾಡುವದಿಲ್ಲ ಎಂದು ಹೇಳುತ್ತದೆ?

ಯೆಶಾಯನ ಪ್ರವಾದನೆಯು ಜನರು ಕೇಳಿಸಿಕೊಳ್ಳುತ್ತಾರೆ ಆದರೆ ಅರ್ಥಮಾಡಿಕೊಳ್ಳುವದಿಲ್ಲ; ನೋಡುತ್ತಾರೆ ಆದರೆ ಗ್ರಹಿಸಿಕೊಳ್ಳುವದಿಲ್ಲ ಎಂದು ಹೇಳುತ್ತದೆ [೧೩:೧೪].

Matthew 13:15

ಯೇಸುವಿನ ಸಮಾಚಾರವನ್ನು ಕೇಳಿ ಅರ್ಥಮಾಡಿಕೊಳ್ಳದಿರುವ ಜನರಲ್ಲಿ ಯಾವ ದೋಷವಿತ್ತು?

ಯೇಸುವಿನ ಸಮಾಚಾರವನ್ನು ಕೇಳಿ ಅದನ್ನು ಅರ್ಥಮಾಡಿಕೊಳ್ಳದ ಜನರ ಹೃದಯಗಳು ಮಂದವಾಗಿದ್ದವು, ಕೇಳದಂತೆ ಭಾರವಾಗಿದ್ದವು ಮತ್ತು ಅವರ ಕಣ್ಣುಗಳು ಮುಚ್ಚಿದ್ದವು [೧೩:೧೫].

Matthew 13:18

ಬಿತ್ತುವವನ ಸಾಮ್ಯದಲ್ಲಿ, ದಾರಿಯ ಮಗ್ಗುಲಲ್ಲಿ ಬೀಜ ಬಿದ್ದವರು ಎಂಥ ಜನರು?

ದಾರಿಯ ಮಗ್ಗುಲಲ್ಲಿ ಬೀಜ ಬಿದ್ದ ಜನರು ದೇವರ ವಾಕ್ಯವನ್ನು ಕೇಳಿಸಿಕೊಳ್ಳುತ್ತಾರೆ ಆದರೆ ಅದನ್ನು ಅರ್ಥಮಾಡಿಕೊಳ್ಳುವದಿಲ್ಲ, ನಂತರ ವೈರಿಯು ಬರುತ್ತಾನೆ ಮತ್ತು ಅವರ ಹೃದಯದಲ್ಲಿ ಬಿತ್ತಲ್ಪಟ್ಟಿರುವದನ್ನು ಕಿತ್ತುಕೊಂಡು ಹೋಗುತ್ತಾನೆ [೧೩:೧೯].

Matthew 13:20

ಬಿತ್ತುವವನ ಸಾಮ್ಯದಲ್ಲಿ ಬಂಡೆಯ ನೆಲದ ಮೇಲೆ ಬೀಜ ಬಿದ್ದವರು ಎಂಥ ಜನರು?

ಬಂಡೆಯ ನೆಲದ ಮೇಲೆ ಬೀಜ ಬಿದ್ದವರು ದೇವರ ವಾಕ್ಯವನ್ನು ಕೇಳುತ್ತಾರೆ ಮತ್ತು ತಕ್ಷಣವೇ ಅದನ್ನು ಸಂತೋಷದಿಂದ ಅಂಗೀಕರಿಸಿಕೊಳ್ಳುತ್ತಾರೆ ಆದರೆ ಹಿಂಸೆಗಳು ಬರುವಾಗ ಕೂಡಲೇ ಬಿದ್ದುಹೋಗುತ್ತಾರೆ [೧೩:೨೦-೨೧].

Matthew 13:22

ಬಿತ್ತುವವನ ಸಾಮ್ಯದಲ್ಲಿ, ಮುಳ್ಳುಗಿಡಗಳ ನಡುವೆ ಬೀಜ ಬಿದ್ದವರು ಎಂಥಾ ಜನರು?

ಮುಳ್ಳುಗಿಡಗಳ ನಡುವೆ ಬೀಜಬಿದ್ದವರು ದೇವರ ವಾಕ್ಯಗಳನ್ನು ಕೇಳುತ್ತಾರೆ ಆದರೆ ಲೋಕದ ಚಿಂತೆಗಳು ಮತ್ತು ಐಶ್ವರ್ಯದಿಂದಾಗುವ ವಂಚನೆಯಿಂದ ಮುದುರಿಕೊಳ್ಳುತ್ತಾರೆ [೧೩:೨೨].

ಬಿತ್ತುವವನ ಸಾಮ್ಯದಲ್ಲಿ ಒಳ್ಳೆಯ ನೆಲದ ಮೇಲೆ ಬೀಜ ಬಿದ್ದವರು ಎಂಥಾ ಜನರು?

ಒಳ್ಳೆಯ ನೆಲದ ಮೇಲೆ ಬೀಜ ಬಿದ್ದವರು ದೇವರ ವಾಕ್ಯವನ್ನು ಕೇಳುತ್ತಾರೆ ಮತ್ತು ಅದನ್ನು ಅರ್ಥಮಾಡಿಕೊಳ್ಳುತ್ತಾರೆ ಹಾಗೂ ಒಳ್ಳೆಯ ಫಲವನ್ನು ಕೊಡುತ್ತಾರೆ [೧೩:೨೩].

Matthew 13:27

ಹಣಜಿಯ ಸಾಮ್ಯದಲ್ಲಿ, ಹಣಜಿಯನ್ನು ಬಿತ್ತಿದವನು ಯಾರು?

ವೈರಿಯು ಹಣಜಿಯನ್ನು ಹೊಲದಲ್ಲಿ ಬಿತ್ತಿದನು [೧೩:೨೮].

Matthew 13:29

ಹೊಲದ ಯಜಮಾನನು ಹಣಜಿ ಮತ್ತು ಗೋಧಿಯ ವಿಷಯದಲ್ಲಿ ಸೇವಕರಿಗೆ ಏನೆಂದು ಸೂಚಿಸಿದನು?

ಸುಗ್ಗಿಯ ತನಕ ಎರಡೂ ಬೆಳೆಯಲಿ ಮತ್ತು ನಂತರ ಹಣಜಿಯನ್ನು ಕೂಡಿಸಿ ಬೆಂಕಿಗೆ ಹಾಕಿರಿ ಮತ್ತು ಗೋದಿಯನ್ನು ಕಣಜಕ್ಕೆ ತುಂಬಿಸಿರಿ ಎಂದು ಹೇಳಿದನು [೧೩:೩೦].

Matthew 13:31

ಸಾಸಿವೆ ಕಾಳಿನ ಬಗ್ಗೆ ಯೇಸು ಹೇಳಿದ ಸಾಮ್ಯದಲ್ಲಿ, ಸಣ್ಣದಾಗಿರುವ ಸಾಸಿವೆ ಕಾಳಿಗೆ ಏನಾಗುತ್ತದೆ?

ಸಾಸಿವೆ ಕಾಳು ತೋಟದಲ್ಲಿರುವ ಇತರೆ ಗಿಡಗಳಿಗಿಂತ ಬೆಳೆದು ದೊಡ್ಡ ಮರವಾಗುತ್ತದೆ ಮತ್ತು ಅದರ ಕೊಂಬೆಗಳಲ್ಲಿ ಪಕ್ಷಿಗಳು ಗೂಡುಗಳನ್ನು ಕಟ್ಟಿಕೊಳ್ಳುತ್ತವೆ [೧೩:೩೧-೩೨].

Matthew 13:33

ಪರಲೋಕ ರಾಜ್ಯವು ಹೇಗೆ ಹುಳಿಹಿಟ್ಟಿಗೆ ಹೋಲಿಕೆಯಾಗಿದೆ ಎಂದು ಯೇಸು ಹೇಳಿದನು?

ಪರಲೋಕ ರಾಜ್ಯವು ಮೂರು ಸೇರು ಹಿಟ್ಟಿನಲ್ಲಿ ಕಲಸಿಟ್ಟು ಹುಳಿಯಾಗುವ ಹಿಟ್ಟಿಗೆ ಹೋಲಿಕೆಯಾಗಿದೆ ಎಂದು ಯೇಸು ಹೇಳಿದನು [೧೩:೩೩].

Matthew 13:36

ಹಣಜಿಯ ಸಾಮ್ಯದಲ್ಲಿ, ಬೀಜವನ್ನು ಬಿತ್ತುವವನು ಯಾರು, ಹೊಲ ಎಂದರೆ ಏನು, ಒಳ್ಳೆಯ ಬೀಜ ಯಾರು, ಹಣಜಿ ಯಾರು ಮತ್ತು ಹಣಜಿಯನ್ನು ಬಿತ್ತುವವನು ಯಾರು?

ಬೀಜವನ್ನು ಬಿತ್ತುವವನು ಮನುಷ್ಯಕುಮಾರನು, ಹೊಲ ಎಂದರೆ ಲೋಕ, ಒಳ್ಳೆಯ ಬೀಜ ಎಂದರೆ ದೇವರ ರಾಜ್ಯದ ಬಾದ್ಯಸ್ಥರು, ಹಣಜಿ ಎಂದರೆ ದುರಾತ್ಮನ ಬಾಧ್ಯಸ್ಥರು ಮತ್ತು ಹಣಜಿಯನ್ನು ಬಿತ್ತುವವನು ಸೈತಾನನು [೧೩:೩೭-೩೯].

Matthew 13:40

ಅಪರಾಧ ಮಾಡುವವರಿಗೆ ಲೋಕದ ಕೊನೆಯಲ್ಲಿ ಏನು ಸಂಭವಿಸುತ್ತದೆ?

ಲೋಕದ ಕೊನೆಯಲ್ಲಿ ಅಪರಾಧ ಮಾಡುವವರನ್ನು ಬೆಂಕಿಯ ಕೆರೆಗೆ ಹಾಕಲಾಗುವುದು [೧೩:೪೨].

ಲೋಕದ ಕೊನೆಯಲ್ಲಿ ನೀತಿವಂತರಾಗಿ ನಡೆಯುವವರಿಗೆ ಏನು ಸಂಭವಿಸುತ್ತದೆ?

ಲೋಕದ ಕೊನೆಯಲ್ಲಿ ನೀತಿವಂತನು ಸೂರ್ಯನ ಹಾಗೆ ಪ್ರಕಾಶಿಸುವರು [೧೩:೪೩].

Matthew 13:44

ಯೇಸು ಹೇಳಿದ ಸಾಮ್ಯದಲ್ಲಿ, ಪರಲೋಕ ರಾಜ್ಯವನ್ನು ಪ್ರತಿನಿಧಿಸುವ ದ್ರವ್ಯವು ಹೊಲದಲ್ಲಿ ದೊರಕಿದರೆ ಒಬ್ಬನಿಗೆ ದೊರೆತರೆ ಅವನು ಏನು ಮಾಡುವನು?

ಆ ಹೊಲವನ್ನು ಖರೀದಿಸಿಕೊಳ್ಳಲು ಆತನು ತನಗಿರುವದನ್ನೆಲ್ಲಾ ಮಾರಿಬಿಡುತ್ತಾನೆ [೧೩:೪೪].

ಯೇಸು ಹೇಳಿದ ಸಾಮ್ಯದಲ್ಲಿ, ಪರಲೋಕ ರಾಜ್ಯವನ್ನು ಪ್ರತಿನಿಧಿಸುವ, ಬಹುಬೆಲೆಯ ಮುತ್ತು ಒಬ್ಬನಿಗೆ ದೊರೆತರೆ ಅವನು ಏನು ಮಾಡುವನು?

ಅವನು ಅದನ್ನು ಕೊಂಡುಕೊಳ್ಳಲು ತನಗಿರುವುದನ್ನೆಲ್ಲಾ ಮಾರಿಬಿಡುತ್ತಾನೆ [೧೩:೪೫-೪೬].

Matthew 13:47

ಮೀನು ಹಿಡಿಯುವ ಬಲೆಯು ಯಾವ ರೀತಿಯಲ್ಲಿದೆ ಮತ್ತು ಲೋಕದ ಅಂತ್ಯದಲ್ಲಿ ಏನಾಗುತ್ತದೆ?

ಬಲೆಯಿಂದ ಕೆಲಸಕ್ಕೆ ಬಾರದವುಗಳನ್ನು ಬಿಸಾಡುವ ಪ್ರಕಾರವೇ, ಲೋಕದ ಅಂತ್ಯದಲ್ಲಿ ಒಳ್ಳೆಯದರಿಂದ ಕೆಟ್ಟದ್ದನ್ನು ಬೇರ್ಪಡಿಸಿ ಬೆಂಕಿಯಲ್ಲಿ ಹಾಕಲಾಗುವುದು [೧೩:೪೭-೫೦].

Matthew 13:54

ಯೇಸು ಬೋಧಿಸುವದನ್ನು ಕೇಳಿದಾಗ ಆತನ ಊರಿನ ಜನರು ಆತನ ಬಗ್ಗೆ ಕೇಳಿದ ಪ್ರಶ್ನೆಗಳು ಯಾವುವು?

"ಇವನಿಗೆ ಇಂಥ ಜ್ಞಾನವು ಎಲ್ಲಿಂದ ಬಂದಿತು ಮತ್ತು ಈ ಅದ್ಭುತಗಳನ್ನು ಈತನು ಮಾಡುವುದು ಹೇಗೆ" ಎಂಬದಾಗಿ ಅವರು ಪ್ರಶ್ನಿಸಿದರು? [೧೩:೫೪].

Matthew 13:57

ಪ್ರವಾದಿಗೆ ತನ್ನ ಸ್ವಂತ ದೇಶದಲ್ಲಿ ಏನಾಗುವುದೆಂದು ಯೇಸು ಹೇಳಿದ್ದಾನೆ?

ಪ್ರವಾದಿಗೆ ತನ್ನ ಸ್ವಂತ ದೇಶದಲ್ಲಿ ಮರ್ಯಾದೆ ಇಲ್ಲ ಎಂದು ಯೇಸು ಹೇಳಿದ್ದಾನೆ [೧೩:೫೭].

ಜನರ ಅಪನಂಬಿಕೆಯ ನಿಮಿತ್ತ ಯೇಸುವಿನ ಸ್ವಂತ ಊರಿನಲ್ಲಿ ಏನಾಯಿತು?

ಜನರ ಅಪನಂಬಿಕೆಯ ನಿಮಿತ್ತ ಯೇಸು ತನ್ನ ಸ್ವಂತ ಊರಿನಲ್ಲಿ ಹೆಚ್ಚು ಅದ್ಭುತಗಳನ್ನು ಮಾಡಲು ಆಗಲಿಲ್ಲ [೧೩:೫೮].