ಸೈತಾನನಿಂದ ಪೇರೇಪಿಸಲ್ಪಡುವದಕ್ಕಾಗಿ ಸೈತಾನನು ಯೇಸುವನ್ನು ಅರಣ್ಯಕ್ಕೆ ಮುನ್ನಡೆಸಿದನು [೪:೧].
ಯೇಸು ಅಡವಿಯಲ್ಲಿ ನಲವತ್ತು ದಿನ ಉಪವಾಸ ಮಾಡಿದನು [೪:೨].
ಸೈತಾನನು ಯೇಸುವಿಗೆ ಕಲ್ಲುಗಳನ್ನು ರೊಟ್ಟಿಯಾಗಿ ಮಾಡುವಂತೆ ಹೇಳಿದನು [೪:೩].
ಮನುಷ್ಯನು ರೊಟ್ಟಿ ತಿಂದ ಮಾತ್ರದಿಂದ ಬದುಕುವುದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು [೪:೪].
ಸೈತಾನನು ಯೇಸುವಿಗೆ ದೇವಾಲಯದ ಮೇಲಿಂದ ದುಮುಕುವಂತೆ ಹೇಳಿದನು [೪:೫-೬].
ನಿಮ್ಮ ದೇವರನ್ನು ಪರೀಕ್ಷಿಸಬಾರದು ಎಂದು ಯೇಸು ಹೇಳಿದನು [೪:೭].
ಸೈತಾನನು ಯೇಸುವಿಗೆ ನನ್ನನ್ನು ಆರಾಧಿಸಿದರೆ ನಾನು ನಿನಗೆ ಲೋಕದ ಎಲ್ಲಾ ರಾಜ್ಯಗಳನ್ನು ಕೊಡುವೆನು ಎಂಬುದಾಗಿ ಹೇಳಿದನು [೪:೮-೯].
ಯೇಸು ಕ್ರಿಸ್ತನು ನೀನು ನಿನ್ನ ದೇವರಾದ ಕರ್ತನನ್ನು ಆರಾಧಿಸಬೇಕು ಮತ್ತು ಆತನ ಸೇವೆ ಮಾಡಬೇಕು ಎಂಬುದಾಗಿ ಹೇಳಿದನು [೪:೧೦].
ಗಲಿಲಾಯದಲ್ಲಿರುವ ಜನರು ದೊಡ್ಡ ಬೆಳಕನ್ನು ನೋಡುವರು ಎಂಬದಾಗಿ ಯೆಶಾಯನು ಹೇಳಿದ ಪ್ರವಾದನೆಯು ನೆರವೇರಿತು [೪:೧೫-೧೬].
"ಪರಲೋಕ ರಾಜ್ಯವು ಸಮೀಪಿಸಿತು; ದೇವರ ಕಡೆಗೆ ತಿರುಗಿಕೊಳ್ಳಿರಿ" ಎಂಬುವುದಾಗಿ ಯೇಸು ಬೋಧಿಸುತ್ತಿದ್ದನು [೪:೧೭].
ನಿಮ್ಮನ್ನು ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ಮಾಡುವೆನು ಎಂಬುದಾಗಿ ಹೇಳಿದನು [೪:೧೯].
ಪೇತ್ರ, ಆಂದ್ರೇಯ, ಯಾಕೋಬ ಮತ್ತು ಯೋಹಾನ ಇವರೆಲ್ಲರೂ ತಮ್ಮ ಜೀವನೋಪಾಯಕ್ಕಾಗಿ ಮೀನು ಹಿಡಿಯುತ್ತಿದ್ದರು [೪:೧೮, ೨೧].
ಯೇಸು ಗಲಿಲಾಯದ ಸಭಾಮಂದಿರಗಳಲ್ಲಿ ಕಲಿಸುತ್ತಿದ್ದನು [೪:೨೩].
ಅನಾರೋಗ್ಯದಲ್ಲಿರುವವರು ಮತ್ತು ದುರಾತ್ಮಪೀಡಿತರನ್ನು ಆತನ ಬಳಿಗೆ ಕರೆತರುತ್ತಿದ್ದರು ಮತ್ತು ಆತನು ಅವರಲ್ಲರನ್ನು ಗುಣಪಡಿಸಿದನು [೪:೨೪].
ಜನರು ಗುಂಪುಗುಂಪಾಗಿ ಆತನನ್ನು ಹಿಂಬಾಲಿಸುತ್ತಿದ್ದರು [೪:೨೫].