Matthew 14

Matthew 14:1

ಇಲ್ಲಿ ವಿವರಿಸಲಾಗಿರುವ ಘಟನೆಗೂ ಮೊದಲು ೧೨ರಲ್ಲಿರುವ ಘಟನೆಗಳು ನಡೆದಿವೆ.

ಆ ಸಮಯದಲ್ಲಿ

"ಆಗಿನ ಕಾಲದಲ್ಲಿ" ಅಥವಾ "ಯೇಸು ಕ್ರಿಸ್ತನು ಗಲಿಲಾಯದಲ್ಲಿ ಸೇವೆಯನ್ನು ಮಾಡುತ್ತಿದ್ದಾಗ."

ಅರಸನಾದ ಹೆರೋದನು

ಇಸ್ರಾಯೇಲಿನ ಕಾಲು ಭಾಗದ ಮೇಲೆ ಆಳ್ವಿಕೆ ಮಾಡುತ್ತಿದ್ದ ಉಪರಾಜನಾದ ಹೆರೋದನು (ಹೆಸರುಗಳ ಭಾಷಾಂತರ ನೋಡಿರಿ)

ಯೇಸುವಿನ ಸುದ್ದಿಯನ್ನು ಕೇಳಿದನು

"ಯೇಸುವಿನ ವಿಷಯವನ್ನು ಕೇಳಿದನು" ಅಥವಾ "ಯೇಸುವಿನ ಪ್ರಖ್ಯಾತಿಯನ್ನು ಕೇಳಿ ದನು"

ಅವನು ಹೇಳಿದನು

"ಹೆರೋದನು ಹೇಳಿದನು"

Matthew 14:3

ಹೆರೋದನು ಸ್ನಾನಿಕನಾದ ಯೋಹಾನನನ್ನು ಹೇಗೆ ಕೊಂದನು ಎಂಬ ದಾಖಲೆಯನ್ನು ಇದು ತಿಳಿಸುತ್ತದೆ.

ಹೆರೋದನು ಯೋಹಾನನನ್ನು ಹಿಡಿಸಿದನು, ಅವನಿಗೆ ಬೇಡಿಗಳನ್ನು ಹಾಕಿಸಿ ಸೆರೆಮನೆಯಲ್ಲಿರಿಸಿದನು

ಬಹುತೇಕವಾಗಿ ಈ ಕಾರ್ಯಗಳನ್ನು ಮಾಡುವಂತೆ ಹೆರೋದನು ಬೇರೆಯವರಿಗೆ ಆಜ್ಞಾಪಿಸಿರಬಹುದು. (ಮೆಟಾನಿಮೈ ನೋಡಿರಿ)

ಹೆರೋದನು ಯೋಹಾನನನ್ನು ಹಿಡಿಸಿದನು

"ಹೆರೋದನು ಯೋಹಾನನನ್ನು ಬಂಧಿಸಿದ್ದನು"

ಯಾಕೆಂದರೆ ಯೋಹಾನನು ಅವನಿಗೆ, "ಆಕೆಯನ್ನು ನೀನು ಹೆಂಡತಿಯನ್ನಾಗಿ ತೆಗೆದುಕೊಳ್ಳುವುದು ಯುಕ್ತವಲ್ಲ" ಎಂದು ಹೇಳುತ್ತಿದ್ದನು

"ಯಾಕೆಂದರೆ ಯೋಹಾನನು, ನೀನು ಅವಳನ್ನು ಹೆಂಡತಿಯನ್ನಾಗಿ ತೆಗೆದುಕೊಳ್ಳುವುದು ನ್ಯಾಯವಲ್ಲ ಎಂದು ಅವನಿಗೆ ಹೇಳುತ್ತಿದ್ದನು." (ಭಾಷಣದ ಹೇಳಿಕೆಗಳು ನೋಡಿರಿ)

ಯಾಕೆಂದರೆ ಯೋಹಾನನು ಅವನಿಗೆ ಹೇಳಿದ್ದನು

"ಯಾಕೆಂದರೆ ಯೋಹಾನನು ಹೆರೋದನಿಗೆ ಹೇಳುತ್ತಲೇ ಇದ್ದನು" (ಯುಡಿಬಿ ನೋಡಿರಿ).

ನ್ಯಾಯವಲ್ಲ

ಹೆರೋದನು ಹೆರೋದ್ಯಳನ್ನು ಮದುವೆ ಮಾಡಿಕೊಂಡಾಗ ಫಿಲಿಪ್ಫನು ಇನ್ನೂ ಬದುಕಿದ್ದನು ಆದರೆ ಮೋಶೆಯ ಧಮ್ರಶಾಸ್ತ್ರವು ಸಹ ಸಹೋದರನ ವಿಧವೆಯ ಮದುವೆ ಮಾಡುಕೊಳ್ಳುವದನ್ನು ನಿಷೇದಿಸಿತ್ತು.

Matthew 14:6

ಹೆರೋದನು ಸ್ನಾನಿಕನಾದ ಯೋಹಾನನನ್ನು ಹೇಗೆ ಕೊಂದನು ಎಂಬ ದಾಖಲೆಯನ್ನು ಇಲ್ಲಿ ಮುಂದುವರೆಯುವುದನ್ನು ನಾವು ನೋಡಬಹುದಾಗಿದೆ.

ಇದರ ನಡುವೆ

ಹುಟ್ಟುಹಬ್ಬದ ಆಚರಣೆಯ ಭಾಗವಹಿಸಲು ಬಂದಿದ್ದ ಅತಿಥಿಗಳ ಮಧ್ಯದಲ್ಲಿ (ಸ್ಪಷ್ಟ ಮತ್ತು ಅಸ್ಪಷ್ಟ)

Matthew 14:8

ಹೆರೋದನು ಸ್ನಾನಿಕನಾದ ಯೋಹಾನನನ್ನು ಹೇಗೆ ಕೊಂದನು ಎಂಬ ದಾಖಲೆಯನ್ನು ಇಲ್ಲಿ ಮುಂದುವರೆಯುವುದನ್ನು ನಾವು ನೋಡಬಹುದಾಗಿದೆ.

ಆಕೆಯ ತಾಯಿಯ ಸೂಚನೆಯ ನಂತರ

ಪರ್ಯಾಯ ಭಾಷಾಂತರ: "ಆಕೆಯ ತಾಯಿಯು ಆಕೆಗೆ ಸೂಚನೆಯನ್ನು ಕೊಟ್ಟ ನಂತರ." (ಸಕ್ರಿಯ ಅಥವಾ ನಿಷ್ಕ್ರಿಯ)

ಸೂಚನೆ ಕೊಟ್ಟಿದ್ದನು

"ಸೂಚನೆಗಳು ಹೇಳಲಾಗಿದ್ದವು"

ಏನನ್ನು ಕೇಳಬೇಕೆಂಬದಾಗಿ

ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ಏನನ್ನು ಬೇಡಿಕೊಳ್ಳಬೇಕು." ಇವುಗಳು ಮೂಲ ಗ್ರೀಕ್ ಭಾಷೆಯಲ್ಲಿಲ್ಲ. ಇವುಗಳನ್ನು ವಚನಗಳಲ್ಲಿ ಸೇರಿಸಿಕೊಳ್ಳಲಾಗಿದೆ. (ಸ್ಪಷ್ಟ ಮತ್ತು ಅಸ್ಪಷ್ಟ ನೋಡಿರಿ)

ಆಕೆಯು ಹೇಳಿದ್ದೇನೆಂದರೆ

"ಆಕೆ" ಹೆರೋದ್ಯಳ ಮಗಳನ್ನು ಸೂಚಿಸುತ್ತದೆ.

ಪರಾತಿನಲ್ಲಿ

"ದೊಡ್ಡ ತಟ್ಟೆಯಲ್ಲಿ"

ಆಕೆಯ ಮನವಿಯನ್ನು ಕೇಳಿ ಅರಸನು ಬಹಳವಾಗಿ ನೊಂದುಕೊಂಡನು

"ಮನವಿಯು ಅರಸನ ಬೇಸರಿಕೆಗೆ ಕಾರಣವಾಯಿತು." (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ಅರಸನು

ಉಪರಾಜನಾದ ಹೆರೋದನು (೧೪:೧).

Matthew 14:10

ಹೆರೋದನು ಸ್ನಾನಿಕನಾದ ಯೋಹಾನನನ್ನು ಹೇಗೆ ಕೊಂದನು ಎಂಬ ದಾಖಲೆಯನ್ನು ಇಲ್ಲಿ ಮುಂದುವರೆಯುವುದನ್ನು ನಾವು ನೋಡಬಹುದಾಗಿದೆ.

ಅವನ ತಲೆಯನ್ನು ಪರಾತಿನಲ್ಲಿ ತಂದು, ಅವಳಿಗೆ ಕೊಡಲಾಯಿತು

"ಯಾರೋಒಬ್ಬರು ಆಕೆಯ ತಲೆಯನ್ನು ಪರಾತಿನಲ್ಲಿ ತಂದರು ಮತ್ತು ಅವಳಿಗೆ ಕೊಟ್ಟರು." (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ಪರಾತಿನಲ್ಲಿ

ಇದು ದೊಡ್ಡ ತಟ್ಟೆಯಾಗಿದೆ.

ಹುಡುಗಿ

ಮದುವೆಯಾಗದ ಯೌವನಸ್ಥಳಾಗಿರುವ ಹುಡುಗಿ ಎಂದು ಹೇಳಿರಿ.

ಆತನ ಶಿಷ್ಯರು

"ಯೋಹಾನನ ಶಿಷ್ಯರು"

ಮೃತದೇಹ

"ಮೃತಶರೀರ"

ಅವರು ಹೋಗಿ ಯೇಸುವಿಗೆ ಹೇಳಿದನು

"ಯೋಹಾನನ ಶಿಷ್ಯರು ಯೇಸುವಿನ ಬಳಿಗೆ ಹೋಗಿ ಸ್ನಾನಿಕನಾದ ಯೋಹಾನನಿಗೆ ನಡೆದ ಸಂಗತಿಗಳನ್ನು ಹೇಳಿದರು" (ಸ್ಪಷ್ಟ ಮತ್ತು ಅಸ್ಪಷ್ಟ ನೋಡಿರಿ)

Matthew 14:13

ಹೆರೋದನು ಸ್ನಾನಿಕನಾದ ಯೋಹಾನನನ್ನು ಹೇಗೆ ಕೊಂದನು ಎಂಬ ದಾಖಲೆಯನ್ನು ಇಲ್ಲಿ ಮುಂದುವರೆಯುವುದನ್ನು ನಾವು ನೋಡಬಹುದಾಗಿದೆ.

ಇದನ್ನು ಕೇಳಿದನು

"ಯೋಹಾನನಿಗೆ ಸಂಭವಿಸಿದ್ದನ್ನು ಕೇಳಿದನು" ಅಥವಾ "ಯೋಹಾನ ವಿಷಯವನ್ನು ಕೇಳಿದನು." (ಸ್ಪಷ್ಟ ಮತ್ತು ಅಸ್ಪಷ್ಟ ನೋಡಿರಿ)

ಅವನು ದೂರಸರಿದನು

ಅವನು ಹೊರಟುಹೋದನು ಅಥವಾ ಜನರನ್ನು ಸರಿಸಿಕೊಂಡು ಹೋದನು

ಅಲ್ಲಿಂದ

"ಆ ಸ್ಥಳದಿಂದ"

ಜನರು ಇದರ ಬಗ್ಗೆ ಕೇಳಿಸಿಕೊಂಡಾಗ

"ಅವರು ಹೋಗಿರುವದರ ಬಗ್ಗೆ ಜನರಿಗೆ ಗೊತ್ತಾದಾಗ" (ಯುಡಿಬಿ ನೋಡಿರಿ) ಅಥವಾ "ಆತನು ಇಲ್ಲ ಎಂಬದು ಜನರಿಗೆ ಗೊತ್ತಾದಾಗ"

ಜನರ ಗುಂಪುಗಳು

"ಜನರ ಗುಂಪುಗಳು" ಅಥವಾ "ಜನರು"

ನಂತರ ಯೇಸು ಅವರ ಎದುರಿಗೆ ಬಂದನು ಮತ್ತು ಜನರ ದೊಡ್ಡ ಗುಂಪನ್ನು ನೋಡಿದನು

"ಯೇಸು ದಂಡೆಗೆ ಬಂದಾಗ, ಜನರ ದೊಡ್ಡ ಗುಂಪನ್ನು ನೋಡಿದನು."

Matthew 14:15

ಯೇಸು ಕ್ರಿಸ್ತನು ತನ್ನ ಹಿಂದೆ ಬಂದಿದ್ದ ಜನರಿಗೆ ಆಹಾರವನ್ನು ಒದಗಿಸಿದನು.

ಶಿಷ್ಯರು ಆತನ ಬಳಿಗೆ ಬಂದರು

"ಯೇಸುವಿನ ಶಿಷ್ಯರು ಆತನ ಬಳಿಗೆ ಬಂದರು"

Matthew 14:16

ಯೇಸು ಕ್ರಿಸ್ತನು ತನ್ನ ಹಿಂದೆ ಬಂದಿದ್ದ ಜನರಿಗೆ ಆಹಾರವನ್ನು ಒದಗಿಸಿದನು.

ಅವರಿಗೆ ಯಾವ ಅಗತ್ಯತೆಯೂ ಇರಲಿಲ್ಲ

"ಗುಂಪಿನಲ್ಲಿದ್ದ ಜನರಿಗೆ ಯಾವ ಅಗತ್ಯತೆಯೂ ಇರಲಿಲ್ಲ"

ನೀವೇ ಅವರಿಗೆ ಕೊಡಿರಿ

"ನೀವೇ" ಎಂಬ ಪದವು ಬಹುವಚನವಾಗಿದ್ದು, ಶಿಷ್ಯರನ್ನು ಸೂಚಿಸುತ್ತದೆ. (ನೀನು ವಿಧಾನಗಳನ್ನು ನೋಡಿರಿ)

ಅವರು ಆತನಿಗೆ ಹೇಳಿದರು

"ಶಿಷ್ಯರು ಯೇಸುವಿಗೆ ಹೇಳಿದರು"

ಐದು ರೊಟ್ಟಿ ಮತ್ತು ಎರಡು ಮೀನುಗಳು

"೫ ರೊಟ್ಟಿ ಮತ್ತು ೨ ಮೀನುಗಳು" (ಭಾಷಾಂತರ ಸಂಖ್ಯೆ ನೋಡಿರಿ)

ಅವುಗಳನ್ನು ನನ್ನ ಬಳಿಗೆ ತನ್ನಿರಿ

"ರೊಟ್ಟಿ ಮತ್ತು ಮೀನುಗಳನ್ನು ನನ್ನ ಬಳಿಗೆ ತನ್ನಿರಿ"

Matthew 14:19

ಯೇಸು ಕ್ರಿಸ್ತನು ತನ್ನ ಹಿಂದೆ ಬಂದಿದ್ದ ಜನರಿಗೆ ಆಹಾರವನ್ನು ಒದಗಿಸಿದನು.

ಕುಳಿತುಕೊಳ್ಳಿರಿ

ಅಥವಾ "ಒರಗಿಕೊಳ್ಳಿರಿ." ಜನರು ನಿಮ್ಮ ಸಂಸ್ಕೃತಿಯಲ್ಲಿ ಸಾಮಾನ್ಯವಾಗಿ ತಿನ್ನುವಾಗ ಯಾವ ರೀತಿ ಇರುತ್ತಾರೋ ಅದನ್ನು ಬಳಸಿರಿ.

ತೆಗೆದುಕೊಂಡನು

"ಕೈಗಳಲ್ಲಿ ಹಿಡಿದುಕೊಂಡನು." ಆತನು ಅವುಗಳನ್ನು ಕದ್ದುಕೊಳ್ಳಲ್ಲಿಲ್ಲ. (ನಾಣ್ಣುಡಿ ನೋಡಿರಿ)

ರೊಟ್ಟಿಗಳು

"ರೊಟ್ಟಿಯ ಚೂರುಗಳು" ಅಥವಾ "ಪೂರ್ತಿ ರೊಟ್ಟಿ"

ಮತ್ತು ನೋಡುತ್ತಾ

ಇದರ ಅರ್ಥ ೧) "ನೋಡುತ್ತಿರುವಾಗ" ಅಥವಾ ೨) "ನೋಡಿದ ನಂತರ"

ಅವರು ತೆಗೆದುಕೊಂಡರು

"ಶಿಷ್ಯರು ಅವುಗಳನ್ನು ತೆಗೆದುಕೊಂಡರು"

ತಿಂದವರು

"ರೊಟ್ಟಿ ಮತ್ತು ಮೀನು ತಿಂದವರು" (ಸ್ಪಷ್ಟ ಮತ್ತು ಅಸ್ಪಷ್ಟ ನೋಡಿರಿ)

Matthew 14:22

ಯೇಸು ಕ್ರಿಸ್ತನು ನೀರಿನ ಮೇಲೆ ನಡೆದನು.

ಕೂಡಲೇ

"ಯೇಸು ಕ್ರಿಸ್ತನು ಐದು ಸಾವಿರ ಜನರಿಗೆ ಊಟ ಕೊಟ್ಟ ನಂತರ,"

ಸಂಜೆಯಾದಾಗ

"ಸಂಜೆಯಾದ ಮೇಲೆ" ಅಥವಾ "ಕತ್ತಲಾದಾಗ"

ತೆರೆಗಳ ನಿಮಿತ್ತ ಬಹುತೇಕ ನಿಯಂತ್ರಣವೇ ಇರಲ್ಲಿಲ್ಲ

"ತೆರೆಗಳು ದೋಣಿಗೆ ವಿರುದ್ಧವಾಗಿ ಬಡಿಯುತ್ತಿದ್ದವು."

Matthew 14:25

ಯೇಸು ಕ್ರಿಸ್ತನು ನೀರಿನ ಮೇಲೆ ನಡೆದನು.

ಅತನು ಸಮುದ್ರದ ಮೇಲೆ ನಡೆಯುತ್ತಾ ಬಂದನು

"ಯೇಸು ನೀರಿನ ಮೇಲೆ ನಡೆಯುತ್ತಾ ಬಂದನು"

ಅವರು ಭಯಪಟ್ಟರು

"ಶಿಷ್ಯರಿಗೆ ಬಹಳ ಭಯವಾಯಿತು"

ಭೂತ

ಮೃತಪಟ್ಟಿರುವ ವ್ಯಕ್ತಿಯ ದೇಹವನ್ನು ಬಿಟ್ಟಿರುವ ಆತ್ಮ

Matthew 14:28

ಯೇಸು ಕ್ರಿಸ್ತನು ನೀರಿನ ಮೇಲೆ ನಡೆಯುತ್ತಿದ್ದಾನೆ.

ಪೇತ್ರನು ಆತನಿಗೆ ಉತ್ತರಿಸಿದ್ದೇನೆಂದರೆ

"ಪೇತ್ರನು ಯೇಸುವಿಗೆ ಉತ್ತರಿಸಿದ್ದೇನೆಂದರೆ"

Matthew 14:31

ಯೇಸು ಕ್ರಿಸ್ತನು ನೀರಿನ ಮೇಲೆ ನಡೆಯುತ್ತಿದ್ದಾನೆ.

"ಅಲ್ಪವಿಶ್ವಾಸಿಯೇ"

೬:೩೦ರಲ್ಲಿ ಹೇಗೆ ಭಾಷಾಂತರ ಮಾಡಿರುವಿರೆಂದು ನೋಡಿರಿ.

ಯಾಕೆ ಸಂದೇಹಪಟ್ಟೆ

"ನೀನು ಸಂದೇಹಪಡಬಾರದಾಗಿತ್ತು." (ಆಲಂಕಾರಿಕ ಪ್ರಶ್ನೆ ನೋಡಿರಿ)

Matthew 14:34

ಯೇಸು ಕ್ರಿಸ್ತನು ಜನಿಸಿದ ಸ್ಥಳದಿಂದ ಬಂದು ನಂತರ ಗಲಿಲಾಯದಲ್ಲಿ ಸೇವೆಯನ್ನು ಮುಂದುವರೆಸಿದನು.

ಅವರು ನದಿಯನ್ನು ದಾಟಿದ ನಂತರ

"ಯೇಸು ಕ್ರಿಸ್ತನು ಮತ್ತು ಆತನ ಶಿಷ್ಯರು ನದಿಯನ್ನು ದಾಟಿದ ನಂತರ"

ಗೆನೆಸರೇತ್

ಗಲಿಲಾಯದ ಸಮುದ್ರದ ಉತ್ತರಪಶ್ಚಿಮದಲ್ಲಿರುವ ಸಣ್ಣ ಪಟ್ಟಣ (ಹೆಸರುಗಳ ಭಾಷಾಂತರ ನೋಡಿರಿ)

ಅವರು ಸಂದೇಶವನ್ನು ಕಳುಹಿಸಿದರು

"ಆ ಪ್ರದೇಶದ ಜನರು ಸಂದೇಶವನ್ನು ಕಳುಹಿಸಿದರು"

ಅವರು ಆತನನ್ನು ಬೇಡಿಕೊಂಡರು

"ಅನಾರೋಗ್ಯದಲ್ಲಿರುವವರು ಆತನನ್ನು ಬೇಡಿಕೊಂಡರು"

ಬಟ್ಟೆ

"ವಸ್ತ್ರ" ಅಥವಾ "ಆತನು ಧರಿಸಿಕೊಂಡಿದ್ದ ಉಡುಪು"