ನಾವು ನಮ್ಮ ನೀತಿಯ ಕಾರ್ಯಗಳನ್ನು ಯಾರಿಗೂ ಗೊತ್ತಾಗದಂತೆ ಮಾಡಬೇಕು [೬:೧-೪].
ಏಕಾಂತವಾಗಿ ಪ್ರಾರ್ಥನೆ ಮಾಡುವವರು ತಂದೆಯಿಂದ ಬಹುಮಾನವನ್ನು ಪಡೆಯುತ್ತಾರೆ [೬:೬].
ನಾವು ಮತ್ತೆಮತ್ತೆ ಪ್ರಯೋಜನವಿಲ್ಲದ ಮಾತುಗಳಿಂದ ಪ್ರಾರ್ಥನೆ ಮಾಡಬಾರದು ಯಾಕೆಂದರೆ ನಾವು ಬೇಡಿಕೊಳ್ಳುವ ತಂದೆಗೆ ನಮಗೇನು ಬೇಕು ಎಂಬುದು ಗೊತ್ತಿದೆ ಎಂದು ಯೇಸು ಹೇಳಿದ್ದಾನೆ [6:7].
ಆತನ ಚಿತ್ತವು ಪರಲೋಕದಲ್ಲಿ ನೆರವೇರುವಂತೆ ಭೂಲೋಕದಲ್ಲಿಯೂ ನೆರವೇರುವಂತೆ ನಾವು ತಂದೆಯನ್ನು ಬೇಡಿಕೊಳ್ಳಬೇಕು [6:8].
ಒಂದುವೇಳೆ ನಾವು ಇತರರ ತಪ್ಪುಗಳನ್ನು ಕ್ಷಮಿಸದೆ ಹೋದರೆ ತಂದೆಯು ನಮ್ಮ ತಪ್ಪುಗಳನ್ನೂ ಕ್ಷಮಿಸುವದಿಲ್ಲ [೬:೧೫].
ಜನರಿಗೆ ಉಪವಾಸವೆಂದು ಗೊತ್ತಾಗದ ರೀತಿಯಲ್ಲಿ ನಾವು ಉಪವಾಸ ಮಾಡಬೇಕು [೬:೧೬-೧೮].
ನಾವು ಪರಲೋಕದಲ್ಲಿ ನಮ್ಮ ಗಂಟು ಮಾಡಿಟ್ಟುಕೊಳ್ಳಬೇಕು ಯಾಕೆಂದರೆ ಅಲ್ಲಿ ಅದನ್ನು ಕದ್ದುಕೊಳ್ಳಲು ಯಾರಿಗೂ ಆಗುವದಿಲ್ಲ [೬:೧೯-೨೦].
ನಮ್ಮ ಗಂಟು ಇದ್ದಲ್ಲಿಯೇ ನಮ್ಮ ಮನಸ್ಸೂ ಇರುವುದು [೬:೨1].
ದೇವರು ಮತ್ತು ಐಶ್ವರ್ಯದ ನಡುವೆ ಯಾವುದಾದರು ಒಂದನ್ನು ನಾವು ನಮ್ಮ ಯಜಮಾನನಾಗಿ ಆಯ್ಕೆ ಮಾಡಿಕೊಳ್ಳಬೇಕು [೬:೨೪].
ಯಾಕೆಂದರೆ ಪಕ್ಷಿಗಳನ್ನು ಸಹ ಪೋಷಿಸುವ ದೇವರಿಗೆ ನಾವು ಎಷ್ಟೋ ಹೆಚ್ಚಿನವರಾಗಿದ್ದೇವೆ [೬:೨೫-೨೬].
ನಾವು ಚಿಂತೆ ಮಾಡುವದರಿಂದ ಒಂದು ಮೊಳ ಉದ್ದ ಬೆಳೆಯಲು ಮತ್ತು ಜೀವಿತವನ್ನು ವಿಸ್ತರಿಸಿಕೊಳ್ಳಲು ಆಗುವದಿಲ್ಲ ಎಂದು ಯೇಸು ಹೇಳಿದ್ದಾನೆ [೬:೨೭].
ನಾವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಬೇಕು ಮತ್ತು ನಮ್ಮ ಅವಶ್ಯಕತೆಗಳೆಲ್ಲವೂ ಆಗ ಪೂರೈಕೆಯಾಗುತ್ತವೆ [೬:೩೩].