Matthew 5

Matthew 5:1

೭ ಅಧ್ಯಾಯಗಳು ಒಂದೇ ಘಟನೆಯಾಗಿದೆ. ಯೇಸು ಕ್ರಿಸ್ತನು ಪರ್ವತದ ಮೇಲೆ ಕುಳಿತುಕೊಂಡು ತನ್ನ ಶಿಷ್ಯರಿಗೆ ಉಪದೇಶ ಮಾಡಿದನು.

ಆತನು ಅವರಿಗೆ ಹೇಳಿದ್ದೇನೆಂದರೆ

"ಯೇಸು ಮಾತನಾಡಲು ಪ್ರಾರಂಭಿಸಿದನು."

ಅವರಿಗೆ ಉಪದೇಶ ಮಾಡಿದನು

"ಅವರಿಗೆ" ಎಂದರೆ ಶಿಷ್ಯರು.

ಆತ್ಮದಲ್ಲಿ ಬಡವರಾಗಿರುವವರು

"ನಮಗೆ ದೇವರ ಅವಶ್ಯಕತೆಯಿದೆ ಎಂಬದನ್ನು ತಿಳಿದಿರುವವರು"

ದುಃಖಪಡುವವರು

ಈ ಜನರು ದುಃಖದಲ್ಲಿದ್ದಾರೆ ಯಾಕೆಂದರೆ ೧) ಲೋಕದ ಪಾಪಗಳು ಅಥವಾ ೨) ಅವರ ಪಾಪಗಳು ಅಥವಾ ೩) ಬೇರೆಯವರ ಮರಣ. ನಿಮ್ಮ ಭಾಷೆಯಲ್ಲಿ ಅವಶ್ಯಕತೆಯಿಲ್ಲದಿದ್ದರೆ ದಯವಿಟ್ಟು ನಿರ್ದಿಷ್ಟವಾದ ಕಾರಣವನ್ನು ಕೊಡಬೇಡಿರಿ.

ಅವರು ಸಮಾಧಾನ ಹೊಂದುವರು

ಪರ್ಯಾಯ ಭಾಷಾಂತರ: "ದೇವರು ಅವರಿಗೆ ಸಮಾಧಾನವನ್ನು ಕೊಡುವನು." (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

Matthew 5:5

ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.

ನೀತಿಗಾಗಿ ಹಸಿದು ಬಾಯಾರಿದವರು

"ಅನ್ನಪಾನಗಳನ್ನು ಬಯಸುವ ಹಾಗೆಯೇ ನೀತಿವಂತರಾಗಿ ಜೀವಿಸಲು ಬಯಸುವವರು" (ರೂಪಕಾಲಂಕಾರ ನೋಡಿರಿ)

ಅವರಿಗೆ ತೃಪ್ತಿಯಾಗುವದು

"ದೇವರು ಅವರನ್ನು ತೃಪ್ತಿಪಡಿಸುವನು." (ಸಕ್ರಿಯ ಅಥಾವ ನಿಷ್ಕ್ರಿಯ ನೋಡಿರಿ)

ನಿರ್ಮಲ ಚಿತ್ತರು

"ಶುದ್ಧವಾದ ಹೃದಯವುಳ್ಳವರು"

ಅವರು ದೇವರನ್ನು ನೋಡುವರು

"ದೇವರೊಂದಿಗೆ ಜೀವಿಸುವ ಅವಕಾಶವು ಅವರಿಗೆ ದೊರೆಯುವುದು" ಅಥವಾ "ತನ್ನೊಂದಿಗೆ ಜೀವಿಸಲು ದೇವರು ಅವರಿಗೆ ಅವಕಾಶ ಕೊಡುವನು"

Matthew 5:9

ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.

ಸಮಾಧಾನಪಡಿಸುವವರು

ಇವರು ಜನರ ನಡುವೆ ಪರಸ್ಪರ ಸಮಾಧಾನ ನೆಲೆಯಾಗಿರಲು ಸಹಾಯ ಮಾಡುವವರಾಗಿದ್ದಾರೆ.

ದೇವರಮಕ್ಕಳು

ಇವರು ದೇವರ ಸ್ವಂತ ಮಕ್ಕಳಾಗಿದ್ದಾರೆ. (ರೂಪಕಾಲಂಕಾರ ನೋಡಿರಿ)

ಹಿಂಸೆಯನ್ನು ತಾಳಿಕೊಳ್ಳುವವರು

ಪರ್ಯಾಯ ಭಾಷಾಂತರ: "ಇತರರಿಂದ ಎದುರಾಗುವ ಹಿಂಸೆಯನ್ನು ಸಹಿಸಿಕೊಳ್ಳುವವರು."

ನೀತಿಯ ನಿಮಿತ್ತವಾಗಿ

"ಯಾಕೆಂದರೆ ಅವರು ದೇವರು ತಮಗೆ ಏನು ಮಾಡಲು ಹೇಳುತ್ತಾನೋ ಅದನ್ನೇ ಮಾಡುತ್ತಾರೆ"

ಪರಲೋಕ ರಾಜ್ಯವು ಅವರದು

"ದೇವರು ಅವರಿಗೆ ಪರಲೋಕದಲ್ಲಿ ಜೀವಿಸುವ ಅವಕಾಶವನ್ನು ಕೊಡುತ್ತಾನೆ." ಪರಲೋಕ ರಾಜ್ಯವನ್ನು ಅವರು ಸ್ವಂತವಾಗಿ ಹೊಂದಿಲ್ಲ; ಆದರೆ ದೇವರು ಅವರಿಗೆ ತನ್ನ ಪ್ರಸನ್ನತೆಯಲ್ಲಿ ಜೀವಿಸಲು ಅವಕಾಶವನ್ನು ಕೊಡುತ್ತಾನೆ.

Matthew 5:11

ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.

ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ

"ನೀವು ನನ್ನನ್ನು ಹಿಂಬಾಲಿಸುವುದರಿಂದ ಸುಳ್ಳು ಮಾತುಗಳನ್ನು ಹೊರಿಸಿದರೆ" ಅಥವಾ "ನೀವು ನನ್ನನ್ನು ನಂಬುವದನ್ನು ಬಿಟ್ಟು ಬೇರೆ ಯಾವ ವ್ಯರ್ಥವಾದ ಕಾರ್ಯಗಳನ್ನು ಮಾಡದಿದ್ದರೂ"

ಸಂತೋಷಪಡಿರಿ, ಉಲ್ಲಾಸಪಡಿರಿ

ಸಂತೋಷಪಡಿರಿ, ಉಲ್ಲಾಸಪಡಿರಿ ಬಹುತೇಕ ಒಂದೇ ವಿಷಯವಾಗಿದೆ. ಯೇಸು ಕ್ರಿಸ್ತನು ತನ ಹಿಂಬಾಲಕರು ಸಂತೋಷಪಡುವುದು ಮಾತ್ರವಲ್ಲ ಬದಲಾಗಿ ಅದಕ್ಕಿಂತಲೂ ಹೆಚ್ಚಿನದನ್ನು ಮಾಡಬೇಕು ಎಂಬದಾಗಿ ಬಯಸಿದನು. (ಹೆಂಡಿಡೇಸ್ ನೋಡಿರಿ)

Matthew 5:13

ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.

ನೀವು ಭೂಮಿಗೆ ಉಪ್ಪಾಗಿದ್ದೀರಿ

"ನೀವು ಲೋಕದಲ್ಲಿರುವ ಜನರಿಗೆ ಒಂದು ರೀತಿಯಲ್ಲಿ ಉಪ್ಪಾಗಿದ್ದೀರಿ" ಅಥವಾ "ಉಪ್ಪು ಆಹಾರಕ್ಕೆ ಬೇಕಾಗಿರುವಂತೆ, ನೀವು ಲೋಕಕ್ಕೆ ಭೇಕಾಗಿದ್ದೀರಿ." ಇದರ ಅರ್ಥ ೧) "ಉಪ್ಪು ಆಹಾರವನ್ನು ರುಚಿಗೊಳಿಸುವ ಹಾಗೆಯೇ, ಲೋಕದ ಜನರು ಒಳ್ಳೆಯವರಾಗಿರಲು ನೀವು ಅವರ ಮೇಲೆ ಪ್ರಭಾವವನ್ನು ಬೀರಬೇಕು" ಅಥವಾ ೨) "ಉಪ್ಪು ಆಹಾರವನ್ನು ಕೆಡದಂತೆ ಕಾಪಾಡುವ ಹಾಗೆಯೇ ಜನರು ಸಂಪೂರ್ಣವಾಗಿ ಭ್ರಷ್ಟರಾಗದಂತೆ ನೀವು ಅವರನ್ನು ಕಾಪಾಡಬೇಕು." (ರೂಪಕಾಲಂಕಾರವನ್ನು ನೋಡಿರಿ).

ಒಂದುವೇಳೆ ಉಪ್ಪು ತನ್ನ ರುಚಿಯನ್ನು ಕಳೆದುಕೊಂಡರೆ

ಇದರ ಅರ್ಥ ೧) "ಉಪ್ಪು ತಾನು ಮಾಡಲು ಶಕ್ತವಾಗಿರುವ ಕಾರ್ಯಗಳನ್ನು ಮಾಡುವ ಅಧಿಕಾರವನ್ನು ಕಳೆದುಕೊಂಡರೆ" (ಯುಡಿಬಿಯಲ್ಲಿರುವ ಪ್ರಕಾರ) ಅಥವಾ೨) "ಉಪ್ಪು ತನ್ನ ರುಚಿಯನ್ನು ಕಳೆದುಕೊಂಡರೆ."

ಅದಕ್ಕೆ ಇನ್ನಾತರಿಂದ ಉಪ್ಪಿನ ರುಚಿ ಬಂದೀತು?

"ಅದನ್ನು ಮತ್ತೆ ಪ್ರಯೋಜನಕಾರಿಯನ್ನಾಗಿ ಮಾಡುವುದು ಹೇಗೆ?" ಅಥವಾ "ಅದು ಮತ್ತೊಮ್ಮೆ ಪ್ರಯೋಜನಕಾರಿಯಾಗಿ ಮಾರ್ಪಡಲು ಮಾರ್ಗವೇ ಇಲ್ಲ." (ಆಲಂಕಾರಿಕ ಪ್ರಶ್ನೆ ನೋಡಿರಿ)

ಜನರು ಅದನ್ನು ಹೊರಗೆ ಹಾಕಿ ತುಳಿಯುವುದಕ್ಕೆ ಅದು ಯೋಗ್ಯವೇ ಹೊರತು ಮತ್ತಾವ ಕೆಲಸಕ್ಕೂ ಬಾರದು

’ಜನರು ನಡೆದಾಡುವ ಸ್ಥಳಕ್ಕೆ ಬಿಸಾಕಲು ಮಾತ್ರವೇ ಅದು ಯೋಗ್ಯವಾಗಿರುತ್ತದೆ."

ನೀವು ಲೋಕಕ್ಕೆ ಬೆಳಕಾಗಿದ್ದೀರಿ

"ನೀವು ಲೋಕದಲ್ಲಿರುವ ಜನರಿಗೆ ಬೆಳಕಾಗಿದ್ದೀರಿ:

ಬೆಟ್ಟದ ಮೇಲಿರುವ ಪಟ್ಟಣವು ಮರೆಯಾಗಿರಲಾರದು

"ಬೆಟ್ಟದ ಮೇಲಿರುವ ಪಟ್ಟಣದ ಬೆಳಕನ್ನು ರಾತ್ರಿಯ ಸಮಯದಲ್ಲಿ ಮರೆಮಾಡಲು ಆಗುವದಿಲ್ಲ" ಅಥವಾ "ಬೆಟ್ಟದ ಮೇಲಿರುವ ಪಟ್ಟಣದ ಬೆಳಕನ್ನು ಎಲ್ಲರೂ ನೋಡುತ್ತಾರೆ" (ಸ್ಪಷ್ಟ ಮತ್ತು ಅಸ್ಪಷ್ಟ ಮಾಹಿತಿ ಹಾಗೂ ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

Matthew 5:15

ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.

ಜನರು ದೀಪವನ್ನು ಹಚ್ಚುವದಿಲ್ಲ

"ಜನರು ದೀಪವನ್ನು ಹಚ್ಚಿಸುವದಿಲ್ಲ."

ದೀಪ

ಇದೊಂದು ಚಿಕ್ಕ ಬಟ್ಟಲಾಗಿದ್ದು ಇದರೊಳಗೆ ಭಕ್ತಿ ಮತ್ತು ಎಣ್ಣೆಯನ್ನು ಹಾಕಿರಲಾಗಿರುತ್ತದೆ. ಪ್ರಾಮುಖ್ಯವಾದ ಸಂಗತಿ ಎಂದರೆ ಇದರಿಂದ ಬೆಳಕು ಸಿಗುತ್ತದೆ.

ಕೊಳಗದೊಳಗೆ ಇಡುವದಿಲ್ಲ

"ದೀಪವನ್ನು ಹಚ್ಚಿ ಕೊಳಗದೊಳಗೆ ಇಡುವದಿಲ್ಲ." ದೀಪವನ್ನು ಹಚ್ಚಿ ಜನರನ್ನು ಬೆಳಕನ್ನು ನೋಡದಂತೆ ಮರೆಮಾಡುವುದು ಮೂರ್ಖತನವಾಗಿದೆ.

Matthew 5:17

ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.

ಒಂದು ಸೊನ್ನೆಯಾದರೂ ಒಂದು ಗುಡುಸಾದರೂ

"ಚಿಕ್ಕದಾಗಿರುವ ಬರೆದಿರುವ ಅಕ್ಷರ ಅಥವಾ ಅಕ್ಷರದ ಚಿಕ್ಕದಾಗಿರುವ ಭಾಗ" ಅಥವಾ "ಪ್ರಾಮುಖ್ಯವಲ್ಲ ಎಂದು ಅನ್ನಿಸುವ ನಿಯಮಗಳ್ಖು" (ರೂಪಕಾಲಂಕಾರ ನೋಡಿರಿ)

ಆಕಾಶವೂ ಭೂಮಿಯೂ

"ದೇವರು ಸೃಷಿ ಮಾಡಿರುವದೆಲ್ಲವೂ" (ಮೆರಿಸಮ್ ನೋಡಿರಿ)

ಧರ್ಮಶಾಸ್ತ್ರವೆಲ್ಲಾ ನೆರವೇರಿದ ಹೊರತು

"ಧರ್ಮಶಾಸ್ತ್ರದಲ್ಲಿ ಬರೆಯಲಾಗಿರುವ ಎಲ್ಲವನ್ನೂ ದೇವರು ನೆರವೇರಿಸಿದ್ದಾನೆ." (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

Matthew 5:19

ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಬೋಧಿಸುವುದನ್ನು ಮುಂದುವರೆಸುತ್ತಿದ್ದಾನೆ. ಈ ಘಟನೆಯು ೫:೧ರಲ್ಲಿ ಪ್ರಾರಂಭವಾಯಿತು.

ಈ ನಿಯಮಗಳಲ್ಲಿ ಒಂದನ್ನಾದರು ಯಾರಾದರೂ ಮುರಿದರೆ

ಈ ಆಜ್ಞೆಗಳಲ್ಲಿ ಯಾವುದಕ್ಕಾದರು ಯಾರಾದರು ಅವಿಧೇಯರಾದರೆ, ಅದರಲ್ಲೂ ಕಡಿಮೆ ಪ್ರಾಮುಖ್ಯವಾದವುಗಳು"

ಚಿಕ್ಕವರೆಂದು ಕರೆಯಲ್ಪಡುವರು

"ಅಂಥವರು ಕಡಿಮೆ ಪ್ರಾಮುಖ್ಯರು ಎಂಬದಾಗಿ ದೇವರು ಹೇಳುತ್ತಾನೆ"

ಕಡಿಮೆ

"ಅತ್ಯಂತ ಕಡಿಮೆ ಪ್ರಾಮುಖ್ಯವಾದದ್ದು"

ಅವರಿಗೆ ಕಲಿಸುತ್ತಾನೆ

ದೇವರ ಅಜ್ಞೆಗಳಲ್ಲಿ ಯಾವುದನ್ನಾದರೂ ಕಲಿಸುವವನು

ಹೆಚ್ಚಿನವನು

"ಅತ್ಯಂತ ಪ್ರಾಮುಖ್ಯವಾದವನು

ನೀವು ... ನಿಮ್ಮ .. ನೀವು

ಇವುಗಳು ಬಹುವಚನವಾಗಿವೆ.

Matthew 5:21

ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.

ಯೇಸು ಕ್ರಿಸ್ತನು ಜನರ ಗುಂಪಿಗೆ ಮಾತನಾಡುತ್ತಾ ವ್ಯಕ್ತಿಗತವಾಗಿ ಅವರಿಗೆ ಏನು ಸಂಭವಿಸಬಹುದು ಎಂದು ಹೇಳುತ್ತಿದ್ದಾನೆ. "ನೀವು ಕೇಳಿದ್ದೀರಿ" ಮತ್ತು "ನಾನು ನಿಮಗೆ ಹೇಳಿದ್ದೇನೆ" ಎಂಬ ಬಹುವಚನ ಪದಗಳನ್ನು ಉಪಯೋಗಿಸಿ ಜನರ ಗುಂಪಿನೊಂದಿಗೆ ಮಾತನಾಡಲಾಗಿದೆ. "ನೀವು ಕೊಲೆಮಾಡಬಾರದು" ಏಕವಚನವಾಗಿದೆ, ಆದರೆ ಇದನ್ನು ನೀವು ಬಹುವಚನವಾಗಿ ಭಾಷಾಂತರ ಮಾಡಬೇಕು.

ಆದರೆ ನಾನು ಹೇಳುವದೇನೆಂದರೆ

"ನಾನು" ಪ್ರಾಮುಖ್ಯವಾದದ್ದು. ಯೇಸು ಕ್ರಿಸ್ತನು ಹೇಳುವ ಮಾತುಗಳು ದೇವರು ಕೊಟ್ಟಿರುವ ಆಜ್ಞೆಗಳಂತೆಯೇ ಪ್ರಾಮುಖ್ಯವಾಗಿದೆ ಎಂಬದನ್ನು ಇದು ಸೂಚಿಸುತ್ತದೆ. ಆ ಪ್ರಾಮುಖ್ಯತೆಯನ್ನು ತೋರಿಸುವ ರೀತಿಯಲ್ಲಿ ಇದನ್ನು ಭಾಷಾಂತರ ಮಾಡಲು ಪ್ರಯತ್ನಿಸಿರಿ.

ಕೊಲ್ಲುವುದು ... ಕೊಲ್ಲುತ್ತದೆ

ಈ ಪದಗಳು ಹೆತ್ಯೆ ಮಾಡುವುದನ್ನು ಸೂಚಿಸುತ್ತದೆಯೇ ಹೊರತು ಎಲ್ಲ ರೀತಿಯ ಕೊಲೆಯನ್ನಲ್ಲ.

ಸಹೋದರ

ಇದು ಜೊತೆಯಲ್ಲಿರುವ ವಿಶ್ವಾಸಿಯನ್ನು ಸೂಚಿಸುತ್ತದೆಯೇ ಹೊರತು ಅಕ್ಷರಾರ್ಥವಾದ ಸಹೋದರ ಅಥವಾ ನೆರೆಯವನನ್ನಲ್ಲ.

ಯೋಗ್ಯವಿಲ್ಲದ ವ್ಯಕ್ತಿ ... ಮೂರ್ಖ

ಸರಿಯಾದ ರೀತಿಯಲ್ಲಿ ಆಲೋಚನೆ ಮಾಡಲು ಆಗದಿರುವ ವ್ಯಕ್ತಿಗಳಿಗೆ ಮಾಡುವ ಅವಮಾನವಾಗಿದೆ ಇದು. "ಪ್ರಯೋಜನವಿಲ್ಲದ ವ್ಯಕ್ತಿ" ಎಂಬದು "ಬುದ್ಧಿಯಿಲ್ಲದವನು" ಎಂಬದಕ್ಕೆ ಹತ್ತಿರವಾಗಿದೆ, ಆದರೆ ಮೂರ್ಖನು ಎಂಬದು ದೇವರಿಗೆ ಅವಿಧೇಯನು ಎಂಬದನ್ನು ಸೇರಿಸುತ್ತದೆ.

ಹಿರೀಸಭೆ

ಇದು ಸ್ಥಳೀಯ ಸಭೆಯಾಗಿರಬಹುದು, ಯೆರೂಸಲೇಮಿನಲ್ಲಿರುವ ಮುಖ್ಯ ಸಭೆಯಲ್ಲ.

Matthew 5:23

ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.

ನೀನು

ಯೇಸು ಕ್ರಿಸ್ತನು ಜನರ ಗುಂಪಿನೊಂದಿಗೆ ಮಾತನಾಡುತ್ತಾ ವ್ಯಕ್ತಿಗತವಾಗಿ ಅವರಿಗೆ ಏನು ಸಂಭವಿಸುವುದು ಎಂದು ಹೇಳುತ್ತಿದ್ದಾನೆ. "ನೀನು" ಮತ್ತು "ನಿಮ್ಮ" ಎಂಬದಾಗಿ ಬರೆಯಲ್ಪಟ್ಟಿರುವದೆಲ್ಲವೂ ಏಕವಚನವಾಗಿದೆ, ಆದರೆ ನಿಮ್ಮ ಭಾಷೆಯಲ್ಲಿ ಒಂದುವೇಳೆ ಇವುಗಳನ್ನು ಬಹುವಚನವಾಗಿ ಭಾಷಾಂತರ ಮಾಡಬೇಕಾಗಬಹುದೇನೋ.

ನಿನ್ನ ಕಾಣಿಕೆಯನ್ನು ಅರ್ಪಿಸುವಾಗ

"ನೀನು ಕಾಣಿಕೆಯನ್ನು ಕೊಡುವಾಗ" ಅಥವಾ "ನಿನ್ನ ಕಾಣಿಕೆಯನ್ನು ತರುವಾಗ"

ಅಲ್ಲಿ ನಿನ್ನ ನೆನಪಿಗೆ ಬಂದರೆ

"ಯಜ್ಞವೇದಿಯ ಬಳಿಯಲ್ಲಿ ನಿಂತಿರುವಾಗ ನಿನ್ನ ನೆನಪಿಗೆ ಬಂದರೆ"

ನಿನ್ನ ಸಹೋದರನಿಗೆ ನಿನ್ನ ವಿರುದ್ಧವಾಗಿ ಏನಾದರೂ ಇದ್ದರೆ

"ಮತ್ತೊಬ್ಬನು ಏನಾದರೂ ಕೇಡು ಮಾಡಿದ್ದರೆ ಅಥವಾ ನಿನ್ನಿಂದ ಯಾರಿಗಾದರೂ ಕೇಡಾಗಿದ್ದರೆ"

ಮೊದಲು ನಿನ್ನ ಸಹೋದರನೊಂದಿಗೆ ಒಂದಾಗು

"ನಿನ್ನ ಸಹೋದರನೊಂದಿಗೆ ಸಮಾಧಾನ ಮಾಡಿಕೋ ನಂತರವೇ ಕಾಣಿಕೆಯನ್ನು ಅರ್ಪಿಸು" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

Matthew 5:25

ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.

ನೀನು

ಯೇಸು ಕ್ರಿಸ್ತನು ಜನರ ಗುಂಪಿನೊಂದಿಗೆ ಮಾತನಾಡುತ್ತಾ ವ್ಯಕ್ತಿಗತವಾಗಿ ಅವರಿಗೆ ಏನು ಸಂಭವಿಸುವುದು ಎಂದು ಹೇಳುತ್ತಿದ್ದಾನೆ. "ನೀನು" ಮತ್ತು "ನಿಮ್ಮ" ಎಂಬದಾಗಿ ಬರೆಯಲ್ಪಟ್ಟಿರುವದೆಲ್ಲವೂ ಏಕವಚನವಾಗಿದೆ, ಆದರೆ ನಿಮ್ಮ ಭಾಷೆಯಲ್ಲಿ ಒಂದುವೇಳೆ ಇವುಗಳನ್ನು ಬಹುವಚನವಾಗಿ ಭಾಷಾಂತರ ಮಾಡಬೇಕಾಗಬಹುದೇನೋ.

ಆ ವಾದಿಯು ನಿನ್ನನ್ನು ನ್ಯಾಯಾಧಿಪತಿಗೆ ಒಪ್ಪಿಸಾನು

"ಇದರ ಪರಿಣಾಮವಾಗಿ ವಾದಿಯು ನಿಮ್ಮನ್ನು ನ್ಯಾಯಾಧಿಪತಿಗೆ ಒಪ್ಪಿಸಬಹುದು" ಅಥವಾ "ಯಾಕೆಂದರೆ ನಿಮ್ಮ ವಾದಿಯು ನಿಮ್ಮನ್ನು ನ್ಯಾಯಾಧಿಪತಿಗೆ ಒಪ್ಪಿಸಬಹುದು"

ನಿಮ್ಮನ್ನು ನ್ಯಾಯಾಧಿಪತಿಗೆ ಒಪ್ಪಿಸಬಹುದು

"ನಿಮ್ಮನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಬಹುದು"

ಅಧಿಕಾರಿ

ನ್ಯಾಯಾಧಿಪತಿಯ ತೀರ್ಮಾನವನ್ನು ಮಾಡುವ ಅಧಿಕಾರ ಇರುವವನು

ಅಲ್ಲಿ

ಸೆರೆಮನೆ

Matthew 5:27

ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.

ನೀನು

ಯೇಸು ಕ್ರಿಸ್ತನು ಜನರ ಗುಂಪಿನೊಂದಿಗೆ ಮಾತನಾಡುತ್ತಾ ವ್ಯಕ್ತಿಗತವಾಗಿ ಅವರಿಗೆ ಏನು ಸಂಭವಿಸುವುದು ಎಂದು ಹೇಳುತ್ತಿದ್ದಾನೆ. "ನೀನು" ಮತ್ತು "ನಿಮ್ಮ" ಎಂಬದಾಗಿ ಬರೆಯಲ್ಪಟ್ಟಿರುವದೆಲ್ಲವೂ ಏಕವಚನವಾಗಿದೆ, ಆದರೆ ನಿಮ್ಮ ಭಾಷೆಯಲ್ಲಿ ಒಂದುವೇಳೆ ಇವುಗಳನ್ನು ಬಹುವಚನವಾಗಿ ಭಾಷಾಂತರ ಮಾಡಬೇಕಾಗಬಹುದೇನೋ.

ಮಾಡಿರಿ

ಇದರ ಅರ್ಥ ಏನಾದರೂ ಮಾಡುವದು ಅಥವಾ ಅದರಂತೆ ನಡೆದುಕೊಳ್ಳುವುದು.

ಆದರೆ ನಾನು ನಿಮಗೆ ಹೇಳುವದೇನೆಂದರೆ

"ನಾನು" ಎಂಬದು ಮುಖ್ಯವಾಗಿದೆ. ಯೇಸು ಹೇಳುತ್ತಿರುವ ಮಾತುಗಳು ತಂದೆಯಾದ ದೇವರು ಆಜ್ಞಾಪಿಸಿರುವ ಕಾರ್ಯಗಳಷ್ಟೇ ಪ್ರಾಮುಖ್ಯವಾಗಿದೆ ಎಂಬದನ್ನು ಇದು ಸೂಚಿಸುತ್ತದೆ. ಈ ಪದವು ೫:೨೨ರಲ್ಲಿ ಇರುವಂತೆಯೇ ಪ್ರಾಮುಖ್ಯತೆಯನ್ನು ತೋರಿಸುವ ರೀತಿಯಲ್ಲಿ ಭಾಷಾಂತರ ಮಾಡಲು ಪ್ರಯತ್ನಿಸಿರಿ.

ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾದನು

ಈ ರೂಪಕಾಲಂಕಾರವು ಹೇಳುವದೇನೆಂದರೆ ಪರಸ್ತ್ರೀಯನ್ನು ನೋಡಿ ಮೋಹಿಸುವವನು ನಿಜವಾಗಿಯೂ ವ್ಯಭಿಚಾರವನ್ನು ಮಾಡಿದ ವ್ಯಕ್ತಿಗೆ ಸಮಾನನಾಗಿರುವನು. (ರೂಪಕಾಲಂಕಾರ, ಮೆಟಾನಿಮೈ ನೋಡಿರಿ)

Matthew 5:29

ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.

ನೀನು

ಯೇಸು ಕ್ರಿಸ್ತನು ಜನರ ಗುಂಪಿನೊಂದಿಗೆ ಮಾತನಾಡುತ್ತಾ ವ್ಯಕ್ತಿಗತವಾಗಿ ಅವರಿಗೆ ಏನು ಸಂಭವಿಸುವುದು ಎಂದು ಹೇಳುತ್ತಿದ್ದಾನೆ. "ನೀನು" ಮತ್ತು "ನಿಮ್ಮ" ಎಂಬದಾಗಿ ಬರೆಯಲ್ಪಟ್ಟಿರುವದೆಲ್ಲವೂ ಏಕವಚನವಾಗಿದೆ, ಆದರೆ ನಿಮ್ಮ ಭಾಷೆಯಲ್ಲಿ ಒಂದುವೇಳೆ ಇವುಗಳನ್ನು ಬಹುವಚನವಾಗಿ ಭಾಷಾಂತರ ಮಾಡಬೇಕಾಗಬಹುದೇನೋ.

ಬಲಗಣ್ಣು ... ಬಲಗೈ

ಪ್ರಾಮುಖ್ಯವಾಗಿರುವ ಕಣ್ಣು ಅಥವಾ ಕೈ, ಎಡ ಕಣ್ಣು ಅಥವಾ ಕೈಗೆ ವಿರುದ್ಧವಾದದ್ದಾಗಿದೆ. ನೀವು "ಬಲ" ಪದವನ್ನು "ಉತ್ತಮ" ಎಂದು ಭಾಷಾಂತರ ಮಾಡಬೇಕು. (ಮೆಟಾನಿಮೈ ನೋಡಿರಿ)

ಒಂದುವೇಳೆ ನಿಮ್ಮ ಬಲಗಣ್ಣು ನಿಮ್ಮನ್ನು ಪಾಪದಲ್ಲಿ ಸಿಕ್ಕಿಸುವುದಾದರೆ

"ನೀವು ನೋಡುವಂಥವುಗಳು ನಿಮ್ಮನ್ನು ಪಾಪದಲ್ಲಿ ಸಿಕ್ಕಿಸಿದರೆ" ಅಥವಾ "ನೀವು ನೋಡುವಂಥ ಕಾರ್ಯಗಳಿಂದ ಪಾಪಕ್ಕೆ ಒಳಗಾದರೆ." ಸಿಕ್ಕಿಸುವುದು ಎಂಬದನ್ನು ಪಾಪಕ್ಕೆ ರೂಪಕಾಲಂಕಾರವಾಗಿ ಕೊಡಲಾಗಿದೆ. ಯೇಸು ಕ್ರಿಸ್ತನು ಇಲ್ಲಿ ವ್ಯಂಗ್ಯವನ್ನು ಬಳಸುತ್ತಿದ್ದಾನೆ, ಯಾಕೆಂದರೆ ಜನರು ಸಾಮಾನ್ಯವಾಗಿ ಎಡವದಂತೆ ನಡೆಯಲು ಕಣ್ಣುಗಳು ಬಹಳ ಪ್ರಾಮುಖ್ಯ. (ರೂಪಕಾಲಂಕಾರ, ವ್ಯಂಗ್ಯ ನೋಡಿರಿ)

ಕಿತ್ತು ಬಿಸಾಡಿರಿ

"ಒತ್ತಾಯವಾಗಿ ಕಿತ್ತು ಬಿಸಾಡಿರಿ" ಅಥವಾ "ಅದನ್ನು ನಾಶಮಾಡಿರಿ" (ಯುಡಿಬಿ ನೋಡಿರಿ). ಒಂದುವೇಳೆ ಬಲಗಣ್ಣನ್ನು ನಿರ್ದಿಷ್ಟವಾಗಿ ಸೂಚಿಸಿಲ್ಲವಾದರೆ, ನಿಮ್ಮ ಕಣ್ಣುಗಳನ್ನು ಕಿತ್ತು ಬಿಸಾಡಿರಿ ಎಂಬದಾಗಿ ನೀವು ಭಾಷಾಂತರ ಮಾಡಬೇಕು. ಒಂದುವೇಳೆ ಕಣ್ಣುಗಳನ್ನು ಸೂಚಿಸಿದ್ದರೆ, ಅವುಗಳನ್ನು ಕಿತ್ತು ಬಿಸಾಡಿರಿ ಎಂದು ನೀವು ಭಾಷಾಂತರ ಮಾಡಬೇಕು (ಯುಡಿಬಿ ನೋಡಿರಿ). (ಹೈಪರ್ ಬೋಲ್ ನೋಡಿರಿ)

ನಿಮ್ಮಿಂದ ದೂರ ಬಿಸಾಡಿರಿ

"ಅದರಿಂದ ಮುಕ್ತಿ ಪಡೆಯಿರಿ"

ನಿಮ್ಮ ದೇಹದಲ್ಲಿ ಒಂದು ಭಾಗವು ಹಾಳಾಗುವುದು

"ನಿಮ್ಮ ದೇಹದ ಒಂದು ಭಾಗವನ್ನು ನೀವು ಕಳೆದುಕೊಳ್ಳಬೇಕು"

ಒಂದುವೇಳೆ ನಿಮ್ಮ ಬಲಗೈ ನಿಮ್ಮನ್ನು

ಕೈಗಳನ್ನು ಒಬ್ಬ ವ್ಯಕ್ತಿಯ ಜೀವಿತದಲ್ಲಿರುವ ಕಾರ್ಯಗಳೊಂದಿಗೆ ಹೋಲಿಸುವ ಸಲುವಾಗಿ ಈ ಮೆಟಾನಿಮೈ ಉಪಯೋಗಿಸಲಾಗಿದೆ (ಮೆಟಾನಿಮೈ ನೋಡಿರಿ).

Matthew 5:31

ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.

ಈಗಾಗಲೇ ಹೇಳಲಾಗಿದೆ

"ದೇವರು ಅದನ್ನು ಹೇಳಿದ್ದಾನೆ" (ಯುಡಿಬಿ ನೋಡಿರಿ). ದೇವರನ್ನು ಅಥವಾ ದೇವರವಾಕ್ಯಗಳನ್ನು ಆತನು ನಿರಾಕರಿಸುತ್ತಿಲ್ಲ ಎಂಬದನ್ನು ಸರಳವಾಗಿ ಹೇಳಲು ಇಲ್ಲಿ ಸಕ್ರಿಯವನ್ನು ಯೇಸು ಕ್ರಿಸ್ತನು ಬಳಸಿದ್ದಾನೆ. ಬದಲಾಗಿ ಆತನು ಹೇಳುತ್ತಿರುವದೇನೆಂದರೆ ಸರಿಯಾದ ಕಾರಣವಿದ್ದರೆ ಮಾತ್ರವೇ ವಿಚ್ಛೇದನವನ್ನು ಕೊಡಬೇಕು. ಒಬ್ಬ ಪುರುಷನು ಮೊದಲೇ ಬರೆಯಲಾಗಿರುವ ಆದೇಶಕ್ಕೆ ವಿಧೇಯನಾದರೂ ಕೆಲವೊಮ್ಮೆ ವಿಚ್ಛೇದನವು ವಿರುದ್ಧವಾದದ್ದಾಗಿರುತ್ತದೆ. (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ).

ತನ್ನ ಹೆಂಡತಿಯನ್ನು ಕಳುಹಿಸಿಬಿಡುತ್ತಾನೆ

ಇದು ವಿಚ್ಛೇದನಕ್ಕೆ ಸಮಾನವಾದ ಕಾರ್ಯವಾಗಿದೆ. (ಯುಫೆಮಿಸಮ್ ನೋಡಿರಿ)

ಅವನು ಕೊಡಲಿ

ಇದು ಆಜ್ಞೆಯಾಗಿದೆ: "ಅವನು ಕೊಡಬೇಕು."

ಆದರೆ ನಾನು ನಿಮಗೆ ಹೇಳುವದೇನೆಂದರೆ

"ಈಗಾಗಲೇ" ಹೇಳಿರುವದಕ್ಕಿಂತ ಭಿನ್ನವಾಗಿರುವದನ್ನು ತಾನು ಹೇಳುವದಾಗಿ ಯೇಸು ಕ್ರಿಸ್ತನು ಇಲ್ಲಿ ಸೂಚಿಸುತ್ತಿದ್ದಾನೆ. ಇಲ್ಲಿ "ನಾನು" ಎಂಬದು ಪ್ರಮುಖವಾಗಿದೆ ಯಾಕೆಂದರೆ ಆತನು "ಹೇಳಿರುವದಕ್ಕಿಂತಲೂ" ಹೆಚ್ಚು ಪ್ರಾಮುಖ್ಯತೆಯುಳ್ಳವನಾಗಿದ್ದಾನೆ.

ಅಕೆಯನ್ನು ವ್ಯಭಿಚಾರಿಯನ್ನಾಗಿ ಮಾಡುತ್ತಾನೆ

ಸ್ತ್ರೀಗೆ ಸರಿಯಲ್ಲದ ರೀತಿಯಲ್ಲಿ ವಿಚ್ಛೇದನವನ್ನು ಕೊಡುವವನು ಆಕೆಯು "ವ್ಯಭಿಚಾರ ಮಾಡಲು" ಕಾರಣನಾಗುತ್ತಾನೆ (೫:೨೭ರಲ್ಲಿ ನೀವು ಬಳಸಿರುವ ಪದವನ್ನೇ ಇಲ್ಲಿಯೂ ಬಳಸಿರಿ). ಅನೇಕ ಸಂಸ್ಕೄತಿಗಳಲ್ಲಿ ಆಕೆಯು ಪುನರ್ ವಿವಾಹವಾಗುವುದು ಸಾಮಾನ್ಯ ಸಂಗತಿಯಾಗಿರುತ್ತದೆ ಆದರೆ ಒಂದುವೇಳೆ ವಿಚ್ಛೇದನವು ಸರಿಯಲ್ಲದಿದ್ದರೆ, ಅಂಥ ಮದುವೆಯು ವ್ಯಭಿಚಾರವಾಗಿರುತ್ತದೆ (ಯುಡಿಬಿ ನೋಡಿರಿ)

Matthew 5:33

ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.

ಯೇಸು ಕ್ರಿಸ್ತನು ಗುಂಪಿನ ಜನರೊಂದಿಗೆ ಮಾತನಾಡುತ್ತಾ ವ್ಯಕ್ತಿಗತವಾಗಿ ಅವರು ಏನು ಸಂಭವಿಸಬಹುದು ಎಂಬದನ್ನು ಹೇಳುತ್ತಿದ್ದಾನೆ. "ನೀವು ಕೇಳಿಸಿಕೊಂಡಿರುವುದು" ಮತ್ತು "ನಾನು ನಿಮಗೆ ಹೇಳುತ್ತಿರುವುದು" ಇವುಗಳಲ್ಲಿರುವ ನೀವು ಬಹುವಚನವಾಗಿವೆ. "ನೀವು ಪ್ರಮಾಣ ಮಾಡಬಾರದು" ಎಂಬುದರಲ್ಲಿರುವ ನೀವು ಏಕವಚನವಾಗಿದೆ.

ಹೀಗೆ ಹೇಳಿರುವದನ್ನು ನೀವು ಕೇಳಿದ್ದೀರಿ

"ನಿಮ್ಮ ಧಾರ್ಮಿಕ ನಾಯಕರು ನಿಮಗೆ ಹೇಳಿರಬಹುದು, ದೇವರು ಅನಾದಿ ಕಾಲದಲ್ಲಿ ಅವರಿಗೆ ಹೇಳಿದ್ದಾನೆ, "ನೀವು ಪ್ರಮಾಣ ಮಾಡಬಾರದು.’" ಯೇಸು ಕ್ರಿಸ್ತನು ಇಲ್ಲ ದೇವರನ್ನಾಗಲಿ ಅಥವಾ ದೇವರ ವಾಕ್ಯವನ್ನಾಗಲಿ ತಾನು ನಿರಾಕರಿಸುತ್ತಿಲ್ಲ ಎಂಬದನ್ನು ಸ್ಪಷ್ಟಪಡಿಸಲು ಹೀಗೆ ಹೇಳುತ್ತಿದ್ದಾನೆ. ಮಾತ್ರವಲ್ಲದೇ ಜನರು ತಮ್ಮ ಮಾತುಗಳನ್ನು ನಂಬಲಿ ಎಂಬ ಸಲುವಾಗಿ ತಮಗೆ ಸಂಬಂಧಪಡದ ಮಾತುಗಳನ್ನು ಹೇಳಬಾರದು ಎಂಬದಾಗಿ ತನ್ನ ಕೇಳುಗರಿಗೆ ಹೇಳುತ್ತಿದ್ದಾನೆ.

ಹೀಗೆ ಹೇಳಲಾಗಿದೆ

೫:೩೧ರಲ್ಲಿ ಮಾಡಿದಂತೆಯೇ ಇಲ್ಲಿಯೂ ಭಾಷಾಂತರ ಮಾಡಿರಿ.

ಪ್ರಮಾಣ ... ಆಣೆ

ಇದರ ಅರ್ಥ ೧) ದೇವರು ಬಯಸುವುದನ್ನೇ ನೀವು ಮಾಡುವುದಾಗಿ ದೇವರಿಗೆ ಮತ್ತು ಜನರಿಗೆ ಹೇಳಿರಿ (ಯುಡಿಬಿ ನೋಡಿರಿ) ಅಥವಾ ೨) ನೀವು ನೋಡಿರುವದು ಸತ್ಯ ಮತ್ತು ಅದರ ಬಗ್ಗೆಯೇ ಮಾತನಾಡುತ್ತಿದ್ದೀರಿ ಎಂಬದು ದೇವರಿಗೆ ಗೊತ್ತಿದೆ.

ಆದರೆ ನಾನು ನಿಮಗೆ ಹೇಳುವದೇನೆಂದರೆ

೫:೩೨ರಲ್ಲಿ ನೀವು ಭಾಷಾಂತರ ಮಾಡಿದ ಹಾಗೆಯೇ ಇಲ್ಲಿಯೂ ಭಾಷಾಂತರ ಮಾಡಿರಿ.

ಆಕಾಶದ ಮೇಲಾಗಲಿ... ದೇವರ ಸಿಂಹಾಸನದ ಮೇಲಾಗಲಿ... ಆಣೆಯಿಡಬೇಡಿರಿ .... ಭೂಮಿಯು ಆತನಿಗೆ ಪಾದಪೀಠವಾಗಿದೆ... ಯೆರೂಸಲೇಮ್... ಆ ಅರಸನ ಮಹಾ ಪಟ್ಟಣವಾಗಿದೆ

ಈ ರೂಪಕಾಲಂಕಾರವು ಯೆಶಾಯನ ರೂಪಕಾಲಂಕಾರವಾಗಿದೆ.)

ಆಣೆಯಿಡಲೇಬೇಡಿರಿ

ಒಂದುವೇಳೆ ನಿಮ್ಮ ಭಾಷೆಯಲ್ಲಿ ಆಜ್ಞೆಗಳಿಗೆ ಬಹುವಚನ ಇರುವದಾದರೆ, ಇಲ್ಲಿ ಉಪಯೋಗಿಸಿರಿ. "ನೀವು ಸುಳ್ಳು ಆಣೆ ಇಡಬಾರದು" (ವಚನ ೩೩) ಕೇಳುಗನು ಆಣೆಯಿಡಬಹುದು ಆದರೆ ಸುಳ್ಳು ಪ್ರಮಾಣಗಳನ್ನು ಮಾಡಬಾರದು. "ಆಣೆಯಿಡಲೇಬೇಡಿರಿ" ಇಲ್ಲಿ ಎಲ್ಲಾ ರೀತಿಯ ಅಣೆಗಳನ್ನು ನಿಷೇಧಿಸಲಾಗಿದೆ.

ಆಣೆಯಿಡಬೇಡಿರಿ

ಇದನ್ನು ೩೩ನೇ ವಚನದಲ್ಲಿ ಭಾಷಾಂತರ ಮಾಡಿದಂತೆಯೇ ಭಾಷಾಂತರ ಮಾಡಿರಿ.

Matthew 5:36

ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.

ಯೇಸು ಕ್ರಿಸ್ತನು ಗುಂಪಿನ ಜನರೊಂದಿಗೆ ಮಾತನಾಡುತ್ತಾ ವ್ಯಕ್ತಿಗತವಾಗಿ ಅವರು ಏನು ಸಂಭವಿಸಬಹುದು ಎಂಬದನ್ನು ಹೇಳುತ್ತಿದ್ದಾನೆ. "ನೀವು ಪ್ರಮಾಣ ಮಾಡಿರಿ" ಮತ್ತು "ನಿಮ್ಮಿಂದ ಆಗುವದಿಲ್ಲ" ಎಂಬದಲ್ಲಿರುವ ನೀವು ಏಕವಚನವಾಗಿದೆ ಆದರೆ ನೀವು ಅದನ್ನು ಬಹುವಚನದಲ್ಲಿ ಭಾಷಾಂತರ ಮಾಡಬೇಕಾಗುವುದು. "ನಿಮ್ಮ ಮಾತುಗಳಲ್ಲಿ" ಇರುವ ನಿಮ್ಮ ಬಹುವಚನವಾಗಿದೆ.

೫:೩೪

೩೫ರಲ್ಲಿ ದೇವರ ಸಿಂಹಾಸನ, ಆತನ ಪಾದಪೀಠ ಮತ್ತು ಭೂಲೋಕದ ಮನೆ ಆಣೆಯಿಡಲು ಅವರದ್ದಲ್ಲ ಎಂಬದನ್ನು ಕೇಳುಗರಿಗೆ ಹೇಳಲಾಗಿದೆ. ಇಲ್ಲಿ ಆತನು ಅವರು ತಮ್ಮ ತಲೆಯ ಮೇಲೆಯೂ ಆಣೆಯಿಡಬಾರದು ಯಾಕೆಂದರೆ ಅದೂ ಅವರ ಸ್ವಂತವಲ್ಲ ಎಂದು ಹೇಳಿದ್ದಾನೆ.

ಆಣೆ

೫:೩೪ರಲ್ಲಿ ಭಾಷಾಂತರ ಮಾಡಿರುವಂತೆಯೇ ಇಲ್ಲಿಯೂ ಮಾಡಿರಿ.

ನಿಮ್ಮ ಮಾತುಗಳು ’ಹೌದಾದರೆ, ಹೌದು,’ ಅಥವಾ ’ಇಲ್ಲವಾದರೆ, ಇಲ್ಲ."

"ಒಂದುವೇಳೆ ನೀವು ಹೌದಾದರೆ, ಹೌದು ಎಂದು ಹೇಳಿರಿ ಮತ್ತು ಇಲ್ಲವೆಂದರೆ ಇಲ್ಲ ಎಂದು ಹೇಳಿರಿ."

Matthew 5:38

ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.

ಯೇಸು ಕ್ರಿಸ್ತನು ಗುಂಪಿನ ಜನರೊಂದಿಗೆ ಮಾತನಾಡುತ್ತಾ ವ್ಯಕ್ತಿಗತವಾಗಿ ಅವರು ಏನು ಸಂಭವಿಸಬಹುದು ಎಂಬದನ್ನು ಹೇಳುತ್ತಿದ್ದಾನೆ.

ಅಂತ ಹೇಳಿಯದೆ ಎಂದು ಕೇಳಿದ್ದೀರಷ್ಟೇ

೫:೩೩ರಲ್ಲಿ ಭಾಷಾಂತರ ಮಾಡಿರುವಂತೆಯೇ ಇದನ್ನು ಭಾಷಾಂತರ ಮಾಡಿರಿ.

ನೀವು ಕೇಳಿದ್ದೀರಷ್ಟೇ

"ನೀವು" ಎಂಬದು ಏಕವಚನವಾಗಿದೆ.

ಕಣ್ಣಿಗೆ ಪ್ರತಿಯಾಗಿ ಕಣ್ಣು, ಹಲ್ಲಿಗೆ ಪ್ರತಿಯಾಗಿ ಹಲ್ಲು

ಜನರು ತಮಗೆ ಬೇರೆಯವರು ಏನು ಮಾಡಿದ್ದರೋ ಅದನ್ನು ಅವರಿಗೆ ಮಾಡುವ ಅವಕಾಶವಿತ್ತು ಆದರೆ ಅವರು ಮಾಡಿರುವಷ್ಟು ಕೇಡನ್ನು ಮಾತ್ರವೇ ಇವರೂ ಮಾಡಬೇಕು.

ಆದರೆ ನಾನು ನಿಮಗೆ ಹೇಳುವದೇನೆಂದರೆ

೫:೩೨ರಲ್ಲಿ ಮಾಡಿರುವಂತೆಯೇ ಇಲ್ಲಿಯೂ ಭಾಷಾಂತರ ಮಾಡಿರಿ.

ದುಷ್ಟನಾಗಿರುವವನು

"ದುಷ್ಟನು" ಅಥವಾ "ನಿಮಗೆ ಕೇಡು ಬಗೆಯುವವನು" (ಯುಡಿಬಿ)

ನಿಮ್ಮ ಬಲ ಕೆನ್ನೆಗೆ ಯಾರಾದರೂ ಹೊಡೆದರೆ

ಇವೆಲ್ಲವೂ ಬಹುವಚನವಾಗಿದೆ.

ಹೊಡೆದರೆ... ನಿಮ್ಮ ಬಲ ಕೆನ್ನೆಗೆ

ಯೇಸು ಕ್ರಿಸ್ತನ ಸಂಸ್ಕೃತಿಯಲ್ಲಿ ಬಲಗೆನ್ನೆಗೆ ಹೊಡೆಯುವುದು ಅವಮಾನವಾಗಿತ್ತು. ಕಣ್ಣು ಮತ್ತು ಕೈಗೂ ಇದು ಅನ್ವಯಿಸುತ್ತದೆ (ರೂಪಕಾಲಂಕಾರ)

ಹೊಡೆದರೆ

ಹೊಡೆತವನ್ನು ಕೈಯನ್ನು ಅಗಲಿಸಿ ಹೊಡೆಯಲಾಗಿದೆ ಎಂಬದನ್ನು ಈ ಕ್ರಿಯಾ ಪದವು ಸೂಚಿಸುತ್ತದೆ.

ಅವನಿಗೆ ಮತ್ತೊಂದು ಕೆನ್ನೆಯನ್ನೂ ತೋರಿಸು

"ಅವನು ನಿಮ್ಮ ಇನ್ನೊಂದು ಕೆನ್ನೆಗೂ ಹೊಡೆಯಲಿ."

Matthew 5:40

ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.

ಯೇಸು ಕ್ರಿಸ್ತನು ಗುಂಪಿನ ಜನರೊಂದಿಗೆ ಮಾತನಾಡುತ್ತಾ ವ್ಯಕ್ತಿಗತವಾಗಿ ಅವರು ಏನು ಸಂಭವಿಸಬಹುದು ಎಂಬದನ್ನು ಹೇಳುತ್ತಿದ್ದಾನೆ. "ನೀವು" ಮತ್ತು "ನಿಮ್ಮ" ಪದಗಳೆಲ್ಲವೂ ಏಕವಚನವಾಗಿದೆ, ಹೀಗಿರುವಾಗ "ಹೋಗಿರಿ," "ಕೊಡಿರಿ," ಮತ್ತು "ಹಿಂದಿರುಗಬೇಡಿರಿ" ಎಂಬದು ಆಜ್ಞೆಗಳಾಗಿವೆ ಅದರೆ ಇವುಗಳನ್ನು ನೀವು ಬಹುವಚನಗಳಾಗಿ ಭಾಷಾಂತರ ಮಾಡಬೇಕಾಗುತ್ತದೆ.

ಅಂಗಿ ... ಕಂಬಳಿ

ಅಂಗಿಯನ್ನು ಶರ್ಟ್ ಅಥವಾ ಸ್ವೆಟರ್ ಹಾಗೆ ಧರಿಸಿಕೊಳ್ಳಲಾಗುತ್ತದೆ. "ಕಂಬಳಿಯು" ಇವೆರಡಕ್ಕಿಂತಲೂ ಉತ್ತಮವಾದದ್ದು ಮತ್ತು ಅಂಗಿಯ ಮೇಲೆ ಬೆಚ್ಚಗಿರಲು ಇದನ್ನು ಹಾಕಿಕೊಳ್ಳಲಾಗುತ್ತದೆ ಮತ್ತು ರಾತ್ರಿಯ ಸಮಯದಲ್ಲಿ ಹೊದ್ದಿಕೊಳ್ಳಲಾಗುತ್ತದೆ.

ತನ್ನಲ್ಲಿರುವ ವ್ಯಕ್ತಿಯು

"ಅವನಿಗೆ ಕೊಡಲಿ"

ಯಾವನಾದರೂ

ಯಾರೇ ಆದರೂ

ಒಂದು ಮೈಲಿ

ಒಂದು ಸಾವಿರ ಹೆಜ್ಜೆ ದಾಪು, ರೋಮನ್ ಸೈನಿಕರು ಒತ್ತಾಯಪೂರ್ವಕವಾಗಿ ತಮಗಾಗಿ ಯಾರಿಂದ ಬೇಕಾದರೂ ಹೊರಿಸಿಕೊಂಡು ಹೋಗುವ ಅಧಿಕಾರವುಳ್ಳವರಾಗಿದ್ದರು

ಆತನೊಂದಿಗೆ

ನಿಮಗೆ ಹೋಗುವಂತೆ ಒತ್ತಾಯಪಡಿಸುವವನನ್ನು ಇದು ಸೂಚಿಸುತ್ತದೆ.

ಅವನೊಂದಿಗೆ ಎರಡು ಮೈಲು ಹೋಗಿರಿ

"ಅವನು ಒತ್ತಾಯಪಡಿಸುವ ಒಂದು ಮೈಲಿ, ಅದರೊಂದಿಗೆ ಮತ್ತೊಂದು ಮೈಲಿ ಹೋಗಿರಿ"

Matthew 5:43

ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.

ಯೇಸು ಕ್ರಿಸ್ತನು ಗುಂಪಿನ ಜನರೊಂದಿಗೆ ಮಾತನಾಡುತ್ತಾ ವ್ಯಕ್ತಿಗತವಾಗಿ ಅವರು ಏನು ಸಂಭವಿಸಬಹುದು ಎಂಬದನ್ನು ಹೇಳುತ್ತಿದ್ದಾನೆ.

"ನೀವು ನಿಮ್ಮ ... ಮತ್ತು ನಿಮ್ಮ ವೈರಿಗಳನ್ನು ದ್ವೇಷಿಸುತ್ತೀರಿ" ಎಂಬದು ಮಾತ್ರ ಏಕವಚನವಾಗಿವೆ, ಆದರೆ ಇವುಗಳನ್ನು ನೀವು ಬಹುವಚನವಾಗಿ ಭಾಷಾಂತರ ಮಾಡಬೇಕು. ಬೇರೆ ಎಲ್ಲಾ ಪರಿಸ್ಥಿತಿಗಳಲ್ಲಿ "ನೀವು," ಹಾಗೆಯೇ "ಪ್ರೀತಿಸಿರಿ" ಮತ್ತು "ಪ್ರಾರ್ಥಿಸಿರಿ" ಎಂಬ ಆಜ್ಞೆಗಳು ಬಹುವಚನವಾಗಿವೆ.

ಹೇಳಿಯದೆ ಎಂಬದಾಗಿ ಕೇಳಿದ್ದೀರಷ್ಟೇ

೫:೩೩ರಲ್ಲಿ ಭಾಷಾಂತರ ಮಾಡಿರುವಂತೆಯೇ ಇದನ್ನು ಭಾಷಾಂತರ ಮಾಡಿರಿ.

ಇಲ್ಲಿ "ನೆರೆಯವರು" ಎಂಬ ಪದವು ಒಂದೇ ಸಮುದಾಯ ಅಥವಾ ಜನರ ಗುಂಪನ್ನು ಅಂದರೆ ಸಾಮಾನ್ಯವಾಗಿ ಬಯಸುವ ಜನರನ್ನು ಅಥವಾ ಪ್ರೀತಿಯಿಂದ ನೋಡಿಕೊಳ್ಳುವವರನ್ನು ಸೂಚಿಸುತ್ತದೆ. ಹತ್ತಿರದಲ್ಲಿ ಜೀವಿಸುವ ಜನರನ್ನು ಇದು ಸೂಚಿಸುವದಿಲ್ಲ. ಇದನ್ನು ನೀವು ಬಹುವಚನವಾಗಿ ಭಾಷಾಂತರ ಮಾಡಬೇಕಾಗುತ್ತದೆ.

ಆದರೆ ನಾನು ನಿಮಗೆ ಹೇಳುವದೇನೆಂದರೆ

೫:೩೨ರಲ್ಲಿ ಭಾಷಾಂತರ ಮಾಡಿರುವಂತೆಯೇ ಇಲ್ಲಿಯೂ ಮಾಡಿರಿ.

ನೀವು ನಿಮ್ಮ ತಂದೆಗೆ ಮಕ್ಕಳಾಗಿರುವಿರಿ

"ನಿಮ್ಮ ತಂದೆಯ ಸ್ವಭಾವವು ನಿಮ್ಮಲ್ಲಿರಬೇಕು" (ರೂಪಕಾಲಂಕಾರ ನೋಡಿರಿ)

Matthew 5:46

ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.

ಯೇಸು ಕ್ರಿಸ್ತನು ಗುಂಪಿನ ಜನರೊಂದಿಗೆ ಮಾತನಾಡುತ್ತಾ ವ್ಯಕ್ತಿಗತವಾಗಿ ಅವರು ಏನು ಸಂಭವಿಸಬಹುದು ಎಂಬದನ್ನು ಹೇಳುತ್ತಿದ್ದಾನೆ. "ನೀವು" ಮತ್ತು "ನಿಮ್ಮ" ಎಂಬ ಉಳಿದ ಎಲ್ಲಾ ಸಂದರ್ಭಗಳು ಬಹುವಚನಗಳಾಗಿವೆ.

ವಂದಿಸಿರಿ

ಕೇಳುಗನ ಹಿತಕ್ಕಾಗಿ ಒಳ್ಳೆಯ ಬಯಕೆಗಳನ್ನು ವ್ಯಕ್ತಪಡಿಸುವದು ಹುದುವಾದ ಪದವಾಗಿದೆ.

ಈ ವಚನಗಳಲ್ಲಿ ಇರುವ ನಾಲ್ಕೂ ಪ್ರಶ್ನೆಗಳು ಆಲಂಕಾರಿಕ ಪ್ರಶ್ನೆಗಳಾಗಿವೆ. ಇವುಗಳನ್ನು ಹೇಳಿಕೆಗಳಾಗಿ ಮಾಡುವುದು ಹೇಗೆ ಎಂಬದನ್ನು ಯುಡಿಬಿ ತೋರಿಸುತ್ತದೆ. (ಆಲಂಕಾರಿಕ ಪ್ರಶ್ನೆ ನೋಡಿರಿ)