ಯೇಸು ಕ್ರಿಸ್ತನು ಅದ್ಭುತವಾದ ರೀತಿಯಲ್ಲಿ ಅನೇಕ ಜನರನ್ನು ಗುಣಪಡಿಸಿದ ದಾಖಲೆಯನ್ನು ಇದು ಪ್ರಾರಂಭಿಸುತ್ತದೆ.
ಪರ್ಯಾಯ ಭಾಷಾಂತರ: "ಯೇಸು ಕ್ರಿಸ್ತನು ಬೆಟ್ಟದಿಂದ ಕೆಳಗೆ ಇಳಿದು ಬಂದಾಗ, ಜನರು ದೊಡ್ಡ ಗುಂಪಿನಲ್ಲಿ ಆತನನ್ನು ಹಿಂಬಾಲಿಸಿದರು." ಜನರ ಗುಂಪು ಎಂದು ಹೇಳುವಾಗ ಬೆಟ್ಟದ ಮೇಲೆ ಆತನೊಂದಿಗಿದ್ದವರು ಮತ್ತು ಇಲ್ಲದವರನ್ನು ಸಹ ಇಲ್ಲಿ ನೋಡಬಹುದಾಗಿದೆ.
ನೋಡಿರಿ ಎಂಬ ಪದವು ಕಥೆಯಲ್ಲಿ ಹೊಸ ವ್ಯಕ್ತಿಯನ್ನು ಪರಿಚಯಪಡಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದನ್ನು ಮಾಡುವ ವಿಧಾನ ಇದ್ದಿರಬಹುದು.
"ಕುಷ್ಠರೋಗವಿರುವ ವ್ಯಕ್ತಿ" ಅಥವಾ "ಚರ್ಮರೋಗವಿರುವ ವ್ಯಕ್ತಿ" (ಯುಡಿಬಿ)
ಪರ್ಯಾಯ ಭಾಷಾಂತರ: "ನಿನಗೆ ಬೇಕಾದರೆ" ಅಥವಾ "ನೀನು ಬಯಸಿದರೆ." ಯೇಸು ಕ್ರಿಸ್ತನಿಗೆ ತನ್ನನ್ನು ಗುಣಪಡಿಸುವ ಶಕ್ತಿ ಇದೆ ಎಂಬದನ್ನು ಕುಷ್ಠರೋಗಿಗೆ ಗೊತ್ತಿತ್ತು ಆದರೆ ಯೇಸು ತನ್ನನ್ನು ಮುಟ್ಟಲು ಬಯಸುತ್ತಾನೋ ಇಲ್ಲವೋ ಎಂಬದನ್ನು ಅವನು ತಿಳಿಯಬೇಕೆಂದಿದ್ದನು.
ಪರ್ಯಾಯ ಭಾಷಾಂತರ: "ನೀನು ನನ್ನನ್ನು ಗುಣಪಡಿಸಬಲ್ಲೆ" ಅಥವಾ "ದಯವಿಟ್ಟು ನನ್ನನ್ನು ಗುಣಪಡಿಸು" (ಯುಡಿಬಿ).
"ತಕ್ಷಣವೇ"
ಯೇಸು ಕ್ರಿಸ್ತನು "ಶುದ್ಧನಾಗು" ಎಂದು ಹೇಳಿದ ಪರಿಣಾಮವಾಗಿ ಅವನು ಶುದ್ಧನಾದನು. ಪರ್ಯಾಯ ಭಾಷಾಂತರ: "ಅವನು ಗುಣವಾದನು" ಅಥವಾ "ಕುಷ್ಠವು ಅವನನ್ನು ಬಿಟ್ಟು ಹೋಯಿತು" ಅಥವಾ "ಕುಷ್ಠವು ವಾಸಿಯಾಯಿತು."
ಯೇಸು ಕ್ರಿಸ್ತನು ಕುಷ್ಠರೋಗಿಯನ್ನು ಗುಣಪಡಿಸಿದ ದಾಖಲೆಯು ಇಲ್ಲಿ ಮುಂದುವರೆಯುತ್ತಿದೆ.
ಕುಷ್ಠರೋಗವಿದ್ದ ವ್ಯಕ್ತಿ
ಅವನು ಯಾಜಕನಿಗೆ ಯಜ್ಞವನ್ನು ಕೊಡುವಾಗ ಆತನ ಜೊತೆ ಮಾತನಾಡಬೇಕಾದರೂ (ಯುಡಿಬಿ) ನಡೆದ ಘಟನೆಯನ್ನು ಯಾರಿಗೂ ಹೇಳಬೇಡ ಎಂದು ಯೇಸು ಅವನಿಗೆ ಹೇಳಿದನು. ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ಯಾರಿಗೂ ಏನೂ ಹೇಳಬೇಡ" ಅಥವಾ "ನಾನು ನಿನ್ನನ್ನು ಗುಣಪಡಿಸಿದೆನು ಎಂದು ಯಾರಿಗೂ ಹೇಳಬೇಡ." (ಹೈಪರ್ಬೋಲ್ ನೋಡಿರಿ)
ಯೆಹೂದ್ಯ ಧರ್ಮಶಾಸ್ತ್ರದ ಪ್ರಕಾರ ಗುಣವಾಗಿರುವ ವ್ಯಕ್ತಿಯು ತನ್ನ ಚರ್ಮವನ್ನು ಯಾಜಕನಿಗೆ ತೋರಿಸಬೇಕು, ಆತನು ಅವನು ಅಥವಾ ಆಕೆ ಬೇರೆಯವರೊಂದಿಗೆ ಬೆರೆಯಲು ಅವಕಾಶ ಕೊಡುವನು.
ಮೋಶೆಯ ಧರ್ಮಶಾಸ್ತ್ರದ ಪ್ರಕಾರವಾಗಿ ಕುಷ್ಠರೋಗದಿಂದ ಗುಣವಾಗುವವನು ಯಾಜಕನಿಗೆ ಕೃತಜ್ಞತಾ ಕಾಣಿಕೆಯನ್ನು ಕೊಡಬೇಕು. ಯಾಜಕನು ಕಾಣಿಕೆಯನ್ನು ಅಂಗೀಕರಿಸಿಕೊಳ್ಳುವಾಗ, ಅವನಿಗೆ ಗುಣವಾಗಿದೆ ಎಂದು ಜನರಿಗೆ ಗೊತ್ತಾಗುವುದು.
ಇದು ಬಹುಶಃ ಯಾಜಕರನ್ನು ಅಥವಾ ೨) ಎಲ್ಲಾ ಜನರನ್ನು ಅಥವಾ ೩) ಯೇಸುವನ್ನು ಟೀಕಿಸುತ್ತಿದ್ದವರನ್ನು ಸೂಚಿಸುತ್ತದೆ. ಒಂದುವೇಳೆ ಸಾಧ್ಯವಾದರೆ ಈ ಗುಂಪುಗಳಲ್ಲಿ ಯಾರನ್ನಾದರೂ ಸೂಚಿಸುವ ಸರ್ವನಾಮವನ್ನು ಉಪಯೋಗಿಸಿರಿ. (ದ್ವಂದ್ವಾರ್ಥತೆ ನೋಡಿರಿ)
ಯೇಸು ಕ್ರಿಸ್ತನು ಹಲವು ಜನರನ್ನು ಗುಣಪಡಿಸಿದ ದಾಖಲೆಯನ್ನು ಇದು ಕೊಡುತ್ತದೆ.
ಯೇಸು
ಕಾಯಿಲೆಯ ನಿಮಿತ್ತ ನಡೆಯಲು ಆಗದಿರುವುದು
"ಯೇಸು ಕ್ರಿಸ್ತನು ಶತಾಧಿಪತಿಗೆ, ’ನಾನು ನಿನ್ನ ಮನೆಗೆ ಬರುವೆನು ಮತ್ತು ಮತ್ತು ನಿನ್ನ ಸೇವಕನನ್ನು ಗುಣಪಡಿಸುವೆನು’" ಎಂದು ಹೇಳಿದನು.
ಯೇಸು ಕ್ರಿಸ್ತನು ಹಲವು ಜನರನ್ನು ಗುಣಪಡಿಸಿದ ದಾಖಲೆಯನ್ನು ಇದು ಕೊಡುತ್ತದೆ.
"ನೀನು ನನ್ನ ಮನೆಯೊಳಗೆ ಪ್ರವೇಶಿಸಬೇಕು" (ಮೆಟಾನಿಮೈ ನೋಡಿರಿ)
"ಆಜ್ಞೆಯನ್ನು ಕೊಡು"
"ಪರಿಣಿತಿ ಸೈನಿಕರು"
ಇಸ್ರಾಯೇಲಿನಲ್ಲಿರುವ ಯೆಹೂದ್ಯರು, ತಮ್ಮನ್ನು ದೇವರ ಮಕ್ಕಳೆಂದು ಹೇಳಿಕೊಳ್ಳುತ್ತಾರೆ, ಬೇರೆಯವರಿಗಿಂತ ಅವರಿಗೆ ಹೆಚ್ಚಿನ ನಂಬಿಕೆಯಿರುತ್ತದೆ ಎಂಬದಾಗಿ ಯೇಸುವಿನ ಮಾತುಗಳನ್ನು ಕೇಳಿಸಿಕೊಳ್ಳುವವರು ಅಂದುಕೊಳ್ಳುತ್ತಿದ್ದರು. ನಿಮ್ಮ ಅಭಿಪ್ರಾಯ ತಪ್ಪು ಶತಾಧಿಪತಿಯ ನಂಬಿಕೆಯು ದೊಡ್ಡದು ಎಂಬದಾಗಿ ಯೇಸು ಕ್ರಿಸ್ತನು ಹೇಳುತ್ತಿದ್ದಾನೆ.
ಯೇಸು ಕ್ರಿಸ್ತನು ರೋಮನ್ ಶತಾಧಿಪತಿಯ ಸೇವಕನನ್ನು ಗುಣಪಡಿಸುವ ದಾಖಲೆಯನ್ನು ಇದು ಮುಂದುವರೆಸುತ್ತದೆ.
"ಇದು ಆತನನ್ನು ಹಿಂಬಾಲಿಸುವವರನ್ನು ಸೂಚಿಸುತ್ತದೆ" (೮:೧೦) ಮತ್ತು ಬಹುವಚನವಾಗಿದೆ.
ಇದು ಪರಾಕಾಷ್ಠೆಯಾಗಿದೆ: ಎಲ್ಲಾಕಡೆಗಳಲ್ಲಿಯೂ ಪೂರ್ವ ಎಂಬದಾಗಿ ಹೇಳಿರುವ ಕಡೆಯಲ್ಲಿ ಪಶ್ಚಿಮ ಇಲ್ಲ. ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ಎಲ್ಲಾ ಕಡೆಯಿಂದಲೂ" ಅಥವಾ "ದೂರದಲ್ಲಿರುವ ಎಲ್ಲಾ ದಿಕ್ಕುಗಳಿಂದಲೂ." (ಪರಾಕಾಷ್ಠೆಯನ್ನು ನೋಡಿರಿ)
ಆ ಸಂಸ್ಕೃತಿಯಲ್ಲಿ ದೇವರು ಊಟ ಮಾಡುವ ಸಮಯದಲ್ಲಿ ಮೇಜಿನ ಮೇಲೆ ಒರಗಿಕೊಳ್ಳುತ್ತಿದ್ದರು. ಕುಟುಂಬವಾಗಿ ಮತ್ತು ಸ್ನೇಹಿತರಾಗಿ ಜೀವಿಸಲು ಇದನ್ನು ಮೆಟಾನಿಮೈ ತರಹ ಉಪಯೋಗಿಸಲಾಗಿದೆ. ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಲಾಗಿದೆ "ಕುಟುಂಬದವರು ಮತ್ತು ಸ್ನೇಹಿತರಾಗಿ ಅನ್ಯೋನ್ಯತೆಯಿಂದ ಜೀವಿಸಿರಿ." (ಮೆಟಾನಿಮೈ ನೋಡಿರಿ)
"ದೇವರು ರಾಜ್ಯದ ಮಕ್ಕಳನ್ನು ಬಿಸಾಡುವನು" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
"ಮಕ್ಕಳು" ಎಂಬ ಪದವು ದೇವರ ರಾಜ್ಯದ ವಿಷಯದಲ್ಲಿ ಯಾವುದಕ್ಕಾದರೂ ಸಂಬಂಧಪಟ್ಟವರನ್ನು ಸೂಚಿಸುತ್ತದೆ. ಇಲ್ಲಿ ವ್ಯಂಗ್ಯವನ್ನು ಕೊಡಲಾಗಿದೆ ಯಾಕೆಂದರೆ "ಮಕ್ಕಳನ್ನು" ಬಿಸಾಡಲಾಗುವುದು ಮತ್ತು ಅಪರಿಚಿತರನ್ನು ಸ್ವಾಗತಿಸಿಕೊಳ್ಳಲಾಗುವುದು. ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ತಮ್ಮ ಮೇಲೆ ದೇವರು ಅಧಿಕಾರ ಮಾಡಲು ಅವಕಾಶ ಕೊಟ್ಟಿರುವವರು" (ಯುಡಿಬಿ ನೋಡಿರಿ). (ನಾಣ್ಣುಡಿ ನೋಡಿರಿ)
ಇದು ದೇವರನ್ನು ತಿರಸ್ಕರಿಸುವವರ ನಿತ್ಯವಾದ ಸ್ಥಳವನ್ನು ತೋರಿಸುತ್ತದೆ. "ದೇವರಿಂದ ದೂರ ಇರುವ ಕತ್ತಲೆಯ ಸ್ಥಳ." (ಮೆಟಾನಿಮೈ ನೋಡಿರಿ)
"ಆದ್ದರಿಂದ ನಾನು ನಿಮಗೆ ಇದನ್ನು ಮಾಡುವೆನು." (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
"ಯೇಸು ಕ್ರಿಸ್ತನು ಹೇಳಿದ ಸಮಯದಲ್ಲಿಯೇ ಆ ಸೇವಕನಿಗೆ ಗುಣವಾಯಿತು."
ಯೇಸು ಕ್ರಿಸ್ತನು ಹಲವು ಜನರನ್ನು ಗುಣಪಡಿಸುವ ದಾಖಲೆಯನ್ನು ಇದು ಮುಂದುವರೆಸುತ್ತದೆ.
ಬಹುಶಃ ಯೇಸುವಿನ ಶಿಷ್ಯರು ಆತನ ಜೊತೆಯಲ್ಲಿದ್ದರು (ಅಂದರೆ ಆತನಿಂದ ಸೂಚನೆಗಳನ್ನು ಕೇಳಿದವರು, ೮:೧೮; ಯುಡಿಬಿ ನೋಡಿರಿ), ಆದರೆ ಯೇಸು ಕ್ರಿಸ್ತನು ಹೇಳಿದ ವಿಷಯಗಳ ಮೇಲೆ ಗಮನವನ್ನು ಕೊಡಲಾಗಿದೆ ಮತ್ತು ಆದ್ದರಿಂದ ಅವಶ್ಯಕತೆಯಿದ್ದರೆ ಮಾತ್ರವೇ ತಪ್ಪಾದ ತಿಳುವಳಿಕೆಯನ್ನು ಸರಿಪಡಿಸಲು ಶಿಷ್ಯರ ಹೆಸರುಗಳನ್ನು ಕೊಡಬೇಡಿರಿ.
"ಪೇತ್ರನ ಹೆಂಡತಿಯ ತಾಯಿ"
ಒಂದುವೇಳೆ ನಿಮ್ಮ ಭಾಷೆಯಲ್ಲಿ ಜ್ವರದ ಬಗ್ಗೆ ಆಲೋಚಿಸಿಕೊಳ್ಳಲು ಅಥವಾ ಕಾರ್ಯಮಾಡಲು ಆಗುವುದಾದರೆ, "ಆಕೆಗೆ ಗುಣವಾಯಿತು" ಅಥವಾ "ಯೇಸು ಆಕೆಯನ್ನು ಗುಣಪಡಿಸಿದನು" ಎಂಬದಾಗಿ ಭಾಷಾಂತರ ಮಾಡಿರಿ. (ವ್ಯಕ್ತಿಗತಗೊಳಿಸುವಿಕೆಯನ್ನು ನೋಡಿರಿ)
"ಹಾಸಿಗೆಯಿಂದ ಮೇಲೆ ಎದ್ದನು"
ಯೇಸು ಹಲವು ಜನರನ್ನು ಗುಣಪಡಿಸಿದ ದಾಖಲೆಯು ಇಲ್ಲಿ ಮುಕ್ತಾಯವಾಗುತ್ತಿದೆ.
ಮಾರ್ಕ ೧:೩೦ಕ್ಕೆ ವಿರುದ್ಧವಾಗಿ ಯೇಸು ಸಬ್ಬತ್ ದಿನದಂದು ಕಪೆರ್ನೌಮಿಗೆ ಬಂದನು ಎಂಬದಾಗಿ ಯುಡಿಬಿ ಹೇಳುತ್ತದೆ. ಯೆಹೂದ್ಯರು ಸಬ್ಬತ್ ದಿನದಲ್ಲಿ ಕೆಲಸ ಮಾಡುತ್ತಿರಲಿಲ್ಲ ಅಥವಾ ಪ್ರಯಾಣಿಸುತ್ತಿರಲಿಲ್ಲ, ಜನರನ್ನು ಯೇಸುವಿನ ಬಳಿಗೆ ಕರೆದುಕೊಂಡು ಬರಲು ಅವರು ಸಂಜೆಯ ತನಕ ಕಾಯುತ್ತಿದ್ದರು. ತಪ್ಪಾದ ತಿಳುವಳಿಕೆಯನ್ನು ತಡೆಗಟ್ಟುವ ಅವಶ್ಯಕತೆಯಿಲ್ಲದಿದ್ದರೆ ಸಬ್ಬತ್ ದಿನ ಎಂಬದಾಗಿ ಸೂಚಿಸುವ ಅವಶ್ಯಕತೆಯಿಲ್ಲ.
ಇದು ಹೈಪರ್ಬೋಲ್ ಆಗಿದೆ. ಯೇಸು ಕ್ರಿಸ್ತನು ಒಂದಕ್ಕಿಂತ ಹೆಚ್ಚು ಮಾತುಗಳನ್ನು ಆಡಿರಬಹುದು. ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ಯೇಸು ಕ್ರಿಸ್ತನು ಒಂದು ಮಾತನ್ನು ಮಾತ್ರವೇ ಹೇಳಿದನು ಮತ್ತು ದುರಾತ್ಮಗಳು ಓಡಿಹೋದವು." (ಹೈಪರ್ಬೋಲ್ ನೋಡಿರಿ)
"ಇಸ್ರಾಯೇಲ್ಯರಿಗೆ ತಿಳಿಯಪಡಿಸು ಎಂಬದಾಗಿ ದೇವರು ಯೆಶಾಯನಿಗೆ ತಿಳಿಸಿದ ಕಾರ್ಯಗಳನ್ನು ಯೇಸು ಕ್ರಿಸ್ತನು ನೆರವೇರಿಸಿದನು." (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
"ಯೆಶಾಯನು ಹೇಳಿದ ಕಾರ್ಯಗಳು" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
"ಜನರನ್ನು ಅನಾರೋಗ್ಯದಿಂದ ಬಿಡುಗಡೆ ಮಾಡಿದನು ಮತ್ತು ಗುಣಪಡಿಸಿದನು" (ಡಬ್ಲೆಟ್ ನೋಡಿರಿ)
ಯೇಸು ಕ್ರಿಸ್ತನು ತನ್ನ ಹಿಂಬಾಲಕರಿಂದ ಏನು ಎದುರುನೋಡುತ್ತಿದ್ದಾನೆ ಎಂಬದನ್ನು ವಿವರಿಸಿದನು.
ಇದು ೮:೧೯ರಲ್ಲಿರುವ ಯೇಸುವನ್ನು ಸೂಚಿಸುತ್ತದೆ.
"ಏನು ಮಾಡಬೇಕೆಂದು ಆತನು ಅವರಿಗೆ ಹೇಳಿದನು"
ಯೇಸು ಕ್ರಿಸ್ತನು "ಸೂಚನೆಗಳನ್ನು ಕೊಟ್ಟ ಮೇಲೆ" ಆದರೆ ಆತನು ದೋಣಿಯನ್ನು ಹತ್ತುವ ಮೊದಲು (ಯುಡಿಬಿ ನೋಡಿರಿ).
"ಯಾವ ಸ್ಥಳಕ್ಕಾದರೂ"
ಈ ಪರಾಕಾಷ್ಠೆಯಲ್ಲಿರುವ ಪ್ರಾಣಿಗಳು ವಿಸ್ತಾರವಾದ ಕಾಡುಪ್ರಾಣಿಗಳನ್ನು ಸೂಚಿಸುತ್ತವೆ (ಪರಾಕಾಷ್ಠೆ ನೋಡಿರಿ)
ನರಿಗಳು ನಾಯಿಯಂಥ ಪ್ರಾಣಿಗಳಾಗಿದ್ದು ಗೂಡುಗಳಲ್ಲಿರುವ ಪಕ್ಷಿಗಳನ್ನು ಮತ್ತು ಸಣ್ಣ ಪ್ರಾಣಿಗಳನ್ನು ತಿನ್ನುತ್ತವೆ. ಒಂದುವೇಳೆ ನಿಮ್ಮ ಕ್ಷೇತ್ರದಲ್ಲಿ ನರಿಗಳ ಪರಿಚಯ ಇಲ್ಲದಿದ್ದರೆ, ನಾಯಿ ಅಥವಾ ಇತರೆ ಪ್ರಾಣಿಗಳ ಹೆಸರುಗಳನ್ನು ಬಳಸಿರಿ. (ಅಪರಿಚಿತಗಳ ಭಾಷಾಂತರ ನೋಡಿರಿ)
ನರಿಗಳು ವಾಸ ಮಾಡಲು ನೆಲದಲ್ಲಿ ಗುದ್ದುಗಳನ್ನು ಮಾಡುತ್ತವೆ. "ನರಿಗಳಿಗೆ" ಬದಲಾಗಿ ನೀವು ಯಾವ ಪ್ರಾಣಿಯ ಹೆಸರನ್ನು ಉಪಯೋಗಿಸುತ್ತೀರೋ ಅವುಗಳು ಎಲ್ಲಿ ಜೀವಿಸುತ್ತವೆ ಎಂಬ ಸ್ಥಳವನ್ನು ನಿರ್ದಿಷ್ಟವಾಗಿ ತಿಳಿಸಿರಿ.
"ಆತನಿಗೆ ಮಲಗಲು ಎಲ್ಲಿಯೂ ಸ್ಥಳವಿಲ್ಲ" (ನಾಣ್ಣುಡಿ ನೋಡಿರಿ)
ಯೇಸು ಕ್ರಿಸ್ತನು ತನ್ನ ಹಿಂಬಾಲಕರಿಂದ ಏನು ಎದುರುನೋಡುತ್ತಿದ್ದಾನೆ ಎಂಬದನ್ನು ವಿವರಿಸಿದನು.
ಇದು ವಿನಯವಾದ ಮನವಿಯಾಗಿದೆ. ಯೆಹೂದ್ಯರು ತಮ್ಮ ಸಂಪ್ರದಾಯದ ಪ್ರಕಾರ ಮೃತಪಡುವವರನ್ನು ಅಂದೇ ಸಮಾಧಿ ಮಾಡುತ್ತಿದ್ದರು, ಆದ್ದರಿಂದ ಆ ವ್ಯಕ್ತಿಯ ತಂದೆಯು ಬಹುಶಃ ಇನ್ನೂ ಬದುಕಿರಬಹುದು ಮತ್ತು ಅವನು ತನ್ನ ತಂದೆಯನ್ನು ಕೆಲವು ದಿವಸಗಳ ಕಾಲ ಅಥವಾ ವರ್ಷಗಳ ಕಾಲ ಅಂದರೆ ಆತನು ಸಾಯುವ ತನಕ ನೋಡಿಕೊಳ್ಳುವ ಸಲುವಾಗಿ "ಉತ್ತರಕ್ರಿಯೆಗಳನ್ನು" ಮಾಡಬೇಕು ಎಂಬ ಕಾರಣವನ್ನು ಕೊಟ್ಟನು (ಯುಡಿಬಿ ನೋಡಿರಿ). ಒಂದುವೇಳೆ ತಂದೆಯು ಈಗಾಗಲೇ ಮೃತಪಟ್ಟಿದ್ದರೆ, ಆ ವ್ಯಕ್ತಿಯು ಕೆಲವು ತಾಸುಗಳಿಗೆ ಹೋಗಿ ಬರುತ್ತೇನೆ ಎಂದು ಹೇಳಿರಬಹುದು. ತಪ್ಪಾಗಿ ಅರ್ಥಮಾಡಿಕೊಳ್ಳುವದನ್ನು ತಪ್ಪಿಸುವ ಅವಶ್ಯಕತೆಯಿದ್ದರೆ ಮಾತ್ರವೇ ತಂದೆಯು ಮೃತಪಟ್ಟಿದ್ದಾನೆ ಅಥವಾ ಇಲ್ಲ ಎಂಬದನ್ನು ನಿರ್ದಿಷ್ಟವಾಗಿ ತಿಳಿಸಿರಿ. (ಪರಾಕಾಷ್ಠೆ ನೋಡಿರಿ)
ಇದು ಪೂರ್ಣವಲ್ಲ ಬದಲಾಗಿ ಅಪೂರ್ಣವಾಗಿ ಹೇಳಿಕೆಯಾಗಿದೆ, ಆದ್ದರಿಂದ ಕೆಲವು ಪದಗಳನ್ನು ಮಾತ್ರವೇ ಬಳಸಿರಿ ಮತ್ತು ಸಾಧ್ಯವಾದಷ್ಟು ಸ್ವಲ್ಪವೇ ನಿರ್ದಿಷ್ಟಪಡಿಸಿರಿ. ಮಾನವನ ಮನವಿಯ ಪ್ರಕಾರ "ಉತ್ತರಕ್ರಿಯೆಗಳಿಗೆ" ಬಳಸಲಾಗಿರುವ ಪದವನ್ನೇ ಇಲ್ಲಿಯೂ ಬಳಸಿರಿ.
ತನ್ನ ತಂದೆಯ ವಿಷಯದಲ್ಲಿ ಮಗನು ತನಗಿರುವ ಜವಾಬ್ದಾರಿಕೆಯನ್ನು ನಿರಾಕರಿಸುವದನ್ನು ಸೂಚಿಸುತ್ತದೆ. "ಸತ್ತವರು ಉತ್ತರಕ್ರಿಯೆಯನ್ನು ಮಾಡಲಿ" ಅಥವಾ "ಸತ್ತವರು ಉತ್ತರಕ್ರಿಯೆಗಳನ್ನು ಮಾಡಲು ಅವಕಾಶ ಕೊಡಿರಿ" ಬಹುತೇಕವಾಗಿ "ಸತ್ತವರಿಗೆ ಬೇರೆ ಯಾವುದೇ ಆಯ್ಕೆಯನ್ನು ಕೊಡಬೇಡಿರಿ ಬದಲಾಗಿ ಅವರು ತಾವಾಗಿಯೇ ಸತ್ತವರ ಉತ್ತರಕ್ರಿಯೆಯನ್ನು ಮಾಡಲಿ."
"ಮೃತಪಟ್ಟವರು" ದೇವರ ರಾಜ್ಯದ ಹೊರಗಿರುವವರಿಗೆ ಇದು ರೂಪಕಾಲಂಕಾರವಾಗಿದೆ, ಅವರಿಗೆ ನಿತ್ಯಜೀವವು ಸಿಗುವದಿಲ್ಲ (ಯುಡಿಬಿ ನೋಡಿರಿ; ರೂಪಕಾಲಂಕಾರ). "ಅವರಲ್ಲಿ ಸತ್ತವರು" ರಾಜ್ಯದಿಂದ ಹೊರಗಿದ್ದು ಅಕ್ಷರಾರ್ಥವಾಗಿ ಸಾಯುವವರನ್ನು ಇದು ಸೂಚಿಸುತ್ತದೆ.
ಯೇಸು ಕ್ರಿಸ್ತನು ಸಮುದ್ರವನ್ನು ಶಾಂತಪಡಿಸಿದ ಘಟನೆಯನ್ನು ಇದು ಸೂಚಿಸುತ್ತದೆ.
"ಯೇಸು ಕ್ರಿಸ್ತನು ದೋಣಿಯನ್ನು ಹತ್ತಿದನು"
೮:೨೨ರಲ್ಲಿ "ಶಿಷ್ಯ" ಮತ್ತು "ಹಿಂಬಾಲಿಸುವಿಕೆಗೆ" ಉಪಯೋಗಿಸಲಾಗಿರುವ ಪದವನ್ನೇ ಉಪಯೋಗಿಸಿರಿ.
ವಿಸ್ತಾರವಾದ ಕಥೆಯಲ್ಲಿ ಮತ್ತೊಂದು ಘಟನೆಯ ಪ್ರಾರಂಭವನ್ನು ಇದು ಸೂಚಿಸುತ್ತದೆ. ಹಿಂದಿನ ಘಟನೆಯಲ್ಲಿರುವ ಜನರಲ್ಲದೇ ಬೇರೆಯವರನ್ನು ಇದು ಒಳಗೊಂಡಿರುವದಾಗಿದೆ. ನಿಮ್ಮ ಭಾಷೆಯಲ್ಲಿ ಇದನ್ನು ಮಾಡುವ ವಿಧಾನ ಇರಬಹುದು.
"ಸಮುದ್ರವು ಅಲ್ಲೋಲಕಲ್ಲೋಲವಾಗುಂಥ ಬಿರುಗಾಳಿಯು ಕಾಣಿಸಿಕೊಂಡಿತು."
"ಆಗ ತೆರೆಗಳು ದೋಣಿಯನ್ನು ಮುಚ್ಚಿಕೊಂಡವು." (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
"ನಮ್ಮನ್ನು ಕಾಪಾಡು" ಎಂಬ ಪದಗಳಿಂದ ಅವರು ಆತನನ್ನು ಎಬ್ಬಿಸಲಿಲ್ಲ. ಅವರು ಮೊದಲು ಆತನನ್ನು "ಎಬ್ಬಿಸಿದರು" ಮತ್ತು ನಂತರ "ನಮ್ಮನ್ನು ಕಾಪಾಡು" ಎಂದು ಹೇಳಿದರು.
"ನಾವು ಸಾಯುವ ಸ್ಥಿತಿಯಲ್ಲಿದ್ದೇವೆ"
ಯೇಸು ಕ್ರಿಸ್ತನು ಸಮುದ್ರವನ್ನು ಶಾಂತಪಡಿಸಿದ ಘಟನೆಯನ್ನು ಇದು ಸೂಚಿಸುತ್ತದೆ.
ಶಿಷ್ಯರು
ಬಹುವಚನ
"ನೀವು" ಎಂಬದು ಬಹುವಚನ. ೬:೩೦ರಲ್ಲಿ ಭಾಷಾಂತರ ಮಾಡಲಾಗಿರುವ ಪ್ರಕಾರವೇ ಇಲ್ಲಿಯೂ ಮಾಡಿರಿ.
ಆಲಂಕಾರಿಕವಾದ ಈ ಪ್ರಶ್ನೆಯು ಶಿಷ್ಯರು ಆಶ್ಚರ್ಯಪಟ್ಟರು ಎಂಬದನ್ನು ತೋರಿಸುತ್ತದೆ. ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ಗಾಳಿಯೂ ಸಮುದ್ರವೂ ಈತನ ಮಾತು ಕೇಳುತ್ತವೆ! ಈತನು ಎಂಥವನು!" (ಆಲಂಕಾರಿಕ ಪ್ರಶ್ನೆ ನೋಡಿರಿ)
ಜನರಾಗಲಿ ಅಥವಾ ಪ್ರಾಣಿಗಳಾಗಿ ವಿಧೇಯರಾಗುವುದು ಅಥವಾ ಅವಿಧೇಯರಾಗುವುದು ಆಶ್ಚರ್ಯಕರ ಸಂಗತಿಯಲ್ಲ ಆದರೆ ಗಾಳಿ ಮತ್ತು ನೀರು ವಿಧೇಯರಾಗುವುದು ಆಶ್ಚರ್ಯಕರ ಸಂಗತಿಯಾಗಿದೆ. ಪ್ರಕೃತಿಯು ಸಹ ಮಾನವರ ಹಾಗೆ ಕೇಳಿಸಿಕೊಳ್ಳುತ್ತವೆ ಮತ್ತು ಪ್ರತಿಕ್ರಿಯಿಸುತ್ತವೆ ಎಂಬದನ್ನು ತಿಳಿಯಲು ಇವುಗಳು ಸಹಾಯ ಮಾಡುತ್ತವೆ. (ವ್ಯಕ್ತಿಗತಗೊಳಿಸುವಿಕೆ ನೋಡಿರಿ)
ಯೇಸು ಕ್ರಿಸ್ತನು ದುರಾತ್ಮಪೀಡಿತರಾದ ಇಬ್ಬರನ್ನು ಬಿಡುಗಡೆಗೊಳಿಸಿದ ದಾಖಲೆಯನ್ನು ಇದು ಪ್ರಾರಂಭಿಸುತ್ತದೆ.
"ಗಲಿಲಾಯ ಸಮುದ್ರದ ಆಚೇದಡ"
ಗಡಾರ ಎಂಬ ಪಟ್ಟಣಕ್ಕೆ ಗದರೇನರ ಎಂದು ಹೆಸರಿಡಲಾಗಿದೆ. (ಹೆಸರುಗಳ ಭಾಷಾಂತರ ನೋಡಿರಿ)
ಆ ಸೀಮೆಯಲ್ಲಿ ಯಾರೂ ಹೋಗದಂತೆ ಆ ಇಬ್ಬರಲ್ಲಿದ್ದ ದುರಾತ್ಮಗಳು ಅವರನ್ನು ಅಪಾಯಕಾರಿಯನ್ನಾಗಿ ಮಾಡಿದ್ದವು.
ಇದು ವಿಸ್ತಾರವಾದ ಕಥೆಯಲ್ಲಿ ಹೊಸ ಘಟನೆಯನ್ನು ಪ್ರಾರಂಭಿಸುತ್ತದೆ. ಹಿಂದಿನ ಘಟನೆಯಲ್ಲಿರುವದಕ್ಕಿಂತ ಭಿನ್ನವಾದ ವ್ಯಕ್ತಿಗಳನ್ನು ಇದು ಒಳಗೊಂಡಿದೆ.
ಆಲಂಕಾರಿಕವಾದ ಈ ಮೊದಲನೆಯ ಪ್ರಶ್ನೆಯು ವಿರುದ್ಧವಾದದ್ದಾಗಿದೆ (ಯುಡಿಬಿ, ಆಲಂಕಾರಿಕ ಪ್ರಶ್ನೆ ನೋಡಿರಿ).
ಯೇಸು ಕ್ರಿಸ್ತನಿಗೆ ಆಹ್ವಾನವಿಲ್ಲ ಎಂಬ ಕಾರಣಕ್ಕಾಗಿ ದುರಾತ್ಮಗಳು ಈ ಹೆಸರನ್ನು ಉಪಯೋಗಿಸುತ್ತಿವೆ.
ಆಲಂಕಾರಿಕವಾದ ಈ ಎರಡನೆಯ ಪ್ರಶ್ನೆಯು ಸಹ ವಿರುದ್ಧವಾಗಿದೆ ಮತ್ತು "ನಮ್ಮನ್ನು ಶಿಕ್ಷಿಸಲು ದೇವರು ನೇಮಿಸಿರುವ ಕಾಲಕ್ಕೆ ಮೊದಲೇ ನೀನು ನಮ್ಮನ್ನು ಶಿಕ್ಷಿಸುವ ಮೂಲಕ ದೇವರಿಗೆ ಅವಿಧೇಯನಾಗಬಾರದು" ಎಂಬ ಅರ್ಥವನ್ನು ಕೊಡುತ್ತದೆ. (ಆಲಂಕಾರಿಕ ಪ್ರಶ್ನೆ ನೋಡಿರಿ).
ಯೇಸು ಕ್ರಿಸ್ತನು ದುರಾತ್ಮಪೀಡಿತರಾದ ಇಬ್ಬರನ್ನು ಬಿಡುಗಡೆಗೊಳಿಸಿದ ದಾಖಲೆಯನ್ನು ಇದು ಪ್ರಾರಂಭಿಸುತ್ತದೆ.
ಕಥೆಯು ಮುಂದುವರೆಯುವುದಕ್ಕಿಂತ ಮುಂಚೆ ಓದುಗನಿಗೆ ಬೇಕಾಗಿರುವ ಮಾಹಿತಿಯನ್ನು ಬರಹಗಾರನು ಕೊಡುತ್ತಿದ್ದಾನೆ ಎಂಬದನ್ನು ಇದು ತೋರಿಸುತ್ತದೆ. ಯೇಸು ಅಲ್ಲಿಗೆ ಬರುವದಕ್ಕಿಂತ ಮೊದಲೇ ಹಂದಿಗಳು ಅಲ್ಲಿದ್ದವು. (ಘಟನೆಗಳ ಕ್ರಮವನ್ನು ನೋಡಿರಿ)
ಇದರ ಅರ್ಥ, "ನೀನು ಹೇಗೂ ನಮ್ಮನ್ನು ಓಡಿಸುವೆ."
ವಿಶೇಷವಾದದ್ದು (ವಿಶೇಷವಾದದ್ದು ನೋಡಿರಿ)
ಆ ವ್ಯಕ್ತಿಯೊಳಗಿರುವ ಮನುಷ್ಯನು
"ದುರಾತ್ಮಗಳು ಅ ಮನುಷ್ಯನನ್ನು ಬಿಟ್ಟು ಪ್ರಾಣಿಗಳೊಳಗೆ ಸೇರಿಕೊಂಡವು."
"ನೋಡಿರಿ" ಎಂಬ ಪದವು ಮುಂಬರುವ ಆಶ್ಚರ್ಯಕರ ಸಂಗತಿಯ ಕಡೆಗೆ ಗಮನವನ್ನು ಹರಿಸುವಂತೆ ಮಾಡುತ್ತದೆ.
"ಕಡಿದಾದ ಸ್ಥಳಕ್ಕೆ ಓಡಿಹೋದವು"
"ಮುಳುಗಿದವು"
ಯೇಸು ಕ್ರಿಸ್ತನು ದುರಾತ್ಮಪೀಡಿತರಾದ ಇಬ್ಬರನ್ನು ಬಿಡುಗಡೆಗೊಳಿಸಿದ ದಾಖಲೆಯನ್ನು ಇದು ಪ್ರಾರಂಭಿಸುತ್ತದೆ.
"ಹಂದಿಗಳನ್ನು ನೋಡಿಕೊಳ್ಳುತ್ತಿದ್ದವರು"
ಯೇಸು ಕ್ರಿಸ್ತನು ದುರಾತ್ಮನ ಹಿಡಿತದಲ್ಲಿದ್ದವರಿಗೆ ಏನು ಮಾಡಿದನು.
ವಿಸ್ತಾರವಾದ ಕಥೆಯಲ್ಲಿ ಇದು ಮತ್ತೊಂದು ಘಟನೆಯ ಪ್ರಾರಂಭವನ್ನು ಸೂಚಿಸುತ್ತದೆ. ಹಿಂದಿನ ಘಟನೆಗಿಂತಲೂ ಇದರಲ್ಲಿ ಬೇರೆ ವ್ಯಕ್ತಿಗಳು ಇರುವದನ್ನು ನಾವು ನೋಡಬಹುದು. ನಿಮ್ಮ ಭಾಷೆಯಲ್ಲಿ ಈ ರೀತಿಯಾಗಿ ಮಾಡುವ ವಿಧಾನ ಇರಬಹುದು.
ಇದರ ಅರ್ಥ ಪ್ರತಿಯೊಬ್ಬ ವ್ಯಕ್ತಿ ಎಂಬದಾಗಿಯಲ್ಲ ಬದಲಾಗಿ ಬಹುತೇಕ ಜನರು ಅಥವಾ ಅನೇಕರು ಎಂಬದಾಗಿದೆ. (ಹೈಪರ್ಬೋಲ್ ನೋಡಿರಿ)
"ಪಟ್ಟಣ ಮತ್ತು ಅದರ ಹತ್ತಿರದಲ್ಲಿರುವ ಭೂಮಿ"