Matthew 2

Matthew 2:1

ಯೇಸು ಕ್ರಿಸ್ತನು ಯೆಹೂದ್ಯರ ಅರಸನಾಗಿ ಹುಟ್ಟಿದ ನಂತರ ಏನಾಯಿತೆಂದು ಈ ಅಧ್ಯಾಯವು ವಿವರಿಸುತ್ತದೆ.

ಯೂದಾಯದ ಬೆತ್ಲೆಹೇಮ್

"ಯೂದಾಯ ಪ್ರಾಂತ್ಯದಲ್ಲಿರುವ ಬೆತ್ಲೆಹೇಮ್ ಎಂಬ ಪಟ್ಟಣ" (ಯುಡಿಬಿ)

ಪಂಡಿತರು

"ನಕ್ಷತ್ರಗಳ ಬಗ್ಗೆ ತಿಳಿದುಕೊಂಡಿದ್ದ ಜನರು" (ಯುಡಿಬಿ)

ಹೆರೋದನು

ಇದು ಮಹನಾದ ಹೆರೋದನನ್ನು ಸೂಚಿಸುತ್ತದೆ.

ಯೆಹೂದ್ಯರ ಅರಸನಾಗಿ ಹುಟ್ಟಿದವನು ಎಲ್ಲಿದ್ದಾನೆ?

ಅರಸನಾಗುವವನು ಹುಟ್ಟಿದ್ದಾನೆ ಎಂಬದು ಆ ಪಂಡಿತರಿಗೆ ಗೊತ್ತಾಯಿತು. ಅವನು ಎಲ್ಲಿದ್ದಾನೆ ಎಂಬದನ್ನು ತಿಳಿದುಕೊಳ್ಳಲು ಅವರು ಪ್ರಯತ್ನಿಸುತ್ತಿದ್ದರು. "ಯೆಹೂದ್ಯರ ಅರಸನಾಗುವ ಮಗು ಹುಟ್ಟಿದ್ದಾನೆ. ಆತನು ಎಲ್ಲಿದ್ದಾನೆ?"

ಆತನ ನಕ್ಷತ್ರ

"ಆತನ ಬಗ್ಗೆ ಹೇಳುವ ನಕ್ಷತ್ರ" ಅಥವಾ "ಆತನ ಜನನದೊಂದಿಗೆ ಸೇರಿಕೊಂಡಿರುವ ನಕ್ಷತ್ರ." ಮಗು ನಕ್ಷತ್ರದ ಒಡೆಯನಾಗಿದ್ದಾನೆ ಎಂಬದಾಗಿ ಅವರು ಹೇಳುತ್ತಿರಲಿಲ್ಲ.

ಆರಾಧನೆ

ಈ ಪದದ ಸಾಧ್ಯವಾಗುವ ಅರ್ಥಗಳು ಏನೆಂದರೆ ೧) ಆ ಮಗು ದೈವೀಕವಾದ್ದರಿಂದ ಅದನ್ನು ಆರಾಧಿಸಬೇಕೆಂದು ಅವರು ಬಯಸಿದರು ಅಥವಾ ೨) ಅವರು ಆತನನ್ನು ಮಾನವ ಅರಸನೆಂದು "ಗೌರವಿಸಲು" ಬಯಸಿದರು.

Matthew 2:4

ಯೇಸು ಕ್ರಿಸ್ತನು ಯೆಹೂದ್ಯರ ಅರಸನಾಗಿ ಹುಟ್ಟಿದ ನಂತರ ಏನಾಯಿತೆಂದು ಈ ಅಧ್ಯಾಯವು ವಿವರಿಸುತ್ತದೆ.

ಯೂದಾಯದ ಬೆತ್ಲೆಹೇಮಿನಲ್ಲಿ

ಪರ್ಯಾಯ ಭಾಷಾಂತರ: "ಯೂದಾಯದ ಬೆತ್ಲೆಹೇಮಿನಲ್ಲಿರುವ ಪಟ್ಟಣ."

ಪ್ರವಾದಿಯು ಈ ರೀತಿಯಾಗಿ ಬರೆದಿದ್ದಾನೆ

ಇದನ್ನು ಸಕ್ರಿಯವಾದ ಸ್ವರದಲ್ಲಿ ಹೇಳಬಹುದಾಗಿದೆ "ಪ್ರವಾದಿಯು ಬರೆದಿರುವದೇನೆಂದರೆ." (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ಪ್ರವಾದಿಯು ಬರೆದಿರುವದೇನೆಂದರೆ

ಪರ್ಯಾಯ ಭಾಷಾಂತರ: "ಪ್ರವಾದಿಯಾದ ಮೀಕನು ಬರೆದಿರುವದೇನೆಂದರೆ."

ಬೆತ್ಲೆಹೇಮೇ ನೀನು ಯೆಹೂದದ ಮುಖ್ಯಪಟ್ಟಣಗಳಲ್ಲಿ ಎಷ್ಟುಮಾತ್ರವೂ ಸಣ್ಣದಲ್ಲ

"ಬೆತ್ಲೆಹೇಮಿನಲ್ಲಿ ಜೀವಿಸುತ್ತಿರುವವರೇ ನೀವು ನಿಜವಾಗಿಯೂ ಪ್ರಾಮುಖ್ಯರಾಗಿರುವಿರಿ" (ಯುಡಿಬಿ) ಅಥವಾ "ಬೆತ್ಲೆಹೇಮೇ. . . ನೀನು ಖಂಡಿತವಾಗಿಯೂ ಪ್ರಮುಖ ಪಟ್ಟಣಗಳಲ್ಲಿ ಒಂದಾಗಿರುವೆ." (ಅಪೊಸ್ತೋಫೆ ನೋಡಿರಿ) (ಲಿಟೋಟಸ್ ನೋಡಿರಿ)

Matthew 2:7

ಯೇಸು ಕ್ರಿಸ್ತನು ಯೆಹೂದ್ಯರ ಅರಸನಾಗಿ ಹುಟ್ಟಿದ ನಂತರ ನಡೆದ ಸಂಗತಿಗಳು ಇಲ್ಲಿ ಮುಂದುವರೆಯುತ್ತಿದೆ.

ಹೆರೋದನು ರಹಸ್ಯವಾಗಿ ಪಂಡಿತರನ್ನು ಕರೆಸಿದನು

ಇದರ ಅರ್ಥ ಯಾರಿಗೂ ಗೊತ್ತಾಗದಂತೆ ಹೆರೋದನು ಪಂಡಿತರೊಂದಿಗೆ ಮಾತನಾಡಿದನು.

ಚಿಕ್ಕ ಮಗು

ಇದು ಶಿಶುವಾಗಿದ್ದ ಯೇಸುವನ್ನು ಸೂಚಿಸುತ್ತದೆ.

ಆರಾಧನೆ

೧:೨ರಲ್ಲಿ ನೀವು ಬಳಸಿರುವ ಪದವನ್ನೇ ಇಲ್ಲಿಯೂ ಬಳಸಿರಿ.

Matthew 2:9

ಯೇಸು ಕ್ರಿಸ್ತನು ಯೆಹೂದ್ಯರ ಅರಸನಾಗಿ ಹುಟ್ಟಿದ ನಂತರ ನಡೆದ ಸಂಗತಿಗಳು ಇಲ್ಲಿ ಮುಂದುವರೆಯುತ್ತಿದೆ.

ಅವರು ಅರಸನ ಮಾತುಗಳನ್ನು ಕೇಳಿದ ಮೇಲೆ

"ನಂತರ" (ಯುಡಿಬಿ) ಅಥವಾ "ಪಂಡಿತರು ಅರಸನ ಮಾತುಗಳನ್ನು ಕೇಳಿಸಿಕೊಂಡ ನಂತರ"

ಅವರಿಗೆ ಮುಂದಾಗಿ ಹೋದನು

ಪರ್ಯಾಯ ಭಾಷಾಂತರ: "ಅವರನ್ನು ಮುನ್ನಡೆಸಿದನು."

ಎದುರಾಗಿ ನಿಲ್ಲಿಸಿದನು

ಪರ್ಯಾಯ ಭಾಷಾಂತರ: "ಅಲ್ಲಿಯೇ ನಿಂತರು."

Matthew 2:11

ಯೇಸು ಕ್ರಿಸ್ತನು ಯೆಹೂದ್ಯರ ಅರಸನಾಗಿ ಹುಟ್ಟಿದ ನಂತರ ನಡೆದ ಸಂಗತಿಗಳು ಇಲ್ಲಿ ಮುಂದುವರೆಯುತ್ತಿದೆ.

ಅವರು

ಪಂಡಿತರನ್ನು ಸೂಚಿಸುತ್ತದೆ

ಆರಾಧನೆ

೧:೨ರಲ್ಲಿ ಬಳಸಲಾಗಿರುವ ಪದವನ್ನೇ ಇಲ್ಲಿ ಬಳಸಿರಿ.

Matthew 2:13

ಯೇಸು ಕ್ರಿಸ್ತನು ಯೆಹೂದ್ಯರ ಅರಸನಾಗಿ ಹುಟ್ಟಿದ ನಂತರ ನಡೆದ ಸಂಗತಿಗಳು ಇಲ್ಲಿ ಮುಂದುವರೆಯುತ್ತಿದೆ.

ಅವರು ಹೊರಟು ಹೋಗಿದ್ದರು

"ಪಂಡಿತರು ಹೊರಟು ಹೋಗಿದ್ದರು"

ಎದ್ದೇಳು, ಕರೆದುಕೊಂಡು ... ಹೊರಟುಹೋಗು ... ಅಲ್ಲಿಯೇ ಇರು

ದೇವರು ಯೋಸೇಫನ ಸಂಗಡ ಮಾತನಾಡುತ್ತಿದ್ದಾನೆ, ಆದ್ದರಿಂದ ಇವೆಲ್ಲವೂ ಏಕವಚನಗಳಾಗಿವೆ. (’ನೀನು’ ವಿಧಾನಗಳನ್ನು ನೋಡಿರಿ)

ಹೆರೋದನ ಮರಣದ ತನಕ

೨:೧೯ರ ತನಕ ಹೆರೋದನು ಸಾಯಲಿಲ್ಲ. ಅವರು ಎಷ್ಟು ಸಮಯಗಳ ಕಾಲ ಐಗುಪ್ತದಲ್ಲಿ ವಾಸಿಸಿದರು ಎಂಬದನ್ನು ಇದು ಹೇಳುತ್ತದೆ ಮತ್ತು ಹೆರೋದನು ಈ ಸಮಯದಲ್ಲಿ ಸತ್ತನು ಎಂದು ಹೇಳುವದಿಲ್ಲ.

ಐಗುಪ್ತದಿಂದ ನಾನು ನನ್ನ ಮಗನನ್ನು ಕರೆದಿದ್ದೇನೆ

ಇದು ಹೋಶೇಯ ೧೧:೧ರ ಹೇಳಿಕೆಯಾಗಿದೆ. ಮತ್ತಾಯನ ಸುವಾರ್ತೆಯಲ್ಲಿ ಬರೆದಿರುವ ಪದವು ಇಬ್ರಿಯದಲ್ಲಿ ಬರೆಯಲಾಗಿರುವ ಪದಕ್ಕಿಂತ ಭಿನ್ನವಾಗಿದೆ. ಇಲ್ಲಿ ಪ್ರಾಮುಖ್ಯತೆ "ಐಗುಪ್ತದಿಂದ ಹೊರಗೆ" ಎಂಬದಕ್ಕಿದೆಯೇ ಹೊರತು ಬೇರೆ ಯಾವುದಕ್ಕೂ ಅಲ್ಲ. "ಐಗುಪ್ತದಿಂದ ನಾನು ನನ್ನ ಮಗನನ್ನು ಹೊರಗೆ ಕರೆದೆನು."

Matthew 2:16

ಯೇಸು ಕ್ರಿಸ್ತನು ಯೆಹೂದ್ಯರ ಅರಸನಾಗಿ ಹುಟ್ಟಿದ ನಂತರ ನಡೆದ ಸಂಗತಿಗಳು ಇಲ್ಲಿ ಮುಂದುವರೆಯುತ್ತಿದೆ.

ಆಗ ಹೆರೋದನು

ಯೋಸೇಫನು ಮರಿಯಳನ್ನು ಮತ್ತು ಯೋಸೇಫನನ್ನು ಕರೆದುಕೊಂಡು ಐಗುಪ್ತಕ್ಕೆ ಹೋದ ನಂತರ ಹೆರೋದನು ಮಾಡಿದ ಕಾರ್ಯಗಳನ್ನು ಇದು ವಿವರಿಸುತ್ತದೆ. ಹೆರೋದನು ೨:೧೯ರ ತನಕ ಸಾಯಲಿಲ್ಲ.

ಅವರು ಅವನಿಗೆ ಮೋಸಮಾಡಿದರು

"ಪಂಡಿತರು ಬೇರೆ ದಾರಿಯಿಂದ ಹೋಗುವ ಮೂಲಕ ಅವನಿಗೆ ಮೋಸಮಾಡಿದರು" (ಯುಡಿಬಿ ನೋಡಿರಿ)

ಅವನು ಸೈನಿಕರನ್ನು ಕಳುಹಿಸಿ ಎಲ್ಲಾ ಗಂಡುಮಕ್ಕಳನ್ನು ಕೊಲ್ಲಿಸಿದನು

ಪರ್ಯಾಯ ಭಾಷಾಂತರ: "ಗಂಡು ಮಕ್ಕಳನ್ನು ಕೊಲ್ಲುವಂತೆ ಅವನು ಆಜ್ಞಾಪಿಸಿದನು" ಅಥವಾ "ಎಲ್ಲಾ ಗಂಡು ಕೂಸುಗಳನ್ನು ಕೊಲ್ಲಲು ಅವನು ಸಿಪಾಯಿಗಳನ್ನು ಕಳುಹಿಸಿದನು." (ಯುಡಿಬಿ)

Matthew 2:17

ಯೇಸು ಕ್ರಿಸ್ತನು ಯೆಹೂದ್ಯರ ಅರಸನಾಗಿ ಹುಟ್ಟಿದ ನಂತರ ನಡೆದ ಸಂಗತಿಗಳು ಇಲ್ಲಿ ಮುಂದುವರೆಯುತ್ತಿವೆ. ೧೮ನೇ ವಚನವು ಯೆರೆಮಿಯ ೩೧:೧೫ರ ಹೇಳಿಕೆಯಾಗಿದೆ. ಮತ್ತಾಯನ ಸುವಾರ್ತೆಯಲ್ಲಿ ಬರೆಯಲಾಗಿರುವ ಗ್ರೀಕ್ ವಚನಭಾಗವು ಇಬ್ರಿಯದಲ್ಲಿ ಬರೆಯಲಾಗಿರುವ ಯೆರೆಮಿಯ ವಚನಭಾಗಕ್ಕಿಂತಲೂ ಭಿನ್ನವಾಗಿದೆ.

Matthew 2:19

ಯೇಸು ಕ್ರಿಸ್ತನು ಯೆಹೂದ್ಯರ ಅರಸನಾಗಿ ಹುಟ್ಟಿದ ನಂತರ ನಡೆದ ಸಂಗತಿಗಳು ಇಲ್ಲಿ ಮುಂದುವರೆಯುತ್ತಿವೆ.

ನೋಡಿರಿ

ವಿಸ್ತಾರವಾಗಿರುವ ಕಥೆಯಲ್ಲಿ ಮತ್ತೊಂದು ಘಟನೆಯ ಪ್ರಾರಂಭವನ್ನು ಇದು ಸೂಚಿಸುತ್ತದೆ. ಹಿಂದಿನ ಘಟನೆಯಂತಲ್ಲದೇ ಇದರಲ್ಲಿ ವಿವಿಧ ಜನರು ಒಳಗೊಂಡಿರುವುದನ್ನು ನಾವು ನೋಡಬಹುದು. ನಿಮ್ಮ ಭಾಷೆಯಲ್ಲಿ ಇದನ್ನು ವಿವಿಧ ರೀತಿಯಲ್ಲಿ ಮಾಡಬಹುದು.

ಚಿಕ್ಕ ಮಗುವಿನ ಪ್ರಾಣವನ್ನು ತೆಗೆಯಲು ಅವರು ಬಯಸಿದರು

"ಚಿಕ್ಕ ಮಗುವಿನ ಪ್ರಾಣವನ್ನು ತೆಗೆಯಲು ಬಯಸಿದವರು." (ಎಫುಮಿಸಮ್ ನೋಡಿರಿ)

Matthew 2:22

ಯೇಸು ಕ್ರಿಸ್ತನು ಯೆಹೂದ್ಯರ ಅರಸನಾಗಿ ಹುಟ್ಟಿದ ನಂತರ ನಡೆದ ಸಂಗತಿಗಳು ಇಲ್ಲಿ ಮುಂದುವರೆಯುತ್ತಿವೆ.

ಅದರೆ ಅವನಿಗೆ ಇದು ಗೊತ್ತಾದಾಗ

"ಯೋಸೇಫನಿಗೆ ಈ ಸಂಗತಿಯು ಗೊತ್ತಾದಾಗ"

ಅವನ ತಂದೆಯಾದ ಹೆರೋದನು

ಇವನು ಅರ್ಖೆಲಾಯನ ತಂದೆಯಾಗಿದ್ದಾನೆ.

ಅವನು ಅಲ್ಲಿಗೆ ಹೋಗಲು ಭಯಪಟ್ಟನು

"ಅವನು" ಎಂದರೆ ಯೋಸೇಫನು.

ಅವನನ್ನು ನಜರೇತಿನವನು ಎಂದು ಕರೆಯಲಾಗುವುದು

"ಅವನು" ಎಂದರೆ ಯೇಸು.