ಅದ್ಯಾಯ 2

1 2 1 ಅನ್ನಾತೆಂಬಿ ಮಾರ್ಲೆ ನಂಗ ಸುಮ್ ಸುಮ್ಮದೇ ನಿಂಗ್ಲಚ್ಗು ವರುಲಯಿಂಗ್ರತ ನಿಂಗ್ಲುಕು ತಿಳ್ಜಿಕ್ರ . 2 ಪ್ರಕಾರ ನಂಗ್ಲುಕು ಪಿಲಿಪ್ಪಿ ಪಟ್ಟಣತ್ಗೋರು ಹಿಂಸೆ ಅವಮಾನ ಮುನ್ನಿ ಅನೇಕು ನಂಗ ನಂಗ್ಲ ದವ್ರ ಮೂಲಕ ಧೈರ್ಯತಿಂಡು ಸೇನ ವಿರೋದತ್ತೆಯ ಅನುಭವುಸ್ರಗಾಯಿ ನಿಂಗ್ಲುಕು ದವ್ರ ಸುವಾರ್ತೆಯತ್ತೆಯ ತಿಳ್ಸಿರೋಯಿಂಗ್ರದು ನಿಂಗ್ಲುಕು ಗೊತಿದೂ . 3 4 3 ಯಂತ್ಗುಯಿಂಡೆಕ್ಯ ನಂಗ್ಲ ಭೋದನೆಯು ಅಬದ್ದವಲ್ಲ ಅಶುದ್ದಅಲ್ಲ ,ಮೋಸಅಲ್ಲ ,ದವ್ರು ನಂಗ್ಲತ್ತೆಯ ಯೋಗ್ಯರಿಂಡು ಅನ್ಸಿ . 4 ಸುವಾರ್ತೆಯತ್ತೆಯ ನಂಗ್ಲ ವಶುತ್ಗು ಒಪ್ಪಿಸಿದು ಇಂಡು sಯೋಚುಸ್ರಗಾಯಿ ಮಂದಿಲತ್ತೆಯ ಮೆಚ್ಚಿಸ್ರುದುಯಿಂಗ್ದೆ ಹೃದಯತ್ತೆಯ ಪರಿಶೋದಿಸ್ರ ದವ್ರತ್ತೆಯೇ ಮೆಚ್ಚಿಸುರ್ದುಯಿಂಡು ವಸೇತರೋ. 5 6 5 ನಿಂಗ್ಲುಕು ತಿಳ್ಜಿಕ್ರ ಪ್ರಕಾರ ನಂಗ ಎಪೋದು ಮೊಗುಸ್ತುತಿ ಸೈರಗಾಯಿ ಕಂಗ್ತಾ ವರುಲ .ಮತ್ತೆ ಕುಡ್ಕಿರ್ಕಾಯಿ ವೇಷತ್ತೆಯ ಒಟ್ಗೊಂಡಗ್ಯಅಲ್ಲ .ಇತ್ಗು ದವ್ರೆ ಸಾಕ್ಷಿ . 6 ಇದಲ್ದೆ ನಂಗ ಕ್ರಿಸ್ತನ ಅಪೋಸ್ತಲರಯಿಕ್ರತಿಂಡು ನಂಗುಕು ಗೌರವತ್ತೆಯ ತರೂದುಯಿ೦ಡು ಸೋನ್ನುಬೇಕಯಿಂದೆಕೂ ಮನುಶ್ರು೦ಡು ವರ್ರ ಮಾನತೆಯ ನಂಗ್ಲಿಡಗೋಟು ಬೇರೆಲಿಂಡಗೋಟು ಹೊಂದ್ರುಕುಪೇಕ್ಷೆಸ್ರಗಲ್ಲ . 7 8 9 7 ಅಮ್ಮ ತಟ ಮಕ್ಕಿಲತ್ತೆಯ ವಲ್ಕಕೋ ಇಂಗ್ರುತರ ನಂಗ ನಿಂಗ್ಲ ಮದ್ಯತ್ಗೋರು ವಾತ್ಸಲ್ಯತಿಂಡು ನದ್ಡುಗೊಂಡ್ರೋ . 8 ನಿಂಗ ನಂಗ್ಲುಕು ಅತಿಪ್ರಿಯ ಅನಾ ಕಾರಣ ನಂಗ ನಿಂಗ್ಲೆಂಚ್ಲಿ ಮಮತೆಯುಲ್ಲಗಾಯಿ ದವ್ರ ಸುವಾರ್ತೆಯತ್ತೆಯ ಸೊಂಡ್ರುಕು ಅದ್ನೇಅಲ್ದೆ ನಿಂಗ್ಲುಕಾಯಿ ಜೀವತ್ತೆಯೇ ತರೂಕು ಸಂತೋಷಿಸ್ರಗಾಯಿರೋ . 9 ಅನ್ನಾ ತೆಂಬಿಮಾರ್ಲೆ ,ನಂಗ ನಿಂಗ್ಲೆಂಚ್ಲಿ ಎತ್ರ ಮೇನಿಯೂ ಭಾರಹೋಡ್ರುದಂಚುಯಿಂಡು ಪಗ್ಮರ್ಕು ನಾಮರ್ಕು ದುಡ್ಜು ಜೀವನ ಸೆ೦ದುಗ್ತ ದವ್ರ ಸುವಾರ್ತೆ ಯತ್ತೆಯ ನಿಂಗ್ಲುಕು ಸಾರಿರೋ ;ಆ ನಂಗ್ಲ ಕಷ್ಟವು ಪ್ರಯಾಸವು ನಿಂಗ್ಲ ನೆನ್ಪುಗೋರುಯಿಕ್ಯಅದ್ನೆ. 10 11 12 10 ನಮ್ಬ್ರಂಗನ ನಿಂಗ್ಲ ವಿಷಯತ್ಗೋರು ನಂಗ ಎದ್ನೋ ಶುದ್ದರಾಯಿಯೂ ನೀತಿವಂತರಾಯಿಯೂ ನಿರ್ದೋಸಿಗಳಾಯಿ ನದ್ಗೋ೦ಡುಯಿಂಗಿರ್ಕು ನಿಂಗ ಸಾಕ್ಷಿಗ್ಯ .ದವ್ರು ಸಾಕ್ಷಿ . 11 ಅವೂ ತಟ ಮಕ್ಕಿಲ್ಕಿ ಎನ್ಗೋ ಅನ್ಗೆ ನಂಗ ನಿಂಗ್ಲುಲಿ ಅದ್ದಿಕೂ ಬುದ್ದಿಸೋನ್ತ. 12 ಧೈರ್ಯಪಡುಸ್ತ ತಟ ರಾಜ್ಯ ಪ್ರಬಾವತ್ಗೊರು ಪಾಲುಗಾರರಾಗುರ್ಕು ಅಕಿರ ದವ್ರುಕು ಯೋಗ್ಯರಾಯಿ ನಿಂಗ ನಡುದುಗ್ರುದುಯಿಂಡು ಖಂಡಿತವಾಯಿ ಸೋನ್ತ ಏರೋಯಿಂಗ್ರತ್ಗು ನಿಂಗ್ಲುಕು ತಿಳ್ಜಿದು. 13 13 ಇನ್ಗಿಕ್ರಪೋದು ನಿಂಗ ದವ್ರ ವಾಕ್ಯತೆಯ ನಂಗ್ಲಿಂಡು ಕೋಟಪೋದು ಅತ್ತ ಮಂದಿಗ್ಯ ವಾಕ್ಯಯಿಂಡು ಅಣುಸ್ದೆ ದವ್ರ ವಾಕ್ಯಯಿಂಡೆ ತಿಳ್ಜು ಅಂಗಿಕರುಸ್ನಾತ್ಗಾಯಿ ನಂಗಂತೂ ಎಡೆಬಿಡದೆ ದವ್ರುಕು ಕೃತಜ್ಞತಾಸ್ತುತಿ ಸೈಯಾರೋ. ಅದು ಕಾರಣ್ಕೆ ದವ್ರ ವಾಕ್ಯವೇ ;ಅದು ನಮ್ಬ್ರಂಗನ ನಿಂಗ್ಲುಲಿ ಬಲವಾಯಿ ಪನಿ ನಡುಪ್ಗ್ಯಕು. 14 15 16 14 ಅಂಬೋ ಅನ್ನಾತೆಂಬಿಮಾರ್ಲೆ ,ನಿಂಗ ಯೂದಯತ್ಗೋರು ಕ್ರಿಸ್ತ ಯೇಸುಕೋರುಯಿಕ್ರ ದವ್ರ ಸಭೆಲತ್ತೆಯ ಅನುಸರ್ಸ್ರಗ್ಯ ಅಯಿರಂಗ .ಐಗ್ಯ ಯೆಹೂದ್ಯರಿಂಡು ಅನುಭವುಸ್ನ ಕಷ್ಟಲತ್ತೆಯ ನಿಂಗ ನಿಂಗ್ಲ ದೇಸ್ತಲಿಂಡು ಅನುಭವ್ಸಿರಂಗ . 15 ಆ ಯೆಹೂದ್ಯಗ್ಯ ಕರ್ತಅನಾ ಯೇಸುಅತ್ತೆಯ ಪ್ರವಾದಿಲ್ಲತ್ತೆಯ ಕೊಂಡ್ರುಸ್ನು ನಂಗ್ಲುನು ಗದ್ಯೋಡುಸ್ನು ;ಐಗ್ಯ ದವ್ರತ್ತೇಯ ಮೆಚ್ಚಿಸ್ರಗ್ಯಅಲ್ಲ .ಅದ್ದಿ ಮಂದಿಲ್ಕಿ ವಿರೋಧಿಗೈನೂ . 16 ಅನ್ಯಮಂದಿಲ್ಕಿ ರಕ್ಷಣೆಅಗ್ರು ತರ ಸುವಾರ್ತೆಯತ್ತೆಯ ಕೊಕ್ರ ನಂಗ್ಲುಕು ಅಡ್ಡಿ ಸೈಯಾಕ್ನು ;ಹೀನ್ಗು ತಂಗ್ಲ ಪಾಪಕೃತ್ಯಲ್ಯ ಅದ್ದಿ ಕಾಲುತ್ಗೊರು ಪರಿಪೂರ್ಣಸೈರೂಕು ಹೊಕ್ಕುನು ಅನೇಕೆ ಕೋಪ ಅಲ್ತುಮೇನಿ ಸಂಪೂರ್ಣವಾಯಿ ಆಗ್ತ ವಂಚು. 17 18 19 20 17 ಅನ್ನಾತೆಂಬಿಮಾರ್ಲೆ ,ನಂಗಂತೂ ಓಡ್ಮುಕೊರು ಮಾತ್ರ ನಿಂಗ್ಲತ್ತೆಯ ಅಳುದ್ನುನಾಲು ಉಟೇಕು ಹೃದಯತ್ಗೋರು ಅಗಲ್ದೆ ನಿಂಗ್ಲ ಮೊಗತ್ತೆಯ ಪಾಕುರ್ಕು ಅತ್ಯಾಶೆಯಿಂಡು ಸೇನ ಪ್ರಯತ್ನಸೇನ್ದಿರೋ . 18 ಯಂತ್ಗುಯಿಂಡೆಕ್ಯ ನಿಂಗ್ಲಚ್ಗು ವರೂಕೂ ನಂಗ್ಲುಕು ಮನ್ಸುಯಿಂಚು ;ಎನ್ಗೋ ಪೌಲಯಿಂಗ್ರ ನಾನು ಒಂಡುರಂಡ್ರಕ ವರ್ರಕ್ಕಿಂದೆ ;ಅನೇಕೆ ಸೈತಾನು ನಂಗ್ಲುಕು ಅಭ್ಯಂತರ ಸೆಂಚು . 19 ನಂಗ್ಲ ಕರ್ತಅನಾ ಯೇಸು ಪ್ರತ್ಯಕ್ಷ ಅಗ್ರಪೋದು ಅತ್ರ ಮುನ್ನಿ ನಂಗ್ಲ ಭರವಸವು ನಂಗ್ಲ ಸಂತೋಷ ನಂಗ ಹೋಗಳಿಗ್ರ ಜಯ ಮಾಲೆಯೂ ಎದೂ ?ನೀನೆ ಅಲ್ಯ . 20 ಕರನ್ಕೆ ನೀನೆ ನಂಗ್ಲ ಗೌರವವೂ ಸಂತೋಷ ಅಯೀರ.