ಯೇಸು ಕ್ರಿಸ್ತನು ಗುಣಹೊಂದಿದ ಕುಷ್ಠರೋಗಿಯನ್ನು ಸಾಕ್ಷಿಗಾಗಿ ಯಾಜಕನ ಬಳಿಗೆ ಕಳುಹಿಸಿದನು [೮:೪].
ಯೇಸು ಹೇಳಿದ್ದೇನೆಂದರೆ, ನಾನು ನಿನ್ನ ಮನೆಗೆ ಬಂದು ನಿನ್ನ ಸೇವಕನನ್ನು ಗುಣಪಡಿಸುತ್ತೇನೆ [೮:೭].
ಶತಾಧಿಪತಿಯು ಯೇಸುವನ್ನು ನನ್ನ ಮನೆಗೆ ಕರೆದುಕೊಳ್ಳುವಷ್ಟು ಯೋಗ್ಯತೆ ನನಗಿಲ್ಲ ಮತ್ತು ಆತನು ಒಂದು ಮಾತು ಹೇಳಿದರೆ ಸಾಕು ನನ್ನ ಸೇವಕನು ಗುಣವಾಗುವನು ಎಂದು ಹೇಳಿದನು [೮:೮].
ಶತಾಧಿಪತಿಗಿರುವಷ್ಟು ನಂಬಿಕೆಯನ್ನು ನಾನು ಇಸ್ರಾಯೇಲ್ಯರಲ್ಲಿಯೂ ನೋಡಿಲ್ಲ ಎಂಬದಾಗಿ ಯೇಸು ಹೇಳಿದನು [೮:೧೦].
ಪೂರ್ವದಿಂದ ಮತ್ತು ಪಶ್ಚಿಮದಿಂದ ಅನೇಕರು ಬರುವರು ಹಾಗೂ ಪರಲೋಕ ರಾಜ್ಯದಲ್ಲಿರುವ ಮೇಜಿನ ಮೇಲೆ ಕುಳಿತುಕೊಳ್ಳುವರು ಎಂದು ಯೇಸು ಹೇಳಿದನು [೮:೧೧].
ಆ ರಾಜ್ಯದ ಬಾಧ್ಯಸ್ಥರು ಹೊರಗೆ ಕತ್ತಲೆಗೆ ಹಾಕಲ್ಪಡುವರು ಎಂದು ಯೇಸು ಹೇಳಿದನು [೮:೧೨].
ಯೇಸು ಪೇತ್ರನ ಮನೆಗೆ ಬಂದಾಗ ಪೇತ್ರನ ಅತ್ತೆಯನ್ನು ಗುಣಪಡಿಸಿದನು [೮:೧೪-೧೫]. '
ಯೆಶಾಯನ ಪ್ರವಾದನೆಯ, "ಆತನು ನಮ್ಮ ಬೇನೆಗಳನ್ನು ತೆಗೆದುಕೊಂಡನು, ನಮ್ಮ ರೋಗಗಳನ್ನು ಹೊತ್ತುಕೊಂಡನು" ಎಂಬುದು ನೆರವೇರಿತು [೮:೧೭].
ಯೇಸು ತನಗೆ ಶಾಶ್ವತವಾದ ಯಾವ ಮನೆಯೂ ಇಲ್ಲ ಎಂದು ಹೇಳಿದನು [೮:೨೦].
ಯೇಸು ಅವನಿಗೆ ನನ್ನನ್ನು ಹಿಂಬಾಲಿಸು ಮತ್ತು ಸತ್ತವರು ತಾವೇ ತಮ್ಮಲ್ಲಿ ಸತ್ತವರನ್ನು ಸಮಾಧಿಮಾಡಲಿ ಎಂದು ಹೇಳಿದನು [೮:೨೧-೨೨].
ಸಮುದ್ರದಲ್ಲಿ ದೊಡ್ಡ ಬಿರುಗಾಳಿ ಕಾಣಿಸಿಕೊಂಡಾಗ ಯೇಸು ದೋಣಿಯಲ್ಲಿ ನಿದ್ದೆ ಮಾಡುತ್ತಿದ್ದನು [೮:೨೪].
ಯೇಸು ಶಿಷ್ಯರಿಗೆ ಹೇಳಿದ್ದೇನೆಂದರೆ, "ಅಲ್ಪವಿಶ್ವಾಸಿಗಳೇ ಯಾಕೆ ಭಯಪಡುತ್ತೀರಿ" [೮:೨೬]?
ಯಾಕೆಂದರೆ ಗಾಳಿ ಮತ್ತು ಸಮುದ್ರವು ಆತನ ಮಾತುಗಳಿಗೆ ವಿಧೇಯವಾದವು [೮:೨೭].
ಯೇಸು ಅತ್ಯಂತ ಕ್ರೂರಿಗಳಾಗಿದ್ದ ಇಬ್ಬರು ದುರಾತ್ಮಪೀಡಿತರನ್ನು ಸಂಧಿಸಿದನು [೮:೨೮].
ಕಾಲವು ಬರುವ ಮೊದಲೇ ಯೇಸು ಅವರನ್ನು ಹೊರಡಿಸಲು ಬಂದಿದ್ದಾನೆ ಎಂಬ ವಿಷಯವಾಗಿ ಮಾತನಾಡುತ್ತಿದ್ದವು [೮:೨೯].
ಯೇಸು ದುರಾತ್ಮಗಳನ್ನು ಓಡಿಸಿದಾಗ, ಅವುಗಳು ಹಂದಿಗಳ ಹಿಂಡಿನೊಳಗೆ ಸೇರಿಕೊಂಡವು ಮತ್ತು ಹಂದಿಗಳು ಓಡಿ ನದಿಯಲ್ಲಿ ಬಿದ್ದು ಸತ್ತುಹೋದವು [೮:೩೨].
ತಮ್ಮ ಊರನ್ನು ಬಿಟ್ಟು ಹೋಗುವಂತೆ ಜನರು ಯೇಸುವನ್ನು ಬೇಡಿಕೊಂಡರು [೮:೩೪].