Matthew 13

Matthew 13:1

ಈ ಅಧ್ಯಾಯದಲ್ಲಿ, ಯೇಸು ಕ್ರಿಸ್ತನು ಸಮುದ್ರದ ಬಳಿಯಿದ್ದ ದೋಣಿಯನ್ನು ಕುಳಿತುಕೊಂಡನು ಮತ್ತು ದೊಡ್ಡ ಜನರ ಗುಂಪಿಗೆ ದೇವರ ರಾಜ್ಯವು ಯಾವ ರೀತಿ ಇದೆ ಎಂಬದನ್ನು ವಿವಿಧ ಸಾಮ್ಯಗಳ ಮೂಲಕ ವಿವರಿಸುತ್ತಿದ್ದಾನೆ.

ಆ ದಿನದಲ್ಲಿ

ಈ ಘಟನೆಗಳು ಹಿಂದಿನ ಅಧ್ಯಾಯದಲ್ಲಿ ಘಟನೆಗಳು ನಡೆದ ದಿನದಲ್ಲಿಯೇ ನಡೆದವು.

ಮನೆಯಿಂದ ಹೊರಗೆ

ಯೇಸು ಯಾರ ಮನೆಯಲ್ಲಿದ್ದನು ಎಂಬದನ್ನು ಹೇಳಲಾಗಿಲ್ಲ.

ದೋಣಿಯೊಳಗೆ ಹತ್ತಿದನು. ಇದು ಬಹುಶಃ ಮೀನು ಹಿಡಿಯಲು ಅವಕಾಶವಿರುವ ತೆರೆದ ದೋಣಿಯಾಗಿರಬಹುದು.

Matthew 13:3

ಯೇಸು ಕ್ರಿಸ್ತನು ದೊಡ್ಡ ಜನರ ಗುಂಪಿಗೆ ದೇವರ ರಾಜ್ಯವು ಯಾವ ರೀತಿ ಇದೆ ಎಂಬದನ್ನು ವಿವಿಧ ಸಾಮ್ಯಗಳ ಮೂಲಕ ವಿವರಿಸುತ್ತಿದ್ದಾನೆ.

ಯೇಸು ಕ್ರಿಸ್ತನು ಸಾಮ್ಯಗಳ ಮೂಲಕ ಅವರಿಗೆ ಅನೇಕ ವಿಷಯಗಳನ್ನು ಹೇಳಿದನು

"ಯೇಸು ಕ್ರಿಸ್ತನು ಸಾಮ್ಯಗಳ ಮೂಲಕ ಅನೇಕ ವಿಷಯಗಳನ್ನು ಅವರಿಗೆ ತಿಳಿಸಿದನು"

ಅವರಿಗೆ

ಗುಂಪಿನಲ್ಲಿರುವ ಜನರಿಗೆ

ನೋಡಿರಿ

ಪರ್ಯಾಯ ಭಾಷಾಂತರಗಳು: "ವೀಕ್ಷಿಸಿರಿ" ಅಥವಾ "ಕೇಳಿರಿ" ಅಥವಾ "ನಾನು ಹೇಳುತ್ತಿರುವ ಮಾತುಗಳಿಗೆ ಗಮನ ಕೊಡಿರಿ."

ಬಿತ್ತುವವನು ಬಿತ್ತಲು ಹೋದನು

"ರೈತನೊಬ್ಬನು ಹೊಲದಲ್ಲಿ ಬೀಜಗಳನ್ನು ಬಿತ್ತಲು ಹೋದನು.

ಅವನು ಬಿತ್ತುವಾಗ

"ಅವನು ಬೀಜಗಳನ್ನು ಬಿತ್ತುವಾಗ"

ದಾರಿಯ ಮಗ್ಗುಲಲ್ಲಿ

ಹೊಲದ ಪಕ್ಕದಲ್ಲಿರುವ "ದಾರಿಯಲ್ಲಿ". ಜನರು ಅಲ್ಲಿ ನಡೆದಾಡಲು ಸಹ ಅವರಿಗೆ ಆಗದೆ ಇದ್ದಿರಬಹುದು.

ತಿಂದುಬಿಟ್ಟವು

"ಎಲ್ಲಾ ಬೀಜಗಳನ್ನು ತಿಂದುಬಿಟ್ಟವು"

ಬಂಡೆಯ ನೆಲ

ನೆಲದ ಕೆಳಗೆ ಬಂಡೆಗಳು ಮಾತ್ರವೇ

ಕೂಡಲೇ ಅವುಗಳು ಬೆಳೆದವು

"ಬೀಜಗಳು ಬೇಗನೇ ಮೊಳಕೆಯೊಡೆದು ಬೆಳೆಯಲಾಂಭಿಸಿದವು"

ಅವುಗಳು ಬಾಡಿ ಹೋದವು

"ಸೂರ್ಯನ ತಾಪವನ್ನು ತಾಳಲಾರದೆ ಅವುಗಳು ಒಣಗಿಹೋದವು" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ಅವುಗಳು ಒಣಗಿಹೋದವು

"ಗಿಡಗಳು ಒಣಗಿ ಸತ್ತು ಹೋದವು"

Matthew 13:7

ಯೇಸು ಕ್ರಿಸ್ತನು ದೊಡ್ಡ ಜನರ ಗುಂಪಿಗೆ ದೇವರ ರಾಜ್ಯವು ಯಾವ ರೀತಿ ಇದೆ ಎಂಬದನ್ನು ವಿವಿಧ ಸಾಮ್ಯಗಳ ಮೂಲಕ ವಿವರಿಸುತ್ತಿದ್ದಾನೆ.

ಮುಳ್ಳುಗಿಡಗಳಲ್ಲಿ ಬಿದ್ದವು

"ಮುಳ್ಳುಗಿಡಗಳು ಸಹ ಬೆಳೆಯುವ ಸ್ಥಳದಲ್ಲಿ ಬಿದ್ದವು"

ಅಡಗಿಸಿಬಿಟ್ಟವು

"ಹೊಸದಾಗಿ ಮೊಳೆತವುಗಳನ್ನು ಅಡಗಿಸಿಬಿಟ್ಟವು." ಇತರೆ ಗಿಡಗಳು ಬೆಳೆಯದಂತೆ ಕಳೆಗಳು ಅಡ್ಡಿಪಡಿಸುವುದನ್ನು ತಿಳಿಸುವ ಸಾಮಾನ್ಯವಾದ ಪದಗಳನ್ನು ಬಳಸಿರಿ.

ಫಲ ಕೊಟ್ಟವು

"ಬೆಳೆ ಬೆಳೆದವು" ಅಥವಾ "ಹೊಸ ಬೆಳೆ ಬೆಳೆದವು" ಅಥವಾ "ಫಲ ಕೊಟ್ಟವು"

ಕಿವಿಯುಳ್ಳವನು ಕೇಳಲಿ

ಕೆಲವು ಭಾಷೆಗಳಲ್ಲಿ ಎರಡನೇ ವ್ಯಕ್ತಿಯನ್ನು ಸೇರಿಸಿಕೊಳ್ಳುವುದು ಹೆಚ್ಚು ಸಾಮಾನ್ಯವಾಗಿರುತ್ತದೆ: "ನಿಮ್ಮಲ್ಲಿ ಕಿವಿಯುಳ್ಳವರು ಕೇಳಲಿ." (ಮೊದಲನೆಯ, ಎರಡನೆಯ ಅಥವಾ ಮೂರನೆಯ ವ್ಯಕ್ತಿಯನ್ನು ನೋಡಿರಿ)

ಕಿವಿಯುಳ್ಳವನು

"ಕೇಳಿಸಿಕೊಳ್ಳಲು ಆಗುವವರು" ಅಥವಾ "ನನ್ನ ಮಾತುಗಳನ್ನು ಕೇಳಿಸಿಕೊಳ್ಳುವವರು"

ಕೇಳಿಸಿಕೊಳ್ಳಲಿ

"ಚೆನ್ನಾಗಿ ಕೇಳಿಸಿಕೊಳ್ಳಲಿ" ಅಥವಾ "ನಾನು ಹೇಳುವ ಮಾತುಗಳಿಗೆ ಗಮನವನ್ನು ಕೊಡಲಿ"

Matthew 13:10

ಯೇಸು ಕ್ರಿಸ್ತನು ದೊಡ್ಡ ಜನರ ಗುಂಪಿಗೆ ದೇವರ ರಾಜ್ಯವು ಯಾವ ರೀತಿ ಇದೆ ಎಂಬದನ್ನು ವಿವಿಧ ಸಾಮ್ಯಗಳ ಮೂಲಕ ವಿವರಿಸುತ್ತಿದ್ದಾನೆ.

ಅವರಿಗೆ

ಶಿಷ್ಯರಿಗೆ

ಪರಲೋಕ ರಾಜ್ಯದ ರಹಸ್ಯಗಳನ್ನು ಅರ್ಥಮಾಡಿಕೊಳ್ಳುವ ವರವು ನಿಮಗೆ ಕೊಡಲಾಗಿದೆಯೇ ಹೊರತು ಅವರಿಗೆ ಕೊಡಲಾಗಿಲ್ಲ

ಇದನ್ನು ಸಕ್ರಿಯ ವಿಧಾನದಲ್ಲಿ ಭಾಷಾಂತರ ಮಾಡಬಹುದು ಮತ್ತು ಯುಕ್ತವಾದ ಮಾಹಿತಿಯನ್ನು ಅಳವಡಿಸಿಕೊಳ್ಳಬಹುದು: "ದೇವರು ನಿಮಗೆ ಪರಲೋಕ ರಾಜ್ಯದ ಸಾಮ್ಯಗಳನ್ನು ಅರ್ಥಮಾಡಿಕೊಳ್ಳುವ ವರವನ್ನು ಕೊಟ್ಟಿದ್ದಾನೆ ಆದರೆ ದೇವರು ಇವರಿಗೆ ಕೊಟ್ಟಿಲ್ಲ" ಅಥವಾ "ಪರಲೋಕರಾಜ್ಯದ ಸಾಮ್ಯಗಳನ್ನು ಅರ್ಥಮಾಡಿಕೊಳ್ಳಲು ದೇವರು ನಿಮ್ಮನ್ನು ಶಕ್ತರನ್ನಾಗಿ ಮಾಡಿದ್ದಾನೆ ಆದರೆ ಅವರನ್ನು ಶಕ್ತರನ್ನಾಗಿ ಮಾಡಿಲ್ಲ." (ಸಕ್ರಿಯ ಮತ್ತು ನಿಷ್ಕ್ರಿಯ ಹಾಗು ಸ್ಪಷ್ಟ ಮತ್ತು ಅಸ್ಪಷ್ಟ ಮಾಹಿತಿ ನೋಡಿರಿ)

ನೀವು

ಶಿಷ್ಯರು

ರಹಸ್ಯಗಳು

ರಹಸ್ಯವಾಗಿ ಇಡಲಾಗಿರುವ ಸತ್ಯಗಳು ಆದರೆ ಯೇಸು ಈಗ ಅವುಗಳನ್ನು ಪ್ರಕಟಪಡಿಸುತ್ತಿದ್ದಾನೆ. ಪರ್ಯಾಯ ಭಾಷಾಂತರ: "ರಹಸ್ಯಗಳು" ಅಥವಾ "ಅಡಕವಾಗಿರುವ ಸತ್ಯಗಳು" (ಯುಡಿಬಿ ನೋಡಿರಿ).

ಯಾರಿಗಾದರೂ ಇದ್ದರೆ

"ಯಾರಿಗಾದರೂ ತಿಳುವಳಿಕೆಯಿದ್ದರೆ" ಅಥವಾ "ನಾನು ಕಲಿಸುವವುಗಳಲ್ಲಿ ಯಾರಾದರೂ ತಿಳಿದುಕೊಂಡರೆ."

ಅವನಿಗೆ ಹೆಚ್ಚಾಗಿ ಕೊಡಲಾಗುವುದು

ಇದನ್ನು ಸಕ್ರಿಯ ವಿಧಾನದಲ್ಲಿ ಭಾಷಾಂತರ ಮಾಡಬಹುದಾಗಿದೆ: "ದೇವರು ಅವನಿಗೆ ಹೆಚ್ಚಿನ ತಿಳುವಳಿಕೆಯನ್ನು ಕೊಡುವನು." (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ಅವನಿಗೆ ಹೆಚ್ಚಾಗಿ ತಿಳಿಯುವುದು

"ಅವನಿಗೆ ಸ್ಪಷ್ಟವಾಗಿ ಅರ್ಥವಾಗುವುದು"

ಯಾವನಿಗಾದರೂ ಇಲ್ಲದಿದ್ದರೆ

"ಯಾವನಿಗಾದರೂ ತಿಳುವಳಿಕೆಯಿಲ್ಲದಿದ್ದರೆ" ಅಥವಾ "ನಾನು ಕಲಿಸುವವುಗಳನ್ನು ಯಾರಾದರೂ ಅರ್ಥಮಾಡಿಕೊಳ್ಳದಿದ್ದರೆ"

ಅಂಥವನ ಬಳಿ ಇರುವದನ್ನು ಸಹ ತೆಗೆದುಕೊಳ್ಳಲಾಗುವುದು

ಇದನ್ನು ಸಕ್ರಿಯವಾದ ವಿಧಾನದಲ್ಲಿ ಭಾಷಾಂತರ ಮಾಡಬಹುದು: "ದೇವರು ಅವನ ಬಳಿ ಇರುವದನ್ನು ಸಹ ತೀಗ್ದುಕೊಳ್ಳುವನು" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

Matthew 13:13

ಯೇಸು ಕ್ರಿಸ್ತನು ದೊಡ್ಡ ಜನರ ಗುಂಪಿಗೆ ದೇವರ ರಾಜ್ಯವು ಯಾವ ರೀತಿ ಇದೆ ಎಂಬದನ್ನು ವಿವಿಧ ಸಾಮ್ಯಗಳ ಮೂಲಕ ವಿವರಿಸುತ್ತಿದ್ದಾನೆ.

ನಾನು ಅವರೊಂದಿಗೆ ಮತನಾಡುತ್ತೇನೆ

"ಅವರೊಂದಿಗೆ" ಎಂಬ ಸರ್ವನಾಮವು ಈ ವಚನಗಳಲ್ಲಿರುವ ಗುಂಪಿನ ಜನರನ್ನು ಸೂಚಿಸುತ್ತದೆ.

ಅವರು ನೋಡುತ್ತಾರೆ ಆದರೂ ಅವರಿಗೆ ನಿಜವಾಗಿ ಕಾಣಿಸುವದಿಲ್ಲ ಮತ್ತು ಅವರು ಕೇಳಿಸಿಕೊಳ್ಳುತ್ತಾರೆ ಆದರೂ ಅವರಿಗೆ ನಿಜವಾಗಿ ಕೇಳಿಸುವದಿಲ್ಲ

ಗುಂಪಿನಲ್ಲಿರುವ ಜನರು ಅರ್ಥಮಾಡಿಕೊಳ್ಳುವುದನ್ನು ನಿರಾಕರಿಸುತ್ತಾರೆ ಎಂಬುದನ್ನು ಶಿಷ್ಯರಿಗೆ ಹೇಳಲು ಈ ಸಮಾನತೆಯನ್ನು ಬಳಸಿದ್ದಾನೆ. (ಸಮಾನತೆ ನೋಡಿರಿ)

ಅವರು ನೋಡುತ್ತಾರೆ ಆದರೂ ಅವರಿಗೆ ನಿಜವಾಗಿ ಕಾಣಿಸುವದಿಲ್ಲ

"ಅವರು ನೋಡುತ್ತಾರೆ ಆದರೆ ಗ್ರಹಿಸಿಕೊಳ್ಳುವದಿಲ್ಲ." ಒಂದುವೇಳೆ ಕ್ರಿಯಾಪದಗಳಿಗೆ ವಿಷಯವು ಬೇಕಿದ್ದರೆ, "ಅವರು ಕಾರ್ಯಗಳನ್ನು ನೋಡುತ್ತಾರೆ ಆದರೂ ಅವು ಅವರಿಗೆ ಅರ್ಥವಾಗುವದಿಲ್ಲ" ಅಥವಾ "ಘಟನೆಗಳು ನಡೆಯುವುದನ್ನು ಅವರು ನೋಡುತ್ತಾರೆ ಆದರೆ ಸತ್ಯವನ್ನು ಅರ್ಥಮಾಡಿಕೊಳ್ಳಲು ಅವರಿಗೆ ಆಗುವದಿಲ್ಲ" ಎಂದು ಭಾಷಾಂತರ ಮಾಡಬಹುದಾಗಿದೆ.

ಕೇಳಿಸಿಕೊಳ್ಳುವಾಗ ನಿಮಗೆ ಕೇಳಿಸುತ್ತದೆ ಆದರೆ ಅರ್ಥವಾಗುವದಿಲ್ಲ; ನೋಡುವಾಗ ಕಾಣುತ್ತದೆ ಆದರೆ ಗ್ರಹಿಸಿಕೊಳ್ಳಲು ಆಗುವದಿಲ್ಲ

ಯೆಶಾಯನ ಸಮಯದಲ್ಲಿ ನಂಬಿಕೆಯಿಲ್ಲದ ಜನರ ಬಗ್ಗೆ ಹೇಳಲಾದ ಪ್ರವಾದನೆಯನ್ನು ಇಲ್ಲಿ ಬಳಸಲಾಗಿದೆ. ತನ್ನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಜನರಿಗೆ ವಿವರಿಸಲು ಯೇಸು ಇದನ್ನು ಬಳಸಿದ್ದಾನೆ. ಇದು ಮತ್ತೊಂದು ಸಮಾನತೆಯಾಗಿದೆ. (ಸಮಾನತೆ ನೋಡಿರಿ)

Matthew 13:15

ಯೇಸು ಕ್ರಿಸ್ತನು ಪರಲೋಕ ರಾಜ್ಯವು ಹೇಗಿದೆ ಎಂಬದನ್ನು ವಿವಿಧ ಸಾಮ್ಯಗಳ ಮೂಲಕ ಜನರ ಗುಂಪಿಗೆ ವಿವರಿಸುವುದನ್ನು ಮುಂದುವರೆಸುತ್ತಿದ್ದಾನೆ. ೧೩:೧೪ರಲ್ಲಿ ಪ್ರಾರಂಭಗೊಂಡ ಯೆಶಾಯನ ಮಾತುಗಳನ್ನು ಮತ್ತೆ ಹೇಳುವ ಮೂಲಕ ಆತನು ಮುಂದುವರೆಸುತ್ತಿದ್ದಾನೆ.

ಈ ಜನರ ಹೃದಯವು ಮಂದವಾಗಿದೆ

"ಇವರು ಇನ್ನು ಮುಂದೆ ಕಲಿತುಕೊಳ್ಳಲಾರರು" (ಯುಡಿಬಿ ನೋಡಿರಿ).

ಅವರ ಕಿವಿಗಳು ಕೇಳಲಾರದಂತೆ ಭಾರವಾಗಿವೆ

"ಅವರಿಗೆ ಕೇಳಿಸಿಕೊಳ್ಳಲು ಇಷ್ಟವಿಲ್ಲ" (ಯುಡಿಬಿ ನೋಡಿರಿ).

ಅವರು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡಿದ್ದಾರೆ

"ಅವರು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡಿದ್ದಾರೆ" ಅಥವಾ "ಅವರು ನೋಡಲು ನಿರಾಕರಿಸುತ್ತಾರೆ"

ಇಲ್ಲವಾದರೆ ಅವರು ತಮ್ಮ ಕಣ್ಣುಗಳಿಂದ ಗ್ರಹಿಸಿಕೊಳ್ಳಬೇಕು, ಕಿವಿಗಳಿಂದ ಕೇಳಬೇಕು, ಹೃದಯದಿಂದ ಅರ್ಥಮಾಡಿಕೊಳ್ಳಬೇಕು, ಮತ್ತು ದೇವರ ಕಡೆಗೆ ತಿರುಗಿಕೊಳ್ಳಬೇಕು

"ಆದ್ದರಿಂದ ತಮ್ಮ ಕಣ್ಣುಗಳಿಂದ ನೋಡಲು, ಕಿವಿಗಳಿಂದ ಕೇಳಲು, ಹೃದಯದಿಂದ ಅರ್ಥಮಾಡಿಕೊಳ್ಳಲು ಮತ್ತು ಅದರ ಪರಿಣಾಮವಾಗಿ ಮತ್ತೆ ತಿರುಗಿಕೊಳ್ಳಲು ಸಾಧ್ಯವಾಗುತ್ತದೆ."

ತಿರುಗಿಕೊಳ್ಳಬೇಕು

"ಹಿಂದಿರುಗಬೇಕು" ಅಥವಾ "ಪಶ್ಚಾತ್ತಾಪಪಡಬೇಕು"

ಮತ್ತು ನಾವು ಅವರನ್ನು ಗುಣಪಡಿಸಬೇಕು

"ಮತ್ತು ನನ್ನಿಂದ ಅವರು ಗುಣಹೊಂದಬೇಕು." ಪರ್ಯಾಯ ಭಾಷಾಂತರ: "ಮತ್ತು ನಾನು ಅವರನ್ನು ಪುನಃ ಪಡೆದುಕೊಳ್ಳಬೇಕು." (ರೂಪಕಾಲಂಕಾರ ನೋಡಿರಿ)

Matthew 13:16

ಯೇಸು ಕ್ರಿಸ್ತನು ಪರಲೋಕ ರಾಜ್ಯವು ಹೇಗಿದೆ ಎಂಬದನ್ನು ವಿವಿಧ ಸಾಮ್ಯಗಳ ಮೂಲಕ ಜನರ ಗುಂಪಿಗೆ ವಿವರಿಸುವುದನ್ನು ಮುಂದುವರೆಸುತ್ತಿದ್ದಾನೆ.

ನಿಮ್ಮ ... ನೀವು

ಯೇಸು ಕ್ರಿಸ್ತನು ತನ್ನ ಶಿಷ್ಯರೊಂದಿಗೆ ಮಾತನಾಡುತ್ತಿದ್ದಾನೆ.

ಅವರು ನೋಡುತ್ತಾರೆ

"ಅವರಿಂದ ನೋಡಲು ಆಗುತ್ತದೆ" ಅಥವಾ "ಅವರು ನೋಡಲು ಶಕ್ತರಾಗಿದ್ದಾರೆ"

ಅವರು ಕೇಳಿಸಿಕೊಳ್ಳುತ್ತಾರೆ

"ಅವರಿಂದ ಕೇಳಿಸಿಕೊಳ್ಳಲು ಆಗುತ್ತದೆ" ಅಥವಾ "ಅವರು ಕೇಳಿಸಿಕೊಳ್ಳಲು ಶಕ್ತರಾಗಿದ್ದಾರೆ"

ನೀವು ನೋಡುವ ಕಾರ್ಯಗಳು

"ನೀವು ನೋಡಿರುವ ನಾನು ಮಾಡುವಂಥ ಕಾರ್ಯಗಳು"

ನೀವು ಕೇಳಿಸಿಕೊಂಡಿರುವ ವಿಷಯಗಳು

"ನಾನು ಹೇಳಿರುವದನ್ನು ನೀವು ಕೇಳಿಸಿಕೊಂಡಿರುವ ವಿಷಯಗಳು"

Matthew 13:18

ಯೇಸು ಕ್ರಿಸ್ತನು ಪರಲೋಕ ರಾಜ್ಯವು ಹೇಗಿದೆ ಎಂಬದನ್ನು ವಿವಿಧ ಸಾಮ್ಯಗಳ ಮೂಲಕ ಜನರ ಗುಂಪಿಗೆ ವಿವರಿಸುವುದನ್ನು ಮುಂದುವರೆಸುತ್ತಿದ್ದಾನೆ. ಆತನು ೧೩:೮ರಲ್ಲಿ ಹೇಳಿರುವ ಸಾಮ್ಯವನ್ನು ಇಲ್ಲಿ ವಿವರಿಸುತ್ತಿದ್ದಾನೆ.

ಕೆಡುಕನು ಬರುತ್ತಾನೆ ಮತ್ತು ಅವನ ಹೃದಯದಲ್ಲಿ ಬಿತ್ತಿರುವದನ್ನು ಕಿತ್ತುಕೊಳ್ಳುತ್ತಾನೆ

"ಆತನಿ ಕೇಳಿರುವ ವಾಕ್ಯವನ್ನು ಮರೆತುಹೋಗುವಂತೆ ಸೈತಾನನು ಮಾಡುತ್ತಾನೆ."

ಕಿತ್ತುಕೊಳ್ಳುತ್ತಾನೆ

ಅಧಿಕಾರವಿರುವ ಯಜಮಾನನಾದರೂ ಆತನಿಂದ ಕಿತ್ತುಕೊಳ್ಳಲು ಪ್ರಯತ್ನಿಸುವುದಕ್ಕೆ ಅನ್ವಯವಾಗುವ ಪದವನ್ನು ಬಳಸಿರಿ.

ಅವನ ಹೃದಯದಲ್ಲಿ ಬಿತ್ತಲ್ಪಟ್ಟಿರುವದು

ಇದನ್ನು ಸಕ್ರಿಯ ವಿಧಾನದಲ್ಲಿ ಭಾಷಾಂತರ ಮಾಡಬಹುದಾಗಿದೆ: "ದೇವರು ಅವನ ಹೃದಯದಲ್ಲಿ ಬಿತ್ತಿರುವ ವಾಕ್ಯ." (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ಅವನ ಹೃದಯದಲ್ಲಿ

ಕೇಳುಗನ ಹೃದಯದಲ್ಲಿ

ದಾರಿಯ ಮಗ್ಗುಲಲ್ಲಿ ಬಿತ್ತಲ್ಪಟ್ಟವರು ಎಂದರೆ ಇವರೇ

ಒಂದುವೇಳೆ ಅಕ್ಷರಾರ್ಥ ಭಾಷಾಂತರವು ಅರ್ಥಗರ್ಭಿತವಲ್ಲದಿದ್ದರೆ, ಯೇಸು ಕ್ರಿಸ್ತನೇ ಬಿತ್ತುವವನಾಗಿದ್ದಾನೆ, ಬೀಜವು ಸಂದೇಶವಾಗಿದೆ ಮತ್ತು ಕೇಳುಗನು ದಾರಿಮಗ್ಗುಲಲ್ಲಿರುವ ನೆಲವಾಗಿದ್ದಾನೆ ಎಂಬದು ಒದುಗರಿಗೆ ಅರ್ಥವಾಗುವ ಹಾಗೆ ಭಾಷಾಂತರ ಮಾಡಿರಿ. ಭಾಷಾಂತರದ ಇತರೆ ಸಾಧ್ಯತೆಗಳು: "ದಾರಿಯ ಮಗ್ಗುಲಲ್ಲಿ ಬಿತ್ತಲ್ಪಟ್ಟವುಗಳು ಹೀಗೆಯೇ ಇರುತ್ತವೆ." (ಉಪಮೆ ಮತ್ತು ಎಲಿಪ್ಸಿಸ್ ನೋಡಿರಿ)

ದಾರಿಯ ಮಗ್ಗುಲು

"ದಾರಿ" ಅಥವಾ "ಮಾರ್ಗ." ೧೩:೪ರಲ್ಲಿ ಮಾಡಿದಂತೆಯೇ ಭಾಷಾಂತರ ಮಾಡಿರಿ.

Matthew 13:20

ಯೇಸು ಕ್ರಿಸ್ತನು ಪರಲೋಕ ರಾಜ್ಯವು ಹೇಗಿದೆ ಎಂಬದನ್ನು ವಿವಿಧ ಸಾಮ್ಯಗಳ ಮೂಲಕ ಜನರ ಗುಂಪಿಗೆ ವಿವರಿಸುವುದನ್ನು ಮುಂದುವರೆಸುತ್ತಿದ್ದಾನೆ. ಆತನು ೧೩:೮ರಲ್ಲಿ ಹೇಳಿರುವ ಸಾಮ್ಯವನ್ನು ಇಲ್ಲಿ ವಿವರಿಸುತ್ತಿದ್ದಾನೆ.

ಬಂಡೆಯ ನೆಲದ ಮೇಲೆ ಬಿತ್ತಲ್ಪಟ್ಟವರು ಎಂದರೆ ಇವರೇ

ಒಂದುವೇಳೆ ಅಕ್ಷರಾರ್ಥ ಭಾಷಾಂತರವು ಅರ್ಥಗರ್ಭಿತವಲ್ಲದಿದ್ದರೆ, ಯೇಸು ಕ್ರಿಸ್ತನೇ ಬಿತ್ತುವವನಾಗಿದ್ದಾನೆ, ಬೀಜವು ಸಂದೇಶವಾಗಿದೆ ಮತ್ತು ಕೇಳುಗನು ಬಂಡೆಯ ನೆಲವಾಗಿದ್ದಾನೆ ಎಂಬದು ಒದುಗರಿಗೆ ಅರ್ಥವಾಗುವ ಹಾಗೆ ಭಾಷಾಂತರ ಮಾಡಿರಿ. ಭಾಷಾಂತರದ ಇತರೆ ಸಾಧ್ಯತೆಗಳು: "ದಾರಿಯ ಮಗ್ಗುಲಲ್ಲಿ ಬಿತ್ತಲ್ಪಟ್ಟವುಗಳು ಹೀಗೆಯೇ ಇರುತ್ತವೆ." (ಉಪಮೆ ಮತ್ತು ಎಲಿಪ್ಸಿಸ್ ನೋಡಿರಿ)

ಅವನಿಗೆ ಬೇರಿಲ್ಲದ ಕಾರಣ

"ಅವನಿಗೆ ಬೇರು ಆಳವಾಗಿರುವದಿಲ್ಲ" ಅಥವಾ "ಆತನು ಚಿಕ್ಕ ಗಿಡಗಳು ಬೇರೂರಲು ಆತನು ಅವಕಾಶ ಕೊಡುವದಿಲ್ಲ" (ಹೈಪರ್ಬೋಲ್ ಮತ್ತು ಮೆಟಾನಿಮೈ ನೋಡಿರಿ)

ವಾಕ್ಯದ ನಿಮಿತ್ತ

"ಸಂದೇಶದ ನಿಮಿತ್ತ"

ಅವನು ಕೂಡಲೇ ಎಡವುತ್ತಾನೆ

"ಕೂಡಲೇ ಅವನು ಬಿದ್ದುಹೋಗುತ್ತಾನೆ" ಅಥವಾ "ಕೂಡಲೇ ಅವನು ತನ್ನ ನಂಬಿಕೆಯನ್ನು ಬಿಟ್ಟುಬಿಡುತ್ತಾನೆ." (ನಾಣ್ಣುಡಿ ನೋಡಿರಿ)

Matthew 13:22

ಯೇಸು ಕ್ರಿಸ್ತನು ಪರಲೋಕ ರಾಜ್ಯವು ಹೇಗಿದೆ ಎಂಬದನ್ನು ವಿವಿಧ ಸಾಮ್ಯಗಳ ಮೂಲಕ ಜನರ ಗುಂಪಿಗೆ ವಿವರಿಸುವುದನ್ನು ಮುಂದುವರೆಸುತ್ತಿದ್ದಾನೆ. ಆತನು ೧೩:೮ರಲ್ಲಿ ಹೇಳಿರುವ ಸಾಮ್ಯವನ್ನು ಇಲ್ಲಿ ವಿವರಿಸುತ್ತಿದ್ದಾನೆ.

ಮುಳ್ಳು ಗಿಡಗಳ ಮೇಲೆ ಬಿತ್ತಲ್ಪಟ್ಟವರು ಎಂದರೆ ಇವರೇ

ಒಂದುವೇಳೆ ಅಕ್ಷರಾರ್ಥ ಭಾಷಾಂತರವು ಅರ್ಥಗರ್ಭಿತವಲ್ಲದಿದ್ದರೆ, ಯೇಸು ಕ್ರಿಸ್ತನೇ ಬಿತ್ತುವವನಾಗಿದ್ದಾನೆ, ಬೀಜವು ಸಂದೇಶವಾಗಿದೆ ಮತ್ತು ಕೇಳುಗನು ಮುಳ್ಳುಗಿಡಗಳ ಮೇಲೆ ಬಿತ್ತಲ್ಪಟ್ಟವನು ಎಂಬದು ಒದುಗರಿಗೆ ಅರ್ಥವಾಗುವ ಹಾಗೆ ಭಾಷಾಂತರ ಮಾಡಿರಿ. ಭಾಷಾಂತರದ ಇತರೆ ಸಾಧ್ಯತೆಗಳು: "ಮುಳ್ಳುಗಿಡಗಳಲ್ಲಿ ಬಿತ್ತಲ್ಪಟ್ಟವುಗಳು ಹೀಗೆಯೇ ಇರುತ್ತವೆ... ಒಳ್ಳೆಯ ನೆಲದ ಮೇಲೆ ಬಿತ್ತಲ್ಪಟ್ಟವುಗಳು ಹೀಗೆಯೇ ಇರುತ್ತವೆ" (ಉಪಮೆ ಮತ್ತು ಎಲಿಪ್ಸಿಸ್ ನೋಡಿರಿ)

ವಾಕ್ಯ

"ಸಂದೇಶ"

ಲೋಕದ ಚಿಂತೆಗಳು ಮತ್ತು ಐಶ್ವರ್ಯದಿಂದಾಗುವ ವಂಚನೆಯು, ವಾಕ್ಯವನ್ನು ಅಡಗಿಸುತ್ತದೆ ಮತ್ತು ಫಲಕೊಡಲು ಆಗುವದಿಲ್ಲ

ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ಒಳ್ಳೆಯ ಗಿಡಗಳು ಬೆಳೆಯದಂತೆ ಕಳೆಗಳು ಅಡ್ಡಿಪಡಿಸುವ ಹಾಗೆಯೇ ಲೋಕದ ಚಿಂತೆ ಮತ್ತು ಐಶ್ವರ್ಯದಿಂದಾಗುವ ವಂಚನೆಯು ಆ ವ್ಯಕ್ತಿಯು ಫಲಕೊಡದ ಹಾಗೆ ತಡೆಯುತ್ತದೆ" (ರೂಪಕಾಲಂಕಾರ ನೋಡಿರಿ)

ಲೋಕದ ಚಿಂತೆಗಳು

"ಜನರು ಈ ಲೋಕದಲ್ಲಿ ಚಿಂತಿಸುವ ಕಾರ್ಯಗಳು"

ಫಲಕೊಡದವನಾಗುತ್ತಾನೆ

"ಪ್ರಯೋಜನವಿಲ್ಲದವನಾಗುತ್ತಾನೆ"

ನಿಜವಾಗಿಯೂ ಫಲಕೊಡುವವನು ಹೀಗೆಯೇ ಇರುತ್ತಾನೆ

"ಇಂಥವರೇ ಫಲಕೊಡುತ್ತಾರೆ ಮತ್ತು ಚೈತನ್ಯವುಳ್ಳವರಾಗಿರುತ್ತಾರೆ" ಅಥವಾ "ಫಲಕೊಡುವ ಆರೋಗ್ಯವಂಥ ಗಿಡಗಳ ಹಾಗೆ ಇವರು ಫಲಕೊಡುವವರಾಗಿರುತ್ತಾರೆ." (ರೂಪಕಾಲಂಕಾರ ಮತ್ತು ಉಪಮೆ ನೋಡಿರಿ)

Matthew 13:24

ಯೇಸು ಕ್ರಿಸ್ತನು ಪರಲೋಕ ರಾಜ್ಯವು ಹೇಗಿದೆ ಎಂಬದನ್ನು ವಿವಿಧ ಸಾಮ್ಯಗಳ ಮೂಲಕ ಜನರ ಗುಂಪಿಗೆ ವಿವರಿಸುವುದನ್ನು ಮುಂದುವರೆಸುತ್ತಿದ್ದಾನೆ.

ಯೇಸು ಕ್ರಿಸ್ತನು ಅವರಿಗೆ ಮತ್ತೊಂದು ಸಾಮ್ಯವನ್ನು ಹೇಳಿದನು

ಯೇಸು ಕ್ರಿಸ್ತನು ಜನರ ಗುಂಪಿಗೆ ಮತ್ತೊಂದು ಸಾಮ್ಯವನ್ನು ಹೇಳಿದನು.

ಪರಲೋಕ ರಾಜ್ಯವು ಒಬ್ಬ ಮನುಷ್ಯನಂತಿದೆ

ಪರಲೋಕ ರಾಜ್ಯವನ್ನು ಮನುಷ್ಯನಿಗೆ ಸಮಾನವಾದದ್ದು ಎಂಬ ರೀತಿಯಲ್ಲಿ ಭಾಷಾಂತರ ಇರಬಾರದು ಬದಲಾಗಿ ಈ ಸಾಮ್ಯದಲ್ಲಿ ವಿವರಿಸಲಾಗಿರುವ ಪದ್ದತಿಯಂತಿದೆ ಎಂಬದನ್ನು ಸೂಚಿಸಬೇಕು (ಯುಡಿಬಿ ನೋಡಿರಿ).

ಒಳ್ಳೆಯ ಬೀಜ

"ಒಳ್ಳೆಯ ಆಹಾರದ ಬೀಜ" ಅಥವಾ "ಒಳ್ಳೆಯ ದಾನ್ಯದ ಬೀಜ." ಯೇಸು ಕ್ರಿಸ್ತನು ಗೋಧಿಯ ಬಗ್ಗೆ ಮಾತನಾಡುತ್ತಿದ್ದಾನೆ ಎಂಬದಾಗಿ ಪ್ರೇಕ್ಷಕರು ಅಂದುಕೊಂಡರು. (ಸ್ಪಷ್ಟ ಮತ್ತು ಅಸ್ಪಷ್ಟ ಮಾಹಿತಿ ನೋಡಿರಿ)

ಅವನ ವೈರಿಯು ಬಂದನು

"ಅವನ ವೈರಿಯು ಹೊಲಕ್ಕೆ ಬಂದನು."

ಕಳೆಗಳು

ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ಕೆಟ್ಟ ಬೀಜಗಳು" ಅಥವಾ "ಕಳೆಗಳ ಬೀಜಗಳು." ಈ ಕಳೆಗಳು ಚಿಕ್ಕ ಗಿಡಗಳಾಗಿರುವಾಗ ಧಾನ್ಯದಂತೆಯೇ ಕಾಣುತ್ತವೆ ಆದರೆ ಬೆಳೆದ ಮೇಲೆ ವಿಷಕಾರಿಯಾಗುತ್ತವೆ.

ಅವುಗಳು ಮೊಳಕೆಯೊಡೆದಾಗ

"ಗೋಧಿಯ ತೆನೆಯು ಮೊಳಕೆಯೊಡೆದಾಗ" ಅಥವಾ "ಗಿಡಗಳು ಬೆಳೆದಾಗ"

ಬೆಳೆಯು ಕಾಣಿಸಿಕೊಂಡಾಗ

"ಧಾನ್ಯವು ಬಿಡಲಾರಂಭಿಸಿದಾಗ" ಅಥವಾ "ಗೋಧಿಯು ಬಿಡಲಾರಂಭಿಸಿದಾಗ"

ಆಗ ಹಣಜಿಯು ಸಹ ಕಾಣಿಸಿಕೊಂಡಿತು

ಪರ್ಯಾಯ ಭಾಷಾಂತರ: "ಹೊಲದಲ್ಲಿ ಹಣಜಿ ಸಹ ಬೆಳೆದಿರುವುದು ಜನರಿಗೆ ಗೊತ್ತಾಯಿತು."

Matthew 13:27

ಯೇಸು ಕ್ರಿಸ್ತನು ಪರಲೋಕ ರಾಜ್ಯವು ಹೇಗಿದೆ ಎಂಬದನ್ನು ವಿವಿಧ ಸಾಮ್ಯಗಳ ಮೂಲಕ ಜನರ ಗುಂಪಿಗೆ ವಿವರಿಸುವುದನ್ನು ಮುಂದುವರೆಸುತ್ತಿದ್ದಾನೆ. ಈ ವಚನಗಳು ಹಣಜಿಯ ಸಾಮ್ಯವನ್ನು ಮುಂದುವರೆಸುತ್ತವೆ.

ಹೊಲದ ಯಜಮಾನನು

ಹೊಲದಲ್ಲಿ ಒಳ್ಳೆಯ ಬೀಜವನ್ನು ಬಿತ್ತಿದವನು ಈತನೇ.

ನೀನು ನಿನ್ನ ಹೊಲದಲ್ಲಿ ಒಳ್ಳೆಯ ಬೀಜಗಳನ್ನು ಬಿತ್ತಲಿಲ್ಲವೇ?

"ನೀನು ನಿನ್ನ ಹೊಲದಲ್ಲಿ ಒಳ್ಳೆಯ ಬೀಜಗಳನ್ನು ಬಿತ್ತಿರುವೆ." ಹೊಲದ ಯಜಕಮಾನನು ಬಹುಶಃ ತನ್ನ ಸೇವಕರ ಮೂಲಕ ಬೀಜವನ್ನು ಬಿತ್ತಿಸಿರಬಹುದು (ಯುಡಿಬಿ ನೋಡಿರಿ). (ಆಲಂಕಾರಿಕ ಪ್ರಶ್ನೆ ನೋಡಿರಿ ಮತ್ತು ಎನ್:ಟ:ಭಾಷಾಂತರ:ಮೆಟಾನಿಮೈ ನೋಡಿರಿ).

ಆತನು ಅವರಿಗೆ ಹೇಳಿದ್ದೇನೆಂದರೆ

"ಹೊಲದ ಯಜಮಾನನು ಸೇವಕರಿಗೆ ಹೇಳಿದ್ದೇನೆಂದರೆ"

ಆದ್ದರಿಂದ ನಾವು ಈಗ

"ನಾವು" ಎಂಬ ಪದವು ಸೇವಕರನ್ನು ಸೂಚಿಸುತ್ತದೆ.

ಅವುಗಳನ್ನು ಕೂಡಿಸಬೇಕೋ

"ಹಣಜಿಯನ್ನು ಕಿತ್ತು" ಬಿಸಾಡಬೇಕೋ (ಸ್ಪಷ್ಟ ಮತ್ತು ಅಸ್ಪಷ್ಟ ನೋಡಿರಿ)

Matthew 13:29

ಯೇಸು ಕ್ರಿಸ್ತನು ಪರಲೋಕ ರಾಜ್ಯವು ಹೇಗಿದೆ ಎಂಬದನ್ನು ವಿವಿಧ ಸಾಮ್ಯಗಳ ಮೂಲಕ ಜನರ ಗುಂಪಿಗೆ ವಿವರಿಸುವುದನ್ನು ಮುಂದುವರೆಸುತ್ತಿದ್ದಾನೆ. ಈ ವಚನಗಳು ಹಣಜಿಯ ಸಾಮ್ಯವನ್ನು ಮುಕ್ತಾಯಗೊಳಿಸುತ್ತವೆ.

ಹೊಲದ ಯಜಮಾನನು ಹೇಳಿದ್ದೇನೆಂದರೆ

"ಹೊಲದ ಯಜಮಾನನು ತನ್ನ ಆಳುಗಳಿಗೆ ಹೇಳಿದ್ದೇನೆಂದರೆ"

ನಾನು ಕೊಯ್ಯುವವರಿಗೆ, "ಮೊದಲು ಹಣಜಿಯನ್ನು ಕೀಳಿರಿ ಮತ್ತು ಅವುಗಳನ್ನು ಸುಡಲು ಗಂಟು ಕಟ್ಟಿರಿ, ಆದರೆ ಗೋಧಿಯನ್ನು ನನ್ನ ಕಣಜದೊಳಗೆ ತುಂಬಿರಿ" ಎಂದು ಹೇಳುವೆನು

ಇದನ್ನು ನೀವು ಪರೋಕ್ಷ ಹೇಳಿಕೆಯಾಗಿ ಭಾಷಾಂತ ಮಾಡಬಹುದು: "ನಾನು ಕೊಯ್ಯುವವರಿಗೆ ಮೊದಲು ಹಣಜಿಯನ್ನು ಕಿತ್ತು ಸುಡಲು ಒಟ್ಟುಗೂಡಿಸಿರಿ ಮತ್ತು ಗೋಧಿಯನ್ನು ನನ್ನ ಕಣಜಕ್ಕೆ ತುಂಬಿರಿ ಎಂದು ಹೇಳುವೆನು." (ಭಾಷಣದ ಹೇಳಿಕೆಗಳು ನೋಡಿರಿ)

ನನ್ನ ಕಣಜ

ಕಣಜ ಎಂಬದಾಗಿ ಹೇಳುವಾಗ ದವಸವನ್ನು ಕೂಡಿಡಲು ನಿರ್ಮಿಸಲಾಗುವ ಗೋದಾಮಾಗಿದೆ.

Matthew 13:31

ಯೇಸು ಕ್ರಿಸ್ತನು ಪರಲೋಕ ರಾಜ್ಯವು ಹೇಗಿದೆ ಎಂಬದನ್ನು ವಿವಿಧ ಸಾಮ್ಯಗಳ ಮೂಲಕ ಜನರ ಗುಂಪಿಗೆ ವಿವರಿಸುವುದನ್ನು ಮುಂದುವರೆಸುತ್ತಿದ್ದಾನೆ.

ಯೇಸು ಕ್ರಿಸ್ತನು ಅವರಿಗೆ ಮತ್ತೊಂದು ಸಾಮ್ಯವನ್ನು ಹೇಳಿದನು

"ಯೇಸು ಕ್ರಿಸ್ತನು ಜನರ ಗುಂಪಿಗೆ ಮತ್ತೊಂದು ಸಾಮ್ಯವನ್ನು ಹೇಳಿದನು"

ಪರಲೋಕ ರಾಜ್ಯವು

೧೩:೨೪ರಲ್ಲಿ ಹೇಗೆ ಭಾಷಾಂತರ ಮಾಡಿರುವಿರಿ ಎಂಬದನ್ನು ನೋಡಿರಿ.

ಸಾಸಿವೆ ಕಾಳು

ದೊಡ್ಡ ಮರವಾಗಿ ಬೆಳೆಯುವ ಸಣ್ಣ ಗಿಡ (ಅಪರಿಚಿತಗಳ ಭಾಷಾಂತರ ನೋಡಿರಿ)

ಈ ಬೀಜವು ನಿಜವಾಗಿಯೂ ಉಳಿದ ಎಲ್ಲಾ ಬೀಜಗಳಿಗಿಂತ ಚಿಕ್ಕದಾಗಿದೆ

ಮೂಲ ಕೇಳುಗರಿಗೆ ಗೊತ್ತಿದ್ದ ಬೀಜಗಳಲ್ಲಿ ಸಾಸಿವೆ ಕಾಳು ಅತ್ಯಂತ ಚಿಕ್ಕದ್ದಾಗಿತ್ತು. (ಸ್ಪಷ್ಟ ಮತ್ತು ಅಸ್ಪಷ್ಟ ನೋಡಿರಿ)

ಆದರೆ ಅದು ಬೆಳೆದಾಗ

"ಆದರೆ ಗಿಡವು ಬೆಳೆದ ಮೇಲೆ"

ಮರವಾಗುತ್ತದೆ

"ದೊಡ್ಡ ಮರವಾಗುತ್ತದೆ" (ಹೈಪರ್ಬೋಲ್, ಉಪಮೆ ಮತ್ತು ಅಪರಿಚಿತ ಭಾಷಾಂತರ ನೋಡಿರಿ)

ಆಕಾಶದಲ್ಲಿ ಹಾರಾಡುವ ಪಕ್ಷಿಗಳು

"ಪಕ್ಷಿಗಳು" (ನಾಣ್ಣುಡಿ ನೋಡಿರಿ)

Matthew 13:33

ಯೇಸು ಕ್ರಿಸ್ತನು ಪರಲೋಕ ರಾಜ್ಯವು ಹೇಗಿದೆ ಎಂಬದನ್ನು ವಿವಿಧ ಸಾಮ್ಯಗಳ ಮೂಲಕ ಜನರ ಗುಂಪಿಗೆ ವಿವರಿಸುವುದನ್ನು ಮುಂದುವರೆಸುತ್ತಿದ್ದಾನೆ.

ಯೇಸು ಕ್ರಿಸ್ತನು ಆಗ ಅವರಿಗೆ ಮತ್ತೊಂದು ಸಾಮ್ಯವನ್ನು ಹೇಳಿದನು

"ಯೇಸು ಕ್ರಿಸ್ತನು ಜನರ ಗುಂಪಿಗೆ ಮತ್ತೊಂದು ಸಾಮ್ಯವನ್ನು ಹೇಳಿದನು"

ಪರಲೋಕ ರಾಜ್ಯವು ಹೇಗಿದೆ ಎಂದರೆ

ಇದನ್ನು ನೀವು ಉಪಮೆಯಲ್ಲಿ ಹೇಗೆ ಭಾಷಾಂತರ ಮಾಡಿದಿರೆಂದು ನೋಡಿರಿ

ಮೂರು ಸೇರು ಹಿಟ್ಟು

"ಹೆಚ್ಚು ಪ್ರಮಾಣದಲ್ಲಿ ಹಿಟ್ಟು" ಅಥವಾ ನಿಮ್ಮ ಭಾಷೆಯಲ್ಲಿ ಹೆಚ್ಚು ಪ್ರಮಾಣದ ಹಿಟ್ಟನ್ನು ಅಳೆಯುವ ಅಳತೆ (ಯುಡಿಬಿ ನೋಡಿರಿ).

ಅದು ಹುಳಿಯಾಗುವ ತನಕ

ಹುಳಿ ಕಾಣಿಸಿಕೊಳ್ಳುವ ತನಕ. ಒಳಪಡಿಸಲಾಗಿರುವ ಮಾಹಿತಿ ಏನೆಂದರೆ ಮೂರು ಸೇರು ಹಿಟ್ಟಿ ಹುಳಿಯಲ್ಲಿ ಕಲಸಿ ಉಪಯೋಗಿಸಲಾಗುತ್ತದೆ (ಸ್ಪಷ್ಟ ಮತ್ತು ಅಸ್ಪಷ್ಟ ನೋಡಿರಿ)

Matthew 13:34

ಯೇಸು ಕ್ರಿಸ್ತನು ಪರಲೋಕ ರಾಜ್ಯವು ಹೇಗಿದೆ ಎಂಬದನ್ನು ವಿವಿಧ ಸಾಮ್ಯಗಳ ಮೂಲಕ ಜನರ ಗುಂಪಿಗೆ ವಿವರಿಸುವುದನ್ನು ಮುಂದುವರೆಸುತ್ತಿದ್ದಾನೆ.

ಯೇಸು ಕ್ರಿಸ್ತನು ಜನರಿಗೆ ಇವೆಲ್ಲವುಗಳನ್ನು ಸಾಮ್ಯರೂಪದಲ್ಲಿ ಹೇಳಿದನು; ಮತ್ತು ಸಾಮ್ಯವಿಲ್ಲದೆ ಆತನು ಅವರಿಗೆ ಏನೂ ಹೇಳಲಿಲ್ಲ

ಕ್ರಮ "ಹೇಳಿದನು... ಸಾಮ್ಯಗಳು... ಸಮ್ಯಗಳು ಹೇಳಿದನು" ಆತನು ಅವರೊಂದಿಗೆ ಸಾಮ್ಯಗಳ ಮೂಲಕ ಮಾತನಾಡಿದನು ಎಂಬದಕ್ಕೆ ಪ್ರಾಮುಖ್ಯತೆಯನ್ನು ಕೊಡಲಾಗಿದೆ.

ಈ ಎಲ್ಲಾ ವಿಷಯಗಳು

ಯೇಸು ೧೩:೧ರ ಪ್ರಾರಂಭದಲ್ಲಿ ಕಲಿಸಿದ ವಿಷಯಗಳನ್ನು ಇದು ಸೂಚಿಸುತ್ತದೆ.

ಸಾಮ್ಯವಿಲ್ಲದೆ ಆತನು ಅವರಿಗೆ ಏನೂ ಹೇಳಲಿಲ್ಲ

"ಸಾಮ್ಯವನ್ನಲ್ಲದೆ ಆತನು ಅವರಿಗೆ ಏನೂ ಕಲಿಸಲಿಲ್ಲ." ಪರ್ಯಾಯ ಭಾಷಾಂತರ: "ಆತನು ಅವರಿಗೆ ಹೇಳಿದ ಎಲ್ಲವುಗಳನ್ನು ಸಾಮ್ಯರೂಪವಾಗಿಯೇ ಹೇಳಿದನು." (ಹೈಪರ್ಬೋಲ್ ಮತ್ತು ಲಿಟೋಟಸ್ ನೋಡಿರಿ)

ಪ್ರವಾದಿಯ ಮೂಲಕ ಹೇಳಿದ ಮಾತು ಆತನು ಇವುಗಳನ್ನು ಹೇಳಿದಾಗ ನೆರವೇರಿತು

ಇದನ್ನು ಸಕ್ರಿಯವಾದ ಕ್ರಿಯಾಪದದಿಂದ ಭಾಷಾಂತರ ಮಾಡಬಹುದಾಗಿದೆ: "ದೇವರು ಹಲವಾರು ವರ್ಷಗಳ ಹಿಂದೆ ಪ್ರವಾದಿಗೆ ಬರೆಯಲು ಹೇಳಿದ ಕಾರ್ಯವು ನೆರವೇರುವುದನ್ನು ಆತನು ಹೇಳಿದನು" (ಯುಡಿಬಿ). (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ಆತನು ಹೇಳಿದಾಗ

"ಪ್ರವಾದಿಯು ಹೇಳಿದಾಗ"

ರಹಸ್ಯವಾಗಿರುವ ಕಾರ್ಯಗಳು

ಇದನ್ನು ಸಕ್ರಿಯವಾದ ಕ್ರಿಯಾಪದದಲ್ಲಿ ಭಾಷಾಂತರ ಮಾಡಿರಿ: "ದೇವರು ರಹಸ್ಯವಾಗಿ ಇಟ್ಟಿರುವ ಕಾರ್ಯಗಳು" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

Matthew 13:36

ಯೇಸು ಕ್ರಿಸ್ತನು ಪರಲೋಕ ರಾಜ್ಯವು ಹೇಗಿದೆ ಎಂಬದನ್ನು ವಿವಿಧ ಸಾಮ್ಯಗಳ ಮೂಲಕ ಜನರ ಗುಂಪಿಗೆ ವಿವರಿಸುವುದನ್ನು ಮುಂದುವರೆಸುತ್ತಿದ್ದಾನೆ.

ಮನೆಯೊಳಗೆ ಹೋದನು

"ಒಳಗೆ ಹೋದನು" ಅಥವಾ "ಆತನು ತಾನು ಜೀವಿಸುತ್ತಿದ್ದ ಮನೆಯೊಳಗೆ ಹೋದನು."

ಬಿತ್ತುವವನು

"ಬಿತ್ತನೆ ಮಾಡುವವನು"

ಮನುಷ್ಯಕುಮಾರನು

ಯೇಸು ಕ್ರಿಸ್ತನು ತನ್ನ ಕುರಿತಾಗಿಯೇ ಹೇಳಿದ್ದಾನೆ.

ರಾಜ್ಯದ ಮಗನು

"ರಾಜ್ಯಕ್ಕೆ ಸೇರಿದ ಜನರು"

ದುಷ್ಟನ ಮಕ್ಕಳು

"ದುಷ್ಟನಿಗೆ ಸೇರಿದ ಜನರು"

ಅವುಗಳನ್ನು ಬಿತ್ತಿದ ವೈರಿಯು

ಹಣಜಿಯನ್ನು ಬಿತ್ತಿದ ವೈರಿಯು.

ಲೋಕದ ಅಂತ್ಯ

"ಯುಗದ ಸಮಾಪ್ತಿ"

Matthew 13:40

ಯೇಸು ಕ್ರಿಸ್ತನು ಪರಲೋಕ ರಾಜ್ಯವು ಹೇಗಿದೆ ಎಂಬದನ್ನು ವಿವಿಧ ಸಾಮ್ಯಗಳ ಮೂಲಕ ಜನರ ಗುಂಪಿಗೆ ವಿವರಿಸುವುದನ್ನು ಮುಂದುವರೆಸುತ್ತಿದ್ದಾನೆ.

ಆದ್ದರಿಂದ ಹಣಜಿಯನ್ನು ಒಟ್ಟುಗೂಡಿಸಿ ಸುಡುವಾಗ

ಇದನ್ನು ಸಕ್ರಿಯವಾದ ಕ್ರಿಯಾಪದದಲ್ಲಿ ಭಾಷಾಂತರ ಮಾಡಬಹುದಾಗಿದೆ: "ಆದ್ದರಿಂದ, ಜನರು ಹಣಜಿಯನ್ನು ಕೂಡಿಸಿ ಸುಟ್ಟುಬಿಡುವಂತೆ." (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ಲೋಕದ ಅಂತ್ಯ

"ಯುಗದ ಸಮಾಪ್ತಿ"

ಮನುಷ್ಯಕುಮಾರನು ತನ್ನ ದೂತರನ್ನು ಮುಂದಾಗಿ ಕಳುಹಿಸುವನು

ಯೇಸು ಕ್ರಿಸ್ತನು ಇಲ್ಲಿ ತನ್ನ ಬಗ್ಗೆಯೇ ಮಾತನಾಡುತ್ತಿದ್ದಾನೆ. ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು, "ಮನುಷ್ಯಕುಮಾರನಾಗಿರುವ ನಾನು, ನನ್ನ ದೂತರನ್ನು ಮುಂದಾಗಿ ಕಳುಹಿಸುವೆನು."

ಅಪರಾಧವನ್ನು ಮಾಡುವವರು

"ಅನೀತಿವಂತರಾಗಿ ನಡೆಯುವವರು" ಅಥವಾ "ದುಷ್ಟಜನರು"

ಬೆಂಕಿಯ ಕೊಂಡ

ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ಧಗಧಗನೆ ಉರಿಯುವ ಬೆಂಕಿಯ ಕೊಂಡ." ಒಂದುವೇಳೆ ಇದು ಗೊತ್ತಿಲ್ಲದಿದ್ದರೆ ಒಲೆ ಎಂಬದಾಗಿ ಬರೆಯಿರಿ.

ಸೂರ್ಯನ ಹಾಗೆ ಹೊಳೆಯುವನು

"ಸೂರ್ಯನನ್ನು ನೋಡುವ ಹಾಗೆ ಸುಲಭವಾಗಿ ನೋಡಬಹುದು" (ಉಪಮೆ ನೋಡಿರಿ)

ಕಿವಿಯುಳ್ಳವನು ಕೇಳಲಿ

ಕೆಲವು ಭಾಷೆಗಳಲ್ಲಿ ಎರಡನೇ ವ್ಯಕ್ತಿಯನ್ನು ಬಳಸುವುದು ಸಾಮಾನ್ಯವಾಗಿರಬಹುದು: "ನಿಮ್ಮ ಕಿವಿಯಾರಿಗಿದೆಯೋ ಅವರು ಕೇಳಲಿ" ಅಥವಾ "ನಿಮಗೆ ಕಿವಿಯಿದ್ದರೆ ಕೇಳಿಸಿಕೊಳ್ಳಿರಿ" (ಮೊದಲನೆಯ, ಎರಡನೆಯ ಅಥವಾ ಮೂರನೆಯ ವ್ಯಕ್ತಿಯನ್ನು ನೋಡಿರಿ)

Matthew 13:44

ಯೇಸು ಕ್ರಿಸ್ತನು ತನ್ನ ಶಿಷ್ಯರೊಂದಿಗೆ ಮನೆಯಳಗೆ ಹೋಗಿ ದೇವರ ರಾಜ್ಯದ ಕುರಿತಾದ ಸಾಮ್ಯಗಳ ವಿವರಿಸುವುದನ್ನು ಮುಂದುವರೆಸಿದನು. ಈ ಎರಡು ಸಮ್ಯಗಳಲ್ಲಿ ಪರಲೋಕ ರಾಜ್ಯದ ಬಗ್ಗೆ ಕಲಿಸಲು ಯೇಸು ಕ್ರಿಸ್ತನು ಎರಡು ಉಪಮೆಗಳನ್ನು ಉಪಯೋಗಿಸಿದ್ದಾನೆ. (ಉಪಮೆ ನೋಡಿರಿ)

ಪರಲೋಕ ರಾಜ್ಯವು ಹೇಗಿದೆಯೆಂದರೆ

ನೀವು ಉಪಮೆಯಲ್ಲಿ ಹೇಗೆ ಭಾಷಾಂತರ ಮಾಡಿರುವಿರೆಂದು ನೋಡಿರಿ

ಹೊಲದಲ್ಲಿ ಹೂಳಿಟ್ಟಿರುವ ದ್ರವ್ಯ

ದ್ರವ್ಯವು ಅತ್ಯಂತ ಬೆಲೆಬಾಳುವಂಥದ್ದಾಗಿದೆ ಮತ್ತು ಅಮೂಲವಾದದ್ದಾಗಿದೆ ಅಥವಾ ವಸ್ತುಗಳ ಸಂಗ್ರಹವಾಗಿದೆ. ಇದನ್ನು ಸಕ್ರಿಯವಾದ ಕ್ರಿಯಾಪದದೊಂದಿಗೆ ಭಾಷಾಂತರ ಮಾಡಬಹುದಾಗಿದೆ: "ಹೊಲದಲ್ಲಿ ಯಾರೋ ಒಬ್ಬರು ದ್ರವ್ಯವನ್ನು ಹೂಳಿಟ್ಟಿದ್ದಾರೆ" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ಅಡಗಿಸಿಟ್ಟನು

"ಮುಚ್ಚಿಟ್ಟನು"

ತನಗಿರುವ ಎಲ್ಲವನ್ನೂ ಮಾರುತ್ತಾರೆ ಮತ್ತು ಆ ಹೊಲವನ್ನು ಕೊಂಡುಕೊಳ್ಳುತ್ತಾನೆ

ಇಲ್ಲಿ ಒಳಗೊಂಡಿರುವ ಮಾಹಿತಿ ಏನೆಂದರೆ ಹೂಳಿಟ್ಟಿರುವ ದ್ರವ್ಯವನ್ನು ಸ್ವಾಸ್ತ್ಯವಾಗಿ ಪಡೆಯುವ ಸಲುವಾಗಿ ಆ ವ್ಯಕ್ತಿಯು ಹೊಲವನ್ನು ಕೊಂಡುಕೊಳ್ಳುತ್ತಾನೆ. (ಸ್ಪಷ್ಟ ಮತ್ತು ಅಸ್ಪಷ್ಟ ನೋಡಿರಿ)

ವ್ಯಾಪಾರಸ್ಥನು

ವ್ಯಾಪಾರಸ್ಥನು ವಸ್ತುಗಳ ಮಾರಾಟಗಾರನಾಗಿದ್ದಾನೆ, ಸಾಮಾನ್ಯವಾಗಿ ದೂರದ ಸ್ಥಳಗಳಿಂದ ತಂದು ಅಥವಾ ಅಲ್ಲಿಗೆ ಮಾರಾಟ ಮಾಡುತ್ತಾನೆ.

ಅಮೂಲ್ಯವಾದ ಮುತ್ತುಗಳನ್ನು ಹುಡುಕುವುದು

ಇಲ್ಲಿ ಒಳಗೊಂಡಿರುವ ಮಾಹಿತಿ ಏನೆಂದರೆ ಒಬ್ಬ ವ್ಯಕ್ತಿಯು ಅಮೂಲ್ಯವಾದ ಮುತ್ತುಗಳನ್ನು ಕೊಂಡುಕೊಳ್ಳಲು ನೋಡುತ್ತಿರುತ್ತಾನೆ. (ಸ್ಪಷ್ಟ ಮತ್ತು ಅಸ್ಪಷ್ಟ)

ಅಮೂಲ್ಯವಾದ ಮುತ್ತುಗಳು

ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ಉತ್ತಮವಾದ ಮುತ್ತುಗಳು" ಅಥವಾ "ಸುಂದರವಾದ ಮುತ್ತುಗಳು." "ಮುತ್ತು" ಮೃದುವಾದ, ದೃಢವಾದ, ಹೊಳೆಯುವ ಬಿಳೀ ಬಣ್ಣದಲ್ಲಿ ಸಮುದ್ರದ ಚಿಪ್ಪಿನೊಳಗೆ ಇರುವದು, ಇದು ಅತ್ಯಂತ ದುಬಾರಿಯಾಗಿದ್ದು ಆಭರಣಗಳನ್ನು ಮಾಡಲು ಉಪಯೋಗಿಸಲಾಗುತ್ತದೆ.

Matthew 13:47

ಯೇಸು ಕ್ರಿಸ್ತನು ತನ್ನ ಶಿಷ್ಯರೊಂದಿಗೆ ಮನೆಯೊಳಗೆ ಹೋಗಿ ದೇವರ ರಾಜ್ಯದ ಕುರಿತಾದ ಸಾಮ್ಯಗಳ ವಿವರಿಸುವುದನ್ನು ಮುಂದುವರೆಸಿದನು. ಈ ಎರಡು ಸಮ್ಯಗಳಲ್ಲಿ ಪರಲೋಕ ರಾಜ್ಯದ ಬಗ್ಗೆ ಕಲಿಸಲು ಯೇಸು ಕ್ರಿಸ್ತನು ಎರಡು ಉಪಮೆಗಳನ್ನು ಉಪಯೋಗಿಸಿದ್ದಾನೆ. (ಉಪಮೆ ನೋಡಿರಿ)

ಪರಲೋಕ ರಾಜ್ಯವು ಹೇಗಿದೆ ಎಂದರೆ

ಇದನ್ನು ನೀವು ಉಪಮೆಯಲ್ಲಿ ಯಾವ ರೀತಿ ಭಾಷಾಂತರ ಮಾಡಿದ್ದೀರಿ ಎಂಬದನ್ನು ನೋಡಿರಿ

ಸಮುದ್ರದಲ್ಲಿ ಬೀಸಲಾದ ಬಲೆಯಂತಿದೆ

ಇದನ್ನು ಸಕ್ರಿಯವಾದ ಕ್ರಿಯಾಪದದಲ್ಲಿ ಭಾಷಾಂತರ ಮಾಡಬಹುದಾಗಿದೆ: "ಕೆಲವು ಮೀನುಗಾರರು ಸಮುದ್ರದಲ್ಲಿ ಬಲೆಯನ್ನು ಬೀಸಿರುವಂತಿದೆ."

ಸಮುದ್ರದಲ್ಲಿ ಬೀಸಲಾಗಿರುವ ಬಲೆ

"ಸಮುದ್ರದಲಿ ಎಸೆಯಲಾಗಿರುವ ಬಲೆ"

ಎಲ್ಲಾ ರೀತಿಯ ಜೀವಿಗಳನ್ನು ಒಟ್ಟುಗೂಡಿಸಿದನು

"ಎಲ್ಲಾ ರೀತಿಯ ಮೀನುಗಳನ್ನು ಹಿಡಿದನು"

ಅದನ್ನು ದಡದ ಮೇಲೆ ಎಳೆದುಕೊಂಡು ಬಂದನು

"ಬಲೆಯನ್ನು ದಡದ ಮೇಲೆ ಎಳೆದುಕೊಂಡು ಬಂದನು" ಅಥವಾ "ಬಲೆಯನು ಒಣನೆಲದ ಮೇಲೆ ಎಳಕೊಂಡು ಬಂದರು"

ಒಳ್ಳೆಯ ಕಾರ್ಯಗಳು

"ಒಳ್ಳೆಯವುಗಳು"

ಯೋಗ್ಯವಲ್ಲದ ಕಾರ್ಯಗಳು

"ಕೆಟ್ಟ ಮೀನು" ಅಥವಾ "ತಿನ್ನಲು ಅರ್ಹವಲ್ಲದ ಮೀನು"

ಬಿಸಾಡುತ್ತಾರೆ

"ಇಟ್ಟುಕೊಳ್ಳುವದಿಲ್ಲ"

Matthew 13:49

ಯೇಸು ಕ್ರಿಸ್ತನು ತನ್ನ ಶಿಷ್ಯರೊಂದಿಗೆ ಮನೆಯೊಳಗೆ ಹೋಗಿ ದೇವರ ರಾಜ್ಯದ ಕುರಿತಾದ ಸಾಮ್ಯಗಳ ವಿವರಿಸುವುದನ್ನು ಮುಂದುವರೆಸಿದನು. ಈ ಎರಡು ಸಮ್ಯಗಳಲ್ಲಿ ಪರಲೋಕ ರಾಜ್ಯದ ಬಗ್ಗೆ ಕಲಿಸಲು ಯೇಸು ಕ್ರಿಸ್ತನು ಎರಡು ಉಪಮೆಗಳನ್ನು ಉಪಯೋಗಿಸಿದ್ದಾನೆ. (ಉಪಮೆ ನೋಡಿರಿ)

ಲೋಕದ ಅಂತ್ಯ

"ಜಗತ್ತಿನ ಅಂತ್ಯ"

ಮುಂಬರುವ

"ಹೊರಬರುವ" ಅಥವಾ "ಹೊರಗೆ ಹೋಗುವ" ಅಥವಾ "ಪರಲೋಕದಿಂದ ಬರುವ"

ಅವುಗಳನ್ನು ಬಿಸಾಡುತ್ತವೆ

"ದುಷ್ಟರನ್ನು ಬಿಸಾಡುತ್ತಾರೆ"

ಬೆಂಕಿಯ ಕೊಡ

ಇದನ್ನು "ಧಗಧಗನೆ ಉರಿಯುವ ಕೊಂಡ" ಎಂದು ಭಾಷಾಂತರ ಮಾಡಬಹುದು. ಹಳೆಯ ಒಡಂಬಡಿಕೆಯ ದಾನಿಯೇಲನ ಗ್ರಂಥದಲ್ಲಿರುವ ೩:೬ ವಚನಭಾಗಗಳ ಚಿತ್ರವನ್ನು ತಿಳಿಯಲು ನರಕದ ಬೆಂಕಿ ಎಂಬ ಉಪಮೆಯನ್ನು ಬಳಸಲಾಗಿದೆ. ಒಂದುವೇಳೆ ಬೆಂಕಿಯ ಕೊಂಡ ಎಂಬ ಪದವು ಗೊತ್ತಿಲ್ಲದಿರುವದಾದರೆ "ಒಲೆ" ಪದವನ್ನು ಉಪಯೋಗಿಸಿರಿ.

ಅಲ್ಲಿ ಗೋಳಾಟವೂ ಕಟಕಟನೆ ಹಲ್ಲಿ ಕಡಿಯೋಣವೂ ಇರುವುದು

"ದುಷ್ಟರು ಗೋಲಾಡುವರು ಮತ್ತು ಹಲ್ಲುಗಳನ್ನು ಕಡಿಯುವರು"

Matthew 13:51

ಯೇಸು ಕ್ರಿಸ್ತನು ತನ್ನ ಶಿಷ್ಯರೊಂದಿಗೆ ಮನೆಯೊಳಗೆ ಹೋಗಿ ದೇವರ ರಾಜ್ಯದ ಕುರಿತಾದ ಸಾಮ್ಯಗಳ ವಿವರಿಸುವುದನ್ನು ಮುಂದುವರೆಸಿದನು. ಈ ಎರಡು ಸಮ್ಯಗಳಲ್ಲಿ ಪರಲೋಕ ರಾಜ್ಯದ ಬಗ್ಗೆ ಕಲಿಸಲು ಯೇಸು ಕ್ರಿಸ್ತನು ಎರಡು ಉಪಮೆಗಳನ್ನು ಉಪಯೋಗಿಸಿದ್ದಾನೆ. (ಉಪಮೆ ನೋಡಿರಿ)

ಈ ವಿಷಯಗಳೆಲ್ಲವೂ ನಿಮಗೆ ಅರ್ಥವಾಯಿತೇ? ಶಿಷ್ಯರು ಆತನು ಹೇಳಿದ್ದೇನೆಂದರೆ, "ಹೌದು."

ಒಂದುವೇಳೆ ಅವಶ್ಯವಿದ್ದರೆ, ಇದನ್ನು ಪರೋಕ್ಷವಾದ ಹೇಳಿಕೆಯಾಗಿ ಬರೆಯಬಹುದು "ಯೇಸು ಕ್ರಿಸ್ತನು ಅವರಿಗೆ ನಿಮಗೆ ಇವುಗಳು ಅರ್ಥವಾಯಿತೋ ಎಂದು ಕೇಳಿದ್ದಕ್ಕೆ ಅವರು ಆಯಿತು ಎಂದು ಹೇಳಿದರು." (ಭಾಷಣದ ಹೇಳಿಕೆಗಳನ್ನು ನೋಡಿರಿ)

ಶಿಷ್ಯನಾಗಿದ್ದಾನೆ

"ಇದರ ಬಗ್ಗೆ ಕೇಳಿಸಿಕೊಂಡಿದ್ದಾನೆ"

ಗಂಟು

ಗಂಟು ಅತ್ಯಂತ ಬೆಲೆಯುಳ್ಳ ಮತ್ತು ಅಮೂಲ್ಯವಾದದಾಗಿದೆ ಅಥವಾ ವಿಷಯಗಳ ಸಂಗ್ರಹಣೆಯಾಗಿದೆ. ಇಲ್ಲಿ ಇವುಗಳನ್ನು ಕೂಡಿಸಿಡುವ ಸ್ಥಳದ ಬಗ್ಗೆ ಹೇಳಲಾಗಿದೆ, ಅದನ್ನು "ಕಣಜ" ಅಥವಾ "ಗೋದಾಮು" ಎಂದು ಕರೆಯಲಾಗುತದೆ.

Matthew 13:54

ಯೇಸು ಕ್ರಿಸ್ತನು ತನ್ನ ಊರಿನ ಸಭಾಮಂದಿರದಲ್ಲಿ ಬೋಧನೆ ಮಾಡುವಾಗ ಅವರು ಆತನನ್ನು ನಿರಾಕರಿಸಿದ್ದನ್ನು ಈ ವಾಕ್ಯಗಳನ್ನು ನೋಡಬಹುದಾಗಿದೆ.

ಅವನ ಸ್ವಂತ ಪ್ರದೇಶ

"ಸ್ವಂತ ಊರು" (ಯುಡಿಬಿ ನೋಡಿರಿ)

ಅವರ ಸಭಾಮಂದಿರದಲ್ಲಿ

"ಅವರ" ಎಂಬ ಸರ್ವನಾಮವು ಪ್ರದೇಶದಲ್ಲಿರುವ ಜನರನ್ನು ಸೂಚಿಸುತ್ತದೆ.

ಅವರಿಗೆ ಆಶ್ಚರ್ಯವಾಯಿತು

"ಅವರಿಗೆ ವಿಸ್ಮಯವಾಯಿತು"

ಮತ್ತು ಈ ಅದ್ಭುತಗಳು

"ಈ ಅದ್ಭುತಗಳನ್ನು ಮಾಡಲು ಆತನಿಗೆ ಎಲ್ಲಿಂದ ಅಧಿಕಾರವು ದೊರೆತಿದೆ" (ಎಲಿಪ್ಸಿಸ್ ನೋಡಿರಿ)

ಬಡಗಿಯ ಮಗನು

ಬಡಗಿಯು ಮರಗೆಲಸ ಮಾಡುವವನಾಗಿದ್ದಾನೆ. ಒಂದುವೇಳೆ "ಬಡಗಿ" ಎಂಬದು ಗೊತ್ತಿಲ್ಲದಿದ್ದರೆ "ನಿರ್ಮಾಣಿಕನು" ಎಂಬ ಪದವನ್ನು ಬಳಸಿರಿ.

Matthew 13:57

ಯೇಸು ಕ್ರಿಸ್ತನು ತನ್ನ ಊರಿನ ಸಭಾಮಂದಿರದಲ್ಲಿ ಬೋಧನೆ ಮಾಡುವಾಗ ಅವರು ಆತನನ್ನು ನಿರಾಕರಿಸಿದ್ದನ್ನು ಈ ವಾಕ್ಯಗಳಲ್ಲಿ ಮುಂದುವರೆಯುತ್ತಿರುವುದು ನಾವು ನೋಡಬಹುದಾಗಿದೆ.

ಅವರಿಗೆ ಆತನಿಂದ ಕಸಿವಿಸಿಯಾಯಿತು

"ಯೇಸು ಕ್ರಿಸ್ತನ ಸ್ವಂತ ಊರಿನವರು ಆತನಿಗೆ ವಿರುದ್ದವಾಗಿ ಮಾತನಾಡಿದರು" ಅಥವಾ "ಅವರು ಆತನನ್ನು ಅಂಗೀಕರಿಸಿಕೊಳ್ಳಲಿಲ್ಲ"

ಪ್ರವಾದಿಗೆ ಮರ್ಯಾದೆ ಸಿಗದೆ ಇರುವದಿಲ್ಲ

"ಪ್ರವಾದಿಗೆ ಎಲ್ಲಾ ಕಡೆಗಳಲ್ಲಿಯೂ ಮರ್ಯಾದೆ ಸಿಗುತ್ತದೆ" ಅಥವಾ "ಜನರು ಪ್ರವಾದಿಗೆ ಎಲ್ಲಾ ಕಡೆಗಳಲ್ಲಿಯೂ ಮರ್ಯಾದೆ ಕೊಡುತ್ತಾರೆ"

ಅವನ ಸ್ವದೇಶ

"ಸ್ವಂತ ಊರು" ಅಥವಾ "ಸ್ವಂತ ಸ್ಥಳ"

ಅವನ ಸ್ವಂತ ಕುಟುಂಬದವರು

"ಅವನ ಸ್ವಂತ ಮನೆಯವರು"

ಅವನು ಅಲ್ಲಿ ಹೆಚ್ಚಿನ ಅದ್ಬುತಗಳನ್ನು ಮಾಡಲಿಲ್ಲ

ಯೇಸು ಕ್ರಿಸ್ತನು ತನ್ನ ಊರಿನಲ್ಲಿ ಹೆಚ್ಚಿನ ಅದ್ಭುತಗಳನ್ನು ಮಾಡಲಿಲ್ಲ"