Matthew 11

Matthew 11:1

ಯೇಸು ಪಟ್ಟಣಗಳಲ್ಲಿ ಕಲಿಸಲು ಮತ್ತು ಬೋಧಿಸಲು ಹೋಗುವ ಮೊದಲು ಏನನ್ನು ಮಾಡಿ ಮುಗಿಸಿದನು?

ಯೇಸು ಹೋಗುವ ಮೊದಲು ತನ್ನ ಹನ್ನೆರೆಡು ಮಂದಿ ಶಿಷ್ಯರಿಗೆ ಸೂಚನೆಗಳನ್ನು ಕೊಟ್ಟು ಮುಗಿಸಿದನು [೧೧:೧].

ಸ್ನಾನಿಕನಾದ ಯೋಹಾನನು ಯೇಸುವಿಗೆ ಯಾವ ಸಂದೇಶವನ್ನು ಕಳುಹಿಸಿದನು?

ಸ್ನಾನಿಕನಾದ ಯೋಹಾನನು, "ಬರಬೇಕಾದವನು ನೀನೋ, ನಾವು ಬೇರೊಬ್ಬನ ದಾರಿಯನ್ನು ನೋಡಬೇಕೋ" ಎಂಬ ಸಂದೇಶವನ್ನು ಕಳುಹಿಸಿದನು [೧೧:೩]

Matthew 11:4

ಬರಬೇಕಾದವನು ನಾನೇ ಎಂಬದಕ್ಕೆ ಸಾಕ್ಷಿಯಾಗಿ ಯಾವ ಕಾರ್ಯಗಳು ನಡೆಯುತ್ತಿವೆ ಎಂದು ಯೇಸು ಹೇಳಿದನು?

ಅನಾರೋಗ್ಯದಲ್ಲಿರುವವರಿಗೆ ಗುಣವಾಗುತ್ತಿದೆ, ಸತ್ತವರು ಎದ್ದೇಳುತ್ತಿದ್ದಾರೆ ಮತ್ತು ಅವಶ್ಯಕತೆಯಲ್ಲಿರುವವರಿಗೆ ಶುಭವಾರ್ತೆಯನ್ನು ಹೇಳಲಾಗುತ್ತಿದೆ ಎಂದು ಯೇಸು ಹೇಳಿದನು [೧೧:೫].

ತನ್ನ ವಿಷಯದಲ್ಲಿ ಸಂಶಯಪಡದವನಿಗೆ ಯೇಸು ಏನೆಂದು ವಾಗ್ದಾನ ಮಾಡಿದ್ದಾನೆ?

ತನ್ನ ವಿಷಯದಲ್ಲಿ ಸಂಶಯಪಡದವನಿಗೆ ಯೇಸು ಆಶೀರ್ವಾದವನ್ನು ವಾಗ್ದಾನ ಮಾಡಿದ್ದಾನೆ [೧೧:೬].

Matthew 11:9

ಸ್ನಾನಿಕನಾದ ಯೋಹಾನನು ಆತನ ಜೀವಿತದಲ್ಲಿ ಯಾವ ಪಾತ್ರವನ್ನು ನಿರ್ವಹಿಸಿದನು ಎಂಬದಾಗಿ ಯೇಸು ಕ್ರಿಸ್ತನು ಹೇಳಿದನು?

ಬರಲಿರುವವನಿಗೆ ಮಾರ್ಗವನ್ನು ಸಿದ್ಧಮಾಡುವವನು ಎಂಬದಾಗಿ ಸ್ನಾನಿಕನಾದ ಯೋಹಾನನ ಬಗ್ಗೆಯೇ ಪ್ರವಾದನೆ ಹೇಳಲಾಗಿತ್ತು ಎಂದು ಯೇಸು ಹೇಳಿದನು [೧೧:೯-೧೦].

Matthew 11:13

ಸ್ನಾನಿಕನಾದ ಯೋಹಾನನು ಯಾರು ಎಂದು ಯೇಸು ಹೇಳಿದನು?

ಸ್ನಾನಿಕನಾದ ಯೋಹಾನನು ಎಲೀಯನಾಗಿದ್ದಾನೆ ಎಂದು ಯೇಸು ಹೇಳಿದನು [೧೧:೧೪].

Matthew 11:18

ರೊಟ್ಟಿ ತಿನ್ನದೆ ಅಥವಾ ದ್ರಾಕ್ಷಾರಸವನ್ನು ಕುಡಿಯದೇ ಇದ್ದ ಸ್ನಾನಿಕನಾದ ಯೋಹಾನನ ಬಗ್ಗೆ ಜನರು ಏನು ಹೇಳುತ್ತಿದ್ದರು?

ಸ್ನಾನಿಕನಾದ ಯೋಹಾನನಿಗೆ ದೆವ್ವಹಿಡಿದಿದೆ ಎಂದು ಹೇಳಿದರು [೧೧:೧೮].

ಅನ್ನಪಾನಗಳನ್ನು ತೆಗೆದುಕೊಳ್ಳುವವನಾಗಿದ್ದ ಯೇಸು ಕ್ರಿಸ್ತನ ಬಗ್ಗೆ ಜನರು ಏನು ಹೇಳಿದರು?

ಹೊಟ್ಟೆಬಾಕನು, ಕುಡುಕನು, ಭ್ರಷ್ಟರ ಮತ್ತು ಪಾಪಿಷ್ಠರ ಗೆಳೆಯನು ಎಂದು ಹೇಳಿದರು [೧೧:೧೯].

Matthew 11:20

ಯೇಸು ತನ್ನ ಮಹತ್ಕಾರ್ಯಗಳು ಬಹಳವಾಗಿ ನಡೆದ ಊರುಗಳು ದೇವರ ಕಡೆಗೆ ತಿರುಗಿಕೊಳ್ಳಲಿಲ್ಲವಾದ್ದರಿಂದ ಅವುಗಳ ವಿಷಯವಾಗಿ ಏನೆಂದು ಪ್ರಕಟಿಸಿದನು?

ತನ್ನ ಮಹತ್ಕಾರ್ಯಗಳು ಬಹಳವಾಗಿ ನಡೆದ ಊರುಗಳು ದೇವರ ಕಡೆಗೆ ತಿರುಗಿಕೊಳ್ಳಲಿಲ್ಲವಾದ್ದರಿಂದ ದೊಡ್ಡ ನ್ಯಾಯತೀರ್ಪು ಅವರಿಗಾಗುವದೆಂದು ಯೇಸು ಪ್ರಕಟಿಸಿದನು [೧೧:೨೦-೨೪].

Matthew 11:25

ಪರಲೋಕ ರಾಜ್ಯವನ್ನು ದೇವರು ಯಾರಿಗೆ ಮರೆಮಾಡಿರುವದರಿಂದ ಯೇಸು ಆತನನ್ನು ಸ್ತುತಿಸಿದನು?

ಪರಲೋಕ ರಾಜ್ಯವನ್ನು ದೇವರು ಬುದ್ದಿವಂತರಿಗೂ, ಜ್ಞಾನಿಗಳಿಗೂ ಮರೆಮಾಡಿರುವದರಿಂದ ಯೇಸು ಆತನನ್ನು ಸ್ತುತಿಸಿದನು [೧೧:೨೫].

ಪರಲೋಕ ರಾಜ್ಯವನ್ನು ದೇವರು ಯಾರಿಗೆ ಪ್ರಕಟಮಾಡಿರುವದಕ್ಕೆ ಯೇಸು ಆತನನ್ನು ಸ್ತುತಿಸಿದನು?

ಪರಲೋಕ ರಾಜ್ಯವನ್ನು ದೇವರು ಚಿಕ್ಕಮಕ್ಕಳಿಗೆ ಅಂದರೆ ಬಾಲಕರಿಗೆ ಪ್ರಕಟಮಾಡಿರುವದಕ್ಕೆ ಯೇಸು ಆತನನ್ನು ಸ್ತುತಿಸಿದನು [೧೧:೨೫].

ತಂದೆಯನ್ನು ಯಾರು ಬಲ್ಲವರು ಎಂದು ಯೇಸು ಹೇಳಿದನು?

ಮಗನು ತಂದೆಯನ್ನು ಯಾರಿಗೆ ಪ್ರಕಟಿಸುವದಕ್ಕೆ ಮನಸ್ಸುಳ್ಳವನಾಗಿದ್ದಾನೋ ಅವನೂ ಆತನನ್ನು ತಿಳಿದವನಾಗಿದ್ದಾನೆ [೧೧:೨೭].

Matthew 11:28

ಯೇಸು ಯಾರಿಗೆ ವಿಶ್ರಾಂತಿಯನ್ನು ವಾಗ್ದಾನ ಮಾಡಿದ್ದಾನೆ?

ಯೇಸು ಕಷ್ಟಪಡುವವರಿಗೆ, ಹೊರೆಹೊತ್ತವರಿಗೆ ವಿಶ್ರಾಂತಿಯನ್ನು ವಾಗ್ದಾನ ಮಾಡಿದ್ದಾನೆ [೧೧:೨೮].