Philippians 1

1 ಕ್ರಿಸ್ತ ಯೇಸುನ ದಾಸನಾಗಿರ ಪೌಲ ತಿಮೊಥಿಗ್ ಪಿಲಿಪ್ಪಲ್ ಕ್ರಿಸ್ತ ಯೇಸುಯಿಂದ ದೈವಜನಃ ಆಗಿರ ಯಲ್ಲಾರ್ಗ್ ಅಲ್ಲಿರ ಸಭಾದ್ಯಕ್ಷರ್ಗ್, 2 ಸಭಾಸೇವೆ ಮಾಡೋವರ್ಗು ಬರಿವದ್ಯಾನಂದಲೇ ನಿಂಗ ಅಪ್ಪನಾಗಿರ ದೈವಯಿಂದ ಕರ್ತನಾಗಿರ ಯೇಸು ಕ್ರಿಸ್ತಯಿಂದ ನಿಂಗಗ್ ಕೃಪೆ ಶಾಂತಿ ಇರಲಿ. 3 ನಾನ್ ನಿಂಗಾಗಿ ದೈವನೆ ಬೇಡೋಗಯಲ್ಲಾ ಸಮೆಲ್ 4 ಸಂತೋಷಯಿಂದವೇ ಬೇಡೋವೋನಾಗಿದೆನೆ ನಾನ್ ನಿಂಗನೆ ಗ್ಯಾನ ಮಾಡೊಗ ನಿಂಗ ಮೊದ್ಲಿಂದ. 5 ಇಂದ್ಗಂಟ ದೈವಸುದ್ದಿ ಹಾಳದ್ಲ್ ಸಹಾಯ ಮಾಡವರ್ ಆಗಿದೆವೆ. ನನ್ನ ದೈವಗ್ ಸ್ತೋತ್ರ ಮಾಡಿತಿನಿ. 6 ಈ ವೊಳ್ಳೆ ಕೆಲ್ಸನೆ ನಿಂಗಲ್ ಸುರುಮಾಡಿದವನ್ ಅದ್ನೆ ನೋಡ್ಸೋಡು ಯೇಸುಕ್ರಿಸ್ತು ಬರ ಜಿನವೊಳಗೆ ಉನ್ನತ ಮಾಡ್ತಿನಂದ್ ನನಗ್. 7 ನಂಬಿಕೆಇದ್ದ ನಿಂಗೆಲ್ಲರ್ ಸುದ್ದಿಲ್ ಅನ್ ಮಾದ್ರಿ ಈ ನ್ಯಾಯನೆ ನಾನ್ ಬೇಡಿಬದ್ರಗ ವೊಳ್ಳೆ ಸುದ್ದಿಲ್ ಮಾತ್ ಹೇಳಿ ನೋಡಗ ನಿಂಗೆಲ್ಲರ್ ನನ್ನ ವಂದಿಗೆ ದೈವ ಕೃಪಲ್ ಪಾಲಾಗಿದರೆಂದ್ ನಿಂಗನೆ ನನ್ನ ಹೃದಯಲ್ ಆಕಿದೆನೆ. 8 ಕ್ರಿಸ್ತಯೇಸುಗಿರ ಕನಿಕರ ನಿಂಗೆಲ್ಲರ್ಗಾಗಿ ಯೇಸು ಹಂಬಲಿಸುತ್ತಾನೆ ಇದ್ಗ್ ದೈವವೆ ನನ್ನ ಸಾಕ್ಷಿ, 9 ಯಿಂದ ನಾನ್ ದೈವನೆ ಬೇಡಿ ನಿಂಗ ಪ್ರೀತಿ ಹೆಚ್ಚಿ ಹೆಚ್ಚಿ ಬಾಳ ಬುದ್ದಿಯಿಂದ ಕೂಡಿ ವಳ್ಳೆ 10 ಕಾರ್ಯ ಯಾವದಂದ್ ಗ್ಯಾನಮಾಡಿ ಕ್ರಿಸ್ತು ಬರ ಜ್ಹಿನಲ್ ನಿಂಗ, 11 ಶುದ್ದರಾಗಿ ಯೇಸುಕ್ರಿಸ್ತಯಿಂದ ವಳ್ಳೆ ಫಲಯಿಂದ ತುಂಬಿರವನಾಗಿ ಕಂಡೋಡ್ ದೈವಗ್ ದೊಡ್ಡ ಸ್ತೋತ್ರ ಮಾಡಕಂದ್ ಬೇಡಿಕೊತ್ತಿನಿ. 12 ಜೊತೆಗಾರ ನನಗ್ ಆಗಿರದ್ ವಳ್ಳೆ ಸುದ್ದಿ ಹೇಳಲೇ ಸಹಾಯ ಆತೆದಂದ್ ನಿಂಗ ಗೊತ್ತುಮಾಡೋಕಂದ್ ಇಷ್ಟಪಡ್ತಿನಿ. 13 ಯಾನಂದಲೇ ನನ್ನ ಬೇಡಿನ ಕ್ರಿಸ್ತುಯಿಂದವೆ ಹಂದ್ ಅರಮನೆ ಉಳ್ದರವರ್ಗ್ ಬೈಲ್ ಆತ್. 14 ಇದಲ್ಲದೆ ಜೋತೆಗಾರ್ಲ್ ಬಾಳ ಜನ್ಹನೆ ಬೇಡಿ ದೈವಲ್ ನಂಬಿಕೆ ಇರವರಾಗಿ ದೈವ ಮಾತ್ನೆ ಅಂಜದೆ ಆಳಲೆ ಇನ್ ವಿಶೇಷ ವಳ್ಳೆ ದೈರ್ಯಹೊಂದಿದೆರೆ. 15 ಅರ್ದಾಳ್ ವತ್ತೆ ಕಿಚ್ ಪಟ್ ಬೇದ ಹುಂಟುಮಾಡಕಂಬ ಗ್ಯಾನಯಿಂದ ಕ್ರಿಸ್ತುನೆ ಗೊತ್ತುಮಾಡಿತೆರೆ 16 ಇವರಂತ್ ನಾನ್ ವಳ್ಳೆಸುದ್ದಿ ಪತಿ ಹಾಳಕಂದ್ ಇಲ್ಲಿ ಇರ್ತಿನಂದ್ ಗೊತ್ತುಮಾಡಿ ಪ್ರೀತಿಯಿಂದ ದೊಡ್ಡದಾಗಿ ಹೇಳಿತೆರೆ. 17 ಆ ಬೇರೆ ತರದವರ್ ನಾನ್ ಬೇಡಿ ಬ್ ದ್ರಗ ನನ್ನ ಸಂಗಡನೆ ಯತ್ತಕಂಡ್ ಗ್ಯಾನ ಮಾಡಿ ಕ್ರಿಸ್ತುನೆ ಯಥಾರ್ಥವಾಗಿ ಬೈಲ್ ತರದೆ ಕ್ಯಟ್ಟದ್ನೆ ಬೈಲ್ಗ್ ತರ್ತೆರೆ. 18 ಯನಂದಲ್ಯಾನ ಯಾವಮಾದ್ರಿ ಅಂದಲ್ಯಾನ ಕರಮಯಿಂದಾಗಲಿ ಸತ್ಯಯಿಂದಾಗಲಿ ಕ್ರಿಸ್ತುನೆ ದೊಡ್ದದಾಗಿರದ್ಗ್ ಸಂತೋಷಪಡ್ತೀನಿ ಮುಂದಕುನು ಸಂತೋಷಪಡ್ತಿನಿ. 19 ಯಾನ್ಗಂದಲೇ ನನಗ್ ಆಗಿರದ್ ನಿಂಗ ದೈವಗ್ ಮಾಡೋ ಪ್ರಾರ್ಥನೆಯಿಂದ ಕ್ರಿಸ್ತು ದಾರಾಳಾಗಿ ಕೊಡ್ತೆನೆ,ಆತ್ಮ ಸಹಾಯದಿಂದ ನನ್ನ ಸ್ವಂತ ಬುದ್ದಿಯಿಂದ ವಳ್ಳೆದಾತದೆಂದ್ ಗೊತ್ತು. 20 ಯಾನ್ಗಂದಲೇ ನಾನ್ ಯಾವ ವಿಷಯಲ್ ನಾಸಿಗೆ ಪಡದೆ ಯಾಗ್ಲ ಈಗನ್ ತುಂಬಾ ದೈರ್ಯದಿಂದ ಬದುಕಿದಲೇ ಸರಿ ಸತ್ತಲೆ ಸರಿ ನನ್ನ ಥಡಿಯಿಂದ ಕ್ರಿಸ್ತುಗ್ ಮಹಿಮೆ ಆಕಂದ್ ನನಗ್ ಬಾಳ ಆಸೆಯಿದ್ದ ಹಾಂಗೆವೆ ಆತೆದೆಂದ್ ನಂಬಿಕೆ ಇದ್ದೆ. 21 ನನಗಂತ್ ಬದುಕೊಂದದಲೇ ಕ್ರಿಸ್ತುವೆ ಸಾವದ್ ಲಾಭವೆ. 22 ಥಡಿಲ್ ಬದ್ಕಂದಲೇ ಕೆಲ್ಸ ಮಾಡಿ ಫಲ ಕಾಣಲೇ ನನಗ್ ವಳ್ಳೆದಾದದ್ ಈಗ ಇರಗ ನಾನ್ ಯಾವದ್ನೆ ಯತ್ತಕ್ ನನಗ್ ಗೊತ್ಕಾಣಿ. 23 ಈ ಎರಡು ಮದ್ಯೆ ಸಿಕ್ಕಿದಿನಿ ಇಲ್ಲಿಂದ ಹೋಗಿ ಕ್ರಿಸ್ತು ಜೊತೆಲಿರಕಂದ್ ನನ್ನ ಆಸೆ ಅದ್ ಬಾಳ ವಳ್ಳೆದ್. 24 ಅದ್ಲಿಂದ ನಾನ್ ಆತ್ಮದಲ್ಲಿ ವಾಸಮಾಡ್ಯೋಡಿನ ದ್ ನಿಮಗ್ ಬಹು ಅವಶ್ಯ. 25 ಅದ್ಲಿಂದ ನಿಂಗಗ್ ಕ್ರಿಸ್ತು ನಂಬಿಕೆಲ್ ಹೆಚ್ಚಿ ಆನಂದ ಹುಟ್ಟಿತ್ತೆದೆ ಅಂದ್ ನಾನ್ ಜೀವ್ನಯಿಂದ ಉಳ್ದು ನಿಂಗೆಲ್ಲ ತಣಲ್ ಇರ್ತಿನಂದ್ ಮನ್ಸಿಂದ ನಂಬಿದಿನಿ. 26 ಇಂತೆ ನಾನ್ ತಿರುಗಿ ನಿಂಗ ತಣಗ್ ಬರಲಿರ ಕ್ರಿಸ್ತು ಯೇಸುನ ಪತಿ ಸಂತೋಷ ಪಡೊಲೆ ನನ್ನಿಂದ ಬಾಳ ವಳ್ಳೆದ್ ಆತೆದ್. 27 ಯಾರ್ಗ್ಯು ಕ್ರಿಸ್ತು ಸುವಾರ್ತೆಗ್ ವಳ್ಳೆವರಾಗಿ ನಡ್ದೊಡ್ ಆಗ ನಾನ್ ಬಂದ್ ನಿಂಗನೆ ನೋಡಿದಲೆ ಸರಿ ದೊರಲಿದ್ದ್ ನಿಂಗ ಸುದ್ದಿನೇ ಕೇಳಿದಲೇ ಸರಿ ನಿಂಗ ನಿಂಗನೆ ಕುತ್ಯಗಾರ್ ಪತಿ ಅಂಜ್ಹದೆ ಒಂದೆ ಆತ್ಮಲ್ ಒಂದೆ ದ್ರುಡಲ್ ನಿಂದ್ ಸುವಾರ್ತೆಗ್ ಹಾಕಿದ ನಂಬಿಕೆಗಾಗಿ ಒಂದು ಮನ್ಸಿಂದ ಓರಾಡ್ ನಂದ್ ನಾನ್ ತಿಳ್ದ್ ಕೊತಿನಿ. 28 ನಿಂಗ ಹಿಂಗೆಯಿರದ್ ಕುತ್ಯುಗಾರ್ ನಾಶಗ್ ನಿಂಗ ರಕ್ಷಣೆಗ್ ದೈವಯಿಂದಾದದ್ ಮಾಡ್ ನ್. 29 ಯಾಗ್ಯಂದಲೇ ಕ್ರಿಸ್ತುನ ಮೇಲೆ ನಂಬಿಕೆ ಇಡದ್ ಅವಂಗಾಗಿ ಕಷ್ಟಪಡೋದು ನಿಂಗಗ್ ಸಿಕ್ಕಿತ್. 30 ಇಂತೆ ನಿಂಗ ನನ್ನ ತನಲ್ ಕಂಡದ್ ಯಿಂದ ಈಗ ನನ್ನ ತನಲ್ ಇರದ್ನೆ ಕೇಳೋಡು ಓರಾಟ ನಿಂಗಗಿದ್ದೆ.