ಯೇಸು ಕ್ರಿಸ್ತನು ತನ್ನ ಕೆಲಸವನ್ನು ಮಾಡಲು ತನ್ನ ಹನ್ನೆರೆಡು ಮಂದಿ ಅಪೊಸ್ತಲರನ್ನು ಕಳುಹಿಸುವ ದಾಖಲೆಯು ಇಲ್ಲಿ ಪ್ರಾರಂಭವಾಗುತ್ತಿದೆ.
"ತನ್ನ ಹನ್ನೆರೆಡು ಅಪೊಸ್ತಲರನ್ನು ಒಟ್ಟುಗೂಡಿಸಿದನು"
ಆತನಿ ಕೊಟ್ಟ ಅಧಿಕಾರ ಏನೆಂಬದನ್ನು ವಚನಭಾಗವು ಸ್ಪಷ್ಟವಾಗಿ ತಿಳಿಸುತ್ತದೆ ೧) ಅಶುದ್ಧ ಆತ್ಮಗಳನ್ನು ಓಡಿಸುವುದು ಮತ್ತು ೨) ರೋಗಗಳನ್ನು ಹಾಗೂ ಬೇನೆಗಳನ್ನು ಗುಣಪಡಿಸುವುದು.
"ಅಶುದ್ಧ ಆತ್ಮಗಳು ಹೋಗುವಂತೆ ಮಾಡಿರಿ"
"ಪ್ರತಿಯೊಂದು ಕಾಯಿಲೆ ಮತ್ತು ಬೇನೆ." "ರೋಗ" ಮತ್ತು "ಬೇನೆ" ಹತ್ತಿರವಾದ ಸಂಬಂಧವುಳ್ಳವುಗಳಾಗಿವೆ ಆದರೆ ಸಾಧ್ಯವಾದಷ್ಟು ಇವುಗಳನ್ನು ಬೇರೆಬೇರೆಯಾಗಿ ಭಾಷಾಂತರ ಮಾಡಿರಿ. "ಕಾಯಿಲೆಯು" ಒಬ್ಬ ವ್ಯಕ್ತಿಯನ್ನು ರೋಗಿಯನ್ನಾಗಿ ಮಾಡುತ್ತವೆ. ಕಾಯಿಲೆಯ ನಿಮಿತ್ತವಾಗಿ ಶಾರೀರಿಕ ಬಲಹೀನತೆಯು ಕಾಣಿಸಿಕೊಳ್ಳುತ್ತದೆ.
ಯೇಸು ಕ್ರಿಸ್ತನು ೧೦:೧ರಲ್ಲಿ ತನ್ನ ಹನ್ನೆರೆಡು ಮಂದಿ ಅಪೊಸ್ತಲರನ್ನು ಮಾಡಲು ಕಳುಹಿಸಿದ ಕಾರ್ಯವು ಇಲ್ಲಿ ಮುಂದುವರೆಯುತ್ತಿದೆ.
ಕ್ರಮದಲ್ಲಿ, ದರ್ಜೆಯಲಲ್ಲ
ಅರ್ಥಗಳು ಏನೆಂದರೆ ೧) "ಮತಾಭಿಮಾನಿ" ಅಥವಾ ೨) "ಆಸಕ್ತಿಯುಳ್ಳ ವ್ಯಕ್ತಿ." ಮೊದಲನೆಯ ಅರ್ಥವು ಯೆಹೂದ್ಯರನ್ನು ರೋಮನ್ ಹಿಡಿತದಿಂದ ಬಿಡಸಬೇಕೆಂದು ಬಯಸುವ ಜನರ ಗುಂಪಿನಲ್ಲಿ ಈತನು ಇದ್ದವನು ಎಂಬದನ್ನು ಸೂಚಿಸುತ್ತದೆ. ಪರ್ಯಾಯ ಭಾಷಾಂತರ: "ದೇಶಭಕ್ತ" ಅಥವಾ "ರಾಷ್ಟ್ರೀಯವಾಗಿ" ಅಥವಾ "ಸ್ವಾತಂತ್ರ್ಯ ಹೋರಾಟಗಾರ." ಎರಡನೆಯದಾಗಿ ಅವರು ದೇವರಿಗೆ ಮಹಿಮೆ ಉಂಟಾಗಬೇಕೆಂಬ ಆಸಕ್ತಿಯುಳ್ಳವನು ಎಂಬದನ್ನು ಸೂಚಿಸುತ್ತದೆ. ಪರ್ಯಾಯ ಭಾಷಾಂತರ: "ಆತ್ಮಭಾರವುಳ್ಳವನು."
"ಮತ್ತಾಯನು ಸುಂಕದವನಾಗಿದ್ದನು"
"ಅವನು ಯೇಸುವನ್ನು ಹಿಡಿದುಕೊಡುವವನು"
ಯೇಸು ಕ್ರಿಸ್ತನು ೧೦:೧ರಲ್ಲಿ ತನ್ನ ಹನ್ನೆರೆಡು ಮಂದಿ ಅಪೊಸ್ತಲರನ್ನು ಮಾಡಲು ಕಳುಹಿಸಿದ ಕಾರ್ಯವು ಇಲ್ಲಿ ಮುಂದುವರೆಯುತ್ತಿದೆ.
"ಯೇಸು ಈ ಹನ್ನೆರೆಡು ಜನರನ್ನು ಕಳುಹಿಸಿದನು" ಅಥವಾ "ಯೇಸು ಕಳುಹಿಸಿದ ಹನ್ನೆರೆಡು ಮಂದಿ ಇವರೇ"
ಯೇಸು ಅವರನ್ನು ನಿರ್ದಿಷ್ಟವಾದ ಉದ್ದೇಶದೊಂದಿಗೆ ಕಳುಹಿಸಿದನು. "ಕಳುಹಿಸಿದನು" ಎಂಬದು ೧೦:೨ರಲ್ಲಿ ಉಪಯೋಗಿಸಲಾಗಿರುವ "ಅಪೊಸ್ತಲರು" ಎಂಬ ನಾಮಪದದ ಕ್ರಿಯಾರೂಪವಾಗಿದೆ.
"ಏನು ಮಾಡಬೇಕೆಂಬದನ್ನು ಆತನು ಅವರಿಗೆ ಹೇಳಿದನು." ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ಆತನು ಅವರಿಗೆ ಆದೇಶಿಸಿದನು."
ತಮ್ಮ ಕುರುಬನಿಂದ ದೂರವಾಗಿರುವ ಕುರಿಗಳಿಗೆ ಇಸ್ರಾಯೇಲ್ ಜನಾಂಗವನ್ನು ಈ ರೂಪಕಾಲಂಕಾರದಲ್ಲಿ ಉಪಯೋಗಿಸಲಾಗಿದೆ (ಯುಡಿಬಿ). (ರೂಪಕಾಲಂಕಾರ ನೋಡಿರಿ)
ಇದು ಇಸ್ರಾಯೇಲ್ ಜನಾಂಗವನ್ನು ಸೂಚಿಸುತ್ತದೆ. ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದಿ "ಇಸ್ರಾಯೇಲ್ ಜನರು" ಅಥವಾ "ಇಸ್ರಾಯೇಲ್ ವಂಶದವರು." (ಮೆಟಾನಿಮೈ ನೋಡಿರಿ)
"ನೀವು" ಎಂಬ ಸರ್ವನಾಮವು ಅಪೊಸ್ತಲರನ್ನು ಸೂಚಿಸುತ್ತದೆ.
೩:೨ರಲ್ಲಿ ಭಾಷಾಂತರ ಮಾಡಲಾಗಿರುವ ಪ್ರಕಾರವೇ ಇಲ್ಲಿಯೂ ಮಾಡಬೇಕು.
ಯೇಸು ಕ್ರಿಸ್ತನು ೧೦:೧ರಲ್ಲಿ ತನ್ನ ಹನ್ನೆರೆಡು ಮಂದಿ ಅಪೊಸ್ತಲರನ್ನು ಮಾಡಲು ಕಳುಹಿಸಿದ ಕಾರ್ಯವು ಇಲ್ಲಿ ಮುಂದುವರೆಯುತ್ತಿದೆ.
ಹನ್ನೆರೆಡು ಮಂದಿ ಅಪೊಸ್ತಲರು
"ಬೆಳ್ಳಿ, ಬಂಗಾರ ಮತ್ತು ತಾಮ್ರ ಏನೂ ತೆಗೆದುಕೊಳ್ಳಬೇಡಿರಿ"
"ಪಡೆಯಬೇಡಿರಿ, ಈಸಿಕೊಳ್ಳಬೇಡಿರಿ, ಅಥವಾ ತಕ್ಕೊಳ್ಳಬೇಡಿರಿ"
ಇವುಗಳ ಮೂಲಕ ನಾಣ್ಯಗಳನ್ನು ಮಾಡಲಾಗುತ್ತಿತ್ತು. ಇದು ಹಣಕ್ಕಾಗಿ ಉಪಯೋಗಿಸುವ ಸಾಧನಗಳ ಪಟ್ಟಿಯಾಗಿದೆ, ಆದ್ದರಿಂದ ಒಂದುವೇಳೆ ನಿಮ್ಮ ಸಂಸ್ಕೃತಿಯವರಿಗೆ ಇದು ಗೊತ್ತಿಲ್ಲವಾದರೆ, ಇವುಗಳನ್ನು "ಹಣ" ಎಂದು ಭಾಷಾಂತರ ಮಾಡಿರಿ (ಯುಡಿಬಿ ನೋಡಿರಿ)
ಇವುಗಳನ್ನು "ಬೆಲ್ಟ್" ಅಥವಾ "ಹಣದ ಬೆಲ್ಟ್" ಎಂದು ಕರೆಯಲಾಗುತ್ತದೆ, ಆದರೆ ಹಣವನ್ನು ಇಟ್ಟುಕೊಳ್ಳಲು ಏನೇ ತೆಗೆದುಕೊಂಡರೂ ಅದನ್ನು ಹಣದ ಚೀಲ ಎಂದು ಕರೆಯಲಾಗುತ್ತದೆ.
ಪ್ರಯಾಣದ ಸಮಯದಲ್ಲಿ ಬೇಕಾದವುಗಳನ್ನು ತೆಗೆದುಕೊಂಡು ಹೋಗಲು ಅಥವಾ ಆಹಾರ ಅಥವಾ ಹಣವನ್ನು ಸಂಗ್ರಹಿಸಲು ಉಪಯೋಗಿಸುವ ಚೀಲವಾಗಿದೆ.
೫:೪೦ ಬಳಸಿರುವ ಪದವನ್ನೇ ಬಳಸಿರಿ
ಸೇವಕರು
"ಅವನಿಗೆ ಬೇಕಾದವುಗಳು"
ಯೇಸು ಕ್ರಿಸ್ತನು ೧೦:೧ರಲ್ಲಿ ತನ್ನ ಹನ್ನೆರೆಡು ಮಂದಿ ಅಪೊಸ್ತಲರನ್ನು ಮಾಡಲು ಕಳುಹಿಸಿದ ಕಾರ್ಯವು ಇಲ್ಲಿ ಮುಂದುವರೆಯುತ್ತಿದೆ.
ಈ ಸರ್ವನಾಮಗಳು ಹನ್ನೆರೆಡು ಮಂದಿ ಅಪೊಸ್ತಲರನ್ನು ಸೂಚಿಸುತ್ತದೆ.
"ನೀವು ಯಾವುದೇ ಹಳ್ಳಿ ಅಥವ ಪಟ್ಟಣದೊಳಗೆ ಹೋದಾಗ" ಅಥವಾ "ನೀವು ಹೋಗುವ ಪಟ್ಟಣ ಅಥವಾ ಹಳ್ಳಿಯೊಳಗೆ"
"ದೊಡ್ಡ ಹಳ್ಳಿ...ಸಣ್ಣ ಹಳ್ಳಿ ಅಥವಾ "ದೊಡ್ಡ ಪಟ್ಟಣ... ಸಣ್ಣ ಪಟ್ಟಣ." ಇವುಗಳು ೯:೩೫ರಲ್ಲಿ ಇರುವ ಪದಗಳೇ ಆಗಿವೆ.
"ನೀವು ಪಟ್ಟಣ ಅಥವಾ ಹಳ್ಳಿಯನ್ನು ಬಿಡುವ ತನಕ ಇರುವ ವ್ಯಕ್ತಿಯ ಮನೆಯಲ್ಲಿಯೇ ಇರ್ರಿ"
"ನೀವು ಮನೆಯೊಳಗೆ ಪ್ರವೇಶಿಸುತ್ತಿದ್ದಂತೆಯೇ, ಅಲ್ಲಿ ವಾಸಿಸುವವರನ್ನು ವಂದಿಸಿರಿ." ಆ ದಿನಗಳಲ್ಲಿ "ಈ ಮನೆಗೆ ಸಮಾಧಾನವಾಗಲಿ!" ಎಂಬದು ಆಗಿನ ಕಾಲದಲ್ಲಿ ಸಾಮಾನ್ಯವಾದ ವಂದನೆಯಾಗಿತ್ತು (ಮೆಟಾನಿಮೈ ನೋಡಿರಿ)
"ಆ ಮನೆಯಲ್ಲಿರುವವರು ನಿಮ್ಮನ್ನು ಚೆನ್ನಾಗಿ ಅಂಗೀಕರಿಸಿಕೊಳ್ಳುವರು" (ಯುಡಿಬಿ) ಅಥವಾ "ಆ ಮನೆಯಲ್ಲಿರುವವರು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುವರು" (ಮೆಟಾನಿಮೈ ನೋಡಿರಿ)
"ನಿನ್ನ ಸಮಾಧಾನವು ನೆಲೆಯಾಗಿರಲಿ" ಅಥವಾ "ಆ ಮನೆಯಲ್ಲಿ ಜೀವಿಸುವವರು ಸಮಾಧಾನದಿಂದ ಜೀವಿಸಲಿ" (ಯುಡಿಬಿ ನೋಡಿರಿ)
ಯೇಸು ಕ್ರಿಸ್ತನು ೧೦:೧ರಲ್ಲಿ ತನ್ನ ಹನ್ನೆರೆಡು ಮಂದಿ ಅಪೊಸ್ತಲರನ್ನು ಮಾಡಲು ಕಳುಹಿಸಿದ ಕಾರ್ಯವು ಇಲ್ಲಿ ಮುಂದುವರೆಯುತ್ತಿದೆ.
"ಒಂದುವೇಳೆ ಆ ಪಟ್ಟಣದಲ್ಲಿರುವ ಜನರು ನಿಮ್ಮನ್ನು ಸೇರಿಸಿಕೊಳ್ಳದಿದ್ದರೆ ಅಥವಾ ನಿಮ್ಮ ಮಾತುಗಳನ್ನು ಕೇಳದಿದ್ದರೆ"
ಹನ್ನೆರೆಡು ಮಂದಿ ಅಪೊಸ್ತಲರು
"ನಿಮ್ಮ ಸಂದೇಶವನ್ನು ಕೇಳಿಸಿಕೊಂಡರೆ" (ಯುಡಿಬಿ) ಅಥವಾ "ನೀವು ಹೇಳುವುದನ್ನು ಕೇಳಿಸಿಕೊಂಡರೆ"
೧೦:೧೧ರಲ್ಲಿ ಮಾಡಿರುವಂತೆಯೇ ಇಲ್ಲಿಯೂ ಭಾಷಾಂತರ ಮಾಡಿರಿ.
"ಆ ಮನೆಯ ಅಥವಾ ಪಟ್ಟಣದ ಧೂಳು ನಿಮ್ಮ ಕಾಲಿಗೆ ಹತ್ತಿರುವದಾದರೆ ಅದನ್ನು ಝಾಡಿಸಿಬಿಡಿರಿ." ದೇವರು ಆ ಮನೆಯ ಅಥವಾ ಪಟ್ಟಣದ ಜನರನ್ನು ನಿರಾಕರಿಸಿದ್ದಾನೆ ಎಂಬದಕ್ಕೆ ಇದು ಗುರುತಾಗಿದೆ (ಯುಡಿಬಿ ನೋಡಿರಿ).
"ಶಮೆಯು ಕಡಿಮೆಯಾಗಿರುತ್ತದೆ"
"ಸೊದೊಮ್ ಮತ್ತು ಗೊಮೊರ ಪಟ್ಟಣಗಳಲ್ಲಿ ಜೀವಿಸುವ ಜನರು" ಇವರನ್ನು ದೇವರು ಬೆಂಕಿಯ ಮೂಲಕ ಸಂಹರಿಸಿದನು (ಮೆಟಾನಿಮೈ ನೋಡಿರಿ)
ಆ ಪಟ್ಟಣದಲ್ಲಿರುವ ಜನರು ಅಪೊಸ್ತಲರನ್ನು ಅಂಗೀಕರಿಸಿಕೊಳ್ಳದಿದ್ದರೆ ಅಥವಾ ಅವರ ಸಂದೇಶವನ್ನು ಕೇಳಿಸಿಕೊಳ್ಳದಿದ್ದರೆ (ಮೆಟಾನಿಮೈ ನೋಡಿರಿ)
ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ನೀವು ನನ್ನ ಕೆಲಸವನ್ನು ಮಾಡಲು ಪ್ರಾರಂಭಿಸುವಾಗ ಹಿಂಸೆಗಳನ್ನು ಎದುರಿಸಬೇಕು ಎಂಬದನ್ನು ಹೇಳಲು ಪ್ರಾರಂಭಿಸುತ್ತಿದ್ದಾನೆ.
"ನೋಡಿರಿ" ಎಂಬ ಪದವು ಮುಂಬರುವ ಕಾರ್ಯಗಳಿಗೆ ಪ್ರಾಮುಖ್ಯತೆಯನ್ನು ಕೊಡುತ್ತದೆ. ಪರ್ಯಾಯ ಭಾಷಾಂತರ: "ನೋಡಿರಿ" ಅಥವಾ "ಕೇಳಿರಿ" ಅಥವಾ "ನಾನು ಹೇಳುವ ವಿಷಯಗಳಿಗೆ ಗಮನ ಕೊಡಿರಿ" (ಯುಡಿಬಿ ನೋಡಿರಿ)
ಯೇಸು ಅವರನ್ನು ನಿರ್ದಿಷ್ಟವಾದ ಉದ್ದೇಶಕ್ಕಾಗಿ ಕಳುಹಿಸುತ್ತಿದ್ದಾನೆ.
ಕಾಡು ಪ್ರಾಣಿಗಳ ಆಕ್ರಮಣಕ್ಕೆ ಒಳಗಾಗುವಂಥ ರಕ್ಷಣೆಯಿಲ್ಲದ ಪ್ರಾಣಿಗಳಿಗೆ ಯೇಸು ಕ್ರಿಸ್ತನು ಶಿಷ್ಯರನ್ನು ಹೋಲಿಸುತ್ತಿದ್ದಾನೆ. (ಉಪಮೆ ನೋಡಿರಿ)
ರಕ್ಷಣೆಯಿಲ್ಲದವುಗಳು (ಉಪಮೆ ನೋಡಿರಿ)
"ತೋಳಗಳಂತೆ ಅಪಾಯಕಾರಿಯಾಗಿರುವ ಜನರ ನಡುವೆ" ಅಥವಾ "ಅಪಾಯಕಾರಿಯಾದ ಪ್ರಾಣಿಗಳಂತೆ ನಡೆದುಕೊಳ್ಳುವವರ ನಡುವೆ" ಅಥವಾ ಸಮಾನತೆಯನ್ನು ವಿವರಿಸಬಹುದು, "ನಿಮ್ಮನ್ನು ಹಿಂಸೆಪಡಿಸುವ ಜನರ ನಡುವೆ" (ರೂಪಕಾಲಂಕಾರ ನೋಡಿರಿ)
ಉಪಮೆಗಳನ್ನು ಕೊಡದಿರುವುದು ಉತ್ತಮವಾಗಿರುತದೆ: "ತಿಳುವಳಿಕೆ ಮತ್ತು ಎಚ್ಚರಿಕೆ ಹಾಗೂ ಬುದ್ದಿವಂತೆ ಮತ್ತು ವಿನಯವಾಗಿ ನಡೆದುಕೊಳ್ಳಿರಿ." (ಉಪಮೆ ನೋಡಿರಿ)
"ಎಚ್ಚರವಾಗಿರಿ, ಯಾಕೆಂದರೆ ಜನರು ನಿಮ್ಮನ್ನು ಒಪ್ಪಿಸಿಕೊಡುವರು."
"ಜಾಗರೂಕರಾಗಿರ್ರಿ" ಅಥವಾ "ಎಚ್ಚರವಾಗಿರ್ರಿ" ಅಥವಾ "ಅದರ ವಿಷಯದಲ್ಲಿ ಜಾಗರೂಕರಾಗಿ ನಡೆದುಕೊಳ್ಳಿರಿ" (ನಾಣ್ಣುಡಿ ನೋಡಿರಿ)
ಯೇಸು ಕ್ರಿಸ್ತನಿಗೆ ಯೂದನು ಮಾಡಿದ ಕಾರ್ಯವನ್ನು ಇದು ಸೂಚಿಸುತ್ತದೆ (ಯುಡಿಬಿ ನೋಡಿರಿ) ಪರ್ಯಾಯ ಭಾಷಾಂತರ: "ನಿಮ್ಮನ್ನು ಹಿಡಿದುಕೊಡುವರು" ಅಥವಾ "ನಿಮ್ಮನ್ನು ಒಪ್ಪಿಸುವರು" ಅಥವಾ "ನಿಮ್ಮನ್ನು ಬಂಧಿಸಿ ವಿಚಾರಿಸುವರು."
ಇದರ ಅರ್ಥ ಸ್ಥಳೀಯ ಧಾರ್ಮಿಕ ನಾಯಕರು ಅಥವಾ ಸಮಾಜದಲ್ಲಿ ಸಮಾಧಾನವನ್ನು ಕಾಪಾಡಲು ಸೇರಿಬರುವ ಹಿರಿಯರು. ಪರ್ಯಾಯ ಭಾಷಾಂತರ: "ನ್ಯಾಯಾಲಯಗಳು."
"ಚಡಿಗಳಿಂದ ಹೊಡೆಯುವರು"
"ಅವರು ನಿಮ್ಮನ್ನು ಕರೆದುಕೊಂಡು ಹೋಗುವರು" ಅಥವಾ "ಅವರು ನಿಮ್ಮನ್ನು ಎಳೆದುಕೊಂಡು ಹೋಗುವರು." (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
"ನೀವು ನನಗೆ ಸೇರಿದವಾದ್ದರಿಂದ" (ಯುಡಿಬಿ) ಅಥವಾ "ನೀವು ನನ್ನನ್ನು ಹಿಂಬಾಲಿಸುವದರಿಂದ"
"ಅವರಿಗೆ" ಎಂಬ ಸರ್ವನಾಮವು "ಅಧಿಪತಿಗಳು ಮತ್ತು ಅರಸರನ್ನು" ಅಥವಾ ಯೆಹೂದ್ಯ ಮತಾವಲಂಬಿಗಳನ್ನು ಸೂಚಿಸುತ್ತದೆ (೧೦:೧೭).
ಯೇಸು ಕ್ರಿಸ್ತನು ೧೦:೧೬ರಲ್ಲಿ ತನ್ನ ಶಿಷ್ಯರಿಗೆ ನೀವು ನನ್ನ ಕೆಲಸವನ್ನು ಮಾಡಲು ಪ್ರಾರಂಭಿಸುವಾಗ ಹಿಂಸೆಗಳನ್ನು ಎದುರಿಸಬೇಕು ಎಂಬದಾಗಿ ಹೇಳಲು ಪ್ರಾರಂಭಿಸಿದ್ದನ್ನು ಮುಂದುವರೆಸುತ್ತಿದ್ದಾನೆ.
"ಜನರು ನಿಮ್ಮನ್ನು ಒಪ್ಪಿಸುವಾಗ." ಇಲ್ಲಿ "ಜನರು" ಎಂಬದಾಗಿ ಹೇಳಲಾಗಿರುವವರು ೧೦:೧೭ರಲ್ಲಿ ಹೇಳಲಾಗಿರುವ "ಜನರೇ" ಆಗಿದ್ದಾರೆ.
೧೦:೧೭ರಲ್ಲಿ ನಿಮ್ಮನ್ನು ಒಪ್ಪಿಸುವರು ಎಂಬದಾಗಿ ಭಾಷಾಂತರ ಮಾಡಿದಂತೆಯೇ ಇಲ್ಲಿಯೂ ಮಾಡಿರಿ.
ಈ ವಚನಗಳಲ್ಲಿ ನೀವು ಮತ್ತು ನಿಮ್ಮ ಎಂಬದಾಗಿ ಹೇಳಲಾಗಿರುವ ಸರ್ವನಾಮಗಳು ಹನ್ನೆರೆಡು ಮಂದಿ ಅಪೊಸ್ತಲರನ್ನು ಸೂಚಿಸುತ್ತವೆ.
"ಚಿಂತಿಸಬೇಡಿರಿ"
"ಹೇಗೆ ಮಾತನಾಡಬೇಕು ಅಥವಾ ಏನು ಹೇಳಬೇಕು." ಎರಡೂ ಆಲೋಚನೆಗಳನ್ನು ಒಟ್ಟುಗೂಡಿಸಿ: "ನೀವು ಏನು ಹೇಳಬೇಕು ಎಂಬದಾಗಿ." (ಹೆಂಡಿಡೇಸ್ ನೋಡಿರಿ)
"ಆ ಸಮಯದಲ್ಲಿ" (ಮೆಟಾನಿಮೈ ನೋಡಿರಿ)
ಒಂದುವೇಳೆ ಅವಶ್ಯಕವಿದ್ದರೆ, ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ನಿಮ್ಮ ಪರಲೋಕ ತಂದೆಯಾಗಿರುವ ದೇವರ ಆತ್ಮನು" ಅಥವಾ ಇದು ಪವಿತ್ರಾತ್ಮನಾಗಿರುವ ದೇವರನ್ನು ಸೂಚಿಸುತ್ತದೆಯೇ ಹೊರತು ಭೂಲೋಕದ ತಂದೆಯನ್ನಲ್ಲ ಎಂಬದನ್ನು ಸೂಚಿಸಲು ಪುಟ್ನೋಟ್ ಸೇರಿಸಿರಿ.
"ನಿಮ್ಮ ಮೂಲಕ"
ಯೇಸು ಕ್ರಿಸ್ತನು ೧೦:೧೬ರಲ್ಲಿ ತನ್ನ ಶಿಷ್ಯರಿಗೆ ನೀವು ನನ್ನ ಕೆಲಸವನ್ನು ಮಾಡಲು ಪ್ರಾರಂಭಿಸುವಾಗ ಹಿಂಸೆಗಳನ್ನು ಎದುರಿಸಬೇಕು ಎಂಬದಾಗಿ ಹೇಳಲು ಪ್ರಾರಂಭಿಸಿದ್ದನ್ನು ಮುಂದುವರೆಸುತ್ತಿದ್ದಾನೆ.
ಪರ್ಯಾಯ ಭಾಷಾಂತರ: "ಸಹೋದರರು ತಮ್ಮ ಸಹೋದರರನ್ನು ಮರಣಕ್ಕೆ ಒಪ್ಪಿಸುವರು ಮತ್ತು ತಂದೆಯಂದಿರು ತಮ್ಮ ಮಕ್ಕಳನ್ನು ಮರಣಕ್ಕೆ ಒಪ್ಪಿಸುವರು."
೧೦:೧೭ರಲ್ಲಿ ಒಪ್ಪಿಸುವರು ಎಂಬದನ್ನು ಭಾಷಾಂತರ ಮಾಡಲಾಗಿರುವ ಹಾಗೆಯೇ ಇದನ್ನು ಭಾಷಾಂತರ ಮಾಡಿರಿ.
"ತಿರುಗಿಬೀಳುವರು" (ಯುಡಿಬಿ) ಅಥವಾ "ಎದುರುಬೀಳುವರು"
"ಮತ್ತು ಅವರನ್ನು ಮರಣಕ್ಕೆ ಒಪ್ಪಿಸಿಕೊಡುವರು" ಅಥವಾ "ಅಧಿಕಾರಿಗಳು ಅವರನ್ನು ಮರಣಕ್ಕೆ ಒಪ್ಪಿಸುವಂತೆ ಮಾಡುವರು"
ಪರ್ಯಾಯ ಭಾಷಾಂತರ: "ಎಲ್ಲರೂ ನಿಮ್ಮನ್ನು ಹಗೆ ಮಾಡುವರು" ಅಥವಾ "ಜನರೆಲ್ಲರೂ ನಿಮ್ಮನ್ನು ಹಗೆ ಮಾಡುವರು" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
ಹನ್ನೆರೆಡು ಮಂದಿ ಅಪೊಸ್ತಲರು
"ನನ್ನ ನಿಮಿತ್ತ" ಅಥವಾ "ನೀವು ನನ್ನಲ್ಲಿ ಭರವಸವಿಟ್ಟಿರುವದರಿಂದ" (ಯುಡಿಬಿ)
"ನಂಬಿಗಸ್ತನಾಗಿರುವವನು"
"ದೇವರು ಆ ವ್ಯಕ್ತಿಯನ್ನು ಕಾಪಾಡುವನು." (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
"ಮತ್ತೊಂದು ಪಟ್ಟಣಕ್ಕೆ ಹೋಗಿರಿ"
"ಆಗಮಿಸಿದೆ"
ಯೇಸು ಕ್ರಿಸ್ತನು ೧೦:೧೬ರಲ್ಲಿ ತನ್ನ ಶಿಷ್ಯರಿಗೆ ನೀವು ನನ್ನ ಕೆಲಸವನ್ನು ಮಾಡಲು ಪ್ರಾರಂಭಿಸುವಾಗ ಹಿಂಸೆಗಳನ್ನು ಎದುರಿಸಬೇಕು ಎಂಬದಾಗಿ ಹೇಳಲು ಪ್ರಾರಂಭಿಸಿದ್ದನ್ನು ಮುಂದುವರೆಸುತ್ತಿದ್ದಾನೆ.
ಇದು ಹುದುವಾಗಿರುವ ಹೇಳಿಕೆಯಾಗಿದೆಯೇ ಹೊರತು ನಿರ್ದಿಷ್ಟವಾದ ಗುರು ಮತ್ತು ಶಿಷ್ಯನ ಕುರಿತಾದದ್ದಲ್ಲ. ಶಿಷ್ಯನು ತನ್ನ ಗುರುವಿಗಿಂತ "ಹೆಚ್ಚು ಪ್ರಾಮುಖ್ಯವಲ್ಲ. ಇದಕ್ಕೆ ಕಾರಣ "ಅವನಿಗೆ ಹೆಚ್ಚಾಗಿ ಗೊತ್ತಿಲ್ಲದಿರಬಹುದು" ಅಥವಾ "ಉನ್ನತವಾದ ಮೌಲ್ಯ ಅವನಿಗಿಲ್ಲದಿರಬಹುದು" ಅಥವಾ ತನ್ನ ಬೋಧಕನಿಗಿಂತಲೂ "ಅವನು ಉತ್ತಮನಲ್ಲದಿರಬಹುದು. ಪರ್ಯಾಯ ಭಾಷಾಂತರ: "ಶಿಷ್ಯನು ಯಾವಾಗಲೂ ತನ್ನ ಗುರುವಿಗಿಂತ ಕಡಿಮೆ ಪ್ರಾಮುಖ್ಯತೆಯುಳ್ಳವನಾಗಿರುತ್ತಾನೆ" ಅಥವಾ "ಗುರು ಯಾವಾಗಲೂ ತನ್ನ ಶಿಷ್ಯನಿಗಿಂತಲೂ ಪ್ರಾಮುಖ್ಯತೆಯುಳ್ಳವನಾಗಿರುತ್ತಾನೆ."
"ಮತ್ತು ಸೇವಕನು ತನ್ನ ಯಜಮಾನನಿಗಿಂತಲೂ ದೊಡ್ಡವನಲ್ಲ." ಇದು ಹುದುವಾಗಿರುವ ಹೇಳಿಕೆಯಾಗಿದೆಯೇ ಹೊರತು ನಿರ್ದಿಷ್ಟವಾದ ಸೇವಕ ಮತ್ತು ಯಜಮಾನನ ಕುರಿತಾಗಿರುವದಲ್ಲ. ಸೇವಕನು ತನ್ನ ಯಜಮಾನನಿಗಿಂತಲೂ ಹೆಚ್ಚಿನವನಲ್ಲ ಅಥವಾ ಪ್ರಾಮುಖ್ಯನಲ್ಲ. ಪರ್ಯಾಯ ಭಾಷಾಂತರ: "ಸೇವಕನು ಯಾವಾಗಲೂ ತನ್ನ ಯಜಮಾನನಿಗಿಂತಲೂ ಕಡಿಮೆ ಪ್ರಾಮುಖ್ಯನಾಗಿರುತ್ತಾನೆ" ಅಥವಾ "ಯಜಮಾನನು ಯಾವಾಗಲೂ ತನ್ನ ಸೇವಕನಿಗಿಂತಲೂ ಪ್ರಾಮುಖ್ಯನಾಗಿರುತ್ತಾನೆ."
"ದಾಸ"
"ಒಡೆಯ"
ಯೇಸು ಕ್ರಿಸ್ತನು ೧೦:೧೬ರಲ್ಲಿ ತನ್ನ ಶಿಷ್ಯರಿಗೆ ನೀವು ನನ್ನ ಕೆಲಸವನ್ನು ಮಾಡಲು ಪ್ರಾರಂಭಿಸುವಾಗ ಹಿಂಸೆಗಳನ್ನು ಎದುರಿಸಬೇಕು ಎಂಬದಾಗಿ ಹೇಳಲು ಪ್ರಾರಂಭಿಸಿದ್ದನ್ನು ಮುಂದುವರೆಸುತ್ತಿದ್ದಾನೆ.
"ಅವರಿಗೆ" ಎಂಬ ಸರ್ವನಾಮವು ಯೇಸುವಿನ ಹಿಂಬಾಲಕರನ್ನು ಹಿಂಸಿಸುವವರನ್ನು ಸೂಚಿಸುತ್ತದೆ.
ಈ ಸಮಾನತೆಯನ್ನು ಈ ರೀತಿಯಾಗಿಯೂ ಭಾಷಾಂತರ ಮಾಡಬಹುದಾಗಿದೆ "ಜನರು ಮರೆ ಮಾಡುವ ಕಾರ್ಯಗಳನ್ನು ದೇವರು ಪ್ರಕಟಪಡಿಸುವನು." (ಸಮಾನತೆ, ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
ಈ ಸಮಾನತೆಯನ್ನು ಈ ರೀತಿಯಾಗಿಯೂ ಭಾಷಾಂತರ ಮಾಡಬಹುದು "ನಾನು ಕತ್ತಲಿನಲ್ಲಿ ಹೇಳಿರುವದನ್ನು ಜನರಿಗೆ ಹಗಲಿನಲ್ಲಿ ಹೇಳಿರಿ ಮತ್ತು ನೀವು ಕೇಳಿಸಿಕೊಳ್ಳುವ ಮಾತುಗಳನ್ನು ಮಾಳಿಗೆಯ ಮೇಲೆ ಪ್ರಕಟಿಸಲಾಗುವುದು."
"ನಾನು ರಹಸ್ಯವಾಗಿ ಹೇಳುವ ಮಾತುಗಳು" (ಯುಡಿಬಿ) ಅಥವಾ "ನಾನು ನಿಮಗೆ ವೈಯಕ್ತಿಕವಾಗಿ ಹೇಳುತ್ತಿರುವ ವಿಷಯಗಳು" (ರೂಪಕಾಲಂಕಾರ ನೋಡಿರಿ)
"ಬಹಿರಂಗವಾಗಿ ಹೇಳುವರು" ಅಥವಾ "ಸಾರ್ವಜನಿಕವಾಗಿ ಹೇಳುವರು" (ಯುಡಿಬಿ ನೋಡಿರಿ) (ರೂಪಕಾಲಂಕಾರ ನೋಡಿರಿ)
"ನಾನು ಹೇಳುವ ಪಿಸುಮಾತು."
ಯೇಸು ಕ್ರಿಸ್ತನು ೧೦:೧೬ರಲ್ಲಿ ತನ್ನ ಶಿಷ್ಯರಿಗೆ ನೀವು ನನ್ನ ಕೆಲಸವನ್ನು ಮಾಡಲು ಪ್ರಾರಂಭಿಸುವಾಗ ಹಿಂಸೆಗಳನ್ನು ಎದುರಿಸಬೇಕು ಎಂಬದಾಗಿ ಹೇಳಲು ಪ್ರಾರಂಭಿಸಿದ್ದನ್ನು ಮುಂದುವರೆಸುತ್ತಿದ್ದಾನೆ.
ಜನರಿಗೆ ಭಯಪಡಬೇಡಿರಿ. ಅವರು ದೇಹವನ್ನು ಕೊಲ್ಲಬಹುದು ಆದರೆ ಆತ್ಮವನ್ನು ಕೊಲ್ಲಲು ಆಗುವದಿಲ್ಲ
ಶಾರೀರಿಕ ಮರಣವನ್ನು ವಿಧಿಸಬಹುದು. ಒಂದುವೇಳೆ ಇವುಗಳು ಗಂಭೀರವಾಗಿದ್ದರೆ, "ನಿಮ್ಮನ್ನು ಕೊಲ್ಲಬಹುದು" ಅಥವಾ "ಇತರೆ ಜನರನ್ನು ಕೊಲ್ಲಬಹುದು" ಎಂಬದಾಗಿ ಭಾಷಾಂತರ ಮಾಡಿರಿ.
ಮನುಷ್ಯನ ಶರೀರದಲ್ಲಿ ಮುಟ್ಟಬಹುದಾದ ಭಾಗ
ಜನರಿಗೆ ಕೇಡನ್ನುಂಟು ಮಾಡುವದು
ಮನುಷ್ಯನ ಶರೀರದಲ್ಲಿ ಮುಟ್ಟಲು ಆಗದಿರುವ ಮತ್ತು ಶಾರೀರವು ಸತ್ತ ನಂತರವೂ ಜೀವಿಸುವ ಭಾಗ
ಆಲಂಕಾರಿಕವಾದ ಈ ಪ್ರಶ್ನೆಯನ್ನು "ಎರಡು ಗುಬ್ಬಚ್ಚಿಗಳ ಬಗ್ಗೆ ಆಲೋಚಿಸಿರಿ. ಅವುಗಳ ಬೆಲೆ ಬಹಳ ಕಡಿವೆ, ಸಣ್ಣ ದುಡ್ಡಿಗೆ ಎರಡನ್ನು ನೀವು ಖರೀದಿಸಬಹುದು" ಎಂಬದಾಗಿ ಭಾಷಾಂತರ ಮಾಡಿರಿ (ಯುಡಿಬಿ). (ಆಲಂಕಾರಿಕ ಪ್ರಶ್ನೆ ನೋಡಿರಿ)
ಇವುಗಳು ಬೀಜಗಳನ್ನು ತಿನ್ನುವ ಸಣ್ಣ ಪಕ್ಷಿಗಳಾಗಿದ್ದು ಪ್ರಾಮುಖ್ಯವೆಂದು ಜನರು ಯೋಚಿಸದಿರುವವುಗಳನ್ನು ಸೂಚಿಸುವ ರೂಪಕಾಲಂಕಾರವಾಗಿದೆ. (ರೂಪಕಾಲಂಕಾರ ನೋಡಿರಿ).
ಇದನ್ನು ಸಾಮಾನ್ಯವಾಗಿ ನಿರ್ದಿಷ್ಟವಾದ ಭಾಷೆಯಲ್ಲಿ ಸಣ್ಣ ದುಡ್ಡು ಎಂದು ಹೇಳಲಾಗುತ್ತದೆ. ಇದನ್ನು ತಾಮ್ರದ ನಾಣ್ಯವಾಗಿದ್ದು ಒಬ್ಬ ವ್ಯಕ್ತಿಯ ಸಂಬಳದ ಹದಿನಾರನೇ ಭಾಗವನ್ನು ತಿಳಿಸುತ್ತದೆ. ಇದನ್ನು "ಬಹಳ ಸಣ್ಣ ದುಡ್ಡು" ಎಂಬದ್ದಾಗಿಯೂ ಭಾಷಾಂತರ ಮಾಡಬಹುದು.
ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ನಿಮ್ಮ ತಂದೆಗೆ ಗೊತ್ತಾದರೆ ಮಾತ್ರವೇ ಅವುಗಳಲ್ಲಿ ಒಂದು ನೆಲಕ್ಕೆ ಬೀಳುತ್ತದೆ" ಅಥವಾ "ನಿಮ್ಮ ತಂದೆಗೆ ಗೊತ್ತಾದ ಮೇಲೆಯೇ ಅವುಗಳಲ್ಲಿ ಒಂದಾದರು ನೆಲಕ್ಕೆ ಬೀಳುತ್ತದೆ" (ಲಿಟೋಟಸ್ ನೋಡಿರಿ)
"ಒಂದು ಗುಬ್ಬಚ್ಚಿಯಾದರೂ"
"ಸಾಯುತ್ತದೆ"
"ನಿಮ್ಮ ತಲೆಯಲ್ಲಿ ಎಷ್ಟು ಕೂದಲಿವೆ ಎಂಬದು ಸಹ ದೇವರಿಗೆ ಗೊತ್ತಿದೆ" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
"ಲೆಕ್ಕಿಸಲ್ಪಟ್ಟಿದೆ"
"ದೇವರು ನಿಮಗೆ ಗುಬ್ಬಿಗಳಿಗಿಂತ ಹೆಚ್ಚಿನ ಬೆಲೆಯನ್ನು ಕೊಡುತ್ತಾನೆ"
ಯೇಸು ಕ್ರಿಸ್ತನು ೧೦:೧೬ರಲ್ಲಿ ತನ್ನ ಶಿಷ್ಯರಿಗೆ ನೀವು ನನ್ನ ಕೆಲಸವನ್ನು ಮಾಡಲು ಪ್ರಾರಂಭಿಸುವಾಗ ಹಿಂಸೆಗಳನ್ನು ಎದುರಿಸಬೇಕು ಎಂಬದಾಗಿ ಹೇಳಲು ಪ್ರಾರಂಭಿಸಿದ್ದನ್ನು ಮುಂದುವರೆಸುತ್ತಿದ್ದಾನೆ.
"ನಾನು ಆತನ ಶಿಷ್ಯನು ಎಂದು ಇತರರಿಗೆ ಹೇಳುವವನು" ಅಥವಾ "ಇತರರ ಎದುರಿನಲ್ಲಿ ನಾನು ಕ್ರಿಸ್ತನಿಗೆ ಪ್ರಾಮಾಣಿಕನು ಎಂಬದಾಗಿ ಒಪ್ಪಿಕೊಳ್ಳುವವನು"
"ಒಪ್ಪಿಕೊಳ್ಳುವುದು" (ಯುಡಿಬಿ ನೋಡಿರಿ)
"ಜನರ ಮುಂದೆ" ಅಥವಾ "ಇತರೆ ಜನರ ಮುಂದೆ"
ಯೇಸು ಕ್ರಿಸ್ತನು ತಂದೆಯಾದ ದೇವರ ಬಗ್ಗೆ ಹೇಳುತ್ತಿದ್ದಾನೆ.
"ಜನರ ಎದುರಿನಲ್ಲಿ ನಾನು ಆತನವನಲ್ಲ ಎಂದು ಹೇಳುವವನು" ಅಥವಾ "ಜನರ ಎದುರಿನಲ್ಲಿ ನನ್ನನ್ನು ನಿರಾಕರಿಸುವವನು" ಅಥವಾ "ನನ್ನ ಶಿಷ್ಯನೆಂದು ಜನರ ಎದುರಿನಲ್ಲಿ ಒಪ್ಪಿಕೊಳ್ಳದವನು" ಅಥವಾ "ನನಗೆ ಪ್ರಾಮಾಣಿಕನಾಗಿ ನಡೆದುಕೊಳ್ಳುತ್ತಿದ್ದೇನೆ ಎಂದು ಇತರರ ಎದುರಿನಲ್ಲಿ ಹೇಳಲು ನಿರಾಕರಿಸುವವನು."
ಯೇಸು ಕ್ರಿಸ್ತನು ೧೦:೧೬ರಲ್ಲಿ ತನ್ನ ಶಿಷ್ಯರಿಗೆ ನೀವು ನನ್ನ ಕೆಲಸವನ್ನು ಮಾಡಲು ಪ್ರಾರಂಭಿಸುವಾಗ ಹಿಂಸೆಗಳನ್ನು ಎದುರಿಸಬೇಕು ಎಂಬದಾಗಿ ಹೇಳಲು ಪ್ರಾರಂಭಿಸಿದ್ದನ್ನು ಮುಂದುವರೆಸುತ್ತಿದ್ದಾನೆ.
"ಒಂದುವೇಳೆ ಹೀಗಾಗಬಹುದೇನೋ ಅಂದುಕೊಳ್ಳಬೇಡಿರಿ" ಅಥವಾ "ನೀವು ಹೀಗೆ ಆಲೋಚಿಸಬಾರದು"
ಈ ರೂಪಕಾಲಂಕಾರವು ೧) ಹಿಂಸೆಯ ಮರಣ (ರೂಪಕಾಲಂಕಾರದಲ್ಲಿ "ಶಿಲುಬೆಯನ್ನು" ನೋಡಿರಿ)
"ತಿರುಗುವುದು" ಅಥವಾ "ವಿಭಜಿಸುವುದು" ಅಥವಾ "ಬೇರ್ಪಡಿಸುವುದು"
"ತನ್ನ ತಂದೆಗೆ ವಿರುದ್ಧವಾಗಿ ನಿಂತುಕೊಳ್ಳುವ ಮಗನು"
"ಒಬ್ಬ ಮನುಷ್ಯನ ವೈರಿಗಳು" ಅಥವಾ "ಒಬ್ಬ ವ್ಯಕ್ತಿಯ ಘೋರವಾದ ವೈರಿಗಳು"
"ಸ್ವಂತ ಕುಟುಂಬದ ಸದಸ್ಯರು"
ಯೇಸು ಕ್ರಿಸ್ತನು ೧೦:೧೬ರಲ್ಲಿ ತನ್ನ ಶಿಷ್ಯರಿಗೆ ನೀವು ನನ್ನ ಕೆಲಸವನ್ನು ಮಾಡಲು ಪ್ರಾರಂಭಿಸುವಾಗ ಹಿಂಸೆಗಳನ್ನು ಎದುರಿಸಬೇಕು ಎಂಬದಾಗಿ ಹೇಳಲು ಪ್ರಾರಂಭಿಸಿದ್ದನ್ನು ಮುಂದುವರೆಸುತ್ತಿದ್ದಾನೆ.
ಪರ್ಯಾಯ ಭಾಷಾಂತರ: "ಪ್ರೀತಿಸುವವರು ... ಅರ್ಹರಲ್ಲ" ಅಥವಾ "ಒಂದುವೇಳೆ ನೀವು ಪ್ರೀತಿಸಿದರೆ ... ನೀವು ಅರ್ಹರಲ್ಲ."
ಇದನ್ನು ಈ ರೀತಿಯಾಗಿಯೂ ಭಾಷಾಂತರ ಮಾಡಬಹುದು "ಯಾರಾದರೂ" ಅಥವಾ "ಅಂಥವನು" ಅಥವಾ "ಯಾವನಾದರು" ಅಥವಾ "ಅಂಥ ಜನರು" (ಯುಡಿಬಿ ನೋಡಿರಿ).
ಇಲ್ಲಿ "ಪ್ರೀತಿಗೆ" ಕೊಡಲಾಗಿರುವ ಪದವು "ಸಹೋದರ ಪ್ರೀತಿ" ಅಥವಾ "ಸ್ನೇಹಿತನ ಪ್ರೀತಿಯನ್ನು" ಸೂಚಿಸುತ್ತದೆ. ಇದನ್ನು ಈ ರೀತಿಯಾಗಿಯೂ ಭಾಷಾಂತರ ಮಾಡಬಹುದು "ಯೋಚಿಸುವವನು" ಅಥವಾ "ಸಮರ್ಪಣೆಯುಳ್ಳವನು" ಅಥವಾ "ಅದಕ್ಕಾಗಿ ಪ್ರಯತ್ನಿಸುವವನು."
ಇದನ್ನು ಈ ರೀತಿಯಾಗಿಯೂ ಭಾಷಾಂತರ ಮಾಡಬಹುದು "ನನಗೆ ಸೇರಿದವನಾಗಿರಲು ಅರ್ಹನಲ್ಲ" ಅಥವಾ "ನನ್ನ ಶಿಷ್ಯನಾಗಿರಲು ಅರ್ಹನಲ್ಲ" (ಯುಡಿಬಿ ನೋಡಿರಿ).
ಪರ್ಯಾಯ ಭಾಷಾಂತರ: "ತೆಗೆದುಕೊಳ್ಳದವರು ಆಗುವದಿಲ್ಲ" ಅಥವಾ "ಒಂದುವೇಳೆ ನೀವು ತೆಗೆದುಕೊಳ್ಳದಿದ್ದರೆ ಆಗುವದಿಲ್ಲ" ಅಥವಾ "ನೀವು ತೆಗೆದುಕೊಳ್ಳುವ ತನಕ ಆಗುವದಿಲ್ಲ.
ಇದು ಸಾಯಲು ಬಯಸದಿರುವವರಿಗೆ ಬಳಸಲಾಗಿರುವ ರೂಪಕಾಲಂಕಾರವಾಗಿದೆ. ಕೆಲವು ವಸ್ತುಗಳನ್ನು ಹೊತ್ತುಕೊಂಡು ಮತ್ತೊಬ್ಬ ವ್ಯಕ್ತಿಯ ಹಿಂದೆ ಹೋಗುವವರಿಗೆ ತಕ್ಕ ಪದವನ್ನು ಉಪಯೋಗಿಸಿರಿ. (ರೂಪಕಾಲಂಕಾರ ನೋಡಿರಿ)
ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ನೀವು ಹೋಗುವಾಗ ನಿಮಗೆ ಸಹಾಯ ಮಾಡುವವರಿಗೆ ನಾನು ಬಹುಮಾನ ಕೊಡುತ್ತೇನೆ ಎಂಬದನ್ನು ವಿವರಿಸಲು ಪ್ರಾರಂಭಿಸಿದನು.
ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ಯಾವನಾದರು" ಅಥವಾ "ಯಾರೇ ಆಗಲಿ" ಅಥವಾ "ಹೋಗುವವನು" (ಯುಡಿಬಿ ನೋಡಿರಿ).
ಇದು ೧೦:೧೪ರಲ್ಲಿರುವ "ಸ್ವೀಕರಿಸಿಕೊಳ್ಳುವವನು" ಎಂಬದಕ್ಕೆ ಸಮಾನವಾಗಿದೆ ಮತ್ತು "ಅತಿಥಿಯಾಗಿ ಸ್ವೀಕರಿಸಿಕೊಳ್ಳುವವನು" ಎಂಬ ಅರ್ಥವನ್ನು ಕೊಡುತ್ತದೆ.
"ನೀವು" ಎಂಬ ಸರ್ವನಾಮವು ಯೇಸು ಕ್ರಿಸ್ತನು ಹೇಳುತ್ತಿರುವ ಹನ್ನೆರೆಡು ಜನರನ್ನು ಸೂಚಿಸುತ್ತದೆ.
"ನನ್ನನ್ನು ಕಳುಹಿಸಿದ ತಂದೆಯಾದ ದೇವರನ್ನು ಸ್ವಾಗತಿಸಿಕೊಳ್ಳುತ್ತಾನೆ"
ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ನೀವು ಹೋಗುವಾಗ ನಿಮಗೆ ಸಹಾಯ ಮಾಡುವವರನ್ನು ನಾನು ಸನ್ಮಾನಿಸುತ್ತೇನೆ ಎಂಬದಾಗಿ ವಿವರಿಸಿದ್ದನ್ನು ಮುಕ್ತಾಗೊಳಿಸುತ್ತಿದ್ದಾನೆ.
"ಯಾವನಾದರೂ ಕೊಡುವದಾದರೆ."
ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ಈ ಚಿಕ್ಕವರಲ್ಲಿ ಒಬ್ಬನಿಗೆ ನನ್ನ ಶಿಷ್ಯನೆಂದು ಯಾವನಾದರೂ ಒಂದು ತಂಬಿಗೆ ನೀರು ಕೊಟ್ಟರೆ" ಅಥವಾ "ನನ್ನ ಶಿಷ್ಯನೆಂದು ಯಾವನಾದರೂ ಅವನಿಗೆ ಒಂದು ತಂಬಿಗೆ ತಣ್ಣೀರು ಕೊಟ್ಟರೆ."
"ಆ ವ್ಯಕ್ತಿ ಖಂಡಿತವಾಗಿಯೂ ತನ್ನ ಬಹುಮಾನವನ್ನು ಪಡೆಯುತ್ತಾನೆ (ಲಿಟೋಟಸ್ ನೋಡಿರಿ)
"ನಷ್ಟಪಡಿಸಿಕೊಳ್ಳುವುದು." ಸ್ವಾಸ್ತ್ಯವನ್ನು ತೆಗೆದುಕೊಳ್ಳುವುದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ.