Matthew 17

Matthew 17:1

ಯೇಸು ಕ್ರಿಸ್ತನು ತನ್ನ ಶಿಷ್ಯರಲ್ಲಿ ಮೂವರಿಗೆ ತನ್ನ ಪ್ರಭಾವವನ್ನು ತೋರಿಸಿದನು.

ಪೇತ್ರ, ಯಾಕೋಬ ಮತ್ತು ಅವನ ಸಹೋದರನಾದ ಯೋಹಾನನು

"ಪೇತ್ರ, ಯಾಕೋಬ ಮತ್ತು ಯಾಕೋಬನ ತಮ್ಮನಾದ ಯೋಹಾನನು"

ಅವನು ರೂಪಾಂತರ ಹೊಂದಿದನು

"ದೇವರು ಸಂಪೂರ್ಣವಾಗಿ ಯೇಸು ಕ್ರಿಸ್ತನ ರೂಪವನ್ನು ಬದಲಾಯಿಸಿದನು" ಅಥವಾ (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ಬಟ್ಟೆಗಳು

"ವಸ್ತ್ರಗಳು"

ಬೆಳಕಿನ ಹಾಗೆ ಬಿಳುಪಾದವು

"ಬೆಳಕಿನ ಹಾಗೆ ಹೊಳೆಯುತ್ತಿದ್ದವು" (ಉಪಮೆ ನೋಡಿರಿ)

Matthew 17:3

ಯೇಸು ಕ್ರಿಸ್ತನು ತನ್ನ ಶಿಷ್ಯರಲ್ಲಿ ಮೂವರಿಗೆ ತನ್ನ ಪ್ರಭಾವವನ್ನು ತೋರಿಸಿದ್ದು ಇಲ್ಲಿಯೂ ಮುಂದುವರೆಯುತ್ತಿದೆ.

ನೋಡಿರಿ

ಈ ಪದವು ಮುಂಬರುವ ಆಶ್ಚರ್ಯಕರವಾದ ಮಾಹಿತಿಯ ಕಡೆಗೆ ಗಮನ ಕೊಡುವಂತೆ ಸೂಚಿಸುತ್ತದೆ.

ಅವರಿಗೆ

ಯೇಸುವಿನೊಂದಿಗಿದ್ದ ಶಿಷ್ಯರಿಗೆ

ಉತ್ತರಿಸಿದನು ಮತ್ತು ಹೇಳಿದ್ದೇನೆಂದರೆ

"ಹೇಳಿದನು." ಪೇತ್ರನು ಪ್ರಶ್ನೆಗೆ ಉತ್ತರಿಸುತ್ತಿಲ್ಲ.

ನಾವು ಇಲ್ಲಿರುವುದು ಒಳ್ಳೇಯದೇ

ಅರ್ಥಗಳು ಏನಾಗಿರುವವೆಂದರೆ: ೧) "ಶಿಷ್ಯರಾದ ನಾವು ಮೋಶೆ, ಎಲೀಯ ಮತ್ತು ನಿನ್ನೊಂದಿಗೆ ಇಲ್ಲಿಯೇ ಇರುವುದು ಒಳ್ಳೇಯದೇ" ಅಥವಾ ೨) "ಮೋಶೆ, ಎಲೀಯ, ನೀನು ಮತ್ತು ನಿನ್ನ ಶಿಷ್ಯರಾದ ನಾವೆಲ್ಲರೂ ಇಲ್ಲಿ ಸೇರಿರುವುದು ಒಳ್ಳೇಯದೇ ಆಗಿದೆ" (ವಿಶೇಷವಾದದ್ದು ನೋಡಿರಿ)

ಆಶ್ರಯಗಳು

ಅರ್ಥಗಳು ಏನೆಂದರೆ: ೧) ಆರಾಧನೆಗೆ ಜನರು ಬರುವ ಸ್ಥಳಗಳು (ಯುಡಿಬಿ ನೋಡಿರಿ) ಅಥವಾ ೨) ಜನರು ಮಲಗಲು ತಾತ್ಕಾಲಿಕವಾದ ಸ್ಥಳಗಳು.

Matthew 17:5

ಯೇಸು ಕ್ರಿಸ್ತನು ತನ್ನ ಶಿಷ್ಯರಲ್ಲಿ ಮೂವರಿಗೆ ತನ್ನ ಪ್ರಭಾವವನ್ನು ತೋರಿಸಿದ್ದು ಇಲ್ಲಿಯೂ ಮುಂದುವರೆಯುತ್ತಿದೆ.

ನೋಡಿರಿ

ಮುಂಬರುವ ಆಶ್ಚರ್ಯಕರವಾದ ಮಾಹಿತಿಯ ಕಡೆಗೆ ಗಮನ ಕೊಡಬೇಕು ಎಂಬದನ್ನು ಇದು ಸೂಚಿಸುತ್ತದೆ.

ಅವರು ಅಲ್ಲಿಯೇ ಬೋರಲು ಬಿದ್ದರು

"ಶಿಷ್ಯರು ಅಲ್ಲಿಯೇ ನೆಲದ ಮೇಲೆ ಬೋರಲು ಬಿದ್ದರು"

Matthew 17:9

ಯೇಸು ಕ್ರಿಸ್ತನು ತನ್ನ ಶಿಷ್ಯರಲ್ಲಿ ಮೂವರಿಗೆ ತನ್ನ ಪ್ರಭಾವವನ್ನು ತೋರಿಸಿದ್ದು ಇಲ್ಲಿಯೂ ಮುಂದುವರೆಯುತ್ತಿದೆ.

ಅವರು

"ಯೇಸು ಕ್ರಿಸ್ತನು ಮತ್ತು ಆತನ ಶಿಷ್ಯರು"

Matthew 17:11

ಯೇಸು ಕ್ರಿಸ್ತನು ತನ್ನ ಶಿಷ್ಯರಲ್ಲಿ ಮೂವರಿಗೆ ತನ್ನ ಪ್ರಭಾವವನ್ನು ತೋರಿಸಿದ್ದು ಇಲ್ಲಿಯೂ ಮುಂದುವರೆಯುತ್ತಿದೆ. ಯೇಸು ೧೭:೧೦ರಲ್ಲಿ ಪ್ರಶ್ನೆಗೆ ಉತ್ತರವನ್ನು ಕೊಡುತ್ತಿದ್ದಾನೆ.

ಎಲ್ಲವನ್ನೂ ಮೊದಲಿನ ಸ್ಥಿತಿಗೆ ತರುವೆನು

"ಕಾರ್ಯಗಳನ್ನು ಕ್ರಮಪಡಿಸುವೆನು"

ಅವರು... ಅವರು... ಅವರು

ಅರ್ಥಗಳು ಏನಾಗಿರುವವೆಂದರೆ: ೧) ಯೆಹೂದ್ಯ ನಾಯಕರು (ಯುಡಿಬಿ ನೋಡಿರಿ) ಅಥವಾ ೨) ಯೆಹೂದ್ಯ ಜನರೆಲ್ಲರೂ.

Matthew 17:14

ಯೇಸು ಕ್ರಿಸ್ತನು ದುರಾತ್ಮಪೀಡಿತನಾಗಿದ್ದ ಹುಡುಗನಿಗೆ ಸ್ವಸ್ಥಮಾಡಿದ ದಾಖಲೆಯನ್ನು ಇಲ್ಲಿ ನೋಡಬಹುದಾಗಿದೆ.

ಅವನು ಮೂರ್ಛೆಹೋಗುತ್ತಿದ್ದನು

ಕೆಲವೊಮ್ಮೆ ಪ್ರಜ್ಞೆ ತಪ್ಪುತ್ತಿದ್ದನು ಮತ್ತು ಕೆಲವೊಮ್ಮೆ ನಿಯಂತ್ರಿಸಲು ಆಗುತ್ತಿರಲಿಲ್ಲ

Matthew 17:17

ಯೇಸು ಕ್ರಿಸ್ತನು ದುರಾತ್ಮಪೀಡಿತನಾಗಿದ್ದ ಹುಡುಗನಿಗೆ ಸ್ವಸ್ಥಮಾಡಿದ ದಾಖಲೆಯನ್ನು ಇಲ್ಲಿ ನೋಡಬಹುದಾಗಿದೆ.

ಇನ್ನೂ ಎಷ್ಟು ಕಾಲ ನಾನು ನಿಮ್ಮೊಂದಿಗೆ ಇರಬೇಕು?

ನಾನು ಎಷ್ಟು ಕಾಲ ನಿಮ್ಮನ್ನು ಸಹಿಸಿಕೊಳ್ಳಬೇಕು?

ಯೇಸು ಜನರ ವಿಷಯದಲ್ಲಿ ಸಂತೋಷವಿಲ್ಲದವನಾಗಿದ್ದಾನೆ. "ನಿಮ್ಮೊಂದಿಗೆ ನನಗೆ ಸಕಾಯಿತು! ನಿಮ್ಮ ಅಪನಂಬಿಕೆ ಮತ್ತು ಭ್ರಷ್ಟಾಚಾರದಿಂದ ನಾನು ಸುಸ್ತಾಗಿದ್ದೇನೆ!" (ಆಲಂಕಾರಿಕ ಪ್ರಶ್ನೆ ನೋಡಿರಿ)

Matthew 17:19

ಯೇಸು ಕ್ರಿಸ್ತನು ದುರಾತ್ಮಪೀಡಿತನಾಗಿದ್ದ ಹುಡುಗನಿಗೆ ಸ್ವಸ್ಥಮಾಡಿದ ದಾಖಲೆಯನ್ನು ಇಲ್ಲಿ ನೋಡಬಹುದಾಗಿದೆ.

ನಾವು

ಹೇಳುವವರು, ಕೇಳುವವರು (ಒಳಗೊಂಡಿರುವುದು ನೋಡಿರಿ)

ಓಡಿಸಿರಿ

"ದುರಾತ್ಮನು ಹೊರಗೆ ಬರುವಂತೆ ಮಾಡುವುದು"

ನಿಮಗೆ ಅಸಾಧ್ಯವಾದದ್ದು ಯಾವುದೂ ಇರುವುದಿಲ್ಲ

"ನೀವು ಏನು ಬೇಕಾದರೂ ಮಾಡಬಹುದು" (ಲಿಟೋಟಸ್ ನೋಡಿರಿ)

Matthew 17:22

ಯೇಸು ಕ್ರಿಸ್ತನು ಗಲಿಲಾಯದಲ್ಲಿ ತನ್ನ ಶಿಷ್ಯರಿಗೆ ಬೋಧಿಸುವುದನ್ನು ಮುಂದುವರೆಸುತ್ತಿದ್ದಾನೆ.

ಅವರು ಉಳಿದರು

"ಯೇಸು ಕ್ರಿಸ್ತನು ಮತ್ತು ಶಿಷ್ಯರು ಉಳಿದಿದ್ದರು"

ಮನುಷ್ಯಕುಮಾರನ್ನು ಒಪ್ಪಿಸಲ್ಪಡುವನು

"ಯಾರೋ ಮನುಷ್ಯಕುಮಾರನನ್ನು ಒಪ್ಪಿಸುವರು" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ಅವರು ಆತನನ್ನು ಕೊಲ್ಲುವರು

"ಅಧಿಕಾರಿಗಳು ಮನುಷ್ಯಕುಮಾರನನ್ನು ಕೊಲ್ಲುವರು"

ಆತನು ಎಬ್ಬಿಸಲ್ಪಡುವನು

"ದೇವರು ಅವನನ್ನು ಎಬ್ಬಿಸುವನು" ಅಥವಾ "ಆತನು ಮತ್ತೆ ಬದುಕಿಕೊಳ್ಳುವನು" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

Matthew 17:24

ಯೇಸು ಕ್ರಿಸ್ತನು ದೇವಾಲಯಕ್ಕೆ ಸುಂಕ ಕಟ್ಟಿದ ದಾಖಲೆಯನ್ನು ಪ್ರಾರಂಭಿಸುತ್ತದೆ.

ಯಾವಾಗ ಅವರು

ಯೇಸು ಮತ್ತು ಆತನ ಶಿಷ್ಯರು

ಅರ್ಧ ರೂಪಾಯಿ ಸುಂಕ

ಯೆಹೂದ್ಯ ಪುರುಷರೆಲ್ಲರೂ ಕರ್ತನಿಗೆ ಕಾಣಿಕೆಯಾಗಿ ಸುಂಕವನ್ನು ಕೊಡುತ್ತಿದ್ದರು (ಸತ್ಯವೇದಾನುಸಾರವಾದ ಹಣ ನೋಡಿರಿ)

ಮನೆ

ಯೇಸು ಕ್ರಿಸ್ತನು ಇರುತ್ತಿದ್ದ ಮನೆ

ಭೂಲೋಕದಲ್ಲಿರುವ ಅರಸರು

ಹುದುವಾಗಿ ನಾಯಕರು

ಸೇವಕರು

ಅಧಿಕಾರ ಅಥವಾ ಅರಸನ ಅಧೀನದಲ್ಲಿರುವವರು

Matthew 17:26

ಯೇಸು ಕ್ರಿಸ್ತನು ದೇವಾಲಯಕ್ಕೆ ಸುಂಕ ಕಟ್ಟಿದ ದಾಖಲೆಯನ್ನು ಪ್ರಾರಂಭಿಸುತ್ತದೆ.

ಸೇವಕರು

ಅಧಿಕಾರಿ ಅಥವಾ ಅರಸನ ಅಧೀನದಲ್ಲಿರುವವರು

ಅದರ ಬಾಯಿ

"ಮೀನಿನ ಬಾಯಿ"

ತೆಗೆದುಕೋ

"ರೂಪಾಯಿಯನ್ನು ತೆಗೆದುಕೋ"