ಯೇಸು ಕ್ರಿಸ್ತನು ಪಾರ್ಶ್ವವಾಯು ರೋಗಿಯನ್ನು ಗುಣಪಡಿಸುವ ದಾಖಲೆಯು ಇಲ್ಲಿ ಪ್ರಾರಂಭವಾಗುತ್ತಿದೆ.
ಶಿಷ್ಯರು ಬಹುಶಃ ಯೇಸುವಿನ ಜೊತೆಯಲ್ಲಿ ಹೋಗಿರಬಹುದು (ಯುಡಿಬಿ ನೋಡಿರಿ).
ಬಹುಶಃ ೮:೨೩ರಲ್ಲಿ ಇರುವ ಅದೇ ದೋಣಿಯಾಗಿರಬಹುದು. ಗೊಂದಲವನ್ನು ಬಗೆಹರಿಸಬೇಕಿದ್ದರೆ ಮಾತ್ರವೇ ನಿರ್ದಿಷ್ಟವಾಗಿ ಹೇಳಿರಿ.
"ತಾನು ವಾಸಿಸುತ್ತಿದ್ದ ಊರು" (ಯುಡಿಬಿ).
ಇದು ವಿಸ್ತಾರವಾದ ಕಥೆಯಲ್ಲಿ ಮತ್ತೊಂದು ಘಟನೆಯ ಪ್ರಾರಂಭವನ್ನು ಸೂಚಿಸುತ್ತದೆ. ಹಿಂದಿನ ಘಟನೆಯಲ್ಲಿರುವದಕ್ಕಿಂತ ಭಿನ್ನವಾದವರನ್ನು ಇದು ಒಳಗೊಂಡಿದೆ. ನಿಮ್ಮ ಭಾಷೆಯಲ್ಲಿ ಇದನ್ನು ಮಾಡುವ ವಿಧಾನ ಇರಬಹುದು.
ಪಾರ್ಶ್ವವಾಯು ರೋಗಿಯನ್ನು ಯೇಸುವಿನ ಬಳಿಗೆ ಕರೆದುಕೊಂಡು ಬಂದವರು. ಇದರಲ್ಲಿ ಪಾಶ್ವವಾಯು ರೋಗಿಯು ಸಹ ಸೇರಿದ್ದಾನೆ.
ಅವನು ಯೇಸುವಿನ ನಿಜವಾದ ಮಗನಲ್ಲ. ಯೇಸು ಅವನೊಂದಿಗೆ ನಮ್ರವಾಗಿ ಮಾತನಾಡುತ್ತಿದ್ದನು. ಒಂದುವೇಳೆ ಇದು ಗೊಂದಲಕರವಾಗಿದ್ದರೆ, ಇದನ್ನು ಈ ರೀತಿಯಾಗಿಯೂ ಭಾಷಾಂತರ ಮಾಡಬಹುದು "ನನ್ನ ಸ್ನೇಹಿತನೇ" ಅಥವಾ "ಯೌವನಸ್ಥನೇ," ಅಥವಾ ತೆಗೆದುಹಾಕಲೂ ಬಹುದು.
"ದೇವರು ನಿನ್ನ ಪಾಪಗಳನ್ನು ಕ್ಷಮಿಸಿದ್ದಾನೆ" ಅಥವಾ "ನಾನು ನಿನ್ನ ಪಾಪಗಳನ್ನು ಕ್ಷಮಿಸಿದ್ದೇನೆ"
ಯೇಸು ಕ್ರಿಸ್ತನು ಪಾರ್ಶ್ವವಾಯು ರೋಗಿಯನ್ನು ಗುಣಪಡಿಸಿದ ದಾಖಲೆಯು ಮುಂದುವರೆಯುತ್ತಿದೆ.
ವಿಸ್ತಾರವಾದ ಕಥೆಯಲ್ಲಿ ಮತ್ತೊಂದು ಘಟನೆಯ ಪ್ರಾರಂಭವನ್ನು ಇದು ಸೂಚಿಸುತ್ತದೆ. ಹಿಂದಿನ ಘಟನೆಗಿಂತಲೂ ಇದು ಭಿನ್ನವಾದ ಜನರನ್ನು ಒಳಗೊಂಡಿದೆ. ನಿಮ್ಮ ಭಾಷೆಯಲ್ಲಿಯೂ ಇದನ್ನು ಮಾಡುವ ವಿಧಾನ ಇರಬಹುದು.
ಇದರ ಅರ್ಥ "ಅವರು ತಾವಾಗಿಯೇ" ತಮ್ಮ ಮನಸ್ಸಿನಲ್ಲಿ ಅಥವಾ "ಒಬ್ಬರಿಗೊಬ್ಬರು," ತಮ್ಮ ಬಾಯ ಮಾತುಗಳಿಂದ.
ಕೇವಲ ದೇವರಿಂದ ಮಾತ್ರವೇ ಮಾಡಲಾಗುವ ಕಾರ್ಯಗಳನ್ನು ತಾನೂ ಮಾಡುವದಾಗಿ ಯೇಸು ಹೇಳುತ್ತಿದ್ದನು.
ಅವರು ಅಸಾಧಾರಣವಾದ ರೀತಿಯಲ್ಲಿ ಆಲೋಚಿಸುತ್ತಿದ್ದಾರೆ ಅಥವಾ ಅವರು ಒಬ್ಬರಿಗೊಬ್ಬರು ಮಾತನಾಡುವದನ್ನು ಆತನು ನೋಡಿದನು.
ಯೇಸು ಕ್ರಿಸ್ತನು ಶಾಸ್ತ್ರಿಗಳನ್ನು ಗದರಿಸುವ ಸಲುವಾಗಿ ಈ ಪ್ರಶ್ನೆಯನ್ನು ಉಪಯೋಗಿಸಿದನು. (ಆಲಂಕಾರಿಕ ಪ್ರಶ್ನೆ ನೋಡಿರಿ)
ಬಹುವಚನ
ಇದು ನೈತಿಕವಾದ ಕೆಟ್ಟತನ ಅಥವಾ ಸಾಧಾರವಾದ ತಪ್ಪಲ್ಲದೆ ದುಷ್ಟತನವಾಗಿದೆ.
"ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಎಂದು ಹೇಳುವುದು ಸುಲಭವೋ ಅಥವಾ ಎದ್ದು ನಡೆ ಎಂದು ಹೇಳುವುದು ಸುಲಭವೋ?
ಇದರ ಅರ್ಥ ೧) "ನಾನು ನಿನ್ನ ಪಾಪಗಳನ್ನು ಕ್ಷಮಿಸಿದ್ದೇನೆ" (ಯುಡಿಬಿ) ಅಥವಾ ೨) "ದೇವರು ನಿಮ್ಮ ಪಾಪಗಳನ್ನು ಕ್ಷಮಿಸುತ್ತಾನೆ." "ನಿಮ್ಮ" ಎಂಬದು ಏಕವಚನವಾಗಿದೆ. (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
ಏಕವಚನ
ಯೇಸು ಕ್ರಿಸ್ತನು ಅವನಿಗೆ ಬೇರೆ ಕಡೆಗೆ ಹೋಗಬಾರದು ಎಂದು ಹೇಳುತ್ತಿಲ್ಲ. ಮನೆಗೆ ಹೋಗುವ ಅವಕಾಶವನ್ನು ಕೊಡುತ್ತಿದ್ದಾನೆ.
ಯೇಸು ಕ್ರಿಸ್ತನು ಪಾರ್ಶ್ವವಾಯು ರೋಗಿಯನ್ನು ಗುಣಪಡಿಸಿದ ದಾಖಲೆಯು ಇಲ್ಲಿಗೆ ಮುಗಿಯಿತು. ನಂತರ ಯೇಸು ಕ್ರಿಸ್ತನು ಸುಂಕದವನನ್ನು ತನ್ನ ಶಿಷ್ಯನಾಗಲು ಕರೆದನು.
೫:೧೬ರಲ್ಲಿ ಬಳಸಿರುವ ಪದವನ್ನೇ ಬಳಸಿರಿ.
ಪಾಪಗಳು ಕ್ಷಮಿಸಲ್ಪಟ್ಟಿವೆ ಎಂದು ಹೇಳುವ ಅಧಿಕಾರ
ಸಭಾ ಚರಿತ್ರೆಯು ಈ ಮತ್ತಾಯನೇ ಈ ಸುವಾರ್ತೆಯ ಬರಹಗಾರನಾಗಿದ್ದಾನೆ ಎಂದು ಹೇಳುತ್ತದೆ ಆದರೆ ವಚನಗಳು ಸರ್ವನಾಮಗಳನ್ನು "ಆತನು" ಮತ್ತು "ಆತನಿಂದ" "ನನಗೆ" ಮತ್ತು "ನಾನು" ಎಂಬದನ್ನು ಬದಲಾಯಿಸಲು ಯಾವ ಕಾರಣವನ್ನೂ ಕೊಟ್ಟಿಲ್ಲ.
"ಯೇಸು ಕ್ರಿಸ್ತನು ಮತ್ತಾಯನಿಗೆ ಹೇಳಿದನು"
೯:೮ರಲ್ಲಿ "ನೋಡಿರಿ" ಎಂಬದಾಗಿ ಪ್ರಾರಂಭವಾಗುವ ಘಟನೆಯ ಪರಿಚಯವನ್ನು ತಿಳಿಸಲು ಈ ಪದವನ್ನು ಇಲ್ಲಿ ಬಳಸಲಾಗಿದೆ. ಒಂದುವೇಳೆ ನಿಮ್ಮ ಭಾಷೆಯಲ್ಲಿ ಇದನ್ನು ಮಾಡುವ ವಿಧಾನ ಇದ್ದರೆ ಇಲ್ಲಿ ಬಳಸುವ ಬಗ್ಗೆ ಯೋಚಿಸಿರಿ.
ಹೋಗುವುದಕ್ಕೆ ಸಮಾನವಾದ ಪದವನ್ನು ಬಳಸಿರಿ. ಯೇಸು ಕ್ರಿಸ್ತನು ಬೆಟ್ಟದ ಮೇಲೆ ಹೋಗುತ್ತಿದ್ದನೋ ಅಥವಾ ಕೆಳಗೆ ಹೋಗುತ್ತಿದ್ದನೋ ಅಥವಾ ಕಪೆರ್ನೌಮಿಗೆ ಕಡೆಗೆ ಹೋಗುತ್ತಿದ್ದನೋ ಅಥವಾ ಅಲ್ಲಿಂದ ದೂರಹೋಗುತ್ತಿದ್ದನೋ ಎಂಬದನ್ನು ಹೇಳಲಾಗಿಲ್ಲ.
"ಮತ್ತಾಯನು ಎದ್ದು ಯೇಸುವನ್ನು ಶಿಷ್ಯನಾಗಿ ಹಿಂಬಾಲಿಸಿದನೇ ಹೊರತು (ಯುಡಿಬಿ ನೋಡಿರಿ) ಮತ್ತೊಂದು ಸ್ಥಳದ ತನಕ ಮಾತ್ರವೇ ಹಿಂಬಾಲಿಸಲಿಲ್ಲ.
ಸುಂಕದವನಾದ ಮತ್ತಾಯನ ಮನೆಯಲ್ಲಿ ನಡೆದ ಘಟನೆಗಳು.
ಇದು ಬಹುಶಃ ಮತ್ತಾಯನ ಮನೆಯಾಗಿರಬಹುದು (ಯುಡಿಬಿ ನೋಡಿರಿ), ಹಾಗೆಯೇ ಯೇಸುವಿನ ಮನೆ ಸಹ ಆಗಿರಬಹುದು (ಯೇಸು ಮತ್ತು ಆತನ ಶಿಷ್ಯರೊಂದಿಗೆ ಅವನು ಊಟ ಮಾಡಿದನು). ಗೊಂದಲನ್ನು ಬಗೆಹರಿಸಬೇಕಿದ್ದರೆ ಮಾತ್ರವೇ ವಿವರಣೆಯನ್ನು ಕೊಡಿರಿ.
"ನೋಡಿರಿ" ಎಂಬ ಪದವು ಕಥೆಯಲ್ಲಿ ಹೊಸ ಜನರು ಬರುವದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದನ್ನು ಮಾಡುವ ವಿಧಾನ ಇರಬಹುದು. ಕನ್ನಡದಲಿ ಬಳಸಲಾಗಿರುವದೇನೆಂದರೆ "ಒಬ್ಬ ಮನುಷ್ಯನಿದ್ದನು ಅವನು. . ."
"ಯೇಸು ಕ್ರಿಸ್ತನು ಸುಂಕದವರು ಮತ್ತು ಪಾಪಿಗಳೊಂದಿಗೆ ಊಟ ಮಾಡುವದನ್ನು ನೋಡಿದಾಗ"
ಸುಂಕದವನಾದ ಮತ್ತಾಯನ ಮನೆಯಲ್ಲಿ ನಡೆದ ಘಟನೆಗಳು.
"ಇದನ್ನು" ಎಂಬದು ಫರಿಸಾಯರು ಯೇಸುವಿಗೆ ಸುಂಕದವರು ಮತ್ತು ಪಾಪಿಗಳೊಂದಿಗೆ ಊಟ ಮಾಡುವದರ ಬಗ್ಗೆ ಪ್ರಶ್ನೆ ಕೇಳಿದಾಗ ಎಂಬದನ್ನು ಸೂಚಿಸುತ್ತದೆ.
"ಆರೋಗ್ಯವಂತ ಜನರು." (ರೂಪಕಾಲಂಕಾರ ನೋಡಿರಿ)
"ಡಾಕ್ಟರ್" (ಯುಡಿಬಿ)
"ಅನಾರೋಗ್ಯದಲ್ಲಿರುವ ಜನರಿಗೆ ವೈದ್ಯನು ಬೇಕು"
"ಇದರ ಅರ್ಥವನ್ನು ನೀವು ಕಲಿಯಬೇಕು"
"ನೀವು" ಎಂಬ ಸರ್ವನಾಮವು ಫರಿಸಾಯರನ್ನು ಸೂಚಿಸುತ್ತದೆ.
ಸ್ನಾನಿಕನಾದ ಯೋಹಾನನ ಶಿಷ್ಯರು ಯೇಸುವಿನ ಶಿಷ್ಯರು ಉಪವಾಸ ಮಾಡದಿರುವದನ್ನು ಪ್ರಶ್ನಿಸುತ್ತಿದ್ದಾರೆ.
ಮದಲಿಂಗನು ಜೊತೆಯಲ್ಲಿರುವಾಗ ಮದುವೆ ಬರುವವರು ಯಾರೂ ಊಪವಾಸ ಮಾಡಬೇಕೆಂದು ಬಯಸುವದಿಲ್ಲ. (ಆಲಂಕಾರಿಕ ಪ್ರಶ್ನೆ ನೋಡಿರಿ)
ಯೇಸು ಕ್ರಿಸ್ತನ ಶಿಷ್ಯರಿಗೆ ಬಳಸಲಾಗಿರುವ ರೂಪಕಾಲಂಕಾರ (ರೂಪಕಾಲಂಕಾರ ನೋಡಿರಿ)
ಯೇಸು ಕ್ರಿಸ್ತನೇ "ಮದಲಿಂಗನಾಗಿದ್ದಾನೆ" ಆತನು ಇನ್ನೂ ಜೀವಂತವಾಗಿದ್ದಾನೆ ಮತ್ತು ಇನ್ನೂ ತನ್ನ ಶಿಷ್ಯರ ಜೊತೆಯಲ್ಲಿದ್ದಾನೆ. (ರೂಪಕಾಲಂಕಾರ ನೋಡಿರಿ)
"ಯಾರೋ ಮದಲಿಂಗನನ್ನು ತೆಗೆದುಕೊಳ್ಳುವರು." ಇದು ಕೊಲ್ಲಲ್ಪಡುವನು ಎಂಬದಕ್ಕೆ ರೂಪಕಾಲಂಕಾರವಾಗಿದೆ. (ರೂಪಕಾಲಂಕಾರ, ಸಕ್ರಿಯ ನಿಷ್ಕ್ರಿಯ ನೋಡಿರಿ)
"ದುಃಖಿಸುವುದು ... ದುಃಖಪಡುವುದು" (ಯುಡಿಬಿ)
ಯೋಹಾನನ ಶಿಷ್ಯರು ಕೇಳಿದ ಪ್ರಶ್ನೆಗೆ ಯೇಸು ಉತ್ತರಿಸುವುದನ್ನು ಮುಂದುವರೆಸುತ್ತಿದ್ದಾನೆ.
ಹಳೆಯ ಸಂಪ್ರದಾಯಗಳನ್ನು ಮಾತ್ರವೇ ತಿಳಿದಿರುವವರು ಹೊಸದವುಗಳನ್ನು ಅಂಗೀಕರಿಸಿಕೊಳ್ಳಲು ಬದ್ದರಾಗಿರುವದಿಲ್ಲ. (ರೂಪಕಾಲಂಕಾರ ನೋಡಿರಿ)
"ಉಡುಪು"
"ಹರಕಲು ಜಾಗವನ್ನು" ಮುಚ್ಚಲು ಉಪಯೋಗಿಸಲಾಗುವ ಬಟ್ಟೆ
ಯೋಹಾನನ ಶಿಷ್ಯರು ಕೇಳಿದ ಪ್ರಶ್ನೆಗೆ ಯೇಸು ಉತ್ತರಿಸುವುದನ್ನು ಮುಂದುವರೆಸುತ್ತಿದ್ದಾನೆ.
"ನಾವು ಮತ್ತು ಫರಿಸಾಯರು ಸಾಮಾನ್ಯವಾಗಿ ಉಪವಾಸ ಮಾಡುತ್ತೇವೆ, ಆದರೆ ನಿನ್ನ ಶಿಷ್ಯರು ಮಾತ್ರ ಉಪವಾಸ ಮಾಡುವದಿಲ್ಲ ಯಾಕೆ? ಎಂದು ಯೋಹಾನನ ಶಿಷ್ಯರು ಕೇಳಿದ ಪ್ರಶ್ನೆಗೆ ಉತ್ತರವನ್ನು ಕೊಡಲು ಯೇಸು ಕ್ರಿಸ್ತನು ಈ ರೂಪಕಾಲಂಕಾರವನ್ನು ಅಥವಾ ಸಾಮ್ಯವನ್ನು ಉಪಯೋಗಿಸಿದ್ದಾನೆ (ರೂಪಕಾಲಂಕಾರ ನೋಡಿರಿ)
"ಯಾರೂ ಹೊಯ್ಯುವದಿಲ್ಲ" (ಯುಡಿಬಿ) ಅಥವಾ "ಜನರು ಎಂದಿಗೂ ಹಾಕುವದಿಲ್ಲ"
"ದ್ರಾಕ್ಷಿಯ ರಸ." ಇದು ಇನ್ನೂ ಹಾಳಾಗದಿರುವ ದ್ರಾಕ್ಷಾರಸವನ್ನು ಸೂಚಿಸುತ್ತದೆ. ಒಂದುವೇಳೆ ನಿಮ್ಮ ಪ್ರದೇಶದಲ್ಲಿ ದ್ರಾಕ್ಷೆಯ ಬಗ್ಗೆ ಗೊತ್ತಿಲ್ಲದಿದ್ದರೆ, ಸಾಮಾನ್ಯವಾದ ಹಣ್ಣಿನ ಹೆಸರನ್ನು ಬಳಸಿರಿ.
ಇವು ಪ್ರಾಣಿಗಳ ಚರ್ಮದಿಂದ ಮಾಡಲಾಗಿರುವ ಚೀಲಗಳಾಗಿವೆ. ಇವುಗಳನ್ನು "ದ್ರಾಕ್ಷಾರಸದ ಚೀಲಗಳು" ಅಥವಾ "ಚರ್ಮದ ಚೀಲಗಳು" (ಯುಡಿಬಿ) ಎಂಬದಾಗಿಯೂ ಕರೆಯಬಹುದು.
ಹೊಸ ದ್ರಾಕ್ಷಾರಸವು ಹುಳಿಯಾಗಿ ವಿಸ್ತರಿಸಿಕೊಳ್ಳುವಾಗ ಅವುಗಳು ಹರಿದುಹೋಗುತ್ತವೆ ಯಾಕೆಂದರೆ ವಿಸ್ತರಿಸಿಕೊಳ್ಳಲು ಅವುಗಳಿಂದ ಆಗುವುದಲ್ಲ.
"ಹರಿದುಹೋಗುತ್ತವೆ" (ಯುಡಿಬಿ)
"ಹೊಸದಾಗಿರುವ ಬುದ್ದಲಿಗಳು" ಅಥವಾ "ಹೊಸ ದ್ರಾಕ್ಷಾರಸದ ಚೀಲಗಳು." ಇದು ಎಂದಿಗೂ ಉಪಯೋಗವಾಗದಂಥ ದ್ರಾಕ್ಷಾರಸದ ಚೀಲಗಳನ್ನು ಸೂಚಿಸುತ್ತವೆ.
ಯೇಸು ಕ್ರಿಸ್ತನು ಅದ್ಭುತವಾದ ರೀತಿಯಲ್ಲಿ ಯೆಹೂದ್ಯ ಅಧಿಕಾರಿಯ ಮಗಳನ್ನು ಗುಣಪಡಿಸಿದ ದಾಖಲೆಯನ್ನು ಇದು ಕೊಡುತ್ತದೆ.
ಯೇಸು ಕ್ರಿಸ್ತನು ಉಪವಾಸದ ವಿಷಯದಲ್ಲಿ ಯೋಹಾನನ ಶಿಷ್ಯರಿಗೆ ಕೊಟ್ಟ ಉತ್ತರವನ್ನು ಇದು ಸೂಚಿಸುತ್ತದೆ.
"ನೋಡಿರಿ" ಎಂಬ ಪದವು ಕಥೆಯಲ್ಲಿ ಹಿಂದೆ ವ್ಯಕ್ತಿಯನ್ನು ಪರಿಚಯಪಡಿಸುತ್ತದೆ. ನಿಮ್ಮ ಭಾಷೆಯಲ್ಲಿಯೂ ಇದನ್ನು ಮಾಡುವ ವಿಧಾನ ಇರಬಹುದು.
ಯೆಹೂದ್ಯ ಸಂಸ್ಕೃತಿಯ ಪ್ರಕಾರ ಜನರು ಈ ರೀತಿಯಾಗಿ ಗೌರವವನ್ನು ಕೊಡುತ್ತಿದ್ದರು.
ತನ್ನ ಮಗಳನ್ನು ಬದುಕಿಸುವ ಶಕ್ತಿ ಯೇಸು ಕ್ರಿಸ್ತನಿಗಿದೆ ಎಂದು ಯೆಹೂದ್ಯ ಅಧಿಕಾರಿಯು ನಂಬಿದನು ಎಂಬದನ್ನು ಇದು ಸೂಚಿಸುತ್ತದೆ.
ಯೇಸುವಿನ ಶಿಷ್ಯರು.
ಯೆಹೂದ್ಯ ಅಧಿಕಾರಿಯ ಮಗಳನ್ನು ಗುಣಪಡಿಸಲು ಹೋಗುವಾಗ ದಾರಿಯಲ್ಲಿ ಯೇಸು ಕ್ರಿಸ್ತನು ಮತ್ತೊಬ್ಬ ಸ್ತ್ರೀಯನ್ನು ಯಾವ ರೀತಿ ಗುಣಪಡಿಸಿದನು ಎಂಬದನ್ನು ಇದು ಸೂಚಿಸುತ್ತದೆ.
"ನೋಡಿರಿ" ಎಂಬ ಪದವು ಕಥೆಯಲ್ಲಿ ಹೊಸ ವ್ಯಕ್ತಿಯನ್ನು ಪರಿಚಯಪಡಿಸುತ್ತದೆ. ನಿಮ್ಮ ಭಾಷೆಯಲ್ಲಿಯೂ ಇದನ್ನು ಮಾಡುವ ವಿಧಾನ ಇರಬಹುದು.
"ಅಧಿಕವಾಗಿ ರಕ್ತ ಸ್ರಾವವಾಗುತ್ತಿತ್ತು." ಬಹುಶಃ ಸಾಮಾನ್ಯವಾಗಿ ರಕ್ತಸ್ರಾವವಾಗುವ ಸಮಯವಲ್ಲದಿದ್ದರೂ ಆಕೆಯ ಗರ್ಭದಿಂದ ರಕ್ತಸ್ರಾವವಾಗುತ್ತಿತ್ತು. ಕೆಲವು ಸಂಸ್ಕೃತಿಗಳಲ್ಲಿ ಈ ಪದ್ದತಿಯನ್ನು ಸರಳವಾದ ರೀತಿಯಲ್ಲಿ ಹೇಳಲಾಗುತ್ತದೆ. (ಎಫುಮಿಸಮ್ ನೋಡಿರಿ)
ಬಟ್ಟೆ ಗುಣಪಡಿಸುತ್ತದೆ ಎಂಬದಾಗಿ ಆಕೆ ನಂಬಲಿಲ್ಲ. ಯೇಸು ಗುಣಪಡಿಸುವನು ಎಂಬದಾಗಿ ನಂಬಿದಳು (ವ್ಯಕ್ತಿಗತಗೊಳಿಸುವಿಕೆ ನೋಡಿರಿ)
"ಉಡುಪು"
"ಬದಲಾಗಿ." ಸ್ತ್ರೀಯು ಅಂದುಕೊಂಡ ಕಾರ್ಯವು ನಡೆಯಲಿಲ್ಲ.
ಆ ಸ್ತ್ರೀಯು ಯೇಸುವಿನ ಮಗಳಾಗಿರಲಿಲ್ಲ. ಯೇಸು ಆಕೊಂದಿಗೆ ನಮ್ರವಾಗಿ ಮಾತನಾಡಿದನು. ಒಂದುವೇಳೆ ಗೊಂದಲವಾಗಿದ್ದರೆ "ಯೌವನಸ್ಥಳೇ" ಎಂಬದಾಗಿ ಭಾಷಾಂತರ ಮಾಡಬಹುದು ಅಥವಾ ತೆಗೆದುಹಾಕಬಹುದು.
ಯೇಸು ಯೆಹೂದ್ಯ ಅಧಿಕಾರಿಯ ಮಗಳನ್ನು ಗುಣಪಡಿಸಿದ ದಾಖಲೆಯು ಮುಂದುವರೆಯುತ್ತಿದೆ.
ಯೆಹೂದ್ಯ ನಾಯಕನ ಮನೆ.
ಗಾಳಿಯನ್ನು ಊದುವಾಗ ನಾದವನ್ನು ಕೊಡುವ ಸಾಧನ
ವಾದ್ಯಗಳನ್ನು ಬಾರಿಸುವ ಜನರು
ಯೇಸು ಕ್ರಿಸ್ತನು ಅನೇಕ ಜನರನ್ನುದ್ದೇಶಿಸಿ ಹೀಗೆ ಹೇಳಿದನು, ಆದ್ದರಿಂದ ನಿಮ್ಮ ಭಾಷೆಯಲ್ಲಿದ್ದರೆ ಬಹುವಚನವನ್ನು ಉಪಯೋಗಿಸಿರಿ.
ಯೇಸು ಕ್ರಿಸ್ತನು ಇಲ್ಲಿ ನಿದ್ದೆಯ ಚಿತ್ರಣವನ್ನು ಬಳಸುತ್ತಿದ್ದಾನೆ ಯಾಕೆಂದರೆ ಆಕೆಯ ಮರಣವು ತಾತ್ಕಾಲಿಕವಾಗಿತ್ತು ಕಾರಣ, ಆಕೆಯನ್ನು ಎಬ್ಬಿಸುತ್ತೇನೆ ಎಂಬದು ಆತನಿಗೆ ಗೊತ್ತಿತ್ತು. (ಎಫುಮಿಸಮ್ ನೋಡಿರಿ)
ಯೇಸು ಕ್ರಿಸ್ತನು ಯೆಹೂದ್ಯ ಅಧಿಕಾರಿಯ ಮಗಳನ್ನು ಗುಣಪಡಿಸಿದ ದಾಖಲೆಯು ಇಲ್ಲಿ ಕೊನೆಗೊಳ್ಳುತ್ತದೆ.
"ಯೇಸು ಕ್ರಿಸ್ತನು ಜನರನ್ನು ಹೊರಗಡೆ ಕಳುಹಿಸಿದ ನಂತರ" ಅಥವಾ "ಕುಟುಂಬದವರು ಜನರನ್ನು ಹೊರಗಡೆ ಕಳುಹಿಸಿದ ನಂತರ"
"ಹಾಸಿಗೆಯಿಂದ ಏಳು." ೮:೧೫ರಲ್ಲಿಯೂ ನಾವು ಇದನ್ನು ನೋಡಬಹುದು.
ಈ ವ್ಯಕ್ತಿಗತಗೊಳಿಸುವಿಕೆಯ ಅರ್ಥ ಜನರು ಇತರರಿಗೆ ಹೇಳಿದ್ದರಿಂದ ಇದು ಎಲ್ಲಾ ಕಡೆಗೂ ಹರಡಿಕೊಂಡಿತು. "ಆ ಪ್ರದೇಶದಲ್ಲಿರುವ ಜನರೆಲ್ಲರೂ ಇದರ ಬಗ್ಗೆ ಕೇಳಿಸಿಕೊಂಡರು" (ಯುಡಿಬಿ) ಅಥವಾ "ಹುಡುಗಿಯು ಬದುಕಿರುವದನ್ನು ನೋಡಿದ ಜನರು ಆ ಪ್ರದೇಶದಲ್ಲಿರುವವರೆಲ್ಲರಿಗೆ ಇದರ ಬಗ್ಗೆ ಹೇಳಲು ಪ್ರಾರಂಭಿಸಿದರು." (ವ್ಯಕ್ತಿಗತಗೊಳಿಸುವಿಕೆ ನೋಡಿರಿ)
ಯೇಸು ಕ್ರಿಸ್ತನು ಇಬ್ಬರು ಕುರುಡರನ್ನು ಗುಣಪಡಿಸಿದ ದಾಖಲೆಯನ್ನು ಇಲ್ಲಿ ನೋಡಬಹುದು.
ಯೇಸು ಆ ಪ್ರದೇಶದಿಂದ ಹೋಗುವಾಗ.
ಯೇಸು ಬೆಟ್ಟದ ಮೇಲೆ ಹೋಗುತ್ತಿದ್ದನೋ ಅಥವಾ ಬೆಟ್ಟದಿಂದ ಇಳಿಯುತ್ತಿದ್ದನೋ ಎಂಬದು ಸ್ಪಷ್ಟವಾಗಿ ಗೊತ್ತಿಲ್ಲ. ಹೋಗುವುದಕ್ಕೆ ಸಾಮಾನ್ಯವಾಗಿರುವ ಪದವನ್ನು ಬಳಸಿರಿ.
ಯೇಸು ಕ್ರಿಸ್ತನು ಅಕ್ಷರಾರ್ಥವಾಗಿ ದಾವೀದನ ಮಗನಲ್ಲ, ಆದ್ದರಿಂದ ಇದನ್ನು "ದಾವೀದನ ವಂಶದವನೇ" ಎಂದು ಭಾಷಾಂತರ ಮಾಡಬಹುದಾಗಿದೆ (ಯುಡಿಬಿ). ಆದರೂ "ದಾವೀದ ಕುಮಾರನೇ" ಎಂಬ ಹೆಸರನ್ನು ಸಹ ಯೇಸು ಕ್ರಿಸ್ತನಿಗೆ ಕೊಡಲಾಗಿದೆ (೨೧:೯ ನೋಡಿರಿ) ಮತ್ತು ಅವರು ಬಹುಶಃ ಯೇಸುವನ್ನು ಈ ಹೆಸರಿನಿಂದ ಕರೆಯುತ್ತಿದ್ದಿರಬಹುದು.
ಇದು ಬಹಶಃ ಯೇಸುವಿನ ಸ್ವಂತ ಮನೆಯಾಗಿರಬಹುದು (ಯುಡಿಬಿ) ಅಥವಾ ೯:೧೦ರಲ್ಲಿರುವ ಮನೆಯಾಗಿರಬಹುದು.
"ಹೌದು, ಕರ್ತನೇ, ನೀಗು ಗುಣಪಡಿಸಬಲ್ಲೆ ಎಂದು ನಾವು ನಂಬುತ್ತೇವೆ."
ಯೇಸು ಇಬ್ಬರು ಕುರುಡರನ್ನು ಗುಣಪಡಿಸಿದ ಘಟನೆ ಮುಕ್ತಾಯವಾಗುತ್ತಿದೆ.
ಆತನು ಇಬ್ಬರ ಕಣ್ಣುಗಳನ್ನು ಒಂದೇ ಸಲ ಮುಟ್ಟಿದನೋ ಅಥವಾ ತನ್ನ ಬಲಗೈಯಿಂದ ಒಬ್ಬನನ್ನು ಒಮ್ಮೆ ಹಾಗೂ ಇನ್ನೊಬ್ಬನನ್ನು ಒಮ್ಮೆ ಮುಟ್ಟಿದನೋ ಎಂಬದು ಸ್ಪಷ್ಟವಾಗಿಲ್ಲ. ಎಡಗೈಯನ್ನು ಅಶುದ್ಧ ಕಾರ್ಯಗಳಿಗೆ ಉಪಯೋಗಿಸಲಾಗುತ್ತಿದ್ದರಿಂದ, ಆತನು ತನ್ನ ಬಲಗೈಯನ್ನು ಮಾತ್ರವೇ ಉಪಯೋಗಿಸಿರಬಹುದು. ಆತನು ಮಾತನಾಡುವಾಗ ಅವರನ್ನು ಮುಟ್ಟಿದನೋ ಅಥವಾ ಮೊದಲು ಮುಟ್ಟಿ ನಂತರ ಮಾತನಾಡಿದನೋ ಎಂಬದು ಸಹ ಸ್ಪಷ್ಟವಾಗಿಲ್ಲ.
"ದೇವರು ಅವರ ಕಣ್ಣುಗಳನ್ನು ಗುಣಪಡಿಸಿದನು" ಅಥವಾ "ಇಬ್ಬರು ಕುರುಡರಿಗೆ ನೋಡುವ ಶಕ್ತಿಯು ಬಂದಿತು" (ಸಕ್ರಿಯ ಅಥವಾ ನಿಷ್ಕ್ರಿಯ, ನಾಣ್ಣುಡಿ ನೋಡಿರಿ)
"ಬದಲಾಗಿ." ಯೇಸು ಅವರಿಗೆ ಮಾಡಲು ಹೇಳಿದ ಕಾರ್ಯವನ್ನು ಅವರು ಮಾಡಲಿಲ್ಲ.
"ತಮಗಾದ ಸಂಗತಿಯನ್ನು ಅನೇಕರಿಗೆ ಹೇಳಿದನು"
ಯೇಸು ಕ್ರಿಸ್ತನು ತನ್ನ ಸ್ವಂತ ಊರಿನಲ್ಲಿ ಜನರನ್ನು ಗುಣಪಡಿಸಿದ್ದನ್ನು ಇಲ್ಲಿ ನೋಡಬಹುದು.
"ನೋಡಿರಿ" ಎಂಬ ಪದವು ಕಥೆಯಲ್ಲಿ ಹೊಸ ವ್ಯಕ್ತಿಯನ್ನು ಪರಿಚಯಪಡಿಸುತ್ತದೆ. ನಿಮ್ಮ ಭಾಷೆಯಲ್ಲಿಯೂ ಇದನ್ನು ಮಾಡುವ ವಿಧಾನ ಇರಬಹುದು.
ಮಾತನಾಡಲು ಬಾರದವನು.
"ಮೂಗನು ಮಾತನಾಡಲಾರಂಭಿಸಿದನು" ಅಥವಾ "ಅವನು ಮೂಗನಾಗಿ ಮುಂದುವರೆಯಲಿಲ್ಲ ಬದಲಾಗಿ ಮಾತನಾಡುವವನಾದನು"
"ಜನರಿಗೆ ವಿಸ್ಮಯವಾಯಿತು"
ಇದರ ಅರ್ಥ "ಹೀಗೆ ಎಂದಿಗೂ ಆಗಿರಲಿಲ್ಲ" ಅಥವಾ "ಈ ರೀತಿಯಾಗಿ ಯಾರೂ ಮಾಡಿರಲಿಲ್ಲ."
"ದುರಾತ್ಮಗಳು ಓಡುವಂತೆ ಮಾಡುತ್ತಾನೆ." "ಅವನು" ಎಂಬ ಸರ್ವನಾಮವು ಯೇಸುವನ್ನು ಸೂಚಿಸುತ್ತದೆ.
ಈ ವಚನಭಾಗಗಳು ಯೇಸು ಕ್ರಿಸ್ತನು ಗಲಿಲಾಯ ಸೀಮೆಯಲ್ಲಿ ಉಪದೇಶ, ಬೋಧನೆ ಮತ್ತು ಗುಣಪಡಿಸುವಿಕೆಯ ಸೇವೆ ಮಾಡಿದ್ದನ್ನು ವಿವರಿಸುತ್ತದೆ.
"ಬಹುತೇಕ ಪಟ್ಟಣಗಳು." (ಹೈಪರ್ಬೋಲ್ ನೋಡಿರಿ)
"ದೊಡ್ಡ ಹಳ್ಳಿಗಳು .... ಸಣ್ಣ ಹಳ್ಳಿಗಳು" ಅಥವಾ "ದೊಡ್ಡ ಪಟ್ಟಣಗಳು .... ಸಣ್ಣ ಪಟ್ಟಣಗಳು"
"ಪ್ರತಿಯೊಂದು ರೋಗ ಮತ್ತು ಪ್ರತಿಯೊಂದು ಬೇನೆ." "ರೋಗ" ಮತ್ತು "ಬೇನೆ" ಹತ್ತಿರವಾದ ಸಂಬಂಧವುಳ್ಳವುಗಳಾಗಿವೆ ಆದರೆ ಸಾಧ್ಯವಾದಷ್ಟು ಇವುಗಳನ್ನು ಬೇರೆಬೇರೆಯಾಗಿ ಭಾಷಾಂತರ ಮಾಡಿರಿ. "ಕಾಯಿಲೆಯು" ಒಬ್ಬ ವ್ಯಕ್ತಿಯನ್ನು ರೋಗಿಯನ್ನಾಗಿ ಮಾಡುತ್ತವೆ. ಕಾಯಿಲೆಯ ನಿಮಿತ್ತವಾಗಿ ಶಾರೀರಿಕ ಬಲಹೀನತೆಯು ಕಾಣಿಸಿಕೊಳ್ಳುತ್ತದೆ.
"ಜನರಿಗೆ ನಾಯಕನು ಇರಲಿಲ್ಲ" (ಉಪಮೆ ನೋಡಿರಿ)
ಹಿಂದಿನ ವಚನಭಾಗಗಳಲ್ಲಿ ಜನರ ಅವಶ್ಯಕತೆಗಳಿಗೆ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂಬದನ್ನು ತನ್ನ ಶಿಷ್ಯರಿಗೆ ಸುಗ್ಗಿಯ ಬಗ್ಗೆ ಹೇಳುವ ಸಲುವಾಗಿ ರೂಪಕಾಲಂಕಾರವನ್ನು ಬಳಸುತ್ತಿದ್ದಾನೆ.
ಈ ರೂಪಕಾಲಂಕಾರವು ದೇವರಲ್ಲಿ ನಂಬಿಕೆಯನ್ನಿಡುವ ದೊಡ್ಡ ಸಂಖ್ಯೆ ಮತ್ತು ದೇವರ ರಾಜ್ಯಕ್ಕೆ ಸೇರ್ಪಡೆಯಾಗುವದು ಹಾಗೂ ಕೆಲಸಗಾರರ ಹಾಗೆ ದೇವರ ಬಗ್ಗೆ ಇತರರಿಗೆ ಹೇಳುವದರೊಂದಿಗೆ ಹೋಲಿಸುತ್ತದೆ. ಈ ರೂಪಕಾಲಂಕಾರದ ಮುಖ್ಯ ವಿಷಯವೇನೆಂದರೆ ದೇವರ ಬಗ್ಗೆ ಅನೇಕರಿಗೆ ತಿಳಿಸುವಂಥವರು ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ. (ರೂಪಕಾಲಂಕಾರ ನೋಡಿರಿ)
"ಒಳ್ಳೆಯ ಬೆಳೆಯನ್ನು ಕೂಡಿಸುವ ಸುಗ್ಗಿ"
ಸೇವಕರು
"ಕರ್ತನಿಗೆ ಪ್ರಾರ್ಥನೆ ಮಾಡಿರಿ. ಆತನು ಬೆಳೆಗೆ ಯಜಮಾನನಾಗಿದ್ದಾನೆ."