Matthew 4

Matthew 4:1

ಈ ವಚನಭಾಗಗಳು ಸೈತಾನನು ಯೇಸುವನ್ನು ಶೋಧಿಸಿದ್ದರ ಬಗ್ಗೆ ತಿಳಿಸುತ್ತದೆ.

ಸೈತಾನನು ... ಶೋಧಕನು

ಇವು ಒಂದೇ ಜೀವಿಯನ್ನು ಸೂಚಿಸುತ್ತದೆ. ಎರಡನ್ನೂ ಭಾಷಾಂತರ ಮಾಡಲು ಒಂದೇ ರೀತಿಯ ಪದಗಳಿರಬಹುದು.

ಆತನು ಉಪವಾಸ ಮಾಡಿದನು ... ಆತನಿಗೆ ಹಸಿವೆಯಾಯಿತು

ಇದು ಯೇಸುವನ್ನು ಸೂಚಿಸುತ್ತದೆ.

ಒಂದುವೇಳೆ ನೀನು ದೇವರ ಮಗನಾಗಿದ್ದರೆ ಆಜ್ಞಾಪಿಸು

ಇದನ್ನು ೧) ತನ್ನ ಸ್ವಂತ ಲಾಭಕ್ಕಾಗಿ ಅದ್ಭುತಗಳನ್ನು ಮಾಡುವ ಆಜ್ಞೆ, "ನೀನು ದೇವಕುಮಾರನಾಗಿದ್ದರೆ, ಹೀಗೆಂದು ಆಜ್ಞಾಪಿಸು" ಅಥವಾ ೨) ಷರತ್ತು ಅಥವಾ ದೂಷಣೆ, "ಆಜ್ಞಾಪಿಸುವ ಮೂಲಕವಾಗಿ ನೀನೇ ದೇವಕುಮಾರನೆಂದು ನಿರೂಪಿಸು" (ಯುಡಿಬಿ ನೋಡಿರಿ). ಸೈತಾನನಿಗೆ ಯೇಸುವೇ ದೇವಕುಮಾರನೆಂದು ಗೊತ್ತಿತ್ತು ಎಂಬದನ್ನು ಇದರಿಂದ ನಾವು ಅರಿತುಕೊಳ್ಳಬಹುದು.

ಈ ಕಲ್ಲುಗಳು ರೊಟ್ಟಿಯಾಗುವಂತೆ ಆಜ್ಞಾಪಿಸು

"ಈ ಕಲ್ಲುಗಳಿಗೆ, ’ರೊಟ್ಟಿಯಾಗುವಂತೆ ಆಜ್ಞಾಪಿಸು!’"

Matthew 4:5

ಈ ವಚನಭಾಗಗಳು ಸೈತಾನನು ಯೇಸುವನ್ನು ಶೋಧಿಸಿದ್ದರ ಬಗ್ಗೆ ತಿಳಿಸುತ್ತದೆ.

ನೀನು ದೇವಕುಮಾರನಾಗಿದ್ದರೆ ಕೆಳಕ್ಕೆ ಧುಮುಕು

ಇದನ್ನು ೧) ತನ್ನ ಸ್ವಂತ ಲಾಭಕ್ಕಾಗಿ ಅದ್ಭುತವನ್ನು ಮಾಡುವ ಶೋಧನೆ, "ಒಂದುವೇಳೆ ನೀನು ನಿಜವಾಗಿಯೂ ದೇವಕುಮಾರನಾಗಿದ್ದರೆ, ಮೇಲಿಂದ ಕೆಳಕ್ಕೆ ಧುಮುಕು" ಅಥವಾ ೨) ಸವಾಲು ಅಥವಾ ಷರತ್ತು, "ಮೇಲಿಂದ ಕೆಳಗೆ ಧುಮುಕುವ ಮೂಲಕ ನಿನ್ನನ್ನು ದೇವಕುಮಾರನೆಂದು ನಿರೂಪಿಸಿಕೋ" (ಯುಡಿಬಿ ನೋಡಿರಿ). ಯೇಸು ದೇವಕುಮಾರನೆಂದು ಸೈತಾನನಿಗೆ ಗೊತ್ತಿತ್ತು ಎಂಬದನ್ನು ನಾವು ಸುಲಭವಾಗಿ ಅರ್ಥಮಾಡಿಕೊಳ್ಳಬಹುದಾಗಿದೆ.

ಕೆಳಗೆ

ನೆಲಕ್ಕೆ

ಆತನು ಆಜ್ಞಾಪಿಸುತ್ತಾನೆ...

"ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವಂತೆ ದೇವರು ತನ್ನ ದೂತರಿಗೆ ಆಜ್ಞಾಪಿಸುವನು" ಅಥವಾ "ದೇವರು ತನ್ನ ದೂತರಿಗೆ, ಅವನನ್ನು ನೋಡಿಕೊಳ್ಳಿರಿ ಎಂದು ಆಜ್ಞಾಪಿಸುವನು."

Matthew 4:7

ಈ ವಚನಭಾಗಗಳು ಸೈತಾನನು ಯೇಸುವನ್ನು ಶೋಧಿಸಿದ್ದರ ಬಗ್ಗೆ ತಿಳಿಸುತ್ತದೆ.

ಮತ್ತೊಮ್ಮೆ ಬರೆದದೆ

ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ಮತ್ತೊಮ್ಮೆ ಸತ್ಯವೇದದಲ್ಲಿ ಬರೆದಿರುವದನ್ನು ನಾನು ನಿನಗೆ ಹೇಳುತ್ತೇನೆ."

ಆತನು ಅವನಿಗೆ ಹೇಳಿದನು

"ಸೈತಾನನು ಯೇಸು ಕ್ರಿಸ್ತನಿಗೆ ಹೇಳಿದನು"

ಇವೆಲ್ಲವುಗಳನ್ನು ನಾನು ನಿನಗೆ ಕೊಡುತ್ತೇನೆ

"ನಾನು ಇವೆಲ್ಲವುಗಳನ್ನು ನಿನಗೆ ಕೊಡುತ್ತೇನೆ." ಶೋಧಕನು ನಾನು ನಿನಗೆ "ಇವೆಲ್ಲವುಗಳನ್ನು ಕೊಡುತ್ತೇನೆ" ಎಂದು ಹೇಳುತ್ತಿದ್ದಾನೆಯೇ ಹೊರತು ಕೆಲವನ್ನು ಮಾತ್ರವಲ್ಲ.

Matthew 4:10

ಈ ವಚನಭಾಗಗಳು ಸೈತಾನನು ಯೇಸುವನ್ನು ಶೋಧಿಸಿದ್ದರ ಬಗ್ಗೆ ತಿಳಿಸುತ್ತದೆ.

ಯೇಸುಕ್ರಿಸ್ತನು ಸೈತಾನನನ್ನು ದೇವರ ವಾಕ್ಯಗಳ ಮೂಲಕ ಮೂರನೆಯ ಸಲ ಗದರಿಸಿದನು.

ಸೈತಾನನು

ಮತ್ತಾಯನು ಮತ್ತೊಂದು ಪದವನ್ನು ಬಳಸಿದ್ದಾನೆ ಅದು ಪಿಶಾಚನನ್ನು ಸೂಚಿಸುತ್ತದೆ.

ನೋಡಿರಿ

"ನೋಡಿರಿ" ಎಂಬ ಪದವು ಮುಂಬರುವ ಪ್ರಾಮುಖ್ಯವಾದ ಹೊಸ ಮಾಹಿತಿಗೆ ಗಮನ ಕೊಡುವಂತೆ ನಮ್ಮನ್ನು ಎಚ್ಚರಿಸುತ್ತದೆ.

Matthew 4:12

ಯೇಸು ಕ್ರಿಸ್ತನು ಗಲಿಲಾಯದಲ್ಲಿ ಸೇವೆ ಪ್ರಾರಂಭಿಸಿದ್ದನ್ನು ಈ ವಚನಭಾಗಗಳು ಹೇಳುತ್ತವೆ.

ಯೋಹಾನನನ್ನು ಬಂಧಿಸಲಾಗಿತ್ತು

"ಅರಸನು ಯೋಹಾನನನ್ನು ಸೆರೆಮನೆಗೆ ಹಾಕಿಸಿದ್ದನು." (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

Matthew 4:14

ಯೇಸು ಕ್ರಿಸ್ತನು ಗಲಿಲಾಯದಲ್ಲಿ ಸೇವೆ ಪ್ರಾರಂಭಿಸಿದ್ದನ್ನು ಈ ವಚನಭಾಗಗಳು ಹೇಳುತ್ತವೆ.

Matthew 4:17

ಯೇಸು ಕ್ರಿಸ್ತನು ಗಲಿಲಾಯದಲ್ಲಿ ಸೇವೆ ಪ್ರಾರಂಭಿಸಿದ್ದನ್ನು ಈ ವಚನಭಾಗಗಳು ಹೇಳುತ್ತವೆ.

ಪರಲೋಕ ರಾಜ್ಯವು ಸಮೀಪವಾಯಿತು

೩:೨ರಲ್ಲಿ ನೀವು ಭಾಷಾಂತರ ಮಾಡಿರುವ ರೀತಿಯಲ್ಲಿಯೇ ಇದನ್ನು ಭಾಷಾಂತರ ಮಾಡಬೇಕು.

Matthew 4:18

ಯೇಸು ಕ್ರಿಸ್ತನು ಗಲಿಲಾಯದಲ್ಲಿ ಸೇವೆ ಪ್ರಾರಂಭಿಸಿದ್ದನ್ನು ಈ ವಚನಭಾಗಗಳು ಹೇಳುತ್ತವೆ.

ಬಲೆಗಳನ್ನು ಬೀಸುತ್ತಿದ್ದರು

"ಬಲೆಗಳನ್ನು ಹಾಕುತ್ತಿದ್ದರು"

ನನ್ನ ಹಿಂದೆ ಬನ್ನಿರಿ

ಯೇಸು ಕ್ರಿಸ್ತನು ಸೀಮೋನ ಮತ್ತು ಅಂದ್ರೇಯನನ್ನು ನನ್ನ ಹಿಂದೆ ಬನ್ನಿರಿ, ನನ್ನೊಂದಿಗೆ ಜೀವಿಸಿರಿ ಮತ್ತು ನನ್ನ ಶಿಷ್ಯರಾಗಿರಿ ಎಂದು ಆಹ್ವಾನಿಸುತ್ತಿದ್ದಾನೆ. ಪರ್ಯಾಯ ಭಾಷಾಂತರ: "ನನ್ನ ಶಿಷ್ಯರಾಗಿರಿ."

ನಾನು ನಿಮ್ಮನ್ನು ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ಮಾಡುತ್ತೇನೆ

ಪರ್ಯಾಯ ಭಾಷಾಂತರ: "ನೀವು ಮೀನನ್ನು ಹಿಡಿಯುವಂತೆಯೇ ಮನುಷ್ಯರನ್ನು ದೇವರ ಕಡೆಗೆ ಕರೆದು ತರುವದನ್ನು ನಾನು ನಿಮಗೆ ಕಲಿಸುತ್ತೇನೆ." (ರೂಪಕಾಲಂಕಾರ ನೋಡಿರಿ)

Matthew 4:21

ಯೇಸು ಕ್ರಿಸ್ತನು ಗಲಿಲಾಯದಲ್ಲಿ ಸೇವೆ ಪ್ರಾರಂಭಿಸಿದ್ದನ್ನು ಈ ವಚನಭಾಗಗಳು ಹೇಳುತ್ತವೆ.

ಅವರು ತಮ್ಮ ಬಲೆಗಳನ್ನು ಸರಿಪಡಿಸುತ್ತಿದ್ದರು

"ಅವರು" ಎಂದರೆ ಇಬ್ಬರು ಸಹೋದರರು ಮತ್ತು ಜೆಬೆದಾಯನು ಅಥವಾ ಇಬ್ಬರು ಸಹೋದರರು ಮಾತ್ರವೇ.

ಆತನು ಅವರನ್ನು ಕರೆದನು

"ಯೇಸು ಯೋಹಾನ ಮತ್ತು ಯಾಕೋಬನನ್ನು ಕರೆದನು." ಯೇಸು ಅವರನ್ನು ಸಹ ಆತನನ್ನು ಹಿಂಬಾಲಿಸಲು, ಆತನೊಂದಿಗೆ ಜೀವಿಸಲು ಮತ್ತು ಆತನ ಶಿಷ್ಯರಾಗಲು ಕರೆದನು ಎಂಬ ಅರ್ಥವನ್ನು ಇವುಗಳು ಕೊಡುತ್ತವೆ.

ಕೂಡಲೇ

"ಆ ಕ್ಷಣದಲ್ಲಿಯೇ"

ದೋಣಿಯನ್ನು ಬಿಟ್ಟು ... ಆತನನ್ನು ಹಿಂಬಾಲಿಸಿದರು

ಇದು ಜೀವನವನ್ನು ಬದಲಾಯಿಸುವದಾಗಿದೆ ಎಂಬದು ನಮಗೆ ಸ್ಪಷ್ಟವಾಗಿ ಗೊತ್ತಿರಬೇಕು. ಇವರು ಇನ್ನು ಮೀನು ಹಿಡಿಯುವುದಿಲ್ಲ ಮತ್ತು ತಮ್ಮ ಜೀವನ ಪರ್ಯಂತರ ಯೇಸುವನ್ನು ಹಿಂಬಾಲಿಸುವ ಸಲುವಾಗಿ ತಮ್ಮ ಕಸುಬನ್ನೇ ಬಿಡುತ್ತಿದ್ದಾರೆ.

Matthew 4:23

ಯೇಸು ಕ್ರಿಸ್ತನು ಗಲಿಲಾಯದಲ್ಲಿ ಸೇವೆ ಪ್ರಾರಂಭಿಸಿದ್ದನ್ನು ಈ ವಚನಭಾಗಗಳು ಹೇಳುತ್ತವೆ.

ಎಲ್ಲಾ ರೀತಿಯ ರೋಗಗಳು ಮತ್ತು ಬೇನೆಗಳು

"ಪ್ರತಿಯೊಂದು ರೋಗ ಮತ್ತು ಪ್ರತಿಯೊಂದು ಬೇನೆ." "ರೋಗಗಳು" ಮತ್ತು "ಬೇನೆಗಳು" ಇವೆರೆಡು ಹತ್ತಿರದ ಸಂಬಂಧವುಳ್ಳವುಗಳಾಗಿವೆ ಆದರೆ ಸಾಧ್ಯವಾದಷ್ಟು ಬೇರೆಬೇರೆ ಪದಗಳಾಗಿ ಇವುಗಳನ್ನು ಭಾಷಾಂತರ ಮಾಡಬೇಕು. "ರೋಗವು" ಒಬ್ಬ ವ್ಯಕ್ತಿಯನ್ನು ಅಸ್ವಸ್ಥನನ್ನಾಗಿ ಮಾಡುತ್ತದೆ. "ಬೇನೆಯು" ಶಾರೀರಿಕ ಬಲಹೀನತೆಯಾಗಿದೆ ಅಥವಾ ರೋಗದಿಂದ ಉಂಟಾಗುವ ಕಾರ್ಯವಾಗಿದೆ.

ದೆಕಾಪೊಲಿ

"ಹತ್ತು ಪಟ್ಟಣಗಳು" (ಯುಡಿಬಿ ನೋಡಿರಿ), ಇದು ಗಲಿಲಾಯದ ಉತ್ತರಪೂರ್ವದಲ್ಲಿರುವ ಪ್ರದೇಶವಾಗಿದೆ