Matthew 3

Matthew 3:1

ಸ್ನಾನಿಕನಾದ ಯೋಹಾನನು ವಯಸ್ಕನಾಗಿ ಬೋಧಿಸಲು ಪ್ರಾರಂಭಿಸಿದ ಸಮಯವನ್ನು ಈ ವಚನಭಾಗಗಳಲ್ಲಿ ನಾವು ನೋಡಬಹುದಾಗಿದೆ.

ಅಡವಿಯಲ್ಲಿ ಕೂಗುವವನ ಶಬ್ದವದೆ

"ಕೂಗುವವನ" ಎಂಬ ಸರ್ವನಾಮವು ಸ್ನಾನಿಕನಾದ ಯೋಹಾನನನ್ನು ಸೂಚಿಸುತ್ತದೆ.

ಪ್ರವಾದಿಯಾದ ಯೆಶಾಯನು ಇವನ ಬಗ್ಗೆಯೇ ಪ್ರವಾದಿಸಿದ್ದಾನೆ

ಪರ್ಯಾಯ ಭಾಷಾಂತರ: "ಪ್ರವಾದಿಯಾದ ಯೆಶಾಯನು ತನ್ನ ಪ್ರವಾದನೆಯಲ್ಲಿ ಸ್ನಾನಿಕನಾದ ಯೋಹಾನನ ಬಗ್ಗೆ ಹೇಳಿದ್ದಾನೆ." (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ಕರ್ತನ ದಾರಿಯನ್ನು ಸಿದ್ಧಮಾಡಿರಿ, ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ

ಸ್ನಾನಿಕನಾದ ಯೋಹಾನನು ಜನರನ್ನು ದೇವರ ಕಡೆಗೆ ತಿರುಗಿಕೊಳ್ಳಿರಿ ಎಂದು ಬೋಧಿಸುತ್ತಿದ್ದ ಸಂದೇಶಕ್ಕೆ ಇದು ರೂಪಕಾಲಂಕಾರವಾಗಿದೆ. (ರೂಪಕಾಲಂಕಾರ ನೋಡಿರಿ) ಪರ್ಯಾಯ ಭಾಷಾಂತರ: "ನಿಮ್ಮ ಜೀವಿತಗಳು ದೇವರಿಗೆ ಮೆಚ್ಚಿಕೆಯಾಗಿರುವ ಸಲುವಾಗಿ ನಿಮ್ಮ ಜೀವನ ಶೈಲಿಗಳನ್ನು ಬದಲಾಯಿಸಿಕೊಂಡು ಸಿದ್ಧರಾಗಿರ್ರಿ."

Matthew 3:4

ಸ್ನಾನಿಕನಾದ ಯೋಹಾನನು ತನ್ನ ಬೋಧನೆಯನ್ನು ಮುಂದುವರೆಸುತ್ತಿದ್ದಾನೆ.

ಅವರು ಅವನಿಂದ ದೀಕ್ಷಾಸ್ನಾನ ಮಾಡಿಸಿಕೊಂಡರು

"ಯೋಹಾನನು ಅವರಿಗೆ ದೀಕ್ಷಾಸ್ನಾನ ಮಾಡಿಸಿದನು." (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ಅವರು

ಯೆರೂಸಲೇಮ್, ಯೂದಾಯ ಮತ್ತು ಯೊರ್ದನ್ ಹೊಳೆಯ ಸುತ್ತಮುತ್ತಲ ಪ್ರದೇಶಗಳಿಂದ ಬರುತ್ತಿದ್ದ ಜನರು.

Matthew 3:7

ಸ್ನಾನಿಕನಾದ ಯೋಹಾನನು ತನ್ನ ಬೋಧನೆಯನ್ನು ಮುಂದುವರೆಸುತ್ತಿದ್ದಾನೆ.

ಸರ್ಪಜಾತಿಯವರೇ

ಇದು ರೂಪಕಾಲಂಕಾರವಾಗಿದೆ. ಸರ್ಪಗಳು ಅಪಾಯಕಾರಿಯಾಗಿವೆ ಮತ್ತು ದುಷ್ಟತನವನ್ನು ಪ್ರತಿನಿಧಿಸುತ್ತವೆ. ಪರ್ಯಾಯ ಭಾಷಾಂತರ: "ದುಷ್ಟರಾಗಿರುವ ವಿಷ ಸರ್ಪಳೇ!" ಅಥವಾ "ನೀವು ವಿಷಸರ್ಪಗಳಂತೆ ದುಷ್ಟರಾಗಿರುವಿರಿ." (ರೂಪಕಾಲಂಕಾರ ನೋಡಿರಿ)

ಮುಂದೆ ಕಾಣಬರುವ ದೈವಕೋಪದಿಂದ ತಪ್ಪಿಸಿಕೊಳ್ಳುವದಕ್ಕೆ ನಿಮಗೆ ಉಪದೇಶ ಮಾಡಿದವರಾರು? ಆಲಂಕಾರಿಕವಾದ ಈ ಪ್ರಶ್ನೆಯ ಮೂಲಕ ಯೋಹಾನನು ಜನರನ್ನು ಗದರಿಸುತ್ತಿದ್ದಾನೆ ಯಾಕೆಂದರೆ ಅವರು ದೇವರು ನಮ್ಮನ್ನು ಶಿಕ್ಷಿಸದಂತೆ ನಮಗೆ ದೀಕ್ಷಾಸ್ನಾನ ಮಾಡಿಸು ಎಂಬದಾಗಿ ಹೇಳಿದ್ದರು ಆದರೆ ಪಾಪ ಮಾಡುವುದನ್ನು ಮುಂದುವರೆಸುತ್ತಿದ್ದರು. "ದೇವರ ಕೋಪದಿಂದ ಈ ರೀತಿಯಾಗಿ ತಪ್ಪಿಸಿಕೊಳ್ಳಲು ನಿಮ್ಮಿಂದ ಆಗುವದಿಲ್ಲ" ಅಥವಾ "ದೀಕ್ಷಾಸ್ನಾನ ಮಾಡಿಸಿಕೊಂಡರೆ ದೇವರ ಕೋಪದಿಂದ ತಪ್ಪಿಸಿಕೊಳ್ಳಬಹುದು ಎಂದು ಆಲೋಚಿಸಬೇಡಿರಿ" (ಆಲಂಕಾರಿಕ ಪ್ರಶ್ನೆ ನೋಡಿರಿ)

ಮುಂಬರುವ ದೈವಕೋಪ

ಪರ್ಯಾಯ ಭಾಷಾಂತರ: "ಮುಂಬರುವ ಶಿಕ್ಷೆ" ಅಥವಾ "ದೇವರ ಕೋಪದಿಂದ ಮಾಡುವ ಕಾರ್ಯ" ಅಥವಾ "ದೇವರು ನಿಮ್ಮನ್ನು ಶಿಕ್ಷಿಸಬೇಕೆಂದಿದ್ದಾನೆ." "ಕೋಪ" ಎಂಬ ಪದವನ್ನು ದೇವರ ಶಿಕ್ಷೆಯನ್ನು ಸೂಚಿಸಲು ಬಳಸಲಾಗಿದೆ ಯಾಕೆಂದರೆ ಆತನ ಕೋಪವು ಇದನ್ನು ತಿಳಿಸುತ್ತದೆ. (ಮೆಟಾನಿಮೈ ನೋಡಿರಿ).

ಅಬ್ರಹಾಮನು ನಮಗೆ ಪಿತೃವಾಗಿದ್ದಾನೆ

"ಅಬ್ರಹಾಮನು ನಮ್ಮ ಮೂಲಪಿತೃವಾಗಿದ್ದಾನೆ" ಅಥವಾ "ನಾವು ಅಬ್ರಹಾಮನ ಸಂತತಿಯವರಾಗಿದ್ದೇವೆ"

ದೇವರು ಅಬ್ರಹಾಮನಿಗೆ ಈ ಕಲ್ಲುಗಳ ಮೂಲಕವಾಗಿಯೂ ಮಕ್ಕಳನ್ನು ಕೊಡಲು ಶಕ್ತನಾಗಿದ್ದಾನೆ

"ದೇವರು ಕಲ್ಲುಗಳ ಮೂಲಕವಾಗಿಯೂ ಅಬ್ರಹಾಮನಿಗೆ ಸಂತತಿಯನ್ನು ಕೊಡಲು ಶಕ್ತನಾಗಿದ್ದಾನೆ.’

Matthew 3:10

ಸ್ನಾನಿಕನಾದ ಯೋಹಾನನು ತನ್ನ ಬೋಧನೆಯನ್ನು ಮುಂದುವರೆಸುತ್ತಿದ್ದಾನೆ.

ಮರಗಳ ಬೇರಿಗೆ ಈಗಾಗಲೇ ಕೊಡಲಿಯು ಬಿದ್ದಿದೆ. ಆದ್ದರಿಂದ ಫಲ ಕೊಡದಿರುವ ಪ್ರತಿಯೊಂದು ಮರವನ್ನು ಕಡಿದು ಬೆಂಕಿಗೆ ಹಾಕಲಾಗುವುದು. ಇದು ರೂಪಕಾಲಂಕಾರವಾಗಿದೆ, "ಒಬ್ಬ ವ್ಯಕ್ತಿಯು ಮರದ ಬುಡಕ್ಕೆ ಕೊಡಲಿಯನ್ನು ಹಾಕಿ ಅದನ್ನು ಕಡಿಯುವ ಹಾಗೆ ನೀವು ನಿಮ್ಮ ಪಾಪಗಳನ್ನು ಬಿಟ್ಟುಬಿಡದಿದ್ದರೆ ದೇವರು ನಿಮ್ಮನ್ನು ಶಿಕ್ಷಿಸಲು ಸಿದ್ಧನಾಗಿದ್ದಾನೆ" ಎಂಬದು ಇದರ ಅರ್ಥವಾಗಿದೆ. ( ರೂಪಕಾಲಂಕಾರ ನೋಡಿರಿ)

ನಾನು ನಿಮಗೆ ದೀಕ್ಷಾಸ್ನಾನ ಮಾಡಿಸುತ್ತೇನೆ

ಯೋಹಾನನು ದೇವರ ಕಡೆಗೆ ತಿರುಗಿಕೊಳ್ಳುವ ಜನರಿಗೆ ದೀಕ್ಷಾಸ್ನಾನ ಮಾಡಿಸುತ್ತಿದ್ದಾನೆ.

ಆದರೆ ನನ್ನ ಹಿಂದೆ ಬರುವವನು

ಯೋಹಾನನ ನಂತರ ಯೇಸು ಕ್ರಿಸ್ತನು ಬರುತ್ತಾನೆ.

ಆತನು ನಿಮಗೆ ಪವಿತ್ರಾತ್ಮನಲ್ಲಿಯೂ ಮತ್ತು ಬೆಂಕಿಯಲ್ಲಿಯೂ ದೀಕ್ಷಾಸ್ನಾನ ಮಾಡಿಸುವನು

ಇದು ರೂಪಕಾಲಂಕಾರವಾಗಿದ್ದು, "ದೇವರು ನಿಮಗೆ ಪವಿತ್ರಾತ್ಮನನ್ನು ಕೊಡುವನು ಮತ್ತು ದೇವರ ರಾಜ್ಯದೊಳಗೆ ಪ್ರವೇಶಿಸುವವರನ್ನು ವಿಚಾರಿಸಲು ಮತ್ತು ಶುದ್ಧೀಕರಿಸಲು ನಿಮ್ಮನ್ನು ಬೆಂಕಿಯ ಮೂಲಕ ಕರೆದುಕೊಂಡು ಹೋಗುವನು." (ರೂಪಕಾಲಂಕಾರ ನೋಡಿರಿ)

ಆತನು ನಿಮಗೆ ದೀಕ್ಷಾಸ್ನಾನ ಮಾಡಿಸುವನು

ಯೇಸು ಕ್ರಿಸ್ತನು ನಿಮಗೆ ದೀಕ್ಷಾಸ್ನಾನ ಮಾಡಿಸುವನು

ಆತನು ಮೊರವನ್ನು ಕೈಯಲ್ಲಿ ಹಿಡಿದಿದ್ದಾನೆ; ತನ್ನ ಕಣದಲ್ಲಿಯ ರಾಶಿಯನ್ನು ತೂರಿ ಹಸನುಮಾಡುತ್ತಾನೆ

ಇದು ರೂಪಕಾಲಂಕಾರವಾಗಿದ್ದು ಒಬ್ಬ ಮನುಷ್ಯನು ಗೋದಿಯನ್ನು ಹೊಟ್ಟಿನಿಂದ ಬೇರ್ಪಡಿಸುವ ಹಾಗೆ ನೀತಿವಂತರನ್ನು ಅನೀತಿವಂತರಿಂದ ಬೇರ್ಪಡಿಸುವನು ಎಂಬದಕ್ಕೆ ಹೋಲಿಸಲಾಗಿದೆ. ಸಂಬಂಧವನ್ನು ಸ್ಪಷ್ಟಪಡಿಸುವ ಸಲುವಾಗಿ ಇದನ್ನು ಉಪಮೆಯಲ್ಲಿ ಭಾಷಾಂತರ ಮಾಡಬಹುದಾಗಿದೆ: "ಕ್ರಿಸ್ತನು ತನ್ನ ಕೈಯಲ್ಲಿ ಕಣವನ್ನು ತೂರುವ ಮೊರವನ್ನು ಹಿಡಿದುಕೊಂಡಿರುವ ವ್ಯಕ್ತಿಯಂತಿದ್ದಾನೆ." (ಉಪಮೆ ನೋಡಿರಿ)

ಮೊರವು ಅವನ ಕೈಯಲ್ಲಿದೆ

ಪರ್ಯಾಯ ಭಾಷಾಂತರ: "ಕ್ರಿಸ್ತನು ಸಿದ್ಧನಾಗಿರುವದರಿಂದ ಕಣ ತೂರುವ ಮೊರವನ್ನು ಹಿಡಿದುಕೊಂಡಿದ್ದಾನೆ."

ಮೊರ

ಗೋಧಿಯಿಂದ ಹೊಟ್ಟನ್ನು ಬೇರ್ಪಡಿಸುರ್ವ ಸಲುವಾಗಿ ಈ ಸಾಧನವನ್ನು ಉಪಯೋಗಿಸಲಾಗುತ್ತದೆ. ಭಾರವಾಗಿರುವ ಗೋಧಿಯು ಮೊರದ ಮೇಲೆ ಬೀಳುತ್ತದೆ ಮತ್ತು ಹೊಟ್ಟು ಗಾಳಿಗೆ ತೂರಿ ಹೋಗುತ್ತದೆ. ಇದು ಹೊಟ್ಟು ಬೇರ್ಪಡಿಸಲು ಸಹಾಯ ಮಾಡುತ್ತದೆ.

ಆತನ ಕಣ

ಈ ಸ್ಥಳದಲ್ಲಿ ಜನರು ಗೋಧಿಯಿಂದ ಹೊಟ್ಟನ್ನು ಬೇರ್ಪಡಿಸುತ್ತಾರೆ. ಪರ್ಯಾಯ ಭಾಷಾಂತರ: "ಆತನ ಸ್ಥಳ" ಅಥವಾ "ಆತನು ಗೋಧಿಯಿಂದ ಹೊಟ್ಟನ್ನು ಬೇರ್ಪಡಿಸುವ ಸ್ಥಳ."

ಗೋಧಿಯನ್ನು ತನ್ನ ಕಣಜದಲ್ಲಿ ತುಂಬಿಕೊಳ್ಳುವನು ... ಹೊಟ್ಟನ್ನು ಆರದ ಬೆಂಕಿಯಲ್ಲಿ ಸುಟ್ಟುಬಿಡುವನು

ದೇವರು ನೀತಿವಂತರನ್ನು ಅನೀತಿವಂತರಿಂದ ಹೇಗೆ ಬೇರ್ಪಡಿಸುತ್ತಾನೆ ಎಂಬದನ್ನು ತೋರ್ಪಡಿಸುವ ರೂಪಕಾಲಂಕಾರವಾಗಿದೆ. ಗೋಧಿಯು ರೈತನ ಕಣಜವನ್ನು ಸೇರುವಂತೆ ನೀತಿವಂತರು ಪರಲೋಕಕ್ಕೆ ಹೋಗುವರು ಮತ್ತು ಹೊಟ್ಟಿನಂತಿರುವ ಜನರನ್ನು ದೇವರನ್ನು ಆರದ ಬೆಂಕಿಗೆ ಹಾಕುವನು. (ರೂಪಕಾಲಂಕಾರ ನೋಡಿರಿ)

Matthew 3:13

ಯೇಸು ಕ್ರಿಸ್ತನು ಸ್ನಾನಿಕನಾದ ಯೋಹಾನನ ಮೂಲಕ ಹೇಗೆ ದೀಕ್ಷಾಸ್ನಾನ ಮಾಡಿಸಿಕೊಂಡನು ಎಂಬದನ್ನು ಈ ವಚನಗಳು ತಿಳಿಸುತ್ತವೆ.

ನಾನು ನಿನ್ನಿಂದ ಸ್ನಾನಮಾಡಿಸಿಕೊಳ್ಳತಕ್ಕವನಾಗಿರುವಲ್ಲಿ

"ನಾನು" ಸ್ನಾನಿಕನಾದ ಯೋಹಾನನನ್ನು ಸೂಚಿಸುತ್ತದೆ ಮತ್ತು "ನಿನ್ನಿಂದ" ಯೇಸುವನ್ನು ಸೂಚಿಸುತ್ತದೆ.

ನೀನು ನನ್ನ ಬಳಿಗೆ ಬರುವದೇನು?

ಇದು ಆಲಂಕಾರಿಕ ಪ್ರಶ್ನೆಯಾಗಿದೆ. ಪರ್ಯಾಯ ಭಾಷಾಂತರ: "ನೀನು ಪಾಪಿಯಲ್ಲದಿರುವದರಿಂದ, ನೀನು ನನ್ನ ಬಳಿಗೆ ಬರಬಾರದು ಮತ್ತು ನನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಬಾರದು. "ನೀನು" ಯೇಸುವನ್ನು ಸೂಚಿಸುತ್ತದೆ ಮತ್ತು "ನನ್ನಿಂದ" ಸ್ನಾನಿಕನಾದ ಯೋಹಾನನನ್ನು ಸೂಚಿಸುತ್ತದೆ. (ಆಲಂಕಾರಿಕ ಪ್ರಶ್ನೆ ನೋಡಿರಿ)

Matthew 3:16

ಯೇಸು ಕ್ರಿಸ್ತನು ಸ್ನಾನಿಕನಾದ ಯೋಹಾನನ ಮೂಲಕ ಹೇಗೆ ದೀಕ್ಷಾಸ್ನಾನ ಮಾಡಿಸಿಕೊಂಡನು ಎಂಬದನ್ನು ಈ ವಚನಗಳು ತಿಳಿಸುತ್ತವೆ.

ಆತನು ದೀಕ್ಷಾಸ್ನಾನ ಮಾಡಿಸಿಕೊಂಡ ನಂತರ

"ಯೋಹಾನನು ಯೇಸು ಕ್ರಿಸ್ತನಿಗೆ ದೀಕ್ಷಾಸ್ನಾನ ಮಾಡಿಸಿದ ನಂತರ" ಎಂಬದಾಗಿ ಹೇಳುವ ಮೂಲಕ ಇದನ್ನು ಭಾಷಾಂತರ ಮಾಡಬಹುದಾಗಿದೆ.

ಆಕಾಶವು ಅವನಿಗೆ ತೆರೆಯಿತು

ಪರ್ಯಾಯ ಭಾಷಾಂತರ: "ಆಕಾಶವು ತೆರೆಯಲ್ಪಡುವದನ್ನು ಆತನು ನೋಡಿದನು" ಅಥವಾ "ಆಕಾಶ ತೆರೆದದ್ದನ್ನು ಆತನು ಕಂಡನು." (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ಪಾರಿವಾಳದ ಹಾಗೆ ಇಳಿದು ಬಂದಿತು

೧) ಪವಿತ್ರಾತ್ಮನು ಪಾರಿವಾಳದ ರೀತಿಯಲ್ಲಿ ಬಂದನು ಎಂಬದಾಗಿ ಹೇಳುವ ಸಾಧಾರಣವಾದ ಹೇಳಿಕೆಯಾಗಿದೆ ಇದು (ಯುಡಿಬಿ ನೋಡಿರಿ) ಅಥವಾ ೨) ಯೇಸುವಿನ ಮೇಲೆ ಪರಿವಾಳದ ಹಾಗೆ ಪವಿತ್ರಾತ್ಮನು ಇಳಿದು ಬರುವದನ್ನು ಉಪಮೆಯಾಗಿರುವ ಇದು ಹೋಲಿಸುತ್ತದೆ. (ಉಪಮೆ ನೋಡಿರಿ)

ನೋಡಿರಿ

ವಿಸ್ತಾರವಾದ ಕಥೆಯಲ್ಲಿ ಮತ್ತೊಂದು ಘಟನೆ ಪ್ರಾರಂಭವಾಗುವದನ್ನು ಇದು ಸೂಚಿಸುತ್ತದೆ. ಹಿಂದಿನ ಘಟನೆಯಲ್ಲಿರುವದಕ್ಕಿಂದ ವಿವಿಧ ಜನರನ್ನು ಇದು ಒಳಗೊಂಡಿದೆ. ನಿಮ್ಮ ಭಾಷೆಯಲ್ಲಿ ಇದನ್ನು ಮಾಡುವ ವಿಧಾನ ಇರಬಹುದು.