ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.
ಇದನ್ನು ಸಕ್ರಿಯವಾದ ರೂಪದಲ್ಲಿ ನೋಡಬಹುದಾಗಿದೆ: "ದೇವರು ನಿಮ್ಮನ್ನು ಖಂಡಿಸುವನು" (ಯುಡಿಬಿ) ಅಥವಾ "ಜನರು ನಿಮ್ಮನ್ನು ಖಂಡಿಸುವರು." (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
೨ನೇ ವಚನವು ೧ನೇ ವಚನದ ಮೇಲೆ ಆಧಾರವಾಗಿದೆ ಎಂಬದು ಓದುಗನಿಗೆ ಅರ್ಥವಾಗುತ್ತಿದೆಯೇ ಎಂಬದನ್ನು ದೃಢಪಡಿಸಿಕೊಳ್ಳಿರಿ.
ಇದನ್ನು ಈ ರೀತಿಯಾಗಿ ತಿಳಿಯಬಹುದು ೧) ಕೊಡಲಾಗುವ ಶಿಕ್ಷೆಯ ಪ್ರಮಾಣ (ಯುಡಿಬಿ ನೋಡಿರಿ) ಅಥವಾ ೨) ನ್ಯಾಯತೀರ್ಪಿಗೆ ಬಳಸಲಾಗುವ ಪ್ರಮಾಣ.
ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.
ಯೇಸು ಕ್ರಿಸ್ತನು ಅವರಿಗೆ ಮೊದಲು ನಿಮ್ಮ ತಪ್ಪುಗಳು ಅಥವಾ ಪಾಪಗಳನ್ನು ನೋಡಿಕೊಳ್ಳಿರಿ ಎಂದು ಹೇಳುತ್ತಿದ್ದಾನೆ (ಆಲಂಕಾರಿಕ ಪ್ರಶ್ನೆ ನೋಡಿರಿ)
ಇವುಗಳು ಒಬ್ಬ ವ್ಯಕ್ತಿಯ ಕಡಿಮೆ ಪ್ರಾಮುಖ್ಯತೆಯುಳ್ಳ ಮತ್ತು ಅತ್ಯಂತ ಪ್ರಾಮುಖ್ಯತೆಯುಳ್ಳ ತಪ್ಪುಗಳಿಗೆ ರೂಪಕಾಲಂಕಾರವಾಗಿದೆ. (ರೂಪಕಾಲಂಕಾರ ನೋಡಿರಿ)
ಇದು ಜೊತೆವಿಶ್ವಾಸಿಯನ್ನು ಸೂಚಿಸುತ್ತದೆಯೇ ಹೊರತು ಅಕ್ಷರಾಥ ಸಹೋದರನನ್ನು ಅಥವಾ ನೆರೆಯವನನ್ನು ಸೂಚಿಸುವದಿಲ್ಲ.
ಇದು ಜೀವಿತದ ರೂಪಕಾಲಂಕಾರವಾಗಿದೆ.
"ಚಿಕ್ಕದ್ದು" (ಯುಡಿಬಿ) ಅಥವಾ "ಧೂಳು." ಜನರ ಕಣ್ಣಿನೊಳಗೆ ಸಾಮಾನ್ಯವಾಗಿ ಬೀಳುವಂಥ ಸಣ್ಣ ಪದಾರ್ಥಗಳನ್ನು ಬಳಸಿರಿ.’
ಮರದಿಂದ ಕತ್ತರಿಸಲಾಗಿರುವ ದೊಡ್ಡ ಕೊಂಬೆ, ಅಕ್ಷರಾರ್ಥವಾಗಿ ಮಾನವನ ಕಣ್ಣಿನೊಳಗೆ ಹೋಗಲು ಆಗದಿರುವಂಥ ಮರದ ತುಂಡು. (ಹೈಪರ್ಬೋಲ್ ನೋಡಿರಿ)
ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.
ಹಂದಿಗಳು "ತುಳಿದುಬಿಡುತ್ತವೆ" ಮತ್ತು ನಾಯಿಗಳು "ಹಿಂದಿರುಗಿ ಬಂದು ಸೀಳಿಬಿಡುತ್ತವೆ" (ಯುಡಿಬಿ ನೋಡಿರಿ).
ಈ ಪ್ರಾಣಿಗಳನ್ನು ಅಶುದ್ಧ ಎಂದು ಪರಿಗಣಿಸಲಾಗಿತ್ತು ಮತ್ತು ದೇವರು ಇಸ್ರಾಯೇಲ್ಯರಿಗೆ ಇವುಗಳನ್ನು ತಿನ್ನಬೇಡಿರಿ ಎಂದು ಹೇಳಿದನು. ಪರಿಶುದ್ಧ ವಸ್ತುಗಳಿಗೆ ಬೆಲೆಯನ್ನು ಕೊಡದಿರುವ ದುಷ್ಟರಿಗೆ ಇದು ರೂಪಕಾಲಂಕಾರವಾಗಿದೆ (ರೂಪಕಾಲಂಕಾರ ನೋಡಿರಿ). ಈ ಪದಗಳನ್ನು ಅಕ್ಷರಾರ್ಥವಾಗಿ ಭಾಷಾಂತರ ಮಾಡುವುದು ಉತ್ತಮವಾಗಿರುತ್ತದೆ.
ಇವುಗಳು ಗುಂಡಾಗಿರುವ ಬೆಲೆಯುಳ್ಳ ಕಲ್ಲುಗಳಾಗಿವೆ. ಇವುಗಳು ದೇವರ ತಿಳುವಳಿಕೆಯ ವಿಷಯದಲ್ಲಿ ರೂಪಕಾಲಂಕಾರವಾಗಿವೆ (ಯುಡಿಬಿ ನೋಡಿರಿ) ಅಥವಾ ಹುದುವಾಗಿ ಅಮೂಲ್ಯವಾದವುಗಳಾಗಿವೆ.
ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.
ಇದು ಸತತವಾದ ಪ್ರಾರ್ಥನೆಯ ಮೂರು ರೂಪಕಾಲಂಕಾರವಾಗಿವೆ. (ರೂಪಕಾಲಂಕಾರ ನೋಡಿರಿ). ನಿಮ್ಮ ಭಾಷೆಯಲ್ಲಿ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಲು ಪದಗಳಿರುವದಾದರೆ ಇಲ್ಲಿ ಬಳಸಿರಿ (ಯುಡಿಬಿ ನೋಡಿರಿ)
ದೇವರ ಹತ್ತಿರ ಕೇಳಿಕೊಳ್ಳಿರಿ (ಯುಡಿಬಿ ನೋಡಿರಿ)
"ನಿರೀಕ್ಷಿಸಿರಿ" (ಯುಡಿಬಿ) ಅಥವಾ "ಹುಡುಕಿರಿ"
ಎರಡು ಪದಗಳಲ್ಲಿ ತಾನೇನನ್ನು ಹೇಳಿದ್ದೇನೆ ಎಂಬದನ್ನು ಯೇಸು ಕ್ರಿಸ್ತನು ವಿವರಿಸಲಿಕ್ಕಿದ್ದನು. ಇವುಗಳನ್ನು ತೆಗೆದುಹಾಕಬಹುದು (ಯುಡಿಬಿ).
ಆಲಂಕಾರಿಕವಾದ ಈ ಪ್ರಶ್ನೆಯ ಅರ್ಥ "ನಿಮ್ಮಲ್ಲಿ ಯಾರಿಂದಲೂ ಆಗುವದಿಲ್ಲ." (ಯುಡಿಬಿ, ಆಲಂಕಾರಿಕ ಪ್ರಶ್ನೆ ನೋಡಿರಿ)
ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.
"ನಿಮ್ಮ ವಿಷಯದಲ್ಲಿ ಇತರರು ನಡೆದುಕೊಳ್ಳಬೇಕೆಂದು ನೀವು ಬಯಸುವ ರೀತಿ" (ಯುಡಿಬಿ)
ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.
ಇದನ್ನು ನೀವು ೧೪ನೇ ವಚನದ ಕೊನೆಗೆ ತಳ್ಳಲು ಬಯಸಬಹುದು: "ಆದ್ದರಿಂದ, ಇಕ್ಕಟ್ಟಾದ ಬಾಗಿಲ ಮೂಲಕ ಒಳಗೆ ಬನ್ನಿರಿ."
ಈ ರೂಪಕಾಲಂಕಾರವು ಬಹುತೇಕವಾಗಿ "ಮಾರ್ಗದಲ್ಲಿ" ನಡೆಯುವ ಜನರು "ಬಾಗಿಲ" ಬಳಿಗೆ ಬಂದು ನಂತರ "ಜೀವಕ್ಕೆ" ಅಥವಾ "ನಾಶನಕ್ಕೆ" ಸೇರುವುದನ್ನು ಸೂಚಿಸುತ್ತದೆ (ಯುಡಿಬಿ, ರೂಪಕಾಲಂಕಾರ ನೋಡಿರಿ). ಆದ್ದರಿಂದ ನೀವು "ಜನರನ್ನು ನಾಶನಕ್ಕೆ ನಡೆಸುವ ದಾರಿ ವಿಸ್ತಾರವಾಗಿದೆ ಮತ್ತು ಜನರು ಅಗಲವಾದ ದ್ವಾರದಿಂದ ಒಳಗೆ ಹೋಗುತ್ತಾರೆ ಎಂಬದಾಗಿ ಭಾಷಾಂತರ ಮಾಡಬೇಕು. ಇತರರು ದ್ವಾರ ಮತ್ತು ಮಾರ್ಗವನ್ನು ಹೆಂಡಿಡೇಸ್ ಎಂದು ಅರ್ಥಮಾಡಿಕೊಳ್ಳುತ್ತಾರೆ, ಅವುಗಳನ್ನು ಪುನಃ ಕ್ರಮಗೊಳಿಸಲು ಆಗುವದಿಲ್ಲ. (ಹೆಂಡಿಡೇಸ್ ನೋಡಿರಿ)
ಯುಎಲ್ ಬಿ ಗುಣವಾಚಕಗಳ ನಡುವೆಯಿರುವ ವ್ಯತ್ಯಾಸವನ್ನು ತಿಳಿಸುವ ಸಲುವಾಗಿ ಕ್ರಿಯಾಪದಗಳಿಗಿಂತ ಮೊದಲು ಗುಣವಾಚಕಗಳನ್ನು ಹಾಕಿದೆ. ಸಾಮಾನ್ಯವಾಗಿ ನಿಮ್ಮ ಭಾಷೆಯಲ್ಲಿ ಗುಣವಾಚಕಗಳ ನಡುವೆಯಿರುವ ವ್ಯತ್ಯಾಸಗಳು ಕಾಣುವ ಹಾಗೆ ಭಾಷಾಂತರವನ್ನು ರೂಪಿಸಿರಿ.
ಜನರು ನಾಶವಾಗುವರು ಎಂಬದಕ್ಕೆ ಇದು ಹುದುವಾದ ಪದವಾಗಿದೆ. ಈ ಸಂದರ್ಭದಲ್ಲಿ ಇದು ಶಾರೀರಿಕ ಮರಣವನ್ನು ಸೂಚಿಸುತ್ತದೆ (ಯುಡಿಬಿ ನೋಡಿರಿ) ಮತ್ತು ಇದುವೇ ಶಾಶ್ವತ ಮರಣಕ್ಕೆ ರೂಪಕಾಲಂಕಾರವಾಗಿದೆ. ಇದು ಶಾರೀರಿಕ "ಜೀವಿತಕ್ಕೆ" ವಿರುದ್ಧವಾಗಿದೆ, ಮತ್ತು ನಿತ್ಯಜೀವಕ್ಕೆ ರೂಪಕಾಲಂಕಾರವಾಗಿದೆ (ರೂಪಕಾಲಂಕಾರ ನೋಡಿರಿ).
ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.
"ಕೇಡಿಗೆ ವಿರುದ್ಧವಾಗಿ ಎಚ್ಚರಿಕೆಯುಳ್ಳವರಾಗಿರ್ರಿ"
ಪ್ರವಾದಿಗಳ ಕ್ರಿಯೆಗಳನ್ನು ಯೇಸು ಕ್ರಿಸನು ಗಿಡಗಳು ಕೊಡುವ ಫಲಗಳಿಗೆ ಹೋಲಿಸಿದ್ದಾನೆ. ಪರ್ಯಾಯ ಭಾಷಾಂತರ: "ಅವರು ನಡೆದುಕೊಳ್ಳುವ ರೀತಿ." (ರೂಪಕಾಲಂಕಾರ ನೋಡಿರಿ)
"ಜನರು ಕೂಡಿಸಿಕೊಳ್ಳುವದಿಲ್ಲ..." ಯೇಸು ಕ್ರಿಸ್ತನ ಮಾತುಗಳನ್ನು ಕೇಳುತ್ತಿರುವ ಜನರಿಗೆ ಉತ್ತರವು ಇಲ್ಲ ಎಂದು ಗೊತ್ತಿರಬಹುದು. (ಆಲಂಕಾರಿಕ ಪ್ರಶ್ನೆ ನೋಡಿರಿ)
ಒಳ್ಳೆಯ ಕಾರ್ಯಗಳನ್ನು ಮಾಡುವ ಅಥವಾ ಮಾತುಗಳನ್ನಾಡುವ ಒಳ್ಳೆಯ ಪ್ರವಾದಿಗಳನ್ನು ಸೂಚಿಸುವ ಫಲದ ರೂಪಕಾಲಂಕಾರವನ್ನು ಯೇಸು ಕ್ರಿಸ್ತನು ಮುಂದುವರೆಸುತ್ತಿದ್ದಾನೆ.
ಕೆಟ್ಟ ಕರ್ಯಗಳನ್ನು ಮಾಡುವ ಅಥವಾ ಮಾತುಗಳನ್ನಾಡುವ ಕೆಟ್ಟ ಪ್ರವಾದಿಗಳನ್ನು ಸೂಚಿಸುವ ಫಲದ ರೂಪಕಾಲಂಕಾರವನ್ನು ಯೇಸು ಕ್ರಿಸ್ತನು ಮುಂದುವರೆಸುತ್ತಿದ್ದಾನೆ.
ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.
ಸುಳ್ಳು ಪ್ರವಾದಿಗಳನ್ನು ಸೂಚಿಸಲು ಯೇಸು ಕ್ರಿಸ್ತನು ಫಲದ ರೂಪಕಾಲಂಕಾರ ಬಳಸುವದನ್ನು ಮುಂದುವರೆಸುತ್ತಿದ್ದಾನೆ. ಇಲ್ಲಿ ಆತನು ಕೆಟ್ಟ ಮರಗಳಿಗೆ ಏನಾಗುವುದು ಎಂಬದನ್ನು ಮಾತ್ರವೇ ಹೇಳುತ್ತಿದ್ದಾನೆ. ಸುಳ್ಳು ಪ್ರವಾದಿಗಳಿಗೂ ಇದೇ ಗತಿಯಾಗುವುದು ಎಂಬದನ್ನು ತಿಳಿದುಕೊಳ್ಳಬೇಕಾಗಿದೆ. (ರೂಪಕಾಲಂಕಾರ, ಸ್ಪಷ್ಟ ಮತ್ತು ಅಸ್ಪಷ್ಟ ಮಾಹಿತಿಯನ್ನು ನೋಡಿರಿ)
"ಅವರ ಫಲಗಳು" ಪ್ರವಾದಿಗಳು ಅಥವಾ ಮರಗಳನ್ನು ಸೂಚಿಸುತ್ತವೆ. ಮರಗಳ ಫಲಗಳು ಮತ್ತು ಪ್ರವಾದಿಗಳ ಕಾರ್ಯಗಳು ಎರಡೂ ಅವರು ಒಳ್ಳೆಯವರೋ ಅಥವಾ ಕೆಟ್ಟವರೋ ಎಂಬದನ್ನು ತಿಳಿಸುತ್ತವೆ ಎಂಬದನ್ನು ಈ ರೂಪಕಾಲಂಕಾರವು ಸೂಚಿಸುತ್ತದೆ. ಸಾಧ್ಯಾವದರೆ ಇವುಗಳನ್ನು ಒಂದನ್ನು ಸೂಚಿಸುವ ಹಾಗೆ ಭಾಷಾಂತರ ಮಾಡಿರಿ. (ವಿವಿಧತೆಯನ್ನು ನೋಡಿರಿ)
ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.
"ನನ್ನ ತಂದೆ ಬಯಸುವದನ್ನು ಮಾಡುವವರು"
ಇದರಲ್ಲಿ ಯೇಸು ಕ್ರಿಸ್ತನು ಸೇರಿಲ್ಲ. (ವಿಶೇಷವಾದದ್ದು ನೋಡಿರಿ)
ಯೇಸು ಕ್ರಿಸ್ತನು "ಆ ದಿನದಲ್ಲಿ" ಎಂಬದಾಗಿ ಮಾತ್ರವೇ ಹೇಳಿದ್ದಾನೆ ಯಾಕೆಂದರೆ ಆತನು ನ್ಯಾಯತೀರ್ಪಿನ ದಿನವನ್ನು ಸೂಚಿಸುತ್ತಿದ್ದಾನೆ ಎಂಬದನ್ನು ಆತನ ಕೇಳುಗರು ಅರ್ಥಮಾಡಿಕೊಳ್ಳುವರು ಎಂಬದು ಆತನಿಗೆ ಗೊತ್ತಿತ್ತು. ಯೇಸು ಕ್ರಿಸ್ತನ ಮಾತುಗಳನ್ನು ಕೇಳುತ್ತಿದ್ದವರು ಈ ಸಂಗತಿಯನ್ನು ಅರ್ಥಮಾಡಿಕೊಳ್ಳಲು ಆಗದಿದ್ದರೆ ಮಾತ್ರವೇ ನೀವು ಇದನ್ನು (ಯುಡಿಬಿಯಲ್ಲಿರುವಂತೆ) ಸೇರಿಸಬೇಕು.
ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.
"ಈ ಕಾರಣದಿಂದ"
ತನ್ನ ಮಾತುಗಳಿಗೆ ವಿಧೇಯರಾಗುವವರನ್ನು ಯೇಸು ಕ್ರಿಸ್ತನು ಯಾವುದೇ ಹಾನಿಗೆ ಒಳಗಾಗದಂತೆ ಬಂಡೆಯ ಮೇಲೆ ಮನೆಯನ್ನು ಕಟ್ಟಿರುವಾತನಿಗೆ ಹೋಲಿಸುತ್ತಿದ್ದಾನೆ. ಮಳೆ, ಗಾಳಿ ಮತ್ತು ಚಂಡಮಾರುತವೇ ಬಂದರೂ ಮನೆಗೆ ಏನೂ ಆಗುವುದಿಲ್ಲ ಎಂಬದನ್ನು ಗಮನಿಸಿರಿ (ಉಪಮೆ ನೋಡಿರಿ)
ಇದು ನೆಲದ ಮೇಲೆ ಹಾಕಲಾಗಿರುವ ಅಡಿಪಾಯವಾಗಿದೆಯೇ ಹೊರತು ದೊಡ್ಡ ಕಲ್ಲು ಅಥವಾ ನೆಲದ ಮೇಲಿರುವ ಬಂಡೆಯಲ್ಲ.
ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.
ಯೇಸು ಕ್ರಿಸ್ತನು ತಾನು ಪ್ರಾರಂಭಿಸಿದ ಉಪಮೆಯನ್ನು ಮುಂದುವರೆಸುತ್ತಿದ್ದಾನೆ
ಮನೆಯು ಬೀಳುವಾಗ ಏನಾಗುತ್ತದೋ ಅದೇ ಪದವನ್ನು ಇಲ್ಲಿ ಬಳಸಿರಿ.
ಮಳೆ, ಜಲಪ್ರಳಯ ಮತ್ತು ಬಿರುಗಾಳಿಯು ಸಂಪೂರ್ಣವಾಗಿ ಮನೆಯನ್ನು ನಾಶಮಾಡಿದವು.
ಕಥೆಯಲ್ಲಿ ಹೊಸ ಭಾಗವನ್ನು ಪರಿಚಯಪಡಿಸುವ ವಿಧಾನವು ನಿಮ್ಮ ಭಾಷೆಯಲ್ಲಿ ಇರುವದಾದರೆ, ಇಲ್ಲಿ ಉಪಯೋಗಿಸಿರಿ. (ಟಾಲಿಂಗ್:ಸಂಭಾಷಣೆ ನೋಡಿರಿ)