Matthew 2

Matthew 2:1

ಯೇಸು ಕ್ರಿಸ್ತನು ಎಲ್ಲಿ ಹುಟ್ಟಿದನು?

ಯೇಸು ಯೂದಾಯದ ಬೆತ್ಲೆಹೇಮಿನಲ್ಲಿ ಹುಟ್ಟಿದನು [೨:೧].

ಮೂಡಣದ ಪಂಡಿತರು ಯೇಸುವಿಗೆ ಯಾವ ಶೀರ್ಷಿಕೆಯನ್ನು ಕೊಟ್ಟರು?

ಮೂಡಣದ ಪಂಡಿತರು ಯೇಸುವಿಗೆ "ಯೆಹೂದ್ಯರ ಅರಸನು" ಎಂಬ ಶೀರ್ಷಿಕೆಯನ್ನು ಕೊಟ್ಟರು [೨:೨].

ಮೂಡಣದ ಪಂಡಿತರಿಗೆ ಯೆಹೂದ್ಯರ ಅರಸನು ಹುಟ್ಟಿದ್ದಾನೆ ಎಂದು ಹೇಗೆ ಗೊತ್ತಾಯಿತು?

ಮೂಡಣದ ಪಂಡಿತರು ಯೆಹೂದ್ಯರ ಅರಸನ ನಕ್ಷತ್ರವನ್ನು ನೋಡಿದರು [೨:೨].

ಮೂಡಣದ ಪಂಡಿತರ ಮಾತುಗಳಿಗೆ ಅರಸನಾದ ಹೆರೋದನು ಯಾವ ರೀತಿ ಪ್ರತಿಕ್ರಿಯಿಸಿದನು?

ಅವರ ಮಾತುಗಳನ್ನು ಕೇಳಿದಾಗ ಅರಸನು ಗಾಬರಿಗೊಂಡನು [೨:೩].

Matthew 2:4

ಯೇಸು ಕ್ರಿಸ್ತನು ಎಲ್ಲಿ ಹುಟ್ಟಿರುವನು ಎಂಬದಾಗಿ ಮಹಾಯಾಜಕರು ಮತ್ತು ಶಾಸ್ತ್ರಿಗಳಿಗೆ ಹೇಗೆ ಗೊತ್ತಾಯಿತು?

ಅವರಿಗೆ ಗೊತ್ತಾಯಿತು ಯಾಕೆಂದರೆ ಕ್ರಿಸ್ತನು ಬೆತ್ಲೆಹೇಮಿನಲ್ಲಿಯೇ ಹುಟ್ಟುವನು ಎಂಬುದನ್ನು ಅವರು ಪ್ರವಾದನೆಯ ಮೂಲಕ ತಿಳಿದುಕೊಂಡರು [೨:೫-೬].

Matthew 2:9

ಯೇಸು ಕ್ರಿಸ್ತನು ಎಲ್ಲಿ ಹುಟ್ಟಿದ್ದಾನೆ ಎಂಬದನ್ನು ಪಂಡಿತರು ನಿಖರವಾಗಿ ಹೇಗೆ ತಿಳಿದುಕೊಂಡರು?

ಯೇಸು ಇರುವ ಸ್ಥಳದ ತನಕ ಮೂಡಣದಲ್ಲಿ ನೋಡಿದ ನಕ್ಷತ್ರವು ಸಾಗುತ್ತಲೇ ಇತ್ತು [೨:೯].

Matthew 2:11

ಪಂಡಿತರು ಯೇಸುವನ್ನು ನೋಡಲು ಬಂದಾಗ ಅವನಿಗೆ ಎಷ್ಟು ವರ್ಷ ವಯಸ್ಸಾಗಿತ್ತು?

ಯೇಸು ಕ್ರಿಸ್ತನು ಆಗ ಶಿಶುವಾಗಿದ್ದನು [೨:೧೧].

ಪಂಡಿತರು ಯೇಸುವಿಗೆ ಯಾವ ಕಾಣಿಕೆಗಳನ್ನು ಕೊಟ್ಟರು?

ಪಂಡಿತರು ಯೇಸುವಿಗೆ ಚಿನ್ನ, ಧೂಪ, ರಕ್ತಬೋಳವನ್ನು ಕಾಣಿಕೆಯಾಗಿ ಕೊಟ್ಟರು [೨:೧೧].

ಪಂಡಿತರು ಯಾವ ಮಾರ್ಗವಾಗಿ ತಮ್ಮ ದೇಶಕ್ಕೆ ಹೋದರು ಮತ್ತು ಅವರು ಈ ಮಾರ್ಗವಾಗಿ ಹೋದದ್ದು ಯಾಕೆ?

ಪಂಡಿತರು ಬೇರೆ ಮಾರ್ಗವಾಗಿ ಹೋದರು ಯಾಕೆಂದರೆ ದೇವರು ಅವರಿಗೆ ಕನಸಿನಲ್ಲಿ ಹೆರೋದನ ಬಳಿಗೆ ಹೋಗುವುದು ಬೇಡ ಎಂಬ ಎಚ್ಚರಿಕೆಯನ್ನು ನೀಡಿದನು [೨:೧೨].

Matthew 2:13

ಯೋಸೇಫನಿಗೆ ಕನಸಿನಲ್ಲಿ ಯಾವ ಸೂಚನೆಯನ್ನು ಕೊಡಲಾಯಿತು?

ಯೇಸುವನ್ನು ಮತ್ತು ಮರಿಯಳನ್ನು ಕರೆದುಕೊಂಡು ಐಗುಪ್ತಕ್ಕೆ ಹೋಗಬೇಕೆಂದು ಹೇಳಲಾಯಿತು ಯಾಕೆಂದರೆ ಹೆರೋದನು ಯೇಸುವನ್ನು ಕೊಲ್ಲಬೇಕೆಂದಿದ್ದನು [೨:೧೩].

ಯೇಸು ಕ್ರಿಸ್ತನು ನಂತರದಲ್ಲಿ ಐಗುಪ್ತದಿಂದ ಹಿಂದಿರುಗಿದ ನಂತರ ಯಾವ ಪ್ರವಾದನೆಯು ನೆರವೇರಿತು?

"ಐಗುಪ್ತದ ಹೊರಗಿನಿಂದ ನಾನು ನನ್ನ ಮಗನನ್ನು ಕರೆದಿದ್ದೇನೆ" ಎಂಬ ಪ್ರವಾದನೆಯು ನೆರವೇರಿತು [೨:೧೫].

Matthew 2:16

ಪಂಡಿತರು ತನ್ನ ಬಳಿಗೆ ಹಿಂದಿರುಗಿ ಬರದಿದ್ದಾಗ ಹೆರೋದನು ಏನು ಮಾಡಿದನು?

ಹೆರೋದನು ಬೆತ್ಲೆಹೇಮಿನಲ್ಲಿ ಎರಡು ವರ್ಷ ಅಥವಾ ಅದಕ್ಕೂ ಕೆಳಗಿನ ವಯಸ್ಸಿನ ಎಲ್ಲಾ ಗಂಡುಮಕ್ಕಳನ್ನು ಕೊಲ್ಲಿಸಿದನು [೨:೧೬].

Matthew 2:19

ಹೆರೋದನು ಸತ್ತ ನಂತರ ಯೋಸೇಫನಿಗೆ ಕನಸಿನಲ್ಲಿ ಯಾವ ಸೂಚನೆಗಳನ್ನು ಕೊಡಲಾಯ್ತಿ?

ಯೊಸೇಫನಿಗೆ ಇಸ್ರಾಯೇಲ್ ದೇಶಕ್ಕೆ ಹಿಂದಿರುಗಿ ಹೋಗಬೇಕೆಂದು ಹೇಳಲಾಯಿತು [೨:೧೯-೨೦].

Matthew 2:22

ಯೋಸೇಫನು ಮರಿಯಳೊಂದಿಗೆ ಎಲ್ಲಿ ವಾಸಿಸಲು ತೀರ್ಮಾನಿಸಿದನು?

ಯೇಸು ಮರಿಯಳೊಂದಿಗೆ ಗಲಿಲಾಯದ ನಜರೇತಿನಲ್ಲಿ ವಾಸಿಸಲು ತೀರ್ಮಾನಿಸಿದನು [೨:೨೨-೨೩].

ಯೋಸೇಫನು ತನ್ನ ಹೊಸ ಸ್ಥಳಕ್ಕೆ ಹೊರಟಾಗ ಯಾವ ಪ್ರವಾದನೆಯು ನೆರವೇರಿತು?

ಯೇಸುವನ್ನು ನಜರೇತಿನವನು ಎಂಬುದಾಗಿ ಕರೆಯಲಾಗುವುದು ಎಂಬ ಪ್ರವಾದನೆಯು ನೆರವೇರಿತು [೨:೨೩].