Matthew 12

Matthew 12:1

ಯೇಸುವಿನ ಶಿಷ್ಯರು ಏನು ಮಾಡಿದ್ದರಿಂದ, ಫರಿಸಾಯರು ಬಂದು ಅವರ ಮೇಲೆ ಯೇಸುವಿಗೆ ದೂರು ಹೇಳಿದರು?

ಯೇಸುವಿನ ಶಿಷ್ಯರು ತೆನೆಗಳನ್ನು ಮುರಿದುಕೊಂಡು ತಿನ್ನುತ್ತಿದ್ದರು, ಅವರ ಪ್ರಕಾರ ಸಬ್ಬತ್ ದಿನದಲ್ಲಿ ಇದು ಮಾಡಬಾರದ ಕೆಲಸ ಆದ್ದರಿಂದ ಇದರ ಬಗ್ಗೆ ಅವರು ಯೇಸುವಿಗೆ ದೂರು ಹೇಳಿದರು [೧೨:೨].

Matthew 12:5

ದೇವಾಲಯಕ್ಕಿಂತಲೂ ಹೆಚ್ಚಿನದು ಯಾವುದು ಎಂದು ಯೇಸು ಹೇಳಿದನು?

ದೇವಾಲಯಕ್ಕಿಂತಲೂ ತಾನೇ ಹೆಚ್ಚಿನವನು ಎಂದು ಯೇಸು ಹೇಳಿದನು [೧೨:೬].

Matthew 12:7

ಮನುಷ್ಯಕುಮಾರನಾಗಿರುವ ಯೇಸು ಕ್ರಿಸ್ತನಿಗಿರುವ ಅಧಿಕಾರ ಏನು?

ಮನುಷ್ಯಕುಮಾರನಾಗಿರುವ ಯೇಸು ಕ್ರಿಸ್ತನು ಸಬ್ಬತ್ ದಿನಕ್ಕೆ ಒಡೆಯನಾಗಿದ್ದಾನೆ [೧೨:೮].

Matthew 12:9

ಕೈಬತ್ತಿಹೋಗಿದ್ದವನ ಎದುರಿನಲ್ಲಿ ಫರಿಸಾಯರು ಸಭಾಮಂದಿರದೊಳಗೆ ಯೇಸುವಿಗೆ ಯಾವ ಪ್ರಶ್ನೆಯನ್ನು ಕೇಳಿದರು?

ಫರಿಸಾಯರು ಯೇಸುವಿಗೆ ಕೇಳಿದ್ದೇನೆಂದರೆ, "ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವುದು ಸರಿಯೋ" [೧೨:೧೦].

Matthew 12:11

ಸಬ್ಬತ್ ದಿನದಲ್ಲಿ ಯಾವುದು ಸರಿ ಎಂಬದಾಗಿ ಯೇಸು ಹೇಳಿದ್ದಾನೆ?

ಸಬ್ಬತ್ ದಿನದಲ್ಲಿ ಒಲ್ಲೇ ಕೆಲಸ ಮಾಡುವುದು ತಕ್ಕದ್ದೇ ಎಂದು ಯೇಸು ಹೇಳಿದ್ದಾನೆ [೧೨:೧೨].

Matthew 12:13

ಯೇಸು ಕೈಬತ್ತಿದವನನ್ನು ಗುಣಪಡಿಸುವದನ್ನು ಫರಿಸಾಯರು ನೋಡಿದಾಗ ಅವರು ಏನು ಮಾಡಿದರು?

ಫರಿಸಾಯರು ಹೊರಟುಹೋದರು ಮತ್ತು ಅವನಿಗೆ ವಿರುದ್ಧವಾಗಿ ಸಂಚುರೂಪಿಸಿದರು, ಹೇಗೆ ಅವನನ್ನು ನಾಶಮಾಡಬೇಕೆಂದು ಯೋಚಿಸುತ್ತಿದ್ದರು [೧೨:೧೪].

Matthew 12:19

ಯೇಸುವಿನ ಬಗ್ಗೆ ಯೆಶಾಯನು ಮಾಡಿರುವ ಪ್ರವಾದನೆಯ ಪ್ರಕಾರ, ಯೇಸು ಯಾವ ಕಾರ್ಯವನ್ನು ಮಾಡುವದಿಲ್ಲ?

ಯೇಸು ಜಗಳವಾಡುವದಿಲ್ಲ, ಕೂಗಾಡುವದಿಲ್ಲ, ಜಜ್ಜಿದ ದಂಟನ್ನು ಮುರಿಯುವದಿಲ್ಲ ಮತ್ತು ಆರಿಹೋಗುತ್ತಿರುವ ದೀಪವನ್ನು ನಂದಿಸುವದಿಲ್ಲ [೧೨:೧೯-೨೦].

ಯೇಸುವಿನ ಬಗ್ಗೆ ಯೆಶಾಯನು ಮಾಡಿರುವ ಪ್ರವಾದನೆಯ ಪ್ರಕಾರ ದೇವರ ನ್ಯಾಯತೀರ್ಪನ್ನು ಯಾರು ಕೇಳಿಸಿಕೊಳ್ಳುವರು ಮತ್ತು ಯೇಸುವಿನಲ್ಲಿ ಆತ್ಮವಿಶ್ವಾಸವುಳ್ಳವರಾಗಿರುವರು?

ಅನ್ಯರು ದೇವರ ನ್ಯಾಯತೀರ್ಪನ್ನು ಕೇಳಿಸಿಕೊಳ್ಳುವರು ಮತ್ತು ಯೇಸುವಿನಲ್ಲಿ ಆತ್ಮವಿಶ್ವಾಸವುಳ್ಳವರಾಗಿರುವರು [೧೨:೧೮, ೨೧].

Matthew 12:26

ಯೇಸು ಬೆಲ್ಜೆಬೂಲನ ಸಹಾಯದಿಂದ ದೆವ್ವಗಳನ್ನು ಓಡಿಸುತ್ತಾನೆ ಎಂಬ ಆರೋಪಕ್ಕೆ ಯೇಸುವಿನ ಪ್ರತಿಕ್ರಿಯೆ ಏನು?

ಸೈತಾನನೇ ಸೈತಾನನನ್ನು ಓಡಿಸಿದರೆ, ಸೈತಾನನ ರಾಜ್ಯವು ಸ್ಥಿರವಾಗಿ ನಿಲ್ಲಲು ಹೇಗೆ ಸಾಧ್ಯ ಎಂದು ಯೇಸು ಹೇಳಿದನು [೧೨:೨೬].

Matthew 12:28

ತಾನು ದೇವರಾತ್ಮನ ಸಹಾಯದಿಂದ ದುರಾತ್ಮಗಳನ್ನು ಓಡಿಸುತ್ತಿರುವದಾದರೆ ಏನು ಸಂಭವಿಸುತ್ತಿದೆ ಎಂದು ಯೇಸು ಹೇಳಿದನು?

ತಾನು ದೇವರಾತ್ಮನ ಸಹಾಯದಿಂದ ದುರಾತ್ಮಗಳನ್ನು ಓಡಿಸುತ್ತಿರುವದಾದರೆ ದೇವರ ರಾಜ್ಯವು ಅವರ ಬಳಿಗೆ ಬಂದಿದೆ ಎಂದು ಯೇಸು ಹೇಳಿದನು [೧೨:೨೮].

Matthew 12:31

ಯಾವ ಪಾಪಕ್ಕೆ ಕ್ಷಮಾಪಣೆ ಇಲ್ಲ ಎಂದು ಯೇಸು ಹೇಳಿದ್ದಾನೆ?

ಪವಿತ್ರಾತ್ಮನಿಗೆ ವಿರುದ್ಧವಾದ ದೂಷಣೆಗೆ ಕ್ಷಮಾಪಣೆ ಇಲ್ಲ ಎಂದು ಯೇಸು ಹೇಳಿದ್ದಾನೆ [೧೨:೩೧].

Matthew 12:33

ಮರವನ್ನು ಯಾವುದರಿಂದ ಗುರುತಿಸಲಾಗುವುದು?

ಮರವನ್ನು ಅದರ ಫಲಗಳಿಂದ ಗುರುತಿಸಲಾಗುವುದು [೧೨:೩೩].

Matthew 12:36

ಯಾವುದರ ಆಧಾರದ ಮೇರೆಗೆ ಫರಿಸಾಯರನ್ನು ತೀರ್ಪಾಗುವುದು ಎಂದು ಯೇಸು ಹೇಳಿದ್ದಾನೆ?

ಫರಿಸಾಯರಿಗೆ ಅವರ ಮಾತಿನ ಮೇರೆಗೆ ತೀರ್ಪಾಗುವುದು ಎಂದು ಯೇಸು ಹೇಳಿದ್ದಾನೆ [೧೨:೩೭].

Matthew 12:38

ಯೇಸು ಈ ಸಂತತಿಯವರಿಗೆ ಯಾವ ಸೂಚಕಕಾರ್ಯವನ್ನು ಕೊಡುವುದಾಗಿ ಹೇಳಿದ್ದಾನೆ?

ಮೂರು ದಿನ ರಾತ್ರಿ ಹಗಲು ಭೂಗರ್ಭದೊಳಗೆ ಇರುವ ಯೋನನಿಗಾದ ಸೂಚಕಕಾರ್ಯವನ್ನು ಈ ಸಂಸತಿಗೆ ಕೊಡುವದಾಗಿ ಯೇಸು ಹೇಳಿದ್ದಾನೆ [೧೨:೩೯-೪೦].

Matthew 12:41

ಯೋನನಿಗಿಂತ ಹೆಚ್ಚಿನವನು ಯಾರು ಎಂದು ಯೇಸು ಹೇಳಿದ್ದಾನೆ?

ಯೋನನಿಗಿಂತ ತಾನು ಹೆಚ್ಚಿನವನು ಎಂದು ಯೇಸು ಹೇಳಿದ್ದಾನೆ [೧೨:೪೧].

ನಿನವೆಯ ಜನರು ಮತ್ತು ದಕ್ಷಿಣದ ರಾಣಿಯು ಯೇಸುವಿನ ತಲೆಮಾರಿನ ಜನರನ್ನು ಯಾಕೆ ಖಂಡಿಸುತ್ತಾರೆ?

ನಿನವೆಯ ಜನರು ಮತ್ತು ದಕ್ಷಿಣದ ರಾಣಿಯು ಯೇಸುವಿನ ತಲೆಮಾರಿನ ಜನರನ್ನು ಖಂಡಿಸುತ್ತಾರೆ ಯಾಕೆಂದರೆ ಅವರು ಯೋನ ಮತ್ತು ಸೊಲೊಮೊನನ ಮೂಲಕ ದೇವರ ವಾಕ್ಯಗಳನ್ನು ಕೇಳಿದರು ಆದರೆ ಯೇಸುವಿನ ತಲೆಮಾರಿನವರು ಯೋನನಿಗಿಂತಲೂ ಹೆಚ್ಚಿನವನಾಗಿರುವ ಮನುಷ್ಯಕುಮಾರನ ಮಾತುಗಳನ್ನು ಕೇಳಲಿಲ್ಲ [೧೨:೪೧-೪೨].

Matthew 12:42

ಸೊಲೊಮೊನನಿಗಿಂತಲೂ ಹೆಚ್ಚಿನವನು ಯಾರು ಎಂದು ಯೇಸು ಹೇಳಿದ್ದಾನೆ?

ತಾನೇ ಸೊಲೊಮೊನನಿಗಿಂತಲೂ ಹೆಚ್ಚಿನವನು ಎಂದು ಯೇಸು ಹೇಳಿದ್ದಾನೆ [೧೨:೪೨].

Matthew 12:43

ಯೇಸುವಿನ ತಲೆಮಾರಿನವರು ತಮ್ಮಿಂದ ಹೊರಟುಹೋಗದಂಥ ಅಶುದ್ಧ ಆತ್ಮನ ಹಾಗೆ ಹೇಗಿರುವರು?

ಯೇಸುವಿನ ತಲೆಮಾರಿನವರು ತಮ್ಮಿಂದ ಹೊರಟುಹೋಗದಂಥ ಅಶುದ್ಧ ಆತ್ಮನ ಹಾಗೆ ಇರುವರು ಯಾಕೆಂದರೆ ಅಶುದ್ಧ ಆತ್ಮನು ಇನ್ನೂ ಏಳು ಆತ್ಮಗಳನ್ನು ಕರೆದುಕೊಂಡು ಬರುವನು ಮತ್ತು ಆ ವ್ಯಕ್ತಿಯ ಕಡೆಯ ಸ್ಥಿತಿಯು ಮೊದಲ ಸ್ಥಿತಿಗಿಂತಲೂ ಘೋರವಾಗಿರುವದು [೧೨:೪೩-೪೫].

Matthew 12:48

ಯೇಸು ತನ್ನ ಸಹೋದರ, ಸಹೋದರಿ ಮತ್ತು ತಾಯಿ ಯಾರು ಎಂದು ಹೇಳಿದ್ದಾನೆ?

ತಂದೆಯ ಚಿತ್ತದಂತೆ ನಡೆಯುವವರೇ ತನಗೆ ಸಹೋದರ, ಸಹೋದರಿ ಮತ್ತು ತಾಯಿ ಎಂದು ಹೇಳಿದ್ದಾನೆ [೧೨:೪೬-೫೦].