ಮೊದಲು ನಮ್ಮನ್ನು ನಾವು ವಿಚಾರಿಸಿಕೊಳ್ಳಬೇಕು ಮತ್ತು ನಮ್ಮ ಕಣ್ಣಿನಲ್ಲಿರುವ ತೊಲೆಯನ್ನು ತೆಗೆದುಕೊಳ್ಳಬೇಕು ಅನಂತರವೇ ನಮ್ಮ ಸಹೋದರನಿಗೆ ಸಹಾಯ ಮಾಡಲು ಹೋಗಬೇಕು [೭:೧-೫].
ನೀವು ಪರಿಶುದ್ಧವಾಗಿರುವದನ್ನು ಹಂದಿಗಳಿಗೆ ಕೊಟ್ಟರೆ, ಅವು ಅದನ್ನು ತುಳಿಯುತ್ತವೆ ಮತ್ತು ಹಿಂದಿರುಗಿ ಬಂದು ನಿಮ್ಮನ್ನು ಚೂರು ಮಾಡುತ್ತವೆ [೭:೬].
ನಾವು ಬೇಡಿಕೊಳ್ಳಬೇಕು, ಹುಡುಕಬೇಕು ಮತ್ತು ತಟ್ಟಬೇಕು ಆಗ ಮಾತ್ರವೇ ತಂದೆಯಿಂದ ಹೊಂದಿಕೊಳ್ಳಲು ಸಾಧ್ಯ [೭:೮].
ತನ್ನನ್ನು ಬೇಡಿಕೊಳ್ಳುವವರಿಗೆ ತಂದೆಯು ಒಳ್ಳೆಯವುಗಳನ್ನು ಕೊಡುತ್ತಾನೆ [೭:೧೧].
ಇತರರು ನಮಗೆ ಏನು ಮಾಡಬೇಕೆಂದು ನಾವು ಬಯಸುತ್ತೇವೋ ಅದನ್ನು ನಾವು ಮೊದಲು ಅವರಿಗೆ ಮಾಡಬೇಕೆಂದು ಧರ್ಮಶಾಸ್ತ್ರ ಮತ್ತು ಪ್ರವಾದನೆಗಳು ನಮಗೆ ಕಲಿಸುತ್ತವೆ [೭:೧೨].
ಅಗಲವಾದ ಮಾರ್ಗವು ನಮ್ಮನ್ನು ನಾಶನಕ್ಕೆ ನಡೆಸುತ್ತದೆ [೭:೧೩].
ಇಕ್ಕಟ್ಟಾದ ಮಾರ್ಗವು ನಮ್ಮನ್ನು ಜೀವದ ಕಡೆಗೆ ನಡೆಸುತ್ತದೆ [೭:೧೪].
ನಾವು ಸುಳ್ಳು ಪ್ರವಾದಿಗಳನ್ನು ಅವರ ಜೀವಿತದಲ್ಲಿರುವ ಫಲಗಳಿಂದ ಗುರುತಿಸಬಹುದು [೭:೧೫-೨೦].
ತಂದೆಯ ಚಿತ್ತದಂತೆ ನಡೆದುಕೊಳ್ಳುವವರು ಪರಲೋಕ ರಾಜ್ಯದೊಳಗೆ ಪ್ರವೇಶಿಸುತ್ತಾರೆ [೭:೨೧].
ಯೇಸು ಅವರಿಗೆ, "ನನಗೆ ನೀವು ಯಾರು ಎಂದು ಗೊತ್ತಿಲ್ಲ! ದುಷ್ಟರೇ ನನ್ನಿಂದ ತೊಲಗಿರಿ" [೭:೨೨-೨೩]!
ಯೇಸುವಿನ ಮಾತುಗಳನ್ನು ಕೇಳಿ ಅದರಂತೆ ನಡೆಯುವವನು ಬುದ್ದಿವಂತನಾಗಿದ್ದಾನೆ [೭:೨೪].
ಯೇಸುವಿನ ಮಾತುಗಳನ್ನು ಕೇಳಿ ಅದರಂತೆ ನಡೆದುಕೊಳ್ಳದವನು ಮೂರ್ಖನಾಗಿದ್ದಾನೆ [೭:೨೬].
ಯೇಸು ಶಾಸ್ತ್ರಿಗಳತೆಯಲ್ಲ ಬದಲಾಗಿ ಅಧಿಕಾರವಿದ್ದವನಂತೆ ಜನರಿಗೆ ಕಲಿಸುತ್ತಿದ್ದನು [೭:೨೯].