Matthew 1

Matthew 1:1

೧೭ ವಚನಗಳು ಯೇಸು ಕ್ರಿಸ್ತನು ಪೂರ್ವಿಕರ ಪಟ್ಟಿಯನ್ನು ಕೊಡುತ್ತದೆ.

ಆತನು ದಾವೀದನ ವಂಶದವನು, ದಾವೀದನು ಅಬ್ರಹಾಮನ ವಂಶದವನು

ಪರ್ಯಾಯ ಭಾಷಾಂತರ: "ದಾವೀದನ ವಂಶದವನು, ಅವನು ಅಬ್ರಹಾಮನ ವಂಶದವನು." ಅಬ್ರಹಾಮನು ಮತ್ತು ಅವನ ಸಂತತಿಯವನಾದ ದಾವೀದನ ನಡುವೆ ಅನೇಕ ಸಂತತಿಗಳಿವೆ, ಅದೇ ಪ್ರಕಾರ ದಾವೀದನು ಮತ್ತು ಅವನ ವಂಶದವನಾದ ಯೇಸು ಕ್ರಿಸ್ತನ ನಡುವೆ ಅನೇಕ ಸಂತತಿಗಳಿವೆ. "ದಾವೀದ ಕುಮಾರನು" ಎಂಬ ಶೀರ್ಷಿಕೆಯನ್ನು ೯:೨೭ರಲ್ಲಿ ಮತು ಇತರೆ ಸ್ಥಳಗಳಲ್ಲಿ ಉಪಯೋಗಿಸಲಾಗಿದೆ ಆದರೆ ಇಲ್ಲಿ ಅದನ್ನು ಆತನ ವಂಶವನ್ನು ಸೂಚಿಸುವದಕ್ಕಾಗಿ ಉಪಯೋಗಿಸಲಾಗಿದೆ.

ಅಬ್ರಹಾಮನು ಇಸಾಕನ ತಂದೆಯಾಗಿದ್ದಾನೆ

ಪರ್ಯಾಯ ಭಾಷಾಂತರ: "ಅಬ್ರಹಾಮನು ಇಸಾಕನಿಗೆ ತಂದೆಯಾದನು" ಅಥವಾ "ಅಬ್ರಹಾಮನು ಇಸಾಕನನ್ನು ಪಡೆದನು" ಅಥವಾ "ಅಬ್ರಹಾಮನಿಗೆ ಇಸಾಕನೆಂಬ ಮಗನಿದ್ದನು." ಓದುಗರಾದ ನೀವು ಇದರಲ್ಲಿ ಯಾವುದಾದರು ಒಂದು ವಿಧಾನವನ್ನು ಬಳಸುವುದು ಹಾಗೂ ಆದನ್ನೆ ಎಲ್ಲಾ ಕಡೆಗಳಲ್ಲಿಯೂ ಉಪಯೋಗಿಸುವುದು ಸಹಾಯವಾಗಿರುತ್ತದೆ.

ತಾಮರಳು

ಸ್ತ್ರೀಲಿಂಗ ಮತ್ತು ಪುಲ್ಲಿಂಗ ಹೆಸರುಗಳ ವಿಧಾನವಿರುವ ಭಾಷೆಗಳು ಆಕೆಯ ಹೆಸರಿಗೆ ತಕ್ಕದ್ದನ್ನು ಉಪಯೋಗಿಸಬೇಕು.

Matthew 1:4

ಯೇಸು ಕ್ರಿಸ್ತನ ಪೂರ್ವಿಕರ ಪಟ್ಟಿಯು ಮುಂದುವರೆಯುತ್ತದೆ. ಮತ್ತಾಯ ೧:೨

೩ರಲ್ಲಿ ಉಪಯೋಗಿಸಿರುವ ಪದಗಳನ್ನೇ ಉಪಯೋಗಿಸಿರಿ.

ರಾಹಬಳ ಮೂಲಕವಾಗಿ ಸಲೋಮೊನನು ಬೋವಜನಿಗೆ ತಂದೆಯಾಗಿದ್ದನು

"ಸಲೋಮೊನನು ಬೋವಜನ ತಂದೆಯಾಗಿದ್ದನು ಮತ್ತು ಬೋವಜನ ತಾಯಿ ರಾಹಬಳು" ಅಥವಾ "ಸಲೋಮೊನನು ಮತ್ತು ರಾಹಾಬಳು ಬೋವಜನ ತಂದೆತಾಯಿಗಳಾಗಿದ್ದಾರೆ"

ಬೋವಜನು ರೂತಳಲ್ಲಿ ಒಬೇದನನ್ನು ಪಡೆದನು

"ಬೋವಜನು ಒಬೇದನ ತಂದೆಯಾಗಿದ್ದಾನೆ ಮತ್ತು ರೂತಳು ಒಬೇದನ ತಾಯಿಯಾಗಿದ್ದಾಳೆ" ಅಥವಾ "ಬೋವಜನು ಮತ್ತು ರೂತಳು ಒಬೇದನ ತಂದೆತಾಯಿಗಳಾಗಿದ್ದಾರೆ"

ರಾಹಾಬಳು... ರೂತಳು

ಸ್ತ್ರೀಲಿಂಗ ಮತ್ತು ಪುಲ್ಲಿಂಗದನುಸರವಾಗಿ ಹೆಸರಿನ ವಿಧಾನಗಳಿರುವ ಭಾಷೆಗಳು ಇವರ ಹೆಸರಿಗೆ ಯುಕ್ತವಾದವುಗಳನ್ನು ಉಪಯೋಗಿಸಬೇಕು.

ದಾವೀದನು ಊರೀಯನ ಹೆಂಡತಿಯಾಗಿದ್ದವಳಲ್ಲಿ ಸೊಲೊಮೊನನನ್ನು ಪಡೆದನು

"ದಾವೀದನು ಸೊಲೊಮೊನನ ತಂದೆಯಾಗಿದ್ದಾನೆ ಮತ್ತು ಊರೀಯನ ಹೆಂಡತಿ ಸೊಲೊಮೊನನ ತಾಯಿಯಾಗಿದ್ದಾಳೆ" ಅಥವಾ "ದಾವೀದನು ಮತ್ತು ಊರೀಯನ ಹೆಂಡತಿ ಸೊಲೊಮೊನನ ತಂದೆತಾಯಿಗಳಾಗಿದ್ದಾರೆ"

Matthew 1:7

ಯೇಸು ಕ್ರಿಸ್ತನ ಪೂರ್ವಿಕರ ಪಟ್ಟಿಯು ಮುಂದುವರೆಯುತ್ತಿದೆ. ಮತ್ತಾಯ ೧:೨

೩ರಲ್ಲಿ ಉಪಯೋಗಿಸಲಾಗಿರುವ ಪದಗಳನ್ನೇ ಉಪಯೋಗಿಸಿರಿ.

ಆಸ

ಕೆಲವೊಮ್ಮೆ ಇವನ ಹೆಸರನ್ನು ಆಸಾಫ ಎಂದು ಭಾಷಾಂತರ ಮಾಡಲಾಗಿದೆ.

ಊರಿಯನ ತಂದೆಯಾದ ಯಹೋರಾಮನು

ಯಹೋರಾಮನು ನಿಜವಾಗಿಯೂ ಊರಿಯನ ತಾತನ ತಾತನಾಗಿದ್ದಾನೆ, ಆದ್ದರಿಂದ "ತಂದೆಯನ್ನು" "ಪೂರ್ವಿಕನು" ಎಂಬದಾಗಿ ಭಾಷಾಂತರ ಮಾಡಬಹುದಾಗಿದೆ (ಯುಡಿಬಿ).

Matthew 1:9

ಯೇಸು ಕ್ರಿಸ್ತನ ಪೂರ್ವಿಕರ ಪಟ್ಟಿಯು ಮುಂದುವರೆಯುತ್ತಿದೆ. ಮತ್ತಾಯ ೧:೨

೩ರಲ್ಲಿ ಉಪಯೋಗಿಸಲಾಗಿರುವ ಪದಗಳನ್ನೇ ಉಪಯೋಗಿಸಿರಿ.

ಆಮೋನನು

ಕೆಲವೊಮ್ಮೆ ಇದನ್ನು ಆಮೋಸ ಎಂದು ಭಾಷಾಂತರ ಮಾಡಲಾಗಿದೆ.

ಯೆಕೂನ್ಯನ ತಂದೆಯಾದ ಯೋಷೀಯನು

ಯೋಷೀಯನು ನಿಜವಾಗಿಯೂ ಯೆಕೂನ್ಯನ ತಾತನಾಗಿದ್ದಾನೆ (ಯುಡಿಬಿ ನೋಡಿರಿ).

ಬಾಬೆಲಿಗೆ ಸೆರೆಹೋದ ಕಾಲದಲ್ಲಿ

"ಅವರನ್ನು ಒತ್ತಾಯವಾಗಿ ಬಾಬೆಲಿಗೆ ಕರೆದುಕೊಂಡು ಹೋದಾಗ" ಅಥವಾ "ಬಾಬೆಲಿನವರು ಅವರನ್ನು ಬಾಬೆಲಿಗೆ ಜೀವಿಸಲು ಕರೆದುಕೊಂಡು ಹೋದಾಗ." ಯಾರು ಬಾಬೆಲಿಗೆ ಹೋದರು ಎಂಬದಾಗಿ ನಿಮ್ಮ ಭಾಷೆಯಲ್ಲಿ ಹೇಳಬೇಕಾದರೆ "ಇಸ್ರಾಯೇಲ್ಯರು" ಅಥವಾ "ಯೆಹೂದದಲ್ಲಿ ಜೀವಿಸುತ್ತಿದ್ದ ಇಸ್ರಾಯೇಲ್ಯರು" ಎಂಬದಾಗಿ ಹೇಳಬಹುದು.

Matthew 1:12

ಯೇಸು ಕ್ರಿಸ್ತನ ಪೂರ್ವಿಕರ ಪಟ್ಟಿಯು ಮುಂದುವರೆಯುತ್ತಿದೆ. ಮತ್ತಾಯ ೧:೨

೩ರಲ್ಲಿ ಉಪಯೋಗಿಸಲಾಗಿರುವ ಪದಗಳನ್ನೇ ಉಪಯೋಗಿಸಿರಿ.

ಸೀರ್ಯ ಕಾಲವು ತೀರಿದ ನಂತರ

೧:೧೧ರಲ್ಲಿ ಉಪಯೋಗಿಸಲಾಗಿರುವ ಪದವನ್ನೇ ಉಪಯೋಗಿಸಿರಿ.

ಜೆರುಬ್ಬಾಬೆಲನ ತಂದೆಯಾದ ಶೆಯಲ್ತಿಯೇಲನು

ಶೆಯಲ್ತಿಯೇಲನು ನಿಜವಾಗಿಯೂ ಜೆರುಬ್ಬಾಬೆಲನ ತಾತನಾಗಿದ್ದಾನೆ (ಯುಡಿಬಿ ನೋಡಿರಿ).

Matthew 1:15

ಯೇಸು ಕ್ರಿಸ್ತನ ಪೂರ್ವಿಕರ ಪಟ್ಟಿಯು ಮುಂದುವಯುತ್ತಿದೆ. ಮತ್ತಾಯ ೧:೨

೩ರಲ್ಲು ಉಪಯೋಗಿಸಲಾಗಿರುವ ಪದಗಳನ್ನೇ ಉಪಯೋಗಿಸಿರಿ.

ಮರಿಯಳಲ್ಲಿ ಕ್ರಿಸ್ತನೆಂಬ ಯೇಸು ಹುಟ್ಟಿದನು

ಇದನ್ನು ಸಕ್ರಿಯ ಸ್ವರದಲ್ಲಿ ಭಾಷಾಂತರ ಮಾಡಬಹುದು "ಯೇಸು ಕ್ರಿಸ್ತನು ಕನ್ಯೆ ಮರಿಯಳಲ್ಲಿ ಹುಟ್ಟಿದನು." (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ಬಾಬೆಲಿಗೆ ಸೆರೆಹೋದ ಕಾಲ

೧:೧೧ ಉಪಯೋಗಿಸಲಾಗಿರುವ ಪದವನ್ನೇ ಉಪಯೋಗಿಸಿರಿ.

Matthew 1:18

ಯೇಸು ಕ್ರಿಸ್ತನ ಜನನದ ಸಮಯದಲ್ಲಿ ನಡೆದ ಘಟನೆಗಳನ್ನು ನಾವು ಇಲ್ಲಿ ನೋಡಬಹುದು. ಒಂದುವೇಳೆ ನಿಮ್ಮ ಭಾಷೆಯಲ್ಲಿ ವಿಷಯಗಳ ಬದಲಾವಣೆಯನ್ನು ಸೂಚಿಸುವ ವಿಧಾನ ಇರುವುದಾದರೆ, ಅದನ್ನು ಇಲ್ಲಿ ಉಪಯೋಗಿಸಿರಿ.

ಮರಿಯಳು ಯೋಸೇಫನಿಗೆ ನಿಶ್ಚಯವಾಗಿದ್ದಳು

"ಮದುವೆಯಾಗುವ ವಾಗ್ದಾನಕ್ಕೆ ಒಳಗಾಗಿದ್ದಳು" (ಯುಡಿಬಿ) ಅಥವಾ "ಮದುವೆಯಾಗಲು ಸಮರ್ಪಿಸಿಕೊಂಡಿದ್ದಳು." ಸಾಧಾರಣವಾಗಿ ತಂದೆತಾಯಿಗಳು ತಮ್ಮ ಮಕ್ಕಳ ಮದುವೆಯನ್ನು ನಿಶ್ಚಯಿಸಿದ್ದರು.

ಅವರಿಬ್ಬರೂ ಕೂಡುವುದಕ್ಕಿಂತ ಮೊದಲು

"ಅವರ ನಡುವೆ ಲೈಂಗಿಕ ಕ್ರಿಯೆಯು ನಡೆಯುವ ಮೊದಲು." (ಎಫುಮಿಸಮ್ ನೋಡಿರಿ)

ಆಕೆಯು ಗರ್ಭಿಣಿ ಎಂಬದು ಗೊತ್ತಾಯಿತು

"ಆಕೆಯು ಮಗುವಿಗೆ ಜನ್ಮ ಕೊಡುವ ಸ್ಥಿತಿಯಲ್ಲಿದ್ದಾಳೆ ಎಂಬದು ಅವರಿಗೆ ಗೊತ್ತಾಯಿತು" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ಪವಿತ್ರಾತ್ಮನಿಂದ

ಗರ್ಭಿಣಿಯಾಗುವಂತೆ ಪವಿತ್ರಾತ್ಮನು ಮರಿಯಳನ್ನು ಬಲಪಡಿಸಿದ್ದನು.

Matthew 1:20

ಯೇಸು ಕ್ರಿಸ್ತನ ಜನನದ ಸಮಯದಲ್ಲಿ ನಡೆದ ಘಟನೆಗಳು ಇಲ್ಲಿ ಮುಂದುವರೆಯುವುದನ್ನು ನಾವು ನೋಡಬಹುದು.

ಕಾಣಿಸಿಕೊಂಡನು

ದೇವದೂತನು ಯೋಸೇಫನಿಗೆ ಕಾಣಿಸಿಕೊಂಡನು

ದಾವೀದನ ಮಗನು

ಈ ಸಂದರ್ಭದಲ್ಲಿ "ಮಗನು" ಎಂದರೆ "ವಂಶದವನು." ದಾವೀದನು ಯೋಸೇಫನ ತಂದೆಯಲ್ಲ, ಬದಲಾಗಿ ದಾವೀದನು ಯೋಸೇಫನ ವಂಶದವನಾಗಿದ್ದಾನೆ.

ಆಕೆಯ ಗರ್ಭವು ಪವಿತ್ರಾತ್ಮದಿಂದಲೇ ಆದದ್ದು

"ಮರಿಯಳು ಪವಿತ್ರಾತ್ಮನಿಂದ ಗರ್ಭಿಣಿಯಾಗಿದ್ದಾಳೆ." (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ಆಕೆಯು ಒಬ್ಬ ಮಗನನ್ನು ಹೆರುವಳು

ದೇವರು ದೇವದೂತನನ್ನು ಕಳುಹಿಸಿದ್ದರಿಂದ ಹುಟ್ಟುವ ಮಗು ಹುಡುಗನೇ ಎಂದು ಆತನಿಗೆ ಗೊತ್ತಿತ್ತು.

ನೀವು ಆತನಿಗೆ ಇಡಬೇಕಾದ ಹೆಸರು

ಇದು ಆಜ್ಞೆಯಾಗಿದೆ: "ಆತನನ್ನು ಕರೆಯುವ ಹೆಸರು" ಅಥವಾ "ಆತನಿಗೆ ಇಡಬೇಕಾದ ಹೆಸರು" ಅಥವಾ "ಯಾವ ಹೆಸರು ಇಡಬೇಕೆಂದರೆ"

ಆತನು ತನ್ನ ಜನರನ್ನು ಕಾಪಾಡುವನು

"ಆತನ ಜನರು" ಯೆಹೂದ್ಯರನ್ನು ಸೂಚಿಸುತ್ತದೆ

Matthew 1:22

ಯೇಸು ಕ್ರಿಸ್ತನ ಜನನದಿಂದ ನೆರವೇರುವ ಪ್ರವಾದನೆಯನ್ನು ಮತ್ತಾಯನು ಇಲ್ಲಿ ಹೇಳಿದ್ದಾನೆ.

ಪ್ರವಾದಿಯ ಮೂಲಕ ಏನು ಹೇಳಲಾಗಿದೆ

ಇದನ್ನು ಸಕ್ರಿಯವಾದ ಸ್ವರದಲ್ಲಿ ಹೇಳಬಹುದಾಗಿದೆ "ಪ್ರವಾದಿಯಾದ ಯೆಶಾಯನಿಗೆ ಬರೆಯಲು ಕರ್ತನು ಬಹಳ ಸಮಯದ ಹಿಂದೆಯೇ ಏನು ಹೇಳಿದ್ದಾನೆ." (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ನೋಡಿರಿ

ಪರ್ಯಾಯ ಭಾಷಾಂತರ: "ನೋಡಿರಿ" ಅಥವಾ "ಕೇಳಿರಿ" ಅಥವಾ "ನಾನು ನಿಮಗೆ ಹೇಳುತ್ತಿರುವ ಮಾತುಗಳನ್ನು ಗಮನವಿಟ್ಟು ಕೇಳಿರಿ."

ಕನ್ಯೆಯು ಗರ್ಭಿಣಿಯಾಗುವಳು ಮತ್ತು ಮಗನನ್ನು ಹೆರುವಳು

ಇದು ಯೆಶಾಯ ೭:೧೪ರ ನೇರವಾದ ಹೇಳಿಕೆಯಾಗಿದೆ.

Matthew 1:24

ಈ ಭಾಗವು ಯೇಸುವಿನ ಜನನದ ಘಟನೆಗಳ ಕುರಿತು ತಿಳಿಸುತ್ತದೆ.

ಆಜ್ಞಾಪಿಸಿದನು

ದೇವದೂತನು ಮರಿಯಳನ್ನು ಹೆಂಡತಿಯನ್ನಾಗಿ ತೆಗೆದುಕೊಳ್ಳಲು ಮತ್ತು ಮಗುವಿಗೆ ಯೇಸು ಎಂದು ಹೆಸರಿಡಲು ಹೇಳಿದನು (ವಚನಗಳು ೨೦

೨೧).

ಆಕೆಯನ್ನು ಅರಿಯಲಿಲ್ಲ

"ಆಕೆಯೊಂದಿಗೆ ಲೈಂಗಿಕ ಸಂಬಂಧವನ್ನು ಇಟ್ಟುಕೊಳ್ಳಲಿಲ್ಲ" (ಎಫುಮಿಸಮ್ ನೋಡಿರಿ)

ಮಗುವಿಗೆ ಯೇಸುವೆಂದು ಹೆಸರಿಟ್ಟನು

"ಯೋಸೇಫನು ತನ್ನ ಮಗನಿಗೆ ಯೇಸು ಎಂದು ಹೆಸರಿಟ್ಟನು"