Matthew 9

Matthew 9:3

ಯೇಸು ಪಾರ್ಶ್ವವಾಯು ರೋಗಿಗೆ ನಿನ್ನ ಹಾಸಿಗೆಯನ್ನು ಹೊತ್ತುಕೊಂಡು ಹೋಗು ಎಂದು ಹೇಳುವ ಬದಲು ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಎಂದು ಹೇಳಿದ್ದು ಯಾಕೆ?

ಯೇಸು ಪಾರ್ಶ್ವವಾಯು ರೋಗಿಗೆ ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಎಂದು ಹೇಳಿದ್ದು ತನಗೆ ಭೂಲೋಕದಲ್ಲಿ ಪಾಪವನ್ನು ಕ್ಷಮಿಸುವ ಅಧಿಕಾರವಿದೆ ಎಂಬುದನ್ನು ತೋರಿಸುವದಕ್ಕಾಗಿಯಾಗಿದೆ [೯:೫-೬].

Matthew 9:7

ಪಾರ್ಶ್ವವಾಯು ರೋಗಿಯು ಪಾಪಗಳು ಕ್ಷಮಿಸಲ್ಪಟ್ಟು ಅವನ ದೇಹವು ಗುಣವಾಗಿರುವದನ್ನು ನೋಡಿದ ಜನರು ದೇವರನ್ನು ಯಾಕೆ ಸ್ತುತಿಸಿದರು?

ದೇವರು ಮನುಷ್ಯರಿಗೆ ಇಂತಹ ಅಧಿಕಾರವನ್ನು ಕೊಟ್ಟಿರುವದಕ್ಕಾಗಿ ಅವರು ದೇವರನ್ನು ಅತ್ಯುತ್ಸಾಹದಿಂದ ಸ್ತುತಿಸಿ ಕೊಂಡಾಡಿದರು [೯:೮].

ಮತ್ತಾಯನು ಯೇಸುವನ್ನು ಹಿಂಬಾಲಿಸುವ ಮೊದಲು ಯಾವ ಕೆಲಸ ಮಾಡುತ್ತಿದ್ದನು?

ಮತ್ತಾಯನು ಯೇಸುವನ್ನು ಹಿಂಬಾಲಿಸುವ ಮೊದಲು ಸುಂಕ ವಸೂಲಿ ಮಾಡುತ್ತಿದ್ದನು [೯:೯].

Matthew 9:10

ಯೇಸು ಮತ್ತು ಆತನ ಶಿಷ್ಯರು ಯಾರೊಂದಿಗೆ ಊಟ ಮಾಡುತ್ತಿದ್ದರು?

ಯೇಸು ಮತ್ತು ಆತನ ಶಿಷ್ಯರು ಸುಂಕದವರು ಮತ್ತು ಪಾಪಿಗಳೊಂದಿಗೆ ಊಟಮಾಡುತ್ತಿದ್ದರು [೯:೧೦].

Matthew 9:12

ತಾನು ಯಾರನ್ನು ಪಶ್ಚಾತ್ತಾಪದ ಕಡೆಗೆ ಕರೆಯಲು ಬಂದಿರುವದಾಗಿ ಯೇಸು ಹೇಳಿದನು?

ಯೇಸು ಎಲ್ಲಾ ಪಾಪಿಗಳನ್ನು ಪಶ್ಚಾತ್ತಾಪದ ಕಡೆಗೆ ಕರೆಯಲು ಬಂದಿರುವದಾಗಿ ಹೇಳಿದನು [೯:೧೩].

Matthew 9:14

ತನ್ನ ಶಿಷ್ಯರು ಉಪವಾಸ ಮಾಡುತ್ತಿಲ್ಲ ಎಂದು ಯೇಸು ಯಾಕೆ ಹೇಳಿದನು?

ಯೇಸು ತನ್ನ ಶಿಷ್ಯರು ಉಪವಾಸ ಮಾಡುತ್ತಿಲ್ಲ ಎಂದು ಹೇಳಿದನು ಯಾಕೆಂದರೆ ಆತನಿನ್ನೂ ಅವರ ಜೊತೆಯಲ್ಲಿ ಇದ್ದನು [೯:೧೫].

ತನ್ನ ಶಿಷ್ಯರು ಯಾವಾಗ ಉಪವಾಸ ಮಾಡುವರು ಎಂದು ಯೇಸು ಹೇಳಿದನು?

ನಾನು ಇವರ ಬಳಿಯಿಂದ ಹೊರಟುಹೋಗುವಾಗ ಇವರು ಉಪವಾಸ ಮಾಡುವರು ಎಂದು ಯೇಸು ಹೇಳಿದನು [೯:೧೫].

Matthew 9:20

ಅಧಿಕ ರಕ್ತಸ್ರಾವವಿರುವ ಸ್ತ್ರೀ ಏನು ಮಾಡಿದಳು ಮತ್ತು ಯಾಕೆ?

ಅಧಿಕ ರಕ್ತಸ್ರಾವವಿರುವ ಸ್ತ್ರೀ ಯೇಸುವಿನ ಉಡುಪಿನ ಗೊಂಡೆಯನ್ನು ಮುಟ್ಟಿದರೆ ನನಗೆ ಸ್ವಸ್ಥವಾಗುವದು ಎಂದು ನೆನೆಸಿ ಅದನ್ನು ಮುಟ್ಟಿದಳು [೯:೨೦-೨೧].

ರಕ್ತಕುಸುಮ ರೋಗದಿಂದ ಬಳಲುತ್ತಿರುವ ಸ್ತ್ರೀಯನ್ನು ಗುಣಪಡಿಸಿದ್ದು ಏನು ಎಂಬದಾಗಿ ಯೇಸು ಹೇಳಿದನು?

ರಕ್ತಕುಸುಮ ರೋಗಿಯನ್ನು ಆಕೆಯ ನಂಬಿಕೆಯೇ ಗುಣಪಡಿಸಿತು ಎಂದು ಯೇಸು ಹೇಳಿದನು [೯:೨೨].

Matthew 9:23

ಯೇಸು ಯೆಹೂದ್ಯ ಅಧಿಕಾರಿಯ ಮನೆಯೊಳಗೆ ಹೋದಾಗ, ಜನರು ಯಾಕೆ ಆತನನ್ನು ನೋಡಿ ನಕ್ಕರು?

ಹುಡುಗಿಯು ಸತ್ತಿಲ್ಲ ನಿದ್ದೆ ಮಾಡುತ್ತಿದ್ದಾಳೆ ಎಂದು ಯೇಸು ಹೇಳಿದ್ದರಿಂದ ಜನರು ನಕ್ಕರು [೯:೨೪].

Matthew 9:25

ಯೇಸು ಸತ್ತ ಹುಡುಗಿಯನ್ನು ಎಬ್ಬಿಸಿದ ನಂತರ ಏನಾಯಿತು?

ಯೇಸು ಸತ್ತ ಹುಡುಗಿಯನ್ನು ಎಬ್ಬಿಸಿದ ಸುದ್ದಿಯು ಆ ದೇಶದೊಳಗೆಲ್ಲಾ ಹಬ್ಬಿತು [೯:೨೬].

Matthew 9:27

ಇಬ್ಬರು ಕುರುಡರು ಏನೆಂದು ಕೂಗುತ್ತಾ ಯೇಸುವಿನ ಹಿಂದೆ ಹೋದರು?

"ದಾವೀದ ಕುಮಾರನೇ, ನಮ್ಮನ್ನು ಕರುಣಿಸು" ಎಂದು ಕೂಗುತ್ತಾ ಹೋದರು [೯:೨೭].

Matthew 9:29

ಯೇಸು ಇಬ್ಬರು ಕುರುಡರನ್ನು ಯಾವುದರ ಆಧಾರದ ಮೇರೆಗೆ ಗುಣಪಡಿಸಿದನು?

ಯೇಸು ಇಬ್ಬರು ಕುರುಡರನ್ನು ಅವರ ನಂಬಿಕೆಯ ಮೇರೆಗೆ ಗುಣಪಡಿಸಿದನು [೯:೨೯].

Matthew 9:32

ಯೇಸು ಮೂಕನನ್ನು ಗುಣಪಡಿಸಿದ ನಂತರ ಫರಿಸಾಯರು ಆತನಿಗೆ ವಿರುದ್ಧವಾಗಿ ಯಾವ ಆರೋಪವನ್ನು ಮಾಡಿದರು

ಯೇಸು ದುರಾತ್ಮಗಳ ಒಡೆಯನ ಸಹಾಯದಿಂದಲೇ ದುರಾತ್ಮನನ್ನು ಓಡಿಸುತ್ತಾನೆ ಎಂದು ಫರಿಸಾಯರು ಹೇಳಿದರು [೯:೩೪].

Matthew 9:35

ಯೇಸು ಜನರ ಗುಂಪನ್ನು ನೋಡಿ ಯಾಕೆ ಕನಿಕರಪಟ್ಟನು?

ಯೇಸು ಜನರ ಗುಂಪನ್ನು ನೋಡಿ ಕನಿಕರಪಟ್ಟನು ಯಾಕೆಂದರೆ ಅವರು ಚಿಂತೆಯಲ್ಲಿಯೂ ಮತ್ತು ಗೊಂದಲದಲ್ಲಿಯೂ ಇದ್ದರು ಮತ್ತು ಕುರುಬನಿಲ್ಲದ ಕುರಿಗಳ ಹಾಗೆ ತೊಳಲುತ್ತಿದ್ದರು [೯:೩೬].

Matthew 9:37

ಯೇಸು ಯಾವ ಕಾರಣಕ್ಕಾಗಿ ತನ್ನ ಶಿಷ್ಯರಿಗೆ ತಕ್ಷಣ ಪ್ರಾರ್ಥಿಸುವಂತೆ ಹೇಳಿದನು?

ಬೆಳೆಯ ಯಜಮಾನನನ್ನು ನಿನ್ನ ಬೆಳೆಗೆ ಕೆಲಸದವರನ್ನು ಕಳುಹಿಸು ಎಂದು ತಕ್ಷಣ ಬೇಡಿಕೊಳ್ಳಿರಿ ಎಂದು ಯೇಸು ಹೇಳಿದನು [೯:೩೮].