ಅಧ್ಯಾಯ 5

1 ಸಿಂಹಾಸನ ಮೇಲೆ ಕುಳಿತರ ಅವನ ಬಳಕೈಲಿ ಒಂದ್ ಸುರುಳಿನೆ ಕಂಡ ಅದರ ಎರಡ ರಟ್ಟೆಲ ಬರತದೆ ಅದ್ ಏಳು ಮುದ್ರಯಿಂದ ಕೂಡಿತ್ತು. 2 ಇದಲ್ಲದೆ ದಪ್ಪನಾಗಿರ ಒಬ್ಬ ದೈವ ದೂತರ್ ಈ ಸುರುಳಿನೆ ಬಿಚ್ಚಲೆ ಇದರ ಮುದ್ರೆನೆ ಉಹ್ಯಲೇ ಯವುನ ಯೋಗ್ಯನ್ ಅಂದ್ ದೊಡ್ಡ ಸದ್ದುಯಿಂದ ಹಳದ್ನೆ ನೋಡಿನಿ.ಬಿಚ್ಚುವುದಕ್ಕೂ ಇದರ ಮುದ್ರೆಗಳನ್ನು ಒಡೆಯುವುದಕ್ಕೂ ಯಾವನು ಯೋಗ್ಯನು 3 ಆ ಸುರಿಳಿನೆ ಬಿಚ್ಚಿದಲೇ ಅದನೋ ಒಳಗೆ ನೋಡಲೇ ಸ್ವರ್ಗಲ್ ಆಗಲಿ, ಭೂಮಿಲೆ ಅಗಲಿ ಕೆಳಗೆ ಅಗಲಿ ಯಾವದಕ್ಕೂ ಶಕ್ತಿ ಇತ್ತಲ್ಲೇ.... 4 ಆಗ ಸುರುಳಿನೆ ಬಿಚ್ಚಲೆ ಅಗಲಿ ಆದಲ ನೋಡಲೇ ಅಗಲಿ ಯೋಗ್ಯನಾದವ ಒಬ್ಬನು ಸಿಕ್ಕುತ್ತಿಲ್ಲ ಅದಗತ ನಾ ಜಾಸ್ತಿ ಆಳಾಗ ದೊಡ್ಡವನಲ್ ಒಬ್ಬ ನನ್ನಗ . 5 ಅಳ ಬಡ ಆಗೋ ಯುದಾ ಜಾತಿಲ್ ಹುಟ್ಟಿದಾ ಸಿಂಹ ದವೀದನೆ [ಅಂಕುರದವ] ಆಗಿರವ ನೆಲ್ತೇನೆ ಆವಾ ಆ ಸುರಳಿನೆ ಅದರ ಯೋಳು ಮುದ್ರೆನೆ ಬಿಚ್ಚಿನ ಅಂದು ಹೇಳಿನ. 6 ಸಿಂಹಾಸನಲ್ ನಾಲ್ ಜೀವಿ ಇದ್ದ ಜಾಗಲ್ ದೊಡ್ಡವರ ಇದ್ದ ಜಾಗಗ್ ಮಧ್ಯಲ್ ಒಂದು ಕುರಿ ಎತ್ತೊಡುವಾದಾಗ ಅದನ್ನೇ ನೋಡಿವಿ ಅದಾಗ್ ಏಳು ಕೊಂಬು ಯೇಳ್ ಕಣ್ಣು ಇತ್ತು . ಆದ ಯನಂದಲೇ ಭೂಮಿ ಮೇಲೆಲ್ಲಾ ಕಳಿಸಿರಾ ದೈವ ಏಳು ಆತ್ಮ. 7 ಇವನ ಮುಂದಕ್ ಒಂದು ಸಿಂಹಾಸನ ಮೇಲೆ ಕುಳಿತಾವನ್ ತನ್ನ ಬಲಕೈ ವಳಗಿಂದ ಆ ಸುರಿಳಿನೆ ಎತ್ಯೋಡು 8 ಎತ್ತಿ ದಾಗ ಆ ನಾಕ್ ಜೀವಿ ಇಪ್ಪತ್ತು ನಾಕ್ ಮಂದಿ ದೊಡ್ಡವರು ಬಲಿ ಆದಂವನ ಕಾಲಿಗೆ ಬಿದ್ದರು ದೊಡ್ಡವರು ಕೈಲಿ ಕೊಳಲು ದೈವ ಜನರ ಪ್ರಾರ್ಥನೆ ಅಂಬ ದೂಪದಿಂದ ತುಂಬಿದ ಚಿನ್ನದ ದೂಪದಾರತಿ ಇತ್ತು. 9 ಅವರ ವಸ ಪದನನ ಹಾಳಾಗಾ ನೀ ಸುರುಳಿನೆಎತ್ತಿ ಕೊಂಡು ಅದರ ಮುದ್ರೆನೆ ಊಹಿವಲೇ ಯೋಗ್ಯನೇ ನೀ ಬಲಿಕೊಂಡ ಅವ ಆಗಿ ನಿನ್ನ ರಕ್ತ ಯಿಂದ ಯಲ್ಲ ಜಾತಿ ,ಭಾಷೆ ,ಪ್ರಜೆ ,ಜನಯಿಂದ ಮನುಷ್ಯರನೆ ದೈವಗಾಗಿ ಎತ್ತೊವಾಣಿ ಅವರನೇ ನಂಗ ದೈವಗಾಗಿ ರಾಜ್ಯವನ್ನಾಗಿಯೂ, 10 ಪೂಜಾರಿ ಆಗಿ ಮಾಡದೇ ಅವರ ಭೂಮಿ ಮೇಲೆ ಅಳವರ ಅಂದು ಹೇಳಿದರು. 11 ಇದು ಅಲ್ಲದೆ ಸಿಂಹಾಸನ ಜೀವಿ ದೊಡ್ಡವರ ಇವರ ಸುತ್ತ ಜಾಸ್ತಿ ಮಂದಿ ದೈವದೂತರನೆನೋಡಿವಿ. ಅವರ ಸಂಖ್ಯೆಕೊಟ್ಯನು ಕೋಟಿ ಆಗಿಲ ಲಕ್ಷೋಪ ಲಕ್ಷವಾಗಿ ಇತ್ತು. 12 ಅವರ ಸದ್ದು ನನಗ ಕೇಳಿಸಿತು ಅವರದೊಡ್ಡ ಸದ್ದುಯಿಂದ ವಧಿತನಾದ ಕುರಿಆದವ ಬಲ , ಐಶ್ವರ್ಯ, ಗ್ಯಾನ ಶಕ್ತಿ, ಮಾನ, ಪ್ರಭಾವ, ಸ್ತೋತ್ರನೆ ವಂದನೆ ಯೋಗ್ಯ ಅಂದು ಹೇಳಿದರು 13 ಇದಲ್ಲದೆ ಮೊದಲು ಭುಮಿಯ ಮೇಲೆ ಭೂಮಿಯ ಕೆಳಗೆ ಸಮುದ್ರ ಮೇಲೆ ಇರಾ ಯಲ್ಲ ಸೃಷ್ಟಿ ಅಂದಲೇ ಭೂಮಿ ಮೋಡ ಸಮುದ್ರ ವಳಗೆ ಇರದೆಲ್ಲ ಸಿಂಹಾಸನ ಸೀಸನಿಗೂ ಬಲಿ ಆದ ಕುರಿಆದಂವನಾಗ್ ಸ್ತೋತ್ರ , ಮಾನ,ಪ್ರಭಾವ,ಅಧಿಪತ್ಯಯಾವಾಗಲು ಇರಲಿ ಅಂದು ಹೇಳಿದನೆ ಕೇಳಿನಿ. 14 ಆಗ ನಾಕು ಜೀವಿ ಅಮೆನ್ ಅಂತ ಇಂದೇ ದೊಡ್ಡವರ ಅಡ್ಡಬುದ್ದು ನಮಸ್ಕಾರ ಮಾಡಿದರು.