2 1 ಮೊದಲು ನಂಗ ಮಹಿಸಾರಗಾಗಿ ದೈವಗ ವಿಜ್ಞಾಪನೆ, ಪ್ರಾರ್ಥನೆ, ಬಿನ್ನಹ ಇಂದೇ ಕೃತಜ್ಞತಾ ಸ್ತುತಿಗಳನ್ನು ಮಾಡಾಕಂದ ಕೇಳುತ್ತೀನಿ. 2 ನಿಂಗಾಗ್ ಸುಖ ಸಮಾಧಾನ ಉಂಟಾಗಿ ನಂಗ ಪೂರ್ತಿ ಭಕ್ತಿಯಿಂದ ಮೊರದಿಯಿಂದ ಕಲಕ್ಷೆಪ ಮಾಡದಂತೆ ಅರಸುಗಳಾಗಿ ಎಲ್ಲ ಅಧಿಕಾರಿಯಾಗಿ ವಿಜ್ಞಾಪನೆ ಮಾಡಕ್. 3 ಹಾಂಗೆ ಮಾಡದ್ ನಂಗ ರಕ್ಷಕನಾದ ದೈವನ ತಾನಾಗ್ ಮೆಚ್ಚಿ ಆಗಿ ಶುದ್ಧ ಮನಸಾಕ್ಷಾ ಆಗಿ ಇದ್ದೆ. 4 ಯೆಲ್ಲಾ ವಯಸ ರಕ್ಷಣೆ ಹೊಂದಿ ಸತ್ಯದ ಗ್ಯಾನಗ ಸರಕಡ್ ದೈವನ ಚಿತ್ತ ಆಗಿದೆ. 5 ಯನ್ ಗಂದಲೇ ದೈವ ಒಬ್ಬನೇ, ದೈವಗ ಮೈಸನಾಗ್ ಮದ್ಯತಗ್ ಒಬ್ಬನೇ, ಆವಾ ಮೈಸ ಆಗಿರ ಯೇಸುವೇ. 6 ಆವಾ ಎಲ್ಲರ ಬಿಡುಗಡೆ ಗಾಗಿ ತನ್ನೆ ಒಪ್ಪಿಸಿಕೊಟ್ಟು ಇದುವೇ ತಕ್ಕ ಸಮಾಲ್ ಹಳ ಸಾಕ್ಸಿ. 7 ಆ ಸಾಕ್ಸಿನೇ ಪ್ರಸಿದ್ದಿ ಪಡಿಸಗಾಗಿ ನಾ ಸಾರವ ಆಗಿ ಅಪೋಸ್ತಲನಾಗಿ ನಂಬಿಕೆ ಯಿಂದ ಸತ್ಯಯಿಂದ ಅನ್ಯಜನಾಂಗ್ ಕಲಸೋವಾಗಿ ನೇಮಿಸಿ ಇಟ್ಟನು, ನಾ ಹಾಳಾದ್ ಸುಳ್ಳಾಲ ಸತ್ಯ ಸತ್ಯವೇ. 8 ಅದರಿಂದ ಗಂಡಸರು ಯಲ್ಲಾ ಜಗಲ್ ಕೋಪ ಅನುಮಾನ ಇಲ್ಲದೆ ಶುದ್ದದ್ ಕೈ ಎತ್ತಿ ಪ್ರಾರ್ಥಿಸೋಕ್ಕೆ ಕೇಳ್ತೀನಿ. 9 ಅಂಗವೇ ಯಂಗಾರ್ ಮನಸ್ಥರಾಗಿ ಡಂಬ ಇಲ್ಲದವರಾಗಿ ಇದ್ ಮೊರಡಿಗ್ ತಕ್ಕ ಬಟ್ಟೆ ಹಾಕಕಂದು ಕೇಳುತ್ತೀನಿ. 10 ಅವರ ಜೆಡೆ, ಚಿನ್ನ, ಮುತ್ತು, ಬೆಲೆ ಇರಾಬಟ್ಟೆ ಮುಂತಾದ ಯಿಂದ ತನಗೆ ಸುಂಗರಿಸಿ ಹದೆ, ದೈವ ಭಕ್ತಿ ಅಂಸವರ್ ಯುಕ್ತವಾಗಿರುವ ಪ್ರಕಾರ ಒಳ್ಳೆ ಕಾರ್ಯಯಿಂದ ಮಾಡಲಿ. 11 ಯಂಗಾರ ಮೌನವಾಗಿದ್ದು ಯೆಲ್ಲಾ ಅಧೀನತೆಗೆ ಕಲೆತ.. 12 ಅಂದರೆ ಬೋಧನೆ ಹಾಳಾದಾಗಾಗಲಿ ಗಂಡಸು ಮೇಲೆ ಅಧಿಕಾರ ನಡಸದಾಗಲಿ ಎಂಗಾಗ ನಾ ಅಪ್ಪಣೇ ಕೊಡದಿಲ್ಲೆ. ಅವರ ಮೌನಗೀರಾಕ್. 13 ಯನಗಂದಳೇ ದೈವ ಮೊದಲ ಆದಾಮನೆ ಇಂದೇ ಹವ್ವಳನ್ನು ಉಂಟುಮಾಡಿನ. 14 ಇದಲ್ಲದೆ ಆದಾಮ ವಂಚನಾಗೆ ವಳಗ ಬದ್ದತ್ತಿಲ್ಲೆ, ಅವ್ವಲು ವಂಚನೆಗ ವಲಬದ್ದು ಅಪರಾದಿಯಾದ. 15 ಅಂದಲೇ ಯಂಗ ಮನಸ್ಥರಾಗಿ ನಂಬಿಕೆಲ್, ಪ್ರೀತೀಲ್, ಪರಿಶುದ್ದತೆಲ್ ನೆಲೆಗೊಂಡಿದಲೆ ಮಕ್ಕನೆ ಯಾರಾಗ ರಕ್ಷಣೆದ ಹೊಂದಿತ್ತಾರೆ.