ಯೇಸು ತನ್ನ ಹನ್ನೆರೆಡು ಮಂದಿ ಶಿಷ್ಯರಿಗೆ ಅಶುದ್ಧ ಆತ್ಮಗಳನ್ನು ಓಡಿಸುವ ಮತ್ತು ಎಲ್ಲಾ ರೀತಿಯ ರೋಗಗಳನ್ನು ಗುಣಪಡಿಸುವ ಅಧಿಕಾರವನ್ನು ಕೊಟ್ಟನು [೧೦:೧].
ಯೇಸುವನ್ನು ಹಿಡಿದುಕೊಡುವ ಶಿಷ್ಯನ ಹೆಸರು ಇಸ್ಕರಿಯೋತ ಯೂದ [೧೦:೪].
ಯೇಸು ತನ್ನ ಶಿಷ್ಯರನ್ನು ಕಳೆದುಹೋಗಿರುವ ಇಸ್ರಾಯೇಲ್ಯರ ಬಳಿಗೆ ಕಳುಹಿಸಿದನು [೧೦:೬].
ಇಲ್ಲ, ಶಿಷ್ಯರು ತಮ್ಮೊಂದಿಗೆ ಹಣ ಅಥವಾ ಬಟ್ಟೆಯನ್ನು ತೆಗೆದುಕೊಂಡು ಹೋಗುವಂತಿರಲಿಲ್ಲ [೧೦:೯-೧೦].
ಶಿಷ್ಯರು ಹಳ್ಳಿಯಲ್ಲಿ ಯೋಗ್ಯರಾಗಿರುವವರನ್ನು ಗುರುತಿಸಿ ಹೋಗುವ ತನಕ ಅಲ್ಲಿಯೇ ಉಳಿಯಬೇಕಾಗಿತ್ತು [೧೦:೧೧].
ಶಿಷ್ಯರನ್ನು ಅಂಗೀಕರಿಸಿಕೊಳ್ಳದಿರುವ ಅಥವಾ ಅವರ ಮಾತುಗಳನ್ನು ಕೇಳದಿರುವ ಹಳ್ಳಿಗಳಿಗೆ ಎದುರಾಗುವ ನ್ಯಾಯತೀರ್ಪು ಸೊದೊಮ್ ಗೊಮೊರ ಪಟ್ಟಣಗಳಿಗೆ ಎದುರಾದ ತೀರ್ಪಿಗಿಂತಲೂ ಘೋರವಾಗಿರುತ್ತದೆ [೧೦:೧೪-೧೫].
ಜನರು ಶಿಷ್ಯರನ್ನು ನ್ಯಾಯವಿಚಾರಣೆಯ ಸಭೆಗಳಿಗೆ ಎಳಕೊಂಡು ಹೋಗುವರು, ಕೊರಡೆಗಳಿಂದ ಹೊಡೆಸುವರು ಮತ್ತು ಅಧಿಪತಿಗಳ ಹಾಗೂ ಅರಸುಗಳ ಮುಂದಕ್ಕೂ ಕರೆದುಕೊಂಡು ಹೋಗುವರು ಎಂದು ಯೇಸು ಹೇಳಿದನು [೧೦:೧೭-೧೮].
ಶಿಷ್ಯರನ್ನು ಹೀಗೆ ಒಪ್ಪಿಸುವಾಗ ತಂದೆಯಾದ ದೇವರು ಅವರ ಮೂಲಕ ಮಾತನಾಡುವರು [೧೦:೨೦].
ಕಡೇ ತನಕ ತಾಳಿಕೊಳ್ಳುವವರು ರಕ್ಷಣೆ ಹೊಂದುವರು ಎಂದು ಯೇಸು ಹೇಳಿದ್ದಾನೆ [೧೦:೨೨].
ಯೇಸುವನ್ನು ದ್ವೇಷಿಸುವವರು ಆತನ ಶಿಷ್ಯರನ್ನೂ ದ್ವೇಷಿಸುವರು [೧೦:೨೨, ೨೪-೨೫].
ನಮ್ಮ ಪ್ರಾಣವನ್ನು ಕೊಂದು ಆತ್ಮವನ್ನು ಕೊಲ್ಲಲಾರದವರಿಗೆ ನಾವು ಹೆದರಬಾರದು ಎಂದು ಯೇಸು ಹೇಳಿದ್ದಾನೆ [೧೦:೨೮].
ಪ್ರಾಣ ಮತ್ತು ಆತ್ಮ ಎರಡನ್ನೂ ನಾಶಮಾಡಿ ನರಕಕ್ಕೆ ಹಾಕಲು ಶಕ್ತನಾಗಿರುವಾತನಿಗೆ ನಾವು ಹೆದರಬೇಕು ಎಂದು ಯೇಸು ಹೇಳಿದ್ದಾನೆ [೧೦:೨೮].
ಮನುಷ್ಯರ ಎದುರಿನಲ್ಲಿ ನಾನು ಯೇಸುವಿನವನೆಂದು ಒಪ್ಪಿಕೊಳ್ಳುವವನಿಗೆ ಯೇಸು ಇವನು ನನ್ನವನು ಎಂದು ಪರಲೋಕದ ತಂದೆಯ ಎದುರಿನಲ್ಲಿ ಒಪ್ಪಿಕೊಳ್ಳುವನು [೧೦:೩೨].
ಪರಲೋಕದಲ್ಲಿರುವ ತಂದೆಯ ಎದುರಿನಲ್ಲಿ ಯೇಸು ಅವನನ್ನು ನಿರಾಕರಿಸುವನು [೧೦:೩೩].
ಒಂದೇ ಮನೆಯವರ ನಡುವೆ ವಿಭಜನೆಗಳನ್ನು ತರಲು ನಾನು ಬಂದಿದ್ದೇನೆ ಎಂದು ಯೇಸು ಹೇಳಿದನು [೧೦:೩೪-೩೬].
ಯೇಸುವಿನ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಮತ್ತೆ ಅದನ್ನು ಪಡೆಯುವನು [೧೦:೩೯].
ಪ್ರಾಮುಖ್ಯವಲ್ಲದ ಶಿಷ್ಯನಿಗೆ ಒಂದು ಲೋಟ ತಣ್ಣೀರು ಕೊಡುವವನು ತನಗೆ ಬರಬೇಕಾದ ಬಹುಮಾನವನ್ನು ಪಡೆಯುವನು [೧೦:೪೨].