ಮೊದಲನೆಯದಾಗಿ ಹೆಸರು ಕೊಡಲಾಗಿರುವ ಪೂರ್ವಿಕರು ದಾವೀದನು ಮತ್ತು ಅಬ್ರಹಾಮನು [೧:೧].
ಯೋಸೇಫನ ಹೆಂಡತಿಯಾದ ಮರಿಯಳ ಹೆಸರನ್ನು ಕೊಡಲಾಗಿದೆ ಯಾಕೆಂದರೆ ಆಕೆಯ ಮೂಲಕವಾಗಿಯೇ ಯೇಸು ಹುಟ್ಟಿದನು [೧:೧೬].
ಯೋಸೇಫನನ್ನು ಮದುವೆ ಮಾಡಿಕೊಳ್ಳುವ ಮೊದಲೇ ಆಕೆಯು ಪವಿತ್ರಾತ್ಮನಿಂದ ಗರ್ಭಿಣಿಯಾದಳು [೧:೧೮].
ಯೋಸೇಫನು ನೀತಿವಂತನಾಗಿದ್ದನು [೧:೧೯].
ಯಾರಿಗೂ ಗೊತ್ತಾಗದಂತೆ ಅವನು ಮರಿಯಳನ್ನು ಬಿಟ್ಟುಬಿಡಬೇಕೆಂದಿದ್ದನು [೧:೧೯].
ಮರಿಯಳು ಪವಿತ್ರಾತ್ಮನಿಂದ ಗರ್ಭಿಣಿಯಾಗಿರುವದರಿಂದ ಅವಳನ್ನು ಹೆಂಡತಿಯಾಗಿ ಮಾಡಿಕೋ ಎಂದು ದೇವದೂತನು ಕನಸಿನಲ್ಲಿ ಕಾಣಿಸಿಕೊಂಡು ಯೋಸೇಫನಿಗೆ ಹೇಳಿದನು [೧:೨೦].
ಯೋಸೇಫನಿಗೆ ಯೇಸು ಎಂದು ಹೆಸರಿಡಬೇಕು ಎಂಬದಾಗಿ ಹೇಳಲಾಯಿತು ಯಾಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸುವನು [೧:೨೧].
ಹಳೆಯ ಒಡಂಬಡಿಕೆಯ ಪ್ರವಾದನೆಯು ಹೇಳುವದೇನೆಂದರೆ ಕನ್ಯೆಯು ಒಬ್ಬ ಮಗುವಿಗೆ ಜನ್ಮ ಕೊಡುವಳು ಮತ್ತು ಅವರು ಅವನಿಗೆ ಇಮ್ಮಾನುವೇಲ್ ಎಂದು ಕರೆಯುವರು, ಇಮ್ಮಾನುವೇಲ್ ಅಂದರೆ "ದೇವರು ನಮ್ಮೊಂದಿಗೆ ಇದ್ದಾನೆ" [೧:೨೩].
ಮರಿಯಳು ಯೇಸುವಿಗೆ ಜನ್ಮ ಕೊಡುವ ತನಕ ಆತನು ಆಕೆಯೊಂದಿಗೆ ಮಲಗದಂತೆ ಎಚ್ಚರಿಕೆಯುಳ್ಳವನಾಗಿದ್ದನು [೧:೨೫].