Matthew 23

Matthew 23:1

ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಧಾರ್ಮಿಕ ನಾಯಕರಂತೆ ಇರಬೇಡಿರಿ ಎಂಬದಾಗಿ ಎಚ್ಚರಿಸುವದನ್ನು ಪ್ರಾರಂಭಿಸಿದನು.

ಮೋಶೆಯ ಆಸನದಲ್ಲಿ ಕುಳಿತುಕೊಳ್ಳುವುದು

"ಮೋಶೆಗಿರುವಂಥ ಅಧಿಕಾರವುಳ್ಳವರಾಗಿರುವುದು" ಅಥವಾ "ಮೋಶೆಯ ಧರ್ಮಶಾಸ್ತ್ರದ ಅರ್ಥ ಏನು ಎಂಬದನ್ನು ಹೇಳುವ ಅಧಿಕಾರವುಳ್ಳವರಾಗಿರುವುದು" (ರೂಪಕಾಲಂಕಾರ ನೋಡಿರಿ)

ಏನಾದರೂ

"ಯಾವುದಾದರು" ಅಥವಾ "ಪ್ರತಿಯೊಂದು"

Matthew 23:4

ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಧಾರ್ಮಿಕ ನಾಯಕರಂತೆ ಇರಬೇಡಿರಿ ಎಂಬದಾಗಿ ಎಚ್ಚರಿಸುವದನ್ನು ಪ್ರಾರಂಭಿಸಿದನು.

ಅವರು ಹೊರಲು ಆಗಿರುವ ಅತಿಯಾದ ಭಾರವನ್ನು ಹೊರಿಸುತ್ತಾರೆ

"ಅವರು ಅನುಸರಿಸಲು ಆಗದಿರುವ ಕಷ್ಟಕರವಾದ ನಿಯಮಗಳನ್ನು ಜಾರಿಗೆ ತರುತ್ತಾರೆ." (ರೂಪಕಾಲಂಕಾರ ನೋಡಿರಿ)

ಅವರು ತಾವಾಗಿಯೇ ಒಂದು ಬೆರಳನ್ನೂ ಆಡಿಸುವದಿಲ್ಲ

"ಅವರು ಸ್ವಲ್ಪವೂ ಸಹಾಯ ಮಾಡುವದಿಲ್ಲ" (ರೂಪಕಾಲಂಕಾರ ನೋಡಿರಿ)

ಜ್ಞಾಪಕಪಟ್ಟಿಗಳು

ಸಣ್ಣ ಡಬ್ಬಿಗಳಾದ ಇವುಗಳಲ್ಲಿ ಬರೆಯಲ್ಪಟ್ಟಿರುವ ದೇವವಾಕ್ಯಗಳಿದ್ದವು

Matthew 23:6

ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಧಾರ್ಮಿಕ ನಾಯಕರಂತೆ ಇರಬೇಡಿರಿ ಎಂಬದಾಗಿ ಎಚ್ಚರಿಸುವದನ್ನು ಪ್ರಾರಂಭಿಸಿದನು.

Matthew 23:8

ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಧಾರ್ಮಿಕ ನಾಯಕರಂತೆ ಇರಬೇಡಿರಿ ಎಂಬದಾಗಿ ಎಚ್ಚರಿಸುವದನ್ನು ಪ್ರಾರಂಭಿಸಿದನು.

ಭೂಲೋಕದಲ್ಲಿರುವ ಯಾರನ್ನೂ ನಿಮ್ಮ ತಂದೆ ಎಂದು ಕರೆಯಬೇಡಿರಿ

"ಭೂಲೋಕದಲ್ಲಿರುವ ಯಾರನ್ನೂ ತಂದೆ ಎಂದು ಕರೆಯಬಾರದು" ಅಥವಾ "ಭೂಲೋಕದಲ್ಲಿರುವ ಯಾವ ವ್ಯಕ್ತಿಯನ್ನು ತಂದೆ ಎಂದು ಹೇಳಬೇಡಿರಿ"

Matthew 23:11

ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಧಾರ್ಮಿಕ ನಾಯಕರಂತೆ ಇರಬೇಡಿರಿ ಎಂಬದಾಗಿ ಎಚ್ಚರಿಸುವದನ್ನು ಪ್ರಾರಂಭಿಸಿದನು.

ತನ್ನನ್ನು ಹೆಚ್ಚಿಸಿಕೊಳ್ಳುತ್ತಾನೆ

"ತನ್ನನ್ನು ಪ್ರಾಮುಖ್ಯನೆಂದು ಹೇಳಿಕೊಳ್ಳುತ್ತಾನೆ"

ಹೆಚ್ಚಳಪಡುತ್ತನೆ

"ಪ್ರಾಮುಖ್ಯನೆಂದು ಹೆಚ್ಚಿಸಿಕೊಳ್ಳುತ್ತಾನೆ"

Matthew 23:13

ಧಾರ್ಮಿಕ ನಾಯಕರ ಕಪಟತನದ ನಿಮಿತ್ತ ಯೇಸು ಅವರಿಗೆ ವಿರುದ್ಧವಾಗಿ ಮಾತನಾಡಲು ಪ್ರಾರಂಭಿಸುತ್ತಿದ್ದಾನೆ.

ನೀವು ಅದರೊಳಗೆ ಪ್ರವೇಶಿಸುವುದಿಲ್ಲ

"ದೇವರಿಗೆ ನಿಮ್ಮ ಮೇಲೆ ಅಧಿಕಾರ ನಡೆಸುವ ಅವಕಾಶವನ್ನು ನೀವು ಕೊಡುವದಿಲ್ಲ"

ವಿಧವೆಯರ ಮನೆಗಳನ್ನು ನುಂಗಿಬಿಡಬೇಕೆಂದಿದ್ದೀರಿ

"ತಮ್ಮನ್ನು ಕಾಪಾಡಲು ಇಲ್ಲದಿರುವ ಸ್ತ್ರೀಯರ ಮನೆಗಳಿಂದ ಎಲ್ಲವನ್ನು ಕದ್ದುಕೊಳ್ಳುತ್ತಾರೆ"

ನರಕದ ಮಗನು

"ನರಕಕ್ಕೆ ಸೇರುವ ವ್ಯಕ್ತಿ" ಅಥವಾ "ನರಕಕ್ಕೆ ಹೋಗಬೇಕಾದ ವ್ಯಕ್ತಿ" (ನಾಣ್ಣುಡಿ ನೋಡಿರಿ)

Matthew 23:16

ಧಾರ್ಮಿಕ ನಾಯಕರ ಕಪಟತನದ ನಿಮಿತ್ತ ಯೇಸು ಅವರಿಗೆ ವಿರುದ್ಧವಾಗಿ ಮಾತನಾಡಲು ಪ್ರಾರಂಭಿಸುತ್ತಿದ್ದಾನೆ.

ಕುರುಡ ಮಾರ್ಗದರ್ಶಕರು...ಮೂರ್ಖರು

ನಾಯಕರು ಶಾರೀರಿಕವಾಗಿ ಕುರುಡರಲ್ಲದಿದ್ದರೂ, ತಾವು ತಪ್ಪು ಮಾಡುತ್ತಿದ್ದೇವೆ ಎಂಬದನ್ನು ಅರ್ಥಮಾಡಿಕೊಳ್ಳಲು ಅವರಿಗೆ ಆಗುವದಿಲ್ಲ. (ರೂಪಕಾಲಂಕಾರ ನೋಡಿರಿ)

ಅವನು ತನ್ನ ಪ್ರಮಾಣಕ್ಕೆ ಬದ್ಧಾನಾಗಿರುತ್ತಾನೆ

"ತಾನು ವಾಗ್ದಾನ ಮಾಡಿರುವದನ್ನು ಮಾಡಲೇಬೇಕು" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ಯಾವುದು ಹೆಚ್ಚಿನದು ಬಂಗಾರವೋ ಅಥವಾ ಬಂಗಾರವನ್ನು ಪ್ರತಿಷ್ಟಿಸಿರುವ ದೇವಾಲಯವೋ?

ಫರಿಸಾಯರನ್ನು ಗದರಿಸಲು ಯೇಸು ಈ ಪ್ರಶ್ನೆಯನ್ನು ಉಪಯೋಗಿಸಿದ್ದಾನೆ. (ಆಲಂಕಾರಿಕ ಪ್ರಶ್ನೆ ನೋಡಿರಿ)

Matthew 23:18

ಧಾರ್ಮಿಕ ನಾಯಕರ ಕಪಟತನದ ನಿಮಿತ್ತ ಯೇಸು ಅವರಿಗೆ ವಿರುದ್ಧವಾಗಿ ಮಾತನಾಡಲು ಮುಂದುವರೆಸುತ್ತಿದ್ದಾನೆ.

ಕುರುಡರು

ಆತ್ಮೀಕವಾಗಿ ಕುರುಡರಾಗಿರುವ ಜನರು (ರೂಪಕಾಲಂಕಾರ ನೋಡಿರಿ)

ಯಾವುದು ಹೆಚ್ಚಿನದು, ಕಾಣಿಕೆಯೋ ಅಥವಾ ಕಾಣಿಕೆಯನ್ನು ಪ್ರತಿಷ್ಠಿಸುವ ಯಜ್ಞವೇದಿಯೋ?

ಯೇಸು ಕ್ರಿಸ್ತನು ಈಗಾಗಲೇ ಅವರಿಗೆ ಗೊತ್ತಿರುವ ಸಂಗತಿಯನ್ನು ಮತ್ತೆ ಹೇಳುತ್ತಿದ್ದಾನೆ. (ಆಲಂಕಾರಿಕ ಪ್ರಶ್ನೆ ನೋಡಿರಿ)

ಕಾಣಿಕೆ

ಯಜ್ಞವೇದಿಯ ಮೇಲೆ ಇಡುವದಕ್ಕಿಂತ ಮೊದಲು ದೇವರ ಎದುರಿಗೆ ತರಲಾಗುವ ಪ್ರಾಣಿ ಅಥವಾ ಧಾನ್ಯದ ಕಾಣಿಕೆಯಾಗಿದೆ. ಒಮ್ಮೆ ಅದನ್ನು ಯಜ್ಞವೇದಿಯ ಮೇಲೆ ಇಟ್ಟ ನಂತರ ಅದು ಕಾಣಿಕೆಯಾಗುತ್ತದೆ. (ಮೆಟಾನಿಮೈ ನೋಡಿರಿ)

Matthew 23:20

ಧಾರ್ಮಿಕ ನಾಯಕರ ಕಪಟತನದ ನಿಮಿತ್ತ ಯೇಸು ಅವರಿಗೆ ವಿರುದ್ಧವಾಗಿ ಮಾತನಾಡಲು ಮುಂದುವರೆಸುತ್ತಿದ್ದಾನೆ.

Matthew 23:23

ಧಾರ್ಮಿಕ ನಾಯಕರ ಕಪಟತನದ ನಿಮಿತ್ತ ಯೇಸು ಅವರಿಗೆ ವಿರುದ್ಧವಾಗಿ ಮಾತನಾಡಲು ಮುಂದುವರೆಸುತ್ತಿದ್ದಾನೆ.

ನಿಮ್ಮ ಗತಿ ಏನು ಹೇಳಲಿ

೨೩:೧೩ರಲ್ಲಿ ಹೇಗೆ ಭಾಷಾಂತರ ಮಾಡಿದ್ದೀರೆಂದು ನೋಡಿರಿ.

ಮರುಗ, ಸೋಪು ಮತ್ತು ಜೀರಿಗೆ

ರುಚಿಕರ ಆಹಾರವನ್ನು ಸಿದ್ದಮಾಡಲು ಉಪಯೋಗಿಸುವ ಪದಾರ್ಥಗಳು (ಪರಿಚಯವಿಲ್ಲದವುಗಳ ಭಾಷಾಂತರ ನೋಡಿರಿ)

ನೀವು ಕುರುಡು ಮಾರ್ಗದರ್ಶಕರು

ಇವರು ಶಾರೀರಿಕವಾಗಿ ಕುರುಡರಲ್ಲ. ಯೇಸು ಕ್ರಿಸ್ತನು ಆತ್ಮೀಕ ಕುರುಡುತನವನ್ನು ಶಾರೀರಿಕ ಕುರುಡುತನಕ್ಕೆ ಹೋಲಿಸಿದ್ದಾನೆ. (ರೂಪಕಾಲಂಕಾರ ನೋಡಿರಿ)

ನೀವು ಸೊಳ್ಳೆ ಸೋಸುವವರು ಒಂಟೆ ನುಂಗುವವರು

ಪ್ರಾಮುಖ್ಯವಾದ ನಿಯಮಗಳನ್ನು ಪಾಲಿಸುವುದರಲ್ಲಿ ಎಚ್ಚರವಾಗಿರುವುದು ಮತ್ತು ಹೆಚ್ಚು ಪ್ರಾಮುಖ್ಯವಾಗಿರುವ ನಿಯಮವನ್ನು ಪಾಲಿಸುವಲ್ಲಿ ನಿರ್ಲಕ್ಷ್ಯವನ್ನು ತೋರುವುದು ಸಣ್ಣದಾಗಿರುವ ಅಶುದ್ಧ ಹುಳುವನ್ನು ನುಂಗುವದರಲ್ಲಿ ಎಚ್ಚರಿಕೆಯನ್ನು ತೋರದೆ ಉದ್ದೇಶಪೂರ್ವಕವಾಗಿ ಅಥವಾ ಗೊತ್ತಿಲ್ಲದೆ ತಿನ್ನುವು ಮೂರ್ಖತನಕ್ಕೆ ಸಮಾನವಾಗಿದೆ. "ನೀವು ಕುಡಿಯುವ ಲೋಟದೊಳಗೆ ಸೊಳ್ಳೆ ಬಿದ್ದರೆ ಅದನ್ನು ತೆಗೆದುಹಾಕುತ್ತೀರಿ ಆದರೆ ಒಂಟೆಯನ್ನು ನುಂಬುತ್ತೀರಿ ಇದು ಮೂರ್ಖತನದ ಪ್ರತೀಕವಾಗಿದೆ." (ರೂಪಕಾಲಂಕಾರ ಮತ್ತು ಹೈಪರ್ಬೋಲ್ ನೋಡಿರಿ)

ಸೊಳ್ಳೆಯನ್ನು ತೆಗೆಯುತ್ತೀರಿ

ಸೊಳ್ಳೆ ಬಾಯೊಳಗೆ ಹೋಗದಂತೆ ಬಟ್ಟಿಯನ್ನು ಅಡ್ಡವಿಟ್ಟು ಕುಡಿಯುತ್ತೀರಿ

ಸೊಳ್ಳೆ

ಹಾರಾಡುವ ಸಣ್ಣ ಹುಳು

Matthew 23:25

ಧಾರ್ಮಿಕ ನಾಯಕರ ಕಪಟತನದ ನಿಮಿತ್ತ ಯೇಸು ಅವರಿಗೆ ವಿರುದ್ಧವಾಗಿ ಮಾತನಾಡಲು ಮುಂದುವರೆಸುತ್ತಿದ್ದಾನೆ.

ಅಯ್ಯೋ ನಿಮ್ಮ ಗತಿಯನ್ನು ಏನು ಹೇಳಲಿ

೨೩:೧೩ರಲ್ಲಿ ಹೇಗೆ ಭಾಷಾಂತರ ಮಾಡಿದಿರೆಂದು ನೋಡಿರಿ.

ನೀವು ಪಂಚಪಾತ್ರೆ ಬಟ್ಟಲ ಹೊರಭಾಗವನ್ನು ಶುದ್ಧೀಕರಿಸುತ್ತೀರಿ

"ಶಾಸ್ತ್ರಿಗಳು" ಮತ್ತು "ಫರಿಸಾಯರು" ಹೊರಗಿನವರಿಗೆ ಶುದ್ಧರಂತೆ ಕಾಣುತ್ತಿದ್ದರು. (ರೂಪಕಾಲಂಕಾರ ನೋಡಿರಿ)

ಒಳಗೆ ಸುಲುಕೊಳ್ಳುವಿಕೆ ಮತ್ತು ಇಹಭೋಗ ಪದಾರ್ಥಗಳಿಂದ ತುಂಬಿವೆ

"ಇತರರಿಗೆ ಸಂಬಂಧಪಟ್ಟವುಗಳನ್ನು ಅವರು ಒತ್ತಾಯಪೂರ್ವಕವಾಗಿ ತೆಗೆದುಕೊಳ್ಳುತ್ತಾರೆ ಆದ್ದರಿಂದ ಅಳತೆಗೂ ಮೀರಿ ಅವರ ಬಳಿಯಲ್ಲಿರುತ್ತದೆ"

ಕುರುಡರಾದ ಫರಿಸಾಯರೇ

ಫರಿಸಾಯರಿಗೆ ಸತ್ಯವು ಆರ್ಥವಾಗುವದಿಲ್ಲ. ಅವರು ಶಾರೀರಿಕವಾಗಿ ಕುರುಡರಲ್ಲ. (ರೂಪಕಾಲಂಕಾರ ನೋಡಿರಿ)

ಪಂಚಪಾತ್ರೆ ಬಟ್ಟಲಿನ ಒಳಭಾಗವನ್ನು ಮೊದಲು ಶುದ್ಧ ಮಾಡಿರಿ, ಆಗ ಹೊರಭಾಗವು ಸಹ ಶುದ್ಧವಾಗುತ್ತದೆ

ಒಂದು ವೇಳೆ ಅವರ ಹೃದಯಗಳು ಸರಿಯಾಗಿದ್ದರೆ, ಅದು ಅವರ ಜೀವಿತಗಳಲ್ಲಿಯೂ ವ್ಯಕ್ತವಾಗುವುದು. (ರೂಪಕಾಲಂಕಾರ ನೋಡಿರಿ)

Matthew 23:27

ಧಾರ್ಮಿಕ ನಾಯಕರ ಕಪಟತನದ ನಿಮಿತ್ತ ಯೇಸು ಅವರಿಗೆ ವಿರುದ್ಧವಾಗಿ ಮಾತನಾಡಲು ಮುಂದುವರೆಸುತ್ತಿದ್ದಾನೆ.

Matthew 23:29

ಧಾರ್ಮಿಕ ನಾಯಕರ ಕಪಟತನದ ನಿಮಿತ್ತ ಯೇಸು ಅವರಿಗೆ ವಿರುದ್ಧವಾಗಿ ಮಾತನಾಡಲು ಮುಂದುವರೆಸುತ್ತಿದ್ದಾನೆ.

Matthew 23:32

ಧಾರ್ಮಿಕ ನಾಯಕರ ಕಪಟತನದ ನಿಮಿತ್ತ ಯೇಸು ಅವರಿಗೆ ವಿರುದ್ಧವಾಗಿ ಮಾತನಾಡಲು ಮುಂದುವರೆಸುತ್ತಿದ್ದಾನೆ.

ನೀವು ನಿಮ್ಮ ಪಿತೃಗಳ ಪಾಪದ ಲೆಕ್ಕವನ್ನು ತುಂಬಿಸುವಿರಿ

"ನೀವು ಪೂರ್ವಿಕರು ಪ್ರಾರಂಭಿಸಿರುವ ಪಾಪಗಳನ್ನು ನೀವು ಮುಗಿಸುವಿರಿ" (ಮೆಟಾನಿಮೈ ನೋಡಿರಿ)

ಹಾವುಗಳೇ, ಸರ್ಪಜಾತಿಯವರೇ

"ನೀವು ವಿಷಕಾರಿಯಾದ ಹಾವುಗಳಂತೆ ಅಪಾಯಕಾರಿಯಾಗಿರುವಿರಿ" (ರೂಪಕಾಲಂಕಾರ ನೋಡಿರಿ)

ನರಕದ ದಂಡನೆಯನ್ನು ಹೇಗೆ ತಪ್ಪಿಸಿಕೊಳ್ಳುವಿರಿ?

"ನರಕದ ದಂಡನೆಯಿಂದ ತಪ್ಪಿಸಿಕೊಳ್ಳಲು ನಿಮಗೆ ಮಾರ್ಗವೇ ಇಲ್ಲ" (ಆಲಂಕಾರಿಕ ಪ್ರಶ್ನೆ ನೋಡಿರಿ)

Matthew 23:34

ಧಾರ್ಮಿಕ ನಾಯಕರ ಕಪಟತನದ ನಿಮಿತ್ತ ಯೇಸು ಅವರಿಗೆ ವಿರುದ್ಧವಾಗಿ ಮಾತನಾಡಲು ಮುಂದುವರೆಸುತ್ತಿದ್ದಾನೆ.

ಹೆಬೇಲನಿಂದ ಜೆಕರ್ಯನ ತನಕ

ಹೆಬೇಲನು ಕೊಲೆಗೆ ಗುರಿಯಾದ ಮೊದಲನೆಯ ವ್ಯಕ್ತಿಯಾಗಿದ್ದಾನೆ ಮತ್ತು ಯೆಹೂದ್ಯರ ದೇವಾಲಯದೊಳಗೆ ಕೊಲೆಯಾದವರೊಳಗೆ ಜೆಕರ್ಯನು ಕಡೆಯವನು ಅನ್ನಿಸುತ್ತದೆ.

ಜೆಕರ್ಯ

ಸ್ನಾನಿಕನಾದ ಯೋಹಾನನ ತಂದೆಯಲ್ಲ

Matthew 23:37

ಯೆರೂಸಲೇಮಿನಲ್ಲಿರುವ ಜನರು ದೇವರನ್ನು ನಿರಾಕರಿಸಿರುವದರಿಂದ ತನಗೆ ದುಃಖವಾಗಿದೆ ಎಂದು ಯೇಸು ಹೇಳಿದನು.

ಯೆರೂಸಲೇಮೇ, ಯೆರೂಸಲೇಮೇ

ಯೇಸು ಯೆರೂಸಲೇಮಿನ ಜನರೊಂದಿಗೆ ಪಟ್ಟಣವೇ ಅವರು ಎಂಬ ರೀತಿಯಲ್ಲಿ ಮಾತನಾಡುತ್ತಿದ್ದಾನೆ. (ಅಪೊಸ್ತ್ರೋಫೆ ಮತ್ತು ಮೆಟಾನಿಮೈ ನೋಡಿರಿ)

ನಿಮ್ಮ ಮಕ್ಕಳು

ಇಸ್ರಾಯೇಲ್ಯರೆಲ್ಲರೂ (ಸಿನೊಕ್ಡೆಕ್ ನೋಡಿರಿ)

ನಿಮ್ಮ ಆಲಯವು ಬರಿದಾಗಿ ಬಿಟ್ಟಿದೆ

"ದೇವರು ನಿಮ್ಮ ಆಲಯವನ್ನು ಬಿಟ್ಟುಹೋಗುವನು ಮತ್ತು ಅದು ಬರಿದಾಗಿರುವುದು" (ಮೆಟಾನಿಮೈ ನೋಡಿರಿ)

ನಿಮ್ಮ ಆಲಯ

ಅರ್ಥಗಳು ಏನಾಗಿರುವವೆಂದರೆ: ೧) ಯೆರೂಸಲೇಮ್ ಪಟ್ಟಣ (ಯುಡಿಬಿ ನೋಡಿರಿ) ಅಥವಾ ೨) ದೇವಾಲಯ (ಮೆಟಾನಿಮೈ ನೋಡಿರಿ)