2 1 ಅದ್ನಿಕಿಂತ ಮದಲು ಮನುಸಂಗಳಿಕೆಲ್ಲಾರಿಕೂ ದೌರ್ರಕ ವಿಜ್ಞಾಪನೆಗಳತ್ತ ಪ್ರಾರ್ಥನೆಗಳತ್ತ ಮನವಿಗಳತ್ತ ಕೃತಜ್ಞತಾಸ್ತುತಿಗಳತ್ತ ಸೇಯಬೇಕಂಡ್ ಭೋದನೆ ಸೇಯಾರೆ. 2 ನಂಗಳಿಕಿ ಸುಖಸಮಾಧಾನ ಉಂಟಾಯಿ ನಂಗ ಪೂರ್ಣ ಭಕ್ತಿಯಿಂಡ ಗೌರವ೦ಡ ಕಾಲಕ್ಷೇಪ ಸೇಯಬೇಕಂಡ ಅರಸುಗಳಿಕೋಸ್ಕರ ಅದ್ನಿ ಅಧಿಕಾರಿಗಳಿಕಿ ವಿಜ್ಞಾಪನೆಗಳತ್ತ ಸೇಯಬೇಕ್. 3 ಅನಾಗ್ ಸೇಯರಾದ್ ನಂಗಳಟಾ ರಕ್ಷಕ ಆಯಿಕ್ರಾ ದೌರ್ರ ಸನ್ನಿದಿತಾಳಿ ಮೆಚ್ಚಿಕೆಯಾಗಟ ಯೋಗ್ಯವಾಗಟ. 4 ಅದ್ನಿ ಮನುಸ್ರು ರಕ್ಷಣೆಯತ್ತ ಹೊಂದಿ ಸತ್ಯಟಾ ಜ್ಞಾನತ್ಕ್ ಸೇರ್ಬೇಕ್ ಅಂಗ್ರಾ ಆಂವನಟಾ ಚಿತ್ತವಾಯಿದ್. 5 ಎಂತಗ್ ಅಂಡೆಕೆ ದೌರ್ರು ಒಂಡೇ ವರ್ತಿ; ದೌರ್ರಕೂ ಮನಸಂಗಳಿಕೂ ಮದ್ಯಸ್ಥನು ಒಂಡೇ ವರ್ತಿ; ಆಂವು ಮನುಸು ಆಯಿಕ್ರಾ ಕ್ರಿಸ್ತ ಯೇಸುವೇ; 6 . ಆಂವು ಅದ್ನಿ ವಿಮೊಚನಾರ್ಥವಾಯಿ ತನಕ ಒಪ್ಪಿಸಿ ವುಟ್ಟು. 7 ಇದೇ ತಕ್ಕ ಸಮಯತಾಳಿ ಸೊನ್ನಬೇಕಾದ ಸಾಕ್ಷಿ. ಆ ಸಾಕ್ಷಿಯತ್ತ ಪ್ರಸಿದ್ದಪಡಸರ್ಕ ನಾನು ಸಾರುವಂವ ಆಯಿ ಅಪೋಸ್ತಲೂ ಆಯಿ ನಂಬಿಕೆಯಿಂಡ ಸತ್ಯಂಡ ಅನ್ಯ ಮಂದಿಕಿ ಭೋದನೆ ಸೇಯಿರಾ೦ವ್ ಆಯಿ ನೆಮಿಸೀದ್ನು. ನಾನು ಇಂಥ೦ವು ಅಂಗ್ರಾದ್ ಸುಳ್ಳಲ್ಲ, ಸತ್ಯವೇ. 8 ಇನಾಗ್ ಇಕ್ಕಬೇಕನಕೆ ಪುರುಷಂಗ ಅದ್ದಿ ಸ್ಥಳತಾಳಿ ಕೊಪತ್ತೂ ವಾಗ್ವಾದತ್ತೂ ಇಲ್ಲದಂಗಳಾಗಿ ಭಕ್ತಿಪೂರ್ವಕ ಆಯಟ ಕೈಗಳತ್ತ ಎತ್ತ್ಯಟ್ ಪ್ರಾರ್ಥನೆ ಸೇಯಬೇಕಂಡ್ ಅಪೇಕ್ಷೆ ಸೇಯಾರೆ. 9 ಅನಾಗೆ ಪಂಬ್ಳಿಯಂಗ ಮಾನಸ್ಥೆಯರಾಗಿಯೂ ಡ೦ಬ ಇಲ್ದಂಗಳ ತಿರಗ್ ಇಂದು ಮರ್ಯಾದೆಕಿ ತಕ್ಕ ಬಟ್ಗ್ಯಾ ಒಟ್ಗೋಬೇಕಂಡ ಅಪೇಕ್ಷೆ ಸೇಯಾರೆ. 10 ಅಂಗಳು ಜಡೆ ಚಿನ್ನ ಮುತ್ತು ಬೆಲೆ ಇಕ್ರಾ ವಸ್ತ್ರ ಮುಂತಾದವುಗಳಂಡ ತಮ್ಮನ್ನು ಅಲಂಕಾರ ಸೇಯದೆ ದೌರಟಾ ಭಕ್ತ ಅನ್ಪಿಚ್ಗ್ರಾ ಪಂಬ್ಳಿಕಿ ಯುಕ್ತ ಆಗಿಕ್ರಾ ಪ್ರಕಾರ ಸತ್ಕ್ರಿಯೇಗಳಿಂಡ ಅಲಂಕಾರ ಸೆಂದ್ಗೊಬೆಕ. 11 ಪಂಬ್ಳಿಯಂಗ ಮೌನ ಆಗಿಂದು ಪೂರ್ನವಿದೆಯ ಆಯಿ ಉಪದೇಶತ್ತ ಕೋಕಬೇಕ್. 12 ಉಪದೇಶ ಸೇಯರ್ಕ್ ಆಂಬ್ಳ೦ಗಳ ಮೇನೆ ಅಧಿಕಾರ ನಡಿಸರ್ಕ್ ಪಂಬ್ಳಿಕಿ ನಾನು ಅಪ್ಪಣೆ ಕುಡ್ಕಮಾಟೆ; ಅಂಗ ಮೌನ ಆಗಿರ್ಬೇಕ್. 13 . ಮದಲು ನಿರ್ಮಿತ ಆಗಿಕ್ರಾಂವು ಆದಾಮ ಅಲ್ಲವೆ, ಆಮೇನೆ ಹವ್ವಳು; 14 ಈದ್ ಅಲ್ಲದೆ ವಂಚನೆಕಿ ವುಳಕ ಬುಗಲಿಲ್ಲ, ಪಂಬ್ಳಿಯು ವಂಚನೆಯತ್ತ ವುಳಕ ಬುಗ್ದ್ ಅಪರಾಧಿ ಆಸು. 15 ಆನೆಕ್ಯೂ ಪಂಬ್ಳ೦ಗ ಮಾನಸ್ಥೆ ಆಯಟ ನಂಬಿಕೆತಾಳಿಯೂ ಪ್ರೀತಿಯಾಳ್ಯೂ ನೆಲೆಗೊಂಡಿರ ಸಲವಾಗಿ ಮಕ್ಲ್ಯತ್ತಾ ಹೆರರ್ಕ್ ರಕ್ಷಣೆ ಹೊಂದಾದ್.