Matthew 11

Matthew 11:1

ಈ ವಚನಭಾಗಗಳು ಯೇಸು ಕ್ರಿಸ್ತನು ಸ್ನಾನಿಕನಾದ ಯೋಹಾನನ ಶಿಷ್ಯರ ಪ್ರಶ್ನೆಗೆ ಯಾವ ರೀತಿ ಪ್ರತಿಕ್ರಿಯಿದನು ಎಂಬದನ್ನು ಸೂಚಿಸುತ್ತದೆ.

ಆಗ ನಡೆದದ್ದೇನೆಂದರೆ

ಈ ಸಮಯದಲ್ಲಿ ಒಂದು ಘಟನೆಯು ಪ್ರಾರಂಭವಾಗುತ್ತಿದೆ ಎಂಬದನ್ನು ಸೂಚಿಸಲು ಈ ಪದಗಳನ್ನು ಬಳಸಲಾಗಿದೆ. ಒಂದುವೇಳೆ ನಿಮ್ಮ ಭಾಷೆಯಲ್ಲಿ ಇದನ್ನು ತೋರಿಸುವ ವಿಧಾನ ಇರುವದಾದರೆ, ಅದನ್ನು ನೀವು ಉಪಯೋಗಿಸಿಕೊಳ್ಳಬಹುದು. ಇದನ್ನೂ ಈ ರೀತಿಯಾಗಿ ಭಾಷಾಂತರ ಮಾಡಬಹುದು "ಆಗ" ಅಥವಾ "ಅದಾದ ನಂತರ"

ಸೂಚಿಸಿದನು

ಈ ಪದವನ್ನು "ಬೋಧಿಸುವುದು" ಅಥವಾ "ಆಜ್ಞಾಪಿಸುವುದು" ಎಂಬದಾಗಿಯೂ ಸಹ ಭಾಷಾಂತರ ಮಾಡಬಹುದು.

ಆತನ ಹನ್ನೆರೆಡು ಮಂದಿ ಶಿಷ್ಯರು

ಇದು ಯೇಸು ಕ್ರಿಸ್ತನು ಆರಿಸಿಕೊಂಡ ಹನ್ನೆರೆಡು ಮಂದಿಯನ್ನು ಸೂಚಿಸುತ್ತದೆ.

ಈಗ

"ಆ ಸಮಯದಲ್ಲಿ." ಇದನ್ನು ತೆಗೆದುಹಾಕಲೂ ಬಹುದು (ಯುಡಿಬಿ ನೋಡಿರಿ).

ಯೋಹಾನನು ಸೆರೆಮನೆಯಲ್ಲಿ ಸುದ್ದಿಯನ್ನು ಕೇಳಿದಾಗ

ಪರ್ಯಾಯ ಭಾಷಾಂತರ: "ಸೆರೆಮನೆಯಲ್ಲಿದ್ದ ಯೋಹಾನನು, ಕೇಳಿಸಿಕೊಂಡಾಗ" ಅಥವಾ "ಸೆರೆಮನೆಯಲ್ಲಿರುವ ಯೋಹಾನನಿಗೆ ಯಾರೋ ಇದನ್ನು ಹೇಳಿದಾಗ"

ಆತನು ತನ್ನ ಶಿಷ್ಯರ ಮೂಲಕ ಸಂದೇಶವನ್ನು ಕಳುಹಿಸಿದನು

ಸ್ನಾನಿಕನಾದ ಯೋಹಾನನು ತನ್ನ ಸ್ವಂತ ಶಿಷ್ಯರನ್ನು ಯೇಸುವಿನ ಬಳಿಗೆ ಸಂದೇಶ ಕೊಟ್ಟು ಕಳುಹಿಸಿದನು.

ಮತ್ತು ಆತನಿಗೆ ಹೇಳಿದ್ದೇನೆಂದರೆ

"ಆತನ" ಎಂಬ ಸರ್ವನಾಮವು ಯೇಸುವನ್ನು ಸೂಚಿಸುತ್ತದೆ.

ಬರಬೇಕಾದವನು ನೀನೋ

ಈ ರೀತಿಯಾಗಿ ಭಾಷಾಂತರ ಮಾಡಬಹುದು "ಬರಬೇಕಾದವನು" ಅಥವಾ "ನಾವು ಎದುರುನೋಡುತ್ತಿರುವವನು ನೀನೋ," ಇದು ಮೆಸ್ಸೀಯನಿಗೆ ಬಳಸಲಾಗಿರುವ ವಿವಿಧ ಪದಗಳಾಗಿವೆ ("ಕ್ರಿಸ್ತನು," ಯುಡಿಬಿ).

ನಾವು ಎದುರುನೋಡುತ್ತಿದ್ದೇವೆ

"ನಾವು ನಿರೀಕ್ಷೆಯಲ್ಲಿದ್ದೇವೆ." "ನಾವು" ಎಂಬ ಸರ್ವನಾಮವು ಎಲ್ಲಾ ಯೆಹೂದ್ಯರನ್ನು ಸೂಚಿಸುತ್ತದೆಯೇ ಹೊರತು ಕೇವಲ ಯೋಹಾನನ ಶಿಷ್ಯರನ್ನು ಮಾತ್ರವಲ್ಲ.

Matthew 11:4

ಸ್ನಾನಿಕನಾದ ಯೋಹಾನನ ಶಿಷ್ಯರಿಗೆ ಯೇಸು ಕ್ರಿಸ್ತನು ನೀಡಿದ ಪ್ರತಿಕ್ರಿಯೆಯು ಇಲ್ಲಿಗೆ ಮುಗಿಯುತ್ತದೆ.

ಯೋಹಾನನಿಗೆ ಹೇಳಿಗೆ

"ಯೋಹಾನನಿಗೆ ತಿಳಿಸಿರಿ"

Matthew 11:7

ಯೇಸು ಕ್ರಿಸ್ತನು ಸ್ನಾನಿಕನಾದ ಯೋಹಾನನ ಬಗ್ಗೆ ಜನರಿಗೆ ಹೇಳಲು ಪ್ರಾರಂಭಿಸುತ್ತಿದ್ದಾನೆ.

ನೀವು ಏನನ್ನು ನೋಡಲು ಹೋದಿರಿ

ಸ್ನಾನಿಕನಾದ ಯೋಹಾನನು ಯಾವ ರೀತಿಯ ವ್ಯಕ್ತಿಯಾಗಿದ್ದಾನೆ ಎಂಬದನ್ನು ಜನರು ಆಲೋಚಿಸಲಿ ಎಂಬ ಉದ್ದೇಶದಿಂದ ಯೇಸು ಕ್ರಿಸ್ತನು ಈ ವಾಕ್ಯವನ್ನು ಮೂರು ಆಲಂಕಾರಿಕ ಪ್ರಶ್ನೆಯಲ್ಲಿ ಉಪಯೋಗಿಸಿದ್ದಾನೆ. ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ನೀವು ನೋಡಲು ಹೋಗಿದ್ದೀರೋ ...? ಖಂಡಿತವಾಗಿಯೂ ಇಲ್ಲ!" ಅಥವಾ "ಖಂಡಿತವಾಗಿಯೂ ನೀವು ನೋಡಲು ಹೋಗಿಲ್ಲ ...!" (ಆಲಂಕಾರಿಕ ಪ್ರಶ್ನೆ ನೋಡಿರಿ)

ಗಾಳಿಯಿಂದ ದಂಟು ಅಲುಗಾಡುತ್ತಿದೆ

ಇದರ ಅರ್ಥ ೧) ಯೊರ್ದನ್ ಹೊಳೆಯ ಪಕ್ಕದಲ್ಲಿರುವ ಗಿಡಗಳು (ಯುಡಿಬಿ ನೋಡಿರಿ) ಅಥವಾ ೨) ಈ ರೀತಿಯ ವ್ಯಕ್ತಿಗೆ ರೂಪಕಾಲಂಕಾರವಾಗಿದೆ: "ದಂಟಿನ ಹಾಗಿರುವ ವ್ಯಕ್ತಿಯು ಗಾಳಿಯಿಂದ ಅಲುಗಾಡಿದ್ದಾನೆ." (ಉಪಮೆ ನೋಡಿರಿ) ಈ ಉಪಮೆಗೆ ಎರಡು ವಿವರಣೆಗಳಿವೆ: ಅಂಥ ವ್ಯಕ್ತಿಯು ಎಂಥವನೆಂದರೆ ೧) ಗಾಳಿಗೆ ಸುಲಭವಾಗಿ ಬಾಗುತ್ತಾನೆ, ಮನಸ್ಸನ್ನು ಸುಲಭವಾಗಿ ಬದಲಾಯಿಸಿಕೊಳ್ಳಲು ಈ ರೂಪಕಾಲಂಕಾರವನ್ನು ಬಳಸಲಾಗಿದೆ, ಅಥವಾ ೨) ಗಾಳಿ ಬೀಸುವಾಗ ಶಬ್ದ ಬರುತ್ತದೆ, ಬಹಳವಾಗಿ ಮಾತನಾಡಿದರೂ ಪ್ರಾಮುಖ್ಯವಾಗಿರುವದನ್ನು ಹೇಳದಿರುವದಕ್ಕೆ ಇದು ರೂಪಕಾಲಂಕಾರವಾಗಿದೆ. (ರೂಪಕಾಲಂಕಾರ ನೋಡಿರಿ)

ದಂಟು

"ಉದ್ದವಾಗಿರುವ ಹುಲ್ಲಿನ ಗಿಡ"

ಮೃದುವಾದ ವಸ್ತ್ರಧಾರಣೆ

"ದುರಾವೆ ವಸ್ತ್ರಧಾರಣೆ." ಐಶ್ವರ್ಯವಂತರು ಈ ರೀತಿ ವಸ್ತ್ರಗಳನ್ನು ಧರಿಸಿಕೊಳ್ಳುತ್ತಾರೆ.

ನಿಜವಾಗಿಯೂ

ಸಾಮನ್ಯವಾಗಿ ಈ ಪದವನ್ನು "ನೋಡಿರಿ" ಎಂದು ಭಾಷಾಂತರ ಮಾಡಲಾಗಿದೆ, ಮುಂಬರುವದಕ್ಕೆ ಇದು ಪ್ರಾಮುಖ್ಯತೆಯನ್ನು ಕೊಡುತ್ತದೆ. ಪರ್ಯಾಯ ಭಾಷಾಂತರ: "ವಾಸ್ತವವಾಗಿ."

Matthew 11:9

ಯೇಸು ಕ್ರಿಸ್ತನು ಸ್ನಾನಿಕನಾದ ಯೋಹಾನನ ಬಗ್ಗೆ ಜನರಿಗೆ ಹೇಳಲು ಮುಂದುವರೆಸುತ್ತಿದ್ದಾನೆ.

ಆದರೆ ನೀವು ನೋಡಲು ಹೋದದ್ದು ಏನನ್ನು

ಇದು ಸ್ನಾನಿಕನಾದ ಯೋಹಾನನ ವಿಷಯದಲ್ಲಿ ಗಂಭೀರವಾದ ಆಲಂಕಾರಿಕ ಪ್ರಶ್ನೆಗಳನ್ನು ಮುಂದುವರೆಸುತ್ತದೆ. (ಆಲಂಕಾರಿಕ ಪ್ರಶ್ನೆ ನೋಡಿರಿ)

ಆದರೆ ನೀವು ಏನನ್ನು ನೋಡಲು ಹೋದಿರಿ

ಪ್ರವಾದಿಯನ್ನೋ? ಹೌದು, ನಾನು ನಿಮಗೆ ಹೇಳುವದೇನೆಂದರೆ

"ನಿಮಗೆ" ಎಂಬ ಸರ್ವನಾಮವು ಎರಡು ಸಂದರ್ಭಗಳಲ್ಲಿ ಜನರನ್ನು ಸೂಚಿಸುತ್ತಿದೆ.

ಪ್ರವಾದಿಗಿಂತಲೂ ಹೆಚ್ಚಿನವನು

"ಸಾಮಾನ್ಯವಾದ ಪ್ರವಾದಿಯಲ್ಲ" ಅಥವಾ "ಸಮಾನ್ಯವಾದ ಪ್ರವಾದಿಗಿಂತಲೂ ಹೆಚ್ಚಿನವವನು"

ಆತನೇ ಇವನು

"ಇವನು" ಎಂಬದು ಸ್ನಾನಿಕನಾದ ಯೋಹಾನನನ್ನು ಸೂಚಿಸುತ್ತದೆ.

ಆತನ ಬಗ್ಗೆಯೇ ಬರೆದದೆ

"ಆತನ" ಎಂಬ ಸರ್ವನಾಮವು ಮುಂದಿನ ವಾಕ್ಯದಲ್ಲಿರುವ "ನನ್ನ ಸಂದೇಶಕನು" ಎಂಬದನ್ನು ಸೂಚಿಸುತ್ತದೆ.

ನೋಡಿ, ನಾನು ನನ್ನ ಸಂದೇಶಕನನ್ನು ನಿನಗಿಂತ ಮುಂದಾಗಿ ಕಳುಹಿಸುತ್ತಿದ್ದೇನೆ, ಆತನು ನಿನಗಿಂತ ಮೊದಲು ನಿನ್ನ ಮಾರ್ಗಗಳನ್ನು ಸಿದ್ಧಮಾಡುವನು

ಯೇಸು ಕ್ರಿಸ್ತನು ಇಲ್ಲಿ ಮಲಾಕಿ ಪ್ರವಾದನೆಯಲ್ಲಿ ಬರೆದಿರುವ ವಾಕ್ಯವನ್ನು ಹೇಳುತ್ತಿದ್ದಾನೆ ಮತ್ತು ಮಲಾಕಿ ೩:೧ರಲ್ಲಿ ಯೋಹಾನನ ಬಗ್ಗೆ ಹೇಳಲಾಗಿದೆ ಎಂಬದನ್ನು ಸೂಚಿಸುತ್ತಿದ್ದಾನೆ.

ನಾನು ನನ್ನ ಸಂದೇಶಕನನ್ನು ಕಳುಹಿಸುತ್ತಿದ್ದೇನೆ

"ನಾನು" ಮತ್ತು "ನನ್ನ" ಎಂಬ ಸರ್ವನಾಮಗಳು ದೇವರನ್ನು ಸೂಚಿಸುತ್ತವೆ. ಹಳೆಯ ಒಡಂಬಡಿಕೆಯ ಈ ಪ್ರವಾದನೆಯನ್ನು ಬರೆದಿರುವ ಬರಹಗಾರನು ದೇವರ ಮಾತುಗಳನ್ನು ಬಳಸಿದ್ದಾನೆ.

Matthew 11:11

ಯೇಸು ಕ್ರಿಸ್ತನು ಸ್ನಾನಿಕನಾದ ಯೋಹಾನನ ಬಗ್ಗೆ ಜನರಿಗೆ ಹೇಳಲು ಮುಂದುವರೆಸುತ್ತಿದ್ದಾನೆ.

ಸ್ತ್ರೀಯರಲ್ಲಿ ಹುಟ್ಟಿದವರೊಳಗೆ

"ಸ್ತ್ರೀಯರು ಜನ್ಮ ನೀಡಿರುವವರೊಳಗೆ" ಅಥವಾ "ಲೋಕದಲ್ಲಿ ಜೀವಿಸಿರುವ ಎಲ್ಲಾ ಜನರೊಳಗೆ" (ಯುಡಿಬಿ ನೋಡಿರಿ)

ಸ್ನಾನಿಕನಾದ ಯೋಹಾನನಿಗಿಂತ ಹೆಚ್ಚಿನವರು ಯಾರೂ ಇಲ್ಲ

"ಸ್ನಾನಿಕನಾದ ಯೋಹಾನನು ಹೆಚ್ಚಿನವನಾಗಿದ್ದಾನೆ"

ದೇವರ ರಾಜ್ಯದಲಿ

ಸ್ಥಾಪನೆಯಾಗಿರುವ ರಾಜ್ಯದ ಒಂದು ಭಾಗ. "ಪರಲೋಕರಾಜ್ಯದೊಳಗೆ ಪ್ರವೇಶಿಸಿರುವವನು."

ಆತನಿಗಿಂತ ಹೆಚ್ಚಿನವನಾಗಿದ್ದಾನೆ

"ಯೋಹಾನನಿಗಿಂತ ಹೆಚ್ಚಿನವನಾಗಿದ್ದಾನೆ"

ಸ್ನಾನಿಕನಾದ ಯೋಹಾನನ ದಿವಸಗಳಿಂದ ಇಲ್ಲಿಯ ತನಕ

"ಯೋಹಾನನು ತನ್ನ ಸಂದೇಶವನ್ನು ಸಾರಲು ಪ್ರಾರಂಭಿಸಿದ ದಿನದಿಂದ"

ಪರಲೋಕ ರಾಜ್ಯವು ಹಿಂಸೆಯನ್ನು ನೋಡುತ್ತಿದೆ, ಮತ್ತು ಸಾಮಾನ್ಯವಾಗಿ ಹಿಂಸೆಯು ಒತ್ತಾಯದಿಂದ ನಡೆಯುತ್ತಿದೆ

ಅರ್ಥಗಳು ಏನೆಂದರೆ ೧) ಹಿಂಸೆಯ ಜನರು ಅದನ್ನು ಹಿಂಸೆಯಿಂದಲೇ ನೋಡುತ್ತಾರೆ (ಯುಡಿಬಿ ನೋಡಿರಿ) ಅಥವಾ ೨) "ಜನರು ಪರಲೋಕದ ರಾಜ್ಯದ ವಿಚಾರಗಳನ್ನು ಹಿಂಸಿಸುತ್ತಾರೆ ಮತ್ತು ಹಿಂಸೆಯ ಜನರ ಅದರ ಮೇಲೆ ಹಿಡಿತವನ್ನು ಸಾಧಿಸಲು ಬಯಸುತ್ತಿದ್ದಾರೆ" ಅಥವಾ ೩) "ಪರಲೋಕ ರಾಜ್ಯವು ಬಲವಾಗಿ ಮುಂದಕ್ಕೆ ಸಾಗುತ್ತಿದೆ, ಮತ್ತು ಪ್ರಬಲರು ಅದರ ಭಾಗವಾಗಬೇಕೆಂದು ಬಯಸುತ್ತಿದ್ದಾರೆ."

Matthew 11:13

ಯೇಸು ಕ್ರಿಸ್ತನು ಸ್ನಾನಿಕನಾದ ಯೋಹಾನನ ಬಗ್ಗೆ ಜನರಿಗೆ ಹೇಳಲು ಮುಂದುವರೆಸುತ್ತಿದ್ದಾನೆ.

ಧರ್ಮಶಾಸ್ತ್ರ

"ಮೋಶೆಯ ಧರ್ಮಶಾಸ್ತ್ರ"

ಯೋಹಾನ

ಸ್ನಾನಿಕನಾದ ಯೋಹಾನ

ಮತ್ತು ಒಂದುವೇಳೆ ನೀವು

"ನೀವು" ಎಂವ ಸರ್ವನಾಮವು ಗುಂಪಿನಲ್ಲಿರುವ ಜನರನ್ನು ಸೂಚಿಸುತ್ತದೆ.

ಇವನು ಎಲೀಯನು

ಇವನು ಸ್ನಾನಿಕನಾದ ಯೋಹಾನನನ್ನು ಸೂಚಿಸುತ್ತದೆ. ಸ್ನಾನಿಕನಾದ ಯೋಹಾನನು ಹಳೆಯ ಒಡಂಬಡಿಕೆಯಲ್ಲಿ ಎಲೀಯ ಪ್ರವಾದಿಯೊಂದಿಗೆ ಹೋಲಿಕೆಯಾಗಿದ್ದಾನೆ ಎಂಬದಾಗಿ ಹೇಳುತ್ತದೆಯೇ ಹೊರತು ಸ್ನಾನಿಕನಾದ ಯೋಹಾನನೇ ನಿಜವಾಗಿಯೂ ಎಲೀಯನೆಂದು ಹೇಳುವದಿಲ್ಲ. (ಮೆಟಾನಿಮೈ ನೋಡಿರಿ)

ಕಿವಿಯುಳ್ಳವನು ಕೇಳಲಿ

ಕೆಲವು ಭಾಷೆಗಳಲ್ಲಿ ಎರಡನೇ ವ್ಯಕ್ತಿಯನ್ನು ಉಪಯೋಗಿಸುವುದು ಸಾಮಾನ್ಯವಾದ ಸಂಗತಿಯಾಗಿರಬಹುದು: "ಕೇಳಿಸಿಕೊಳ್ಳಲು ಕಿವಿಯುಳ್ಳವರು ಕೇಳಿಸಿಕೊಳ್ಳಲಿ." (ಮೊದಲನೆಯ, ಎರಡನೆಯ ಅಥವಾ ಮೂರನೆಯ ವ್ಯಕ್ತಿಯನ್ನು ನೊಡಿರಿ)

ಕೇಳಿಸಿಕೊಳ್ಳಲು ಕಿವಿಯುಳ್ಳವನು

"ಕೇಳಿಸಿಕೊಳ್ಳಲಾಗುವವನು" ಅಥವಾ "ನನ್ನ ಮಾತುಗಳನ್ನು ಕೇಳಿಸಿಕೊಳ್ಳುವವನು"

ಕೇಳಿಸಿಕೊಳ್ಳಲಿ

"ಚೆನ್ನಾಗಿ ಕೇಳಿಸಿಕೊಳ್ಳಲಿ" ಅಥವಾ "ನಾನು ಹೇಳುವ ಮಾತುಗಳಿಗೆ ಗಮನಕೊಡಲಿ"

Matthew 11:16

ಯೇಸು ಕ್ರಿಸ್ತನು ಸ್ನಾನಿಕನಾದ ಯೋಹಾನನ ಬಗ್ಗೆ ಜನರಿಗೆ ಹೇಳಲು ಮುಂದುವರೆಸುತ್ತಿದ್ದಾನೆ.

ನಾನು ಯಾವುದಕ್ಕೆ ಹೋಲಿಸಬೇಕು

ಇದು ಆಲಂಕಾರಿಕ ಪ್ರಶ್ನೆಯ ಪ್ರಾರಂಭವಾಗಿದೆ. ಆ ಕಾಲದ ಜನರು ಮತ್ತು ವ್ಯಾಪಾರ ಸ್ಥಳದಲ್ಲಿ ಜನರು ಏನು ಹೇಳುತ್ತಾರೆ ಎಂಬುದರ ನಡುವೆಯಿರುವ ಹೋಲಿಕೆಯನ್ನು ಪರಿಚಯಪಡಿಸಲು ಯೇಸು ಕ್ರಿಸ್ತನು ಇದನ್ನು ಉಪಯೋಗಿಸಿದ್ದಾನೆ. ಆತನು ಆಲಂಕಾರಿಕ ಪ್ರಶ್ನೆಯೊಂದಿಗೆ ಪ್ರಾರಂಭಿಸುತ್ತಿದ್ದಾನೆ. (ಆಲಂಕಾರಿಕ ಪ್ರಶ್ನೆ ನೋಡಿರಿ)

ಇದು ಮಕ್ಕಳು ವ್ಯಾಪಾರ ಸ್ಥಳದಲ್ಲಿ ಆಟವಾಡುತ್ತಾ, ಕುಳಿತುಕೊಂಡು ಒಬ್ಬರು ಮತ್ತೊಬ್ಬರನ್ನು ಕರೆಯುವಂತಿದೆ

ಈ ಉಪಮೆಯ ಅರ್ಥ ೧) ಯೇಸು "ಕೊಳಲು ಬಾರಿಸಿದನು" ಮತ್ತು ಯೋಹಾನನು "ದುಃಖಿಸಿದನು," ಆದರೆ "ಈ ಸಂತತಿಯವರು" ಕುಣಿಯಲು ಅಥವಾ ಕಣ್ಣೀರಿಡಲು ನಿರಾಕರಿಸಿದರು, ವಿಧೇಯತೆಯ ರೂಪಕಾಲಂಕಾರಗಳು, ಅಥವಾ ೨) ಫರಿಸಾಯರು ಮತ್ತು ಧಾರ್ಮಿಕ ನಾಯಕರು ಮೋಶೆಯ ಧರ್ಮಶಾಸ್ತ್ರಕ್ಕೆ ತಾವು ಸೇರಿಸಿರುವ ಕಾರ್ಯಗಳಿಗೆ ಜನರು ವಿಧೇಯರಾಗದಿರುವದನ್ನು ಕಂಡು ಸಾಮಾನ್ಯ ಜನರನ್ನು ಟೀಕಿಸಿದರು (ಉಪಮೆ, ರೂಪಕಾಲಂಕಾರ ನೋಡಿರಿ)

ಈ ಸಂತತಿ

"ಈಗ ಜೀವಿಸುತ್ತಿರುವ ಜನರು" ಅಥವಾ "ಈ ಜನರು" ಅಥವಾ "ಈ ಸಂತತಿಯ ಜನರು" (ಯುಡಿಬಿ ನೋಡಿರಿ)

ವ್ಯಾಪಾರಸ್ಥಳ

ಇದು ವಿಸ್ತಾರವಾದ, ಸಾರ್ವಜನಿಕ ಸ್ಥಳವಾಗಿದ್ದು ಜನರು ಇಲ್ಲಿ ತಮ್ಮ ಸರಕುಗಳನ್ನು ಮಾರಲು ಬರುತ್ತಿದ್ದರು.

Matthew 11:18

ಯೇಸು ಕ್ರಿಸ್ತನು ಜನರೊಂದಿಗೆ ಸ್ನಾನಿಕನಾದ ಯೋಹಾನನ ಬಗ್ಗೆ ಮಾತನಾಡುವುದನ್ನು ಮುಗಿಸುತ್ತಿದ್ದಾನೆ.

ರೊಟ್ಟಿಯನ್ನು ತಿನ್ನುವದಿಲ್ಲ

"ಆಹಾರ ತಿನ್ನುವುದಿಲ್ಲ." ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ಸತತವಾಗಿ ಉಪವಾಸ ಮಾಡುವುದು" ಅಥವಾ "ಒಳ್ಳೆಯ ಆಹಾರವನ್ನು ತಿನ್ನುವದಿಲ್ಲ" (ಯುಡಿಬಿ). ಇದರ ಅರ್ಥ ಯೋಹಾನನು ಊಟವನ್ನೇ ತಿಂದಿಲ್ಲ ಎಂಬದಾಗಿಯಲ್ಲ.

ಅವರು ಆತನು ದೆವ್ವ ಎಂದು ಹೇಳುತ್ತಾರೆ

ಜನರು ಯೋಹಾನನ ಬಗ್ಗೆ ಹೇಳುತ್ತಿರುವುದನ್ನು ಯೇಸು ಹೇಳುತ್ತಿದ್ದಾನೆ. ಇದನ್ನು ಪರೋಕ್ಷ ಹೇಳಿಕೆಯಾಗಿ ಭಾಷಾಂತರ ಮಾಡಬಹುದು: "ಅವನು ದುರಾತ್ಮಪೀಡಿತನು ಎಂದು ಅವರು ಹೇಳುತ್ತಾರೆ" ಅಥವಾ "ಅವನಲ್ಲಿ ದುರಾತ್ಮವಿದೆ ಎಂದು ಅವರು ಆರೋಪ ಮಾಡುತ್ತಾರೆ." (ಭಾಷಣದ ಹೇಳಿಕೆಗಳನ್ನು ನೋಡಿರಿ)

ಅವರು

"ಅವರು" ಎಂಬ ಸರ್ವನಾಮವು ಈಗಿನ ಸಂತತಿಯ ಜನರನ್ನು ಪ್ರತಿನಿಧಿಸುತ್ತದೆ (ವಚನ ೧೬).

ಮನುಷ್ಯಕುಮಾರನು

ಅಲ್ಲಿದ್ದ ಜನರು ತನ್ನನ್ನು ಮನುಷ್ಯಕುಮಾರನೆಂದು ತಿಳಿದುಕೊಳ್ಳಬೇಕೆಂದು ಯೇಸು ಬಯಸಿದ್ದರಿಂದ, ಇದನ್ನು ಈ ರೀತಿಯಾಗಿಯೂ ಭಾಷಾಂತರ ಮಾಡಬಹುದು, "ಮನುಷ್ಯಕುಮಾರನಾದ, ನಾನು."

ಅವರು, ಆತನು ಹೊಟ್ಟೆಬಾಕನು ಎಂದು ಹೇಳುತ್ತಾರೆ

ಮನುಷ್ಯಕುಮಾರನಾಗಿರುವ ಆತನ ಬಗ್ಗೆ ಜನರು ಏನು ಹೇಳುತ್ತಾರೆ ಎಂಬದನ್ನು ಯೇಸು ಹೇಳುತ್ತಿದ್ದಾನೆ. ಇದನ್ನು ಪರೋಕ್ಷವಾದ ಹೇಳಿಕೆಯಾಗಿಯೂ ಭಾಷಾಂತರ ಮಾಡಬಹುದು: "ಅವರು ಆತನು ಹೊಟ್ಟೆಬಾಕನು ಅನ್ನುತ್ತಾರೆ" ಅಥವಾ "ಆತನು ಬಹಳವಾಗಿ ತಿನ್ನುತ್ತಾನೆ ಎಂದು ಅವರು ಆರೋಪ ಮಾಡುತ್ತಾರೆ."

ಅವನು ಹೊಟ್ಟೆಬಾಕ ಮನುಷ್ಯನು

"ಅವನು ಅತಿಯಾಗಿ ತಿನ್ನುವವನು" ಅಥವಾ "ಅವನು ಸ್ವಭಾವ ಸಿದ್ಧವಾಗಿಯೇ ಹೆಚ್ಚು ತಿನ್ನುತ್ತಾನೆ"

ಆದರೆ ಜ್ಞಾನವು ತನ್ನ ಕಾರ್ಯಗಳಿಂದಲೇ ಜ್ಞಾನವೆಂದು ಸಾಬೀತಾಗುತ್ತದೆ

ಇದು ಬಹುಶಃ ಜ್ಞಾನೋಕ್ತಿಯಾಗಿದ್ದು ಯೇಸು ಕ್ರಿಸ್ತನು ಈ ಪರಿಸ್ಥಿತಿಗೆ ಹೋಲಿಸುತ್ತಿದ್ದಾನೆ, ಯಾಕೆಂದರೆ ಆತನನ್ನು ಮತ್ತು ಯೋಹಾನನನ್ನು ನಿರಾಕರಿಸುವ ಜನರು ಬುದ್ದಿವಂತರಾಗಿರಲಿಲ್ಲ. ಇದನ್ನು ಯುಡಿಬಿಯಲ್ಲಿರುವಂತೆ ಸಕ್ರಿಯ ವಾಕ್ಯವಾಗಿಯೂ ಭಾಷಾಂತರ ಮಾಡಬಹುದು (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ).

ಜ್ಞಾನವು ಜ್ಞಾನವೆಂದು ಗೊತ್ತಾಗುತ್ತದೆ

ಜ್ಞಾನವನ್ನು ವ್ಯಕ್ತಿಗತಗೊಳಿಸಲಾಗಿರುವ ಈ ಭಾವನೆಯಲ್ಲಿ, ಜ್ಞಾನವನ್ನು ದೇವರಿಗಿಂತ ಮುಂಚೆ ಇಡಲಾಗಿದೆ ಎಂದು ಹೇಳಲಾಗಿಲ್ಲ ಬದಲಾಗಿ ಜ್ಞಾನವು ಸರಿ ಎಂದು ಸಾಬೀತಾಗುವುದು ಎಂಬದಾಗಿ ಹೇಳಲಾಗಿದೆ (ವ್ಯಕ್ತಿಗತಗೊಳಿಸುವಿಕೆ ನೋಡಿರಿ)

ಅದರ ಕಾರ್ಯಗಳು

"ಅದರ" ಎಂಬ ಸರ್ವನಾಮವು ವ್ಯಕ್ತಿಗತಗೊಳಿಸಿರುವ ಜ್ಞಾನವನ್ನು ಸೂಚಿಸುತ್ತದೆ.

Matthew 11:20

ಯೇಸು ಕ್ರಿಸ್ತನು ಹಿಂದೆ ತಾನು ಅದ್ಭುತಗಳನ್ನು ಮಾಡಿದ ಊರುಗಳ ಜನರಿಗೆ ವಿರುದ್ಧವಾಗಿ ಮಾತನಾಡಲು ಪ್ರಾರಂಭಿಸುತ್ತಿದ್ದಾನೆ.

ಪಟ್ಟಣಗಳನ್ನು ಗದರಿಸಿದನು

ಯೇಸು ಕ್ರಿಸ್ತನು ಇಲ್ಲಿ ಮೆಟಾನಿಮೈ ಉಪಯೋಗಿಸುತ್ತಿದ್ದಾನೆ, ಈ ಪಟ್ಟಣಗಳ ಜನರು ತಪ್ಪು ಮಾಡುತ್ತಿರುವುದಕ್ಕಾಗಿ ಅವರನ್ನು ಗದರಿಸುತ್ತಿದ್ದಾನೆ. (ಮೆಟಾನಿಮೈ ನೋಡಿರಿ)

ಪಟ್ಟಣಗಳು

"ಊರುಗಳು"

ಅವುಗಳಲ್ಲಿ ಆತನು ತನ್ನ ಮಹತ್ಕಾರ್ಯಗಳನ್ನು ಮಾಡಿದನು

ಇದನ್ನು ಸಕ್ರಿಯವಾದ ಕ್ರಿಯಾಪದದಿಂದ ಭಾಷಾಂತರ ಮಾಡಬಹುದಾಗಿದೆ: "ಆ ಪಟ್ಟಣಗಳಲ್ಲಿ ಅತನು ಅತ್ಯಂತ ಅದ್ಭುತಗಳನ್ನು ಮಾಡಿದನು" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ).

ಅದ್ಭುತಕಾರ್ಯಗಳು

ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ಅಧ್ಬುತಕಾರ್ಯಗಳು" ಅಥವಾ "ಅದ್ಭುತಕೃತ್ಯಗಳು" ಅಥವಾ "ಸೂಚಕಕಾರ್ಯಗಳು" (ಯುಡಿಬಿ).

ಅವರು ದೇವರ ಕಡೆಗೆ ತಿರುಗಿಕೊಳ್ಳಲಿಲ್ಲವಾದ್ದರಿಂದ

"ಅವರು" ಎಂಬ ಸರ್ವನಾಮವು ದೇವರ ಕಡೆಗೆ ತಿರುಗಿಕೊಳ್ಳದ ಪಟ್ಟಣಗಳ ಜನರನ್ನು ಸೂಚಿಸುತ್ತದೆ.

ಅಯ್ಯೋ ಖೋರಾಜೀನೇ! ಅಯ್ಯೋ ಬೆತ್ಸಾಯಿದವೇ!

ಖೊರಾಜೀನ್ ಮತ್ತು ಬೆತ್ಸಾಯಿದದ ಜನರು ತನ್ನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದಾರೇನೋ ಎಂಬ ಹಾಗೆ ಯೇಸು ಮಾತನಾಡುತ್ತಿದ್ದಾನೆ ಆದರೆ ಅವರು ಕೇಳಿಸಿಕೊಳ್ಳುತ್ತಿರಲಿಲ್ಲ. (ಅಪೊಸ್ಟ್ರೊಫೆ ನೋಡಿರಿ)

ಖೊರಾಜಿನ್ .. ಬೆತ್ಸಾಯಿದ ... ತೂರ್ ... ಸಿದೋನ್

ಈ ಪಟ್ಟಣಗಳಲ್ಲಿ ಜೀವಿಸುತ್ತಿದ್ದ ಜನರನ್ನು ಸೂಚಿಸಲು ಈ ಹೆಸರುಗಳನ್ನು ಮೆಟಾನಿಮೈಯಾಗಿ ಬಳಸಲಾಗಿದೆ (ಮೆಟಾನಿ ಮೈ ನೋಡಿರಿ) # ನಿಮ್ಮಲ್ಲಿ ನಡೆದ ಅದ್ಭುತಕಾರ್ಯಗಳು ತೂರ್ ಮತ್ತು ಸಿದೋನ್ ಪಟ್ಟಣಗಳಲ್ಲಿ ನಡೆದಿದ್ದರೆ

ಇದನ್ನು ಸಕ್ರಿಯವಾದ ವಿಧಾನಗಳಲ್ಲಿ ಭಾಷಾಂತರ ಮಾಡಬಹುದಾಗಿದೆ: "ನಾನು ನಿಮ್ಮಲ್ಲಿ ಮಾಡಿದ ಅದ್ಭುತಕಾರ್ಯಗಳನ್ನು ತೂರ್ ಮತ್ತು ಸಿದೋನ್ ಪಟ್ಟಣಗಳಲ್ಲಿ ಮಾಡಿದ್ದರೆ" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ).

ನಿನ್ನಲ್ಲಿ ಮಾಡಿದ ಕಾರ್ಯಗಳು

ಇಲ್ಲಿ "ನಿನ್ನಲ್ಲಿ" ಎಂಬ ಸರ್ವನಾಮವು ಏಕವಚನವಾಗಿದೆ.

ಅವರು ಬಹಳ ಹಿಂದೆಯೇ ದೇವರ ಕಡೆಗೆ ತಿರುಗಿಕೊಳ್ಳುತ್ತಿದ್ದರು

"ಅವರು" ಎಂಬ ಸರ್ವನಾಮವು ತೂರ್ ಮತ್ತ್ ಸಿದೋನ್ ಪಟ್ಟಣದ ಜನರನ್ನು ಸೂಚಿಸುತ್ತದೆ.

ದೇವರ ಕಡೆಗೆ ತಿರುಗಿಕೊಂಡರು

"ತಮ್ಮ ಪಾಪಗಳಿಗೆ ಪಶ್ಚಾತ್ತಾಪಪಡುತ್ತಿರುವದಾಗಿ ತೋರಿಸಿಕೊಂಡರು"

ನಿಮಗಿಂತಲೂ ನ್ಯಾಯತೀರ್ಪಿನ ದಿನದಲ್ಲಿ ತೂರ್ ಮತ್ತು ಸಿದೋನ್ ಪಟ್ಟಣದವರ ಗತಿ ಹಿತವಾಗಿರುವುದು

"ದೇವರು ನಿಮಗಿಂತಲೂ ಹೆಚ್ಚಾಗಿ ತೂರ್ ಮತ್ತು ಸಿದೋನ್ ಪಟ್ಟಣದ ಜನರಿಗೆ ನ್ಯಾಯತೀರ್ಪಿನ ದಿನದಲ್ಲಿ ಹೆಚ್ಚಿನ ದಯೆಯನ್ನು ತೋರಿಸುವನು" ಅಥವಾ "ದೇವರು ನ್ಯಾಯತೀರ್ಪಿನ ದಿನದಲ್ಲಿ ತೂರ್ ಮತ್ತು ಸಿದೋನ್ ಪಟ್ಟಣದ ಜನರಿಗಿಂತಲೂ ಹೆಚ್ಚಾಗಿ ನಿಮ್ಮನ್ನು ಶಿಕ್ಷಿಸುವನು" (ಯುಡಿಬಿ ನೋಡಿರಿ). ಇಲ್ಲಿರುವ ಮಾಹಿತಿ ಏನೆಂದರೆ, "ನೀವು ಪಶ್ಚಾತ್ತಾಪಪಡಲಿಲ್ಲ ಮತ್ತು ನಾನು ಮಾಡಿದ ಅನೇಕ ಅದ್ಭುತಕಾರ್ಯಗಳನ್ನು ನೋಡಿದರೂ ನನ್ನಲ್ಲಿ ನಂಬಿಕೆಯನ್ನಿಡಲಿಲ್ಲ." (ಸ್ಪಷ್ಟ ಮತ್ತು ಅಸ್ಪಷ್ಟ ಮಾಹಿತಿಯನ್ನು ನೋಡಿರಿ).

ನಿಮಗಿಂತಲೂ ಹೆಚ್ಚಾಗಿ

"ನಿಮಗಿಂತಲೂ" ಎಂಬದು ಸರ್ವನಾಮವಾಗಿದೆ ಮತ್ತು ಖೊರಾಜಿನ್ ಮತ್ತು ಬೆತ್ಸಾಯಿದವನ್ನು ಸೂಚಿಸುತ್ತದೆ.

Matthew 11:23

ಯೇಸು ಕ್ರಿಸ್ತನು ಹಿಂದೆ ತಾನು ಅದ್ಭುತಗಳನ್ನು ಮಾಡಿದ ಊರುಗಳ ಜನರಿಗೆ ವಿರುದ್ಧವಾಗಿ ಮಾತನಾಡಲು ಪ್ರಾರಂಭಿಸುತ್ತಿದ್ದಾನೆ.

ಕಪೆರ್ನೌಮೇ

ಯೇಸು ಕ್ರಿಸ್ತನು ಕಪೆರ್ನೌಮಿನಲ್ಲಿರುವ ಜನರು ಆತನ ಮಾತುಗಳನ್ನು ಕೇಳಿಸಿಕೊಳ್ಳುತಿರುವ ಹಾಗೆ ಮಾತನಾಡುತ್ತಿದ್ದಾನೆ ಆದರೆ ಅವರು ಕೇಳಿಸಿಕೊಳ್ಳುತ್ತಿರಲಿಲ್ಲ. (ಅಪೊಸ್ತ್ರೋಫೆ ನೋಡಿರಿ). ನೀವು ಎಂಬ ಸರ್ವನಾಮವು ಏಕವಚನವಾಗಿದೆ ಮತ್ತು ಈ ಎರಡು ವಚನಗಳಲ್ಲಿ ಕಪೆರ್ನೌಮನ್ನು ಸೂಚಿಸುತ್ತದೆ.

ಕಪೆರ್ನೌಮ್ ... ಸೊದೋಮ್

ಈ ಪಟ್ಟಣಗಳ ಹೆಸರುಗಳನ್ನು ಕಪೆರ್ನೌಮ್ ಮತ್ತು ಸೊದೊಮಿನಲ್ಲಿ ಜೀವಿಸುತ್ತಿರುವ ಜನರಿಗೆ ಮೆಟಾನಮಿಯಾಗಿ ಬಳಸಲಾಗಿದೆ. (ಮೆಟಾನಿಮೈ ನೋಡಿರಿ)

ಪರಲೋಕಕ್ಕೆ ಒಯ್ಯಲ್ಪಡುವೆವು ಎಂಬದಾಗಿ ನೆನೆಸುತ್ತೀರೋ?

ಇದು ಆಲಂಕಾರಿಕ ಪ್ರಶ್ನೆಯಾಗಿದ್ದು ಯೇಸು ಕ್ರಿಸ್ತನು ಗರ್ವವನ್ನು ತೋರಿಸುತ್ತಿದ್ದ ಕಪೆರ್ನೌಮಿನ ಜನರನ್ನು ಗದರಿಸುತ್ತಿದ್ದಾನೆ. (ಅಲಂಕಾರಿಕ ಪ್ರಶ್ನೆ ನೋಡಿರಿ) ಇದನ್ನು ಸಕ್ರಿಯ ವಿಧಾನದಲ್ಲಿ ಭಾಷಾಂತರ ಮಾಡಬಹುದು: "ನೀವು ಪರಲೋಕಕ್ಕೆ ಹೋಗುತ್ತೀರೋ?" ಅಥವಾ "ದೇವರು ನಿಮ್ಮನ್ನು ಸನ್ಮಾನಿಸುವನು ಅಂದುಕೊಳ್ಳುತ್ತೀರೋ?" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ಎತ್ತಲ್ಪಡುವಿರಿ

"ಘನಹೊಂದುವಿರಿ." (ನಾಣ್ಣುಡಿ ನೋಡಿರಿ)

ಪಾತಾಳಕ್ಕೆ ಇಳಿಯುವಿರಿ

ಇದನ್ನು ಸಕ್ರಿಯ ವಿಧಾನವಾಗಿ ಭಾಷಾಂತರ ಮಾಡಬಹುದು: "ದೇವರು ನಿಮ್ಮನ್ನು ಪಾತಾಳಕ್ಕೆ ಇಳಿಸುವನು." (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ನಿಮ್ಮಲ್ಲಿ ನಡೆದಂಥ ಅದ್ಭುತಕಾರ್ಯಗಳು ಸೊದೊಮಿನಲ್ಲಿ ನಡೆದಿದ್ದರೆ

ಇದನ್ನು ಸಕ್ರಿಯ ವಿಧಾನದಲ್ಲಿ ಭಾಷಾಂತರ ಮಾಡಬಹುದು: "ನಾನು ನಿಮ್ಮಲ್ಲಿ ಮಾಡಿದಂಥ ಅದ್ಭುತಕಾರ್ಯಗಳನ್ನು ಸೊದೋಮಿನಲ್ಲಿ ಮಾಡಿದ್ದರೆ." (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ).

ಅಧ್ಬುತಕಾರ್ಯಗಳು

"ಅದ್ಭುತಕೃತ್ಯಗಳು" ಅಥವಾ "ಅಧಿಕಾರದ ಕಾರ್ಯಗಳು" ಅಥವಾ "ಸೂಚಕಕಾರ್ಯಗಳು" (ಯುಡಿಬಿ)

ಅದು ಈಗಲೂ ಉಳಿದಿರುತ್ತಿತ್ತು

"ಅದು" ಎಂಬ ಸರ್ವನಾಮ ಸೊದೊಮ್ ಪಟ್ಟಣವನ್ನು ಸೂಚಿಸುತ್ತದೆ.

ನ್ಯಾಯತೀರ್ಪಿನ ದಿನದಲ್ಲಿ ಸೊದೊಮ್ ಪಟ್ಟಣದವರ ಗತಿಯು ನಿಮಗಿಂತಲೂ ಉತ್ತಮವಾಗಿರುತ್ತಿತ್ತು

ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ದೇವರು ನ್ಯಾಯತೀರ್ಪಿನ ದಿನದಲ್ಲಿ ನಿಮಗಿಂತಲೂ ಹೆಚ್ಚಾಗಿ ಸೊದೊಮ್ ಪಟ್ಟಣದವರಿಗೆ ತೋರಿಸುವನು" ಅಥವಾ "ದೇವರು ಸೊದೋಮಿನ ಜನರಿಗಿಂತ ಹೆಚ್ಚಾಗಿ ನ್ಯಾಯತೀರ್ಪಿನ ದಿನದಲ್ಲಿ ನಿಮ್ಮನ್ನು ಶಿಕ್ಷಿಸುವನು" (ಯುಡಿಬಿ ನೋಡಿರಿ). ಇಲ್ಲಿರುವ ಮಾಹಿತಿ ಏನೆಂದರೆ "ನೀವು ನನ್ನ ಅದ್ಭುತಗಳನ್ನು ನೋಡಿದ ಮೇಲೆಯೂ ಪಶ್ಚಾತ್ತಾಪಪಡಲಿಲ್ಲ ಮತ್ತು ನನ್ನಲ್ಲಿ ನಂಬಿಕೆಯನ್ನಿಡಲಿಲ್ಲ." (ಸ್ಪಷ್ಟ ಮತ್ತು ಅಸ್ಪಷ್ಟ ಮಾಹಿತಿ ನೋಡಿರಿ).

Matthew 11:25

ಯೇಸು ಕ್ರಿಸ್ತನು ಇನ್ನೂ ಜನರಿಗೆ ಗುಂಪಿನಲ್ಲಿರುವಾಗಲೇ ಪರಲೋಕದಲ್ಲಿರುವ ತನ್ನ ತಂದೆಗೆ ಪ್ರಾರ್ಥನೆಯನ್ನು ಮಾಡುತ್ತಿದ್ದಾನೆ.

ಯೇಸು ಕ್ರಿಸ್ತನು ಉತ್ತರಿಸಿ ಹೇಳಿದ್ದೇನೆಂದರೆ

ಇದರ ಅರ್ಥ ೧) ೧೨:೧ರಲ್ಲಿ ಯೇಸು ಕ್ರಿಸ್ತನು ಕಳುಹಿಸಿದ ಶಿಷ್ಯರು ಮತ್ತು ಯಾರೋ ಕೇಳಿದ ಪ್ರಶ್ನೆಗೆ ಆತನು ಪ್ರತಿಕ್ರಿಯೆ ಕೊಡುತ್ತಿದ್ದಾನೆ ಅಥವಾ ೨) ಯೇಸು ಕ್ರಿಸ್ತನು ಪಶ್ಚಾತ್ತಾಪಪಡದ ಪಟ್ಟಣಗಳ ಖಂಡಿಸುವುದನ್ನು ಮುಕ್ತಾಯಗೊಳಿಸುತ್ತಿದ್ದಾನೆ: "ಇನ್ನು ಯೇಸು ಹೇಳಿದ್ದೇನೆಂದರೆ."

ಓ ತಂದೆಯೇ

ಇದು ಭೂಲೋಕದ ತಂದೆಯನ್ನಲ್ಲ ಪರಲೋಕದ ತಂದೆಯನ್ನು ಸೂಚಿಸುತ್ತದೆ.

ಭೂಮಿ ಆಕಾಶಗಳ ಕರ್ತನು

ಇದನ್ನು ಮೆಟಾನಿಮೈ ಆಗಿ ಭಾಷಾಂತರ ಮಾಡಬಹುದು, "ಭೂಮಿ ಮತ್ತು ಆಕಾಶದಲ್ಲಿರುವ ಎಲ್ಲವುಗಳು ಮತ್ತು ಎಲ್ಲರ ಮೇಲೆ ಒಡೆಯನು," ಅಥವಾ "ಜಗತ್ತಿನ ಒಡೆಯನು." (ಮೆಟಾನಿಮೈ ಮತ್ತು ಮೆರಿಸಮ್ ನೋಡಿರಿ)

ನೀನು ಇವುಗಳನ್ನು ಬುದ್ದಿವಂತರು ಮತ್ತು ಜ್ಞಾನಿಗಳಿಗೆ ಮರೆ ಮಾಡಿ ಸಾಮಾನ್ಯರಾಗಿ ಚಿಕ್ಕಮಕ್ಕಳಂತಿರುವವರಿಗೆ ಪ್ರಕಟಪಡಿಸಿರುವೆ

"ಇವುಗಳು" ಎಂದರೆ ಏನು ಎಂಬದು ಸ್ಪಷ್ಟವಾಗಿಲ್ಲ, ಪರ್ಯಾಯ ಭಾಷಾಂತರವು ಉತ್ತಮವಾಗಿರುತ್ತದೆ: "ನೀವು ಬುದ್ದಿವಂತರು ಮತ್ತು ಜ್ಞಾನಿಗಳಿಗೆ ತಿಳಿಯಪಡಿಸ ವಿಷಯಗಳನ್ನು ಮುಗ್ಧರಿಗೆ ತಿಳಿಸಿರುವೆ."

ಮರೆಮಾಡಿರುವೆ

"ಗುಪ್ತವಾಗಿಟ್ಟಿರುವೆ"

ಈ ಕ್ರಿಯಾಪದವು "ಪ್ರಕಟನೆಗೆ" ವಿರುದ್ಧವಾದ ಪದವಾಗಿದೆ.

ಜ್ಞಾನಿಗಳು ಮತ್ತು ಬುದ್ದಿವಂತರು

"ಜ್ಞಾನಿಗಳು ಮತ್ತು ಬುದ್ದಿವಂತರಾಗಿರುವ ಜನರು." ಪರ್ಯಾಯ ಭಾಷಾಂತರ: "ನಾವು ಜ್ಞಾನಿಗಳು ಮತ್ತು ಬುದ್ದಿವಂತರು ಎಂದು ತಿಳಿದುಕೊಳ್ಳುವ ಜನರು." (ಯುಡಿಬಿ ವ್ಯಂಗ್ಯ ನೋಡಿರಿ)

ಅವರಿಗೆ ಪ್ರಕಟಪಡಿಸಿರುವೆ

"ಅವರಿಗೆ" ಎಂಬ ಸರ್ವನಾಮವು ಇದೇ ವಾಕ್ಯದಲ್ಲಿರುವ "ಈ ಕಾರ್ಯಗಳು" ಎಂಬದನ್ನು ಸೂಚಿಸುತ್ತದೆ.

ಚಿಕ್ಕಮಕ್ಕಳಿಗೆ ಮುಗ್ಧರು

ಈ ಇಡಿ ವಾಕ್ಯವು "ಚಿಕ್ಕಮಕ್ಕಳು" ಮತ್ತು "ವಿದ್ಯಾಭ್ಯಾಸವಿಲ್ಲದವರು" ಅಥವಾ "ಮುಗ್ಧರು" ಎಂಬ ಅರ್ಥಗಳನ್ನು ಒಳಗೊಂಡಿರುವ ವಿಷಯವನ್ನು ತಿಳಿಸುತ್ತದೆ. ಪರ್ಯಾಯ ಭಾಷಾಂತರ: "ಮುಗ್ದರಾಗಿರುವ ಚಿಕ್ಕ ಮಕ್ಕಳು"

ಚಿಕ್ಕಮಕ್ಕಳಂತೆ

ಬುದ್ದಿವಂತರಲ್ಲದ ಅಥವಾ ವಿದ್ಯಾಭ್ಯಾಸ ಇಲ್ಲದ ಅಥವಾ ತಾವು ಬುದ್ದಿವಂತರಲ್ಲ ಮತ್ತು ವಿವೇಕಿಗಳಲ್ಲ ಎಂಬದನ್ನು ತಿಳಿದಿರುವ ಜನರಿಗೆ ಉಪಮೆಯಾಗಿದೆ (ಉಪಮೆ ನೋಡಿರಿ)

ನಿನ್ನ ದೃಷ್ಟಿಗೆ ಮೆಚ್ಚಿಕೆಯಾಗಿರುವುದು

"ಹೀಗೆ ಮಾಡುವುದು ಸರಿ ಎಂದು ನಿನಗೆ ಕಂಡಿದೆ"

ನನ್ನ ತಂದೆಯು ನನಗೆ ಎಲ್ಲಾ ಕಾರ್ಯಗಳನ್ನು ಒಪ್ಪಿಸಿದ್ದಾನೆ

ಇದನ್ನು ಸಕ್ರಿಯವಾದ ಕ್ರಿಯಾಪದದಿಂದ ಭಾಷಾಂತರ ಮಾಡಬಹುದಾಗಿದೆ: "ನನ್ನ ತಂದೆಯು ನನಗೆ ಎಲ್ಲ ಕಾರ್ಯಗಳನ್ನು ಒಪ್ಪಿಸಿದ್ದಾನೆ" ಅಥವಾ "ನನ್ನ ತಂದೆಯು ಎಲ್ಲವನ್ನು ನನ್ನ ಹತೋಟಿಗೆ ಒಪ್ಪಿಸಿದ್ದಾನೆ." (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ತಂದೆಯಲ್ಲದೆ ಮಗನನ್ನು ಯಾರೂ ತಿಳಿದಿಲ್ಲ

"ಕೇವಲ ಮಗನು ಮಾತ್ರವೇ ತಂದೆಯನ್ನು ಬಲ್ಲವನಾಗಿದ್ದಾನೆ."

ಮಗನನ್ನು ತಿಳಿದಿದ್ದಾನೆ

"ವೈಯಕ್ತಿಕ ಅನುಭವದಿಂದ ತಿಳಿದವನಾಗಿದ್ದಾನೆ"

ಮತ್ತು ಮಗನು ಯಾರಿಗಾದರೂ ಆತನನ್ನು ಪ್ರಕಟಪಡಿಸಬೇಕೆಂದು ಬಯಸುವುದಾದರೆ

ಪರ್ಯಾಯ ಭಾಷಾಂತರ: "ತಂದೆ ಯಾರೆಂಬದು ಜನರಿಗೆ ಗೊತ್ತಾಗಬೇಕಾದರೆ ಮಗನು ಅವರಿಗೆ ತಂದೆಯನ್ನು ಪರಿಚಯಪಡಿಸಿರಬೇಕು"

ಮಗನು ಯಾರಿಗೆ ಆತನನ್ನು ಪ್ರಕಟಪಡಿಸಬೇಕೆಂದು ಬಯಸುತ್ತಾನೋ

"ಆತನಿಗೆ" ಎಂಬ ಸರ್ವನಾಮವು ತಂದೆಯಾದ ದೇವರನ್ನು ಸೂಚಿಸುತ್ತದೆ.

Matthew 11:28

ಯೇಸು ಜನರ ಗುಂಪಿನೊಂದಿಗೆ ಮಾತನಾಡುವುದನ್ನು ಮುಗಿಸಿದನು.

ಕಷ್ಟಪಡುತ್ತಾರೆ ಮತ್ತು ಅತಿಯಾದ ಭಾರವುಳ್ಳವರಾಗಿದ್ದಾರೆ

ಈ ರೂಪಕಾಲಂಕಾರವು ಯೆಹೂದ್ಯ ಧರ್ಮಶಾಸ್ತ್ರದ "ನೊಗವನ್ನು" ಸೂಚಿಸುತ್ತದೆ. (ರೂಪಕಾಲಂಕಾರ ನೋಡಿರಿ)

ನಾನು ನಿಮಗೆ ವಿಶ್ರಾಂತಿ ಕೊಡುತ್ತೇನೆ

"ನಿಮ್ಮ ಕೆಲಸ ಮತ್ತು ಭಾರದಿಂದ ವಿಶ್ರಾಂತಿಯನ್ನು ತೆಗೆದುಕೊಳ್ಳಲು ನಾನು ಅನುಮತಿಯನ್ನು ಕೊಡುತ್ತೇನೆ" (ಸ್ಪಷ್ಟ ಮತ್ತು ಅಸ್ಪಷ್ಟ ನೋಡಿರಿ)

ನನ್ನ ನೊಗವನ್ನು ನಿಮ್ಮ ಮೇಲೆ ಹೊತ್ತುಕೊಳ್ಳಿರಿ

ಈ ವಚನದಲ್ಲಿರುವ "ನಿಮ್ಮ" ಎಂಬ ಸರ್ವನಾಮವು "ಕಷ್ಟಪಡುವವರು ಮತ್ತು ಹೊರೆಹೊತ್ತಿರುವವರೆಲ್ಲರನ್ನು ಸೂಚಿಸುತ್ತದೆ." ಈ ರೂಪಕಾಲಂಕಾರದ ಅರ್ಥ "ನಾನು ನಿಮಗೆ ಒಪ್ಪಿಸುವ ಕಾರ್ಯಗಳನ್ನು ಅಂಗೀಕರಿಸಿಕೊಳ್ಳಿರಿ" (ಯುಡಿಬಿ ನೋಡಿರಿ) ಅಥವಾ "ನನ್ನೊಂದಿಗೆ ಕೆಲಸ ಮಾಡಿರಿ." (ರೂಪಕಾಲಂಕಾರ ನೋಡಿರಿ)

ನನ್ನ ಹೊರೆಯು ಹಗುರವಾದದ್ದು

"ಹಗುರ" ಎಂಬ ಪದವು ಕತ್ತಲೆಗೆ ವಿರುದ್ಧವಲ್ಲ ಬದಲಾಗಿ ಭಾರಕ್ಕೆ ವಿರುದ್ಧವಾದದ್ದಾಗಿದೆ.