Matthew 20

Matthew 20:1

ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಒಬ್ಬ ವ್ಯಕ್ತಿಯು ತನ್ನ ಆಳುಗಳಿಗೆ ಸಂಬಳ ಕೊಡುವ ಸಾಮ್ಯವನ್ನು ಹೇಳಿದನು.

ಪರಲೋಕ ರಾಜ್ಯವು ಹೊಲದ ಯಜಮಾನನಿಗೆ ಹೋಲಿಕೆಯಾಗಿದೆ

ಹೊಲದ ಯಜಮಾನನು ಆಳ್ವಿಕೆ ಮಾಡುವಂತೆಯೇ ದೇವರು ಎಲ್ಲವುಗಳ ಮೇಲೆ ಆಳ್ವಿಕೆ ಮಾಡುವನು. (ಉಪಮೆ ನೋಡಿರಿ)

ಪರಲೋಕ ರಾಜ್ಯವು

೧೩:೨೪ರಲ್ಲಿ ಹೇಗೆ ಭಾಷಾಂತರ ಮಾಡಿರುವಿರಿ ಎಂಬದನ್ನು ನೋಡಿರಿ

ಆತನು ಒಪ್ಪಿದ ನಂತರ

"ಹೊಲದ ಯಜಮಾನನು ಒಪ್ಪಿದ ನಂತರ"

ಒಂದು ರೂಪಾಯಿ

"ಒಂದು ದಿನದ ಕೂಲಿ" (ಸತ್ಯವೇದದ ಹಣ ನೋಡಿರಿ)

Matthew 20:3

ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಒಬ್ಬ ವ್ಯಕ್ತಿಯು ತನ್ನ ಆಳುಗಳಿಗೆ ಸಂಬಳ ಕೊಡುವ ಸಾಮ್ಯವನ್ನು ಹೇಳಿದನು.

ಆತನು ಮತ್ತೆ ಹೊರಟನು

"ಹೊಲದ ಯಜಮಾನನು ಮತ್ತೆ ಹೊರಟನು"

ಸೋಮಾರಿಯಾಗಿದ್ದನು

"ಏನನ್ನೂ ಮಾಡದಿರುವುದು" ಅಥವಾ "ಕೆಲಸ ಇಲ್ಲದಿರುವುದು"

Matthew 20:5

ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಒಬ್ಬ ವ್ಯಕ್ತಿಯು ತನ್ನ ಆಳುಗಳಿಗೆ ಸಂಬಳ ಕೊಡುವ ಸಾಮ್ಯವನ್ನು ಹೇಳಿದನು.

ಆತನು ಮತ್ತೆ ಹೊರಟನು

"ಹೊಲದ ಯಜಮಾನನು ಮತ್ತೆ ಹೊರಟನು"

ಸೋಮಾರಿಯಾಗಿದ್ದನು

"ಏನನ್ನೂ ಮಾಡದಿರುವುದು" ಅಥವಾ "ಕೆಲಸ ಇಲ್ಲದಿರುವುದು"

Matthew 20:8

ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಒಬ್ಬ ವ್ಯಕ್ತಿಯು ತನ್ನ ಆಳುಗಳಿಗೆ ಸಂಬಳ ಕೊಡುವ ಸಾಮ್ಯವನ್ನು ಹೇಳಿದನು.

ಅವರಲ್ಲಿ ಪ್ರತಿಯೊಬ್ಬರು

"ಹನ್ನೊಂದನೇ ತಾಸಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ಪ್ರತಿಯೊಬ್ಬ ಕೆಲಸಗಾರರು"

ಹಣ

"ಒಂದು ದಿನದ ಕೂಲಿ" (ಸತ್ಯವೇದದ ಹಣ ನೋಡಿರಿ)

ಅವರು ಅಂದುಕೊಂಡರು

"ಹೆಚ್ಚು ಕಾಲ ಕೆಲಸ ಮಾಡಿದ ಕೆಲಸಗಾರರು ಅಂದುಕೊಂಡರು"

Matthew 20:11

ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಒಬ್ಬ ವ್ಯಕ್ತಿಯು ತನ್ನ ಆಳುಗಳಿಗೆ ಸಂಬಳ ಕೊಡುವ ಸಾಮ್ಯವನ್ನು ಹೇಳಿದನು.

ಅವರು ಪಡೆದಾಗ

"ಹೆಚ್ಚು ಸಮಯ ಕೆಲಸ ಮಾಡಿದ ಆಳುಗಳು ಸಂಬಳವನ್ನು ಪಡೆದಾಗ"

ಹೊಲದ ಯಜಮಾನನು

"ಜಮೀನ್ದಾರನು" ಅಥವಾ "ದ್ರಾಕ್ಷೇತೋಟದ ಯಜಮಾನನು"

ನಾನು ದಿನವಿಡೀ ಸೂರ್ಯನ ಬೆಳಕಿನಲ್ಲಿ ಕೆಲಸ ಮಾಡಿದ್ದೇವೆ

"ನಾವು ಉರಿಯುವ ಬಿಸಲಿನಲ್ಲಿ ದಿನವಿಡೀ ಕೆಲಸ ಮಾಡಿದ್ದೇವೆ"

Matthew 20:13

ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಒಬ್ಬ ವ್ಯಕ್ತಿಯು ತನ್ನ ಆಳುಗಳಿಗೆ ಸಂಬಳ ಕೊಡುವ ಸಾಮ್ಯವನ್ನು ಹೇಳಿದನು.

ಅವರಲ್ಲಿ ಒಬ್ಬನು

"ಹೆಚ್ಚಿ ಕಾಲ ಕೆಲಸ ಮಾಡಿದ್ದ ಆಳುಗಳೊಳಗೆ ಒಬ್ಬನು"

ಸ್ನೇಹಿತನು

ಮೃದುವಾಗಿ ಒಬ್ಬ ವ್ಯಕ್ತಿಯು ಮತ್ತೊಬ್ಬನನ್ನು ಗದರಿಸುತ್ತಿರುವದನ್ನು ಸೂಚಿಸಿರಿ.

ನೀವು ನನ್ನೊಂದಿಗೆ ಒಂದು ದಿನದ ಸಂಬಳಕ್ಕೆ ಒಪ್ಪಿಕೊಂಡಿರಲ್ಲವೇ?

"ನಾನು ನಿಮಗೆ ಒಂದು ದಿನದ ಕೂಲಿಯನ್ನು ಕೊಡುವೆನು ಎಂದು ಹೇಳಿದಾಗ ನೀವು ಒಪ್ಪಿಕೊಂಡಿರಿ" (ಆಲಂಕಾರಿಕ ಪ್ರಶ್ನೆ ನೋಡಿರಿ)

ಒಂದು ಪಾವಲಿ

"ಒಂದುದಿನದ ಕೂಲಿ" (ಸತ್ಯವೇದದ ಹಣ ನೋಡಿರಿ)

ಕೊಡುವುದು ನನ್ನ ಸಂತೋಷ

"ಕೊಡುವುದು ನನಗೆ ಮೆಚ್ಚಿಕೆಯಾದದ್ದು" ಅಥವಾ "ನಾನು ಸಂತೋಷದಿಂದ ಕೊಡುತ್ತಿದ್ದೇನೆ"

Matthew 20:15

ಯೇಸುಕ್ರಿಸ್ತನು ಹೊಲದ ಯಜಮಾನನು ಆಳುಗಳಿಗೆ ಸಂಬಳ ಕೊಡುವ ಸಾಮ್ಯವನ್ನು ಮುಂದುವರೆಸುತ್ತಿದ್ದಾನೆ.

ನನ್ನ ಆಸ್ತಿಯ ವಿಷಯದಲ್ಲಿ ನನಗೆ ಬೇಕಾದ್ದನ್ನು ಮಾಡುವ ಅಧಿಕಾರ ನನಗಿದೆಯಲ್ಲವೇ?

"ನನ್ನ ಆಸ್ತಿಯನ್ನು ನಾನು ಏನುಬೇಕಾದರೂ ಮಾಡುತ್ತೇನೆ." (ಆಲಂಕಾರಿಕ ಪ್ರಶ್ನೆ ನೋಡಿರಿ)

ಯುಕ್ತವಲ್ಲವೇ

"ಧರ್ಮವಲ್ಲವೆ" ಅಥವಾ "ಸರಿಯಲ್ಲವೇ" ಅಥವಾ "ಒಳ್ಳೆಯದಲ್ಲವೇ"

ಅಥವಾ ನಾನು ಒಳ್ಳೆಯವನಾಗಿರುವುದು ನಿಮ್ಮ ಕಣ್ಣು ಕುಕ್ಕುತ್ತದೆಯೋ

"ನಾನು ಜನರಿಗೆ ಒಳ್ಳೇದು ಮಾಡುವದರಿಂದ ನಿಮಗೆ ಸಂತೋಷವಾಗುತ್ತಿಲ್ಲವೇ"

Matthew 20:17

ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಅವರು ಯೆರೂಸಲೇಮಿಗೆ ಹೋಗುವ ಸಮಯದಲ್ಲಿ ಕಲಿಸುವುದನ್ನು ಮುಂದುವರೆಸುತ್ತಿದ್ದಾನೆ.

ನಾವು ಹೋಗುತ್ತಿದ್ದೇವೆ

ಯೇಸು ಕ್ರಿಸ್ತನು ಶಿಷ್ಯರನ್ನೂ ಸೇರಿಸಿ ಹೇಳುತ್ತಿದ್ದಾನೆ. (ಒಳಗೊಂಡಿರುವುದು ನೋಡಿರಿ)

ಮನುಷ್ಯಕುಮಾರನು ಒಪ್ಪಿಸಲ್ಪಡುವನು

"ಯಾರೊಬ್ಬನು ಮನುಷ್ಯಕುಮಾರನನ್ನು ಹಿಡಿದುಕೊಡುವರು" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ಅವರು ಖಂಡಿಸುವರು ಮತ್ತು ಹಾಸ್ಯಕ್ಕೆ ಒಳಗಾಗುವ ಸಲುವಾಗಿ ಅನ್ಯರಿಗೆ ಒಪ್ಪಿಸುವರು

ಮಹಾಯಾಜಕರು ಮತ್ತು ಶಾಸ್ತ್ರಿಗಳು ಖಂಡಿಸುವರು ಮತ್ತು ಅನ್ಯರಿಗೆ ಒಪ್ಪಿಸುವರು, ಹಾಗೂ ಅನ್ಯರು ಹಾಸ್ಯ ಮಾಡುವರು

ಆತನು ಎದ್ದು ಬರುವನು

"ದೇವರು ಅವನನ್ನು ಎಬ್ಬಿಸುವನು" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

Matthew 20:20

ಯೇಸುವಿನ ಶಿಷ್ಯರಲ್ಲಿ ಇಬ್ಬರ ತಾಯಿ ಆತನ ಬಳಿ ಒಂದು ಮನವಿಯನ್ನು ಮಾಡಿಕೊಂಡಳು.

ನಿನ್ನ ಬಲಗಡೆಯಲ್ಲಿ ... ನಿನ್ನ ಎಡಗಡೆಯಲ್ಲಿ

ಅಧಿಕಾರದ ಸ್ಥಳಗಳಲ್ಲಿ (ಮೆಟಾನಿಮೈ ನೋಡಿರಿ)

Matthew 20:22

ಯೇಸು ಕ್ರಿಸ್ತನು ತನ್ನ ಶಿಷ್ಯರಲ್ಲಿ ಇಬ್ಬರ ತಾಯಿಗೆ ಉತ್ತರವನ್ನು ಕೊಟ್ಟನು.

ನೀವು

ತಾಯಿ ಮತ್ತು ಮಕ್ಕಳು (ನೀನು ವಿಧಾನಗಳನ್ನು ನೋಡಿರಿ

ದ್ವಿಗುಣ/ಬಹುವಚನ)

ನಿಮ್ಮಿಂದ ಆಗುವುದೋ?

"ನಿಮಗೆ ಸಾಧ್ಯವೋ?" ಯೇಸುವಿನ ಮಕ್ಕಳ ಸಂಗಡ ಮಾತ್ರ ಮಾತನಾಡುತ್ತಿದ್ದಾನೆ.

ನಾನು ಕುಡಿಯುವ ಪಾತ್ರೆಯಲ್ಲಿ ಕುಡಿಯಲು

"ನಾನು ಅನುಭವಿಸಬೇಕಾಗಿರುವ ಶ್ರಮೆಗಳನ್ನು ಅನುಭವಿಸಲು" (ನಾಣ್ಣುಡಿ ನೋಡಿರಿ)

ಅವರು

ಮಕ್ಕಳು

ಅದನ್ನು ನನ್ನ ತಂದೆ ಯಾರಿಗಾಗಿ ಸಿದ್ಧಪಡಿಸಿದ್ದಾನೋ

ನನ್ನ ಪಕ್ಕದಲ್ಲಿ ಕುಳಿತುಕೊಳ್ಳುವ ಅವಕಾಶವು ನನ್ನ ತಂದೆ ಯಾರಿಗಾಗಿ ನೇಮಿಸಿದ್ದಾನೋ ಅವರಿಗೆ ಮಾತ್ರವೇ ಸಿಗುತ್ತದೆ (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ಸಿದ್ಧಮಾಡಿರುವುದು

ಈಗಾಗಲೇ ಸಿದ್ಧವಾಗಿರುವುದು

Matthew 20:25

ಯೇಸು ತಾಯಿಗೆ ಹೇಳಿದ್ದನ್ನೇ ತನ್ನ ಶಿಷ್ಯರಿಗೂ ಹೇಳುತ್ತಿದ್ದಾನೆ.

ಅನ್ಯರು ತಮ್ಮ ಅಧೀನದಲ್ಲಿರುವವರನ್ನು ಒತ್ತಾಯವಾಗಿ ದುಡಿಸಿಕೊಳ್ಳುತ್ತಾರೆ

"ಅನ್ಯರ ಅಧಿಕಾರಿಗಳು, ತಮ್ಮ ಅಧಿಕಾರಿಗಳು ಬಯಸುವ ಕಾರ್ಯಗಳನ್ನು ಒತ್ತಾಯವಾಗಿ ಅನ್ಯರಿಂದಲೇ ಮಾಡಿಸಿಕೊಳ್ಳುತ್ತಾರೆ."

ಅವರಲ್ಲಿ ಪ್ರಾಮುಖ್ಯರಾದವರು

ಅಧಿಕಾರಿಗಳು ಅಧಿಕಾರವನ್ನು ಕೊಡುವ ಜನರು

ಅಧಿಕಾರವನ್ನು ಅಭ್ಯಾಸ ಮಾಡಿರಿ

"ನಿಯಂತ್ರಣವುಳ್ಳವರಾಗಿರ್ರಿ"

ಬಯಕೆಗಳು

"ಬೇಡಿಕೆಗಳು" ಅಥವಾ "ಆಸೆಗಳು"

ತನ್ನ ಪ್ರಾಣವನ್ನು ಕೊಡುವದು

"ಸಾಯಲು ಸಿದ್ಧನಾಗಿರುವದು"

Matthew 20:29

ಯೇಸು ಕ್ರಿಸ್ತನು ಇಬ್ಬರು ಕುರುಡರನ್ನು ಗುಣಪಡಿಸಿದ ದಾಖಲೆಯು ಇಲ್ಲಿ ಪ್ರಾರಂಭವಾಗುತ್ತಿದೆ.

ಅವರು ಹೋಗುತ್ತಿರುವಾಗ

ಇದು ಯೇಸು ಕ್ರಿಸ್ತನು ಮತ್ತು ಆತನ ಶಿಷ್ಯರ ಬಗ್ಗೆ ತಿಳಿಸುತ್ತದೆ.

ಹಿಂಬಾಲಿಸಿದರು

"ಯೇಸುವನ್ನು ಹಿಂಬಾಲಿಸಿದರು"

ನೋಡಿರಿ

ಮುಂಬರುವ ಆಶ್ಚರ್ಯಕರ ಮಾಹಿತಿಗೆ ಕಿವಿಗೊಡುವಂತೆ ಬರಹಗಾರನು ಓದುಗನಿಗೆ ಹೇಳುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿಯೂ ಇದನ್ನು ಮಾಡುವ ವಿಧಾನ ಇರಬಹುದು.

ಹೋಗುತ್ತಿರುವಾಗ

"ಅವರ ಕಡೆಯಿಂದ ಹೋಗುತ್ತಿರುವಾಗ"

ಅವರು ಇನ್ನೂ ಜೋರಾಗಿ ಕೂಗಿಕೊಂಡರು

"ಕುರುಡರು ಇನ್ನೂ ಹೆಚ್ಚಾಗಿ ಕೂಗಿಕೊಂಡರು" ಅಥವಾ "ಅವರ ಕೂಗಾಟ ಜೋರಾಯಿತು"

Matthew 20:32

ಯೇಸು ಕ್ರಿಸ್ತನು ಇಬ್ಬರು ಕುರುಡರನ್ನು ಗುಣಪಡಿಸಿದ ದಾಖಲೆಯು ಇಲ್ಲಿ ಮುಂದುವರೆಯುತ್ತಿದೆ.

ಅವರನ್ನು ಕರೆದನು

ಇಬ್ಬರು ಕುರುಡರನ್ನು ಕರೆದನು

ಬಯಕೆ

"ಅಗತ್ಯತೆ"

ನಮ್ಮ ಕಣ್ಣುಗಳು ತೆರೆಯಲ್ಪಡಬೇಕು

"ನಾವು ನೋಡುವಂತೆ ನೀನು ನಮಗೆ ಗುಣಪಡಿಸಬೇಕು" ಅಥವಾ "ನಮಗೆ ಕಣ್ಣು ಕಾಣಿಸಬೇಕು" (ನಾಣ್ಣುಡಿ ಮತ್ತು ಎಲಿಪ್ಸಿಸ್ ನೋಡಿರಿ)

ಕರುಣೆಯನ್ನು ತೋರಿದರು

"ಕರುಣೆ ತೋರುವುದು" ಅಥವಾ "ಅವರನ್ನು ಕರುಣಿಸುವುದು"