ಯೋಹಾನನು ಬೋಧಿಸಿದ್ದೇನೆಂದರೆ, "ದೇವರ ಕಡೆಗೆ ತಿರುಗಿಕೊಳ್ಳಿರಿ, ದೇವರ ರಾಜ್ಯವು ಸಮೀಪಿಸಿತು" [೩:೨].
ಪ್ರವಾದನೆಯು ಹೇಳುವದೇನೆಂದರೆ ಸ್ನಾನಿಕನಾದ ಯೋಹಾನನು ಕರ್ತನ ಮಾರ್ಗವನ್ನು ಸಿದ್ಧಮಾಡುವನು [೩:೩].
ದೇವರ ಕಡೆಗೆ ತಿರುಗಿಕೊಂಡಿರುವಿರೆಂಬದನ್ನು ತಕ್ಕ ಫಲಗಳಿಂದ ತೋರಿಸಿರಿ ಎಂದು ಫರಿಸಾಯರಿಗೆ ಮತ್ತು ಸದ್ದುಕಾಯರಿಗೆ ಹೇಳಿದನು [೩:೮].
ಸ್ನಾನಿಕನಾದ ಯೋಹಾನನು ಅವರಿಗೆ ಅಬ್ರಹಾಮನು ನಮ್ಮ ಮೂಲಪಿತೃ ಎಂಬದಾಗಿ ಆಲೋಚಿಸಬೇಡಿರಿ ಎಂಬದಾಗಿ ಹೇಳಿದನು [೩:೯].
ಒಳ್ಳೆಯ ಫಲವನ್ನು ಕೊಡದಿರುವ ಮರವನ್ನು ಕಡಿದು ಬೆಂಕಿಯಲ್ಲಿ ಹಾಕಲಾಗುವದು [೩:೧೦].
ಸ್ನಾನಿಕನಾದ ಯೋಹಾನನ ನಂತರ ಬರುವವನು ಪವಿತ್ರಾತ್ಮನಲ್ಲಿಯೂ ಮತ್ತು ಬೆಂಕಿಯಲ್ಲಿಯೂ ದೀಕ್ಷಾಸ್ನಾನ ಮಾಡಿಸುವನು [೩:೧೧].
ಎಲ್ಲಾ ಧರ್ಮವನ್ನು ನೆರವೇರಿಸುವುದು ಅವಶ್ಯಕವಾಗಿದೆ ಎಂಬುದಾಗಿ ಯೇಸು ಹೇಳಿದ ಮಾತು ದೀಕ್ಷಾಸ್ನಾನ ಕೊಡುವಂತೆ ಅವನ ಮನವೊಲಿಸಿತು [೩:೧೫].
ಆತನು ನೀರಿನಿಂದ ಮೇಲಕ್ಕೆ ಬರುವಾಗ, ದೇವರ ಆತ್ಮನು ಪಾರಿವಾಳದ ಹಾಗೆ ಆತನ ಮೇಲೆ ಬರುವದನ್ನು ನೋಡಿದನು [೩:೧೬].
"ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ" ಎಂಬದಾಗಿ ಆಕಾಶವಾಣಿ ಆಯಿತು [೩:೧೭].