ಆತ್ಮದಲ್ಲಿ ಬಡವರಾಗಿರುವವರು ಧನ್ಯರು ಯಾಕೆಂದರೆ ಪರಲೋಕ ರಾಜ್ಯವು ಅವರದ್ದಾಗಿದೆ [೫:೩].
ಯಾಕೆಂದರೆ ಅವರು ಸಮಾಧಾನ ಹೊಂದುವರು [೫:೪].
ಯಾಕೆಂದರೆ ಅವರು ಭೂಮಿಗೆ ಬಾಧ್ಯರಾಗುವರು [೫:೫].
ಯಾಕೆಂದರೆ ಅವರಿಗೆ ತೃಪ್ತಿಯಾಗುವದು [೫:೬].
ಯಾಕೆಂದರೆ ಪರಲೋಕದಲ್ಲಿ ಅವರಿಗೆ ಹೆಚ್ಚಿನ ಬಹುಮಾನವು ಸಿಗುವದು [೫:೧೧-೧೨].
ವಿಶ್ವಾಸಿಗಳು ಒಳ್ಳೆಯ ಕಾರ್ಯಗಳನ್ನು ಮಾಡುವದರಿಂದ ತಮ್ಮ ಬೆಳಕು ಜನರ ಎದುರಿನಲ್ಲಿ ಮಿನುಗುವಂತೆ ಮಾಡಬಹುದು [೫:೧೫-೧೬].
ಯೇಸು ಕ್ರಿಸ್ತನು ಧರ್ಮಶಾಸ್ತ್ರ ಮತ್ತು ಹಳೆಯ ಒಡಂಬಡಿಕೆಯ ಪ್ರವಾದಿಗಳ ನುಡಿಗಳನ್ನು ನೆರವೇರಿಸಲು ಬಂದನು [೫:೧೭].
ದೇವರ ಆಜ್ಞೆಗಳನ್ನು ಕೈಕೊಂಡು ನಡೆಯುವವರು ಮತ್ತು ಅದನ್ನು ಇತರರಿಗೆ ಬೋಧಿಸುವವರು ಪರಲೋಕ ರಾಜ್ಯದಲ್ಲಿ ದೊಡ್ಡವರಾಗಿರುವರು [೫:೧೯].
ಕೊಲೆಗಾರರು ಮಾತ್ರವಲ್ಲ ಬದಲಾಗಿ ತಮ್ಮ ಸಹೋದರನ ಮೇಲೆ ಕೋಪಿಸಿಕೊಳ್ಳುವವರು ಸಹ ನ್ಯಾಯತೀರ್ಪಿಗೆ ಗುರಿಯಾಗುವರು ಎಂದು ಬೋಧಿಸಿದನು [೫:೨೧-೨೨].
ಒಂದುವೇಳೆ ನಮ್ಮ ಸಹೋದರನಿಗೆ ನಮಗೆ ವಿರುದ್ಧವಾಗಿ ಏನಾದರೂ ವಿಷಯವಿದ್ದರೆ ನಾವು ಅತನ ಬಳಿಗೆ ಹೋಗಬೇಕು ಮತ್ತು ಸಂಧಾನ ಮಾಡಿಕೊಳ್ಳಬೇಕು [೫:೨೩-೨೪].
ನಮ್ಮ ಮೇಲೆ ಆರೋಪ ಮಾಡುವವನು ನ್ಯಾಯಾಲಯಕ್ಕೆ ಹೋಗುವ ಮೊದಲು ಆತನೊಂದಿಗೆ ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸಬೇಕು [೫:೨೫].
ವ್ಯಬಿಚಾರ ಮಾಡುವುದು ಮತ್ತು ಮನಸ್ಸಿನಲ್ಲಿಯೇ ಮೋಹಿಸುವುದು ಅಪರಾಧ ಎಂದು ಯೇಸು ಹೇಳಿದ್ದಾನೆ [೫:೨೭-೨೮].
ನಮ್ಮನ್ನು ಪಾಪಕ್ಕೆ ನಡೆಸುವ ಕಾರ್ಯಗಳಿಂದ ನಾವು ದೂರ ಇರಬೇಕೆಂದು ಯೇಸು ಹೇಳಿದ್ದಾನೆ [೫:೨೯-೩೦].
ಹಾದರದ ಸಮಯದಲ್ಲಿ ಮಾತ್ರವೇ ವಿಚ್ಛೇದನವನ್ನು ಯೇಸು ಅನುಮತಿಸಿದ್ದಾನೆ [೫:೩೨].
ಒಬ್ಬನು ತನ್ನ ಹೆಂಡತಿಗೆ ತಪ್ಪಾಗಿ ವಿಚ್ಛೇದನ ಕೊಟ್ಟು ಆಕೆಯು ಮತ್ತೊಬ್ಬನನ್ನು ಮದುವೆ ಮಾಡಿಕೊಂಡರೆ ಆಕೆಯು ವ್ಯಭಿಚಾರ ಮಾಡಿದಂತಾಗುತ್ತದೆ [೫:೩೨].
ಇವುಗಳ ಮೇಲೆ ನಾವು ಆಣೆಯಿಡುವವರಾಗಿರದೆ ನಮ್ಮ ಮಾತು "ಹೌದೆಂದರೆ, ಹೌದು" ಅಥವಾ "ಇಲ್ಲವೆಂದರೆ ಇಲ್ಲ" ಎಂಬದಾಗಿರಬೇಕು ಎಂದು ಯೇಸು ಹೇಳಿದ್ದಾನೆ [೫:೩೩-೩೭].
ನಮ್ಮ ವಿರೋಧಿಸುವವರನ್ನು ನಾವು ಎದುರಿಸಬಾರದೆಂದು ಯೇಸು ಹೇಳಿದ್ದಾನೆ [೫:೩೮-೩೯].
ನಾವು ನಮ್ಮ ವೈರಿಗಳನ್ನು ಮತ್ತು ನಮ್ಮನ್ನು ಹಿಂಸೆಪಡಿಸುವವರನ್ನು ಪ್ರೀತಿಸಬೇಕು ಮತ್ತು ಅವರಿಗಾಗಿ ಪ್ರಾರ್ಥಿಸಬೇಕು ಎಂದು ಕಲಿಸಿದ್ದಾನೆ [೫:೪೩-೪೪].
ನಮ್ಮನ್ನು ಪ್ರೀತಿಸುವವರನ್ನು ಮಾತ್ರವೇ ಪ್ರೀತಿಸಿದರೆ ನಮಗೆ ಯಾವುದೇ ಬಹುಮಾನ ಸಿಗುವದಿಲ್ಲ ಯಾಕೆಂದರೆ ಅನ್ಯರು ಈಗಾಗಲೇ ಮಾಡುತ್ತಿರುವ ಕೆಲಸವನ್ನೇ ನಾವು ಮಾಡುವವರಾಗಿದ್ದೇವೆ [೫:೪೬-೪೭].