Other

ಅಂಗಳ, ಅಂಗಳಗಳು, ಅಂಗಳದ ಆವರಣ, ಅಂಗಳದ ಆವರಣಗಳು

# ಪದದ ಅರ್ಥವಿವರಣೆ:

“ಅಂಗಳ” ಮತ್ತು “ಅಂಗಳದ ಆವರಣ” ಎನ್ನುವ ಪದಗಳು ಸುತ್ತಲು ಗೋಡೆಗಳಿದ್ದು ಅವುಗಳ ಮೇಲೆ ಮೇಲ್ಛಾವಣಿಯಿಲ್ಲದೆ ಖಾಳಿ ಸ್ಥಳವಿರುವ ಜಾಗವನ್ನು ಅಥವಾ ಸ್ಥಳವನ್ನು ಸೂಚಿಸುತ್ತವೆ. “ಅಂಗಳ” ಎನ್ನುವ ಪದವೂ ನ್ಯಾಯಾಧೀಶರು ಕಾನೂನುಬದ್ಧವಾದ ಮತ್ತು ಅಪರಾಧಕ್ಕೆ ಸಂಬಂಧವಾದ ವಿಷಯಗಳನ್ನು ನಿರ್ಣಯಿಸುವ ಸ್ಥಳವನ್ನು ಸೂಚಿಸುತ್ತದೆ.

  • ಗುಡಾರದ ಸುತ್ತಲು ಅಂಗಳದ ಆವರಣವು ಇರುತ್ತದೆ, ಇದು ತುಂಬಾ ದಪ್ಪದಾಗಿರುವ ಬಟ್ಟೆಗಳ ತೆರೆಗಳಿಂದ ಮಾಡಲ್ಪಟ್ಟ ಗೋಡೆಗಳಿಂದ ಮುಚ್ಚಲ್ಪಟ್ಟಿರುತ್ತದೆ.
  • ದೇವಾಲಯ ಸಂಕೀರ್ಣವು ಮೂರು ಆವರಣಗಳನ್ನು ಹೊಂದಿರುತ್ತದೆ: ಒಂದು ಯಾಜಕರಿಗೆ, ಮತ್ತೊಂದು ಯೆಹೂದ್ಯರಿಗೆ ಮತ್ತು ಇನ್ನೊಂದು ಯೆಹೂದ್ಯ ಸ್ತ್ರೀಯರಿಗೆ.
  • ಈ ಎಲ್ಲಾ ಒಳ ಅಂಗಳದ ಆವರಣಗಳು ಅತೀ ಚಿಕ್ಕ ಕಲ್ಲುಗಳಿಂದ ಕಟ್ಟಿರುತ್ತಾರೆ, ಇವು ಆರಾಧನೆ ಮಾಡಿಕೊಳ್ಳುವುದಕ್ಕೆ ಅನ್ಯರಿಗೆ ಅನುಮತಿ ಕೊಟ್ಟ ಹೊರ ಅಂಗಳದ ಆವರಣದಿಂದ ಬೇರ್ಪಡಿಸಲಾಗಿರುತ್ತವೆ.
  • ಮನೆಯ ಅಂಗಳದ ಆವರಣವು ಮನೆಯು ಮಧ್ಯೆದಲ್ಲಿದ್ದು ಸುತ್ತ ಗೋಡೆಗಳಿರುವ ಬಹಿರಂಗ ಸ್ಥಳವಾಗಿರುತ್ತದೆ.
  • “ಅರಸನ ಆವರಣ” ಎನ್ನುವ ಮಾತು ಆತನ ಅರಮನೆಗೆ ಅಥವಾ ತನ್ನ ಅರಮನೆಯಲ್ಲಿ ಆತನು ತೀರ್ಪುಗಳನ್ನು ಮಾಡುವ ಸ್ಥಳವನ್ನು ಸೂಚಿಸಬಹುದು.
  • “ಯೆಹೋವನ ಆವರಣಗಳು” ಎನ್ನುವ ಮಾತು ಯೆಹೋವನು ನಿವಾಸ ಮಾಡುವ ಸ್ಥಳ ಅಥವಾ ಯೆಹೋವನನ್ನು ಆರಾಧಿಸುವುದಕ್ಕೆ ಜನರು ಹೋಗುವ ಸ್ಥಳ ಎಂದು ಸೂಚಿಸುವ ಅಲಂಕಾರಿಕವಾದ ಮಾತಾಗಿರುತ್ತದೆ.

# ಅನುವಾದ ಸಲಹೆಗಳು:

  • “ಅಂಗಳದ ಆವರಣ” ಎನ್ನುವ ಪದವನ್ನೂ “ಬಹಿರಂಗ ಸ್ಥಳ” ಅಥವಾ “ಸುತ್ತಲು ಗೋಡೆಗಳಿರುವ ಸ್ಥಳ” ಅಥವಾ “ದೇವಲಾಯದ ಆವರಣ” ಅಥವಾ “ದೇವಾಲಯದ ಸುತ್ತಳತೆ” ಎಂದೂ ಅನುವಾದ ಮಾಡಬಹುದು.
  • “ದೇವಾಲಯ” ಎನ್ನುವ ಪದವನ್ನು ಕೆಲವೊಂದುಬಾರಿ “ದೇವಾಲಯ ಆವರಣಗಳು” ಅಥವಾ “ದೇವಾಲಯದ ಸಂಕೀರ್ಣ” ಎಂದು ಹೇಳಬೇಕಾದ ಅವಶ್ಯಕತೆಯಿರುತ್ತದೆ. ಇದರಿಂದ ಅಂಗಳದ ಆವರಣಗಳು ದೇವಾಲಯದ ಭವನವನ್ನು ಸೂಚಿಸದೆ ಯಾವುದನ್ನು ಸೂಚಿಸುತ್ತವೋ ಎನ್ನುವುದು ತುಂಬಾ ಸ್ಪಷ್ಟವಾಗಿ ಹೇಳಲಾಗುತ್ತದೆ.
  • “ಯೆಹೊವಾ ಆವರಣಗಳು” ಎನ್ನುವ ಮಾತಿಗೆ “ಯೆಹೋವನು ನಿವಾಸವಾಗುವ ಸ್ಥಳ” ಅಥವಾ “ಯೆಹೋವಾನನ್ನು ಆರಾಧಿಸುವ ಸ್ಥಳ” ಎಂದೂ ಅನುವಾದ ಮಾಡಬಹುದು.
  • ಅರಸನ ಆವರಣ ಎಂದು ಉಪಯೋಗಿಸಲ್ಪಟ್ಟ ಪದವು ಯೆಹೋವನ ಆವರಣ ಎಂದು ಸೂಚಿಸುವುದಕ್ಕೆ ಕೂಡ ಉಪಯೋಗಿಸಲ್ಪಟ್ಟಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಅನ್ಯನು, ನ್ಯಾಯಾಧೀಶರು, ಅರಸ, ಗುಡಾರ, ದೇವಾಲಯ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1004, H1508, H2691, H5835, H6503, H7339, H8651, G833, G933, G2681, G4259

ಅಚ್ಚು, ಅಚ್ಚುಗಳನ್ನು, ಅಚ್ಚು ಹಾಕಲಾಗಿದೆ, ಅಚ್ಚು ಹಾಕುವುದು, ಅಚ್ಚು ಹಾಕುವವನು, ಅಚ್ಚಾಗಿ

# ಪದದ ಅರ್ಥವಿವರಣೆ:

ಅಚ್ಚು ಎನ್ನುವುದು ಬಂಗಾರ, ಬೆಳ್ಳಿ, ಅಥವಾ ಇತರ ಲೋಹಗಳನ್ನು ಕರಗಿಸಿ ವಸ್ತುಗಳನ್ನು ರೂಪಿಸುವುದಕ್ಕೆ ಉಪಯೋಗಿಸುವ ಮಣ್ಣು, ಲೋಹ ಅಥವಾ ಕಟ್ಟಿಗೆ ತುಂಡುಗಳಿಂದ ಮಾಡಿದ ಅಚ್ಚಾಗಿರುತ್ತದೆ ಮತ್ತು ಇದರಿಂದಲೇ ಆಕಾರಗಳನ್ನು ತಯಾರಿಸುತ್ತಾರೆ.

  • ಆಭರಣಗಳನ್ನು, ಪಾತ್ರೆಗಳನ್ನು ಮತ್ತು ತಿನ್ನುವುದಕ್ಕೆ ಉಪಯೋಗಿಸುವ ಬಾಂಡ್ಲಿ ಸಾಮಾನುಗಳನ್ನು ತಯಾರಿಸುವುದಕ್ಕೆ ಅಚ್ಚುಗಳನ್ನು ಉಪಯೋಗಿಸಲಾಗುತ್ತದೆ.
  • ಸತ್ಯವೇದದಲ್ಲಿ ಅಚ್ಚುಗಳನ್ನು ವಿಗ್ರಹಗಳಾಗಿ ಉಪಯೋಗಿಸುವುದಕ್ಕೆ ಆಕಾರ ಪ್ರತಿಮೆಗಳೊಂದಿಗಿರುವ ಸಂಬಂಧದಲ್ಲಿ ಮುಖ್ಯವಾಗಿ ದಾಖಲಿಸಲಾಗಿರುತ್ತದೆ.
  • ಲೋಹಗಳನ್ನು ತುಂಬಾ ಹೆಚ್ಚಿನ ತಾಪಮಾನದಿಂದ ಕರಗಿಸಬೇಕಾಗಿರುತ್ತದೆ, ಇದರಿಂದ ಅವರು ಆ ದ್ರವವನ್ನು ಅಚ್ಚುನೊಳಗೆ ಸುರಿಸಬಹುದು.
  • ಯಾವುದಾದರೊಂದನ್ನು ಅಚ್ಚು ಮಾಡಬೇಕೆಂದರೆ ಒಂದು ನಿರ್ದಿಷ್ಟವಾದ ಆಕಾರವನ್ನು ರೂಪಿಸಲು ಕೈಗಳನ್ನು ಅಥವಾ ಆಚ್ಚುಗಳನ್ನು ಉಪಯೋಗಿಸುವುದರ ಮೂಲಕ ಒಂದು ನಿರ್ದಿಷ್ಟವಾದ ಆಕಾರದೊಳಗೆ ಅಥವಾ ರೂಪದೊಳಗೆ ಒಂದು ವಸ್ತುವನ್ನು ರೂಪಿಸುವುದು ಎಂದರ್ಥ.

# ಅನುವಾದ ಸಲಹೆಗಳನ್ನು:

  • ಈ ಪದವನ್ನು “ರೂಪಿಸು” ಅಥವಾ “ಆಕಾರ ಮಾಡು” ಅಥವಾ “ಮಾಡುವುದು” ಎಂದೂ ಅನುವಾದ ಮಾಡಬಹುದು.
  • “ಅಚ್ಚು ಮಾಡಲಾಗಿದೆ” ಎನ್ನುವ ಮಾತನ್ನು “ಆಕಾರವನ್ನು ತಯಾರಿಸಲಾಗಿದೆ” ಅಥವಾ “ರೂಪಿಸಲಾಗಿದೆ” ಎಂದೂ ಅನುವಾದ ಮಾಡಬಹುದು.
  • “ಅಚ್ಚು” ಎನ್ನುವ ವಸ್ತುವನ್ನು “ಆಕಾರವನ್ನು ಮಾಡುವ ಪಾತ್ರೆ” ಅಥವಾ “ಕೆತ್ತಲ್ಪಟ್ಟ ಪಾತ್ರೆ” ಎನ್ನುವ ಅರ್ಥಗಳು ಬರುವ ಮಾತಿನೊಂದಿಗೆ ಅಥವಾ ಪದದೊಂದಿಗೆ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಸುಳ್ಳು ದೇವರು, ಬಂಗಾರ, ಸುಳ್ಳು ದೇವರು, ಬೆಳ್ಳಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H4541, H4165, G4110, G4111

ಅಂಜೂರದ ಹಣ್ಣು, ಅಂಜೂರದ ಹಣ್ಣುಗಳು

# ಪದದ ಅರ್ಥವಿವರಣೆ

ಅಂಜೂರದ ಹಣ್ಣು ಎಂದರೆ ಮರಗಳ ಮೇಲೆ ಬೆಳೆಯುವ ಸಣ್ಣ ಸಿಹಿ ಮತ್ತು ಮೃಧುವಾದ ಹಣ್ಣು. ಈ ಹಣ್ಣು ಹಣ್ಣಾದಾಗ ವಿಭಿನ್ನ ಬಣ್ಣಗಳನ್ನು ಹೊಂದಿರುತ್ತದೆ ಅದರಲ್ಲಿ ಕಂದು, ಹಳದಿ ಅಥವಾ ನೇರಳೆ ಬಣ್ಣಗಳು ಇರಬಹುದು.

  • ಅಂಜೂರದ ಮರಗಳು 6 ಮೀಟರ್ಗಳ ಎತ್ತರ ಬೆಳೆಯಬಹುದು ಮತ್ತು ಅದರ ದೊಡ್ಡ ಎಲೆಗಳು ತಂಪಾದ ನೆರಳುಕೊಡುತ್ತದೆ. ಈ ಹಣ್ಣು ಸುಮಾರು 3-5 ಸೆಂಟಿಮೀಟರ್ ಉದ್ದವಿರುತ್ತದೆ.
  • ಆದಾಮ ಮತ್ತು ಹವ್ವಳು ಪಾಪ ಮಾಡಿದ ಮೇಲೆ ಈ ಅಂಜೂರದ ಎಲೆಗಳನ್ನು ಒಲಿದು ಉಟ್ಟುಕೊಂಡರು.
  • ಅಂಜೂರದ ಹಣ್ಣನ್ನು ಕಚ್ಚಿ ತಿನ್ನಬಹುದು, ಬೇಯಿಸಿ ತಿನ್ನಬಹುದು ಅಥವಾ ಒಣಗಿಸಿ ತಿನ್ನಬಹುದು. ಜನರು ಅದನ್ನು ಸಣ್ಣ ಸಣ್ಣ ತುಂಡುಗಳನ್ನು ಮಾಡಿ ಕೇಕ್ ಗಳಾಗಿ ಒತ್ತಿ ಅವುಗಳನ್ನು ಬೇಕಾದಾಗ ತಿನ್ನಲು ಎತ್ತಿಡುತ್ತಾರೆ.
  • ಸತ್ಯವೇದದ ಕಾಲದಲ್ಲಿ, ಅಂಜೂರದ ಹಣ್ಣುಗಳು ಆಹಾರ ಮತ್ತು ಆದಾಯಕ್ಕೆ ಮೂಲ ವಸ್ತುವಾಗಿತ್ತು.
  • ಫಲಿಸಿದ ಅಂಜೂರದ ಮರಗಳನ್ನು ಕುರಿತಾಗಿ ಸತ್ಯವೇದದಲ್ಲಿ ಆಗಾಗ ಹೇಳಲ್ಪಟ್ಟಿದೆ ಇದು ಅಭಿವೃದ್ದಿಯ ಚಿಹ್ನೆಯಾಗಿತ್ತು.
  • ಆತ್ಮಿಯ ಸತ್ಯಗಳನ್ನು ತನ್ನ ಶಿಷ್ಯರಿಗೆ ಬೋಧಿಸಲು ಯೇಸು ಹಲವಾರು ಬಾರಿ ಅಂಜೂರದ ಮರಗಳ ದೃಷ್ಟಾಂತವನ್ನು ಹೇಳಿದನು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1061, H1690, H6291, H8384, G3653, G4808, G4810

ಅದ್ಭುತ, ವಿಸ್ಮಯ, ಆಶ್ಚರ್ಯ, ಮಹಾದ್ಭುತ, ಮಹಾದ್ಭುತವಾದದ್ದು, ಅಚ್ಚರಿ, ಅಚ್ಚರಿಗಳು

# ಪದದ ಅರ್ಥವಿವರಣೆ:

ಈ ಎಲ್ಲಾ ಪದಗಳು ಅತೀ ಆಶ್ಚರ್ಯವಾಗುವುದನ್ನು ಸೂಚಿಸುತ್ತವೆ, ಯಾಕಂದರೆ ನಡೆದ ಸಂಘಟನೆಗಳು ಅತೀ ಅಸಾಧಾರಣವಾದ ಕಾರ್ಯಗಳಾಗಿರುತ್ತವೆ.

  • ಈ ಎಲ್ಲಾ ಪದಗಳಲ್ಲಿ ಕೆಲವು ಪದಗಳು “ಬೆರಗಾಗಿ ನಿಲ್ಲುವುದು” ಅಥವಾ “ಮೈಮರೆತು ನಿಶ್ಚಲವಾಗಿ ನಿಲ್ಲುವುದು” ಎನ್ನುವ ಅರ್ಥವನ್ನು ತೋರಿಸುವ ಗ್ರೀಕ್ ಭಾವ ವ್ಯಕ್ತೀಕರಣದ ಅನುವಾದಗಳಾಗಿರುತ್ತವೆ. ಈ ಎಲ್ಲಾ ಮಾತುಗಳು ಒಬ್ಬ ವ್ಯಕ್ತಿ ಯಾವರೀತಿ ಅಚ್ಚರಿಗೊಂಡು ಅಥವಾ ಬೆರಗಾಗಿ ನಿಂತಿದ್ದಾನೋ ಎನ್ನುವ ಭಾವವನ್ನು ತೋರಿಸುತ್ತದೆ. ಇದನ್ನು ವ್ಯಕ್ತಪಡಿಸುವುದಕ್ಕೆ ಇತರ ಭಾಷೆಗಳು ಬಹುಶಃ ಕೆಲವೊಂದು ವಿಧಾನಗಳನ್ನು ಹೊಂದಿರಬಹುದು.
  • ವಿಸ್ಮಯ ಮತ್ತು ಆಶ್ಚರ್ಯವನ್ನುಂಟು ಮಾಡಿದ ಕಾರ್ಯಗಳೇ ಅದ್ಭುತ ಎಂದು ಹೇಳಬಹುದು, ಇದನ್ನು ಕೇವಲ ದೇವರು ಮಾತ್ರ ಮಾದಬಲ್ಲನು.
  • ಈ ಪದಗಳಿಗೆ ಅರ್ಥವು ಕೆಲವೊಂದುಸಲ ಗೊಂದಲದ ಭಾವನೆಗಳನ್ನು ಕೂಡ ಒಳಗೊಂಡಿರುತ್ತದೆ ಯಾಕಂದರೆ ನಡೆದಿರುವುದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದ ಪರಿಸ್ಥಿತಿ.
  • ಈ ಪದಗಳನ್ನು “ಅತೀ ಹೆಚ್ಚಾಗಿ ಬೆರಗಾಗುವುದು” ಅಥವಾ “ಅತೀ ಹೆಚ್ಚಾಗಿ ಆಘಾತಗೊಳ್ಳುವುದು” ಎಂಬುದಾಗಿಯೂ ಅನುವಾದ ಮಾಡಬಹುದು.
  • “ಮಹಾದ್ಭುತ” (ವಿಸ್ಮಯ, ಅದ್ಭುತ), “ಅತ್ಯಾಶ್ಚರ್ಯಕರ”, ಮತ್ತು “ಬೆರಗು”.ಎನ್ನುವ ಪದಗಳು ಕೂಡ ಅವುಗಳಿಗೆ ಸಂಬಂಧಪಟ್ಟಿರುತ್ತವೆ.
  • ಸಾಧಾರಣವಾಗಿ, ಈ ಪದಗಳೆಲ್ಲವೂ ಧನಾತ್ಮಕ ಆಲೋಚನೆಗಳಿಂದ ಕೂಡಿದವುಗಳಾಗಿರುತ್ತವೆ ಮತ್ತು ನಡೆದ ವಿಷಯಗಳ ಕುರಿತಾಗಿ ಜನರು ತುಂಬಾ ಸಂತೋಷದಿಂದಿರುವ ಭಾವವ್ಯಕ್ತೀಕರಣಗಳು.

(ಈ ಪದಗಳನ್ನು ಸಹ ನೋಡಿರಿ : ಕಾನಾನ್, ಇಸಾಕ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H926, H2865, H3820, H4159, H4923, H5953, H6313, H6381, H6382, H6383, H6395, H7583, H8047, H8074, H8078, H8429, H8539, H8540, H8541, H8653, G639, G1568, G1569, G1605, G1611, G1839, G2284, G2285, G2296, G2297, G2298, G3167, G4023, G4423, G4592, G5059

ಅಧಿಕಾರಿ, ಅಧಿಕಾರಿಗಳು

# ಪದದ ಅರ್ಥವಿವರಣೆ;

ಅಧಿಕಾರ ಎನ್ನುವ ಪದವು ಕಾನೂನುಬದ್ಧವಾದ ವಿಷಯಗಳನ್ನು ನಿರ್ಣಯಿಸುವುದಕ್ಕೆ ಮತ್ತು ತೀರ್ಪು ಮಾಡುವುದಕ್ಕೆ ನೇಮಿಸಲ್ಪಟ್ಟ ನೌಕರನನ್ನು ಸೂಚಿಸುತ್ತದೆ.

  • ಸತ್ಯವೇದ ಕಾಲದಲ್ಲಿಯೂ ಅಧಿಕಾರಿಯು ಜನರ ಮಧ್ಯೆದಲ್ಲಿರುವ ಅನೇಕ ವ್ಯಾಜ್ಯಗಳನ್ನು ಬಗೆಹರಿಸುವವನಾಗಿರುತ್ತಾನೆ.
  • ಸಂದರ್ಭಾನುಸಾರವಾಗಿ ಈ ಪದವನ್ನು ಅನುವಾದ ಮಾಡುವ ವಿಧಾನದಲ್ಲಿ “ಪಾಲಿಸುವ ನ್ಯಾಯಾಧಿಪತಿ” ಅಥವಾ “ಕಾನೂನುಬದ್ಧವಾದ ಅಧಿಕಾರಿ” ಅಥವಾ “ಪಟ್ಟಣ ನಾಯಕನು” ಎನ್ನುವ ಮಾತುಗಳು ಒಳಗೊಂಡಿರಬಹುದು.

(ಈ ಪದಗಳನ್ನು ಸಹ ನೋಡಿರಿ : ತೀರ್ಪು ಮಾಡು, ಕಾನೂನು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H6114, H8200, H8614, G758, G3980, G4755

ಅಧೀನಪಡಿಸು, ಆಧೀನಗೊಳಿಸುವುದು, ಅಧೀನಪಡಿಸಿದೆ, ಬಂಧನ, ಗುಲಾಮಗಿರಿ, ಬಂಧನಗಳು, ಬಂಧಿಸಲ್ಪಟ್ಟಿದ್ದೀ

# ಪದದ ಅರ್ಥವಿವರಣೆ:

ಯಾರಾದರೊಬ್ಬರನ್ನು “ಅಧೀನಪಡಿಸು” ಎನ್ನುವ ಮಾತಿಗೆ ಯಜಮಾನನಿಗೆ ಸೇವೆ ಮಾಡುವುದಕ್ಕೆ ಅಥವಾ ದೇಶವನ್ನು ಆಳುವುದಕ್ಕೆ ಒಬ್ಬ ವ್ಯಕ್ತಿಯನ್ನು ಬಲವಂತಿಕೆ ಮಾಡು ಎಂದರ್ಥ. “ಆಧೀನಪಡಿಸು” ಅಥವಾ “ಬಂಧನದಲ್ಲಿ” ಎನ್ನುವ ಪದಕ್ಕೆ ಯಾರಾದರೊಬ್ಬರ ಅಥವಾ ಯಾವುದಾದರೊಂದರ ನಿಯಂತ್ರಣದ ಕೆಳಗೆ ಇರುವುದು ಎಂದರ್ಥ.

  • ಬಂಧನದಲ್ಲಿರುವ ಅಥವ ಗುಲಾಮಗಿರಿಯಲ್ಲಿರುವ ಒಬ್ಬ ವ್ಯಕ್ತಿ ಯಾವ ಸಂಬಳವಿಲ್ಲದೆ ಇತರರಿಗೆ ಸೇವೆ ಮಾಡಬೇಕಾಗಿರುತ್ತದೆ; ಅವನು ಬಯಸಿದ ಕಾರ್ಯಗಳು ಮಾಡುವುದಕ್ಕೆ ಅವನಿಗೆ ಸ್ವಾತಂತ್ರ್ಯವಿರುವುದಿಲ್ಲ.
  • “ಅಧೀನಪಡಿಸು” ಎನ್ನುವ ಪದಕ್ಕೆ ಕೂಡ ಒಬ್ಬ ವ್ಯಕ್ತಿಯ ಸ್ವಾತಂತ್ರ್ಯವನ್ನು ತೆಗೆದುಕೋ ಎನ್ನುವ ಅರ್ಥವೂ ಇದೆ.
  • “ಬಂಧನ” ಎನ್ನುವ ಪದಕ್ಕೆ ಇನ್ನೊಂದು ಪದ “ಗುಲಾಮಗಿರಿ”.
  • ಅಲಂಕಾರಿಕ ಭಾಷೆಯಲ್ಲಿ ಮನುಷ್ಯರೆಲ್ಲರೂ ಪಾಪಕ್ಕೆ “ಅಧೀನರಾಗಿರುತ್ತಾರೆ”, ಯೇಸು ಅವರನ್ನು ಆ ಪಾಪದ ಶಕ್ತಿಯಿಂದ ಮತ್ತು ನಿಯಂತ್ರಣದಿಂದ ಬಿಡಿಸುವವರೆಗೂ ಅವರು ಅಧೀನರಾಗಿರುತ್ತಾರೆ.
  • ಒಬ್ಬ ವ್ಯಕ್ತಿ ಯೇಸುವಿನಲ್ಲಿ ಹೊಸ ಜೀವನವನ್ನು ಹೊಂದಿಕೊಂಡಾಗ, ಅವನು ಪಾಪಕ್ಕೆ ಗುಲಾಮನಾಗಿರುವುದನ್ನು ನಿಲ್ಲಿಸುವನು ಮತ್ತು ನೀತಿಗೆ ದಾಸನಾಗುತ್ತಾನೆ.

# ಅನುವಾದ ಸಲಹೆಗಳು:

  • “ಅಧೀನಪಡಿಸು” ಎನ್ನುವ ಪದಕ್ಕೆ “ಸ್ವಾತಂತ್ರ್ಯನಾಗುವುದಕ್ಕೆ ಬಿಡಬೇಡ” ಅಥವಾ “ಇತರರಿಗೆ ಸೇವೆ ಮಾಡುವುದಕ್ಕೆ ಬಲವಂತಿಕೆ ಮಾಡು” ಅಥವಾ “ಇತರರ ನಿಯಂತ್ರಣದಲ್ಲಿರಿಸು” ಎಂದೂ ಅನುವಾದ ಮಾಡುತ್ತಾರೆ.
  • “ಅಧೀನಪಡಿಸು” ಅಥವಾ “ಬಂಧನದಲ್ಲಿರಿಸು” ಎನ್ನುವ ಮಾತನ್ನು “ಗುಲಾಮನಾಗುವುದಕ್ಕೆ ಬಲವಂತಿಕೆ ಮಾಡು” ಅಥವಾ “ಸೇವೆ ಮಾಡುವುದಕ್ಕೆ ಬಲವಂತಿಕೆ ಮಾಡು” ಅಥವಾ “ನಿಯಂತ್ರಣದಲ್ಲಿರಿಸು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಸ್ವಾತಂತ್ರ್ಯ, ನೀತಿ, ದಾಸನು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3533, H5647, G1398, G1402, G2615

ಅಧೀನವಾಗು, ಅಧೀನಪಡಿಸುವುದು, ಅಧೀನ ಮಾಡಿದೆ, ಅಧೀನ ಮಾಡುವುದು, ಅಧೀನತೆ, ಅಧೀನತೆಯಲ್ಲಿ

# ಪದದ ಅರ್ಥವಿವರಣೆ:

“ಅಧೀನವಾಗು” ಎನ್ನುವ ಪದವು ಸಾಧಾರಣವಾಗಿ ಒಬ್ಬ ವ್ಯಕ್ತಿಯ ಅಥವಾ ಪ್ರಭುತ್ವದ ಅಧಿಕಾರದ ಕೆಳಗೆ ಒಬ್ಬ ವ್ಯಕ್ತಿ ತನ್ನನ್ನು ತಾನು ಇಷ್ಟಪೂರ್ವಕವಾಗಿ ಒಳಗಾಗಿಸಿಕೊಳ್ಳುವುದನ್ನು ಸೂಚಿಸುತ್ತದೆ.

  • ಯೇಸುವಿನ ವಿಶ್ವಾಸಿಗಳು ದೇವರಿಗೆ ಮತ್ತು ಇತರ ಅಧಿಕಾರಿಗಳಿಗೆ ತಮ್ಮ ಜೀವನಗಳಲ್ಲಿ ಅಧೀನರಾಗಿರಬೇಕೆಂದು ಸತ್ಯವೇದವು ಹೇಳುತ್ತದೆ.
  • “ಒಬ್ಬರಿಗೊಬ್ಬರು ಅಧೀನರಾಗಿರಿ” ಎನ್ನುವ ಆಜ್ಞೆಯ ಅರ್ಥವೇನೆಂದರೆ ನಮ್ಮ ಸ್ವಂತ ಕಾರ್ಯಗಳಿಗಿಂತಲೂ ಇನ್ನೊಬ್ಬರ ಅಗತ್ಯತೆಗಳ ಮೇಲೆ ಕೇಂದ್ರೀಕರಿಸುವುದು ಮತ್ತು ವಿನಯವುಳ್ಳವರಾಗಿ ತಿದ್ದುಪಡಿಯನ್ನು ಅಂಗೀಕರಿಸುವುದು ಎಂದರ್ಥವಾಗಿರುತ್ತದೆ.
  • “ಅಧೀನತೆಯಲ್ಲಿ ಜೀವಿಸುವುದು” ಎನ್ನುವ ಮಾತಿಗೆ ಯಾರಾದರೊಬ್ಬರ ಅಥವಾ ಯಾವುದಾದರೊಂದರ ಅಧಿಕಾರದ ಕೆಳಗೆ ಒಬ್ಬರು ಒಳಪಡುವುದು ಎಂದರ್ಥ.

# ಅನುವಾದ ಸಲಹೆಗಳು:

  • “ಅಧೀನವಾಗು” ಎನ್ನುವ ಆಜ್ಞೆಯನ್ನು “ಅಧಿಕಾರದ ಕೆಳಗೆ ನಿನ್ನನ್ನು ನೀನು ಒಳಪಡಿಸು” ಅಥವಾ “ನಾಯಕತ್ವವನ್ನು ಹಿಂಬಾಲಿಸು” ಅಥವಾ “ವಿನಯವುಳ್ಳವರಾಗಿ ಗೌರವಿಸು ಮತ್ತು ಘನಪಡಿಸು” ಎಂದೂ ಅನುವಾದ ಮಾಡಬಹುದು.
  • “ಅಧೀನತೆ” ಎನ್ನುವ ಪದವನ್ನು “ವಿಧೇಯತೆ” ಅಥವಾ “ಅಧಿಕಾರವನ್ನು ಹಿಂಬಾಲಿಸುವುದು” ಎಂದೂ ಅನುವಾದ ಮಾಡಬಹುದು.
  • “ಅಧೀನತೆಯಲ್ಲಿ ಜೀವಿಸು” ಎನ್ನುವ ಮಾತನ್ನು “ವಿಧೇಯತೆಯಲ್ಲಿರು” ಅಥವಾ “ಅಧಿಕಾರದಲ್ಲಿ ತನ್ನನ್ನು ತಾನು ಒಳಪಡಿಸಿಕೊಳ್ಳುವುದು” ಎಂದೂ ಅನುವಾದ ಮಾಡಬಹುದು.
  • “ಅಧೀನತೆಯಲ್ಲಿರುವುದು” ಎನ್ನುವ ಮಾತನ್ನು “ವಿನಯದಿಂದ ಅಧಿಕಾರವನ್ನು ಅಂಗೀಕರಿಸುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಒಳಗಾಗು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3584, H7511, G5226, G5293

ಅನುಕರಿಸು, ಅನುಕರಿಸುವವನು, ಅನುಕರಿಸುವವರು

# ಪದದ ಅರ್ಥವಿವರಣೆ

ಬೇರೆಯವರ ಹಾಗೆ ಮಾಡುವುದು ಅಥವಾ ಅವರಂತೆ ನಡೆಯುವದನ್ನು “ಅನುಕರಿಸು” ಅಥವಾ “ಅನುಕರಿಸುವವನು” ಎನ್ನುವ ಪದಗಳು ಸೂಚಿಸುತ್ತದೆ.

  • ಕ್ರಿಸ್ತನಂತೆ ಯೆಹೋವನಿಗೆ ವಿಧೇಯರಾಗಿದ್ದು ಮತ್ತು ಬೇರೆಯವರನ್ನು ಪ್ರೀತಿಸುವದರ ಮೂಲಕ ಯೇಸು ಕ್ರಿಸ್ತನನ್ನು ಅನುಕರಿಸಬೇಕೆಂದು ಕ್ರೈಸ್ತರಿಗೆ ಬೋಧಿಸಲಾಗಿದೆ.
  • ಅವನು ಕ್ರಿಸ್ತನನ್ನು ಅನುಕರಿಸಿದಂತೆ, ಆದಿಮ ಸಭೆಯಲ್ಲಿದ್ದವರು ಸಹ ಪೌಲನನ್ನು ಅನುಕರಿಸಬೇಕೆಂದು ಹೇಳಿದನು.

# ಅನುವಾದ ಸಲಹೆಗಳು:

  • “ಅನುಕರಿಸು” ಎನ್ನುವ ಪದವನ್ನು “ಒಂದೇ ಕೆಲಸವನ್ನು ಮಾಡುವುದು” ಅಥವಾ “ಒಬ್ಬರ ಆದರ್ಶಗಳನ್ನು ಹಿಂಬಾಲಿಸುವುದು” ಎಂದು ಅನುವಾದ ಮಾಡಬಹುದು.
  • “ದೇವರನ್ನು ಅನುಕರಿಸುವವರು” ಎನ್ನುವ ಮಾತನ್ನು “ದೇವರಂತೆ ವರ್ತಿಸುವ ಜನರು” ಅಥವಾ “ದೇವರು ಮಾಡುವ ಕಾರ್ಯಗಳನ್ನೇ ಮಾಡುವ ಜನರು” ಎಂದು ಅನುವಾದ ಮಾಡಬಹುದು.
  • “ನೀವು ನಮ್ಮನ್ನು ಅನುಕರಿಸುವವರಾಗಿದ್ದೀರಿ” ಎನ್ನುವ ಮಾತನ್ನು “ನಮ್ಮ ಆದರ್ಶಗಳನ್ನು ನೀವು ಹಿಂಬಾಲಿಸಿದ್ದೀರಿ” ಅಥವಾ “ದೇವರಿಗೆ ಮೆಚ್ಚಿಗೆಯಾದ ಕಾರ್ಯಗಳನ್ನು ನಾವು ಮಾಡಿದಂತೆ ನೀವು ಮಾಡಿದ್ದೀರಿ” ಎಂದು ಅನುವಾದ ಮಾಡಬಹುದು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H310, H6213, G1096, G2596, G3401, G3402, G4160

ಅನ್ಯ, ಅನ್ಯರು

# ಪದದ ಅರ್ಥವಿವರಣೆ:

ಸತ್ಯವೇದ ಕಾಲಗಳಲ್ಲಿ “ಅನ್ಯ” ಎನ್ನುವ ಪದವು ಯೆಹೋವನನ್ನು ಬಿಟ್ಟು ಸುಳ್ಳು ದೇವರನ್ನು ಆರಾಧಿಸುವ ಜನರನ್ನು ವಿವರಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ.

  • ಈ ಜನರೊಂದಿಗೆ ಸಹವಾಸ ಮಾಡುವ ಯಾವುದಾದರೊಂದೂ ಅಂದರೆ ಅವರು ಆರಾಧಿಸುವ ಸ್ಥಳದಲ್ಲಿರುವ ಯಜ್ಞವೇದಿಗಳು ಅವರು ಪ್ರದರ್ಶಿಸುವ ಧರ್ಮಸಂಬಂಧವಾದ ಆಚಾರಗಳಾಗಿರುತ್ತವೆ, ಅವರ ನಂಬಿಕೆಗಳು ಎಲ್ಲವು “ಅನ್ಯ” ಎಂದು ಕರೆಯಲಾಗುತ್ತದೆ.
  • ಅನ್ಯ ನಂಬಿಕೆ ವಿಧಾನಗಳಲ್ಲಿ ಅನೇಕಬಾರಿ ಪ್ರಕೃತಿ ಆರಾಧನೆಯು ಮತ್ತು ಸುಳ್ಳು ದೇವರುಗಳ ಆರಾಧನೆಯು ಒಳಗೊಂಡಿರುತ್ತದೆ.
  • ಕೆಲವೊಂದು ಅನ್ಯ ಧರ್ಮಗಳಲ್ಲಿ ಲೈಂಗಿಕವಾಗಿ ಅನೈತಿಕ ಆಚರಣೆಗಳು ಅಥವಾ ಅವರ ಆರಾಧನೆಯ ಭಾಗವಾಗಿ ಮನುಷ್ಯರನ್ನು ಸಾಯುಸುವುದು ಒಳಗೊಂಡಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಯಜ್ಞವೇದಿ, ಸುಳ್ಳು ದೇವರು, ಸರ್ವಾಂಗ ಹೋಮ, ಆರಾಧನೆ, ಯೆಹೋವ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1471, G1484

ಅಪರಾದ ಪರಿಹಾರಾರ್ಥ ಬಲಿ, ಅಪರಾದ ಪರಿಹಾರಾರ್ಥ ಬಲಿಗಳು

# ಪದದ ಅರ್ಥವಿವರಣೆ

ಅಕಸ್ಮಾತಾಗಿ ಇಸ್ರಾಯೇಲ್ಯರು ಯೆಹೋವ ವಿರೋಧವಾಗಿ ಮಾಡಿದ ತಪ್ಪುಗಳು ಅಥವಾ ಬೇರೆಯವರ ಸ್ವತ್ತನ್ನು ಹಾಳುಮಾಡಿದ್ದರೆ ಅವರು ಯೆಹೋವನಿಗೆ ಅಪರಾದ ಪರಿಹಾರಾರ್ಥ ಬಲಿಯನ್ನು ಅರ್ಪಿಸಬೇಕಾಗಿತ್ತು.

  • ಈ ನೈವೇದ್ಯದಲ್ಲಿ ಒಂದು ಪಶುವಿನ ಬಲಿ ಒಳಗೊಂಡಿತ್ತು ಮತ್ತು ಬೆಳ್ಳಿ ಅಥವಾ ಬಂಗಾರದ ಹಣವನ್ನು ದಂಡವಾಗಿ ಕಟ್ಟಬೇಕಾಗಿತ್ತು.
  • ಅದಲ್ಲದೆ, ಹಾಳುಮಾಡಿದವನು ಹಾಳುಮಾಡಿದ ವಸ್ತುವಿನ ಮೌಲ್ಯವನ್ನು ಕಟ್ಟಬೇಕಾಗಿತ್ತು.

(ಈ ಪದಗಳನ್ನು ಸಹ ನೋಡಿರಿ : ದಹನ ಬಲಿ, ಧಾನ್ಯ ನೈವೇದ್ಯ, ಬಲಿ, ಪಾಪ ಪರಿಹಾರರ್ಥಕ ಬಲಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H817

ಅಪರಾಧ, ಅಪರಾಧಗಳು, ಅಪರಾಧಿ, ಅಪರಾಧಿಗಳು

# ಪದದ ಅರ್ಥವಿವರಣೆ

“ಅಪರಾಧ” ಎನ್ನುವ ಪದವು ಒಂದು ದೇಶದ ಅಥವಾ ರಾಷ್ಟ್ರದ ಕಾನೂನನ್ನು ಉಲ್ಲಂಘಿಸುವ ಪಾಪವನ್ನು ಸೂಚಿಸುತ್ತದೆ. “ಅಪರಾಧಿ” ಎನ್ನುವ ಪದವು ಅಪರಾಧ ಮಾಡಿದ ವ್ಯಕ್ತಿಯನ್ನು ಸೂಚಿಸುತ್ತದೆ.

  • ವ್ಯಕ್ತಿಯನ್ನು ಸಾಯಿಸುವುದು ಅಥವಾ ಇನ್ನೊಬ್ಬರ ವಸ್ತುಗಳನ್ನು ಕದಿಯುವುದು ಎನ್ನುವ ಕ್ರಿಯೆಗಳು ಅನೇಕ ವಿಧವಾದ ಅಪರಾದಗಳಿಗೆ ಉದಾಹರಣೆಗಳಾಗಿರುತ್ತವೆ.
  • ಸಹಜವಾಗಿ ಅಪರಾಧಿಯನ್ನು ಒಂದು ವಿಧವಾದ ಸೆರೆಯಲ್ಲಿಟ್ಟಿರುತ್ತಾರೆ, ಉದಾಹರಣೆಗೆ ಸೆರೆಮನೆ.
  • ಸತ್ಯವೇದದ ಕಾಲದಲ್ಲಿ, ಅಪರಾಧಿಗಳಲ್ಲಿ ಕೆಲವರು ದೇಶಭ್ರಷ್ಟರಾಗಿದ್ದರು, ಅವರು ಮಾಡಿದ ಅಪರಾಧಕ್ಕೆ ಪ್ರತಿಕಾರ ತೆಗೆದುಕೊಳ್ಳುವ ಜನರಿಂದ ತಪ್ಪಿಸಿಕೊಳ್ಳಲು ಒಂದು ಪ್ರಾಂತ್ಯದಿಂದ ಮತ್ತೊಂದು ಪ್ರಾಂತ್ಯಕ್ಕೆ ತಿರುಗಾಡುತ್ತಿದ್ದರು.

(ಈ ಪದಗಳನ್ನು ಸಹ ನೋಡಿರಿ : ಕಳ್ಳ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2154, H2400, H4639, H5771, H7563, H7564, G156, G1462, G2556, G2557, G4467

ಅಪವಿತ್ರ, ಅಪವಿತ್ರವಾಗಿದೆ, ಅಪವಿತ್ರಗೊಳಿಸುವುದು

# ಪದದ ಅರ್ಥವಿವರಣೆ:

ಯಾವುದಾದರೊಂದನ್ನು ಅಪವಿತ್ರಗೊಳಿಸುವುದು ಎಂದರೆ ಪವಿತ್ರವಾದದ್ದನ್ನು ಅಗೌರವಪಡಿಸುವ, ಮಾಲಿನ್ಯಗೊಳಿಸುವ ಅಥವಾ ಅಶುದ್ಧಗೊಳಿಸುವ ವಿಧಾನದಲ್ಲಿ ನಡೆದುಕೊಳ್ಳುವುದು ಎಂದರ್ಥ.

  • ಅಪವಿತ್ರವಾದ ವ್ಯಕ್ತಿ ದೇವರನ್ನು ಅಗೌರವಪಡಿಸುವ ಅಥವಾ ಅಪವಿತ್ರಗೊಳಿಸುವ ವಿಧಾನದಲ್ಲಿ ನಡೆದುಕೊಳ್ಳುವ ವ್ಯಕ್ತಿಯಾಗಿರುತ್ತಾನೆ.
  • “ಅಪವಿತ್ರ” ಎನ್ನುವ ಕ್ರಿಯಾಪದವನ್ನು “ಅಪವಿತ್ರವಾಗಿ ನಡೆದುಕೋ” ಅಥವಾ “ಯಾರಾದರೊಬ್ಬರ ವಿಷಯದಲ್ಲಿ ಅಗೌರವದಿಂದ ನಡೆದುಕೋ” ಅಥವಾ “ಘನಹೀನ ಮಾಡು” ಎಂದೂ ಅನುವಾದ ಮಾಡಬಹುದು.
  • ಇಸ್ರಾಯೇಲ್ಯರು ತಮ್ಮಷ್ಟಕ್ಕೆ ತಾವು ವಿಗ್ರಹಗಳೊಂದಿಗೆ “ಅಪವಿತ್ರಗೊಳಿಸಿಕೊಂಡರು” ಎಂದು ದೇವರು ಅವರೊಂದಿಗೆ ಹೇಳಿದನು, ಜನರು ಈ ಪಾಪ ಮಾಡುವುದರಿಂದ ತಮ್ಮನ್ನು ತಾವು “ಅಶುದ್ಧಗೊಳಿಸಿಕೊಂಡರು” ಅಥವಾ “ಅಗೌರವಪಡಿಸಿಕೊಂಡರು” ಎಂದು ಇದರ ಅರ್ಥವಾಗಿರುತ್ತದೆ. ಅವರು ದೇವರನ್ನೂ ಅಗೌರವಪಡಿಸಿದರು.
  • ಸಂದರ್ಭಾನುಗುಣವಾಗಿ, “ಅಪವಿತ್ರ” ಎನ್ನುವ ವಿಶೇಷಣ ಪದವನ್ನು “ಅಗೌರವಪಡಿಸು” ಅಥವಾ “ಅದೈವಿಕ” ಅಥವಾ “ಅಪರಿಶುದ್ಧ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಅಶುದ್ಧಗೊಳಿಸು, ಪರಿಶುದ್ಧ, ಶುದ್ಧ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2455, H2490, H2491, H2610, H2613, H5234, H8610, G952, G953

ಅಭಿವೃದ್ಧಿ ಹೊಂದು, ಅಭಿವೃದ್ಧಿ ಹೊಂದಿದೆ, ಅಭಿವೃದ್ಧಿಯಾಗುವುದು, ಅಭಿವೃದ್ಧಿ, ಸಮೃದ್ಧಿ

# ಪದದ ಅರ್ಥವಿವರಣೆ:

“ಅಭಿವೃದ್ಧಿ ಹೊಂದು” ಎನ್ನುವ ಪದವು ಚೆನ್ನಾಗಿ ಜೀವಿಸುವುದನ್ನು ಮತ್ತು ಭೌತಿಕವಾಗಿ ಅಥವಾ ಆತ್ಮೀಯಕವಾಗಿ ಅಭಿವೃದ್ಧಿಯಾಗುತ್ತಿರುವುದನ್ನು ಸಾಧಾರಣವಾಗಿ ಸೂಚಿಸುತ್ತದೆ. ಜನರು ಅಥವಾ ಒಂದು ದೇಶವು “ಸಮೃದ್ಧಿ” ಆಗುತ್ತಿರುವಾಗ, ಅವರು ಶ್ರೀಮಂತರೆಂದು ಮತ್ತು ಅವರೆಲ್ಲರು ಯಶಸ್ವಿಯಾಗಿರಬೇಕೆಂದು ಅದರ ಅರ್ಥವಾಗಿರುತ್ತದೆ. ಅವರು “ಅಭಿವೃಧಿ”ಯನ್ನು ಅನುಭವಿಸುತ್ತಿದ್ದಾರೆ ಎಂದರ್ಥವಾಗಿರುತ್ತದೆ.

  • “ಸಮೃದ್ಧಿ” ಎನ್ನುವ ಪದವು ಅನೇಕಬಾರಿ ಆಸ್ತಿಪಾಸ್ತಿಗಳನ್ನು ಮತ್ತು ಹಣವನ್ನು ಗಳಿಸುವುದರಲ್ಲಿ ಯಶಸ್ವಿಯನ್ನು ಅಥವಾ ಜನರು ಚೆನ್ನಾಗಿ ಜೀವಿಸುವುದಕ್ಕೆ ಅವರಿಗೆ ಬೇಕಾದ ಪ್ರತಿಯೊಂದನ್ನು ಒದಗಿಸಿಕೊಡುವುದರಲ್ಲಿ ಯಶಸ್ವಿಯನ್ನು ಸೂಚಿಸುತ್ತದೆ.
  • ಸತ್ಯವೇದದಲ್ಲಿ “ಸಮೃದ್ಧಿ” ಎನ್ನುವ ಪದವು ಒಳ್ಳೆಯ ಆರೋಗ್ಯವನ್ನು ಮತ್ತು ಮಕ್ಕಳೊಂದಿಗೆ ಆಶೀರ್ವಾದ ಹೊಂದುವುದನ್ನು ಕೂಡ ಸೂಚಿಸುತ್ತದೆ.
  • “ಸಮೃದ್ಧಿ” ಹೊಂದಿದ ಪಟ್ಟಣ ಅಥವಾ ದೇಶ ಎಂದರೆ ಅನೇಕ ಜನರನ್ನು ಹೊಂದಿದ, ಒಳ್ಳೇಯ ಆಹಾರ ಉತ್ಪಾದನೆ ಮಾಡುವ, ಮತ್ತು ಹಣವನ್ನು ಹೆಚ್ಚಾಗಿ ಗಳಿಸುವ ವ್ಯಾಪಾರವನ್ನು ಹೊಂದಿರುವ ಪಟ್ಟಣ ಅಥವಾ ದೇಶ ಎಂದರ್ಥ.
  • ಒಬ್ಬ ವ್ಯಕ್ತಿ ದೇವರ ಬೋಧನೆಗಳಿಗೆ ವಿಧೇಯತೆಯನ್ನು ತೋರಿಸಿದಾಗ ಆ ವ್ಯಕ್ತಿ ಆತ್ಮೀಯಕವಾದ ಸಮೃದ್ಧಿಯನ್ನು ಹೊಂದುವನೆಂದು ಸತ್ಯವೇದವು ಬೋಧನೆ ಮಾಡುತ್ತಿದೆ. ಅವನು ಸಂತೋಷ ಮತ್ತು ಸಮಾಧಾನಗಳ ಆಶೀರ್ವಾದಗಳನ್ನು ಅನುಭವಿಸುವನು. ದೇವರು ಯಾವಾಗಲೂ ಜನರಿಗೆ ಸಂಪತ್ತನ್ನೇ ಕೊಡುವುದಿಲ್ಲ, ಆದರೆ ಜನರು ದೇವರ ಮಾರ್ಗಗಳನ್ನು ಅನುಸರಿಸಿ ನಡೆದುಕೊಂಡಾಗ ಆತನು ಯಾವಾಗಲೂ ಅವರನ್ನು ಅತ್ಮೀಯಕವಾಗಿ ಸಮೃದ್ಧಿಗೊಳಿಸುವನು.
  • ಸಂದರ್ಭಾನುಸಾರವಾಗಿ, “ಅಭಿವೃದ್ಧಿ ಹೊಂದು” ಎನ್ನುವ ಪದವನ್ನು “ಯಶಸ್ವಿಯಾದ ಆತ್ಮೀಯತೆ” ಅಥವಾ “ದೇವರಿಂದ ಆಶೀರ್ವಾದ ಹೊಂದುವುದು” ಅಥವಾ “ಒಳ್ಳೇಯ ಕಾರ್ಯಗಳನ್ನು ಅನುಭವಿಸುವುದು” ಅಥವಾ “ಚೆನ್ನಾಗಿ ಜೀವಿಸುವುದು” ಎಂದೂ ಅನುವಾದ ಮಾಡಬಹುದು.
  • “ಸಮೃದ್ಧಿ” ಎನ್ನುವ ಪದವನ್ನು “ಯಶಸ್ವಿ” ಅಥವಾ “ಸಂಪತ್ತಿನ” ಅಥವಾ “ಆತ್ಮೀಯ ಫಲ” ಎಂದೂ ಅನುವಾದ ಮಾಡಬಹುದು.
  • “ಅಭಿವೃದ್ಧಿ” ಎನ್ನುವ ಪದವನ್ನು “ಚೆನ್ನಾಗಿರುವುದು” ಅಥವಾ “ಸಂಪತ್ತು” ಅಥವಾ “ಯಶಸ್ವಿ” ಅಥವಾ “ಹೆಚ್ಚಾದ ಆಶೀರ್ವಾದಗಳು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಆಶೀರ್ವದಿಸು, ಫಲ, ಆತ್ಮ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1129, H1767, H1878, H1879, H2428, H2896, H2898, H3027, H3190, H3444, H3498, H3787, H4195, H5381, H6500, H6509, H6555, H6743, H6744, H7230, H7487, H7919, H7951, H7961, H7963, H7965, G2137

ಅಭಿವೃದ್ಧಿ ಹೊಂದು, ಅಭಿವೃದ್ಧಿಗೊಳಿಸುವುದು, ಅಭಿವೃದ್ಧಿಯಾಗಿದೆ, ಅಭಿವೃದ್ಧಿ ಮಾಡಲ್ಪಟ್ಟಿರುತ್ತದೆ, ಅಭಿವೃದ್ಧಿ

# ಪದದ ಅರ್ಥವಿವರಣೆ:

“ಅಭಿವೃದ್ಧಿ ಹೊಂದು” ಎನ್ನುವ ಪದಕ್ಕೆ ಸಂಖ್ಯೆಯಲ್ಲಿ ಬಹಳವಾಗಿ ಹೆಚ್ಚುತ್ತಿರುವುದು. ಯಾವುದಾದರೊಂದು ಮೊತ್ತದಲ್ಲಿ ಹೆಚ್ಚುತ್ತಿರುವುದನ್ನು ಕೂಡ ಸೂಚಿಸುತ್ತದೆ, ಅಭಿವೃದ್ಧಿ ಹೊಂದುವುದಕ್ಕೆ ನೋವನ್ನುಂಟು ಮಾಡುವುದನ್ನು ಸೂಚಿಸುತ್ತದೆ.

  • ದೇವರು ಮನುಷ್ಯರಿಗೆ ಮತ್ತು ಪ್ರಾಣಿಗಳಿಗೆ “ಅಭಿವೃದ್ಧಿ” ಹೊಂದಿ, ಭೂಮಿಯನ್ನು ತುಂಬಿಸಬೇಕೆಂದು ಹೇಳಿದನು. ಇದು ತಮ್ಮ ತಮ್ಮ ಜಾತಿಗಳನ್ನು ಹೆಚ್ಚಾಗಿ ಅಭಿವೃದ್ಧಿಗೊಳಿಸಬೇಕೆನ್ನುವುದರ ಕುರಿತಾಗಿರುವ ಆಜ್ಞೆಯಾಗಿದ್ದಿತ್ತು.
  • ಯೇಸು 5,000 ಜನರಿಗೆ ಆಹಾರವನ್ನು ಕೊಡುವುದರ ಕ್ರಮದಲ್ಲಿ ರೊಟ್ಟಿಯನ್ನು ಮತ್ತು ಮೀನನ್ನು ಅಭಿವೃದ್ಧಿಗೊಳಿಸಿದನು. ಆಹಾರವು ಹೆಚ್ಚುತ್ತಾ ಇದ್ದಿತ್ತು, ಇದರಿಂದ ಆ ಜನರಿಗೆ ಬೇಕಾಗಿರುವ ಸಾಕಷ್ಟು ಆಹಾರಕ್ಕಿಂತ ಹೆಚ್ಚಿನ ಆಹಾರವಿದ್ದಿತ್ತು.
  • ಸಂದರ್ಭಾನುಸಾರವಾಗಿ, ಈ ಪದವನ್ನು “ಹೆಚ್ಚಳ” ಅಥವಾ “ಹೆಚ್ಚಿಸುವುದಕ್ಕೆ ಕಾರಣವಾಗು” ಅಥವಾ “ಸಂಖ್ಯೆಯಲ್ಲಿ ಬಹಳವಾಗಿ ಹೆಚ್ಚುತ್ತಿರುವುದು” ಅಥವಾ “ಸಂಖ್ಯೆಯಲ್ಲಿ ಬಹಳವಾಗಿ ಏರುತ್ತಾ ಇರುವುದು” ಅಥವಾ “ಅಸಂಖ್ಯಾಕವಾಗಿ ಮಾರ್ಪಡುವುದು” ಎಂದೂ ಅನುವಾದ ಮಾಡಬಹುದು.
  • “ನಿನ್ನ ಕಷ್ಟವು ಬಹಳವಾಗಿ ಹೆಚ್ಚುತ್ತಾ ಇರುವುದು” ಎನ್ನುವ ಮಾತು “ನಿನ್ನ ನೋವನ್ನು ಅತೀ ಹೆಚ್ಚಾಗಿ ಆಗುವಂತೆ ಮಾಡುವುದು” ಅಥವಾ “ಹೆಚ್ಚಾದ ನೋವನ್ನು ಅನುಭವಿಸುವಂತೆ ಮಾಡುವುದು” ಎಂದೂ ಅನುವಾದ ಮಾಡಬಹುದು.
  • “ಕುದುರೆಗಳನ್ನು ಅಭಿವೃದ್ಧಿಗೊಳಿಸುವುದು” ಎನ್ನುವುದಕ್ಕೆ “ದುರಾಸೆಯಿಂದ ಹೆಚ್ಚಿನ ಕುದುರೆಗಳನ್ನು ವಶಪಡಿಸಿಕೊಳ್ಳುವುದು” ಅಥವಾ “ಕುದುರೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳುವುದು” ಎಂದರ್ಥ.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3254, H3527, H6280, H7231, H7233, H7235, H7680, G4052, G4129

ಅಭಿಷೆಕಿಸು, ಅಭಿಷೇಕಿಸಿದೆ, ಸಾಧಾರಣ, ಪಟ್ಟಾಭಿಷೇಕ

# ಪದದ ಅರ್ಥವಿವರಣೆ:

ಅಭಿಷೇಕಿಸು ಎನ್ನುವ ಪದಕ್ಕೆ ಒಂದು ವಿಶೇಷವಾದ ಕೆಲಸಕ್ಕೆ ಅಥವಾ ಪಾತ್ರೆಗೆ ಒಬ್ಬ ವ್ಯಕ್ತಿಯನ್ನು ಸಾಂಪ್ರದಾಯಿಕವಾಗಿ ಆಯ್ಕೆಮಾಡಿಕೊಳ್ಳುವುದು ಎಂದರ್ಥ. ಸಾಂಪ್ರದಾಯಿಕವಾಗಿ ನಿಯಮವನ್ನುಂಟು ಮಾಡು ಅಥವಾ ಆಜ್ಞೆಯನ್ನುಂಟು ಮಾಡು ಎಂದೆನ್ನುವ ಅರ್ಥವೂ ಇದರಿಂದ ಬರುತ್ತದೆ.

  • “ಅಭಿಷೇಕಿಸು” ಎನ್ನುವ ಪದಕ್ಕೆ ಅನೇಕಬಾರಿ ಯಾಜಕನಾಗಿ, ಸೇವಕನಾಗಿ ಅಥವಾ ಬೋಧಕನಾಗಿ (ರಬ್ಬೀ) ಇರುವುದಕ್ಕೆ ಯಾರಾದರೊಬ್ಬರನ್ನು ಸಾಂಪ್ರದಾಯಿಕವಾಗಿ ಆಯ್ಕೆ ಮಾಡಿಕೊಳ್ಳುವುದನ್ನು ಸೂಚಿಸುತ್ತದೆ.
  • ಉದಾಹರಣೆಗೆ, ದೇವರು ಆರೋನನನ್ನು ಮತ್ತು ತನ್ನ ಸಂತಾನದವರನ್ನೂ ಯಾಜಕರಾಗಿರಲು ಅಭಿಷೇಕಿಸಿದನು.
  • ಇದಕ್ಕೆ ಯಾವುದಾದರೊಂದನ್ನು ಸ್ಥಾಪನೆ ಮಾಡುವುದು ಅಥವಾ ವ್ಯವಸ್ಥಾಪಿಸುವುದು ಎನ್ನುವ ಅರ್ಥವನ್ನೂ ಕೊಡುತ್ತದೆ, ಉದಾಹರಣೆಗೆ ಭಕ್ತಿ ಸಂಬಂಧವಾದ ಹಬ್ಬ ಅಥವಾ ಒಡಂಬಡಿಕೆಯನ್ನು ಸ್ಥಾಪಿಸುವುದು.
  • ಸಂದರ್ಭಾನುಸಾರವಾಗಿ, “ಅಭಿಷೇಕ” ಎನ್ನುವ ಪದಕ್ಕೆ “ನಿಯೋಜಿಸು” ಅಥವಾ “ನೇಮಿಸು” ಅಥವಾ “ಆದೇಶಿಸು” ಅಥವಾ “ನಿಯಮವನ್ನುಂಟು ಮಾಡು” ಅಥವಾ “ಸ್ಥಾಪಿಸು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಆಜ್ಞೆ, ಒಡಂಬಡಿಕೆ, ಶಾಸನ, ಕಾನೂನು, ಧರ್ಮಶಾಸ್ತ್ರ, ಯಾಜಕನು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3245, H4390, H4483, H6186, H6213, H6466, H6680, H7760, H8239, G1299, G2525, G2680, G3724, G4270, G4282, G4309, G5021, G5500

ಅಮಾವಾಸ್ಯೆ, ಅಮಾವಾಸ್ಯೆಗಳು

# ಪದದ ಅರ್ಥವಿವರಣೆ:

“ಅಮಾವಾಸ್ಯೆ” ಎನ್ನುವ ಪದವು ಅರ್ಧಚಂದ್ರಾಕೃತಿಯ ಬೆಳ್ಳಿಯ ಬೆಳಕಾಗಿರುವ ಚಿಕ್ಕದಾಗಿರುವ ಚಂದ್ರನನ್ನು ಸೂಚಿಸುತ್ತದೆ, ಸೂರ್ಯನು ಮುಳುಗುವ ಸಮಯದಲ್ಲಿ ಭೂ ಗ್ರಹದ ಸುತ್ತಲೂ ತಿರುಗುವ ತನ್ನ ಕಕ್ಷೆಯಲ್ಲಿ ಚಲಿಸುತ್ತಿರುವಂತೆಯೇ ಇದು ಚಂದ್ರನ ಮೊದಲ ಹಂತದ ಆರಂಭವಾಗಿರುತ್ತದೆ, ಇದು ಅಮಾವಾಸ್ಯದ ಮೊದಲನೇ ದಿನವನ್ನೂ ಸೂಚಿಸುತ್ತದೆ, ಇದು ಕೆಲವು ದಿನಗಳ ವರೆಗೆ ಚಂದ್ರನು ಕಪ್ಪಾದನಂತರ ಕಾಣಿಸಿಕೊಳ್ಳುತ್ತದೆ

  • ಪುರಾತನ ಕಾಲಗಳಲ್ಲಿ ಅಮಾವಾಸ್ಯೆಗಳನ್ನು ತಿಂಗಳುಗಳೆನ್ನುವ ಕೆಲವೊಂದು ನಿರ್ದಿಷ್ಟವಾದ ಕಾಲಗಳ ವ್ಯವಧಿಯ ಆರಂಭಗಳಲ್ಲಿ ಮಾತ್ರ ಗುರುತಿಸುತ್ತಿದ್ದರು.
  • ಇಸ್ರಾಯೇಲ್ಯರು ಟಗರಿನ ಕೊಂಬನ್ನು ಊದುತ್ತಾ ಅಮಾವಾಸ್ಯೆಯ ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು.
  • ಈ ಸಮಯವನ್ನು “ತಿಂಗಳಿನ ಆರಂಭ” ಎಂಬುದಾಗಿ ಸತ್ಯವೇದವೂ ಸೂಚಿಸುತ್ತದೆ.

(ಈ ಪದಗಳನ್ನು ಸಹ ನೋಡಿರಿ : ತಿಂಗಳು, ಭೂಮಿ, ಹಬ್ಬ, ಕೊಂಬು, ಕುರಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2320, G3376, G3561

ಅಮೂಲ್ಯ

# ಸತ್ಯಾಂಶಗಳು:

“ಅಮೂಲ್ಯ” ಎನ್ನುವ ಪದವು ತುಂಬಾ ಬೆಲೆಯುಳ್ಳದ್ದಾಗಿ ಪರಿಗಣಿಸುವ ವಸ್ತುಗಳನ್ನು ಅಥವಾ ಜನರನ್ನು ವಿವರಿಸುತ್ತದೆ.

  • “ಅಮೂಲ್ಯವಾದ ಕಲ್ಲುಗಳು” ಅಥವಾ “ಅಮೂಲ್ಯವಾದ ಆಭರಣಗಳು” ಎನ್ನುವ ಪದವು ಬಣ್ಣ ಬಣ್ಣವಾದ ಖನಿಜಗಳು ಮತ್ತು ಕಲ್ಲುಗಳನ್ನು ಸೂಚಿಸುತ್ತದೆ ಅಥವಾ ಸುಂದರವಾದ, ಪ್ರಯೋಜನಕರವಾದ ಇತರ ಗುಣಲಕ್ಷಣಗಳನ್ನು ಹೊಂದಿರುವ ಕಲ್ಲುಗಳನ್ನು ಅಥವಾ ಖನಿಜಗಳನ್ನು ಸೂಚಿಸುತ್ತದೆ.
  • ಅಮೂಲ್ಯವಾದ ಕಲ್ಲುಗಳಿಗೆ ಉದಾಹರಣೆಗಳು ಎಂದರೆ ವಜ್ರಗಳು, ಮಾಣಿಕ್ಯಗಳು ಮತ್ತು ಪಚ್ಚೆಗಳು.
  • ಬಂಗಾರ ಮತ್ತು ಬೆಳ್ಳಿಗಳು “ಅಮೂಲ್ಯವಾದ ಲೋಹಗಳು” ಎಂದು ಕರೆಯುತ್ತಾರೆ.
  • ದೇವ ಜನರು ಆತನ ದೃಷ್ಟಿಯಲ್ಲಿ “ಅಮೂಲ್ಯ” ಎಂದು ಯೆಹೋವನು ಹೇಳುತ್ತಿದ್ದಾನೆ (ಯೆಶಯಾ.43:4).
  • ದೇವರ ದೃಷ್ಟಿಯಲ್ಲಿ ಒಳ್ಳೇಯ ಮತ್ತು ನೆಮ್ಮದಿಯ ಆತ್ಮವು ಅಮೂಲ್ಯವಾಗಿದೆಯೆಂದು ಪೇತ್ರನು ಬರೆದಿದ್ದಾನೆ (1 ಪೇತ್ರ.3:4).
  • ಈ ಪದವನ್ನು ‘ಬೆಲೆಯುಳ್ಳದ್ದು” ಅಥವಾ “ತುಂಬಾ ಇಷ್ಟವಾಗಿರುವುದು” ಅಥವಾ “ಪಾಲಿಸಬೇಕಾದದ್ದು” ಅಥವಾ “ಉನ್ನತ ಬೆಲೆಯುಳ್ಳದ್ದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಬಂಗಾರ, ಬೆಳ್ಳಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H68, H1431, H2532, H2580, H2667, H2896, H3357, H3365, H3366, H3368, H4022, H4030, H4261, H4262, H4901, H5238, H8443, G927, G1784, G2472, G4185, G4186, G5092, G5093

ಅರಮನೆ, ಅರಮನೆಗಳು

# ಪದದ ಅರ್ಥವಿವರಣೆ:

“ಅರಮನೆ” ಎನ್ನುವ ಪದವು ಅರಸನು ಮತ್ತು ತನ್ನ ಕುಟುಂಬ ಸದಸ್ಯರು, ತನ್ನ ದಾಸರು ನಿವಾಸವಾಗಿರುವ ಮನೆಯನ್ನು ಅಥವಾ ಭವನವನ್ನು ಸೂಚಿಸುತ್ತದೆ.

  • ಹೊಸ ಒಡಂಬಡಿಕೆಯಲ್ಲಿ ದಾಖಲು ಮಾಡಿದ ಮಹಾ ಯಾಜಕನು ಕೂಡ ಅರಮನೆಯ ಸಂಕೀರ್ಣದಲ್ಲಿ ಜೀವಿಸಿದ್ದನು.
  • ಸ್ಥಳಗಳನ್ನು ಸುಂದರವಾದ ವಾಸ್ತುಶಿಲ್ಪಿಗಳಿಂದ ಮತ್ತು ಪೀಟೋಪಕರಣಗಳೊಂದಿಗೆ ಹೆಚ್ಚಾಗಿ ಅಲಂಕೃತವಾಗಿದ್ದವು.
  • ಅರಮನೆಯ ಭವನಗಳು ಮತ್ತು ಪೀಟೋಪಕರಣಗಳು ಮರದ ಕಟ್ಟಿಗೆಯಿಂದ ಅಥವಾ ಕಲ್ಲಿನಿಂದ ಕಟ್ಟಲ್ಪಟ್ಟಿರುತ್ತವೆ, ಮತ್ತು ಅನೇಕಬಾರಿ ಭವನಗಳನ್ನು ಬೆಲೆಯುಳ್ಳ ಕಟ್ಟಿಗೆ, ಬಂಗಾರ ಅಥವಾ ದಂತಗಳಿಂದ ಹೊದಿಸಿರುತ್ತಾರೆ.
  • ಅನೇಕ ಇತರ ಜನರು ಕೂಡ ಆ ಅರಮನೆಯ ಸಂಕೀರ್ಣದಲ್ಲಿ ಜೀವಿಸಿದ್ದಾರೆ ಮತ್ತು ಕೆಲಸ ಮಾಡಿದ್ದಾರೆ, ಸಹಜವಾಗಿ ಈ ಅರಮನೆಯಲ್ಲಿ ಅನೇಕ ವಿಧವಾದ ಭವನಗಳು ಮತ್ತು ಅಂಗಳಗಳು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಅಂಗಳ, ಮಹಾ ಯಾಜಕ, ಅರಸ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H643, H759, H1001, H1002, H1004, H1055, H1406, H1964, H1965, H2038, H2918, G833, G933, G4232

ಅರಸ, ಅರಸರು, ರಾಜ್ಯ, ರಾಜ್ಯಗಳು, ರಾಜ್ಯಾಧಿಕಾರ, ರಾಜಪ್ರಭುತ್ವ

# ಪದದ ಅರ್ಥವಿವರಣೆ:

“ಅರಸ” ಎನ್ನುವ ಪದವು ಒಬ್ಬ ವ್ಯಕ್ತಿ ಒಂದು ಪಟ್ಟಣವನ್ನಾಗಲಿ, ರಾಜ್ಯವನ್ನಾಗಲಿ ಅಥವಾ ದೇಶವನ್ನಾಗಲಿ ಸರ್ವೋಚ್ಚ ಆಡಳಿತಗಾರನನ್ನು ಸೂಚಿಸುತ್ತದೆ.

  • ಅರಸನನ್ನು ಸಹಜವಾಗಿ ಆಳುವುದಕ್ಕೆ ಆಯ್ದುಕೊಳ್ಳುತ್ತಾರೆ, ಯಾಕಂದರೆ ತನ್ನ ಕುಟುಂಬವು ಮುಂಚೆ ಇರುವ ಅರಸರಿಗೆ ಸಂಬಂಧಪಟ್ಟಿರುತ್ತದೆ.
  • ಅರಸನು ಮರಣಿಸಿದಾಗ, ಆ ಅರಸನ ಹಿರಿಯ ಮಗನು ತದನಂತರ ಅರಸನಾಗುತ್ತಾನೆ.
  • ಪುರಾತನ ಕಾಲಗಳಲ್ಲಿ ಅರಸನಿಗೆ ತನ್ನ ರಾಜ್ಯದಲ್ಲಿನ ಎಲ್ಲಾ ಜನರ ಮೇಲೆ ಸಂಪೂರ್ಣ ಅಧಿಕಾರವನ್ನು ಹೊಂದಿದ್ದನು.
  • ಯಾವಾಗಲೋ ಒಂದುಸಲ “ಅರಸ” ಎನ್ನುವ ಪದವನ್ನು ನಿಜವಾದ ಅರಸನಲ್ಲದ ಒಬ್ಬ ವ್ಯಕ್ತಿಯನ್ನು ಸೂಚಿಸುವುದಕ್ಕೆ ಉಪಯೋಗಿಸುತ್ತಾರೆ, ಉದಾಹರಣೆಗೆ, ಹೊಸ ಒಡಂಬಡಿಕೆಯಲ್ಲಿ “ಅರಸ ಹೆರೋದ”.
  • ಸತ್ಯವೇದದಲ್ಲಿ ದೇವರನ್ನು ಅನೇಕಸಲ ತನ್ನ ಜನರನ್ನು ಆಳುವ ಅರಸನನ್ನಾಗಿ ಸೂಚಿಸಿದ್ದಾರೆ.
  • “ದೇವರ ರಾಜ್ಯ” ಎನ್ನುವ ಮಾತು ದೇವರು ತನ್ನ ಜನರನ್ನು ಆಳುವದನ್ನು ಸೂಚಿಸುತ್ತದೆ.
  • ಯೇಸುವನ್ನು “ಯೆಹೂದ್ಯರ ಅರಸ”, “ಇಸ್ರಾಯೇಲ್ ಅರಸ”, ಮತ್ತು “ಅರಸರಿಗೆ ಅರಸ” ಎಂಬುದಾಗಿ ಕರೆಯಲ್ಪಟ್ಟಿದ್ದಾನೆ,
  • ಯೇಸು ಹಿಂದಿರುಗಿ ಬರುವಾಗ, ಅರಸನಾಗಿ ಆತನು ಈ ಲೋಕವನ್ನೆಲ್ಲಾ ಆಳುತ್ತಾನೆ.
  • ಈ ಪದವನ್ನು “ಸರ್ವೋಚ್ಚ ಮುಖ್ಯಸ್ಥ” ಅಥವಾ “ಪರಿಪೂರ್ಣವಾದ ನಾಯಕ” ಅಥವಾ “ಸಾರ್ವಭೌಮ ಆಳ್ವಿಕೆ” ಎಂದೂ ಅನುವಾದ ಮಾಡಬಹುದು.
  • “ಅರಸರಿಗೆ ಅರಸ” ಎನ್ನುವ ಮಾತನ್ನು “ಇತರ ಎಲ್ಲಾ ಅರಸರನ್ನು ಆಳುವ ಅರಸ” ಅಥವಾ “ಇತರ ಪಾಲಕರ ಮೇಲೆ ಅಧಿಕಾರವನ್ನು ಹೊಂದಿದ ಸರ್ವೋಚ್ಚ ಆಡಳಿತಗಾರ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಅರಬಿಯ, ಮೇಕೆ, ಇಷ್ಮಾಯೇಲ್, ತ್ಯಾಗ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಉದಾಹರಣೆಗಳು:

  • 08:06 ಐಗುಪ್ತರು ತಮ್ಮ ಅರಸರನ್ನು ಕರೆಯುವ ಫರೋಹನು ಒಂದು ರಾತ್ರಿ ತನ್ನನ್ನು ತುಂಬಾ ಹೆಚ್ಚಾಗಿ ಕಳವಳಗೊಳಿಸುವ ಎರಡು ಕನಸುಗಳನ್ನು ಕಂಡಿದ್ದನು.
  • 16:01 ಇಸ್ರಾಯೇಲ್ಯರಿಗೆ ___ಅರಸನಿಲ್ಲ ___, ಆದ್ದರಿಂದ ಪ್ರತಿಯೊಬ್ಬರು ತಮಗಾಗಿ ಆಲೋಚನೆ ಮಾಡಿಕೊಂಡಿದ್ದನ್ನು ಮಾಡಿದರು.
  • 16:18 ಕೊನೆಗೆ, ಇತರ ಎಲ್ಲಾ ದೇಶದ ಜನರಿಗೆ ಅರಸನು ಇದ್ದಂತೆಯೇ, ಜನರು ತಮಗಾಗಿ ___ ಅರಸ __ ಬೇಕೆಂದು ದೇವರನ್ನು ಕೇಳಿಕೊಂಡರು.
  • 17:05 ಕೊನೆಗೆ, ಸೌಲನು ಯುದ್ಧದಲ್ಲಿ ಮರಣ ಹೊಂದಿದನು, ಮತ್ತು ದಾವೀದನು ಇಸ್ರಾಯೇಲ್ಯರಿಗೆ ___ ಅರಸನಾದನು ____. ಇವನು ಒಳ್ಳೇಯ ___ ಅರಸನಾಗಿದ್ದನು ___ , ಮತ್ತು ಜನರು ಅವನನ್ನು ತುಂಬಾ ಹೆಚ್ಚಾಗಿ ಪ್ರೀತಿಸುತ್ತಿದ್ದರು.
  • 21:06 ಮೆಸ್ಸೀಯ ಪ್ರವಾದಿಯಾಗಿ, ಯಾಜಕನಾಗಿ ಮತ್ತು ___ ಅರಸನಾಗಿ ___ ಇರುತ್ತಾನೆಂದು ದೇವರ ಪ್ರವಾದಿಗಳು ಕೂಡ ಹೇಳಿದ್ದರು.
  • 48:14 ದಾವೀದನು ಇಸ್ರಾಯೇಲಿಯರಿಗೆ ___ ಅರಸನಾಗಿದ್ದನು __, ಆದರೆ ಯೇಸು ಸರ್ವ ವಿಶ್ವಕ್ಕೆ (ಅಥವಾ ಸರ್ವ ಸೃಷ್ಟಿಗೆ) ಅರಸನಾಗಿದ್ದಾನೆ ___!

# ಪದ ಡೇಟಾ:

  • Strong's: H4427, H4428, H4430, G935, G936

ಅರ್ಥಮಾಡಿಕೊಳ್ಳಿ, ಅರ್ಥಮಾಡಿಸುವುದು, ಅರ್ಥಮಾಡಿಕೊಂಡಿದೆ, ಅರ್ಥಮಾಡಿಕೊಳ್ಳುತ್ತಿರುವುದು

# ಪದದ ಅರ್ಥವಿವರಣೆ:

“ಅರ್ಥಮಾಡಿಕೊಳ್ಳಿ” ಎನ್ನುವ ಪದಕ್ಕೆ ಒಂದು ಮಾಹಿತಿಯನ್ನು ಕೇಳುವುದು ಅಥವಾ ಪಡೆದುಕೊಳ್ಳುವುದು ಮತ್ತು ಅದರ ಅರ್ಥ ಅಥವಾ ಭಾವವೇನೆಂದು ತಿಳಿದುಕೊಳ್ಳುವುದಾಗಿರುತ್ತದೆ.

  • “ಅರ್ಥಮಾಡಿಕೊಳ್ಳುತ್ತಿರುವುದು” ಎನ್ನುವ ಮಾತು “ಅರಿವು” ಅಥವಾ “ಜ್ಞಾನ” ಅಥವಾ ಎನಾದರೊಂದನ್ನು ಹೇಗೆ ಮಾಡಬೇಕೆಂದು ಅರಿತುಕೊಳ್ಳುವುದನ್ನು ಸೂಚಿಸುತ್ತದೆ.
  • ಯಾರಾದರೊಬ್ಬರನ್ನು ಅರ್ಥಮಾಡಿಕೊಳ್ಳುವುದೆನ್ನುವುದೂ ಆ ವ್ಯಕ್ತಿ ಹೇಗೆ ಭಾವಿಸುತ್ತಿದ್ದಾನೆಂದು ತಿಳಿದುಕೊಳ್ಳುವುದು ಎಂದರ್ಥ.
  • ಎಮ್ಮಾಹು ಎನ್ನುವ ಊರಿನ ರಸ್ತೆಯಲ್ಲಿ ಹೋಗುತ್ತಿರುವಾಗ ಯೇಸು ತನ್ನ ಶಿಷ್ಯರು ಮೆಸ್ಸೀಯನ ಕುರಿತಾದ ಲೇಖನಗಳ ಅರ್ಥವನ್ನು ತಿಳಿದುಕೊಳ್ಳುವಂತೆ ಮಾಡಿದನು.
  • ಸಂದರ್ಭಾನುಸಾರವಾಗಿ, “ಅರ್ಥಮಾಡಿಕೊಳ್ಳಿ” ಎನ್ನುವ ಮಾತು “ತಿಳಿ” ಅಥವಾ “ನಂಬು” ಅಥವಾ “ಗ್ರಹಿಸು” ಅಥವಾ “(ಯಾವುದಾದರೊಂದರ) ಅರ್ಥ ಏನೆಂಬುವುದನ್ನು ತಿಳಿದುಕೋ” ಎಂದೂ ಅನುವಾದ ಮಾಡಿದನು.
  • ಅನೇಕಬಾರಿ “ಅರ್ಥಮಾಡಿಕೊಳ್ಳಿ” ಎನ್ನುವ ಮಾತು “ಅರಿವು” ಅಥವಾ “ಜ್ಞಾನ” ಅಥವಾ “ಒಳದೃಷ್ಟಿ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ನಂಬು, ತಿಳಿ, ಜ್ಞಾನ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H995, H998, H999, H1847, H2940, H3045, H3820, H3824, H4486, H7200, H7306, H7919, H7922, H7924, H8085, H8394, G50, G145, G191, G801, G1097, G1107, G1108, G1271, G1921, G1922, G1987, G1990, G2657, G3129, G3539, G3563, G3877, G4441, G4907, G4908, G4920, G5424, G5428, G5429, G6063

ಅರ್ಥವಿವರಣೆ ಹೇಳು, ಅರ್ಥವಿವರಣೆ ಹೇಳುವುದು, ಅರ್ಥವಿವರಣೆ ಹೇಳಲಾಗಿದೆ, ಅರ್ಥವಿವರಣೆ ಹೇಳುತ್ತಾ ಇರುವುದು, ಅರ್ಥವಿವರಣೆ, ಅರ್ಥವಿವರಣೆಗಳು, ಅರ್ಥವಿವರಣೆ ಹೇಳುವಾತನು

# ಸತ್ಯಾಂಶಗಳು:

“ಅರ್ಥವಿವರಣೆ ಹೇಳು” ಮತ್ತು “ಅರ್ಥವಿವರಣೆ” ಎನ್ನುವ ಪದಗಳು ಅಸ್ಪಷ್ಟವಾಗಿರುವ ಯಾವುದೇ ಒಂದು ವಿಷಯದ ಅರ್ಥವನ್ನು ವಿವರಿಸುವುದನ್ನು ಮತ್ತು ಅರ್ಥಮಾಡಿಕೊಳ್ಳುವುದನ್ನು ಸೂಚಿಸುತ್ತದೆ.

  • ಸತ್ಯವೇದದಲ್ಲಿ ಈ ಪದಗಳು ಅನೇಕಸಲ ದರ್ಶನಗಳ ಅಥವಾ ಕನಸುಗಳ ಅರ್ಥವನ್ನು ವಿವರಿಸುವ ಸಂದರ್ಭದಲ್ಲಿ ಉಪಯೋಗಿಸಲಾಗಿರುತ್ತದೆ.
  • ಬಾಬೆಲೋನಿಯ ಅರಸನಿಗೆ ಅಸ್ಪಷ್ಟವಾದ ಕನಸುಗಳು ಬಂದಾಗ, ಆ ಕನಸುಗಳಿಗೆ ಅರ್ಥಗಳನ್ನು ಹೇಳುವುದಕ್ಕೆ ಮತ್ತು ಅವುಗಳನ್ನು ವಿವರಿಸುವುದಕ್ಕೆ ದೇವರು ದಾನಿಯೇಲನಿಗೆ ಸಹಾಯ ಮಾಡಿದರು.
  • ಒಂದು ಕನಸಿನ “ಅರ್ಥವಿವರಣೆ” ಎಂದರೆ ಕನಸಿನ ಅರ್ಥದ “ವಿವರಣೆ” ಎಂದರ್ಥ.
  • ಹಳೇ ಒಡಂಬಡಿಕೆಯಲ್ಲಿ ದೇವರು ಕೆಲವೊಂದುಸಲ ಭವಿಷ್ಯತ್ತಿನಲ್ಲಿ ನಡೆಯುವ ಕೆಲವು ಸಂಗತಿಗಳನ್ನು ಹೇಳುವುದಕ್ಕೆ ಕನಸುಗಳನ್ನು ಉಪಯೋಗಿಸಿಕೊಂಡರು. ಆದ್ದರಿಂದ ಆ ಕನಸುಗಳ ಅರ್ಥವಿವರಣೆಗಳೆಲ್ಲವು ಪ್ರವಾದನೆಗಳಾಗಿದ್ದವು.
  • “ಅರ್ಥವಿವರಣೆ ಹೇಳು” ಎನ್ನುವ ಮಾತು ಕೂಡ ಇತರರ ವಿಷಯಗಳ ಅರ್ಥವನ್ನು ಹೊರ ತೆಗೆಯುವುದನ್ನು ಕೂಡ ಸೂಚಿಸುತ್ತದೆ, ಉದಾಹರಣೆಗೆ, ಆಕಾಶವು ಹೇಗೆ ಕಾಣಿಸುತ್ತಿದೆ, ಗಾಳಿಯು ಹೇಗೆ ಬೀಸುತ್ತಿದೆ, ಈಗ ವಾತಾವರಣ ತಣ್ಣಗಿದೆಯಾ ಅಥವಾ ಬಿಸಿಯಾಗಿದೆಯಾ ಎನ್ನುವದರ ಆಧಾರದ ಮೇಲೆ ವಾತಾವರಣದ ಅರ್ಥವನ್ನು ಹೇಳಲಾಗುತ್ತದೆ.
  • “ಅರ್ಥವಿವರಣೆ ಹೇಳು” ಎನ್ನುವ ಮಾತನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಅರ್ಥವನ್ನು ಹೊರ ತೆಗೆ” ಅಥವಾ “ವಿವರಿಸು” ಅಥವಾ “ಅದರ ಅರ್ಥವನ್ನು ಕೊಡು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • “ಅರ್ಥವಿವರಣೆ” ಎನ್ನುವ ಮಾತನ್ನು “ವಿವರಣೆ” ಅಥವಾ “ಅರ್ಥವನ್ನು ಹೇಳುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಬಾಬೆಲೋನಿಯ, ದಾನಿಯೇಲ, ಕನಸು, ಪ್ರವಾದಿ, ದರ್ಶನ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H995, H3887, H6591, H6622, H6623, H7667, H7760, H7922, G1252, G1328, G1329, G1381, G1955, G2058, G3177, G4793

ಅರ್ಹತೆಯನ್ನು ಹೊಂದು, ಅರ್ಹತೆ ಹೊಂದಿದೆ, ಅನರ್ಹತೆಯುಳ್ಳದ್ದು

# ಪದದ ಅರ್ಥವಿವರಣೆ:

“ಅರ್ಹತೆಯನ್ನು ಹೊಂದು” ಎನ್ನುವ ಮಾತು ಕೆಲವೊಂದು ನಿರ್ದಿಷ್ಟವಾದ ಕೌಶಲ್ಯಗಳನ್ನು ಹೊಂದಿದ್ದಾನೆಂದು ಗುರುತಿಸಲ್ಪಡುವುದು ಅಥವಾ ನಿರ್ದಿಷ್ಟವಾದ ಪ್ರಯೋಜನಗಳನ್ನು ಪಡೆದುಕೊಳ್ಳುವುದಕ್ಕೆ ಹಕ್ಕನ್ನು ಸಂಪಾದಿಸುವುದನ್ನು ಸೂಚಿಸುತ್ತದೆ.

  • ಒಂದು ನಿರ್ದಿಷ್ಟವಾದ ಹುದ್ದೆಗೆ “ಅರ್ಹತೆಯನ್ನು “ ಪಡೆದ ಒಬ್ಬ ವ್ಯಕ್ತಿ ಆ ಉದ್ಯೋಗಕ್ಕೆ ಬೇಕಾದ ಕೌಶಲ್ಯಗಳನ್ನು ಮತ್ತು ತರಬೇತಿಯನ್ನು ಹೊಂದಿರಬೇಕು.
  • ಅಪೊಸ್ತಲನಾದ ಪೌಲನು ಕೊಲೊಸ್ಸದವರಿಗೆ ಬರೆದ ತನ್ನ ಪತ್ರಿಕೆಯಲ್ಲಿ ತಂದೆಯಾದ ದೇವರು ವಿಶ್ವಾಸಿಗಳನ್ನು “ಅರ್ಹರನ್ನಾಗಿ” ಮಾಡಿದ್ದಾನೆ, ಅವರೆಲ್ಲರು ತನ್ನ ಬೆಳಕಿನ ರಾಜ್ಯದಲ್ಲಿ ಪಾಲ್ಗೊಳ್ಳಬಹುದು ಎಂದು ಬರೆದಿದ್ದಾನೆ. ಅವರೆಲ್ಲರು ದೈವಿಕವಾದ ಜೀವನಗಳನ್ನು ಮಾಡುವುದಕ್ಕೆ ಬೇಕಾದ ಪ್ರತಿಯೊಂದನ್ನು ದೇವರು ಅವರಿಗೆ ಕೊಟ್ಟಿದ್ದಾನೆಂದು ಈ ಮಾತಿಗೆ ಅರ್ಥವಾಗಿರುತ್ತದೆ.
  • ವಿಶ್ವಾಸಿ ದೇವರ ರಾಜ್ಯದಲ್ಲಿರುವುದಕ್ಕೆ ಹಕ್ಕನ್ನು ಸಂಪಾದಿಸಲು ಸಾಧ್ಯವಾಗುವುದಿಲ್ಲ. ದೇವರು ಯೇಸುವಿನ ರಕ್ತದಿಂದ ತನ್ನನ್ನು ವಿಮೋಚನೆ ಮಾಡುವುದರಿಂದಲೇ ಇದು ಅರ್ಹವಾಗಿರುತ್ತದೆ.

# ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ, “ಅರ್ಹವನ್ನು ಹೊಂದಿದೆ” ಎನ್ನುವ ಮಾತನ್ನು “ಸಿದ್ಧಮಾಡಲ್ಪಟ್ಟಿದೆ” ಅಥವಾ “ಕೌಶಲ್ಯವನ್ನು ಹೊಂದಿದೆ” ಅಥವಾ “ಅಧಿಕಾರ ಕೊಡಲಾಗಿದೆ” ಎಂದೂ ಅನುವಾದ ಮಾಡಬಹುದು.
  • ಯಾರಾದರೊಬ್ಬರನ್ನು “ಅರ್ಹಗೋಳಿಸಲು” ಎನ್ನುವ ಮಾತನ್ನು “ಸಿದ್ಧ ಮಾಡುವುದು” ಅಥವಾ “ಬಲಗೊಳಿಸುವುದು” ಅಥವಾ “ಅಧಿಕಾರ ಕೊಡುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಕೊಲೊಸ್ಸ, ದೈವಿಕವಾಗಿ, ರಾಜ್ಯ, ಬೆಳಕು, ಪೌಲ, ವಿಮೋಚಿಸು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3581

ಅವಮಾನ, ಅವಮಾನವನ್ನುಂಟು ಮಾಡುತ್ತದೆ, ಅವಮಾನ ಮಾಡಿದೆ, ಅವಮಾನಕರ

# ಪದದ ಅರ್ಥವಿವರಣೆ:

“ಅವಮಾನ” ಎನ್ನುವ ಪದಕ್ಕೆ ಒಬ್ಬರನ್ನು ಅವಮಾನಿಸುವ ಕಾರ್ಯವೊಂದನ್ನು ಮಾಡು ಎಂದರ್ಥ. ಇದು ಕೂಡ ಒಬ್ಬ ವ್ಯಕ್ತಿಯ ನಾಚಿಕೆಗೇಡುತನವನ್ನು ಅಥವಾ ಅಗೌರವವನು ಸೂಚಿಸುತ್ತದೆ.

  • “ಅವಮಾನಕರ” ಎನ್ನುವ ಪದವು ಒಬ್ಬ ವ್ಯಕ್ತಿಯನ್ನು ಅಗೌರವಪಡಿಸುವ ಕ್ರಿಯೆಗಳನ್ನು ಅಥವಾ ನಾಚಿಕೆಗೆ ಗುರಿಮಾಡುವ ಕ್ರಿಯೆಗಳನ್ನು ವಿವರಿಸುತ್ತದೆ.
  • “ಅವಮಾನಕರ” ಎನ್ನುವ ಪದವನ್ನು ಕೆಲವೊಂದುಬಾರಿ ಪ್ರಾಮುಖ್ಯವಾದ ವಿಷಯಗಳಿಗೆ ಉಪಯೋಗಿಸಲಾಗದ ವಸ್ತುಗಳನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ.
  • ಮಕ್ಕಳು ತಮ್ಮ ತಂದೆತಾಯಿಗಳನ್ನು ಗೌರವಿಸುವುದಕ್ಕೆ ಮತ್ತು ಅವರಿಗೆ ವಿಧೇಯರಾಗುವುದಕ್ಕೆ ಆಜ್ಞಾಪಿಸಲ್ಪಟ್ಟಿದ್ದಾರೆ. ಯಾರ್ಯಾರು ತಮ್ಮ ತಂದೆತಾಯಿಗಳಿಗೆ ಅವಿಧೇಯರಾಗುತ್ತಾರೋ, ಅವರು ತಮ್ಮ ತಂದೆತಾಯಿಗಳನ್ನು ಅವಮಾನಿಸುತ್ತಿದ್ದಾರೆಂದರ್ಥ. ಅವರು ತಮ್ಮ ತಂದೆತಾಯಿಗಳನ್ನು ಗೌರವಿಸದ ವಿಧಾನದಲ್ಲಿ ಅವರು ನಡೆದುಕೊಳ್ಳುತ್ತಿದ್ದಾರೆ.
  • ಇಸ್ರಾಯೇಲ್ಯರು ಸುಳ್ಳು ದೇವರುಗಳನ್ನು ಆರಾಧನೆ ಮಾಡಿ, ಅನೈತಿಕವಾದ ನಡತೆಯನ್ನು ಅಭ್ಯಾಸ ಮಾಡಿದಾಗ, ಅವರು ಯೆಹೋವಾ ದೇವರನ್ನು ಅವಮಾನಿಸಿದ್ದಾರೆ.
  • ಯೇಸುವಿಗೆ ದೆವ್ವ ಹಿಡಿದಿದೆಯೆಂದು ಹೇಳುವುದರ ಮೂಲಕ ಯೆಹೂದ್ಯರು ಆತನನ್ನು ಅವಮಾನಿಸಿದರು.
  • ಈ ಪದವನ್ನು “ಅಗೌರವ” ಅಥವಾ “ಅಗೌರವದಿಂದ ನಡೆದುಕೊಳ್ಳುವುದು” ಎಂದೂ ಅನುವಾದ ಮಾಡಬಹುದು.
  • “ಅವಮಾನ” ಎನ್ನುವ ಪದವನ್ನು “ಅಗೌರವ” ಅಥವಾ “ಗೌರವವಿಲ್ಲದಿರುವುದು” ಎಂದೂ ಅನುವಾದ ಮಾಡಬಹುದು.
  • ಸಂದರ್ಭಕ್ಕೆ ತಕ್ಕಂತೆ, “ಅವಮಾನಕರ” ಎನ್ನುವದನ್ನು “ಗೌರವವಿಲ್ಲದಿರುವುದು” ಅಥವಾ “ನಾಚಿಕೆತನ” ಅಥವಾ “ಉಪಯುಕ್ತವಲ್ಲ” ಅಥವಾ “ಅಷ್ಟು ಬೆಲೆಯುಳ್ಳದ್ದಲ್ಲ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ನಾಚಿಕೆಗೇಡು, ಗೌರವ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1540, H2490, H2781, H3637, H3639, H5006, H5034, H6172, H6173, H7034, H7036, H7043, G818, G819, G820, G2617

ಅವಮಾನಿಸು, ಅವಮಾನಿಸಲ್ಪಟ್ಟಿದೆ, ಅವಮಾನ

# ಸತ್ಯಾಂಶಗಳು:

“ಅವಮಾನಿಸು” ಎನ್ನುವ ಪದಕ್ಕೆ ಯಾರಾದರೊಬ್ಬರನ್ನು ನಾಚಿಕೆಗೊಳಿಸುವುದು ಅಥವಾ ಅಪಕೀರ್ತಿಗೊಳಿಸುವುದು. ಇದು ಸಹಜವಾಗಿ ಬಹಿರಂಗ ಸ್ಥಳಗಳಲ್ಲಿ ಮಾಡುತ್ತಾರೆ. ಒಬ್ಬರನ್ನು ನಾಚಿಕೆಗೊಳಿಸುವ ಕ್ರಿಯೆಯನ್ನು “ಅವಮಾನಿಸುವುದು” ಎಂದು ಕರೆಯುತ್ತಾರೆ.

  • ದೇವರು ಒಬ್ಬರನ್ನು ತಗ್ಗಿಸಿಕೊಳ್ಳುವಂತೆ ಮಾಡುತ್ತಿದ್ದಾರೆಂದರೆ ಆತನು ಅಹಂಭಾವಿಯಾದ ಒಬ್ಬ ವ್ಯಕ್ತಿಯಲ್ಲಿರುವ ಗರ್ವವನ್ನು ಅಧಿಗಮಿಸಲು ಅವನಿಗೆ ಸಹಾಯ ಮಾಡುವುದಕ್ಕೆ ಅಪಜಯ ಅನುಭವಿಸುವುದಕ್ಕೆ ಕಾರಣವಾಗುತ್ತಿದ್ದಾನೆ ಎಂದರ್ಥ. ಇದು ಒಬ್ಬರನ್ನು ನಾಚಿಕೆಗೊಳಿಸುವುದಕ್ಕೆ ತುಂಬಾ ವ್ಯತ್ಯಾಸವಿರುತ್ತದೆ, ಇದು ಅನೇಕಬಾರಿ ಆ ವ್ಯಕ್ತಿಯನ್ನು ನೋಯಿಸುವುದರ ಕ್ರಮದಲ್ಲಿಯೇ ನಡೆಯುತ್ತದೆ.
  • “ಅವಮಾನಿಸು” ಎನ್ನುವ ಪದವನ್ನು “ನಾಚಿಕೆ” ಅಥವಾ “ನಾಚಿಕೆಪಡುವಂತೆ ಮಾಡು” ಅಥವಾ “ತಬ್ಬಿಬ್ಬುಗೊಳಿಸು” ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಸಾರವಾಗಿ, “ಅವಮಾನಿಸು” ಎನ್ನುವ ಪದವನ್ನು ಅನುವಾದ ಮಾಡುವುದರಲ್ಲಿ “ನಾಚಿಕೆ” ಅಥವಾ “ಕೀಳು ಮಾಡು” ಅಥವಾ “ಅಪಕೀರ್ತಿ ಉಂಟು ಮಾಡು” ಎಂದೆನ್ನುವ ಮಾತುಗಳು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ನಾಚಿಕೆಗೇಡು . ದೀನತ್ವ . ನಾಚಿಕೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H937, H954, H1421, H2778, H2781, H3001, H3637, H3639, H6030, H6031, H6256, H7034, H7043, H7511, H7817, H8216, H8213, H8217, H8589, G2617, G5014

ಅವಿಧೇಯನಾಗು, ಅವಿಧೇಯನಾಗುವಂತೆ ಮಾಡುವುದು, ಅವಿಧೇಯತೆ ತೋರಿಸಿದೆ, ಅವಿಧೇಯತೆ, ಅವಿಧೇಯನು

# ಪದದ ಅರ್ಥವಿವರಣೆ:

“ಅವಿಧೇಯನಾಗು” ಎನ್ನುವದಕ್ಕೆ ಆಧಿಕಾರದಲ್ಲಿದ್ದ ವ್ಯಕ್ತಿ ಆಜ್ಞಾಪಿಸಿದ ಅಥವಾ ಅದೇಶಿಸಿದ ವಿಷಯಗಳಿಗೆ ವಿಧೇಯತೆಯತೆಯನ್ನು ತೋರಿಸದಿರುವುದು ಎಂದರ್ಥ. ಈ ರೀತಿ ನಡೆದುಕೊಳ್ಳುವ ವ್ಯಕ್ತಿಯನ್ನು “ಅವಿಧೇಯನು” ಎಂದು ಕರೆಯುತ್ತಾರೆ.

  • ಅದನ್ನು ಮಾಡಬೇಡವೆಂದು ಹೇಳಿದ ವಿಷಯಗಳನ್ನು ಮಾಡುವವನು ಕೂಡ ಅವಿಧೇಯನಾಗುತ್ತಿದ್ದಾನೆ ಎಂದರ್ಥ.
  • ಅವಿಧೇಯನಾಗು ಎನ್ನುವುದಕ್ಕೆ ಕೂಡ ಆಜ್ಞಾಪಿಸಲ್ಪಟ್ಟ ವಿಷಯಗಳನ್ನು ಮಾಡದೇ ತಿರಸ್ಕರಿಸು ಎಂದರ್ಥ.
  • “ಅವಿಧೇಯನು” ಎನ್ನುವ ಪದವನ್ನು ಸಹಜವಾಗಿ ಅವಿಧೇಯನಾಗುವ ಅಥವಾ ತಿರಸ್ಕಾರ ಮಾಡುವ ಒಬ್ಬ ವ್ಯಕ್ತಿಯ ಗುಣಲಕ್ಷಣವನ್ನು ವಿವರಿಸುವುದಕ್ಕೆ ಕೂಡ ಉಪಯೋಗಿಸುತ್ತಾರೆ. ಈ ಮಾತಿಗೆ ಅವರು ಪಾಪಾತ್ಮರು ಅಥವಾ ದುಷ್ಟರು ಎಂದರ್ಥ.
  • “ಅವಿಧೇಯತೆ” ಎನ್ನುವ ಪದಕ್ಕೆ “ವಿಧೇಯತೆ ತೋರಿಸಿದ ಕ್ರಿಯೆ” ಅಥವಾ “ದೇವರು ಬಯಸುವ ಕಾರ್ಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವುದು” ಎಂದರ್ಥ.
  • “ಅವಿಧೇಯ ಜನರು” ಎನ್ನುವ ಮಾತನ್ನು “ಯಾವಾಗಲೂ ಅವಿಧೇಯತೆಯನ್ನು ತೋರಿಸುವ ಜನರು” ಅಥವಾ “ದೇವರ ಆಜ್ಞೆಗಳ ಪ್ರಕಾರ ನಡೆದುಕೊಳ್ಳದ ಜನರು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಅಧಿಕಾರ, ದುಷ್ಟತನ, ಪಾಪ, ವಿಧೇಯನಾಗು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಉದಾಹರಣೆಗಳು:

  • 02:11 “ನೀನು ನಿನ್ನ ಹೆಂಡತಿಯ ಮಾತನ್ನು ಕೇಳಿ, ನನಗೆ ___ ಅವಿಧೇಯನಾದೆ ___” ಎಂದು ದೇವರು ಆ ಮನುಷ್ಯನೊಂದಿಗೆ ಮಾತನಾಡಿದರು.
  • 13:07 ಈ ಆಜ್ಞೆಗಳಿಗೆ ಜನರು ____ ವಿಧೇಯರಾದರೆ,____ ದೇವರು ಅವರನ್ನು ಆಶೀರ್ವಾದ ಮಾಡುವನೆಂದು ಮತ್ತು ಅವರನ್ನು ಸಂರಕ್ಷಿಸುವನೆಂದು ದೇವರು ವಾಗ್ಧಾನ ಮಾಡಿದ್ದಾರೆ. ಅವರು ಆ ಆಜ್ಞೆಗಳಿಗೆ ___ ಅವಿಧೇಯರಾದರೆ ____, ದೇವರು ಅವರನ್ನು ಶಿಕ್ಷಿಸುವನು.
  • 16:02 ಇಸ್ರಾಯೇಲ್ಯರು ದೇವರಿಗೆ ___ ಅವಿಧೇಯತೆಯನ್ನು ____ ತೋರಿಸಿರುವದರಿಂದ, ಅವರನ್ನು ಸೋಲಿಸುವುದಕ್ಕೆ ತಮ್ಮ ಶತ್ರುಗಳನ್ನು ಅನುಮತಿಸುವುದರ ಮೂಲಕ ಆತನು ಅವರನ್ನು ಶಿಕ್ಷಿಸಿದನು.
  • 35:12 “ಈ ಎಲ್ಲಾ ವರ್ಷಗಳು ನಾನು ನಿಮಗೆ ತುಂಬಾ ನಂಬಿಕೆಯಿಂದ ಕೆಲಸಮಾಡಿದ್ದೇನೆ” ಎಂದು ದೊಡ್ಡ ಮಗ ತನ್ನ ತಂದೆಗೆ ಹೇಳಿದನು. ನಿಮಗೆ ನಾನು ಎಂದಿಗೂ ___ ಅವಿಧೇಯನಾಗಲಿಲ್ಲ ____, ನೀನು ನನಗೆ ಒಂದು ಚಿಕ್ಕ ಮೇಕೆಯನ್ನು ಕೊಡದಿದ್ದರೂ, ನಾನು ನನ್ನ ಸ್ನೇಹಿತರೊಂದಿಗೆ ಸಂತೋಷವನ್ನು ಹಂಚಿಕೊಳ್ಳುತ್ತೇನೆ.

# ಪದ ಡೇಟಾ:

  • Strong's: H4784, H5674, G506, G543, G544, G545, G3847, G3876

ಅಸಹ್ಯ, ಅಸಹ್ಯಿಸಿಕೊಳ್ಳಲಾಗಿದೆ, ಅಸಹ್ಯ ಹುಟ್ಟಿಸುವ

# ಸತ್ಯಾಂಶಗಳು:

“ಅಸಹ್ಯ ಹುಟ್ಟಿಸುವ” ಎನ್ನುವ ಪದವು ಏನಾದರೊಂದನ್ನು ಇಷ್ಟಪಡದಿರುವುದನ್ನು ಮತ್ತು ತಿರಸ್ಕರಿಸುವುದನ್ನು ವಿವರಿಸುತ್ತದೆ. ಏನಾದರೊಂದನ್ನು “ಅಸಹ್ಯ” ಮಾಡಿಕೊಳ್ಳುವುದು ಎನ್ನುವುದಕ್ಕೆ ಅದನ್ನು ಬಲವಾಗಿ ಇಷ್ಟಪಡದಿರುವುವುದನ್ನು ಸೂಚಿಸುತ್ತದೆ.

  • ಅನೇಕಬಾರಿ ಸತ್ಯವೇದವು ಅಸಹ್ಯಿಸಿಕೊಳ್ಳುವ ದುಷ್ಟತನದ ಕುರಿತಾಗಿ ಮಾತನಾಡುತ್ತದೆ. ಇದಕ್ಕೆ ದುಷ್ಟತನವನ್ನು ದ್ವೇಷಿಸು ಮತ್ತು ಅದನ್ನು ತಿರಸ್ಕಾರ ಮಾಡು ಎಂದರ್ಥ.
  • ಸುಳ್ಳು ದೇವರನ್ನು ಆರಾಧನೆ ಮಾಡುವವರ ದುಷ್ಟ ಕ್ರಿಯೆಗಳನ್ನು ವಿವರಿಸುವುದಕ್ಕೆ ದೇವರು “ಅಸಹ್ಯ ಹುಟ್ಟಿಸುವ” ಎನ್ನುವ ಪದವನ್ನು ಉಪಯೋಗಿಸಿದ್ದಾರೆ.
  • ಅನ್ಯರಾದ ಇತರ ಜನಾಂಗದವರು ಅಭ್ಯಾಸ ಮಾಡುವ ಪಾಪವುಳ್ಳ, ಅನೈತಿಕವಾದ ಕ್ರಿಯೆಗಳನ್ನು “ಅಸಹ್ಯಿಸಿಕೊಳ್ಳಬೇಕೆಂದು” ಇಸ್ರಾಯೇಲ್ಯರು ಆಜ್ಞಾಪಿಸಲ್ಪಟ್ಟಿದ್ದರು.
  • ತಪ್ಪುದಾರಿಯಲ್ಲಿ ನಡೆಯುವ ಎಲ್ಲಾ ಲೈಂಗಿಕ ಕಾರ್ಯಗಳನ್ನು “ಅಸಹ್ಯವನ್ನುಂಟು ಮಾಡುವ ಕಾರ್ಯಗಳು” ಎಂದು ದೇವರು ಕರೆದರು.
  • ಕಣಿ ಹೇಳುವುದು, ಮಾಟಗಾತಿ ಮತ್ತು ಚಿಕ್ಕಮಕ್ಕಳನ್ನು ಬಲಿ ಕೊಡುವುದು ಎನ್ನುವ ಇತ್ಯಾದಿ ಕ್ರಿಯೆಗಳೆಲ್ಲವೂ ದೇವರಿಗೆ “ಅಸಹ್ಯ ಹುಟ್ಟಿಸುವ” ಕ್ರಿಯೆಗಳಾಗಿರುತ್ತವೆ.
  • “ಅಸಹ್ಯ” ಎನ್ನುವ ಪದವನ್ನು “ಬಲವಾಗಿ ತಿರಸ್ಕರಿಸು” ಅಥವಾ “ದ್ವೇಷಿಸು” ಅಥವಾ “ದುಷ್ಟತ್ವವನ್ನು ಸೂಚಿಸುವುದು” ಎಂದೂ ಅನುವಾದ ಮಾಡಬಹುದು.
  • “ಅಸಹ್ಯ ಹುಟ್ಟಿಸುವ” ಎನ್ನುವ ಪದವನ್ನು “ಭಯಂಕರವಾದ ದುಷ್ಟತ್ವ” ಅಥವಾ “ಅಸಹ್ಯಕರ” ಅಥವಾ “ತಿರಸ್ಕರಿಸುವುದಕ್ಕೆ ಯೋಗ್ಯ” ಎಂದೂ ಅನುವಾದ ಮಾಡಬಹುದು.
  • ದುಷ್ಟುರಿಗೆ “ಅಸಹ್ಯ ಹುಟ್ಟಿಸುವುದು” ನೀತಿವಂತರಿದ್ದಾರೆಂದು ಅನ್ವಯಿಸಿದಾಗ, ಇದನ್ನು “ಅತೀ ಅಹಿತಕರವಾಗಿ ಏಣಿಸಲ್ಪಡುವುದು” ಅಥವಾ “ಅಸಹ್ಯವನ್ನುಂಟು ಮಾಡುವ” ಅಥವಾ “ಅದರಿಂದ ತಿರಸ್ಕರಿಸಲ್ಪಟ್ಟಿದೆ” ಎಂದೂ ಅನುವಾದ ಮಾಡಬಹುದು.
  • ಊಟಕ್ಕೆ ಸರಿಯಾಗಿರದ ಮತ್ತು “ಅಶುದ್ಧ” ಎಂದು ದೇವರು ತೀರ್ಮಾನಿಸಿದ ಕೆಲವೊಂದು ಪ್ರಾಣಿಗಳನ್ನು “ಅಸಹ್ಯಿಸಿಕೊಳ್ಳಬೇಕೆಂದು” ದೇವರು ಇಸ್ರಾಯೇಲ್ಯರಿಗೆ ಹೇಳಿದನು. ಇದನ್ನು “ಬಲವಾಗಿ ಇಷ್ಟಪಡದೇ ಇರುವುದು” ಅಥವಾ “ತಿರಸ್ಕರಿಸುವುದು” ಅಥವಾ “ಅಂಗೀಕಾರ ಮಾಡದಂತೆ ಇರುವವುಗಳು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಕಣಿ ಹೇಳುವುದು, ಶುದ್ಧ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1602, H6973, H8130, H8251, H8262, H8263, H8441, H8581, G946, G947, G948, G4767, G5723, G3404

ಅಹಂಕಾರ, ಜಂಬ, ದುರಹಂಕಾರ

# ಪದದ ಅರ್ಥವಿವರಣೆ:

“ಅಹಂಕಾರ” ಎನ್ನುವ ಪದಕ್ಕೆ ಗರ್ವ ಎಂದರ್ಥ, ಸಹಜವಾಗಿ ಬಾಹ್ಯ ವಿಧಾನವನ್ನು ಸೂಚಿಸುತ್ತದೆ.

  • ಅಹಂಕಾರವುಳ್ಳ ವ್ಯಕ್ತಿ ಯಾವಾಗಲೂ ತನ್ನ ಕುರಿತಾಗಿ ಹೆಗ್ಗಳಿಕೆ ಹೇಳಿಕೊಳ್ಳುತ್ತಿರುತ್ತಾನೆ.
  • ಅಹಂಕಾರದಿಂದ ಇರುವುದೆಂದರೆ ಸಹಜವಾಗಿ ನನಗಿಂತ ಇತರರು ಅಷ್ಟು ಪ್ರಾಮುಖ್ಯವಲ್ಲ ಅಥವಾ ಅಷ್ಟು ಪ್ರತಿಭಾವಂತರಲ್ಲ ಎಂದು ಆಲೋಚನೆ ಮಾಡುವ ಸ್ವಭಾವವನ್ನು ಹೊಂದಿರುತ್ತಾರೆ.
  • ದೇವರನ್ನು ಗೌರವಿಸದ ಜನರು ಮತ್ತು ಆತನಿಗೆ ವಿರುದ್ಧವಾಗಿ ನಡೆದುಕೊಳ್ಳುವ ಜನರು ಅಹಂಕಾರವುಳ್ಳವರು, ಯಾಕಂದರೆ ಅವರಿಗೆ ದೇವರು ಎಷ್ಟು ದೊಡ್ಡವನೆಂದು ಅವರಿಗೆ ಗೊತ್ತಿರುವುದಿಲ್ಲ.

(ಈ ಪದಗಳನ್ನು ಸಹ ನೋಡಿರಿ : ತಿಳುವಳಿಕೆ, ಹೆಗ್ಗಳಿಕೆ, ಗರ್ವ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1346, H1347, H6277

ಅಳಿಸಿ ಹಾಕು, ಅಳಿದುಹೋಗು, ಅಳಿದುಹೋಗಿದೆ, ವರೆಸು, ವರೆಸುಹಾಕು, ವರೆಸಿದೆ

ಪದದ ಅರ್ಥವಿವರಣೆ:

“ಅಳಿಸು ಹಾಕು” ಮತ್ತು “ವರೆಸು” ಎನ್ನುವ ಪದಗಳಿಗೆ ಸಂಪೂರ್ಣವಾಗಿ ತೆಗೆದುಹಾಕು, ಏನಾದರೊಂದನ್ನು ಅಥವಾ ಯಾರಾದರೊಬ್ಬರನ್ನು ನಾಶಗೊಳಿಸು ಎಂದರ್ಥ.

  • ದೇವರು ಅವರನ್ನು ಕ್ಷಮಿಸುವುದರ ಮೂಲಕ ಆತನು ಅವರ ಪಾಪಗಳನ್ನು “ಅಳಿಸಿ ಹಾಕಿದ್ದಾನೆ” ಎನ್ನುವ ಮಾತಿನಂತೆ, ಈ ಎಲ್ಲಾ ಮಾತುಗಳನ್ನು ಧನಾತ್ಮಾಕ ಭಾವನೆಯಲ್ಲಿ ಉಪಯೋಗಿಸಬಹುದು,
  • ದೇವರು ಜನರ ಪಾಪಗಳ ಕಾರಣದಿಂದ ಅವರನ್ನು ನಾಶಗೊಳಿಸಿದ್ದಾರೆ, ಆತನು ಜನರ ಗುಂಪನ್ನು “ವರೆಸಿ ಬಿಟ್ಟಿದ್ದಾರೆ” ಅಥವಾ “ಅಳಿಸಿ ಬಿಟ್ಟಿದ್ದಾರೆ” ಎನ್ನುವ ಮಾತಿನಂತೆ, ಈ ಪದಗಳು ಅನೇಕಬಾರಿ ಋಣಾತ್ಮಕ ಭಾವನೆಯಲ್ಲಿಯೂ ಉಪಯೋಗಿಸಲ್ಪಟ್ಟಿವೆ.
  • ದೇವರ ಜೀವ ಗ್ರಂಥದಲ್ಲಿ ಒಬ್ಬ ವ್ಯಕ್ತಿಯ ಹೆಸರು “ಅಳಿಸಲ್ಪಡುವುದು” ಅಥವಾ “ವರೆಸಲ್ಪಡುವುದು” ಎನ್ನುವದರ ಕುರಿತಾಗಿ ಸತ್ಯವೇದ ಮಾತನಾಡುತ್ತದೆ, ಈ ಮಾತಿಗೆ ಆ ವ್ಯಕ್ತಿ ನಿತ್ಯ ಜೀವವನ್ನು ಹೊಂದಿಕೊಳ್ಳುವುದಿಲ್ಲ ಎಂದರ್ಥ.

# ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ, ಈ ಮಾತನ್ನು “ತೊಲಗಿಸುವುದು” ಅಥವಾ “ತೆಗೆದುಹಾಕುವುದು” ಅಥವಾ “ಸಂಪೂರ್ಣವಾಗಿ ನಾಶಗೊಳಿಸುವುದು” ಅಥವಾ “ಸಂಪೂರ್ಣವಾಗಿ ತೆಗೆದುಹಾಕುವುದು” ಎಂದೂ ಅನುವಾದ ಮಾಡಬಹುದು.
  • ಜೀವಗ್ರಂಥದಿಂದ ಒಬ್ಬರ ಹೆಸರನ್ನು ಅಳಿಸಲಾಗುವುದು ಎಂದು ಸೂಚಿಸುವಾಗ, “ಅದರಿಂದ ತೆಗೆದುಹಾಕಲ್ಪಡುವುದು” ಅಥವಾ “ಅದರಿಂದ ತೊಲಗಿಸಲ್ಪಡುತ್ತದೆ” ಎಂದರ್ಥ.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3971, H4229, G631, G1591, G1813

ಆಕಳು, ಆಕಳುಗಳು, ದನ, ದನಗಳು, ಕರು, ಕರುಗಳು, ಜಾನುವಾರು, ಪಡ್ಡೆ, ಎತ್ತು, ಎತ್ತುಗಳು

# ಪದದ ಅರ್ಥವಿವರಣೆ

“ಹಸು”, “ದನ”, “ಪಡ್ಡೆ”, “ಎತ್ತು” ಮತ್ತು “ಜಾನುವಾರು” ಎನ್ನುವ ಪದಗಳು ನಾಲ್ಕು ಕಾಲುಗಳು ಇರುವ, ಹುಲ್ಲು ತಿನುವ ಗೋಜಾತಿಗೆ ಸೇರಿದ ಪ್ರಾಣಿಗಳನ್ನು ಸೂಚಿಸುತ್ತದೆ.

  • ಈ ವಿಧವಾದ ಪ್ರಾಣಿಗಳಲ್ಲಿ ಸ್ತ್ರೀ ಪ್ರಾಣಿಯನ್ನು “ಆಕಳು” ಎಂದು, ಗಂಡು ಪ್ರಾಣಿಯನ್ನು “ಎತ್ತು” ಎಂದು ಮತ್ತು ಅವುಗಳಿಗೆ ಹುಟ್ಟುವ ಪ್ರಾಣಿಯನ್ನು “ಕರು” ಎಂದು ಕರೆಯುತ್ತಾರೆ.
  • ಸತ್ಯವೇದದಲ್ಲಿ, ಜನರು ಭುಜಿಸುವದಕ್ಕೆ ಮತ್ತು ಬಲಿ ಅರ್ಪಿಸುವದಕ್ಕೆ ಜಾನುವಾರು “ಪವಿತ್ರವಾದ” ಪ್ರಾಣಿಗಳಲ್ಲಿ ಒಂದಾಗಿದ್ದವು. ಪ್ರಾರ್ಥಮಿಕವಾಗಿ ಮಾಂಸ ಮತ್ತು ಹಾಲಿಗಾಗಿ ಅವುಗಳನ್ನು ಸಾಕುತ್ತಿದ್ದರು.

ಕರುಗೆ ಇನ್ನೂ ಜನ್ಮ ನೀಡದೆ ಇರುವ ಆಕಳನ್ನು “ಪಡ್ಡೆ” ಎಂದು ಕರೆಯುತ್ತಾರೆ.

ವ್ಯವಸಾಯ ಕೆಲಸ ಮಾಡುವಂತೆ ಪ್ರತ್ಯೇಕವಾಗಿ ತರಬೇತಿ ನೀಡಿರುವ ಜಾನುವಾರಕ್ಕೆ “ಎತ್ತು” ಎನ್ನುತ್ತಾರೆ. “ಎತ್ತುಗಳು” ಇದಕ್ಕೆ ಬಹುವಚನ ರೂಪವಾಗಿರುತ್ತದೆ. ಸಹಜವಾಗಿ ಎತ್ತುಗಳು ಪುಲ್ಲಿಂಗವಾಗಿರುತ್ತವೆ ಮತ್ತು ಹಿಡುಕಲ್ಪಡುತ್ತವೆ.

  • ಸತ್ಯವೇದಲ್ಲೆಲ್ಲ ಎತ್ತುಗಳನ್ನು ಗಾಡಿ ಅಥವಾ ನೇಗಿಲು ಎಳೆಯುವುದಕ್ಕೆ ನೊಗದ ಮೂಲಕ ಜೊತೆಯಲ್ಲಿ ಕಟ್ಟಲ್ಪಟ್ಟಿರುವ ಪ್ರಾಣಿಗಳೆಂದು ತೋರಿಸುತ್ತಿದೆ.
  • ನೊಗದ ಕೆಳಗೆ ಎತ್ತುಗಳು ಜೊತೆಯಾಗಿ ಕೆಲಸಮಾಡುತ್ತಿರುವುದು ಸತ್ಯವೇದದಲ್ಲಿ ಎಷ್ಟು ಸಾಮಾನ್ಯವಾಗಿ ಕಾಣಿಸುವ ದೃಶ್ಯವಾಗಿತ್ತೆಂದರೆ “ನೊಗದ ಕೆಳಗೆ” ಎನ್ನುವ ಪದವನ್ನು ರೂಪಕಾಲಂಕಾರದಲ್ಲಿ ಕಷ್ಟಕರವಾದ ಕೆಲಸ ಮತ್ತು ಶ್ರಮಕ್ಕೆ ಸೂಚಿಸುತ್ತಿದ್ದರು.
  • ಜಾನವಾರದಲ್ಲಿ ದನ ಒಂದು ವಿಧವಾದ ಪುಲ್ಲಿಂಗ ಪ್ರಾಣಿಯಾಗಿತ್ತು, ಆದರೆ ಅದನ್ನು ಹಿಡುಕಲ್ಪಡುವುದಿಲ್ಲ ಮತ್ತು ಕೆಲಸ ಮಾಡುವ ಪ್ರಾಣಿಯಾಗಿ ತರಬೇತಿಹೊಂದುವುದಿಲ್ಲ.

(ಇದನ್ನು ನೋಡಿರಿ: ಗೊತ್ತಿಲ್ಲದ ಸಂಗತಿಗಳನ್ನು ಹೇಗೆ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ನೊಗ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H47, H441, H504, H929, H1165, H1241, H1241, H1241, H4399, H4735, H4806, H5695, H5697, H5697, H6499, H6499, H6510, H6510, H6629, H7214, H7716, H7794, H7794, H7921, H8377, H8377, H8450, H8450, G1016, G1151, G2353, G2934, G3447, G3448, G4165, G5022, G5022

ಆಕ್ಷೇಪಣೆ, ಆಕ್ಷೇಪಣೆಗಳು, ಆಕ್ಷೇಪಿಸಿದೆ, ಆಕ್ಷೇಪಿಸುವುದು, ಆಕ್ಷೇಪಭರಿತವಾಗಿ

# ಪದದ ಅರ್ಥವಿವರಣೆ:

ಇನ್ನೊಬ್ಬರನ್ನು ಆಕ್ಷೇಪಿಸುವುದು ಎಂದರೆ ಒಬ್ಬ ವ್ಯಕ್ತಿಯ ನಡತೆಯನ್ನು ಅಥವಾ ಗುಣಗಳನ್ನು ವಿಮರ್ಶೆ ಮಾಡುವುದು ಅಥವಾ ನಿರಾಕರಿಸುವುದು ಎಂದರ್ಥ. ಆಕ್ಷೇಪಣೆ ಎಂದರೆ ಒಬ್ಬ ವ್ಯಕ್ತಿಯ ಕುರಿತಾಗಿ ನಕಾರಾತ್ಮಕವಾಗಿ ವ್ಯಾಖ್ಯೆ ಮಾಡುವುದು ಎಂದರ್ಥ.

  • ಒಬ್ಬ ವ್ಯಕ್ತಿ “ಆಕ್ಷೇಪಣೆ ಮೇಲಿದ್ದಾನೆ” ಅಥವಾ “ಆಕ್ಷೇಪಣೆಗೆ ಅತೀತವಾಗಿದ್ದಾನೆ” ಅಥವಾ “ಆಕ್ಷೇಪಣೆಗಳಿಲ್ಲದೇ ಇದ್ದಾನೆ” ಎನ್ನುವ ಮಾತುಗಳಿಗೆ ಆ ವ್ಯಕ್ತಿಯ ನಡತೆಯು ದೇವರನ್ನು ಘನಪಡಿಸುವ ವಿಧಾನದಲ್ಲಿದೆ ಮತ್ತು ಅವನ ಕುರಿತಾಗಿ ಹೇಳುವುದಕ್ಕೆ ಒಂದು ಚಿಕ್ಕ ವಿಮರ್ಶೆಯು ಇಲ್ಲ ಎಂದು ಹೇಳುವದಾಗಿರುತ್ತದೆ.
  • “ಆಕ್ಷೇಪಣೆ” ಎನ್ನುವ ಪದವನ್ನು “ಆರೋಪ” ಅಥವಾ “ಅವಮಾನ” ಅಥವಾ “ನಾಚಿಕೆಗೇಡು” ಎಂದೂ ಅನುವಾದ ಮಾಡಬಹುದು.
  • “ಆಕ್ಷೇಪಣೆ” ಎನ್ನುವ ಪದವನ್ನು “ಗದರಿಸು” ಅಥವಾ “ಆರೋಪಿಸು” ಅಥವಾ “ವಿಮರ್ಶಿಸು” ಎಂದು ಸಂದರ್ಭಾನುಗುಣವಾಗಿ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಆರೋಪಿಸು, ಗದರಿಸು, ನಾಚಿಕೆಗೇಡು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1421, H1442, H2617, H2659, H2778, H2781, H3637, H3639, H7036, G410, G423, G819, G3059, G3679, G3680, G3681, G5195, G5196, G5484

ಆಜ್ಞಾವಿಧಿ, ಅಜ್ಞಾವಿಧಿಗಳು

# ಪದದ ಅರ್ಥವಿವರಣೆ:

ಆಜ್ಞಾವಿಧಿ ಎನ್ನುವುದು ಅನುಸರಿಸುವುದಕ್ಕೆ ಜನರಿಗೆ ಕೊಡುವ ಸೂಚನೆಗಳು ಅಥವಾ ನಿಯಮಗಳ ಕಾನೂನು, ಅಥವಾ ಸಾರ್ವಜನಿಕ ಕಾಯಿದೆಯಾಗಿರುತ್ತದೆ. ಈ ಪದವು “ಅಭಿಷೇಕ” ಅಥವಾ “ನೇಮಿಸು” ಎನ್ನುವ ಪದಕ್ಕೆ ತುಂಬಾ ಹತ್ತಿರವಾಗಿರುತ್ತದೆ.

  • ಕೆಲವೊಂದುಬಾರಿ ಆಜ್ಞಾವಿಧಿ ಎನ್ನುವುದು ಅನೇಕ ವರ್ಷಗಳು ಅಭ್ಯಾಸ ಮಾಡುವುದರ ಮೂಲಕ ಸ್ಥಿರವಾಗಿರುವ ಒಂದು ಪದ್ಧತಿಯಾಗಿರುತ್ತದೆ.
  • ಸತ್ಯವೇದದಲ್ಲಿ ಆಜ್ಞಾವಿಧಿ ಎನ್ನುವುದು ಇಸ್ರಾಯೇಲ್ಯರು ಮಾಡಬೇಕೆಂದು ದೇವರು ಆಜ್ಞಾಪಿಸಿದ ವಿಷಯಗಳಾಗಿರುತ್ತವೆ. ಕೆಲವೊಂದುಬಾರಿ ಆತನು ಇದನ್ನು ಶಾಶ್ವತವಾಗಿ ಯಾವಾಗಲೂ ಮಾಡಬೇಕೆಂದು ಆಜ್ಞಾಪಿಸಿರುತ್ತಾನೆ.
  • “ಆಜ್ಞಾವಿಧಿ” ಎನ್ನುವ ಪದವನ್ನು “ಬಹಿರಂಗ ಶಾಸನ” ಅಥವಾ “ಕಾಯಿದೆ” ಅಥವಾ “ಕಾನೂನು” ಎಂದು ಸಂದರ್ಭಾನುಸಾರವಾಗಿ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಆಜ್ಞೆ, ಕಾಯಿದೆ, ಕಾನೂನು, ಅಭಿಷೇಕಿಸು, ಶಾಸನ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2706, H2708, H4687, H4931, H4941, G1296, G1345, G1378, G1379, G2937, G3862

ಆಣೆ, ಆಣೆಗಳು, ಪ್ರಮಾಣ, ಪ್ರಮಾಣಗಳು, ಆಣೆ ಇಡುವುದು, ಅದರ ಮೂಲಕ ಅಣೆಯನ್ನಿಡು, ಅದರ ಮೂಲಕ ಆಣೆಗಳನ್ನು ಮಾಡುವುದು

# ಪದದ ಅರ್ಥವಿವರಣೆ:

ಸತ್ಯವೇದದಲ್ಲಿ ಪ್ರಮಾಣ ಎನ್ನುವುದು ಏನಾದರೊಂದನ್ನು ಮಾಡುವುದಕ್ಕೆ ಒಂದು ಸಂಪ್ರದಾಯಿಕವಾದ ಭರವಸೆ ಕೊಡುವುದಾಗಿರುತ್ತದೆ. ಪ್ರಮಾಣ ಮಾಡಿದ ಒಬ್ಬ ವ್ಯಕ್ತಿ ಆ ಪ್ರಮಾಣವನ್ನು ತಪ್ಪದೇ ನೆರವೇರಿಸಿಕೊಳ್ಳಬೇಕಾದ ಅವಶ್ಯಕತೆಯುಂಟು. ಪ್ರಮಾಣ ಮಾಡುವುದರಲ್ಲಿ ನಂಬಿಕೆಯು ಮತ್ತು ನಿಜತತ್ವದಿಂದ ಇರುವ ಬಾಧ್ಯತೆಯನ್ನು ಒಳಗೊಂಡಿರುತ್ತದೆ.

  • ಕಾನೂನು ನ್ಯಾಯಾಲಯದಲ್ಲಿ ಸಾಕ್ಷಿಗಳು ಅನೇಕಬಾರಿ ಅವರು ಹೇಳುವುದೆಲ್ಲಾ ನಿಜವು ಮತ್ತು ನಡೆದದ್ದೂ ಆಗಿರುತ್ತದೆಯೆಂದು ಪ್ರಮಾಣ ಮಾಡುವುದಕ್ಕೆ ಆಣೆ ಇಡುತ್ತಾರೆ.
  • ಸತ್ಯವೇದದಲ್ಲಿ “ಆಣೆ” ಎನ್ನುವ ಪದಕ್ಕೆ ಪ್ರಮಾಣವನ್ನು ಮಾತನಾಡುವುದು ಎಂದರ್ಥ.
  • “ಅದರ ಮೂಲಕ ಆಣೆ ಇಡುವುದು” ಎನ್ನುವ ಮಾತಿಗೆ ಯಾರಾದರೊಬ್ಬರ ಅಥವಾ ಯಾವುದಾದರೊಂದರ ಹೆಸರನ್ನು ಉಪಯೋಗಿಸಿಕೊಂಡು ಅದರ ಆಧಾರದ ಮೇಲೆ ಅಥವಾ ಅದರ ಶಕ್ತಿಯ ಮೇಲೆ ಪ್ರಮಾಣವನ್ನು ಮಾಡುವುದು ಎಂದರ್ಥ.
  • “ಪ್ರಮಾಣವನ್ನು ಆಣೆಪೂರ್ವಕವಾಗಿ” ಎನ್ನುವ ಮಾತಿನಲ್ಲಿರುವಂತೆ ಕೆಲವೊಂದುಬಾರಿ ಈ ಪದಗಳನ್ನು ಸೇರಿಸಿ ಉಪಯೋಗಿಸುತ್ತಾರೆ.
  • ಅಬ್ರಾಹಾಮನು ಮತ್ತು ಅಬೀಮೆಲೆಕನು ಬಾವಿಯನ್ನು ಉಪಯೋಗಿಸುಕೊಳ್ಳುವ ವಿಷಯದಲ್ಲಿ ಇಬ್ಬರು ಸೇರಿ ಒಂದು ಒಪ್ಪಂದವನ್ನು ಮಾಡಿಕೊಂಡಾಗ ಪ್ರಮಾಣ ವಚನವನ್ನು ಹೇಳಿದ್ದರು.
  • ಅಬ್ರಾಹಾಮನು ತನ್ನ ದಾಸನಿಗೆ ಅವನು ಇಸಾಕನಿಗಾಗಿ ಅಬ್ರಾಹಾಮನ ಬಂಧುಗಳಲ್ಲಿ ಹೆಂಡತಿಯನ್ನು ಕಂಡುಕೊಳ್ಳಬೇಕೆಂದು ಆಣೆಯನ್ನಿಡಬೇಕೆಂದು (ಸಾಂಪ್ರದಾಯಿಕವಾಗಿ ಮಾಡುವ ಪ್ರಮಾಣ) ಹೇಳಿದನು.
  • ದೇವರು ಕೂಡ ಅಣೆಗಳನ್ನು ಇಟ್ಟುಕೊಂಡಿದ್ದಾನೆ, ಅವುಗಳಲ್ಲಿ ಆತನು ತನ್ನ ಜನರೊಂದಿಗೆ ಪ್ರಮಾಣಗಳನ್ನು ಮಾಡಿದ್ದನು.
  • ಈ ಆಧುನಿಕ ದಿನಗಳಲ್ಲಿ “ಆಣೆ” ಎನ್ನುವ ಪದಕ್ಕೆ “ಹೊಲಸು ಭಾಷೆಯನ್ನು ಉಪಯೋಗಿಸು” ಎಂದರ್ಥ. ಸತ್ಯವೇದದಲ್ಲಿ ಈ ಪದಕ್ಕೆ ಅರ್ಥ ಇದಾಗಿರುವುದಿಲ್ಲ.

# ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ, “ಆಣೆ” ಎನ್ನುವ ಪದವನ್ನು “ಪ್ರತಿಜ್ಞೆ” ಅಥವಾ “ಒಂದು ಗಂಭೀರ ಪ್ರಮಾಣ” ಎಂದೂ ಅನುವಾದ ಮಾಡಬಹುದು.
  • “ಆಣೆ” ಎನ್ನುವ ಪದವನ್ನು “ಸಾಂಪ್ರದಾಯಿಕವಾದ ಪ್ರಮಾಣ” ಅಥವಾ “ಪ್ರತಿಜ್ಞೆ” ಅಥವಾ “ಏನಾದರೊಂದನ್ನು ಮಾಡುವುದಕ್ಕೆ ಬಾಧ್ಯತೆ ವಹಿಸುವುದು” ಎಂದೂ ಅನುವಾದ ಮಾಡಬಹುದು.
  • “ನನ್ನ ಹೆಸರಿನಿಂದ ಆಣೆ ಇಡುವುದು” ಎನ್ನುವ ಮಾತನ್ನು ಅನುವಾದ ಮಾಡುವ ಅನೇಕ ವಿಧಾನಗಳಲ್ಲಿ, “ಅದನ್ನು ನಿಶ್ಚಯಪಡಿಸುವುದಕ್ಕೆ ನನ್ನ ಹೆಸರನ್ನು ಉಪಯೋಗಿಸಿ ಪ್ರಮಾಣ ಮಾಡುವುದು” ಎನ್ನುವ ಮಾತೂ ಒಳಗೊಂಡಿರುತ್ತದೆ.
  • “ಪರಲೋಕ ಮತ್ತು ಭೂಮಿ ಹೆಸರುಗಳ ಮೇಲೆ ಆಣೆ ಇಡುವುದು” ಎನ್ನುವ ಮಾತನ್ನು “ಏನಾದರೊಂದು ಮಾಡುವುದಕ್ಕೆ ಪ್ರಮಾಣ ಮಾಡುವುದು, ಭೂಮಿ ಮತ್ತು ಆಕಾಶಗಳೇ ಅದನ್ನು ನಿಶ್ಚಯಗೊಳಿಸುತ್ತವೆ ಎಂದು ಹೇಳುವುದು” ಎಂದೂ ಅನುವಾದ ಮಾಡಬಹುದು.
  • “ಆಣೆ” ಅಥವಾ “ಪ್ರಮಾಣ” ಎನ್ನುವ ಪದಗಳ ಬಳಕೆಯು ಶಾಪವನ್ನು ಕೊಡುವ ಅರ್ಥದಲ್ಲಿ ಬಾರದಂತೆ ನೋಡಿಕೊಳ್ಳಿರಿ. ಯಾಕಂದರೆ ಸತ್ಯವೇದದಲ್ಲಿ ಆ ಅರ್ಥವು ಬರುವುದಿಲ್ಲ.

(ಈ ಪದಗಳನ್ನು ಸಹ ನೋಡಿರಿ : ಯಾಕೋಬ, ನಾಹೋರ, ಲೇಯಾ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H422, H423, H3027, H5375, H7621, H7650, G332, G3660, G3727, G3728

ಆದರಣೆ, ಆದರಿಸುತ್ತದೆ, ಆದರಿಸಲ್ಪಟ್ಟಿದೆ, ಆದರಿಸುವುದು, ಆದರಿಸುವಾತನು, ಆದರಿಸುವವರು, ಆದರಣೆ ಹೊಂದದವರು

# ಪದದ ಅರ್ಥವಿವರಣೆ:

“ಆದರಣೆ” ಮತ್ತು “ಆದರಿಸುವಾತನು” ಎನ್ನುವ ಪದಗಳು ಮಾನಸಿಕವಾಗಿಯೂ ಅಥವಾ ಭೌತಿಕವಾಗಿಯೂ ಬಾಧೆಯನ್ನು ಮತ್ತು ನೋವನ್ನು ಅನುಭವಿಸುತ್ತಿರುವವರಿಗೆ ಸಹಾಯ ಮಾಡುವುದನ್ನು ಸೂಚಿಸುತ್ತವೆ.

  • ಒಬ್ಬ ವ್ಯಕ್ತಿ ಯಾರಾದರೊಬ್ಬರನ್ನು ಆದರಿಸಿದಾಗ ಆ ವ್ಯಕ್ತಿಯನ್ನು “ಆದರಿಸುವಾತನು” ಎಂದು ಕರೆಯುತ್ತಾರೆ.
  • ಹಳೇ ಒಡಂಬಡಿಕೆಯಲ್ಲಿ “ಆದರಣೆ” ಎನ್ನುವ ಪದವನ್ನು ದೇವರು ತನ್ನ ಜನರನ್ನು ಹೇಗೆ ಪ್ರೀತಿಸುತ್ತಿದ್ದರು ಮತ್ತು ಅವರ ಮೇಲೆ ಹೇಗೆ ದಯೆ ತೋರಿಸುತ್ತಿದ್ದರು ಮತ್ತು ಅವರು ಶ್ರಮೆಗಳಲ್ಲಿರುವಾಗ ಅವರಿಗೆ ಹೇಗೆ ಸಹಾಯ ಮಾಡುತ್ತಿದ್ದರು ಎನ್ನುವುದನ್ನು ವಿವರಿಸುವುದಕ್ಕೆ ಉಪಯೋಗಿಸುತ್ತಿದ್ದರು.
  • ಹೊಸ ಒಡಂಬಡಿಕೆಯಲ್ಲಿ ದೇವರು ಪವಿತ್ರಾತ್ಮನ ಮೂಲಕ ತನ್ನ ಜನರನ್ನು ಆದರಿಸುತ್ತಾರೆಂದು ಹೇಳಲ್ಪಟ್ಟಿದೆ. ಆದರಣೆ ಹೊಂದಿದ ಪ್ರತಿಯೊಬ್ಬರೂ ಶ್ರಮೆಗಳಲ್ಲಿರುವ ಜನರಿಗೂ ಅದೇ ರೀತಿಯ ಆದರಣೆಯನ್ನು ತೋರಿಸುವುದಕ್ಕೆ ಬಲವನ್ನು ಹೊಂದಿರುತ್ತಾರೆ.
  • “ಇಸ್ರಾಯೇಲನ್ನು ಆದರಿಸುವಾತನು” ಅನ್ನುವ ಮಾತು ತನ್ನ ಜನರನ್ನು ರಕ್ಷಿಸಿಕೊಳ್ಳುವುದಕ್ಕೆ ಬರುವ ಮೆಸ್ಸೀಯಾನನ್ನು ತೋರಿಸುತ್ತದೆ.
  • ಯೇಸುವಿನಲ್ಲಿ ನಂಬಿದ ಪ್ರತಿಯೊಬ್ಬರಿಗೆ ಸಹಾಯ ಮಾಡುವುದಕ್ಕೆ ಪವಿತ್ರಾತ್ಮನು “ಆದರಿಸುವಾತನನ್ನಾಗಿ” ಅಥವಾ “ಸಹಾಯಕನನ್ನಾಗಿ” ಯೇಸು ಸೂಚಿಸಿದ್ದಾರೆ.

# ಅನುವಾದ ಸಲಹೆಗಳು:

  • ಸಂದರ್ಭಕ್ಕೆ ತಕ್ಕಂತೆ, “ಆದರಣೆ” ಎನ್ನುವ ಪದವನ್ನು “ಬಾಧೆಯನ್ನು ಅಥವಾ ನೋವನ್ನು ಕಡಿಮೆ ಮಾಡು” ಅಥವಾ “ಪ್ರಲಾಪಿಸುವವರಿಗೆ ಸಹಾಯ ಮಾಡು” ಅಥವಾ “ಪ್ರೋತ್ಸಾಹ” ಅಥವಾ “ಸಾಂತ್ವನಪಡಿಸು” ಎಂದೂ ಅನುವಾದ ಮಾಡಬಹುದು.
  • “ನಮ್ಮ ಆದರಣೆ” ಎನ್ನುವ ಮಾತನ್ನು “ನಮ್ಮ ಪ್ರೋತ್ಸಾಹ” ಅಥವಾ “ಒಬ್ಬರಿಗೆ ನಮ್ಮ ಸಾಂತ್ವನ” ಅಥವಾ “ಪ್ರಲಾಪಿಸುವ ಸಮಯದಲ್ಲಿ ನಮ್ಮ ಸಹಾಯ” ಎಂದೂ ಅನುವಾದ ಮಾಡಬಹುದು.
  • “ಆದರಿಸುವಾತನು” ಎನ್ನುವ ಮಾತಿಗೆ “ಆದರಿಸುವ ವ್ಯಕ್ತಿ” ಅಥವಾ “ಬಾಧೆಯನ್ನು ಕಡಿಮ ಮಾಡುವುದಕ್ಕೆ ಸಹಾಯ ಮಾಡುವ ಒಬ್ಬ ವ್ಯಕ್ತಿ” ಅಥವಾ “ಪ್ರೋತ್ಸಾಹ ಮಾಡುವ ವ್ಯಕ್ತಿ” ಎಂದೂ ಅನುವಾದ ಮಾಡಬಹುದು.
  • ಪವಿತ್ರಾತ್ಮನು “ಸಹಾಯಕನೆಂದು” ಕರೆಯಲ್ಪಟ್ಟಿರುವ ಪದವನ್ನೂ “ಪ್ರೋತ್ಸಾಹಕನು” ಅಥವಾ “ಸಹಾಯ ಮಾಡುವವನು” ಅಥವಾ “ಸಹಾಯ ಮಾಡುವ ಮತ್ತು ಮಾರ್ಗದರ್ಶನ ಕೊಡುವ ವ್ಯಕ್ತಿ” ಎಂದೂ ಅನುವಾದ ಮಾಡಬಹುದು.
  • “ಇಸ್ರಾಯೇಲ್ ಸಹಾಯಕನು” ಎನ್ನುವ ಮಾತನ್ನು “ಇಸ್ರಾಯೇಲ್ ಜನಾಂಗವನ್ನು ಆದರಿಸುವ ಮೆಸ್ಸೀಯ” ಎಂದೂ ಅನುವಾದ ಮಾಡಬಹುದು.
  • “ಅವರಿಗೆ ಯಾವ ಸಹಾಯಕನೂ ಇಲ್ಲ ಅಥವಾ ಆದರಿಸುವವರು ಯಾರೂ ಇಲ್ಲ” ಎನ್ನುವ ಮಾತನ್ನು “ಅವರನ್ನು ಯಾರೂ ಆದರಿಸಿಲ್ಲ ಅಥವಾ ಅವರಿಗೆ ಯಾರೂ ಸಹಾಯ ಮಾಡಲಿಲ್ಲ” ಅಥವಾ “ಅವರಿಗೆ ಸಹಾಯ ಮಾಡುವುದಕ್ಕೆ ಯಾರೂ ಇಲ್ಲ ಅಥವಾ ಅವರನ್ನು ಪ್ರೋತ್ಸಾಹ ಮಾಡುವುದಕ್ಕೆ ಯಾರೂ ಇಲ್ಲ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಪ್ರೋತ್ಸಾಹ, ಪವಿತ್ರಾತ್ಮ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2505, H5150, H5162, H5165, H5564, H8575, G302, G2174, G3870, G3874, G3875, G3888, G3890, G3931

ಆದೇಶ, ಆದೇಶಿಸು, ಆದೇಶಿಸಲಾಗಿದೆ, ಆದೇಶಿಸುವುದು, ಸೂಚನೆ, ಸೂಚನೆಗಳು, ಭೋದಕರು

# ಸತ್ಯಾಂಶಗಳು:

ಏನು ಮಾಡಬೇಕೆನ್ನುವದರ ಕುರಿತಾಗಿ ನಿರ್ದೇಶಿಸುವುದನ್ನು “ಆದೇಶ” ಮತ್ತು “ಸೂಚನೆ” ಎನ್ನುವ ಪದಗಳು ಸೂಚಿಸುತ್ತಿವೆ.

  • “ಸೂಚನೆಗಳನ್ನು ಕೊಡುವುದು” ಎಂದರೆ ಯಾರಾದರು ಒಬ್ಬರು ಏನು ಮಾಡಬೇಕೆಂದು ಸ್ಪಷ್ಟವಾಗಿ ತಿಳಿಸುವುದು ಎಂದರ್ಥ.
  • ಜನರಿಗೆ ಮೀನು ಮತ್ತು ರೊಟ್ಟಿಯನ್ನು ಹಂಚಲು ಯೇಸು ತನ್ನ ಶಿಷ್ಯರಿಗೆ ಕೊಟ್ಟಾಗ ಆತನು ಅವರಿಗೆ ಸ್ಪಷ್ಟವಾಗಿ ಸೂಚನೆಗಳನ್ನು ನೀಡಿದನು.
  • ಸಂದರ್ಭಾನುಸರವಾಗಿ “ಆದೇಶ” ಎನ್ನುವ ಪದವನ್ನು “ಹೇಳುವುದು” ಅಥವಾ “ನಿರ್ದೇಶನ” ಅಥವಾ “ಭೋಧನೆ” ಅಥವಾ “ಸೂಚನೆಗಳನ್ನು ನೀಡುವುದು” ಎಂದು ಅನುವಾದ ಮಾಡಬಹುದು.
  • “ಸೂಚನೆಗಳು” ಎನ್ನುವ ಪದವನ್ನು “ನಿರ್ದೇಶನಗಳು” ಅಥವಾ “ವಿವರಣೆಗಳು” ಅಥವಾ “ಅವನು ನಿನಗೆ ಏನು ಹೇಳಿದನು” ಎಂದು ಅನುವಾದ ಮಾಡಬಹುದು.
  • ದೇವರು ಸೂಚನೆಗಳನ್ನು ಕೊಟ್ಟಾಗ, ಈ ಪದವನ್ನು “ಆಜ್ಞೆಗಳು” ಎಂದು ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಆಜ್ಞೆ, ಗುಣಲಕ್ಷಣಗಳು, ಬೋಧನೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H241, H376, H559, H631, H1004, H1696, H1697, H3256, H3289, H3384, H4148, H4156, H4687, H4931, H4941, H5657, H6098, H6310, H6490, H6680, H7919, H8451, H8738, G1256, G1299, G1319, G1321, G1378, G1781, G1785, G2322, G2727, G2753, G3559, G3560, G3614, G3615, G3624, G3811, G3852, G3853, G4264, G4367, G4822

ಆನಂದ, ಆನಂದಭರಿತ, ಆನಂದದಾಯಕತೆ, ಆನಂದಿಸು, ಸೊಂತೋಷಪಡಿಸುವುದು, ಸಂತೋಷಪಡು, ಸಂತೋಷವಾಗಿರುವುದು, ಸಂತೋಷ, ಆನಂದಗೊಳಿಸು, ಆನಂದಪಡಿಸುವುದು, ಆನಂದವನ್ನು ಪಡೆದೆ, ಆನಂದ ಪಡುತ್ತಿದ್ದೇನೆ

# ಪದದ ಅರ್ಥವಿವರಣೆ:

ಆನಂದ ಎನ್ನುವುದು ದೇವರಿಂದ ಬರುವ ಆಳವಾದ ತೃಪ್ತಿ ಅಥವಾ ಸಂತೋಷದ ಭಾವನೆಯಾಗಿರುತ್ತದೆ. “ಆನಂದಭರಿತ” ಎನ್ನುವ ಅನುಬಂಧ ಪದವು ಒಬ್ಬ ವ್ಯಕ್ತಿ ತುಂಬಾ ಸಂತೋಷವಾಗಿರುವುದನ್ನು ಮತ್ತು ಆಳವಾದ ಸಂತೋಷದಿಂದ ತುಂಬಿ ತುಳುಕುತ್ತಿರುವುದನ್ನು ವಿವರಿಸುತ್ತದೆ.

  • ಒಬ್ಬ ವ್ಯಕ್ತಿ ಒಳ್ಳೇಯ ಅನುಭವಗಳನ್ನು ಹೊಂದುತ್ತಿರುವಾಗ ಪಡೆಯುವ ಆಳವಾದ ಭಾವನೆಯಲ್ಲಿ ಆನಂದವನ್ನು ಅನುಭವಿಸುತ್ತಾನೆ.
  • ದೇವರೊಬ್ಬರೇ ತನ್ನ ಜನರಿಗೆ ನಿಜವಾದ ಆನಂದವನ್ನು ಕೊಡುವವರು.
  • ಆನಂದವನ್ನು ಹೊಂದಿಕೊಂಡಿರುವುದು ಸಂತೋಷಕರವಾದ ಪರಿಸ್ಥಿತಿಗಳ ಮೇಲೆ ಆಧಾರಪಟ್ಟಿರುವುದಿಲ್ಲ. ಜನರು ತಮ್ಮ ಜೀವನಗಳಲ್ಲಿ ಅನೇಕ ಭಯಂಕರವಾದ ಸಂಕಷ್ಟಗಳಲ್ಲಿ ಹಾದು ಹೋಗುತ್ತಿರುವಾಗಲೂ ದೇವರು ಅವರಿಗೆ ಆನಂದವನ್ನು ಕೊಡುತ್ತಾನೆ.
  • ಕೆಲವೊಂದುಬಾರಿ ಸ್ಥಳಗಳನ್ನು ಆನಂದಭರಿತ ಎಂದು ವಿವರಿಸುತ್ತಾ ಬರೆದಿರುತ್ತಾರೆ, ಮನೆಗಳಿಗೆ ಅಥವಾ ಪಟ್ಟಣಗಳಿಗೆ ಈ ರೀತಿ ಬರೆದಿರುತ್ತಾರೆ. ಈ ಮಾತುಗಳಿಗೆ ಅರ್ಥವೇನಂದರೆ ಆ ಸ್ಥಳಗಳಲ್ಲಿ ನಿವಾಸವಾಗುತ್ತಿರುವ ಜನರು ತುಂಬಾ ಆನಂದಭರಿತರಾಗಿದ್ದಾರೆಂದು ಅದರ ಅರ್ಥ.

“ಆನಂದಗೊಳಿಸು” ಎನ್ನುವ ಪದಕ್ಕೆ ಸಂತೋಷ ಮತ್ತು ಆನಂದಗಳಿಂದ ತುಂಬಿರುವುದು ಎಂದರ್ಥ.

  • ಈ ಮಾತು ಅನೇಕಬಾರಿ ದೇವರು ಮಾಡಿದ ಒಳ್ಳೇಯ ಕಾರ್ಯಗಳ ಕುರಿತಾಗಿ ಅತೀ ಹೆಚ್ಚಾಗಿ ಸಂತೋಷಪಡುವದನ್ನು ಸೂಚಿಸುತ್ತದೆ.
  • ಇದನ್ನು “ತುಂಬಾ ಹೆಚ್ಚಿನ ಸಂತೋಷದಿಂದಿರು” ಅಥವಾ “ತುಂಬಾ ಹೆಚ್ಚಿನ ಹರ್ಷದಾಯಕನಾಗಿರು” ಅಥವಾ “ತುಂಬಾ ಹೆಚ್ಚಿನ ಆನಂದ ಹೊಂದು” ಎಂದೂ ಅನುವಾದ ಮಾಡಬಹುದು.
  • “ನನ್ನ ಪ್ರಾಣವು ನನ್ನ ರಕ್ಷಕನಾದ ದೇವರಲ್ಲಿ ಆನಂದ ಹೊಂದುತ್ತಿದೆ” ಎಂದು ಮರಿಯಳು ಹೇಳಿದಾಗ, ಅದಕೆಕ್ “ರಕ್ಷಕನಾಗಿರುವ ನನ್ನ ದೇವರು ನನ್ನ ಅತೀ ಹೆಚ್ಚಾದ ಸಂತೋಷದಿಂದ ತುಂಬಿಸಿದರು” ಅಥವಾ “ರಕ್ಷಕನಾದ ದೇವರು ನನಗೆ ಮಾಡಿದ ಕಾರ್ಯಗಳಿಂದ ನಾನು ತುಂಬಾ ಆನಂದವಾಗಿದ್ದೇನೆ” ಎಂದು ಆಕೆ ಹೇಳುತ್ತಿದ್ದಾಳೆ.

# ಅನುವಾದ ಸಲಹೆಗಳು:

  • “ಆನಂದ” ಎನ್ನುವ ಪದವನ್ನು “ಹರ್ಷ” ಅಥವಾ “ಸಂತೋಷ” ಅಥವಾ “ಮಹಾ ಸಂತೋಷಕರ” ಎಂದೂ ಅನುವಾದ ಮಾಡಬಹುದು.
  • “ಆನಂದಭರಿತವಾಗಿರು” ಎನ್ನುವ ಮಾತನ್ನು “ಆನಂದಗೊಳಿಸು” ಅಥವಾ “ಅತೀ ಹೆಚ್ಚಾಗಿ ಸಂತೋಷಪಡು” ಎಂದೂ ಅನುವಾದ ಮಾಡಬಹುದು, ಅಥವಾ ಇದನ್ನು “ದೇವರ ಒಳ್ಳೇಯತನದಲ್ಲಿ ತುಂಬಾ ಸಂತೋಷವಾಗಿರು” ಎಂದೂ ಅನುವಾದ ಮಾಡಬಹುದು.
  • ಆನಂದಭರಿತನಾಗಿರುವ ಒಬ್ಬ ವ್ಯಕ್ತಿಯನ್ನು “ಹೆಚ್ಚಿನ ಸಂತೋಷ” ಅಥವಾ “ಹೆಚ್ಚಿನ ಸಂತೋಷದಿಂದ ಇರುವುದು” ಅಥವಾ “ಆಳವಾದ ಸಂತೋಷ” ಎಂದೂ ವಿವರಿಸಬಹುದು.
  • “ಆನಂದಭರಿತವಾದ ಕೂಗನ್ನು ಕೇಳಿಸು” ಎನ್ನುವ ಮಾತನ್ನು “ನೀನು ಅತೀ ಹೆಚ್ಚಾದ ಆನಂದದಿಂದ ಇದ್ದೀಯೆನ್ನುವ ವಿಧಾನದಲ್ಲಿ ಜೋರಾಗಿ ಕೂಗು” ಎಂದೂ ಅನುವಾದ ಮಾಡಬಹುದು.
  • “ಆನಂದಭರಿತವಾದ ಪಟ್ಟಣ” ಅಥವಾ “ಆನಂದಭರಿತವಾದ ಮನೆ” ಎನ್ನುವ ಪದವನ್ನು “ಆನಂದಭರಿತರಾದ ಜನರು ನಿವಾಸ ಮಾಡುವ ಪಟ್ಟಣ” ಅಥವಾ “ಆನಂದಭರಿತರಾದ ಜನರೆಲ್ಲರು ಇರುವ ಮನೆ” ಅಥವಾ “

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಉದಾಹರಣೆಗಳು:

  • 33:07 “ಬಂಡೆಯ ನೆಲದ ಮೇಲೆ ಬಿತ್ತಲ್ಪಟ್ಟವನು ದೇವರ ವಾಕ್ಯವನ್ನು ಕೇಳಿ ಮತ್ತು ಅದನ್ನು ___ ಸಂತೋಷದಿಂದ ___ ಸ್ವೀಕರಿಸುವವನಾಗಿರುತ್ತಾನೆ.”
  • 34:04 “ದೇವರ ರಾಜ್ಯವು ಒಬ್ಬರು ಹೊಲದಲ್ಲಿ ಬಚ್ಚಿಟ್ಟಿರುವ ನಿಧಿಗೆ ಹೋಲಿಕೆಯಾಗಿರುತ್ತದೆ.. ಇನ್ನೊಬ್ಬ ವ್ಯಕ್ತಿ ಆ ನಿಧಿಯನ್ನು ಕಂಡುಕೊಂಡು, ಅದನ್ನು ಮತ್ತೇ ಹೂಣಿಡುವವನಾಗಿರುತ್ತಾನೆ. ಅವನು ___ ಸಂತೋಷದಿಂದ ___ ತುಂಬಿದವನಾಗಿರುತ್ತಾನೆ, ತನಗಿರುವ ಎಲ್ಲವನ್ನು ಮಾರಿ, ಆ ಹಣವನ್ನು ಒಂದು ಹೊಲವನ್ನು ಕೊಂಡುಕೊಳ್ಳುವುದಕ್ಕೆ ಉಪಯೋಗಿಸಿದನು.
  • 41:07 ಸ್ತ್ರೀಯರು ಹೆಚ್ಚಿನ ಭಯದಿಂದ, ಮಹಾ ___ ಸಂತೋಷದಿಂದ ___ ಇದ್ದಿದ್ದರು. ಅವರು ಶುಭವಾರ್ತೆಯನ್ನು ಶಿಷ್ಯರಿಗೆ ಹೇಳಲು ಓಡಿ ಹೋದರು.

# ಪದ ಡೇಟಾ:

  • Strong's: H1523, H1524, H1525, H1750, H2302, H2304, H2305, H2654, H2898, H4885, H5937, H5938, H5947, H5965, H5970, H6342, H6670, H7440, H7442, H7444, H7445, H7797, H7832, H8055, H8056, H8057, H8342, H8643, G20, G21, G2165, G2167, G2620, G2744, G2745, G3685, G4640, G4796, G4913, G5463, G5479

ಆನಂದ, ಆನಂದಿಸು, ಉಲ್ಲಾಸ, ಹರ್ಷ

# ಪದದ ಅರ್ಥವಿವರಣೆ

“ಆನಂದ” ಮತ್ತು “ಹರ್ಷ” ಎನ್ನುವ ಪದಗಳು ಏನಾದರು ಸಾಧಿಸಿದಾಗ ಅಥವಾ ವಿಶೇಷವಾದ ಆಶಿರ್ವಾದವನ್ನು ಹೊಂದಿದಾಗ ಸಿಗುವ ಸಂತೋಷವನ್ನು ಸೂಚಿಸುತ್ತವೆ.

  • “ಆನಂದಿಸುವುದು” ಅಂದರೆ ಏನಾದರು ಅಧ್ಭುತಕರವಾಗಿದ್ದರೆ ಅದನ್ನು ಕೊಂಡಾಡುವುದನ್ನು ಸೂಚಿಸುತ್ತದೆ.
  • ಒಬ್ಬ ವ್ಯಕ್ತಿ ದೇವರ ಒಳ್ಳೆಯತನವನ್ನು ಕುರಿತು ಆನಂದಿಸಬಹುದು.
  • “ಹರ್ಷ” ಎನ್ನುವ ಪದವು ಯಶಸ್ಸು ಅಥವಾ ವಿಜಯದ ಸಂತೋಷದಲ್ಲಿ ಒಬ್ಬನ ಅಹಂಕಾರದ ಸ್ವಭಾವವು ಸಹ ಈ ಪದದಲ್ಲಿ ಸೇರಿಸಲ್ಪಟ್ಟಿದೆ.
  • “ಆನಂದ” ಎನ್ನುವ ಪದವನ್ನು “ಸಂತೋಷದಿಂದ ಆಚರಿಸು” ಅಥವಾ “ಅತ್ಯಾನಂದದಿಂದ ಪ್ರಶಂಸಿಸುವುದು” ಎಂದು ಅನುವಾದ ಮಾಡಬಹುದು.
  • ಸಂಧರ್ಭನುಸರವಾಗಿ, “ಹರ್ಷ” ಎನ್ನುವ ಪದವನ್ನು “ವಿಜಯವಂತವಾಗಿ ಪ್ರಶಂಸಿಸುವುದು” ಅಥವಾ “ಸ್ವಯಂ ಪ್ರಶಂಸೆಯನ್ನು ಆಚರಿಸುವುದು” ಅಥವಾ “ಅಹಂಕಾರ” ಎಂದು ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಅಹಂಕಾರ, ಸಂತೋಷ, ಪ್ರಶಂಸೆ, ಸಂತಸ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H5539, H5947, H5970

ಆನಂದಗೊಳಿಸು, ಆನಂದಗೊಳಿಸುವುದು, ಆನಂದ ಹೊಂದಿದೆ, ಆನಂದಕರ

# ಪದದ ಅರ್ಥವಿವರಣೆ:

“ಆನಂದಗೊಳಿಸು” ಎಂದರೆ ಯಾರಾದರೊಬ್ಬರನ್ನು ಅತೀ ಹೆಚ್ಚಾಗಿ ಸಂತೋಷಕ್ಕೆ ಗುರಿಮಾಡುವುದು ಅಥವಾ ಮೆಚ್ಚುಗೆಯಾಗುವಂತೆ ಮಾಡುವುದು ಎಂದರ್ಥ.

  • “ಆನಂದ ಹೊಂದು” ಎನ್ನುವ ಮಾತಿಗೆ “ಸಂತೋಷ ಹೊಂದು” ಅಥವಾ “ಅದರ ಕುರಿತಾಗಿ ಸಂತೋಷವಾಗಿರು” ಎಂದರ್ಥ.
  • ಯಾವುದಾದರೊಂದು ತುಂಬಾ ಹೆಚ್ಚಾಗಿ ಒಪ್ಪಿಕೊಳ್ಳುವಂತಿರುವಾಗ ಅಥವಾ ಅದು ತುಂಬಾ ಇಷ್ಟವಾದಾಗ ಅದನ್ನು “ಆನಂದಕರ” ಎಂದು ಕರೆಯುತ್ತಾರೆ.
  • ಯಾವುದಾದರೊಂದರಲ್ಲಿ ಒಬ್ಬ ವ್ಯಕ್ತಿ ಆನಂದ ಹೊಂದುತ್ತಿದ್ದಾನೆಂದರೆ ಅದರಲ್ಲಿ ಆ ವ್ಯಕ್ತಿ ತುಂಬಾ ಸಂತೋಷಪಡುತ್ತಿದ್ದಾನೆ ಎಂದು ಅದರ ಅರ್ಥವಾಗಿರುತ್ತದೆ.
  • “ಯೆಹೋವನ ನ್ಯಾಯಶಾಸನಗಳಲ್ಲಿ ನಾನು ಆನಂದಪಡುತ್ತೇನೆ” ಎನ್ನುವ ಮಾತನ್ನು “ಯೆಹೋವನ ನ್ಯಾಯ ಶಾಸನಗಳು ನನಗೆ ಎಷ್ಟೋ ಆನಂದವನ್ನು ಕೊಡುತ್ತವೆ” ಅಥವಾ “ಯೆಹೋವನ ನ್ಯಾಯಶಾಸನಗಳಿಗೆ ವಿಧೇಯನಾಗಲು ನನಗೆ ಎಷ್ಟೋ ಪ್ರೀತಿ” ಎಂದೂ ಅನುವಾದ ಮಾಡಬಹುದು.
  • “ಅದರಲ್ಲಿ ಆನಂದಪಡಬೇಡ” ಮತ್ತು “ಅದರಲ್ಲಿ ಆನಂದವಿಲ್ಲ” ಎನ್ನುವ ಮಾತುಗಳನ್ನು “ಅದರಿಂದ ಯಾವ ಸಂತೋಷವೂ ಇಲ್ಲ” ಅಥವಾ “ಅದರ ಕುರಿತಾಗಿ ನನಗೆ ಸಂತೋಷವಿಲ್ಲ” ಎಂದೂ ಅನುವಾದ ಮಾಡಬಹುದು.
  • “ತನ್ನಲ್ಲಿ ತಾನು ಆನಂದಪಡುವುದು” ಎನ್ನುವ ಮಾತಿಗೆ “ಅವನು ಅದನ್ನು ಮಾಡುವುದರಲ್ಲಿ ತುಂಬಾ ಆನಂದಪಡುತ್ತಿದ್ದಾನೆ” ಅಥವಾ “ಅವನು ಅದರ ಕುರಿತಾಗಿ ಅಥವಾ ಯಾರಾದರೊಬ್ಬರ ಕುರಿತಾಗಿ ತುಂಬಾ ಸಂತೋಷವಾಗಿದ್ದಾನೆ” ಎಂದರ್ಥ.
  • “ಆನಂದಗೊಳಿಸುವಿಕೆ” ಎನ್ನುವ ಪದವು ಒಬ್ಬ ವ್ಯಕ್ತಿ ಸಂತೋಷಪಡುವ ವಿಷಯಗಳನ್ನು ಸೂಚಿಸುತ್ತದೆ. ಇದನ್ನು “ಸಂತೋಷಗಳು” ಅಥವಾ “ಸಂತೋಷವನ್ನು ಕೊಡುವ ವಿಷಯಗಳು” ಎಂದು ಅನುವಾದ ಮಾಡಬಹುದು.
  • “ನಿನ್ನ ಇಷ್ಟವನ್ನು ಮಾಡುವುದಕ್ಕೆ ನನಗೆ ತುಂಬಾ ಸಂತೋಷ” ಎನ್ನುವಂಥಹ ಮಾತನ್ನು “ನಿಮ್ಮ ಚಿತ್ತವನ್ನು ನೆರವೇರಿಸಲು ನನಗೆ ತುಂಬಾ ಸಂತೋಷ” ಅಥವಾ “ನಾನು ನಿಮಗೆ ವಿಧೆಯನಾಗುವಾಗ ನಾನು ತುಂಬಾ ಸಂತೋಷಿಸುತ್ತೇನೆ” ಎಂದೂ ಅನುವಾದ ಮಾಡಬಹುದು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1523, H2530, H2531, H2532, H2654, H2655, H2656, H2836, H4574, H5276, H5727, H5730, H6026, H6027, H7306, H7381, H7521, H7522, H8057, H8173, H8191, H8588, H8597

ಆನೆಕಲ್ಲು, ಆನೆಕಲ್ಲುಗಳು, ಆಲಿಕಲ್ಲು, ಆಲಿಕಲ್ಲುಗಳು, ಆಲಿಕಲ್ಲಿನ ಮಳೆ

# ಸತ್ಯಾಂಶಗಳು:

ಈ ಪದವನ್ನು ಸಹಜವಾಗಿ ಮಂಜುಗಡ್ಡೆ ಕಟ್ಟಿ ಆಕಾಶದಿಂದ ಬೀಳುವ ಗಡ್ಡೆಗಳನ್ನು ಸೂಚಿಸಲು ಉಪಯೋಗಿಸುತ್ತಾರೆ. ಯಾರಿಗಾದರೂ ಶುಭ ಹೇಳಲು ಅಂದರೆ “ಹಲೋ” ಅಥವಾ “ನಿಮಗೆ ಶುಭವಾಗಲಿ” ಎಂದು ಅರ್ಥ ನೀಡುವಂತೆ ಆಂಗ್ಲ ಭಾಷೆಯಲ್ಲಿ “ಹೈಲ್” ಎನ್ನುವ ಪದವನ್ನು ಉಪಯೋಗಿಸುತ್ತಾರೆ.

  • ಆಕಾಶದಿಂದ ಬೀಳುವ ನೀರ್ಗಲ್ಲನ್ನು ಅಥವಾ ಮಂಜುಗಡ್ಡೆಗಳನ್ನು “ಆಲಿಕಲ್ಲು” ಎಂದು ಕರೆಯುತ್ತಾರೆ.
  • ಸಾಮಾನ್ಯವಾಗಿ ಆನೆಕಲ್ಲುಗಳು ಬಹಳ ಚಿಕ್ಕವಾಗಿರುತ್ತವೆ (ಕೆಲವು ಸೆಂಟಿಮೀಟರ್ ಅಗಲ) ಆದರೆ ಕೆಲವೊಮ್ಮೆ ಆನೆಕಲ್ಲುಗಳು 20 ಸೆಂಟಿಮೀಟರ್ಗಳಷ್ಟು ದೊಡ್ಡವಾಗಿ ಮತ್ತು ಸುಮಾರು ಒಂದು ಕೇಜಿ ಅಷ್ಟು ಭಾರವಾಗಿರುತ್ತವೆ.
  • ಅಂತ್ಯಕಾಲದಲ್ಲಿ ದೇವರು ಜನರ ದುಷ್ಟತನ ವಿಷಯದಲ್ಲಿ ತೀರ್ಪು ಮಾಡುವಾಗ ಭೂಮಿಯ ಮೇಲೆ ಸುಮಾರು 50 ಕೇಜಿಗಳಷ್ಟು ಭಾರವಿರುವ ಅಸಂಖ್ಯಾತವಾದ ಆನೆಕಲ್ಲುಗಳು ಬಿಳುವಂತೆ ಮಾಡುತ್ತಾನೆ ಎನ್ನುವದನ್ನು ಹೊಸ ಒಡಂಬಡಿಕೆಯಲ್ಲಿರುವ ಪ್ರಕಟನೆ ಗ್ರಂಥವು ವಿವರಿಸುತ್ತದೆ.
  • “ಹೈಲ್” ಎನ್ನುವ ಆಂಗ್ಲ ಭಾಷೆಯಲ್ಲಿನ ಪದಕ್ಕೆ “ಸಂತೋಷಿಸು” ಎಂದರ್ಥ ಮತ್ತು ಇದನ್ನು “ಶುಭಾಶಯಗಳು” ಅಥವಾ “ನಮಸ್ಕಾರ” ಎಂದು ಅನುವಾದ ಮಾಡಬಹುದು.

(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H68, H417, H1258, H1259, G5463, G5464

ಆಲೀವ್ (ಎಣ್ಣೆ ಮರದ ಹಣ್ಣು), ಆಲೀವ್.ಗಳು (ಎಣ್ಣೆ ಮರದ ಹಣ್ಣುಗಳು)

# ಪದದ ಅರ್ಥವಿವರಣೆ:

ಆಲೀವ್ (ಎಣ್ಣೆ ಮರದ ಹಣ್ಣು) ಎನ್ನುವುದು ಚಿಕ್ಕದಾಗಿದ್ದು ಅಂಡಾಕಾರದ ಆಕಾರದಲ್ಲಿರುವ ಆಲೀವ್ ಮರದ ಹಣ್ಣಾಗಿರುತ್ತದೆ, ಇದು ಹೆಚ್ಚಾಗಿ ಮೆಡಿಟರೇನಿಯನ್ ಸಮುದ್ರದ ಸುತ್ತಮುತ್ತ ಪ್ರಾಂತ್ಯಗಳಲ್ಲಿ ಬೆಳೆಯುತ್ತದೆ.

  • ಆಲೀವ್ ಮರಗಳು (ಎಣ್ಣೆ ಮರಗಳು) ಯಾವಾಗಲೂ ಹಚ್ಚ ಹಸುರಾಗಿದ್ದು ತೆಳುವಾದ ಬಿಳಿಯ ಹೂಗಳನ್ನು ಹೊಂದಿರುವ ಒಂದು ವಿಧವಾದ ಚಿಕ್ಕ ಪೊದೆಯ ಗಿಡವಾಗಿರುತ್ತದೆ. ಅವು ಬಿಸಿ ವಾತಾವರಣದಲ್ಲಿ ಚೆನ್ನಾಗಿ ಬೆಳೆಯುತ್ತವೆ ಮತ್ತು ನೀರು ಕಡಿಮೆಯಾಗಿದ್ದರೂ ಚೆನ್ನಾಗಿ ಬದುಕುತ್ತವೆ.
  • ಆಲೀವ್ ಮರದ ಹಣ್ಣು ಪ್ರಾರಂಭದಲ್ಲಿ ಹಚ್ಚು ಹಸುರಾಗಿರುತ್ತದೆ ಮತ್ತು ಅವುಗಳು ಹಣ್ಣುಗಳಾಗುತ್ತಿರುವಾಗ ಕಪ್ಪಾಗಿ ಮಾರ್ಪಾಟು ಹೊಂದುತ್ತವೆ. ಆಲೀವ್ ಹಣ್ಣುಗಳು ಆಹಾರಕ್ಕೆ ಪ್ರಯೋಜನವಾಗಿರುತ್ತವೆ ಮತ್ತು ಅವುಗಳಿಂದ ತೆಗೆಯುವ ಎಣ್ಣೆಯು ಪ್ರಯೋಜನಕರವಾಗಿರುತ್ತವೆ.
  • ಆಲೀವ್ ಎಣ್ಣೆಯನ್ನು ಬುಡ್ಡಿಗಳಲ್ಲಿ ಹಾಕಿಕೊಂಡು ಅಡಿಗೆಗೆ ಬಳಸುತ್ತಾರೆ ಮತ್ತು ಧಾರ್ಮಿಕ ಸಂಬಂಧವಾದ ಸಮಾರಂಭಗಳಿಗೆ ಉಪಯೋಗಿಸುತ್ತಾರೆ.
  • ಸತ್ಯವೇದದಲ್ಲಿ ಆಲೀವ್ ಮರಗಳು ಮತ್ತು ಕೊಂಬೆಗಳು ಕೆಲವೊಂದುಬಾರಿ ಜನರನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಉಪಯೋಗಿಸಲಾಗಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ದೀಪ, ಸಮುದ್ರ, ಎಣ್ಣೆ ಮರಗಳ ಬೆಟ್ಟ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2132, H3323, H8081, G65, G1636, G1637, G2565

ಆಶ್ರಯ, ನಿರಾಶ್ರಿತ, ನಿರಾಶ್ರಿತರು, ತಂಗುದಾಣ, ತಂಗುದಾಣಗಳು, ಆಶ್ರಯ ಕೊಟ್ಟಿದೆ, ಆಶ್ರಯ ಕೊಡುವುದು

# ಪದದ ಅರ್ಥವಿವರಣೆ:

“ಆಶ್ರಯ” ಎನ್ನುವ ಪದವು ಸಂರಕ್ಷಣೆ ಮತ್ತು ಭದ್ರತೆ ಇರುವ ಸ್ಥಿತಿ ಅಥವಾ ಸ್ಥಳವನ್ನು ಸೂಚಿಸುತ್ತದೆ. “ನಿರಾಶ್ರಿತ” ಎಂದರೆ ಸಂರಕ್ಷಣೆಯ ಸ್ಥಳವನ್ನು ಹುಡುಕುತ್ತಿರುವ ವ್ಯಕ್ತಿ ಎಂದರ್ಥ. “ತಂಗುದಾಣ” ಎನ್ನುವುದು ಅಪಾಯಕರವಾದ ಸ್ಥಿತಿಯಿಂದ ಸಂರಕ್ಷಿಸುವ ಸ್ಥಳವನ್ನು ಸೂಚಿಸುತ್ತದೆ.

  • ಸತ್ಯವೇದದಲ್ಲಿ ದೇವರ ಜನರು ಸಂರಕ್ಷಣೆಯಿಂದ ಇರುವ ಸ್ಥಳವನ್ನಾಗಿ ದೇವರು ಒಂದು ಆಶ್ರಯ ಸ್ಥಾನವನ್ನಾಗಿ ಸೂಚಿಸಲ್ಪಟ್ಟಿರುತ್ತದೆ.
  • ಹಳೇ ಒಡಂಬಡಿಕೆಯಲ್ಲಿ “ಆಶ್ರಯ ಪಟ್ಟಣ” ಎನ್ನುವ ಪದವು ಅನೇಕ ಪಟ್ಟಣಗಳಲ್ಲಿ ಒಂದು ಪಟ್ಟಣವನ್ನು ಸೂಚಿಸುತ್ತದೆ, ಇದು ಒಬ್ಬ ವ್ಯಕ್ತಿ ಆಕಸ್ಮಿಕವಾಗಿ ಒಬ್ಬ ವ್ಯಕ್ತಿಯನ್ನು ಸಾಯಿಸಿದಾಗ, ಸತ್ತಂತ ವ್ಯಕ್ತಿಯ ಜನರ ಸೇಡಿನಿಂದ ತಪ್ಪಿಸಿಕೊಂಡು ಸಂರಕ್ಷಣೆಗಾಗಿ ಹೋಗುವ ಪಟ್ಟಣವನ್ನು ಸೂಚಿಸುತ್ತದೆ.
  • “ತಂಗುದಾಣ” ಎನ್ನುವ ಪದವು ಅನೇಕಬಾರಿ ಜನರಿಗೆ ಅಥವಾ ಪ್ರಾಣಿಗಳಿಗೆ ಸಂರಕ್ಷಣೆಯನ್ನು ಕೊಡುವ ಭವನವನ್ನಾಗಿ ಅಥವಾ ಮೇಲ್ಛಾವಣಿಯನ್ನಾಗಿ ನಿರ್ಮಿಸಿರುವ ಭೌತಿಕ ಕಟ್ಟಡವನ್ನು ಸೂಚಿಸುತ್ತದೆ.
  • ಕೆಲವೊಂದುಬಾರಿ “ತಂಗುದಾಣ” ಎನ್ನುವ ಪದಕ್ಕೆ “ಸಂರಕ್ಷಣೆ” ಎಂದರ್ಥ, ಲೋಟನು ತನ್ನ ಅತಿಥಿಗಳಿಗೆ ತನ್ನ ಮನೆಯಲ್ಲಿ “ತಂಗುದಾಣವಾಗಬೇಕೆಂದು” ಹೇಳಿದ ಮಾತಿನಂತಿರುತ್ತದೆ. ಅವರು ಸುರಕ್ಷಿತವಾಗಿರುತ್ತಾರೆಂದು ಅವನು ಹೇಳುತ್ತಿದ್ದಾನೆ, ಯಾಕಂದರೆ ತನ್ನ ಕುಟುಂಬದವರಂತೆ ಅವರನ್ನು ಸಂರಕ್ಷಿಸಲು ಅವನು ಬಾಧ್ಯತೆಯನ್ನು ತೆಗೆದುಕೊಳ್ಳುತ್ತಿದ್ದಾನೆ.

# ಅನುವಾದ ಸಲಹೆಗಳು:

  • “ಆಶ್ರಯ” ಎನ್ನುವ ಪದವನ್ನು “ಸುರಕ್ಷಿತವಾದ ಸ್ಥಳ” ಅಥವಾ “ಸಂರಕ್ಷಣೆಯ ಸ್ಥಳ” ಎಂದೂ ಅನುವಾದ ಮಾಡಬಹುದು.
  • “ನಿರಾಶ್ರಿತರು” ಆಗಿರುವ ಜನರು ಅಪಾಯಕರವಾದ ಪರಿಸ್ಥಿತಿಯನ್ನು ತಪ್ಪಿಸಿಕೊಳ್ಳುವುದಕ್ಕೆ ತಮ್ಮ ಮನೆಗಳನ್ನು ಬಿಟ್ಟು ಬರುತ್ತಾರೆ, ಈ ಮಾತನ್ನು “ಅನ್ಯರು,” “ಮನೆಗಳಿಲ್ಲದ ಜನರು”, ಅಥವಾ “ದೇಶಭ್ರಷ್ಟರು” ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಸಾರವಾಗಿ, “ತಂಗುದಾಣ” ಎನ್ನುವ ಪದವನ್ನು “ಸಂರಕ್ಷಿಸುವುದು” ಅಥವಾ “ಸಂರಕ್ಷಣೆ” ಅಥವಾ “ಸಂರಕ್ಷಿತವಾದ ಸ್ಥಳ” ಎಂದೂ ಅನುವಾದ ಮಾಡಬಹುದು.
  • ಇದು ಭೌತಿಕವಾದ ನಿರ್ಮಾಣವನ್ನು ಸೂಚಿಸಿದರೆ, “ತಂಗುದಾಣ” ಎನ್ನುವ ಪದವನ್ನು “ಸಂರಕ್ಷಿಸುವ ಭವನ” ಅಥವಾ “ಸುರಕ್ಷಿತವಾದ ಮನೆ” ಎಂದೂ ಅನುವಾದ ಮಾಡಬಹುದು.
  • “ಸುರಕ್ಷಿತವಾದ ತಂಗುದಾಣದೊಳಗೆ” ಎನ್ನುವ ಮಾತನ್ನು “ಸುರಕ್ಷಿತವಾದ ಸ್ಥಳದೊಳಗೆ” ಅಥವಾ “ಸಂರಕ್ಷಿಸುವ ಸ್ಥಳದೊಳಗೆ” ಎಂದೂ ಅನುವಾದ ಮಾಡಬಹುದು.
  • “ತಂಗುದಾಣವನ್ನು ಹುಡುಕು” ಅಥವಾ “ಆಶ್ರಯವನ್ನು ಪಡೆದುಕೋ” ಅಥವಾ “ಆಶ್ರಯವನ್ನು ಹೊಂದು” ಎನ್ನುವ ಪದಗಳನ್ನೂ “ಸುರಕ್ಷಿತವಾದ ಸ್ಥಳವನ್ನು ಪಡೆದುಕೋ” ಅಥವಾ “ಸುರಕ್ಷಿತವಾದ ಸ್ಥಳದೊಳಗೆ ಒಬ್ಬರನ್ನು ಸೇರಿಸು” ಎಂದೂ ಅನುವಾದ ಮಾಡಬಹುದು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2620, H4268, H4498, H4585, H4733, H4869

ಆಳ್ವಿಕೆ, ಆಳುವುದು, ಆಳ್ವಿಕೆ ಮಾಡಿದೆ, ಆಳ್ವಿಕೆ ಮಾಡುತ್ತಿರುವುದು

# ಪದದ ಅರ್ಥವಿವರಣೆ:

“ಆಳ್ವಿಕೆ” ಎನ್ನುವ ಪದಕ್ಕೆ ಒಂದು ನಿರ್ದಿಷ್ಟವಾದ ದೇಶದ ಅಥವಾ ರಾಜ್ಯದ ಜನರ ಮೇಲೆ ಆಡಳಿತ ಮಾಡುವುದು ಎಂದರ್ಥ. ಅರಸನ ಆಳ್ವಿಕೆ ಎಂದರೆ ಆತನು ಆಳುತ್ತಿರುವ ಕಾಲಾವಧಿ ಎಂದರ್ಥ.

  • “ಆಳ್ವಿಕೆ” ಎನ್ನುವ ಪದವನ್ನು ಸರ್ವ ಲೋಕದ ಮೇಲೆ ದೇವರು ಅರಸನಾಗಿ ಆಳುತ್ತಿದ್ದಾರೆನ್ನುವ ವಿಷಯವನ್ನು ಸೂಚಿಸುತ್ತದೆ.
  • ದೇವರನ್ನು ಇಸ್ರಾಯೇಲ್ಯರು ತಮ್ಮ ಅರಸನನ್ನಾಗಿ ತಿರಸ್ಕಾರ ಮಾಡಿದನಂತರ ಇಸ್ರಾಯೇಲಿರನ್ನು ಆಳುವುದಕ್ಕೆ ಅನೇಕಮಂದಿ ಮನುಷ್ಯ ಅರಸರನ್ನು ದೇವರು ಅನುಮತಿಸಿದರು.
  • ಯೇಸು ಕ್ರಿಸ್ತ ಹಿಂದುರಿಗಿ ಬರುವಾಗ, ಆತನು ಇಡೀ ಸರ್ವ ಲೋಕವನ್ನು ಅರಸನಾಗಿ ಬಹಿರಂಗವಾಗಿ ಆಳುತ್ತಾನೆ ಮತ್ತು ಕ್ರೈಸ್ತರು ಕೂಡ ಆತನೊಂದಿಗೆ ಆಳುವರು.
  • ಈ ಪದವನ್ನು “ಸಂಪೂರ್ಣವಾಗಿ ಆಳುವುದು” ಅಥವಾ “ಅರಸನಾಗಿ ಆಳುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ರಾಜ್ಯ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3427, H4427, H4437, H4438, H4467, H4468, H4475, H4791, H4910, H6113, H7287, H7786, G757, G936, G2231, G4821

ಇಷ್ಟ, ಒಂದೇರೀತಿಯಾದ ಮನಸ್ಸು, ಹೋಲಿಸು, ಹೋಲಿಕೆ, ಹೋಲುತ್ತದೆ, ಅದರಂತೆಯೇ, ಸಮಾನವಾಗಿ, ಭಿನ್ನವಾಗಿ

# ಪದದ ಅರ್ಥವಿವರಣೆ:

“ಇಷ್ಟ” ಮತ್ತು “ಹೋಲಿಕೆ” ಎನ್ನುವ ಪದಗಳು ಯಾವುದಾದರೊಂದಕ್ಕೆ ಇನ್ನೊಂದು ಒಂದೇರೀತಿಯಾಗಿದೆ ಅಥವಾ ಅದರಂತೆಯೇ ಇದೆ ಎನ್ನುವದನ್ನು ಸೂಚಿಸುತ್ತದೆ.

  • “ಇಷ್ಟ” ಎನ್ನುವ ಪದವು “ಹಾಗೆ” ಎಂದು ಕರೆಯಲ್ಪಡುವ ಅಲಂಕಾರಿಕ ಮಾತುಗಳಲ್ಲಿ ಅನೇಕಸಲ ಉಪಯೋಗಿಸಲ್ಪಟ್ಟಿರುತ್ತದೆ, ಇದರಲ್ಲಿ ಯಾವುದಾದರೊಂದನ್ನು ಇನ್ನೊಂದಕ್ಕೆ ಹೊಲಿಸಲಾಗಿರುತ್ತದೆ, ಸಹಜವಾಗಿ ಹಂಚಲ್ಪಟ್ಟಿರುವ ಗುಣಲಕ್ಷಣವನ್ನು ಎತ್ತಿ ತೋರಿಸುತ್ತದೆ. ಉದಾಹರಣೆಗೆ, “ತನ್ನ ವಸ್ತ್ರಗಳು ಸೂರ್ಯನಂತೆ ಪ್ರಕಾಶಿಸುತ್ತಿವೆ” ಮತ್ತು “ಸ್ವರವು ಗುಡುಗಿನಂತೆ ಉತ್ಕರ್ಷಗೊಂಡಿದೆ.” (ನೋಡಿರಿ: ಹಾಗೆಯೇ
  • ಇನ್ನೊಬ್ಬರಂತೆ ಅಥವಾ ಯಾವುದಾದರೊಂದರಂತೆ “ಇರುವುದು” ಅಥವಾ “ಚೆನ್ನಾಗಿರುವುದು” ಅಥವಾ “ಹಾಗೆಯೇ ಇರುವುದು” ಎನ್ನುವದಕ್ಕೆ ಹೋಲಿಸಿಕೊಳ್ಳುತ್ತಿರುವ ಒಬ್ಬ ವ್ಯಕ್ತಿ ಅಥವಾ ಒಂದು ವಸ್ತುವಿನ ಹಾಗೆಯೇ ಗುಣಲಕ್ಷಣಗಳನ್ನು ಹೊಂದಿರುವುದು ಎಂದರ್ಥ.
  • ಜನರೆಲ್ಲರೂ ದೇವರ “ಹೋಲಿಕೆಯಲ್ಲಿಯೇ” ಸೃಷ್ಟಿಸಲ್ಪಟ್ಟಿದ್ದಾರೆ, ಅಂದರೆ ಆತನ “ಸ್ವರೂಪ”ದಲ್ಲಿಯೇ ಮಾಡಲ್ಪಟ್ಟಿದ್ದಾರೆ. ಅಂದರೆ ಅವರು ದೇವರು ಹೊಂದಿರುವ ಗುಣಲಕ್ಷಣಗಳನ್ನೇ “ಹಾಗೆಯೇ” ಅಥವಾ “ಹೋಲಿಕೆಯಾದ” ಗುಣಲಕ್ಷಣಗಳನ್ನೇ ಅಥವಾ ಗುಣಗಳನ್ನೇ ಹೊಂದಿರುತ್ತಾರೆಂದು ಅದರ ಅರ್ಥವಾಗಿರುತ್ತದೆ.
  • ಯಾರಾದರೊಬ್ಬರ ಅಥವಾ ಯಾವುದಾದರೊಬ್ಬರ “ಹೋಲಿಕೆಯಲ್ಲಿಯೇ” ಎನ್ನುವದಕ್ಕೆ ಒಬ್ಬ ವ್ಯಕ್ತಿಯ ಅಥವಾ ವಸ್ತುವಿನ ಹಾಗೆಯೇ ಗುಣಗಳನ್ನು ಹೊಂದಿರುವುದು ಎಂದರ್ಥ.

# ಅನುವಾದ ಸಲಹೆಗಳು:

  • ಕೆಲವೊಂದು ಸಂದರ್ಭಗಳಲ್ಲಿ “ಹೋಲಿಕೆಯಲ್ಲಿಯೇ” ಎನ್ನುವ ಮಾತನ್ನು “ಅದರಂತೆಯೇ ಕಾಣಿಸಿಕೊಳ್ಳುವುದು” ಅಥವಾ “ಅದರಂತೆಯೇ ತೋರಿಸಿಕೊಳ್ಳುವುದು” ಎಂದೂ ಅನುವಾದ ಮಾಡಬಹುದು.
  • “ಆತನ ಮರಣದ ಹೋಲಿಕೆಯಲ್ಲಿಯೇ” ಎನ್ನುವ ಮಾತನ್ನು “ಆತನ ಮರಣದ ಅನುಭವದಲ್ಲಿ ಹಂಚಿಕೊಳ್ಳುವುದು” ಅಥವಾ “ಆತನೊಂದಿಗೆ ಆತನ ಮರಣವನ್ನು ಅನುಭವಿಸುವುದು” ಎಂದೂ ಅನುವಾದ ಮಾಡಬಹುದು.
  • “ಪಾಪಸ್ವಭಾವದ ಶರೀರದ ಹಾಗೆಯೇ” ಎನ್ನುವ ಮಾತನ್ನು “ಪಾಪ ಸ್ವಭಾವದ ಮನುಷ್ಯನ ಹಾಗೆಯೇ ಇರುವುದು” ಅಥವಾ “ಮನುಷ್ಯನಾಗಿರುವುದು” ಎಂದೂ ಅನುವಾದ ಮಾಡಬಹುದು. ಈ ಮಾತಿಗೆ ಮಾಡುವ ಅನುವಾದವು ಯೇಸು ಪಾಪ ಸ್ವಭಾವಿಯೆಂದು ಅರ್ಥ ಬರದಂತೆ ನೋಡಿಕೊಳ್ಳಿರಿ.
  • “ಆತನ ಸ್ವರೂಪದಲ್ಲಿಯೇ” ಎನ್ನುವ ಮಾತನ್ನು “ಆತನಂತೆಯೇ” ಅಥವಾ “ಆತನು ಹೊಂದಿರುವ ಗುಣಗಳನ್ನೇ ಹೊಂದಿರುವುದು” ಎಂದೂ ಅನುವಾದ ಮಾಡಬಹುದು.
  • “ನಾಶಕ್ಕೊಳಗಾದ ಮನುಷ್ಯನ, ಪಕ್ಷಿಗಳ, ನಾಲ್ಕು ಕಾಲುಗಳಿರುವ ಜಂತುಗಳು ಮತ್ತು ತೆವಳುವ ಪ್ರಾಣಿಗಳ ರೂಪದಂತೆಯೇ” ಎನ್ನುವ ಮಾತನ್ನು “ನಾಶಕ್ಕೊಳಗಾದ ಮನುಷ್ಯರಂತೆ, ಅಥವಾ ಪ್ರಾಣಿಗಳು, ಪಕ್ಷಿಗಳು, ಜಂತುಗಳು ಮತ್ತು ಚಿಕ್ಕ ಚಿಕ್ಕ ತೆವಳುತ್ತಾ ಹೋಗುವ ಹುಳಗಳಂತೆ ವಿಗ್ರಹಗಳನ್ನು ಮಾಡಿದ್ದಾರೆ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಪಶು, ಶರೀರ, ದೇವರ ಸ್ವರೂಪ, ನಾಶ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1823, H8403, H8544, G1503, G1504, G2509, G2531, G2596, G3664, G3665, G3666, G3667, G3668, G3669, G3697, G4833, G5108, G5613, G5615, G5616, G5618, G5619

ಇಸ್ರಾಯೇಲ್ಯರ ಹನ್ನೆರಡು ಕುಲಗಳು, ಇಸ್ರಾಯೇಲನ ಮಕ್ಕಳಾದ ಹನ್ನೆರಡು ಕುಲಗಳು, ಹನ್ನೆರಡು ಕುಲಗಳು

# ನಿರ್ವಚನ:

“ಇಸ್ರಾಯೇಲ್ಯರ ಹನ್ನೆರಡು ಕುಲಗಳು” ಎನ್ನುವ ಮಾತು ಯಾಕೋಬನ ಹನ್ನೆರಡು ಮಕ್ಕಳಿಗೆ ಮತ್ತು ಅವರ ಸಂತಾನಕ್ಕೆ ಸೂಚನೆಯಾಗಿರುತ್ತದೆ.

  • ಯಾಕೋಬನು ಅಬ್ರಹಾಮನ ಮೊಮ್ಮಗನಾಗಿರುತ್ತಾನೆ. ಸ್ವಲ್ಪಕಾಲವಾದನಂತರ ದೇವರು ಯಾಕೋಬನ ಹೆಸರನ್ನು ಇಸ್ರಾಯೇಲ ಎಂಬ ಹೆಸರಾಗಿ ಮಾರ್ಪಡಿಸಿದರು.
  • ಕುಲಗಳ ಹೆಸರುಗಳು ಈ ಕೆಳಕಂಡಂತಿವೆ: ರೂಬೇನ್, ಸಿಮೆಯೋನ್, ಲೇವಿ, ಯೂದ, ದಾನ್, ನಫ್ತಾಲಿ, ಗಾದ್, ಆಶೇರ್, ಇಸ್ಸಾಕಾರ್, ಜೆಬೂಲೂನ್, ಯೋಸೇಫ ಮತ್ತು ಬೆನ್ಯಾಮೀನ್.
  • ಕಾನಾನ್ ದೇಶದಲ್ಲಿ ಯಾವ ಭೂಭಾಗವನ್ನಾಗಲಿ ಲೇವಿ ವಂಶದವರು ಪಡೆಯಲಿಲ್ಲ ಯಾಕಂದರೆ ಅವರು ದೇವರನ್ನು ಸೇವಿಸಲು ಮತ್ತು ದೇವರ ಪ್ರಜೆಗಳಿಗೆ ಸೇವೆ ಮಾಡಲು ಪ್ರತ್ಯೇಕಿಸಲ್ಪಟ್ಟ ಯಾಜಕರಾಗಿದ್ದರು.
  • ಯೋಸೇಫನು ವಾಗ್ಧಾನ ಭೂಮಿಯ ಸ್ವಾಸ್ಥ್ಯವನ್ನು ಎರಡರಷ್ಟು ಹೊಂದಿಕೊಂಡನು, ಯಾಕಂದರೆ ತನ್ನ ಇಬ್ಬರು ಗಂಡು ಮಕ್ಕಳಾದ ಎಫ್ರಾಯಿಂ ಮತ್ತು ಮನಸ್ಸೆ ಬಂದಿರುವ ಪಾಲಾಗಿತ್ತು.
  • ಸ್ವಲ್ಪ ವ್ಯತ್ಯಾಸವನ್ನು ಹೊರತುಪಡಿಸಿ ಹನ್ನೆರಡು ಕುಲಗಳ ಪಟ್ಟಿಕೆಯು ಸತ್ಯವೇದದಲ್ಲಿ ಅನೇಕ ಭಾಗಗಳಲ್ಲಿ ಬರೆಯಲ್ಪಟ್ಟಿರುವುದನ್ನು ನಾವು ಕಾಣಬಹುದು. ಕೆಲವೊಂದುಬಾರಿ ಲೇವಿ, ಯೋಸೇಫ, ಅಥವಾ ದಾನ್ ಎನ್ನುವವರನ್ನು ಪಟ್ಟಿಯಿಂದ ಹೊರಪಡಿಸಿದ್ದಾರೆ ಮತ್ತು ಕೆಲವೊಂದು ಸ್ಥಳಗಳಲ್ಲಿ, ಯೋಸೇಫನ ಇಬ್ಬರು ಗಂಡು ಮಕ್ಕಳಾದ ಎಫ್ರಾಯಿಂ ಮತ್ತು ಮನಸ್ಸೆರವರನ್ನು ಪಟ್ಟಿಯಲ್ಲಿ ಒಳಪಡಿಸಿದ್ದಾರೆ.

(ಈ ಪದಗಳನ್ನು ಸಹ ನೋಡಿರಿ : ಸ್ವಾಸ್ಥ್ಯ, ಇಸ್ರಾಯೇಲ್, ಯಾಕೋಬ, ಯಾಜಕ, ಕುಲ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3478, H7626, H8147, G1427, G2474, G5443

ಉನ್ನತ ಸ್ಥಳ, ಉನ್ನತ ಸ್ಥಳಗಳು

# ಪದದ ಅರ್ಥವಿವರಣೆ:

“ಉನ್ನತ ಸ್ಥಳಗಳು” ಎನ್ನುವ ಮಾತು ವಿಗ್ರಹಗಳನ್ನು ಆರಾಧನೆ ಮಾಡುವುದಕ್ಕಾಗಿ ಉಪಯೋಗಿಸಿರುವ ಯಜ್ಞವೇದಿಗಳನ್ನು ಮತ್ತು ಗೋಪುರಗಳನ್ನು ಸೂಚಿಸುತ್ತದೆ. ಅವುಗಳನ್ನು ಸಾಧಾರಣವಾಗಿ ಉನ್ನತ ನೆಲದ ಮೇಲೆ ಕಟ್ಟುತ್ತಾರೆ, ಅಂದರೆ ಬೆಟ್ಟದ ಮೇಲೆ ಅಥವಾ ಪರ್ವತ ಪಕ್ಕದಲ್ಲಿ ಕಟ್ಟುತ್ತಾರೆ.

  • ಈ ರೀತಿಯ ಉನ್ನತ ಸ್ಥಳಗಳಲ್ಲಿ ಸುಳ್ಳು ದೇವರುಗಳಿಗೆ ಯಜ್ಞವೇದಿಗಳನ್ನು ಕಟ್ಟುವುದರ ಮೂಲಕ ಇಸ್ರಾಯೇಲ್ಯರ ಅರಸರು ದೇವರಿಗೆ ವಿರುದ್ಧವಾಗಿ ಪಾಪ ಮಾಡಿದರು. ಈ ರೀತಿ ಮಾಡುವುದರಿಂದ ಜನರು ವಿಗ್ರಹಗಳನ್ನು ಇನ್ನೂ ಹೆಚ್ಚಾಗಿ ಆರಾಧನೆ ಮಾಡುವುದರಲ್ಲಿ ಮುಳುಗುವುದಕ್ಕೆ ನಡೆಸಿತ್ತು.
  • ಇಸ್ರಾಯೇಲಿನಲ್ಲಿ ಅಥವಾ ಯೆಹೂದದಲ್ಲಿ ದೇವರಿಗೆ ಭಯಪಡುವ ಅರಸರು ಬಂದಾಗ, ಅವರು ಈ ವಿಗ್ರಹಗಳಿಗೆ ಆರಾಧನೆ ಮಾಡುವುದನ್ನು ನಿಲ್ಲಿಸುವ ಕ್ರಮದಲ್ಲಿ ಯಜ್ಞವೇದಿಗಳನ್ನು ಅಥವಾ ಉನ್ನತ ಸ್ಥಳಗಳನ್ನು ನಾಶಗೊಳಿಸುವುದೆನ್ನುವುದು ಅನೇಕಸಲ ನಡೆಯುತ್ತಿತ್ತು.
  • ಏನೇಯಾಗಲಿ, ಈ ಒಳ್ಳೇಯ ಅರಸರಲ್ಲಿ ಕೆಲವರು ತುಂಬಾ ನಿರ್ಲಕ್ಸ್ಯತೆಯಿಂದ ಇರುತ್ತಿದ್ದರು ಮತ್ತು ಈ ಉನ್ನತ ಸ್ಥಳಗಳನ್ನು ತೆಗೆದುಹಾಕುತ್ತಿರಲಿಲ್ಲ, ಇದರಿಂದ ಇಡೀ ಇಸ್ರಾಯೇಲ್ ದೇಶವು ವಿಗ್ರಹಗಳನ್ನು ಆರಾಧನೆ ಮಾಡುವುದರಲ್ಲಿ ಮುಂದುವರಿಯುತ್ತಿದ್ದರು.

# ಅನುವಾದ ಸಲಹೆಗಳು:

  • ಈ ಮಾತನ್ನು ಅನುವಾದ ಮಾಡುವ ಇನ್ನೊಂದು ವಿಧಾನದಲ್ಲಿ, “ವಿಗ್ರಹ ಆರಾಧನೆಗಾಗಿ ಎತ್ತರದಲ್ಲಿರುವ ಸ್ಥಳಗಳು” ಅಥವಾ “ಬೆಟ್ಟದ ಮೇಲೆ ವಿಗ್ರಹ ಗೋಪುರಗಳು” ಅಥವಾ “ವಿಗ್ರಹ ಯಜ್ಞವೇದಿಯ ದಿಬ್ಬಗಳು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • ಈ ಮಾತು ಕೇವಲ ಯಜ್ಞವೇದಿಗಳಿರುವ ಉನ್ನತ ಸ್ಥಳಗಳನ್ನು ಮಾತ್ರವೇ ಸೂಚಿಸದೇ, ವಿಗ್ರಹ ಯಜ್ಞವೇದಿಗಳನ್ನು ಸೂಚಿಸುವಂತೆ ನೋಡಿಕೊಳ್ಳಿರಿ,

(ಈ ಪದಗಳನ್ನು ಸಹ ನೋಡಿರಿ : ಯಜ್ಞವೇದಿ, ಸುಳ್ಳು ದೇವರು, ಆರಾಧನೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1116, H1181, H1354, H2073, H4791, H7311, H7413

ಉಪಪತ್ನಿ, ಉಪಪತ್ನಿಗೆಳು

# ಪದದ ಅರ್ಥವಿವರಣೆ:

ಉಪಪತ್ನಿ ಎಂದರೆ ಒಬ್ಬ ವ್ಯಕ್ತಿಗೆ ಮೊದಲೇ ಹೆಂಡತಿ ಇದ್ದೂ, ಎರಡನೇ ಹೆಂಡತಿಯಾಗಿ ಇಟ್ಟುಕೊಂಡರೆ ಅವರನ್ನು ಈ ಪದವು ಸೂಚಿಸುತ್ತದೆ. ಸಹಜವಾಗಿ ಉಪಪತ್ನಿಯನ್ನು ಒಬ್ಬ ವ್ಯಕ್ತಿ ಕಾನೂನುಬದ್ಧವಾಗಿ ಮದುವೆ ಮಾಡಿಕೊಳ್ಳುವುದಿಲ್ಲ.

  • ಹಳೇ ಒಡಂಬಡಿಕೆಯಲ್ಲಿ ಉಪಪತ್ನಿಗಳಾದವರು ದಾಸಿಗಳಾಗಿದ್ದರು.
  • ಕೊಂಡುಕೊಳ್ಳುವುದರ ಮೂಲಕ ಉಪಪತ್ನಿಯನ್ನು ಸ್ವಾಧೀನ ಮಾಡಿಕೊಳ್ಳಬಹುದಾಗಿತ್ತು. ಅದು ಸೈನ್ಯದ ವಿಜಯದಿಂದಾಗಲಿ ಅಥವಾ ಹಣವನ್ನು ಕೊಟ್ಟು ಕೊಂಡುಕೊಳ್ಳುವದರಿಂದಾಗಲಿ ನಡೆಯುತ್ತಿತ್ತು.
  • ಅರಸನಿಗಾದರೋ ಅವನಿಗೆ ಇರುವ ಶಕ್ತಿಗೆ ಚಿಹ್ನೆಯಾಗಿ ಅನೇಕಮಂದಿ ಉಪಪತ್ನಿಗಳಿದ್ದಿದ್ದರು.
  • ಹೊಸ ಒಡಂಬಡಿಕೆಯು ಉಪಪತ್ನಿಗಳನ್ನಿಟ್ಟುಕೊಳ್ಳುವುದು ದೇವರ ಚಿತ್ತಕ್ಕೆ ವಿರುದ್ಧವೆಂದು ಬೋಧಿಸುತ್ತದೆ.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3904, H6370

ಉಪವಾಸ, ನಿರಾಹಾರ, ಉಪವಾಸವಿದ್ದೆ, ಉಪವಾಸವಿರುವುದು, ಉಪವಾಸಗಳು

# ಪದದ ಅರ್ಥವಿವರಣೆ:

“ಉಪವಾಸ” ಎನ್ನುವ ಪದಕ್ಕೆ ಒಂದು ನಿರ್ಧಿಷ್ಠ ಕಾಲದವರೆಗೂ ಅಂದರೆ ಒಂದು ಅಥವಾ ಅದಕ್ಕಿಂತ ಹೆಚ್ಚು ದಿನಗಳು ಆಹಾರವನ್ನು ತಿನ್ನದಿರುವುದು.ಎಂದರ್ಥ. ಕೆಲವೊಂದುಸಲ ಇದರಲ್ಲಿ ಯಾವ ಪಾನೀಯವನ್ನು ಕುಡಿಯದಿರುವುದನ್ನು ಒಳಗೊಂಡಿರುತ್ತದೆ.

  • ಉಪವಾಸವು ದೇವರ ಮೇಲೆ ಕೇಂದ್ರೀಕರಿಸುವುದಕ್ಕೆ ಮತ್ತು ಸಿದ್ಧಪಡಿಸಿದ ಆಹಾರದಿಂದ ಯಾವ ಅಡಚಣೆಯಿಲ್ಲದೆ ಪ್ರಾರ್ಥನೆ ಮಾಡುವುದಕ್ಕೆ ಜನರಿಗೆ ಸಹಾಯ ಮಾಡುತ್ತದೆ.
  • ಕೆಲವೊಂದು ತಪ್ಪು ಕಾರಣಗಳಿಗೋಸ್ಕರ ಉಪವಾಸದ ವಿಷಯದಲ್ಲಿ ಯೇಸು ಯೆಹೂದ್ಯರ ಧರ್ಮ ನಾಯಕರನ್ನು ಖಂಡಿಸಿದ್ದಾನೆ. ಅವರು ಉಪವಾಸವಿದ್ದರಿಂದ ಇತರರು ಅವರನ್ನು ನೀತಿವಂತರೆಂದು ಆಲೋಚನೆ ಮಾಡಬೇಕೆಂದು ಬಯಸುತ್ತಾರೆ.
  • ಕೆಲವೊಂದುಬಾರಿ ಜನರು ಉಪವಾಸವಿರುತ್ತಾರೆ ಯಾಕಂದರೆ ಅವರು ಯಾವುದಾದರೊಂದರ ಕುರಿತಾಗಿ ತುಂಬಾ ಬಾಧೆಗೆ ಒಳಗಾಗಿರುತ್ತಾರೆ ಅಥವಾ ದುಃಖಿತರಾಗಿರುತ್ತಾರೆ.
  • “ಉಪವಾಸ” ಎನ್ನುವ ಪದವು ಕ್ರಿಯಾಪದವಾದರೆ, “ಊಟ ಮಾಡದೆ ತಡೆಹಿಡಿದುಕೊಳ್ಳುವುದು” ಅಥವಾ “ಊಟ ಮಾಡದಿರುವುದು” ಎಂದೂ ಅನುವಾದ ಮಾಡುತ್ತಾರೆ.
  • “ಉಪವಾಸ” ಎನ್ನುವ ಪದವು ನಾಮಪದವಾದರೆ, “ಊಟ ತಿನ್ನಬಾರದ ಸಮಯ” ಅಥವಾ “ಊಟಕ್ಕೆ ದೂರವಿರುವ ಸಮಯ” ಎಂದು ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಯೆಹೂದ್ಯರ ನಾಯಕರು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಉದಾಹರಣೆಗಳು:

  • 25:01 ಯೇಸು ದೀಕ್ಷಾಸ್ನಾನ ತೆಗೆದುಕೊಂಡನಂತರ, ಪವಿತ್ರಾತ್ಮನು ಆತನನ್ನು ಅರಣ್ಯದೊಳಗೆ ಕರೆದುಕೊಂಡು ಹೋಯಿತು, ಆಲ್ಲಿ ಆತನು ನಲವತ್ತು ಹಗಲು ರಾತ್ರಿಗಳು ___ ಉಪವಾಸ ___ ಇದ್ದನು.
  • 34:08 “ಉದಾಹರಣೆಗೆ, ನಾನು ವಾರಕ್ಕೆ ಎರಡು ಬಾರಿ ___ ಉಪವಾಸ ___ ಮಾಡುತ್ತೇನೆ ಮತ್ತು ನಾನು ಪಡೆದ ಹಣದಲ್ಲಿ ಮತ್ತು ವಸ್ತುಗಳಲ್ಲಿ ದಶಮ ಭಾಗವನ್ನು ಕೊಡುತ್ತೇನೆ”.
  • 46:10 ಒಂದು ದಿನ ಅಂತಿಯೋಕ್ಯದಲ್ಲಿರುವ ಕ್ರೈಸ್ತರೆಲ್ಲರು ____ ಉಪವಾಸವಿದ್ದು ____ ಪ್ರಾರ್ಥನೆ ಮಾಡಿದರು, ಆಗ ಪವಿತ್ರಾತ್ಮನು ಅವರಿಗೆ “ನಾನು ಅವರಿಗೆ ಕೊಟ್ಟ ಕೆಲಸವನ್ನು ಮಾಡುವುದಕ್ಕೆ ಬಾರ್ನಬಾನನ್ನು ಮತ್ತು ಸೌಲನನ್ನು ನನಗಾಗಿ ಪ್ರತ್ಯೇಕಿಸಿರಿ” ಎಂದು ಹೇಳಿದನು.

# ಪದ ಡೇಟಾ:

  • Strong's: H2908, H5144, H6684, H6685, G777, G3521, G3522, G3523

ಉಬ್ಬಿಕೊಂಡಿದೆ, ಉಬ್ಬುವುದು

# ಪದದ ಅರ್ಥವಿವರಣೆ:

“ಉಬ್ಬಿಕೊಂಡಿದೆ” ಎನ್ನುವ ಪದವು ಅಲಂಕಾರಿಕ ಮಾತಾಗಿರುತ್ತದೆ, ಇದು ಗರ್ವಿಸುವವರನ್ನು ಅಥವಾ ಅಹಂಕಾರಿಯನ್ನು ಸೂಚಿಸುತ್ತದೆ. (ನೋಡಿರಿ: ನಾಣ್ಣುಡಿ

  • ಉಬ್ಬಿಕೊಂಡಿರುವ ವ್ಯಕ್ತಿಯು ಭಾವನೆಯ ಮನೋಭಾವಗಳನ್ನು ಇತರರ ಮುಂದೆ ಹೆಚ್ಚಾಗಿಟ್ಟುಕೊಂಡಿರುತ್ತಾನೆ.
  • ಹೆಚ್ಚಿನ ಮಾಹಿತಿಯನ್ನು ಪಡೆದಾಗ ಅಥವಾ ಭಕ್ತಿ ಅನುಭವಗಳನ್ನು ಹೆಚ್ಚು ಪಡೆದಾಗ, ಅದು ಗರ್ವ ಪಡುವಂತೆ ಅಥವಾ “ಉಬ್ಬಿಕೊಳ್ಳುವಂತೆ” ಮಾಡುತ್ತದೆಯೆಂದು ಪೌಲನು ಹೇಳಿದ್ದಾನೆ.
  • “ದೊಡ್ಡ ತಲೆಯನ್ನು ಹೊಂದಿರುವುದು” ಎನ್ನುವ ಮಾತಿನಂತೆ ಈ ಅರ್ಥವನ್ನು ವ್ಯಕ್ತಪಡಿಸುವ ವಿಭಿನ್ನವಾದದ್ದನ್ನು ಅಥವಾ ಒಂದೇ ರೀತಿಯ ನಾಣ್ಣುಡಿಯನ್ನು ಕೆಲವೊಂದು ಭಾಷೆಗಳನ್ನು ಹೊಂದಿರಬಹುದು.
  • ಇದನ್ನು “ಹೆಚ್ಹಿನ ಹೆಮ್ಮೆ” ಅಥವಾ “ಇತರರನ್ನು ಅಸಹ್ಯಿಸಿಕೊಳ್ಳುವುದು” ಅಥವಾ “ಜಂಬ” ಅಥವಾ “ಇತರರಿಗಿಂತ ನಾನೇ ಉತ್ತಮವೆಂದು ಆಲೋಚನೆ ಮಾಡಿಕೊಳ್ಳುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಅಹಂಕಾರಿ, ಹೆಮ್ಮೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H6075, G5229, G5448

ಉರುಲು, ಉರುಲುಗಳು, ದೊರಕಿಸಿಕೋ, ದೊರಕಿಸಿಕೊಳ್ಳುವುದು, ದೊರಕಿಸಕೊಳ್ಳಲಾಗಿದೆ, ಬೋನಿಗೆ ಸಿಕ್ಕಿ ಬೀಳುವುದು, ಬೋನು, ಬೋನಲ್ಲಿ ಸಿಕ್ಕಿಸುವುದು, ಸಿಕ್ಕಿಸಲಾಗಿದೆ

# ಪದದ ಅರ್ಥವಿವರಣೆ:

“ಉರುಲು” ಮತ್ತು “ಬಲೆ” ಎನ್ನುವ ಪದಗಳು ಪ್ರಾಣಿಗಳು ತಪ್ಪಿಸಿಕೊಂಡು ಹೋಗದಂತೆ ಅವುಗಳನ್ನು ಕಟ್ಟಿ ಹಾಕುವುದಕ್ಕೆ ಮತ್ತು ಪ್ರಾಣಿಗಳನ್ನು ಹಿಡಿಯುವುದಕ್ಕೆ ಉಪಯೋಗಿಸುವ ಸಾಧನೆಗಳನ್ನು ಸೂಚಿಸುತ್ತದೆ. “ಉರುಲು” ಅಥವಾ “ದೊರಕಿಸಿಕೊ” ಎನ್ನುವ ಪದಗಳು ಉರುಲಿನಿಂದ ಹಿಡಿದುಕೊಳ್ಳುವುದು ಎಂದರ್ಥ, ಮತ್ತು “ಸಿಕ್ಕಿಸಿಕೋ” ಅಥವಾ “ಬಲೆ” ಎನ್ನುವ ಪದಗಳು ಬಲೆಗೆ ಸಿಕ್ಕಿಸಿಕೊಳ್ಳುವ ಉಪಾಯದೊಂದಿಗೆ ಹಿಡಿದುಕೊಳ್ಳುವುದು ಎಂದರ್ಥವಾಗಿರುತ್ತದೆ. ಜನರನ್ನು ಹಿಡಿದುಕೊಳ್ಳುವುದಕ್ಕೆ ಮತ್ತು ಅವರಿಗೆ ಹಾನಿ ಮಾಡುವುದಕ್ಕೆ ಮರೆಯಾಗಿರುವ ಬಲೆಗಳಂತೆಯೇ ಪಾಪ ಮತ್ತು ಶೋಧನೆ ಹೇಗೆ ಇರುತ್ತವೆ ಎನ್ನುವುದರ ಕುರಿತಾಗಿ ಮಾತನಾಡುವುದಕ್ಕೆ ಸತ್ಯವೇದದಲ್ಲಿ ಈ ಪದಗಳನ್ನು ಉಪಯೋಗಿಸಲಾಗಿರುತ್ತದೆ.

  • “ಉರುಲು” ಎನ್ನುವುದು ಆಕಸ್ಮಿಕವಾಗಿ ಗಟ್ಟಿಯಾಗಿ ಹಿಂದಕ್ಕೆ ಎಳೆಯುವ ಹಗ್ಗ ಅಥವಾ ಒಂದು ತಂತಿಯ ರಂಧ್ರವಾಗಿರುತ್ತದೆ, ಇದರಲ್ಲಿ ಒಂದು ಪ್ರಾಣಿ ಬಿದ್ದಾಗ, ಅದರ ಕಾಲನ್ನು ಸಿಕ್ಕಿಸಿಕೊಳ್ಳುತ್ತದೆ.
  • “ಬೋನು” ಎನ್ನುವುದನ್ನು ಸಾಧಾರಣವಾಗಿ ಲೋಹದಿಂದಲೂ ಅಥವಾ ಕಟ್ಟಿಗೆಯಿಂದಲೂ ಮಾಡಿರುತ್ತಾರೆ, ಇದಕ್ಕೆ ಎರಡು ಭಾಗಗಳಿರುತ್ತವೆ, ಇದಕ್ಕೆ ಎರಡು ಬದಿಗೆ ಇರುವ ಭಾಗಗಳು ಆಕಸ್ಮಿಕವಾಗಿ, ಶಕ್ತಿಯುತವಾಗಿ ಒಂದಕ್ಕೊಂದು ಮುಚ್ಚಿಕೊಳ್ಳುತ್ತವೆ, ಇದರಲ್ಲಿ ಪ್ರಾಣಿ ಸಿಕ್ಕಿಸಿಕೊಂಡರೆ ಅದು ಹೊರಗಡೆ ಹೋಗುವುದಕ್ಕೆ ಸಾಧ್ಯವಿರುವುದಿಲ್ಲ. ಕೆಲವೊಂದುಬಾರಿ ಯಾವುದಾದರೊಂದನ್ನು ಹಿಡಿದುಕೊಳ್ಳುವುದಕ್ಕೆ ಅಥವಾ ಬೀಳುವಂತೆ ಮಾಡುವುದಕ್ಕೆ ಈ ಬೋನು ಎನ್ನುವದನ್ನು ನೆಲವನ್ನು ತುಂಬಾ ಆಳವಾಗಿ ಅಗೆದು ತಯಾರಿಸುತ್ತಾರೆ.
  • ಸಹಜವಾಗಿ ಉರುಲುಯಾಗಲಿ ಅಥವಾ ಬೋನಾಗಲಿ ಮರೆಯಾಗಿಡುತ್ತಾರೆ, ಇದರಿಂದ ಅವರು ಮಾಡುವ ಬೇಟೆಯು ತುಂಬಾ ವಿಸ್ಮಯವಾಗಿ ನಡೆಯುತ್ತದೆ.
  • “ಬೋನನ್ನು ಸಿದ್ಧಗೊಳಿಸು” ಎನ್ನುವ ಮಾತಿಗೆ ಯಾವುದಾದರೊಂದನ್ನು ಹಿಡಿದುಕೊಳ್ಳುವುದಕ್ಕೆ ಬೋನನ್ನು ಸಿದ್ಧಗೊಳಿಸಿರಿ.
  • “ಬೋನಿನಲ್ಲಿ ಬೀಳುವುದು” ಎನ್ನುವ ಮಾತು ಪ್ರಾಣಿಯನ್ನು ಹಿಡಿದುಕೊಳ್ಳುವ ಕ್ರಮದಲ್ಲಿ ನೆಲವನ್ನು ಅಗೆದು ಗುಂಡಿಯಾಗಿಟ್ಟಿರುವದರಲ್ಲಿ ಅಥವಾ ಆಳವಾದ ರಂಧ್ರ ಅಲ್ಲಿ ಬೀಳುವುದನ್ನು ಸೂಚಿಸುತ್ತದೆ.
  • ಒಂದು ಪ್ರಾಣಿಯು ಯಾವರೀತಿ ಉರುಲಿನಲ್ಲಿ ಬಿದ್ದು, ತಪ್ಪಿಸುಕೊಳ್ಳುವುದಕ್ಕೆ ಆಗುವುದಿಲ್ಲವೋ ಹಾಗೆಯೇ ಅಲಂಕಾರಿಕ ಅರ್ಥದಲ್ಲಿ “ಪಾಪದಿಂದ ಉರುಲಿನಲ್ಲಿ ಬಿದ್ದಿದ್ದಾನೆ” ಎನ್ನುವ ಮಾತಿನಲ್ಲಿರುವಂತೆಯೇ ಒಬ್ಬ ಮನುಷ್ಯನು ಪಾಪವನ್ನು ಮಾಡುವುದಕ್ಕೆ ಆರಂಭಿಸಿದಾಗ, ಅದನ್ನು ನಿಲ್ಲಿಸುವುದಕ್ಕಾಗುವುದಿಲ್ಲ.
  • ಬೋನಿಗೆ ಸಿಕ್ಕಿ ಬೀಳುವುದರ ಮೂಲಕ ಪ್ರಾಣಿಗೆ ಎಷ್ಟು ಅಪಾಯಕರವಾಗಿರುತ್ತದೋ ಅದೇ ರೀತಿ ಒಬ್ಬ ವ್ಯಕ್ತಿ ಪಾಪದಿಂದ ಸಿಕ್ಕಿಬಿದ್ದರೆ ಆ ಪಾಪದಿಂದಲೇ ಹಾನಿಯನ್ನು ಅನುಭವಿಸುತ್ತಾನೆ, ಮತ್ತು ಅದರಿಂದ ಅವನು ಬಿಡುಗಡೆ ಹೊಂದಬೇಕಾದ ಅವಶ್ಯಕತೆ ಇರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಬಿಡುಗಡೆಗೊಳಿಸು, ಬೇಟೆ, ಸೈತಾನ್, ಶೋಧಿಸು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2256, H3353, H3369, H3920, H3921, H4170, H4204, H4434, H4685, H4686, H4889, H5367, H5914, H6315, H6341, H6351, H6354, H6679, H6983, H7639, H7845, H8610, G64, G1029, G2339, G2340, G3802, G3803, G3985, G4625

ಉಸಿರಾಟ, ಉಸಿರಾಡು, ಉಸಿರಾಡುತ್ತವೆ, ಜೀವಶ್ವಾಸವನ್ನು ಊದಿದನು, ಉಸಿರಾಡುವುದು

# ಪದದ ಅರ್ಥವಿವರಣೆ:

ಸತ್ಯವೇದದಲ್ಲಿ “ಉಸಿರಾಟ” ಮತ್ತು “ಉಸಿರಾಡು” ಎನ್ನುವ ಪದಗಳು ಜೀವವನ್ನು ಹೊಂದಿರುವುದು ಅಥವಾ ಜೀವವನ್ನು ಕೊಡುವುದು ಎನ್ನುವ ಮಾತುಗಳಿಗೆ ಅಲಂಕಾರ ರೂಪದಲ್ಲಿ ಅನೇಕಬಾರಿ ಉಪಯೋಗಿಸಲ್ಪಟ್ಟಿರುತ್ತವೆ.

  • ದೇವರು ಜೀವಶ್ವಾಸವನ್ನು ಆದಾಮನೊಳಗೆ “ಊದಿದನು” ಎಂದು ಸತ್ಯವೇದವು ಬೋಧಿಸುತ್ತದೆ. ಆ ಸಮಯದಲ್ಲಿಯೇ ಆದಾಮನು ಬದುಕುವ ಪ್ರಾಣಿಯಾಗಿದ್ದನು.
  • ಯೇಸು ತನ್ನ ಶಿಷ್ಯರ ಮೇಲೆ ಊದಿದಾಗ, “ಪವಿತ್ರಾತ್ಮನನ್ನು ಹೊಂದಿಕೊಳ್ಳಿರಿ” ಎಂದು ಹೇಳಿದನು, ಪವಿತ್ರಾತ್ಮನು ಅವರ ಮೇಲೆ ಬಂದು ಇಳಿಯುವುದಕ್ಕೆ ಗುರುತಾಗಿರಲು ಆತನು ನಿಜವಾಗಿ ಅವರ ಮೇಲೆ ಗಾಳಿಯನ್ನು ಊದಿರಬಹುದು.
  • “ಉಸಿರು” ಮತ್ತು “ಉಸಿರು ಬಿಡು” ಎನ್ನುವ ಪದಗಳು ಕೆಲವೊಂದುಬಾರಿ ಮಾತನಾಡುವದನ್ನು ಸೂಚಿಸುವುದಕ್ಕೆ ಉಪಯೋಗಿಸಲಾಗಿರುತ್ತದೆ.
  • “ದೇವರ ಉಸಿರು” ಅಥವಾ “ಯೆಹೋವನ ಉಸಿರು” ಎನ್ನುವ ಅಲಂಕಾರ ರೂಪದ ಮಾತುಗಳು ಅನೇಕಬಾರಿ ದೈವತ್ವವಿಲ್ಲದ ದೇಶಗಳ ಮೇಲೆ ಅಥವಾ ತಿರಸ್ಕಾರ ಮಾಡಿದವುಗಳ ಮೇಲೆ ಸುರಿಸುವ ದೇವರ ಕೋಪಾಗ್ನಿಯನ್ನು ಸೂಚಿಸಲಾಗಿದೆ. ಇದು ಆತನ ಶಕ್ತಿಯನ್ನು ತಿಳಿಸುತ್ತದೆ.

# ಅನುವಾದ ಸಲಹೆಗಳು

  • “ಅವನು ಸತ್ತನು” ಎಂದು ಹೇಳುವುದಕ್ಕೆ “ಅವನು ತನ್ನ ಕೊನೆಯ ಉಸಿರನ್ನು ಬಿಟ್ಟನು” ಎನ್ನುವ ಮಾತನ್ನು ಅಲಂಕಾರ ರೂಪದಲ್ಲಿ ಹೇಳುತ್ತಾರೆ. “ಅವನು ತನ್ನ ಕೊನೆಯ ಉಸಿರನ್ನು ತೆಗೆದುಕೊಂಡನು” ಅಥವಾ “ಅವನು ಉಸಿರಾಡುವುದನ್ನು ನಿಲ್ಲಿಸಿದನು” ಅಥವಾ “ಒಂದೇ ಒಂದುಬಾರಿ ಅವನು ಉಸಿರನ್ನು ತೆಗೆದುಕೊಂಡನು” ಎಂದೂ ಈ ಪದವನ್ನು ಅನುವಾದ ಮಾಡಬಹುದು.
  • “ದೇವರು ಊದಿದ್ದಾನೆ” ಎನ್ನುವ ಮಾತುಗಳಿಗೆ ದೇವರು ಮಾತನಾಡಿದ್ದಾನೆ ಅಥವಾ ಮಾನವ ಲೇಖಕರು ಬರೆದಿರುವ ಪ್ರತಿಯೊಂದು ಮಾತು ಅಥವಾ ಲೇಖನಗಳು ದೇವರಿಂದ ಪ್ರೇರೇಪಿಸಲ್ಪಟ್ಟಿವೆ ಎಂದರ್ಥ. ಸಾಧ್ಯವಾದರೆ “ದೇವರು ಊದಿದ್ದಾನೆ” ಎನ್ನುವದನ್ನು ಅಕ್ಷರಾರ್ಥವಾಗಿ ಇಟ್ಟರೆ ಅದು ತುಂಬಾ ಉತ್ತಮವಾದ ಕೆಲಸ, ಆದರೂ ಇದರ ಖಚಿತವಾದ ಅರ್ಥವನ್ನು ಮಾತನಾಡಿಕೊಳ್ಳುವುದು ಕಷ್ವ.
  • “ದೇವರು ಊದಿದ್ದಾನೆ” ಎನ್ನುವ ಪದವನ್ನು ವಾಸ್ತವಿಕವಾಗಿ ಅಂಗೀಕರಿಸುವುದಿಲ್ಲ., ಇದನ್ನು ಇನ್ನೊಂದು ರೀತಿಯಲ್ಲಿ ಅನುವಾದ ಮಾಡುವ ವಿಧಾನದಲ್ಲಿ “ದೈವ ಪ್ರೇರಿತ” ಅಥವಾ “ದೇವರ ಅಧೀಕೃತ” ಅಥವಾ “ದೇವರು ಮಾತನಾಡಿದ ಮಾತುಗಳು” ಎಂದು ಅನುವಾದ ಮಾಡುಬಹುದು. “ಲೇಖನಗಳಲ್ಲಿರುವ ಪ್ರತಿಯೊಂದು ಮಾತನ್ನು ದೇವರು ಊದಿದ್ದಾರೆ” ಎಂದೂ ಹೇಳಬಹುದು.
  • “ಉಸಿರನ್ನು ಒಳಕ್ಕೆ ತೆಗೆದುಕೋ” ಅಥವಾ “ಜೀವವನ್ನು ಊದು” ಅಥವಾ “ಉಸಿರನ್ನು ಕೊಡುತ್ತದೆ” ಎನ್ನುವ ಮಾತುಗಳನ್ನು “ಉಸಿರಾಡುವುದಕ್ಕೆ ಕಾರಣವಾಗು” ಅಥವಾ “ಪುನಃ ಜೀವಂತವನ್ನಾಗಿ ಮಾಡು” ಅಥವಾ “ಅವುಗಳು ಉಸಿರಾಡುವಂತೆ ಮತ್ತು ಜೀವಿಸುವಂತೆ ಮಾಡು” ಎಂದೂ ಅನುವಾದ ಮಾಡಬಹುದು.
  • ಸಾಧ್ಯವಾದರೆ ನಮ್ಮ ಭಾಷೆಯಲ್ಲಿ “ದೇವರ ಉಸಿರು” ಎಂದು ಅನುವಾದ ಮಾಡುವುದು ಒಳ್ಳೇಯದು. “ಉಸಿರಾಡು” ಎಂದು ಒಂದುವೇಳೆ ದೇವರು ಹೇಳದಿದ್ದರೆ, ಇದನ್ನು “ದೇವರ ಶಕ್ತಿ” ಅಥವಾ “ದೇವರ ಪ್ರಸಂಗ” ಎಂದೂ ಅನುವಾದ ಮಾಡಬಹುದಾಗಿತ್ತು.
  • “ನನ್ನ ಉಸಿರನ್ನು ಹಿಡಿ” ಅಥವಾ “ನನ್ನ ಉಸಿರನ್ನು ಹೊಂದು” ಎನ್ನುವ ಮಾತುಗಳು “ಮೆಲ್ಲಗೆ ಉಸಿರಾಡುವ ಕ್ರಮದಲ್ಲಿ ಶಮನವನ್ನು ಹೊಂದು” ಅಥವಾ “ಮಾಮೂಲಿಯಾಗಿ ಉಸಿರನ್ನು ತೆಗೆದುಕೊಳ್ಳುವ ಕ್ರಮದಲ್ಲಿ ಓಡುವುದನ್ನು ನಿಲ್ಲಿಸು” ಎಂಬುದಾಗಿ ಅನುವಾದ ಮಾಡಬಹುದು.
  • “ಇದು ಉಸಿರಾಟ ಮಾತ್ರವೇ” ಎನ್ನುವ ಮಾತಿಗೆ “ಇನ್ನು ತುಂಬಾ ಸ್ವಲ್ಪ ಸಮಯ ಮಾತ್ರವೇ” ಎಂದರ್ಥ.
  • “ಮನುಷ್ಯನು ಕೇವಲ ಉಸಿರಾಡುತ್ತಿದ್ದಾನೆ” ಎನ್ನುವ ಮಾತಿಗೆ “ಜನರು ತುಂಬಾ ಸ್ವಲ್ಪ ಸಮಯ ಮಾತ್ರವೇ ಜೀವಿಸುತ್ತಾರೆ” ಅಥವಾ “ಮನುಷ್ಯರ ಜೀವನಗಳು ತುಂಬಾ ಸ್ವಲ್ಪ ಕಾಲ ಮಾತ್ರವೇ ಇರುತ್ತವೆ” ಅಥವಾ “ದೇವರ ಮಾತಿನ ಪ್ರಕಾರ, ಒಬ್ಬ ವ್ಯಕ್ತಿಯ ಜೀವನವು ಒಂದುಸಲ ನಾವು ಉಸಿರನ್ನು ಒಳಕ್ಕೆ ತೆಗೆದುಕೊಳ್ಳುವ ಸಮಯದಷ್ಟು ಕಡಿಮೆಯಾಗಿರುತ್ತದೆ.”

(ಈ ಪದಗಳನ್ನು ಸಹ ನೋಡಿರಿ : ಆದಾಮ, ಪೌಲ, ದೇವರ ವಾಕ್ಯ, ಜೀವ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3307, H5301, H5396, H5397, H7307, H7309, G1709, G1720, G4157

ಎಚ್ಚರಿಕೆ ಧ್ವನಿ, ತುತೂರಿ ಶಬ್ದ ಮಾಡುವುದು, ಹೆದರಿಕೆಯಾಗುವುದು

# ಸತ್ಯಾಂಶಗಳು:

ಎಚ್ಚರಿಕೆ ಧ್ವನಿ ಎನ್ನುವುದು ಜನರನ್ನು ಹಾನಿ ಮಾಡುವ ಯಾವುದಾದರೊಂದರ ಕುರಿತಾಗಿ ಅವರನ್ನು ಎಚ್ಚರಿಕೆ ಮಾಡುವ ಶಬ್ದವಾಗಿರುತ್ತದೆ. “ಎಚ್ಚರಿಕೆ ಹೊಂದುವುದು” ಎಂದರೆ ಏನಾದರೊಂದು ಅಪಾಯದ ಕುರಿತು ಅಥವಾ ಹೆದರಿಕೆ ಹೊಂದುವದರ ಕುರಿತು ಕಳವಳಗೊಳ್ಳುವುದು ಮತ್ತು ಭಯಗೊಳ್ಳುವುದು.

  • ಯೆಹೂದ್ಯರ ರಾಜ್ಯದ ಮೇಲಕ್ಕೆ ಧಾಳಿ ಮಾಡಲು ಮೋವಾಬ್ಯರು ಬರುತ್ತಿದ್ದಾರೆಂದು ಅರಸನಾದ ಯೆಹೋಷಫಾಟನು ಕೇಳಿಸಿಕೊಂಡಾಗ ತುಂಬಾ ಹೆಚ್ಚಾಗಿ ಹೆದರಿದ್ದನು.
  • ಅಂತ್ಯಕಾಲದಲ್ಲಿ ಅನೇಕವಾದ ವಿಪತ್ತುಗಳು ಮತ್ತು ಯುದ್ಧಗಳು ನಡೆಯುವುದನ್ನು ಕೇಳಿಸಿಕೊಂಡಾಗ ಕಳವಳಗೊಳ್ಳಬೇಡಿರಿ ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದರು.
  • “ಎಚ್ಚರಿಕೆ ಧ್ವನಿ” ಎನ್ನುವ ಮಾತಿಗೆ ಭಾವಾರ್ಥವು ಬೆದರಿಸುವುದು ಎಂದರ್ಥ. ಪುರಾತನ ಕಾಲದಲ್ಲಿ ಒಬ್ಬ ವ್ಯಕ್ತಿ ದೊಡ್ಡ ಶಬ್ದವನ್ನು ಮಾಡುವುದರ ಮೂಲಕ ಎಚ್ಚರಿಕೆ ಕೊಡುತ್ತಿದ್ದರು.

(ಅನುವಾದ ಸಲಹೆಗಳು: ##

“ಒಬ್ಬರನ್ನು ಹೆದರಿಸುವುದು” ಎಂದರೆ “ಒಬ್ಬರನ್ನು ಕಳವಳಗೊಳ್ಳುವಂತೆ ಮಾಡುವುದು” ಅಥವಾ “ಒಬ್ಬರನ್ನು ಚಿಂತಿಸುವಂತೆ ಮಾಡುವುದು” ಎಂದರ್ಥ.

  • “ಹೆದರಿಕೆ ಹೊಂದಿರುವುದು” ಎಂದರೆ “ಚಿಂತಿಸುತ್ತಾ ಇರುವುದು” ಅಥವಾ “ಭಯಗೊಳ್ಳುತ್ತಾ ಇರುವುದು” ಅಥವಾ “ತುಂಬಾ ಹೆಚ್ಚಾಗಿ ಆಲೋಚನೆ ಮಾಡುವುದು”.
  • “ಎಚ್ಚರಿಕೆಯ ಧ್ವನಿ” ಎನ್ನುವ ಮಾತನ್ನು “ಬಹಿರಂಗವಾಗಿ ಬೆದರಿಸುವುದು” ಅಥವಾ “ಅಪಾಯ ಬರುತ್ತಿದೆಯೆಂದು ಪ್ರಕಟನೆ ಮಾಡುವುದು” ಅಥವಾ “ಅಪಾಯದ ಕುರಿತಾಗಿ ತುತೂರಿ ಶಬ್ದವನ್ನು ಮಾಡುವುದು” ಎಂದು ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : /ಯೆಹೋಷಫಾಟ, /ಮೋವಾಬ್

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H7321, H8643

ಎಚ್ಚರಿಸುವುದು

# ನಿರ್ವಚನೆ :

“ಎಚ್ಚರಿಸುವುದು” ಎನ್ನುವ ಪದಕ್ಕೆ ಒಬ್ಬರಿಗೆ ಸರಿಯಾಗಿ ಬುದ್ಧಿ ಹೇಳುವುದು ಅಥವಾ ಸರಿಯಾಗಿ ಸಲಹೆಯನ್ನು ಕೊಡುವುದು.

  • “ಎಚ್ಚರಿಸುವುದು” ಎನ್ನುವ ಪದಕ್ಕೆ ಸಹಜವಾಗಿ ಏನೂ ಮಾಡದಿರು ಎಂದು ಒಬ್ಬರಿಗೆ ಸಲಹೆ ಕೊಡುವ ಅರ್ಥವನ್ನು ತಿಳಿಸುತ್ತಿದೆ.
  • ಕ್ರಿಸ್ತನ ದೇಹದಲ್ಲಿರುವ ವಿಶ್ವಾಸಿಗಳೆಲ್ಲರೂ ಪರಿಶುದ್ಧವಾದ ಜೀವನಗಳನ್ನು ಹೊಂದಿರಲು ಮತ್ತು ಪಾಪವನ್ನು ಮಾಡದಂತೆ ಇರುವುದಕ್ಕೆ ಒಬ್ಬರಿಗೊಬ್ಬರು ಎಚ್ಚರಿಸಿಕೊಳ್ಳಿರಿ ಎಂದು ಅಪ್ಪಣೆ ಹೊಂದಿದ್ದಾರೆ.
  • “ಎಚ್ಚರಿಸುವುದು” ಎನ್ನುವ ಪದವನ್ನು “ಪಾಪ ಮಾಡದಂತೆ ಪ್ರೋತ್ಸಾಹಿಸುವುದು” ಅಥವಾ “ಪಾಪ ಮಾಡದಂತೆ ಒಬ್ಬರನ್ನು ಪ್ರೇರಣೆಗೊಳಿಸುವುದು” ಎನ್ನುವ ಮಾತುಗಳಲ್ಲಿಯೂ ಅನುವಾದ ಮಾಡಬಹುದು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2094, H5749, G3560, G3867, G5537

ಎಡವಿ ಬೀಳುವುದು, ಎಡವಿ ಬೀಳಿಸುವುದು, ಎಡವಿ ಬಿದ್ದಿದೆ, ಎಡವಿ ಬೀಳುತ್ತಿರುವುದು

# ಪದದ ಅರ್ಥವಿವರಣೆ:

“ಎಡವಿ ಬೀಳುವುದು” ಎನ್ನುವ ಮಾತಿಗೆ ಒಬ್ಬರು ನಡೆಯುತ್ತಿರುವಾಗ ಅಥವಾ ಓಡುತ್ತಿರುವಾಗ “ಸಂಪೂರ್ಣವಾಗಿ ಬಿದ್ದುಹೋಗುತ್ತಿರುವುದು” ಎಂದರ್ಥ. ಸಾಧಾರಣವಾಗಿ ಇದು ಏನಾದರೊಂದರ ಮೇಲೆ ತಟಕ್ಕನೆ ಬಿಚ್ಚಿಕೊಳ್ಳುವುದು ಒಳಗೊಂಡಿರುತ್ತದೆ.

  • ಅಲಂಕಾರಿಕವಾಗಿ, “ಎಡವಿ ಬೀಳುವುದು” ಎನ್ನುವ ಮಾತಿಗೆ “ಪಾಪ” ಮಾಡುವುದು ಅಥವಾ ನಂಬಿಕೆಯಲ್ಲಿ “ಹಿಂಜರಿಯುವುದು” ಎಂದರ್ಥವಾಗಿರುತ್ತದೆ.
  • ಈ ಪದವು ಅಥವಾ ಮಾತು ಶಿಕ್ಷೆಯನ್ನು ಹೊಂದುತ್ತಿರುವಾಗ ಅಥವಾ ಹಿಂಸೆಗೊಳಗಾದ ಅಥವಾ ಯುದ್ಧದಲ್ಲಿ ಹೋರಾಟ ಮಾಡುತ್ತಿರುವಾಗ ಬಲಹೀನತೆಯನ್ನು ತೋರಿಸುವುದಕ್ಕೂ, ಅಥವಾ ತಪ್ಪುಗಳನ್ನು ಸೂಚಿಸುವುದಕ್ಕೂ ಉಪಯೋಗಿಸಲ್ಪಟ್ಟಿರುತ್ತದೆ.

# ಅನುವಾದ ಸಲಹೆಗಳು:

  • ಕೆಲವು ಸಂದರ್ಭಗಳಲ್ಲಿ “ಎಡವಿ ಬೀಳುವುದು” ಎನ್ನುವ ಮಾತಿಗೆ ಭೌತಿಕವಾಗಿ ಯಾವುದಾದರೊಂದರ ಮೇಲೆ ಬೀಳುವುದು ಎಂದರ್ಥವಾಗಿರುತ್ತದೆ, ಇದನ್ನು “ಸಂಪೂರ್ಣವಾಗಿ ಬಿದ್ದುಹೋಗುತ್ತಿರುವುದು” ಅಥವಾ “ಒಂದರ ಮೇಲೆ ಬಿಚ್ಚಿ ಬೀಳುವುದು” ಎಂದರ್ಥ ಬರುವ ಮಾತುಗಳೊಂದಿಗೆ ಅನುವಾದ ಮಾಡಬೇಕು.
  • ಸಂದರ್ಭದಲ್ಲಿ ಸರಿಯಾದ ಅರ್ಥವನ್ನು ಈ ಮಾತು ತಿಳಿಯಪಡಿಸುತ್ತಿದ್ದರೆ, ಇದರ ಅಕ್ಷರಾರ್ಥವನ್ನು ಅಲಂಕಾರಿಕ ಸಂದರ್ಭದಲ್ಲಿ ಉಪಯೋಗಿಸಿಕೊಳ್ಳಬಹುದು.
  • ಅನುವಾದ ಭಾಷೆಯಲ್ಲಿ ಅಕ್ಷರಾರ್ಥವಾದ ಅರ್ಥವನ್ನು ಕೊಡದ ಅಲಂಕಾರಿಕ ಉಪಯೋಗಗಳಲ್ಲಿ, “ಎಡವಿ ಬೀಳುವುದು” ಎನ್ನುವ ಮಾತನ್ನು “ಪಾಪ” ಮಾಡುವುದು ಅಥವಾ “ತಪ್ಪು ಮಾಡುವುದು” ಅಥವಾ “ನಂಬುವುದನ್ನು ನಿಲ್ಲಿಸುವುದು” ಅಥವಾ “ಬಲಹೀನವಾಗುವುದು” ಎಂದು ಸಂದರ್ಭಾನುಸಾರವಾಗಿ ಅನುವಾದ ಮಾಡಬಹುದು.
  • ಈ ಮಾತನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಪಾಪ ಮಾಡುವುದರ ಮೂಲಕ ಎಡವಿ ಬೀಳುವುದು” ಅಥವಾ “ನಂಬದಿರುವದರಿಂದ ಎಡವಿ ಬೀಳುವುದು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • “ಎಡವಿ ಬೀಳುವಂತೆ ಮಾಡುವುದು” ಎನ್ನುವ ಮಾತನ್ನು “ಬಲಹೀನವಾಗುವಂತೆ ಮಾಡುವುದು” ಅಥವಾ “ತಪ್ಪು ಮಾಡುವಂತೆ ಮಾಡುವುದು” ಎಂದು ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ನಂಬು, ಹಿಂಸಿಸು, ಪಾಪ, ವಿಘ್ನ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1762, H3782, H4383, H4384, H5062, H5063, H5307, H6328, H6761, H8058, G679, G4348, G4350, G4417, G4624, G4625

ಎಣ್ಣೆ

# ಪದದ ಅರ್ಥವಿವರಣೆ:

ಎಣ್ಣೆ ಎನ್ನುವುದು ಒಂದು ನಿರ್ದಿಷ್ಟವಾದ ಸಸ್ಯಗಳಿಂದ ಅಥವಾ ಮರಗಳಿಂದ ತೆಗೆದುಕೊಳ್ಳುವ ಸ್ಪಷ್ಟವಾದ ದ್ರವ ಪದಾರ್ಥವಾಗಿರುತ್ತದೆ. ಸತ್ಯವೇದ ಕಾಲಗಳಲ್ಲಿ ಎಣ್ಣೆ ಸಾಧಾರಣವಾಗಿ ಎಣ್ಣೆಮರಗಳಿಂದ (ಆಲಿವ್ ಮರಗಳಿಂದ) ತೆಗೆಯುತ್ತಿದ್ದರು.

  • ಎಣ್ಣೆಯ ಮರಗಳ ಎಣ್ಣೆಯನ್ನು (ಅಲೀವ್ ಎಣ್ಣೆಯನ್ನು) ಅಡಿಗೆಗೆ, ಅಭಿಷೇಕಕ್ಕೆ, ಬಲಿಗೆ, ದೀಪಗಳಿಗೆ ಮತ್ತು ಔಷಧಕ್ಕೆ ಉಪಯೋಗಿಸುತ್ತಾರೆ.
  • ಪುರಾತನ ಕಾಲಗಳಲ್ಲಿ ಎಣ್ಣೆಯ ಮರಗಳ ಎಣ್ಣೆಯು ತುಂಬಾ ಹೆಚ್ಚಿನ ಬೆಲೆಯುಳ್ಳದ್ದು ಮತ್ತು ಎಷ್ಟು ಹೆಚ್ಚಾಗಿ ಎಣ್ಣೆಯಿದ್ದರೆ ಅಷ್ಟು ಹೆಚ್ಚಾಗಿ ಶ್ರೀಮಂತರೆಂದು ಅಳತೆ ಮಾಡುತ್ತಿದ್ದರು.
  • ಈ ರೀತಿಯ ಪದವನ್ನು ಅನುವಾದ ಮಾಡುತ್ತಿರುವಾಗ ಈ ರೀತಿಯಾದ ಎಣ್ಣೆಯನ್ನು ಅಡಿಗೆಗೆ ಮಾತ್ರ ಉಪಯೋಗಿಸುತ್ತಾರೇ ಹೊರತು, ಇದು ಗಾಡಿಗಳಿಗೆ ಉಪಯೋಗಿಸುವ ಎಣ್ಣೆಯಲ್ಲ ಎಂಬುವುದನ್ನು ನಿಶ್ಚಯಿಸಿಕೊಳ್ಳಿರಿ. ಈ ರೀತಿಯ ಅನೇಕವಾದ ಎಣ್ಣೆಗಳಿಗೆ ವಿವಿಧವಾದ ಪದಗಳನ್ನು ಕೆಲವೊಂದು ಭಾಷೆಗಳಲ್ಲಿ ಉಪಯೋಗಿಸುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ಆಲೀವ್ (ಎಣ್ಣೆಮರಗಳ ಎಣ್ಣೆ), ಸರ್ವಾಂಗಹೋಮ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1880, H2091, H3323, H4887, H6671, H7246, H8081, G1637, G3464

ಎತ್ತಲ್ಪಡುವುದು, ಎತ್ತಲ್ಪಡುವರು, ಸಿಕ್ಕುತ್ತಾರೆ

# ಪದದ ಅರ್ಥವಿವರಣೆ:

“ಎತ್ತಲ್ಪಡುವರು” ಎನ್ನುವ ಪದವು ಅನೇಕಬಾರಿ ದೇವರು ಒಬ್ಬ ವ್ಯಕ್ತಿಯನ್ನು ಆಕಸ್ಮಿಕವಾಗಿ, ಅಧ್ಬುತ ರೀತಿಯಾಗಿ ಪರಲೋಕಕ್ಕೆ ಕರೆದೊಯ್ಯುವುದನ್ನು ಸೂಚಿಸುತ್ತದೆ.

  • “ಸಿಕ್ಕುತ್ತಾರೆ” ಎನ್ನುವ ಮಾತು ಒಬ್ಬರನ್ನು ಸೇರುವುದಕ್ಕೆ ಅವಸರಿಸಿದನಂತರ ಒಬ್ಬರ ಬಳಿಗೆ ಬರುವುದನ್ನು ಸೂಚಿಸುತ್ತದೆ. ಇದೇ ಅರ್ಥ ಬರುವ ಇನ್ನೊಂದು ಪದವು ಏನಂದರೆ “ಅಧಿಗಮಿಸು”
  • ಮೂರನೇ ಆಕಾಶಕ್ಕೆ “ಕರೆದೊಯ್ಯಲ್ಪಟ್ಟ” ವಿಷಯದ ಕುರಿತಾಗಿ ಅಪೊಸ್ತಲನಾದ ಪೌಲನು ಮಾತನಾಡುತ್ತಿದ್ದಾನೆ. ಇದನ್ನು “ತೆಗೆದುಕೊಂಡಾಗಿದೆ” ಎಂದೂ ಅನುವಾದ ಮಾಡಬಹುದು.
  • ಕ್ರಿಸ್ತನು ಹಿಂದಿರುಗಿ ಬರುವ ಸಮಯದಲ್ಲಿ ಆಕಾಶದಲ್ಲಿ ಆತನನ್ನು ಸೇರಲು ಕ್ರೈಸ್ತರೆಲ್ಲರು “ಮೇಲಕ್ಕೆ ಎತ್ತಲ್ಪಡುತ್ತಾರೆ” ಎಂದು ಅಪೊಸ್ತಲನಾದ ಪೌಲನು ಹೇಳಿದ್ದಾನೆ.
  • ಅಲಂಕಾರ ಭಾವವ್ಯಕ್ತೀಕರಣದಲ್ಲಿ “ನನ್ನ ಪಾಪಗಳು ನನ್ನೊಂದಿಗೆ ಎತ್ತಿ ಹಿಡಿಯಲ್ಪಟ್ಟಿವೆ” ಎನ್ನುವ ಮಾತು, “ನಾನು ಮಾಡಿರುವ ಪಾಪಕ್ಕೆ ನಾನು ಪರಿಣಾಮಗಳನ್ನು ಎದುರುಗೊಂಡಿದ್ದೇನೆ” ಅಥವಾ “ನನ್ನ ಪಾಪದ ಕಾರಣದಿಂದ ನಾನು ಹಿಂಸೆಯನ್ನು ಅನುಭವಿಸುತ್ತಿದ್ದೇನೆ” ಅಥವಾ “ನನ್ನ ಪಾಪವೇ ನನ್ನ ಸಂಕಷ್ಟಕ್ಕೆ ಕಾರಣ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಅದ್ಭುತ, ಅಧಿಗಮಿಸು, ಶ್ರಮೆ, ಸಂಕಷ್ಟ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1692, G726

ಎದೆಕವಚ, ಎದೆಕವಚಗಳು, ಎದೆಯತುಂಡು

# ಪದದ ಅರ್ಥವಿವರಣೆ:

“ಎದೆಕವಚ” ಎನ್ನುವುದು ಯುದ್ಧದಲ್ಲಿ ಸೈನಿಕನನ್ನು ಸಂರಕ್ಷಿಸಲು ಎದೆಯ ಮುಂಭಾಗದಲ್ಲಿ ಕಟ್ಟಿಕೊಳ್ಳುವ ಯುದ್ಧ ಕವಚದ ಉಪಕರಣವನ್ನು ಸೂಚಿಸುತ್ತದೆ. “ಎದೆತುಂಡು” ಎನ್ನುವ ಪದವು ಇಸ್ರಾಯೇಲ್ ಮಹಾ ಯಾಜಕನು ತನ್ನ ಎದೆಯ ಮುಂಭಾಗದಲ್ಲಿ ಧರಿಸುವ ಬಟ್ಟೆಯಿಂದ ಮಾಡಿದ ವಿಶೇಷವಾದ ತುಂಡನ್ನು ಸೂಚಿಸುತ್ತದೆ.

  • “ಎದೆಕವಚ” ಎನ್ನುವದನ್ನು ಸೈನಿಕನು ಉಪಯೋಗಿಸುವ ಉಪಕರಣ, ಇದನ್ನು ಪ್ರಾಣಿಯ ಚರ್ಮದಿಂದ, ಲೋಹದಿಂದ ಅಥವಾ ಕಟ್ಟಿಗೆಯಿಂದ ಮಾಡುತ್ತಾರೆ. ಸೈನಿಕನ ಎದೆಯನ್ನು ಖಡ್ಗಗಳಾಗಲಿ, ಬಾಣಗಳಾಗಲಿ ಅಥವಾ ಭರ್ಜಿಗಳಾಗಲಿ ತಿವಿಯದೆ ಕಾಪಾಡಿಕೊಳ್ಳುವುದಕ್ಕೆ ಇದನ್ನು ಮಾಡಿರುತ್ತಾರೆ.
  • “ಎದೆತುಂಡು” ಎನ್ನುವದನ್ನು ಇಸ್ರಾಯೇಲ್ಯರ ಮಹಾ ಯಾಜಕನು ಧರಿಸುತ್ತಾನೆ, ಇದನ್ನು ಬಟ್ಟೆಯಿಂದ ಮಾಡಿ, ಅದಕ್ಕೆ ಅತೀ ಬೆಲೆಯುಳ್ಳ ರತ್ನಗಳನ್ನು ಅಂಟಿಸುತ್ತಾರೆ. ದೇವಾಲಯದಲ್ಲಿ ದೇವರಿಗೆ ಮಾಡುವ ಸೇವೆಗಳನ್ನು ಮಾಡುವ ಸಮಯದಲ್ಲಿ ಇದನ್ನು ಯಾಜಕನು ಧರಿಸುತ್ತಾನೆ.
  • “ಎದೆಕವಚ” ಎನ್ನುವ ಪದವನ್ನು ಅನುವಾದಿಸುವ ಬೇರೊಂದು ವಿಧಾನಗಳಲ್ಲಿ, “ಎದೆಯನ್ನು ಮುಚ್ಚುವ ಅಥವಾ ಕಾಪಾಡುವ ಲೋಹದ ಉಪಕರಣ” ಅಥವಾ “ಎದೆಯನ್ನು ಸಂರಕ್ಷಿಸುವ ಕವಚದ ತುಂಡು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • “ಎದೆತುಂಡು” ಎನ್ನುವ ಪದವನ್ನು “ಎದೆಯನ್ನು ಮುಚ್ಚುವುದಕ್ಕೆ ಯಾಜಕನ ಬಟ್ಟೆ” ಅಥವಾ “ಯಾಜಕನ ವಸ್ತ್ರದ ತುಂಡು” ಅಥವಾ “ಯಾಜಕನ ಬಟ್ಟೆಯ ಮುಂಭಾಗದ ತುಂಡು” ಎಂದು ಅರ್ಥ ಬರುವ ಪದಗಳೊಂದಿಗೆ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಕವಚ, ಮಹಾ ಯಾಜಕ, ತಿವಿಯುವುದು, ಯಾಜಕ, ದೇವಾಲಯ, ಯೋಧ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2833 , H8302, G2382

ಎಬ್ಬಿಸು, ಎಬ್ಬಿಸುವುದು, ಎಬ್ಬಿಸಿದೆ, ಏರಿಸು, ಏರಿದೆ, ಎದ್ದೇಳು, ಎದ್ದಿದೆ

# ಪದದ ಅರ್ಥವಿವರಣೆ:

___ ಎಬ್ಬಿಸು, ಮೇಲಕ್ಕೆ ಎಬ್ಬಿಸು ____

ಸಾಧಾರಣವಾಗಿ “ಎಬ್ಬಿಸು” ಎನ್ನುವ ಪದಕ್ಕೆ “ಮೇಲಕ್ಕೆ ಎತ್ತು” ಅಥವಾ “ಉನ್ನತವಾಗಿ ಮಾಡು” ಎಂದರ್ಥ.

  • “ಮೇಲಕ್ಕೆ ಎತ್ತು” ಎನ್ನುವ ಅಲಂಕಾರಿಕ ಮಾತಿಗೆ ಯಾವುದಾದರೊಂದನ್ನು ಕಾಣಿಸಿಕೊಳ್ಳುವಂತೆ ಅಥವಾ ಅಸ್ತಿತ್ವದಲ್ಲಿರಲು ಮಾಡುವುದು ಎಂದರ್ಥ. ಯಾವುದಾದರೊಂದನ್ನು ಮಾಡುವುದಕ್ಕೆ ಯಾರಾದರೊಬ್ಬರನ್ನು ನೇಮಿಸುವುದು ಎಂದರ್ಥವೂ ಈ ಪದಕ್ಕೆ ಇರುತ್ತದೆ.
  • ಕೆಲವೊಂದುಬಾರಿ “ಮೇಲಕ್ಕೆ ಎತ್ತು” ಎನ್ನುವ ಮಾತಿಗೆ “ಪುನರ್ ಸ್ಥಾಪಿಸು” ಅಥವಾ “ಪುನರ್ ನಿರ್ಮಿಸು” ಎಂದರ್ಥವಾಗಿರುತ್ತದೆ.
  • “ಎಬ್ಬಿಸು” ಎನ್ನುವ ಪದಕ್ಕೆ “ಮರಣದಿಂದ ಎಬ್ಬಿಸು” ಎನ್ನುವ ಮಾತಿನಲ್ಲಿರುವ ವಿಶೇಷವಾದ ಅರ್ಥವು ಇರುತ್ತದೆ. ಸತ್ತಿರುವ ವ್ಯಕ್ತಿಯನ್ನು ಜೀವಂತವನ್ನಾಗಿ ಮಾಡುವುದು ಎಂದು ಈ ಮಾತಿಗೆ ಅರ್ಥವಾಗಿರುತ್ತದೆ.
  • ಕೆಲವೊಂದುಬಾರಿ “ಮೇಲಕ್ಕೆ ಎತ್ತು” ಎನ್ನುವ ಪದಕ್ಕೆ ಯಾರಾದರೊಬ್ಬರನ್ನು ಅಥವಾ ಯಾವುದಾದರೊಂದನ್ನು “ಮಹಿಮೆಪಡಿಸು ಅಥವಾ ಹೊಗಳು” ಎಂದರ್ಥವಾಗಿರುತ್ತದೆ.

__ ಏರಿಸು, ಎದ್ದೇಳು ____

“ಏರಿಸು” ಅಥವಾ “ಎದ್ದೇಳು” ಎನ್ನುವ ಪದಕ್ಕೆ “ಮೇಲಕ್ಕೆ ಹೋಗು” ಅಥವಾ “ಎದ್ದು ಬಾ” ಎಂದರ್ಥ. “ಏರಿದೆ,” “ಬೆಳೆದಿದೆ”, ಮತ್ತು “ಎದ್ದಿದೆ” ಎನ್ನುವ ಪದಗಳು ಭೂತ ಕಾಲದ ಕ್ರಿಯೆಯನ್ನು ವ್ಯಕ್ತಪಡಿಸುತ್ತಿವೆ.

  • ಒಬ್ಬ ವ್ಯಕ್ತಿ ಎಲ್ಲಿಗಾದರು ಹೋಗುವುದಕ್ಕೆ ಮೇಲಕ್ಕೆ ಎದ್ದಾಗ, ಇದು ಕೆಲವೊಂದುಬಾರಿ “ಅವನು ಎದ್ದು, ಹೊರಟನು” ಅಥವಾ “ಅವನು ಮೇಲಕ್ಕೆ ಎದ್ದು, ಹೊರಟುಹೋದನು” ಎಂದೂ ವ್ಯಕ್ತಗೊಳಿಸಲಾಗುತ್ತದೆ.
  • ಯಾವುದಾದರೊಂದು “ಎದ್ದು ಬರುತ್ತಿರುವಾಗ”, ಇದಕ್ಕೆ ಇದು “ನಡೆದಿದೆ” ಅಥವಾ “ನಡೆಯುವುದಕ್ಕೆ ಆರಂಭವಾಗುತ್ತಿದೆ” ಎಂದರ್ಥ.
  • ಯೇಸು “ಮರಣದಿಂದ ಎಬ್ಬಿಸಲ್ಪಡುವನು” ಎಂದು ಆತನು ಮುಂಚಿತವಾಗಿಯೇ ಹೇಳಿದ್ದನು. ಯೇಸು ಮರಣಿಸಿದ ಮೂರು ದಿನಗಳಾದನಂತರ, “ಆತನು ಎದ್ದು ಬಂದನು” ಎಂದು ದೂತ ಹೇಳಿದನು.

# ಅನುವಾದ ಸಲಹೆಗಳು:

  • “ಎಬ್ಬಿಸು” ಅಥವಾ “ಎದ್ದೇಳು” ಎನ್ನುವ ಪದವನ್ನು “ಮೇಲಕ್ಕೆತ್ತು” ಅಥವಾ “ಉನ್ನತವಾಗಿ ಮಾಡು” ಎಂದೂ ಅನುವಾದ ಮಾಡಬಹುದು.
  • “ಮೇಲಕ್ಕೆತ್ತು” ಎನ್ನುವ ಪದವನ್ನು “ಕಾಣಿಸಿಕೊಳ್ಳುವಂತೆ ಮಾಡು” ಅಥವಾ “ನೇಮಿಸು” ಅಥವಾ “ಅಸ್ತಿತ್ವದಲ್ಲಿರಿಸು” ಎಂದೂ ಅನುವಾದ ಮಾಡಬಹುದು.
  • “ನಿಮ್ಮ ಶತ್ರುಗಳ ಬಲವನ್ನು ಮೇಲಕ್ಕೆತ್ತು” ಎನ್ನುವ ಮಾತನ್ನು “ನಿಮ್ಮ ಶತ್ರುಗಳನ್ನು ತುಂಬಾ ಬಲವುಳ್ಳವರನ್ನಾಗಿ ಮಾಡು” ಎಂದೂ ಅನುವಾದ ಮಾಡಬಹುದು.
  • “ಮರಣದಿಂದ ಯಾರಾದರೊಬ್ಬರನ್ನು ಎಬ್ಬಿಸು” ಎನ್ನುವ ಮಾತನ್ನು “ಸತ್ತಂತ ಯಾರಾದರೊಬ್ಬರನ್ನು ಮರಣದಿಂದ ಜೀವಂತನನ್ನಾಗಿ ಮಾಡು” ಅಥವಾ “ಒಬ್ಬ ವ್ಯಕ್ತಿ ತಿರುಗಿ ಜೀವಂತವಾಗುವಂತೆ ಮಾಡು” ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಗುಣವಾಗಿ, “ಮೇಲಕ್ಕೆತ್ತು” ಎನ್ನುವ ಪದವನ್ನು “ಒದಗಿಸು” ಅಥವಾ “ನೇಮಿಸು” ಅಥವಾ “ಹೊಂದಿಕೊಳ್ಳು” ಅಥವಾ “ನಿರ್ಮಿಸು” ಅಥವಾ “ಪುನರ್ ನಿರ್ಮಿಸು” ಅಥವಾ “ಸರಿಪಡಿಸು” ಎಂದೂ ಅನುವಾದ ಮಾಡಬಹುದು.
  • “ಎದ್ದು, ಹೊರಟನು” ಎನ್ನುವ ಮಾತನ್ನು “ಮೇಲಕ್ಕೆ ಎದ್ದು, ಹೊರಟನು” ಅಥವಾ “ಹೋದನು” ಎಂದು ಅನುವಾದ ಮಾಡಬಹುದು.
  • ಸಂದರ್ಭಾನುಗುಣವಾಗಿ, “ಎದ್ದಿದೆ” ಎನ್ನುವ ಪದವನ್ನು “ಆರಂಭಿಸಿದೆ” ಅಥವಾ “ಆರಂಭ ಮಾಡಲಾಗಿದೆ” ಅಥವಾ “ಮೇಲಕ್ಕೆ ಎದ್ದಿದೆ” ಅಥವಾ “ನಿಂತಿದೆ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಪುನರುತ್ಹಾನ, ನೇಮಿಸು, ಘನಪಡಿಸು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಉದಾಹರಣೆಗಳು:

  • 21:14_ ಮೆಸ್ಸೀಯ ಮರಣಿಸುತ್ತಾನೆ ಮತ್ತು ದೇವರು ಆತನನ್ನು ಮರಣದಿಂದ ___ ಎಬ್ಬಿಸುತ್ತಾನೆ ___ ಎಂದು ಪ್ರವಾದಿಗಳು ಮುಂಚಿತವಾಗಿ ಹೇಳಿದ್ದರು.
  • 41:05_ “ಯೇಸು ಇಲ್ಲಿ ಇಲ್ಲ. ಆತನು ಹೇಳಿದ ಪ್ರಕಾರವೇ, ಆತನು ಮರಣದಿಂದ ___ ಎಬ್ಬಿಸಲ್ಪಟ್ಟಿದ್ದಾನೆ ____!”
  • 43:07_ “ಯೇಸು ಮರಣ ಹೊಂದಿದರೂ, ದೇವರು ಆತನನ್ನು ಮರಣದಿಂದ ___ ಎಬ್ಬಿಸಲ್ಪಟ್ಟಿದ್ದಾನೆ ___. “ನಿನ್ನ ಪರಿಶುದ್ಧನನ್ನು ಸಮಾಧಿಯಲ್ಲಿರುವಂತೆ ಬಿಡುವುದಿಲ್ಲ” ಎನ್ನುವ ಪ್ರವಾದನೆಯು ಈ ರೀತಿಯಲ್ಲಿ ನೆರವೇರಿಸಲ್ಪಟ್ಟಿತು. ಯೇಸು ತಿರುಗಿ ಜೀವಂತವಾಗಿರುವಕ್ಕೆ ದೇವರು ಯೇಸುವನ್ನು ___ ಎಬ್ಬಿಸಿದ್ದಾನೆ ___ ಎನ್ನುವ ಸತ್ಯ ಸಂಘಟನೆಗೆ ನಾವೆಲ್ಲರು ಸಾಕ್ಷಿಗಳಾಗಿದ್ದೇವೆ.
  • 44:05 “ನೀವು ಜೀವಾಧಿಪತಿಯನ್ನು ಸಾಯಿಸಿದ್ದೀರಿ, ಆದರೆ ದೇವರು ಆತನನ್ನು ಮರಣದಿಂದ ___ ಎಬ್ಬಿಸಿದನು ___.
  • 44:08_ “ನಿಮ್ಮ ಮುಂದೆ ನಿಂತಿರುವ ಈ ಮನುಷ್ಯನು ಮೆಸ್ಸೀಯನಾದ ಯೇಸುವಿನ ಶಕ್ತಿಯಿಂದ ಸ್ವಸ್ಥತೆಯನ್ನು ಪಡೆದುಕೊಂಡಿದ್ದಾನೆ. ನೀವು ಯೇಸುವನ್ನು ಶಿಲುಬೆಗೆ ಹಾಕಿದ್ದೀರಿ, ಆದರೆ ದೇವರು ಆತನು ತಿರುಗಿ ಜೀವಿಸುವಂತೆ ___ ಎಬ್ಬಿಸಿದನು ___!”
  • 48:04_ ಸೈತಾನನು ಮೆಸ್ಸೀಯನನ್ನು ಕೊಂದನು ಎಂದು ಇದರ ಅರ್ಥವಾಗಿರುತ್ತದೆ, ಆದರೆ ಆತನು ತಿರುಗಿ ಜೀವಂತವಾಗಿರುವುದಕ್ಕೆ ದೇವರು ಆತನನ್ನು ___ ಎಬ್ಬಿಸಿದನು ____, ಮತ್ತು ಮೆಸ್ಸೀಯ ಶಾಶ್ವತವಾಗಿ ಸೈತಾನನ ಶಕ್ತಿಯನ್ನು ಜಜ್ಜುವನು.
  • 49:02_ ಆತನು (ಯೇಸು) ನೀರಿನ ಮೇಲೆ ನಡೆದನು, ಬಿರುಗಾಳಿಯನ್ನು ಶಾಂತಗೊಳಿಸಿದನು, ಅನೇಕ ರೋಗಿಗಳನ್ನು ಗುಣಪಡಿಸಿದನು, ದೆವ್ವಗಳನ್ನು ಹೋಗಲಾಡಿಸಿದನು, ಸತ್ತಂತವರನ್ನು ಜೀವಂತವಾಗಿರುವುದಕ್ಕೆ ತಿರುಗಿ ___ ಎಬ್ಬಿಸಿದನು ___, ಮತ್ತು ಐದು ರೊಟ್ಟಿ ಎರಡು ಮೀನುಗಳನ್ನು ಸುಮಾರು 5,000 ಜನರಿಗೆ ಹಂಚಿದನು.
  • 49:12_ ಯೇಸು ದೇವರ ಮಗನೆಂದು, ನಿನಗೆ ಬದಲಾಗಿ ಆತನು ಶಿಲುಬೆಯಲ್ಲಿ ಮರಣಿಸಿದ್ದಾನೆಂದು, ಮತ್ತು ದೇವರು ಆತನನ್ನು ತಿರುಗಿ ___ ಎಬ್ಬಿಸಿದ್ದಾನೆಂದು ____ ನೀನು ತಪ್ಪದೇ ನಂಬಬೇಕು.

# ಪದ ಡೇಟಾ:

  • Strong's: H2210, H2224, H5549, H5782, H5927, H5975, H6209, H6965, H6966, H6974, H7613, H7721, G305, G386, G393, G450, G1096, G1326, G1453, G1525, G1817, G1825, G1892, G1999, G4891

ಏಲಾ, ಏಲಾಗಳು

# ಪದದ ಅರ್ಥವಿವರಣೆ:

ಏಲಾ, ಅಥವಾ ಏಲಾ ಮರ ಎನ್ನುವುದು ದೊಡ್ಡ ಕಾಂಡವಿರುವ ಎತ್ತರವುಳ್ಳ ಮರ ಮತ್ತು ಅಗಲವಾಗಿ ವಿಸ್ತರಿಸಿದ ಕೊಂಬೆಗಳನ್ನು ಒಳಗೊಂಡಿರುತ್ತದೆ.

  • ಏಲಾ ಮರಗಳು ಬಲವಾದ ಗಟ್ಟಿಯಾದ ಮರವಾಗಿರುತ್ತದೆ, ಇದನ್ನು ದೊಡ್ಡ ದೊಡ್ಡ ಹಡಗುಗಳನ್ನು ನಿರ್ಮಿಸುವುದಕ್ಕೆ, ನೇಗಿಲುಗಳನ್ನು, ಎತ್ತುಗಳನ್ನು ನೊಗಗಳನ್ನು ಮತ್ತು ನಡೆಸುವ ಬಡಿಗೆಗಳನ್ನು ತಯಾರು ಮಾಡುವುದಕ್ಕೆ ಉಪಯೋಗಿಸುತ್ತಾರೆ.
  • ಏಲಾ ಮರದ ಬೀಜವನ್ನು ಸಿಂಧೂ ವೃಕ್ಷದ ಹಣ್ಣು ಎಂದೂ ಕರೆಯುತ್ತಾರೆ.
  • ನಿರ್ಧಿಷ್ಟವಾದ ಏಲಾ ಮರಗಳ ಕಾಂಡಗಳನ್ನು 6 ಮೀಟರುಗಳ ಉದ್ದದವರೆಗೂ ಅಳತೆ ಮಾಡಿ ಇಟ್ಟಿರುತ್ತಾರೆ.
  • ಏಲಾ ಮರಗಳು ಬಹು ಬಾಳಿಕೆ ಬರುವ ಜೀವನಕ್ಕೆ ಗುರುತಾಗಿರುತ್ತದೆ ಮತ್ತು ಇತರ ಆತ್ಮೀಯ ಅರ್ಥಗಳನ್ನು ಹೊಂದಿರುತ್ತದೆ. ಸತ್ಯವೇದದಲ್ಲಿ ಅವುಗಳು ಅನೇಕಬಾರಿ ಪರಿಶುದ್ಧ ಸ್ಥಳಗಳೊಂದಿಗೆ ಹೆಚ್ಚಾಗಿ ಸಂಬಂಧಗಳನ್ನು ಹೊಂದಿರುತ್ತದೆ.

# ಅನುವಾದ ಸಲಹೆಗಳು:

  • ಅನೇಕ ಅನುವಾದಗಳಲ್ಲಿ “ಏಲಾ” ಎನ್ನುವ ಪದವನ್ನು ಬಳಸುವುದಕ್ಕೆ ಬದಲಾಗಿ “ಏಲಾ ಮರ” ಎನ್ನುವ ಪದವನ್ನು ಉಪಯೋಗಿಸುವುದು ತುಂಬಾ ಪ್ರಾಮುಖ್ಯವೆಂದು ಕಂಡುಕೊಂಡಿದ್ದಾರೆ.
  • ಓದುಗಾರರ ಸ್ಥಳದಲ್ಲಿ ಈ ಏಲಾ ಮರಗಳು ಇಲ್ಲದಿದ್ದರೆ, “ಏಲಾ”ವನ್ನು “ದೊಡ್ಡದಾಗಿಯೂ ಎತ್ತರವಾಗಿಯೂ ಇರುವ ಏಲಾ ಮರ” ಎಂದೂ ಅನುವಾದ ಮಾಡಬಹುದು, ಈ ಮರದ ಗುಣಲಕ್ಷಣಗಳನ್ನು ಹೊಂದಿರುವ ಬೇರೆ ಇತರ ಮರಗಳನ್ನು ಹೋಲಿಸಿ ಆ ಮರದ ಹೆಸರನ್ನು ಹೇಳಬಹುದು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಪರಿಶುದ್ಧ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H352, H424, H427, H436, H437, H438

ಒಂಟೆ, ಒಂಟೆಗಳು

# ಪದದ ಅರ್ಥವಿವರಣೆ:

ಒಂಟೆ ಎಂದರೆ ನಾಲ್ಕು ಕಾಲುಗಳು ಇರುವ ದೊಡ್ಡ ಪ್ರಾಣಿ, ಇದರ ಹಿಂದೆ ಒಂದು ಅಥವಾ ಎರಡು ದಿಣ್ಣೆಗಳು ಇರುತ್ತವೆ. (ಇದನ್ನು ಸಹ ನೋಡಿರಿ : ಗೊತ್ತಿಲ್ಲದವುಗಳನ್ನು ಯಾವರೀತಿ ಅನುವಾದ ಮಾಡಬೇಕು)

  • ಸತ್ಯವೇದ ಕಾಲದಲ್ಲಿ ಒಂಟೆ ಎನ್ನುವುದು ಇಸ್ರಾಯೇಲ್.ನಲ್ಲಿ ಮತ್ತು ಅದರ ಸುತ್ತಮುತ್ತ ಪ್ರಾಂತ್ಯಗಳಲ್ಲಿ ದೊಡ್ಡ ಪ್ರಾಣಿಯೆಂದು ಗುರುತಿಸಲಾಗಿದೆ.
  • ಒಂಟೆಯನ್ನು ಮುಖ್ಯವಾಗಿ ಜನರನ್ನು ಮತ್ತು ಭಾರ ವಸ್ತುಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಉಪಯೋಗಿಸುತ್ತಿದ್ದರು.
  • ಕೆಲವೊಂದು ಜನಾಂಗಗಳು ಊಟಕ್ಕಾಗಿ ಒಂಟೆಗಳನ್ನು ಬಳಸುತ್ತಿದ್ದರು, ಇಸ್ರಾಯೇಲ್ ಜನರು ಮಾತ್ರ ತಿನ್ನುತ್ತಿರಲಿಲ್ಲ, ಯಾಕಂದರೆ ಒಂಟೆಗಳು ಅಪವಿತ್ರವಾದವುಗಳು ಮತ್ತು ಅವುಗಳನ್ನು ತಿನ್ನಬಾರದು ಎಂದು ದೇವರು ಹೇಳಿದ್ದರು.
  • ಒಂಟೆಗಳು ತುಂಬಾ ಬೆಲೆಯುಳ್ಳ ಪ್ರಾಣಿಗಳು ಯಾಕಂದರೆ ಅವು ಮರಳುಗಾಡಿಯಲ್ಲಿ ತುಂಬಾ ಸುಲಭವಾಗಿ ಪ್ರಯಾಣ ಮಾಡುತ್ತವೆ ಮತ್ತು ಒಂದೊಂದುಸಲ ಅವು ಕೆಲವೊಂದು ವಾರಗಳ ವರೆಗೂ ನೀರು, ಆಹಾರ ಯಾವುದೂ ಇಲ್ಲದಿದ್ದರೂ ಜೀವಿಸುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಭಾರ, ಪವಿತ್ರ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H327, H1581, G2574

ಒಪ್ಪಿಸು, ಒಪ್ಪಿಸಲಾಗಿದೆ, ಒಪ್ಪಿಸುತ್ತಿದ್ದೇವೆ, ನಿಯಮಿತ ಕಾರ್ಯ, ನಿಯಮಿತ ಕಾರ್ಯಗಳು, ತಿರುಗಿ ಒಪ್ಪಿಸು

# ಸತ್ಯಾಂಶಗಳು:

“ಒಪ್ಪಿಸು” ಅಥವಾ “ಒಪ್ಪಿಸಲಾಗಿದೆ” ಎನ್ನುವ ಪದವು ಒಂದು ಪ್ರತ್ಯೇಕವಾದ ಕೆಲಸಕ್ಕಾಗಿ ಯಾರದರೊಬ್ಬರನ್ನು ನಿಯಮಿಸುವುದನ್ನು ಸೂಚಿಸುತ್ತದೆ ಅಥವಾ ಒಬ್ಬರು ಅಥವಾ ಇಬ್ಬರಿಗೆ ಒಂದು ಕೆಲಸವನ್ನು ಒಪ್ಪಿಸಿಕೊಡುವುದು.

  • ಸೈನ್ಯದಲ್ಲಿ ಸೇವೆ ಮಾಡುವುದಕ್ಕೆ ಇಸ್ರಾಯೇಲ್ ಮನುಷ್ಯರಲ್ಲಿ ಒಬ್ಬ ಉತ್ತಮ ಯೌವನಸ್ಥನನ್ನು “ಒಪ್ಪಿಸುತ್ತಾನೆ” ಎಂದು ಪ್ರವಾದಿಯಾದ ಸಮುವೇಲನು ಅರಸನಾದ ಸೌಲನಿಗೆ ಮುಂಚಿತವಾಗಿಯೇ ಹೇಳಿರುತ್ತಾನೆ.
  • ಮೋಶೆ ಇಸ್ರಾಯೇಲ್ಯರ ಹನ್ನೆರಡು ಕುಲಗಳು ನಿವಾಸಮಾಡುವುದಕ್ಕೆ ಕಾನಾನ್ ಭೂಮಿಯನ್ನು ಪ್ರತಿಯೊಬ್ಬರಿಗೆ “ಒಪ್ಪಿಸಿಕೊಟ್ಟನು” .
  • ಹಳೇ ಒಡಂಬಡಿಕೆಯ ಧರ್ಮಶಾಶ್ತ್ರದಲ್ಲಿ, ಕೆಲವೊಂದು ಇಸ್ರಾಯೇಲ್ ಕುಲಗಳು ಯಾಜಕರಾಗಿ, ಕಲಾವಿಧರಾಗಿ, ಗಾಯಕರಾಗಿ ಮತ್ತು ಕಟ್ಟುವವರಾಗಿ ಕೆಲಸವನ್ನು ಹೊಂದಿ ನೇಮಿಸಲ್ಪಟ್ಟಿದ್ದರು.
  • ಸಂದರ್ಭಕ್ಕೆ ತಕ್ಕಂತೆ, “ಒಪ್ಪಿಸು” ಎನ್ನುವದನ್ನು “ಕೊಡುವುದು” ಅಥವಾ “ನೇಮಿಸುವುದು” ಅಥವಾ “ಒಂದು ವಿಶೇಷವಾದ ಕೆಲಸಕ್ಕಾಗಿ ಆಯ್ಕೆ ಮಾಡಲ್ಪಡುವುದು” ಎಂಬುದಾಗಿಯೂ ಅನುವಾದ ಮಾಡಬಹುದು.
  • “ಒಪ್ಪಿಸಲಾಗಿದೆ” ಎನ್ನುವ ಪದವನ್ನು “ನೇಮಿಸಲಾಗಿದೆ” ಅಥವಾ “ಕೆಲಸವನ್ನು ಕೊಟ್ಟಿದ್ದೇವೆ” ಎಂಬುದಾಗಿಯೂ ಅನುವಾದ ಮಾಡಬಹುದು.

(ಅನುವಾದ ಸಲಹೆಗಳು: /ಹೆಸರುಗಳನ್ನು ಅನುವಾದ ಮಾಡಿರಿ

(ಈ ಪದಗಳನ್ನು ಸಹ ನೋಡಿರಿ : ನೇಮಿಸು, ಸಮುವೇಲ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2506, H3335, H4487, H4941, H5157, H5307, H5414, H5596, H5975, H6485, H7760, G3307

ಒಳ ಅಂಗಿ, ಒಳ ಅಂಗಿಗಳು

# ಪದದ ಅರ್ಥವಿವರಣೆ:

ಸತ್ಯವೇದದಲ್ಲಿ “ಒಳ ಅಂಗಿ” ಎನ್ನುವ ಪದವು ಬಟ್ಟೆಗಳ ಕೆಳಗೆ ಚರ್ಮದ ಮೇಲೆ ಹಾಕುವ ಒಳ ಉಡುಪನ್ನು ಸೂಚಿಸುತ್ತದೆ.

  • ಒಳ ಅಂಗಿಯು ಭುಜಗಳಿಂದ ಸೊಂಟದವರೆಗೂ ಅಥವಾ ಮೊಣಕಾಲುಗಳವರೆಗೂ ಇಳಿಯಹಾಕಿಕೊಂಡಿರುತ್ತಾರೆ ಮತ್ತು ಇದನ್ನು ಧರಿಸಿದನಂತರ ದಟ್ಟಿಯಿಂದ ಕಟ್ಟಿಕೊಳ್ಳುತ್ತಾರೆ. ಈ ಒಳ ಉಡುಪುಗಳನ್ನು ಶ್ರೀಮಂತರು ಧರಿಸಿಕೊಳ್ಳುತ್ತಾರೆ, ಇವುಗಳಿಗೆ ಕೆಲವೊಂದುಬಾರಿ ತೋಳುಗಳಿರುತ್ತವೆ ಮತ್ತು ಇದು ಕಣಕಾಲುಗಳವರೆಗಿರುವ ಉದ್ದವನ್ನು ಹೊಂದಿರುತ್ತದೆ.
  • ಒಳ ಅಂಗಿಗಳನ್ನು ಚರ್ಮ, ಕೂದಲಿನ ಬಟ್ಟೆ, ಉಣ್ಣೆ ಅಥವಾ ನಾರಿನಿಂದ ತಯಾರಿಸುತ್ತಾರೆ, ಮತ್ತು ಇವುಗಳನ್ನು ಸ್ತ್ರೀ ಪುರುಷರು ಧರಿಸಿಕೊಳ್ಳುತ್ತಾರೆ.
  • ಒಳ ಅಂಗಿಯು ಸಾಧಾರಣವಾಗಿ ನಿಲುವೆಂಗಿಯ ಕೆಳಗೆ ಧರಿಸಿಕೊಳ್ಳುತ್ತಾರೆ, ಉದಾಹರಣೆಗೆ ಟೋಗಾ ಅಥವಾ ಹೊರಗಿನ ಗೌನು ಬಿಸಿ ವಾತಾವರಣದಲ್ಲಿ ಹೊರ ಅಂಗಿಗಳನ್ನು ಹಾಕಿಕೊಳ್ಳದೇ ಒಳ ಅಂಗಿಯನ್ನು ಮಾತ್ರವೇ ಕೆಲವೊಂದುಬಾರಿ ಧರಿಸುತ್ತಾರೆ.
  • ಈ ಪದವನ್ನು “ಉದ್ದವಾದ ಅಂಗಿ” ಅಥವಾ “ಉದ್ದವಾದ ಒಳ ಉಡುಪು” ಅಥವಾ “ಅಂಗಿಯಂತಿರುವ ಉಡುಪು” ಎಂದೂ ಅನುವಾದ ಮಾಡಬಹುದು. “ಒಳ ಅಂಗಿ” ಎನ್ನುವದಕ್ಕೆ ಹೇಳಿರುವ ಅರ್ಥದಲ್ಲಿಯೇ ಇದು ಎಂತಹ ಅಂಗಿ ಎಂದು ವಿವರಿಸುವುದಕ್ಕೆ ಒಂದು ಸೂಚನೆ ಕೂಡ ಬರೆಯಬಹುದು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ನಿಲುವಂಗಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2243, H3801, H6361, G5509

ಒಳಗಾಗು, ಒಳಪಡಿಸು, ಒಳಪಟ್ಟಿದೆ, ಒಳಗಾಗುತ್ತಿದೆ, ವಿಧೇಯತೆ, ವಿಧೇಯನು, ವಿಧೇಯನಾಗಿ, ಅವಿಧೇಯನಾಗು, ಅವಿಧೇಯಪಡಿಸುವುದು, ಅವಿಧೇಯತೆ ತೋರಿಸಿದೆ, ಅವಿಧೇಯತೆ, ಅವಿಧೇಯನು

# ಪದದ ಅರ್ಥವಿವರಣೆ:

“ಒಳಗಾಗು” ಎನ್ನುವ ಪದಕ್ಕೆ ಆದೇಶಿಸಲ್ಪಟ್ಟಿದ್ದನ್ನು ಅಥವಾ ಬೇಕಾಗಿರುವುದನ್ನು ಮಾಡುವುದು ಎಂದರ್ಥ. “ವಿಧೇಯನು” ಎನ್ನುವ ಪದವು ಒಳಗಾಗುವ ಒಬ್ಬ ವ್ಯಕ್ತಿಯನ್ನು ವಿವರಿಸುತ್ತದೆ. “ವಿಧೇಯತೆ” ಎನ್ನುವುದು ವಿಧೇಯನಾಗಿರುವ ಒಬ್ಬ ವ್ಯಕ್ತಿಯ ಗುಣಲಕ್ಷಣವಾಗಿರುತ್ತದೆ, ಕೆಲವೊಂದುಬಾರಿ “ಕದಿಯಬಾರದು” ಎನ್ನುವ ಮಾತಿನಲ್ಲಿರುವಂತೆ ಯಾವುದಾದರೊಂದನ್ನು ಮಾಡಬಾರದು ಎನ್ನುವುದರ ಕುರಿತಾದ ಆಜ್ಞೆಯೂ ಆಗಿರುತ್ತದೆ.

  • ಸಹಜವಾಗಿ “ಒಳಗಾಗು” ಎನ್ನುವ ಪದವನ್ನು ಅಧಿಕಾರದಲ್ಲಿರುವ ಒಬ್ಬ ವ್ಯಕ್ತಿಯ ಕಾನೂನುಗಳಿಗೆ ಅಥವಾ ಆಜ್ಞೆಗಳಿಗೆ ವಿಧೇಯನಾಗುವ ಸಂದರ್ಭದಲ್ಲಿ ಉಪಯೋಗಿಸಲಾಗಿರುತ್ತದೆ.
  • ಉದಾಹರಣೆಗೆ, ಒಂದು ಸಂಸ್ಥೆಯ, ಒಂದು ರಾಜ್ಯದ ಅಥವಾ ಒಂದು ದೇಶದ ನಾಯಕರಿಂದ ತಯಾರಿಸಲ್ಪಟ್ಟ ನಿಯಮಗಳಿಗೆ ಜನರು ಒಳಗಾಗುತ್ತಾರೆ.
  • ಮಕ್ಕಳು ತಮ್ಮ ತಂದೆತಾಯಿಗಳಿಗೆ ಒಳಗಾಗುತ್ತಾರೆ, ಗುಲಾಮರು ತಮ್ಮ ಯಜಮಾನಿಗಳಿಗೆ ಒಳಗಾಗುತ್ತಾರೆ, ಜನರು ದೇವರಿಗೆ ಒಳಗಾಗುತ್ತಾರೆ, ಮತ್ತು ಪೌರರು ತಮ್ಮ ದೇಶದ ಕಾನೂನುಗಳಿಗೆ ಒಳಗಾಗುತ್ತಾರೆ.
  • ಅಧಿಕಾರದಲ್ಲಿದ್ದ ಒಬ್ಬ ವ್ಯಕ್ತಿ ಏನಾದರೊಂದನ್ನು ಮಾಡಬಾರದೆಂದು ಜನರಿಗೆ ಆಜ್ಞಾಪಿಸಿದಾಗ, ಅದನ್ನು ಮಾಡದಂತೆ ಅವರು ಆಜ್ಞೆಗೆ ಒಳಗಾಗುತ್ತಾರೆ.
  • ಒಳಗಾಗು ಎನ್ನುವ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ “ಆಜ್ಞಾಪಿಸಲ್ಪಟ್ಟದ್ದನ್ನು ಮಾಡು” ಅಥವಾ “ಆಜ್ಞೆಗಳನ್ನು ಅನುಸರಿಸು” ಅಥವಾ “ದೇವರು ಏನು ಮಾಡಬೇಕೆಂದು ಹೇಳಿದ್ದಾರೋ ಅದನ್ನು ಮಾಡು” ಎಂದು ಅರ್ಥ ಅಬ್ರುವ ಮಾತುಗಳು ಅಥವಾ ಪದಗಳು ಒಳಗೊಂಡಿರುತ್ತವೆ.
  • “ವಿಧೇಯನು” ಎನ್ನುವ ಪದವನ್ನು “ಆದೇಶಿಸಲ್ಪಟ್ಟದ್ದನ್ನು ಮಾಡುವುದು” ಅಥವಾ “ನಿಯಮಗಳನ್ನು ಅನುಸರಿಸುವುದು” ಅಥವಾ “ದೇವರು ಆಜ್ಞಾಪಿಸಿದ್ದನ್ನು ಮಾಡುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಪೌರ, ಆಜ್ಞೆ, ಅವಿಧೇಯತೆ, ರಾಜ್ಯ, ಕಾನೂನು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಉದಾಹರಣೆಗಳು:

  • 03:04 ನೋಹನು ದೇವರಿಗೆ ___ ವಿಧೇಯನಾದನು ____ . ಈತನು ಮತ್ತು ತನ್ನ ಮೂವರು ಗಂಡು ಮಕ್ಕಳು ದೇವರು ಹೇಳಿದ ಪ್ರಕಾರ ನಾವೆಯನ್ನು ನಿರ್ಮಿಸಿದನು.
  • 05:06 ಮತ್ತೊಮ್ಮೆ ಅಬ್ರಾಹಾಮನು ದೇವರಿಗೆ ___ ವಿಧೇಯನಾದನು ____ ಮತ್ತು ತನ್ನ ಮಗನನ್ನು ಸರ್ವಾಂಗ ಹೋಮ ಮಾಡುವುದಕ್ಕೆ (ಬಲಿ ಕೊಡುವುದಕ್ಕೆ) ಸಿದ್ಧ ಮಾಡಿದನು.
  • 05:10 “ನೀನು (ಅಬ್ರಾಹಾಮನು) ನನಗೆ ___ ವಿಧೇಯನಾಗಿದ್ದರಿಂದ ___, ಲೋಕದಲ್ಲಿರುವ ಎಲ್ಲಾ ಕುಟುಂಬಗಳು ನಿನ್ನ ಕುಟುಂಬದ ಮೂಲಕ ಆಶೀರ್ವಾದ ಹೊಂದುತ್ತವೆ.
  • 05:10 ಆದರೆ ಐಗುಪ್ತರು ದೇವರಲ್ಲಿ ನಂಬಿಕೆಯನ್ನಿಡಲಿಲ್ಲ ಅಥವಾ ಆತನ ಆಜ್ಞೆಗಳಿಗೆ __ ಒಳಗಾಗಲಿಲ್ಲ ___.
  • 13:07 ಈ ಎಲ್ಲಾ ಆಜ್ಞೆಗಳಿಗೆ ಜನರು ___ ವಿಧೇಯರಾಗುವುದಾದರೆ ____ , ದೇವರು ಅವರನ್ನು ಸಂರಕ್ಷಿಸಿ, ಆಶೀರ್ವಾದ ಮಾಡುವನೆಂದು ದೇವರು ವಾಗ್ಧಾನ ಮಾಡಿದ್ದಾರೆ.

# ಪದ ಡೇಟಾ:

  • Strong's: H1697, H2388, H3349, H4928, H6213, H7181, H8085, H8086, H8104, G191, G544, G3980, G3982, G4198, G5083, G5084, G5218, G5219, G5255, G5292, G5293, G5442

ಒಳಗಾಗು, ಒಳಪಡಿಸುವುದು, ಒಳಪಡಿಸಿದೆ, ಒಳಪಟ್ಟಿರುತ್ತದೆ, ಒಳಪಟ್ಟಿರುವುದು, ಅಧೀನ, ಅಧೀನವಾಗಿರುವುದು, ಅಧೀನವಾಗಿವೆ, ಅಧೀನವಾಗಿರುತ್ತದೆ, ಅಧೀನವಾಗಿದ್ದಾರೆ, ಅಧೀನವಾಗಿರುವದರಲ್ಲಿ

# ಸತ್ಯಾಂಶಗಳು:

ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿ “ಒಳಗಾದಾಗ”, ಆ ಎರಡನೇ ವ್ಯಕ್ತಿ ಒಳಗಾಗಿರುವ ವ್ಯಕ್ತಿಯನ್ನು ಆಳುವನು. “ಒಳಗಾಗಿರುವುದು” ಎಂದರೆ “ವಿಧೇಯತೆಯಿಂದಿರುವುದು” ಅಥವಾ “ಅಧಿಕಾರದಲ್ಲಿರುವವರಿಗೆ ಒಳಗಾಗಿರುವುದು” ಎಂದರ್ಥ.

  • “ಅಧೀನದಲ್ಲಿಡುವುದು” ಎನ್ನುವ ಮಾತನ್ನು ಪಾಲಕನ ಅಥವಾ ನಾಯಕನ ಅಧಿಕಾರದ ಕೆಳಗೆ ಜನರೆಲ್ಲರು ಇರುವುದನ್ನು ಸೂಚಿಸುತ್ತದೆ.
  • “ಯಾವುದಾದರೊಂದಕ್ಕೆ ಯಾರಾದರೊಬ್ಬರನ್ನು ಒಳಪಡಿಸುವುದು” ಎನ್ನುವ ಮಾತಿಗೆ ಆ ವ್ಯಕ್ತಿ ಶಿಕ್ಷೆಯನ್ನಾಗಿ ಯಾವುದಾದರೊಂದನ್ನು ನಕಾರಾತ್ಮಕವಾದ ಅನುಭವನ್ನು ಹೊಂದುವಂತೆ ಮಾಡುವುದು ಎಂದರ್ಥ.
  • ಕೆಲವೊಂದುಬಾರಿ “ಒಳಪಡಿಸು” ಎನ್ನುವ ಪದವನ್ನು ಯಾವುದಾದರೊಂದನ್ನು ಕೇಂದ್ರೀಕರಿಸುವುದಕ್ಕೆ ಅಥವಾ ವಿಷಯವನ್ನು ಪರಿಶೀಲನೆ ಮಾಡುವುದಕ್ಕೂ ಉಪಯೋಗಿಸುತ್ತಾರೆ, ಉದಾಹರಣೆಗೆ, “ನೀವು ಹಾಸ್ಯಾಸ್ಪದ ವಿಷಯವಾಗಿರುತ್ತೀರಿ” ಎನ್ನುವ ಮಾತಿನಂತಿರುತ್ತದೆ.
  • “ಒಳಪಟ್ಟಿರುವುದು” ಎನ್ನುವ ಮಾತಿಗೆ “ವಿನಯವುಳ್ಳವನಾಗಿರು” ಅಥವಾ “ಅಧೀನವಾಗು” ಎನ್ನುವ ಪದಗಳ ಅರ್ಥವನ್ನೇ ಹೊಂದಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಅಧೀನವಾಗು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1697, H3533, H3665, H4522, H5647, H5927, G350, G1379, G1396, G1777, G3663, G5292, G5293

ಓಡು, ಓಡಿಸುವುದು, ಓಡುವವರು, ಓಡುತ್ತಾ ಇರುವುದು

# ಪದದ ಅರ್ಥವಿವರಣೆ:

“ಓಡು” ಎನ್ನುವ ಪದಕ್ಕೆ ಅಕ್ಷರಾರ್ಥವೇನಂದರೆ “ಪಾದಗಳ ಮೇಲೆ ತುಂಬಾ ವೇಗವಾಗಿ ನಡೆ” ಎಂದರ್ಥ, ಸಾಧಾರಣವಾಗಿ ನಡೆಯುವುದರ ಮೂಲಕ ಸೇರುವ ದಾರಿಗಿಂತಲೂ ಇನ್ನೂ ಹೆಚ್ಚಾದ ವೇಗದಲ್ಲಿ ಹೋಗುವುದು ಎಂದರ್ಥವಾಗಿರುತ್ತದೆ.

“ಓಡು” ಎನ್ನುವ ಪದದ ಮುಖ್ಯ ಅರ್ಥವನ್ನು ಈ ಕೆಳಗೆ ಹೇಳಲ್ಪಟ್ಟಿರುವ ಅಲಂಕಾರಿಕ ಮಾತುಗಳಲ್ಲಿಯೂ ಉಪಯೋಗಿಸಲ್ಪಟ್ಟಿರುತ್ತದೆ

  • ಬಹುಮಾನವನ್ನು ಪಡೆದುಕೊಳ್ಳುವ ಮಾರ್ಗದಲ್ಲಿ ಓಡು” ಎನ್ನುವ ಮಾತು ಗೆಲ್ಲುವ ಕ್ರಮದಲ್ಲಿ ಪಂದ್ಯದಲ್ಲಿ ಓಡುವಂತೆಯೇ ಅದೇ ರೀತಿಯಾಗಿ ದೇವರ ಚಿತ್ತದಲ್ಲಿ ಮಾಡುತ್ತಿರುವ ಕಾರ್ಯಗಳನ್ನು ಸೂಚಿಸುತ್ತದೆ.
  • “ನಿನ್ನ ಆಜ್ಞೆಗಳ ಮಾರ್ಗದಲ್ಲಿ ಓಡುವುದು” ಎನ್ನುವ ಮಾತಿಗೆ ದೇವರ ಆಜ್ಞೆಗಳಿಗೆ ತಕ್ಷಣವೆ ವಿಧೇಯರಾಗುವುದು ಮತ್ತು ಸಂತೋಷಕರವಾಗಿ ಸ್ವೀಕರಿಸುವುದನ್ನು ಸೂಚಿಸುತ್ತದೆ.
  • “ಇತರರ ದೇವರಗಳ ಬಳಿಗೆ ಓಡಿ ಹೋಗಬೇಡ” ಎನ್ನುವ ಮಾತಿಗೆ ಇತರ ದೇವರುಗಳ ವಿಗ್ರಹಾರಾಧನೆಯಲ್ಲಿ ಮುಂದುವರಿಯಬೇಡ ಎಂದರ್ಥ.
  • “ನನ್ನ ಮರೆಮಾಡುವುದಕ್ಕೆ ನಾನು ನಿನ್ನ ಬಳಿಗೆ ಓಡಿ ಬರುವೆನು” ಎನ್ನುವ ಮಾತಿಗೆ ಅನೇಕ ಕಷ್ಟಗಳನ್ನು ಎದುರುಗೊಳ್ಳುವಾಗ ರಕ್ಷಣೆ ಮತ್ತು ಆಶ್ರಯ ಸಿಗುವ ದೇವರ ಬಳಿಗೆ ತಕ್ಷಣವೇ ತಿರುಗುಕೋ ಎಂದರ್ಥ.
  • ಕಣ್ಣೀರು, ರಕ್ತ, ಬೆವರು ಮತ್ತು ನದಿಗಳು ಎನ್ನುವಂತಹ ನೀರು ಮತ್ತು ಇತರ ದ್ರವಗಳೆಲ್ಲವು ಓಡುತ್ತವೆಯೆಂದು ಅವುಗಳ ಕುರಿತಾಗಿ ಹೇಳಲಾಗಿರುತ್ತದೆ. ಇದನ್ನು “ಹರಡುವಿಕೆ” ಎಂದೂ ಅನುವಾದ ಮಾಡುತ್ತಾರೆ.

ಒಂದು ದೇಶದ ಅಥವಾ ಒಂದು ಪ್ರಾಂತ್ಯದ ಗಡಿಯನ್ನು ನದಿಯ ಜೊತೆಗೆ “ಓಡು” ಅಥವಾ ಬೇರೆ ದೇಶದ ಗಡಿಯೊಂದಿಗೆ ಓಡು ಎಂದು ಹೇಳಲ್ಪಟ್ಟಿರುತ್ತದೆ. ದೇಶದ ಗಡಿ ಅಥವಾ ಇತರ ದೇಶದ ಗಡಿ ನದಿಯ “ಪಕ್ಕದಲ್ಲಿರುತ್ತದೆ” ಎಂದು ಹೇಳುವುದರ ಮೂಲಕ; ಅಥವಾ ದೇಶದ “ಗಡಿಗಳು” ಇತರ ದೇಶದ ಅಥವಾ ನದಿಯ ಪಕ್ಕದಲ್ಲಿದಿರುತ್ತದೆ ಎಂದು ಹೇಳುವುದರ ಮೂಲಕ ಇದನ್ನು ಅನುವಾದ ಮಾಡಬಹುದು.

  • ನದಿಗಳು ಮತ್ತು ಹರಿಝರಿಗಳು “ಒಣಗುತ್ತವೆ”, ಇದಕ್ಕೆ ಅವು ಎಂದಿಗೂ ನೀರನ್ನು ಹೊಂದಿರುವುದಿಲ್ಲ ಎಂದರ್ಥವಾಗಿರುತ್ತದೆ. ಇದನ್ನು “ಒಣಗಿದೆ” ಅಥವಾ “ಒಣಗಿಸಲ್ಪಟ್ಟಿವೆ” ಎಂದೂ ಅನುವಾದ ಮಾಡಬಹುದು.
  • ಔತಣ ದಿನಗಳು “ತಮ್ಮ ಕೆಲಸವನ್ನು ತಾವು ಮಾಡಿಕೊಂಡು ಹೋಗುತ್ತಿರುತ್ತವೆ”, ಇದಕ್ಕೆ ಅವು “ಹಾದು ಹೋಗಿವೆ” ಅಥವಾ “ಅವು ಮುಗಿದುಹೋಗಿವೆ” ಅಥವಾ “ಅವು ಸಂಪೂರ್ತಿಯಾಗಿರುತ್ತವೆ” ಎಂದರ್ಥವಾಗಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಸುಳ್ಳು ದೇವರು, ಸಾಧಿಸುವವನು, ಆಶ್ರಿತರು, ತಿರುಗಿಕೊ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H213, H386, H1065, H1272, H1518, H1556, H1980, H2100, H2416, H3001, H3212, H3332, H3381, H3920, H3988, H4422, H4754, H4794, H4944, H5074, H5127, H5140, H5472, H5756, H6437, H6440, H6544, H6805, H7272, H7291, H7310, H7323, H7325, H7519, H7751, H8264, H8308, H8444, G413, G1377, G1601, G1530, G1532, G1632, G1998, G2027, G2701, G3729, G4063, G4370, G4390, G4890, G4936, G5143, G5240, G5295, G5302, G5343

ಔತಣ

# ಪದದ ಅರ್ಥವಿವರಣೆ

ಸಹಜವಾಗಿ ಅನೇಕ ರೀತಿಯ ಆಹಾರ ಪದಾರ್ಥಗಳನ್ನು ಒಳಗೊಂಡಿರುವ ಸಂಪ್ರದಾಯಕವಾದ ಅತಿ ದೊಡ್ಡ ಊಟ ಬಡಿಸುವುದನ್ನು ಔತಣ ಎಂದು ಕರೆಯುತ್ತಾರೆ.

  • ಪ್ರಾಚೀನ ಕಾಲದಲ್ಲಿ, ರಾಜಕೀಯ ನಾಯಕರಿಗೆ ಮತ್ತು ಇನ್ನಿತರ ಪ್ರಾಮುಖ್ಯವಾದ ಅತಿಥಿಗಳಿಗೆ ಅರಸರು ಆಗಾಗ ಔತಣವನ್ನು ಏರ್ಪಡಿಸುತ್ತಿದ್ದರು.
  • ಇದನ್ನು “ವಿಸ್ತಾರವಾದ ಊಟ” ಅಥವಾ “ಪ್ರಾಮುಖ್ಯವಾದ ಸವಿಯೂಟ” ಅಥವಾ “ವಿವಿದ್ಧವಾದ ಆಹಾರ ಪದಾರ್ಥಗಳಿರುವ ಊಟ” ಎಂದು ಭಾಷಾಂತರ ಮಾಡಬಹುದು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3739, H4797, H4960, H4961, H8354, G1173, G1403

ಔತಣ, ಔತಣ ಕೂಟಗಳು, ಔತಣ ಕೊಡುವುದು

# ಪದದ ಅರ್ಥವಿವರಣೆ:

“ಔತಣ” ಎನ್ನುವ ಪದವು ಜನರೆಲ್ಲರು ಒಂದು ಗುಂಪಾಗಿ ಒಂದು ಸ್ಥಳದಲ್ಲಿ ಸೇರಿ ಒಟ್ಟಾಗಿ ಊಟ ಮಾಡುವುದನ್ನು, ಅನೇಕಬಾರಿ ಎಲ್ಲರು ಸೇರಿ ಆಚರಿಸುವ ಹಬ್ಬವನ್ನು ಸೂಚಿಸುತ್ತದೆ. “ಔತಣ” ಕೂಟಕ್ಕೆ ಸಿದ್ಧವಾಗು ಎನ್ನುವುದಕ್ಕೆ ಅನೇಕ ವಿಧವಾದ ರುಚಿಕರವಾದ ಅಡುಗೆಗಳನ್ನು ತಿನ್ನುವುದಕ್ಕೆ ಅಥವಾ ಎಲ್ಲರು ಸೇರಿ ಔತಣದಲ್ಲಿ ಊಟ ಮಾಡುವುದಕ್ಕೆ ಭಾಗವಹಿಸುವುದು ಎಂದರ್ಥ.

  • ಔತಣ ಕೂಟದಲ್ಲಿ ತಿನ್ನುವಂತಹ ವಿಶೇಷವಾದ ಆಹಾರ ಪದಾರ್ಥಗಳು ಅನೇಕವಿರುತ್ತವೆ.
  • ದೇವರು ಆಚರಿಸಬೇಕೆಂದು ಆಜ್ಞಾಪಿಸಿದ ಭಕ್ತಿಯಿಂದ ಕೂಡಿದ ಹಬ್ಬಗಳು ಸಹಜವಾಗಿ ಎಲ್ಲರು ಸೇರಿ ಔತಣದಲ್ಲಿ ಪಾಲ್ಗೊಳ್ಳುವುದು ಇರುತ್ತದೆ. ಈ ಕಾರಣದಿಂದ ಹಬ್ಬಗಳನ್ನು ಅನೇಕಬಾರಿ “ಔತಣ ಕೂಟಗಳು” ಎಂದು ಕರೆಯುತ್ತಾರೆ.
  • ಸತ್ಯವೇದ ಕಾಲಗಳಲ್ಲಿ ಅರಸರು, ಇತರ ಶ್ರೀಮಂತರು ಮತ್ತು ಶಕ್ತಿಯುಳ್ಳ ಜನರು ತಮ್ಮ ಕುಟುಂಬವನ್ನು ಅಥವಾ ಸ್ನೇಹಿತರನ್ನು ಮನೋರಂಜನೆ ಮಾಡಲು ಅನೇಕಸಲ ಅವರಿಗೆ ಔತಣ ಕೂಟಗಳನ್ನು ನಿರ್ವಹಿಸುತ್ತಿದ್ದರು.
  • ತಪ್ಪಿಹೋದ ಮಗನ ಕುರಿತಾದ ಸಾಮ್ಯದಲ್ಲಿ ತಂದೆ ತನ್ನ ಮಗನು ಹಿಂದಿರುಗಿ ಬಂದನಂತರ ಆಚರಿಸುವುದಕ್ಕೆ ಒಂದು ವಿಶೇಷವಾದ ಔತಣವನ್ನು ಸಿದ್ಧಪಡಿಸಿದನು.
  • ಔತಣ ಎನ್ನುವುದು ಕೆಲವೊಂದುಬಾರಿ ಅನೇಕ ದಿನಗಳ ಕಾಲಕ್ಕಿಂತ ಹೆಚ್ಚು ದಿನಗಳು ಆಚರಿಸುತ್ತಿದ್ದರು.
  • “ಔತಣ” ಎನ್ನುವ ಪದವನ್ನು “ಸಮೃದ್ಧಿಯಾಗಿ ತಿನ್ನು” ಅಥವಾ “ಅನೇಕ ರೀತಿಯ ರುಚಿಕರವಾದ ಅಡುಗೆಗಳನ್ನು ತಿನ್ನುವುದರ ಮೂಲಕ ಆಚರಿಸಿಕೊಳ್ಳಿರಿ” ಅಥವಾ “ವಿಶೇಷವಾದ ಹೆಚ್ಚಾದ ಊಟವನ್ನು ತಿನ್ನಿರಿ” ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಸಾರವಾಗಿ “ಔತಣ” ಎನ್ನುವ ಪದವನ್ನು “ಅನೇಕ ರುಚಿಕರವಾದ ಅಡುಗೆಗಳೊಂದಿಗೆ ಎಲ್ಲರು ಸೇರಿ ಆಚರಿಸಿಕೊಳ್ಳುವುದು” ಅಥವಾ “ಹೆಚ್ಚಿನ ಆಹಾರ ಪದಾರ್ಥಗಳೊಂದಿಗೆ ಊಟ” ಅಥವಾ “ಊಟವನ್ನು ಆಚರಿಸಿಕೊಳ್ಳುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಹಬ್ಬ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H398, H2077, H2282, H2287, H3899, H3900, H4150, H4580, H4797, H4960, H7646, H8057, H8354, G26, G755, G1062, G1173, G1403, G1456, G1858, G1859, G2165, G3521, G4910

ಕಂಚು

# ಪದದ ಅರ್ಥವಿವರಣೆ:

“ಕಂಚು” ಎನ್ನುವುದು ತಾಮ್ರ ಮತ್ತು ತವರ ಲೋಹಗಳನ್ನು ಕರಗಿಸಿದಾಗ ಬರುವ ಒಂದು ವಿಧವಾದ ಮಿಶ್ರಲೋಹವನ್ನು ಸೂಚಿಸುತ್ತದೆ. ಇದು ಗಾಢ ಕಂದು ಬಣ್ಣವಾಗಿದ್ದು, ಸ್ವಲ್ಪ ಕೆಂಪು ಬಣ್ಣದಲ್ಲಿರುತ್ತದೆ.

  • ಕಂಚು ನೀರಿನ ಸವೆತವನ್ನು ನಿರೋಧಿಸುತ್ತದೆ ಮತ್ತು ಇದು ಶಾಖವನ್ನು ತಗ್ಗಿಸುವುದರಲ್ಲಿ ಚೆನ್ನಾಗಿ ಕೆಲಸ ಮಾಡುತ್ತದೆ.
  • ಪುರಾತನ ಕಾಲದಲ್ಲಿ, ಕಂಚು ಲೋಹವನ್ನು ಅನೇಕ ಉಪಕರಣಗಳನ್ನು, ಯುದ್ಧ ಸಾಧನೆಗಳನ್ನು, ಅಡುಗೆ ಪಾತ್ರೆಗಳನ್ನು, ಯಜ್ಞವೇದಿಗಳನ್ನು, ಕಲಾಕೃತಿಗಳನ್ನು, ಸೈನಿಕರ ಕವಚಗಳನ್ನು ಮತ್ತು ಇತರ ವಸ್ತುಗಳನ್ನು ಮಾಡುವುದಕ್ಕೆ ಉಪಯೋಗಿಸುತ್ತಿದ್ದರು.
  • ಗುಡಾರ ಮತ್ತು ದೇವಾಲಯ ನಿರ್ಮಾಣಕ್ಕಾಗಿ ಉಪಯೋಗಿಸುವ ಅನೇಕ ಸಾಧನೆಗಳು ಕಂಚಿನಿಂದಲೇ ತಯಾರಾಗಿರುತ್ತವೆ.
  • ಸುಳ್ಳು ದೇವರ ವಿಗ್ರಹಗಳು ಕಂಚಿನ ಲೋಹದಿಂದಲೇ ತಯಾರಾಗಿರುತ್ತವೆ.
  • ಕಂಚಿನ ವಸ್ತುಗಳೆಲ್ಲವೂ ಕಂಚು ಲೋಹವನ್ನು ಮೊದಲಿಗೆ ಕರಗಿಸಿ, ಅದನ್ನು ಅಚ್ಚುಗಳಲ್ಲಿ ಸುರಿಯುವುದರ ಮೂಲಕ ತಯಾರಾಗುತ್ತವೆ. ಈ ಪದ್ಧತಿಯನ್ನು “ಎರಕಹೊಯ್ಯುವುದು” ಎಂದು ಕರೆಯುತ್ತಾರೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಕವಚ, ಗುಡಾರ, ದೇವಾಲಯ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H5153, H5154, H5174, H5178, G5470, G5474, G5475

ಕಠಿಣ, ಗಟ್ಟಿ, ಗಟ್ಟಿಯಾದ, ಬಗಿಮಾಡಿದೆ, ಕಠಿಣಪಡಿಸುತ್ತದೆ, ಕಠಿಣ ಪಡಿಸಲಾಗಿದೆ, ಗಟ್ಟಿಯಾಗುವುದು, ಕಠಿಣತೆ

# ಪದದ ಅರ್ಥವಿವರಣೆ:

“ಕಠಿಣ” ಎನ್ನುವ ಪದಕ್ಕೆ ಸಂದರ್ಭಾನುಸಾರವಾಗಿ ಅನೇಕ ವಿವಿಧವಾದ ಅರ್ಥಗಳನ್ನು ಒಳಗೊಂಡಿರುತ್ತದೆ. ಈ ಪದವು ಸಹಜವಾಗಿ ಕಷ್ಟವಾದವುಗಳನ್ನು, ಹಠ ಸ್ವಭಾವವನ್ನು ಅಥವಾ ಬಗ್ಗದಿರುವುದನ್ನು ವಿವರಿಸುತ್ತದೆ.

  • “ಕಠಿಣ ಹೃದಯ” ಅಥವಾ “ಕಠಿಣ-ತಲೆಯುಳ್ಳ” ಎನ್ನುವ ಮಾತುಗಳು ಪಶ್ಚಾತ್ತಾಪ ಹೊಂದದೇ ಮೊಂಡುತನದಿಂದ ಇರುವ ಜನರನ್ನು ಸೂಚಿಸುತ್ತದೆ. ದೇವರಿಗೆ ಅವಿಧೇಯತೆಯಲ್ಲಿರುವ ಜನರನ್ನು ವಿವರಿಸುತ್ತದೆ.
  • “ಹೃದಯದ ಕಠಿಣತೆ” ಮತ್ತು “ಅವರ ಹೃದಯಗಳ ಕಠಿಣತೆ” ಎನ್ನುವ ಅಲಂಕಾರಿಕ ಮಾತುಗಳು ಕೂಡ ಅವಿಧೇಯತೆಯಿಂದ ಇರುವ ಮೊಂಡುತನವನ್ನು ಸೂಚಿಸುತ್ತವೆ.
  • ಒಬ್ಬ ವ್ಯಕ್ತಿಯ ಹೃದಯವು “ಕಠಿಣವಾದರೆ”, ಆ ವ್ಯಕ್ತಿ ವಿಧೇಯನಾಗುವುದಕ್ಕೆ ತಿರಸ್ಕರಿಸುತ್ತಿದ್ದಾನೆ ಮತ್ತು ಪಶ್ಚಾತ್ತಾಪ ಹೊಂದದೇ ಮೊಂಡುತನದಲ್ಲಿದ್ದಾನೆ ಎಂದರ್ಥ.
  • “ಹೆಚ್ಚಾಗಿ ಶ್ರಮಿಸು” ಅಥವಾ “ಹೆಚ್ಚಾಗಿ ಪ್ರಯತ್ನಿಸು” ಎನ್ನುವ ಕ್ರಿಯಾವಿಶೇಷಣಗಳನ್ನು ಉಪಯೋಗಿಸಿದಾಗ, ಮಾಡುವ ಕೆಲಸವನ್ನು ತುಂಬಾ ಬಲವಾಗಿಯೂ ಮತ್ತು ದೃಢಪ್ರಯತ್ನದಿಂದಲೂ ಮಾಡು ಎಂದರ್ಥ, ಮಾಡುವ ಕೆಲಸದಲ್ಲಿ ಇನ್ನೂ ಹೆಚ್ಚಾಗಿ ಶ್ರಮಿಸು ಎಂದರ್ಥ.

# ಅನುವಾದ ಸಲಹೆಗಳು

  • “ಕಠಿಣ” ಎನ್ನುವ ಪದವನ್ನು “ಕಷ್ಟ” ಅಥವಾ “ಮೊಂಡುತನ” ಅಥವಾ “ಸವಾಲು ಬೀಸುವುದು” ಎನ್ನುವ ಪದಗಳನ್ನು ಸಂದರ್ಭಾನುಸಾರವಾಗಿ ಅನುವಾದ ಮಾಡಬಹುದು.
  • “ಕಠಿಣತೆ” ಅಥವಾ “ಹೃದಯ ಕಾಠಿಣ್ಯ” ಅಥವಾ “ಕಠಿಣ ಹೃದಯ” ಎನ್ನುವ ಪದಗಳನ್ನು “ಮೊಂಡುತನ” ಅಥವಾ “ಹಠ ಸ್ವಭಾವದ ವ್ಯಕ್ತಿ” ಅಥವಾ “ತಿರಸ್ಕಾರ ಮಾಡುವ ಬುದ್ಧಿ” ಅಥವಾ “ಮೊಂಡುತನದ ಅವಿಧೇಯತೆ” ಅಥವಾ “ಪಶ್ಚಾತ್ತಾಪ ಹೊಂದದ ಮೊಂಡುತನ” ಎಂದೂ ಅನುವಾದ ಮಾಡಬಹುದು.
  • “ಕಠಿಣ ಪಡಿಸಲಾಗಿದೆ” ಎನ್ನುವ ಪದವನ್ನು “ಪಶ್ಚಾತ್ತಾಪ ಹೊಂದದ ಮೊಂಡುತನ” ಅಥವಾ “ವಿಧೇಯತೆ ತೋರಿಸುವುದಕ್ಕೆ ತಿರಸ್ಕಾರ ಮಾಡುವುದು” ಎಂದೂ ಅನುವಾದ ಮಾಡಬಹುದು.
  • “ನಿನ್ನ ಹೃದಯವನ್ನು ಕಠಿಣಪಡಿಸಿಕೊಳ್ಳಬೇಡ” ಎನ್ನುವ ಮಾತನ್ನು “ಪಶ್ಚಾತ್ತಾಪಪಡುವುದಕ್ಕೆ ತಿರಸ್ಕರಿಸಬೇಡ” ಅಥವಾ “ಅವಿಧೇಯತೆಯಿಂದ ಇರುವುದಕ್ಕೆ ಮೊಂಡುತನವನ್ನು ತೋರಿಸಬೇಡ” ಎಂದೂ ಅನುವಾದ ಮಾಡಬಹುದು.
  • “ಕಠಿಣ-ತಲೆಯುಳ್ಳ” ಅಥವಾ “ಕಠಿಣ-ಹೃದಯವುಳ್ಳ” ಎನ್ನುವ ಮಾತುಗಳನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಪಟ್ಟುಬಿಡದೇ ಅವಿಧೇಯನಾಗಿರುವುದು” ಅಥವಾ “ಅವಿಧೇಯತೆಯಲ್ಲಿ ಮುಂದುವರೆಯುವುದು” ಅಥವಾ “ಪಶ್ಚಾತ್ತಾಪಪಡುವುದಕ್ಕೆ ತಿರಸ್ಕರಿಸುವುದು” ಅಥವಾ “ಯಾವಾಗಲೂ ತಿರಸ್ಕರಿಸುವುದು” ಎನ್ನುವ ಮಾತುಗಳು ಸೇರಿಬರುತ್ತವೆ.
  • “ಹೆಚ್ಚಾಗಿ ಶ್ರಮಿಸು” ಅಥವಾ “ಹೆಚ್ಚಾಗಿ ಪ್ರಯತ್ನಿಸು” ಎನ್ನುವ ಮಾತುಗಳನ್ನು “ದೃಢ ಮತ್ತು ಅವಿರತ ಯತ್ನದೊಂದಿಗೆ” ಅಥವಾ “ಶ್ರದ್ಧೆಯಿಂದ” ಎಂದೂ ಅನುವಾದ ಮಾಡಬಹುದು.
  • “ವಿರುದ್ಧವಾಗಿ ಹೋರಾಟ ಮಾಡು” ಎನ್ನುವ ಮಾತನ್ನು “ಬಲವಾಗಿ ದೂಡು” ಅಥವಾ “ವಿರುದ್ಧವಾಗಿ ಬಲದಿಂದ ತಳ್ಳು” ಎಂದೂ ಅನುವಾದ ಮಾಡಬಹುದು.
  • “ಕಠಿಣವಾದ ಕೆಲಸಗಳಿಂದ ಜನರನ್ನು ಹಿಂಸಿಸು” ಎನ್ನುವ ಮಾತನ್ನು “ಜನರು ಹಿಂಸೆ ಹೊಂದುವಷ್ಟು ಹೆಚ್ಚಾಗಿ ಕೆಲಸ ಮಾಡುವುದಕ್ಕೆ ಜನರನ್ನು ಬಲವಂತಿಕೆ ಮಾಡು” ಅಥವಾ “ಅತೀ ಕಠಿಣವಾದ ಕೆಲಸವನ್ನು ಮಾಡುವುದಕ್ಕೆ ಜನರನ್ನು ಬಲವಂತಿಕೆಯಿಂದ ಹಿಂಸಿಸಲು ಅವರನ್ನು ತ್ವರೆಪಡಿಸು” ಎಂದೂ ಅನುವಾದ ಮಾಡಬಹುದು.
  • ಒಂದು ವಿಧವಾದ “ಕಠಿಣವಾದ ಶ್ರಮೆಯು” ಒಬ್ಬ ಮಗುವಿಗೆ ಜನ್ಮ ಕೊಡುವ ಒಬ್ಬ ಸ್ತ್ರೀಯಳು ಅನುಭವಿಸುತ್ತಾಳೆ.

(ಈ ಪದಗಳನ್ನು ಸಹ ನೋಡಿರಿ : ಅವಿಧೇಯತೆ, ಕೆಟ್ಟ, ಹೃದಯ, ಹೆರಿಗೆ ನೋವು, ಗಟ್ಟಿಯಾದ ಕುತ್ತಿಗೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H280, H386, H553, H1692, H2388, H2389, H2420, H2864, H3021, H3332, H3513, H3515, H3966, H4165, H4522, H5450, H5539, H5564, H5646, H5647, H5797, H5810, H5980, H5999, H6089, H6277, H6381, H6635, H7185, H7186, H7188, H7280, H8068, H8307, H8631, G917, G1419, G1421, G1422, G1423, G1425, G2205, G2532, G2553, G2872, G2873, G3425, G3433, G4053, G4183, G4456, G4457, G4641, G4642, G4643, G4645, G4912, G4927

ಕಣಜ, ಕಣಜಗಳು

# ಪದದ ಅರ್ಥವಿವರಣೆ:

“ಕಣಜ” ಎನ್ನುವುದು ಹೆಚ್ಚಿನ ಕಾಲದವರೆಗೂ ವಸ್ತುಗಳನ್ನು ಅಥವಾ ಆಹಾರವನ್ನು ಸಂಗ್ರಹಿಸಿ ಇಡುವುದಕ್ಕೆ ಉಪಯೋಗಿಸಲ್ಪಡುವ ದೊಡ್ಡ ಕಟ್ಟಡವಾಗಿರುತ್ತದೆ.

  • ಸತ್ಯವೇದದಲ್ಲಿ “ಕಣಜ” ಎನ್ನುವ ಪದವನ್ನು ಜನರು ತಮಗೆ ಬರಗಾಲ ಬರುವಾಗ ಉಪಯೋಗಿಸಿಕೊಳ್ಳುವುದಕ್ಕೆ ಬೇಕಾದ ಆಹಾರವನ್ನು ಮತ್ತು ಧಾನ್ಯಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದಕ್ಕೆ ಉಪಯೋಗಿಸಲ್ಪಟ್ಟಿದ್ದಾಗಿರುತ್ತದೆ.
  • ದೇವರು ತನ್ನ ಜನರಿಗೆ ಕೊಡುವ ಎಲ್ಲಾ ಒಳ್ಳೆಯ ವಿಷಯಗಳನ್ನು ಸೂಚಿಸುವುದಕ್ಕೆ ಈ ಪದವನ್ನು ಅಲಂಕಾರಿಕವಾಗಿ ಉಪಯೋಗಿಸಲ್ಪಟ್ಟಿರುತ್ತದೆ.
  • ದೇವಾಲಯದ ಕಣಜಗಳಲ್ಲಿ ಯೆಹೋವನಿಗೆ ಪ್ರತಿಷ್ಠಾಪನೆ ಮಾಡಿದ ಬೆಲೆಯುಳ್ಳ ಬೆಳ್ಳಿ ಬಂಗಾರಗಳನ್ನು ಇಡುತ್ತಿದ್ದರು. ಈ ವಸ್ತುಗಳಲ್ಲಿ ಕೆಲವೊಂದು ದೇವಾಲಯವನ್ನು ನಿರ್ವಹಿಸಲು ಮತ್ತು ದುರಸ್ತಿ ಮಾಡುವದಕ್ಕೆ ಉಪಯೋಗಿಸುವವುಗಳು ಅಲ್ಲಿಯೇ ಇರುತ್ತಿದ್ದವು.
  • “ಕಣಜ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಧಾನ್ಯಗಳನ್ನು ಸಂಗ್ರಹಿಸಿಡಲು ನಿರ್ಮಿಸಿಕೊಂಡಿರುವ ಕಟ್ಟಡ” ಅಥವಾ “ಆಹಾರವನ್ನು ಇಡುವ ಸ್ಥಳ” ಅಥವಾ “ಬೆಲೆಯುಳ್ಳ ವಸ್ತುಗಳು ಸುರಕ್ಷಿತವಾಗಿರುವುದಕ್ಕೆ ಕಟ್ಟಿಕೊಂಡಿರುವ ಕೊಠಡಿ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಪ್ರತಿಷ್ಠಾಪಿಸು, ಅರ್ಪಿಸು, ಬರಗಾಲ, ಬಂಗಾರ, ಧಾನ್ಯ, ಬೆಳ್ಳಿ, ದೇವಾಲಯ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H214, H618, H624, H4035, H4200, H4543, G596

ಕತ್ತಲು

# ಪದದ ಅರ್ಥವಿವರಣೆ:

“ಕತ್ತಲು” ಎಂದರೆ ಬೆಳಕಿಲ್ಲದ ಸ್ಥಳ. ಈ ಪದಕ್ಕೆ ಅನೇಕವಾದ ಅಲಂಕಾರಿಕ ಅರ್ಥಗಳಿರುತ್ತವೆ.

  • ಅಲಂಕಾರಿಕ ಭಾಷೆಯಲ್ಲಿ “ಕತ್ತಲು” ಎನ್ನುವ ಪದಕ್ಕೆ “ಅಪವಿತ್ರತೆ” ಅಥವಾ “ದುಷ್ಟ” ಅಥವಾ “ಆತ್ಮೀಯಕವಾದ ಕುರುಡುತನ” ಎಂದರ್ಥ.
  • ಈ ಪದವು ನೈತಿಕ ಭ್ರಷ್ಟತ್ವ ಮತ್ತು ಪಾಪಕ್ಕೆ ಸಂಬಂಧಪಟ್ಟ ವಿಷಯಗಳನ್ನು ಸೂಚಿಸುತ್ತದೆ.
  • “ಕತ್ತಲಿನ ರಾಜ್ಯ” ಎನ್ನುವ ಮಾತು ಸೈತಾನಿನ ಆಳ್ವಿಕೆಯನ್ನು ಮತ್ತು ದುಷ್ಟತನಕ್ಕೆ ಸಂಬಂಧಪಟ್ಟ ಪ್ರತಿಯೊಂದನ್ನು ಸೂಚಿಸುತ್ತದೆ.
  • “ಕತ್ತಲು” ಎನ್ನುವ ಪದವನ್ನು ಅಲಂಕಾರಿಕ ಭಾಷೆಯಲ್ಲಿ ಮರಣಕ್ಕೂ ಉಪಯೋಗಿಸುತ್ತಾರೆ. (ನೋಡಿರಿ: ಅಲಂಕಾರ ರೂಪ
  • ದೇವರನ್ನು ಅರಿಯದ ಜನರು “ಅಂಧಕಾರದಲ್ಲಿ ಜೀವಿಸುತ್ತಿದ್ದಾರೆ” ಎಂದು ಅವರ ಕುರಿತು ಹೇಳುತ್ತಾರೆ, ಇದಕ್ಕೆ ಅವರಿಗೆ ನೀತಿ ಅಂದರೇನು ಅಥವಾ ಅದನ್ನು ಯಾವರೀತಿ ಅಭ್ಯಾಸ ಮಾಡಬೇಕೆಂದು ತಿಳಿದಿರುವುದಿಲ್ಲ ಎಂದರ್ಥ.
  • ದೇವರು ಬೆಳಕಾಗಿದ್ದಾರೆ (ನೀತಿ) ಮತ್ತು ಕತ್ತಲು (ದುಷ್ಟತನ) ಎಂದಿಗೂ ಬೆಳಕನ್ನು ಅಧಿಗಮಿಸುವುದಿಲ್ಲ.
  • ದೇವರನ್ನು ತಿರಸ್ಕಾರ ಮಾಡಿದವರಿಗೆ ವಿಧಿಸುವ ಶಿಕ್ಷೆ ಸ್ಥಳವು ಕೆಲವೊಂದುಬಾರಿ “ಹೊರಗಿನ ಕತ್ತಲು” ಎಂದು ಸೂಚಿಸಲಾಗಿದೆ.

# ಅನುವಾದ ಸಲಹೆಗಳು:

  • ಈ ಪದವನ್ನು ಅಕ್ಷರಾರ್ಥವಾಗಿ ಅನುವಾದ ಮಾಡುವುದು ಉತ್ತಮ, ಯೋಜನೆಯ ಭಾಷೆಯಲ್ಲಿ ಒಂದು ಪದದೊಂದಿಗೆ ಬೆಳಕಿಲ್ಲದ ಪದವನ್ನು ಸೂಚಿಸುವುದಾಗಿರಬೇಕು. ಈ ಪದವು ಕೋಣೆಯಲ್ಲಿ ಬೆಳಕು ಇಲ್ಲದಿರುವಾಗ ಉಂಟಾಗುವ ಕತ್ತಲನ್ನು ಸೂಚಿಸುತ್ತದೆ ಅಥವಾ ಹಗಲಿನ ಸಮಯದಲ್ಲಿ ಬೆಳಕು ಇಲ್ಲದಾಗ ಬರುವ ಮೊಬ್ಬನ್ನು ಸೂಚಿಸುತ್ತದೆ.
  • ಅಲಂಕಾರಿಕ ಉಪಯೋಗಗಳಲ್ಲಿ ಒಳ್ಳೆತನ ಮತ್ತು ಸತ್ಯ ಎನ್ನುವವುಗಳಿಗೆ ವಿರುದ್ಧವಾಗಿ ಮೋಸವನ್ನು ಮತ್ತು ದುಷ್ಟತನವನ್ನು ವಿವರಿಸುವ ವಿಧಾನದಲ್ಲಿ ಬೆಳಕಿಗೆ ವಿರುದ್ಧಾತ್ಮಕ ಪದವನ್ನಾಗಿ ಕತ್ತಲಿನ ಸ್ವರೂಪವನ್ನು ಇಡುವುದು ತುಂಬಾ ಪ್ರಾಮುಖ್ಯವಾದ ವಿಷಯ.
  • ಸಂದರ್ಭಾನುಗುಣವಾಗಿ ಈ ಪದವನ್ನು ಉಪಯೋಗಿಸುವ ವಿಧಾನಗಳಲ್ಲಿ “ರಾತ್ರಿಯ ಕತ್ತಲು” (ಹಗಲಿನ ಬೆಳಕಿಗೆ ವಿರುದ್ಧವಾಗಿ) ಅಥವಾ “ರಾತ್ರಿ ಸಮಯದಲ್ಲಿ ಏನೂ ಕಾಣದೇ ಇರುವುದು” ಅಥವಾ “ಕತ್ತಲಿನ ಹಾಗೆಯೇ ದುಷ್ಟತ್ವ” ಎನ್ನುವ ಮಾತುಗಳು ಇರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಭ್ರಷ್ಟ, ಅಧಿಕಾರ, ರಾಜ್ಯ, ಬೆಳಕು, ವಿಮೋಚನೆ, ನೀತಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H652, H653, H2816, H2821, H2822, H2825, H3990, H3991, H4285, H5890, H6205, G2217, G4652, G4653, G4655, G4656

ಕತ್ತೆ, ಹೆಸರುಗತ್ತೆ

# ಪದದ ಅರ್ಥವಿವರಣೆ:

ಕತ್ತೆ ಎನ್ನುವುದು ನಾಲ್ಕು ಕಾಲುಗಳ ಪ್ರಾಣಿ, ಇದು ಕೆಲಸ ಮಾಡುವ ಪ್ರಾಣಿಯಾಗಿರುತ್ತದೆ. ಇದು ಕುದುರೆಯಂತೆ ಇರುತ್ತದೆ, ಆದರೆ ತುಂಬಾ ಚಿಕ್ಕದಾಗಿಯೂ ಮತ್ತು ಉದ್ದವಾದ ಕಿವಿಗಳನ್ನೊಳಗೊಂಡಿರುತ್ತದೆ.

  • ಹೆಸರುಗತ್ತೆ ಎನ್ನುವುದು ಗಂಡು ಕತ್ತೆಗೆ ಮತ್ತು ಹೆಣ್ಣು ಕುದುರೆಗೆ ಹುಟ್ಟಿದ ಬರಡಾದ ಸಂತತಿ.
  • ಹೆಸರುಗತ್ತೆಗಳು ತುಂಬಾ ಬಲವಾದ ಪ್ರಾಣಿಗಳು ಮತ್ತು ಅವು ತುಂಬಾ ಬೆಲೆಯುಳ್ಳ ಕೆಲಸ ಮಾಡುವ ಪ್ರಾಣಿಗಳು.
  • ಜನರು ಪ್ರಯಾಣ ಮಾಡುತ್ತಿರುವಾಗ ಭಾರವಾದ ವಸ್ತುಗಳನ್ನು ಹೊತ್ತಿಕೊಂಡು ಹೋಗುವುದಕ್ಕೆ ಕತ್ತೆಗಳನ್ನು ಮತ್ತು ಹೆಸರುಗತ್ತೆಗಳನ್ನು ಉಪಯೋಗಿಸುತ್ತಿದ್ದರು.
  • ಸತ್ಯವೇದದ ಕಾಲದಲ್ಲಿ ಸಮಾಧಾನ ಸಮಯದಲ್ಲಿ ಅರಸರು ಯುದ್ಧದ ಸಮಯದಲ್ಲಿ ಉಪಯೋಗಿಸುವ ಕುದುರೆಯ ಮೇಲೆ ಏರುವುದರ ಬದಲಾಗಿ ಕತ್ತೆಯ ಮೇಲೆ ಕುಳಿತು ಸವಾರಿ ಮಾಡುತ್ತಿದ್ದರು.
  • ಯೇಸುವು ಶಿಲುಬೆಗೆ ಏರಿಸಲ್ಪಡುವ ಒಂದು ವಾರದ ಮುಂಚಿತವಾಗಿ ಒಂದು ಕತ್ತೆಯ ಮೇಲೆ ಕುಳಿತು ಯೆರೂಸಲೇಮಿನೊಳಗೆ ಬರುತ್ತಾನೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H860, H2543, H3222, H5895, H6167, H6501, H6505, H6506, H7409, G3678, G3688, G5268

ಕನಸು

# ಪದದ ಅರ್ಥವಿವರಣೆ:

ಕನಸು ಎನ್ನುವುದು ಜನರು ನಿದ್ದೆ ಮಾಡುತ್ತಿರುವಾಗ ತಮ್ಮ ಮನಸ್ಸುಗಳಲ್ಲಿ ನೋಡುವ ಅಥವಾ ಅನುಭವಿಸುವ ವಿಷಯಗಳು ಎಂದರ್ಥ.

  • ಕನಸುಗಳು ಅನೇಕಬಾರಿ ಅವು ನಿಜವಾಗಿ ನಡೆಯುತ್ತಿವೆ ಎನ್ನುವಂತಿರುತ್ತವೆ, ಆದರೆ ಅವು ನಿಜವಾದ ಸಂಘಟನೆಗಳಲ್ಲ.
  • ಕೆಲವೊಂದುಬಾರಿ ದೇವರೇ ಏನಾದರೊಂದು ವಿಷಯದ ಕುರಿತಾಗಿ ಜನರಿಗೆ ಕನಸುಗಳು ಕಾಣುವಂತೆ ಕೊಡುತ್ತಾನೆ, ಇದರಿಂದ ಅವರು ಅವುಗಳಿಂದ ಕಲಿತುಕೊಳ್ಳುತ್ತಾರೆ. ಆತನು ಅವರಿಗೆ ಬರುವ ಕನಸುಗಳ ಮೂಲಕ ಜನರೊಂದಿಗೆ ನೇರವಾಗಿ ಮಾತನಾಡುತ್ತಾನೆ.
  • ಸತ್ಯವೇದದಲ್ಲಿ ದೇವರು ಜನರಿಗೆ ಒಂದು ಸಂದೇಶವನ್ನು ಕೊಡುವುದಕ್ಕೆ ಅವರಿಗೆ ವಿಶೇಷವಾದ ಕನಸುಗಳನ್ನು ಕೊಟ್ಟಿದ್ದಾನೆ, ಅನೇಕಬಾರಿ ಭವಿಷ್ಯತ್ತಿನಲ್ಲಿ ನಡೆಯುವ ವಿಷಯಗಳ ಕುರಿತಾಗಿ ಕನಸುಗಳನ್ನು ಕೊಟ್ಟಿರುತ್ತಾನೆ.
  • ಕನಸಿಗೂ ದರ್ಶನಕ್ಕೂ ತುಂಬಾ ವ್ಯತ್ಯಾಸವಿರುತ್ತದೆ, ಅವುಗಳಿಗೆ ಬೇರೆ ಬೇರೆ ಅರ್ಥಗಳಿರುತ್ತವೆ. ಒಬ್ಬ ವ್ಯಕ್ತಿ ನಿದ್ದೆ ಮಾಡುತ್ತಿರುವಾಗ ಕನಸುಗಳು ಬರುತ್ತವೆ, ಆದರೆ ದರ್ಶನಗಳು ಸಹಜವಾಗಿ ಒಬ್ಬ ವ್ಯಕ್ತಿ ಎದ್ದಿರುವಾಗಲೇ ಬರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ದರ್ಶನ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಉದಾಹರಣೆಗಳು:

  • 08:02 ಯೋಸೇಫನನ್ನು ತನ್ನ ತಂದೆ ಹೆಚ್ಚಾಗಿ ಪ್ರೀತಿಸಿರುವದರಿಂದ ಯೋಸೇಫನ ಅಣ್ಣಂದಿಯರು ಅವನನ್ನು ದ್ವೇಷಿಸಿದರು ಮತ್ತು ಯೋಸೇಫನು ___ ಕನಸುಗಳನ್ನು ___ ಕಂಡಿದ್ದರಿಂದಲೇ, ಅವನು ಅವರನ್ನು ಆಳುವ ವ್ಯಕ್ತಿಯಾದನು.
  • 08:06 ಐಗುಪ್ತರೆಲ್ಲರೂ ತಮ್ಮ ಅರಸನನ್ನು ಕರೆಯುವ ಫರೋಹನಿಗೆ ಒಂದು ರಾತ್ರಿ ಎರಡು ___ ಕನಸು ____ ಬಂದಿದ್ದವು, ಅವು ಅವನನ್ನು ತುಂಬಾ ಕಳವಳಕ್ಕೆ ಗುರಿ ಮಾಡಿದ್ದವು. ತನ್ನ ಬಳಿಯಿರುವ ಯಾವ ಸಲಹೆಗಾರನು ಕೂಡ ಆ ___ ಕನಸುಗಳಿಗೆ ____ ಅರ್ಥಗಳನ್ನು ಹೇಳಲಿಲ್ಲ.
  • 08:07 ಆ ____ ಕನಸುಗಳಿಗೆ ____ ಅರ್ಥವಿವರಣೆ ಹೇಳುವ ಸಾಮರ್ಥ್ಯವನ್ನು ದೇವರು ಯೋಸೇಫನಿಗೆ ಕೊಟ್ಟಿದ್ದನು, ಅದರಿಂದ ಫರೋಹನನ್ನು ಸೆರೆಮನೆಯಿಂದ ಯೋಸೇಫನನ್ನು ಕರೆಕಳುಹಿಸಿದನು. ಯೋಸೇಫನು ಅವನಿಗೆ ___ ಕನಸುಗಳ ____ ಭಾವವನ್ನು ಹೇಳಿದನು, ಆ ಭಾವವೇನೆಂದರೆ, “ದೇವರು ಏಳು ವರ್ಷಗಳ ಕಾಲ ಸಮೃದ್ಧಿಯಾದ ಬೆಳೆಗಳನ್ನು ಕೊಡುತ್ತಾನೆ, ಅದಾದನಂತರ ಏಳು ವರ್ಷಗಳ ಕಾಲ ಬರಗಾಲ ಬರುತ್ತದೆ” ಎಂದು ಹೇಳಿದನು.
  • 16:11 ಆ ರಾತ್ರಿಯಲ್ಲಿ ಗಿದ್ಯೋನನು ಪಾಳೆಯದೊಳಗೆ ಹೋಗಿ, ಮಿದ್ಯಾನರ ಸೈನಿಕನು ತನಗೆ ಬಂದಿರುವ ____ ಕನಸನ್ನು ___ ತನ್ನ ಸ್ನೇಹಿತನಿಗೆ ಹೇಳುತ್ತಿರುವುದನ್ನು ಕೇಳಿಸಿಕೊಂಡನು. “ಗಿದ್ಯೋನ್ ಸೈನ್ಯವು ಮಿದ್ಯಾನರ ಸೈನ್ಯವನ್ನು ಸೋಲಿಸುತ್ತದೆಯೆಂದು ಈ ____ ಕನಿಸಿಗೆ ___ ಅರ್ಥವಲ್ಲವೊ!” ಎಂದು ಆ ಮನುಷ್ಯನ ಸ್ನೇಹಿತ ಹೇಳುತ್ತಾನೆ.
  • 23:01 ಅವನು (ಯೋಸೇಫ) ಆಕೆಗೆ (ಮರಿಯಳಿಗೆ) ಅವಮಾನ ತರುವುದು ಇಷ್ಟವಿರಲಿಲ್ಲ, ಆದ್ದರಿಂದ ಅವನು ಆಕೆಗೆ ವಿಚ್ಛೇದನ ಪತ್ರವನ್ನು ಕೊಡಬೇಕೆಂದಿದ್ದನು. ಅವನು ಅದನ್ನು ಮಾಡುವುದಕ್ಕೆ ಮುಂಚಿತವಾಗಿ, ದೂತ ಬಂದು ಅವನೊಂದಿಗೆ __ ಕನಸಿನಲ್ಲಿ ___ ಮಾತನಾಡಿತು.

# ಪದ ಡೇಟಾ:

  • Strong's: H1957, H2472, H2492, H2493, G1797, G1798, G3677

ಕನ್ನಿಕೆ, ಕನ್ನಿಕೆಗಳು, ಕನ್ಯತ್ವ

# ಪದದ ಅರ್ಥವಿವರಣೆ:

ಕನ್ನಿಕೆ ಎನ್ನುವ ಪದವು ಎಂದಿಗೂ ಲೈಂಗಿಕ ಸಂಬಂಧಗಳನ್ನು ಹೊಂದಿರದ ಸ್ತ್ರೀಯಳನ್ನು ಸೂಚಿಸುತ್ತದೆ.

  • ಮೆಸ್ಸೀಯನು ಕನ್ನಿಕೆಯಿಂದ ಬರುವನೆಂದು ಪ್ರವಾದಿಯಾದ ಯೆಶಯಾನು ಹೇಳಿದನು.
  • ಮರಿಯಳು ಯೇಸುವಿಗೆ ಗರ್ಭವನ್ನು ಧರಿಸಿದಾಗ ಆಕೆ ಕನ್ನಿಕೆಯಾಗಿದ್ದಳು. ಆತನಿಗೆ ಮಾನವ ತಂದೆ ಯಾರೂ ಇದ್ದಿಲ್ಲ.
  • ಕೆಲಪೊಂದು ಭಾಷೆಗಳು ಕನ್ನಿಕೆಯನ್ನು ಸೂಚಿಸುವ ಸಭ್ಯ ವಿಧಾನವಾಗಿರುವ ಪದವನ್ನು ಹೊಂದಿರಬಹುದು. (ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಕ್ರಿಸ್ತ, ಯೆಶಯಾ, ಯೇಸು, ಮರಿಯ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಉದಾಹರಣೆಗಳು:

  • 21:09_ ಮೆಸ್ಸೀಯ ___ ಕನ್ನಿಕೆಯಿಂದ ___ ಹುಟ್ಟಿ ಬರುವನೆಂದು ಪ್ರವಾದಿಯಾದ ಯೆಶಯಾನು ಪ್ರವಾದಿಸಿದನು.
  • 22:04_ ಆಕೆ (ಮರಿಯಳು)___ ಕನ್ನಿಕೆಯಾಗಿದ್ದಳು ____ ಮತ್ತು ಯೋಸೇಫ ಎನ್ನುವ ಹೆಸರಿನ ವ್ಯಕ್ತಿಯನ್ನು ವಿವಾಹ ಮಾಡಿಕೊಳ್ಳುವುದಕ್ಕೆ ಪಧಾನ ಮಾಡಲ್ಪಟ್ಟಿದ್ದಳು.
  • 22:05_ “ನಾನು ____ ಕನ್ನಿಕೆಯಾಗಿದ್ದೆನೇ ____, ಇದು ಹೇಗೆ ನನನಗೆ ಸಂಭವಿಸುತ್ತದೆ?” ಎಂದು ಮರಿಯಳು ಉತ್ತರಿಸಿದ್ದಾಳೆ.
  • 49:01_ ಮರಿಯ ಎನ್ನುವ ಹೆಸರಿನ ___ ಕನ್ನಿಕೆ___ ಬಳಿಗೆ ದೂತ ಬಂದು, “ನೀನು ತಂದೆಯ ಮಗನಿಗೆ ಜನನವನ್ನು ಕೊಡುತ್ತೀ” ಎಂದು ಮರಿಯಳಿಗೆ ಹೇಳಿದನು. ಇದರಿಂದ ಆಕೆ ___ ಕನ್ನಿಕೆಯಾಗಿಯೇ ___ ಇದ್ದಿದ್ದಳು, ಈಕೆ ಗಂಡು ಮಗುವಿಗೆ ಜನನವನ್ನು ಕೊಟ್ಟನು ಮತ್ತು ಆ ಶಿಶುವಿಗೆ ಯೇಸು ಎಂದು ಹೆಸರಿಟ್ಟಳು.

# ಪದ ಡೇಟಾ:

  • Strong's: H1330, H1331, H5959, G3932, G3933

ಕಪಾಲ

# ಪದದ ಅರ್ಥವಿವರಣೆ:

“ಕಪಾಲ” ಎನ್ನುವ ಪದವು ಒಂದು ಪ್ರಾಣಿಯ ಅಥವಾ ಒಬ್ಬ ಮನುಷ್ಯನ ತಲೆಯ ಅಸ್ಥಿಪಂಜರ ನಿರ್ಮಾಣವಾಗಿರುವ ಎಲುಬುಗಳನ್ನು ಸೂಚಿಸುತ್ತದೆ.

“ಕಪಾಲ” ಎನ್ನುವ ಪದಕ್ಕೆ ಕೆಲವೊಂದುಬಾರಿ “ತಲೆ” ಎಂದರ್ಥ, “ನಿನ್ನ ತಲೆ ಬುರುಡೆಗೆ” ಕ್ಷೌರ ಮಾಡಿ ಎನ್ನುವ ಮಾತಿನಲ್ಲಿರುವಂತೆ ತಲೆಯನ್ನು ಸೂಚಿಸುವುದಾಗಿರುತ್ತದೆ.

  • “ಕಪಾಲ ಎನ್ನುವ ಸ್ಥಳ” ಎನ್ನುವ ಮಾತನ್ನು ಯೇಸುವನ್ನು ಶಿಲುಬೆಗೆ ಹಾಕಿದ ಗೊಲ್ಗೊತಾ ಎನ್ನುವ ಸ್ಥಳಕ್ಕೆ ಮತ್ತೊಂದು ಹೆಸರಾಗಿರುತ್ತದೆ.
  • ಈ ಪದವನ್ನು “ತಲೆ” ಅಥವಾ “ತಲೆಯ ಎಲುಬು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಶಿಲುಬೆಗೆ ಹಾಕು, ಗೊಲ್ಗೊತಾ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1538, H2026, H2076, H2490, H2491, H2717, H2763, H2873, H2874, H4191, H4194, H5221, H6936, H6991, H6992, H7523, H7819, G337, G615, G1315, G2380, G2695, G4968, G4969, G5407

ಕಪ್ಪ

# ಪದದ ಅರ್ಥವಿವರಣೆ:

“ಕಪ್ಪ” ಎನ್ನುವ ಪದವು ಎರಡು ದೇಶಗಳ ನಡುವೆ ಒಳ್ಳೇಯ ಸಂಬಂಧಗಳನ್ನು ಮತ್ತು ಸಂರಕ್ಷಣೆಯನ್ನು ಹೊಂದಿರುವ ಉದ್ದೇಶಕ್ಕಾಗಿ ಒಬ್ಬ ಪಾಲಕನಿಂದ ಇನ್ನೊಬ್ಬ ಪಾಲಕನಿಗೆ ಕೊಡುವ ಬಹುಮಾನವನ್ನು ಸೂಚಿಸುತ್ತದೆ.

  • ಕಪ್ಪ ಎನ್ನುವುದು ಹಣವನ್ನು ಪಾವತಿಸುವುದೂ ಆಗಿರಬಹುದು, ಸರ್ಕಾರ ಅಥವಾ ಪಾಲಕನು ಜನರಿಂದ ತೆರಿಗೆ ಅಥವಾ ಸುಂಕವನ್ನು ಪಡೆಯುವುದನ್ನು ಸೂಚಿಸುತ್ತದೆ.
  • ಸತ್ಯವೇದ ಕಾಲದಲ್ಲಿ ಪ್ರಯಾಣ ಮಾಡುವ ಅರಸರು ಅಥವಾ ಪಾಲಕರು ಕೆಲವೊಂದುಬಾರಿ ಅವರು ಸಂರಕ್ಷಣೆಯಾಗಿರುವುದಕ್ಕೆ ಮತ್ತು ಸುರಕ್ಷಿತವಾಗಿರುವುದಕ್ಕೆ ನಿಶ್ಚಯತೆಯನ್ನು ಹೊಂದಿಕೊಳ್ಳಲು ಅವರು ಪ್ರಯಾಣ ಮಾಡುವ ಪ್ರಾಂತ್ಯಗಳ ಅರಸರಿಗೆ ಕಪ್ಪವನ್ನು ಕೊಡುತ್ತಿದ್ದರು.
  • ಅನೇಕಸಲ ಕಪ್ಪದಲ್ಲಿ ಹಣದ ಪಕ್ಕದಲ್ಲಿ ಆಹಾರ ಪದಾರ್ಥಗಳು, ಪರಿಮಳ ದ್ರವ್ಯಗಳು, ಶ್ರೀಮಂತ ಬಟ್ಟೆಗಳು, ಮತ್ತು ಬಂಗಾರದಂತಹ ಬೆಲೆಯುಳ್ಳ ಲೋಹಗಳು ಇಟ್ಟಿರುತ್ತಾರೆ.

# ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ “ಕಪ್ಪ” ಎನ್ನುವ ಪದವನ್ನು “ಅಧಿಕಾರಿಕ ಬಹುಮಾನಗಳು” ಅಥವಾ “ವಿಶೇಷವಾದ ತೆರಿಗೆ” ಅಥವಾ “ಪಾವತಿ ಮಾಡಬೇಕಾದ ಹಣ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಬಂಗಾರ, ಅರಸ, ಪಾಲಕ, ತೆರಿಗೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1093, H4060, H4061, H4371, H4503, H4522, H4530, H4853, H6066, H7862, G1323, G2778, G5411

ಕರಗಿ, ಕರಗಿದೆ, ಕರಗುತ್ತಾಯಿದೆ, ಕರಗಿಸುವುದು, ಕರಗಿದ

# ಸತ್ಯಾಂಶಗಳು:

“ಕರಗಿ” ಎನ್ನುವ ಪದವು ಯಾವುದಾದರೊಂದನ್ನು ಬಿಸಿ ಮಾಡಿದಾಗ ಅದು ದ್ರವ ಸ್ಥಿತಿಯಲ್ಲಿ ಬರುವುದನ್ನು ಸೂಚಿಸುತ್ತದೆ. ಈ ಪದವನ್ನು ಅಲಂಕಾರಿಕ ವಿಧಾನಗಳಲ್ಲಿಯೂ ಉಪಯೋಗಿಸಲ್ಪಟ್ಟಿರುತ್ತದೆ : ಯಾವುದಾದರೊಂದು ಕರಗುವುದೆಂದರೆ “ಕರಗಿದ” ಸ್ಥಿತಿಯನ್ನು ವಿವರಿಸುತ್ತದೆ.

  • ಅನೇಕವಿಧವಾದ ಲೋಹಗಳು ಕರಗುವವರೆಗೆ ಅವುಗಳನ್ನು ಬಿಸಿ ಮಾಡುತ್ತಾ ಇರುತ್ತಾರೆ ಮತ್ತು ವಿಗ್ರಹಗಳನ್ನು ಅಥವಾ ಉಪಕರಣಗಳನ್ನು ಮಾಡುವುದಕ್ಕೆ ಕರಗಿದ ದ್ರವವನ್ನು ಅಚ್ಚುನೊಳಗೆ ಸುರಿಯುತ್ತಾರೆ. “ಕರಗಿದ ಲೋಹ” ಎನ್ನುವ ಮಾತು ಕರಗಿಸಲ್ಪಟ್ಟ ಲೋಹವನ್ನು ಸೂಚಿಸುತ್ತದೆ.
  • ಮೊಂಬತ್ತಿ ಉರಿಯುತ್ತಿರುವಾಗ, ಇದರ ಮೇಣವು ಕರಗುತ್ತಾ ಇರುತ್ತದೆ ಮತ್ತು ಹನಿ ಹನಿಯಾಗಿ ಕೆಳಗೆ ಬೀಳುತ್ತಾ ಇರುತ್ತದೆ. ಪುರಾತನ ಕಾಲಗಳಲ್ಲಿ ಪತ್ರಗಳನ್ನು ಮೊಹರು ಮಾಡುವುದಕ್ಕೆ ಅನೇಕಬಾರಿ ಕರಗಿದ ಮೇಣವನ್ನು ಪತ್ರದ ಮೂಲೆಗಳಲ್ಲಿ ಸುರಿಸುತ್ತಿದ್ದರು.
  • “ಕರಗಿ” ಎನ್ನುವ ಪದದ ಅಲಂಕಾರಿಕ ಉಪಯೋಗಕ್ಕೆ ಮೇಣವು ಕರಗಿದಂತೆಯೇ ಮೃದುವಾಗಿಯೂ ಮತ್ತು ಬಲಹೀನವಾಗಿಯೂ ಆಗುವುದು ಎಂದರ್ಥ.
  • “ಅವರ ಹೃದಯಗಳು ಕರಗಿವೆ” ಎನ್ನುವ ಮಾತಿಗೆ ಅವರು ಭಯದ ಕಾರಣದಿಂದ ತುಂಬಾ ಬಲಹೀನವಾದರು ಎಂದರ್ಥ.
  • “ಅವರು ಕರಗಿ ಪಕ್ಕಕ್ಕೆ ಹೋದರು” ಎನ್ನುವ ಇನ್ನೊಂದು ಅಲಂಕಾರಿಕ ಮಾತಿಗೆ ಅವರು ಹೊರ ಹೋಗುವುದಕ್ಕೆ ಬಲವಂತಿಕೆ ಮಾಡಲ್ಪಟ್ಟರು ಅಥವಾ ಅವರು ಬಲಹೀನವಾಗಿ ಕಾಣಿಸಿಕೊಂಡರು ಮತ್ತು ಸೋತು ಪಕ್ಕಕೆ ಹೋದರು ಎಂದರ್ಥ.
  • “ಕರಗಿ” ಎನ್ನುವ ಪದಕ್ಕೆ ಅಕ್ಷರಾರ್ಥವು “ದ್ರವವಾಗಿ ಮಾರ್ಪಡುವುದು” ಅಥವಾ “ದ್ರವೀಕರಿಸುವುದು” ಅಥವಾ “ದ್ರವವಾಗುವುದಕ್ಕೆ ಕಾರಣವಾಗುವುದು” ಎಂದೂ ಅನುವಾದ ಮಾಡಬಹುದು.
  • “ಕರಗಿ” ಎನ್ನುವ ಅಲಂಕಾರ ಅರ್ಥಗಳನ್ನು ಅನುವಾದ ಮಾಡುವ ಇನ್ನೊಂದು ವಿಧಾನಗಳಲ್ಲಿ “ಮೃದುವಾಗುವುದು” ಅಥವಾ “ಬಲಹೀನವಾಗುವುದು” ಅಥವಾ “ಸೋತು ಹೋಗುವುದು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಹೃದಯ, ಸುಳ್ಳು ದೇವರು, ರೂಪ, ಮೊಹರು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1811, H2003, H2046, H3988, H4127, H4529, H4541, H4549, H5140, H5258, H5413, H6884, H8557, G3089, G5080

ಕರಡಿ, ಕರಡಿಗಳು

# ಪದದ ಅರ್ಥವಿವರಣೆ

ಕರಡಿ ನಾಲ್ಕು ಕಾಲುಗಳುಳ್ಳಾ ಭಯಾನಕವಾದ ಪ್ರಾಣಿ, ಅದು ಕಪ್ಪು ಅಥವಾ ಕಡು ಕಂದು ಬಣ್ಣದಲ್ಲಿರುತ್ತದೆ ಮತ್ತು ಚೂಪಾದ ಹಲ್ಲುಗಳು ಹಾಗೂ ಉಗುರುಗಳನ್ನು ಹೊಂದಿರುತ್ತದೆ. ಸತ್ಯವೇದದ ಕಾಲದಲ್ಲಿ ಕರಡಿಗಳು ಇಸ್ರಾಯೆಲ್ ದೇಶದಲ್ಲಿ ಸಹಜವಾಗಿ ವಾಸ ಮಾಡುತ್ತಿದ್ದವು.

  • ಈ ಪ್ರಾಣಿಗಳು ಕಾಡಿನಲ್ಲಿ ಮತ್ತು ಬೆಟ್ಟ ಪ್ರಾಂತ್ಯಗಳಲ್ಲಿ ವಾಸ ಮಾಡುತ್ತವೆ; ಅವು ಮೀನುಗಳನ್ನು, ಕೀಟಗಳನ್ನು ಮತ್ತು ಸಸ್ಯಗಳನ್ನು ತಿನ್ನುತ್ತವೆ.
  • ಹಳೆಯ ಒಡಂಬಡಿಕೆಯ ಕಾಲದಲ್ಲಿ, ಕರಡಿಯನ್ನು ಬಲದ ಸೂಚನೆಯಾಗಿ ಉಪಯೋಗಿಸುತ್ತಿದ್ದರು.
  • ಕುರಿಗಳನ್ನು ಕಾಯುತ್ತಿರುವಾಗ, ಕುರುಬನಾದ ದಾವೀದನು ಕರಡಿಯೊಂದಿಗೆ ಹೋರಾಡಿ, ಅದನ್ನು ಸೋಲಿಸಿದನು.
  • ಪ್ರವಾದಿಯಾದ ಎಲೀಷನನ್ನು ಯೌವ್ವನಸ್ತರು ಅಪಹಾಸ್ಯ ಮಾಡಿದಾಗ, ಕಾಡಿನಿಂದ ಎರಡು ಕರಡಿಗಳು ಬಂದು ಅವರ ಮೇಲೆ ದಾಳಿ ಮಾಡಿದವು.

(ಈ ಪದಗಳನ್ನು ಸಹ ನೋಡಿರಿ : ದಾವಿದ, ಎಲೀಷ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1677, G715

ಕಲಹ

# ಪದದ ಅರ್ಥವಿವರಣೆ:

“ಕಲಹ” ಎನ್ನುವ ಪದವು ಜನರ ಮಧ್ಯೆದಲ್ಲಿ ಉಂಟಾಗುವ ಭೌತಿಕವಾದ ಅಥವಾ ಭಾವೋದ್ರೇಕವಾದ ಸಂಘರ್ಷಗಳನ್ನು ಸೂಚಿಸುತ್ತದೆ.

  • ಕಲಹವನ್ನು ಉಂಟುಮಾಡುವ ವ್ಯಕ್ತಿ ಜನರ ಮಧ್ಯೆದಲ್ಲಿ ಬಲವಾದ ಭಿನ್ನಾಭಿಪ್ರಾಯಗಳನ್ನು ಮತ್ತು ನೋವನ್ನುಂಟು ಮಾಡುವ ಭಾವನೆಗಳನ್ನು ಉಂಟುಮಾಡುತ್ತಾನೆ.
  • ಕೆಲವೊಂದುಬಾರಿ “ಕಲಹ” ಎನ್ನುವ ಪದದ ಉಪಯೋಗವು ಬಲವಾದ ಭಾವೋದ್ರೇಕಗಳನ್ನು ಒಳಗೊಂಡಿರುತ್ತದೆ. ಉದಾಹರಣೆಗೆ, ಕೋಪ ಅಥವಾ ಕಹಿತನ.
  • ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಅಸಮ್ಮತಿ” ಅಥವಾ “ವಿವಾದ” ಅಥವಾ “ಸಂಘರ್ಷ” ಎನ್ನುವ ಪದಗಳು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಕೋಪ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1777, H1779, H4066, H4090, H4683, H4808, H7379, H7701, G485, G2052, G2054, G3055, G3163, G5379

ಕವಚ, ಶಸ್ತ್ರಾಸ್ತ್ರ

# ಪದದ ಅರ್ಥವಿವರಣೆ:

“ಕವಚ” ಎನ್ನುವ ಪದವು ಯುದ್ಧದಲ್ಲಿ ಹೋರಾಟ ಮಾಡುವುದಕ್ಕೆ ಸೈನಿಕನು ಉಪಯೋಗಿಸುವ ಮತ್ತು ಶತ್ರು ಧಾಳಿಯಿಂದ ತನ್ನನ್ನು ತಾನು ಸಂರಕ್ಷಿಸಿಕೊಳ್ಳುವುದಕ್ಕೆ ಉಪಯೋಗಿಸುವ ಉಪಕರಣವನ್ನು ಸೂಚಿಸುತ್ತದೆ. ಇದು ಆತ್ಮೀಯಕವಾದ ಕವಚವನ್ನು ಸೂಚಿಸುವುದಕ್ಕೆ ಅಲಂಕಾರ ಪದ್ಧತಿಯಲ್ಲಿಯೂ ಉಪಯೊಗಿಸುತ್ತಾರೆ.

  • ಸೈನಿಕನ ಕವಚದ ಉಪಕರಣಗಳಲ್ಲಿ ಶಿರಸ್ತ್ರಾಣ, ಗುರಾಣಿ, ಎದೆಕವಚ, ಕಾಲು ಹೊದಿಕೆಗಳು, ಮತ್ತು ಖಡ್ಗ ಎನ್ನುವವುಗಳು ಇರುತ್ತವೆ.
  • ಈ ಪದವನ್ನು ಅಲಂಕಾರವಾಗಿ ಉಪಯೋಗಿಸುತ್ತಾ, ಅಪೊಸ್ತಲನಾದ ಪೌಲನು ಭೌತಿಕವಾದ ಕವಚವನ್ನು ಅತ್ಮೀಕವಾಗಿ ಯುದ್ಧಗಳನ್ನು ಮಾಡುವುದಕ್ಕೆ ಒಬ್ಬ ವಿಶ್ವಾಸಿಗೆ ಸಹಾಯಕವಾಗುವುದಕ್ಕೆ ದೇವರು ಕೊಡುವ ಆತ್ಮೀಯಕವಾದ ಕವಚಕ್ಕೆ ಹೋಲಿಸುತ್ತಾ ಹೇಳಿದ್ದಾರೆ.
  • ಸೈತಾನನಿಗೆ ಮತ್ತು ಪಾಪಕ್ಕೆ ವಿರುದ್ಧವಾಗಿ ಹೋರಾಟ ಮಾಡುವುದಕ್ಕೆ ದೇವರು ತನ್ನ ಜನರಿಗೆ ಕೊಡುವ ಆತ್ಮೀಯಕವಾದ ಕವಚದಲ್ಲಿ ಸತ್ಯವು, ನೀತಿ, ಸಮಾಧಾನ ಸುವಾರ್ತೆ, ನಂಬಿಕೆ, ರಕ್ಷಣೆ ಒಳಗೊಂಡಿರುತ್ತವೆ ಮತ್ತು ಪವಿತ್ರಾತ್ಮನು ಒಳಗೊಂಡಿರುತ್ತಾನೆ.
  • ಈ ಪದವನ್ನು “ಸೈನಿಕನ ತಡೆಸಾಧನ” ಅಥವಾ “ಸಂರಕ್ಷಿಸುವ ಯುದ್ಧ ಬಟ್ಟೆಗಳು” ಅಥವಾ “ಸಂರಕ್ಷಣಾ ಕವಚ” ಅಥವಾ “ಯುದ್ಧ ಸಾಮಾಗ್ರಿಗಳು” ಎಂದು ಅರ್ಥಕೊಡುವ ಪದಗಳೊಂದಿಗೆ ಕೂಡ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ನಂಬಿಕೆ, ಪವಿತ್ರಾತ್ಮ, ಸಮಾಧಾನ, ರಕ್ಷಿಸು, ಆತ್ಮ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2185, H2290, H2488, H3627, H4055, H5402, G3696, G3833

ಕಷ್ಟ, ಕಷ್ಟಗಳು, ಕಷ್ಟಪಟ್ಟಿದೆ, ಕಷ್ಟಪಡುವುದು, ಕಷ್ಟಗಳು

# ಪದದ ಅರ್ಥವಿವರಣೆ:

“ಕಷ್ಟ” ಮತ್ತು “ಕಷ್ಟಪಡುವುದು” ಎನ್ನುವ ಪದಗಳು ರೋಗ, ಬಾಧೆ, ಅಥವಾ ಇತರ ಕಠಿಣ ಪರಿಸ್ಥಿತಿಗಳಂತೆ ಯಾವುದಾದರೊಂದು ಅಹಿತಕರವಾದದ್ದನ್ನು ಅನುಭವಿಸಿದ್ದನ್ನು ಸೂಚಿಸುತ್ತದೆ.

  • ಜನರು ಹಿಂಸೆಗಳನ್ನು ಅನುಭವಿಸುತ್ತಿರುವಾಗ ಅಥವಾ ಅವರು ರೋಗಗಳಲ್ಲಿರುವಾಗ, ಅವರು ಕಷ್ಟಪಡುತ್ತಿದ್ದಾರೆ.
  • ಕೆಲವೊಂದುಬಾರಿ ಜನರು ತಾವು ಮಾಡಿರುವ ತಪ್ಪು ಕಾರ್ಯಗಳಿಂದ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ; ಇನ್ನೂ ಕೆಲವೊಂದುಬಾರಿ ಅವರು ಮಾಡಿರುವ ಪಾಪಗಳಿಂದ ಮತ್ತು ಲೋಕದಲ್ಲಿರುವ ರೋಗಗಳಿಂದ ನರಳುತ್ತಾಯಿರುತ್ತಾರೆ.
  • ಕಷ್ಟಪಡುವಂತದ್ದು ಭೌತಿಕವಾಗಿರಬಹುದು, ಉದಾಹರಣೆಗೆ, ಬಾಧೆ ಅಥವಾ ರೋಗ. ಇದು ಭಾವೋದ್ರೇಕವಾಗಿರಬಹುದು , ಉದಾಹರಣೆಗೆ, ಭಯ, ದುಃಖ, ಅಥವಾ ಒಂಟಿತನ ಭಾವನೆಗಳು.
  • “ನನ್ನ ಕಷ್ಟ” ಎನ್ನುವ ಮಾತಿಗೆ “ನನ್ನನ್ನು ಸಹಿಸು” ಅಥವಾ “ನನ್ನ ಮಾತುಗಳು ಕೇಳು” ಅಥವಾ “ಸಹನೆಯಿಂದ ನನ್ನ ಮಾತುಗಳನ್ನು ಕೇಳು” ಎಂದರ್ಥ.

# ಅನುವಾದ ಸಲಹೆಗಳು:

  • “ಕಷ್ಟ” ಎನ್ನುವ ಪದವನ್ನು “ಬಾಧೆಯನ್ನು ಅನುಭವಿಸು” ಅಥವಾ “ಕಷ್ಟವನ್ನು ತಾಳಿಕೋ” ಅಥವಾ “ಕಠಿಣ ಪರಿಸ್ಥಿತಿಗಳನ್ನು ಅನುಭವಿಸು” ಅಥವಾ “ಕಠಿಣವಾದ ಮತ್ತು ಬಾಧೆಗಳ ಅನುಭವಗಳ ಮೂಲಕ ಹಾದು ಹೋಗು” ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಸಾರವಾಗಿ, “ಕಷ್ಟಪಡುವುದು” ಎನ್ನುವ ಪದವನ್ನು “ಅತೀ ಗಂಭೀರವಾದ ಕಠಿಣವಾದ ಪರಿಸ್ಥಿತಿಗಳು” ಅಥವಾ “ತೀವ್ರವಾದ ಕಠಿಣ ಪರಿಸ್ಥಿತಿಗಳು” ಅಥವಾ “ಕಠಿಣತೆಯನ್ನು ಅನುಭವಿಸುವುದು” ಅಥವಾ “ಬಾಧೆಪಡುವ ಅನುಭವಗಳು” ಎಂದೂ ಅನುವಾದ ಮಾಡಬಹುದು.
  • “ದಾಹಕ್ಕಾಗಿ ಕಷ್ಟಪಡು” ಎನ್ನುವ ಮಾತನ್ನು “ದಾಹವನ್ನು ಅನುಭವಿಸು” ಅಥವಾ “ದಾಹದೊಂದಿಗೆ ಕಷ್ಟಪಡುವುದು” ಎಂದೂ ಅನುವಾದ ಮಾಡಬಹುದು.
  • “ಹಿಂಸೆಯಿಂದ ಕಷ್ಟಪಡುವುದು” ಎನ್ನುವ ಮಾತನ್ನು “ಹಿಂಸೆಯ ಮೂಲಕ ಹಾದುಹೋಗು” ಅಥವಾ “ಹಿಂಸೆಯ ಕೃತ್ಯಗಳಿಂದ ಹಾನಿಯನ್ನು ಅನುಭವಿಸುವುದು” ಎಂದೂ ಅನುವಾದ ಮಾಡಬಹುದು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಉದಾಹರಣೆಗಳು:

  • 09:13_ “ನಾನು ನನ್ನ ಜನರು __ ಕಷ್ಟ ಪಡುತ್ತಿರುವುದನ್ನು ___ ನೋಡಿದ್ದೇನೆ” ಎಂದು ದೇವರು ಹೇಳಿದರು.
  • 38:12_ “ನನ್ನ ತಂದೆಯೇ, ಸಾಧ್ಯವಾದರೆ, ಈ ___ ಕಷ್ಟದ ___ ಬಟ್ಟಲನ್ನು ಕುಡಿಯದಂತೆ ಮಾಡು” ಎಂದು ಯೇಸು ಮೂರುಬಾರಿ ಪ್ರಾರ್ಥಿಸಿದನು.
  • 42:03_ ಮೆಸ್ಸೀಯನು ___ ಕಷ್ಟಪಡುವನು ___ ಮತ್ತು ಕೊಲ್ಲಲ್ಪಡುವನು, ಆದರೆ ಮೂರನೇ ದಿನದಂದು ಎದ್ದು ಬರುವನೆಂದು ಪ್ರವಾದಿಗಳು ಹೇಳಿರುವದನ್ನು ಆತನು (ಯೇಸು) ಜ್ಞಾಪಿಸಿಕೊಂಡನು.
  • 42:07_ “ಮೆಸ್ಸೀಯನು ___ ಕಷ್ಟಪಡುವನು ___ ಸಾಯುವನು ಮತ್ತು ಮೂರನೇ ದಿನದಂದು ಎದ್ದು ಬರುವನೆಂದು ಬರೆಯಲ್ಪಟ್ಟಿದೆ” ಎಂದು ಆತನು (ಯೇಸು) ಹೇಳಿದನು.
  • 44:05_ “ನೀವು ಮಾಡುತ್ತಿರುವುದನ್ನು ನೀವು ಅರ್ಥಮಾಡಿಕೊಳ್ಳದಿದ್ದರೂ, ಮೆಸ್ಸೀಯನು ___ ಕಷ್ಟಪಡುವನು ___ ಮತ್ತು ಸಾಯುವನೆಂದು ಪ್ರವಾದನೆಗಳನ್ನು ನೆರವೇರಿಸುವುದಕ್ಕೆ ನಿಮ್ಮ ಕ್ರಿಯೆಗಳನ್ನು ದೇವರು ಉಪಯೋಗಿಸಿಕೊಂಡಿದ್ದಾರೆ.”
  • 46:04_ “ರಕ್ಷಣೆ ಹೊಂದದಿರುವವರಿಗೆ ನನ್ನ ಹೆಸರನ್ನು ಪ್ರಕಟಿಸುವುದಕ್ಕೆ ನಾನು ಇವನನ್ನು (ಸೌಲ) ಆಯ್ಕೆಮಾಡಿಕೊಂಡಿದ್ದೇನೆ. ನನ್ನ ಕುರಿತಾಗಿ ಇವನು ಎಷ್ಟು ___ ಕಷ್ಟಪಡಬೇಕೆಂದು ___ ನಾನು ತೋರಿಸುತ್ತೇನೆ” ಎಂದು ದೇವರು ಹೇಳಿದರು.
  • 50:17_ ಈತನು (ಯೇಸು) ಪ್ರತಿಯೊಬ್ಬರ ಕಣ್ಣೀರನ್ನು ಹೊರೆಸುವನು ಮತ್ತು ಆಲ್ಲಿ ಯಾವ ___ ಕಷ್ಟ ___, ದುಃಖ, ಅಳು, ಕೆಟ್ಟದ್ದು, ಬಾಧೆ, ಅಥವಾ ಮರಣವು ಇರುವುದಿಲ್ಲ.

# ಪದ ಡೇಟಾ:

  • Strong's: H943, H1741, H1934, H4342, H4531, H4912, H5142, H5254, H5375, H5999, H6031, H6040, H6041, H6064, H6090, H6770, H6869, H6887, H7661, G91, G941, G971, G2210, G2346, G2347, G3804, G3958, G4310, G4778, G4841, G5004, G5723

ಕಳಂಕ, ಕಳಂಕಗಳು, ಕಳಂಕವಿಲ್ಲದ್ದು

# ಸತ್ಯಾಂಶಗಳು:

“ಕಳಂಕ” ಎನ್ನುವ ಪದಕ್ಕೆ ಒಬ್ಬ ವ್ಯಕ್ತಿಯಲ್ಲಿ ಅಥವಾ ಪ್ರಾಣಿಯಲ್ಲಿರುವ ಶರೀರಕ ದೋಷ ಅಥವಾ ಅಪೂರ್ಣತೆ ಎಂದರ್ಥ. ಅದು ಜನರಲ್ಲಿರುವ ಆತ್ಮೀಯವಾದ ಕುಂದುಕೊರತೆಗಳು ಮತ್ತು ದೋಷಗಳನ್ನು ಸಹ ಸೂಚಿಸುತ್ತದೆ.

  • ಕೆಲವೊಂದು ಬಲಿಯಾಗಗಳಿಗೆ, ಯಾವ ಕಳಂಕ ಅಥವಾ ದೋಷವಿಲ್ಲದ ಪ್ರಾಣಿಯನ್ನು ಯಜ್ಞವಾಗಿ ಅರ್ಪಿಸಬೇಕೆಂದು ಯೆಹೋವ ದೇವರು ಇಸ್ರಾಯೇಲರಿಗೆ ಆಜ್ಞಾಪಿಸಿದನು.
  • ಯೇಸು ಕ್ರಿಸ್ತನು ಯಾವ ಪಾಪವಿಲ್ಲದ ಒಂದು ಪರಿಪೂರ್ಣವಾದ ಬಲಿಯೆಂದು ಇದು ತೋರಿಸುತ್ತಿದೆ.
  • ಕ್ರಿಸ್ತನಲ್ಲಿ ವಿಶ್ವಾಸಿಗಳು ತನ್ನ ರಕ್ತದಲ್ಲಿ ತೊಳೆಯಲ್ಪಟ್ಟಿದ್ದಾರೆ ಮತ್ತು ಅವರು ಯಾವ ಕಳಂಕ ಇಲ್ಲದವರೆಂದು ಪರಿಗಣಿಸಲ್ಪಟ್ಟಿದ್ದಾರೆ.
  • ಸಂದರ್ಭಕ್ಕೆ ಅನುಸಾರವಾಗಿ, ಈ ಪದವನ್ನು “ದೋಷ” ಅಥವಾ “ಪಾಪ” ಅಥವಾ “ಅಪೂರ್ಣತೆ” ಎಂದು ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ನಂಬಿಕೆ, ಶುದ್ಧ, ಬಲಿ (ಯಜ್ಞ), ಪಾಪ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3971, H8400, H8549, G3470

ಕಳುಹಿಸು, ಕಳುಹಿಸುವುದು, ಕಳುಹಿಸಿದೆ, ಕಳುಹಿಸುತ್ತಾಯಿರುವುದು, ಹೊರ ಕಳುಹಿಸು, ಹೊರ ಕಳುಹಿಸುವುದು, ಹೊರ ಕಳುಹಿಸಿದೆ, ಹೊರ ಕಳುಹಿಸುತ್ತಾ ಇರುವುದು

# ಪದದ ಅರ್ಥವಿವರಣೆ:

“ಕಳುಹಿಸುವುದು” ಎಂದರೆ ಯಾವುದಾದರೊಂದು ಸ್ಥಳಕ್ಕೆ ಹೋಗುವುದಕ್ಕೆ ಯಾವುದಾದರೊಂದನ್ನು ಅಥವಾ ಯಾರಾದರೊಬ್ಬರನ್ನು ಪ್ರೇರೇಪಿಸು ಎಂದರ್ಥ. ಯಾರಾದರೊಬ್ಬರನ್ನು “ಹೊರ ಕಳುಹಿಸು” ಎಂದರೆ ಒಬ್ಬ ವ್ಯಕ್ತಿ ಒಂದು ದಂಡಯಾತ್ರೆಯಲ್ಲಿ ಅಥವಾ ಒಂದು ಮಿಶನ್.ನಲ್ಲಿ ಹೋಗುವುದಕ್ಕೆ ಹೇಳುವುದು ಎಂದರ್ಥ.

  • ಅನೇಕಬಾರಿ “ಹೊರ ಕಳುಹಿಸಲ್ಪಟ್ಟ” ಒಬ್ಬ ವ್ಯಕ್ತಿ ಒಂದು ವಿಶೇಷವಾದ ಕೆಲಸವನ್ನು ಮಾಡುವುದಕ್ಕೆ ನೇಮಿಸಲ್ಪಟ್ಟಿರುತ್ತಾನೆ.
  • “ಮಳೆಯನ್ನು ಕಳುಹಿಸು” ಅಥವಾ “ವಿಪತ್ತನ್ನು ಕಳುಹಿಸು” ಎನ್ನುವ ಮಾತುಗಳಿಗೆ “ಬರುವಂತೆ ಮಾಡು” ಎಂದರ್ಥವಾಗಿರುತ್ತದೆ. ಈ ರೀತಿಯ ಮಾತುಗಳನ್ನು ಈ ಕಾರ್ಯಗಳೆಲ್ಲಾ ನಡೆಯುವುದಕ್ಕೆ ದೇವರೇ ಕಾರಣವಾಗಿರುತ್ತರೆಂದು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತವೆ.
  • “ಕಳುಹಿಸು” ಎನ್ನುವ ಪದವನ್ನು “ವಾಕ್ಯವನ್ನು ಕಳುಹಿಸು” ಅಥವಾ “ಸಂದೇಶವನ್ನು ಕಳುಹಿಸು” ಎನ್ನುವ ಮಾತುಗಳಲ್ಲಿ ಉಪಯೋಗಿಸಲ್ಪಟ್ಟಿರುತ್ತದೇ, ಈ ಮಾತಿಗೆ ಇನ್ನೊಬ್ಬರಿಗೆ ಹೇಳುವುದಕ್ಕೆ ಯಾರಿಗಾದರೋಬ್ಬರಿಗೆ ಒಂದು ಸಂದೇಶವನ್ನು ಹೇಳುವುದು ಎಂದರ್ಥವಾಗಿರುತ್ತದೆ.
  • “ಯಾವುದಾದರೊಂದಿಗೆ ಯಾರಾದರೊಬ್ಬರನ್ನು “ಕಳುಹಿಸುವುದು” ಎಂದರೆ ಯಾರಿಗಾದರೊಬ್ಬರಿಗೆ ಆ ವಸ್ತುವನ್ನು “ಕೊಡುವುದು” ಎಂದರ್ಥವಾಗಿರುತ್ತದೆ, ಯಾರಾದರೊಬ್ಬರು ಇದನ್ನು ಹೊಂದಿಕೊಳ್ಳುವದಕ್ಕೋಸ್ಕರ ಸ್ವಲ್ಪ ದೂರಕ್ಕೆ ಕಳುಹಿಸುವುದಾಗಿರುತ್ತದೆ.
  • ಯೇಸುವನ್ನು ತಂದೆಯಾದ ದೇವರು ತನ್ನ ಜನರನ್ನು ರಕ್ಷಿಸುವುದಕ್ಕೆ ಮತ್ತು ವಿಮೋಚಿಸುವುದಕ್ಕೆ ಈ ಭೂಲೋಕಕ್ಕೆ ಕಳುಹಿಸಿದ್ದಾನೆಂದು ಸೂಚಿಸುವುದಕ್ಕೆ ಆತನು “ನನ್ನನ್ನು ಕಳುಹಿಸಿದ” ಎನ್ನುವ ಪದವನ್ನು ಹೆಚ್ಚಾಗಿ ಉಪಯೋಗಿಸಿದ್ದರು. ಇದನ್ನು “ಆಳಾಗಿರುವ ವ್ಯಕ್ತಿ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ನೇಮಿಸು, ವಿಮೋಚಿಸು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H935, H1540, H1980, H2199, H2904, H3318, H3474, H3947, H4916, H4917, H5042, H5130, H5375, H5414, H5674, H6963, H7368, H7725, H7964, H7971, H7972, H7993, H8421, H8446, G782, G375, G630, G649, G652, G657, G1026, G1032, G1544, G1599, G1821, G3333, G3343, G3936, G3992, G4311, G4341, G4369, G4842, G4882

ಕಳ್ಳ, ಕಳ್ಳರು, ಕದಿ, ಕದಿಯುವುದು, ಕದ್ದಿದೆ, ದರೋಡೆಕಾರ, ದರೋಡೆಕಾರರು, ಕಳ್ಳತನ, ಕಳ್ಳತನ ಮಾಡುವುದು

# ಸತ್ಯಾಂಶಗಳು:

“ಕಳ್ಳ” ಎನ್ನುವ ಪದವು ಇತರ ಜನರಿಂದ ಅಸ್ತಿಯನ್ನು ಅಥವಾ ಹಣವನ್ನು ಕದಿಯುವ ವ್ಯಕ್ತಿಯನ್ನು ಸೂಚಿಸುತ್ತದೆ. “ಕಳ್ಳ” ಎನ್ನುವ ಪದಕ್ಕೆ “ಕಳ್ಳರು” ಎನ್ನುವ ಪದವು ಬಹುವಚನವಾಗಿರುತ್ತದೆ. “ದರೋಡೆಕಾರ” ಎನ್ನುವ ಪದವು ಅನೇಕಬಾರಿ ಒಬ್ಬ ವ್ಯಕ್ತಿ ಕದಿಯುವ ಜನರನ್ನು ಬೆದರಿಸುವ ವ್ಯಕ್ತಿಯನ್ನು ಅಥವಾ ಭೌತಿಕವಾಗಿ ಹಾನಿಯನ್ನುಂಟು ಮಾಡುವ ವ್ಯಕ್ತಿಯನ್ನು ಸೂಚಿಸುತ್ತದೆ.

  • ದರೋಡೆಕಾರರಿಂದ ಧಾಳಿಗೆ ಗುರಿಯಾಗಿರುವ ಯೆಹೂದ್ಯ ಮನುಷ್ಯನ ಮೇಲೆ ಪ್ರೀತಿ ತೋರಿಸಿರುವ ಸಮಾರ್ಯ ಮನುಷ್ಯನ ಕುರಿತಾಗಿ ಯೇಸು ಒಂದು ಸಾಮ್ಯವನ್ನು ಹೇಳಿದನು. ದರೋಡೆಕಾರರು ಯೆಹೂದ್ಯ ಮನುಷ್ಯನನ್ನು ಹೊಡೆದು, ತನ್ನ ಬಳಿ ಇರುವ ಹಣವನ್ನು ಮತ್ತು ಬಟ್ಟೆಗಳನ್ನು ಕದಿಯುವುದಕ್ಕೆ ಮುಂಚಿತವಾಗಿ ಅವನನ್ನು ಹೊಡೆದು, ಗಾಯಪಡಿಸಿ ಹೋಗಿದ್ದರು.
  • ಕಳ್ಳಲು ಮತ್ತು ದರೋಡೆಕಾರರು ಕದಿಯುವುದಕ್ಕೆ ಜನರಿಗೆ ಗೊತ್ತಿಲ್ಲದಂತೆ ಆಕಸ್ಮಿಕವಾಗಿ ಬರುತ್ತಾರೆ, ಅನೇಕಬಾರಿ ಅವರು ಮಾಡುವ ಕ್ರಿಯೆಗಳನ್ನು ಮರೆಯಾಗಿಡುವುದಕ್ಕೆ ಕತ್ತಲೆಯಲ್ಲಿಯೇ ಮಾಡುತ್ತಾರೆ.
  • ಅಲಂಕಾರಿಕ ಭಾವನೆಯಲ್ಲಿ ಹೊಸ ಒಡಂಬಡಿಕೆಯಲ್ಲಿ ಸೈತಾನನನ್ನು ಕದಿಯಲು, ಕೊಲ್ಲಲು ಮತ್ತು ನಾಶನ ಮಾಡುವ ಕಳ್ಳನಾಗಿ ವಿವರಿಸುತ್ತದೆ. ಇದಕ್ಕೆ ಅರ್ಥವೇನೆಂದರೆ ಸೈತಾನನ ಮುಂದಾಲೋಚನೆ ಏನೆಂದರೆ ದೇವರ ಜನರನ್ನು ದೇವರಿಗೆ ವಿಧೇಯತೆ ತೋರಿಸುವುದನ್ನು ನಿಲ್ಲಿಸುವ ಯತ್ನವಾಗಿರುತ್ತದೆ. ಒಂದುವೇಳೆ ಈ ಕಾರ್ಯವನ್ನು ಮಾಡುವುದರಲ್ಲಿ ಅವನು ಯಶಸ್ವಿಯಾದರೆ, ದೇವರು ತನ್ನ ಜನರಿಗಾಗಿ ಇಟ್ಟಿರುವ ಒಳ್ಳೇಯ ವಿಷಯಗಳನ್ನು ಸೈತಾನನು ಕದಿಯುತ್ತಾನೆ.
  • ಆಕಸ್ಮಿಕವಾಗಿ ಜನರಿಂದ ಕದಿಯುವುದಕ್ಕೆ ಬರುವ ಕಳ್ಳನ ಹಾಗೆಯೇ ಯೇಸುವು ತನ್ನ ಎರಡನೇ ಬರೋಣದಲ್ಲಿ ಆಕಸ್ಮಿಕವಾಗಿ ಬರುವನೆಂದು ಕಳ್ಳನಿಗೆ ಹೋಲಿಸಿದ್ದಾನೆ. ಜನರು ಎದುರುನೋಡದ ಸಮಯದಲ್ಲಿ ಕಳ್ಳನು ಯಾವರೀತಿ ಬರುತ್ತಾನೋ, ಹಾಗೆಯೇ ಜನರು ಎದುರುನೋಡದ ಸಮಯದಲ್ಲಿ ಯೇಸುವು ಹಿಂದಿರುಗಿ ಬರುತ್ತಾನೆ.

(ಈ ಪದಗಳನ್ನು ಸಹ ನೋಡಿರಿ : ಆಶೀರ್ವದಿಸು, ಅಪರಾಧ, ಶಿಲುಬೆಗೆ ಹಾಕುವುದು, ಕತ್ತಲು, ನಾಶಕ, ಶಕ್ತಿ, ಸಮಾರ್ಯ, ಸೈತಾನ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1214, H1215, H1416, H1589, H1590, H1980, H6530, H6782, H7703, G727, G1888, G2417, G2812, G3027

ಕಾನೂನು, ಕಾನೂನುಗಳು, ಕಾನೂನು ಕೊಡುವವರು, ಕಾನೂನು ಉಲ್ಲಂಘನೆ ಮಾಡುವವರು, ಮೊಕದ್ದಮೆ, ನ್ಯಾಯವಾದಿ, ನಿಯಮ, ನಿಯಮ ಮಾಡಲಾಗಿದೆ, ನಿಯಮಗಳು

# ಪದದ ಅರ್ಥವಿವರಣೆ:

“ಕಾನೂನು” ಎನ್ನುವುದು ನ್ಯಾಯವಾದ ನಿಯಮವಾಗಿರುತ್ತದೆ, ಇದು ಸಹಜವಾಗಿ ಅಧಿಕಾರದಲ್ಲಿರುವ ಒಬ್ಬ ವ್ಯಕ್ತಿಯಿಂದ ಬರೆಯಲ್ಪಟ್ಟಿರುತ್ತದೆ ಮತ್ತು ಜಾರಿಗೆ ಮಾಡಲಾಗಿರುತ್ತದೆ. “ನಿಯಮ” ಎನ್ನುವುದು ಒಂದು ನಡತೆಗೆ ಮತ್ತು ಒಂದು ನಿರ್ಣಯವನ್ನು ತೆಗೆದುಕೊಳ್ಳುವುದಕ್ಕೆ ಮಾರ್ಗದರ್ಶನವಾಗಿರುತ್ತದೆ.

  • “ಕಾನೂನು” ಮತ್ತು “ನಿಯಮ” ಎನ್ನುವ ಎರಡು ಪದಗಳು ಒಬ್ಬ ವ್ಯಕ್ತಿಯ ನಡತೆಗೆ ಮಾರ್ಗದರ್ಶನ ಮಾಡುವ ಒಂದು ಸಾಧಾರಣವಾದ ನಿಬಂಧನೆ ಅಥವಾ ನಂಬಿಕೆಯನ್ನು ಸೂಚಿಸುತ್ತವೆ.
  • “ಕಾನೂನು” ಎನ್ನುವ ಪದದ ಅರ್ಥಕ್ಕು ಮತ್ತು “ಮೋಶೆ ಧರ್ಮಶಾಸ್ತ್ರ” ಎನ್ನುವುದಕ್ಕೂ ತುಂಬಾ ವ್ಯತ್ಯಾಸವಿರುತ್ತದೆ, ಮೋಶೆ ಧರ್ಮಶಾಸ್ತ್ರವು ದೇವರು ಇಸ್ರಾಯೇಲ್ಯರಿಗೆ ಕೊಟ್ಟ ಆಜ್ಞೆಗಳನ್ನು ಮತ್ತು ಕಟ್ಟಳೆಗಳನ್ನು ಸೂಚಿಸುತ್ತದೆ.
  • ಸಾಧಾರಣವಾದ ಕಾನೂನನ್ನು ಸೂಚಿಸಿದಾಗ, “ಕಾನೂನು” ಎನ್ನುವ ಪದವನ್ನು “ನಿಯಮ” ಅಥವಾ “ಸಾಧಾರಣವಾದ ನಿಬಂಧನೆ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಕಾನೂನು, ಕಾನೂನು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1285, H1881, H1882, H2706, H2708, H2710, H4687, H4941, H6310, H7560, H8451, G1785, G3548, G3551, G4747

ಕಾನೂನು, ಕಾನೂನುಗಳು, ಕಾನೂನು ಮಾಡಲಾಗಿದೆ

# ಪದದ ಅರ್ಥವಿವರಣೆ:

ಕಾನೂನು ಅಂದರೆ ಜಾಹೀರನಾಮೆ ಅಥವಾ ಜನರೆಲ್ಲರಿಗೆ ಬಹಿರಂಗವಾಗಿ ಪ್ರಕಟಿಸುವ ನ್ಯಾಯಶಾಸನ.

  • ದೇವರ ನ್ಯಾಯಶಾಸನಗಳು ಕೂಡ ಕಾನೂನುಗಳೇ, ಕಟ್ಟಳೆಗಳು, ಅಥವಾ ಆಜ್ಞೆಗಳು.
  • ನ್ಯಾಯಶಾಸನಗಳಿಗೆ ಮತ್ತು ಆಜ್ಞೆಗಳಿಗೆ ಒಳಗಾಗುವಂತೆಯೇ, ಕಾನೂನುಗಳಿಗೆ ತಪ್ಪದೇ ವಿಧೇಯತೆ ತೋರಿಸಬೇಕು.
  • ಮನುಷ್ಯ ಆಡಳಿತಗಾರನಿಂದ ಉಂಟಾದ ಕಾನೂನಿಗೆ ಉದಾಹರಣೆ ಅಗಸ್ತನಿಂದ ಉಂಟಾದ ಪ್ರಕಟನೆ ಎಂದು ಹೇಳಬಹುದು. ಅದೇನಂದರೆ ರೋಮಾ ಸಾಮ್ರಾಜ್ಯದಲ್ಲಿ ನಿವಾಸವಾಗಿರುವ ಪ್ರತಿಯೊಬ್ಬರು ತಮ್ಮ ಸ್ವಂತ ಊರುಗಳಿಗೆ ಹೋಗಿ ಜನಗಣತಿಯಲ್ಲಿ ತಮ್ಮ ಹೆಸರುಗಳನ್ನು ಬರೆಸಬೇಕೆಂದು ಆಜ್ಞಾಪಿಸಿದ್ದನು.
  • ಎನಾದರೊಂದು ಕಾನೂನಿಗೆ ಒಳಪಡಬೇಕು ಎನ್ನುವುದಕ್ಕೆ ಕೊಡಲ್ಪಟ್ಟ ಆಜ್ಞೆಗೆ ತಪ್ಪದೇ ವಿಧೇಯತೆ ತೋರಿಸಬೇಕು ಎಂದರ್ಥ. ಇದನ್ನು “ಆದೇಶ” ಅಥವಾ “ಆಜ್ಞೆ” ಅಥವಾ “ಔಪಚಾರಿಕವಾದ ಅಗತ್ಯ” ಅಥವಾ “ಬಹಿರಂಗವಾಗಿ ನ್ಯಾಯಶಾಸನ ಮಾಡು” ಎಂದೂ ಅನುವಾದ ಮಾಡಬಹುದು.
  • ನಡೆಯಬೇಕೆಂದು “ಕಾನೂನು ಮಾಡಲಾಗಿದೆ” ಎನ್ನುವುದಕ್ಕೆ “ಇದು ಖಂಡಿತವಾಗಿ ನಡೆಯುತ್ತದೆ” ಅಥವಾ “ಇದು ನಿರ್ಣಯಿಸಲ್ಪಟ್ಟಿದೆ ಮತ್ತು ಇದನ್ನು ಯಾರೂ ಮಾರ್ಪಡಿಸುವುದಕ್ಕಾಗುವುದಿಲ್ಲ” ಅಥವಾ “ಇದು ನಡೆಯಬೇಕೆಂದು ನಿರ್ಬಂಧವಿಲ್ಲದೆ ಪ್ರಕಟಿಸಲಾಗಿದೆ” ಎಂದರ್ಥ.

(ಈ ಪದಗಳನ್ನು ಸಹ ನೋಡಿರಿ : ಆಜ್ಞೆ, ಪ್ರಕಟಿಸು, ಧರ್ಮಶಾಸ್ತ್ರ, ಸಾರು

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H559, H633, H1697, H5715, H1504, H1510, H1881, H1882, H1696, H2706, H2708, H2710, H2711, H2782, H2852, H2940, H2941, H2942, H3791, H3982, H4055, H4406, H4941, H5407, H5713, H6599, H6680, H7010, H8421, G1378

ಕಾನೂನುಬದ್ಧ, ಕಾನೂನುಬದ್ಧವಾಗಿ, ಕಾನೂನುರಹಿತವಾದ, ಕಾನೂನುಬದ್ಧವಲ್ಲದ, ಧರ್ಮರಹಿತ, ಅಧರ್ಮ

# ಪದದ ಅರ್ಥವಿವರಣೆ:

“ಕಾನೂನುಬದ್ಧ” ಎನ್ನುವ ಪದವು ಕಾನಾನು ಪ್ರಕಾರವಾಗಿ ಅಥವಾ ಇತರ ಅಗತ್ಯತೆಯ ಪ್ರಕಾರವಾಗಿ ಅನುಮತಿ ಹೊಂದುವ ಯಾವುದಾದರೊಂದನ್ನು ಸೂಚಿಸುತ್ತದೆ. ಈ ಪದಕ್ಕೆ “ಕಾನೂನುರಹಿತ” ಎಂದು ವಿರುದ್ಧಾತ್ಮಕ ಪದವಾಗಿರುತ್ತದೆ, ಇದಕ್ಕೆ “ಕಾನೂನುಬದ್ಧವಲ್ಲದ” ಎಂದರ್ಥ.

  • ಸತ್ಯವೇದದಲ್ಲಿ ದೇವರ ನೈತಿಕತೆಯ ಆಜ್ಞೆಯಿಂದ ಅಥವಾ ಮೋಶೆಯ ಧರ್ಮಶಾಸ್ತ್ರದಿಂದ ಮತ್ತು ಇತರ ಯೆಹೂದ್ಯ ಕಾನೂನುಗಳಿಂದ ಅನುಮತಿ ಕೊಡಲ್ಪಟ್ಟಿರುವುದೇ “ಕಾನೂನುಬದ್ಧ”ವಾಗಿರುತ್ತದೆ, “ಕಾನೂನುರಹಿತವಾದದ್ದು” ಯಾವುದಾದರೂ ಆ ಕಾನೂನುಗಳಿಂದ “ಅನುಮತಿ ಹೊಂದಿರುವುದಿಲ್ಲ”.
  • “ಕಾನೂನುಬದ್ಧವಾಗಿ” ಯಾವುದಾದರೊಂದನ್ನು ಮಾಡುವುದು ಎಂದರೆ ಅದನ್ನು “ಸರಿಯಾದ ವಿಧಾನದಲ್ಲಿ” ಮಾಡುವುದು ಎಂದರ್ಥ ಅಥವಾ “ಸರಿಯಾದ ಪದ್ಧತಿಯಲ್ಲಿ ಮಾಡುವುದು” ಎಂದರ್ಥ.
  • ಯೆಹೂದ್ಯ ಕಾನೂನುಗಳಲ್ಲಿ ಕಾನೂನುಬದ್ಧವಾಗಿರುವುದು ಅಥವಾ ಕಾನೂನುರಹಿತವಲ್ಲದ್ದು ಎಂದು ಪರಿಗಣಿಸಿದ ಅನೇಕ ವಿಷಯಗಳು ಒಬ್ಬರಿಗೊಬ್ಬರು ಪ್ರೀತಿಸುವುದರ ಕುರಿತಾಗಿ ದೇವರ ನ್ಯಾಯಶಾಸನಗಳೊಂದಿಗಿರುವ ಒಪ್ಪಂದದಲ್ಲಿಲ್ಲ.
  • ಸಂದರ್ಭಾನುಸಾರವಾಗಿ, “ಕಾನೂನುಬದ್ಧ” ಎನ್ನುವ ಮಾತನ್ನು ಅನುವಾದ ಮಾಡುವ ವಿಧಾನದಲ್ಲಿ “ಅನುಮತಿಸಿದೆ” ಅಥವಾ “ದೇವರ ಧರ್ಮಶಾಸ್ತ್ರದ ಪ್ರಕಾರ” ಅಥವಾ “ನಮ್ಮ ಕಾನೂನುಗಳನ್ನು ಅನುಸರಿಸುವುದರ ಮೂಲಕ” ಅಥವಾ “ಸರಿಯಾಗಿ” ಅಥವಾ "ಯೋಗ್ಯವಾಗಿ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • “ಇದು ಕಾನೂನುಬದ್ಧವೊ?” ಎನ್ನುವ ಮಾತನ್ನು “ನಮ್ಮ ಕಾನೂನುಗಳು ಅನುಮತಿ ಕೊಡುತ್ತಿದ್ದವೋ?” ಅಥವಾ “ಯಾವುದಾದರೊಂದರ ವಿಷಯವನ್ನು ನಮ್ಮ ಕಾನೂನುಗಳು ಅನುಮತಿಸುತ್ತವೋ?” ಎಂದೂ ಅನುವಾದ ಮಾಡಬಹುದು.

“ಕಾನೂನುರಹಿತ” ಮತ್ತು “ಕಾನೂನುವಲ್ಲದ” ಎನ್ನುವ ಪದಗಳು ಕಾನೂನು ಉಲ್ಲಂಘಿಸಿ ಮಾಡುವ ಕ್ರಿಯೆಗಳನ್ನು ವಿವರಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತವೆ.

  • ಹೊಸ ಒಡಂಬಡಿಕೆಯಲ್ಲಿ “ಕಾನೂನುವಲ್ಲದ” ಎನ್ನುವ ಪದವು ದೇವರ ಆಜ್ಞೆಗಳನ್ನು ಉಲ್ಲಂಘಿಸುವುದನ್ನು ಮಾತ್ರವೇ ಸೂಚಿಸುವುದಕ್ಕೆ ಉಪಯೋಗಿಸದೇ, ಯೆಹೂದ್ಯರು ಮಾಡಿದ ನಿಯಮಗಳನ್ನು ಅಥವಾ ಕಾನೂನುಗಳನ್ನು ಉಲ್ಲಂಘಿಸುವುದನ್ನೂ ಸೂಚಿಸುತ್ತವೆ.
  • ಅನೇಕ ವರ್ಷಗಳಾದಮೇಲೆ, ಯೆಹೂದ್ಯರು ತಮಗೆ ದೇವರು ಕೊಟ್ಟ ಕಾನೂನುಗಳನ್ನು ಸೇರಿಸಿರುತ್ತಾರೆ. ಯೆಹೂದ್ಯರ ನಾಯಕರು ತಾವು ಮಾಡಿದ ಕಾನೂನುಗಳಿಗೆ ನಿಶ್ಚಯಪಡಿಸದಿದ್ದರೆ ಅವರು ಅದನ್ನು “ಕಾನೂನುರಹಿತ” ಎಂದು ಕರೆಯುತ್ತಾರೆ.
  • ಯೇಸು ಮತ್ತು ತನ್ನ ಶಿಷ್ಯರು ಸಬ್ಬತ್ ದಿನದಂದು ಕಾಳುಗಳನ್ನು ಕಿತ್ತುಕೊಳ್ಳುವಾಗ, ಫರಿಸಾಯರು ಆವರು ಮಾಡುತ್ತಿರುವದನ್ನು ‘ಕಾನೂನುರಹಿತವೆಂದು” ಆರೋಪಿಸಿದರು, ಯಾಕಂದರೆ ಆ ದಿನದಂದು ಅದನ್ನು ಮಾಡುವುದು ಯೆಹೂದ್ಯರ ಕಾನೂನುಗಳನ್ನು ಉಲ್ಲಂಘನೆ ಮಾದುವುದಾಗಿರುತ್ತದೆ.
  • ಅಪವಿತ್ರವಾದ ಆಹಾರ ಪದಾರ್ಥಗಳನ್ನು ತಿನ್ನುವುದು “ಕಾನೂನುರಹಿತವಾದದ್ದು” ಎಂದು ಪೇತ್ರನು ಹೇಳಿದಾಗ, ಆತನ ಅರ್ಥವೇನೆಂದರೆ ಆತನು ಆಹಾರ ಪದಾರ್ಥಗಳನ್ನು ತಿಂದಾಗ, ದೇವರು ಇಸ್ರಾಯೇಲ್ಯರಿಗೆ ಕೆಲವೊಂದು ಆಹಾರ ಪದಾರ್ಥಗಳನ್ನು ತಿನ್ನಬಾರದೆಂದು ಹೇಳಿದವುಗಳ ಕುರಿತಾಗಿ ಕೊಟ್ಟ ಕಾನೂನುಗಳನ್ನು ಆತನು ಉಲ್ಲಂಘನೆ ಮಾಡುತ್ತಿದ್ದಾನೆಂದು ಅದರ ಅರ್ಥವಾಗಿರುತ್ತದೆ.

“ಕಾನೂನುರಹಿತ” ಎನ್ನುವ ಪದವು ಒಬ್ಬ ವ್ಯಕ್ತಿ ಧರ್ಮಶಾಸ್ತ್ರಕ್ಕೆ ಅಥವಾ ನಿಯಮಗಳಿಗೆ ವಿಧೇಯನಾಗದ ವ್ಯಕ್ತಿಯನ್ನು ವಿವರಿಸುತ್ತದೆ. ಒಂದು ದೇಶವು ಅಥವಾ ಜನರ ಗುಂಪು “ಕಾನೂನುರಹಿತವಾದ” ಸ್ಥಿತಿಯಲ್ಲಿದ್ದಾಗ, ಆ ದೇಶದಲ್ಲಿ ಅವಿಧೇಯತೆಯು, ತಿರಸ್ಕಾರವು, ಅನೈತಿಕತೆಯು ವ್ಯಾಪಕವಾಗಿರುತ್ತದೆ.

  • ಕಾನೂನುರಹಿತವಾದ ಒಬ್ಬ ವ್ಯಕ್ತಿ ತಿರಸ್ಕಾರ ಮಾಡುವವನಾಗಿ, ದೇವರ ಧರ್ಮಶಾಸ್ತ್ರಕ್ಕೆ (ಅಥವಾ ಆಜ್ಞೆಗಳಿಗೆ) ಅವಿಧೇಯನಾಗಿರುತ್ತಾನೆ.
  • ಅಂತ್ಯ ದಿನಗಳಲ್ಲಿ “ಅಧರ್ಮ ಪುರುಷನು” ಅಥವಾ “ಕಾನೂನುರಹಿತವಾದ ವ್ಯಕ್ತಿ” ಬರುತ್ತಾನೆಂದು ಅಪೊಸ್ತಲನಾದ ಪೌಲನು ಬರೆದಿದ್ದಾನೆ, ಇವನು ಅನೇಕ ದುಷ್ಟ ಕಾರ್ಯಗಳನ್ನು ಮಾಡುವುದಕ್ಕೆ ಸೈತಾನನಿಂದ ಪ್ರಭಾವಿಸಲ್ಪಡುತ್ತಾನೆ.

# ಅನುವಾದ ಸಲಹೆಗಳು:

  • “ಕಾನೂನುವಲ್ಲದ” ಎನ್ನುವ ಮಾತನ್ನು “ಕಾನೂನುರಹಿತವಾದ” ಅಥವಾ “ಕಾನೂನು ಉಲ್ಲಂಘಿಸುವ” ಎನ್ನುವ ಅರ್ಥಗಳು ಬರುವ ಮಾತುಗಳನ್ನು ಉಪಯೋಗಿಸಿ ಅನುವಾದ ಮಾಡಬಹುದು.

  • “ಕಾನೂನುರಹಿತ” ಎನ್ನುವ ಮಾತನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ, “ಅನುಮತಿ ಹೊಂದಿರುವುದಿಲ್ಲ” ಅಥವಾ “ದೇವರ ಧರ್ಮಶಾಸ್ತ್ರಾನುಸಾರವಲ್ಲದ” ಅಥವಾ “ನಮ್ಮ ಕಾನೂನುಗಳಿಗೆ ಸರಿಹೊಂದದ” ಎನ್ನುವ ಪದಗಳನ್ನು ಸೇರಿಸಬಹುದು.

  • “ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿ” ಎನ್ನುವ ಮಾತಿಗೆ “ಕಾನೂನುರಹಿತ” ಎನ್ನುವ ಒಂದೇ ಅರ್ಥವನ್ನು ಹೊಂದಿರುತ್ತದೆ.

  • “ಧರ್ಮರಹಿತ” ಎನ್ನುವ ಮಾತನ್ನು “ತಿರಸ್ಕಾರ ಮಾಡುವುದು” ಅಥವಾ “ಅವಿಧೇಯನು” ಅಥವಾ “ಧರ್ಮವನ್ನು ಉಲ್ಲಂಘಿಸುವವನು” ಎಂದೂ ಅನುವಾದ ಮಾಡಬಹುದು.

  • “ಅಧರ್ಮ” ಎನ್ನುವ ಮಾತನ್ನು “ಯಾವ ಕಾನೂನುಗೆ ವಿಧೇಯತೆ ತೋರಿಸಿದ” ಅಥವಾ “(ದೇವರ ಧರ್ಮಶಾಸ್ತ್ರ ವಿರುದ್ಧವಾಗಿ) ತಿರಸ್ಕಾರ ಮಾಡುವುದು” ಎಂದೂ ಅನುವಾದ ಮಾಡಬಹುದು.

  • “ಅಧರ್ಮ ಪುರುಷ” ಎನ್ನುವ ಮಾತನ್ನು “ಧರ್ಮಶಾಸ್ತ್ರದಲ್ಲಿರುವ ಯಾವುದಕ್ಕೂ ವಿಧೇಯನಾಗದ ಪುರುಷ” ಅಥವಾ “ದೇವರ ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿ ತಿರಸ್ಕಾರ ಮಾಡುವ ವ್ಯಕ್ತಿ” ಎಂದೂ ಅನುವಾದ ಮಾಡಬಹುದು.

  • ಒಂದುವೇಳೆ ಸಾಧ್ಯವಾದರೆ ಈ ಮಾತಿನಲ್ಲಿರುವ “ಧರ್ಮ” ಎನ್ನುವ ಪರಿಕಲ್ಪನೆಯನ್ನು ಇಟ್ಟುಕೊಂಡಿರುವುದು ಪ್ರಾಮುಖ್ಯ.

  • “ಕಾನೂನುವಲ್ಲದ” ಎನ್ನುವ ಪದಕ್ಕಿರುವ ಅರ್ಥವು ಈ ಪದದಲ್ಲಿರುವ ಅರ್ಥಕ್ಕೂ ತುಂಬಾ ವ್ಯತ್ಯಾಸವಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಧರ್ಮ, ಕಾನೂನು, ಮೋಶೆ, ಸಬ್ಬತ್)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H4941, H6530, H6662, H7386, H7990, G111, G113, G266, G458, G459, G1832, G3545

ಕಾಮ, ಕಾಮಾಸಕ್ತಿ, ಕಾಮಗೊಂಡಿದೆ, ಕಾಮುಕ, ಕಾಮಾಶಕ್ತಿ

# ಪದದ ಅರ್ಥವಿವರಣೆ:

ಕಾಮ ಎನ್ನುವುದು ಅತೀ ಬಲವಾದ ಬಯಕೆಯಾಗಿರುತ್ತದೆ, ಸಹಜವಾಗಿ ಯಾವುದಾದರೊಂದು ಪಾಪತ್ಮಕವಾಗಿ ಅಥವಾ ಅನೈತಿಕವಾಗಿರುವುದಕ್ಕೆ ಬಯಸುವ ಸಂದರ್ಭವಾಗಿರುತ್ತದೆ. ಕಾಮ ಎಂದರೆ ಕಾಮವನ್ನು ಹೊಂದಿರುವುದು ಎಂದರ್ಥ.

  • ಸತ್ಯವೇದದಲ್ಲಿ “ಕಾಮ” ಎನ್ನುವ ಪದವು ಸಹಜವಾಗಿ ಒಬ್ಬರು ತನ್ನ ಹೆಂಡತಿಯನ್ನಾಗಲಿ ಅಥವಾ ಗಂಡನನ್ನಾಗಲಿ ಬಿಟ್ಟು ಬೇರೆಯವರೊಂದಿಗೆ ಲೈಂಗಿಕವಾಗಿ ಕೂಡಬೇಕೆನ್ನುವ ಆಸೆಯನ್ನು ಸೂಚಿಸುತ್ತದೆ.
  • ವಿಗ್ರಹಗಳ ಆರಾಧನೆಯನ್ನು ಸೂಚಿಸುವುದಕ್ಕೆ ಅಲಂಕಾರಿಕ ಭಾವನೆಯಲ್ಲಿ ಈ ಪದವನ್ನು ಕೆಲವೊಂದುಬಾರಿ ಉಪಯೋಗಿಸಲಾಗಿದೆ.
  • ಸಂದರ್ಭಾನುಸಾರವಾಗಿ “ಕಾಮ” ಎನ್ನುವ ಪದವನ್ನು “ತಪ್ಪಾದ ಆಸೆ” ಅಥವಾ “ಬಲವಾದ ಅಸೆ” ಅಥವಾ “ತಪ್ಪಾದ ಲೈಂಗಿಕವಾದ ಆಸೆ” ಅಥವಾ “ಬಲವಾದ ಅನೈತಿಕಯುಳ್ಳ ಅಸೆ” ಅಥವಾ “ಪಾಪ ಮಾಡುವುದಕ್ಕೆ ಬಲವಾದ ಆಸೆ” ಎಂದೂ ಅನುವಾದ ಮಾಡಬಹುದು.

“ಕಾಮತುರತೆಯಿಂದಿರುವುದು” ಎನ್ನುವ ಮಾತನ್ನು “ತಪ್ಪಾದ ಆಸೆ” ಅಥವಾ “ಯಾವುದಾದರೊಂದರ ಕುರಿತಾಗಿ ಅನೈತಿಕವಾಗಿ ಆಲೋಚನೆ ಮಾಡುವುದು” ಅಥವಾ “ಅನೈತಿಕವಾದ ಆಲೋಚನೆ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ವ್ಯಭಿಚಾರ, ಸುಳ್ಳು ದೇವರು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H183, H185, H310, H1730, H2181, H2183, H2530, H5178, H5375, H5689, H5691, H5869, H7843, H8307, H8378, G766, G1937, G1938, G1939, G1971, G2237, G3715, G3806

ಕಾಲ, ಕಾಲನುಗುಣವಾಗಿ, ಕಾಲಗಳು, ಅಕಾಲಾನುಗುಣವಾಗಿ

# ಸತ್ಯಾಂಶಗಳು:

ಸತ್ಯವೇದದಲ್ಲಿ “ಕಾಲ” ಎನ್ನುವ ಪದವನ್ನು ಅನೇಕಬಾರಿ ಒಂದು ಪ್ರತ್ಯೇಕವಾದ ಋತುವನ್ನು ಅಥವಾ ಕೆಲವೊಂದು ನಿರ್ದಿಷ್ಟವಾದ ಸಂಘಟನೆಗಳು ನಡೆಯುವ ಕಾಲ ವ್ಯವಧಿಯನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಉಪಯೋಗಿಸಿರುತ್ತಾರೆ. ಈ ಪದಕ್ಕಿರುವ ಅರ್ಥವು “ವಯಸ್ಸು” ಅಥವಾ “ಯುಗ” ಅಥವಾ “ಋತು” ಎನ್ನುವ ಪದಗಳ ಅರ್ಥಗಳಿಗೆ ಸಮಾನವಾಗಿರುತ್ತವೆ.

  • ದಾನಿಯೇಲ ಮತ್ತು ಪ್ರಕಟನೆ ಗ್ರಂಥಗಳಲ್ಲಿ “ಕಾಲ” ಎನ್ನುವುದರ ಕುರಿತಾದ ಸಂದರ್ಭ ಬಂದರೆ ಭೂಲೋಕದ ಮೇಲಕ್ಕೆ ಬರುವ ಮಹಾ ತೊಂದರೆ ಅಥವಾ ಶ್ರಮೆಗಳ ಕುರಿತಾಗಿ ಮಾತನಾಡುತ್ತದೆ.
  • “ಕಾಲ, ಕಾಲಗಳು, ಮತ್ತು ಅರ್ಧ ಕಾಲ” ಎನ್ನುವ ಮಾತಿನಲ್ಲಿ “ಕಾಲ” ಎನ್ನುವ ಪದಕ್ಕೆ “ವರ್ಷ” ಎಂದರ್ಥ. ಈ ಪದವು ಈ ಯುಗಾಂತದ ಅಂತ್ಯದಲ್ಲಿ ಮಹಾ ಶ್ರಮೆಗಳಲ್ಲಿ ಕಾಲದಲ್ಲಿ ಮೂರುವರೆ ವರ್ಷಗಳನ್ನು ಸೂಚಿಸುತ್ತದೆ.
  • “ಕಾಲ” ಎನ್ನುವುದು “ಸಂದರ್ಭ” ಎನ್ನುವ ಅರ್ಥವನ್ನು ಸೂಚಿಸುತ್ತದೆ, ಉದಾಹರಣೆಗೆ, “ಮೂರನೇ ಸಲ” ಎನ್ನುವ ಮಾತನ್ನು ನೋಡಬಹುದು. “ಅನೇಕಬಾರಿ” ಎನ್ನುವ ಮಾತಿಗೆ “ಅನೇಕ ಸಂದರ್ಭಗಳಲ್ಲಿ” ಎಂದೆನ್ನುವ ಅರ್ಥವೂ ಬರುತ್ತದೆ.
  • “ಖಚಿತವಾದ “ಸಮಯದಲ್ಲಿ” ಎನ್ನುವ ಮಾತಿಗೆ ಆಲಸ್ಯ ಮಾಡದೇ ಎದುರುನೋಡಿದ ಸಮಯಕ್ಕೆ ಬರುವುದು ಎಂದರ್ಥವಾಗಿರುತ್ತದೆ.
  • ಸಂದರ್ಭಾನುಸಾರವಾಗಿ, “ಕಾಲ” ಎನ್ನುವ ಪದವನ್ನು “ಋತು” ಅಥವಾ “ಕಾಲ ವ್ಯವಧಿ” ಅಥವಾ “ಕ್ಷಣ” ಅಥವಾ “ಸಂಭವ” ಎಂದೂ ಅನುವಾದ ಮಾಡಬಹುದು.
  • “ಕಾಲಗಳು ಮತ್ತು ಸಂದರ್ಭಗಳು” ಎನ್ನುವ ಮಾತು ಒಂದೇ ಆಲೋಚನೆಯನ್ನು ಎರಡುಸಲ ವ್ಯಾಖ್ಯಾನಿಸಿ ಹೇಳುವ ಅಲಂಕಾರಿಕ ಮಾತಾಗಿರುತ್ತದೆ. ಇದನ್ನು “ನಿರ್ದಿಷ್ಟ ಕಾಲ ವ್ಯವಧಿಗಳಲ್ಲಿ ಕೆಲವೊಂದು ನಿರ್ದಿಷ್ಟವಾದ ಸಂಭವನೆಗಳು ನಡೆಯುತ್ತವೆ” ಎಂದೂ ಅನುವಾದ ಮಾಡಬಹುದು.” (ನೋಡಿರಿ: ಅಂಗಿಯ ಮೇಲೆ ಹಾಕಿಕೊಳ್ಳುವ ವಸ್ತ್ರಗಳು

(ಈ ಪದಗಳನ್ನು ಸಹ ನೋಡಿರಿ : ವಯಸ್ಸು, ಶ್ರಮೆಗಳು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H116, H227, H268, H310, H570, H865, H1697, H1755, H2165, H2166, H2233, H2465, H3027, H3117, H3118, H3119, H3259, H3427, H3706, H3967, H4150, H4279, H4489, H4557, H5331, H5703, H5732, H5750, H5769, H6049, H6235, H6256, H6258, H6440, H6471, H6635, H6924, H7105, H7138, H7223, H7272, H7281, H7637, H7651, H7655, H7659, H7674, H7992, H8027, H8032, H8138, H8145, H8462, H8543, G744, G530, G1074, G1208, G1441, G1597, G1626, G1909, G2034, G2119, G2121, G2235, G2250, G2540, G3379, G3461, G3568, G3763, G3764, G3819, G3956, G3999, G4178, G4181, G4183, G4218, G4277, G4287, G4340, G4455, G5119, G5151, G5305, G5550, G5551, G5610

ಕಾವಲು ಗೋಪುರ, ಕಾವಲು ಗೋಪುರಗಳು, ಗೋಪುರ

# ಪದದ ಅರ್ಥವಿವರಣೆ:

“ಕಾವಲು ಗೋಪುರ” ಎನ್ನುವ ಈ ಮಾತು ಅಪಾಯವು ಸಂಭವಿಸುತ್ತದೆಯೆಂದು ಕಾವಲುಗಾರರು ನೋಡುವುದಕ್ಕೆ ಕಟ್ಟಿಕೊಂಡಿರುವ ಒಂದು ದೊಡ್ಡ ಎತ್ತರವಾದ ನಿರ್ಮಾಣವನ್ನು ಸೂಚಿಸುತ್ತದೆ. ಈ ಗೋಪುರಗಳು ಅನೇಕಬಾರಿ ಕಲ್ಲುಗಳಿಂದ ನಿರ್ಮಿಸಲ್ಪಡುತ್ತವೆ.

  • ಭೂಮಾಲೀಕರು ಕೆಲವೊಂದುಸಲ ತಮ್ಮ ಹೊಲಗಳನ್ನು ಕಾಯುವುದಕ್ಕೆ ಮತ್ತು ತಮ್ಮ ಹೊಲಗಳಲ್ಲಿ ಬೆಳೆಯುವ ಬೆಳೆಗಳನ್ನು ಯಾರೂ ಕದಿಯದಂತೆ ಕಾಪಾಡಿಕೊಳ್ಳುವುದಕ್ಕೆ ಕಾವಲು ಗೋಪುರಗಳನ್ನು ನಿರ್ಮಿಸಿಕೊಳ್ಳುತ್ತಾರೆ.
  • ಗೋಪುರಗಳಲ್ಲಿ ಅನೇಕಬಾರಿ ಕೊಠಡಿಗಳನ್ನು ನಿರ್ಮಿಸುತ್ತಾರೆ, ಯಾಕಂದರೆ ಕಾವಲುಗಾರರು ಅಥವಾ ಕುಟುಂಬದವರು ಆ ಕೊಠಡಿಗಳಲ್ಲಿ ನಿವಾಸ ಮಾಡುತ್ತಿದ್ದರು, ಇದರಿಂದ ಅವರು ರಾತ್ರಿ ಹಗಲು ಬೆಳೆಗಳಿಗೆ ಕಾವಲು ಇರುತ್ತಿದ್ದರು.
  • ಪಟ್ಟಣಗಳಿಗಾಗಿ ನಿರ್ಮಿಸಿರುವ ಕಾವಲು ಗೋಪುರಗಳನ್ನು ಪಟ್ಟಣದ ಗೋಡೆಗಳಿಗಿಂತ ಇನ್ನೂ ಎತ್ತರವಾಗಿ ನಿರ್ಮಿಸಿರುತ್ತಾರೆ, ಇದರಿಂದ ಕಾವಲುಗಾರರು ಪಟ್ಟಣವನ್ನು ಧಾಳಿ ಮಾಡುವುದಕ್ಕೆ ಬರುತ್ತಿರುವ ಶತ್ರುಗಳನ್ನು ನೋಡುವುದಕ್ಕೆ ಸಾಧ್ಯವಾಗುತ್ತದೆ.
  • “ಕಾವಲು ಗೋಪುರ” ಎನ್ನುವ ಮಾತನ್ನು ಶತ್ರುಗಳಿಂದ ರಕ್ಷಿಸಿಕೊಳ್ಳುವ ಚಿಹ್ನೆಯಾಗಿಯೂ ಉಪಯೋಗಿಸಲ್ಪಟ್ಟಿರುತ್ತದೆ. (ನೋಡಿರಿ: ರೂಪಕಾಲಂಕಾರ

(ಈ ಪದಗಳನ್ನು ಸಹ ನೋಡಿರಿ : ವಿರೋಧಿ, ವೀಕ್ಷಿಸು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H803, H969, H971, H975, H1785, H2918, H4024, H4026, H4029, H4692, H4707, H4869, H6076, H6438, H6836, H6844, G4444

ಕಿರೀಟ, ಕಿರೀಟಗಳು, ಕಿರೀಟ ಧರಿಸಲ್ಪಟ್ಟಿದೆ

# ಪದದ ಅರ್ಥವಿವರಣೆ

ಅರಸರು ಮತ್ತು ರಾಣಿಯರು ತಮ್ಮ ತಲೆಯ ಮೇಲೆ ಧರಿಸುತ್ತಿದ್ದ ಅಲಂಕಾರಿಸಲ್ಪಟ್ಟ ವೃತ್ತಾಕಾರದ ಆಭರಣವನ್ನು ಕಿರೀಟ ಎನ್ನುತ್ತಾರೆ. “ಕಿರೀಟ ಇಡುವುದು” ಎನ್ನುವ ಪದಕ್ಕೆ ಪಟ್ಟಾಭಿಷೇಕ ಮಾಡುವುದು ಎಂದರ್ಥ; ಇದನ್ನು ಅಲಂಕಾರಿಕ ರೂಪದಲ್ಲಿ “ಗೌರವಿಸುವುದು” ಎಂದರ್ಥ.

  • ಸಹಜವಾಗಿ ಕಿರೀಟಗಳನ್ನು ಬೆಳ್ಳಿ ಅಥವಾ ಬಂಗಾರದಲ್ಲಿ ಮಾಡುತ್ತಾರೆ ಮತ್ತು ಅದಕ್ಕೆ ಪಚ್ಚೆಗಳು ಮತ್ತು ಪದ್ಮರಾಗ ಎಂತಹ ಅಮೂಲ್ಯವಾದ ರತ್ನಗಳಿಂದ ಅಲಂಕರಿಸಲ್ಪಟ್ಟಿರುತ್ತದೆ.
  • ಅರಸನ ಅಧಿಕಾರ ಮತ್ತು ಸಂಪತ್ತನ್ನು ಸೂಚಿಸಲು ಕಿರೀಟ ಒಂದು ಚಿಹ್ನೆಯಾಗಿತ್ತು.
  • ಆದರೆ ಇದಕ್ಕೆ ವಿರುದ್ಧವಾಗಿ ರೋಮಾ ಸೈನಿಕರು ಯೇಸುವಿನ ತಲೆಯ ಮೇಲೆ ಮುಳ್ಳಿನ ಮುಕುಟವನ್ನು ಇಟ್ಟರು. ಇದು ಆತನನ್ನು ಅಪಹಾಸ್ಯ ಮಾಡಲು ಮತ್ತು ಆತನನ್ನು ನೋಯಿಸಲು ಮಾಡಿದರು.
  • ಪ್ರಾಚೀನ ಕಾಲದಲ್ಲಿ, ಕ್ರೀಡಾಕಾರರು ಜಯವನ್ನು ಹೊಂದಿದಾಗ ಅವರಿಗೆ ಆಲಿವ್ ಕೊಂಬೆಗಳಿಂದ ಮಾಡಿರುವ ಕಿರೀಟವನ್ನು ಬಹುಕರಿಸುತ್ತಿದ್ದರು. ತಿಮೊಥೆಯನಿಗೆ ಬರೆದ ಎರಡನೆಯ ಪತ್ರಿಕೆಯಲ್ಲಿ ಅಪೊಸ್ತಲನಾದ ಪೌಲನು ಈ ಕಿರೀಟವನ್ನು ಕುರಿತಾಗಿ ಹೇಳುತ್ತಿದ್ದಾನೆ.
  • “ಕಿರೀಟ ಇಡುವುದು” ಎನ್ನುವ ಪದವನ್ನು ಅಲಂಕಾರಿಕ ರೂಪದಲ್ಲಿ ಯಾರನ್ನಾದರೂ ಗೌರವಿಸಲು ಎಂದರ್ಥ. ನಾವು ದೇವರನ್ನು ಗೌರವಿಸಬೇಕಾದರೆ ಆತನಿಗೆ ವಿಧೇಯರಾಗಿರಬೇಕು ಮತ್ತು ಬೇರೆಯವರ ಮುಂದೆ ಆತನನ್ನು ಕೊಂಡಡಬೇಕು. ಇದು ಆತನಿಗೆ ಕಿರೀಟವನ್ನಿಟ್ಟು ಮತ್ತು ಆತನು ಅರಸನೆಂದು ನಾವು ಒಪ್ಪಿಕೊಂಡಿದ್ದೇವೆಂದುತೋರಿಸುತ್ತದೆ.
  • ಪೌಲನು ತನ್ನ ಸಹ ವಿಶ್ವಾಸಿಗಳನ್ನು ತನ್ನ “ಆನಂದ ಮತ್ತು ಕಿರೀಟ” ಎಂದು ಸಂಬೋಧಿಸಿದ್ದಾರೆ. ಈ ವಿಶ್ವಾಸಿಗಳು ಹೇಗೆ ದೇವರಿಗೆ ನಂಬಿಗಸ್ತರಾಗಿದ್ದು ಆತನಿಗೆ ಸೇವೆ ಮಾಡುತ್ತಿದ್ದರೆಂದು, ಮತ್ತು ಅದು ಪೌಲನಿಗೆ ದೊಡ್ಡ ಆಶಿರ್ವಾದ ಮತ್ತು ಗೌರವವೆಂದು ಹೇಳಲು ಈ ಮಾತಿನಲ್ಲಿ “ಕಿರೀಟ” ಎನ್ನುವ ಪದವನ್ನು ಅಲಂಕಾರಿಕ ರೂಪದಲ್ಲಿ ಉಪಯೋಗಿಸಿದ್ದಾರೆ.
  • “ಕಿರೀಟ” ಎನ್ನುವ ಪದವನ್ನು ಅಲಂಕಾರಿಕ ರೂಪದಲ್ಲಿ ಉಪಯೋಗಿಸಲ್ಪಟ್ಟಿದ್ದರೆ ಅದನ್ನು “ಬಹುಮಾನ” ಅಥವಾ “ಗೌರವ” ಅಥವಾ “ಪುರಸ್ಕಾರ” ಎಂದು ಅನುವಾದ ಮಾಡಬಹುದು.
  • “ಕಿರೀಟ ಇಡುವುದು” ಎನ್ನುವ ಪದಗಳನ್ನು “ಗೌರವಿಸಲು” ಅಥವಾ “ಅಲಂಕರಿಸಲು” ಎಂದು ಅನುವಾದ ಮಾಡಬಹುದು.
  • ಒಂದು ವ್ಯಕ್ತಿಗೆ “ಕಿರೀಟವನ್ನು ಧರಿಸಲ್ಪಟ್ಟಿದೆ” ಎಂದು ಹೇಳಲು “ಅವನ ತಲೆಯ ಮೇಲೆ ಕಿರೀಟವನ್ನು ಇಟ್ಟಿದರು” ಎಂದು ಅನುವಾದ ಮಾಡಬಹುದು.
  • “ಮಹಿಮೆ ಮತ್ತು ಮಹತ್ವವನ್ನು ಆತನಿಗೆ ಕಿರೀಟವನ್ನಾಗಿ ಧರಿಸಲು ಮಾಡಿದರು” ಎಂದು ಹೇಳಲು “ಆತನ ಮೇಲೆ ಮಹಿಮೆ ಮತ್ತು ಮಹತ್ವವು ನೆಲಗೊಂಡಿತ್ತು” ಅಥವಾ “ಆತನಿಗೆ ಮಹಿಮೆ ಮತ್ತು ಮಹತ್ವ ಸಲ್ಲಿಸಿದರು” ಎಂದು ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಮಹಿಮೆ, ಅರಸ, ಆಲಿವ್)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2213, H3803, H3804, H4502, H5145, H5849, H5850, H6936, G1238, G4735, G4737

ಕುಟುಂಬ, ಕುಟುಂಬಗಳು

# ಪದದ ಅರ್ಥವಿವರಣೆ

“ಕುಟುಂಬ” ಎನ್ನುವ ಪದವು ರಕ್ತ ಸಂಬಂಧ ಹೊಂದಿರುವ ಒಂದು ಗುಂಪಿನ ಜನರಿಗೆ ಸೂಚಿಸುತ್ತದೆ, ಅವರಲ್ಲಿ ತಂದೆ, ತಾಯಿ, ಮತ್ತು ತಮ್ಮ ಮಕ್ಕಳು ಇರಬಹುದು. ಕೆಲವೊಮ್ಮೆ ಅದರಲ್ಲಿ ಅಜ್ಜ, ಅಜ್ಜಿ, ಮೊಮ್ಮಕ್ಕಳು, ಚಿಕ್ಕಪ್ಪ, ಚಿಕ್ಕಮ್ಮ ಎಂಬುವ ಬೇರೆ ಸಂಬಂಧಿಕರು ಇರುತ್ತಾರೆ.

  • ಇಬ್ರಿ ಕುಟುಂಬ ತಮ್ಮ ಆಚಾರಗಳನ್ನು ಆರಾಧನೆ ಮತ್ತು ಬೋಧನೆಯ ಮೂಲಕ ಪರಂಪರೆಯಾಗಿ ಮುಂದುವರೆದು ಹೋಗುತ್ತಿರುವ ಧಾರ್ಮಿಕ ಸಮುದಾಯವಾಗಿತ್ತು.
  • ಸಹಜವಾಗಿ ತಂದೆ ಕುಟುಂಬದ ಮುಖ್ಯಸ್ಥರಾಗಿ ಇರುತ್ತಿದ್ದರು.
  • ಕುಟುಂಬದಲ್ಲಿ ಕೆಲವೊಮ್ಮೆ ಸೇವಕರು, ಉಪಪತ್ನಿಯರು ಮತ್ತು ಪರದೇಶೀಯರು ಸಹ ಇರುತ್ತಿದ್ದರು.
  • ತಂದೆತಾಯಿ ಮತ್ತು ಮಕ್ಕಳನ್ನು ಮಾತ್ರವೇ ಅಲ್ಲದೆ ಬೇರೆಯವರನ್ನು ಸಹ ಸೂಚಿಸಲು ಕೆಲವು ಭಾಷೆಗಳಲ್ಲಿ “ಕುಲ” ಅಥವಾ “ಮನೆತನ” ಎಂಬ ವಿಶಾಲ ಅರ್ಥವುಳ್ಳ ಪದಗಳನ್ನು ಹೊಂದಿರುತ್ತದೆ.
  • “ಕುಟುಂಬ” ಎನ್ನುವ ಪದವನ್ನು ಆತ್ಮೀಯವಾಗಿ ಸಂಬಂಧ ಹೊಂದಿರುವವರನ್ನು ಅಂದರೆ ಯೇಸು ಕ್ರಿಸ್ತನನ್ನು ನಂಬಿದರ ಕಾರಣವಾಗಿ ದೇವರ ಕುಟುಂಬದಲ್ಲಿ ಭಾಗವಾಗಿರುವವರನ್ನು ಸೂಚಿಸುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಕುಲ, ಪೂರ್ವಜರು, ಮನೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1, H251, H272, H504, H1004, H1121, H2233, H2859, H2945, H3187, H4138, H4940, H5387, H5712, G1085, G3614, G3624, G3965

ಕುಡಿದ, ಕುಡುಕ

# ಸತ್ಯಾಂಶಗಳು:

“ಕುಡಿದ” ಎನ್ನುವ ಪದಕ್ಕೆ ಮದ್ಯಪಾನವನ್ನು ಹೆಚ್ಚಾಗಿ ಕುಡಿಯುವದರಿಂದ ಮಾದಕವಾಗುವುದನ್ನು ಸೂಚಿಸುತ್ತದೆ.

“ಕುಡುಕ” ಎನ್ನುವ ಪದವು ಪದೇ ಪದೇ ಹೆಚ್ಚಾಗಿ ಕುಡಿಯುವ ವ್ಯಕ್ತಿಯನ್ನು ಸೂಚಿಸುತ್ತದೆ. ಈ ರೀತಿಯ ವ್ಯಕ್ತಿಯನ್ನು “ಮದ್ಯಪಾನಿ” ಕುಡುಕನು ಎಂದು ಸೂಚಿಸುತ್ತಾರೆ.

  • ಮದ್ಯಪಾನಿಯಗಳನ್ನು ಕುಡಿಯಬಾರದೆಂದು ಸತ್ಯವೇದವು ವಿಶ್ವಾಸಿಗಳಿಗೆ ಹೇಳುತ್ತದೆ, ಆದರೆ ದೇವರ ಪವಿತ್ರಾತ್ಮನಿಂದ ನಿಯಂತ್ರಿಸಲ್ಪಡಬೇಕೆಂದು ಹೇಳುತ್ತದೆ.
  • ಮದ್ಯಪಾನ ಸೇವನೆ ಮೂರ್ಖತನವೆಂದು ಮತ್ತು ಅದು ಇತರ ವಿಧಾನಗಳಲ್ಲಿ ಪಾಪ ಮಾಡುವುದಕ್ಕೆ ಒಬ್ಬ ವ್ಯಕ್ತಿಯನ್ನು ಪ್ರಭಾವಗೊಳಿಸುತ್ತದೆಯೆಂದು ಸತ್ಯವೇದವು ಬೋಧಿಸುತ್ತದೆ.
  • “ಕುಡಿದ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಅಜಾಗರೂಕ” ಅಥವಾ “ಮಾದಕ ವ್ಯಕ್ತಿ” ಅಥವಾ “ಮದ್ಯಪಾನವನ್ನು ಹೆಚ್ಚಾಗಿ ಕುಡಿಯುವುದು” ಅಥವಾ “ಹುದುಗಿಸಿದ ಪಾನೀಯದೊಂದಿಗೆ ತುಂಬಿರುವುದು” ಎನ್ನುವ ಮಾತುಗಳನ್ನು ಉಪಯೋಗಿಸುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ದ್ರಾಕ್ಷಾರಸ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H5433, H5435, H7301, H7302, H7910, H7937, H7941, H7943, H8354, H8358, G3178, G3182, G3183, G3184, G3630, G3632

ಕುದುರೆ ಸವಾರ, ಅಶ್ವಾರೋಹಿಗಳು

# ಪದದ ಅರ್ಥವಿವರಣೆ:

ಸತ್ಯವೇದ ಕಾಲಗಳಲ್ಲಿ “ಅಶ್ವಾರೋಹಿಗಳು: ಎನ್ನುವ ಪದವನ್ನು ಯುದ್ಧದಲ್ಲಿ ಕುದುರೆಗಳನ್ನು ಸವಾರಿ ಮಾಡುವ ವ್ಯಕ್ತಿಗಳನ್ನು ಸೂಚಿಸುತ್ತದೆ.

  • ಈ ಪದವು ಕುದುರೆಗಳ ಮೇಲೆ ಏರಿ ಸವಾರಿ ಮಾಡುವ ಪುರುಷರನ್ನೇ ಸೂಚಿಸುತ್ತಿದ್ದರೂ, ಕುದುರೆಗಳು ಎಳೆಯುವ ರಥಗಳಲ್ಲಿ ಕುಳಿತು ನಡೆಸುವ ಯುದ್ಧ ವೀರರನ್ನು ಕೂಡ “ಅಶ್ವಾರೋಹಿಗಳು” ಎಂದು ಕರೆಯುತ್ತಾರೆ,
  • ಇಸ್ರಾಯೇಲ್ಯರು ಯೆಹೋವನ ಮೇಲೆ ಆಧಾರಪಡುವುದಕ್ಕಿಂತ ತಮ್ಮ ಸ್ವಂತ ಬಲದ ಮೇಲೆ ಹೆಚ್ಚಾಗಿ ಅಧಾರ ಪಡುತ್ತಾ ಯುದ್ಧದಲ್ಲಿ ಬಳಸುವ ಕುದುರೆಗಳಲ್ಲಿ ನಂಬಿಕೆಯನ್ನಿಡುತ್ತಿದ್ದರು.
  • ಈ ಪದವನ್ನು “ಕುದುರೆ ಸವಾರುಗಾರರು” ಅಥವಾ “ಕುದುರೆಗಳ ಮೇಲೆ ಮನುಷ್ಯರು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ರಥ, ಕುದುರೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H6571, H7395, G2460

ಕುದುರೆ, ಕುದುರೆಗಳು, ಯುದ್ಧ ಕುದುರೆ, ಯುದ್ಧ ಕುದುರೆಗಳು, ಕುದುರೆಯ ಹಿಂಭಾಗ

# ಪದದ ಅರ್ಥವಿವರಣೆ:

ಕುದುರೆ ಎನ್ನುವುದು ಸತ್ಯವೇದದಲ್ಲಿ ಹೇಳಲ್ಪಟ್ಟಿರುವ ನಾಲ್ಕು ಕಾಲುಗಳಿರುವ ದೊಡ್ಡದಾದ ಪ್ರಾಣಿಯನ್ನು ಬಹುಶಃ ಜನರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವುದಕ್ಕೆ ಸಾರಿಗೆಯಾಗಿ ಮತ್ತು ಹೊಲ ಕೆಲಸಗಳಿಗೆ ಉಪಯೋಗಿಸುತ್ತಿದ್ದರು.

  • ಕೆಲವೊಂದು ಕುದುರೆಗಳನ್ನು ಎತ್ತಿನ ಗಾಡಿಗಳಿಗೆ ಕಟ್ಟುತ್ತಾರೆ, ಉಳಿದ ಕುದುರೆಗಳು ಒಬ್ಬೊಬ್ಬರು ಪ್ರಯಾಣ ಮಾಡುವುದಕ್ಕೆ ಉಪಯೋಗಿಸಲ್ಪಡುತ್ತಿದ್ದವು.
  • ಕುದುರೆಗಳಿಗೆ ಯಾವಾಗಲೂ ಲಗಾಮು ಗಳನ್ನು ಹಾಕಿರುತ್ತಾರೆ, ಇದರಿಂದ ಅವು ಚೆನ್ನಾಗಿ ಮಾರ್ಗದರ್ಶನವನ್ನು ಹೊಂದುತ್ತವೆ.
  • ಸತ್ಯವೇದದಲ್ಲಿ ಕುದುರೆಗಳು ತುಂಬಾ ಬೆಲೆಯುಳ್ಳ ಆಸ್ತಿಯನ್ನಾಗಿ ಮತ್ತು ಸಂಪತ್ತನ್ನಾಗಿ ಪರಿಗಣಿಸುತ್ತಿದ್ದರು, ಪ್ರಾಮುಖ್ಯವಾಗಿ ಯುದ್ದದಲ್ಲಿ ಅವುಗಳನ್ನು ಉಪಯೋಗಿಸುತ್ತಿದ್ದರು. ಉದಾಹರಣೆಗೆ, ಅರಸನಾದ ಸೊಲೊಮೋನನ ಹೆಚ್ಚಿನ ಸಂಪತ್ತು ಏನೆಂದರೆ ಅವನು ಹೊಂದಿರುವ ಸಾವಿರಾರು ಕುದುರೆಗಳು ಮತ್ತು ರಥಗಳಾಗಿದ್ದವು.
  • ಕುದುರೆಗೆ ಸಮಾನವಾದ ಹೋಲಿಕೆಯಲ್ಲಿರುವ ಪ್ರಾಣಿಗಳು ಕತ್ತೆಗಳು ಮತ್ತು ಹೆಸರುಗತ್ತೆಯೂ ಆಗಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ರಥ, ಕತ್ತೆ, ಸೊಲೊಮೋನ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H47, H5483, H5484, H6571, H7409, G2462

ಕುರಿದನಗಳು

# ಸತ್ಯಾಂಶಗಳು:

“ಕುರಿದನಗಳು” ಎನ್ನುವ ಪದವು ಆಹಾರವನ್ನು ಕೊಡುವುದಕ್ಕೆ ಮತ್ತು ಇತರ ಉಪಯೋಗಕರವಾದ ಪದಾರ್ಥಗಳನ್ನು ಕೊಡುವುದಕ್ಕೆ ಬೆಳೆಸಲ್ಪಡುವ ಪ್ರಾಣಿಗಳನ್ನು ಸೂಚಿಸುತ್ತದೆ. ಕೆಲವೊಂದು ವಿಧವಾದ ಕುರಿದನಗಳಿಗೆ ಕೂಡ ಕೆಲಸ ಮಾಡುವ ಪ್ರಾಣಿಗಳನ್ನಾಗಿ ತರಬೇತಿ ಮಾಡುತ್ತಾರೆ.

  • ಅನೇಕ ವಿಧವಾದ ಕುರಿದನಗಳಲ್ಲಿ ಕುರಿಗಳು, ಜಾನುವಾರುಗಳು, ಮೇಕೆಗಳು, ಕುದುರೆಗಳು ಮತ್ತು ಕತ್ತೆಗಳು ಒಳಗೊಂಡಿರುತ್ತವೆ.
  • ಸತ್ಯವೇದ ಸಮಯಗಳಲ್ಲಿ ಸಂಪತ್ತನ್ನು ಒಬ್ಬ ವ್ಯಕ್ತಿಗೆ ಎಷ್ಟು ಕುರಿದನಗಲಿದ್ದಾವೆನ್ನುವದರ ಮೇಲೆ ಲೆಕ್ಕ ಮಾಡುತ್ತಿದ್ದರು.
  • ಕುರಿದನಗಳನ್ನು ಉಣ್ಣೆ, ಹಾಲು, ಚೀಜ್, ಮನೆಯ ಸಾಧನೆಗಳನ್ನು ಮತ್ತು ವಸ್ತ್ರಗಳನ್ನು ಇನ್ನೂ ಇತ್ಯಾದಿಗಳನ್ನು ಉತ್ಪಾದಿಸುವುದಕ್ಕೆ ಉಪಯೋಗಿಸುತ್ತಿದ್ದರು.
  • ಈ ಪದವನ್ನು “ಕೃಷಿ ಪ್ರಾಣಿಗಳು” ಎಂದೂ ಅನುವಾದ ಮಾಡಬಹುದು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಹಸು, ಎತ್ತು, ಕತ್ತೆ, ಮೇಕೆ, ಕುದುರೆ, ಕುರಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H929, H4399, H4735

ಕುರುಬ, ಕುರುಬರು, ಕಾಯುಕೊಂಡಿದ್ದೇನೆ, ಕಾಯುತ್ತಿರುವುದು

# ಪದದ ಅರ್ಥವಿವರಣೆ:

ಕುರುಬ ಎಂದರೆ ಕುರಿಗಳನ್ನು ಚೆನ್ನಾಗಿ ನೋಡಿಕೊಳ್ಳುವ ವ್ಯಕ್ತಿ ಎಂದರ್ಥ. “ಕುರುಬ” ಎನ್ನುವ ಪದಕ್ಕೆ ಕ್ರಿಯಾಪದವು ಕುರಿಗಳನ್ನು ಸಂರಕ್ಷಿಸುವುದು ಮತ್ತು ಅವುಗಳಿಗೆ ನೀರು ಆಹಾರಗಳನ್ನು ಒದಗಿಸಿಕೊಡುವುದು ಎಂದರ್ಥವಾಗಿರುತ್ತದೆ. ಕುರುಬರು ಕುರಿಗಳ ಮೇಲೆ ದೃಷ್ಟಿ ಸಾರಿರುತ್ತಾರೆ, ಅವರು ಅವುಗಳನ್ನು ಒಳ್ಳೇಯ ಆಹಾರ ಮತ್ತು ನೀರು ಇರುವ ಸ್ಥಳಗಳಿಗೆ ನಡೆಸಿಕೊಂಡು ಹೋಗುತ್ತಾ ಇರುತ್ತಾರೆ. ಕುರುಬರು ಕುರಿಗಳು ತಪ್ಪಿಹೋಗದಂತೆ ನೋಡಿಕೊಳ್ಳಬೇಕು ಮತ್ತು ಅವುಗಳನ್ನು ಅಡವಿ ಪ್ರಾಣಿಗಳಿಂದ ಸಂರಕ್ಷಿಸಬೇಕು.

  • ಜನರ ಆತ್ಮೀಯಕವಾದ ಅಗತ್ಯತೆಗಳನ್ನು ಪೂರೈಸುವುದಕ್ಕೆ ಸೂಚಿಸಲು ಈ ಪದವನ್ನು ಸತ್ಯವೇದದಲ್ಲಿ ಅನೇಕಬಾರಿ ರೂಪಕಾಲಂಕಾರವಾಗಿ ಉಪಯೋಗಿಸಿರುತ್ತಾರೆ. ಸತ್ಯವೇದದಲ್ಲಿ ದೇವರು ಜನರಿಗೆ ಹೇಳಿದ ವಿಷಯಗಳೆಲ್ಲವುಗಳನ್ನು ಬೋಧಿಸುವುದು ಮತ್ತು ಅವರು ನಡೆಯಬೇಕಾದ ಮಾರ್ಗದಲ್ಲಿ ಅವರನ್ನು ನಡೆಸುವುದು ಇದರಲ್ಲಿ ಒಳಗೊಂಡಿರುತ್ತದೆ.
  • ಹಳೇ ಒಡಂಬಡಿಕೆಯಲ್ಲಿ ದೇವರನ್ನು ತನ್ನ ಜನರ “ಕುರುಬ” ಎಂಬುದಾಗಿ ಕರೆಯಲ್ಪಟ್ಟಿದ್ದಾನೆ, ಯಾಕಂದರೆ ಆತನು ಅವರ ಎಲ್ಲಾ ಅಗತ್ಯತೆಗಳನ್ನು ಪೂರೈಸಿ, ಅವರನ್ನು ಸಂರಕ್ಷಿಸುತ್ತಿದ್ದನು. ಆತನು ಅವರನ್ನು ನಡೆಸಿ, ಅವರಿಗೆ ಮಾರ್ಗದರ್ಶನವನ್ನು ನೀಡಿದ್ದನು. (ನೋಡಿರಿ: ರೂಪಕಾಲಂಕಾರ
  • ಮೋಶೆ ಇಸ್ರಾಯೇಲ್ಯರಿಗೆ ಕುರುಬನಾಗಿದ್ದನು, ಆತನು ಅವರನ್ನು ಯೆಹೋವವನ್ನು ಆರಾಧಿಸುವದರಲ್ಲಿ ಆತ್ಮೀಯಕವಾಗಿ ನಡೆಸಿದ್ದನು ಮತ್ತು ಕಾನಾನ್ ಭೂಮಿಗೆ ತಮ್ಮ ಪ್ರಯಾಣದಲ್ಲಿ ಭೌತಿಕವಾಗಿಯೂ ನಡೆಸಿದ್ದನು.
  • ಹೊಸ ಒಡಂಬಡಿಕೆಯಲ್ಲಿ ಯೇಸು ತನ್ನನ್ನು ತಾನು “ಒಳ್ಳೇಯ ಕುರುಬ” ಎಂದು ಹೇಳಿಕೊಂಡಿದ್ದಾನೆ. ಸಭೆಯ ಮೇಲೆ “ಉನ್ನತ ಕುರುಬ” ಎಂಬುದಾಗಿ ಅಪೊಸ್ತಲನಾದ ಪೌಲನು ಕೂಡ ತನ್ನನ್ನು ತಾನು ಸೂಚಿಸಿಕೊಂಡಿದ್ದಾನೆ
  • ಹೊಸ ಒಡಂಬಡಿಕೆಯಲ್ಲಿ “ಕುರುಬ” ಎನ್ನುವ ಪದವನ್ನು ವಿಶ್ವಾಸಿಗಳ ಮೇಲೆ ಆತ್ಮೀಯಕವಾದ ನಾಯಕನಾಗಿರುವ ವ್ಯಕ್ತಿಯನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ. “ಪಾಸ್ಟರ್ (ಅಥವಾ ಸಭಾಪಾಲಕ)” ಎಂಬುದಾಗಿ ಅನುವಾದ ಮಾಡಲ್ಪಟ್ಟ ಪದವೂ “ಕುರುಬ” ಎಂಬುದಾಗಿ ಅನುವಾದ ಮಾಡಿದ ಈ ಪದವೂ ಒಂದೇಯಾಗಿರುತ್ತವೆ. ಹಿರಿಯರು ಮತ್ತು ಮೇಲ್ವೀಚಾರಕರು ಕೂಡ ಕುರುಬರು ಎಂದು ಕರೆಯಲ್ಪಟ್ಟಿರುತ್ತಾರೆ.

# ಅನುವಾದ ಸಲಹೆಗಳು:

  • ಇದನ್ನು ಅಕ್ಷರಾರ್ಥವಾಗಿ ಉಪಯೋಗಿಸಿದಾಗ, “ಕುರುಬ” ಎನ್ನುವ ಕ್ರಿಯಾ ಪದವನ್ನು “ಕುರಿಗಳನ್ನು ಕಾಯುವವನು” ಅಥವಾ “ಕುರಿಗಳ ಮೇಲೆ ಮೇಲ್ವೀಚಾರಕನು” ಎಂದೂ ಅನುವಾದ ಮಾಡಬಹುದು.
  • “ಕುರುಬ” ಎನ್ನುವ ವ್ಯಕ್ತಿಯನ್ನು “ಕುರಿಗಳನ್ನು ನೋಡಿಕೊಳ್ಳುವ ವ್ಯಕ್ತಿ” ಅಥವಾ “ಕುರಿಗಳ ವ್ಯಾಪಾರಿ” ಅಥವಾ “ಕುರಿಗಳ ಸಾಕುವಾತನು” ಎಂದೂ ಅನುವಾದ ಮಾಡಬಹುದು.
  • ರೂಪಕಾಲಂಕಾರವಾಗಿ ಈ ಪದವನ್ನು ಉಪಯೋಗಿಸಿದಾಗ, ಈ ಪದವನ್ನು ಅನುವಾದ ಮಾಡುವ ಅನೇಕವಾದ ವಿಧಾನಗಳಲ್ಲಿ “ಆತ್ಮೀಯಕವಾದ ಕುರುಬ” ಅಥವಾ “ಆತ್ಮೀಯಕವಾದ ನಾಯಕ” ಅಥವಾ “ಕುರುಬನ ಹಾಗೆ ಇರುವ ವ್ಯಕ್ತಿ” ಅಥವಾ “ಕುರುಬನು ತನ್ನ ಕುರಿಗಳನ್ನು ನೋಡಿಕೊಳ್ಳುವ ಹಾಗೆ ತನ್ನ ಜನರನ್ನು ನಡೆಸುವ ವ್ಯಕ್ತಿ” ಅಥವಾ “ದೇವರ ಕುರಿಗಳನ್ನು ನೋಡಿಕೊಳ್ಳುವ ವ್ಯಕ್ತಿ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • ಕೆಲವೊಂದು ಸಂದರ್ಭಗಳಲ್ಲಿ “ಕುರುಬ” ಎನ್ನುವ ಪದವನ್ನು “ನಾಯಕ” ಅಥವಾ “ಮಾರ್ಗದರ್ಶಿ” ಅಥವಾ “ಪಾಲನೆದಾರ” ಎಂದೂ ಅನುವಾದ ಮಾಡಬಹುದು.
  • “ಕುರುಬ” ಎನ್ನುವ ಪದಕ್ಕೆ ಆತ್ಮೀಯಕವಾದ ಮಾತನ್ನು “ಚೆನ್ನಾಗಿ ನೋಡಿಕೊಳ್ಳುವ” ಅಥವಾ “ಆತ್ಮೀಯಕವಾಗಿ ಪೋಷಿಸುವ” ಅಥವಾ “ಮಾರ್ಗದರ್ಶನ ಕೊಡುವ ಮತ್ತು ಬೋಧಿಸುವ” ಅಥವಾ “ನಡೆಸುವ ಮತ್ತು (ಕುರುಬನು ಕುರಿಯನ್ನು ನೋಡಿಕೊಳ್ಳುವ ಹಾಗೆಯೇ) ನೋಡಿಕೊಳ್ಳುವ” ವ್ಯಕ್ತಿ ಎಂದೂ ಅನುವಾದ ಮಾಡಬಹುದು.
  • ಅಲಂಕಾರಿಕ ಭಾಷೆಯಲ್ಲಿ ಉಪಯೋಗಿಸುವಾಗ, ಈ ಪದವನ್ನು ಅನುವಾದ ಮಾಡುವುದರಲ್ಲಿ “ಕುರುಬ” ಎನ್ನುವ ಪದಕ್ಕೆ ಅಕ್ಷರಾರ್ಥವಾದ ಪದವನ್ನು ಒಳಪಡಿಸುವುದು ಅಥವಾ ಉಪಯೋಗಿಸುವುದು ಉತ್ತಮ.

(ಈ ಪದಗಳನ್ನು ಸಹ ನೋಡಿರಿ : ನಂಬು, ಕಾನಾನ್, ಸಭೆ, ಮೋಶೆ, ಸಭಾಪಾಲಕ, ಕುರಿ, ಆತ್ಮ)

# ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 09:11 ಐಗುಪ್ತದಿಂದ ದೂರ ಪ್ರದೇಶದಲ್ಲಿರುವ ಅರಣ್ಯದಲ್ಲಿ ಮೋಶೆ ___ ಕುರುಬನಾಗಿದ್ದನು ___.
  • 17:02 ಬೆತ್ಲೆಹೇಮಿನಲ್ಲಿ ದಾವೀದನು ಕುರುಬನಾಗಿದ್ದನು. ಅನೇಕ ಸಂದರ್ಭಗಳಲ್ಲಿ ತನ್ನ ತಂದೆ ___ ಕುರಿಗಳನ್ನು ___ ಕಾಯುತ್ತಿರುವಾಗ, ತನ್ನ ___ ಕುರಿಗಳ ___ ಮೇಲೆ ಧಾಳಿ ಮಾಡಿದ ಸಿಂಹವನ್ನು ಮತ್ತು ಕರಡಿಯನ್ನು ಕೊಂದು ಹಾಕಿದನು.
  • 23:06 ಆ ರಾತ್ರಿಯಲ್ಲಿ ಅವರು ತಮ್ಮ ಹಿಂಡುಗಳನ್ನು ಕಾಯುತ್ತಿರುವಾಗ ಆಲ್ಲಿ ಕೆಲವುಮಂದಿ ___ ಕುರುಬರಿದ್ದರು ___.
  • 23:08 ದೂತರು ಅವರಿಗೆ ಹೇಳಿದ ಪ್ರಕಾರವೇ, ಅವರು ಶಿಶುವಾದ ಯೇಸು ಇರುವ ಸ್ಥಳಕ್ಕೆ ___ ಕುರುಬರು ___ ಬೇಗನೆ ಬಂದರು, ಅವರು ಅಲ್ಲಿಗೆ ಬಂದು ಆಹಾರದ ತೊಟ್ಟಿಯಲ್ಲಿ ಆತನನ್ನು ಮಲಗಿಸಿರುವುದನ್ನು ಕಂಡುಕೊಂಡರು.
  • ____30:03___ಈ ಜನರೆಲ್ಲರು ಕುರುಬನಿಲ್ಲದ ___ ಕುರಿಗಳಾಗಿದ್ದಾರೆ ___ ಎಂದು ಯೇಸು ಹೇಳಿದನು.

# ಪದ ಡೇಟಾ:

  • Strong's: H6629, H7462, H7469, H7473, G750, G4165, G4166

ಕುಲ, ಕುಲಗಳು, ಬುಡಕಟ್ಟು, ಬುಡಕಟ್ಟಿನವರು

# ಪದದ ಅರ್ಥವಿವರಣೆ:

ಕುಲ ಎಂದರೆ ಒಬ್ಬರೇ ಪೂರ್ವಜರಿಂದ ಬಂದಿರುವ ಸಂತಾನದವರಾಗಿರುವ ಜನರ ಗುಂಪಾಗಿರುತ್ತದೆ.

  • ಒಂದೇ ಕುಲದಿಂದ ಬಂದಿರುವ ಜನರು ಸಾಧಾರಣವಾಗಿ ಒಂದೇ ಭಾಷೆಯನ್ನು ಮತ್ತು ಸಂಸ್ಕೃತಿಯನ್ನು ಹಂಚಿಕೊಳ್ಳುತ್ತಾರೆ.
  • ಹಳೇ ಒಡಂಬಡಿಕೆಯಲ್ಲಿ ದೇವರು ಇಸ್ರಾಯೇಲ್ ಜನರನ್ನು ಹನ್ನೆರಡು ಕುಲಗಳಾಗಿ ವಿಭಾಗಿಸಿದ್ದರು. ಪ್ರತಿಯೊಂದು ಕುಲವು ಯಾಕೋಬನ ಗಂಡು ಮಕ್ಕಳಿಂದ ಅಥವಾ ಮೊಮ್ಮೊಕ್ಕಳಿಂದ ಬಂದ ಸಂತಾನದವರಾಗಿರುತ್ತಾರೆ.
  • ಕುಲ ಎನ್ನುವುದು ಒಂದು ದೇಶಕ್ಕಿಂತ ಚಿಕ್ಕದಾಗಿರುತ್ತದೆ, ಆದರೆ ಒಂದು ವಂಶಕ್ಕಿಂತ ದೊಡ್ಡದಾಗಿರುವುದು.

(ಈ ಪದಗಳನ್ನು ಸಹ ನೋಡಿರಿ : ವಂಶ, ದೇಶ, ಜನರ ಗುಂಪು, ಇಸ್ರಾಯೇಲಿನ ಹನ್ನೆರಡು ಕುಲಗಳು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H523, H4294, H7625, H7626, G1429, G5443

ಕುಲುಮೆ (ಧಗಧಗನೆ ಉರಿಯುವ ಬೆಂಕಿ)

# ಸತ್ಯಾಂಶಗಳು:

ಕುಲುಮೆ ಎಂದರೆ ವಸ್ತುಗಳನ್ನು ಹೆಚ್ಚಿನ ತಾಪದಲ್ಲಿ ಬಿಸಿ ಮಾಡಲು ಉಪಯೋಗಿಸುವ ದೊಡ್ಡ ಒಲೆ (ಓವೆನ್) ಯಾಗಿದೆ.

  • ಪ್ರಾಚೀನ ಕಾಲದಲ್ಲಿ, ಅಡುಗೆ ಮಾಡುವ ಪಾತ್ರೆಗಳನ್ನು, ಒಡವೆಗಳನ್ನು, ಆಯುಧಗಳನ್ನು ಮತ್ತು ವಿಗ್ರಹಗಳನ್ನು ಮಾಡಲು ಲೋಕವನ್ನು ಕರಗಿಸಲು ಕುಲುಮೆಯನ್ನು ಉಪಯೋಗಿಸುತ್ತಿದ್ದರು.
  • ಮಣ್ಣಿನ ಮಡಿಕೆಯನ್ನು ಮಾಡಲು ಸಹ ಕುಲುಮೆಯನ್ನು ಉಪಯೋಗಿಸುತ್ತಿದ್ದರು.
  • ಕೆಲವೊಮ್ಮೆ ಹೆಚ್ಚಿನ ತಾಪವನ್ನು ಸೂಚಿಸಲು ಅಲಂಕಾರಿಕ ರೂಪದಲ್ಲಿ ಈ ಪದವನ್ನು ಉಪಯೋಗಿಸುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ಅನ್ಯದೇವತೆ, ಪ್ರತಿಮೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H861, H3536, H3564, H5948, H8574, G2575

ಕುಷ್ಠರೋಗಿ, ಕುಷ್ಠರೋಗಿಗಳು, ಕುಷ್ಠರೋಗ, ಕುಷ್ಠರೋಗದ

# ಪದದ ಅರ್ಥವಿವರಣೆ:

“ಕುಷ್ಠರೋಗ” ಎನ್ನುವ ಪದವನ್ನು ಅನೇಕ ವಿಧವಾದ ಚರ್ಮರೋಗಗಳನ್ನು ಸೂಚಿಸುವುದಕ್ಕೆ ಸತ್ಯವೇದದಲ್ಲಿ ಉಪಯೋಗಿಸಿದ್ದಾರೆ. “ಕುಷ್ಠರೋಗಿ” ಎನ್ನುವ ಪದವು ಕುಷ್ಠರೋಗವನ್ನು ಹೊಂದಿರುವ ವ್ಯಕ್ತಿಯನ್ನು ಸೂಚಿಸುತ್ತದೆ. “ಕುಷ್ಠರೋಗದ” ಎನ್ನುವ ಪದವು ಒಬ್ಬ ವ್ಯಕ್ತಿ ಅಥವಾ ಒಂದು ದೇಹದ ಭಾಗವು ಕುಷ್ಠರೋಗದಿಂದ ನರಳುತ್ತಿರುವದನ್ನು ವಿವರಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ.

  • ಕೆಲವೊಂದು ವಿಧವಾದ ಕುಷ್ಠರೋಗಗಳು ಚರ್ಮವನ್ನು ಬಿಳಿ ತೇಪೆಗಳ ಚರ್ಮವನ್ನಾಗಿ ಮಾಡುತ್ತವೆ, ಹೇಗೆಂದರೆ ಮಿರ್ಯಾಮಳು ಮತ್ತು ನಾಮಾನನು ಕುಷ್ಠರೋಗವನ್ನು ಹೊಂದಿದ್ದರು.
  • ಆಧುನಿಕ ಕಾಲಗಳಲ್ಲಿ ಕುಷ್ಠರೋಗವು ಅನೇಕಸಲ ಕಾಲುಗಳಿಗೆ, ಕೈಗಳಿಗೆ ಮತ್ತು ದೇಹದಲ್ಲಿನ ಇತರ ಭಾಗಗಳಿಗೆ ಹರಡಿ, ಕೆಟ್ಟುಹೋಗುತ್ತಿವೆ.
  • ದೇವರು ಇಸ್ರಾಯೇಲ್ಯರಿಗೆ ಕೊಟ್ಟ ಆಜ್ಞೆಗಳ ಪ್ರಕಾರ, ಒಬ್ಬ ವ್ಯಕ್ತಿ ಕುಷ್ಠರೋಗವನ್ನು ಹೊಂದಿದ್ದರೆ, ಅವನು “ಅಶುದ್ಧನು” ಎಂದು ಪರಿಗಣಿಸಬೇಕು ಮತ್ತು ಎಲ್ಲಾ ಜನರಿಗೂ ಬೇರೆಯಾಗಿ ಜೀವನ ಮಾಡಬೇಕು, ಇದರಿಂದ ಆ ರೋಗದ ಕಾರಣ ಬೇರೆಯವರು ಯಾರೂ ಕುಷ್ಠವನ್ನು ಹೊಂದದಿರುತ್ತಾರೆ.
  • ಕುಷ್ಠರೋಗಿಯನ್ನು ಅನೇಕಬಾರಿ “ಅಶುದ್ಧನು” ಎಂದು ಕರೆಯಲ್ಪಡುತ್ತಾನೆ, ಇದರಿಂದ ಇತರರು ಹತ್ತಿರಕ್ಕೆ ಬರಬೇಡವೆಂದು ಎಚ್ಚರಿಸುತ್ತಾರೆ.
  • ಯೇಸು ಅನೇಕಮಂದಿ ಕುಷ್ಠರೋಗಿಗಳನ್ನು ವಾಸಿ ಮಾಡಿದ್ದಾನೆ, ಮತ್ತು ಇತರ ಬೇರೆ ರೀತಿಯ ಬೇನೆಗಳಿಂದ ನರಳುತ್ತಿರುವ ಜನರನ್ನು ಕೂಡ ಗುಣಪಡಿಸಿದ್ದಾನೆ.

# ಅನುವಾದ ಸಲಹೆಗಳು:

ಸತ್ಯವೇದದಲ್ಲಿರುವ “ಕುಷ್ಠರೋಗ” ಎನ್ನುವ ಪದವನ್ನು “ಚರ್ಮ ರೋಗ” ಅಥವಾ “ಭೀತಿ ಉಂಟು ಮಾಡುವ ಚರ್ಮ ರೋಗ” ಎಂದೂ ಅನುವಾದ ಮಾಡಬಹುದು.

  • “ಕುಷ್ಠರೋಗದ” ಎನ್ನುವ ಮಾತನ್ನು ಅನುವಾದ ಮಾಡುವ ವಿಧಾನದಲ್ಲಿ “ಕುಷ್ಠರೋಗದಿಂದ ಸಂಪೂರ್ಣವಾಗಿ” ಅಥವಾ “ಚರ್ಮ ರೋಗದಿಂದ ಸೋಂಕಿತವಾದ” ಅಥವಾ “ಚರ್ಮ ಹುಣ್ಣುಗಳಿಂದ ತುಂಬಿದ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಮಿರ್ಯಾಮಳು, ನಾಮಾನ, ಶುದ್ಧ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H6879, H6883, G3014, G3015

ಕೂಗು, ಕೂಗುವುದು, ಕೂಗಿದರು, ಕೂಗುತ್ತಿದ್ದರು, ಮೊರೆ, ಮೊರೆಯಿಡುವುದು, ಮೊರೆಯಿಟ್ಟರು, ಪ್ರತಿಭಟಿಸು, ಪ್ರತಿಭಟನೆ, ಅಳು

# ಪದದ ಅರ್ಥವಿವರಣೆ

“ಕೂಗು” ಅಥವಾ “ಮೊರೆ” ಎನ್ನುವ ಪದಗಳನ್ನು ಜೋರಾಗಿ ಹೇಳುವುದು ಮತ್ತು ಬೇಗ ಹೇಳುವುದು ಎಂದು ಅರ್ಥಕೊಡುವಂತೆ ಸಹಜವಾಗಿ ಉಪಯೋಗಿಸುತ್ತಾರೆ. ಯಾರಾದರು ನೋವಿನಲ್ಲಿದ್ದರೆ ಅಥವಾ ಸಂತೋಷದಲ್ಲಿದ್ದರೆ ಅಥವಾ ಕೋಪವಾಗಿದ್ದರೆ “ಕೂಗುತ್ತಾರೆ”.

  • “ಕೂಗು” ಎನ್ನುವ ಪದಕ್ಕೆ ಸಹಾಯ ಪಡೆಯಬೇಕೆನ್ನುವ ಉದ್ದೇಶದಿಂದ ಜೋರಾಗಿ ಹೇಳುವುದು ಎಂದರ್ಥ.
  • ಸಂಧರ್ಭನುಸರವಾಗಿ “ಜೋರಾಗಿ ಹೇಳುವುದು” ಅಥವಾ “ಸಹಾಯಕ್ಕಾಗಿ ಅವಸರವಾಗಿ ಕೇಳುವುದು” ಎಂದು ಅನುವಾದ ಮಾಡಬಹುದು.
  • “ನಾನು ನಿನಗೆ ಮೊರೆಯಿಡುತ್ತೇನೆ” ಎನ್ನುವ ವಾಕ್ಯವನ್ನು “ನಿನ್ನ ಸಹಾಯಕ್ಕಾಗಿ ನಾನು ನಿನಗೆ ಮೊರೆಯಿಡುತ್ತಿದ್ದೇನೆ” ಅಥವಾ “ನಾನು ಅವಸರವಾಗಿ ನಿನ್ನ ಸಹಾಯ ಕೇಳುತ್ತಿದ್ದೇನೆ” ಎಂದು ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಕರೆ, ಬೇಡುವುದು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H603, H1058, H2199, H2201, H6030, H6463, H6670, H6682, H6817, H6818, H6873, H6963, H7121, H7123, H7321, H7440, H7442, H7723, H7737, H7768, H7769, H7771, H7773, H7775, H8173, H8663, G310, G349, G863, G994, G995, G1916, G2019, G2799, G2805, G2896, G2905, G2906, G2929, G4377, G5455

ಕೆಡುಕನು, ಕೆಡುಕರು, ಕೆಡುಕು ಮಾಡುವವನು

# ಪದದ ಅರ್ಥವಿವರಣೆ

“ಕೆಡುಕನು” ಎನ್ನುವ ಪದವು ಪಾಪ ಮಾಡುವ ಮತ್ತು ದೃಷ್ಟ ಕಾರ್ಯಗಳನ್ನು ಮಾಡುವವನನ್ನು ಸೂಚಿಸುತ್ತದೆ.

  • ದೇವರಿಗೆ ಅವಿಧೇಯರಾಗಿರುವ ಜನರನ್ನು ಸೂಚಿಸಲು ಈ ಪದವನ್ನು ಉಪಯೋಗಿಸಬಹುದು.
  • ಈ ಪದವನ್ನು “ಕೇಡು” ಅಥವಾ “ದೃಷ್ಟತನ” ಎನ್ನುವ ಪದಗಳೊಂದಿಗೆ “ಮಾಡುವುದು” ಅಥವಾ “ಮಾಡುವವನು” ಎನ್ನುವ ಪದಗಳನ್ನು ಜೋಡಿಸಿ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ದುಷ್ಟತನ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H205, H6213, H6466, H7451, H7489, G93, G458, G2038, G2040 , G2555

ಕೆರ, ಕೆರಗಳು

# ಪದದ ಅರ್ಥವಿವರಣೆ:

ಕೆರ ಎಂದರೆ ಕಾಲಿಗೆ ಅಥವಾ ಪಾದದ ಕೀಲು ಸುತ್ತಾ ಪಟ್ಟಿಗಳಿಂದ ಪಾದಕ್ಕೆ ಕಟ್ಟಿರುವ ಸರಳವಾದ ಚಪ್ಪಲಿಯನ್ನು ಸೂಚಿಸುತ್ತದೆ. ಕೆರಗಳನ್ನು ಸ್ತ್ರೀ ಪುರುಷರು ಹಾಕಿಕೊಳ್ಳುತ್ತಾರೆ.

  • ಕೆರವನ್ನು ಕೆಲವೊಂದುಬಾರಿ ಕಾನೂನು ವ್ಯವಹಾರವನ್ನು ನಿಶ್ಚಯಗೊಳಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ, ಉದಾಹರಣೆಗೆ, ಅಸ್ತಿಯನ್ನು ಮಾರುವುದು: ಒಬ್ಬ ಮನುಷ್ಯ ಕೆರವನ್ನು ತೆಗೆದುಕೊಂಡು, ಇತರರಿಗೆ ಅದನ್ನು ಕೊಡುವುದು.
  • ಒಬ್ಬರ ಕೆರಗಳನ್ನು ಅಥವಾ ಚಪ್ಪಲಿಗಳನ್ನು ತೆಗೆಯುವುದೆನ್ನುವುದು ಗೌರವಕ್ಕೆ ಮತ್ತು ಭಕ್ತಿಗೆ ಸೂಚನೆಯಾಗಿರುತ್ತದೆ, ವಿಶೇಷವಾಗಿ ದೇವರ ಸಾನ್ನಿಧ್ಯದಲ್ಲಿ ಚಪ್ಪಲಿಗಳನ್ನು ಹಾಕಿಕೊಳ್ಳುವುದಿಲ್ಲ.
  • ಯೇಸುವಿನ ಕೆರಗಳನ್ನು ಬಿಚ್ಚುವುದಕ್ಕೂ ಯೋಗ್ಯನಲ್ಲವೆಂದು ಯೋಹಾನನು ಹೇಳಿದನು, ಇದು ಗುಲಾಮನ ಅಥವಾ ದೀನ ಸೇವಕನ ಕೆಲಸವಾಗಿರುತ್ತದೆ.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H5274, H5275, H8288, G4547, G5266

ಕೆರೂಬಿ, ಕೆರೂಬಿಗಳು, ಕೆರೂಬಿಯರು

# ಪದದ ಅರ್ಥವಿವರಣೆ:

“ಕೆರೂಬಿ” ಎನ್ನುವ ಪದವು ಮತ್ತು ಇದರ ಬಹುವಚನ ಪದವಾದ “ಕೆರೂಬಿಗಳು” ಎನ್ನುವವು ದೇವರು ಉಂಟು ಮಾಡಿದ ಒಂದು ವಿಶೇಷವಾದ ಪರಲೋಕದ ಜೀವಿಗಳಾಗಿರುತ್ತವೆ. ಕೆರೂಬಿಗಳು ರೆಕ್ಕೆಗಳನ್ನು ಮತ್ತು ಬೆಂಕಿ ಜ್ವಾಲೆಗಳನ್ನು ಹೊಂದಿರುತ್ತವೆಯೆಂದು ಸತ್ಯವೇದವು ವಿವರಿಸುತ್ತಿದೆ.

  • ಕೆರೂಬಿಗಳು ದೇವರು ಶಕ್ತಿಯನ್ನು ಮತ್ತು ಆತನ ಮಹಿಮೆಯನ್ನು ತೋರಿಸುತ್ತವೆ, ಪರಿಶುದ್ಧವಾದ ವಿಷಯಗಳಿಗೆ ಅಥವಾ ಜನರಿಗೆ ಅಂಗರಕ್ಷಕರಾಗಿದ್ದಂತೆ ಕಾಣಿಸಿಕೊಳ್ಳುತ್ತವೆ.
  • ಆದಾಮ ಮತ್ತು ಹವ್ವಳು ಪಾಪ ಮಾಡಿದನಂತರ, ಏದೆನ್ ವನದ ಪೂರ್ವದಿಕ್ಕಿನಲ್ಲಿ ಕೆರೂಬಿಯರನ್ನು ಎಲ್ಲಾ ಕಡೆ ಧಗಿಧಗಿಸುತ್ತಾ ಉರಿಯುವ ಜ್ವಾಲೆಯ ಕತ್ತಿಯನ್ನು ಇರಿಸಿದನು. ಇದರಿಂದ ಜನರು ಯಾರೂ ಒಳಗಡೆಗೆ ಹೋಗಿ ಜೀವವೃಕ್ಷವನ್ನು ತಿನ್ನದಂತೆ ಮಾಡಿದನು.
  • ಎದುರುಬದುರಾಗಿರುವ ಕೆರೂಬಿಯರನ್ನು ಕೆತ್ತಬೇಕೆಂದು, ಅವುಗಳ ರೆಕ್ಕೆಗಳು ಒಡಂಬಡಿಕೆಯ ಮಂಜೂಷದ ಕೃಪಾಸನದ ಮುಚ್ಚಳದ ಮೇಲೆ ಅಂಟಿಕೊಂಡು ಇರುವಂತೆ ಮಾಡಬೇಕೆಂದು ದೇವರು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದನು.
  • ಗುಡಾರದ ತೆರೆಗಳ ಒಳಗೆ ಕೆರೂಬಿಗಳ ಚಿತ್ರಗಳನ್ನು ನೇಯಬೇಕೆಂದು ಕೂಡ ಆತನು ಅವರಿಗೆ ಹೇಳಿದನು.
  • ಕೆಲವೊಂದು ವಾಕ್ಯಭಾಗಗಳಲ್ಲಿ ಈ ಜೀವಿಗಳು ನಾಲ್ಕು ಮುಖಗಳನ್ನು ಹೊಂದಿಕೊಂಡಿದ ಹಾಗೆ ವಿವರಿಸಲ್ಪಟ್ಟಿದೆ: ಆ ಮುಖಗಳು ಯಾವುವೆಂದರೆ, ಮನುಷ್ಯ, ಸಿಂಹ, ಎತ್ತು ಮತ್ತು ಹದ್ದು.
  • ಕೆರೂಬಿಗಳು ಕೆಲವೊಂದುಬಾರಿ ದೂತರೆಂದು ತಿಳಿದುಕೊಳ್ಳುತ್ತೇವೆ, ಆದರೆ ಸತ್ಯವೇದದಲ್ಲಿ ಅದಕ್ಕೆ ಸ್ಪಷ್ಟವಾದ ಆಧಾರಗಳಿಲ್ಲ.

# ಅನುವಾದ ಸಲಹೆಗಳು:

  • “ಕೆರೂಬಿಗಳು” ಎನ್ನುವ ಪದವನ್ನು “ರೆಕ್ಕೆಗಳಿರುವ ಜೀವಿಗಳು” ಅಥವಾ “ರೆಕ್ಕೆಗಳೊಂದಿಗಿರುವ ಅಂಗರಕ್ಷಕರು” ಅಥವಾ “ರೆಕ್ಕೆಗಳಿರುವ ಆತ್ಮೀಯಕ ಅಂಗರಕ್ಷಕರು” ಅಥವಾ “ರಕ್ಕೆಗಳಿರುವ ಪರಿಶುದ್ಧ ಅಂಗರಕ್ಷಕರು” ಎಂದೂ ಅನುವಾದ ಮಾಡಬಹುದು.
  • “ಕೆರೂಬಿ” ಎನ್ನುವ ಪದವು ಕೆರೂಬಿಗಳು ಎನ್ನುವ ಬಹುವಚನ ಪದಕ್ಕೆ ಏಕವಚನವಾಗಿರುತ್ತದೆ, “ರೆಕ್ಕೆಗಳಿರುವ ಜೀವಿ” ಅಥವಾ “ರೆಕ್ಕೆಗಳಿರುವ ಆತ್ಮೀಯಕ ಅಂಗರಕ್ಷಕ” ಎಂದು ಉದಾಹರಣೆಗೆ ಹೇಳಿಕೊಳ್ಳಬಹುದು.
  • ಈ ಪದಕ್ಕೆ ಅನುವಾದವು “ದೂತ” ಎನ್ನುವ ಪದಕ್ಕೆ ಹೇಳುವ ಅನುವಾದಕ್ಕೆ ಬೇರೆಯಾಗಿರುತ್ತದೆಯೆಂದು ತಿಳಿದುಕೊಂಡಿರಿ.
  • ಜಾತೀಯ ಭಾಷೆಯಲ್ಲಿ ಅಥವಾ ಸ್ಥಳೀಯ ಭಾಷೆಯಲ್ಲಿರುವ ಸತ್ಯವೇದದಲ್ಲಿ ಈ ಪದವನ್ನು ಯಾವರೀತಿ ಬರೆದಿದ್ದಾರೋ ಅಥವಾ ಅನುವಾದ ಮಾಡಿದ್ದಾರೋ ಎಂದು ನೋಡಿಕೊಳ್ಳಿರಿ. (ಅನುವಾದ ಸಲಹೆಗಳು: /ತಿಳಿಯದವುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ದೂತ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3742, G5502

ಕೇಡು, ಪ್ರತಿದಂಡನೆ, ಪ್ರತಿದಂಡನೆಯಾಗಿದೆ, ಪ್ರತಿದಂಡನೆಯಾಗುವುದು, ಮುಯ್ಯಿತೀರಿಸುವವನು, ಸೇಡು, ಪ್ರತೀಕಾರ

# ಪದದ ಅರ್ಥವಿವರಣೆ:

“ಕೇಡು” ಅಥವಾ “ಸೇಡು ತೀರಿಸಿಕೋ” ಅಥವಾ “ಪ್ರತೀಕಾರ ಮಾಡು” ಎನ್ನುವ ಪದಗಳಿಗೆ ಒಬ್ಬನು ಹಾನಿ ಮಾಡಿದ ಕಾರ್ಯಕ್ಕಾಗಿ ತಾನು ತಿರುಗಿ ಹೊಂದುವ ಶಿಕ್ಷೆ ಎಂಬುದಾಗಿ ಅರ್ಥವುಂಟು. ಪ್ರತಿದಂಡನೆ ಮಾಡುವ ಕಾರ್ಯ ಅಥವಾ ಸೇಡು ತೀರಿಸಿಕೊಳ್ಳುವುದು ಅಂದರೆ “ಪ್ರತೀಕಾರ ಮಾಡುವುದೇ”.

  • ಸಾಧಾರಣವಾಗಿ “ಕೇಡು” ತಪ್ಪಾಗಿರುವದನ್ನು ಸರಿಪಡಿಸುವುದಕ್ಕೆ ಅಥವಾ ಅದಕ್ಕೆ ನ್ಯಾಯ ಮಾಡಬೇಕೆಂದು ನೋಡುವುದಕ್ಕೆ ಉದ್ದೇಶಿಸಲ್ಪಟ್ಟಿರುತ್ತದೆ.
  • ಜನರನ್ನು ಸೂಚಿಸುವಾಗ, “ಸೇಡು ತೀರಿಸಿಕೋ” ಅಥವಾ “ಸೇಡು ತೆಗೆದುಕೋ” ಎನ್ನುವ ಭಾವವ್ಯಕ್ತೀಕರಣಗಳು ಸಹಜವಾಗಿ ಹಾನಿ ಮಾಡಿದ ವ್ಯಕ್ತಿಯ ಬಳಿ ಹೋಗಿ ಮುಯ್ಯಿ ತೀರಿಸಬೇಕೆನ್ನುವ ಆಸೆ ಒಳಗೊಂಡಿರುತ್ತದೆ.
  • ದೇವರು “ಪ್ರತೀಕಾರವನ್ನು ತೆಗೆದುಕೊಳ್ಳುವಾಗ” ಅಥವಾ “ಪ್ರತೀಕಾರ ಮಾಡುವಾಗ”, ಆತನು ನೀತಿಯುತವಾಗಿಯೇ ನಡೆದುಕೊಳ್ಳುತ್ತಾನೆ ಯಾಕಂದರೆ ಆತನು ಪಾಪವನ್ನು ಮತ್ತು ತಿರಸ್ಕಾರವನ್ನು ಶಿಕ್ಷಿಸುತ್ತಾನೆ.

# ಅನುವಾದ ಸಲಹೆಗಳು:

“ಕೇಡು” ಎನ್ನುವ ಪದದ ಭಾವವ್ಯಕ್ತೀಕರಣವು “ತಪ್ಪಾಗಿದ್ದನ್ನು ಸರಿಪಡಿಸು” ಅಥವಾ “ನ್ಯಾಯವನ್ನು ಹೊಂದು” ಎಂದೂ ಅನುವಾದ ಮಾಡಬಹುದು.

  • ಮನುಷ್ಯರನ್ನು ಸೂಚಿಸುವಾಗ, “ಸೇಡು ತೀರಿಸಿಕೊ” ಎನ್ನುವದನ್ನು “ತಿರಿಗಿ ಸಲ್ಲಿಸು” ಅಥವಾ “ಶಿಕ್ಷಿಸುವುದಕ್ಕೆ ನೋಯಿಸು” ಅಥವಾ “ಅಲ್ಲಿಗೆ ತಿರುಗಿ ಹೋಗು” ಎಂದೂ ಅನುವಾದ ಮಾಡಬಹುದು.
  • ಸಂದರ್ಭಕ್ಕೆ ತಕ್ಕಂತೆ, “ಪ್ರತೀಕಾರ” ಎನ್ನುವುದು “ಶಿಕ್ಷೆ” ಅಥವಾ “ಪಾಪಕ್ಕೆ ಶಿಕ್ಷೆ” ಅಥವಾ “ತಪ್ಪು ಮಾಡಿದ್ದಕ್ಕಾಗಿ ಶಿಕ್ಷಿಸುವುದು” ಎಂದೂ ಅನುವಾದ ಮಾಡಬಹುದು. “ಪ್ರತೀಕಾರ “ ಎನ್ನುವ ಈ ಪದವನ್ನು ಉಪಯೋಗಿಸಿದ್ದರೆ, ಇದು ಕೇವಲ ಮನುಷ್ಯರಿಗೆ ಮಾತ್ರವೇ ಅನ್ವಯವಾಗುತ್ತದೆ.
  • “ನನ್ನ ಪ್ರತೀಕಾರವನ್ನು ತೆಗೆದುಕೋ” ಎಂದು ದೇವರು ಹೇಳಿದಾಗ, “ನನಗೆ ವಿರುದ್ಧವಾಗಿ ಪಾಪ ಮಾಡಿದವರನ್ನು ಶಿಕ್ಷಿಸು” ಎಂದಾಗಲಿ ಅಥವಾ “ನನಗೆ ವಿರುದ್ಧವಾಗಿ ಅವರು ಪಾಪ ಮಾಡಿದ್ದರಿಂದ ಅವರಿಗೆ ಕಠಿಣವಾದ ಶಿಕ್ಷೆಗಳನ್ನುಂಟು ಮಾಡು” ಎಂದೂ ಅನುವಾದ ಮಾಡಬಹುದು.
  • ದೇವರ ಪ್ರತೀಕಾರವನ್ನು ಸೂಚಿಸುವಾಗ, ದೇವರು ಪಾಪ ಮಾಡಿದ್ದಕ್ಕೆ ಆತನು ಶಿಕ್ಷೆಯನ್ನು ಕೊಡುತ್ತಾನೆಂದು ಸ್ಪಷ್ಟಪಡಿಸಿರಿ.

(ಈ ಪದಗಳನ್ನು ಸಹ ನೋಡಿರಿ : ಶಿಕ್ಷೆ, ನ್ಯಾಯ, ನೀತಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1350, H3467, H5358, H5359, H5360, H6544, H6546, H8199, G1349, G1556, G1557, G1558, G2917, G3709

ಕೊಡಲಿ, ಕೊಡಲಿಗಳು

# ಪದದ ಅರ್ಥವಿವರಣೆ:

ಕೊಡಲಿ ಕಟ್ಟಿಗೆಗಳನ್ನು ಅಥವಾ ಮರಗಳನ್ನು ಕಡಿಯುವುದಕ್ಕೆ ಉಪಯೋಗಿಸುವ ಸಾಧನವಾಗಿರುತ್ತದೆ.

  • ಕೊಡಲಿ ಸಹಜವಾಗಿ ಉದ್ದವಾದ ಕಟ್ಟಿಗೆಯ ಕಾವಿಗೆ ಕೊನೆಯ ಭಾಗದಲ್ಲಿ ದೊಡ್ಡ ಕಬ್ಬಿಣದ ಕತ್ತಿಯನ್ನು ಏರಿಸಿರುತ್ತಾರೆ.
  • ಕೊಡಲಿಯಂಥೆ ನಿಮ್ಮ ಸಂಸ್ಕೃತಿಯಲ್ಲಿಯೂ ಸಾಧನವನ್ನು ಬಳಸುವುದಾದರೆ, ಆ ಸಾಧನೆಯ ಹೆಸರನ್ನು ನೀವು “ಕೊಡಲಿ” ಎಂದು ಅನುವಾದ ಮಾಡಿಕೊಳ್ಳಬಹುದು.
  • ಈ ಪದವನ್ನು ಅನುವಾದ ಮಾಡುವ ಇನ್ನೊಂದು ವಿಧಾನದಲ್ಲಿ, “ಮರಗಳನ್ನು ಕಡಿಯುವ ಸಾಧನ” ಅಥವಾ “ಕತ್ತಿ ಇರುವ ಕಟ್ಟಿಗೆಯ ಸಾಧನ” ಅಥವಾ “ಉದ್ದವಾದ ಕಟ್ಟಿಗೆ ಇರುವ-ಕಡಿಯುವ ಸಾಧನ” ಎನ್ನುವ ಮಾತುಗಳು ಒಳಗೊಂಡಿರಬಹುದು.
  • ಹಳೇ ಒಡಂಬಡಿಕೆಯಲ್ಲಿ ನಡೆದ ಒಂದು ಸಂಘಟನೆಯಲ್ಲಿ, ಕೊಡಲಿಯು ನದಿಯೊಳಗೆ ಬೀಳುತ್ತದೆ, ಅದಕ್ಕಾಗಿ ಇದನ್ನು ಕಟ್ಟಿಗೆಯ ಕಾವಿಯಿಂದ ಜಾರಿ ಬಂದ ಕತ್ತಿ ಎಂದು ಆ ಸಾಧನವನ್ನು ವಿವರಿಸಿ ಹೇಳುವುದು ಉತ್ತಮ.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1631, H4621, H7134, G513

ಕೊಂಬು, ಕೊಂಬುಗಳು, ಕೊಂಬುಗಳುಳ್ಳ

# ಸತ್ಯಾಂಶಗಳು:

ಕೊಂಬುಗಳು ತುಂಬಾ ಗಟ್ಟಿಯಾಗಿದ್ದು ಜಾನುವಾರುಗಳು, ಕುರಿಗಳು, ಮೇಕೆಗಳು ಮತ್ತು ಜಿಂಕೆಗಳಂಥಹ ಪ್ರಾಣಿಗಳ ತಲೆಗಳ ಮೇಲೆ ಬೆಳೆಯುವವಾಗಿರುತ್ತವೆ.

  • ಟಗರು ಕೊಂಬುಗಳನ್ನು “ರಾಮ್ಸ್ ಹಾರ್ನ್” ಅಥವಾ “ಸೋಫಾರ್” ಎನ್ನುವ ಸಂಗೀತ ಉಪಕರಣಗಳನ್ನು ಮಾಡುವುದಕ್ಕೆ ಬಳಸುತ್ತಾರೆ, ಇವುಗಳನ್ನು ಧರ್ಮ ಸಂಬಂಧವಾದ ವಿಶೇಷವಾದ ಹಬ್ಬಗಳಲ್ಲಿ ಊದುವುದಕ್ಕೆ ಉಪಯೋಗಿಸುತ್ತಾರೆ.
  • ತಾಮ್ರದ ಯಜ್ಞವೇದಿಗಳು ಮತ್ತು ಬೂದಿಯ ನಾಲ್ಕು ಮೂಲೆಗಳಿಂದ ಕೊಂಬುಗಳ ಆಕಾರವು ಚಾಚಿಕೊಂಡು ಬಂದಿರುವಂತೆ ತಯಾರು ಮಾಡಬೇಕೆಂದು ದೇವರು ಇಸ್ರಾಯೇಲ್ಯರಿಗೆ ಹೇಳಿದರು. ಚಾಚಿಕೊಂಡು ಬಂದಿರುವಂತಹ ಇವುಗಳನ್ನು “ಕೊಂಬುಗಳೆಂದು” ಕರೆದರೂ, ಅವು ಪ್ರಾಣಿಗಳ ಕೊಂಬುಗಳಲ್ಲ.
  • “ಕೊಂಬು” ಎನ್ನುವ ಪದವು ಕೆಲವೊಂದುಬಾರಿ ನೀರನ್ನು ಅಥವಾ ಎಣ್ಣೆಯನ್ನು ಸಂಗ್ರಹಿಸಿ ಇಡುವುದಕ್ಕೆ ಕೊಂಬಿನಂತಿರುವ ಆಕಾರದಲ್ಲಿರುವ “ಬುದ್ದಲಿ”ಯನ್ನು ಸೂಚಿಸುತ್ತದೆ. ಎಣ್ಣೆಯ ಬುದ್ದಲಿಯು ಅರಸನನ್ನು ಅಭಿಷೇಕ ಮಾಡುವುದಕ್ಕೆ ಉಪಯೋಗಿಸುತ್ತಿದ್ದರು, ಸಮುವೇಲನು ದಾವೀದನಿಗೆ ಎಣ್ಣೆಯ ಬುದ್ದಲಿಯಿಂದಲೇ ಅಭಿಷೇಕ ಮಾಡಿದ್ದನು.
  • ಈ ಪದವನ್ನು ಕಹಳೆಯನ್ನು ಸೂಚಿಸುವ ಪದಕ್ಕೆ ವ್ಯತ್ಯಾಸವಾಗಿರುವಂತೆ ಅನುವಾದ ಮಾಡಬೇಕಾಗಿರುತ್ತದೆ, ಯಾಕಂದರೆ ಈ ಎರಡು ಪದಗಳು ಬೇರೆ ಬೇರೆಯಾಗಿರುತ್ತವೆ.
  • “ಕೊಂಬು” ಎನ್ನುವ ಪದವನ್ನು ಬಲ, ಶಕ್ತಿ, ಅಧಿಕಾರ ಮತ್ತು ರಾಜತ್ವಗಳಿಗೆ ಗುರುತಾಗಿ ಅಲಂಕಾರಿಕವಾಗಿ ಉಪಯೋಗಿಸುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ಅಧಿಕಾರ, ಹಸು, ಜಿಂಕೆ, ಮೇಕೆ, ಶಕ್ತಿ, ರಾಜಯೋಗ್ಯ, ಕುರಿ, ಕಹಳೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's:H3104, H7160, H7161, H7162, H7782, G2768

ಕೊಯ್ಯು, ಕೊಯ್ಯುತ್ತದೆ, ಕೊಯ್ದಿದೆ, ಕೊಯ್ಯುವವನು, ಕೊಯ್ಯುವವರು, ಕೊಯ್ಯುತ್ತಿರುವುದು

# ಪದದ ಅರ್ಥವಿವರಣೆ:

“ಕೊಯ್ಯು” ಎನ್ನುವ ಪದಕ್ಕೆ ಧಾನ್ಯಗಳೆನ್ನುವ ಬೆಳೆಗಳನ್ನು ಕೊಯ್ಯುವುದು ಎಂದರ್ಥ. “ಕೊಯ್ಯುವವನು” ಎಂದರೆ ಬೆಳೆಯನ್ನು ಕೊಯ್ಯುವ ಅಥವಾ ಸಂಗ್ರಹಿಸುವ ವ್ಯಕ್ತಿ ಎಂದರ್ಥ.

  • ಸಾಧಾರಣವಾಗಿ ಕೊಯ್ಯುವವರು ಕೈಗಳ ಮೂಲಕ ಬೆಳೆಗಳನ್ನು ಸಂಗ್ರಹಿಸುತ್ತಾರೆ, ಸಸಿಗಳನ್ನು ಮೇಲಕ್ಕೆ ಕೀಳುವದರ ಮೂಲಕ ಅಥವಾ ಕತ್ತರಿಸುವ ಚೂಪಾದ ಉಪಕರಣದಿಂದ ಅವುಗಳನ್ನು ಕತ್ತರಿಸುವುದರ ಮೂಲಕ ಬೆಲೆಯನ್ನು ಸಂಗ್ರಹಿಸುತ್ತಾರೆ.
  • ಬೆಳೆಯನ್ನು ಕೊಯ್ಯುವ ಆಲೋಚನೆ ಎಂದರೆ ಅನೇಕಬಾರಿ ಯೇಸುವಿನ ಕುರಿತಾದ ಸುವಾರ್ತೆಯನ್ನು ಜನರಿಗೆ ಹೇಳುವುದಕ್ಕೆ ಮತ್ತು ದೇವರ ಕುಟುಂಬದೊಳಗೆ ಅವರನ್ನು ಕರೆದುಕೊಂಡು ಬರುವುದಕ್ಕೆ ಅಲಂಕಾರಿಕವಾಗಿ ಉಪಯೋಗಿಸಲ್ಪಡುತ್ತಿತ್ತು.
  • ಒಬ್ಬ ವ್ಯಕ್ತಿಯ ಕ್ರಿಯೆಗಳಿಂದ ಬರುವ ಪರಿಣಾಮಗಳನ್ನು ಸೂಚಿಸುವುದಕ್ಕೆ ಈ ಪದವನ್ನು ಅಲಂಕಾರಿಕವಾಗಿ ಉಪಯೋಗಿಸುತ್ತಾರೆ, ಉದಾಹರಣೆ “ಮನುಷ್ಯನು ಬಿತ್ತುವುದನ್ನು ಅವನು ಕೊಯ್ಯುವನು” ಎಂದು ಮಾತಿನಂತೆ ಇರುತ್ತದೆ. (ನೋಡಿರಿ: ರೂಪಕಾಲಂಕಾರ
  • “ಕೊಯ್ಯು” ಮತ್ತು “ಕೊಯ್ಯುವವನು” ಎನ್ನುವ ಪದಗಳನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಕೊಯ್ಲು” ಮತ್ತು “ಕೊಯ್ಲುಗಾರ” ಎನ್ನುವ ಪದಗಳು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಶುಭ ವಾರ್ತೆ, ಕೊಯ್ಲು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H4672, H7114, H7938, G270, G2325, G2327

ಕೊಯ್ಲು, ಸುಗ್ಗಿ, ಕೊಯ್ಲು ಮಾಡಲ್ಪಟ್ಟಿದೆ, ಕೊಯ್ಲು ಮಾಡಲ್ಪಡುತ್ತಿದೆ, ಕೊಯ್ಲುಗಾರ, ಕೊಯ್ಲುಗಾರರು

# ಪದದ ಅರ್ಥವಿವರಣೆ:

“ಕೊಯ್ಲು” ಎನ್ನುವ ಪದವು ಬೆಳೆಯಲ್ಪಟ್ಟಿರುವ ಸಸ್ಯಗಳಿಂದ ತರಕಾರಿಗಳನ್ನಾಗಲಿ ಅಥವಾ ಹಣ್ಣುಗಳನ್ನಾಗಲಿ ಕೊಯ್ದು ಅವುಗಳನ್ನು ಒಂಗೂಡಿಸುವುದನ್ನು ಸೂಚಿಸುತ್ತದೆ.

  • ಬೆಳೆಯುವ ಕಾಲದ ಅಂತ್ಯದಲ್ಲಿ ಕೊಯ್ಲು ಸಮಯವು ಸಹಜವಾಗಿ ಉಂಟಾಗುತ್ತದೆ.
  • ಇಸ್ರಾಯೇಲ್ಯರು “ಕೊಯ್ಲಿನ ಹಬ್ಬ” ಅಥವಾ “ಸುಗ್ಗಿಯ ಹಬ್ಬ”ಗಳನ್ನು ಆಹಾರ ಬೆಳೆಗಳನ್ನು ಕೊಯ್ಯಲು ಆಚರಿಸುತ್ತಿದ್ದರು. ಆತನಿಗೆ ಹೋಮವನ್ನಾಗಿ ಅವರು ಬೆಳೆಸುವ ಬೆಳೆಗಳಲ್ಲಿ ಪ್ರಥಮ ಫಲಗಳನ್ನು ಆರ್ಪಿಸಬೇಕೆಂದು ದೇವರು ಆಜ್ಞಾಪಿಸಿದ್ದರು.
  • ಯೇಸುವಿನಲ್ಲಿ ನಂಬುವುದಕ್ಕೆ ಬರುವ ಜನರನ್ನು ಅಥವಾ ಒಬ್ಬ ವ್ಯಕ್ತಿಯ ಆತ್ಮೀಯಕ ಬೆಳವಣಿಗೆಯನ್ನು ಸೂಚಿಸುವುದಕ್ಕೆ “ಕೊಯ್ಲು” ಎನ್ನುವ ಪದವನ್ನು ಅಲಂಕಾರಿಕ ಅರ್ಥದಲ್ಲಿ ಸೂಚಿಸುತ್ತದೆ.
  • ಆತ್ಮೀಯಕವಾದ ಬೆಳೆಗಳ ಕೊಯ್ಲಿನ ಆಲೋಚನೆಯು ದೈವಿಕವಾದ ನಡತೆಯ ಗುಣಗಳ ಹೊಂದಿರುವ ಫಲಗಳ ಅಲಂಕಾರಿಕ ರೂಪದೊಂದಿಗೆ ಹಿಡಿಯುವುದು.

# ಅನುವಾದ ಸಲಹೆಗಳು:

  • ಸಾಧಾರಣವಾಗಿ ಬೆಳೆಗಳನ್ನು ಕೊಯ್ಯುವುದಕ್ಕೆ ಸಾಧಾರಣವಾಗಿ ಭಾಷೆಯಲ್ಲಿ ಉಪಯೋಗಿಸುವ ಪದದೊಂದಿ ಈ ಪದವನ್ನು ಅನುವಾದ ಮಾಡುವುದು ಉತ್ತಮ.
  • ಕೊಯ್ಲಿನ ಸಂದರ್ಭವನ್ನು “ಸಂಗ್ರಹಿಸುವ ಸಮಯ” ಅಥವಾ “ಬೆಳೆಗಳನ್ನು ಸಂಗ್ರಹಿಸುವ ಸಮಯ” ಅಥವಾ “ಫಲಗಳನ್ನು ಪಡೆಯುವ ಸಮಯ” ಎಂದೂ ಅನುವಾದ ಮಾಡಬಹುದು.
  • “ಕೊಯ್ಲು” ಎನ್ನುವ ಕ್ರಿಯಾಪದವನ್ನು “ಒಂಗೂಡಿಸುವುದು” ಅಥವಾ “ಪಡೆಯುವುದು” ಅಥವಾ “ಒಟ್ಟು ಗೂಡಿಸುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಪ್ರಥಮ ಫಲಗಳು, ಹಬ್ಬ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2758, H7105, G2326, G6013

ಕೊಲ್ಲು, ಹತ್ಯೆ

# ಪದದ ಅರ್ಥವಿವರಣೆ:

ಒಬ್ಬ ವ್ಯಕ್ತಿಯನ್ನು ಅಥವಾ ಒಂದು ಪ್ರಾಣಿಯನ್ನು “ಕಡಿದು ಹಾಕು” ಎಂದರೆ ಕೊಂದು ಹಾಕು ಎಂದರ್ಥ. ಅನೇಕಬಾರಿ ಈ ಪದಕ್ಕೆ ಬಲವಂತಿಕೆಯ ಅಥವಾ ಹಿಂಸಾತ್ಮಕ ವಿಧಾನದಲ್ಲಿ ಇದನ್ನು ಕೊಂದು ಎನ್ನುವ ಅರ್ಥವೂ ಇದೆ. ಒಬ್ಬ ಮನುಷ್ಯನು ಒಂದು ಪ್ರಾಣಿಯನ್ನು ಕೊಂದು ಹಾಕಿದರೆ, ಅವನು ಅದನ್ನು “ಹತ್ಯೆ” ಮಾಡಿದ್ದಾನೆ ಎಂದರ್ಥ.

  • ಒಂದು ಪ್ರಾಣಿಯನ್ನು ಅಥವಾ ಒಂದು ದೊಡ್ಡ ಜನರ ಗುಂಪನ್ನು ಸೂಚಿಸಿದಾಗ, ಅನೇಕಬಾರಿ ಈ ಸಂದರ್ಭಕ್ಕೆ ಉಪಯೋಗಿಸುವ ಪದವು “ವಧೆ” ಎಂದಾಗಿರುತ್ತದೆ.
  • ಕೊಲ್ಲುವ ಕ್ರಿಯೆಯನ್ನು “ವಧೆ” ಎಂದೂ ಕರೆಯುತ್ತಾರೆ.
  • “ಹತ್ಯೆ” ಎನ್ನುವ ಪದವನ್ನು “ಹತ್ಯೆ ಮಾಡಲ್ಪಟ್ಟ ಜನರು” ಅಥವಾ “ಕೊಲ್ಲಲ್ಪಟ್ಟ ಜನರು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ವಧೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2026, H2076, H2490, H2491, H2717, H2763, H2873, H2874, H4191, H4194, H5221, H6991, H6992, H7523, H7819, G337, G615, G1315, G2380, G2695, G4968, G4969, G5407

ಕೊಳಲು, ಕೊಳಲುಗಳು, ಕೊಳವೆ, ಕೊಳವೆಗಳು

# ಪದದ ಅರ್ಥವಿವರಣೆ

ಸತ್ಯವೇದ ಕಾಲದಲ್ಲಿ, ಎಲುಬು ಅಥವಾ ಕಟ್ಟಿಗೆಯಲ್ಲಿ ಶಬ್ದ ಹೊರಕ್ಕೆ ಬರುವಂತೆ ರಂದ್ರಗಳನ್ನು ಮಾಡಿರುವ ಸಂಗೀತ ವಾದ್ಯಗಳನ್ನ ಕೊಳವೆಗಳು ಎನ್ನುತ್ತಿದ್ದರು. ಕೊಳಲು ಒಂದು ವಿಧವಾದ ಕೊಳವೆಯಾಗಿತ್ತು.

  • ಅನೇಕ ಕೊಳವೆಗಳು ದಪ್ಪ ಹುಲ್ಲಿನಿಂದ ಮಾಡಲ್ಪಟ್ಟ ಜೊಂಡುಗಳನ್ನು ಒಳಗೊಂಡಿರುತ್ತವೆ, ಕೊಳವೆಯನ್ನು ಊದಿದಾಗ ಆ ಜೊಂಡುಗಳು ಅಲುಗಾಡಿ ಶಬ್ದವನ್ನುಂಟು ಮಾಡುತ್ತದೆ.
  • ಜೊಂಡು ಇಲ್ಲದ ಕೊಳವೆಯನ್ನು “ಕೊಳಲು” ಎಂದು ಕರೆಯುತ್ತಿದ್ದರು.
  • ಕುರುಬ ತನ್ನ ಕುರಿಗಳ ಹಿಂಡು ನೆಮ್ಮದಿಯಾಗಿರಲು ಕೊಳಲು ಊದುತ್ತಿದ್ದನು.
  • ಸಂತೋಷ ಅಥವಾ ದುಃಖದ ಸಂಗೀತವನ್ನು ನುಡಿಸಲು ಕೊಳಲು ಮತ್ತು ಕೊಳವೆಗಳನ್ನು ಉಪಯೋಗಿಸುತ್ತಿದ್ದರು.

(ಈ ಪದಗಳನ್ನು ಸಹ ನೋಡಿರಿ : ಹಿಂಡು, ಕುರುಬ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H4953, H5748, H2485, H2490, G832, G834, G836

ಕೋಪ, ಕೋಪಗೊಳ್ಳುವಿಕೆ, ಸಿಟ್ಟು

# ಪದದ ಅರ್ಥವಿವರಣೆ:

“ಕೋಪಗೊಳ್ಳುವುದು” ಅಥವಾ “ಕೋಪಗೊಂಡಿರುವುದು” ಎಂದರೆ ಇಷ್ಟವಿಲ್ಲದಿರುವುದು, ಕೆರಳುಗೊಳ್ಳುವುದುಮತ್ತು ಯಾರೋದರೊಬ್ಬರಿಗೆ ವಿರುದ್ಧವಾಗಿರುವುದು ಅಥವಾ ಯಾವುದೊಂದರ ಕುರಿತಾಗಿ ಅಸಮಾಧಾನದಿಂದ ಇರುವುದು.

  • ಜನರು ಕೋಪಗೊಂಡಾಗ, ಅವರು ಅನೇಕಸಲ ಪಾಪದಿಂದಲೂ ಮತ್ತು ಸ್ವಾರ್ಥದಿಂದಲೂ ಇರುತ್ತಾರೆ, ಆದರೆ ಕೆಲವೊಂದುಸಲ ಒತ್ತಡಕ್ಕೆ ಅಥವಾ ಅನ್ಯಾಯಕ್ಕೆ ವಿರುದ್ಧವಾಗಿ ನೀತಿಯುಳ್ಳ ಕೋಪವನ್ನು ಹೊಂದಿರುತ್ತಾರೆ.
  • ದೇವರ ಕೋಪ (“ಕೋಪಾಗ್ನಿ” ಎಂದೂ ಕರೆಯುತ್ತಾರೆ) ಪಾಪಕ್ಕೆ ಸಂಬಂಧಪಟ್ಟು ಆತನು ಅತಿ ಹೆಚ್ಚಾದ ಅಹಿಷ್ಟತೆಯನ್ನು ತೋರಿಸುತ್ತದೆ.
  • “ಕೋಪ ಬರುವಂತೆ ರೇಗಿಸು” ಎನ್ನುವ ಮಾತಿಗೆ “ಕೋಪಗೊಳ್ಳುವುದಕ್ಕೆ ಕಾರಣವಾಗು” ಎಂದರ್ಥ.

(ಈ ಪದಗಳನ್ನು ಸಹ ನೋಡಿರಿ : ಕೋಪಾಗ್ನಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H599, H639, H1149, H2152, H2194, H2195, H2198, H2534, H2734, H2787, H3179, H3707, H3708, H3824, H4751, H4843, H5674, H5678, H6225, H7107, H7110, H7266, H7307, G23, G1758, G2371, G2372, G3164, G3709, G3710, G3711, G3947, G3949, G5520

ಕೋಲು, ಕೋಲುಗಳು

# ಪದದ ಅರ್ಥವಿವರಣೆ:

ಕೋಲು ಎನ್ನುವುದು ಉದ್ದವಾದ ಕಟ್ಟಿಗೆ ಅಥವಾ ಕಡ್ಡಿ ಆಗಿರುತ್ತದೆ, ಅನೇಕಬಾರಿ ಇದನ್ನು ಕೈಕೋಲು ಎಂಬುದಾಗಿ ಉಪಯೋಗಿಸಲ್ಪಟ್ಟಿರುತ್ತದೆ.

  • ಯಾಕೋಬನು ವೃದ್ಧಾಪ್ಯದಲ್ಲಿದ್ದಾಗ, ಆತನು ನಡೆಯುವುದಕ್ಕೆ ಕೋಲನ್ನು ಉಪಯೋಗಿಸಿದ್ದನು.
  • ದೇವರು ತನ್ನ ಶಕ್ತಿಯನ್ನು ಫರೋಹನಿಗೆ ತೋರಿಸುವುದಕ್ಕೆ ಮೋಶೆಯ ಕೋಲನ್ನು ಹಾವನ್ನಾಗಿ ಮಾಡಿದನು.
  • ಕುರುಬರು ತಮ್ಮ ಕುರಿಗಳಿಗೆ ಮಾರ್ಗ ನಿರ್ದೇಶನ ಸಹಾಯ ಮಾಡುವುದಕ್ಕೆ ಕೋಲನ್ನು ಉಪಯೋಗಿಸುತ್ತಿದ್ದರು, ಅಥವಾ ಆ ಕುರಿಗಳು ಮಾರ್ಗವನ್ನು ತಪ್ಪಿಹೋಗುತ್ತಿರುವಾಗ ಅಥವಾ ಚೆದರಿ ಹೋಗುತ್ತಿರುವಾಗ ಅವುಗಳನು ರಕ್ಷಿಸುವುದಕ್ಕೆ ಉಪಯೋಗಿಸುತ್ತಿದ್ದರು.
  • ಕುರುಬನ ಕೋಲಿಗೆ ತುದಿ ಭಾಗದಲ್ಲಿ ಒಂದು ಕೊಕ್ಕೆಯನ್ನು ಹೊಂದಿರುತ್ತದೆ, ಇದು ಉದ್ದವಾಗಿ ನೇರವಾಗಿ ಇರುವ ಕುರುಬನ ಕಡ್ಡಿಗೆ ಬೇರೆಯಾಗಿರುತ್ತದೆ ಮತ್ತು ಕುರಿಗಳ ಮೇಲೆ ಧಾಳಿ ಮಾಡುವವುಗಳಿಂದ ಅಡವಿ ಪ್ರಾಣಿಗಳನ್ನು ಕೊಲ್ಲುವುದಕ್ಕೆ ಉಪಯೋಗಿಸುತ್ತಿದ್ದರು.

(ಈ ಪದಗಳನ್ನು ಸಹ ನೋಡಿರಿ : ಫರೋಹ, ಶಕ್ತಿ, ಕುರಿಗಳು, ಕುರುಬ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H4132, H4294, H4731, H4938, H6086, H6418, H7626, G2563, G3586, G4464

ಕ್ರೋಧ, ಕ್ರೋಧಕ್ಕೆ ಗುರಿಮಾಡುತ್ತದೆ, ಕ್ರೋಧದಲ್ಲಿರುವುದು

# ಸತ್ಯಾಂಶಗಳು:

ಕ್ರೋಧ ಎಂದರೆ ನಿಯಂತ್ರಿಸಿಕೊಳ್ಳುವುದಕ್ಕಾಗದ ಅಧಿಕವಾದ ಕೋಪ ಎಂದರ್ಥ. ಯಾರಾದರೊಬ್ಬರು ಕ್ರೋಧಕ್ಕೆ ಗುರಿಯಾದಾಗ, ಆ ವ್ಯಕ್ತಿ ತನ್ನ ಅಧಿಕವಾದ ಕೋಪವನ್ನು ನಾಶವನ್ನುಂಟು ಮಾಡುವ ವಿಧಾನದಲ್ಲಿ ವ್ಯಕ್ತಗೊಳಿಸುತ್ತಿದ್ದಾನೆಂದು ಅದರ ಅರ್ಥವಾಗಿರುತ್ತದೆ.

  • ಒಬ್ಬ ವ್ಯಕ್ತಿ ಕೋಪದ ಭಾವನೆಯಿಂದ ತನ್ನ ಸ್ವಯಂ ನಿಯಂತ್ರಣವನ್ನು ಕಳೆದುಕೊಂಡಾಗ ಕ್ರೋಧವು ಉಂಟಾಗುತ್ತದೆ.
  • ಕ್ರೋಧದಿಂದ ನಿಯಂತ್ರಿಸಲ್ಪಡುತ್ತಿರುವಾಗ ಮನುಷ್ಯರು ನಾಶಗೊಳಿಸುವ ಕ್ರಿಯೆಗಳನ್ನು ಮಾಡುತ್ತಾರೆ ಮತ್ತು ನಾಶಗೊಳಿಸುವ ಮಾತುಗಳನ್ನು ನುಡಿಯುತ್ತಾರೆ.
  • “ಕ್ರೋಧ” ಎನ್ನುವ ಪದಕ್ಕೆ ಶಕ್ತಿಯುತವಾಗಿ ನಡೆ ಎನ್ನುವ ಅರ್ಥವನ್ನೂ ಕೊಡುತ್ತದೆ, “ಕ್ರೋಧದಲ್ಲಿರುವ” ಅಲೆ ಅಥವಾ ಸಮುದ್ರದ ತರಂಗಗಳು “ಕ್ರೋಧಗೊಂಡಿವೆ” ಎನ್ನುವ ಮಾತುಗಳಲ್ಲಿ ನೋಡಬಹುದು.
  • “ದೇಶಗಳು ಕ್ರೋಧ”ಗೊಂಡಾಗ, ಅದೈವಿಕವಾದ ಜನರೆಲ್ಲರು ದೇವರಿಗೆ ಅವಿಧೇಯತೆಯನ್ನು ತೋರಿಸುವರು ಮತ್ತು ಆತನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ.
  • “ಕ್ರೋಧದಿಂದ ತುಂಬಿರುವುದು” ಎನ್ನುವ ಮಾತಿಗೆ ಅತ್ಯಧಿಕವಾದ ಕೋಪದ ಭಾವನೆಯೊಂದಿಗೆ ತುಂಬಿಸಲ್ಪಡುವುದು ಎಂದರ್ಥ.

(ಈ ಪದಗಳನ್ನು ಸಹ ನೋಡಿರಿ : ಕೋಪ, ಶಮೆದಮೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H398, H1348, H1984, H1993, H2121, H2195, H2196, H2197, H2534, H2734, H2740, H3491, H3820, H5590, H5678, H7264, H7265, H7266, H7267, H7283, H7857, G1693, G2830, G3710, G5433

ಖಡ್ಗ, ಖಡ್ಗಗಳು, ಖಡ್ಗಗಗಳನ್ನು ಹಿಡಿಯುವವರು

# ಪದದ ಅರ್ಥವಿವರಣೆ:

ಖಡ್ಗ ಎನ್ನುವುದು ತಿವಿಯುವುದಕ್ಕೆ ಅಥವಾ ಕತ್ತರಿಸುವುದಕ್ಕೆ ಉಪಯೋಗಿಸುವ ಸಪಟವಾದ ಕತ್ತಿಯನ್ನು ಹೊಂದಿರುವ ಲೋಹದ ಸಾಧನೆಯಾಗಿರುತ್ತದೆ. ಇದಕ್ಕೆ ದೊಡ್ಡದಾದ ಒಂದು ಕೈಪಿಡಿ ಇರುತ್ತದೆ, ಕತ್ತರಿಸುವುದಕ್ಕೆ ಚೂಪಾದ ತುದಿಯನ್ನು ಹೊಂದಿರುವ ಕತ್ತಿಯನ್ನು ಹೊಂದಿರುತ್ತದೆ.

  • ಪುರಾತನ ಕಾಲಗಳಲ್ಲಿ ಖಡ್ಗದ ಉದ್ದವು 60 ರಿಂದ 91 ಸೆಂಟಿಮೀಟರುಗಳಿರುತ್ತಿತ್ತು.
  • ಕೆಲವೊಂದು ಖಡ್ಗಗಳಿಗೆ ಎರಡು ಕಡೆಗೆ ಚೂಪಾದ ತುದಿಗಳು ಇರುತ್ತಿದ್ದವು, ಇದನ್ನು “ಇಬ್ಬಾಯಿ ಕತ್ತಿ” ಅಥವಾ “ಎರಡು ತುದಿಗಳಿರುವ ಕತ್ತಿ” ಎಂದು ಕರೆಯುತ್ತಾರೆ.
  • ಯೇಸು ಶಿಷ್ಯರು ತಮ್ಮನ್ನು ರಕ್ಷಿಸಿಕೊಳ್ಳುವುದಕ್ಕೆ ಕತ್ತಿಗಳನ್ನು ಇಟ್ಟುಕೊಂಡಿದ್ದರು. ಪೇತ್ರನು ತನ್ನ ಬಳಿ ಇರುವ ಕತ್ತಿಯಿಂದ ಮಹಾ ಯಾಜಕನ ಸೇವಕನ ಕಿವಿಯನ್ನು ಕತ್ತರಿಸಿದನು.
  • ಸ್ನಾನಿಕನಾದ ಯೋಹಾನ ಮತ್ತು ಅಪೊಸ್ತಲನಾದ ಯಾಕೋಬರು ಖಡ್ಗಗಳಿಂದ ಶಿರಚ್ಛೇದನ ಮಾಡಲ್ಪಟ್ಟರು.

# ಅನುವಾದ ಸಲಹೆಗಳು:

  • ಖಡ್ಗ ಎನ್ನುವ ಪದವನ್ನು ದೇವರ ವಾಕ್ಯಕ್ಕೆ ಅಲಂಕಾರಿಕವಾಗಿ ಉಪಯೋಗಿಸಿದ್ದಾರೆ. ಸತ್ಯವೇದದಲ್ಲಿರುವ ದೇವರ ಬೋಧನೆಗಳು ಜನರ ಅಂತರಂಗದ ಆಲೋಚನೆಗಳನ್ನು ಮತ್ತು ಅವರು ಮಾಡಿದ ಪಾಪಗಳನ್ನು ಒಪ್ಪಿಕೊಳ್ಳುವುದನ್ನು ಹೊರಕ್ಕೆ ವ್ಯಕ್ತಗೊಳಿಸುತ್ತದೆ. ಅದೇ ರೀತಿಯಲ್ಲಿ ಖಡ್ಗ ಎನ್ನುವುದು ತುಂಬಾ ಆಳವಾಗಿ ಕತ್ತರಿಸುವುದು ಮತ್ತು ನೋವನ್ನು ಉಂಟುಮಾಡುತ್ತದೆ. (ನೋಡಿರಿ: ರೂಪಕಾಲಂಕಾರ
  • ಈ ಪದವನ್ನು ಅಲಂಕಾರಿಕವಾಗಿ ಉಪಯೋಗಿಸಿದಾಗ, “ದೇವರ ವಾಕ್ಯವು ಖಡ್ಗದಂತಿದೆ, ಇದು ಆಳವಾಗಿ ಕತ್ತರಿಸಿ, ಪಾಪವನ್ನು ತೋರಿಸುತ್ತದೆ” ಎಂದೂ ಅನುವಾದ ಮಾಡಬಹುದು.
  • ಈ ರೀತಿಯ ಅಲಂಕಾರಿಕ ಉಪಯೋಗವು ಕೀರ್ತನೆಗಳ ಪುಸ್ತಕದಲ್ಲಿ ಕಾಣಿಸಿಕೊಳ್ಳುತ್ತದೆ, ಒಬ್ಬ ವ್ಯಕ್ತಿಯ ನಾಲಗೆಯು ಅಥವಾ ಮಾತು ಖಡ್ಗಕ್ಕೆ ಹೋಲಿಸಲಾಗಿರುತ್ತದೆ, ಇದು ಜನರಿಗೆ ಹಾನಿ ಮಾಡುತ್ತದೆ. ಇದನ್ನು “ನಾಲಗೆಯು ಖಡ್ಗದಂತಿದೆ, ಇದು ಮನುಷ್ಯರಿಗೆ ಅತೀ ಭಯಂಕರವಾಗಿ ಹಾನಿಯನ್ನುಂಟು ಮಾಡುತ್ತದೆ” ಎಂದೂ ಅನುವಾದ ಮಾಡಬಹುದು.
  • ನಿಮ್ಮ ಸಂಸ್ಕೃತಿಯಲ್ಲಿ ಖಡ್ಗಗಳನ್ನು ಉಪಯೋಗಿಸದಿದ್ದರೆ, ಈ ಪದವನ್ನು ತಿವಿಯುವುದಕ್ಕೆ ಅಥವಾ ಕತ್ತರಿಸುವುದಕ್ಕೆ ಉಪಯೋಗಿಸುವ ಉದ್ದವಾದ ಕತ್ತಿಯ ಹೆಸರಿನೊಂದಿಗೆ ಅನುವಾದ ಮಾಡಬಹುದು.
  • ಖಡ್ಗವನ್ನು “ಚೂಪಾದ ಆಯುಧ” ಅಥವಾ “ಉದ್ದವಾದ ಕತ್ತಿ” ಎಂದು ವಿವರಿಸುವುದಕ್ಕೆ ಉಪಯೋಗಿಸುತ್ತಾರೆ. ಕೆಲವೊಂದು ಅನುವಾದಗಳಲ್ಲಿ ಖಡ್ಗದ ಚಿತ್ರಣವನ್ನು ಇಟ್ಟಿರುತ್ತಾರೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಯಾಕೋಬ (ಯೇಸುವಿನ ಸಹೋದರ), ಯೋಹಾನ (ಸ್ನಾನಿಕನು), ನಾಲಗೆ, ದೇವರ ವಾಕ್ಯ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H19, H1300, H2719, H4380, H6609, H7524, H7973, G3162, G4501

ಖರ್ಜೂರ ವೃಕ್ಷ, ಖರ್ಜೂರ ವೃಕ್ಷಗಳು

# ಪದದ ಅರ್ಥವಿವರಣೆ:

“ಖರ್ಜೂರ ವೃಕ್ಷ” ಎನ್ನುವ ಪದವು ಪಂಖ ಯಂತ್ರದ ನಮೂನೆಯಲ್ಲಿರುವಂತೆ ಮೇಲ್ಭಾಗದಿಂದ ವಿಸ್ತರಿಸಲ್ಪಟ್ಟ ಉದ್ದ ಎಲೆಗಳ ಕೊಂಬುಗಳಿರುವ ಒಂದು ರೀತಿಯ ಎತ್ತರವಾದ ಮರವನ್ನು ಸೂಚಿಸುತ್ತದೆ.

  • ಸತ್ಯವೇದದಲ್ಲಿರುವ ಖರ್ಜೂರ ವೃಕ್ಷ ಸಾಧಾರಣವಾಗಿ “ಖರ್ಜೂರ ಹಣ್ಣು” ಎಂದು ಕರೆಯುವ ಹಣ್ಣುಗಳನ್ನು ಹೊಂದಿರುವ ಖರ್ಜೂರ ಮರವನ್ನು ಸೂಚಿಸುತ್ತದೆ. ಎಲೆಗಳು ಗರಿಗಳ ನಮೂನೆಯನ್ನು ಹೊಂದಿರುತ್ತವೆ.
  • ಖರ್ಜೂರ ಮರಗಳು ವಿಶಿಷ್ಟವಾಗಿ ಬಿಸಿಯಾದ, ತೇವವುಳ್ಳ ಹವಾಮಾನವನ್ನು ಹೊಂದಿರುವ ಸ್ಥಳಗಳಲ್ಲಿ ಬೆಳೆಯುತ್ತವೆ. ಅವುಗಳ ಎಲೆಗಳು ವರ್ಷ ಪೂರ್ತಿ ತುಂಬಾ ಹಚ್ಚು ಹಸಿರಾಗಿರುತ್ತವೆ.
  • ಯೇಸು ಕತ್ತೆಯ ಮೇಲೆ ಕುಳಿತು ಯೆರೂಸಲೇಮ್ ಪಟ್ಟಣದೊಳಗೆ ಪ್ರವೇಶಿಸುತ್ತಿರುವಾಗ, ಆತನು ಬರುತ್ತಿರುವಾಗ ಆತನ ಮುಂದೆ ನೆಲದ ಮೇಲೆ ಖರ್ಜೂರ ಕೊಂಬೆಗಳನ್ನು ಇಡುತ್ತಿದ್ದರು.
  • ಖರ್ಜೂರ ಕೊಂಬೆಗಳು ಜಯದ ಆಚರಣೆಗೆ ಮತ್ತು ಸಮಾಧಾನಕ್ಕೆ ಗುರುತಾಗಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಕತ್ತೆ, ಯೆರೂಸಲೇಮ್, ಸಮಾಧಾನ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3712, H8558, H8560, H8561, G5404

ಗಂಟೆ, ಗಂಟೆಗಳು

# ಪದದ ಅರ್ಥವಿವರಣೆ

ಒಂದು ಕಾರ್ಯವು ನಡೆದ ದಿನ ಕಾಲವನ್ನು ತಿಳಿಯಪಡಿಸಲು “ವೇಳೆ” ಎನ್ನುವ ಪದವನ್ನು ಸತ್ಯವೇದದಲ್ಲಿ ಅನೇಕ ಬಾರಿ ಉಪಯೋಗಿಸಲ್ಪಟ್ಟಿದೆ. “ಸಮಯ” ಅಥವಾ “ಸಂಧ್ರಭವನ್ನು” ಸೂಚಿಸಲು ಅಲಂಕಾರ ರೂಪದಲ್ಲಿ ಅದು ಉಪಯೋಗಿಸಲ್ಪಟ್ಟಿದೆ.

  • ಯಹೂದಿಯರು ದಿನದ ಕಾಲವನ್ನು ಸೂರ್ಯೋದಯದಿಂದ ಲೆಕ್ಕಿಸಿದರು (ಸುಮಾರು ಬೆಳಿಗ್ಗೆ 6 ಗಂಟೆ). ಉದಾಹರಣೆಗೆ, “ಒಂಬತ್ತನೇ ಗಳಿಗೆ” ಎಂದರೆ “ಮದ್ಯಾಹ್ನ 3 ಗಂಟೆ” ಎಂದರ್ಥ.
  • ರಾತ್ರಿ ಕಾಲದ ವೇಳೆಯನ್ನು ಸೂರ್ಯಾಸ್ತ ಸಮಯದಿಂದ ಲೆಕ್ಕಿಸಿದರು (ಸುಮಾರು ಸಂಜೆ 6 ಗಂಟೆ). ಉದಾಹರಣೆಗೆ, “ರಾತ್ರಿ ಒಂಬತ್ತನೇ ಗಳಿಗೆ” ಎಂದರೆ ನಮ್ಮ ಪ್ರಸ್ತುತ ಕಾಲದ ಪ್ರಕಾರ “ರಾತ್ರಿ 9 ಗಂಟೆ” ಎಂದರ್ಥ.
  • ಸತ್ಯವೇದ ಕಾಲ ಪ್ರಸ್ತುತ ಕಾಲದ ಸಮಯ ಪದ್ಧತಿಗೆ ನಿಖರವಾಗಿ ಸಂಬಂಧಿಸಿರುವದಿಲ್ಲ ಆದಕಾರಣ “ಸುಮಾರು ಒಂಭತ್ತು” ಅಥವಾ “ಸುಮಾರು ಆರು ಗಂಟೆ” ಎಂದು ಉಪಯೋಗಿಸಬಹುದು.
  • ದಿನದ ಯಾವ ವೇಳೆಯನ್ನು ಸೂಚಿಸುತ್ತಿದ್ದಾರೆಂದು ಸ್ಪಷ್ಟಪಡಿಸಲು “ಸಂಜೆ” ಅಥವಾ “ಬೆಳಿಗ್ಗೆ” ಅಥವಾ “ಮದ್ಯಾಹ್ನ” ಎಂದು ಕೆಲವು ಅನುವಾದಕರು ಉಪಯೋಗಿಸುತ್ತಾರೆ.
  • “ಆ ವೇಳೆಯಲ್ಲಿ” ಎನ್ನುವ ಮಾತಿಗೆ, “ಆ ಸಮಯದಲ್ಲಿ” ಅಥವಾ “ಆ ಸಂದರ್ಭದಲ್ಲಿ” ಎಂದು ಅನುವಾದಿಸಬಹುದು.
  • ಯೇಸುವಿನ ಕುರಿತಾಗಿ ಸಂಬೋಧಿಸಿದಾಗ, “ಆತನ ಸಮಯವು ಹತ್ತಿರವಾಯಿತು” ಎನ್ನುವ ಭಾವಕ್ಕೆ “ಆತನು ಮಾಡಬೇಕಾದ ವೇಳೆ ಸಮೀಪವಾಗಿದೆ” ಅಥವಾ “ಆತನಿಗಾಗಿ ನಿರ್ಣಯಿಸಿದ ವೇಳೆ ಸಮೀಪವಾಯಿತು” ಎಂದು ಅನುವಾದ ಮಾಡಬಹುದು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H8160, G5610

ಗಂಟೆ, ಗಂಟೆಗಳು

# ಪದದ ಅರ್ಥವಿವರಣೆ:

ಯಾವಾಗ ಅಥವಾ ಎಷ್ಟು ಹೊತ್ತು ತೆಗೆದುಕೊಳ್ಳುತ್ತದೆ ಎಂದು ಸೂಚಿಸುವುದಕ್ಕೆ ಉಪಯೋಗಿಸುವುದರ ಜೊತೆಗೆ, “ಗಂಟೆ” ಎನ್ನುವ ಪದವನ್ನು ಅನೇಕ ವಿಧವಾದ ಅಲಂಕಾರಿಕ ವಿಧಾನಗಳಲ್ಲಿ ಉಪಯೋಗಿಸಲ್ಪಟ್ಟಿರುತ್ತದೆ:

  • ಕೆಲವೊಂದುಸಲ “ಗಂಟೆ” ಎನ್ನುವುದು ಎನಾದರೊಂದನ್ನು ಮಾಡುವುದಕ್ಕೆ ಅಂದರೆ “ಪ್ರಾರ್ಥನೆಯ ಗಂಟೆ” ಎಂದು ಪ್ರಣಾಳಿಕೆಯ ಸಮಯವನ್ನು ಸೂಚಿಸುತ್ತದೆ.
  • ಯೇಸು ಶ್ರಮೆ ಹೊಂದುವ ಮತ್ತು ಮರಣಿಸುವ “ಗಳಿಗೆ ಬಂದಿದೆ” ಎಂದು ವಾಕ್ಯ ಹೇಳಿದಾಗ, ಇದಕ್ಕೆ ದೇವರು ಎಷ್ಟೋ ಕಾಲದ ಕೆಳಗೆ ಆಯ್ಕೆ ಮಾಡಿರುವ ಸಮಯವು-ನಡೆಯುವುದಕ್ಕೆ ನೇಮಿಸಲ್ಪಟ್ಟಿರುವ ಸಮಯವು ಬಂದಿದೆಯೆಂದು ಇದರ ಅರ್ಥವಾಗಿರುತ್ತದೆ.
  • “ಗಂಟೆ” ಎನ್ನುವುದು “ಆ ಕ್ಷಣವನ್ನೇ” ಅಥವಾ “ಈಗಿನ ಸಮಯದಲ್ಲೇ” ಎನ್ನುವ ಅರ್ಥವನ್ನು ಕೊಡುತ್ತದೆ.
  • “ಗಂಟೆ” ಆಲಸ್ಯವಾಗುತ್ತಿರುವದರ ಕುರಿತಾಗಿ ವಾಕ್ಯ ಮಾತನಾಡಿದಾಗ, ಸೂರ್ಯನು ತುಂಬಾ ಶೀಘ್ರವಾಗಿ ಮುಳುಗುತ್ತಿದ್ದಾನೆ, ದಿನದಲ್ಲಿ ಅದು ತುಂಬಾ ತಡವಾಗಿರುತ್ತದೆ ಎಂದರ್ಥ.

# ಅನುವಾದ ಸಲಹೆಗಳು:

  • ಇದನ್ನು ಅಲಂಕಾರಿಕವಾಗಿ ಉಪಯೋಗಿಸಿದಾಗ, “ಗಂಟೆ” ಎನ್ನುವ ಪದವನ್ನು “ಸಮಯ” ಅಥವಾ “ಕ್ಷಣ” ಅಥವಾ “ನೇಮಿಸಲ್ಪಟ್ಟ ಸಮಯ” ಎಂದೂ ಅನುವಾದ ಮಾಡಬಹುದು.
  • “ಆ ಗಳಿಗೆಯಲ್ಲಿ” ಅಥವಾ “ಅದೇ ಸಮಯದಲ್ಲಿ” ಎನ್ನುವ ಮಾತನ್ನು “ಆ ಕ್ಷಣದಲ್ಲೇ” ಅಥವಾ “ಆ ಸಮಯದಲ್ಲೇ” ಅಥವಾ “ತಕ್ಷಣವೇ” ಅಥವಾ “ಅವಾಗಲೇ” ಎಂದೂ ಅನುವಾದ ಮಾಡಬಹುದು.
  • “ಈ ಗಂಟೆ ಆಲಸ್ಯವಾಯಿತು” ಎನ್ನುವ ಮಾತನ್ನು “ದಿನದಲ್ಲಿ ಅದು ತಡವಾಗಿತ್ತು” ಅಥವಾ “ಅತೀ ಶೀಘ್ರವಾಗಿ ಕತ್ತಲಾಗುತ್ತಿದೆ” ಅಥವಾ “ಅದು ಮಧ್ಯಾಹ್ನವಾಗಿತ್ತು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಗಂಟೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H8160, G5610

ಗಟ್ಟಿಯಾದ ಕುತ್ತಿಗೆ, ಮೊಂಡು, ಮೊಂಡುತನದಿಂದ, ಮೊಂಡುತನ

# ಪದದ ಅರ್ಥವಿವರಣೆ:

“ಗಟ್ಟಿಯಾದ ಕುತ್ತಿಗೆ” ಎನ್ನುವ ಮಾತು ಪಶ್ಚಾತ್ತಾಪವನ್ನು ತಿರಸ್ಕರಿಸುತ್ತಾ, ದೇವರಿಗೆ ಅವಿಧೇಯತೆಯನ್ನು ತೋರಿಸುವ ಜನರನ್ನು ಸೂಚಿಸುವುದಕ್ಕೆ ಸತ್ಯವೇದದಲ್ಲಿ ಉಪಯೋಗಿಸಲ್ಪಟ್ಟ ಒಂದು ನಾಣ್ಣುಡಿಯಾಗಿರುತ್ತದೆ. ಅಂತಹ ಜನರು ತುಂಬಾ ಅಹಂಕಾರಿಗಳಾಗಿರುತ್ತಾರೆ ಮತ್ತು ಅವರು ದೇವರ ಅಧಿಕಾರಕ್ಕೆ ತಮ್ಮನ್ನು ತಾವು ಒಳಪಡಿಸಿಕೊಳ್ಳುವುದಿಲ್ಲ.

  • ಹಾಗೆಯೇ, “ಮೊಂಡು” ಎನ್ನುವ ಪದವು ಒಬ್ಬ ವ್ಯಕ್ತಿ ತನ್ನ ನಡತೆಯನ್ನು ಮಾರ್ಪಾಟು ಮಾಡಿಕೊಳ್ಳಬೇಕಾದ ಅವಶ್ಯಕತೆ ಇದ್ದರೂ, ತನ್ನ ಮನಸ್ಸನ್ನು ಅಥವಾ ಕ್ರಿಯೆಗಳನ್ನು ಮಾರ್ಪಾಟು ಮಾಡಿಕೊಳ್ಳುವುದಕ್ಕೆ ತಿರಸ್ಕಾರ ಮಾಡುವ ವ್ಯಕ್ತಿಯನ್ನು ವಿವರಿಸುತ್ತದೆ. ಮೊಂಡುತನದ ಜನರು ಇತರ ವ್ಯಕ್ತಿಗಳು ಹೇಳುವ ಒಳ್ಳೇಯ ಸಲಹೆಗಳನ್ನು ಅಥವಾ ಎಚ್ಚರಿಕೆಗಳನ್ನು ಕೇಳುವುದಕ್ಕೆ ಇಷ್ಟಪಡುವುದಿಲ್ಲ.
  • ಇಸ್ರಾಯೇಲ್ಯರು “ಗಟ್ಟಿಯಾದ ಕುತ್ತಿಗೆ” ಇರುವವರು ಎಂದು ಹಳೇ ಒಡಂಬಕೆಯಲ್ಲಿ ಹೇಳಲ್ಪಟ್ಟಿರತ್ತದೆ, ಯಾಕಂದರೆ ಇವರು ಪಶ್ಚಾತ್ತಾಪ ಹೊಂದಿ, ಯೆಹೋವನ ಕಡೆಗೆ ತಿರುಗಿಕೊಳ್ಳಿರಿ ಎಂದು ಬೇಡುವ ದೇವರ ಪ್ರವಾದಿಗಳಿಂದ ಬರುವ ಅನೇಕ ಸಂದೇಶಗಳನ್ನು ಕೇಳುವುದಕ್ಕೆ ಅವರು ಇಷ್ಟಪಡುವುದಿಲ್ಲ.
  • ಕುತ್ತಿಗೆ “ಬಿರುಸಾಗಿದ್ದರೆ”, ಅದು ಸುಲಭವಾಗಿ ಬಾಗುವುದಿಲ್ಲ. ಒಬ್ಬ ವ್ಯಕ್ತಿ ತನ್ನ ಮಾರ್ಗಗಳನ್ನು ಮಾರ್ಪಡಿಸಿಕೊಳ್ಳುವುದಕ್ಕೆ ತಿರಸ್ಕರಿಸುವ ಅಥವಾ “ಬಾಗದಿರುವ” ವ್ಯಕ್ತಿಯನ್ನು ಸೂಚಿಸುವುದಕ್ಕೆ ಅನುವಾದ ಭಾಷೆಯಲ್ಲಿ ಬೇರೊಂದು ನಾಣ್ಣುಡಿಯನ್ನು ಹೊಂದಿರಬಹುದು.
  • ಈ ಪದವನ್ನು ಅಥವಾ ಈ ಮಾತನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಗರ್ವದಿಂದ ಮೊಂಡುತನವಿರುವ” ಅಥವಾ “ಅಹಂಕಾರಿ ಮತ್ತು ಬಗ್ಗದ” ಅಥವಾ “ಮಾರ್ಪಡುವುದಕ್ಕೆ ತಿರಸ್ಕರಿಸುವ” ಎನ್ನುವ ಮಾತುಗಳನ್ನು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಅಹಂಕಾರಿ, ಗರ್ವ, ಪಶ್ಚಾತ್ತಾಪ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H47, H3513, H5637, H6203, H6484, H7185, H7186, H7190, H8307, G483, G4644, G4645

ಗದರಿಸು, ಗದರಿಸುವುದು, ಗದರಿಸಿದೆ

# ಪದದ ಅರ್ಥವಿವರಣೆ:

ಗದರಿಸುವುದು ಎಂದರೆ ಒಬ್ಬ ವ್ಯಕ್ತಿ ಪಾಪ ಮಾಡದ ಹಾಗೆ ಸಹಾಯ ಮಾಡುವ ಕ್ರಮದಲ್ಲಿ ಮಾತಿನ ಮೂಲಕ ಅವನನ್ನು ಸರಿಪಡಿಸುವುದು ಎಂದರ್ಥ. ಅಂಥಹ ತಿದ್ದುಪಡಿಯು ಗದರಿಸುವುದಾಗಿರುತ್ತದೆ.

  • ವಿಶ್ವಾಸಿಗಳು ದೇವರಿಗೆ ಸ್ಪಷ್ಟವಾಗಿ ಅವಿಧೇಯತೆಯನ್ನು ತೋರಿಸುವಾಗ ಅವರನ್ನು ಗದರಿಸಬೇಕೆಂದು ಹೊಸ ಒಡಂಬಡಿಕೆಯು ಕ್ರೈಸ್ತರಿಗೆ ಅಜ್ಞಾಪಿಸುತ್ತಿದೆ.
  • ಮಕ್ಕಳು ತಂದೆತಾಯಿಗಳಿಗೆ ಅವಿಧೇಯತೆಯನ್ನು ತೋರಿಸುವಾಗ ತಮ್ಮ ಮಕ್ಕಳನ್ನು ಗದರಿಸಬೇಕೆಂದು ಜ್ಞಾನೋಕ್ತಿಗಳ ಪುಸ್ತಕವು ಸೂಚನೆಗಳನ್ನು ಕೊಟ್ಟಿರುತ್ತದೆ.
  • ಪಾಪದಲ್ಲಿ ತಮ್ಮನ್ನು ತಾವು ಮುಳುಗಿಸಿಕೊಳ್ಳುವವರ ಮೂಲಕ ಪಾಪವನ್ನು ಮಾಡಿದ ಪ್ರತಿಯೊಬ್ಬರನ್ನು ತಡೆಗಟ್ಟುವುದಕ್ಕೆ ಗದರಿಸುವುದೆನ್ನುವುದು ವಿಶಿಷ್ಟವಾಗಿ ಕೊಡಲ್ಪಟ್ಟಿರುತ್ತದೆ.
  • ಇದನ್ನು “ತೀವ್ರವಾಗಿ ಸರಿಪಡಿಸು” ಅಥವಾ “ಎಚ್ಚರಿಸು” ಎನ್ನುವ ಮಾತುಗಳ ಮೂಲಕ ಅನುವಾದ ಮಾಡಬಹುದು.
  • “ಗದರಿಸು” ಎನ್ನುವ ಪದವನ್ನು “ಗಂಭೀರವಾಗಿ ಸರಿಪಡಿಸು” ಅಥವಾ “ಬಲವಾದ ವಿಮರ್ಶೆ” ಎಂದೂ ಅನುವಾದ ಮಾಡಬಹುದು.
  • “ಗದರಿಸದಿರುವುದು” ಎನ್ನುವ ಮಾತನ್ನು “ಎಚ್ಚರಿಸದಿರುವುದು” ಅಥವಾ “ವಿಮರ್ಶೆ ಮಾಡದಿರುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಎಚ್ಚರಿಸು, ಅವಿಧೇಯತೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1605, H1606, H2778, H2781, H3198, H4045, H4148, H8156, H8433, G298, G299, G1649, G1651, G1969, G2008, G3679

ಗಂಧಕ, ಗಂಧಕದ

# ಪದದ ಅರ್ಥವಿವರಣೆ:

ಗಂಧಕ ಎನ್ನುವುದು ಇದನ್ನು ಬೆಂಕಿಯ ಮೇಲೆ ಇಟ್ಟಾಗ ಉರಿಯುವ ದ್ರವವಾಗಿ ಹಳದಿ ಬಣ್ಣದಲ್ಲಿ ಮಾರ್ಪಡುವ ಪದಾರ್ಥವಾಗಿರುತ್ತದೆ.

  • ಕೊಳೆತ ಮೊಟ್ಟೆಗಳ ವಾಸನೆಯಂತೆಯೇ ಗಂಧಕವು ತುಂಬಾ ಬಲವಾದ ವಾಸನೆಯನ್ನು ಹೊಂದಿರುತ್ತದೆ.
  • ಸತ್ಯವೇದದಲ್ಲಿ ಉರಿಯುವ ಗಂಧಕಾವು ಅದೈವಿಕ ಮತ್ತು ತಿರಸ್ಕಾರ ಮಾಡುವ ಜನರ ಮೇಲೆ ದೇವರು ತೋರಿಸುವ ತೀರ್ಪಿಗೆ ಗುರುತಾಗಿರುತ್ತದೆ.
  • ಲೋಟನ ಕಾಲದಲ್ಲಿ ದೇವರು ಸೊದೊಮ್ ಮತ್ತು ಗೊಮೋರ ಎನ್ನುವ ದುಷ್ಟ ಪಟ್ಟಣಗಳ ಮೇಲೆ ಬೆಂಕಿಯನ್ನು ಮತ್ತು ಗಂಧಕವನ್ನು ಸುರಿಸಿದನು.
  • ಕೆಲವೊಂದು ಬೈಬಲ್ ಅನುವಾದಗಳಲ್ಲಿ ಗಂಧಕವು “ಗಂಡುಬೀರಿಯಾಗಿ” ಸೂಚಿಸಲ್ಪಟ್ಟಿರುತ್ತದೆ, ಈ ಪದಕ್ಕೆ “ಉರಿಯುವ ಕಲ್ಲು” ಎನ್ನುವ ಅಕ್ಷರಾರ್ಥವಾಗಿರುತ್ತದೆ.

# ಅನುವಾದ ಸಲಹೆಗಳು:

  • ಈ ಪದವನ್ನು ಅನುವಾದ ಮಾಡುವ ವಿಧಾನದಲ್ಲಿ “ಉರಿಯುವ ಹಳದಿ ಕಲ್ಲು” ಅಥವಾ “ಉರಿಯುವ ಹಳದಿ ಬಣ್ಣದಲ್ಲಿರುವ ಬಂಡೆ” ಎನ್ನುವ ಮಾತುಗಳನ್ನು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಗೊಮೋರ, ನ್ಯಾಯಾಧೀಶ, ಲೋಟ, ತಿರಸ್ಕಾರ, ಸೊದೋಮ, ದೈವಿಕ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1614, G2303

ಗರ್ಭ, ಗರ್ಭಗಳು

# ಪದದ ಅರ್ಥವಿವರಣೆ:

“ಗರ್ಭ” ಎನ್ನುವ ಪದವು ತಾಯಿ ಹೊಟ್ಟೆಯಲ್ಲಿ ಶಿಶುವು ಬೆಳೆಯುವ ಸ್ಥಳವನ್ನು ಸೂಚಿಸುತ್ತದೆ.

  • ಕೆಲವೊಂದುಬಾರಿ ಸಭ್ಯ ಮತ್ತು ಕಡಿಮೆ ನೇರವಾಗಿರುವದರಲ್ಲಿ ಉಪಯೋಗಿಸಲ್ಪಟ್ಟಿರುವ ಹಳೇ ಪದವಾಗಿರುತ್ತದೆ. (ನೋಡಿರಿ: ಸೌಮ್ಯೋಕ್ತಿ
  • ಗರ್ಭ ಎನ್ನುವ ಪದಕ್ಕೆ ಉಪಯೋಗಿಸುತ್ತಿರುವ ಆಧುನಿಕ ಪದವು “ಗರ್ಭಾಶಯ (ಯುಟೆರಸ್)” ಎಂದಾಗಿರುತ್ತದೆ.
  • ಕೆಲವೊಂದು ಭಾಷೆಗಳಲ್ಲಿ ಸ್ತ್ರೀಯರ ಗರ್ಭವನ್ನು ಅಥವಾ ಗರ್ಭಾಶಯವನ್ನು ಸೂಚಿಸುವುದಕ್ಕೆ “ಹೊಟ್ಟೆ” ಎನ್ನುವ ಪದವನ್ನೇ ಉಪಯೋಗಿಸುತ್ತಾರೆ.
  • ಅನುವಾದ ಮಾಡುವ ಭಾಷೆಯಲ್ಲಿ ಸ್ವಾಭಾವಿಕವಾಗಿ, ಅಂಗೀಕೃತವಾಗಿ, ಚೆನ್ನಾಗಿ ಗೊತ್ತಿರುವ ಪದವನ್ನು ಉಪಯೋಗಿಸಿರಿ.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H990, H4578, H7356, H7358, G1064, G2836, G3388

ಗರ್ಭತಾಳು, ಗರ್ಭತಾಳುವಳು, ಗರ್ಭತಾಳಿದಳು, ಗರ್ಭಧಾರಣೆ

# ಪದದ ಅರ್ಥವಿವರಣೆ:

“ಗರ್ಭತಾಳು” ಅಥವಾ “ಗರ್ಭಧಾರಣೆ” ಎನ್ನುವ ಪದಗಳು ಸಹಜವಾಗಿ ಒಬ್ಬ ಮಗುವನ್ನು ಗರ್ಭಧರಿಸಿದ ಗರ್ಭಿಣಿಗೆ ಸೂಚಿಸುತ್ತದೆ. ಪ್ರಾಣಿಗಳು ಗರ್ಭಧರಿಸುವಿಕೆಗೆ ಕೂಡ ಈ ಪದವು ಅನ್ವಯಿಸಲ್ಪಡುತ್ತದೆ.

  • “ಒಬ್ಬ ಮಗುವಿಗೆ ಗರ್ಭಧಾರಣೆಯಾಗುವ” ಮಾತನ್ನು “ಗರ್ಭಿಣಿಯಾಗಿದ್ದಾಳೆ” ಎಂದೂ ಅಥವಾ ಈ ಪದಕ್ಕೆ ಅರ್ಥಬರುವ ಅಂಗೀಕರಿಸುವ ಪದದೊಂದಿಗೆ ಕೂಡ ಅನುವಾದ ಮಾಡಬಹುದು.
  • “ಗರ್ಭಧಾರಣೆ” ಎನ್ನುವ ಸಂಬಂಧಿತ ಪದವನ್ನೂ “ಗರ್ಭಧರಿಸಿದ ಆರಂಭ ಸಮಯ” ಅಥವಾ “ಗರ್ಭಿಣಿಯಾಗುವ ಕ್ಷಣ” ಎಂದೂ ಅನುವಾದ ಮಾಡಬಹುದು.
  • ಈ ಪದಗಳು ಯಾವುದಾದರೊಂದನ್ನು ತಯಾರು ಮಾಡುವುದನ್ನು ಅಥವಾ ಎನಾದರೊಂದನ್ನು ಆಲೋಚನೆ ಮಾಡುವುದನ್ನು ಸೂಚಿಸುತ್ತವೆ, ಉದಾಹರಣೆಗೆ, ಆಲೋಚನೆ, ಪ್ರಣಾಳಿಕೆ, ಅಥವಾ ಕೆಲಸ. ಈ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ ಸಂದರ್ಭಾನುಸಾರವಾಗಿ “ಯಾವುದಾದರೊಂದರ ಕುರಿತಾಗಿ ಆಲೋಚನೆ ಮಾಡು” ಅಥವಾ “ಪ್ರಣಾಳಿಕೆ ಮಾಡು” ಅಥವಾ “ತಯಾರು ಮಾಡು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • “ಪಾಪ ಗರ್ಭಧಾರಣೆಯಾದಾಗ” ಎಂದು ಕೆಲವೊಂದುಸಲ ಈ ಪದವನ್ನು ಅಲಂಕಾರಿಕ ಭಾಷೆಯಲ್ಲಿಯೂ ಬಳಸುತ್ತಾರೆ, ಇದಕ್ಕೆ “ಪಾಪ ಮಾಡಬೇಕೆಂದು ಆಲೋಚನೆ ಬಂದಾಗ” ಅಥವಾ “ಪಾಪ ಮಾಡುವ ಆರಂಭ ಸಮಯ” ಅಥವಾ “ಪಾಪ ಮೊಟ್ಟ ಮೊದಲು ಆರಂಭವಾಗುವಾಗ” ಎನ್ನುವ ಅರ್ಥಗಳಿವೆ.

(ಈ ಪದಗಳನ್ನು ಸಹ ನೋಡಿರಿ : ತಯಾರಿಸು, ಗರ್ಭ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2029, H2030, H2032, H2232, H2254, H2803, H3179, G1080, G1722, G2602, G2845, G4815

ಗಾದೆನುಡಿ, ಗಾದೆನುಡಿಗಳು

# ಪದದ ಅರ್ಥವಿವರಣೆ:

ಗಾದೆನುಡಿ ಎನ್ನುವುದು ಜ್ಞಾನವನ್ನು ಅಥವಾ ಸತ್ಯವನ್ನು ವ್ಯಕ್ತಪಡಿಸುವ ಚಿಕ್ಕ ವ್ಯಾಖ್ಯೆಯಾಗಿರುತ್ತವೆ.

  • ಗಾದೆನುಡಿಗಳು ಶಕ್ತಿಯುತವಾಗಿರುತ್ತವೆ ಯಾಕಂದರೆ ಅವುಗಳನ್ನು ತುಂಬಾ ಸುಲಭವಾಗಿ ನೆನಪಿಟ್ಟುಕೊಳ್ಳಬಹುದು ಮತ್ತು ಅವುಗಳನ್ನು ಪುನರಾವರ್ತಿಸಬಹುದು.
  • ಅನೇಕಸಲ ಗಾದೆನುಡಿಯಲ್ಲಿ ಪ್ರತಿದಿನ ದೈನಂದಿನ ಜೀವನದಿಂದ ಪ್ರಯೋಗಾತ್ಮಕ ಉದಾಹರಣೆಗಳು ಒಳಗೊಂಡಿರುತ್ತವೆ.
  • ಕೆಲವೊಂದು ಗಾದೆಮಾತುಗಳು ತುಂಬಾ ಸ್ಪಷ್ಟವಾಗಿರುತ್ತವೆ ಮತ್ತು ಚೆನ್ನಾಗಿ ನಿರ್ದೇಶನ ಮಾಡುತ್ತವೆ, ಆದರೆ ಕೆಲವೊಂದು ಗಾದೆಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ತುಂಬಾ ಕಷ್ಟಕರವಾಗಿರುತ್ತವೆ.
  • ಅರಸನಾದ ಸೊಲೊಮೋನನು ಜ್ಞಾನವುಳ್ಳವನೆಂದು ಪ್ರಸಿದ್ಧಿ ಹೊಂದಿದನು ಮತ್ತು ಸುಮಾರು 1,000 ಗಾದೆಮಾತುಗಳನ್ನು ಬರೆದನು.
  • ಯೇಸು ಅನೇಕಬಾರಿ ಬೋಧನೆ ಮಾಡುತ್ತಿರುವಾಗ ಜ್ಞಾನೋಕ್ತಿಗಳನ್ನು ಅಥವಾ ಸಾಮ್ಯಗಳನ್ನು ಉಪಯೋಗಿಸಿದ್ದರು.
  • “ಗಾದೆನುಡಿ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಜ್ಞಾನೋಕ್ತಿ” ಅಥವಾ “ಸತ್ಯವಾದ ಮಾತು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಸೊಲೊಮೋನನು, ನಿಜ, ಜ್ಞಾನ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2420, H4911, H4912, G3850, G3942

ಗುಂಡಿ, ಗುಂಡಿಗಳು, ಮುಚ್ಚಿದ ಗುಂಡಿ

# ಪದದ ಅರ್ಥವಿವರಣೆ:

ಗುಂಡಿ ಎನ್ನುವುದು ನೆಲದ ಮೇಲೆ ಅಗಿದು ಒಂದು ದೊಡ್ಡ ಆಳವಾದ ರಂಧ್ರವನ್ನು ಸೂಚಿಸುತ್ತದೆ.

  • ಪ್ರಾಣಿಗಳನ್ನು ಹಿಡಿಯುವುದಕ್ಕೆ ಅಥವಾ ನೀರನ್ನು ಪಡೆಯುವುದಕ್ಕೆ ಜನರು ಗುಂಡಿಗಳನ್ನು ಅಗಿಯುತ್ತಿದ್ದರು.
  • ಖೈದಿಗಳನ್ನು ತಾತ್ಕಾಲಿಕವಾಗಿ ಇರಿಸುವ ಒಂದು ಸ್ಥಳವನ್ನಾಗಿಯೂ ಗುಂಡಿಯನ್ನು ಉಪಯೋಗಿಸುತ್ತಿದ್ದರು.
  • “ಗುಂಡಿ” ಎನ್ನುವ ಪದವು ಕೆಲವೊಂದುಬಾರಿ ನರಕವನ್ನು ಅಥವಾ ಸಮಾಧಿಯನ್ನು ಸೂಚಿಸುತ್ತದೆ. ಇನ್ನೂ ಕೆಲವೊಂದು ಸಮಯಗಳಲ್ಲಿ “ಪಾತಾಳವನ್ನು” ಸೂಚಿಸುತ್ತದೆ.
  • ತುಂಬಾ ಆಳವಾಗಿರುವ ಗುಂಡಿಯನ್ನು “ನೀರು ತೊಟ್ಟಿ” ಎಂದೂ ಕರೆಯುತ್ತಾರೆ.
  • “ಗುಂಡಿ” ಎನ್ನುವ ಪದವನ್ನು ನಾಶನದ ಪರಿಸ್ಥಿತಿಯಲ್ಲಿ ಸಿಕ್ಕಿಬೀಳಿಸುವುದನ್ನು ವಿವರಿಸುವುದಕ್ಕೆ ಅಥವಾ ನಾಶವನ್ನುಂಟು ಮಾಡುವ ಅಭ್ಯಾಸಗಳಲ್ಲಿ, ಪಾಪದಲ್ಲಿ ಆಳವಾಗಿ ತೊಡಗಿರುವ ಪರಿಸ್ಥಿತಿಯನ್ನು ವಿವರಿಸುವುದಕ್ಕೆ “ನಾಶನದ ಗುಂಡಿ” ಎಂದು ಬಳಸುವ ಮಾತುಗಳಲ್ಲಿ ಅಲಂಕಾರಿಕವಾಗಿ ಉಪಯೋಗಿಸಲ್ಪಟ್ಟಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಪಾತಾಳ, ನರಕ, ಸೆರೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H875, H953, H1356, H1360, H1475, H2352, H4087, H4113, H4379, H6354, H7585, H7745, H7816, H7825, H7845, H7882, G12, G999, G5421

ಗುಡಿಸು, ಗುಡಿಸುವುದು, ಗುಡಿಸಿದೆ, ಗುಡಿಸುತ್ತಿರುವುದು

# ಸತ್ಯಾಂಶಗಳು:

“ಗುಡಿಸು” ಎನ್ನುವ ಪದಕ್ಕೆ ಸಾಧಾರಣವಾಗಿ ಪೊರಕೆಯನ್ನು ಕೈಯಿಂದ ಹಿಡಿದು ಅಗಲವಾಗಿ ಬಳಿಸುತ್ತಾ ಕಸವನ್ನು ತೊಲಗಿಸುವುದು ಎಂದರ್ಥ. “ಗುಡಿಸಿದೆ” ಎಂದರೆ “ಗುಡಿಸು” ಎನ್ನುವ ಭೂತಕಾಲ ಪದವಾಗಿರುತ್ತದೆ. ಈ ಪದಗಳನ್ನು ಅಲಂಕಾರಿಕವಾಗಿ ಉಪಯೋಗಿಸುತ್ತಾರೆ.

  • “ಗುಡಿಸು” ಎನ್ನುವ ಪದವನ್ನು ಅತೀ ಶೀಘ್ರವಾಗಿ, ಖಚಿತವಾಗಿ, ವ್ಯಾಪಕವಾಗಿ ಚಲಿಸುವುದರ ಮೂಲಕ ಸೈನ್ಯವು ಧಾಳಿಯನ್ನು ಹೇಗೆ ಮಾಡುತ್ತಾರೆಂದು ವಿವರಿಸುವುದಕ್ಕೆ ಅಲಂಕಾರಿಕವಾಗಿ ಉಪಯೋಗಿಸುತ್ತಾರೆ.
  • ಉದಾಹರಣೆಗೆ, ಅಶ್ಯೂರಿಯರು ಯೆಹೂದ್ಯ ರಾಜ್ಯವನ್ನು “ಗುಡಿಸುತ್ತಾರೆ” ಎಂದು ಯೇಶಾಯನು ಪ್ರವಾದಿಸಿದನು. ಈ ಮಾತಿಗೆ ಅವರು ಯೆಹೂದವನ್ನು ನಾಶಗೊಳಿಸಿ, ಅದರಲ್ಲಿರುವ ಜನರನ್ನು ಸೆರೆಗೊಯ್ಯುತ್ತಾರೆ ಎಂದರ್ಥವಾಗಿರುತ್ತದೆ.
  • ಜನರನ್ನು ಮತ್ತು ಕೆಲವೊಂದು ವಸ್ತುಗಳನ್ನು ನೀರಿನ ಬಲಪ್ರಯೋಗದಿಂದ ಹೆಚ್ಚಾಗಿ ಪಕ್ಕಕ್ಕೆ ತೊಲಗಿಸುವ ಕ್ರಿಯೆಯನ್ನು ವಿವರಿಸುವುದಕ್ಕೆ ಕೂಡ “ಗುಡಿಸು” ಎನ್ನುವ ಪದವನ್ನು ಉಪಯೋಗಿಸುತ್ತಾರೆ.
  • ಒಬ್ಬ ವ್ಯಕ್ತಿಗೆ ತಡೆಯಲಾರದಷ್ಟು ಕಷ್ಟಗಳು ಸುತ್ತಿಕೊಂಡಾಗ, ಆ ವ್ಯಕ್ತಿಯ ಪರಿಸ್ಥಿತಿಯನ್ನು “ಅವು ಅವನನ್ನು “ಗುಡಿಸುತ್ತಿವೆ” ಎಂದು ಹೇಳಲಾಗುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಅಶ್ಯೂರ್, ಯೆಶಯಾ, ಯೆಹೂದ, ಪ್ರವಾದಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H622, H857, H1640, H2498, H2894, H3261, H5500, H5502, H5595, H7857, H8804, G4216, G4563, G4951

ಗುಣಪಡಿಸು, ಗುಣವಾಗಿದೆ, ಸ್ವಸ್ಥಪಡಿಸು, ಸ್ವಸ್ಥಪಡಿಸುವುದು, ಸ್ವಸ್ಥತೆ, ಸ್ವಸ್ಥತೆಗಳು, ಗುಣಪಡಿಸುವಾತನು, ಆರೋಗ್ಯ, ಅರೋಗ್ಯಕರವಾದ, ಅನಾರೋಗ್ಯ

# ಪದದ ಅರ್ಥವಿವರಣೆ:

“ಸ್ವಸ್ಥಪಡಿಸು” ಮತ್ತು “ಗುಣಪಡಿಸು” ಎನ್ನುವ ಪದಗಳೆರಡು ರೋಗ, ಗಾಯ, ಅಥವಾ ಅಂಗವಿಕಲತೆಗಳಿಂದ ನರಳುತ್ತಿರುವ ಒಬ್ಬ ವ್ಯಕ್ತಿ ತಿರುಗಿ ಆರೋಗ್ಯವನ್ನು ಪಡೆಯುವುದನ್ನು ಸೂಚಿಸುತ್ತವೆ.

  • “ಗುಣವನ್ನು” ಅಥವಾ “ಸ್ವಸ್ಥತೆಯನ್ನು” ಪಡೆದ ವ್ಯಕ್ತಿ “ಚೆನ್ನಾಗಿ ಮಾಡಲ್ಪಟ್ಟಿದ್ದಾನೆ” ಅಥವಾ “ಆರೋಗ್ಯವನ್ನು ಹೊಂದಿಕೊಂಡಿದ್ದಾನೆ”.
  • ಸ್ವಸ್ಥತೆ ಎನ್ನುವುದು ಸ್ವಾಭಾವಿಕವಾಗಿ ನಡೆಯುತ್ತದೆ, ಯಾಕಂದರೆ ದೇವರು ನಮ್ಮ ಶರೀರಗಳಿಗೆ ಅನೇಕವಾದ ಗಾಯಗಳಿಂದ ಮತ್ತು ರೋಗಗಳಿಂದ ತಿರುಗಿ ಗುಣವಾಗುವ ಸಾಮರ್ಥ್ಯವನ್ನು ಕೊಟ್ಟಿದ್ದಾನೆ. ಈ ರೀತಿಯ ಸ್ವಸ್ಥತೆ ಸಹಜವಾಗಿ ನಿದಾನವಾಗಿ ನಡೆಯುತ್ತದೆ.
  • ಆದರೆ ಕೆಲವೊಂದು ಪರಿಸ್ಥಿತಿಗಳಾಗಿರುವ ಕುರುಡುತನ ಅಥವಾ ಪಾರ್ಶ್ವವಾಯು ಮತ್ತು ಕೆಲವೊಂದು ತೀವ್ರ ರೋಗಗಳಾಗಿರುವ ಕುಷ್ಟುತನ ಎನ್ನುವವುಗಳು ತಮ್ಮಷ್ಟಕ್ಕೆ ಅವೇ ಗುಣವಾಗುವುದಿಲ್ಲ. ಒಂದುವೇಳೆ ಜನರು ಇಂಥಹ ರೋಗಗಳಿಂದ ಗುಣವಾದರೆ, ಅದು ಸಹಜವಾಗಿ ಆಕಸ್ಮಿಕವಾದ ರೀತಿಯಲ್ಲಿ ಉಂಟಾಗುವ ಅದ್ಭುತವೆಂದು ಹೇಳಬಹುದು.
  • ಉದಾಹರಣೆಗೆ, ಯೇಸು ಅನೇಕಮಂದಿ ಕುರುಡರನ್ನು ಅಥವಾ ಕುಂಟರನ್ನು ಅಥವಾ ರೋಗಿಗಳನ್ನು ಗುಣಪಡಿಸಿದರು ಮತ್ತು ಅವರು ಚೆನ್ನಾಗಿ ಸ್ವಸ್ಥತೆಯನ್ನು ಪಡೆದುಕೊಂಡವರಾದರು.
  • ಅಪೊಸ್ತಲರು ಕೂಡ ಅದ್ಭುತ ರೀತಿಯಾಗಿ ಜನರನ್ನು ಗುಣಪಡಿಸಿದರು, ಪೇತ್ರನು ಹುಟ್ಟು ಕುಂಟನನ್ನು ಇದ್ದಕ್ಕಿದ್ದಂತೆ ಚೆನ್ನಾಗಿ ನಡೆಯುವವನಾಗಿ ಮಾಡಿದನು.

(ಈ ಪದಗಳನ್ನು ಸಹ ನೋಡಿರಿ : ಅದ್ಭುತ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಉದಾಹರಣೆಗಳು:

  • 19:14 ಭಯಂಕರವಾದ ಚರ್ಮ ರೋಗವನ್ನು ಹೊಂದಿಕೊಂಡ ಶತ್ರುವಿನ ಸೈನ್ಯಾಧಿಕಾರಿಯಾದ ನಾಮಾನನಿಗೆ ಅದ್ಭುತಗಳಲ್ಲಿ ಒಂದು ಅದ್ಭುತ ನಡೆಯಿತು. ಇವನು ಎಲೀಷನ ಕುರಿತಾಗಿ ಕೇಳಿಸಿಕೊಂಡಿದ್ದನು, ಅದ್ದರಿಂದ ಇವನು ಎಲೀಷನ ಬಳಿಗೆ ಹೋಗಿ ನನ್ನನ್ನು ___ ಗುಣಪಡಿಸು ____ ಎಂದು ಕೇಳಿಕೊಂಡನು.
  • 21:10 ಮೆಸ್ಸೀಯನು ಕಿವುಡರನ್ನು, ಕುರುಡರನ್ನು, ಮೂಕರನ್ನು ಅಥವಾ ಕುಂಟರನ್ನು ಮತ್ತು ರೋಗಿಗಳನ್ನು ___ ಗುಣಪಡಿಸುವನೆಂದು ____ ಇವನೂ (ಯೆಶಯಾ) ಪ್ರವಾದಿಸಿದ್ದನು.
  • 26:06 “ಪ್ರವಾದಿಯಾದ ಎಲೀಷನ ಕಾಲದಲ್ಲಿ ಇಸ್ರಾಯೇಲ್ .ನಲ್ಲಿ ಅನೇಕಮಂದಿ ಚರ್ಮ ರೋಗಿಗಳು ಇದ್ದಿದ್ದರು. ಆದರೆ ಎಲೀಷನು ಅವರಲ್ಲಿ ಯಾರನ್ನೂ __ ಗುಣಪಡಿಸಲಿಲ್ಲ ___. ಇವನು ಕೇವಲ ಇಸ್ರಾಯೇಲ್ ಶತ್ರುಗಳ ಸೈನ್ಯಾಧಿಪತಿಯಾದ ನಾಮಾನನ ಚರ್ಮ ರೋಗವನ್ನು ಮಾತ್ರ ___ ಗುಣಪಡಿಸಿದ್ದನು ____ .
  • 26:08 ಅವರು ರೋಗಿಗಲನ್ನು ಅಥವಾ ಅಂಗವಿಕಲರನ್ನು, ಕುರುಡರನ್ನು, ಕುಂಟರನ್ನು, ಕಿವುಡರನ್ನು, ಮೂಕರನ್ನು ತೆಗೆದುಕೊಂಡು ಬಂದಿದ್ದರು, ಆಗ ಯೇಸು ಅವೆರಲ್ಲರನ್ನು ___ ಗುಣಪಡಿಸಿದನು ___ .
  • 32:14 ಯೇಸು ಅನೇಕಮಂದಿ ರೋಗಿಗಳನ್ನು __ ಸ್ವಸ್ಥಪಡಿಸಿದ್ದನೆಂದು ____ ಆಕೆ ಕೇಳಿದ್ದಳು, ಇದರಿಂದ “ಯೇಸುವಿನ ವಸ್ತ್ರಗಳನ್ನು ಮುಟ್ಟಿದರೆ ಸಾಕು, ನಾನು __ ಸ್ವಸ್ಥತೆಯನ್ನು ___ ಹೊಂದುತ್ತೇನೆಂದು ಆಕೆ ಯೋಚನೆ ಮಾಡಿದ್ದಳು!”
  • 44:03 ಆಕಸ್ಮಿಕವಾಗಿ, ದೇವರು ಕುಂಟ ಮನುಷ್ಯನನ್ನು ___ ಗುಣಪಡಿಸಿದನು ___ . ಆಗ ಅವನು ನಡೆಯುವುದಕ್ಕೆ ಮತ್ತು ಜಿಗಿಯುವುದಕ್ಕೆ ಆರಂಭಿಸಿ, ದೇವರನ್ನು ಮಹಿಮೆಪಡಿಸಿದನು
  • 44:08 “ನಿಮ್ಮ ಮುಂದೆ ನಿಂತಿರುವ ಈ ಮನುಷ್ಯನು ಮೆಸ್ಸೀಯನಾದ ಯೇಸುವಿನ ಶಕ್ತಿಯಿಂದ ___ ಸ್ವಸ್ಥತೆ ___ ಹೊಂದಿಕೊಂಡಿದ್ದಾನೆ” ಎಂದು ಪೇತ್ರನು ಅವರಿಗೆ ಉತ್ತರವನ್ನು ಕೊಟ್ಟನು.
  • 49:02 ಯೇಸು ದೇವರೆಂದು ನಿರೂಪಿಸಿಕೊಳ್ಳಲು ಅನೇಕ ಅದ್ಭುತಗಳನ್ನು ಮಾಡಿದನು. ಆತನು ನೀರಿನ ಮೇಲೆ ನಡೆದನು, ಬಿರುಗಾಳಿಗಳನ್ನು ಶಾಂತಗೊಳಿಸಿದನು, ಅನೇಕ ರೋಗಿಗಳನ್ನು ___ ಗುಣಪಡಿಸಿದನು ____, ದೆವ್ವಗಳನ್ನು ಹೋಗಲಾಡಿಸಿದನು, ಸತ್ತವರನ್ನು ಎಬ್ಬಿಸಿದನು, ಮತ್ತು ಐದು ರೊಟ್ಟಿಗಳನ್ನು, ಎರಡು ಚಿಕ್ಕ ಮೀನುಗಳನ್ನು 5,000 ಜನರಿಗೆ ಬೇಕಾದಷ್ಟು ಆಹಾರವನ್ನು ಹಂಚಿದನು.

# ಪದ ಡೇಟಾ:

  • Strong's: H724, H1369, H1455, H2280, H2421, H2896, H3444, H3545, H4832, H4974, H7495, H7499, H7500, H7725, H7965, H8549, H8585, H8644, H622, G1295, G1743, G2322, G2323, G2386, G2390, G2392, G2511, G3647, G4982, G4991, G5198, G5199

ಗುರಾಣಿ, ಗುರಾಣಿಗಳು, ಗುರಾಣಿ ಇಡಲಾಗಿದೆ

# ಪದದ ಅರ್ಥವಿವರಣೆ:

ಗುರಾಣಿ ಎನ್ನುವುದು ಒಬ್ಬ ಸೈನಿಕನು ತನ್ನನ್ನು ಶತ್ರುಗಳ ಆಯುಧಗಳಿಂದ ಸಂರಕ್ಷಿಸಿಕೊಳ್ಳುವುದಕ್ಕೆ ಯುದ್ಧದಲ್ಲಿ ಉಪಯೋಗಿಸುವ ವಸ್ತುವಾಗಿರುತ್ತದೆ. ಯಾರಾದರೊಬ್ಬರಿಗೆ “ಗುರಾಣಿ” ಕೊಡುವುದೆಂದರೆ ಅಪಾಯದಿಂದ ಆ ವ್ಯಕ್ತಿಯನ್ನು ಸಂರಕ್ಷಿಸುವುದು ಎಂದರ್ಥವಾಗಿರುತ್ತದೆ.

  • ಗುರಾಣಿಗಳು ವೃತ್ತಾಕಾರದಲ್ಲಿರುತ್ತವೆ ಅಥವಾ ಅಂಡಾಕಾರದಲ್ಲಿರುತ್ತವೆ, ಇವುಗಳನ್ನು ಚರ್ಮ, ಕಟ್ಟಿಗೆ ಅಥವಾ ಲೋಹಗಳಿಂದ ಮಾಡುತ್ತಾರೆ, ಸೈನಿಕರ ಮೇಲೆ ಎಸೆಯಲ್ಪಟ್ಟಿರುವ ಕತ್ತಿಯನ್ನಾಗಲಿ ಅಥವಾ ಬಾಣವನ್ನಾಗಲಿ ತಡೆಯುವುದಕ್ಕೆ ಅಥವಾ ಅವುಗಳಿಂದ ಸಂರಕ್ಷಿಸಿಕೊಳ್ಳುವುದಕ್ಕೆ ಬಲವಾಗಿಯು ಮತ್ತು ಗಟ್ಟಿಯಾಗಿಯೂ ಇರುತ್ತವೆ.
  • ಈ ಪದವನ್ನು ರೂಪಕಾಲಂಕಾರವಾಗಿ ಉಪಯೋಗಿಸಿದಾಗ, ದೇವರು ತನ್ನ ಜನರನ್ನು ಸಂರಕ್ಷಿಸುವ ಗುರಾಣಿಯಾಗಿದ್ದಾರೆಂದು ಸತ್ಯವೇದವು ಸೂಚಿಸುತ್ತದೆ. (ನೋಡಿರಿ: ರೂಪಕಾಲಂಕಾರ)
  • ಪೌಲನು “ವಿಶ್ವಾಸದ ಗುರಾಣಿ” ಕುರಿತಾಗಿ ಮಾತನಾಡಿದ್ದಾರೆ, ಸೈತಾನಿನ ಆತ್ಮೀಯಕವಾದ ಧಾಳಿಗಳಿಂದ ದೇವರು ವಿಶ್ವಾಸಿಗಳನ್ನು ಸಂರಕ್ಷಿಸುವ ವಿಧೇಯತೆಯಲ್ಲಿ ವಿಶ್ವಾಸ ಜೀವನವನ್ನು ಮಾಡುವ ಮತ್ತು ಯೇಸುವಿನಲ್ಲಿ ನಂಬಿಕೆ ಇಡುವ ಮಾತುಗಳ ಅಲಂಕಾರಿಕವಾದ ವಿಧಾನದಲ್ಲಿ ಈ ಮಾತನ್ನು ಹೇಳಲಾಗಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ನಂಬಿಕೆ, ವಿಧೇಯನಾಗು, ಸೈತಾನ, ಆತ್ಮ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2653, H3591, H4043, H5437, H5526, H6793, H7982, G2375

ಗುರಿ ಮಾಡು, ಗುರಿ ಮಾಡಲ್ಪಟ್ಟಿದ್ದೀರಿ, ಗಮ್ಯ, ಗಮ್ಯ ಸ್ಥಾನಕ್ಕೆ ಮುನ್ಸೂಚಿಸಲ್ಪಟ್ಟಿದ್ದಾರೆ

# ಪದದ ಅರ್ಥವಿವರಣೆ:

“ಗಮ್ಯ” ಎನ್ನುವುದು ಭವಿಷ್ಯತ್ತಿನಲ್ಲಿ ಜನರಿಗೆ ಏನು ನಡೆಯುತ್ತದೆ ಎಂಬುವುದನ್ನು ಸೂಚಿಸುತ್ತದೆ. ಏನಾದರೊಂದು ಕಾರ್ಯವನ್ನು ಮಾಡುವುದಕ್ಕೆ ಒಬ್ಬ ವ್ಯಕ್ತಿಯನ್ನು “ಮುನ್ಸೂಚಿಸಲಾಗಿದ್ದರೆ”, ಆ ವ್ಯಕ್ತಿ ಭವಿಷ್ಯತ್ತಿನಲ್ಲಿ ಏನು ಮಾಡಬೇಕೆಂದಿದ್ದಾನೋ ಅದನ್ನು ಮಾಡುವುದಕ್ಕೆ ದೇವರಿಂದ ಮುನ್ಸೂಚಿಸಲ್ಪಟ್ಟಿದ್ದಾನೆ ಎಂದರ್ಥ.

  • ದೇವರು ತನ್ನ ಕೋಪಾಗ್ನಿಯನ್ನು ಸುರಿಸುವುದಕ್ಕೆ ಒಂದು ದೇಶವನ್ನು “ಗುರಿ ಮಾಡಿದಾಗ”, ಆ ದೇಶದ ಜನರು ಪಾಪಗಳಿಗಾಗಿ ಆ ದೇಶವನ್ನು ಶಿಕ್ಷಿಸಲು ಆತನು ಮುಂಚಿತವಾಗಿ ಆ ದೇಶವನ್ನು ಆರಿಸಿಕೊಂಡಿದ್ದಾನೆ ಅಥವಾ ನಿರ್ಣಯಿಸಿದ್ದಾನೆ.
  • ಯೂದನು ನಾಶವಾಗುವುದಕ್ಕೆ “ಮುನ್ಸೂಚಿಸಲ್ಪಟ್ಟಿದ್ದನು”, ಅದಕ್ಕೆ ಯೂದನು ಮಾಡುವ ತಿರಸ್ಕಾರ ಕಾರಣದಿಂದ ನಾಶವಾಗುತ್ತಾನೆಂದು ದೇವರು ನಿರ್ಣಯಿಸಿದ್ದಾರೆ ಎಂದರ್ಥ.
  • ಪ್ರತಿಯೊಬ್ಬರಿಗೆ ಕೊನೆ ಎನ್ನುವುದು ಇರುತ್ತದೆ, ಅದು ನಿತ್ಯತ್ವ ಗಮ್ಯಸ್ಥಾನವಾಗಿರುತ್ತದೆ, ಅದು ಪರಲೋಕವಾಗಲಿ ಅಥವಾ ನರಕವಾಗಲಿ ಇರುತ್ತದೆ.
  • ಪ್ರತಿಯೊಬ್ಬರ ಗಮ್ಯಸ್ಥಾನವು ಒಂದೇ ಎಂದು ಪ್ರಸಂಗಿ ರಚನಾಕಾರನು ಬರೆಯುತ್ತಿರುವಾಗ, ಪ್ರತಿಯೊಬ್ಬರೂ ಕೊನೆಗೆ ಸಾಯುತ್ತಾರೆ ಎಂದು ಅದರ ಅರ್ಥವಾಗಿರುತ್ತದೆ.

# ಅನುವಾದ ಸಲಹೆಗಳು:

  • “ಕೋಪಾಗ್ನಿಗೆ ನೀನು ಮುನ್ಸೂಚಿಸಲ್ಪಟ್ಟಿದ್ದೀಯಾ” ಎನ್ನುವ ಮಾತನ್ನು “ನೀನು ನಾಶವಾಗುತ್ತೀಯೆಂದು ನಿರ್ಣಯಿಸಲ್ಪಟ್ಟಿದ್ದೀ” ಅಥವಾ “ನನ್ನ ಕೋಪಾಗ್ನಿಯನ್ನು ನೀನು ಅನುಭವಿಸುತ್ತೀ ಎಂದು ನಿರ್ಧರಿಸಲ್ಪಟ್ಟಿದೆ” ಎಂದೂ ಅನುವಾದ ಮಾಡಬಹುದು.
  • “ಅವರು ಖಡ್ಗ ಬೀಳುವರು” ಎನ್ನುವ ಮಾತನ್ನು “ಖಡ್ಗಗಳಿಂದ ಅವರನ್ನು ಸಾಯಿಸುವ ಶತ್ರುಗಳ ಮೂಲಕ ಅವರು ನಾಶವಾಗುತ್ತಾರೆಂದು ದೇವರು ನಿರ್ಣಯಿಸಿದ್ದಾನೆ” ಅಥವಾ “ಅವರ ಶತ್ರುಗಳು ಅವರನ್ನು ಖಡ್ಗಗಳಿಂದ ಸಾಯಿಸುತ್ತಾರೆಂದು ದೇವರು ನಿರ್ಣಯಿಸಿದ್ದಾರೆ” ಎಂದೂ ಅನುವಾದ ಮಾಡಬಹುದು.
  • “ನೀನು ಮುನ್ಸೂಚಿಸಲ್ಪಟ್ಟಿದ್ದೀ” ಎನ್ನುವ ಮಾತನ್ನು “ನೀನು ಹಾಗೆ ಇರುವೀ ಎಂದು ದೇವರು ನಿರ್ಣಯಿಸಿದ್ದಾರೆ” ಎನ್ನುವ ಮಾತಿನಂತೆ ಅನುವಾದ ಮಾಡಬಹುದು.
  • ಸಂದರ್ಭಾನುಸಾರವಾಗಿ, “ಗಮ್ಯ ಸ್ಥಾನ” ಎನ್ನುವ ಪದವನ್ನು “ಅಂತಿಮ ಗುರಿ” ಅಥವಾ “ಅಂತಿಮ ಭಾಗದಲ್ಲಿ ನಡೆಯುವ ವಿಷಯಗಳು” ಅಥವಾ “ದೇವರು ನಿರ್ಣಯ ಮಾಡಿದವುಗಳೇ ನಡೆಯುತ್ತವೆ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಸೆರೆ ಸಿಕ್ಕುವುದು, ನಿತ್ಯತ್ವ, ಪರಲೋಕ, ನರಕ, ದೀಕ್ಷಾಸ್ನಾನ ಕೊಡುವ ಯೋಹಾನ, ಪಶ್ಚಾತ್ತಾಪ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2506, H4150, H4487, H4745, H6256, H4507, G5056, G5087

ಗುಲಾಮಗಿರಿ, ಅಡಿಯಾಳಾಗಿಸು, ಗುಲಾಮಗಿರಿ ಮಾಡಲಾಗಿದೆ, ದಾಸ, ದಾಸರು, ಗುಲಾಮ, ಗುಲಾಮರು, ಗುಲಾಮನಾಗಿದೆ, ದಾಸ್ಯ, ಮನೆಕೆಲಸಗಾರರು, ಸೇವೆ ಮಾಡು, ಸೇವೆ ಮಾಡುವುದು, ಸೇವೆ ಮಾಡಿದೆ, ಸೇವೆ ಮಾಡಲಾಗುತ್ತಿದೆ, ಸೇವೆ, ಸೇವೆಗಳು, ಕಣ್ಣು ಸೇವೆ

# ಪದದ ಅರ್ಥವಿವರಣೆ:

“ದಾಸ” ಎನ್ನುವ ಪದಕ್ಕೆ “ಗುಲಾಮ” ಎಂದರ್ಥವೂ ಇದೆ, ಇದು ಒಬ್ಬ ವ್ಯಕ್ತಿಯ ಕೆಳಗೆ ಕೆಲಸ ಮಾಡುವ ವ್ಯಕ್ತಿಯನ್ನು ಸೂಚಿಸುತ್ತದೆ, ಈ ಕೆಲಸವನ್ನು ಇಷ್ಟಪೂರ್ವಕವಾಗಿ ಮಾಡಿದರು ಅಥವಾ ಬಲವಂತಿಕೆಯಿಂದ ಮಾಡಿದರು ಈ ಪದದ ಅರ್ಥದ ಕೆಳಗೆ ಬರುತ್ತದೆ. ಈ ಪದಗಳನ್ನೂಳಗೊಂಡ ವಾಕ್ಯವು ಸಾಧಾರಣವಾಗಿ ಒಬ್ಬ ವ್ಯಕ್ತಿ ದಾಸನಾಗಿದ್ದಾನೋ ಅಥವಾ ಗುಲಾಮನಾಗಿದ್ದಾನೋ ಸ್ಪಷ್ಟವಾಗಿ ತಿಳಿಯಪಡಿಸುತ್ತದೆ. “ಸೇವೆ ಮಾಡು” ಎನ್ನುವ ಪದಕ್ಕೆ ಇತರ ಜನರಿಗೆ ಸಹಾಯಕವಾಗುವ ಕಾರ್ಯಗಳನ್ನು ಮಾಡುವುದು ಎಂದರ್ಥ. ಇದಕ್ಕೆ “ಆರಾಧನೆ” ಎಂದೂ ಅರ್ಥವುಂಟು. ಸತ್ಯವೇದದ ಕಾಲಗಳಲ್ಲಿ ದಾಸನು ಮತ್ತು ಗುಲಾಮನು ಎನ್ನುವ ಪದಗಳ ಮಧ್ಯೆದಲ್ಲಿ ವ್ಯತ್ಯಾಸವು ಪ್ರಸ್ತುತ ದಿನಗಳಲ್ಲಿರುವ ವ್ಯತ್ಯಾಸಕ್ಕಿಂತಲೂ ತುಂಬಾ ಕಡಿಮೆಯಾಗಿರುತ್ತದೆ, ದಾಸರು ಮತ್ತು ಗುಲಾಮರು ತಮ್ಮ ಯಜಮಾನನ ಮನೆಯಲ್ಲಿ ಪ್ರಾಮುಖ್ಯವಾದ ಭಾಗವನ್ನು ಹೊಂದಿರುತ್ತಾರೆ ಮತ್ತು ಅವರು ಕುಟುಂಬ ಸದಸ್ಯರಂತೆಯೇ ಅವರ ಮಧ್ಯೆದಲ್ಲಿ ಬೆರೆತುಕೊಂಡಿರುತ್ತಾರೆ. ಕೆಲವೊಂದುಬಾರಿ ದಾಸನು ತನ್ನ ಯಜಮಾನನಿಗೆ ಜೀವಮಾನವೆಲ್ಲಾ ದಾಸನಾಗಿರುತ್ತಾರೆ.

  • ಗುಲಾಮನು ತಾನು ಕೆಲಸ ಮಾಡುತ್ತಿರುವ ಯಜಮಾನನಿಗೆ ಅಸ್ತಿಯಾಗಿರುವ ಒಂದು ವಿಧವಾದ ದಾಸನಾಗಿರುತ್ತಾನೆ. ಗುಲಾಮನನ್ನು ಕೊಂಡುಕೊಂಡು ಬಂದಿರುವ ವ್ಯಕ್ತಿಯನ್ನು “ಮಾಲೀಕ” ಅಥವಾ “ಯಜಮಾನ” ಎಂದು ಕರೆಯುತ್ತಾರೆ. ಕೆಲವೊಂದು ಯಜಮಾನರು ತಮ್ಮ ಗುಲಾಮರಲ್ಲಿ ತುಂಬಾ ಭಯಂಕರವಾಗಿ ನಡೆದುಕೊಂಡಿದ್ದಾರೆ, ಇನ್ನೂ ಕೆಲವರು ತಮ್ಮ ಗುಲಾಮರನ್ನು ಮನೆತನದ ಬೆಲೆಯುಳ್ಳ ದಾಸನಾಗಿರುವಾಗ ಚೆನ್ನಾಗಿ ನೋಡಿಕೊಳ್ಳುತ್ತಾರೆ,
  • ಪುರಾತನ ಕಾಲಗಳಲ್ಲಿ ಒಬ್ಬ ವ್ಯಕ್ತಿಗೆ ಸಾಲವನ್ನು ಕಟ್ಟುವ ಕ್ರಮದಲ್ಲಿ ಹಣವನ್ನು ಕೊಟ್ಟ ವ್ಯಕ್ತಿಗೆ ಕೆಲವೊಂದು ಜನರು ಇಷ್ಟಪೂರ್ವಕವಾಗಿ ಆ ವ್ಯಕ್ತಿಗೆ ಗುಲಾಮರಾಗಿ ಮಾರ್ಪಡುತ್ತಿದ್ದರು,
  • ಒಬ್ಬ ವ್ಯಕ್ತಿ ಅತಿಥಿಗಳಿಗೆ ಸೇವೆ ಮಾಡುವ ಸಂದರ್ಭದಲ್ಲಿ, ಈ ಮಾತಿಗೆ “ಚೆನ್ನಾಗಿ ನೋಡಿಕೋ” ಅಥವಾ “ಆಹಾರವನ್ನು ಬಡಿಸು” ಅಥವಾ “ಆಹಾರವನ್ನು ಒದಗಿಸಿಕೊಡು” ಎಂದರ್ಥಗಳಿರುತ್ತವೆ. ಜನರಿಗೆ ಮೀನುಗಳನ್ನು “ಹಂಚಿರಿ” ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದಾಗ, ಇದನ್ನು “ವಿತರಣೆಗೊಳಿಸಿರಿ” ಅಥವಾ “ಕೈಗಳಿಗೆ ಕೊಡಿರಿ” ಅಥವಾ “ಕೊಡಿರಿ” ಎಂದೂ ಅನುವಾದ ಮಾಡಬಹುದು.
  • ಸತ್ಯವೇದದಲ್ಲಿ “ನಾನು ನಿನ್ನ ಸೇವಕನು ಅಥವಾ ದಾಸನು” ಎನ್ನುವ ಮಾತನ್ನು ಅರಸ ಎನ್ನುವಂತವರಿಗೆ ಉನ್ನತ ಶ್ರೇಣಿಯನ್ನು ಪಡೆದವರಿಗೆ ಸೇವೆಯನ್ನು ಮಾಡುವುದಕ್ಕೆ ಮತ್ತು ಗೌರವ ಚಿಹ್ನೆಯಾಗಿ ಉಪಯೋಗಿಸುತ್ತಿದ್ದರು. ಮಾತನಾಡುತ್ತಿರುವ ವ್ಯಕ್ತಿ ಸಾಧಾರಣವಾದ ದಾಸನಾಗಿರುತ್ತಾನೆಂದು ನಾನು ಹೇಳುತ್ತಾಯಿಲ್ಲ.
  • “ಸೇವೆ ಮಾಡು” ಎನ್ನುವ ಮಾತನ್ನು “ಸೇವೆಯನ್ನು ಸಲ್ಲಿಸು” ಅಥವಾ “ಕೆಲಸ ಮಾಡು” ಅಥವಾ “ಚೆನ್ನಾಗಿ ನೋಡಿಕೋ” ಅಥವಾ “ವಿಧೇಯತೆ ತೋರಿಸು” ಎಂದು ಸಂದರ್ಭಾನುಸಾರವಾಗಿ ಅನುವಾದ ಮಾಡಬಹುದು.
  • ಹಳೇ ಒಡಂಬಡಿಕೆಯಲ್ಲಿ ದೇವರ ಪ್ರವಾದಿಗಳನ್ನು ಮತ್ತು ದೇವರನ್ನು ಆರಾಧಿಸುವ ಇತರ ಜನರನ್ನು ಆತನ “ಸೇವಕರು ಅಥವಾ ದಾಸರು” ಎಂಬುದಾಗಿ ಸೂಚಿಸಲ್ಪಟ್ಟಿದ್ದಾರೆ.
  • ದೇವರನ್ನು ಸೇವಿಸುವುದು” ಎನ್ನುವ ಮಾತನ್ನು “ದೇವರನ್ನು ಆರಾಧಿಸಿ, ಆತನಿಗೆ ವಿಧೇಯತೆಯಿಂದ ಇರುವುದು” ಅಥವಾ “ದೇವರು ಆಜ್ಞಾಪಿಸಿದ ಕೆಲಸವನ್ನು ಮಾಡುವುದು” ಎಂದರ್ಥವಾಗಿರುತ್ತದೆ.
  • ಹೊಸ ಒಡಂಬಡಿಕೆಯಲ್ಲಿ, ಕ್ರಿಸ್ತನಲ್ಲಿ ನಂಬಿಕೆ ಇಡುವುದರ ಮೂಲಕ ದೇವರಿಗೆ ವಿಧೇಯರಾಗಿರುವ ಜನರನ್ನು ಅನೇಕಬಾರಿ “ದಾಸರು ಅಥವಾ ಸೇವಕರು” ಎಂದು ಕರೆಯಲ್ಪಟ್ಟಿದ್ದಾರೆ.
  • “ಮೇಜುಗಳ ಬಳಿ ಸೇವೆ ಮಾಡು” ಎನ್ನುವ ಮಾತಿಗೆ ಮೇಜುಗಳ ಬಳಿ ಕುಳಿತಿರುವ ಜನರಿಗೆ ಆಹಾರವನ್ನು ಕೊಡು, ಅಥವಾ ತುಂಬಾ ಸಾಧಾರಣವಾಗಿ “ಆಹಾರವನ್ನು ವಿತರಣೆಗೊಳಿಸು” ಎಂದರ್ಥ.
  • ದೇವರ ಕುರಿತಾಗಿ ಇತರರಿಗೆ ಬೋಧನೆ ಮಾಡುವ ಜನರನ್ನು ದೇವರಿಗೆ ಮತ್ತು ಬೋಧನೆ ಕೇಳುವ ಜನರಿಗೆ ಸೇವೆ ಮಾಡುವವರೆಂದು ಹೇಳಲ್ಪಟ್ಟಿದ್ದಾರೆ.
  • ಅಪೊಸ್ತಲನಾದ ಪೌಲನು ಹಳೇ ಒಡಂಬಡಿಕೆಗೆ ಯಾವರೀತಿ ಸೇವೆ ಮಾಡಿದ್ದಾರೆ ಎನ್ನುವುದರ ಕುರಿತಾಗಿ ಕೊರಿಂಥದಲ್ಲಿರುವ ಕ್ರೈಸ್ತರಿಗೆ ಪತ್ರವನ್ನು ಬರೆದಿದ್ದಾರೆ. ಇದು ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯತೆಯನ್ನು ತೋರಿಸುವುದನ್ನು ಸೂಚಿಸುತ್ತದೆ. ಈಗ ಅವರು ಹೊಸ ಒಡಂಬಡಿಕೆಗೆ “ಸೇವೆ ಮಾಡುತ್ತಿದ್ದಾರೆ.” ಅಂದರೆ ಶಿಲುಬೆಯ ಮೇಲೆ ಯೇಸುವಿನ ತ್ಯಾಗದ ಕಾರಣದಿಂದ, ಯೇಸುವನ್ನು ನಂಬಿರುವವರು ಪರಿಶುದ್ಧವಾದ ಜೀವನಗಳನ್ನು ಜೀವಿಸುವುದಕ್ಕೆ ಮತ್ತು ದೇವರನ್ನು ಮೆಚ್ಚಿಸುವುದಕ್ಕೆ ಪವಿತ್ರಾತ್ಮನ ಮೂಲಕ ಬಲವನ್ನು ಹೊಂದಿಕೊಂಡಿದ್ದಾರೆ.
  • ಹಳೇ ಅಥವಾ ಹೊಸ ಒಡಂಬಡಿಕೆಗೆ ತಮ್ಮ “ಸೇವೆಯನ್ನು ಮಾಡುವ” ಪದಗಳಲ್ಲಿಯೇ ಅವರ ಕ್ರಿಯೆಗಳ ಕುರಿತಾಗಿ ಅಪೊಸ್ತಲನಾದ ಪೌಲನು ಮಾತನಾಡುತ್ತಿದ್ದಾನೆ. ಇದನ್ನು “ಸೇವೆ ಮಾಡುವುದು” ಅಥವಾ “ವಿಧೇಯತೆ ತೋರಿಸುವುದು” ಅಥವಾ “ಭಕ್ತಿ ಮಾಡುವುದು” ಎಂದೂ ಅನುವಾದ ಮಾಡಬಹುದು.
  • ಕ್ರೈಸ್ತರು ಕೂಡ “ನೀತಿಗೆ ದಾಸರಾಗಿದ್ದಾರೆ”, ದಾಸನು ತನ್ನ ಯಜಮಾನನಿಗೆ ವಿಧೇಯತೆಯನ್ನು ತೋರಿಸುವ ಬದ್ಧನಾಗಿರುವನೋ ಅದೇರೀತಿ ದೇವರಿಗೆ ವಿಧೇಯತೆ ತೋರಿಸುವ ಬದ್ಧತೆ ಪ್ರತಿಯೊಬ್ಬ ಕ್ರೈಸ್ತನಿಗೆ ಇದೆಯೆನ್ನುವ ಅರ್ಥವನ್ನು ಕೊಡುವ ರೂಪಕಾಲಂಕಾರವಾಗಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಬದ್ಧನಾಗು, ಗುಲಾಮಗಿರಿ, ಮನೆತನ, ಒಡೆಯ, ವಿಧೇಯನಾಗು, ನೀತಿ, ಒಡಂಬಡಿಕೆ, ಧರ್ಮಶಾಸ್ತ್ರ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಉದಾಹರಣೆಗಳು:

  • 06:01 ಅಬ್ರಾಹಾಮನು ತುಂಬಾ ವೃದ್ಧ ವಯಸ್ಸಿನಲ್ಲಿದ್ದಾಗ, ತನ್ನ ಮಗನಾಗಿರುವ ಇಸಾಕನು ದೊಡ್ಡವನಾದಾಗ, ಅಬ್ರಹಾಮನು ತನ್ನ ___ ದಾಸರಲ್ಲಿ ___ ಒಬ್ಬರನ್ನು ಕರೆದು ತನ್ನ ಮಗನಾಗಿರುವ ಇಸಾಕನಿಗೆ ಹೆಂಡತಿಯನ್ನು ಹುಡುಕಿಕೊಂಡು ಬರುವುದಕ್ಕೆ ತನ್ನ ಬಂಧುಗಳು ಇರುವ ಸ್ಥಳಕ್ಕೆ ಕಳುಹಿಸಿದನು.
  • 08:04 __ ಗುಲಾಮ __ ವ್ಯಾಪಾರಿಗಳು ಯೋಸೇಫನನ್ನು ಒಬ್ಬ ___ ದಾಸನನ್ನಾಗಿ ___ ಶ್ರೀಮಂತ ಪ್ರಭುತ್ವ ಅಧಿಕಾರಿಗೆ ಮಾರಿದರು.
  • 09:13 “ಫರೋಹನ ಬಳಿಗೆ ನಾನು (ದೇವರು) ನಿನ್ನನ್ನು (ಮೋಶೆಯನ್ನು) ಕಳುಹಿಸುತ್ತೇನೆ, ಇದರಿಂದ ಐಗುಪ್ತದಲ್ಲಿ ___ ಗುಲಾಮಗಿರಿಯಲ್ಲಿರುವ ___ ಇಸ್ರಾಯೇಲ್ಯರನ್ನು ನೀನು ಹೊರಗೆ ಕರೆದುಕೊಂಡು ಬರುವಿ.”
  • 19:10”ಯೆಹೋವನೆ, ಅಬ್ರಾಹಾಮ, ಇಸಾಕ ಮತ್ತು ಯಾಕೋಬ ದೇವರೇ, ಇವತ್ತು ನೀವು ಇಸ್ರಾಯೇಲ್ ದೇವರೆಂದು ಮತ್ತು ನಾನು ನಿನ್ನ ___ ಸೇವಕನೆಂದು ___ ತೋರಿಸಿಕೋ” ಎಂದು ಎಲೀಯ ಪ್ರಾರ್ಥನೆ ಮಾಡಿದನು.
  • 29:03 “___ ದಾಸನು ___ ಸಾಲವನ್ನು ತೀರಸದೇ ಇರುವಾಗ, “ಈ ಮನುಷ್ಯನನ್ನು ಮತ್ತು ತನ್ನ ಕುಟುಂಬದವರನ್ನು ___ ಗುಲಾಮರನ್ನಾಗಿ ___ ಮಾರಿ, ಅವನು ಸಲ್ಲಿಸಬೇಕಾದ ಹಣವನ್ನು ಕಟ್ಟಿಸಿಕೋ ಎಂದು ಅರಸನು ಹೇಳಿದನು.”
  • 35:06 “ನನ್ನ ತಂದೆಯ ___ ದಾಸರೆಲ್ಲರು ___ ತಿನ್ನುವುದಕ್ಕೆ ತುಂಬಾ ಹೆಚ್ಚಾಗಿದೇ, ಆದರೂ ನಾನು ಇಲ್ಲಿ ಹಸಿವಿನಿಂದ ಬಳಲುತ್ತಿದ್ದೇನೆ.”
  • 47:04 ಅವರು ಬರುತ್ತಿರುವಾಗ, ಈ ___ ದಾಸಿಯಾದ ___ ಹುಡಿಗಿ, “ಈ ಮನುಷ್ಯರು ಮಹೋನ್ನತನಾದ ದೇವರ ಸೇವಕರು ಅಥವಾ ದಾಸರು” ಎಂದೂ ಕೂಗಿದಳು.
  • 50:04 “___ ದಾಸನು ____ ತನ್ನ ಯಜಮಾನನಿಗಿಂತ ದೊಡ್ಡವನಲ್ಲ” ಎಂದು ಯೇಸು ಕೂಡ ಹೇಳಿದ್ದಾರೆ.

# ಪದ ಡೇಟಾ:

  • (Serve) H327, H3547, H4929, H4931, H5647, H5656, H5673, H5975, H6213, H6399, H6402, H6440, H6633, H6635, H7272, H8104, H8120, H8199, H8278, H8334, G1247, G1248, G1398, G1402, G1438, G1983, G2064, G2212, G2323, G2999, G3000, G3009, G4337, G4342, G4754, G5087, G5256

ಗೊರಸ, ಗೊರಸಗಳು, ಕಾಲ್ಗೊರಸು

# ಸತ್ಯಾಂಶಗಳು:

ಈ ಪದವು ಒಂಟೆಗಳು, ಜಾನುವಾರುಗಳು, ಜಿಂಕೆಗಳು, ಕುದುರೆಗಳು, ಕತ್ತೆಗಳು, ಹಂದಿಗಳು, ಎತ್ತುಗಳು, ಕುರಿಗಳು ಮತ್ತು ಮೇಕೆಗಳು ಇನ್ನೂ ಇತ್ಯಾದಿ ಪ್ರಾಣಿಗಳ ಪಾದದ ಅಡಿಯಲ್ಲಿ ತುಂಬಾ ಬಲವಾದ ಕಬ್ಬಿಣದ ವಸ್ತುವನ್ನು ಹೊದಿಸುವಿಕೆಯನ್ನು ಸೂಚಿಸುತ್ತದೆ.

  • ಪ್ರಾಣಿಯ ಕಾಲ್ಗೊರಸುಗಳು ಪ್ರಾಣಿಗಳು ನಡೆಯುತ್ತಿರುವಾಗ ಅವುಗಳ ಪಾದಗಳನ್ನು ಸಂರಕ್ಷಿಸುತ್ತವೆ.
  • ಕೆಲವೊಂದು ಪ್ರಾಣಿಗಳ ಕಾಲ್ಗೊರಸುಗಳು ಎರಡು ಭಾಗಗಳಾಗಿ ಸೀಳಿಕೆಯಾಗಿರುತ್ತವೆ, ಕೆಲವೊಂದು ಪ್ರಾಣಿಗಳಿಗೆ ಒಂದೇ ಭಾಗವಾಗಿರುತ್ತವೆ.
  • ಎರಡು ಭಾಗಗಳಾಗಿ ಸೀಳಿಕೆಯಾಗಿರುವ ಗೊರಸುಗಳ ಮತ್ತು ಮೆಲಕುಹಾಕುವಂಥಹ ಪ್ರಾಣಿಗಳನ್ನು ತಿನ್ನಬಹುದೆಂದು ದೇವರು ಇಸ್ರಾಯೇಲ್ಯರಿಗೆ ಹೇಳಿದರು. ಇದರಲ್ಲಿ ಜಾನುವಾರುಗಳು, ಕುರಿಗಳು, ಜಿಂಕೆಗಳು ಮತ್ತು ಎತ್ತುಗಳಿರುತ್ತವೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಒಂಟೆ, ಹಸು, ಎತ್ತು, ಕತ್ತೆ, ಮೇಕೆ, ಹಂದಿ, ಕುರಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H6119, H6471, H6536, H6541, H7272

ಗೋಣಿ

# ಪದದ ಅರ್ಥವಿವರಣೆ:

ಗೋಣಿ ಎನ್ನುವ ಬಟ್ಟೆಯನ್ನು ಒಂಟೆಯ ಅಥವಾ ಮೇಕೆಯ ಕೂದಲುಗಳಿಂದ ಮಾಡಲ್ಪಟ್ಟಿರುವ ಒಂದು ವಿಧವಾದ ಕಳಪೆಯಾದ, ಅಡ್ಡಾದಿಡ್ಡಿಯಾಗಿ ಗೀಟುಗಳಿರುವ ಬಟ್ಟೆಯಾಗಿರುತ್ತದೆ.

  • ಈ ರೀತಿಯಾಗಿ ಮಾಡಲ್ಪಟ್ಟಿರುವ ಬಟ್ಟೆಯನ್ನು ಧರಿಸಿದ ವ್ಯಕ್ತಿ ಅಸುಖಕರವಾಗಿರುತ್ತಾನೆ. ಗೋಣಿಯನ್ನು ತಗ್ಗಿಸಿಕೊಂಡಿದ್ದು ಪಶ್ಚಾತ್ತಾಪವನ್ನು, ಪ್ರಲಾಪವನ್ನು ಅಥವಾ ಶೋಕಾಚರಣೆಯನ್ನು ತೋರಿಸುವುದಕ್ಕೆ ಧರಿಸಿಕೊಳ್ಳುತ್ತಾರೆ.
  • “ಗೋಣಿ ಮತ್ತು ಬೂದಿ” ಎನ್ನುವ ಮಾತು ಪಶ್ಚಾತ್ತಾಪ ಮತ್ತು ಪ್ರಲಾಪಗಳನ್ನು ಸಾಂಪ್ರದಾಯಿಕವಾಗಿ ತೋರಿಸುವುದಕ್ಕೆ ಸೂಚಿಸುವ ಸಾಮಾನ್ಯ ಪದವಾಗಿರುತ್ತದೆ.

# ಅನುವಾದ ಸಲಹೆಗಳು:

  • ಈ ಪದವನ್ನು “ಪ್ರಾಣಿಯ ಕೂದಲುಗಳಿಂದ ಮಾಡಲ್ಪಟ್ಟಿರುವ ಕಳಪೆಯ ಬಟ್ಟೆ” ಅಥವಾ “ಮೇಕೆಯ ಕೂದುಲುಗಳಿಂದ ಮಾಡಲ್ಪಟ್ಟಿರುವ ಬಟ್ಟೆಗಳು” ಅಥವಾ “ಒರಟಾದ, ಕರಕರವಾಗಿರುವ ಬಟ್ಟೆ” ಎಂದೂ ಅನುವಾದ ಮಾಡಬಹುದು.
  • ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಒರಟಾದ, ಕರಕರವಾಗಿರುವ ಪ್ರಲಾಪ ವಸ್ತ್ರಗಳು” ಎನ್ನುವ ಮಾತು ಒಳಗೊಂಡಿರುತ್ತದೆ.
  • “ಗೋಣಿ ಕಟ್ಟಿಕೊಂಡು ಮತ್ತು ಬೂದಿಯಲ್ಲಿ ಕೂತು” ಎನ್ನುವ ಮಾತನ್ನು “ಬೂದಿಯಲ್ಲಿ ಕುಳಿತುಕೊಂಡು, ಹರಿದುಹೋಗಿರುವ ಗೋಣಿ ಬಟ್ಟೆಯನ್ನು ಕಟ್ಟಿಕೊಳ್ಳುವುದರ ಮೂಲಕ ತಗ್ಗಿಸಿಕೊಂಡಿರುವುದನ್ನು ಮತ್ತು ಪ್ರಲಾಪವನ್ನು ತೋರಿಸು” ಎಂದೂ ಅನುವಾದ ಮಾಡಬಹುದು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಬೂದಿ, ಒಂಟೆ, ಮೇಕೆ, ತಗ್ಗಿಸಿಕೊ, ಪ್ರಲಾಪ, ಪಶ್ಚಾತ್ತಾಪ, ಸೂಚನೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H8242, G4526

ಗೋಧಿ

# ಪದದ ಅರ್ಥವಿವರಣೆ:

ಗೋಧಿ ಎನ್ನುವುದು ಆಹಾರಕ್ಕಾಗಿ ಜನರು ಬೆಳೆಸಿಕೊಳ್ಳುವ ಒಂದು ರೀತಿಯಾದ ಧಾನ್ಯವಾಗಿರುತ್ತದೆ. “ಧಾನ್ಯಗಳು” ಅಥವಾ “ಬೀಜಗಳು” ಎಂದು ಸತ್ಯವೇದವು ದಾಖಲಿಸಿದಾಗ, ಇದು ಅನೇಕಬಾರಿ ಗೋಧಿ ಧಾನ್ಯಗಳ ಅಥವಾ ಕಾಳುಗಳ ಕುರಿತಾಗಿ ಮಾತನಾಡುತ್ತಿದೆ ಎಂದರ್ಥ.

  • ಗೋಧಿ ಕಾಳುಗಳು ಅಥವಾ ಧಾನ್ಯಗಳು ಗೋಧಿ ಗಿಡದ ಮೇಲ್ಭಾಗದಲ್ಲಿ ಬೆಳೆಯುತ್ತವೆ.
  • ಗೋಧಿ ಬೆಳೆ ಬಂದನಂತರ, ಇದನ್ನು ತುಳಿಸಿದನಂತರ ಸೊಪ್ಪಿನಿಂದ ಧಾನ್ಯವನ್ನು ಬೇರ್ಪಡಿಸುತ್ತಾರೆ. ಗೋಧಿ ಸೊಪ್ಪನ್ನು “ಹುಲ್ಲು” ಎಂದೂ ಕರೆಯುತ್ತಾರೆ ಮತ್ತು ಇದನ್ನು ಪ್ರಾಣಿಗಳು ಮಲಗುವುದಕ್ಕೆ ನೆಲದ ಮೇಲೆ ಸಂಗ್ರಹಿಸಿ ಇಡುತ್ತಿರುತ್ತಾರೆ.
  • ತುಳಿಸಿದನಂತರ, ತೂರುವುದರ ಮೂಲಕ ಧಾನ್ಯದ ಕಾಳಿನ ಸುತ್ತಲಿರುವ ಸೊಪ್ಪನ್ನು ಧಾನ್ಯದಿಂದ ಬೇರ್ಪಡಿಸಿ, ಹೊರಕ್ಕೆ ಎಸೆಯುತ್ತಾರೆ.
  • ಜನರು ಗೋಧಿಯನ್ನು ಹಿಟ್ಟಾಗಿ ಮಾಡಿಕೊಂಡು, ಅದರಿಂದ ರೊಟ್ಟಿಗಳನ್ನು ತಯಾರಿಸಿಕೊಳ್ಳುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ಜವೆಗೋಧಿ, ಸೊಪ್ಪು, ಧಾನ್ಯ, ಬೀಜ, ತುಳಿಸಿಬಿಡು, ತೂರು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1250, H2406, G4621

ಗ್ರಹಿಸುವಿಕೆ, ಗ್ರಹಿಕೆಗಳು, ಗ್ರಹಿಸುವಿಕೆ, ಒಪ್ಪಿಕೊಳ್ಳುವುದು, ಗುರುತಿಸಿದ್ದಾರೆ

# ಸತ್ಯಾಂಶಗಳು:

“ಗ್ರಹಿಕೆ” ಎನ್ನುವ ಪದಕ್ಕೆ ಯಾವುದೇ ಒಂದು ವಸ್ತುವನ್ನಾಗಲಿ ಅಥವಾ ವ್ಯಕ್ತಿಯನ್ನಾಗಲಿ ಸರಿಯಾಗಿ ಗುರುತಿಸುವುದು ಎಂದರ್ಥ.

  • ದೇವರನ್ನು ಗುರುತಿಸಬೇಕಾದರೂ (ಗ್ರಹಿಸಬೇಕಾದರೂ), ಆತನು ಹೇಳುವ ಪ್ರತಿಯೊಂದು ಮಾತು ಕೂಡ ಸರಿಯಾದದ್ದೇ ಎಂದು ತೋರಿಸುವ ವಿಧಾನದಲ್ಲಿ ಅದು ಒಳಗೊಂಡಿರುತ್ತದೆ.
  • ದೇವರನ್ನು ಗ್ರಹಿಸುವ ಜನರು ಆತನಿಗೆ ವಿಧೇಯರಾಗುವುದರ ಮೂಲಕ ತೋರಿಬರುತ್ತಾರೆ, ಅದರಿಂದ ಆತನಿಗೆ ಮಹಿಮೆ ಉಂಟಾಗುತ್ತದೆ.
  • ಯಾವುದಾದರೊಂದನ್ನು ನಾವು ಗುರುತಿಸುವುದೆಂದರೆ ಅದು ಸರಿಯಾಗಿದೆಯೆಂದು ಕ್ರಿಯೆಗಳಲ್ಲಿಯೂ ಮತ್ತು ಅದನ್ನು ನಿಶ್ಚಯಗೊಳಿಸುವ ಮಾತುಗಳಲ್ಲಿ ನಾವು ಅದನ್ನು ನಂಬುವುದು ಎಂದರ್ಥ.

# ಅನುವಾದ ಸಲಹೆಗಳು:

  • ಯಾವುದೇಯಾಗಲಿ ಅಥವಾ ಯಾರನ್ನಾಗಲಿ ಸರಿಯಾಗಿದೆಯೆಂದು ಸರಿಯಾಗಿದ್ದಾರೆಂದು ಗುರುತಿಸುವ ಸಂದರ್ಭದಲ್ಲಿ, “ಗುರುತಿಸುವುದು” ಎನ್ನುವ ಪದವನ್ನು “ಒಪ್ಪಿಕೊಳ್ಳುವಿಕೆ” ಅಥವಾ “ಸ್ಪಷ್ಟಪಡಿಸುವಿಕೆ” ಅಥವಾ “ಸತ್ಯವೆಂದು ಒಪ್ಪಿಕೊಳ್ಳುವಿಕೆ” ಅಥವಾ “ನಂಬುವಿಕೆ” ಎನ್ನುವ ಪದಗಳನ್ನಿಟ್ಟು ಅನುವಾದ ಮಾಡಬಹುದು.
  • ಒಬ್ಬ ವ್ಯಕ್ತಿಯನ್ನು ಗುರುತಿಸಿದ್ದೇವೆ ಅಥವಾ ಒಪ್ಪಿಕೊಂಡಿದ್ದೇವೆ ಎಂದು ಸೂಚಿಸುವಾಗ, ಈ ಪದವನ್ನು “ಅಂಗೀಕರಿಸುವಿಕೆ” ಅಥವಾ “ಆ ಬೆಲೆಯನ್ನು ಗುರುತಿಸುವಿಕೆ” ಅಥವಾ (ಆ ವ್ಯಕ್ತಿ) ನಂಬಿಗಸ್ತನೆಂದು ಇತರರಿಗೆ ಹೇಳುವುದು” ಎಂಬುವುದಾಗಿಯೂ ಅನುವಾದ ಮಾಡಬಹದು.
  • ದೇವರನ್ನು ಗುರುತಿಸುವುದು ಅಥವಾ ಗ್ರಹಿಸುವುದು ಅಥವಾ ಒಪ್ಪಿಕೊಳ್ಳುವುದು ಎನ್ನುವ ಸಂದರ್ಭದಲ್ಲಿ, ಇದನ್ನು “ದೇವರನ್ನು ನಂಬುವುದು ಮತ್ತು ವಿಧೇಯರಾಗಿರುವುದು” ಅಥವಾ “ದೇವರು ಯಾರೆಂದು ಪ್ರಕಟಿಸುವುದು” ಅಥವಾ “ದೇವರು ಎಷ್ಟು ದೊಡ್ಡವರೆನ್ನುವದರ ಕುರಿತಾಗಿ ಇತರ ಜನರಿಗೆ ಹೇಳುವುದು” ಅಥವಾ “ದೇವರು ಹೇಳುವುದು ಮತ್ತು ಆತನು ಮಾಡುವುದು ಸರಿಯೆಂದು ಒಪ್ಪಿಕೊಳ್ಳುವುದು” ಎಂಬುದಾಗಿ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : /ವಿಧೇಯತೆ, /ಮಹಿಮೆ, , /ರಕ್ಷಿಸು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3045, H3046, H5046, H5234, H6942, G1492, G1921, G3670

ಚದುರು, ಚದರಿಕೆ

# ಪದದ ಅರ್ಥವಿವರಣೆ:

“ಚದುರು” ಮತ್ತು “ಚದರಿಕೆ” ಎನ್ನುವ ಪದಗಳು ಜನರು ಚದುರುವಿಕೆಯನ್ನು ಅಥವಾ ವಸ್ತುಗಳು ವಿವಿಧವಾದ ದಿಕ್ಕುಗಳಲ್ಲಿ ಚದರಿಹೋಗುವುದನ್ನು ಸೂಚಿಸುತ್ತವೆ.

  • ಹಳೇ ಒಡಂಬಡಿಕೆಯಲ್ಲಿ ಜನರನ್ನು “ಚದರಿಸುವುದರ” ಕುರಿತಾಗಿ ದೇವರು ಮಾತನಾಡಿದ್ದಾರೆ, ಇದರಿಂದ ಒಬ್ಬರಿಗೊಬ್ಬರು ದೂರವಿರಲು ವಿವಿಧ ಸ್ಥಳಗಲ್ಲಿ ಜೀವಿಸುವಂತೆ ಮತ್ತು ಪ್ರತ್ಯೇಕವಾಗಿರುವಂತೆ ಕಾರಣವಾಯಿತು. ಅವರು ಮಾಡಿದ ಪಾಪಗಳಿಗಾಗಿ ಅವರನ್ನು ಶಿಕ್ಷಿಸುವುದಕ್ಕೆ ಆತನು ಈ ರೀತಿ ಮಾಡಿದ್ದಾನೆ. ಬಹುಶಃ ಅವರು ಚದುರಿ ಹೋಗುವುದರಿಂದ ಅವರು ಪಶ್ಚಾತ್ತಾಪ ಹೊಂದಿ, ದೇವರನ್ನು ತಿರುಗಿ ಆರಾಧನೆ ಮಾಡಿದರು.
  • “ಚದುರುವಿಕೆ” ಎನ್ನುವ ಪದವನ್ನು ಹೊಸ ಒಡಂಬಡಿಕೆಯಲ್ಲಿ ಶ್ರಮೆಗಳನ್ನು ತಪ್ಪಿಸಿಕೊಳ್ಳುವುದಕ್ಕೆ ಅನೇಕ ವಿವಿಧ ಸ್ಥಳಗಳಿಗೆ ವರ್ಗಾವಣೆಯಾಗಲು ಮತ್ತು ಅವರ ಮನೆಗಳನ್ನು ಬಿಟ್ಟುಹೋಗಲು ಸಿದ್ಧವಾಗಿರುವ ಕ್ರೈಸ್ತರಿಗೆ ಸೂಚಿಸಲ್ಪಟ್ಟಿರುತ್ತದೆ.
  • “ಚದುರುವಿಕೆ” ಎನ್ನುವ ಮಾತನ್ನು “ವಿವಿಧ ಸ್ಥಳಗಳಲ್ಲಿ ವಿಶ್ವಾಸಿಗಳು” ಅಥವಾ “ವಿವಿಧವಾದ ದೇಶಗಳಲ್ಲಿ ಜೀವಿಸುವುದಕ್ಕೆ ಹೋಗಿರುವ ಜನರು” ಎಂದೂ ಅನುವಾದ ಮಾಡಬಹುದು.
  • “ಚದುರು” ಎನ್ನುವ ಪದವನ್ನು “ಅನೇಕ ವಿವಿಧವಾದ ಸ್ಥಳಗಳಿಗೆ ಕಳುಹಿಸು” ಅಥವಾ “ವಿದೇಶಿಗಳಿಗೆ ಚೆದರಿ ಹೋಗು” ಅಥವಾ “ಬದುಕುವುದಕ್ಕೆ ವಿವಿಧ ದೇಶಗಳಿಗೆ ಹೋಗುವಂತೆ ಮಾಡು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ನಂಬು, ಹಿಂಸೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2219, H4127, H5310, H6327, H6340, H6504, H8600, G1287, G1290, G4650

ಚಾಡಿ, ಚಾಡಿಗಳು, ಚಾಡಿ ಹೇಳಿದೆ, ಚಾಡಿ ಹೇಳುವವರು, ಚಾಡಿ ಹೇಳುವುದು, ಚಾಡಿಯ

# ಪದದ ಅರ್ಥವಿವರಣೆ:

ಚಾಡಿ ಎನ್ನುವುದು ನಕಾರಾತ್ಮಕದಿಂದ ತುಂಬಿರುತ್ತದೆ, ಒಬ್ಬರ ಕುರಿತಾಗಿ (ಬರವಣಿಗೆಯ ಮೂಲಕವಲ್ಲದೆ) ವಿರೋಧಿಸುವ ಮಾತುಗಳನ್ನಾಡುವುದು. ಒಬ್ಬರ ಕುರಿತಾಗಿ (ಅಂಥವುಗಳನ್ನು ಬರೆಯೆದೆ) ಹೇಳುವುದು ಎಂದರೆ ಆ ವ್ಯಕ್ತಿಯ ಕುರಿತಾಗಿ ಚಾಡಿ ಹೇಳುವುದು ಎಂದರ್ಥ. ಅಂಥಹ ವಿಷಯಗಳನ್ನು ಹೇಳುವ ವ್ಯಕ್ತಿ ಚಾಡಿ ಹೇಳುವವನು ಎಂದರ್ಥವಾಗಿರುತ್ತದೆ.

  • ಚಾಡಿ ಎನ್ನುವುದು ನಿಜವಾದ ವರದಿಯಾಗಿರಬಹುದು ಅಥವಾ ಸುಳ್ಳು ಆರೋಪವೂ ಆಗಿರಬಹುದು, ಆದರೆ ಚಾಡಿ ಹೇಳಲ್ಪಟ್ಟಿರುವ ವ್ಯಕ್ತಿಯ ಕುರಿತಾಗಿ ನಕಾರಾತ್ಮಕವಾಗಿ ಇತರರು ಆಲೋಚನೆ ಮಾಡುವಂತೆ ಪ್ರಭಾವ ಬೀರುತ್ತದೆ.
  • “ಚಾಡಿ” ಎನ್ನುವ ಪದವನ್ನು “ವಿರುದ್ಧವಾಗಿ ಮಾತನಾಡು” ಅಥವಾ “ದುಷ್ಟ ವರದಿಯನ್ನು ಹರಡಿಸು” ಅಥವಾ “ದೂಷಿಸು” ಎಂದೂ ಅನುವಾದ ಮಾಡಬಹುದು.
  • ಚಾಡಿ ಹೇಳುವವನ್ನು “ವರದಿಗಾರ” ಅಥವಾ “ಚರ್ಚೆ-ಧಾರಕ” ಎಂದೂ ಕರೆಯುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ದೂಷಣೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1681, H1696, H1848, H3960, H5006, H5791, H7270, H7400, H8267, G987, G988, G1228, G1426, G2636, G2637, G3059, G3060, G6022

ಚಾಡಿ, ಚಾಡಿಗಳು, ಚಾಡಿಕೋರ, ಮೂರ್ಖವಾಗಿ ಮಾತಾಡುವುದು

# ಪದದ ಅರ್ಥವಿವರಣೆ

“ಚಾಡಿ” ಎನ್ನುವ ಪದವು ಬೇರೆಯವರ ವ್ಯಕ್ತಿಗತ ವಿಷಯಗಳನ್ನು ಕುರಿತು ಇನ್ನೊಬ್ಬರಬಳಿ ಮಾತಾಡುವುದು, ಸಮಾನ್ಯವಾಗಿ ಅದು ನಕಾರಾತ್ಮಕವಾದ ಮತ್ತು ಪ್ರಯೋಜನವಿಲ್ಲದ ಸಂಗತಿಗಳನ್ನು ಸೂಚಿಸುತ್ತದೆ. ಮಾತಾಡಿರುವ ಸಂಗತಿಗಳಲ್ಲಿ ಯಾವುದು ಸತ್ಯವೆಂದು ನಿಶ್ಚಯವಾಗಿರುವದಿಲ್ಲ.

  • ಒಬ್ಬ ವ್ಯಕ್ತಿಯನ್ನು ಕುರಿತು ನಕಾರಾತ್ಮಕವಾದ ವಿಷಯಗಳನ್ನು ಹಬ್ಬಿಸುವುದು ತಪ್ಪು ಎಂದು ಸತ್ಯವೇದ ಹೇಳುತ್ತಿದೆ. ಈ ವಿಧವಾದ ನಕಾರಾತ್ಮಕವಾದ ಮಾತುಗಳಿಗೆ ಚಾಡಿ ಮತ್ತು ದೂಷಣೆ ಉದಾಹರಣೆಗಳಾಗಿವೆ.
  • ಯಾರನ್ನು ಕುರಿತು ಚಾಡಿ ಹೇಳಲಾಗಿದೆಯೋ ಅವರಿಗೆ ಕೇಡು ಯಾಕಂದರೆ ಅದು ಆ ವ್ಯಕ್ತಿ ಬೇರೆಯವರ ಜೊತೆ ಇರುವ ಸಂಬಂಧವನ್ನು ನೋಯಿಸುತ್ತದೆ.

(ಈ ಪದಗಳನ್ನು ಸಹ ನೋಡಿರಿ : ದೂಷಣೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H5372, G2636, G5397

ಚಿತ್ರ, ಚಿತ್ರಗಳು, ಕೆತ್ತಿರುವ ಚಿತ್ರ, ಕೆತ್ತಿರುವ ಚಿತ್ರಗಳು, ಎರಕುಹೊಯ್ದ ಲೋಹದ ಚಿತ್ರಗಳು, ಗೊಂಬೆ, ಗೊಂಬೆಗಳು, ಕೆತ್ತಿದ ಗೊಂಬೆ, ಕೆತ್ತಿದ ಗೊಂಬೆಗಳು, ಎರಕುಹೊಯ್ದ ಲೋಹದ ಗೊಂಬೆ, ಎರಕುಹೊಯ್ದ ಲೋಹದ ಗೊಂಬೆಗಳು

# ಪದದ ಅರ್ಥವಿವರಣೆ:

ಈ ಎಲ್ಲಾ ಪದಗಳು ಸುಳ್ಳು ದೇವರನ್ನು ಆರಾಧನೆ ಮಾಡುವುದಕ್ಕೆ ತಯಾರು ಮಾಡಲ್ಪಟ್ಟಿರುವ ವಿಗ್ರಹಗಳನ್ನು ಸೂಚಿಸುತ್ತವೆ. ವಿಗ್ರಹಗಳನ್ನು ಆರಾಧನೆ ಮಾಡುವ ಸಂದರ್ಭದಲ್ಲಿ, “ಚಿತ್ರ” ಎನ್ನುವುದು “ಕೆತ್ತಿದ್ದ ಚಿತ್ರ” ಎನ್ನುವುದಕ್ಕೆ ಸುಲಭವಾಗಿ ಬಳಸುವ ಪದವಾಗಿರುತ್ತದೆ.

  • “ಕೆತ್ತಿರುವ ಚಿತ್ರ” ಅಥವಾ “ಕೆತ್ತಿರುವ ಗೊಂಬೆ” ಎನ್ನುವ ಪದವು ಒಂದು ಪ್ರಾಣಿಯಂತೆ, ವ್ಯಕ್ತಿಯಂತೆ ಅಥವಾ ಒಂದು ವಸ್ತುವಿನಂತೆ ಕಾಣಿಸುವುದಕ್ಕೆ ತಯಾರು ಮಾಡಲ್ಪಟ್ಟಿರುವ ಮರದ ವಸ್ತುವಾಗಿರುತ್ತದೆ.
  • “ಎರಕುಹೊಯ್ದ ಲೋಹದ ಗೊಂಬೆ” ಎನ್ನುವುದು ಲೋಹವನ್ನು ಕರಗಿಸಿ, ಅದನ್ನು ಒಂದು ವಸ್ತು, ಪ್ರಾಣಿ ಅಥವಾ ಒಬ್ಬ ವ್ಯಕ್ತಿಯ ಆಕಾರದಲ್ಲಿರುವ ಅಚ್ಚುನೊಳಗೆ ಸುರಿಯುವುದರ ಮೂಲಕ ಒಂದು ವಸ್ತುವನ್ನು ಅಥವಾ ಒಂದು ಪ್ರತಿಮೆಯನ್ನು ತಯಾರಿಸುವುದು ಎಂದರ್ಥ.
  • ಈ ಮರದ ಮತ್ತು ಲೋಹದ ವಸ್ತುಗಳು ಸುಳ್ಳು ದೇವರುಗಳನ್ನು ಆರಾಧನೆ ಮಾಡುವುದರಲ್ಲಿ ಉಪಯೋಗಿಸಲ್ಪಟ್ಟಿರುತ್ತವೆ.
  • “ಚಿತ್ರ” ಎನ್ನುವ ಪದವು ವಿಗ್ರಹವನ್ನು ಸೂಚಿಸಿದಾಗ, ಅದು ಕಟ್ಟಿಗೆಯಿಂದಾಗಲಿ ಅಥವಾ ಲೋಹದಿಂದಾಗಲಿ ಮಾಡಿದ ವಿಗ್ರಹವನ್ನು ಸೂಚಿಸುತ್ತದೆ.

# ಅನುವಾದ ಸಲಹೆಗಳು:

  • ವಿಗ್ರಹಕ್ಕೆ ಸೂಚಿಸಿದಾಗ, “ಚಿತ್ರ” ಎನ್ನುವ ಪದವನ್ನು “ಪ್ರತಿಮೆ” ಅಥವಾ “ಕೆತ್ತಲ್ಪಟ್ಟ ವಿಗ್ರಹ” ಅಥವಾ “ಕೆತ್ತಲ್ಪಟ್ಟ ಭಕ್ತಿಸಂಬಂಧವಾದ ವಸ್ತು” ಎಂಬುದಾಗಿ ಅನುವಾದ ಮಾಡಬಹುದು.
  • ಈ ಪದದೊಂದಿಗೆ ವಿವರಣಾತ್ಮಕವಾದ ಪದವನ್ನು ಯಾವಾಗಲೂ ಉಪಯೋಗಿಸುವುದಕ್ಕೆ ಕೆಲವೊಂದು ಭಾಷೆಗಳಲ್ಲಿ ಇದು ತುಂಬಾ ಸ್ಪಷ್ಟವಾಗಿರಬಹುದು, ಹೇಗೆಂದರೆ “ಕೆತ್ತಲ್ಪಟ್ಟ ಚಿತ್ರ” ಅಥವಾ “ಎರಕುಹೊಯ್ದ ಲೋಹದ ಗೊಂಬೆ” ಎಂಬುದಾಗಿ ಉಪಯೋಗಿಸುತ್ತಾರೆ. “ಚಿತ್ರ” ಅಥವಾ “ಗೊಂಬೆ” ಪದವನ್ನು ಮಾತ್ರವೇ ಉಪಯೋಗಿಸಿದ ಸ್ಥಳಗಳಲ್ಲಿಯೂ ಮೂಲ ಭಾಷೆಯಲ್ಲಿಯೇ ಇರುತ್ತದೆ.
  • ಈ ಪದವು ದೇವರ ಸ್ವರೂಪದಲ್ಲಿರುವ ರೂಪ ಎನ್ನುವ ಪದಕ್ಕೆ ವ್ಯತ್ಯಾಸವಿರುವಂತೆ ನೋಡಿಕೊಳ್ಳಿರಿ.

(ಈ ಪದಗಳನ್ನು ಸಹ ನೋಡಿರಿ : ಸುಳ್ಳು ದೇವರು, ದೇವರು, ಸುಳ್ಳು ದೇವರು, ದೇವರ ಸ್ವರೂಪ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H457, H1544, H2553, H4541, H4676, H4853, H4906, H5257, H5262, H5566, H6091, H6456, H6459, H6754, H6755, H6816, H8403, H8544, H8655, G1504, G5179, G5481

ಚಿರತೆ, ಚಿರತೆಗಳು

# ಸತ್ಯಾಂಶಗಳು:

ಚಿರತೆ ಎನ್ನುವುದು ಬೆಕ್ಕಿನಂತೆ ಇರುವ ದೊಡ್ಡ ಪ್ರಾಣಿಯಾಗಿರುತ್ತದೆ, ಅದು ಕಂದು ಬಣ್ಣದ ಕಪ್ಪು ಕಲೆಗಳನ್ನು ಹೊಂದಿರುತ್ತದೆ.

  • ಚಿರತೆ ಎನ್ನುವುದು ಒಂದು ವಿಧವಾದ ಪ್ರಾಣಿಯಾಗಿರುತ್ತದೆ, ಇದು ಇತರ ಪ್ರಾಣಿಗಳನ್ನು ಬೇಟೆ ಮಾಡಿ ಹಿಡಿದು ಅವುಗಳನ್ನು ತಿನ್ನುತ್ತದೆ.
  • ಸತ್ಯವೇದದಲ್ಲಿ ಆಕಸ್ಮಿಕವಾಗಿ ನಡೆದ ವಿಪತ್ತನ್ನು ಚಿರತೆಗೆ ಹೋಲಿಸಿದ್ದಾರೆ, ಇದು ಬೇಟೆಗೆ ಹೋಗುವಾಗ ಥಟ್ಟನೆ ಮೇಲೆರಗಿ ಹಿಡಿಯುತ್ತದೆ.
  • ಪ್ರವಾದಿ ದಾನಿಯೇಲನು ಮತ್ತು ಅಪೊಸ್ತಲನಾದ ಯೋಹಾನನು ದರ್ಶನಗಳ ಕುರಿತಾಗಿ ಹೇಳಿದ್ದಾರೆ, ಅವುಗಳಲ್ಲಿ ಅವರು ಚಿರತೆಯಂತಿರುವ ಒಂದು ಮೃಗವನ್ನು ನೋಡಿದ್ದಾರೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ

(ಈ ಪದಗಳನ್ನು ಸಹ ನೋಡಿರಿ : ಪಶು, ದಾನಿಯೇಲ, ಬೇಟೆ, ದರ್ಶನ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H5245, H5246

ಚೀಟು, ಚೀಟುಗಳು ಹಾಕುವುದು

# ಪದದ ಅರ್ಥವಿವರಣೆ:

“ಚೀಟು” ಎನ್ನುವುದು ಒಂದು ವಿಷಯವನ್ನು ನಿರ್ಣಯಿಸುವುದಕ್ಕಾಗಿ ಒಂದೇ ರೀತಿಯ ವಸ್ತುಗಳ ಮಧ್ಯೆದಲ್ಲಿ ಆಯ್ಕೆ ಮಾಡುವ ಗುರುತಿಸಲಾಗಿದ ಚೀಟು ಆಗಿರುತ್ತದೆ. * ಚೀಟು ಹಾಕುವುದು” ಎನ್ನುವುದು ಗುರುತುಗಳಿರುವ ವಸ್ತುಗಳನ್ನು ಮೇಲಕ್ಕೆ ಎಸೆದು ನೆಲದ ಮೇಲೆ ಹಾಕುವದನ್ನು ಅಥವಾ ಬೇರೊಂದು ಸ್ಥಳದ ಮೇಲೆ ಹಾಕುವುದನ್ನು ಸೂಚಿಸುತ್ತದೆ.

  • ಅನೇಕಸಲ ಚೀಟು ಹಾಕುವುದೆನ್ನುವುದು ಗುರುತು ಹಾಕಲ್ಪಟ್ಟಿರುವ ಚಿಕ್ಕ ಚಿಕ್ಕ ಕಲ್ಲುಗಳಾಗಿರುತ್ತವೆ ಅಥವಾ ಮುರಿಯಲ್ಪಟ್ಟಿರುವ ಕುಂಬಾರಿಕೆಯ ತುಂಡುಗಳಾಗಿರುತ್ತವೆ.
  • ಕೆಲವೊಂದು ಸಂಸ್ಕೃತಿಗಳಲ್ಲಿ ಚಿಕ್ಕ ಚಿಕ್ಕ ಕೊಳವೆಗಳನ್ನು ಉಪಯೋಗಿಸಿ ಚೀಟುಗಳನ್ನು ಹಾಕುವುದಕ್ಕೆ “ಎಳೆಯುತ್ತಾರೆ” ಅಥವಾ “ಹೊರಗೆಳೆಯುತ್ತಾರೆ”. ಒಬ್ಬ ವ್ಯಕ್ತಿ ಚಿಕ್ಕ ಚಿಕ್ಕ ಕೊಳವೆಗಳನ್ನು ಹಿಡಿದುಕೊಳ್ಳುತ್ತಾನೆ, ಇದರಿಂದ ಎಷ್ಟೊತ್ತು ಅವು ಇರುತ್ತವೆಯೆಂದು ಯಾರೂ ನೋಡುವುದಿಲ್ಲ. ಪ್ರತಿಯೊಬ್ಬರೂ ಒಂದೊಂದು ಕೊಳವೆಯನ್ನು ಹೊರ ತೆಗೆಯುತ್ತಾರೆ ಮತ್ತು ದೊಡ್ಡದಾದ (ಅಥವಾ ಚಿಕ್ಕದಾದ) ಕೊಳವೆಯನ್ನು ಹೊರ ತೆಗೆಯುವರೇ ಆಯ್ಕೆ ಮಾಡುತ್ತಾರೆ.
  • ಚೀಟುಗಳನ್ನು ಹಾಕುವ ಅಭ್ಯಾಸವು ಇಸ್ರಾಯೇಲ್ಯರು ಮಾಡುತ್ತಿದ್ದರು, ಇದನ್ನು ಹಾಕುವುದರ ಮೂಲಕ ದೇವರು ಅವರನ್ನು ಏನು ಮಾಡಬೇಕೆಂದು ತಿಳಿದುಕೊಳ್ಳುತ್ತಿದ್ದರು.
  • ಜೆಕರ್ಯ ಮತ್ತು ಎಲಿಸಬೇತಳ ಕಾಲದಲ್ಲಿಯೂ ವಿಶೇಷವಾದ ಸಮಯ ಬಂದಾಗ ದೇವಾಲಯದಲ್ಲಿ ವಿಶೇಷವಾದ ಕರ್ತವ್ಯವನ್ನು ಯಾವ ಯಾಜಕನು ಮಾಡಬೇಕೆಂದು ಆಯ್ಕೆ ಮಾಡಿಕೊಳ್ಳುವುದಕ್ಕೆ ಇದನ್ನು ಉಪಯೋಗಿಸಿದ್ದರು.
  • ಯೇಸುವನ್ನು ಶಿಲುಬೆಗೆ ಏರಿಸಿದ ಸೈನಿಕರು ಯೇಸುವಿನ ವಸ್ತ್ರಗಳನ್ನು ಯಾರ್ಯಾರು ತೆಗೆದುಕೊಳ್ಳಬೇಕೆಂದು ನಿರ್ಣಯ ಮಾಡುವುದಕ್ಕೆ ಚೀಟುಗಳನ್ನು ಹಾಕಿದರು.
  • “ಚೀಟುಗಳನ್ನು ಹಾಕುವುದು” ಎನ್ನುವ ಮಾತನ್ನು “ಚೀಟುಗಳನ್ನು ಮೇಲಕ್ಕೆ ಎಸೆಯುವುದು” ಅಥವಾ “ಚೀಟುಗಳನ್ನು ಹೊರ ತೆಗೆಯುವುದು” ಅಥವಾ “ಚೀಟುಗಳನ್ನು ನೆಲದ ಮೇಲೆ ಉರುಳಿಸುವುದು ಎಂದೂ ಅನುವಾದ ಮಾಡಬಹುದು. “ಹಾಕುವುದು” ಎನ್ನುವ ಪದಕ್ಕೆ ಚೀಟುಗಳನ್ನು ತುಂಬಾ ದೂರದಲ್ಲಿ ಬೀಳುವಂತೆ ಎಸೆಯುವುದು ಎಂದರ್ಥವು ಬರದಂತೆ ನೋಡಿಕೊಳ್ಳಿರಿ.
  • ಸಂದರ್ಭಾನುಸಾರವಾಗಿ, “ಚೀಟು” ಎನ್ನುವ ಪದವನ್ನು “ಗುರುತು ಹಾಕಿರುವ ಕಲ್ಲು” ಅಥವಾ “ಕುಂಬಾರಿಕೆಯ ತುಣುಕು” ಅಥವಾ “ಕೋಲು” ಅಥವಾ “ಕೊಳವೆಯ ತುಂಡು” ಎಂದೂ ಅನುವಾದ ಮಾಡಬಹುದು.
  • “ಚೀಟಿನ” ಮೂಲಕ ನಿರ್ಣಯ ತೆಗೆದುಕೊಳ್ಳುವುದಾದರೆ, ಅದನ್ನು “ಚೀಟುಗಳನ್ನು ಹೊರ ತೆಗೆಯುವುದರ ಮೂಲಕ (ಅಥವಾ ಮೇಲಕ್ಕೆ ಎಸೆಯುವುದರ ಮೂಲಕ)” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಎಲಿಸಬೇತಳು, ಯಾಜಕ, ಜೆಕರ್ಯ, ಜೆಕರ್ಯ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1486, H2256, H5307, G2624, G2819, G2975, G3091

ಚೊಚ್ಚಲು

# ಪದದ ಅರ್ಥವಿವರಣೆ:

“ಚೊಚ್ಚಲು” ಎನ್ನುವ ಪದವು ಜನರಿಗೆ ಅಥವಾ ಪ್ರಾಣಿಗಳಿಗೆ ಹುಟ್ಟಿದ ಮೊಟ್ಟ ಮೊದಲ ಸಂತತಿಯನ್ನು ಸೂಚಿಸುತ್ತದೆ.

  • ಸತ್ಯವೇದದಲ್ಲಿ “ಚೊಚ್ಚಲು” ಎನ್ನುವ ಪದವು ಸಹಜವಾಗಿ ಮೊಟ್ಟ ಮೊದಲು ಹುಟ್ಟಿದ ಗಂಡು ಮಗುವನ್ನು ಸೂಚಿಸುತ್ತದೆ.
  • ಸತ್ಯವೇದದ ಕಾಲಗಳಲ್ಲಿ ಚೊಚ್ಚಲು ಮಗನಿಗೆ ಒಂದು ವಿಶೇಷವಾದ ಪ್ರಾಮುಖ್ಯತೆಯನ್ನು ಕೊಟ್ಟಿರುತ್ತಾರೆ ಮತ್ತು ಇತರ ಗಂಡು ಮಕ್ಕಳಿಗಿಂತ ತನ್ನ ಕುಟುಂಬಕ್ಕೆ ಎರಡುಪಟ್ಟು ಕೊಟ್ಟಿರುತ್ತಾರೆ.
  • ಅನೇಕಬಾರಿ ದೇವರಿಗೆ ಸರ್ವಾಂಗ ಹೋಮ ಮಾಡುವುದು ಪ್ರಾಣಿಗಳ ಹುಟ್ಟಿದ ಪ್ರಥಮ ಗರ್ಭಫಲವಾದ ಗಂಡು ಪ್ರಾಣಿಯನ್ನು ಕೊಡುತ್ತಿದ್ದರು.
  • ಈ ಆಲೋಚನೆಯನ್ನು ಅಲಂಕಾರಿಕ ಭಾಷೆಯಲ್ಲಿಯೂ ಉಪಯೋಗಿಸುತ್ತಾರೆ. ಉದಾಹರಣೆಗೆ, ಇಸ್ರಾಯೇಲ್ ದೇಶವನ್ನು ದೇವರ ಮೊದಲ ಸಂತಾನದ ಗಂಡು ಮಗ ಎಂದು ಕರೆಯುತ್ತಾರೆ, ಯಾಕಂದರೆ ದೇವರು ಇಸ್ರಾಯೇಲ್ ದೇಶಕ್ಕೆ ಇತರ ದೇಶಗಳ ಮೇಲೆ ವಿಶೇಷವಾದ ಸವಲತ್ತುಗಳನ್ನು ಕೊಟ್ಟಿದ್ದರು.
  • ದೇವರ ಮಗ ಆಗಿರುವ ಯೇಸು ದೇವರ ಮೊದಲ ಸಂತಾನವೆಂದು ಕರೆಯಲ್ಪಟ್ಟಿದ್ದನು, ಯಾಕಂದರೆ ಆತನಿಗೆ ಪ್ರತಿಯೊಬ್ಬರ ಮೇಲೆ ಅಧಿಕಾರವು ಮತ್ತು ಎಲ್ಲರಿಗಿಂತ ಹೆಚ್ಚಾದ ಪ್ರಾಮುಖ್ಯತೆಯು ಕೊಡಲ್ಪಟ್ಟಿತ್ತು.

# ಅನುವಾದ ಸಲಹೆಗಳು:

  • ವಾಕ್ಯಭಾಗದಲ್ಲಿ “ಚೊಚ್ಚಲು” ಎಂದು ಮಾತ್ರವೇ ಕಂಡಾಗ, ಇದನ್ನು “ಚೊಚ್ಚಲ ಪುರುಷ” ಅಥವಾ “ಚೊಚ್ಚಲ ಮಗ” ಎಂದೂ ಅನುವಾದ ಮಾಡಬಹುದು, ಯಾಕಂದರೆ ಆ ಅರ್ಥವೇ ಬರುತ್ತದೆ. (ನೋಡಿರಿ: ಊಹಿಸಿಕೊಂಡ ಜ್ಞಾನ ಮತ್ತು ಸೂಚ್ಯ ಸಮಾಚಾರ
  • ಈ ಪದವನ್ನು ಅನುವಾದ ಮಾಡುವ ಇನ್ನೊಂದು ವಿಧಾನಗಳಲ್ಲಿ “ಮೊಟ್ಟ ಮೊದಲು ಹುಟ್ಟಿದ ಗಂಡು ಮಗ” ಅಥವಾ “ಹಿರಿಯ ಮಗ” ಅಥವಾ “ಒಬ್ಬನೇ ಮಗ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • ಯೇಸುವಿಗೆ ಅಲಂಕಾರಿಕವಾಗಿ ಉಪಯೋಗಿಸಿದಾಗ, “ಎಲ್ಲಾವುದರ ಮೇಲೆ ಅಧಿಕಾರವನ್ನು ಪಡೆದ ಮಗ” ಅಥವಾ “ಗೌರವಿಸಲ್ಪಟ್ಟ ಮೊಟ್ಟ ಮೊದಲನೇ ಮಗ” ಎಂದು ಅರ್ಥ ಬರುವ ಮಾತುಗಳೊಂದಿಗೆ ಅನುವಾದ ಮಾಡಬಹುದು.
  • ಎಚ್ಚರಿಕೆ : ಈ ಪದವನ್ನು ಯೇಸುವಿಗೆ ಸೂಚಿಸುವ ಪದವನ್ನು ಅನುವಾದ ಮಾಡುವಾಗ, ಆತನು ಸೃಷ್ಟಿಸಲ್ಪಟ್ಟಿದ್ದಾನೆನೆನ್ನುವ ಅರ್ಥವು ಬರದಂತೆ ನೋಡಿಕೊಳ್ಳಿರಿ.

(ಈ ಪದಗಳನ್ನು ಸಹ ನೋಡಿರಿ : ಸ್ವಾಸ್ಥ್ಯ, ಬಲಿ, ಮಗ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1060, H1062, H1067, H1069, G4416, G5207

ಜಂಡು, ಜಂಡುಗಳು

# ಸತ್ಯಾಂಶಗಳು:

“ಜಂಡು” ಎನ್ನುವ ಪದವು ನೀರಿನಲ್ಲಿ ಬೆಳೆಯುವ ಉದ್ದವಾದ ಕಾಂಡದೊಂದಿಗಿರುವ ಸಸ್ಯವನ್ನು ಸೂಚಿಸುತ್ತದೆ, ಸಾಧಾರಣವಾಗಿ ನದಿ ಅಥವಾ ಹೊಳೆಯ ತುದಿ ಭಾಗದಲ್ಲಿ ಕಂಡುಬರುತ್ತದೆ.

  • ನೈಲ್ ನದಿಯಲ್ಲಿರುವ ಜಂಡುಗಳಲ್ಲಿಯೇ ಮೋಶೆ ಶಿಶುವಾಗಿದ್ದಾಗ ಬಚ್ಚಿಡಲ್ಪಟ್ಟಿದ್ದನು, ಇದನ್ನೇ “ಬಲ್.ರಷಸ್” ಎಂದು ಕರೆಯುತ್ತಾರೆ. ಅವು ಉದ್ದವಾಗಿರುತ್ತವೆ, ಅವು ನದಿಯ ನೀರಿನಲ್ಲಿ ದಟ್ಟವಾದ ಪೊದೆಗಳಲ್ಲಿ ಟೊಳ್ಳಾದ ತೊಟ್ಟುಗಳಾಗಿ ಬೆಳೆಯುತ್ತಾ ಇರುತ್ತವೆ.
  • ಈ ನಾರಿನಿಂದ ತುಂಬಿದ ಸಸ್ಯಗಳನ್ನು ಪುರಾತನ ಐಗುಪ್ತದಲ್ಲಿ ಕಾಗದವನ್ನು, ಬುಟ್ಟಿಗಳನ್ನು ಮಾಡುವುದಕ್ಕೆ ಉಪಯೋಗಿಸಿಸುತ್ತಿದ್ದರು.
  • ಜಂಡು ಸಸ್ಯದ ಟೊಳ್ಳು ಅಥವಾ ಕಾಂಡವು ತುಂಬಾ ಮೆದುವಾಗಿರುತ್ತದೆ ಮತ್ತು ಇದು ಗಾಳಿ ಬೀಸುವಾಗ ತುಂಬಾ ಸುಲಭವಾಗಿ ಬಾಗುತ್ತದೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ

(ಈ ಪದಗಳನ್ನು ಸಹ ನೋಡಿರಿ : ಐಗುಪ್ತ, ಮೋಶೆ, ನೈಲ್ ಹೊಳೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H98, H100, H260, H5488, H6169, H7070, G2063, G2563

ಜನಗಣತಿ

# ಪದದ ಅರ್ಥವಿವರಣೆ:

“ಜನಗಣತಿ” ಎನ್ನುವ ಪದವು ಒಂದು ಸಾಮ್ರಾಜ್ಯದಲ್ಲಿ ಅಥವಾ ಒಂದು ದೇಶದಲ್ಲಿ ಜನರನ್ನು ಸಾಂಪ್ರದಾಯಿಕ ಎಣಿಕೆಯನ್ನು ಸೂಚಿಸುತ್ತದೆ.

  • ಇಸ್ರಾಯೇಲ್ ಜನರನ್ನು ಎಣಿಸಬೇಕೆಂದು ದೇವರು ಅಪ್ಪಣೆ ಮಾಡಿದ ಅನೇಕ ವಿಧವಾದ ಸಂದರ್ಭಗಳನ್ನು ಹಳೇ ಒಡಂಬಡಿಕೆಯಲ್ಲಿ ದಾಖಲಿಸಲಾಗಿದೆ, ಅದು ಇಸ್ರಾಯೇಲ್ಯರು ಐಗುಪ್ತ ದೇಶವನ್ನು ಬಿಟ್ಟು ಹೋಗುತ್ತಿರುವಾಗ ಮತ್ತು ಕಾನಾನ್ ದೇಶದಲ್ಲಿ ಪ್ರವೇಶಿಸಿದಾಗ ಜನರನ್ನು ಎಣಿಸಿದ್ದಾರೆ.
  • ಎಷ್ಟು ಜನ ಸುಂಕವನ್ನು ಕಟ್ಟುವವರಿದ್ದಾರೆಂದು ತಿಳಿದುಕೊಳ್ಳುವುದಕ್ಕೆಯೇ ಜನಗಣತಿಯ ಮುಖ್ಯ ಉದ್ದೇಶವಾಗಿದ್ದಿತ್ತು.
  • ಉದಾಹರಣೆಗೆ, ಒಂದುಸಲ ವಿಮೋಚನಾ ಕಾಂಡದಲ್ಲಿ ಇಸ್ರಾಯೇಲ್ ಪುರುಷರನ್ನು ಎಣಿಸಿದಾಗ, ದೇವಾಲಯವನ್ನು ನೋಡಿಕೊಳ್ಳುವುದಕ್ಕಾಗಿ ಎಣಿಸಲ್ಪಟ್ಟ ಪ್ರತಿಯೊಬ್ಬರೂ ಅರ್ಧ ಶೆಕೆಲ್ ಕಟ್ಟ ಬೇಕಾಗಿತ್ತು.
  • ಯೇಸು ಮಗುವಾಗಿದ್ದಾಗ ರೋಮಾ ಸಾಮ್ರಾಜ್ಯದಲ್ಲೆಲ್ಲಾ ಎಷ್ಟು ಮಂದಿ ಜನರು ಇದ್ದಾರೆಂದು ತಿಳಿದುಕೊಳ್ಳುವುದಕ್ಕೆ ಮತ್ತು ಎಲ್ಲರು ಸುಂಕವನ್ನು ಕಟ್ಟುವುದಕ್ಕೆ ಜನಗಣತಿಯನ್ನು ರೋಮಾ ಪ್ರಭುತ್ವವು ನಿರ್ವಹಿಸಿತ್ತು.

# ಅನುವಾದ ಸಲಹೆಗಳು

  • ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಹೆಸರುಗಳನ್ನು ಎಣಿಕೆ ಮಾಡುವುದು” ಅಥವಾ “ಹೆಸರುಗಳ ಪಟ್ಟಿ” ಅಥವಾ “ದಾಖಲಾತಿ” ಎನ್ನುವ ಪದಗಳೂ ಒಳಗೊಂಡಿರುತ್ತವೆ.
  • “ಜನಗಣತಿ ತೆಗೆದುಕೊಳ್ಳಿರಿ” ಎನ್ನುವ ಮಾತನ್ನು “ಜನರ ಹೆಸರುಗಳನ್ನು ದಾಖಲಿಸಿ” ಅಥವಾ “ಜನರನ್ನು ದಾಖಲಿಸಿ” ಅಥವಾ “ಜನರ ಹೆಸರುಗಳನ್ನು ಬರೆಯಿರಿ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ದೇಶ, ರೋಮಾ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3789, H5674, H5921, H6485, H7218, G582, G583

ಜನರ ಗುಂಪು, ಜನಾಂಗಗಳು, ನಿರ್ದಿಷ್ಟ ಜನರು, ಜನರು

# ಪದದ ಅರ್ಥವಿವರಣೆ:

“ಜನರು” ಅಥವಾ “ಜನರ ಗುಂಪುಗಳು” ಎನ್ನುವ ಪದವು ಒಂದೇ ಭಾಷೆಯನ್ನೂ ಮತ್ತು ಸಂಸ್ಕೃತಿಯನ್ನು ಹಂಚಿಕೊಳ್ಳುವ ಜನರ ಗುಂಪನ್ನು ಸೂಚಿಸುತ್ತದೆ. “ನಿರ್ದಿಷ್ಟ ಜನರು’ ಎನ್ನುವ ಮಾತು ಅನೇಕಬಾರಿ ವಿಶೇಷವಾದ ಸಂದರ್ಭದಲ್ಲಿ ಅಥವಾ ಒಂದು ನಿರ್ದಿಷ್ಟವಾದ ಸ್ಥಳದಲ್ಲಿ ಸೇರಿಬರುವ ಜನರನ್ನು ಸೂಚಿಸುತ್ತದೆ.

  • ದೇವರು ತನಗಾಗಿ “ಜನರನ್ನು” ಪ್ರತ್ಯೇಕಿಸಿಕೊಂಡಾಗ, ಇದಕ್ಕೆ ಆತನಿಗೆ ಸೇವೆ ಮಾಡುವುದಕ್ಕೆ ಮತ್ತು ಆತನ ಜನರಾಗಿ ಇರುವುದಕ್ಕೆ ಕೆಲವೊಂದು ನಿರ್ದಿಷ್ಟ ಜನರನ್ನು ಆತನು ಆಯ್ಕೆ ಮಾಡಿಕೊಂಡಿರುತ್ತಾರೆ ಎಂದರ್ಥ.
  • ಸತ್ಯವೇದ ಕಾಲಗಳಲ್ಲಿ ಜನರ ಗುಂಪಿನ ಸದಸ್ಯರು ಸಾಧಾರಣವಾಗಿ ಒಂದೇ ಪೂರ್ವಜರನ್ನು ಹೊಂದಿರುತ್ತಾರೆ ಮತ್ತು ನಿರ್ದಿಷ್ಟವಾದ ದೇಶದಲ್ಲಿ ಅಥವಾ ಭೂಮಿಯ ಪ್ರಾಂತ್ಯದಲ್ಲಿ ಎಲ್ಲರು ಸೇರಿ ನಿವಾಸ ಮಾಡಿರುತ್ತಾರೆ.
  • ಸಂದರ್ಭಾನುಸಾರವಾಗಿ “ನಿಮ್ಮ ಜನರು” ಎನ್ನುವ ಮಾತಿಗೆ “ನಿಮ್ಮ ಜನರ ಗುಂಪು” ಅಥವಾ “ನಿಮ್ಮ ಕುಟುಂಬ “ ಅಥವಾ “ನಿಮ್ಮ ಬಂಧುಗಳು” ಎಂದರ್ಥವಾಗಿರುತ್ತದೆ.
  • “ಜನಾಂಗಗಳು” ಎನ್ನುವ ಪದವು ಅನೇಕಬಾರಿ ಭೂಮಿಯ ಮೇಲಿರುವ ಎಲ್ಲಾ ಜನರ ಗುಂಪುಗಳನ್ನು ಸೂಚಿಸುವದಾಗಿರುತ್ತದೆ. ಕೆಲವೊಂದುಬಾರಿ ಈ ಪದವು ವಿಶೇಷವಾಗಿ ಇಸ್ರಾಯೇಲ್ಯರಲ್ಲದ ಜನರನ್ನು ಅಥವಾ ಯೆಹೋವನನ್ನು ಸೇವಿಸದ ಜನರನ್ನು ಹೆಚ್ಚಾಗಿ ಸೂಚಿಸುತ್ತದೆ. ಕೆಲವೊಂದು ಆಂಗ್ಲ ಬೈಬಲ್ ಅನುವಾದಗಳಲ್ಲಿ “ದೇಶಗಳು” ಎಂದು ಉಪಯೋಗಿಸಿರುತ್ತಾರೆ.

# ಅನುವಾದ ಸಲಹೆಗಳು:

  • “ಜನರ ಗುಂಪು” ಎನ್ನುವ ಪದವನ್ನು “ದೊಡ್ಡ ಕುಟುಂಬದ ಗುಂಪು” ಅಥವಾ “ವಂಶ” ಅಥವಾ “ಜನಾಂಗ ಗುಂಪು” ಎಂದು ಅರ್ಥಬರುವ ಪದದೊಂದಿಗೆ ಅಥವಾ ಮಾತಿನೊಂದಿಗೆ ಅನುವಾದ ಮಾಡಬಹುದು.
  • “ನನ್ನ ಜನರು” ಎನ್ನುವಂತಹ ಮಾತುಗಳನ್ನು “ನನ್ನ ಬಂಧುಗಳು” ಅಥವಾ “ನನ್ನ ಜೊತೆಯ ಇಸ್ರಾಯೇಲ್ಯರು” ಅಥವಾ “ನನ್ನ ಕುಟುಂಬ” ಅಥವಾ “ನನ್ನ ಜನರ ಗುಂಪು” ಎಂದು ಸಂದರ್ಭಾನುಸಾರವಾಗಿ ಅನುವಾದ ಮಾಡಬಹುದು.
  • “ಜನರ ಮಧ್ಯೆದೊಳಗೆ ನಿಮ್ಮನ್ನು ಚೆದರಿಸುತ್ತಿದ್ದೇನೆ” ಎನ್ನುವ ಮಾತನ್ನು “ಅನೇಕ ವಿಧವಾದ ಜನರೊಂದಿಗೆ ನೀವು ನಿವಾಸ ಮಾಡುವಂತೆ ಮಾಡುತ್ತೇನೆ” ಅಥವಾ “ನಿಮ್ಮನ್ನು ಒಬ್ಬರಿಂದ ಒಬ್ಬರನ್ನು ದೂರ ಮಾಡಿ, ಲೋಕದಲ್ಲಿರುವ ಅನೇಕ ಪ್ರಾಂತ್ಯಗಳಲ್ಲಿ ಜೀವಿಸುವಂತೆ ಮಾಡುವುದು” ಎಂದೂ ಅನುವಾದ ಮಾಡಬಹುದು.
  • “ನಿರ್ದಿಷ್ಟ ಜನಾಂಗಗಳು” ಅಥವಾ “ನಿರ್ದಿಷ್ಟ ಜನರು” ಎನ್ನುವ ಪದವನ್ನು “ಲೋಕದಲ್ಲಿರುವ ಜನರು” ಅಥವಾ “ಜನರ ಗುಂಪುಗಳು” ಎಂದು ಸಂದರ್ಭಾನುಸಾರವಾಗಿ ಅನುವಾದ ಮಾಡಬಹುದು.
  • “ನಿರ್ದಿಷ್ಟ ಜನರು” ಎನ್ನುವ ಮಾತನ್ನು “ಒಂದು ಪ್ರಾಂತ್ಯದಲ್ಲಿ ನಿವಾಸ ಮಾಡುವ ಜನರು” ಅಥವಾ “ಒಬ್ಬರಿಂದ ಬಂದಿರುವ ವಂಶಸ್ಥರಾದ ಜಾಣರು” ಅಥವಾ “ಒಬ್ಬರ ಕುಟುಂಬ” ಎಂದೂ ಅನುವಾದ ಮಾಡಬಹುದು, ಮತ್ತು ಅದು ಒಬ್ಬ ವ್ಯಕ್ತಿಯ ಅಥವಾ ಒಂದು ಸ್ಥಳದ ಹೆಸರಿನಿಂದ ಅನುಸರಿಸುವ ಯಾವುದೇ ಗುಂಪನ್ನು ಸಂದರ್ಭಾನುಸಾರವಾಗಿ ಅನುವಾದ ಮಾಡಬಹುದು.
  • ಭೂಮಿಯ ಎಲ್ಲಾ ಜನರು” ಎನ್ನುವ ಮಾತನ್ನು “ಭೂಮಿಯ ನಿವಾಸವಾಗಿರುವ ಪ್ರತಿಯೊಬ್ಬರು” ಅಥವಾ “ಲೋಕದಲ್ಲಿರುವ ಪ್ರತಿಯೊಬ್ಬರೂ” ಅಥವಾ “ಎಲ್ಲಾ ಜನರು” ಎಂದೂ ಅನುವಾದ ಮಾಡಬಹುದು.
  • “ಜನರು” ಎನ್ನುವ ಪದವನ್ನು “ಜನರ ಗುಂಪು” ಅಥವಾ “ನಿರ್ದಿಷ್ಟ ಜನರು” ಅಥವಾ “ಜನರ ಸಮುದಾಯ” ಅಥವಾ “ಜನರ ಕುಟುಂಬ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ವಂಶಸ್ಥ, ದೇಶ, ಕುಲ, ಲೋಕ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಉದಾಹರಣೆಗಳು:

  • 14:02 ಅಬ್ರಾಹಾಮ, ಇಸಾಕ, ಯಾಕೋಬರ ಸಂತಾನದವರಿಗೆ ವಾಗ್ಧಾನ ಭೂಮಿಯನ್ನು ಕೊಡುತ್ತೇನೆಂದು ದೇವರು ಅವರೊಂದಿಗೆ ವಾಗ್ಧಾನ ಮಾಡಿದ್ದರು, ಆದರೆ ಈಗ ಅಲ್ಲಿ ಅನೇಕ ಸಂಸ್ಕೃತಿಗಳನ್ನು ಅನುಸರಿಸುವ ಅನೇಕ ___ ಜನರ ಗುಂಪುಗಳು ___ ಜೀವಿಸುತ್ತಿವೆ,
  • 21:02 ಅಬ್ರಾಹಾಮನ ಮೂಲಕ ಈ ಲೋಕದ ಎಲ್ಲಾ ____ ಜನರ ಗುಂಪುಗಳು ___ ಆಶೀರ್ವಾದಗಳನ್ನು ಹೊಂದುತ್ತವೆಯೆಂದು ದೇವರು ಆತನೊಂದಿಗೆ ವಾಗ್ಧಾನ ಮಾಡಿದರು. ಈ ಆಶೀರ್ವಾದವು ಲೋಕದಲ್ಲಿರುವ ಎಲ್ಲಾ ___ ಗುಂಪಿನ ಜನಗಳಿಂದ ___ ಬರುವ ಜನರಿಗೆ ರಕ್ಷಣೆ ಮಾರ್ಗವನ್ನು ಒದಗಿಸಿಕೊಡುವುದು ಮತ್ತು ಭವಿಷ್ಯತ್ತಿನಲ್ಲಿ ಒಂದು ಸಮಯದಲ್ಲಿ ಮೆಸ್ಸೀಯಾ ಬರುವನೆಂದೆನ್ನುವುದು ಆಗಿರಬಹುದು.
  • 42:08 “ಜನರ ಪಾಪಗಳಿಗಾಗಿ ಕ್ಷಮಾಪಣೆಯನ್ನು ಪಡೆದುಕೊಳ್ಳುವುದಕ್ಕೆ ಪ್ರತಿಯೊಬ್ಬರು ಪಶ್ಚಾತ್ತಾಪವನ್ನು ಹೊಂದಬೇಕೆಂದು ನನ್ನ ಶಿಷ್ಯರು ಪ್ರಕಟಿಸುವರೆಂದು ಲೇಖನಗಳಲ್ಲಿ ಬರೆಯಲ್ಪಟ್ಟಿರುತ್ತದೆ. ಅವರು ಈ ಸೇವೆಯನ್ನು ಯೆರೂಸಲೇಮಿನಲ್ಲಿ ಆರಂಭಿಸಿ, ಪ್ರತಿಯೊಂದು ಸ್ಥಳದಲ್ಲಿರುವ ಎಲ್ಲಾ ___ ಜನರ ಗುಂಪುಗಳ ___ ವರೆಗೂ ಹೋಗುವರು.”
  • 42:10 “ಆದ್ದರಿಂದ, ತಂದೆ, ಮಗ, ಮತ್ತು ಪವಿತ್ರಾತ್ಮನಲ್ಲಿ ದೀಕ್ಷಾಸ್ನಾನ ಕೊಡುವುದರ ಮೂಲಕ, ನಾನು ನಿಮಗೆ ಆದೇಶಿಸಿದ ಪ್ರತಿಯೊಂದು ಆಜ್ಞೆಗೆ ವಿಧೇಯತೆ ತೋರಿಸಬೇಕೆಂದು ಬೋಧನೆ ಮಾಡುವುದರ ಮೂಲಕ ಎಲ್ಲಾ ___ ಜನರ ಗುಂಪುಗಳನ್ನು ___ ಶಿಷ್ಯರನ್ನಾಗಿ ಮಾಡಿರಿ.”
  • 48:11 ಈ ಹೊಸ ಒಡಂಬಡಿಕೆಯ ಮೂಲಕ, ಯಾವುದೇ ___ ಗುಂಪಿನ ಜನರಿಂದ ____ ಯಾರೇ ಒಬ್ಬರು ಯೇಸುವಿನಲ್ಲಿ ನಂಬುವುದರ ಮೂಲಕ ದೇವರ ಜನರಲ್ಲಿ ಭಾಗವಾಗಿರಬಹುದು.
  • 50:03 “ಹೋಗಿ, ಎಲ್ಲಾ ___ ಜನರ ಗುಂಪುಗಳನ್ನು ___ ನನ್ನ ಶಿಷ್ಯರನ್ನಾಗಿ ಮಾಡಿರಿ! ಮತ್ತು “ಬೆಳೆಗಳು ಕೊಯ್ಲಿಗೆ ಬಂದಿವೆ!” ಎಂದು ಆತನು (ಯೇಸು) ಹೇಳಿದರು.

# ಪದ ಡೇಟಾ:

  • Strong's: H249, H523, H524, H776, H1121, H1471, H3816, H5712, H5971, H5972, H6153, G246, G1074, G1085, G1218, G1484, G2560, G2992, G3793

ಜಂಬದ

# ಪದದ ಅರ್ಥವಿವರಣೆ:

“ಜಂಬದ” ಎನ್ನುವ ಪದಕ್ಕೆ ಗರ್ವದಿಂದರುವುದು ಅಥವಾ ಅಹಂಭಾವಿಗಳಾಗಿರುವುದು ಎಂದರ್ಥ. “ಜಂಬದಿಂದ” ಇರುವ ಒಬ್ಬ ವ್ಯಕ್ತಿ ತನ್ನ ಕುರಿತಾಗಿ ಅತೀ ಹೆಚ್ಚಾಗಿ ಉನ್ನತವಾಗಿ ಆಲೋಚನೆ ಮಾಡಿಕೊಳ್ಳುತ್ತಾನೆ.

  • ಈ ಪದವು ಅನೇಕಬಾರಿ ದೇವರಿಗೆ ವಿರುದ್ಧವಾಗಿ ಪಾಪ ಮಾಡುವುದರಲ್ಲಿ ಮುಂದುವರಿಯುವ ಒಬ್ಬ ಅಹಂಕಾರಿ ವ್ಯಕ್ತಿಯನ್ನು ವಿವರಿಸುತ್ತದೆ.
  • ಜಂಬದ ವ್ಯಕ್ತಿಯಾಗಿರುವ ಒಬ್ಬ ವ್ಯಕ್ತಿ ತನ್ನ ಕುರಿತಾಗಿ ಹೊಗಳಿಕೊಳ್ಳುತ್ತಾನೆ.
  • ಜಂಬದ ವ್ಯಕ್ತಿ ಮೂರ್ಖನಾಗಿರುತ್ತಾನೆ ಹೊರತು ಜ್ಞಾನಿಯಾಗಿರುವುದಿಲ್ಲ.
  • ಈ ಪದವನ್ನು “ಗರ್ವ” ಅಥವಾ “ಅಹಂಕಾರ” ಅಥವಾ “ಸ್ವಯಂ-ಕೇಂದ್ರಿತ” ಎಂದೂ ಅನುವಾದ ಮಾಡಬಹುದು.
  • “ಜಂಬದ ಕಣ್ಣುಗಳು” ಎನ್ನುವ ಅಲಂಕಾರಿಕ ಮಾತನ್ನು “ಗರ್ವದಿಂದ ನೋಡುವುದು” ಅಥವಾ “ಇತರರನ್ನು ಕೀಳಾಗಿ ನೋಡುವುದು” ಅಥವಾ “ಇತರರನ್ನು ಅತೀ ಕೆಳಮಟ್ಟದಲ್ಲಿ ನೋಡುವ ಜಂಬದ ವ್ಯಕ್ತಿ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಹೊಗಳಿಕೆ, ಗರ್ವ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1361, H1363, H1364, H3093, H4791, H7312

ಜವೆಗೋದಿ

# ಪದದ ಅರ್ಥವಿವರಣೆ

“ಜವೆಗೋದಿ” ಎನ್ನುವುದು ರೊಟ್ಟಿ ಮಾಡುವದರಲ್ಲಿ ಉಪಯೋಗಿಸಲ್ಪಡುವ ಒಂದು ವಿಧವಾದ ದಾನ್ಯವಾಗಿದೆ.

  • ಜವೆಗೋದಿಯ ಗಿಡವು ಉದ್ದವಾದ ಕಾಂಡವನ್ನು ಹೊಂದಿರುತ್ತದೆ, ಅದರ ಮೇಲಿನ ಭಾಗದಲ್ಲಿ ತಲೆಯಿರುವುದು, ಅಲ್ಲಿ ಬೀಜವು ಅಥವಾ ದಾನ್ಯವು ಬೆಳೆಯುತ್ತದೆ.
  • ಜವೆಗೋದಿ ಉಷ್ಣಾಂಶವಿರುವ ಕಾಲದಲ್ಲಿ ಚನ್ನಾಗಿ ಬೆಳೆಯುತ್ತದೆ ಆದುದರಿಂದ ವಸಂತ ಕಾಲದಲ್ಲಿ ಅಥವಾ ಬೇಸಿಗೆ ಕಾಲದಲ್ಲಿ ಕೋಯಲ್ಪಡುವುದು.
  • ಜವೆಗೋದಿಯನ್ನು ಬಡಿದಾಗ, ತಿನ್ನಲು ಯೋಗ್ಯವಾದ ದಾನ್ಯವು ನಿಷ್ಪ್ರಯೋಜಕವಾದ ಒಣಗಿದ ಹುಲ್ಲಿಂದ ಬೇರೆಯಾಗುವುದು,
  • ಜವೆಗೋದಿಯನ್ನು ಹಿಟ್ಟಾಡಿಸಿ, ಅದಕ್ಕೆ ನೀರನ್ನು ಅಥವಾ ಎಣ್ಣೆಯನ್ನು ಸೇರಿಸಿ ರೊಟ್ಟಿಯನ್ನು ಮಾಡುತ್ತಾರೆ.
  • ಒಂದು ವೇಳೆ ಜವೆಗೋದಿ ಗೊತ್ತಿಲ್ಲದಿದ್ದರೆ, ಇದನ್ನು “ಜವೆಗೋದಿ ಎನ್ನುವ ದಾನ್ಯ” ಅಥವಾ “ಜವೆಗೋದಿ ದಾನ್ಯ” ಎಂದು ಅನುವಾದ ಮಾಡಬಹುದು.

(ಇದನ್ನು ಸಹ ನೋಡಿರಿ: ಗೊತ್ತಿಲ್ಲದ ವಿಷಯಗಳನ್ನು ಹೇಗೆ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ದಾನ್ಯ, ಬಡಿಯುವುದು, ಗೋದಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H8184, G2915, G2916

ಜಾಗರೂಕತೆ, ಜಾಗರೂಕ, ಜಾಗರೂಕತೆಯಿಂದ

# ಸತ್ಯಾಂಶಗಳು:

“ಜಾಗರೂಕ” ಎನ್ನುವ ಪದವು ಒಬ್ಬ ವ್ಯಕ್ತಿ ತನ್ನ ಕ್ರಿಯೆಗಳ ಕುರಿತಾಗಿ ಆಲೋಚನೆ ಮಾಡುವನನ್ನು ಮತ್ತು ಜ್ಞಾನವುಳ್ಳ ನಿರ್ಣಯಗಳನ್ನು ತೆಗೆದುಕೊಳ್ಳುವವನನ್ನು ವಿವರಿಸುತ್ತದೆ.

  • “ಜಾಗರೂಕತೆ” ಎನ್ನುವ ಅನೇಕಬಾರಿ ಭೌತಿಕವಾದ ವಿಷಯಗಳ ಕುರಿತಾಗಿ, ಪ್ರಾಯೋಗಿಕವಾದ ಕ್ರಿಯೆಗಳ ಕುರಿತಾಗಿ ನಿರ್ಣಯಗಳನ್ನು ಜ್ಞಾನದಿಂದ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಸೂಚಿಸುತ್ತದೆ, ಉದಾಹರಣೆಗೆ, ಆಸ್ತಿಪಾಸ್ತಿಗಳನ್ನು ಅಥವಾ ಹಣವನ್ನು ನಿರ್ವಹಿಸುವುದು.
  • “ಜಾಗರೂಕತೆ” ಮತ್ತು “ಜ್ಞಾನ” ಎನ್ನುವ ಪದಗಳು ಒಂದೇ ಅರ್ಥವನ್ನು ಕೊಟ್ಟರೂ, “ಜ್ಞಾನ” ಎನ್ನುವುದು ಅನೇಕಬಾರಿ ಅತೀ ಸಾಧಾರಣವಾದ ಪದವಾಗಿರುತ್ತದೆ ಮತ್ತು ನೈತಿಕವಾದ ವಿಷಯಗಳು ಅಥವಾ ಆತ್ಮೀಯಕವಾದ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ.
  • ಸಂದರ್ಭಾನುಸಾರವಾಗಿ “ಜಾಗರೂಕ” ಎನ್ನುವ ಪದವನ್ನು “ಚುರುಕು ಬುದ್ಧಿಯುಳ್ಳ” ಅಥವಾ “ಎಚರಿಕೆಯ” ಅಥವಾ “ಜ್ಞಾನ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಚುರುಕು ಬುದ್ಧಿಯುಳ್ಳ, ಆತ್ಮ, ಜ್ಞಾನ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H995, H5843, H6175, H6191, H6195, H7080, H7919, H7922, G4908, G5428

ಜಾಲೀಮರ

# ನಿರ್ವಚನ :

“ಜಾಲೀಮರ” ಎನ್ನುವ ಪದವು ಒಂದು ಸಾಮಾನ್ಯವಾದ ಪೊದರು ಅಥವಾ ಪುರಾತನ ಕಾಲಗಳಲ್ಲಿ ಕಾನಾನ್ ದೇಶದಲ್ಲಿ ಎಲ್ಲಾ ಕಡೆಗಳಲ್ಲಿ ಸಾಮಾನ್ಯವಾಗಿ ಬೆಳೆಯುವ ಮರವಾಗಿರುತ್ತದೆ; ಅದು ಈಗಲೂ ಕೂಡ ಆ ಪ್ರಾಂತ್ಯದಲ್ಲಿ ಅತೀ ಹೆಚ್ಚಾಗಿ ಬೆಳೆಯುತ್ತಿರುವ ಮರವಾಗಿರುತ್ತದೆ.

  • ಜಾಲೀಮರದ ಕಿತ್ತಳೆ ಕಂದು ಬಣ್ಣದಲ್ಲಿರುವ ಕಟ್ಟಿಗೆ ತುಂಬಾ ಗಟ್ಟಿಯಾಗಿರುತ್ತದೆ ಮತ್ತು ಅದು ಹೆಚ್ಚಿನ ಕಾಲ ಬಾಳಿಕೆ ಬರುವ ಕಟ್ಟಿಗೆಯಾಗಿರುತ್ತದೆ, ನಿರ್ಮಾಣಕ್ಕಾಗಿ ಈ ಮರದ ಕಟ್ಟಿಗೆ ಉಪಯೋಗಕರವಾಗಿರುತ್ತದೆ.
  • ಈ ಕಟ್ಟಿಗೆ ಅಷ್ಟು ಸುಲಭವಾಗಿ ಸವೆದು ಹೋಗುವುದಿಲ್ಲ ಯಾಕಂದರೆ ಇದು ನೀರನ್ನು ಹೊರ ಇರಿಸುವ ಸಾಂದ್ರತೆಯನ್ನು ಹೊಂದಿರುತ್ತದೆ ಮತ್ತು ಇದು ನಾಶವಾಗದಂತೆ ನಾಶಪಡಿಸುವ ಕ್ರಿಮಿ ಕೀಟಕಗಳನ್ನು ಹೊರ ಇರಿಸುತ್ತದೆ ಮತ್ತು ಇದು ಸ್ವಾಭಾವಿಕವಾಗಿ ಸ್ವಯಂ ಸಂರಕ್ಷಣೆಯ ಗುಣವನ್ನು ಹೊಂದಿರುತ್ತದೆ.
  • ಸತ್ಯವೇದದಲ್ಲಿ ಜಾಲೀಮರವನ್ನು ಗುಡಾರವನ್ನು ನಿರ್ಮಿಸುವುದಕ್ಕಾಗಿ ಮತ್ತು ಒಡಂಬಡಿಕೆಯ ಮಂಜೂಷವನ್ನು ಮಾಡುವುದಕ್ಕಾಗಿ ಉಪಯೋಗಿಸಿದರು.

(ಅನುವಾದ ಸಲಹೆಗಳು : /ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : /ಒಡಂಬಡಿಕೆಯ ಮಂಜೂಷ, /ಗುಡಾರ

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H7848

ಜಾವೆ (ಸತ್ಯವೇದದ ಸಮಯ), ಜಾವೆಗಳು

# ಪದದ ಅರ್ಥವಿವರಣೆ

ಸತ್ಯವೇದ ಕಾಲದಲ್ಲಿ, “ಜಾವೆ” ಎಂದರೆ ರಾತ್ರಿಯ ಸಮಯದಲ್ಲಿ ಕಾವಲುಗಾರನು ಪಟ್ಟಣವನ್ನು ಶತ್ರುಗಳಿಂದ ಯಾವ ಅಪಾಯವು ಬರದಂತೆ ಕಾಯುವುದನ್ನು ಸೂಚಿಸುತ್ತದೆ.

  • ಹಳೆಯ ಒಡಂಬಡಿಕೆಯಲ್ಲಿ, ಇಸ್ರಾಯೇಲರಿಗೆ ಮೂರು ಜಾವೆಗಳಿದ್ದವು, ಅವುಗಳನ್ನು “ಪ್ರಾರಂಭ ಜಾವೆ” (ಸೂರ್ಯಾಸ್ತದಿಂದ ರಾತ್ರಿ 10ರ ವರೆಗೆ), “ಮಧ್ಯ ಜಾವೆ” (ರಾತ್ರಿ 10 ರಿಂದ 2ರ ವರೆಗೆ) ಮತ್ತು “ಬೆಳಗಿನ ಜಾವೆ” (ಬೆಳಗ್ಗೆ 2 ರಿಂದ ಸೂರ್ಯೋದಯದ ವರೆಗೆ).
  • ಹೊಸ ಒಡಂಬಡಿಕೆಯಲ್ಲಿ, ಯಹೂದಿಯರು ರೋಮಾ ಪದ್ಧತಿಯನ್ನು ಅನುಸರಿಸಿದರು ಮತ್ತು ಅವರಿಗೆ ನಾಲ್ಕು ಜಾವೆಗಳಿದ್ದವು, ಅವುಗಳ ಹೆಸರುಗಳು “ಮೊದಲನೆಯ ಜಾವೆ” (ಸೂರ್ಯಾಸ್ತದಿಂದ ರಾತ್ರಿ 9ರ ವರೆಗೆ), “ಎರಡನೇಯ ಜಾವೆ” (ರಾತ್ರಿ 9 ರಿಂದ 12 ರ ವರೆಗೆ), “ಮೂರನೇಯ ಜಾವೆ” (ಮಧ್ಯರಾತ್ರಿ 12 ರಿಂದ ಬೆಳಗ್ಗೆ 3 ರ ವರೆಗೆ) ಮತ್ತು “ನಾಲ್ಕನೆಯ ಜಾವೆ” (ಬೆಳಗ್ಗೆ 3 ರಿಂದ ಸೂರ್ಯೋದಯದ ವರೆಗೆ).
  • ಇಲ್ಲಿ ಯಾವ ಜಾವೆಯನ್ನು ಸೂಚಿಸುತ್ತಿದ್ದರೋ ಎಂದು ಹೇಳಲು “ಸಂಜೆಯ ಸಮಯ” ಅಥವಾ “ಮಧ್ಯರಾತ್ರಿ” ಅಥವಾ “ಬೆಳಗ್ಗೆ” ಎಂದು ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಗಡಿಯಾರ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H821, G5438

ಜಿಂಕೆ, ಹೆಣ್ಣು ಜಿಂಕೆ, ಹೆಣ್ಣು ಜಿಂಕೆಗಳು, ಜಿಂಕೆ ಮರಿಗಳು, ಗಂಡು ಜಿಂಕೆ, ಗಂಡು ಜಿಂಕೆಗಳು

# ಪದದ ಅರ್ಥವಿವರಣೆ:

ಜಿಂಕೆ ಎನ್ನುವುದು ಪರ್ವತಗಳ ಮೇಲೆ ಅಥವಾ ಅಡವಿಗಳಲ್ಲಿ ಜೀವಿಸುವ ದೊಡ್ಡದಾದ, ಸುಂದರವಾದ ನಾಲ್ಕು ಕಾಲುಗಳುಳ್ಳ ಪ್ರಾಣಿ. ಗಂಡು ಜಿಂಕೆಯ ತಲೆಯ ಮೇಲೆ ದೊಡ್ಡ ಕೊಂಬುಗಳು ಅಥವಾ ಉದುರುಗೊಂಬುಗಳು ಇರುತ್ತವೆ.

  • ಆಂಗ್ಲದಲ್ಲಿ "doe" (ಡೋ) ಎನ್ನುವ ಪದವು “ಹೆಣ್ಣು ಜಿಂಕೆ”ಯನ್ನು ಸೂಚಿಸುತ್ತದೆ ಮತ್ತು "fawn" (ಫಾನ್) ಎನ್ನುವ ಆಂಗ್ಲ ಪದವು ಜಿಂಕೆಯ ಮರಿಯನ್ನು ಸೂಚಿಸುತ್ತದೆ.
  • ಆಂಗ್ಲ ಭಾಷೆಯಲ್ಲಿರುವ "buck" (ಬಕ್) ಎನ್ನುವ ಪದವು ಗಂಡು ಜಿಂಕೆಯನ್ನು ಸೂಚಿಸುತ್ತದೆ.
  • "roebuck" (ರೋಬಕ್) ಎನ್ನುವ ಆಂಗ್ಲ ಪದವು "roedeer" (ರೋಡೀರ್) ಎಂದು ಕರೆಯಲ್ಪಡುವ ಗಂಡು ಜಿಂಕೆಯನ್ನು ಸೂಚಿಸುತ್ತದೆ.
  • ಜಿಂಕೆಗೆ ಬಲವುಳ್ಳ ತೆಳುವಾದ ಕಾಲುಗಳು ಇರುತ್ತವೆ, ಈ ಬಲವಾದ ಕಾಲುಗಳ ಸಹಾಯದಿಂದಲೇ ಅವು ತುಂಬಾ ವೇಗವಾಗಿ ಓಡುತ್ತವೆ ಮತ್ತು ಜಿಗಿಯುತ್ತವೆ.
  • ಅವುಗಳ ಪಾದಗಳು ಒಡೆದುಹೋಗಿರುವಂತೆ ಇರುತ್ತವೆ, ಇದರಿಂದಲೇ ಅವು ಅತೀ ಎತ್ತರವಾದ ಸ್ಥಳಗಳಿಗೆ ಕೂಡ ಏರುತ್ತವೆ ಅಥವಾ ನಡೆಯುತ್ತವೆ.

(ಅನುವಾದ ಸಲಹೆಗಳು: ಗೊತ್ತಿಲ್ಲದವುಗಳನ್ನು ಯಾವರೀತಿ ಅನುವಾದ ಮಾಡಬೇಕು

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H354, H355, H365, H3180, H3280, H6643, H6646

ಜೀವ ಬಾಧ್ಯರ ಪುಸ್ತಕ

# ಪದದ ಅರ್ಥವಿವರಣೆ:

“ಜೀವ ಬಾಧ್ಯರ ಪುಸ್ತಕ” ಎನ್ನುವ ಮಾತು ದೇವರು ವಿಮೋಚಿಸಿದ ಮತ್ತು ನಿತ್ಯಜೀವವನ್ನು ಕೊಟ್ಟ ಜನರ ಹೆಸರುಗಳನ್ನು ಆತನು ಬರೆದಿರುವ ಪುಸ್ತಕವನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ.

  • ಪ್ರಕಟನೆ ಗ್ರಂಥವು ಈ ಪುಸ್ತಕವನ್ನು “ಕುರಿಮರಿಯಾದಾತನ ಬಳಿಯಲ್ಲಿರುವ ಜೀವ ಬಾಧ್ಯರ ಪುಸ್ತಕ” ಎಂದು ಸೂಚಿಸುತ್ತದೆ. ಇದನ್ನು “ದೇವರ ಕುರಿಮರಿಯಾದ ಯೇಸುವಿಗೆ ಸಂಬಂಧಪಟ್ಟ ಜೀವ ಬಾಧ್ಯರ ಪುಸ್ತಕ” ಎಂದೂ ಅನುವಾದ ಮಾಡಬಹುದು. ಜನರ ಪಾಪಗಳಿಗೋಸ್ಕರ ಶಿಲುಬೆಯಲ್ಲಿ ಯೇಸುವಿನ ಬಲಿದಾನವು ದಂಡನೆಯನ್ನು ಸಲ್ಲಿಸಿದೆ. ಆದ್ದರಿಂದ ಯಾರೇಯಾಗಲಿ ಆತನಲ್ಲಿ ನಂಬಿಕೆಯನ್ನಿಡುವುದರ ಮೂಲಕ ನಿತ್ಯಜೀವವನ್ನು ಹೊಂದಿಕೊಳ್ಳಬಹುದು.
  • “ಪುಸ್ತಕ” ಎನ್ನುವ ಪದವು “ಸುರುಳಿ” ಅಥವಾ “ಪತ್ರ” ಅಥವಾ “ಬರವಣಿಗೆ” ಅಥವಾ “ಕಾನೂನು ದಾಖಲೆ” ಎಂದೂ ಅರ್ಥವನ್ನು ಕೊಡುತ್ತದೆ. ಇದು ಅಕ್ಷರಾರ್ಥವಾಗಿರಬಹುದು ಅಥವಾ ಅಲಂಕಾರ ರೂಪದಲ್ಲಿರಬಹುದು.

(ಈ ಪದಗಳನ್ನು ಸಹ ನೋಡಿರಿ : ನಿತ್ಯಜೀವ, ಕುರಿಮರಿ, ಜೀವ, ಬಲಿ, ಸುರುಳಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2416, H5612, G976, G2222

ಜೀವಿ, ಜೀವಿಗಳು

# ಪದದ ಅರ್ಥವಿವರಣೆ

“ಜೀವಿ” ಎನ್ನುವ ಪದ ದೇವರು ಸೃಷ್ಟಿಸಿದ ಜೀವಂತವಾಗಿರುವ ಪ್ರತಿಯೊಂದನ್ನು ಸೂಚಿಸುತ್ತದೆ, ಅದರಲ್ಲಿ ಮನುಷ್ಯರು ಇರುತ್ತಾರೆ ಮತ್ತು ಪ್ರಾಣಿಗಳನ್ನು ಇರುತ್ತವೆ.

  • ದೇವರ ಮಹಿಮೆಯಲ್ಲಿ “ಜೀವಂತವಾದ ಜೀವಿಗಳನ್ನು” ತನ್ನ ದರ್ಶನದಲ್ಲಿ ನೋಡಿದ್ದಾನೆಂದು ಪ್ರವಾದಿಯಾದ ಯೆಹೆಜ್ಕೇಲನು ವಿವರಿಸುತ್ತಿದ್ದಾನೆ. ಅವುಗಳು ಏನೆಂದು ಅವನಿಗೆ ತಿಳಿದಿರಲಿಲ್ಲ, ಆದಕಾರಣ ಅವುಗಳಿಗೆ ಅವನು ಈ ಸಹಜವಾದ ಹೆಸರು ಕೊಟ್ಟನು.
  • “ಸೃಷ್ಟಿ” ಎನ್ನುವ ಪದಕ್ಕೆ ಬೇರೊಂದು ಅರ್ಥವಿದೆ, ಯಾಕಂದರೆ ಅದರಲ್ಲಿ ದೇವರು ಸೃಷ್ಟಿಸಿದ ಜೀವಂತವಾಗಿರುವ ಮತ್ತು ನಿರ್ಜಿವವಾಗಿರುವ ಎಲ್ಲವು (ಉದಾಹರಣೆಗೆ ಭೂಮಿ, ನೀರು ಮತ್ತು ನಕ್ಷತ್ರಗಳು) ಒಳಗೊಂಡಿವೆ ಎಂದು ಗಮನಿಸಿರಿ. “ಜೀವಿ” ಎನ್ನುವ ಪದವು ಕೇವಲ ಜೀವಂತವಾಗಿರುವವುಗಳನ್ನು ಮಾತ್ರವೇ ಸೂಚಿಸುತ್ತದೆ.

# ಅನುವಾದ ಸಲಹೆಗಳು:

  • ಸಂಧರ್ಭಾನುಸಾರವಾಗಿ, “ಜೀವಿ” ಎನ್ನುವ ಪದವನ್ನು “ಜೀವಿಸುವ” ಅಥವಾ “ಜೀವಂತವಾಗಿರುವ” ಅಥವಾ “ಸೃಷ್ಟಿಸಲ್ಪಟ್ಟ ಜೀವಿ” ಎಂದು ಅನುವಾದ ಮಾಡಬಹುದು.
  • “ಜೀವಿಗಳು” ಎನ್ನುವ ಪದವನ್ನು “ಜೀವಿಸುವ ಎಲ್ಲಾ ಪ್ರಾಣಿಗಳು” ಅಥವಾ “ಜನರು ಮತ್ತು ಪ್ರಾಣಿಗಳು” ಅಥವಾ “ಪ್ರಾಣಿಗಳು” ಅಥವಾ “ಮನುಷ್ಯರು” ಎಂದು ಅನುವಾದ ಮಾಡಬಹುದು.

(ಈ ಪದಗವನ್ನು ಸಹ ನೋಡಿರಿ : ಸೃಷ್ಟಿಸು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H255, H1320, H1321, H1870, H2119, H2416, H4639, H5315, H5971, H7430, H8318, G2226, G2937, G2938

ಜುಡಾಯಿಸಮ್, ಯೆಹೂದ್ಯ ಧರ್ಮ

# ಪದದ ಅರ್ಥವಿವರಣೆ:

“ಜುಡಾಯಿಸಮ್” ಎನ್ನುವ ಪದವು ಯೆಹೂದ್ಯರು ಅನುಸರಿಸುವ ಧರ್ಮವನ್ನು ಸೂಚಿಸುತ್ತದೆ. ಇದು “ಯೆಹೂದ್ಯ ಧರ್ಮ” ಎಂಬುದಾಗಿಯೂ ಸೂಚಿಸುತ್ತದೆ.

  • ಹಳೇ ಒಡಂಬಡಿಕೆಯಲ್ಲಿ “ಯೆಹೂದ್ಯ ಧರ್ಮ” ಎಂದು ಉಪಯೋಗಿಸಲ್ಪಟ್ಟಿದೆ, ಆದರೆ ಹೊಸ ಒಡಂಬಡಿಕೆಯಲ್ಲಿ “ಜುಡಾಯಿಸಮ್” ಎನ್ನುವ ಪದವು ಉಪಯೋಗಿಸಲ್ಪಟ್ಟಿದೆ.
  • ಜುಡಾಯಿಸಮಿನಲ್ಲಿ ದೇವರು ಇಸ್ರಾಯೇಲ್ಯರಿಗೆ ವಿಧೇಯರಾಗುವುದಕ್ಕೆ ಕೊಟ್ಟ ಎಲ್ಲಾ ಹಳೇ ಒಡಂಬಡಿಕೆಯ ಧರ್ಮಶಾಸ್ತ್ರ ಮತ್ತು ನಿಯಮಗಳು ಒಳಗೊಂಡಿರುತ್ತವೆ. ಸ್ವಲ್ಪಕಾಲವಾದನನಂತರ ಯೆಹೂದ್ಯ ಧರ್ಮದಲ್ಲಿ ಅನೇಕ ಆಚಾರಗಳು ಮತ್ತು ಸಂಪ್ರದಾಯಗಳು ಕೂಡ ಸೇರಿಕೆಯಾಗಿರುತ್ತವೆ.
  • ಅನುವಾದ ಮಾಡುವಾಗ, “ಯೆಹೂದ್ಯ ಧರ್ಮ” ಅಥವಾ “ಯೆಹೂದ್ಯರ ಮತ” ಎನ್ನುವ ಪದವು ಹಳೇ ಮತ್ತು ಹೊಸ ಒಡಂಬಡಿಕೆಗಳಲ್ಲಿ ಉಪಯೋಗಿಸಬಹುದು.
  • “ಜುಡಾಯಿಸಮ್” ಎನ್ನುವ ಪದವು ಕೇವಲ ಹೊಸ ಒಡಂಬಡಿಕೆಯಲ್ಲಿ ಮಾತ್ರವೇ ಉಪಯೋಗಿಸಬೇಕು, ಯಾಕಂದರೆ ಅದು ಅದಕ್ಕೆ ಮುಂಚಿತವಾಗಿ ಅಸ್ತಿತ್ವದಲ್ಲಿದ್ದಿಲ್ಲ.

(ಈ ಪದಗಳನ್ನು ಸಹ ನೋಡಿರಿ : ಯೆಹೂದ್ಯ, ಧರ್ಮಶಾಸ್ತ್ರ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: G2454

ಜೇನು, ಜೇನು ಗೂಡು

# ಪದದ ಅರ್ಥವಿವರಣೆ:

“ಜೇನು” ಎನ್ನುವುದು ಜೇನು ಹುಳಗಳು ಹೂವಿನ ಮಕರಂದದಿಂದ ತೆಗೆಯುವ ಜಿಗುಟಾದ ತಿನ್ನಲು ಯೋಗ್ಯವಾದ ಸಿಹಿ ಪದಾರ್ಥವಾಗಿರುತ್ತದೆ. ಜೇನು ಗೂಡು ಎನ್ನುವುದು ಜೇನು ಹುಳಗಳು ಜೇನನ್ನು ಸಂಗ್ರಹಿಸುವ ಮೇಣದಂಥಹ ಗುಡಾಗಿರುತ್ತದೆ.

  • ಜೇನು ಅನೇಕ ವಿಧಗಳಲ್ಲಿ ಕಾಣಿಸಿಕೊಳ್ಳುತ್ತದೆ, ಅದರಲ್ಲಿ ಹಳದಿ ಅಥವಾ ಕಂದು ಬಣ್ಣದಲ್ಲಿರುತ್ತದೆ.
  • ಜೇನು ಅಡವಿಯಲ್ಲಿ ಹೆಚ್ಚಾಗಿ ಸಿಗುತ್ತದೆ, ಜೇನು ನೊಣಗಳು ಗೂಡು ಕಟ್ಟಿರುವ ಸ್ಥಳಗಳಲ್ಲಿ ಅಥವಾ ಮರದ ಟೊಳ್ಳುಗಳಲ್ಲಿ ಸಿಗುತ್ತದೆ. ಜೇನನ್ನು ತಿನ್ನುವುದಕ್ಕೆ ಅಥವಾ ಮಾರುವುದಕ್ಕೆ ಜನರು ಜೇನು ಗೂಡುಗಳಲ್ಲಿ ಜೇನು ನೊಣಗಳನ್ನು ಸಾಕುತ್ತಾರೆ, ಆದರೆ ಸತ್ಯವೇದದಲ್ಲಿ ದಾಖಲಿಸಿದ ಜೇನು ಬಹುಶಃ ಅಡವಿ ಜೇನಾಗಿರಬಹುದು.
  • ಅಡವಿ ಜೇನನ್ನು ತಿನ್ನುವ ವಾಕ್ಯಭಾಗಗಳನ್ನು ಸತ್ಯವೇದದಲ್ಲಿ ವಿಶೇಷವಾಗಿ ಮೂವರ ಕುರಿತಾಗಿ ಹೇಳಲ್ಪಟ್ಟಿದೆ, ಅವರು ಯಾರೆಂದರೆ ಯೋನಾತಾನ, ಸಂಸೋನ ಮತ್ತು ಸ್ನಾನೀಕನಾದ ಯೋಹಾನ.
  • ಸಿಹಿಯಾಗಿರುವ ಅಥವಾ ತುಂಬಾ ಸಂತೋಷಕರವಾಗಿರುವ ಯಾವುದಾದರೊಂದನ್ನು ವಿವರಿಸುವುದಕ್ಕೆ ಆಲಂಕಾರಿಕವಾಗಿ ಈ ಪದವು ಉಪಯೋಗಿಸಲ್ಪಟ್ಟಿರುತ್ತದೆ. ಉದಾಹರಣೆಗೆ, ದೇವರ ವಾಕ್ಯಗಳು ಮತ್ತು ಆತನ ಗುಣಲಕ್ಷಣಗಳು “ಜೇನಿಗಿಂತ ಸಿಹಿಯಾದದ್ದವು” ಎಂದು ಹೇಳಲ್ಪಟ್ಟಿವೆ. (ಇವುಗಳನ್ನೂ ನೋಡಿರಿ: ಒಂದೇರೀತಿಯ, ರೂಪಕಲಂಕಾರ
  • ಕೆಲವೊಂದುಸಲ್ ಒಬ್ಬ ವ್ಯಕ್ತಿಯ ಮಾತುಗಳು ಜೇನಿನಂತೆ ತುಂಬಾ ಸಿಹಿಯಾಗಿರುತ್ತವೆಯೆಂದು ವಿವರಿಸುತ್ತಾರೆ, ಆದರೆ ಆ ಮಾತುಗಳ ಫಲಿತಾಂಶವು ಮೋಸ ಮಾಡುವುದು ಮತ್ತು ಇತರರಿಗೆ ಹಾನಿ ಮಾಡುವುದು ಆಗಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಯೋಹಾನ (ಸ್ನಾನೀಕನು), ಯೋನಾತಾನ, ಫಿಲಿಷ್ಟಿಯನರು, ಸಂಸೋನ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1706, H3293, H3295, H5317, H6688, G2781, G3192, G3193

ಜೊತೆಗಾರ, ಜೊತೆಗಾರರು, ಜೊತೆಕೆಲಸದವನು, ಜೊತೆಕೆಲಸದವರು

# ಸತ್ಯಾಂಶಗಳು:

“ಜೊತೆಗಾರ” ಎನ್ನುವ ಪದವು ಯಾರಾದರೊಬ್ಬರೊಂದಿಗೆ ಒಬ್ಬ ವ್ಯಕ್ತಿಯ ಸಂಗಡ ಹೋಗುವುದನ್ನು ಸೂಚಿಸುತ್ತದೆ ಅಥವಾ ಒಂದು ವಿವಾಹದದಲ್ಲಿ ಮತ್ತು ಸ್ನೇಹದಲ್ಲಿ ಯಾರಾದರೊಂದಿಗೆ ಸಹವಾಸ ಮಾಡುವುದನ್ನು ಸೂಚಿಸುತ್ತದೆ. “ಜೊತೆಕೆಲಸದವನು” ಎನ್ನುವ ಪದವು ಯಾರಾದರೊಬ್ಬ ವ್ಯಕ್ತಿಯೊಂದಿಗೆ ಇನ್ನೊಬ್ಬರು ಸೇರಿ ಕೆಲಸ ಮಾಡುವ ವ್ಯಕ್ತಿಯನ್ನು ಸೂಚಿಸುತ್ತದೆ.

  • ಜೊತೆಗಾರರು ಅನುಭವಗಳ ಮೂಲಕ ಹಾದು ಹೋಗುತ್ತಾರೆ, ಊಟವನ್ನು ಹಂಚಿಕೊಳ್ಳುತ್ತಾರೆ, ಮತ್ತು ಒಬ್ಬರನ್ನೊಬ್ಬರು ಬಲಪಡಿಸಿಕೊಂಡು ಸಹಾಯ ಮಾಡಿಕೊಳ್ಳುತ್ತಾರೆ.
  • ಸಂದರ್ಭಾನುಸಾರವಾಗಿ, ಈ ಪದವನ್ನು “ಸ್ನೇಹಿತ” ಮತ್ತು “ಜೊತೆ ಪ್ರಯಾಣಿಕನು” ಅಥವಾ “ಬಲಪಡಿಸುತ್ತಾ ಇರುವ ಒಬ್ಬ ವ್ಯಕ್ತಿ” ಅಥವಾ “ಜೊತೆಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿ” ಎಂದು ಅರ್ಥಬರುವ ಪದಗಳೊಂದಿಗೆ ಅಥವಾ ಮಾತುಗಳೊಂದಿಗೆ ಅನುವಾದ ಮಾಡಬಹುದು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H251, H441, H2269, H2270, H2271, H2273, H2278, H3674, H3675, H4828, H7453, H7462, H7464, G2844, G3353, G4791, G4898, G4904

ಜೋಯಿಸರು

# ಸತ್ಯಾಂಶಗಳು:

ಸತ್ಯವೇದದಲ್ಲಿ “ಜೋಯಿಸರು” ಎನ್ನುವ ಮಾತು ಅನೇಕಬಾರಿ ದೇವರನ್ನು ಸೇವಿಸುವ ಜನರನ್ನು ಮತ್ತು ಮೂರ್ಖತನದಿಂದಲ್ಲದೇ ಜ್ಞಾನದಿಂದ ನಡೆದುಕೊಳ್ಳುವ ಜನರನ್ನು ಸೂಚಿಸುತ್ತದೆ. ಅರಸನ ಪ್ರಾಂಗಣದಲ್ಲಿ ಭಾಗವಾಗಿ ಸೇವೆ ಮಾಡುವ ಅಸಹಜವಾದ ಜ್ಞಾನವನ್ನು ಮತ್ತು ಸಾಮರ್ಥ್ಯಗಳನ್ನು ಹೊಂದಿರುವ ಮನುಷ್ಯರನ್ನು ಸೂಚಿಸುವ ವಿಶೇಷವಾದ ಪದವಾಗಿರುತ್ತದೆ.

  • ಕೆಲವೊಂದುಬಾರಿ “ಜೋಯಿಸರು” ಎನ್ನುವ ಪದವನ್ನು “ವಿವೇಕಯುತ ಮನುಷ್ಯರು” ಅಥವಾ “ತಿಳುವಳಿಕೆ ಇರುವ ಮನುಷ್ಯರು” ಎಂಬುದಾಗಿ ವಾಕ್ಯದಲ್ಲಿ ವಿವರಿಸಲ್ಪಟ್ಟಿದ್ದಾರೆ. ಈ ಪದವು ಜ್ಞಾನವುಳ್ಳವರಾಗಿ ನಡೆದುಕೊಳ್ಳುವ ಮತ್ತು ನೀತಿಯುತವಾಗಿ ಜೀವಿಸುವ ಮನುಷ್ಯರನ್ನು ಸೂಚಿಸುತ್ತದೆ, ಯಾಕಂದರೆ ಅವರು ದೇವರಿಗೆ ವಿಧೇಯರಾಗಿದ್ದರು.
  • ಫರೋಹನಿಗೆ ಮತ್ತು ಇತರ ಅರಸರಿಗೆ ಸೇವೆ ಮಾಡಿದ “ಜೋಯಿಸರು” ನಕ್ಷತ್ರಗಳ ಕುರಿತಾಗಿ ಚೆನ್ನಾಗಿ ಅಧ್ಯಯನ ಮಾಡಿದ ಪಂಡಿತರಾಗಿದ್ದರು, ವಿಶೇಷವಾಗಿ ಆಕಾಶದಲ್ಲಿ ನಕ್ಷತ್ರಗಳ ಸ್ಥಾನಗಳ ನಮೂನೆಗಳಿಗಾಗಿ ವಿಶೇಷವಾದ ಅರ್ಥಗಳನ್ನು ಹುಡುಕುತ್ತಿದ್ದರು.
  • ಇತರ ಜೋಯಿಸರು ಕನಸುಗಳ ಅರ್ಥಗಳನ್ನು ವಿವರಿಸುವುದಕ್ಕೆ ಇರುತ್ತಿದ್ದರು. ಉದಾಹರಣೆಗೆ, ಅರಸನಾದ ನೆಬುಕದ್ನೆಚ್ಚರನು ತನ್ನ ಬಳಿಯಿರುವ ಜೋಯಿಸರನ್ನು ಕರೆಸಿ, ತನಗೆ ಬಂದಿರುವ ಕನಸುಗಳನ್ನು ವಿವರಿಸಿ, ಅವುಗಳ ಅರ್ಥಗಳನ್ನು ಹೇಳಬೇಕೆಂದು ಆದೇಶ ಮಾಡಿದನು, ಆದರೆ ಅವರಲ್ಲಿ ಯಾರೂ ಹೇಳುವುದಕ್ಕಾಗಲಿಲ್ಲ, ದಾನಿಯೇಲನು ಮಾತ್ರವೇ ದೇವರಿಂದ ಆ ಜ್ಞಾನವನ್ನು ಪಡೆದುಕೊಂಡಿದ್ದನು.
  • ಕೆಲವೊಂದುಬಾರಿ ಜೋಯಿಸರು ಕೂಡ ಮಾಯಾ ಮಂತ್ರಗಳನ್ನು ಪ್ರದರ್ಶಿಸಿದ್ದರು, ದುರಾತ್ಮಗಳ ಶಕ್ತಿಯ ಮೂಲಕ ಕಣಿ ಹೇಳಿರುತ್ತಾರೆ ಅಥವಾ ಆಶ್ಚರ್ಯ ಕಾರ್ಯಗಳನ್ನು ಮಾಡಿರುತ್ತಾರೆ.
  • ಹೊಸ ಒಡಂಬಡಿಕೆಯಲ್ಲಿ ಯೇಸುವನ್ನು ಆರಾಧಿಸುವುದಕ್ಕೆ ಪೂರ್ವ ದಿಕ್ಕಿನಿಂದ ಬಂದಿರುವ ಜೋಯಿಸರು “ಜ್ಞಾನಿಗಳು” ಎಂದು ಕರೆಯಲ್ಪಟ್ಟರು, ಬಹುಶಃ ಪೂರ್ವ ದಿಕ್ಕಿನಲ್ಲಿರುವ ದೇಶದ ನಾಯಕನಿಕೆ ಸೇವೆ ಮಾಡುತ್ತಿರುವ ಪಂಡಿತರಾಗಿರಬಹುದು.
  • ಇವರು ಖಂಡಿತವಾಗಿ ನಕ್ಷತ್ರಗಳನ್ನು ಅಧ್ಯಯನ ಮಾಡಿದ ಜ್ಯೋತಿಷ್ಯರಾಗಿರಬಹುದು. ಅವರು ದಾನಿಯೇಲನು ಬಾಬೆಲೋನಿಯದಲ್ಲಿರುವಾಗ ಹೇಳಿದ ಜ್ಞಾನಿಗಳ ಸಂತಾನದವರಾಗಿರಬಹುದೆಂದು ಕೆಲವುಮಂದಿ ಆಲೋಚನೆ ಮಾಡುತ್ತಿದ್ದಾರೆ.
  • ಸಂದರ್ಭಾನುಸಾರವಾಗಿ, “ಜ್ಞಾನಿಗಳು” ಎನ್ನುವ ಪದವನ್ನು “”ಜ್ಞಾನಿ” ಎನ್ನುವ ಪದವನ್ನು ಉಪಯೋಗಿಸಿ ಅನುವಾದ ಮಾಡಬಹುದು ಅಥವಾ “ವರವನ್ನು ಪಡೆದ ಜನರು” ಅಥವಾ “ವಿದ್ಯಾವಂತರು” ಅಥವಾ “ಪಾಲಕನಿಗಾಗಿ ಪ್ರಾಮುಖ್ಯವಾದ ಉದ್ಯೋಗವನ್ನು ಮಾಡುತ್ತಿರುವ ಮನುಷ್ಯರನ್ನು ಸೂಚಿಸುವುದಕ್ಕೆ ಉಪಯೋಗಿಸುವ ಮಾತುಗಳನ್ನು ಉಪಯೋಗಿಸಿ ಅನುವಾದ ಮಾಡಬಹುದು.
  • “ಜ್ಞಾನಿಗಳು” ಎನ್ನುವುದು ನಾಮಪದವಾಗಿರುತ್ತದೆ, “ಜ್ಞಾನಿ” ಎನ್ನುವ ಪದವನ್ನು ಸತ್ಯವೇದದಲ್ಲಿ ಯಾವರೀತಿ ಅನುವಾದ ಮಾಡಿರುತ್ತಾರೋ ಅದೇ ವಿಧಾನದಲ್ಲಿ ಅನುವಾದ ಮಾಡಬೇಕಾಗಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಬಾಬೆಲೋನಿಯ, ದಾನಿಯೇಲ, ಕಣಿ ಹೇಳುವುದು, ಮಾಯಮಂತ್ರ, ನೆಬುಕದ್ನೆಚ್ಚರ, ಪಾಲಕ, ಜ್ಞಾನಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2445, H2450, H3778, H3779, G4680

ಜ್ಞಾಪಕಾರ್ಥಕವಾಗಿ, ಜ್ಞಾಪಕಾರ್ಥವಾದ ಅರ್ಪಣೆ (ಧಾನ್ಯ ನೈವೇದ್ಯ)

# ಪದದ ಅರ್ಥವಿವರಣೆ:

“ಜ್ಞಾಪಕಾರ್ಥಕವಾಗಿ” ಎನ್ನುವ ಪದವು ಯಾರಾದರೊಬ್ಬರನ್ನು ಅಥವಾ ಯಾವುದಾದರೊಂದನ್ನು ನೆನಪು ಮಾಡಿಕೊಳ್ಳುವ ಕ್ರಿಯೆಯನ್ನು ಸೂಚಿಸುತ್ತದೆ.

  • ಯಾವುದಾದರೊಂದರ ಕುರಿತಾಗಿ ಅವರಿಗೆ ನೆನೆಪಿಸುವ ಯಾವುದಾದರೊಂದನ್ನು ವಿವರಿಸುವುದಕ್ಕೆ ವಿಶೇಷವಾಗಿಯೂ ಈ ಪದವನ್ನು ಉಪಯೋಗಿಸಿದ್ದಾರೆ, “ಜ್ಞಾಪಕಾರ್ಥವಾದ ಅರ್ಪಣೆ (ಧಾನ್ಯದ ನೈವೇದ್ಯ), ಸರ್ವಾಂಗಹೋಮದ “ಜ್ಞಾಪಕಾರ್ಥವಾದ ಭಾಗ” ಅಥವಾ “ಜ್ಞಾಪಕಾರ್ಥವಾದ ಕಲ್ಲುಗಳು” ಎಂದೂ ಹೇಳಲ್ಪಡುತ್ತದೆ.
  • ಹಳೇ ಒಡಂಬಡಿಕೆಯಲ್ಲಿ ಜ್ಞಾಪಕಾರ್ಥವಾದ ಅರ್ಪಣೆಗಳು ಮಾಡುತ್ತಿದ್ದರು, ಇದರಿಂದ ಇಸ್ರಾಯೇಲ್ಯರೆಲ್ಲರೂ ದೇವರು ತಮಗೆ ಯಾವ ಕಾರ್ಯಗಳನ್ನು ಮಾಡಿದ್ದಾರೆಂದು ನೆನಪಿಸಿಕೊಳ್ಳುತ್ತಿದ್ದರು.
  • ಜ್ಞಾಪಕಾರ್ಥವಾದ ಕಲ್ಲುಗಳನ್ನು ಹೊಂದಿರುವಂತೆ ವಿಶೇಷವಾದ ಬಟ್ಟೆಗಳನ್ನು ಧರಿಸಿಕೊಳ್ಳಬೇಕೆಂದು ದೇವರು ಇಸ್ರಾಯೇಲ್ಯರಿಗೆ ಹೇಳಿದನು. ಈ ಕಲ್ಲುಗಳ ಮೇಲೆ ಇಸ್ರಾಯೇಲ್ ಹನ್ನೆರಡು ಕುಲಗಳ ಹೆಸರುಗಳನ್ನು ಕೆತ್ತಿರುತ್ತಾರೆ. ಇವೆಲ್ಲವುಗಳೂ ಅವರ ವಿಷಯದಲ್ಲಿ ದೇವರು ಹೊಂದಿರುವ ನಂಬಿಕತ್ವವನ್ನು ನೆನಪು ಮಾಡುತ್ತವೆ.
  • ಹೊಸ ಒಡಂಬಡಿಕೆಯಲ್ಲಿ ಕೊರ್ನೇಲ್ಯ ಎಂಬ ಮನುಷ್ಯನನ್ನು ದೇವರು ಘನಪಡಿಸಿದ್ದರು, ಯಾಕಂದರೆ ಈತನು ಬಡವರಿಗೆ ದಾನ ಧರ್ಮ ಕಾರ್ಯಗಳನ್ನು ಮಾಡಿದ್ದನು. ಈ ಎಲ್ಲಾ ಕಾರ್ಯಗಳನ್ನು ದೇವರ ಮುಂದೆ “ಜ್ಞಾಪಕಾರ್ಥವಾಗಿದ್ದಾವೆಂದು” ಹೇಳಲ್ಪಟ್ಟಿರುತ್ತವೆ.

# ಅನುವದಾ ಸಲಹೆಗಳು:

  • ಈ ಪದವನ್ನು “ಚಿರಕಾಲ ಜ್ಞಾಪನೆ” ಎಂಬುದಾಗಿಯೂ ಅನುವಾದ ಮಾಡಬಹುದು.
  • “ಜ್ಞಾಪಕಾರ್ಥವಾದ ಕಲ್ಲು” ಎನ್ನುವ ಮಾತನ್ನು “(ಯಾವುದಾದರೊಂದರ) ವಿಷಯದಲ್ಲಿ ಅವರಿಗೆ ಜ್ಞಾಪಕ ಮಾಡುವ ಕಲ್ಲು” ಎಂದೂ ಅನುವಾದ ಮಾಡಬಹುದು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2142, H2146, G3422

ಡೇರೆ, ಡೇರೆಗಳು, ಗುಡಾರ ಮಾಡುವವರು

# ಪದದ ಅರ್ಥವಿವರಣೆ:

ಡೇರೆ ಎನ್ನುವುದನ್ನು ಕಂಬಗಳ ನಿರ್ಮಾಣದ ಮೇಲೆ ಗಟ್ಟಿಯಾದ ವಸ್ತ್ರವನ್ನು ಹಾಕುವದರ ಮೂಲಕ ತಯಾರಿಸುವ ಸಾಗಿಸಲು ಸಾಧ್ಯವಾಗುವ ಗುಡಾರ ಎಂದರ್ಥ.

  • ಡೇರೆಗಳು ಚಿಕ್ಕದಾಗಿರಬಹುದು, ಅದರಲ್ಲಿ ಜನರು ಮಲಗುವುದಕ್ಕೆ ಬೇಕಾದ ಸ್ಥಳವು ಇರುತ್ತದೆ, ಅಥವಾ ಅವು ದೊಡ್ಡವೂ ಆಗಿರಬಹುದು, ಇದರಲ್ಲಿ ಕುಟುಂಬವೆಲ್ಲಾ ಮಲಗುವುದಕ್ಕೆ, ಅಡುಗೆ ಮಾಡಿಕೊಳ್ಳುವುದಕ್ಕೆ, ಮತ್ತು ನಿವಾಸವಾಗಿರುವುದಕ್ಕೆ ಬೇಕಾದ ಸ್ಥಳವೂ ಇರುತ್ತದೆ.
  • ಅನೇಕಮಂದಿ ಜನರಿಗೋಸ್ಕರ ಡೇರೆಗಳನ್ನು ತಮ್ಮ ನಿವಾಸ ಸ್ಥಾನಗಳನ್ನಾಗಿ ಉಪಯೋಗಿಸಿಕೊಳ್ಳುತ್ತಾರೆ. ಉದಾಹರಣೆಗೆ, ಅಬ್ರಾಹಾಮನ ಕುಟುಂಬವು ಕಾನಾನ್ ಭೂಮಿಯಲ್ಲಿ ನಿವಾಸ ಮಾಡಿದ ಸಮಯವೆಲ್ಲಾ, ಅವರು ಮೇಕೆಗಳ ಕುದುಳುಗಳಿಂದ ಗಟ್ಟಿಯಾದ ಬಟ್ಟೆಗಳನ್ನು ಮಾಡಿಕೊಂಡು, ಅವುಗಳಿಂದ ದೊಡ್ಡ ದೊಡ್ಡ ಗುಡಾರಗಳನ್ನು ನಿರ್ಮಿಸಿಕೊಂಡು ನಿವಾಸವಾಗಿದ್ದರು.
  • ಇಸ್ರಾಯೇಲ್ಯರು ಕೂಡ ತಾವು ಸೀನಾಯಿ ಅರಣ್ಯದಲ್ಲಿ ನಲವತ್ತು ವರ್ಷಗಳ ಕಾಲ ಸಂಚಾರ ಮಾಡುವ ಕಾಲದಲ್ಲಿ ಅವರು ಗುಡಾರಗಳಲ್ಲಿ ನಿವಾಸವಾಗಿದ್ದರು.
  • ಗುಡಾರವನ್ನು ಕಟ್ಟಿರುವುದು ಕೂಡ ಒಂದು ವಿಧವಾದ ದೊಡ್ಡ ಡೇರೆಗಳಿಂದಲೇ ನಿರ್ಮಿಸಿದ್ದರು, ಇದರ ಸುತ್ತಮುತ್ತ ವಸ್ತ್ರಗಳ ತೆರೆಗಳಿಂದ ಗೋಡೆಗಳನ್ನು ಕಟ್ಟಿದ್ದರು.
  • ಅಪೊಸ್ತಲನಾದ ಪೌಲನು ಸುವಾರ್ತೆಯನ್ನು ಸಾರುವುದಕ್ಕೆ ಅನೇಕ ಪಟ್ಟಣಗಳಿಗೆ ಪ್ರಯಾಣ ಮಾಡುತ್ತಿರುವಾಗ, ಆತನು ತನ್ನ ಪೋಷಣೆಗಾಗಿ ಡೇರೆಗಳನ್ನು ಒಲಿಯುವ ಕೆಲಸ ಮಾಡುತ್ತಿದ್ದನು.
  • “ಡೇರೆಗಳು” ಎನ್ನುವ ಪದವು ಕೆಲವೊಂದುಬಾರಿ ಜನರು ನಿವಾಸ ಮಾಡುವ ಸ್ಥಳವನ್ನು ಸೂಚಿಸುವುದಕ್ಕೆ ಸಾಧಾರಣವಾಗಿ ಅಲಂಕಾರಿಕವಾಗಿ ಉಪಯೋಗಿಸುತ್ತಿದ್ದರು. ಇದನ್ನು “ಮನೆಗಳು” ಅಥವಾ “ನಿವಾಸಗಳು” ಅಥವಾ “ಗೃಹಗಳು” ಅಥವಾ “ದೇಹಗಳು” ಎಂದೂ ಅನುವಾದ ಮಾಡಬಹುದು. (ನೋಡಿರಿ: ಲಾಕ್ಷಣಿಕ ಪ್ರಯೋಗ

(ಈ ಪದಗಳನ್ನು ಸಹ ನೋಡಿರಿ : ಅಬ್ರಾಹಾಮ, ಕಾನಾನ್, ತೆರೆ, ಪೌಲ, ಸೀನಾಯಿ, ಗುಡಾರ, ಭೇಟಿ ಮಾಡುವ ಗುಡಾರ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H167, H168, H2583, H3407, H6898

ತಗ್ಗಿಸಿಕೊಂಡಿರುವುದು, ಅತಿ ಕಡಿಮೆ, ಕೆಳಮಟ್ಟ

# ಪದದ ಅರ್ಥವಿವರಣೆ:

“ದೀನ ಸ್ಥಿತಿ” ಮತ್ತು “ನಮ್ರತೆ” ಎನ್ನುವ ಪದಗಳು ಬಡವರಾಗಿರುವುದನ್ನು ಅಥವಾ ಅತೀ ಕಡಿಮೆ ಸ್ಥಾನದಲ್ಲಿರುವುದನ್ನು ಸೂಚಿಸುತ್ತದೆ. ತಗ್ಗಿಸಿಕೊಂಡಿರುವುದೆನ್ನುವುದು ದೀನ ಸ್ಥಿತಿಯನ್ನು ಹೊಂದಿರುವ ಅರ್ಥವನ್ನು ಕೊಡುತ್ತದೆ.

  • ಯೇಸುವು ಕೂಡ ಇತರರಿಗೆ ಸೇವೆ ಮಾಡುವುದಕ್ಕೆ ಮತ್ತು ಮನುಷ್ಯನಾಗಿ ಬರುವುದಕ್ಕೆ ತನ್ನನ್ನು ತಾನು ಕೆಳಮಟ್ಟಕ್ಕೆ ತಗ್ಗಿಸಿಕೊಂಡಿದ್ದಾರೆ.
  • ಆತನ ಜನನವು ಸಾಧಾರಣವಾಗಿದ್ದಿತ್ತು, ಆತನು ಪ್ರಾಣಿಗಳನ್ನು ಕಟ್ಟಿ ಹಾಕುವ ಸ್ಥಳದಲ್ಲಿ ಜನಿಸಿದ್ದನೇ ಹೊರತು ಅರಮನೆಯಲ್ಲಲ್ಲ.
  • ತಗ್ಗಿಸಿಕೊಂಡಿರುವ ಸ್ವಭಾವವನ್ನು ಹೊಂದಿರುವುದೆಂದರೆ, ಅಹಂಭಾವಿಗಳಾಗಿ ಇರದಿರುವುದು ಎಂದರ್ಥ.
  • “ತಗ್ಗಿಸಿಕೊಂಡಿರುವುದು” ಎನ್ನುವ ಮಾತನ್ನು ಅನುವಾದ ಮಾಡುವುದರಲ್ಲಿ “ದೀನತ್ವ” ಅಥವಾ “ಕೆಳಮಟ್ಟ” ಅಥವಾ “ಅಪ್ರಾಮುಖ್ಯ” ಎನ್ನುವ ಪದಗಳು ಒಳಗೊಂಡಿರುತ್ತವೆ.
  • “ಕೆಳಮಟ್ಟ” ಎನ್ನುವ ಪದವನ್ನು “ದೀನತ್ವ” ಅಥವಾ “ಕಡಿಮೆ ಪ್ರಾಮುಖ್ಯತೆ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ದೀನತೆ, ಗರ್ವ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H6041, H6819, H8217, G5011, G5012, G5014

ತಂತಿವಾದ್ಯ, ತಂತಿವಾದ್ಯಗಳು, ತಂತಿವಾದ್ಯಕಾರ, ತಂತಿವಾದ್ಯಕಾರರು

# ಪದದ ಅರ್ಥವಿವರಣೆ:

ತಂತಿವಾದ್ಯ ತಂತಿಗಳನ್ನು ಒಳಗೊಂಡಿರುವ ಉಪಕರಣವಾಗಿರುತ್ತದೆ, ಇದು ಸಹಜವಾಗಿ ಒಂದು ದೊಡ್ಡ ಚೌಕಟ್ಟಿನ ಕಟ್ಟಿಗೆಗೆ ಅನೇಕ ವಿಧವಾದ ತಂತಿಗಳನ್ನು ಒಳಗೊಂಡಿರುತ್ತದೆ.

  • ಸತ್ಯವೇದ ಕಾಲಗಳಲ್ಲಿ ತಂತಿವಾದ್ಯವನ್ನು ಮತ್ತು ಇತರ ಸಂಗೀತ ಉಪಕರಣಗಳನ್ನು ತಯಾರು ಮಾಡುವುದಕ್ಕೆ ಶಂಕು ಮರದ ಕಟ್ಟಿಗೆಯನ್ನು ಉಪಯೋಗಿಸುತ್ತಿದ್ದರು.
  • ತಂತಿವಾದ್ಯಗಳನ್ನು ಕೈಗಳಲ್ಲಿ ಇಟ್ಟುಕೊಂಡು, ನಡೆಯುತ್ತಾ ಬಾರಿಸುವರು.
  • ಸತ್ಯವೇದದಲ್ಲಿ ಅನೇಕ ಸ್ಥಳಗಳಲ್ಲಿ ತಂತಿವಾದ್ಯಗಳು ದೇವರನ್ನು ಸ್ತುತಿಸಿ, ಆರಾಧನೆ ಮಾಡುವುದಕ್ಕೆ ಉಪಯೋಗಿಸುವ ಉಪಕರಣಗಳನ್ನಾಗಿ ದಾಖಲಿಸುವರು.
  • ದಾವೀದನು ತಂತಿವಾದ್ಯ ಸಂಗೀತಕ್ಕೆ ಅನುಗುಣವಾಗಿ ಅನೇಕವಾದ ಕೀರ್ತನೆಗಳನ್ನು ರಚನೆ ಮಾಡಿರುತ್ತಾನೆ.
  • ಈತನು ಅರಸನಾದ ಸೌಲನಿಗೆ ತೊಂದರೆ ಕೊಡುವ ಆತ್ಮದಿಂದ ಬಿಡುಗಡೆಗೊಳಿಸಿ ಸಮಾಧಾನವನ್ನುಂಟು ಮಾಡಲು ತಂತಿವಾದ್ಯದ ಸಂಗೀತವನ್ನು ಬಾರಿಸಿರುತ್ತಾನೆ,

(ಈ ಪದಗಳನ್ನು ಸಹ ನೋಡಿರಿ : ದಾವೀದ, ಶಂಕು ಮರ, ಕೀರ್ತನೆ, ಸೌಲ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3658, H5035, H5059, H7030, G2788, G2789, G2790

ತಪ್ಪಿಸು, ಬಿಡುಗಡೆ ಮಾಡುವುದು, ಬಿಡುಗಡೆ ಮಾಡಲ್ಪಟ್ಟಿದೆ, ಬಿಡುಗಡೆ ಮಾಡಲ್ಪಡುತ್ತಿದೆ, ವಿಮೋಚಕನು, ವಿಮೋಚನೆ

# ಪದದ ಅರ್ಥವಿವರಣೆ:

ಒಬ್ಬರನ್ನು “ತಪ್ಪಿಸು” ಎನ್ನುವದಕ್ಕೆ ಒಬ್ಬ ವ್ಯಕ್ತಿಯನ್ನು ರಕ್ಷಿಸುವುದು ಎಂದರ್ಥ. “ವಿಮೋಚಕ” ಎನ್ನುವ ಪದವು ದಾಸತ್ವದಿಂದ, ಒತ್ತಡದಿಂದ, ಅಥವಾ ಇತರ ಅಪಾಯಕರ ಸಂಘಟನೆಗಳಿಂದ ಜನರನ್ನು ಬಿಡುಗಡೆಗೊಳಿಸುವ ಅಥವಾ ಸಂರಕ್ಷಿಸುವ ವ್ಯಕ್ತಿಯನ್ನು ಸೂಚಿಸುತ್ತದೆ. “ವಿಮೋಚನೆ” ಎನ್ನುವ ಪದವು ದಾಸತ್ವದಿಂದ, ಒತ್ತಡದಿಂದ, ಅಥವಾ ಇತರ ಅಪಾಯಕರ ಸಂಘಟನೆಗಳಿಂದ ಜನರನ್ನು ರಕ್ಷಿಸಿದಾಗ ಅಥವಾ ಬಿಡುಗಡೆಗೊಳಿಸಿದಾಗ ನಡೆಯುವ ಕಾರ್ಯವನ್ನು ಸೂಚಿಸುತ್ತದೆ.

  • ಹಳೇ ಒಡಂಬಡಿಕೆಯಲ್ಲಿ ಇಸ್ರಾಯೇಲ್ಯರ ಮೇಲೆ ಧಾಳಿ ಮಾಡುವದಕ್ಕೆ ಬಂದಿರುವ ಅನೇಕ ಜನರ ಗುಂಪುಗಳಿಗೆ ವಿರುದ್ಧವಾಗಿ ಯುದ್ದದಲ್ಲಿ ಇಸ್ರಾಯೇಲ್ಯರನ್ನು ನಡೆಸುವುದರಿಂದ ಅವರನ್ನು ಸಂರಕ್ಷಿಸುವುದಕ್ಕೆ ದೇವರು ವಿಮೋಚಕರನ್ನು ನೇಮಿಸಿದ್ದನು.
  • ಈ ವಿಮೋಚಕರೆಲ್ಲರನ್ನು “ನ್ಯಾಯಾಧೀಶರು” ಎಂದು ಕರೆಯುತ್ತಿದ್ದರು ಮತ್ತು ನ್ಯಾಯಾಧೀಶರು ಎನ್ನುವ ಹಳೇ ಒಡಂಬಡಿಕೆಯ ಪುಸ್ತಕದಲ್ಲಿ ನ್ಯಾಯಾಧೀಶರು ಇಸ್ರಾಯೇಲ್ಯರನ್ನು ಆಳಿದ ಚರಿತ್ರೆಯೆಲ್ಲವನ್ನು ದಾಖಲಿಸಿದ್ದಾರೆ.
  • ದೇವರು ಕೂಡ “ವಿಮೋಚಕನು” ಎಂದು ಕರೆಯಲ್ಪಟ್ಟಿದ್ದಾನೆ.” ಇಸ್ರಾಯೇಲ್ ಚರಿತ್ರೆಯಲ್ಲೆಲ್ಲಾ ಆತನು ಶತ್ರುಗಳಿಂದ ತನ್ನ ಜನರನ್ನು ಸಂರಕ್ಷಿಸಿದನು ಅಥವಾ ವಿಮೋಚಿಸಿದನು.
  • “ಬಿಡುಗಡೆಗೊಳಿಸು” ಅಥವಾ “ತಲುಪಿಸು” ಎನ್ನುವ ಮಾತು ಶತ್ರುವಿಗೆ ಯಾರಾದರೊಬ್ಬರನ್ನು ಒಪ್ಪಿಸಿಕೊಡುವುದೆನ್ನುವ ವಿಭಿನ್ನ ಅರ್ಥವು ಇರುತ್ತದೆ, ಉದಾಹರಣೆಗೆ, ಯೂದನು ಯೇಸುವನ್ನು ಯೆಹೂದ್ಯರ ನಾಯಕರಿಗೆ ಒಪ್ಪಿಸಿಕೊಟ್ಟನು.

# ಅನುವಾದ ಸಲಹೆಗಳು:

ಜನರನ್ನು ತಮ್ಮ ಶತ್ರುಗಳಿಂದ ತಪ್ಪಿಸುವುದು ಎನ್ನುವ ಸಂದರ್ಭದಲ್ಲಿ, “ತಪ್ಪಿಸು” ಎನ್ನುವ ಪದವನ್ನು “ರಕ್ಷಿಸು” ಅಥವಾ “ಸ್ವಾತಂತ್ರ್ಯಗೊಳಿಸು” ಅಥವಾ “ಸಂರಕ್ಷಿಸು” ಎಂದೂ ಅನುವಾದ ಮಾಡಬಹುದು.

  • ಶತ್ರುಗಳಿಗೆ ಯಾರಾದರೊಬ್ಬರನ್ನು ಬಿಡುಗಡೆಗೊಳಿಸು ಎನ್ನುವ ಅರ್ಥದಲ್ಲಿ “ತಲುಪಿಸು” ಎನ್ನುವ ಪದಕ್ಕೆ “ದ್ರೋಹ ಮಾಡು” ಅಥವಾ “ಕೈಗೆ ಒಪ್ಪಿಸು” ಅಥವಾ “ಕೊಡು” ಎಂದೂ ಅನುವಾದ ಮಾಡಬಹದು.
  • “ವಿಮೋಚಕನು” ಎನ್ನುವ ಪದವನ್ನು “ಸಂರಕ್ಷಿಸುವಾತನು” ಅಥವಾ “ಸ್ವಾತಂತ್ರ್ಯಗೊಳಿಸುವಾತನು” ಎಂದೂ ಅನುವಾದ ಮಾಡಬಹುದು.
  • “ವಿಮೋಚಕನು” ಎನ್ನುವ ಪದವು ಇಸ್ರಾಯೇಲ್ಯರನ್ನು ನಡೆಸುವ ನ್ಯಾಯಾಧೀಶರನ್ನು ಸೂಚಿಸಿದಾಗ, ಈ ಪದವನ್ನು “ಪಾಲಕರು” ಅಥವಾ “ನ್ಯಾಯಾಧೀಶರು” ಅಥವಾ “ನಾಯಕನು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ನ್ಯಾಯಾಧೀಶರು, ರಕ್ಷಿಸು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಉದಾಹರಣೆಗಳು:

  • _16:03 ದೇವರು ತಮ್ಮ ಶತ್ರುಗಳಿಂದ ರಕ್ಷಿಸುವುದಕ್ಕೆ ___ ವಿಮೋಚಕನನ್ನು ____ ಅನುಗ್ರಹಿಸಿದನು ಮತ್ತು ಅವರನ್ನು ಸಮಾಧಾನ ಭೂಮಿಗೆ ಕರೆದುಕೊಂಡುಬಂದನು.
  • _16:16 ಅವರು (ಇಸ್ರಾಯೇಲ್ಯರು) ಕೊನೆಗೆ ಸಹಾಯಕ್ಕಾಗಿ ದೇವರನ್ನು ಬೇಡಿಕೊಂಡರು, ಮತ್ತು ದೇವರು ಅವರಿಗೋಸ್ಕರ ಇನ್ನೊಬ್ಬ ___ ವಿಮೋಚಕನನ್ನು ____ ಕಳುಹಿಸಿದರು.
  • _16:17 ಅನೇಕ ವರ್ಷಗಳಾದನಂತರ, ದೇವರು ಶತ್ರುಗಳಿಂದ ಇಸ್ರಾಯೇಲ್ಯರನ್ನು ಬಿಡುಗಡೆಗೊಳಿಸಲು ಅನೇಕ ___ ವಿಮೋಚಕರನ್ನು ___ ಕಳುಹಿಸಿದರು.

# ಪದ ಡೇಟಾ:

  • Strong's: H579, H1350, H2020, H2502, H3052, H3205, H3444, H3467, H4042, H4422, H4560, H4672, H5337, H5338, H5414, H5462, H6299, H6308, H6403, H6405, H6413, H6475, H6487, H6561, H7725, H7804, H8000, H8199, H8668, G325, G525, G629, G859, G1080, G1325, G1560, G1659, G1807, G1929, G2673, G3086, G3860, G4506, G4991, G5088, G5483

ತಪ್ಪು, ತಪ್ಪುಗಳು, ತಪ್ಪು ಮಾಡಿದೆ, ತಪ್ಪಾಗಿ, ತಪ್ಪಿನಿಂದ, ತಪ್ಪು ಮಾಡುವವನು, ತಪ್ಪು ಮಾಡುವುದು, ದುಷ್ಕೃತ್ಯ, ದುಷ್ಕೃತ್ಯ ಮಾಡಲಾಗಿದೆ, ನೋಯಿಸು, ನೋಯಿಸುವುದು, ನೋಯಿಸುತ್ತಿರುವುದು, ಹಾನಿಕರ

# ಪದದ ಅರ್ಥವಿವರಣೆ:

ಯಾರಾದರೊಬ್ಬರೊಂದಿಗೆ “ತಪ್ಪು” ಮಾಡುವುದೆನ್ನುವುದು ಎಂದರೆ ಆ ವ್ಯಕ್ತಿಯೊಂದಿಗೆ ಅನ್ಯಾಯವಾಗಿ ಮತ್ತು ವಂಚನೆಯಿಂದ ನಡೆದುಕೊಳ್ಳುವುದು ಎಂದರ್ಥ.

  • “ದುಷ್ಕೃತ್ಯ” ಎನ್ನುವ ಪದಕ್ಕೆ ಯಾರಾದರೊಬ್ಬರೊಂದಿಗೆ ಕೆಟ್ಟದ್ದಾಗಿ ನಡೆದುಕೊಳ್ಳುವುದು ಅಥವಾ ಒರಟಾಗಿ ನಡೆದುಕೊಳ್ಳುವುದು ಎಂದರ್ಥ, ಆ ವ್ಯಕ್ತಿಗೆ ಮಾನಸಿಕವಾಗಿ ಅಥವಾ ಭೌತಿಕವಾಗಿ ಹಾನಿಯನ್ನುಂಟು ಮಾಡುವುದು ಎಂದರ್ಥ.
  • “ನೋಯಿಸು” ಎನ್ನುವ ಪದವು ಸರ್ವಸಾಧಾರಣವಾದ ಪದವಾಗಿರುತ್ತದೆ ಮತ್ತು “ಯಾವುದಾದರೊಂದರ ರೂಪದಲ್ಲಿ ಆ ವ್ಯಕ್ತಿಯನ್ನು ನೋಯಿಸುವುದು” ಎಂದರ್ಥವಾಗಿರುತ್ತದೆ. ಈ ಮಾತಿಗೆ ಅನೇಕಬಾರಿ “ಭೌತಿಕವಾಗಿ ಗಾಯವನ್ನುಂಟು” ಮಾಡುವುದು ಎಂದರ್ಥ.
  • ಸಂದರ್ಭಾನುಸಾರವಾಗಿ ಈ ಮಾತುಗಳನ್ನು “ತಪ್ಪನ್ನು ಮಾಡು” ಅಥವಾ “ಅನ್ಯಾಯವಾಗಿ ನಡೆದುಕೋ” ಅಥವಾ “ಹಾನಿಯನ್ನುಂಟು ಮಾಡು” ಅಥವಾ “ಹಾನಿಯನ್ನುಂಟು ಮಾಡುವ ವಿಧಾನದಲ್ಲಿ ನಡೆದುಕೊಳ್ಳುವುದು” ಅಥವಾ “ಗಾಯವನ್ನುಂಟು ಮಾಡುವುದು” ಎಂದೂ ಅನುವಾದ ಮಾಡಬಹುದು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H205, H816, H2248, H2250, H2255, H2257, H2398, H2554, H2555, H3238, H3637, H4834, H5062, H5142, H5230, H5627, H5753, H5766, H5791, H5792, H5916, H6031, H6087, H6127, H6231, H6485, H6565, H6586, H7451, H7489, H7563, H7665, H7667, H7686, H8133, H8267, H8295, G91, G92, G93, G95, G264, G824, G983, G984, G1536, G1626, G1651, G1727, G1908, G2556, G2558, G2559, G2607, G3076, G3077, G3762, G4122, G5195, G5196

ತಲೆ, ತಲೆಗಳು, ಹಣೆ, ಹಣೆಗಳು, ಬೋಳುತಲೆ, ಮುಖ್ಯಸ್ಥ, ತಲೆಪಟ್ಟಿಗಳು, ತಲೆಬಟ್ಟೆಗಳು, ಶಿರಚ್ಚೇದನೆ

# ಪದದ ಅರ್ಥವಿವರಣೆ:

ಸತ್ಯವೇದದಲ್ಲಿ “ತಲೆ” ಎನ್ನುವ ಪದವನ್ನು ಅನೇಕವಾದ ಅಲಂಕಾರಿಕ ಅರ್ಥಗಳಲ್ಲಿ ಉಪಯೋಗಿಸಲಾಗಿದೆ.

  • “ಅನೇಕ ದೇಶಗಳ ಮೇಲೆ ನೀನು ನನ್ನನ್ನು ಮುಖ್ಯಸ್ಥನನ್ನಾಗಿ ಮಾಡಿದ್ದೀ” ಎನ್ನುವ ಮಾತಿನಲ್ಲಿ ಇರುವಂತೆ, ಎಲ್ಲಾ ಜನರ ಮೇಲೆ ಅಧಿಕಾರ ವಹಿಸುವುದನ್ನು ಸೂಚಿಸುವುದಕ್ಕೆ ಈ ಪದಗಳಲ್ಲಿ ಒಂದು ಪದವನ್ನು ಉಪಯೋಗಿಸಲಾಗಿರುತ್ತದೆ. ಇದನ್ನು “ನೀನು ನನ್ನನ್ನು ಪಾಲಕನನ್ನಾಗಿ ಮಾಡಿದ್ದೀ... “ ಅಥವಾ “ಎಲ್ಲಾ ಜನರ ಮೇಲೆ ನೀನು ನನಗೆ ಅಧಿಕಾರವನ್ನು ಕೊಟ್ಟಿದ್ದೀ...” ಎಂದೂ ಅನುವಾದ ಮಾಡಬಹುದು.
  • ಯೇಸು “ಸಭೆಯ ತಲೆಯಾಗಿ” ಕರೆಯಲ್ಪಟ್ಟಿದ್ದಾನೆ. ಒಬ್ಬ ವ್ಯಕ್ತಿಯ ತಲೆಯು ತನ್ನ ಶರೀರದಲ್ಲಿರುವ ಭಾಗಗಳನ್ನು ಯಾವರೀತಿ ನಿರ್ದೇಶಿಸುತ್ತದೋ ಮತ್ತು ಅವುಗಳಿಗೆ ಮಾರ್ಗದರ್ಶನ ನೀಡುತ್ತದೋ, ಅದೇರೀತಿ ಯೇಸುವು ಕೂಡ ತನ್ನ ಸಭೆಯಾಗಿರುವ “ಶರೀರದ” ಸದಸ್ಯರನ್ನು ನಿರ್ದೇಶಿಸುತ್ತಾನೆ ಮತ್ತು ಅವರಿಗೆ ಮಾರ್ಗದರ್ಶನ ನೀಡುತ್ತಾನೆ.

ಗಂಡನು ತನ್ನ ಹೆಂಡತಿಗೆ ಅಧಿಕಾರಿಯೆಂದು ಅಥವಾ “ತಲೆ” ಎಂದು ಹೊಸ ಒಡಂಬಡಿಕೆ ಬೋಧಿಸುತ್ತದೆ. ಇವನು ತನ್ನ ಹೆಂಡತಿಯನ್ನು ಮತ್ತು ತನ್ನ ಕುಟುಂಬವನ್ನು ನಿರ್ದೇಶಿಸುವುದಕ್ಕೆ ಮತ್ತು ನಡೆಸುವುದಕ್ಕೆ ಬಾಧ್ಯತೆಯನ್ನು ಹೊಂದಿರುತ್ತಾನೆ.

  • “ತನ್ನ ತಲೆಯನ್ನು ಯಾವ ಕ್ಷೌರದ ಕತ್ತಿಯು ಮುಟ್ಟಿರುವುದಿಲ್ಲ” ಎನ್ನುವ ಮಾತನ್ನು “ಅವನು ತನ್ನ ತಲೆಯ ಕೂದುಲುಗಳನ್ನು ಎಂದಿಗೂ ಕತ್ತರಿಸಿರುವುದಿಲ್ಲ” ಎಂದರ್ಥ.
  • “ಬೀದಿಯ ತಲೆ” ಎನ್ನುವ ಮಾತಿನಲ್ಲಿರುವಂತೆಯೇ “ತಲೆ” ಎನ್ನುವ ಪದವನ್ನು ಯಾವುದಾದರೊಂದರ ಆಧಾರವನ್ನು ಅಥವಾ ಆರಂಭವನ್ನು ಸೂಚಿಸುತ್ತದೆ.
  • “ಧಾನ್ಯದ ತೆನೆಗಳು” ಎನ್ನುವ ಮಾತು ಕಾಳುಗಳನ್ನು ಹೊಂದಿರುವ ಗಿಡದ ಧಾನ್ಯಗಳ ಮೇಲಿನ ಭಾಗವನ್ನು ಸೂಚಿಸುತ್ತದೆ.
  • “ಈ ಬೂದಿ ಬಣ್ಣದ ತಲೆ” ಎನ್ನುವ ಮಾತಿನಲ್ಲಿರುವಂತೆ, “ತಲೆ” ಎನ್ನುವ ಪದಕ್ಕೆ ಇನ್ನೊಂದು ಅಲಂಕಾರಿಕ ಉಪಯೋಗವು ಒಬ್ಬ ವ್ಯಕ್ತಿಯನ್ನು ಸಂಪೂರ್ಣವಾಗಿ ಪ್ರತಿನಿಧಿಸುವುದಕ್ಕೆ ಉಪಯೋಗಿಸಲಾಗಿರುತ್ತದೆ, ಹಿರಿಯ ವ್ಯಕ್ತಿಯನ್ನು ಸೂಚಿಸುವುದಕ್ಕೆ ಅಥವಾ “ಯೋಸೇಫನ ತಲೆ” ಎನ್ನುವ ಮಾತಿನಲ್ಲಿರುವಂತೆ ಯೋಸೇಫನನ್ನು ಸೂಚಿಸುತ್ತದೆ. (ನೋಡಿರಿ: ಲಾಕ್ಷಣಿಕ ಪ್ರಯೋಗ
  • “ಅವನ ತಲೆಯಲ್ಲಿ ಅವರ ರಕ್ತವೇ ಇರಲಿ” ಎನ್ನುವ ಮಾತಿಗೆ ಅವರ ಮರಣಗಳಿಗೆ ಆ ಮನುಷ್ಯನೇ ಜವಾಬ್ದಾರಿ ಮತ್ತು ಅದಕ್ಕೆ ತಕ್ಕ ಶಿಕ್ಷೆಯನ್ನು ಪಡೆದುಕೊಳ್ಳುವನು ಎಂದರ್ಥ.

# ಅನುವಾದ ಸಲಹೆಗಳು:

  • ಸಂದರ್ಭಾನುಗುಣವಾಗಿ “ತಲೆ” ಎನ್ನುವ ಪದವನ್ನು “ಅಧಿಕಾರ” ಅಥವಾ “ನಿರ್ದೇಶಿಸುವ ಮತ್ತು ಮಾರ್ಗದರ್ಶನ ಮಾಡುವ ವ್ಯಕ್ತಿ” ಅಥವಾ “ಜವಾಬ್ದಾರಿ ವಹಿಸುವ ವ್ಯಕ್ತಿ” ಎಂದೂ ಅನುವಾದ ಮಾಡಬಹುದು.
  • “ಇದರ ತಲೆ” ಎನ್ನುವ ಮಾತು ಸಂಪೂರ್ಣ ವ್ಯಕ್ತಿಯನ್ನು ಸೂಚಿಸುತ್ತದೆ, ಆದ್ದರಿಂದ ಈ ಮಾತನ್ನು ಒಬ್ಬ ವ್ಯಕ್ತಿಯ ಹೆಸರನ್ನಿಟ್ಟು ಅನುವಾದ ಮಾಡಬಹುದು. ಉದಾಹರಣೆ, “ಯೋಸೇಫನ ತಲೆ” ಎನ್ನುವ ಮಾತನ್ನು ಸುಲಭವಾಗಿ “ಯೋಸೇಫ” ಎಂದು ಅನುವಾದ ಮಾಡಬಹುದು.
  • “ತನ್ನ ಸ್ವಂತ ತಲೆಯ ಮೇಲೆ ಇರಲಿ” ಎನ್ನುವ ಮಾತನ್ನು “ಆತನ ಮೇಲೆ ಇರಲಿ” ಅಥವಾ “ಅವನು ಮಾಡಿದ್ದಕ್ಕಾಗಿ ಅವನೇ ಶಿಕ್ಷೆ ಹೊಂದಲಿ” ಅಥವಾ “ಅವನು ಅದಕ್ಕೆ ಜವಾಬ್ದಾರಿಯನ್ನು ಹೊಂದಲಿ” ಅಥವಾ “ಅವನು ಅಪರಾಧಿಯೆಂದು ಪರಿಗಣಿಸಲಾಗಿದೆ” ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಗುಣವಾಗಿ ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಆರಂಭ” ಅಥವಾ “ಆಧಾರ” ಅಥವಾ “ಪಾಲಕ” ಅಥವಾ “ನಾಯಕ” ಅಥವಾ “ಮೇಲೆ” ಎನ್ನುವ ಪದಗಳು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಧಾನ್ಯ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H441, H1270, H1538, H3852, H4425, H4761, H4763, H5110, H5324, H6285, H6287, H6797, H6915, H6936, H7139, H7144, H7146, H7217, H7226, H7218, H7541, H7636, H7641, H7872, G346, G755, G2775, G2776, G4719

ತಿಂಗಳು, ತಿಂಗಳುಗಳು, ಮಾಸಿಕ

# ಪದದ ಅರ್ಥವಿವರಣೆ

“ತಿಂಗಳು” ಎನ್ನುವ ಪದವು ನಾಲ್ಕು ವಾರಗಳ ಕಾಲವನ್ನು ಸೂಚಿಸುತ್ತದೆ. ಚಂದ್ರಮಾನ ದಿನಾಂಕ ಪಟ್ಟಿ ಅಥವಾ ಸೂರ್ಯನ ದಿನಾಂಕ ಪಟ್ಟಿ ಎನ್ನುವ ದಿನಾಂಕ ಪಟ್ಟಿಯಲ್ಲಿ ಯಾವುದನ್ನು ಉಪಯೋಗಿಸುತ್ತಿರುವರೋ ಅದರ ಪ್ರಕಾರ ಪ್ರತಿ ತಿಂಗಳಲ್ಲಿ ಇರುವ ದಿನಗಳು ನಿರ್ಣಯಿಸಲ್ಪಡುತ್ತವೆ.

  • ಚಂದ್ರಮಾನ ದಿನಾಂಕ ಪಟ್ಟಿಯಲ್ಲಿ, ಭೂಮಿಯನ್ನು ಸುತ್ತುವದಕ್ಕೆ ಚಂದ್ರನು ತೆಗೆದುಕೊಳ್ಳುವ ಸಮಯದ ಅನುಸಾರವಾಗಿ ಪ್ರತಿ ತಿಂಗಳ ಕಾಲವನ್ನು ನಿರ್ಣಯಿಸುತ್ತಾರೆ, ಅದರಲ್ಲಿ ಸುಮಾರು 29 ದಿನಗಳಿರುತ್ತವೆ. ಈ ಪದ್ದತಿಯಲ್ಲಿ ಒಂದು ವರ್ಷಕ್ಕೆ 12 ಅಥವಾ 13 ತಿಂಗಳುಗಳಿರುತ್ತವೆ. ಒಂದು ವರ್ಷದಲ್ಲಿ 12 ಅಥವಾ 13 ತಿಂಗಳುಗಳಿದ್ದರು, ಅದು ಯಾವ ಕಾಲವೆಂದು ಸಂಬಂಧವಿಲ್ಲದೆ ಮೊದಲನೆಯ ತಿಂಗಳನ್ನು ಅದೇ ಹೆಸರಲ್ಲಿ ಕರೆಯುತ್ತಾರೆ.
  • “ಅಮಾವಾಸ್ಯೆ” , ಅಥವಾ ಚಂದ್ರನ ಪ್ರಾರಂಭದ ಕಾಲದಲ್ಲಿ ಕಾಣುವ ಬೆಳ್ಳಿಯ ಗೆರೆಯ ಅನುಸಾರವಾಗಿ, ಚಾಂದ್ರಮಾನ ದಿನಾಂಕ ಪಟ್ಟಿಯಲ್ಲಿ ಪ್ರತಿ ತಿಂಗಳು ಪ್ರಾರಂಭವಾಗುತ್ತದೆ.
  • ಸತ್ಯವೇದದಲ್ಲಿ ಹೇಳಲ್ಪತ್ತಿರುವ ತಿಂಗಳುಗಳು ಚಂದ್ರಮಾನ ದಿನಾಂಕ ಪಟ್ಟಿಯ ಅನುಸಾರವಾಗಿ ಇರುತ್ತವೆ, ಯಾಕಂದರೆ ಇಸ್ರಾಯೇಲರು ಆ ಪದ್ಧತಿಯನ್ನು ಉಪಯೋಗಿಸುತ್ತಿದ್ದರು. ಪ್ರಸ್ತುತ ಕಾಲದ ಯಹೂದಿಯರು ತಮ್ಮ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲು ಈ ದಿನಾಂಕ ಪಟ್ಟಿಯನ್ನು ಉಪಯೋಗಿಸುತ್ತಿದ್ದಾರೆ.
  • ಅಧುನಿಕ ದಿನದ ಸೂರ್ಯನ ದಿನಾಂಕ ಪಟ್ಟಿ ಸೂರ್ಯನ ಸುತ್ತಲು ಭೂಮಿ ಸುತ್ತುವ ಕಾಲದ ಅನುಸಾರವಾಗಿರುತ್ತದೆ (ಸುಮಾರು 365 ದಿನಗಳು). ಈ ಪದ್ಧತಿಯಲ್ಲಿ, ಒಂದು ವರ್ಷವನ್ನು 12 ತಿಂಗಳಂತೆ ವಿಭಜಿಸುತ್ತಾರೆ, ಪ್ರತಿ ತಿಂಗಳಲ್ಲಿ 28 ರಿಂದ 31 ದಿನಗಳು ಇರುತ್ತವೆ.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2320, H3391, H3393, G3376

ತಿರಸ್ಕರಿಸು, ತಿರಸ್ಕರಿಸುವುದು, ತಿರಸ್ಕರಿಸಲಾಗಿದೆ, ತಿರಸ್ಕರಿಸುತ್ತಿರುವುದು, ತಿರಸ್ಕಾರ

# ಪದದ ಅರ್ಥವಿವರಣೆ:

ಯಾರಾದರೊಬ್ಬರನ್ನು ಅಥವಾ ಯಾವುದಾದರೊಂದನ್ನು “ತಿರಸ್ಕರಿಸುವುದು” ಎಂದರೆ ಆ ವಸ್ತುವನ್ನು ಅಥವಾ ಆ ವ್ಯಕ್ತಿಯನ್ನು ಅಂಗೀಕರಿಸದೇ ನಿರಾಕರಿಸು ಎಂದರ್ಥವಾಗಿರುತ್ತದೆ.

  • “ತಿರಸ್ಕರಿಸು” ಎನ್ನುವ ಪದಕ್ಕೆ ಯಾವುದಾದರೊಂದನ್ನು “ನಂಬಲು ನಿರಾಕರಿಸು” ಎಂದರ್ಥವಾಗಿರುತ್ತದೆ.
  • ದೇವರನ್ನು ತಿರಸ್ಕರಿಸು ಎನ್ನುವುದಕ್ಕೂ ಆತನಿಗೆ ವಿಧೇಯತೆ ತೋರಿಸಲು ನಿರಾಕರಿಸು ಎಂದರ್ಥವಾಗಿರುತ್ತದೆ.
  • ಇಸ್ರಾಯೇಲ್ಯರು ಮೋಶೆಯ ನಾಯಕತ್ವವನ್ನು ತಿರಸ್ಕರಿಸಿದಾಗ, ಇದಕ್ಕೆ ಆತನ ಅಧಿಕಾರಕ್ಕೆ ವಿರುದ್ಧವಾಗಿ ಅವರೆಲ್ಲರು ತಿರುಗಿಬಿದ್ದರು ಎಂದರ್ಥ. ಅವರು ಆತನಿಗೆ ವಿಧೇಯತೆ ತೋರಿಸುವುದಕ್ಕೆ ಇಷ್ಟವಾಗುವುದಿಲ್ಲ.
  • ಇಸ್ರಾಯೇಲ್ಯರು ಸುಳ್ಳು ದೇವರುಗಳನ್ನು ಆರಾಧನೆ ಮಾಡುವಾಗ ಅವರು ದೇವರನ್ನು ತಿರಸ್ಕರಿಸಿದ್ದರೆಂದು ಅವರು ಚೆನ್ನಾಗಿ ತೋರಿಸಿದ್ದಾರೆ.
  • ಈ ಪದಕ್ಕೆ “ಪಕ್ಕಕ್ಕೆ ನೂಕು” ಎನ್ನುವ ಅಕ್ಷರಾರ್ಥವಾಗಿರುತ್ತದೆ. ಇತರ ಭಾಷೆಗಳಲ್ಲಿ ಯಾವುದಾದರೊಂದನ್ನು ಅಥವಾ ಯಾರಾದರೊಬ್ಬರನ್ನು ನಂಬುವುದಕ್ಕೆ ತಿರಸ್ಕರಿಸುವುದು ಅಥವಾ ನಿರಾಕರಿಸುವುದು ಎನ್ನುವ ಅರ್ಥಗಳನ್ನು ಒಂದೇ ಮಾತಿನಲ್ಲಿ ಹೇಳುತ್ತಿರುತ್ತಾರೆ.

# ಅನುವಾದ ಸಲಹೆಗಳು:

  • ಸಂದರ್ಭಾನುಗುಣವಾಗಿ, “ತಿರಸ್ಕರಿಸು” ಎನ್ನುವ ಪದವನ್ನು “ಅಂಗೀಕರಿಸಬೇಡ” ಅಥವಾ “ಸಹಾಯ ಮಾಡುವುದನ್ನು ನಿಲ್ಲಿಸು” ಅಥವಾ “ವಿಧೇಯತೆ ತೋರಿಸಲು ನಿರಾಕರಿಸು” ಅಥವಾ “ವಿಧೇಯತೆ ತೋರಿಸುವುದನ್ನು ನಿಲ್ಲಿಸು” ಎಂದೂ ಅನುವಾದ ಮಾಡಬಹುದು.
  • “ಕಟ್ಟುವವರು ನಿರಾಕರಿಸಿದ ಕಲ್ಲು” ಎನ್ನುವ ಮಾತಿನಲ್ಲಿರುವಂತೆ, “ನಿರಾಕರಿಸಿದ” ಎನ್ನುವ ಮಾತನ್ನು “ಉಪಯೋಗಿಸುವುದಕ್ಕೆ ನಿರಾಕರಿಸಲ್ಪಟ್ಟಿದೆ” ಅಥವಾ “ಅಂಗೀಕರಿಸಿರುವುದಿಲ್ಲ” ಅಥವಾ “ಹೊರಕ್ಕೆ ಬಿಸಾಡು” ಅಥವಾ “ಬೆಲೆರಹಿತವೆಂದು ಪಕ್ಕಕ್ಕೆ ಹಾಕು” ಎಂದೂ ಅನುವಾದ ಮಾಡಬಹುದು.
  • ದೇವರ ಆಜ್ಞೆಗಳನ್ನು ತಿರಸ್ಕಾರ ಮಾಡಿದ ಜನರ ಸಂದರ್ಭದಲ್ಲಿ, ತಿರಸ್ಕರಿಸಲ್ಪಟ್ಟಿರುವ ಎನ್ನುವ ಮಾತನ್ನು ಆತನ ಆಜ್ಞೆಗಳಿಗೆ “ವಿಧೇಯತೆ ತೋರಿಸುವುದಕ್ಕೆ ನಿರಾಕರಿಸುವುದು” ಅಥವಾ ದೇವರ ಆಜ್ಞೆಗಳನ್ನು “ಹಠವಾಗಿ ಅಂಗೀಕಾರ ಮಾಡದಿರುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಆಜ್ಞೆ, ಅವಿಧೇಯತೆ, ವಿಧೇಯತೆ, ಹಠಮಾರಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H947, H959, H2186, H2310, H3988, H5006, H5034, H5186, H5203, H5307, H5541, H5800, G96, G114, G483, G550, G579, G580, G593, G683, G720, G1609, G3868

ತಿರಸ್ಕಾರ, ತಿರಸ್ಕಾರಾರ್ಹ ಅಥವಾ ಹೇಯ

ಸತ್ಯಾಂಶಗಳು:

“ತಿರಸ್ಕಾರ” ಎನ್ನುವ ಪದವು ಒಬ್ಬರ ವಿಷಯದಲ್ಲಿ ಅಥವಾ ಯಾವುದಾದರೊಂದರ ವಿಷಯದಲ್ಲಿ ತೋರಿಸುವ ಅಗೌರವವನ್ನು ಮತ್ತು ಅವಮಾನವನ್ನು ಸೂಚಿಸುತ್ತದೆ. ಯಾವುದಾದರೊಂದನ್ನು ಅತೀ ಹೆಚ್ಚಾಗಿ ಅವಮಾನಕ್ಕೆ ಗುರಿಮಾಡಿದರೆ ಅದನ್ನು “ತಿರಸ್ಕಾರಾರ್ಹ” ಅಥವಾ ಹೇಯ ಎಂದು ಕರೆಯುತ್ತಾರೆ.

  • ದೇವರ ವಿಷಯದಲ್ಲಿ ಮನುಷ್ಯನು ಅಥವಾ ನಡತೆ ತೋರಿಸುವ ಅಗೌರವವನ್ನು ಕೂಡ “ತಿರಸ್ಕಾರಾರ್ಹ” ಎಂದು ಕರೆಯುತ್ತಾರೆ ಮತ್ತು ಇದನ್ನು “ಅತೀ ಹೆಚ್ಚಾದ ಅಗೌರವ” ಅಥವಾ “ಸಂಪೂರ್ಣವಾಗಿ ಅವಮಾನಿಸು” ಅಥವಾ “ಅರ್ಹವಾದ ತಿರಸ್ಕಾರ” ಎಂದೂ ಅನುವಾದ ಮಾಡಬಹುದು.
  • “ತಿರಸ್ಕಾರದಲ್ಲಿರಿಸುವುದು” ಎನ್ನುವದಕ್ಕೆ ಒಬ್ಬರಿಗೆ ಅತೀ ಕಡಿಮೆ ಬೆಲೆಯನ್ನು ಕೊಡುವುದು ಅಥವಾ ಒಬ್ಬರಿಗಿಂತ ಇನ್ನೊಬ್ಬರನ್ನು ಅತೀ ಕೀಳಾದ ವ್ಯಕ್ತಿಯೆಂದು ತೀರ್ಪು ಮಾಡುವುದು ಎಂದರ್ಥ.
  • ಇಲ್ಲಿ ಕೊಡಲ್ಪಟ್ಟಿರುವ ಮಾತುಗಳು ಕೂಡ ಒಂದೇ ಅರ್ಥವನ್ನು ಹೊಂದಿರುತ್ತವೆ: “ತಿರಸ್ಕಾರ ಮಾಡು” ಅಥವಾ “ತಿರಸ್ಕಾರವನ್ನು ತೋರಿಸು” ಅಥವಾ “ಬೇರೊಂದು ವಿಷಯದಲ್ಲಿ ತಿರಸ್ಕಾರವನ್ನು ಹೊಂದಿರು” ಅಥವಾ “ತಿರಸ್ಕಾರದಿಂದ ನಡೆದುಕೋ”. ಈ ಎಲ್ಲಾ ಮಾತುಗಳ ಅರ್ಥವೇನೆಂದರೆ ಯಾರಾದರೊಬ್ಬರ ಅಥವಾ ಯಾವುದಾದರೊಂದರ ವಿಷಯದಲ್ಲಿ ಹೇಳುವುದರ ಮೂಲಕ ಮತ್ತು ಕ್ರಿಯೆಗಳನ್ನು ತೋರಿಸುವುದರ ಮೂಲಕ “ಬಲವಾಗಿ ಅಗೌರವಿಸುವುದು” ಅಥವಾ “ಬಲವಾಗಿ ಅವಮಾನ ಮಾಡುವುದು”..
  • ಅರಸನಾದ ದಾವೀದನು ವ್ಯಭಿಚಾರ ಮಾಡಿದಾಗ ಮತ್ತು ನರಹತ್ಯೆ ಮಾಡಿದಾಗ, ದೇವರ ವಿಷಯದಲ್ಲಿ ದಾವೀದನು “ತಿರಸ್ಕಾರವನ್ನು ತೋರಿಸಿದನು” ಎಂದು ದೇವರು ಹೇಳಿದ್ದಾರೆ. ಈ ಕೆಟ್ಟ ಕೆಲಸವನ್ನು ಮಾಡುವುದರ ಮೂಲಕ ದಾವೀದನು ದೇವರನ್ನು ಅತೀ ಹೆಚ್ಚಾಗಿ ಅಗೌರವಿಸಿದನು ಮತ್ತು ಅತೀ ಹೆಚ್ಚಾಗಿ ಅವಮಾನಕ್ಕೆ ಗುರಿ ಮಾಡಿದನು ಎಂದರ್ಥ.

(ಈ ಪದಗಳನ್ನು ಸಹ ನೋಡಿರಿ : ಅವಮಾನ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H936, H937, H959, H963, H1860, H7043, H7589, H5006, G1848

ತಿರುಗು, ತಿರುಗುವುದು, ಆಚೆ ತಿರುಗಿಕೋ, ಆಚೆ ತಿರುಗಿಸುವುದು, ಹಿಂದಕ್ಕೆ ತಿರುಗು, ಹಿಂದಕ್ಕೆ ತಿರುಗಿಸುವುದು, ತಿರುಗಿದೆ, ಆಚೆ ತಿರುಗಿದ್ದೇನೆ, ಹಿಂದಕ್ಕೆ ತಿರುಗಿದ್ದೇನೆ, ತಿರುಗಿಕೊಳ್ಳುವುದು, ಆಚೆ ತಿರುಗಿಕೊಳ್ಳುವುದು, ಹಿಂದಕ್ಕೆ ತಿರುಗಿಕೊಳ್ಳುವುದು, ಹಿಂದಿರುಗಿ ಬರುವುದು, ಹಿಂದಿರುಗಿ ಬಂದಿದೆ, ಹಿಂದಿರುಗಿ ಬರುತ್ತಿರುವುದು, ಹಿಂದಕ್ಕೆ ಹಿಂದಿರುಗುವುದು

# ಪದದ ಅರ್ಥವಿವರಣೆ:

“ತಿರುಗು” ಎನ್ನುವ ಪದಕ್ಕೆ ಯಾವುದಾದರೊಂದು ತನ್ನ ದಿಕ್ಕನ್ನು ಮಾರ್ಪಡಿಸಿಕೊಳ್ಳುವುದಕ್ಕೆ ಕಾರಣವಾಗು ಅಥವಾ ಭೌತಿಕವಾಗಿ ದಿಶೆಯನ್ನು ಮಾರ್ಪಡಿಸಿಕೊಳ್ಳುವುದು ಎಂದರ್ಥವಾಗಿರುತ್ತದೆ.

  • “ತಿರುಗು” ಎನ್ನುವ ಪದಕ್ಕೆ ಹಿಂದೆ ನೋಡುವುದಕ್ಕೆ “ಸುತ್ತಲು ತಿರುಗು” ಅಥವಾ ಬೇರೊಂದು ದಿಕ್ಕನ್ನು ನೋಡುವುದಕ್ಕೆ ಮುಖ ಮಾಡು ಎಂದರ್ಥವಾಗಿರುತ್ತದೆ.
  • “ಹಿಂದಕ್ಕೆ ತಿರುಗು”ಅಥವಾ “ಆಚೆ ತಿರುಗು” ಎನ್ನುವ ಮಾತಿಗೆ “ಹಿಂದಕ್ಕೆ ಹೋಗು” ಅಥವಾ “ಆಚೆ ಹೋಗು” ಅಥವಾ “ಆಚೆ ಹೋಗುವುದಕ್ಕೆ ಕಾರಣವಾಗು” ಎಂದರ್ಥವಾಗಿರುತ್ತದೆ.
  • “ಅದರಿಂದ ಆಚೆ ತಿರುಗಿಕೋ” ಎನ್ನುವ ಮಾತಿಗೆ ಯಾರಾದರೊಬ್ಬರನ್ನು ತಿರಸ್ಕರಿಸುವುದು ಅಥವಾ ಯಾವುದಾದರೊಂದು ಮಾಡುವದನ್ನು “ನಿಲ್ಲಿಸು” ಎಂದರ್ಥ.
  • ಯಾರಾದರೊಬ್ಬರ “ಮುಂದಕ್ಕೆ ತಿರುಗಿಕೋ” ಎನ್ನುವ ಮಾತಿಗೆ ಆ ವ್ಯಕ್ತಿಯನ್ನು ನೇರವಾಗಿ ನೋಡುವುದು ಎಂದರ್ಥ.
  • “ತಿರುಗು ಮತ್ತು ಬಿಡು” ಅಥವಾ “ಬಿಡುವುದಕ್ಕೆ ತನ್ನ ಹಿಂದಕ್ಕೆ ತಿರುಗು” ಎನ್ನುವ ಮಾತಿಗೆ “ಆಚೆ ಹೋಗು’ ಎಂದರ್ಥವಾಗಿರುತ್ತದೆ.
  • “ಆಕಡೆ ಹಿಂತಿರುಗಿಕೋ” ಎನ್ನುವ ಮಾತಿಗೆ “ಮತ್ತೊಮ್ಮೆ ಏನಾದರೊಂದು ಮಾಡುವುದನ್ನು ಆರಂಭಿಸು” ಎಂದರ್ಥ.
  • “ಅದರಿಂದ ತಿರುಗಿಕೋ” ಎಂದರೆ “ಏನಾದರೊಂದು ಮಾಡುವುದನ್ನು ನಿಲ್ಲಿಸು” ಎಂದರ್ಥ.

# ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ “ತಿರುಗು” ಎನ್ನುವ ಪದವನ್ನು ‘ದಿಕ್ಕನ್ನು ಮಾರ್ಪಡಿಸು” ಅಥವಾ “ಹೋಗು” ಅಥವಾ “ಚಲಿಸು” ಎಂದೂ ಅನುವಾದ ಮಾಡಬಹುದು.
  • ಕೆಲವೊಂದು ಸಂದರ್ಭಗಳಲ್ಲಿ “ತಿರುಗು” ಎನ್ನುವ ಪದವನ್ನು ಯಾವುದಾದರೊಂದು ಮಾಡುವುದಕ್ಕೆ (ಒಬ್ಬರಿಗೆ) “ಕಾರಣವಾಗು” ಎಂದೂ ಅನುವಾದ ಮಾಡಬಹುದು. “ಯಾವುದಾದರೊಂದರಿಂದ ಆಚೆಗೆ (ಒಬ್ಬರನ್ನು) ತಿರುಗಿಸು” ಎನ್ನುವ ಮಾತನ್ನು “ಆಚೆ ಹೋಗುವುದಕ್ಕೆ (ಯಾರಾದರೊಬ್ಬರಿಗೆ) ಕಾರಣವಾಗು” ಅಥವಾ “ನಿಲ್ಲಿಸಲು (ಯಾರಾದರೊಬ್ಬರಿಗೆ) ಕಾರಣವಾಗು” ಎಂದೂ ಅನುವಾದ ಮಾಡಬಹುದು.
  • “ದೇವರಿಂದ ತಿರುಗಿಕೋ” ಎನ್ನುವ ಮಾತನ್ನು “ದೇವರನ್ನು ಆರಾಧಿಸುವುದನ್ನು ನಿಲ್ಲಿಸು” ಎಂದೂ ಅನುವಾದ ಮಾಡಬಹುದು.
  • “ದೇವರ ಕಡೆಗೆ ತಿರುಗಿಕೋ” ಎನ್ನುವ ಮಾತನ್ನು “ಮತ್ತೊಮ್ಮೆ ದೇವರನ್ನು ಆರಾಧಿಸಲು ಪ್ರಾರಂಭಿಸು” ಎಂದೂ ಅನುವಾದ ಮಾಡಬಹುದು.
  • ಶತ್ರುಗಳು “ಹಿಂತಿರುಗಿದಾಗ”, ಇದಕ್ಕೆ ಅವರು “ಹಿಮ್ಮೆಟ್ಟುತ್ತಾರೆ” ಎಂದರ್ಥವಾಗಿರುತ್ತದೆ. “ಶತ್ರುವನ್ನು ಹಿಂದಿರುಗಿಸು” ಎನ್ನುವ ಮಾತಿಗೆ “ಹಿಮ್ಮೆಟ್ಟುವುದಕ್ಕೆ ಶತ್ರುವಿಗೆ ಕಾರಣವಾಗು” ಎಂದರ್ಥ.
  • ಅಲಂಕಾರಿಕವಾಗಿ ಉಪಯೋಗಿಸಿದಾಗ, ಇಸ್ರಾಯೇಲ್ಯರು ಸುಳ್ಳು ದೇವರುಗಳ ಕಡೆಗೆ “ತಿರುಗಿಕೊಂಡಾಗ”, ಅವರು ಅವುಗಳನ್ನು “ಆರಾಧಿಸುವುದನ್ನು ಆರಂಭಿಸಿದರು”. ಅವರು ವಿಗ್ರಹಗಳಿಂದ “ಹಿಂದಿರುಗಿದಾಗ”, ಅವರು ಅವುಗಳನ್ನು “ಆರಾಧಿಸುವುದನ್ನು ನಿಲ್ಲಿಸಿದರು”.
  • ದೇವರು ತಿರಸ್ಕಾರ ಮಾಡುವ ಜನರಿಂದ “ಹಿಂದಿರುಗಿದಾಗ”, ಆತನು ಅವರನ್ನು “ಸಂರಕ್ಷಿಸುವುದನ್ನು ನಿಲ್ಲಿಸಿದನು” ಅಥವಾ ಅವರಿಗೆ “ಸಹಾಯ ಮಾಡುವುದನ್ನು ನಿಲ್ಲಿಸಿದನು” ಎಂದರ್ಥ.
  • “ತಂದೆಗಳ ಹೃದಯಗಳನ್ನು ತಮ್ಮ ಮಕ್ಕಳ ಕಡೆಗೆ ತಿರುಗಿಸು” ಎನ್ನುವ ಮಾತನ್ನು “ಮತ್ತೊಮ್ಮೆ ತಂದೆಗಳು ತಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಮಾಡು” ಎಂದೂ ಅನುವಾದ ಮಾಡಬಹುದು.
  • “ನನ್ನ ಘನತೆಯನ್ನು ಅವಮಾನವಾಗುವಂತೆ ಮಾಡು” ಎನ್ನುವ ಮಾತನ್ನು “ನನ್ನ ಘನತೆಯನ್ನು ನಾಚಿಕೆಪಡುವಂತೆ ಮಾಡು” ಅಥವಾ “ನಾನು ನಾಚಿಕೆಪಡುವಷ್ಟು ನನ್ನನ್ನು ಅವಮಾನಿಸು” ಅಥವಾ “(ಏನಾದರೊಂದು ಕೆಟ್ಟ ಕಾರ್ಯವನ್ನು ಮಾಡುವುದರ ಮೂಲಕ) ನನ್ನನ್ನು ನಾಚಿಕೆಪಡಿಸು, ಇದರಿಂದ ಜನರು ನನ್ನನ್ನು ಎಂದಿಗೂ ಘನಪಡಿಸುವುದಿಲ್ಲ” ಎಂದೂ ಅನುವಾದ ಮಾಡಬಹುದು .
  • “ನಾನು ನಿಮ್ಮ ಪಟ್ಟಣಗಳನ್ನು ನಾಶವಾಗುವಂತೆ ಮಾಡುವೆನು” ಎನ್ನುವ ಮಾತನ್ನು “ನಿಮ್ಮ ಪಟ್ಟಣಗಳು ನಾಶವಾಗುವುದಕ್ಕೆ ನಾನು ಕಾರಣವಾಗುವೆನು” ಅಥವಾ “ನಿಮ್ಮ ಪಟ್ಟಣಗಳನ್ನು ನಾಶಪಡಿಸಲು ನಾನು ಶತ್ರುಗಳಿಗೆ ಸಹಾಯ ಮಾಡುವೆನು” ಎಂದೂ ಅನುವಾದ ಮಾಡಬಹುದು.
  • “ತಿರುಗಿಕೋ” ಎನ್ನುವ ಮಾತನ್ನು “ಮಾರ್ಪಡು” ಎಂದೂ ಅನುವಾದ ಮಾಡಬಹುದು. ಮೋಶೆ ಕೋಲನ್ನು ಹಾವನ್ನಾಗಿ “ಮಾರ್ಪಡಿಸಿದಾಗ”, ಅದು ಹಾವಾಗಿ “ಮಾರ್ಪಟ್ಟಿತು.” ಇದನ್ನು “ಅದರಂತೆ ಮಾರ್ಪಡಿಸಿದನು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಸುಳ್ಳು ದೇವರು, ಕುಷ್ಠ ರೋಗ, ಆರಾಧನೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H541, H1750, H2015, H2017, H2186, H2559, H3399, H3943, H4142, H4672, H4740, H4878, H5186, H5253, H5414, H5437, H5472, H5493, H5528, H5627, H5753, H5844, H6437, H6801, H7227, H7725, H7734, H7750, H7760, H7847, H8159, H8447, G344, G387, G402, G576, G654, G665, G868, G1294, G1578, G1612, G1624, G1994, G2827, G3179, G3313, G3329, G3344, G3346, G4762, G5077, G5157, G5290, G6060

ತಿವಿ, ತಿವಿಯುವುದು, ತಿವಿಯಲ್ಪಟ್ಟಿರುತ್ತದೆ, ತಿವಿಯುತ್ತಾ ಇರುವುದು

# ಪದದ ಅರ್ಥವಿವರಣೆ:

“ತಿವಿ” ಎನ್ನುವ ಪದಕ್ಕೆ ತೀಕ್ಷ್ಣವಾದ ಸೂಚಿತವಾದ ವಸ್ತುವಿನೊಂದಿಗೆ ಯಾವುದಾದರೊಂದನ್ನು ಚುಚ್ಚುವುದು ಎಂದರ್ಥ. ಯಾರಾದರೊಬ್ಬರನ್ನು ಮಾನಸಿಕವಾಗಿ ಆಳವಾದ ನೋವನ್ನುಂಟು ಮಾಡುವುದನ್ನು ಸೂಚಿಸುವುದಕ್ಕೆ ಕೂಡ ಅಲಂಕಾರಿಕವಾಗಿ ಈ ಪದವನ್ನು ಉಪಯೋಗಿಸಲಾಗುತ್ತದೆ.

  • ಯೇಸುವನ್ನು ಶಿಲುಬೆಯ ಮೇಲೆ ತೂಗುಹಾಕಲ್ಪಟ್ಟ ಸಮಯದಲ್ಲಿ ಸೈನಿಕನು ಯೇಸುವಿನ ಪಕ್ಕದಲ್ಲಿ ತಿವಿಯುತ್ತಾನೆ.
  • ಸತ್ಯವೇದ ಕಾಲಗಳಲ್ಲಿ ಬಿಡುಗಡೆ ಹೊಂದಿದ ಒಬ್ಬ ದಾಸನು ತನ್ನ ಯಜಮಾನನಿಗೆ ನಿರಂತರವಾಗಿ ಕೆಲಸ ಮಾಡುವುದರಲ್ಲಿ ಮುಂದೆವರಿಯುವುದಕ್ಕೆ ತಾನು ಆಯ್ಕೆಯಾಗಿದ್ದಾನೆಂದು ಗುರುತಾಗಿರಲು ತನ್ನ ಕಿವಿಯನ್ನು ತಿವಿದುಕೊಳ್ಳುತ್ತಿದ್ದರು.
  • ಖಡ್ಗವು ಮರಿಯಳ ಹೃದಯವನ್ನು ತಿವಿಯುತ್ತದೆಯೆಂದು ಸಿಮೆಯೋನನು ಆಕೆಗೆ ಹೇಳಿದಾಗ ಅವನು ಆಕೆಯೊಂದಿಗೆ ಅಲಂಕಾರಿಕವಾಗಿ ಮಾತನಾಡಿದ್ದನು, ಈ ಮಾತಿಗೆ ಆಕೆ ತುಂಬಾ ಆಳವಾದ ಪ್ರಲಾಪವನ್ನು ಅನುಭವಿಸುತ್ತಾಳೆಂದು ಇದರ ಅರ್ಥವಾಗಿರುತ್ತದೆ, ಯಾಕಂದರೆ ತನ್ನ ಶಿಶುವಾಗಿರುವ ಯೇಸುವಿಗೆ ಜನನ ಕೊಡುವುದರ ಕಾರಣದಿಂದ ಹೀಗೆ ನಡೆಯುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಶಿಲುಬೆ, ಯೇಸು, ದಾಸನು, ಸಿಮೆಯೋನ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H935, H1856, H2342, H2490, H2491, H2944, H3738, H4272, H5181, H5344, H5365, H6398, G1330, G1338, G1574, G2660, G3572, G4044, G4138

ತಿಳಿ, ಗೊತ್ತು, ತಿಳಿದುಕೊಂಡಿದ್ದೇನೆ, ತಿಳಿದುಕೊಳ್ಳುವುದು, ಅರಿವು, ತಿಳಿದಿರುವುದು, ತಿಳಿಯುವಂತೆ ಮಾಡು, ಗೊತ್ತಿರುವಂತೆ ಮಾಡುವುದು, ಗೊತ್ತಿರುವಂತೆ ಮಾಡಲ್ಪಟ್ಟಿದೆ, ಗೊತ್ತಿಲ್ಲದವುಗಳು, ಮುಂತಿಳಿದಿದೆ, ಮುಂಚೆಯೇ ಅರಿಯುವುದು

# ಪದದ ಅರ್ಥವಿವರಣೆ:

“ತಿಳಿ” ಎನ್ನುವ ಪದಕ್ಕೆ ಏನಾದರೊಂದು ವಿಷಯವನ್ನು ಅರ್ಥ ಮಾಡಿಕೊಳ್ಳುವುದು ಅಥವಾ ಸತ್ಯದ ಕುರಿತಾದ ತಿಳಿದುಕೊಂಡಿರುವುದು ಎಂದರ್ಥ. “ತಿಳಿಯುವಂತೆ ಮಾಡು” ಎನ್ನುವ ಮಾತು ಮಾಹಿತಿ ಹೇಳುವುದೆನ್ನುವ ಅರ್ಥ ಬರುವ ಮಾತಾಗಿರುತ್ತದೆ.

  • “ಅರಿವು” ಎನ್ನುವ ಪದವು ಜನರಿಗೆ ಗೊತ್ತಿರುವ ಮಾಹಿತಿಯನ್ನು ಸೂಚಿಸುತ್ತದೆ. ಇದು ಭೌತಿಕವಾದ ಮತ್ತು ಆತ್ಮೀಯಕವಾದ ಪ್ರಪಂಚದಲ್ಲಿನ ಸಂಗತಿಗಳನ್ನು ತಿಳಿದುಕೊಳ್ಳುವುದನ್ನು ಸೂಚಿಸುತ್ತದೆ.
  • ದೇವರ “ಕುರಿತಾಗಿ ತಿಳಿದುಕೋ” ಎನ್ನುವುದಕ್ಕೆ ದೇವರು ನಮಗೆ ತೋರಿಸಿಕೊಂಡಿರುವವುಗಳಿಂದ ಆತನ ಕುರಿತಾಗಿ ಸತ್ಯಾಂಶಗಳನ್ನು ತಿಳಿದುಕೊಳ್ಳುವುದು ಎಂದರ್ಥ.
  • ದೇವರನ್ನು “ತಿಳಿ’ ಎನ್ನುವುದಕ್ಕೆ ಆತನೊಂದಿಗೆ ಸತ್ ಸಂಬಂಧವನ್ನು ಹೊಂದಿರು ಎಂದರ್ಥ. ಇದು ಜನರ ಕುರಿತಾಗಿ ತಿಳಿದುಕೊಳ್ಳುವುದರ ವಿಷಯವಾಗಿ ಅನ್ವಯಿಸಲ್ಪಡುತ್ತದೆ.
  • ದೇವರ ಚಿತ್ತವನ್ನು ತಿಳಿದುಕೊಳ್ಳುವುದು ಎಂದರೆ ಆತನು ಆಜ್ಞಾಪಿಸದವುಗಳ ವಿಷಯದಲ್ಲಿ ಎಚ್ಚರವಾಗಿರುವುದು ಎಂದರ್ಥ, ಅಥವಾ ಒಬ್ಬ ವ್ಯಕ್ತಿ ಏನು ಮಾಡಬೇಕೆಂದು ಆತನು ಬಯಸಿರುತ್ತಾನೆನ್ನುವುದನ್ನು ಅರ್ಥಮಾಡಿಕೊಳ್ಳುವುದು ಎಂದರ್ಥ.
  • “ಧರ್ಮಶಾಸ್ತ್ರವನ್ನು ತಿಳಿದುಕೊಳ್ಳುವುದು” ಎಂದರೆ ದೇವರು ಆಜ್ಞಾಪಿಸಿದವುಗಳಲ್ಲಿ ಎಚ್ಚರವಾಗಿರುವುದು ಅಥವಾ ಆತನು ಮೋಶೆಗೆ ಕೊಟ್ಟ ಧರ್ಮಶಾಸ್ತ್ರದಲ್ಲಿ ಏನೇನು ಆಜ್ಞಾಪಿಸಿದ್ದಾನೋ ಎಂದು ಅರ್ಥಮಾಡಿಕೊಳ್ಳುವುದು ಎಂದರ್ಥ.
  • ಕೆಲವೊಂದುಬಾರಿ “ಅರಿವು” ಎನ್ನುವ ಪದಕ್ಕೆ ಪರ್ಯಾಯ ಪದವನ್ನಾಗಿ “ಜ್ಞಾನ” ಎಂದು ಉಪಯೋಗಿಸಲಾಗಿರುತ್ತದೆ, ಇದರಲ್ಲಿ ದೇವರಿಗೆ ಮೆಚ್ಚಿಗೆಯಾದ ವಿಧಾನದಲ್ಲಿ ಜೀವಿಸುವುದು ಎಂದೂ ಒಳಗೊಂಡಿರುತ್ತದೆ.
  • “ದೇವರ ಜ್ಞಾನ” ಎನ್ನುವ ಮಾತು ಕೆಲವೊಂದುಬಾರಿ ಅದಕ್ಕೆ ಪರ್ಯಾಯ ಮಾತಾಗಿ “ಯೆಹೋವನ ಭಯ” ಎಂದು ಹೇಳಲ್ಪಟ್ಟಿದೆ.

# ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ, “ತಿಳಿ’ ಎನ್ನುವ ಪದವನ್ನು ಅನುವಾದ ಮಾಡುವ ವಿಧಾನದಲ್ಲಿ “ಅರ್ಥಮಾಡಿಕೋ” ಅಥವಾ “ಅದರೊಂದಿಗೆ ಪರಿಚಿತವಾಗು” ಅಥವಾ “ಎಚ್ಚರವಾಗಿರು” ಅಥವಾ “ಅದರೊಂದಿಗೆ ಗುರುತನ್ನು ಹೊಂದು” ಅಥವಾ “ಅದರೊಂದಿಗೆ ಸಂಬಂಧದಲ್ಲಿರು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • ಕೆಲವೊಂದು ಭಾಷೆಗಳಲ್ಲಿ “ತಿಳಿ” ಎನ್ನುವ ಪದಕ್ಕೆ ಎರಡೆರಡು ಪದಗಳಿರುತ್ತವೆ, ಅದರಲ್ಲೊಂದು ಪದವು ಸತ್ಯಾಂಶಗಳನ್ನು ತಿಳಿದುಕೊಳ್ಳುವುದಕ್ಕೆ ಮತ್ತು ಇನ್ನೊಂದು ಮನುಷ್ಯರ ಕುರಿತಾಗಿ ತಿಳಿದುಕೊಳ್ಳುವುದಕ್ಕೆ ಮತ್ತು ಅವರೊಂದಿಗೆ ಸಹವಾಸ ಮಾಡುವುದಕ್ಕೆ ಇರುತ್ತವೆ.
  • “ತಿಳಿದುಕೊಳ್ಳುವಂತೆ ಮಾಡು” ಎನ್ನುವ ಮಾತು “ಜನರು ತಿಳಿದುಕೊಳ್ಳುವಂತೆ ಮಾಡುವದು” ಅಥವಾ “ಬಹಿರಂಗಪಡಿಸು” ಅಥವಾ “ಅದರ ಕುರಿತಾಗಿ ಹೇಳು” ಅಥವಾ “ವಿವರಿಸು” ಎಂದೂ ಅನುವಾದ ಮಾಡಬಹುದು.
  • ಏನಾದರೊಂದರ “ಕುರಿತಾಗಿ ತಿಳಿದುಕೊಳ್ಳುವುದು” ಎನ್ನುವ ಮಾತನ್ನು “ಎಚ್ಚರವಾಗಿರು” ಅಥವಾ “ಅದರೊಂದಿಗೆ ಪರಿಚತವಾಗು” ಎಂದೂ ಅನುವಾದ ಮಾಡಬಹುದು.
  • “ಹೇಗೆಂದು ತಿಳಿ” ಎನ್ನುವ ಮಾತಿಗೆ ಏನಾದರೊಂದು ಕೆಲಸವನ್ನು ಮಾಡಿ ಮುಗಿಸುವುದಕ್ಕೆ ಅದರ ವಿಧಾನವನ್ನು ಅಥವಾ ಪದ್ಧತಿಯನ್ನು ಅರ್ಥಮಾಡಿಕೊಳ್ಳುವುದು ಎಂದರ್ಥ. ಇದನ್ನು “ಸಾಮರ್ಥ್ಯವನ್ನು ಹೊಂದು” ಅಥವಾ “ಅದಕ್ಕೆ ನಿಪುಣತೆಯನ್ನು ಪಡೆ” ಎಂಬುದಾಗಿಯೂ ಅನುವಾದ ಮಾಡಬಹುದು.
  • “ಅರಿವು” ಎನ್ನುವ ಪದವನ್ನು “ತಿಳಿದುಕೊಂಡಿರುವುದು” ಅಥವಾ “ಜ್ಞಾನ” ಅಥವಾ “ಅರ್ಥಮಾಡಿಕೊಳ್ಳುವುದು” ಎಂದೂ ಸಂದರ್ಭಾನುಗುಣವಾಗಿ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಧರ್ಮಶಾಸ್ತ್ರ, ಬಹಿರಂಗಪಡಿಸು, ಅರ್ಥಮಾಡಿಕೊ, ಜ್ಞಾನ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1843, H1844, H1847, H1875, H3045, H3046, H4093, H4486, H5046, H5234, H5475, H5869, G50, G56, G1097, G1107, G1108, G1231, G1492, G1921, G1922, G1987, G2467, G2589, G3877, G4267, G4894

ತುತ್ತೂರಿ, ತುತ್ತೂರಿಗಳು, ತುತೂರಿಯನ್ನು ಊದುವವರು

# ಪದದ ಅರ್ಥವಿವರಣೆ:

“ತುತ್ತೂರಿ” ಎನ್ನುವ ಪದವು ಪ್ರಕಟನೆಯನ್ನು ಕೇಳುವುದಕ್ಕೆ ಅಥವಾ ಭೇಟಿಯಾಗುವುದಕ್ಕೆ ಜನರೆಲ್ಲರು ಒಂದು ಸ್ಥಳಕ್ಕೆ ಸೇರಿ ಬರಬೇಕೆಂದು ಅವರನ್ನು ಕರೆಯುವುದಕ್ಕೋಸ್ಕರ ಅಥವಾ ಸಂಗೀತವನ್ನು ಉಂಟುಮಾಡುವುದಕ್ಕೆ ಉಪಯೋಗಿಸುವ ಉಪಕರಣವನ್ನು ಸೂಚಿಸುತ್ತದೆ.

  • ತುತ್ತೂರಿಯನ್ನು ಸಹಜವಾಗಿ ಲೋಹ, ಸಮುದ್ರ ಚಿಪ್ಪು ಅಥವಾ ಪ್ರಾಣಿಯ ಕೊಂಬೆಗಳಿಂದ ತಯಾರಿಸುತ್ತಿದ್ದರು.
  • ತುತ್ತೂರಿಗಳನ್ನು ಯುದ್ಧಕ್ಕೆ ಜನರೆಲ್ಲರನ್ನು ಕರೆಯುವುದಕ್ಕೆ ಊಡುತ್ತಿದ್ದರು, ಮತ್ತು ಇಸ್ರಾಯೇಲ್ಯರು ಬಹಿರಂಗವಾಗಿ ಎಲ್ಲರು ಸೇರಿ ಬರುವುದಕ್ಕೆ ಊದುತ್ತಿದ್ದರು.
  • ಪ್ರಕಟನೆ ಗ್ರಂಥವು ಅಂತ್ಯಕಾಲದಲ್ಲಿ ಭೂಮಿಯ ಮೇಲೆ ದೇವರ ಕ್ರೋಧವನ್ನು ಸುರಿಸುತ್ತಿದ್ದಾರೆಂದು ಸೂಚನೆ ಕೊಡುವುದಕ್ಕೆ ದೂತರು ತಮ್ಮ ತುತ್ತೂರಿಗಳನ್ನು ಊದುತ್ತಿದ್ದರು.

(ಈ ಪದಗಳನ್ನು ಸಹ ನೋಡಿರಿ : ದೂತ, ಸಭೆ, ಭೂಮಿ, ಕೊಂಬೆ, ಇಸ್ರಾಯೇಲ್, ಕ್ರೋಧ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2689, H2690, H3104, H7782, H8619, H8643, G4536, G4537, G4538

ತುರಾಯಿ

# ಪದದ ಅರ್ಥವಿವರಣೆ

ಶಂಕುವಿನ ಆಕರದಲ್ಲಿರುವ ಕಾಯಿಗಳಲ್ಲಿ ಬೀಜಗಳಿದ್ದು ವರ್ಷ ಪೂರ್ತಿ ಹಸಿರಾಗಿರುವ ಮರವನ್ನು ತುರಾಯಿ ಮರ ಎನ್ನುತ್ತಾರೆ.

  • ತುರಾಯಿ ಮರಗಳನ್ನು “ನಿತ್ಯಹರಿದ್ವರ್ಣ” ಮರಗಳೆಂದು ಸೂಚಿಸುತ್ತಾರೆ.
  • ಪ್ರಾಚೀನ ಕಾಲದಲ್ಲಿ, ಸಂಗೀತ ವಾದ್ಯಗಳನ್ನು ಮಾಡಲು ಮತ್ತು ನಾವೇ, ಮನೆ ಹಾಗೂ ದೇವಾಲಯ ಎಂಬಂತಃ ಕಟ್ಟಡಗಳನ್ನು ನಿರ್ಮಿಸಲು ತುರಾಯಿ ಮರವನ್ನು ಉಪಯೋಗಿಸುತ್ತಿದ್ದರು.
  • ಸತ್ಯವೇದದಲ್ಲಿ ಹೇಳಲ್ಪಟ್ಟ ಅನೇಕ ತುರಾಯಿ ಮರಗಳಲ್ಲಿ ಕೆಲವು ಯಾವುವೆಂದರೆ ಸವೆಯು ಮರ, ದೇವದಾರು ಮರ, ಶಂಕುಮರ ಮತ್ತು ಜಾಲಿ ಮರ.

(ಈ ಪದಗಳನ್ನು ಸಹ ನೋಡಿರಿ : ಹೆಸರುಗಳನ್ನು ಹೇಗೆ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ದೇವದಾರು ಮರ, ಶಂಕುಮರ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H766, H1265, H1266

ತುಳಿದುಬಿಡು, ತುಳಿದುಬಿಡುವುದು, ತುಳಿದುಬಿಟ್ಟಿದೆ, ತುಳಿದುಬಿಡುತ್ತಾ ಇರುವುದು

# ಪದದ ಅರ್ಥವಿವರಣೆ:

“ತುಳಿದುಬಿಡು” ಎನ್ನುವ ಪದಕ್ಕೆ ಯಾವುದಾದರೊಂದರ ಮೇಲೆ ಕಾಲಿಟ್ಟು ತುಳಿಯುವುದು ಮತ್ತು ಕಾಲಿನಿಂದ ಪುಡಿಪುಡಿ ಮಾಡುವುದು ಎಂದರ್ಥ. ಈ ಪದಕ್ಕೆ “ನಾಶಗೊಳಿಸು” ಅಥವಾ “ಸೋಲಿಸು” ಅಥವಾ “ಅವಮಾನಪಡಿಸು” ಎನ್ನುವ ಅರ್ಥಗಳನ್ನು ಕೊಡುವುದಕ್ಕೆ ಸತ್ಯವೇದದಲ್ಲಿ ಅಲಂಕಾರಿಕವಾಗಿ ಉಪಯೋಗಿಸಲ್ಪಟ್ಟಿರುತ್ತದೆ.

  • “ತುಳಿದುಬಿಡುವುದು” ಎನ್ನುವ ಪದಕ್ಕೆ ಹೊಲದಲ್ಲಿ ಓಡುತ್ತಿರುವ ಜನರ ಪಾದಗಳ ಮೂಲಕ ಹುಲ್ಲನ್ನು ತುಳಿದು ಹಾಕುವುದು ಎಂದು ಉದಾಹರಣೆಯಾಗಿ ಹೇಳಬಹುದು.
  • ಪುರಾತನ ಕಾಲಗಳಲ್ಲಿ ದ್ರಾಕ್ಷಾರಸವನ್ನು ಕೆಲವೊಂದುಬಾರಿ ದ್ರಾಕ್ಷಿಗಳಿಂದ ರಸವನ್ನು ತೆಗೆಯುವುದಕ್ಕೆ ಅವುಗಳನ್ನು ತುಳಿಯುವುದರ ಮೂಲಕ ತಯಾರು ಮಾಡುತ್ತಿದ್ದರು.
  • “ತುಳಿದುಬಿಡು” ಎನ್ನುವ ಪದಕ್ಕೆ ಕೆಲವೊಂದುಬಾರಿ “ಕೀಳಾಗಿ ನೋಡುವುದರ ಮೂಲಕ ಶಿಕ್ಷಿಸು” ಎನ್ನುವ ಅಲಂಕಾರಿಕವಾದ ಅರ್ಥವನ್ನು ಹೊಂದಿರುತ್ತದೆ.
  • “ತುಳಿದುಬಿಡು” ಎನ್ನುವ ಪದವನ್ನು ಇಸ್ರಾಯೇಲ್ಯರ ಗರ್ವವನ್ನು ಮತ್ತು ತಿರಸ್ಕಾರಗಳ ಕಾರಣದಿಂದ ಯೆಹೋವನು ಹೇಗೆ ತನ್ನ ಜನರನ್ನು ಶಿಕ್ಷಿಸುತ್ತಾನೆಂದು ವ್ಯಕ್ತಪಡಿಸುವುದಕ್ಕೆ ಅಲಂಕಾರಿಕವಾಗಿ ಉಪಯೋಗಿಸಲ್ಪಟ್ಟಿರುತ್ತದೆ.
  • “ತುಳಿದುಬಿಡು” ಎನ್ನುವ ಪದವನ್ನು “ಪಾದಗಳಿಂದ ಜಜ್ಜುವುದು” ಅಥವಾ “ಪಾದಗಳಿಂದ ಪುಡಿಪುಡಿ ಮಾಡು” ಅಥವಾ “ನಡೆ ಮತ್ತು ಜಜ್ಜು” ಅಥವಾ “ನೆಲದ ಮೇಲೆ ಜಜ್ಜು” ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಸಾರವಾಗಿ ಈ ಪದವನ್ನು ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ದ್ರಾಕ್ಷಿ, ಕೀಳಾಗಿ ನೋಡುವುದು, ಶಿಕ್ಷಿಸು, ತಿರಸ್ಕರಿಸು, ಒಕ್ಕು, ದ್ರಾಕ್ಷಾರಸ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H947, H1758, H1869, H4001, H4823, H7429, H7512, G2662, G3961

ತುಳಿಸು, ತುಳಿಸುವುದು, ತುಳಿಸಿದೆ, ತುಳಿಸುತ್ತಿರುವುದು

# ಪದದ ಅರ್ಥವಿವರಣೆ:

“ತುಳಿಸು” ಮತ್ತು “ತುಳಿಸುತ್ತಿರುವುದು” ಎನ್ನುವ ಪದಗಳನ್ನು ಗೋಧಿ ಗಿಡಗಳಿಂದ ಮೊಟ್ಟ ಮೊದಲಾಗಿ ಗೋಧಿಯನ್ನು ಬೇರ್ಪಡಿಸುವ ವಿಧಾನವನ್ನು ಸೂಚಿಸುತ್ತವೆ.

  • ಗೋಧಿ ಗಿಡಗಳನ್ನು ತುಳಿಸುವುದರ ಮೂಲಕ ಗೋಧಿ ಹುಲ್ಲು ಮತ್ತು ಕೊಯ್ಲಿನಿಂದ ಧಾನ್ಯವು ಬೇರೆಯಾಗುತ್ತದೆ. ಇದಾದನಂತರ, ಧಾನ್ಯವನ್ನು ಸಂಪೂರ್ಣವಾಗಿ ಕಡ್ಡಿ ಕಸದಿಂದ ಬೇರ್ಪಡಿಸುವುದಕ್ಕೆ “ತೂರುತ್ತಾರೆ”, ಕೇವಲ ತಿನ್ನುವದಕ್ಕೆ ಯೋಗ್ಯವಾಗುವ ಧಾನ್ಯದ ಭಾಗವನ್ನು ಮಾತ್ರ ಉಳಿಸಿಕೊಳ್ಳುತ್ತಾರೆ.
  • ಸತ್ಯವೇದ ಕಾಲಗಳಲ್ಲಿ “ತುಳಿಸುವ ನೆಲ” ಎನ್ನುವುದು ಚಪಟವಾದ ಕಲ್ಲುಗಳಿರುವ ದೊಡ್ಡ ಸ್ಥಳ ಅಥವಾ ದುಮ್ಮು ಧೂಳಿಯ ಧಾನ್ಯವನ್ನು ಇರಿಸುವ ಗಟ್ಟಿಯಾದ ಸ್ಥಳ, ಧಾನ್ಯವನ್ನು ಬೇರ್ಪಡಿಸಿ ಅದರ ಸೊಪ್ಪನ್ನು ತುಳಿಸುವ ಮಟ್ಟದ ಸ್ಥಳವಾಗಿರುತ್ತದೆ.
  • “ತುಳಿಸುವ ಬಂಡಿ” ಅಥವಾ “ತುಳಿಸುವ ಚಕ್ರ” ಎನ್ನುವುದು ಕೆಲವೊಂದುಬಾರಿ ಧಾನ್ಯವನ್ನು ತಿಳಿಸುವುದಕ್ಕೆ ಮತ್ತು ಅದರ ಸೊಪ್ಪನ್ನು ಬೇರ್ಪಡಿಸುವುದಕ್ಕೆ ಸಹಾಯಕವಾಗುವುದಕ್ಕೆ ಉಪಯೋಗಿಸಲಾಗುತ್ತದೆ.
  • “ತುಳಿಸುವ ಜಾರುಬಂಡಿ” ಅಥವಾ “ತುಳಿಸುವ ಹಲಗೆ” ಎನ್ನುವುದು ಧಾನ್ಯವನ್ನು ಬೇರ್ಪಡಿಸುವುದಕ್ಕೆ ಉಪಯೋಗಿಸುವ ಉಪಕರಣವಾಗಿರುತ್ತದೆ. ಇದನ್ನು ಮರದ ಹಲಗೆಗಳಿಂದ ತಯಾರಿಸಿರುತ್ತಾರೆ, ಇವುಗಳ ತುದಿ ಭಾಗಗಳಿಗೆ ಚೂಪಾದ ಕಂಬಿಗಳನ್ನು ಜೋಡಿಸಿರುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ಹೊಟ್ಟು, ಧಾನ್ಯ, ತೂರು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H212, H4173, H1637, H1758, H1786, H1869, H2251, G248

ತೂಗುಹಾಕು, ತೂಗು ಹಾಕಲಾಗಿದೆ, ಗಲ್ಲಿಗೇರಿಸಲಾಗಿದೆ, ತೂಗು ಹಾಕುವುದು, ನೇತಾಡುವುದು, ನೇಣು ಹಾಕಲ್ಪಟ್ಟಿದೆ

# ಪದದ ಅರ್ಥವಿವರಣೆ:

“ತೂಗುಹಾಕು” ಎನ್ನುವ ಪದಕ್ಕೆ ನೆಲದಿಂದ ಮೇಲಕ್ಕೆ ಯಾವುದಾದರೊಂದನ್ನು ಅಥವಾ ಯಾರಾದರೊಬ್ಬರನ್ನು ಸ್ವಲ್ಪಕಾಲ ತಡೆಹಿಡಿಯುವುದು ಎಂದರ್ಥ.

  • ಒಬ್ಬ ವ್ಯಕ್ತಿಯ ಕುತ್ತಿಗೆಯ ಸುತ್ತಲು ಹಗ್ಗವನ್ನು ಕಟ್ಟಿ ಮರದ ತುಂಡಿನಂತೆ ಒಂದು ಎತ್ತರದಲ್ಲಿರುವ ವಸ್ತುವಿನಿಂದ ತನ್ನನ್ನು ತೂಗುಹಾಕುವದರಿಂದ ಸಾಧಾರಣವಾಗಿ ನೇಣು ಹಾಕಿಕೊಂಡು ಸಾಯುವುದು ನಡೆಯುತ್ತದೆ. ಯೂದಾ ತನ್ನನ್ನು ತಾನು ನೇಣು ಹಾಕಿಕೊಳ್ಳುವುದರ ಮೂಲಕ ಸತ್ತಿದ್ದಾನೆ.
  • ಯೇಸುವನ್ನು ಮರದ ಶಿಲುಬೆಯ ಮೇಲೆ ತೂಗುಹಾಕುವುದರ ಮೂಲಕ ಮರಣ ಹೊಂದಿದ್ದರೂ, ಆತನ ಕುತ್ತಿಗೆಯ ಸುತ್ತ ಏನೂ ಹಾಕಿರಲಿಲ್ಲ: ಸೈನಿಕರು ಆತನನ್ನು ಶಿಲುಬೆಯ ಮೇಲೆ ಮಲಗಿಸಿ ಆತನ ಕೈ (ಅಥವಾ ಮಣಿಕಟ್ಟುಗಳಲ್ಲಿ), ಕಾಲುಗಳಲ್ಲಿ ಮೊಳೆಗಳನ್ನು ಹೊಡೆಯುವುದ ಮೂಲಕ ನೇತಾಡಿಗೊಳಿಸಿದ್ದರು.
  • ಯಾರಾದರೊಬ್ಬರನ್ನು ತೂಗುಹಾಕುವುದೆನ್ನುವುದು ಯಾರೋದರೊಬ್ಬರ ಕುತ್ತಿಗೆಗೆ ಒಂದು ಹಗ್ಗವನ್ನು ಕಟ್ಟಿ ತೂಗುಹಾಕುವುದರ ಮೂಲಕ ಸಾಯಿಸುವುದರ ವಿಧಾನವನ್ನು ಸೂಚಿಸುತ್ತದೆ.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2614, H3363, H8518, G519

ತೂರು, ತೂರುವುದು, ತೂರಲ್ಪಟ್ಟಿದೆ, ತೂರುತ್ತಾಯಿರುವುದು, ಸೋಸು, ಸೋಸುವುದು

# ಪದದ ಅರ್ಥವಿವರಣೆ:

“ತೂರು” ಮತ್ತು “ಸೋಸು” ಎನ್ನುವ ಪದಗಳು ಕೆಲಸಕ್ಕೆಬಾರದವುಗಳಿಂದ ಧಾನ್ಯವನ್ನು ಬೇರ್ಪಡಿಸುವುದು ಎಂದರ್ಥ. ಸತ್ಯವೇದದಲ್ಲಿ ಈ ಎರಡು ಪದಗಳು ಕೂಡ ಜನರನ್ನು ವಿಭಜಿಸುವುದನ್ನು ಅಥವಾ ಬೇರ್ಪಡಿಸುವುದನ್ನು ಸೂಚಿಸುವುದಕ್ಕೆ ಅಲಂಕಾರಿಕ ಭಾಷೆಯಲ್ಲಿ ಉಪಯೋಗಿಸಲ್ಪಟ್ಟಿರುತ್ತವೆ.

  • “ತೂರು” ಎನ್ನುವ ಪದಕ್ಕೆ ಗಾಳಿಯಲ್ಲಿ ಹೊಟ್ಟು ಮತ್ತು ಧಾನ್ಯಗಳೆರಡನ್ನು ಹಾರಿಸುವುದರ ಮೂಲಕ ಸಸ್ಯಗಳಿಂದ ಬೇಕಾಗಿರದವುಗಳಿಂದ ಧಾನ್ಯವನ್ನು ಬೇರ್ಪಡಿಸುವುದು ಎಂದರ್ಥ.
  • “ಸೋಸು” ಎನ್ನುವ ಪದವು ಧೂಳಿ ಅಥವಾ ಕಲ್ಲುಗಗಳನ್ನು ಬೇರ್ಪಡಿಸುವುದಕ್ಕೆ ಜರಡಿಯಲ್ಲಿ ತೂರು ಹಾಕಿದ ಧಾನ್ಯವನ್ನು ಅಲುಗಾಡಿಸುವುದನ್ನು ಸೂಚಿಸುತ್ತದೆ.
  • ಹಳೇ ಒಡಂಬಡಿಕೆಯಲ್ಲಿ “ತೂರು” ಅಥವಾ “ಸೋಸು” ಎನ್ನುವ ಪದಗಳನ್ನು ಅನೀತಿವಂತ ಜನರಿಂದ ನೀತಿವಂತರಾಗಿರುವ ಜನರನ್ನು ಬೇರ್ಪಡಿಸುವ ಕಠಿಣ ಕಾರ್ಯವನ್ನು ವಿವರಿಸುವುದಕ್ಕೆ ಅಲಂಕಾರಿಕವಾಗಿ ಉಪಯೋಗಿಸಲ್ಪಟ್ಟಿರುತ್ತವೆ.
  • ಯೇಸು ಮತ್ತು ತನ್ನ ಶಿಷ್ಯರು ತಮ್ಮ ನಂಬಿಕೆಯಲ್ಲಿ ಪರೀಕ್ಷಿಸಲ್ಪಡುವುದರ ಕುರಿತಾಗಿ ಯೇಸು ಸೀಮೋನ ಪೇತ್ರನಿಗೆ ಹೇಳುತ್ತಿರುವಾಗ “ಸೋಸು” ಎನ್ನುವ ಪದವನ್ನು ಉಪಯೋಗಿಸಿರುತ್ತಾನೆ.
  • ಈ ಪದಗಳನ್ನು ಅನುವಾದ ಮಾಡುವುದಕ್ಕೆ ಈ ಚಟುವಟಿಕೆಗಳನ್ನು ಸೂಚಿಸುವ ಪದಗಳು ಅನುವಾದ ಮಾಡುವ ಭಾಷೆಯಲ್ಲಿದ್ದರೆ ಉಪಯೋಗಿಸಿರಿ; ಬಹುಶಃ ಅನುವಾದಗಳು “ಅಲುಗಾಡಿಸುವುದು” ಅಥವಾ “ಗಾಳಿ ಹಾಕು” ಎಂದಾಗಿರಬಹುದು. ತೂರುವುದು ಅಥವಾ ಸೋಸುವುದು ಗೊತ್ತಿಲ್ಲದಿದ್ದರೆ, ಈ ಪದಗಳನ್ನು ಧೂಳಿ, ಹೊಟ್ಟು ಎನ್ನುವವುಗಳಿಂದ ಧಾನ್ಯವನನ್ನು ಬೇರ್ಪಡಿಸುವ ವಿಧಾನವನ್ನು ಸೂಚಿಸುವುದರ ಮೂಲಕ ಅಥವಾ ಈ ಪದ್ಧತಿಯನ್ನು ವಿವರಿಸುವುದರ ಮೂಲಕ ಅನುವಾದ ಮಾಡಬಹುದು.

(ಅನುವಾದ ಸಲಹೆಗಳು: ಗೊತ್ತಿಲ್ಲದವುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಹೊಟ್ಟು, ಧಾನ್ಯ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2219, H5128, H5130, G4425, G4617

ತೆಲೆಮಾರು

# ಪದದ ಅರ್ಥವಿವರಣೆ:

“ತಲೆಮಾರು” ಎನ್ನುವ ಪದವು ಒಂದೇ ಕಾಲದಲ್ಲಿ ಹುಟ್ಟಿ ಬೆಳೆದ ಜನರ ಗುಂಪನ್ನು ಸೂಚಿಸುತ್ತದೆ.

  • ತಲೆಮಾರು ಎನ್ನುವ ಪದವು ಕಾಲಾವಧಿಯನ್ನು ಸೂಚಿಸುತ್ತದೆ. ಸತ್ಯವೇದ ಕಾಲಗಳಲ್ಲಿ ತಲೆಮಾರು ಎನ್ನುವದನ್ನು ಸಹಜವಾಗಿ 40 ವರ್ಷಗಳ ಕಾಲವನ್ನು ಪರಿಗಣಿಸಲಾಗಿರುತ್ತದೆ.
  • ತಂದೆತಾಯಿಗಳು ಮತ್ತು ಅವರ ಮಕ್ಕಳು ಎರಡು ವಿಭಿನ್ನ ತಲೆಮಾರುಗಳಿಂದ ಬಂದಿರುವವರಾಗಿರುತ್ತಾರೆ.
  • ಸತ್ಯವೇದದಲ್ಲಿ “ತಲೆಮಾರು” ಎನ್ನುವ ಪದವನ್ನು ಒಂದೇ ರೀತಿಯ ಗುಣಲಕ್ಷಣಗಳನ್ನು ಹೊಂದಿರುವ ಜನರನ್ನು ಸೂಚಿಸುವುದಕ್ಕೆ ಅಲಂಕಾರಿಕ ಭಾಷೆಯಲ್ಲಿ ಉಪಯೋಗಿಸಿರುತ್ತಾರೆ.

# ಅನುವಾದ ಸಲಹೆಗಳು

  • “ಈ ತಲೆಮಾರು” ಅಥವಾ “ಈ ತಲೆಮಾರಿನ ಜನರು” ಎನ್ನುವ ಮಾತನ್ನು “ಈಗ ಜೀವಿಸುತ್ತಿರುವ ಜನರು” ಅಥವಾ “ಈಗಿನ ಜನರು” ಎಂದೂ ಅನುವಾದ ಮಾಡಬಹುದು.
  • “ಈ ದುಷ್ಟ ತಲೆಮಾರಿನವರು” ಎನ್ನುವ ಮಾತನ್ನು “ಈಗ ಜೀವಿಸುತ್ತಿರುವ ದುಷ್ಟ ಜನರು” ಎಂದೂ ಅನುವಾದ ಮಾಡಬಹುದು.
  • “ತಲೆಮಾರಿನಿಂದ ಇನ್ನೊಂದು ತಲೆಮಾರುವರೆಗೆ” ಅಥವಾ “ಒಂದು ತಲೆಮಾರಿನಿಂದ ಬರುವಂತಹ ಇನ್ನೊಂದು ತಲೆಮಾರುವರೆಗೆ” ಎನ್ನುವ ಮಾತನ್ನು “ಈಗ ಜೀವಿಸುತ್ತಿರುವ ಜನರು, ಅದೇರೀತಿಯಾಗಿ ಅವರ ಮಕ್ಕಳು ಮತ್ತು ಅವರ ಮೊಮ್ಮೊಕ್ಕಳು” ಅಥವಾ “ಪ್ರತಿಯೊಂದು ಕಾಲಾವಧಿಯಲ್ಲಿ ಜನರು” ಅಥವಾ “ಈ ಕಾಲಾವಧಿಯಲ್ಲಿರುವ ಜನರು ಮತ್ತು ಭವಿಷ್ಯತ್ತು ಕಾಲದಲ್ಲಿರುವ ಜನರು” ಅಥವಾ “ಎಲ್ಲಾ ಜನರು ಮತ್ತು ಅವರ ವಂಶದವರು” ಎಂದೂ ಅನುವಾದ ಮಾಡಬಹುದು.
  • “ಬರುವಂತಹ ತಲೆಮಾರುಗಳು ಆತನನ್ನು ಸೇವಿಸುತ್ತಾರೆ; ಅವರು ಯೆಹೋವನ ಕುರಿತಾಗಿ ಬರುವ ತಲೆಮಾರಿನವರಿಗೆ ಹೇಳುತ್ತಾರೆ” ಎನ್ನುವ ಮಾತನ್ನು “ಭವಿಷ್ಯತ್ತಿನಲ್ಲಿ ಬರುವ ಅನೇಕ ಜನರು ಯೆಹೋವನನ್ನು ಸೇವಿಸುತ್ತಾರೆ ಮತ್ತು ಆತನ ಕುರಿತಾಗಿ ಅವರ ಮಕ್ಕಳು ಮತ್ತು ಮೊಮ್ಮೊಕ್ಕಳು ಹೇಳುತ್ತಾರೆ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ವಂಶದವರು, ದುಷ್ಟ, ಪೂರ್ವಜ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:


ತೊಟ್ಟಿ, ತೊಟ್ಟಿಗಳು, ಬಾವಿ, ಬಾವಿಗಳು

# ಪದದ ಅರ್ಥವಿವರಣೆ:

“ಬಾವಿ” ಮತ್ತು “ತೊಟ್ಟಿ” ಎನ್ನುವ ಪದಗಳು ಸತ್ಯವೇದ ಕಾಲದಲ್ಲಿ ನೀರಿಗೋಸ್ಕರ ಉಪಯೋಗಿಸಿರುವ ಎರಡು ವಿಧವಾದ ಆಧಾರಗಳನ್ನು ಸೂಚಿಸುತ್ತವೆ.

  • ಬಾವಿ ಎಂದರೆ ನೆಲವನ್ನು ತುಂಬಾ ಆಳವಾಗಿ ಅಗೆದು ಮಾಡುವ ಒಂದು ಗುಂಡಿಯಾಗಿರುತ್ತದೆ, ಈ ರೀತಿ ಮಾಡುವುದರ ಮೂಲಕ ಅದರೊಳಗಿಂದ ನೀರು ಹರಡಿಬರುತ್ತವೆ.
  • ತೊಟ್ಟಿ ಎನ್ನುವುದು ಬಂಡೆಯ ಮೇಲೆ ಅಗೆದು ಮಾಡಿದ ಆಳವಾದ ಗುಂಡಿ, ಇದನ್ನು ಮಳೆ ಬಂದಾಗ ನೀರನ್ನು ಸಂಗ್ರಹಿಸುವುದಕ್ಕೆ ಅಥವಾ ಕೊಳವಾಗಿ ಉಪಯೋಗಿಸುತ್ತಿದ್ದರು.
  • ತೊಟ್ಟಿಗಳು ಸಾಧಾರಣವಾಗಿ ಬಂಡೆಯ ಮೇಲೆ ಅಗೆದು ತಯಾರಿಸುತ್ತಾರೆ, ಮತ್ತು ಅದರಲ್ಲಿ ನೀರು ಉಳಿದಿರುವಂತೆ ಮಾಡಲು ಅದರ ಮೇಲೆ ಪ್ಲಾಸ್ಟರ್ ಹಾಕಿರುತ್ತಾರೆ. ಪ್ಲಾಸ್ಟರ್ ಸೀಳಿ ಹೋದಾಗ “ಮುರಿಯಲ್ಪಟ್ಟ ತೊಟ್ಟಿಯಾಗಿ” ಮಾರ್ಪಡುತ್ತದೆ, ಈಗ ಈ ತೊಟ್ಟಿಯಲ್ಲಿರುವ ನೀರೆಲ್ಲವೂ ಸೋರುತ್ತವೆ.
  • ತೊಟ್ಟಿಗಳು ಅನೇಕಬಾರಿ ಜನರ ಮನೆಗಳ ಮೇಲ್ಚಾವಣಿಯ ಮೇಲಿ ಮಳೆ ನೀರು ಬಿದ್ದಾಗ, ಅವುಗಳನ್ನು ಸಂಗ್ರಹಿಸಿ ಇಡುವುದಕ್ಕೆ ಅವರ ಮನೆಗಳ ಪ್ರಾಂಗಣದಲ್ಲಿ ಕಂಡುಬರುತ್ತಿರುತ್ತವೆ.
  • ಬಾವಿಗಳು ಅನೇಕಬಾರಿ ಕುಟುಂಬಗಳು ಅಥವಾ ಸಮುದಾಯವೆಲ್ಲಾ ಬಂದು ನೀರನ್ನು ತೆಗೆದುಕೊಂಡು ಹೋಗುವುದಕ್ಕೆ ಸುಲಭವಾಗುವ ಸ್ಥಳದಲ್ಲಿ ಕಂಡುಬರುತ್ತವೆ.
  • ಜನರಿಗೂ ಮತ್ತು ಪಶು ಪ್ರಾಣಿಗಳಿಗೂ ನೀರು ತುಂಬಾ ಪ್ರಾಮುಖ್ಯವಾದದ್ದರಿಂದ, ಬಾವಿಯನ್ನು ಉಪಯೋಗಿಸುವ ಹಕ್ಕು ಅನೇಕಬಾರಿ ಸಂಘರ್ಷಗಳಿಗೆ ಮತ್ತು ಜಗಳಗಳಿಗೆ ಕಾರಣವಾಗುತ್ತಿತ್ತು.
  • ಬಾವಿಗಳು ಮತ್ತು ತೊಟ್ಟಿಗಳಲ್ಲಿ ಯಾವುದೂ ಬೀಳದಂತೆ ಅವುಗಳ ಮೇಲೆ ಒಂದು ದೊಡ್ಡ ಬಂಡೆಯನ್ನು ಹಾಕಿ ಮುಚ್ಚುತ್ತಿದ್ದರು. ಅನೇಕಬಾರಿ ಬಾದಲಿಗೆ ಅಥವಾ ಕೊಡಕ್ಕೆ ಹಗ್ಗವನ್ನು ಕಟ್ಟಿ, ಕೆಳ ಭಾಗದಿಂದ ನೀರನ್ನು ಮೇಲಕ್ಕೆ ತರುತ್ತಿದ್ದರು.
  • ಕೆಲವೊಂದುಬಾರಿ ಒಣ ತೊಟ್ಟಿಯನ್ನು ಯಾರಾದರೊಬ್ಬರನ್ನು ಬಂಧಿಸುವುದಕ್ಕೆ ಉಪಯೋಗಿಸುತ್ತಿದ್ದರು, ಹೀಗೆ ಯೋಸೇಫ ಮತ್ತು ಯೆರೆಮಿಯಾರವರಿಗೆ ನಡೆದಿದೆ.

# ಅನುವಾದ ಸಲಹೆಗಳು:

  • “ಬಾವಿ” ಎನ್ನುವ ಪದವನ್ನು ಅನುವಾದ ಮಾಡುವುದರಲ್ಲಿ “ನೀರಿರುವ ಆಳವಾದ ಗುಂಡಿ” ಅಥವಾ “ನೀರಿನ ಬುಗ್ಗೆಗಾಗಿ ಅಗೆದಿರುವ ಆಳವಾದ ಗುಂಡಿ” ಅಥವಾ “ನೀರನ್ನು ತೆಗೆಯುವುದಕ್ಕಿರುವ ಆಳವಾದ ಗುಂಡಿ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • “ತೊಟ್ಟಿ” ಎನ್ನುವ ಪದವನ್ನು “ಕಲ್ಲಿನ ನೀರಿನ ಹೊಂಡ” ಅಥವಾ “ನೀರಿಗಾಗಿ ಮಾಡಿರುವ ಆಳವಾದ ಮತ್ತು ಕಿರಿದಾದ ಕುಳಿ” ಅಥವಾ “ನೀರನ್ನು ಸಂಗ್ರಹಿಸುವುದಕ್ಕೆ ಒಳಚರಂಡಿ” ಎಂದೂ ಅನುವಾದ ಮಾಡಬಹುದು.
  • ಈ ಎಲ್ಲಾ ಮಾತುಗಳು ಒಂದೇ ರೀತಿಯ ಅರ್ಥವನ್ನು ಕೊಡುತ್ತವೆ. ಈ ಪದಗಳ ಮಧ್ಯೆದಲ್ಲಿರುವ ಮುಖ್ಯ ವ್ಯತ್ಯಾಸವೇನೆಂದರೆ ಬಾವಿಯಿಂದ ನಿರಂತರವಾಗಿ ನೀರನ್ನು ಪಡೆದುಕೊಳ್ಳಬಹುದು, ಆದರೆ ತೊಟ್ಟಿಗಳಿಂದ ಮಳೆ ನೀರನ್ನು ಮಾತ್ರವೇ ಪಡೆದುಕೊಳ್ಳುವುದಕ್ಕೆ ಅವಕಾಶ.

(ಈ ಪದಗಳನ್ನು ಸಹ ನೋಡಿರಿ : ಯೆರೆಮಿಯಾ, ಸೆರೆ, ಕಲಹ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H875, H883, H953, H1360, H3653, H4599, H4726, H4841, G4077, G5421

ತೊಡಿಸು, ತೊಡಿಸಲ್ಪಟ್ಟಿದೆ, ಬಟ್ಟೆಗಳು, ಉಡುಪುಗಳು, ಬಟ್ಟೆಗಳಿಲ್ಲದ

# ಪದದ ಅರ್ಥವಿವರಣೆ:

ಸತ್ಯವೇದದಲ್ಲಿ ಅಲಂಕಾರಿಕ ಭಾಷೆಯನ್ನೂ ಉಪಯೋಗಿಸಿದಾಗ, “ಇವುಗಳೊಂದಿಗೆ ತೊಡಿಸಲ್ಪಟ್ಟಿದೆ” ಎನ್ನುವ ಮಾತಿಗೆ ಯಾವುದಾದರೊಂದಿಗೆ ಸಜ್ಜುಗೊಳಿಸಲಾಗಿದೆ ಅಥವಾ ಅನುಗ್ರಹಿಸಲ್ಪಟ್ಟಿದೆ ಎಂದರ್ಥ. “ ಯಾವುದಾದರೊಂದಿಗೆ “ತೊಡಿಸಿ” ಕೊಳ್ಳುವುದು ಎಂದರೆ ಒಂದು ಸರಿಯಾದ ಗುಣಲಕ್ಷಣದ ಬೆಲೆಯನ್ನು ಹೊಂದಿಕೊಳ್ಳುವುದಕ್ಕೆ ಎದುರುನೋಡುವುದು.

  • ನಿಮ್ಮ ದೇಹಕ್ಕೆ ಬಹಿರಂಗವಾಗಿ ಉಡುಪುಗಳನ್ನು ಧರಿಸಿಕೊಳ್ಳುವುದೆನ್ನುವುದು ಎಲ್ಲರಿಗೆ ಕಾಣಿಸಿಕೊಳ್ಳುವ ವಿಧಾನದಲ್ಲೇ, ನೀವು ಒಂದು ನಿರ್ಧಿಷ್ಟವಾದ ಗುಣಲಕ್ಷಣದೊಂದಿಗೆ “ತೊಡಿಸಲ್ಪಟ್ಟಾಗ”, ಇತರರು ಖಂಡಿತವಾಗಿ ನಿಮ್ಮನ್ನು ಖಂಡಿತವಾಗಿ ನೋಡುತ್ತಾರೆ. “ದಯೆಯೊಂದಿಗೆ ನಿಮ್ಮನ್ನು ನೀವೇ ತೊಡಿಸಿಕೊಳ್ಳುವುದು” ಎನ್ನುವ ಮಾತಿಗೆ ಎಲ್ಲರೂ ಅತೀ ಸುಲಭವಾಗಿ ನಿಮ್ಮನ್ನು ನೋಡುವಂತೆ ದಯೆಯಿಂದ ನಿಮ್ಮ ಕ್ರಿಯೆಗಳು ಪರಿವರ್ತನೆಯಾಗಬೇಕು ಎಂದರ್ಥ.
  • “ಮೇಲಣದಿಂದ ಬರುವ ಶಕ್ತಿಯೊಂದಿಗೆ ತೊಡಿಸಲ್ಪಡಿರಿ” ಎನ್ನುವ ಮಾತಿಗೆ ಶಕ್ತಿಯನ್ನು ಹೊಂದುವುದಕ್ಕೆ ನಿಮಗೆ ಕೊಡಲ್ಪಟ್ಟಿದೆ ಎಂದರ್ಥ.
  • ಈ ಪದವು ಋಣಾತ್ಮಕವಾದ ಅನುಭವಗಳನ್ನು ವ್ಯಕ್ತಪಡಿಸುವುದಕ್ಕೂ ಉಪಯೋಗಿಸಲ್ಪಟ್ಟಿದೆ, ಉದಾಹರಣೆಗೆ,“ನಾಚಿಕೆಯಿಂದ ತೊಡಿಸಲ್ಪಟ್ಟಿದ್ದೀಯಾ” ಅಥವಾ “ಭಯಾನಕದೊಂದಿಗೆ ತೊಡಿಸಲ್ಪಟ್ಟಿದ್ದೀ”.

# ಅನುವಾದ ಸಲಹೆಗಳು:

  • ಸಾಧ್ಯವಾದರೆ, “ಯಾವುದಾದರೊಂದಿಗೆ ತೊಡಿಸಿಕೋ” ಎಂದು ಅಕ್ಷರಾರ್ಥ ಶಬ್ದಾಲಂಕಾರವನ್ನು ಹೊಂದಿರುವುದು ಒಳ್ಳೇಯದು. ಈ ಪದವನ್ನು ಅನುವಾದ ಮಾಡುವ ಇನ್ನೊಂದು ವಿಧಾನದಲ್ಲಿ “ಧರಿಸು” ಎಂದೂ ಅನುವಾದ ಮಾಡಬಹುದು, ವಸ್ತ್ರಗಳನ್ನು ಧರಿಸು ಎನ್ನುವ ಮಾತಿನ ಸಂದರ್ಭಕ್ಕೆ ಇದನ್ನು ಉಪಯೋಗಿಸಬಹುದು.
  • ಅದು ಒಂದುವೇಳೆ ಸರಿಯಾದ ಅರ್ಥವನ್ನು ಕೊಡದಿದ್ದರೆ, “ಯಾವುದಾದದೊಂದಿಗೆ” ತೊಡಿಸಲ್ಪಡು” ಎನ್ನುವದನ್ನು “ತೋರಿಸು” ಅಥವಾ “ಸ್ವರೂಪ ಪಡೆ” ಅಥವಾ “ತುಂಬಿಸಲ್ಪಡು” ಅಥವಾ “ಗುಣವನ್ನು ಹೊಂದು” ಎಂದೂ ಇನ್ನೊಂದು ರೀತಿಯಲ್ಲಿ ಅನುವಾದ ಮಾಡಬಹುದು.
  • “ನಿಮ್ಮನ್ನು ನೀವೇ ತೊಡಿಸಿಕೊಳ್ಳಿರಿ” ಎನ್ನುವ ಪದಕ್ಕೆ “ನಿಮ್ಮನ್ನು ನೀವು ಮುಚ್ಚಿಕೊಳ್ಳಿರಿ” ಅಥವಾ “ಕಾಣಿಸುವ ರೀತಿಯಲ್ಲಿ ನಡೆದುಕೊಳ್ಳಿರಿ” ಎಂದೂ ಅನುವಾದ ಮಾಡಬಹುದು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H899, H1545, H3680, H3736, H3830, H3847, H3848, H4055, H4346, H4374, H5497, H8008, H8071, H8516, G294, G1463, G1562, G1737, G1742, G1746, G1902, G2066, G2439, G2440, G3608, G4016, G4470, G4616, G4683, G4749, G5509, G6005

ತೊಂದರೆ, ಪೀಡಿತ, ದುಃಖ, ನೋವು, ಸಂಕಷ್ಟಗಳು

# ಪದದ ಅರ್ಥ ವಿವರಣೆ:

“ತೊಂದರೆ” ಎನ್ನುವ ಪದಕ್ಕೆ ಒಬ್ಬರಿಗೆ ತೊಂದರೆ ಕೊಡುವುದು ಅಥವಾ ಅವರಿಗೆ ದುಃಖವನ್ನುಂಟು ಮಾಡುವುದು ಎಂದರ್ಥ. “ದುಃಖ” ಎನ್ನುವುದು ಎನ್ನುವುದು ಒಂದು ರೋಗ, ಭಾವೋದ್ವೇಗದ ದುಃಖ, ಅಥವಾ ಇವರಿಂದ ಉಂಟಾಗುವ ಇತರ ದುರಂತ.

  • ದೇವರು ತನ್ನ ಜನರನ್ನು ರೋಗಗಳಿಂದ ನೋಯಿಸಿದರು ಅಥವಾ ಅವರೆಲ್ಲರು ಆತನ ಬಳಿಗೆ ಹಿಂದಿರುಗಿ ಬರಲು ಮತ್ತು ಅವರ ಪಾಪಗಳನ್ನು ಒಪ್ಪಿಕೊಳ್ಳಲು ಅವರಿಗೆ ಇತರ ಎಲ್ಲಾ ಸಂಕಷ್ಟಗಳನ್ನು ಕೊಟ್ಟಿದ್ದನು.
  • ಐಗುಪ್ತ ಅರಸನು ದೇವರಿಗೆ ಅವಿಧೇಯತೆಯನ್ನು ತೋರಿಸಿದ್ದರಿಂದ ದೇವರು ಐಗುಪ್ತ ಜನರಿಗೆ ತೊಂದರೆಯನ್ನುಂಟು ಮಾಡಿದನು ಅಥವಾ ಮಾರಿರೋಗಗಳು ಬರುವಂತೆ ಮಾಡಿದನು.
  • “ತೊಂದರೆಯಲ್ಲಿರುವುದು” ಎಂದರೆ ಒಂದು ವಿಧವಾದ ಬಾಧೆಯನ್ನು ಅನುಭವಿಸುವುದು ಎಂದರ್ಥ, ಅದು ರೋಗ, ಹಿಂಸೆ, ಅಥವಾ ಭಾವೋದ್ವೇಗದ ದುಃಖವಾಗಿರಬಹುದು.

# ಅನುವಾದ ಸಲಹೆಗಳು:

  • ಇನ್ನೊಬ್ಬರಿಗೆ ತೊಂದರೆ ಕೊಡುವುದೆನ್ನುವುದನ್ನು “ಇನ್ನೊಬ್ಬರು ತೊಂದರೆಗಳನ್ನು ಅನುಭವಿಸುವಂತೆ ಮಾಡುವುದು” ಅಥವಾ “ಇನ್ನೊಬ್ಬರು ಹಿಂಸೆಯನ್ನು ಹೊಂದುವಂತೆ ಮಾಡುವುದು” ಅಥವಾ “ತೊಂದರೆಯಾಗುವಂತೆ ಮಾಡುವುದು” ಎಂದು ಅನುವಾದ ಮಾಡಬಹುದು.
  • “ತೊಂದರೆ” ಎನ್ನುವ ಪದವನ್ನು ಕೆಲವೊಂದು ಸಂದರ್ಭಗಳಲ್ಲಿ “ನಡೆಯುವಂತೆ ಮಾಡುವುದು” ಅಥವಾ “ಬರುವಂತೆ ಮಾಡುವುದು” ಅಥವಾ “ಹಿಂಸೆಯನ್ನು ತರುವುದು” ಎಂದು ಅನುವಾದ ಮಾಡಬಹುದು.
  • “ಕುಷ್ಠ ರೋಗದಿಂದ ಇನ್ನೊಬ್ಬರಿಗೆ ತೊಂದರೆಯನ್ನು ಕೊಡು” ಎನ್ನುವ ಮಾತನ್ನು “ಕುಷ್ಠ ರೋಗದಿಂದ ನರಳುವಂತೆ ಇನ್ನೊಬ್ಬರಿಗೆ ತೊಂದರೆ ಕೊಡು” ಎಂದು ಅನುವಾದ ಮಾಡಬಹುದು.
  • ಜನರನ್ನು ಅಥವಾ ಪ್ರಾಣಿಗಳನ್ನು “ತೊಂದರೆಗೊಳಿಸುವುದಕ್ಕೆ” ಒಂದು ಮಾರಿರೋಗವನ್ನು ಅಥವಾ ವಿಪತ್ತನ್ನು ಕಳುಹಿಸಿದಾಗ, ಇದನ್ನು “ಹಿಂಸೆ ಹೊಂದುವಂತೆ ಮಾಡು” ಎಂದು ಅನುವಾದ ಮಾಡಬಹುದು.
  • ಸಂದರ್ಭ ಅನುಸಾರವಾಗಿ, “ತೊಂದರೆ” ಎನ್ನುವ ಪದವನ್ನು “ವಿಪತ್ತು” ಅಥವಾ “ರೋಗ” ಅಥವಾ “ಹಿಂಸೆ” ಅಥವಾ “ಮಹಾ ಯಾತನೆ” ಎಂಬುದಾಗಿಯೂ ಅನುವಾದ ಮಾಡಬಹುದು.
  • “ಇನ್ನೊಂದರಿಂದ ಪೀಡಿಸಲ್ಪಡುವದು” ಎನ್ನುವ ಮಾತನ್ನು “ಇನ್ನೊಂದರಿಂದ ಹಿಂಸಿಸಲ್ಪಡುವುದು” ಅಥವಾ “ರೋಗವನ್ನು ಅನುಭವಿಸುವುದು” ಎಂದು ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಕುಷ್ಟು ರೋಗ, ಮಾರಿ ರೋಗ, ಶ್ರಮೆ

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H205, H1790, H3013, H3905, H3906, H4157, H4523, H6031, H6039, H6040, H6041, H6862, H6869, H6887, H7451, H7489, H7667, G2346, G2347, G2552, G2553, G2561, G3804, G4777, G4778, G5003

ತೋಳ, ತೋಳಗಳು, ಅಡಗಿ ನಾಯಿಗಳು

# ಪದದ ಅರ್ಥವಿವರಣೆ:

ತೋಳ ಎನ್ನುವುದು ಅಡವಿ ನಾಯಿಗೆ ಸಮಾನವಾಗಿರುವ ಅತೀ ಕ್ರೂರವಾಗಿ ಮಾಂಸ ತಿನ್ನುವ ಒಂದು ಪ್ರಾಣಿಯಾಗಿರುತ್ತದೆ.

  • ತೋಳಗಳು ಸಹಜವಾಗಿ ಗುಂಪು ಗುಂಪುಗಳಾಗಿ ಹೋಗಿ ಬೇಟೆ ಮಾಡುತ್ತವೆ ಮತ್ತು ಅತೀ ಜಾಣತನದಿಂದ ರಹಸ್ಯವಾಗಿ ತಮ್ಮ ಬೇಟೆಯನ್ನು ಕೊಂಬೆಗಳಿಂದ ಮಾಡುತ್ತವೆ.
  • ಸತ್ಯವೇದದಲ್ಲಿ “ತೋಳಗಳು” ಎನ್ನುವ ಪದವನ್ನು ಕುರಿಗಳಿಗೆ ಹೋಲಿಸಲ್ಪಟ್ಟ ವಿಶ್ವಾಸಿಗಳನ್ನು ನಾಶ ಮಾಡುವ ಸುಳ್ಳು ಪ್ರವಾದಿಗಳನ್ನು ಅಥವಾ ಸುಳ್ಳು ಬೋಧಕರನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಉಪಯೋಗಿಸಲ್ಪಟ್ಟಿರುತ್ತದೆ. ಸುಳ್ಳು ಬೋಧನೆಯು ಜನರಿಗೆ ಹಾನಿಯನ್ನು ಮಾಡುವ ತಪ್ಪು ಕಾರ್ಯಗಳನ್ನು ನಂಬುವಂತೆ ಮಾಡುತ್ತದೆ.
  • ಈ ಹೋಲಿಕೆಯು ಕುರಿಗಳು ವಿಶೇಷವಾಗಿ ತೋಳಗಳಿಂದ ದುರ್ಬಲವಾದ ರೀತಿಯಲ್ಲಿ ಧಾಳಿ ಮಾಡಿ, ಅವುಗಳನ್ನು ತಿನ್ನುತ್ತವೆಯೆನ್ನುವ ಸತ್ಯಾಂಶ ಮೇಲೆ ಆಧಾರವಾಗಿರುತ್ತದೆ, ಯಾಕಂದರೆ ಅವು ಬಲಹೀನ ಪ್ರಾಣಿಗಳು ಮತ್ತು ತಮ್ಮನ್ನು ತಾವು ಸಂರಕ್ಷಿಸಿಕೊಳ್ಳುವುದಿಲ್ಲ.

# ಅನುವಾದ ಸಲಹೆಗಳು:

  • ಈ ಪದವನ್ನು ‘ಅಡವಿ ನಾಯಿ” ಅಥವಾ “ಅಡವಿ ಪ್ರಾಣಿ” ಎಂದೂ ಅನುವಾದ ಮಾಡಬಹುದು.
  • ಅಡವಿ ನಾಯಿಗಳಿಗೆ “ನರಿ” ಅಥವಾ “ಉತ್ತರ ಅಮೇರಿಕಾದ ತೋಳ” ಎಂದೆನ್ನುವ ಬೇರೆ ಹೆಸರುಗಳಾಗಿರುತ್ತವೆ.
  • ಜನರನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಉಪಯೋಗಿಸಿದಾಗ, ಇದನ್ನು “ಕುರಿಗಳ ಮೇಲೆ ಧಾಳಿ ಮಾಡುವ ಪ್ರಾಣಿಗಳಂತೆ ಜನರನ್ನು ಹಾನಿ ಮಾಡುವ ದುಷ್ಟ ಜನರು” ಎಂದು ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ದುಷ್ಟ, ಸುಳ್ಳು ಪ್ರವಾದಿ, ಕುರಿಗಳು, ಬೋಧಿಸು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2061, H3611, G3074

ದರ್ಶನ ಗುಡಾರ

# ಸತ್ಯಾಂಶಗಳು:

“ದರ್ಶನ ಗುಡಾರ” ಎನ್ನುವ ಮಾತು ಗುಡಾರವನ್ನು ನಿರ್ಮಿಸುವುದಕ್ಕೆ ಮುಂಚಿತವಾಗಿ ದೇವರು ಮೋಶೆಯೊಂದಿಗೆ ಭೇಟಿಯಾಗಿರುವ ತಾತ್ಕಾಲಿಕವಾದ ಗುಡಾರವನ್ನು ಸೂಚಿಸುತ್ತದೆ.

  • ದರ್ಶನ ಗುಡಾರವು ಇಸ್ರಾಯೆಲ್ಯರು ಇಳುಕೊಳ್ಳುವ ಶಿಬಿರಕ್ಕೆ ಆಚೆಯಲ್ಲಿರುತ್ತಿತ್ತು.
  • ಮೋಶೆ ದೇವರೊಂದಿಗೆ ಭೇಟಿಯಾಗುವುದಕ್ಕೆ ದರ್ಶನ ಗುಡಾರಕ್ಕೆ ಹೊರಟು ಹೋದಾಗ, ದೇವರ ಪ್ರಸನ್ನತೆಯು ಅಲ್ಲಿದೆಯೆಂದು ಸೂಚಿಸುವುದಕ್ಕೆ ಗುಡಾರದ ಪ್ರವೇಶ ದ್ವಾರದಲ್ಲಿ ಮೇಘ ಸ್ತಂಭವು ನಿಲ್ಲುತ್ತಿತ್ತು.
  • ಇಸ್ರಾಯೇಲ್ಯರು ಗುಡಾರವನ್ನು ಕಟ್ಟಿದನಂತರ, ತಾತ್ಕಾಲಿಕವಾದ ಗುಡಾರದ ಅಗತ್ಯತೆ ಇನ್ನು ಮೇಲೆ ಎಂದಿಗೂ ಇದ್ದಿಲ್ಲ ಮತ್ತು “ದರ್ಶನ ಗುಡಾರ” ಎನ್ನುವ ಮಾತು ಕೆಲವೊಂದುಬಾರಿ ಗುಡಾರವನ್ನು ಸೂಚಿಸುವುದಕ್ಕೂ ಉಪಯೋಗಿಸಿದ್ದಾರೆ.

(ಈ ಪದಗಳನ್ನು ಸಹ ನೋಡಿರಿ : ಇಸ್ರಾಯೇಲ್, ಮೋಶೆ, ಸ್ತಂಭ, ಗುಡಾರ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಉದಾಹರಣೆಗಳು:

  • 13:08 ಇಸ್ರಾಯೇಲ್ಯರು ಗುಡಾರವನ್ನು ಹೇಗೆ ನಿರ್ಮಿಸಬೇಕೆನ್ನುವ ಮಾಹಿತಿಯೆಲ್ಲವನ್ನು ದೇವರು ಅವರಿಗೆ ಕೊಟ್ಟಿದ್ದರು. ಇದನ್ನು ___ ದರ್ಶನ ಗುಡಾರ ___ ಎಂದು ಕರೆಯುತ್ತಿದ್ದರು, ಮತ್ತು ಇದರಲ್ಲಿ ಎರಡು ಕೊಠಡಿಗಳಿರುತ್ತಿದ್ದವು, ಇವುಗಳನ್ನು ಬೇರ್ಪಡಿಸುವುದಕ್ಕೆ ಮಧ್ಯೆದಲ್ಲಿ ದೊಡ್ಡ ತೆರೆಯನ್ನು ಹಾಕಿಟ್ಟಿರುತ್ತಿದ್ದರು.
  • 13:09 ದೇವರ ಧರ್ಮಶಾಸ್ತ್ರಕ್ಕೆ ಅವಿಧೇಯತೆ ತೋರಿಸುವವನು ದೇವರಿಗೆ ಹೋಮವನ್ನಾಗಿ ___ ದರ್ಶನ ಗುಡಾರ ___ ಮುಂದೆಯಿರುವ ಯಜ್ಞವೇದಿಯ ಬಳಿಗೆ ಒಂದು ಪ್ರಾಣಿಯನ್ನು ತೆಗೆದುಕೊಂಡುಬರಬೇಕು.
  • 14:08 ದೇವರು ತುಂಬಾ ಕೋಪಗೊಂಡಿದ್ದನು ಮತ್ತು ___ ದರ್ಶನದ ಗುಡಾರದ ___ ಬಳಿಗೆ ಬರುತ್ತಿದ್ದನು.
  • 18:02 ___ ದರ್ಶನ ಗುಡಾರಕ್ಕೆ ___ ಬದಲಾಗಿ, ಜನರು ಈಗ ದೇವರನ್ನು ದೇವಾಲಯದ ಬಳಿ ಆತನಿಗೆ ಹೋಮಗಳನ್ನು ಅರ್ಪಿಸಿದ್ದಾರೆ ಮತ್ತು ಆತನನ್ನು ಆರಾಧಿಸಿದ್ದಾರೆ.

# ಪದ ಡೇಟಾ:

  • Strong's: H168, H4150

ದರ್ಶನ, ದರ್ಶನಗಳು, ಕಲ್ಪನೆ

# ಸತ್ಯಾಂಶಗಳು:

“ದರ್ಶನ” ಎನ್ನುವ ಪದವು ಒಬ್ಬ ವ್ಯಕ್ತಿ ಯಾವುದಾದರೊಂದನ್ನು ನೋಡುವುದನ್ನು ಸೂಚಿಸುತ್ತದೆ. ದೇವರು ಜನರಿಗೆ ಸಂದೇಶವನ್ನು ಕೊಡುವುದಕ್ಕೆ ತೋರಿಸುವ ಅಸಾಧಾರಣವಾದ ಅಥವಾ ಪ್ರಕೃತಾತೀತವಾದ ವಿಷಯವನ್ನು ಇದು ವಿಶೇಷವಾಗಿ ಸೂಚಿಸುತ್ತದೆ.

  • ಸಾಧಾರಣವಾಗಿ ದರ್ಶನಗಳನ್ನು ಒಬ್ಬ ವ್ಯಕ್ತಿ ಎಚ್ಚರವಾಗಿದ್ದಾಗಲೇ ಕಾಣಿಸಿಕೊಳ್ಳುತ್ತವೆ. ಏನೇಯಾದರೂ, ಕೆಲವೊಂದುಬಾರಿ ದರ್ಶನ ಎನ್ನುವುದು ಒಬ್ಬ ವ್ಯಕ್ತಿ ಮಲಗಿರುವಾಗ ಬಂದ ಕನಸಿನಲ್ಲಿ ನೋಡುವ ಯಾವುದಾದರೊಂದನ್ನು ಸೂಚಿಸುತ್ತದೆ.
  • ದೇವರು ಜನರಿಗೆ ಅತೀ ಪ್ರಾಮುಖ್ಯವಾದದ್ದನ್ನು ಹೇಳುವುದಕ್ಕೆ ದರ್ಶನಗಳನ್ನು ಕಳುಹಿಸುತ್ತಾನೆ. ಉದಾಹರಣೆಗೆ, ಅನ್ಯರನ್ನು ಆಹ್ವಾನಿಸಬೇಕೆಂದು ದೇವರು ಬಯಸಿದ್ದಾನೆಂದು ಪೇತ್ರನಿಗೆ ತಿಳಿಸುವುದಕ್ಕೆ, ಆತನು ಅವನಿಗೆ ಒಂದು ದರ್ಶನವನ್ನು ತೋರಿಸಿದ್ದನು.

# ಅನುವಾದ ಸಲಹೆಗಳು:

  • “ದರ್ಶನವನ್ನು ನೋಡಿದೆ” ಎನ್ನುವ ಮಾತನ್ನು “ದೇವರಿಂದ ಬಂದ ಅಸಹಜವಾದದ್ದನ್ನು ನೋಡಿದೆ” ಅಥವಾ “ದೇವರು ಅವನಿಗೆ ಒಂದು ವಿಶೇಷವಾದದ್ದನ್ನು ತೋರಿಸಿದನು” ಎಂದೂ ಅನುವಾದ ಮಾಡಬಹುದು.
  • ಕೆಲವೊಂದು ಭಾಷೆಗಳಲ್ಲಿ “ದರ್ಶನ” ಮತ್ತು “ಕನಸು” ಎನ್ನುವ ಪದಗಳಿಗೆ ಬೇರೊಂದು ವಿಭಿನ್ನ ಪದಗಳನ್ನು ಒಳಗೊಂಡಿರದಿರಬಹುದು. “ದಾನಿಯೇಲನು ತನ್ನ ಮನಸ್ಸಿನಲ್ಲಿ ಕನಸುಗಳನ್ನು ಮತ್ತು ದರ್ಶನಗಳನ್ನು ಹೊಂದಿಕೊಂಡಿದ್ದನು” ಎನ್ನುವಂಥಹ ವಾಕ್ಯವನ್ನು “ದಾನಿಯೇಲನು ಮಲಗಿದಾಗ ಕನಸನ್ನು ಕಂಡಿದ್ದನು ಮತ್ತು ಅವನು ಅಸಹಜವಾದ ವಿಷಯಗಳನ್ನು ನೋಡುವುದಕ್ಕೆ ದೇವರು ಕಾರಣವಾಗಿದ್ದನು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಕನಸು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2376, H2377, H2378, H2380, H2384, H4236, H4758, H4759, H7203, H7723, H8602, G3701, G3705, G3706

ದಹನ ಬಲಿ, ದಹನ ಬಲಿಗಳು, ಅಗ್ನಿಯಿಂದ ಹೋಮ

# ಪದದ ಅರ್ಥವಿವರಣೆ:

“ದಹನ ಬಲಿ” ಎನ್ನುವುದು ದೇವರಿಗೆ ಮಾಡುವ ಒಂದು ವಿಧವಾದ ಹೋಮ, ಇದನ್ನು ಯಜ್ಞವೇದಿಯ ಮೇಲೆ ದೇವರಿಗೆ ಸಮರ್ಪಿಸುವುದನ್ನು ಇಟ್ಟು ಬೆಂಕಿಯಿಂದ ಸುಟ್ಟುತ್ತಾರೆ. ಜನರ ಪಾಪಗಳಿಗೆ ಪ್ರಾಯಶ್ಚಿತ್ತವನ್ನು ಮಾಡುವುದಕ್ಕೆ ಇದು ಕೊಡಲ್ಪಟ್ಟಿರುತ್ತದೆ. ಇದನ್ನು “ಸುಗಂಧ ಹೋಮ” ಎಂದೂ ಕರೆಯುತ್ತಾರೆ.

  • ಈ ಹೋಮವನ್ನು ಮಾಡುವುದಕ್ಕೆ ಸಹಜವಾಗಿ ಕುರಿ ಅಥವಾ ಟಗರುಗಳಂತಹ ಪ್ರಾಣಿಗಳನ್ನು ಉಪಯೋಗಿಸುತ್ತಾರೆ, ಆದರೆ ಎತ್ತುಗಳನ್ನು, ಪಕ್ಷಿಗಳನ್ನೂ ಉಪಯೋಗಿಸುತ್ತಾರೆ.
  • ಈ ದಹನ ಬಲಿಯಲ್ಲಿ ಪ್ರಾಣಿ ಚರ್ಮವನ್ನು ಬಿಟ್ಟು ಉಳಿದ ಮಾಂಸವನ್ನೆಲ್ಲಾ ಸುಡಬೇಕಾಗಿರುತ್ತದೆ. ಚರ್ಮವನ್ನು ಯಾಜಕನಿಗೆ ಕೊಡುತ್ತಾರೆ ಅಥವಾ ಅದನ್ನು ಬಚ್ಚಿಡುತ್ತಾರೆ.
  • ಪ್ರತಿದಿನ ಎರಡುಸಲ ದಹನ ಬಲಿಗಳನ್ನು ಅರ್ಪಿಸಬೇಕೆಂದು ಯೆಹೂದ್ಯರಿಗೆ ದೇವರು ಆಜ್ಞಾಪಿಸಿದ್ದರು.

(ಈ ಪದಗಳನ್ನು ಸಹ ನೋಡಿರಿ : ಯಜ್ನವೇದಿ, ಪ್ರಾಯಶ್ಚಿತ್ತ, ಎತ್ತು, ಯಾಜಕ, ತ್ಯಾಗ )

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H801, H5930, H7133, H8548, G3646

ದಾನ ಧರ್ಮ

# ಪದದ ಅರ್ಥ ವಿವರಣೆ:

“ದಾನ ಧರ್ಮ” ಎನ್ನುವ ಈ ಪದವು ಹಣವನ್ನು, ಆಹಾರವನ್ನು, ಅಥವಾ ಬಡ ಜನಕ್ಕೆ ಸಹಾಯ ಮಾಡುವುದಕ್ಕೆ ಕೊಡುವ ಇತರ ವಸ್ತುಗಳನ್ನು ಸೂಚಿಸುತ್ತದೆ.

  • ದಾನಧರ್ಮಗಳನ್ನು ಕೊಡುವುದೆನ್ನುವುದು ಅನೇಕಬಾರಿ ಕೆಲವೊಂದು ಜನರು ತಮ್ಮ ಧರ್ಮದ ಪ್ರಕಾರ ನೀತಿವಂತರಾಗುವುದಕ್ಕೆ ಮಾಡುವ ಕಾರ್ಯಗಳಾಗಿ ಕಾಣಿಸಿಕೊಳ್ಳುತ್ತವೆ.
  • ದಾನಧರ್ಮವನ್ನು ಜನರೆಲ್ಲರು ನೋಡುವಂತೆ ಬಹಿರಂಗ ಸ್ಥಳಗಳಲ್ಲಿ ಮಾಡಬಾರದೆಂದು ಯೇಸು ಹೇಳಿದ್ದಾರೆ.
  • ಈ ಪದವನ್ನು “ಹಣ” ಅಥವಾ “ಬಡ ಜನರಿಗೆ ಉಡುಗೊರೆಗಳು” ಅಥವಾ “ಬಡ ಜನರಿಗೆ ಸಹಾಯ” ಎಂದು ಅನುವಾದ ಮಾಡಬಹುದು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: G1654

ದಾರಿತಪ್ಪುವುದು, ದಾರಿ ತಪ್ಪಿಹೋಗುವುದು, ದಾರಿ ತಪ್ಪಿಹೋದ, ದಾರಿ ತಪ್ಪುವಂತೆ ನಡೆಸು, ತಪ್ಪಿಸಿಕೊಳ್ಳು, ತಪ್ಪಿಹೋದ, ಚೆದರಿಹೋದರು

# ಪದದ ಅರ್ಥವಿವರಣೆ:

“ತಪ್ಪಿಸಿಕೊಳ್ಳು” ಮತ್ತು “ತಪ್ಪಿಹೋಗುವುದು” ಎನ್ನುವ ಪದಗಳಿಗೆ ದೇವರ ಚಿತ್ತಕ್ಕೆ ಅವಿಧೇಯರಾಗುವುದು ಎಂದರ್ಥ. “ತಪ್ಪಿಹೋದ” ಜನರು ತಾವು ದೇವರಿಗೆ ಅವಿಧೇಯತೆಯನ್ನು ತೋರಿಸುವುದಕ್ಕೆ ಇತರ ಜನರನ್ನು ಅಥವಾ ಇತರ ಪರಿಸ್ಥಿತಿಗಳನ್ನು ಅನುಮತಿಸಿಕೊಂಡಿರುತ್ತಾರೆ.

  • “ದಾರಿ ತಪ್ಪುವುದು” ಎನ್ನುವ ಪದವು ಸ್ಪಷ್ಟವಾಗಿ ಒಂದು ಮಾರ್ಗವನ್ನು ಅಥವಾ ಒಂದು ಸುರಕ್ಷಿತವಾದ ಸ್ಥಳವನ್ನು ಬಿಟ್ಟು ತಪ್ಪಾದ ಮತ್ತು ಅತೀ ಅಪಾಯಕರವಾದ ಮಾರ್ಗಕ್ಕೆ ಹೋಗುವ ದೃಶ್ಯವನ್ನು ನಮಗೆ ಕೊಡುತ್ತಿದೆ.
  • ತನ್ನ ಕುರುಬನ ಹಸಿರು ಹುಲ್ಲುಗಾವಲನ್ನು ಬಿಟ್ಟು ತಪ್ಪಿಹೋದ ಕುರಿಯನ್ನು “ದಾರಿ ತಪ್ಪಿಹೋಗಿದೆ” ಎಂದು ಕರೆಯುತ್ತಾರೆ. ದೇವರು ಪಾಪ ಸ್ವಭಾವದಿಂದ ಇರುವ ಜನರನ್ನು “ತಪ್ಪಿಹೋಗಿರುವ” ಮತ್ತು ತನ್ನ ಕುರುಬನನ್ನು ಬಿಟ್ಟು ಹೋಗಿರುವ ಕುರಿಗೆ ಹೋಲಿಸುತ್ತಿದ್ದಾರೆ.

# ಅನುವಾದ ಸಲಹೆಗಳು:

  • “ದಾರಿ ತಪ್ಪಿಹೋಗುವುದು” ಎನ್ನುವ ಮಾತನ್ನು “ದೇವರಿಂದ ದೂರ ಆಗುವುದು” ಅಥವಾ “ದೇವರ ಚಿತ್ತದಿಂದ ದೂರಾಗಿ ಕೆಟ್ಟ ಮಾರ್ಗವನ್ನು ಹಿಡಿಯುವುದು “ ಅಥವಾ “ದೇವರಿಗೆ ವಿಧೇಯತೆ ತೋರಿಸುವುದನ್ನು ನಿಲ್ಲಿಸು” ಅಥವಾ “ದೇವರಿಂದ ದೂರಾಗುವ ಮಾರ್ಗದಲ್ಲಿ ಜೀವಿಸು” ಎಂದೂ ಅನುವಾದ ಮಾಡಬಹುದು.
  • “ದಾರಿ ತಪ್ಪಿಹೋಗುವಂತೆ ಒಬ್ಬರನ್ನು ನಡೆಸುವುದು” ಎನ್ನುವ ಮಾತನ್ನು “ಯಾರಾದರೊಬ್ಬರು ದೇವರಿಗೆ ಅವಿಧೇಯತೆಯನ್ನು ತೋರಿಸುವುದಕ್ಕೆ ಕಾರಣವಾಗು” ಅಥವಾ “ಇನ್ನೊಬ್ಬರು ದೇವರಿಗೆ ವಿಧೇಯತೆಯನ್ನು ತೋರಿಸುವುದನ್ನು ನಿಲ್ಲಿಸುವುದಕ್ಕೆ ಪ್ರಭಾವಗೊಳಿಸು” ಅಥವಾ “ಕೆಟ್ಟ ಮಾರ್ಗದಲ್ಲಿ ಹೋಗುತ್ತಿರುವ ನಿಮ್ಮನ್ನು ಅನುಸರಿಸುವುದಕ್ಕೆ ಇನ್ನೊಬ್ಬರನ್ನು ಪ್ರೇರೇಪಿಸು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಅವಿಧೇಯತೆ, ಕುರುಬ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H5080, H7683, H7686, H8582, G4105

ದಾಳಿಂಬೆ ಹಣ್ಣು, ದಾಳಿಂಬೆ ಹಣ್ಣುಗಳು

# ಸತ್ಯಾಂಶಗಳು:

ದಾಳಿಂಬೆ ಹಣ್ಣು ಎನ್ನುವುದು ಅನೇಕ ಬೀಜಗಳಿದ್ದು ಅವುಗಳ ಸುತ್ತ ತಿನ್ನಬಹುದಾದ ಕೆಂಪು ತಿರುಳು ಇರುವ ದಪ್ಪವಾಗಿರುವ ಒಂದು ವಿಧವಾದ ಹಣ್ಣಾಗಿರುತ್ತದೆ.

  • ಹಣ್ಣಿನ ಮೇಲ್ಭಾಗವೆಲ್ಲಾ ಬಣ್ಣದಲ್ಲಿ ಕೆಂಪಾಗಿರುತ್ತದೆ ಮತ್ತು ಬೀಜಗಳ ಸುತ್ತಲು ಇರುವ ತಿರುಳು ಹೊಳೆಯುತ್ತಾ ಕೆಂಪಾಗಿರುತ್ತದೆ.
  • ದಾಳಿಂಬೆ ಹಣ್ಣುಗಳು ಸರ್ವ ಸಾಧಾರಣವಾಗಿ ಬಿಸಿ ಹೆಚ್ಚಾಗಿದ್ದು, ಒಣ ವಾತಾವರಣವು ಇರುವ ದೇಶಗಳಲ್ಲಿ ಹೇರಳವಾಗಿ ಬೆಳೆಯುತ್ತವೆ, ಐಗುಪ್ತ ಮತ್ತು ಇಸ್ರಾಯೇಲ್ ದೇಶಗಳಲ್ಲಿ ಹೆಚ್ಚಾಗಿ ಬೆಳೆಯುತ್ತವೆ.
  • ಕಾನಾನ್ ನೀರಾವರಿ ಇರುವ ಮತ್ತು ಫಲವತ್ತಾದ ಮಣ್ಣು ಇರುವ ದೇಶವೆಂದು ಯೆಹೋವ ಇಸ್ರಾಯೇಲ್ಯರಿಗೆ ವಾಗ್ಧಾನ ಮಾಡಿದ್ದನು, ಇದರಿಂದ ಆಹಾರವು ಅಲ್ಲಿ ಸಾಕಷ್ಟು ಇರುತ್ತಿತ್ತು, ಆ ಆಹಾರಗಳಲ್ಲಿ ದಾಳಿಂಬೆಹಣ್ಣುಗಳೂ ಇದ್ದವು.
  • ಸೊಲೊಮೋನನ ದೇವಾಲಯ ನಿರ್ಮಾಣದಲ್ಲಿ ದಾಳಿಂಬೆ ಹಣ್ಣಿನ ಆಕಾರದಲ್ಲಿ ಕಂಚು ಅಲಂಕಾರಗಳೂ ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಕಂಚು, ಕಾನಾನ್, ಐಗುಪ್ತ, ಸೊಲೊಮೋನ್, ದೇವಾಲಯ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H7416

ದಿನ, ದಿನಗಳು

# ಪದದ ಅರ್ಥವಿವರಣೆ

“ದಿನ” ಎನ್ನುವ ಪದ ಸೂರ್ಯೋದಯದಿಂದ 24 ಗಂಟೆಗಳ ಕಾಲವನ್ನು ಅಕ್ಷರಾರ್ಥವಾಗಿ ಸೂಚಿಸುತ್ತಿದೆ. ಈ ಪದವನ್ನು ಅಲಂಕಾರ ರೂಪದಲ್ಲಿ ಸಹ ಉಪಯೋಗಿಸುತ್ತಾರೆ.

  • ಇಸ್ರಾಯೇಲ್ಯರಿಗೆ ಮತ್ತು ಯಹೂದಿಯರಿಗೆ, ಒಂದು ದಿನ ಸೂರ್ಯ ಮುಳುಗುವ ಸಮಯದಿಂದ ಮತ್ತೊಂದು ದಿನ ಸೂರ್ಯ ಮುಳುಗುವವರೆಗೂ ಒಂದು ದಿನವಾಗಿರುತ್ತದೆ.
  • “ದಿನ” ಎನ್ನುವ ಪದವನ್ನು ಹೆಚ್ಚು ಸಮಯವನ್ನು ಸೂಚಿಸಲು ಅಲಂಕಾರ ರೂಪದಲ್ಲಿ ಉಪಯೋಗಿಸುತ್ತಾರೆ, ಉದಾಹರಣೆಗೆ “ಯೆಹೋವನ ದಿನ” ಅಥವಾ “ಅಂತ್ಯ ದಿನ”.
  • ಈ ಅಲಂಕಾರ ಪದಗಳನ್ನು ಅನುವಾದಿಸಲು ಕೆಲವೊಂದು ಭಾಷೆಗಳಲ್ಲಿ ಬೇರೆ ಪದಗಳನ್ನು ಉಪಯೋಗಿಸುತ್ತಾರೆ ಅಥವಾ “ದಿನ” ಎನ್ನುವ ಪದಕ್ಕೆ ಅಲಂಕಾರ ರೂಪವನ್ನು ಬಳಸುವದಿಲ್ಲ.
  • “ದಿನ” ಎನ್ನುವ ಪದಕ್ಕೆ “ಸಮಯ” ಅಥವಾ “ಕಾಲ” ಅಥವಾ “ಸಂಧರ್ಭ” ಅಥವಾ “ಕಾರ್ಯಕ್ರಮ” ಎನ್ನುವಂತೆ ಸಂಧರ್ಭಾನುಸಾರವಾಗಿ ಬೇರೆ ಅನುವಾದಗಳುಂಟು.

(ಈ ಪದಗಳನ್ನು ಸಹ ನೋಡಿರಿ : ನ್ಯಾಯ ತೀರ್ಪಿನ ದಿನ, ಅಂತ್ಯ ದಿನ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3117, H3118, H6242, G2250

ದೀಪ, ದೀಪಗಳು

# ಪದದ ಅರ್ಥವಿವರಣೆ:

“ದೀಪ” ಎನ್ನುವ ಪದವು ಸಾಧಾರಣವಾಗಿ ಬೆಳಕನ್ನು ಕೊಡುವ ಯಾವುದಾದರೊಂದನ್ನು ಸೂಚಿಸುತ್ತದೆ. ಸತ್ಯವೇದ ಕಾಲಗಳಲ್ಲಿ ಉಪಯೋಗಿಸಿದ ದೀಪಗಳು ಸಹಜವಾಗಿ ಎಣ್ಣೆಯ ದೀಪಗಳಾಗಿದ್ದವು.

ಸತ್ಯವೇದ ಕಾಲಗಳಲ್ಲಿ ಉಪಯೋಗಿಸಿರುವ ದೀಪವು ಯಾವರೀತಿಯಾಗಿದ್ದಿತ್ತು ಎಂದರೆ ಎಣ್ಣೆಯಾಗಿದ್ದ ಒಂದು ಇಂಧನ ಮೂಲದ ಸಣ್ಣ ಧಾರಕವಾಗಿರುತ್ತದೆ, ಅದು ಉರಿಯುತ್ತಿರುವಾಗ ಬೆಳಕನ್ನು ಕೊಡುತ್ತದೆ.

  • ಸಾಧಾರಣವಾದ ಎಣ್ಣೆಯ ದೀಪಗಳು ಸಹಜವಾಗಿ ಮಣ್ಣಿನ ಬಟ್ಟಲುಗಳಾಗಿರುತ್ತವೆ ಮತ್ತು ಅದರಲ್ಲಿ ಆಲಿವ್ ಎಣ್ಣೆಯನ್ನು ಹಾಕಿರುತ್ತಾರೆ, ಬೆಳಕು ಕೊಡಲು ಉರಿಯುವುದಕ್ಕೆ ಆ ಎಣ್ಣೆಯಲ್ಲಿ ಬತ್ತಿಯನ್ನು ಇಟ್ಟಿರುತ್ತಾರೆ.
  • ಕೆಲವೊಂದು ದೀಪಗಳಿಗೆ, ಬಟ್ಟಲು ಅಥವಾ ಜಾರ್ ಎನ್ನುವುದು ಅಂಡಾಕಾರದಲ್ಲಿರುತ್ತದೆ, ಬತ್ತಿಯನ್ನು ಹಿಡಿದಿರಲು ಒಂದು ಕಡೆಗೆ ಹತ್ತಿರವಾಗಿರುತ್ತದೆ.
  • ಎಣ್ಣೆಯ ದೀಪವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗುವರು ಅಥವಾ ಒಂದು ಸ್ತಂಭದ ಮೇಲೆ ಇಟ್ಟಿರುವರು, ಇದರಿಂದ ಆ ಕೊಠಡಿಯು ಅಥವಾ ಮನೆಯು ಆ ಬೆಳಕಿನಿಂದ ತುಂಬಿಸಲ್ಪಡುವುದು.
  • ವಾಕ್ಯದಲ್ಲಿ ಬೆಳಕಿಗೆ ಮತ್ತು ಜೀವನಕ್ಕೆ ಗುರುತುಗಳಾಗಿ ಅನೇಕವಾದ ಅಲಂಕಾರಿಕ ವಿಧಾನಗಳಲ್ಲಿ ದೀಪಗಳು ಉಪಯೋಗಿಸಲ್ಪಟ್ಟಿವೆ.

(ಈ ಪದಗಳನ್ನು ಸಹ ನೋಡಿರಿ : ದೀಪಸ್ತಂಭ, ಜೀವನ, ಬೆಳಕು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3940, H3974, H4501, H5215, H5216, G2985, G3088

ದೀಪಸ್ತಂಭ, ದೀಪಸ್ತಂಭಗಳು

# ಪದದ ಅರ್ಥವಿವರಣೆ:

ಸತ್ಯವೇದದಲ್ಲಿ “ದೀಪಸ್ತಂಭ” ಸಾಧಾರಣವಾಗಿ ಕೊಠಡಿಗೆ ಬೆಳಕನ್ನು ಕೊಡುವುದಕ್ಕೆ ಒಂದು ಚಿಕ್ಕ ಕಟ್ಟು ಮೇಲೆ ಇಟ್ಟಿರುವ ದೀಪವನ್ನು ಸೂಚಿಸುತ್ತದೆ.

  • ಒಂದು ಸಾಧಾರಣವಾದ ದೀಪಸ್ತಂಭವು ಸಹಜವಾಗಿ ಒಂದು ದೀಪವನ್ನು ಮಾತ್ರ ಹೊಂದಿರುತ್ತದೆ ಮತ್ತು ಅದನ್ನು ಮಣ್ಣಿನಿಂದ, ಕಟ್ಟಿಗೆಯಿಂದ ಅಥವಾ ಲೋಹದಿಂದ (ಅಂದರೆ ತಾಮ್ರ, ಬೆಳ್ಳಿ ಅಥವಾ ಬಂಗಾರದಿಂದ ಮಾಡಿರುತ್ತಾರೆ) ಮಾಡಿರುತ್ತಾರೆ.
  • ಯೆರೂಸಲೇಮಿನ ಆಲಯದಲ್ಲಿ ಒಂದು ವಿಶೇಷವಾದ ಬಂಗಾರದ ದೀಪಸ್ತಂಭವಿದ್ದಿತ್ತು, ಇದು ಏಳು ಕೊಂಬೆಗಳನ್ನು ಹೊಂದಿ, ಅದರ ಮೇಲೆ ಏಳು ದೀಪಗಳನ್ನು ಒಳಗೊಂಡಿತ್ತು.

# ಅನುವಾದ ಸಲಹೆಗಳು:

  • ಈ ಪದವನ್ನು “ದೀಪ ಪೀಠ” ಅಥವಾ “ದೀಪವನ್ನು ಇಡುವುದಕ್ಕೆ ಒಂದು ಚಿಕ್ಕ ಕಟ್ಟೆ” ಅಥವಾ “ದೀಪವನ್ನು ಇಡುವ ಸ್ಥಳ” ಎಂದೂ ಅನುವಾದ ಮಾಡಬಹುದು.
  • ಆಲಯ ದೀಪಸ್ತಂಭಕ್ಕಾಗಿ, ಇದನ್ನು “ಏಳು ದೀಪಗಳ ಸ್ತಂಭ” ಅಥವಾ “ಏಳು ದೀಪಗಳೊಂದಿಗಿರುವ ಬಂಗಾರದ ಪೀಠ” ಎಂದೂ ಅನುವಾದ ಮಾಡಬಹುದು.
  • ಸತ್ಯವೇದ ವಾಕ್ಯಗಳಿಗೆ ಸಂಬಂಧಪಟ್ಟಂತೆ ಏಳು ಕೊಂಬೆಗಳಿರುವ ದೀಪಸ್ತಂಭ ಮತ್ತು ಸಾಧಾರಣವಾದ ದೀಪಸ್ತಂಭಗಳ ಚಿತ್ರಗಳನ್ನು ಒಳಪಡಿಸಿದರೆ ಅನುವಾದದಲ್ಲಿ ತುಂಬಾ ಸಹಾಯಕರವಾಗಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಕಂಚು, ಬಂಗಾರ, ದೀಪ, ಬೆಳಕು, ಬೆಳ್ಳಿ, ದೇವಾಲಯ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H4501, G3087

ದೀರ್ಘಶಾಂತಿ, ದೀರ್ಘಶಾಂತಿಯಿಂದ, ಸಹನೆ, ಅಸಹನೆ

# ಪದದ ಅರ್ಥವಿವರಣೆ:

“ದೀರ್ಘಶಾಂತಿ” ಮತ್ತು “ಸಹನೆ” ಎನ್ನುವ ಪದಗಳು ಕಷ್ಟದ ಸಂದರ್ಭಗಳ ಮೂಲಕ ಸತತ ನಿಷ್ಠನಾಗಿರುವುದನ್ನು ಸೂಚಿಸುತ್ತವೆ. ಅನೇಕಬಾರಿ ಸಹನೆ ಎನ್ನುವುದು ಕಾಯುವುದನ್ನು ಒಳಗೊಂಡಿರುತ್ತದೆ.

  • ಜನರು ಯಾರಾದರೊಬ್ಬರೊಂದಿಗೆ ದೀರ್ಘಶಾಂತಿಯಿಂದ ಇದ್ದಾರೆಂದರೆ ಒಬ್ಬ ವ್ಯಕ್ತಿ ಏನೇ ತಪ್ಪು ಮಾಡಿದರೂ ಆ ವ್ಯಕ್ತಿಯನ್ನು ಕ್ಷಮಿಸಿ, ಪ್ರೀತಿಸುವುದು ಎಂದರ್ಥ.
  • ದೇವರ ಜನರು ಕಷ್ಟಗಳನ್ನು ಎದುರುಗೊಳ್ಳುವಾಗ ಸಹನೆಯಿಂದ ಇರಬೇಕೆಂದು ಮತ್ತು ಒಬ್ಬರೊಂದಿಗೆ ಒಬ್ಬರು ಸಹನೆಯಿಂದ ಇರಬೇಕೆಂದು ಸತ್ಯವೇದವು ಬೋಧಿಸುತ್ತದೆ.
  • ಈ ಕರುಣೆಯ ಕಾರಣದಿಂದಲೇ ಅವರು ಶಿಕ್ಷೆಯನ್ನು ಹೊಂದಿಕೊಳ್ಳುವುದಕ್ಕೆ ಅರ್ಹರಾದ ಪಾಪಿಗಳಾಗಿದ್ದರೂ ದೇವರು ತನ್ನ ಜನರೊಂದಿಗೆ ದೀರ್ಘಶಾಂತಿಯಿಂದ ಇದ್ದಾನೆ,

(ಈ ಪದಗಳನ್ನು ಸಹ ನೋಡಿರಿ : ಸಹಿಸು, ಕ್ಷಮಿಸು, ಪಟ್ಟು ಹಿಡಿದಿರುವುದು

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H750, H753, H2342, H3811, H6960, H7114, G420, G463, G1933, G3114, G3115, G3116, G5278, G5281

ದುರ್ಗ, ದುರ್ಗಗಳು, ಕೋಟೆ ನಿರ್ಮಾಣಗಳು, ಬಲವಾದ, ಕೋಟೆ, ಕೋಟೆಗಳು

# ಪದದ ಅರ್ಥವಿವರಣೆ:

“ದುರ್ಗ” ಮತ್ತು “ಕೋಟೆ” ಎನ್ನುವ ಪದಗಳೆರಡು ಶತ್ರು ಸೈನಿಕರ ಧಾಳಿಗೆ ವಿರುದ್ಧವಾಗಿ ತಮ್ಮನ್ನು ತಾವು ಸಂರಕ್ಷಿಸಿಕೊಳ್ಳುವ ಸುರಕ್ಷಿತವಾದ ಸ್ಥಳಗಳನ್ನು ಸೂಚಿಸುತ್ತದೆ. “ಕೋಟೆಯ” ಎನ್ನುವ ಪದವು ಧಾಳಿಯಿಂದ ಸುರಕ್ಷಿತವಾಗಿರುವುದಕ್ಕೆ ತಂಗುವ ಸ್ಥಳವನ್ನು ಅಥವಾ ಪಟ್ಟಣವನ್ನು ವಿವರಿಸುತ್ತದೆ.

  • ಅನೇಕಬಾರಿ, ದುರ್ಗಗಳು ಮತ್ತು ಕೋಟೆಗಳು ಮನುಷ್ಯರು ನಿರ್ಮಿಸಿದ ಸಂರಕ್ಷಣೆಯ ಗೋಡೆಗಳಾಗಿರುತ್ತವೆ. ಅವರು ಸ್ವಾಭಾವಿಕವಾದ ಸಂರಕ್ಷಿತವಾದ ಅಡೆತಡೆಗಳ ಸ್ಥಳಗಳನ್ನು ಹೊಂದಿರುತ್ತಾರೆ, ಉದಾಹರಣೆಗೆ, ಬಂಡೆಯ ಕಮರಿಗಳು ಅಥವಾ ಎತ್ತರವಾದ ಪರ್ವತಗಳು.
  • ಜನರು ದೊಡ್ಡ ದೊಡ್ಡ ಗೋಡೆಗಳನ್ನು ಅಥವಾ ಶತ್ರುವು ಬಂದು ಕೆಡಿಸುವುದಕ್ಕಾಗದ ಇತರ ಕಟ್ಟಡಗಳನ್ನು ಕಟ್ಟುವುದರ ಮೂಲಕ ಬಲವಾದ ದುರ್ಗಗಳನ್ನು ಕಟ್ಟುತ್ತಾರೆ.
  • “ದುರ್ಗ” ಅಥವಾ “ಕೋಟೆ” ಎನ್ನುವ ಪದಗಳನ್ನು “ಭದ್ರವಾಗಿರುವ ಸುರಕ್ಷಿತ ಸ್ಥಳ” ಅಥವಾ “ಬಲವಾದ ಸಂರಕ್ಷಣೆಯ ಸ್ಥಳ” ಎಂದೂ ಅನುವಾದ ಮಾಡಬಹುದು.
  • “ಬಲವಾದ ಪಟ್ಟಣ” ಎನ್ನುವ ಮಾತನ್ನು “ಸುರಕ್ಷಿತವಾಗಿ ಸಂರಕ್ಷಿಸುವ ಪಟ್ಟಣ” ಅಥವಾ “ಬಲವಾಗಿ ಕಟ್ಟಲ್ಪಟ್ಟಿರುವ ಪಟ್ಟಣ” ಎಂದೂ ಅನುವಾದ ಮಾಡಬಹುದು.
  • ದೇವರನ್ನು ನಂಬುವ ಪ್ರತಿಯೊಬ್ಬರಿಗೆ ಆತನೇ ದುರ್ಗವು ಅಥವಾ ಕೋಟೆಯು ಆಗಿದ್ದಾನೆಂದು ಸೂಚಿಸುವುದಕ್ಕೂ ಈ ಪದವನ್ನು ಅಲಂಕಾರಿಕವಾಗಿ ಉಪಯೋಗಿಸಲಾಗಿರುತ್ತದೆ. (ನೋಡಿರಿ: ರೂಪಕಾಲಂಕಾರ
  • “ದುರ್ಗ” ಎನ್ನುವ ಪದಕ್ಕೆ ಇತರ ಅಲಂಕಾರಿಕ ಅರ್ಥವು ಭದ್ರತೆಯಲ್ಲಿ ತಪ್ಪಾಗಿ ಭರವಸೆಯನ್ನಿಟ್ಟುಕೊಂಡಿರುವ ವ್ಯಕ್ತಿಯನ್ನು ಸೂಚಿಸುತ್ತದೆ, ಉದಾಹರಣೆ, ಸುಳ್ಳು ದೇವರು ಅಥವಾ ಯೆಹೋವನಿಗೆ ಬದಲಾಗಿ ಬೇರೆ ಇನ್ನೊಂದನ್ನು ಪೂಜಿಸುವುದು. ಇದನ್ನು “ಸುಳ್ಳು ದುರ್ಗಗಳು” ಎಂದೂ ಅನುವಾದ ಮಾಡಬಹುದು.
  • ಈ ಪದವನ್ನು ಅನುವಾದ ಮಾಡುವಾಗ ಕೋಟೆಯ ಪರಿಕಲ್ಪನೆಗಿಂತ ಹೆಚ್ಚಾಗಿ ಸುರಕ್ಷಿತಯನ್ನು ಸೂಚಿಸುವ “ಆಶ್ರಯ” ಎನ್ನುವ ಪದಕ್ಕಿರುವ ಅರ್ಥಕ್ಕೆ ಬೇರೆಯಾಗಿರುವಂತೆ ನೋಡಿಕೊಳ್ಳಬೇಕು.

(ಈ ಪದಗಳನ್ನು ಸಹ ನೋಡಿರಿ : ಸುಳ್ಳು ದೇವರು, ಸುಳ್ಳು ದೇವರು, ಆಶ್ರಯ, ಯೆಹೋವ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H490, H553, H759, H1001, H1002, H1003, H1219, H1225, H2388, H4013, H4026, H4581, H4526, H4679, H4685, H4686, H4692, H4693, H4694, H4869, H5794, H5797, H5800, H6438, H6696, H6877, H7682, G3794, G3925

ದುರ್ಗತಿ

# ಪದದ ಅರ್ಥವಿವರಣೆ:

“ದುರ್ಗತಿ” ಎನ್ನುವ ಪದವು ತಪ್ಪಿಸಿಕೊಳ್ಳುವುದಕ್ಕಾಗಲಾರದ ಅಥವಾ ಬೇಡಿಕೊಳ್ಳುವುದಕ್ಕೆ ಅವಕಾಶವಿಲ್ಲದ ರೀತಿಯಲ್ಲಿ ಕೊಡುವ ಶಿಕ್ಷೆಯ ತೀರ್ಪನ್ನು ಸೂಚಿಸುತ್ತದೆ.

  • ಇಸ್ರಾಯೇಲ್ ದೇಶವನ್ನು ಬಾಬೆಲೋನಿಯ ದೇಶಕ್ಕೆ ಸೆರೆಗೆ ಹೊಯ್ದಾಗ, “ನಿನ್ನ ಗತಿ ಮುಗಿಯಿತು” ಎಂದು ಪ್ರವಾದಿಯಾದ ಯೆಹೆಜ್ಕೇಲನು ಹೇಳಿದನು.
  • ಸಂದರ್ಭಾನುಸಾರವಾಗಿ ಈ ಪದವನ್ನು “ದುರಂತ” ಅಥವಾ “ಶಿಕ್ಷೆ” ಅಥವಾ “ನಿರೀಕ್ಷೆಯಿಲ್ಲದ ನಾಶ” ಎಂದೂ ಅನುವಾದ ಮಾಡಬಹುದು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1820, H3117, H6256, H6843, H8045

ದೂರು, ದೂರುಗಳು, ದೂರು ಹೇಳುವುದು, ಆರೋಪಿ (ದೂರುಗಾರ), ಆರೋಪಿಗಳು, ಅಪಾದನೆ, ಆರೋಪಗಳು

# ನಿರ್ವಚನ:

“ದೂರು ಅಥವಾ ಆರೋಪ” ಮತ್ತು “ಅಪಾದನೆ” ಎನ್ನುವ ಪದಗಳು ಯಾರೇ ಒಬ್ಬರು ತಪ್ಪಾದ ಕಾರ್ಯಗಳನ್ನು ಮಾಡುತ್ತಿದ್ದರೆ, ಅವರ ಮೇಲೆ ನಿಂದೆಯನ್ನು ಹಾಕುವುದಕ್ಕೆ ಉಪಯೋಗಿಸುವ ಪದಗಳಾಗಿರುತ್ತವೆ. ಒಬ್ಬ ವ್ಯಕ್ತಿ ಇನ್ನೊಬ್ಬರ ಮೇಲೆ ಆರೋಪ ಮಾಡಿದರೆ ಅಥವಾ ದೂರು ಹೇಳಿದರೆ, ಆ ವ್ಯಕ್ತಿಯನ್ನು “ಆರೋಪಿ”ಯಾಗಿ ಕರೆಯುತ್ತಾರೆ.

  • ತಪ್ಪು ಮಾಡದಿರುವ ವ್ಯಕ್ತಿಯನ್ನು ಶಿಕ್ಸಿಸಿದರೆ, ಅದು ತಪ್ಪು ಆರೋಪ ಎಂಬುದಾಗಿ ಹೇಳುತ್ತಾರೆ, ಯೆಹೂದ್ಯರ ನಾಯಕರಿಂದ ಯೇಸುವಿನ ಮೇಲೆ ತಪ್ಪಾದ ಆರೋಪಗಳನ್ನು ಮಾಡಿದ್ದಾರೆ.
  • ಹೊಸ ಒಡಂಬಡಿಕೆಯ ಪ್ರಕಟನೆ ಗ್ರಂಥದಲ್ಲಿ, ಸೈತಾನ್ “ದೂರುಗಾರ” ಎಂದು ಕರೆಯಲ್ಪಟ್ಟಿದ್ದಾನೆ.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3198, H8799, G1458, G2147, G2596, G2724

ದೃಢನಿಷ್ಠೆ

# ಪದದ ಅರ್ಥವಿವರಣೆ:

“ದೃಢನಿಷ್ಠೆ” ಎನ್ನುವ ಪದವು ಬಲವಾದ ನೈತಿಕ ಸೂತ್ರಗಳಿಂದ ಮತ್ತು ನಡತೆಯಿಂದ ಯಥಾರ್ಥವಾಗಿರುವುದನ್ನು ದೃಢನಿಷ್ಠೆಯನ್ನು ಹೊಂದಿದ್ದಾನೆಂದು ಹೇಳಲ್ಪಡುತ್ತದನ್ನು ಸೂಚಿಸುತ್ತದೆ.

  • ದೃಢನಿಷ್ಠೆಯನ್ನು ಹೊಂದಿರುವುದು ಎನ್ನುವುದಕ್ಕೆ ಯಾರೂ ನೋಡದಿದ್ದರೂ ಸರಿಯಾದದ್ದನ್ನೇ ಮತ್ತು ಯರ್ಥಾರ್ಥವಾಗಿರುವುದನ್ನೇ ಮಾಡುವುದಕ್ಕೆ ಆಯ್ಕೆ ಮಾಡಿಕೊಳ್ಳುವುದು ಎಂದರ್ಥವೂ ಇದೆ.
  • ಸತ್ಯವೇದದಲ್ಲಿ ಯೋಸೇಫ ಮತ್ತು ದಾನಿಯೇಲ ಎನ್ನುವ ಕೆಲವೊಂದು ಪಾತ್ರೆಗಳು ದುಷ್ಟತನವನ್ನು ಮಾಡುವುದಕ್ಕೆ ತಿರಸ್ಕರಿಸಿ, ದೇವರಿಗೆ ವಿಧೇಯತೆ ತೋರಿಸುವುದನ್ನು ಆಯ್ಕೆಮಾಡಿಕೊಂಡಿರುವುದು ದೃಢನಿಷ್ಠೆಯನ್ನು ತೋರಿಸುತ್ತದೆ.
  • ಶ್ರೀಮಂತನಾಗಿ ಕೆಟ್ಟುಹೋಗಿ, ಯಥಾರ್ಥರಹಿತನಾಗಿರುವುದಕ್ಕಿಂತ ದೃಢನಿಷ್ಠೆಯಿಂದ ಬಡವನಾಗಿರುವುದೇ ಉತ್ತಮವೆಂದು ಜ್ಞಾನೋಕ್ತಿಗಳ ಪುಸ್ತಕವು ಹೇಳುತ್ತಿದೆ.

# ಅನುವಾದ ಸಲಹೆಗಳು:

  • ದೃಢನಿಷ್ಠೆ” ಎನ್ನುವ ಪದವನ್ನು “ಯಥಾರ್ಥ” ಅಥವಾ “ನೈತಿಕವಾದ ನೀತಿ” ಅಥವ “ಸತ್ಯವಾಗಿ ನಡೆದುಕೊಳ್ಳುವುದು” ಅಥವಾ “ನಂಬಿಗಸ್ತನಾಗಿ, ಯಥಾರ್ಥಚಿತ್ತನಾಗಿ, ಮರ್ಯಾದೆಯಿಂದ ನಡೆದುಕೊಳ್ಳುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ದಾನಿಯೇಲ, ಯೋಸೇಫ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3476, H6664, H6666, H8535, H8537, H8538, H8549, G4587

ದೃಢೀಕರಿಸು, ದೃಢೀಕರಿಸುವುದು, ದೃಢೀಕರಿಸಿದೆ, ದೃಢೀಕರಣ

# ಪದದ ಅರ್ಥವಿವರಣೆ:

“ದೃಢೀಕರಿಸು” ಮತ್ತು “ದೃಢೀಕರಣ” ಎನ್ನುವ ಪದಗಳು ಸತ್ಯವಾದದ್ದನ್ನು ಅಥವಾ ವಿಶ್ವಾಸಾರ್ಹತೆಯನ್ನು ಖಚಿತಪಡಿಸುವುದನ್ನು ಅಥವಾ ವ್ಯಾಖ್ಯಾನಿಸುವುದನ್ನು ಸೂಚಿಸುತ್ತದೆ.

  • ಹಳೇ ಒಡಂಬಡಿಕೆಯಲ್ಲಿ ದೇವರು ತನ್ನ ಜನರೊಂದಿಗೆ ಮಾಡಿದ ತನ್ನ ಒಡಂಬಡಿಕೆಯನ್ನು “ದೃಢೀಕರಿಸುತ್ತೇನೆಂದು” ತನ್ನ ಜನರಿಗೆ ಹೇಳಿದನು. ಇದಕ್ಕೆ ಅರ್ಥವೇನೆಂದರೆ ಒಡಂಬಡಿಕೆಯಲ್ಲಿ ಆತನು ಮಾಡಿದ ವಾಗ್ಧಾನಗಳೆಲ್ಲವನ್ನು ಆತನು ನೆರವೇರಿಸುವನೆಂದು ಹೇಳುತ್ತಿದ್ದಾನೆ.
  • ಅರಸನು “ದೃಢೀಕರಿಸಲ್ಪಟ್ಟಿದ್ದಾನೆ” ಎನ್ನುವ ಈ ಮಾತಿಗೆ ಇವನು ಅರಸನಾಗಿರುವುದಕ್ಕೆ ತೆಗೆದುಕೊಂಡ ನಿರ್ಣಯವು ಜನರಿಂದ ಅಂಗೀಕರಿಸಲ್ಪಟ್ಟಿದೆ ಅಥವಾ ಬೆಂಬಲ ಕೊಡಲಾಗಿದೆ ಎಂದರ್ಥ.
  • ಇತರರು ಬರೆದಿರುವುದನ್ನು ದೃಢೀಕರಿಸುವುದೆಂದರೆ ಬರೆದಿರುವ ಆ ಬರವಣಿಗೆ ಸತ್ಯವೆಂದು ಹೇಳುವುದು ಎಂದರ್ಥ.
  • ಸುವಾರ್ತೆಯನ್ನು “ದೃಢೀಕರಿಸುವುದು” ಎಂದರೆ ಸತ್ಯವಾದ ಯೇಸುಕ್ರಿಸ್ತನ ಸುವಾರ್ತೆಯನ್ನು ಜನರಿಗೆ ಬೋಧಿಸುವುದು ಎಂದರ್ಥ.
  • “ದೃಢೀಕರಣ”ವಾಗಿ ಆಣೆಯನ್ನಿಡುವುದು ಎನ್ನುವುದಕ್ಕೆ ಸತ್ಯವೆಂದು ಅಥವಾ ವಿಶ್ವಾಸಾರ್ಹವೆಂದು ಪ್ರತಿಜ್ಞೆ ಮಾಡುವುದು ಅಥವಾ ವ್ಯಾಖ್ಯಾನಿಸುವುದು ಎಂದರ್ಥ.
  • “ನಿಶ್ಚಯತೆ” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ “ಸತ್ಯವೆಂದು ವ್ಯಾಖ್ಯಾನಿಸು” ಅಥವಾ “ವಿಶ್ವಾಸಾರ್ಹವೆಂದು ನಿರೂಪಿಸು” ಅಥವಾ “ಅಂಗೀಕರಿಸು” ಅಥವಾ “ಖಚಿತಪಡಿಸು” ಅಥವಾ “ವಾಗ್ಧಾನ ಮಾಡು” ಎಂದು ಸಂದರ್ಭಕ್ಕೆ ತಕ್ಕಂತೆ ಉಪಯೋಗಿಸಬಹುದು.

(ಈ ಪದಗಳನ್ನು ಸಹ ನೋಡಿರಿ : ಒಡಂಬಡಿಕೆ, ಆಣೆ, ಭರವಸೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H553, H559, H1396, H3045, H3559, H4390, H4672, H5414, H5975, H6213, H6965, G950, G951, G1991, G2964, G3315, G4300, G4972

ದೇವದಾರು, ದೇವದಾರು ವೃಕ್ಷಗಳು, ದೇವದಾರು ಕಟ್ಟಿಗೆ

# ಪದದ ಅರ್ಥವಿವರಣೆ:

“ದೇವದಾರು” ಎನ್ನುವ ಪದವು ಸಹಜವಾಗಿ ಕೆಂಪು-ಕಂದು ಮರದ ಕಟ್ಟಿಗೆಯಾದ ದೊಡ್ಡ ಭದ್ರದಾರು ಮರವನ್ನು ಸೂಚಿಸುತ್ತದೆ. ಇತರ ಭದ್ರದಾರುಗಳಂತೆ ಇದಕ್ಕೆ ಕೋನಾಕಾರದಲ್ಲಿರುವ ಸೂಜಿ ತರಹದ ಎಲೆಗಳು ಇರುತ್ತವೆ.

  • ಹಳೇ ಒಡಂಬಡಿಕೆಯಲ್ಲಿ ಅನೇಕಬಾರಿ ದೇವದಾರು ವೃಕ್ಷಗಳನ್ನು ಲೆಬನೋನ್.ದೊಂದಿಗೆ ಜೋಡಿಸಿ ಹೇಳಲ್ಪಟ್ಟಿರುತ್ತವೆ.
  • ದೇವದಾರು ಕಟ್ಟಿಗೆಯು ಯೆರೂಸಲೇಮಿನ ದೇವಾಲಯವನ್ನು ನಿರ್ಮಿಸುವದರಲ್ಲಿ ಉಪಯೋಗಿಸಲಾಗಿದೆ.
  • ಇದು ಹೋಮಕ್ಕೆ ಮತ್ತು ಶುದ್ಧೀಕರಣ ಮಾಡುವ ಕಾಣಿಕೆಗಳಿಗೆ ಕೂಡ ಉಪಯೋಗಿಸಲ್ಪಟ್ಟಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಭದ್ರದಾರು, ಪವಿತ್ರ, ಹೋಮ, ದೇವಾಲಯ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H730

ದೇಶ, ದೇಶಗಳು

# ಪದದ ಅರ್ಥವಿವರಣೆ:

ದೇಶ ಎನ್ನುವುದು ರೂಪಿಸಲ್ಪಟ್ಟ ಯಾವುದೇ ಪ್ರಭುತ್ವದಿಂದ ಆಳ್ವಿಕೆ ಮಾಡಲ್ಪಡುವ ದೊಡ್ಡ ಜನರ ಗುಂಪು ಎಂದರ್ಥ. ದೇಶದ ಜನರು ಅನೇಕಸಲ ಒಂದೇ ಪೂರ್ವಜರರನ್ನು ಹೊಂದಿರುತ್ತದೆ ಮತ್ತು ಒಂದೇ ರೀತಿಯ ಜನಾಂಗೀಯತೆಯನ್ನು ಹಂಚಿಕೊಳ್ಳುವುದಾಗಿರುತ್ತದೆ.

  • “ದೇಶ” ಎನ್ನುವುದಕ್ಕೆ ಸಹಜವಾಗಿ ಚೆನ್ನಾಗಿ ವ್ಯಾಖ್ಯಾನಿಸಲ್ಪಟ್ಟ ಸಂಸ್ಕೃತಿಯನ್ನು ಮತ್ತು ಪ್ರಾದೇಶಿಕ ಗಡಿಗಳನ್ನು ಹೊಂದಿರುತ್ತದೆ.
  • ಸತ್ಯವೇದದಲ್ಲಿ “ದೇಶ” ಎನ್ನುವುದು ಒಂದು ನಿರ್ಧಿಷ್ಟವಾದ ದೇಶವನ್ನು ಸೂಚಿಸುತ್ತದೆ (ಉದಾಹರಣೆಗೆ, ಐಗುಪ್ತ ಅಥವಾ ಇಥಿಯೋಪ್ಯ), ಆದರೆ ಇದು ಅತೀ ಸಾಧಾರಣವಾಗಿ ಜನರ ಗುಂಪನ್ನು ಸೂಚಿಸುತ್ತದೆ ಮತ್ತು ವಿಶೇಷವಾಗಿ ಇದನ್ನು ಬಹುವಚನ ಪದವನ್ನಾಗಿ ಉಪಯೋಗಿಸಿದಾಗ ಜನರ ಗುಂಪನ್ನು ಸೂಚಿಸುತ್ತದೆ. ಸಂದರ್ಭವನ್ನು ಪರಿಶೀಲನೆ ಮಾಡುವುದು ತುಂಬಾ ಪ್ರಾಮುಖ್ಯ.
  • ಸತ್ಯವೇದದಲ್ಲಿರುವ ದೇಶಗಳಲ್ಲಿ (ಜನಾಂಗಗಳಲ್ಲಿ) ಇಸ್ರಾಯೇಲ್ಯರು, ಫಿಲಿಷ್ಟಿಯನರು, ಅಶ್ಯೂರಿಯರು, ಬಾಬೆಲೋನಿಯರು, ಕಾನಾನ್ಯರು, ರೋಮಾದವರು, ಗ್ರೀಕರು ಮತ್ತು ಅನೇಕ ದೇಶದವರೂ ಇದ್ದಿರುತ್ತಾರೆ.
  • ರೆಬೆಕ್ಕಳಿಗೆ ಹುಟ್ಟದ ಗಂಡು ಮಕ್ಕಳು “ಜನಾಂಗಗಳಾಗುವರು” ಮತ್ತು ಅವರು ಒಬ್ಬರಿಗೊಬ್ಬರು ಹೋರಾಟ ಮಾಡಿಕೊಳ್ಳುವರು ಎಂದು ದೇವರು ರೆಬೆಕ್ಕಳಿಗೆ ಹೇಳಿದಂತೆಯೇ ಕೆಲವೊಂದುಬಾರಿ “ದೇಶ” ಎನ್ನುವ ಪದವನ್ನು ಒಂದು ನಿರ್ಧಿಷ್ಠವಾದ ಜನರ ಗುಂಪಿನ ಪೂರ್ವಜನನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಉಪಯೋಗಿಸುತ್ತಾರೆ, ಇದನ್ನು “ಎರಡು ದೇಶದ (ಜನಾಂಗಗಳ) ವ್ಯವಸ್ಥಾಪಕರು” ಅಥವಾ “ಎರಡು ಜನರ ಗುಂಪುಗಳ ಪೂರ್ವಜರು” ಎಂದೂ ಅನುವಾದ ಮಾಡಬಹುದು.
  • “ದೇಶ” ಎನ್ನುವ ಪದಕ್ಕೆ ಅನುವಾದವು ಕೆಲವೊಂದುಬಾರಿ “ಅನ್ಯರು” ಅಥವಾ ಯೆಹೋವನನ್ನು ಆರಾಧನೆ ಮಾಡದ ಜನರು ಎಂಬುದಾಗಿ ಉಪಯೋಗಿಸಲ್ಪಟ್ಟಿರುತ್ತದೆ. ಸಹಜವಾಗಿ ಸಂದರ್ಭವು ಸ್ಪಷ್ಟವಾದ ಅರ್ಥವನ್ನು ಕೊಡುತ್ತದೆ.

# ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ, “ದೇಶ” ಎನ್ನುವ ಪದವನ್ನು “ಜನರ ಗುಂಪು” ಅಥವಾ “ಜನರು” ಅಥವಾ “ಪ್ರದೇಶ” ಎಂದೂ ಅನುವಾದ ಮಾಡಬಹುದು.
  • ಇಲ್ಲಿ ಕೊಟ್ಟಿರುವ ಪದಗಳಿಗೆ ವಿಭಿನ್ನವಾಗಿ ಅನುವಾದ ಮಾಡುವ ಭಾಷೆಯಲ್ಲಿ “ದೇಶ” ಎನ್ನುವದಕ್ಕೆ ಪದವಿದ್ದಲ್ಲಿ, ಆ ಪದವನ್ನೇ ಸತ್ಯವೇದದಲ್ಲಿ ಕಾಣಿಸಿಕೊಳ್ಳುವ ಪ್ರತಿಯೊಂದು ಸ್ಥಳದಲ್ಲಿ ಆ ಅಸಂದರ್ಭಕ್ಕೆ ತಕ್ಕಂತೆ ಸ್ವಾಭಾವಿಕವಾಗಿ ಖಚಿತವಾಗಿ ಇರುವವರೆಗೂ ಇದನ್ನು ಬಳಕೆ ಮಾಡಬಹುದು,
  • “ದೇಶಗಳು” ಎನ್ನುವ ಬಹುವಚನ ಪದವನ್ನು “ಜನರ ಗುಂಪುಗಳು” ಎಂದೂ ಅನುವಾದ ಮಾಡಬಹುದು.
  • ಕೆಲವೊಂದು ನಿರ್ಧಿಷ್ಟವಾದ ಸಂದರ್ಭಗಳಲ್ಲಿ ಈ ಪದವನ್ನು “ಅನ್ಯರು” ಅಥವಾ “ಯೆಹೂದ್ಯರಲ್ಲದವರು” ಎಂದೂ ಅನುವಾದ ಮಾಡಬಹುದು

(ಈ ಪದಗಳನ್ನು ಸಹ ನೋಡಿರಿ : ಅಶ್ಯೂರ್, ಬಾಬೆಲೋನಿಯ, ಕಾನಾನ್, ಅನ್ಯ, ಗ್ರೀಕ್, ಜನರ ಗುಂಪು, ಫಿಲಿಷ್ಟಿಯನ್ನರು, ರೋಮ್)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H249, H523, H524, H776, H1471, H3816, H4940, H5971, G246, G1074, G1085, G1484

ದ್ರಾಕ್ಷಾರಸ ಗಾಣ

# ಪದದ ಅರ್ಥವಿವರಣೆ:

ಸತ್ಯವೇದದ ಕಾಲದಲ್ಲಿ “ದ್ರಾಕ್ಷಾರಸ ಗಾಣ” ಎನ್ನುವ ಮಾತು ಒಂದು ದೊಡ್ಡ ಪಾತ್ರೆಯನ್ನು ಸೂಚಿಸುತ್ತದೆ ಅಥವಾ ದ್ರಾಕ್ಷಾರಸವನ್ನು ಮಾಡುವುದಕ್ಕೆ ದ್ರಾಕ್ಷಿಗಳಿಂದ ರಸವನ್ನು ಹೊರ ತೆಗೆಯುವ ಸ್ಥಳವನ್ನು ಸೂಚಿಸುತ್ತದೆ.

  • ಇಸ್ರಾಯೇಲಿನಲ್ಲಿ ದ್ರಾಕ್ಷಾರಸ ಗಾಣಗಳು ಸಾಧಾರಣವಾಗಿ ದೊಡ್ಡದಾಗಿರುತ್ತವೆ, ಬಲವಾದ ಬಂಡೆಗಳನ್ನು ಅಗೆದು ದೊಡ್ಡ ವಿಸ್ತಾರವಾದ ಬೋಗುಣಿಗಳಾಗಿರುತ್ತವೆ. ದ್ರಾಕ್ಷಿಗಳ ಗೊಂಚಲುಗಳನ್ನು ಆ ಗುಂಡಿಯ ಕೆಳಭಾಗದಲ್ಲಿ ಇಟ್ಟಿರುತ್ತಾರೆ ಮತ್ತು ಜನರು ದ್ರಾಕ್ಷಾರಸವನ್ನು ತೆಗೆಯುವುದಕ್ಕೆ ತಮ್ಮ ಕಾಲುಗಳ ಮೂಲಕ ಅವುಗಳನ್ನು ತುಳಿಯುತ್ತಾರೆ.
  • ಸಾಧಾರಣವಾಗಿ ದ್ರಾಕ್ಷಾರಸ ಗಾಣವು ಎರಡು ಮಟ್ಟಗಳು ಹೊಂದಿರುತ್ತವೆ, ಮೇಲ್ಮಟ್ಟದಲ್ಲಿ ದ್ರಾಕ್ಷಿಗಳನ್ನು ತುಳಿಯುವುದರ ಮೂಲಕ ರಸವು ಕೆಳಮಟ್ಟಕ್ಕೆ ಇಳಿದು ಹೋಗಿ ಅಲ್ಲಿ ಸಂಗ್ರಹವಾಗಿರುತ್ತದೆ.
  • “ದ್ರಾಕ್ಷಾರಸ ಗಾಣ” ಎನ್ನುವ ಮಾತು ದುಷ್ಟ ಜನರ ಮೇಲೆ ದೇವರ ಕ್ರೋಧವು ಸುರಿಸಲ್ಪಡುವ ಸನ್ನಿವೇಶವನ್ನು ಸೂಚಿಸುವುದಕ್ಕೆ ಸತ್ಯವೇದದಲ್ಲಿ ಅಲಂಕಾರಿಕವಾಗಿ ಉಪಯೋಗಿಸಲ್ಪಟ್ಟಿರುತ್ತದೆ. (ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ದ್ರಾಕ್ಷಿ, ಕ್ರೋಧ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1660, H3342, H6333, G3025, G5276

ದ್ರಾಕ್ಷಿ, ದ್ರಾಕ್ಷಿಗಳು, ದ್ರಾಕ್ಷಿಬಳ್ಳಿ

# ಪದದ ಅರ್ಥವಿವರಣೆ:

ದ್ರಾಕ್ಷಿ ಎನ್ನುವುದು ಚಿಕ್ಕದಾಗಿದ್ದು, ವೃತ್ತಾಕಾರದಲ್ಲಿ ನುಣುಪಾದ ತೊಗಲಿರುವ ಫಲ, ಇದು ಬಳ್ಳಿಗಳಿಗೆ ಗೊನೆಗಳಾಗಿ ಬೆಳೆಯುತ್ತದೆ. ದ್ರಾಕ್ಷಿಗಳ ರಸವನ್ನು ಮದ್ಯಪಾನವನ್ನು ಮಾಡುವದರಲ್ಲಿ ಉಪಯೋಗಿಸುತ್ತಾರೆ.

  • ಅನೇಕ ವಿವಿಧವಾದ ಬಣ್ಣಗಳಿರುವ ದ್ರಾಕ್ಷಿಗಳು ಇರುತ್ತವೆ, ಅದರಲ್ಲಿ ಹಸಿರು, ನೇರಳೆ ಬಣ್ಣ, ಅಥವಾ ಕೆಂಪು ದ್ರಾಕ್ಷಿಗಳು.
  • ಒಂದೊಂದು ದ್ರಾಕ್ಷಿ ಅಳತೆಯಲ್ಲಿ ಸುಮಾರು ಒಂದರಿಂದ ಮೂರು ಸೆಂಟಿಮೀಟರ್ ಉದ್ದ ಇರುತ್ತವೆ.
  • ಜನರು ಈ ದ್ರಾಕ್ಷಿಗಳನ್ನು ಬೆಳೆಸುವ ತೋಟಗಳನ್ನು ದ್ರಾಕ್ಷಿತೋಟಗಳು ಎಂದು ಕರೆಯುತ್ತಾರೆ. ಈ ತೋಟಗಳು ಅತೀ ಉದ್ದವಾದ ಬಳ್ಳಿಗಳನ್ನು ಒಳಗೊಂಡಿರುತ್ತವೆ.
  • ಸತ್ಯವೇದದ ಕಾಲಗಳಲ್ಲಿ ದ್ರಾಕ್ಷಿಗಳು ತುಂಬಾ ಮುಖ್ಯವಾದ ಆಹಾರವಾಗಿದ್ದವು ಮತ್ತು ದ್ರಾಕ್ಷಿತೋಟಗಳಿದ್ದರೆ ಅವು ಶ್ರೀಮಂತಿಕೆಗೆ ಗುರುತಾಗಿದ್ದಿದ್ದವು.
  • ದ್ರಾಕ್ಷಿಗಳು ಕೊಳೆತು ಹೋಗದಂತೆ ಅವುಗಳನ್ನು ಒಣಗಿಸುತ್ತಿದ್ದರು. ಒಣ ದ್ರಾಕ್ಷಿಯನ್ನು ಆಂಗ್ಲ ಭಾಷೆಯಲ್ಲಿ “ರೈಜಿನ್ಸ್” ಎಂದು ಕರೆಯುತ್ತಾರೆ, ಅವುಗಳನ್ನು ರೈಜಿನ ಕೇಕ್.ಗಳನ್ನು ಮಾಡುವುದಕ್ಕೆ ಬಳಸುತ್ತಾರೆ.
  • ದೇವರ ರಾಜ್ಯದ ಕುರಿತಾಗಿ ತನ್ನ ಶಿಷ್ಯರಿಗೆ ಬೋಧಿಸಲು ಯೇಸು ದ್ರಾಕ್ಷಿ ತೋಟದ ಬಗ್ಗೆ ಒಂದು ಸಾಮ್ಯವನ್ನು ಹೇಳಿದರು.

(ಈ ಪದಗಳನ್ನು ಸಹ ನೋಡಿರಿ : ಬಳ್ಳಿ, ದ್ರಾಕ್ಷಿಬಳ್ಳಿ, ಮದ್ಯಪಾನ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H811, H891, H1154, H1155, H1210, H2490, H3196, H5563, H5955, H6025, H6528, G288, G4718

ದ್ರಾಕ್ಷಿತೋಟ, ದ್ರಾಕ್ಷಿತೋಟಗಳು

# ಪದದ ಅರ್ಥವಿವರಣೆ:

ದ್ರಾಕ್ಷಿತೋಟ ಎನ್ನುವುದು ದ್ರಾಕ್ಷಿಬಳ್ಳಿಗಳನ್ನು ಬೆಳೆಸುವ ಮತ್ತು ದ್ರಾಕ್ಷಿಗಳನ್ನು ಬೆಳೆಸುವ ದೊಡ್ಡ ತೋಟ ಎಂದರ್ಥ.

  • ದ್ರಾಕ್ಷಿತೋಟಕ್ಕೆ ಹೆಚ್ಚಿನ ಮಟ್ಟಕ್ಕೆ ಅದರ ಸುತ್ತಲು ಗೋಡೆಯನ್ನು ಕಟ್ಟಿರುತ್ತಾರೆ, ಯಾಕಂದರೆ ಆ ತೋಟದಲ್ಲಿ ಬೆಳೆಯುವ ಫಲಗಳನ್ನು ಪ್ರಾಣಿಗಳಿಂದ ಮತ್ತು ಕಳ್ಳರಿಂದ ಕಾಪಾಡುವುದಕ್ಕೆ ಕಟ್ಟುತ್ತಿದ್ದರು.
  • ದೇವರು ಇಸ್ರಾಯೇಲ್ಯರನ್ನು ಒಳ್ಳೇಯ ಫಲಗಳನ್ನು ಕೊಡದ ದ್ರಾಕ್ಷಿತೋಟಕ್ಕೆ ಹೋಲಿಸಿ ಹೇಳಿದ್ದಾರೆ. (ನೋಡಿರಿ: ರೂಪಕಾಲಂಕಾರ
  • ದ್ರಾಕ್ಷಿತೋಟ ಎನ್ನುವ ಪದವನ್ನು “ದ್ರಾಕ್ಷಿಬಳ್ಳಿಯ ತೋಟ” ಅಥವಾ “ದ್ರಾಕ್ಷಿ ಮರಗಳ ತೋಪು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ದ್ರಾಕ್ಷಿ, ಇಸ್ರಾಯೇಲ್, ಬಳ್ಳಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H64, H1612, H3657, H3661, H3754, H3755, H8284, G289, G290

ದ್ರೋಹ, ದ್ರೋಹ ಮಾಡು, ದ್ರೋಹ ಮಾಡಿದನು, ದ್ರೋಹ ಮಾಡುತ್ತಿದ್ದಾನೆ, ದ್ರೋಹಿ, ದ್ರೋಹಿಗಳು

# ಪದದ ಅರ್ಥವಿವರಣೆ

ಯಾರನ್ನಾದರು ಮೋಸಮಾಡಿ ಮತ್ತು ನೋಯಿಸಿದರೆ ಅದು “ದ್ರೋಹ” ಎಂದು ಅರ್ಥವಾಗಿದೆ. ತನ್ನನ್ನು ನಂಬಿದ್ದ ತನ್ನ ಸ್ನೇಹಿತನನ್ನು ಮೋಸ ಮಾಡುವವನು “ದ್ರೋಹಿ” ಎಂದು ಕರೆಯಲ್ಪಡುತ್ತಾನೆ.

  • ಯೂದ ಎಂಬವನು “ದ್ರೋಹಿ” ಯಾಕಂದರೆ ಯೇಸುವನ್ನು ಹೇಗೆ ಹಿಡುದುಕೊಳ್ಳಬಹುದೆಂದು ಯಹೂದಿಯ ನಾಯಕರಿಗೆ ಹೇಳಿದನು.
  • ಯೂದನು ಮಾಡಿದ ದ್ರೋಹ ಬಹಳ ದುಷ್ಟ ಕಾರ್ಯವಾಗಿದೆ ಯಾಕಂದರೆ ಅವನು ಯೇಸುವಿನ ಶಿಷ್ಯನಾಗಿದ್ದು, ಯೇಸುವನ್ನು ಅನ್ಯಾಯವಾದ ಮರಣಕ್ಕೆ ಒಪ್ಪಿಸುವಂತೆ ಯಹೂದಿಯ ನಾಯಕರಿಗೆ ಮಾಹಿತಿಯನ್ನು ನೀಡಿದನು.

# ಅನುವಾದ ಸಲಹೆಗಳು:

  • ಸಂಧರ್ಭಾನುಸಾರವಾಗಿ, “ದ್ರೋಹ” ಎನ್ನುವ ಪದವನ್ನು “ಮೋಸ ಮಾಡುವುದು ಮತ್ತು ಹಾನಿಕಾರಕವಾಗಿರುವುದು” ಅಥವಾ “ಶತ್ರುಗಳೊಂದಿಗೆ ಕೈ ಜೋಡಿಸುವುದು” ಅಥವಾ “ವಿಶ್ವಾಸಘಾತುಕವಾಗಿ ನೋಡುವುದು” ಎಂದು ಅನುವಾದ ಮಾಡಬಹುದು.
  • “ದ್ರೋಹಿ” ಎನ್ನುವ ಪದವನ್ನು “ದ್ರೋಹ ಮಾಡುವ ವ್ಯಕ್ತಿ” ಅಥವಾ “ಹೇಳೋದೊಂದು ಮಾಡೋದೊಂದು ಎನ್ನುವಂತೆ ಇರುವ ವ್ಯಕ್ತಿ” ಅಥವಾ “ವಂಚಕ” ಎಂದು ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಇಸ್ಕರಿಯೋತ ಯೂದ, ಯಹೂದಿಯ ನಾಯಕರು, ಅಪೊಸ್ತಲರು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಕೆಲವು ಉದಾಹರಣೆಗಳು :

  • 21:11 ಮೆಸ್ಸಿಯನನ್ನು ಕೊಲ್ಲುವವರು ಅವನ ಬಟ್ಟೆಗಳಿಗಾಗಿ ಚೀಟಿಗಳನ್ನು ಹಾಕುವರೆಂದು ತನ್ನ ಸ್ನೇಹಿತನೇ ಆತನಿಗೆ ದ್ರೋಹ ಮಾಡುವನೆಂದು ಬೇರೆ ಪ್ರವಾದಿಗಳು ಪ್ರವಾದಿಸಿದರು. ಮೆಸ್ಸಿಯನಿಗೆ ದ್ರೋಹ ಮಾಡಲು ಆತನ ಸ್ನೇಹಿತನು ಮೂವತ್ತು ಬೆಳ್ಳಿ ನಾಣ್ಯಗಳನ್ನು ಸ್ವೀಕರಿಸುವನೆಂದು ಪ್ರವಾದಿಯಾದ ಜೆಕರ್ಯ ಮುಂಚಿತವಾಗಿಯೇ ಹೇಳಿದನು.
  • 38:02 ಯೇಸು ಮತ್ತು ತನ್ನ ಶಿಷ್ಯರು ಯೆರೂಸಲೇಮಿಗೆ ಬಂದಾಗ,ಯಹೂದಿಯ ನಾಯಕರಿಗೆ ಆತನನ್ನು ಒಪ್ಪಿಸಲು ಯೂದ ಹಣವನ್ನು ಸ್ವಿಕರಿಸಿ ಯೇಸುವಿಗೆ ದ್ರೋಹ ಮಾಡಿದನು.
  • 38:03 ಮಹಾ ಯಾಜಕನ ನಾಯಕತ್ವದಲ್ಲಿ, ಯೇಸುವಿಗೆ ದ್ರೋಹ ಮಾಡಲು ಮೂವತ್ತು ಬೆಳ್ಳಿ ನಾಣ್ಯಗಳನ್ನು ಯಹೂದಿ ನಾಯಕರು ಯೂದನಿಗೆ ಕೊಟ್ಟರು.
  • 38:06 ಆಗ “ನಿಮ್ಮಲ್ಲಿ ಒಬ್ಬನು ನನಗೆ ದ್ರೋಹ ಮಾಡುವನು” ಎಂದು ಯೇಸು ತನ್ನ ಶಿಷ್ಯರೊಂದಿಗೆ ಹೇಳಿದನು. … “ನಾನು ಈ ರೊಟ್ಟಿಯನ್ನು ಯಾರಿಗೆ ಕೊಡುವೇನೋ ಅವನೇ ನನಗೆ ದ್ರೋಹ ಮಾಡುವನೆಂದು” ಯೇಸು ಹೇಳಿದನು.
  • 38:13 ಮೂರನೇ ಬಾರಿ ಆತನು ಹಿಂತುರುಗಿ ಬಂದಾಗ, “ಎಚ್ಚರವಾಗಿ! ನನಗೆ ದ್ರೋಹ ಮಾಡುವವನು ಇಲ್ಲಿದ್ದಾನೆ” ಎಂದು ಯೇಸು ಹೇಳಿದನು.
  • 38:14 ಆಗ ಯೇಸು “ಯೂದ, ನಿನ್ನ ಮುದ್ದಿನಿಂದ ನನಗೆ ದ್ರೋಹ ಮಾಡುವೆಯಾ?” ಎಂದು ಯೇಸು ಹೇಳಿದನು.
  • 39:08 ಸ್ವಲ್ಪ ಸಮಯದಲ್ಲೇ, ಯಹೂದಿಯ ನಾಯಕರು ಯೇಸುವಿಗೆ ಮರಣ ಶಿಕ್ಷೆಯನ್ನು ನಿರ್ಣಯಿಸಿದ್ದಾರೆಂದು, ದ್ರೋಹಿಯಾದ ಯೂದ ತಿಳಿದುಕೊಂಡನು. ಅವನು ತುಂಬ ದುಃಖ ಕ್ರಾಂತನಾಗಿ ದೂರ ಹೋಗಿ ತನ್ನನ್ನು ತಾನೇ ಕೊಂದುಕೊಂಡನು.

# ಪದ ಡೇಟಾ:

  • Strong's: H7411, G3860, G4273

ಧಾನ್ಯ ನೈವೇದ್ಯ, ಧಾನ್ಯ ನೈವೇದ್ಯಗಳು

# ಪದದ ಅರ್ಥವಿವರಣೆ

ಯೆಹೋವನಿಗೆ ಗೋದಿ ಅಥವಾ ಜವೆಗೋದಿಯ ಹಿಟ್ಟನ್ನು ಅರ್ಪಿಸುವ ನೈವೇದ್ಯಯನ್ನು ಧಾನ್ಯ ನೈವೇದ್ಯ ಎನ್ನುತ್ತಾರೆ, ಅನೇಕಸಲ ಇದನ್ನು ದಹನ ಬಲಿಯ ನಂತರ ಕೊಡುತ್ತಿದ್ದರು.

  • ಧಾನ್ಯ ನೈವೇದ್ಯದಲ್ಲಿ ಕೊಡುವ ಧಾನ್ಯವನ್ನು ನುಣ್ಣಗೆ ಹಿಟ್ಟಾಡಿಸ ಬೇಕು. ಕೆಲವೊಮ್ಮೆ ಅದನ್ನು ಬೇಯಿಸಿ ಅರ್ಪಿಸುತ್ತಿದ್ದರು, ಆದರೆ ಬೇರೆ ಸಮಯಗಳಲ್ಲಿ ಅದನ್ನು ಹಾಗೆ ಬಿಡುತ್ತಿದ್ದರು.
  • ಧಾನ್ಯದ ಹಿಟ್ಟಿಗೆ ಎಣ್ಣೆ ಮತ್ತು ಉಪ್ಪು ಸೇರಿಸುತ್ತಿದ್ದರು, ಆದರೆ ಅದರಲ್ಲಿ ಹುಳಿಪದಾರ್ಥವನ್ನು ಅಥವಾ ಜೇನುತುಪ್ಪವನ್ನು ಸೇರಿಸಬಾರದು.
  • ಧಾನ್ಯ ನೈವೇದ್ಯದ ಒಂದು ಭಾಗವನ್ನು ಸುಡುತ್ತಿದ್ದರು ಮತ್ತು ಇನ್ನೊಂದು ಭಾಗವನ್ನು ತಿನ್ನುತ್ತಿದ್ದರು.

(ಈ ಪದಗಳನ್ನು ಸಹ ನೋಡಿರಿ : ದಹನ ಬಲಿ, ಅಪರಾದ ಪರಿಹಾರಾರ್ಥ ಬಲಿ, ಬಲಿ, ಪಾಪ ಪರಿಹಾರರ್ಥಕ ಬಲಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H4503, H8641

ಧಾನ್ಯ, ಧಾನ್ಯಗಳು, ಹೊಲಗಳು

# ಪದದ ಅರ್ಥವಿವರಣೆ

“ಧಾನ್ಯ” ಎನ್ನುವ ಪದವು ಗೋದಿ, ಜವೆಗೋದಿ, ಕಾಳು, ನವಣೆ ಅಥವಾ ಅಕ್ಕಿ ಎಂಬಂತ ಆಹಾರ ಪದಾರ್ಥಗಳನ್ನು ಸೂಚಿಸುತ್ತದೆ. ಅದು ಗಿಡವನ್ನು ಸಹ ಸುಚಿಸಬಹುದು.

  • ಸತ್ಯವೇದದಲ್ಲಿ, ಗೋದಿ ಮತ್ತು ಜವೆಗೋದಿ ಪ್ರಾಮುಖ್ಯವಾದ ಧಾನ್ಯಗಳೆಂದು ಹೇಳುತ್ತಿದೆ.
  • ಗಿಡದ ಮೇಲ್ಭಾಗದಲ್ಲಿರುವ ತೆಲೆಯಲ್ಲಿರುತ್ತದೆ ಅದರಲ್ಲಿ ಧಾನ್ಯವಿರುತ್ತದೆ.
  • ಕೆಲವೊಂದು ಆಂಗ್ಲ ಹಳೆ ಸತ್ಯವೇದ ಆವೃತ್ತಿಗಳಲ್ಲಿ “ಕಾರ್ನ್” ಎನ್ನುವ ಪದವು ಎಲ್ಲಾ ಧಾನ್ಯಗಳನ್ನು ಸೂಚಿಸುತ್ತಿತ್ತು. ಹೇಗಿದ್ದರೂ ಆಧುನಿಕ ಅಂಗ್ಲ ಭಾಷೆಯಲ್ಲಿ “ಕಾರ್ನ್” ಎನ್ನುವ ಪದವು ಒಂದೇ ವಿಧವಾದ ಕಾಳನ್ನು ಸೂಚಿಸುತ್ತಿದೆ.

(ಈ ಪದಗಳನ್ನು ಸಹ ನೋಡಿರಿ : ತೆಲೆ, ಗೋದಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1250, H1430, H1715, H2233, H2591, H3759, H3899, H7054, H7383, H7641, H7668, G248, G2590, G3450, G4621, G4719

ಧೂಪ ದ್ರವ್ಯ, ಧೂಪ ದ್ರವ್ಯಗಳು

# ಪದದ ಅರ್ಥವಿವರಣೆ:

“ಧೂಪದ್ರವ್ಯ” ಎನ್ನುವ ಪದವು ಒಂದು ಸುವಾಸನೆ ಬರುವ ಧೂಪವನ್ನುಂಟು ಮಾಡುವುದಕ್ಕೆ ಉರಿಸುವ ಪರಿಮಳ ದ್ರವ್ಯಗಳ ಮಿಶ್ರಣವನ್ನು ಸೂಚಿಸುತ್ತದೆ.

  • ದೇವರಿಗೆ ಅರ್ಪಣೆಯನ್ನಾಗಿ ಧೂಪವನ್ನು ಹಾಕಬೇಕೆಂದು ಆತನು ಇಸ್ರಾಯೇಲ್ಯರಿಗೆ ಹೇಳಿದನು.
  • ದೇವರು ಹೇಳಿದ ಪ್ರಕಾರವೇ ಐದು ವಿಶೇಷವಾದ ಧೂಪ ದ್ರವ್ಯಗಳನ್ನು ಒಂದೇ ಅಳತೆಯಲ್ಲಿ ತೆಗೆದುಕೊಂಡು, ಅವುಗಳ ಮಿಶ್ರಣದಿಂದ ಧೂಪದ್ರವ್ಯವನು ಮಾಡಬೇಕಾಗಿರುತ್ತದೆ. ಇದು ಪರಿಶುದ್ಧವಾದ ಧೂಪದ್ರವ್ಯವಾಗಿರುತ್ತದೆ, ಅದ್ದರಿಂದ ಅವರು ಇದನ್ನು ಬೇರೆ ಯಾವುದೇ ಉದ್ದೇಶಕ್ಕೆ ಉಪಯೋಗಿಸುವುದಕ್ಕೆ ಅನುಮತಿ ಹೊಂದಿರುವುದಿಲ್ಲ.
  • “ಧೂಪದ್ರವ್ಯದ ಯಜ್ಞವೇದಿ” ಎನ್ನುವುದು ಒಂದು ವಿಶೇಷವಾದ ಯಜ್ಞವೇದಿಯಾಗಿರುತ್ತದೆ, ಇದನ್ನು ಕೇವಲ ಧೂಪವನ್ನು ಹಾಕುವುದಕ್ಕೆ ಮಾತ್ರ ಉಪಯೋಗಿಸಲಾಗಿರುತ್ತದೆ.
  • ಈ ಧೂಪವನ್ನು ಒಂದು ದಿನಕ್ಕೆ ನಾಲ್ಕುಸಲ ಅರ್ಪಿಸುತ್ತಿದ್ದರು, ಅದೂ ಪ್ರಾರ್ಥನೆ ಗಳಿಗೆಯಲ್ಲಿ ಮಾತ್ರ ಮಾಡುತ್ತಿದ್ದರು. ದಹನ ಬಲಿಯನ್ನು ಅರ್ಪಿಸುವ ಪ್ರತಿ ಸಂದರ್ಭದಲ್ಲಿಯೂ ಇದನ್ನು ಅರ್ಪಿಸುತ್ತಿದ್ದರು.
  • ಧೂಪದ್ರವ್ಯವನ್ನು ಉರಿಸುವುದೆನ್ನುವುದು ಪ್ರಾರ್ಥನೆಗೆ ಸೂಚನೆಯಾಗಿರುತ್ತದೆ ಮತ್ತು ಆತನ ಜನರಿಂದ ದೇವರಿಗೆ ಮಾಡುವ ಆರಾಧನೆಯನ್ನೂ ಸೂಚಿಸುತ್ತದೆ.
  • “ಧೂಪದ್ರವ್ಯ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಪರಿಮಳ ದ್ರವ್ಯಗಳು” ಅಥವಾ “ಒಳ್ಳೇಯ-ವಾಸನೆಯ ಸಸಿಗಳು” ಎನ್ನುವ ಪದಗಳು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಧೂಪದ್ರವ್ಯದ ಯಜ್ಞವೇದಿ, ದಹನ ಬಲಿ ಅರ್ಪಣೆ, ಸಾಂಬ್ರಾಣಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2553, H3828, H4196, H4289, H5208, H6988, H6999, H7002, H7004, H7381, G2368, G2369, G2370, G2379, G3031

ಧೂಪದ್ರವ್ಯ

# ಪದದ ಅರ್ಥವಿವರಣೆ

ಬದೋಲಖ ಮರದಿಂದ ಮಾಡಲ್ಪಡುವ ಪರಿಮಳಯುಳ್ಳ ದ್ರವ್ಯವನ್ನು ಧೂಪದ್ರವ್ಯ ಎನ್ನುತ್ತಾರೆ. ಸುಗಂಧದ್ರವ್ಯ ಮತ್ತು ಸಾಂಬ್ರಾಣಿಯನ್ನು ಮಾಡಲು ಇದನ್ನು ಉಪಯೋಗಿಸುತ್ತಾರೆ.

  • ಸತ್ಯವೇದ ಕಾಲದಲ್ಲಿ, ಹೆಣವನ್ನು ಸಮಾಧಿಗೆ ಸಿದ್ದ ಮಾಡಲು ಉಪಯೋಗಿಸುವ ವಸ್ತುಗಳಲ್ಲಿ ಧೂಪದ್ರವ್ಯ ಪ್ರಾಮುಖ್ಯವಾದ ವಸ್ತುವಾಗಿತ್ತು.
  • ಈ ಧೂಪದ್ರವ್ಯ ಅದರಲ್ಲಿರುವ ಸ್ವಸ್ಥಪಡಿಸುವ ಗುಣ ಮತ್ತು ಶಾಂತಗೊಳಿಸುವ ಗುಣಗಳಿಗೆ ಪ್ರಸಿದ್ದಿಹೊಂದಿದೆ.

ಜ್ಞಾನಿಗಳು ಪೂರ್ವ ದಿಕ್ಕಿನಿಂದ ಯೇಸುವನ್ನು ನೋಡಲು ಬೇತ್ಲೆಹೇಮಿಗೆ ಬಂದಾಗ, ಅವರು ತಂದ ಮೂರು ಕಾಣಿಕೆಗಳಲ್ಲಿ ಧೂಪದ್ರವ್ಯ ಒಂದಾಗಿತ್ತು.

(ಈ ಪದಗಳನ್ನು ಸಹ ನೋಡಿರಿ : ಬೇತ್ಲೆಹೇಮ್, ಜ್ಞಾನಿಗಳು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3828, G3030

ಧೂಪವೇದಿ, ಧೂಪದ ವೇದಿಕೆ

# ಸತ್ಯಾಂಶಗಳು:

ಧೂಪವೇದಿ ಎನ್ನುವುದು ಒಂದು ಉಪಕರಣವಾಗಿದ್ದು, ಅದರ ಮೇಲೆ ಯಾಜಕನು ದೇವರಿಗೆ ಹೋಮವಾಗಿ ಧೂಪವನ್ನು ಹಾಕುತ್ತಾನೆ. ಇದನ್ನು ಬಂಗಾರದ ವೇದಿಕೆ ಎಂದೂ ಕರೆಯುತ್ತಾರೆ.

  • ಧೂಪವೇದಿಯು ಕಟ್ಟಿಗೆಯಿಂದ ಮಾಡಿರುತ್ತಾರೆ, ಅದರ ಮೇಲ್ಭಾಗ, ಎರಡು ಬದಿಗೆ ಇರುವ ಹಲಗೆಗಳ ಮೇಲೆ ಬಂಗಾರದಿಂದ ಹೊದಿಸಿರುತ್ತಾರೆ. ಅದು ಸುಮಾರು ಒಂದು ಅರ್ಧ ಮೀಟರ್ ಉದ್ದ, ಒಂದು ಅರ್ಧ ಮೀಟರ್ ಅಗಲ, ಮತ್ತು ಒಂದು ಮೀಟರ್ ಎತ್ತರವಿರುತ್ತದೆ.
  • ಇದನ್ನು ಮೊಟ್ಟ ಮೊದಲು ಗುಡಾರದಲ್ಲಿಟ್ಟಿದ್ದರು. ಆದನಂತರ ಅದನ್ನು ದೇವಾಲಯದಲ್ಲಿಟ್ಟರು.
  • ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಯಾಜಕನು ಧೂಪವನ್ನು ಹಾಕುತ್ತಿದ್ದನು.
  • ಇದನ್ನು “ಧೂಪವನ್ನು ಉರಿಸುವ ವೇದಿಕೆ” ಅಥವಾ “ಬಂಗಾರದ ವೇದಿಕೆ” ಅಥವಾ “ಧೂಪವನ್ನು ಉರಿಸುವದು” ಎಂದು “ಧೂಪದ ಮೇಜು” ಎಂತಲೂ ಅನುವಾದ ಮಾಡಬಹುದು.

(ಅನುವಾದ ಸಲಹೆಗಳು: /ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಧೂಪ

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H4196, H7004, G2368, G2379

ಧೈರ್ಯ, ಧೈರ್ಯಮಯ, ಪ್ರೋತ್ಸಾಹಿಸು, ಪ್ರೋತ್ಸಾಹ, ಧೈರ್ಯವನ್ನು ಹೊಂದು, ನಿರುತ್ಸಾಹಗೊಳಿಸು, ನಿರುತ್ಸಾಹಗೊಳಿಸಿದೆ, ನಿರುತ್ಸಾಹ, ನಿರುತ್ಸಾಹ ಉಂಟಾಗುತ್ತಿದೆ

# ಸತ್ಯಾಂಶಗಳು:

“ಧೈರ್ಯ” ಎನ್ನುವ ಪದವು ತುಂಬಾ ಕಷ್ಟಕರವಾದ, ಅಪಾಯಕರವಾದ ಅಥವಾ ಭಯಾನಕವಾದ ಕಾರ್ಯವನ್ನು ಮಾಡುವುದನ್ನು ಮತ್ತು ಅದನ್ನು ಧೈರ್ಯದಿಂದ ಎದುರುಗೊಳ್ಳುವುದನ್ನು ಸೂಚಿಸುತ್ತದೆ.

  • “ಧೈರ್ಯಮಯ” ಎನ್ನುವ ಪದವು ಒಬ್ಬ ಭಯಪಡುವ ಸಮಯದಲ್ಲಿ ಅಥವಾ ಮಾಡುವ ಕೆಲಸವನ್ನು ಬಿಟ್ಟುಬಿಡುವ ಸಮಯದಲ್ಲಿ ಸರಿಯಾದ ಕಾರ್ಯವನ್ನು ಮಾಡುತ್ತಾ, ತನ್ನ ಧೈರ್ಯವನ್ನು ಪ್ರದರ್ಶಿಸುವ ವ್ಯಕ್ತಿಯನ್ನು ತೋರಿಸುತ್ತದೆ.
  • ಒಬ್ಬ ವ್ಯಕ್ತಿ ತನ್ನ ಬಲ ಮತ್ತು ಅವಿರತ ಯತ್ನದೊಂದಿಗೆ ಮಾನಸಿಕವಾದ ಅಥವಾ ಭೌತಿಕವಾದ ನೋವನ್ನು ಹೊಂದುತ್ತಿರುವಾಗ ತನ್ನೊಳಗಿರುವ ಧೈರ್ಯವನ್ನು ತೋರಿಸುತ್ತಾನೆ.
  • “ಧೈರ್ಯವನ್ನು ಹೊಂದು” ಎನ್ನುವ ಮಾತಿಗೆ “ಹೆದರಬೇಡ” ಅಥವಾ “ಎಲ್ಲಾ ಕಾರ್ಯಗಳು ಚೆನ್ನಾಗಿ ನಡೆಯುತ್ತವೆಯೆಂದು ಖಚಿತವಾಗಿರುವುದು” ಎಂದರ್ಥ.
  • ಯೆಹೋಶುವ ಕಾನಾನ್ ಎನ್ನುವ ಭಯಾನಕವಾದ ಭೂಮಿಗೆ ಹೋಗುವುದಕ್ಕೆ ಸಿದ್ಧಗೊಳಿಸುತ್ತಿರುವಾಗ, “ಬಲದಿಂದಿರು ಮತ್ತು ಧೈರ್ಯದಿಂದಿರು” ಎಂದು ಮೋಶೆ ಯೆಹೋಶುವನಿಗೆ ಎಚ್ಚರಿಕೆ ನೀಡಿದನು.
  • “ಧೈರ್ಯಮಯ” ಎನ್ನುವ ಪದವನ್ನು “ಧೈರ್ಯಶಾಲಿ” ಅಥವಾ “ಹೆದರಿಕೆಯಿಲ್ಲದೇ” ಅಥವಾ “ದಿಟ್ಟ” ಎನ್ನುವ ಪರ್ಯಾಯ ಪದಗಳಿಂದಲೂ ಹೇಳಬಹುದು.
  • ಸಂದರ್ಭಾನುಸಾರವಾಗಿ “ಧೈರ್ಯವನ್ನು ಹೊಂದು” ಎನ್ನುವ ಪದವನ್ನು “ಮಾನಸಿಕವಾಗಿ ಬಲದಿಂದಿರು” ಅಥವಾ “ನಿಶ್ಚಯತೆಯಿಂದಿರು” ಅಥವಾ “ಸ್ಥಿರವಾಗಿ ನಿಲ್ಲು” ಎಂದೂ ಅನುವಾದ ಮಾಡಬಹುದು.
  • “ಧೈರ್ಯದಿಂದ ಮಾತನಾಡು” ಎನ್ನುವ ಮಾತಿಗೆ “ನಿರ್ಭಯದಿಂದ ಮಾತನಾಡು” ಅಥವಾ “ಹೆದರದೆ ಮಾತನಾಡು” ಅಥವಾ “ನಿಶ್ಚಯತೆಯಿಂದ ಮಾತನಾಡು” ಎಂದೂ ಹೇಳಬಹುದು ಅಥವಾ ಅನುವಾದ ಮಾಡಬಹುದು.

“ಪ್ರೋತ್ಸಾಹಿಸು” ಅಥವಾ “ಪ್ರೋತ್ಸಾಹ” ಎನ್ನುವ ಪದಗಳು ಒಬ್ಬರಿಗೆ ಆದರಣೆಯನ್ನುಂಟು ಮಾಡಲು, ನಿರೀಕ್ಷೆ ಕೊಡಲು, ನಿಶ್ಚಯತೆ ಮತ್ತು ಧೈರ್ಯವನ್ನುಂಟು ಮಾಡಲು ಹೇಳುವ ಮಾತುಗಳು ಅಥವಾ ಕಾರ್ಯಗಳನ್ನು ಸೂಚಿಸುತ್ತದೆ.

  • “ಎಚ್ಚರಿಕೆ” ಎನ್ನುವ ಪರ್ಯಾಯ ಪದವು ಕೂಡ ಯಾರಾದರೊಬ್ಬರು ತಪ್ಪಾದ ಕಾರ್ಯವನ್ನು ಮಾಡುತ್ತಿದ್ದರೆ, ಅದನ್ನು ಮಾಡಬೇಡಿ ಎಂದು ಹೇಳುವುದು ಮತ್ತು ತಪ್ಪಾದ ಕಾರ್ಯಗಳಿಗೆ ಬದಲಾಗಿ ಸರಿಯಾದ ಮತ್ತು ಒಳ್ಳೇಯ ಕಾರ್ಯಗಳನ್ನು ಮಾಡಲು ಪ್ರೋತ್ಸಾಹಗೊಳಿಸುವುದು ಎಂದೆನ್ನುವ ಅರ್ಥವನ್ನು ಹೊಂದಿರುತ್ತದೆ.

  • ಅಪೊಸ್ತಲನಾದ ಪೌಲನು ಮತ್ತು ಇತರ ಹೊಸ ಒಡಂಬಡಿಕೆಯ ರಚನಾಕಾರರು ಒಬ್ಬರನ್ನೊಬ್ಬರು ಪ್ರೀತಿಸಿಕೊಳ್ಳಬೇಕೆಂದು ಮತ್ತು ಸೇವೆ ಮಾಡಿಕೊಳ್ಳಬೇಕೆಂದು ಕ್ರೈಸ್ತರಿಗೆ ಬೋಧನೆ ಮಾಡಿದರು.

  • “ನಿರುತ್ಸಾಹಗೊಳಿಸು” ಎನ್ನುವ ಪದವು ಜನರು ತಮ್ಮಲ್ಲಿ ಇಟ್ಟುಕೊಂಡಿರುವ ನಿರೀಕ್ಷೆ, ನಿಶ್ಚಯತೆ, ಮತ್ತು ಧೈರ್ಯ ಎನ್ನುವವುಗಳನ್ನು ಕಳೆದುಕೊಳ್ಳುವಂತೆ ಹೇಳುವ ಮಾತುಗಳನ್ನು ಮತ್ತು ಕ್ರಿಯೆಗಳನ್ನು ಸೂಚಿಸುತ್ತದೆ. ಇದರಿಂದ ಜನರು ಮಾಡಲೇ ಬೇಕಾದ ಕಾರ್ಯಗಳನ್ನು ಕಷ್ಟಪಟ್ಟು ಮಾಡುವುದಕ್ಕೆ ತಮ್ಮಲ್ಲಿರುವ ಆಸೆಯನ್ನು ಕಡಿಮೆ ಮಾಡುತ್ತವೆ.

# ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ “ಪ್ರೋತ್ಸಾಹಗೊಳಿಸು” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ “ಪ್ರೇರೇಪಿಸು” ಅಥವಾ “ಆದರಿಸು” ಅಥವಾ “ದಯೆಯುಳ್ಳ ಪದಗಳನ್ನು ಹೇಳು” ಅಥವಾ “ಸಹಾಯ ಮಾಡು ಮತ್ತು ಬೆಂಬಲ ಕೊಡು” ಎನ್ನುವ ಪದಗಳೂ ಒಳಗೊಂಡಿರುತ್ತವೆ.
  • “ಪ್ರೋತ್ಸಾಹಗೊಳಿಸುವ ಮಾತುಗಳನ್ನು ಕೊಡು” ಎನ್ನುವ ಮಾತಿಗೆ “ಇತರ ಜನರು ಪ್ರೀತಿಸಲ್ಪದುತ್ತಿದ್ದಾರೆಂದು, ಅಂಗೀಕರಿಸಲ್ಪಡುತ್ತಿದ್ದಾರೆಂದು ಮತ್ತು ಬಲವನ್ನು ಹೊಂದುತ್ತಿದ್ದಾರೆಂದು ತಿಳಿಯುವಂತೆ ಮಾಡುವ ವಿಷಯಗಳನ್ನು ಹೇಳು” ಎಂದರ್ಥ.

(ಈ ಪದಗಳನ್ನು ಸಹ ನೋಡಿರಿ : ನಿಶ್ಚಯತೆ, ಎಚ್ಚರಿಕೆ, ಭಯ, ಬಲ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H533, H553, H1368, H2388, H2388, H2428, H3820, H3824, H7307, G2114, G2115, G2174, G2292, G2293, G2294, G3870, G3874, G3954, G4389, G4837, G5111

ಧೈರ್ಯ, ಧೈರ್ಯವಾಗಿ, ಸಾಹಸ, ಹುರಿದುಂಬಿಸಿದರು

# ಪದದ ಅರ್ಥವಿವರಣೆ:

ತುಂಬಾ ಕಷ್ಟ ಸಮಯದಲ್ಲಿಯೂ ಅಥವಾ ಅಪಾಯಕರ ಸಂದರ್ಭದಲ್ಲಿಯೂ ಸರಿಯಾದದ್ದನ್ನು ಮಾಡುವುದಕ್ಕೆ ಮತ್ತು ಸತ್ಯವನ್ನೇ ಮಾತಾಡುವುದಕ್ಕೆ ಧೈರ್ಯವನ್ನು ಮತ್ತು ನಿಶ್ಚಯತೆಯನ್ನು ಹೊಂದಿರುವದನ್ನೇ ಈ ಎಲ್ಲಾ ಪದಗಳು ಸೂಚಿಸುತ್ತಿವೆ.

  • “ಧೈರ್ಯವುಳ್ಳ” ಒಬ್ಬ ವ್ಯಕ್ತಿ ಸರಿಯಾದದ್ದನ್ನು, ಒಳ್ಳೆಯದನ್ನು ಮಾಡುವುದಕ್ಕೆ ಮತ್ತು ಹೇಳುವುದಕ್ಕೆ ಭಯಪಡುವುದಿಲ್ಲ, ದುಷ್ಕ್ರುತ್ಯಕ್ಕೆ ಒಳಗಾದ ಜನರನ್ನು ರಕ್ಷಿಸುವುದಕ್ಕೆ ಹಿಂಜರಿಯುವುದಿಲ್ಲ. ಈ ಪದವನ್ನು “ಪರಾಕ್ರಮ” ಅಥವಾ “ಭಯವಿಲ್ಲದವನು” ಎಂದೂ ಅನುವಾದ ಮಾಡಬಹುದು.
  • ಹೊಸ ಒಡಂಬಡಿಕೆಯಲ್ಲಿ ಅಪಾಯಕರ ಸಂದರ್ಭಗಳಲ್ಲಿ ಅಥವಾ ಸೆರೆಮನೆ ಹಾಕುತ್ತಾರೆನ್ನುವ ಸಂದರ್ಭದಲ್ಲಿ ಅಥವಾ ಸಾಯಿಸುತ್ತಾರೆಂದು ತಿಳಿದ ಸಂದರ್ಭದಲ್ಲಿಯೂ ಶಿಷ್ಯರೆಲ್ಲರೂ ಬಹಿರಂಗ ಸ್ಥಳಗಳಲ್ಲಿ ಕ್ರಿಸ್ತನ ಕುರಿತಾಗಿ ಬಹು “ಧೈರ್ಯದಿಂದ” ಪ್ರಕಟಿಸುವದರಲ್ಲಿ ಮುಂದೆವರಿದರು. * ಇದನ್ನು “ನಿಶ್ಚಯತೆಯಿಂದ” ಅಥವಾ “ಬಲವಾದ ಧೈರ್ಯದಿಂದ” ಅಥವಾ “ಪರಾಕ್ರಮದಿಂದ” ಎಂದೂ ಅನುವಾದ ಮಾಡಬಹುದು.
  • ಶಿಲುಬೆಯ ಮೇಲೆ ಕ್ರಿಸ್ತನು ಮರಣವನ್ನು ಸೋಲಿಸಿದ ಸುವಾರ್ತೆಯನ್ನು ಮಾತನಾಡುವುದರಲ್ಲಿ ಈ ಆದಿ ಶಿಷ್ಯರ “ಧೈರ್ಯವು” ಇಸ್ರಾಯೇಲ್ ದೇಶದಲ್ಲೆಲ್ಲಾ ಮತ್ತು ಇತರ ಸುತ್ತಮುತ್ತಲಿರುವ ದೇಶದಲ್ಲೆಲ್ಲಾ ಸುವಾರ್ತೆಯು ಹರಡುವಂತೆ ಮಾಡಿತು ಮತ್ತು ಕೊನೆಗೆ, ಭೂಮಿಯ ಕಟ್ಟಕಡೆಯವರೆಗೆ ಈ ಸುವಾರ್ತೆಯು ತಲುಪುವಂತೆ ಮಾಡಿತು. “ಸಾಹಸ” ಎನ್ನುವ ಪದವನ್ನು “ನಿಶ್ಚಯತೆಯಿಂದಿರುವ ಧೈರ್ಯ” ಎಂಬುದಾಗಿಯೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ನಿಶ್ಚಯತೆ, ಸುವಾರ್ತೆ, ವಿಮೋಚನೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H982, H983, H4834, H5797, G662, G2292, G3618, G3954, G3955, G5111, G5112

ಧ್ಯಾನಿಸು, ಧ್ಯಾನಮಾಡು, ಧ್ಯಾನ

# ಪದದ ಅರ್ಥವಿವರಣೆ:

“ಧ್ಯಾನಿಸು” ಎನ್ನುವ ಪದಕ್ಕೆ ಯಾವುದಾದರೊಂದರ ಕುರಿತಾಗಿ ತುಂಬಾ ಜಾಗೃತಿಯಾಗಿ ಮತ್ತು ಆಳವಾಗಿ ಆಲೋಚನೆ ಮಾಡುವುದಕ್ಕೆ ಸಮಯವನ್ನು ಕಳೆಯುವುದು ಎಂದರ್ಥ.

  • ಈ ಪದವನ್ನು ದೇವರ ಕುರಿತಾಗಿ ಮತ್ತು ಆತನ ಬೋಧನೆಗಳ ಕುರಿತಾಗಿ ಆಲೋಚನೆ ಮಾಡುವುದನ್ನು ಸೂಚಿಸುವುದಕ್ಕೆ ಸತ್ಯವೇದದಲ್ಲಿ ಉಪಯೋಗಿಸಲಾಗಿರುತ್ತದೆ.
  • “ಹಗಲು ರಾತ್ರಿ” ಕರ್ತನ ಧರ್ಮಶಾಸ್ತ್ರವನ್ನು ಧ್ಯಾನ ಮಾಡುವ ವ್ಯಕ್ತಿ ಹೆಚ್ಚಾಗಿ ಆಶೀರ್ವಾದ ಹೊಂದಿರುತ್ತಾನೆಂದು ಕೀರ್ತನೆ 1 ಹೇಳುತ್ತಿದೆ.

# ಅನುವಾದ ಸಲಹೆಗಳು:

  • “ಧ್ಯಾನಿಸು” ಎನ್ನುವ ಪದವನ್ನು “ಜಾಗೃತಿಯಾಗಿ ಮತ್ತು ಆಳವಾಗಿ ಮಾಡುವುದು” ಅಥವಾ “ಆಲೋಚನಾತ್ಮಕವಾಗಿ ಪರಿಗಣಿಸುವುದು” ಅಥವಾ “ಅನೇಕಬಾರಿ ಆಲೋಚನೆ ಮಾಡುವುದು” ಎಂದೂ ಅನುವಾದ ಮಾಡಬಹುದು.
  • “ಧ್ಯಾನ” ಎನ್ನುವ ನಾಮಪದ ರೂಪವನ್ನು “ಆಳವಾದ ಆಲೋಚನೆಗಳು” ಎಂದೂ ಅನುವಾದ ಮಾಡಬಹುದು. * “ನನ್ನ ಹೃದಯ ಧ್ಯಾನ” ಎನ್ನುವಂಥಹ ಮಾತನ್ನು “ಯಾವುದಾದರೊಂದರ ಕುರಿತಾಗಿ ನಾನು ಆಳವಾಗಿ ಆಲೋಚನೆ ಮಾಡುವುದು” ಅಥವಾ “ಯಾವುದಾದರೊಂದರ ಕುರಿತಾಗಿ ನಾನು ಹೆಚ್ಚಾಗಿ ಆಲೋಚನೆ ಮಾಡುವುದು” ಎಂದೂ ಅನುವಾದ ಮಾಡಬಹುದು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1897, H1900, H1901, H1902, H7742, H7878, H7879, H7881, G3191, G4304

ಧ್ವಂಸ ಮಾಡು, ಧ್ವಂಸ ಮಾಡಿದೆ, ಧ್ವಂಸ ಮಾಡುತ್ತಿದೆ, ಧ್ವಂಸ, ಧ್ವಂಸಗಳು

# ಪದದ ಅರ್ಥವಿವರಣೆ:

“ಧ್ವಂಸ ಮಾಡಲಾಗಿದೆ” ಅಥವಾ “ಧ್ವಂಸ” ಎನ್ನುವ ಪದಗಳು ಒಬ್ಬರ ಆಸ್ತಿಪಾಸ್ತಿಗಳು ನಾಶವಾಗಿರುವುದನ್ನು ಅಥವಾ ಅವಶೇಷಗಳನ್ನಾಗಿ ಮಾಡಿದ ಸಂದರ್ಭವನ್ನು ಸೂಚಿಸುತ್ತದೆ. ಆ ಭೂಮಿಯಲ್ಲಿ ಅಥವಾ ಆ ದೇಶದಲ್ಲಿ ನಿವಾಸವಾಗಿರುವ ಜನರನ್ನು ಸೆರೆಗೊಯ್ಯುವುದನ್ನು ಅಥವಾ ನಾಶಗೊಳಿಸುವುದನ್ನು ಇದರಲ್ಲಿ ಅನೇಕಬಾರಿ ಒಳಗೊಂಡಿರುತ್ತವೆ.

  • ಸಂಪೂರ್ಣವಾದ ನಾಶನವನ್ನು ಮತ್ತು ಅತೀ ತೀವ್ರವಾದ ಸಂದರ್ಭವನ್ನು ಸೂಚಿಸುತ್ತದೆ.
  • ಉದಾಹರಣೆಗೆ, ಸೊದೋಮ್ ಪಟ್ಟಣದಲ್ಲಿರುವ ಜನರು ಮಾಡಿದ ಪಾಪಗಳಿಗಾಗಿ ಶಿಕ್ಷೆಯನ್ನು ಕೊಡಬೇಕೆಂದು ದೇವರು ಆ ಪಟ್ಟಣವನ್ನೇ ಧ್ವಂಸ ಮಾಡಿದರು.
  • “ಧ್ವಂಸ” ಎನ್ನುವ ಪದವು ಶಿಕ್ಷೆ ಅಥವಾ ನಾಶನದಿಂದ ಉಂಟಾಗುವ ಮಾನಸಿಕವಾಗಿ ಅತೀ ಹೆಚ್ಚಾಗಿ ಪ್ರಲಾಪವನ್ನು ಸೂಚಿಸುತ್ತದೆ.

# ಅನುವಾದ ಸಲಹೆಗಳು:

“ಧ್ವಂಸ ಮಾಡು” ಎನ್ನುವ ಪದವನ್ನು “ಸಂಪೂರ್ಣವಾಗಿ ನಾಶಗೊಳಿಸು” ಅಥವಾ “ಸಂಪೂರ್ಣವಾಗಿ ನಾಶಕ್ಕೊಳಗಾಗಿಸು” ಎಂದೂ ಅನುವಾದ ಮಾಡಬಹುದು.

  • ಸಂದರ್ಭಕ್ಕೆ ತಕ್ಕಂತೆ, “ಧ್ವಂಸ ಮಾಡು” ಎನ್ನುವ ಪದವನ್ನು “ಸಂಪೂರ್ಣವಾಗಿ ನಾಶಗೊಳಿಸು” ಅಥವಾ “ಒಟ್ಟು ಹಾಳು ಮಾಡು” ಅಥವಾ “ತಡೆಯಲಾರದ ಪ್ರಲಾಪ” ಅಥವಾ “ಧ್ವಂಸಮಾಡುವವನು” ಎಂದೂ ಅನುವಾದ ಮಾಡಬಹುದು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1110, H1238, H2721, H1826, H3615, H3772, H7701, H7703, H7722, H7843, H8074, H8077

ನಡಗು, ನಡಗುವುದು, ನಡಗಿದೆ, ನಡಗುತ್ತಿರುವುದು

# ಪದದ ಅರ್ಥವಿವರಣೆ:

“ನಡಗು” ಎನ್ನುವ ಪದಕ್ಕೆ ಅತೀ ಹೆಚ್ಚಾಗಿ ಯಾತನೆಯಿಂದ ಅಥವಾ ಭಯದಿಂದ ಬರುವ ಅಲುಗಾಡುವುದು ಅಥವಾ ಕಂಪಿಸುತ್ತಿರುವುದು ಎಂದರ್ಥ.

  • ಈ ಪದವು “ಹೆಚ್ಚಾದ ಹೆದರಿಕೆಯಲ್ಲಿರುವುದು” ಎನ್ನುವ ಅರ್ಥವನ್ನು ಕೊಡುವುದಕ್ಕೆ ಅಲಂಕಾರಿಕವಾಗಿ ಉಪಯೋಗಿಸಲ್ಪಡುತ್ತದೆ.
  • ಕೆಲವೊಂದುಬಾರಿ ನೆಲವು ಕಂಪಿಸಿದಾಗ, ಇದನ್ನು “ನಡುಗು” ಎಂದು ಹೇಳಲ್ಪಡುತ್ತದೆ. ಇದು ಭೂಕಂಪ ಬಂದಾಗ ಅಥವಾ ಹೆಚ್ಚಾದ ಗಲಬೆಯಾದಾಗ ಕೊಡುವ ಸ್ಪಂದನೆಯಲ್ಲಿ ಉಂಟಾಗುತ್ತದೆ.
  • ಕರ್ತನ ಸಾನ್ನಿಧ್ಯದಲ್ಲಿ ಭೂಮಿಯು ನಡಗುಟ್ಟಿದೆಯೆಂದು ಸತ್ಯವೇದ ಹೇಳುತ್ತಿದೆ. ಭೂಮಿಯ ಮೇಲೆ ಇರುವ ಜನರು ದೇವರ ಭಯದಿಂದ ಅಲುಗಾಡುತ್ತಾರೆ ಅಥವಾ ಭೂಮಿಯೇ ಕಂಪಿಸುತ್ತದೆ ಎಂದು ಇದರ ಅರ್ಥವಾಗಿರುತ್ತದೆ.
  • ಈ ಪದವನ್ನು “ಹೆದರಿಕೆಯಿಂದಿರುವುದು” ಅಥವಾ “ದೇವರಿಗೆ ಭಯಪಡು” ಅಥವಾ “ಅಲುಗಾಡುವುದು” ಎಂದು ಸಂದರ್ಭಾನುಸಾರವಾಗಿ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಭೂಮಿ, ಭಯ, ಕರ್ತನು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1674, H2111, H2112, H2151, H2342, H2648, H2729, H2730, H2731, H5128, H5568, H6342, H6426, H6427, H7264, H7268, H7269, H7322, H7460, H7461, H7478, H7481, H7493, H7578, H8078, H8653, G1719, G1790, G5141, G5156, G5425

ನಡುವು (ಅಥವಾ ಸೊಂಟ)

# ಪದದ ಅರ್ಥವಿವರಣೆ:

“ನಡುವು (ಅಥವಾ ಸೊಂಟ)” ಎನ್ನುವ ಪದವು ಒಬ್ಬ ವ್ಯಕ್ತಿಯ ಅಥವಾ ಒಂದು ಪ್ರಾಣಿಯ ದೇಹದ ಭಾಗವಾಗಿರುತ್ತದೆ, ಇದು ಪಕ್ಕೆಲುಬುಗಳ ಕೆಳಗೆ ಮತ್ತು ಸೊಂಟದ ಎಲುಬುಗಳ ಮಧ್ಯೆದಲ್ಲಿರುವ ಭಾಗವನ್ನು ಸೂಚಿಸುತ್ತದೆ, ಇದನ್ನು ಕೆಳ ಹೊಟ್ಟೆ ಎಂಬುದಾಗಿಯೂ ಕರೆಯುತ್ತಾರೆ.

  • “ಸೊಂಟವನ್ನು ಕಟ್ಟಿಕೊಳ್ಳಿ” ಎನ್ನುವ ಮಾತು ಕೆಲಸವನ್ನು ಹೆಚ್ಚಾಗಿ ಮಾಡುವುದಕ್ಕೆ ಸಿದ್ಧತೆಯನ್ನು ಸೂಚಿಸುತ್ತದೆ. ಯಾವ ಅಡ್ಡಿ ಇಲ್ಲದೇ ಚೆನ್ನಾಗಿ ನಡೆಯುವುದಕ್ಕೆ ಸೊಂಟದ ಸುತ್ತಲು ಒಂದು ನಡುಕಟ್ಟುನೊಳಗೆ ಒಬ್ಬನ ನಿಲುವಂಗಿಯ ಕೆಳಭಾಗವನ್ನು ಒಳಕ್ಕೆ ಹಾಕಿಕೊಳ್ಳುವ ಪದ್ಧತಿಯಿಂದ ಈ ಪದವು ಬಂದಿರುತ್ತದೆ.
  • “ನಡುವು (ಅಥವಾ ಸೊಂಟ)” ಎನ್ನುವ ಪದವನ್ನು ಸತ್ಯವೇದದಲ್ಲಿ ಅನೇಕಸಲ ಸರ್ವಾಂಗಹೋಮ ಮಾಡುವ ಪ್ರಾಣಿಯ ಹಿಂಭಾಗದ ಕೆಳ ಭಾಗವನ್ನು ಸೂಚಿಸುವುದಕ್ಕೆ ಉಪಯೋಗಿಸಿದ್ದಾರೆ.
  • ಸತ್ಯವೇದದಲ್ಲಿ “ನಡುವು (ಅಥವಾ ಸೊಂಟ)” ಎನ್ನುವ ಪದವು ಅನೇಕಸಲ ಒಬ್ಬ ಮನುಷ್ಯನ ಸಂತಾನೋತ್ಪತ್ತಿಗೊಳಿಸುವ ಅಂಗವನ್ನು ಸಂತಾನದವರ ಆಧಾರವನ್ನಾಗಿ ಸೂಚಿಸುವುದಕ್ಕೆ ಅಲಂಕಾರಿಕವಾಗಿ ಮತ್ತು ಸೌಮ್ಯೋಕ್ತಿಕವಾಗಿ ಉಪಯೋಗಿಸಲ್ಪಟ್ಟಿರುತ್ತದೆ. ( ನೋಡಿರಿ: ಸೌಮ್ಯೋಕ್ತಿಕ
  • “ನಿನ್ನ ನಡುವಿನಿಂದ ಬರುವ” ಎನ್ನುವ ಮಾತನ್ನು “ನಿನ್ನ ಸಂತತಿಯಾಗಿರಲು” ಅಥವಾ “ನಿನ್ನ ಬೀಜದಿಂದ ಹುಟ್ಟುವ” ಅಥವಾ “ನಿನ್ನಿಂದ ಬರುವುದಕ್ಕೆ ದೇವರೇ ಕಾರಣವಾಗಿರುತ್ತಾರೆ” ಎಂದೂ ಅನುವಾದ ಮಾಡಬಹುದು. ( ನೋಡಿರಿ: ಸೌಮ್ಯೋಕ್ತಿಕ
  • ದೇಹದ ಒಂದು ಅಂಗವನ್ನು ಸೂಚಿಸಿದಾಗ, ಇದನ್ನು “ಕೆಳ ಹೊಟ್ಟೆ” ಅಥವಾ “ಚಪ್ಪೆಗಳು” ಅಥವಾ “ನಡು” ಎಂದು ಸಂದರ್ಭಾನುಗುಣವಾಗಿ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಸಂತಾನದವರು, ಸುತ್ತುವರಿ, ಸಂತತಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2504, H2783, H3409, H3689, H4975, G3751

ನಡೆ, ನಡೆಯುವುದು, ನಡೆಯಿತು, ನಡೆಯುತ್ತಿರುವುದು

# ಪದದ ಅರ್ಥವಿವರಣೆ:

“ನಡೆ” ಎನ್ನುವ ಪದವು ಅನೇಕಬಾರಿ “ಜೀವಿಸು” ಎನ್ನುವ ಅರ್ಥವನ್ನು ಕೊಡುವುದಕ್ಕೆ ಅಲಂಕಾರಿಕ ಭಾವನೆಯಲ್ಲಿ ಉಪಯೋಗಿಸಿರುತ್ತಾರೆ.

  • “ಹನೋಕನು ದೇವರೊಂದಿಗೆ ನಡೆದನು” ಎನ್ನುವ ಮಾತಿಗೆ ಹನೋಕನು ದೇವರೊಂದಿಗೆ ತುಂಬಾ ಹತ್ತಿರ ಸಂಬಂಧದಲ್ಲಿ ಜೀವಿಸಿದ್ದನು ಎಂದರ್ಥವಾಗಿರುತ್ತದೆ.
  • “ಆತ್ಮದಿಂದ ನಡೆ” ಎನ್ನುವ ಮಾತಿಗೆ ಪವಿತ್ರಾತ್ಮನ ಮಾರ್ಗದರ್ಶನದಲ್ಲಿ ಹೋಗು, ಇದರಿಂದ ನಾವು ದೇವರನ್ನು ಘನಪಡಿಸುವ ಮತ್ತು ದೇವರಿಗೆ ಮೆಚ್ಚಿಕೆಯಾಗುವ ಕೆಲಸಗಳನ್ನು ಮಾಡುತ್ತೇವೆ.
  • ದೇವರ ಆಜ್ಞೆಗಳಲ್ಲಿ ಅಥವಾ ದೇವರ ಮಾರ್ಗಗಳಲ್ಲಿ “ನಡೆ” ಎಂದರೆ ಆತನ ಆಜ್ಞೆಗಳಿಗೆ “ವಿಧೇಯತೆ ತೋರಿಸುವುದರಲ್ಲಿ ಜೀವಿಸು” ಅಂದರೆ “ಆತನ ಆಜ್ಞೆಗಳಿಗೆ ವಿಧೇಯನಾಗು” ಅಥವಾ “ಆತನ ಚಿತ್ತವನ್ನು ನೆರವೇರಿಸು” ಎಂದರ್ಥವಾಗಿರುತ್ತದೆ.
  • ನಾನು ನನ್ನ ಜನರ “ಮಧ್ಯೆದಲ್ಲಿ ನಡೆಯುತ್ತೇನೆ” ಎಂದು ದೇವರು ಹೇಳಿದಾಗ, ಈ ಮಾತಿಗೆ ಆತನು ಅವರ ಮಧ್ಯೆದಲ್ಲಿ ನಿವಾಸವಾಗಿರುತ್ತಾನೆ ಅಥವಾ ಅವರೊಂದಿಗೆ ತುಂಬಾ ಹತ್ತಿರವಾಗಿ ಸಹವಾಸ ಮಾಡುತ್ತಾನೆ ಎಂದರ್ಥವಾಗಿರುತ್ತದೆ.
  • “ವಿರುದ್ಧವಾಗಿ ನಡೆ” ಎನ್ನುವ ಮಾತಿಗೆ ಯಾರಾದರೊಬ್ಬರಿಗೆ ಅಥವಾ ಯಾವುದಾದರೊಂದಕ್ಕೆ ವಿರುದ್ಧವಾದ ವಿಧಾನದಲ್ಲಿ ನಡೆದುಕೊಳ್ಳುವುದು ಅಥವಾ “ಜೀವಿಸುವುದು” ಎಂದರ್ಥವಾಗಿರುತ್ತದೆ.
  • “ಅದರ ಹಿಂದೆ ನಡೆ” ಎನ್ನುವ ಮಾತಿಗೆ ಯಾವುದಾದರೊಂದನ್ನು ಅಥವಾ ಯಾರಾದರೊಬ್ಬರನ್ನು ಹಿಂಬಾಲಿಸು ಅಥವಾ ಹುಡುಕು ಎಂದರ್ಥವಾಗಿರುತ್ತದೆ. ಬೇರೊಬ್ಬರು ನಡೆದುಕೊಳ್ಳುವ ಒಂದೇ ವಿಧಾನದಲ್ಲಿ ನಡೆದುಕೊಳ್ಳುವುದು ಎಂದು ಇದರ ಅರ್ಥವಾಗಿರುತ್ತದೆ.

# ಅನುವಾದ ಸಲಹೆಗಳು:

  • “ನಡೆ” ಎನ್ನುವ ಪದಕ್ಕೆ ಅಕ್ಷರಾರ್ಥವಾಗಿ ಅನುವಾದ ಮಾಡುವುದು ಉತ್ತಮವಾದ ವಿಷಯ. ಆದರೆ ಇದನ್ನು ಅರ್ಥಮಾಡಿಕೊಳ್ಳುವುದಕ್ಕೆ ಸರಿಯಾದ ಅರ್ಥವನ್ನು ಕೊಡುವವರೆಗೂ ಈ ರೀತಿ ಅನುವಾದ ಮಾಡಬಹುದು.
  • ಇಲ್ಲದಿದ್ದರೆ, “ನಡೆ” ಎನ್ನುವ ಪದಕ್ಕೆ ಅಲಂಕಾರಿಕ ಉಪಯೋಗಗಳಲ್ಲಿ “ಜೀವಿಸು” ಅಥವಾ “ನಡೆದುಕೋ” ಅಥವಾ “ನಡತೆ” ಎಂದೂ ಅನುವಾದ ಮಾಡಬಹುದು.
  • “ಆತ್ಮದಿಂದ ನಡೆ” ಎನ್ನುವ ಮಾತನ್ನು “ಪವಿತ್ರಾತ್ಮನಿಗೆ ವಿಧೇಯತೆ ತೋರಿಸುವುದರಲ್ಲಿ ಜೀವಿಸು” ಅಥವಾ “ಪವಿತ್ರಾತ್ಮನನ್ನು ಮೆಚ್ಚಿಸುವ ವಿಧಾನದಲ್ಲಿ ನಡೆದುಕೋ” ಅಥವಾ “ಪವಿತ್ರಾತ್ಮನು ನಿನ್ನನ್ನು ನಡೆಸುವ ಪ್ರಕಾರ ದೇವರನ್ನು ಮೆಚ್ಚಿಸುವ ಕಾರ್ಯಗಳನ್ನು ಮಾಡು” ಎಂದೂ ಅನುವಾದ ಮಾಡಬಹುದು.
  • “ದೇವರ ಆಜ್ಞೆಗಳಲ್ಲಿ ನಡೆ” ಎನ್ನುವ ಮಾತನ್ನು “ದೇವರ ಆಜ್ಞೆಗಳ ಪ್ರಕಾರ ಜೀವಿಸು” ಅಥವಾ “ದೇವರ ಆಜ್ಞೆಗಳಿಗೆ ವಿಧೇಯನಾಗು” ಎಂದೂ ಅನುವಾದ ಮಾಡಬಹುದು.
  • “ದೇವರೊಂದಿಗೆ ನಡೆದಿದ್ದೇನೆ” ಎನ್ನುವ ಮಾತನ್ನು “ದೇವರನ್ನು ಘನಪಡಿಸುವುದರ ಮೂಲಕ ಮತ್ತು ಆತನಿಗೆ ವಿಧೇಯತೆ ತೋರಿಸುವುದರ ಮೂಲಕ ಇನ್ನೂ ಹತ್ತಿರ ಸಂಬಂಧದಲ್ಲಿ ಜೀವಿಸಿದೆ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಪವಿತ್ರಾತ್ಮ, ಘನಪಡಿಸು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1869, H1979, H1980, H1981, H3212, H4108, H4109, G1330, G1704, G3716, G4043, G4198, G4748

ನಡೆಸುವವನು, ನಡೆಸುವವರು, ಗೃಹನಿರ್ವಾಹಕ, ಗೃಹನಿರ್ವಾಹಕನು, ಗೃಹನಿರ್ವಾಹಕತ್ವ

# ಪದದ ಅರ್ಥವಿವರಣೆ:

ಸತ್ಯವೇದದಲ್ಲಿ “ನಡೆಸುವವನು” ಅಥವಾ “ಗೃಹನಿರ್ವಾಹಕನು” ಎನ್ನುವ ಪದಗಳು ಯಜಮಾನನ ಆಸ್ತಿಯನ್ನು ಮತ್ತು ವ್ಯಾಪಾರ ವ್ಯವಹಾರಗಳನ್ನು ಚೆನ್ನಾಗಿ ನೋಡಿಕೊಳ್ಳುವುದಕ್ಕೆ ಭರವಸೆಯುಳ್ಳ ಒಬ್ಬ ದಾಸನನ್ನು ಸೂಚಿಸುತ್ತದೆ.

  • ಗೃಹನಿರ್ವಾಹಕನಿಗೆ ಹೆಚ್ಚಾದ ಬಾಧ್ಯತೆಯನ್ನು ಕೊಡಲ್ಪಟ್ಟಿದೆ, ಇದರಲ್ಲಿ ಇತರ ದಾಸರರ ಕೆಲಸದ ಮೇಲೆ ಮೇಲ್ವೀಚಾರಕನಾಗಿರುವುದನ್ನು ಒಳಗೊಂಡಿರುತ್ತದೆ.
  • “ನಡೆಸುವವನು (ಮೇನೆಜರ್)” ಎನ್ನುವ ಪದವು ಗೃಹನಿರ್ವಾಹಕನಿಗಾಗಿ ಉಪಯೋಗಿಸುವ ಅತ್ಯಾಧುನಿಕ ಪದವಾಗಿರುತ್ತದೆ. ಈ ಎರಡು ಪದಗಳೂ ಯಾರಾದರೊಬ್ಬರಿಗಾಗಿ ಪ್ರಾಯೋಗಾತ್ಮಕ ಸಂಬಂಧಗಳನ್ನು ನಡೆಸುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ.

# ಅನುವಾದ ಸಲಹೆಗಳು:

  • ಈ ಪದವನ್ನು “ಮೇಲ್ವೀಚಾರಕ” ಅಥವಾ “ಮನೆಯನ್ನು ನಿರ್ವಹಿಸುವವನು” ಅಥವಾ “ಎಲ್ಲವನ್ನು ನಡೆಸುವ ದಾಸನು” ಅಥವಾ “ನಿರ್ವಹಿಸುವ ವ್ಯಕ್ತಿ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ದಾಸನು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H376, H4453, H5057, H6485, G2012, G3621, G3623

ನಂದಿಸು, ನಂದಿಸಿದೆ, ನಂದಿಸುವುದಕ್ಕಾಗದ

# ಪದದ ಅರ್ಥವಿವರಣೆ:

“ನಂದಿಸು” ಎನ್ನುವ ಪದಕ್ಕೆ ತೃಪ್ತಿ ಹೊಂದಬೇಕೆನ್ನುವ ಬಯಕೆಯನ್ನು ತಡೆಯುವುದು ಅಥವಾ ಪಕ್ಕಕ್ಕೆ ಇಡುವುದು ಎಂದರ್ಥ.

  • ಈ ಪದವು ಸಾಧಾರಣವಾಗಿ ದಾಹವನ್ನು ನಂದಿಸುವ ಸಂದರ್ಭದಲ್ಲಿ ಉಪಯೋಗಿಸಲ್ಪಟ್ಟಿರುತ್ತದೆ ಮತ್ತು ಯಾವುದಾದರೊಂದನ್ನು ಕುಡಿಯುವುದರ ಮೂಲಕ ದಾಹವನ್ನು ನಿಲ್ಲಿಸುವುದು ಎಂದರ್ಥ.
  • ಬೆಂಕಿಯನ್ನು ಆರಿಸುವುದಕ್ಕೂ ಈ ಪದವನ್ನು ಉಪಯೋಗಿಸಿರುತ್ತಾರೆ.
  • ದಾಹ ಮತ್ತು ಬೆಂಕಿ ಎನ್ನುವವುಗಳನ್ನು ನೀರಿನೊಂದಿಗೆ ನಂದಿಸುತ್ತಾರೆ.
  • “ಪವಿತ್ರಾತ್ಮನನ್ನು ನಂದಿಸಬಾರದೆಂದು” ಪೌಲನು ವಿಶ್ವಾಸಿಗಳಿಗೆ ಎಚ್ಚರಿಕೆಗಳನ್ನು ಕೊಡುವಾಗ ಆತನು “ನಂದಿಸು” ಎನ್ನುವ ಪದವನ್ನು ಅಲಂಕಾರಿಕ ಆಗಿ ಉಪಯೋಗಿಸಿದ್ದರು. ಪವಿತ್ರಾತ್ಮ ದೇವರು ಜನರಲ್ಲಿ ಆತನ ಫಲಗಳು ಮತ್ತು ವರಗಳು ಉಂಟು ಮಾಡುತ್ತಿರುವಾಗ ಜನರನ್ನು ನಿರುತ್ಸಾಹಗೊಳಿಸಬಾರದೆಂದು ಇದರ ಅರ್ಥವಾಗಿರುತ್ತದೆ. ಪವಿತ್ರಾತ್ಮನನ್ನು ನಂದಿಸುವುದು ಎಂದರೆ ಜನರಲ್ಲಿ ಪವಿತ್ರಾತ್ಮನು ತನ್ನ ಶಕ್ತಿಯನ್ನು ಮತ್ತು ಕೆಲಸವನ್ನು ಮಾಡದಂತೆ ಆತನನ್ನು ಅಡ್ಡಿಪಡಿಸುವುದು ಎಂದರ್ಥವಾಗಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಫಲ, ವರ, ಪವಿತ್ರಾತ್ಮ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1846, H3518, H7665, H8257, G762, G4570

ನಮಸ್ಕರಿಸು, ಬಾಗಿದೆ, ಬಾಗುತ್ತಿದ್ದೇವೆ, ಅಡ್ಡಬೀಳು, ಅಡ್ಡ ಬಿದ್ದು ಸಾಷ್ಟಾಂಗ ನಮಸ್ಕಾರ ಮಾಡು, ನಮಸ್ಕರಿಸಿದ್ದೇನೆ, ನಮಸ್ಕರಿಸುತ್ತಿದ್ದೇನೆ

# ಪದದ ಅರ್ಥವಿವರಣೆ:

ನಮಸ್ಕರಿಸು ಎಂದರೆ ಯಾರಾದರೊಬ್ಬರ ವಿಷಯದಲ್ಲಿ ಗೌರವವನ್ನು ವ್ಯಕ್ತಪಡಿಸುವುದಕ್ಕೆ ಮತ್ತು ಮರ್ಯಾದೆಯನ್ನು ಕೊಡುವುದಕ್ಕೆ ತಗ್ಗಿಸಿಕೊಂಡು ಬಾಗುವುದು ಎಂದರ್ಥ. “ಅಡ್ಡಬೀಳು” ಎನ್ನುವ ಪದಕ್ಕೆ ನೆಲದ ಮೇಲೆ ಮೊಣಕಾಲೂರಿ ತಲೆಯನ್ನು ಮತ್ತು ಕೈಗಳನ್ನಿಟ್ಟು ಬಾಗುವುದು ಎಂದರ್ಥ.

  • “ಮೊಣಕಾಲಿನ ಮೇಲೆ ಅಡ್ಡಬೀಳು” (ಮೊಣಕಾಲೂರು) ಮತ್ತು “ತಲೆಯನ್ನು ಬಾಗಿಸು” ಎನ್ನುವ ಮಾತುಗಳು ಇದರಲ್ಲಿ ಒಳಗೊಂಡಿರುತ್ತವೆ (ತುಂಬಾ ದುಃಖದಲ್ಲಿ ಅಥವಾ ತಗ್ಗಿಸಿಕೊಂಡು ಗೌರವ ಕೊಡುವುದರಲ್ಲಿ ತಲೆಯನ್ನು ಬಾಗಿಸು ಎಂದರ್ಥವನ್ನು ಕೊಡುತ್ತದೆ).
  • ಅಡ್ಡಬೀಳುವುದೆನ್ನುವುದು ಕೆಲವೊಂದುಬಾರಿ ಪ್ರಲಾಪಿಸುವುದಕ್ಕೆ ಅಥವಾ ಯಾತನೆ ಅನುಭವಿಸುವುದಕ್ಕೆ ಗುರುತಾಗಿರುತ್ತದೆ. “ಕೆಳಗೆ ಅಡ್ಡಬಿದ್ದ” ವ್ಯಕ್ತಿ ದೀನತೆಯ ಅತೀ ಕಡಿಮೆ ಸ್ಥಾನಕ್ಕೆ ತೆಗೆದುಕೊಂಡುಬಂದಿರುತ್ತಾನೆ.
  • ಅರಸರು ಮತ್ತು ಇತರ ಪಾಲಕರು ಹಾಗೆ ಅತೀ ಉನ್ನತ ಸ್ಥಾನದಲ್ಲಿರುವ ಯಾರಾದರೊಬ್ಬರ ಹತ್ತಿರ ಅನೇಕಬಾರಿ ಒಬ್ಬ ವ್ಯಕ್ತಿ ನಮಸ್ಕರಿಸುತ್ತಾನೆ.
  • ದೇವರ ಮುಂದೆ ನಮಸ್ಕರಿಸಿ ಬಾಗುವುದೆನ್ನುವುದು ಆತನನ್ನು ಆರಾಧಿಸುತ್ತಿದ್ದೇವೆನ್ನುವ ಭಾವವ್ಯಕ್ತೀಕರಣವಾಗಿರುತ್ತದೆ.
  • ಸತ್ಯವೇದದಲ್ಲಿ ಅನೇಕ ಜನರು ಯೇಸು ದೇವರ ಕಡೆಯಿಂದ ಬಂದ ವ್ಯಕ್ತಿಯೆಂದು ಆತನ ಬೋಧನೆ ಮತ್ತು ಅದ್ಭುತಗಳನ್ನು ನೋಡಿ ತಿಳಿದುಕೊಂಡಾಗ ಅವರೆಲ್ಲರು ಯೇಸುವಿಗೆ ನಮಸ್ಕರಿಸಿದ್ದಾರೆ.
  • ಒಂದಾನೊಂದು ದಿನ ಯೇಸು ಹಿಂದಿರುಗಿ ಬರುವಾಗ, ಪ್ರತಿಯೊಬ್ಬರೂ ಆತನನ್ನು ಆರಾಧಿಸುವುದಕ್ಕೆ ಮೊಣಕಾಲೂರುತ್ತಾನೆಂದು ಸತ್ಯವೇದವು ಹೇಳುತ್ತಿದೆ.

# ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ ಈ ಪದವನ್ನು “ಮುಂದಕ್ಕೆ ಬಾಗು” ಅಥವಾ “ತಲೆಯನ್ನು ಬಾಗಿಸು” ಅಥವಾ “ಮೊಣಕಾಲೂರು” ಎನ್ನುವ ಪದಗಳು ಅಥವಾ ಮಾತುಗಳೊಂದಿಗೆ ಅನುವಾದ ಮಾಡಬಹುದು.
  • “ಅಡ್ಡಬೀಳು” ಎನ್ನುವ ಪದವನ್ನು “ಕೆಳಗೆ ಮೊಣಕಾಲೂರು” ಅಥವಾ “ಸಾಷ್ಟಾಂಗ ನಮಸ್ಕರಿಸು” ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಸಾರವಾಗಿ ಈ ಪದವನ್ನು ಅನುವಾದಿಸುವ ಒಂದು ವಿಧಾನಕ್ಕಿಂತ ಹೆಚ್ಚಾದ ವಿಧಾನಗಳನ್ನು ಕೆಲವೊಂದು ಭಾಷೆಗಳು ಹೊಂದಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ತಗ್ಗಿಸಿಕೊ, ಆರಾಧನೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H86, H3721, H3766, H5186, H5753, H5791, H6915, H7743, H7812, H7817, G1120, G2578, G2827, G4098, G4781, G4794

ನರಳು, ನರಳುವುದು, ನರಳಿದ, ನರಳುತ್ತಿದ್ದ,

# ಪದದ ಅರ್ಥವಿವರಣೆ

“ನರಳು” ಎನ್ನುವ ಪದ ಶಾರೀರಕ ಅಥವಾ ಮಾನಸಿಕ ಯಾತನೆಯಿಂದಾಗುವ ಆಳವಾದ, ಅತಿ ಸಣ್ಣ ಶಬ್ದದ ಅಳುವನ್ನು ಸೂಚಿಸುತ್ತದೆ. ಮಾತುಗಳನ್ನು ಉಚ್ಚರಿಸದೆ ಮಾಡುವ ಶಬ್ದವನ್ನು ಸಹ ಅದು ಸೂಚಿಸಬಹುದು.

  • ಬಹಳ ದುಃಖದ ಕಾರಣವಾಗಿ ಒಬ್ಬ ವ್ಯಕ್ತಿ ನರಳಬಹುದು.
  • ವಿಪರೀತ ಸಂಕಟವನ್ನು ಅನುಭವಿಸುವುದು ನರಳುವುದಕ್ಕೆ ಕಾರಣವಾಗಿರಬಹುದು.
  • “ನರಳು” ಎನ್ನುವ ಪದವನ್ನು “ನೋವಿನಿಂದ ಉಂಟಾಗುವ ಸಣ್ಣ ಅಳು” ಅಥವಾ “ಆಳವಾದ ದುಃಖ” ಎಂದು ಅನುವಾದ ಮಾಡಬಹುದು.
  • ನಾಮವಾಚಕವಾಗಿ ಉಪಯೋಗಿಸಿದರೆ, ಅದನ್ನು “ಯಾತನೆಯ ಸಣ್ಣ ಅಳು” ಅಥವಾ “ನೋವಿನ ಆಳವಾದ ಗೊಣಗು” ಎಂದು ಅನುವಾದ ಮಾಡಬಹುದು

(ಈ ಪದಗಳನ್ನು ಸಹ ನೋಡಿರಿ : ಅಳುವುದು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H584, H585, H602, H603, H1901, H1993, H5008, H5009, H5098, H5594, H7581, G1690, G4726, G4727, G4959

ನಾಚಿಕೆ, ನಾಚಿಕಪಡುವುದು, ನಾಚಿಕೆಪಟ್ಟಿದೆ, ಅವಮಾನಕರ, ಅವಮಾನಕರವಾಗಿ, ನಾಚಿಕೆರಹಿತ, ನಾಚಿಕೆರಹಿತವಾಗಿ, ನಾಚಿದ, ನಾಚಿಕೆಯಿಲ್ಲದ

# ಪದದ ಅರ್ಥವಿವರಣೆ:

“ನಾಚಿಕೆ” ಎನ್ನುವ ಪದವು ಒಬ್ಬ ವ್ಯಕ್ತಿ ಹೊಂದಿರುವ ಅವಮಾನಕರವಾದ ತುಂಬಾ ನೋವಿನ ಭಾವನೆಯನ್ನು ಸೂಚಿಸುತ್ತದೆ, ಯಾಕಂದರೆ ಒಬ್ಬನು ಅಥವಾ ಆ ವ್ಯಕ್ತಿ ಮಾಡಿದ ತಪ್ಪನ್ನು ಅಥವಾ ಅವಮಾನಕರವಾದ ವಿಷಯದ ಕುರಿತಾಗಿ ಪಡೆಯುವ ಭಾವನೆಯಾಗಿರುತ್ತದೆ.

  • “ಅವಮಾನಕರ”ವಾದದ್ದು ಎಂದರೆ “ಸರಿಯಾಗಿಲ್ಲದ್ದು” ಅಥವಾ “ಕಳಂಕ ತರುವ” ಎಂದರ್ಥವಾಗಿರುತ್ತದೆ.
  • “ನಾಚಿದ” ಎನ್ನುವ ಪದವು ಒಬ್ಬ ನಾಚಿಕೆಯಾದ ಕ್ರಿಯೆಗಳನ್ನು ಮಾಡಿದಾಗ ಅವನು ಹೇಗಿರುತ್ತಾನೆನ್ನುವದನ್ನು ವಿವರಿಸುತ್ತದೆ.
  • “ನಾಚಿಕೆಪಡುವಂತೆ ಮಾಡು” ಎನ್ನುವ ಮಾತಿಗೆ ಜನರನ್ನು ಸೋಲಿಸು ಅಥವಾ ಅವರ ಪಾಪವನ್ನು ಎತ್ತಿ ತೋರಿಸು ಎಂದರ್ಥವಾಗಿರುತ್ತದೆ, ಇದರಿಂದ ಅವರು ತಮ್ಮ ಮೇಲೆ ತಾವು ನಾಚಿಕೆ ಪಡುತ್ತಾರೆ.
  • ವಿಗ್ರಹಗಳನ್ನು ಮಾಡಿ, ಅವುಗಳಿಗೆ ಆರಾಧನೆ ಮಾಡುವ ಪ್ರತಿಯೊಬ್ಬರೂ ನಾಚಿಕೆ ಪಡುತ್ತಾರೆಂದು ಪ್ರವಾದಿಯಾದ ಯೇಶಾಯನು ಹೇಳಿದನು.
  • ಒಬ್ಬ ವ್ಯಕ್ತಿಯ ಪಾಪವನ್ನು ಎತ್ತಿ ತೋರಿಸುವುದರ ಮೂಲಕ ಪಶ್ಚಾತ್ತಾಪ ಹೊಂದದ ವ್ಯಕ್ತಿ ನಾಚಿಕೆ ಪಡುವಂತೆ ದೇವರು ಮಾಡುತ್ತಾರೆ ಮತ್ತು ಆ ವ್ಯಕ್ತಿ ಅವಮಾನ ಹೊಂದುವಂತೆ ಮಾಡುತ್ತಾನೆ.

(ಈ ಪದಗಳನ್ನು ಸಹ ನೋಡಿರಿ : ಸುಳ್ಳು ದೇವರು, ತಗ್ಗಿಸಿಕೋ, ಯೆಶಯಾ, ಪಶ್ಚಾತ್ತಾಪ ಹೊಂದು, ಪಾಪ, ಆರಾಧನೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H937, H954, H955, H1317, H1322, H2616, H2659, H2781, H3001, H3637, H3639, H3640, H6172, H7022, H7036, H8103, H8106, G127, G149, G152, G153, G422, G808, G818, G819, G821, G1788, G1791, G1870, G2617, G3856, G5195

ನಾಚಿಕೆಗೇಡು, ನಾಚಿಕೆಗೇಡನ್ನುಂಟು ಮಾಡುತ್ತದೆ, ನಾಚಿಕೆಗೇಡು ಉಂಟಾಯಿತು, ಅಪಮಾನಕರ

# ಸತ್ಯಾಂಶಗಳು:

“ನಾಚಿಕೆಗೇಡು” ಎನ್ನುವ ಪದವು ಗೌರವವನ್ನು ಮತ್ತು ಮಾನವನ್ನು ಕಳಕೊಂಡಿರುವ ಸ್ಥಿತಿಯನ್ನು ಸೂಚಿಸುತ್ತದೆ.

  • ಒಬ್ಬ ವ್ಯಕ್ತಿ ಪಾಪವನ್ನು ಮಾಡಿದರೆ, ಅದು ಅವನನ್ನು ನಾಚಿಕೆಗೇಡುತನಕ್ಕೆ ಅಥವಾ ಅವಮಾನಕ್ಕೆ ಗುರಿ ಮಾಡುತ್ತದೆ.
  • “ಅಪಮಾನಕರ” ಎನ್ನುವ ಪದವು ಪಾಪ ಕಾರ್ಯವನ್ನು ಮಾಡಿದ ಒಬ್ಬ ವ್ಯಕ್ತಿಯನ್ನು ವಿವರಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ.
  • ಕೆಲವೊಂದುಬಾರಿ ಒಳ್ಳೇಯ ವಿಷಯಗಳನ್ನು ಮಾಡುತ್ತಿರುವ ಒಬ್ಬ ವ್ಯಕ್ತಿಯನ್ನು ಅವಮಾನಿಸುವ ರೀತಿಯಲ್ಲಿ ಅಥವಾ ನಾಚಿಕೆಗೇಡು ಎನ್ನುವ ರೀತಿಯಲ್ಲಿ ಜನರು ನೋಡುತ್ತಿರುತ್ತಾರೆ.
  • ಉದಾಹರಣೆಗೆ, ಯೇಸುವನ್ನು ಶಿಲುಬೆಗೆ ಏರಿಸಿ ಸಾಯಿಸಿದಾಗ, ಈ ರೀತಿ ಮರಣ ಹೊಂದುವುದು ತುಂಬಾ ನಾಚಿಕೆಗೇಡುತನವೆಂದು ಭಾವಿಸುತ್ತಾರೆ. ಈ ನಾಚಿಕೆಗೇಡನ್ನು ಅನುಭವಿಸಲು ಯೇಸು ಯಾವ ತಪ್ಪನ್ನು ಅಥವಾ ಪಾಪವನ್ನು ಮಾಡಲಿಲ್ಲ.
  • “ನಾಚಿಕೆಗೇಡು” ಎನ್ನುವ ಪದವನ್ನು ಉಪಯೋಗಿಸುವುದರಲ್ಲಿ “ನಾಚಿಕೆ” ಅಥವಾ “ಅವಮಾನ” ಎನ್ನುವ ಪದಗಳು ಒಳಗೊಂಡಿರುತ್ತವೆ.
  • “ಅಪಮಾನಕರ” ಎನ್ನುವ ಪದವನ್ನು ಉಪಯೋಗಿಸುವುದರಲ್ಲಿ “ಮರ್ಯಾದೆ ಹೋಗುವ” ಅಥವಾ “ಅವಮಾನವನ್ನುಂಟು ಮಾಡುವ” ವಿಷಯಗಳು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಅವಮಾನ, ಗೌರವ, ನಾಚಿಕೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H954, H1984, H2490, H2617, H2659, H2781, H2865, H3637, H3971, H5007, H5034, H5039, H6031, H7036, G149, G819, G3680, G3856

ನಾಲಿಗೆ, ನಾಲಿಗೆಗಳು

# ಪದದ ಅರ್ಥವಿವರಣೆ:

ಸತ್ಯವೇದದಲ್ಲಿರುವ “ನಾಲಿಗೆ” ಎನ್ನುವ ಪದಕ್ಕೆ ಅನೇಕವಾದ ಅಲಂಕಾರಿಕ ಅರ್ಥಗಳಿವೆ.

  • ಸತ್ಯವೇದದಲ್ಲಿ ಈ ಪದಕ್ಕೆ ಅತೀ ಸಾಧಾರಣವಾದ ಅಲಂಕಾರಿಕ ಅರ್ಥವು ಏನಂದರೆ “ಭಾಷೆ” ಅಥವಾ “ಮಾತುಗಳು” ಎಂದರ್ಥ.
  • ಕೆಲವೊಂದುಬಾರಿ “ನಾಲಿಗೆ” ಎನ್ನುವುದು ನಿರ್ದಿಷ್ಟವಾದ ಜನರ ಗುಂಪಿನಿಂದ ಮಾತನಾಡುವ ಮಾನವ ಭಾಷೆಯನ್ನು ಸೂಚಿಸುತ್ತದೆ.
  • ಬೇರೊಂದು ಸಮಯಗಳಲ್ಲಿ ಇದು “ಪವಿತ್ರಾತ್ಮ ವರಗಳಲ್ಲಿ” ಒಂದಾಗಿ ಕ್ರಿಸ್ತನ ವಿಶ್ವಾಸಿಗಳಿಗೆ ಪವಿತ್ರಾತ್ಮನು ಕೊಡುವ ಪ್ರಕೃತಾತೀತವಾದ ಭಾಷೆಯನ್ನೂ ಸೂಚಿಸುತ್ತದೆ.
  • ಬೆಂಕಿ “ನಾಲಿಗೆಗಳು” ಎನ್ನುವ ಮಾತು ಬೆಂಕಿ “ಜ್ವಾಲೆಗಳನ್ನು” ಸೂಚಿಸುತ್ತದೆ.
  • “ನನ್ನ ನಾಲಿಗೆ ಆನಂದಪಡುತ್ತಿದೆ” ಎನ್ನುವ ಮಾತಿನಲ್ಲಿರುವ “ನಾಲಿಗೆ” ಎನ್ನುವ ಪದವಿಲ್ಲಿ ಪೂರ್ತಿಯಾಗಿ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ. (ನೋಡಿರಿ: ಲಾಕ್ಷಣಿಕ ಪ್ರಯೋಗ
  • “ಸುಳ್ಳಿನ ನಾಲಿಗೆ” ಎನ್ನುವ ಮಾತು ಒಬ್ಬ ವ್ಯಕ್ತಿಯ ಸ್ವರವನ್ನು ಅಥವಾ ಮಾತುಗಳನ್ನು ಸೂಚಿಸುತ್ತದೆ. (ನೋಡಿರಿ: ಗೌಣೀ ಲಕ್ಷಣ

# ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ “ನಾಲಿಗೆ” ಎನ್ನುವ ಪದವನ್ನು “ಭಾಷೆ” ಅಥವಾ “ಅತ್ಮೀಯಕವಾದ ಭಾಷೆ” ಎಂದೂ ಅನುವಾದ ಮಾಡಬಹುದು. ಸೂಚಿಸುವ ಪದವು ಸ್ಪಷ್ಟವಾಗಿಲ್ಲದಿದ್ದರೆ, “ಭಾಷೆ” ಎಂದು ಅನುವಾದ ಮಾಡುವುದು ಉತ್ತಮ.
  • ಬೆಂಕಿಯನ್ನು ಸೂಚಿಸಿದಾಗ, ಈ ಪದವು “ಜ್ವಾಲೆಗಳು” ಎಂದು ಅನುವಾದ ಮಾಡಬಹುದು.
  • “ನನ್ನ ನಾಲಿಗೆ ಆನಂದಪಡುತ್ತಿದೆ” ಎನ್ನುವ ಮಾತನ್ನು “ನಾನು ಆನಂದಪಟ್ಟು, ದೇವರನ್ನು ಸ್ತುತಿಸುವೆನು” ಅಥವಾ “ನಾನು ಆನಂದಕರವಾಗಿ ದೇವರನ್ನು ಸ್ತುತಿಸುತ್ತೇನೆ” ಎಂದೂ ಅನುವಾದ ಮಾಡಬಹುದು.
  • “ಸುಳ್ಳಾಡುವ ನಾಲಿಗೆ” ಎನ್ನುವ ಮಾತು “ಸುಳ್ಳಾಡುವ ವ್ಯಕ್ತಿ” ಅಥವಾ “ಸುಳ್ಳಾಡುವ ಜನರು” ಎಂದೂ ಅನುವಾದ ಮಾಡಬಹುದು.
  • “ಅವರ ನಾಲಿಗೆಗಳೊಂದಿಗೆ” ಎನ್ನುವಂಥ ಮಾತುಗಳನ್ನು “ಅವರು ಹೇಳುವ ವಿಷಯಗಳೊಂದಿಗೆ” ಅಥವಾ “ಅವರ ಮಾತುಗಳಿಂದ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ವರ, ಪವಿತ್ರಾತ್ಮ, ಸಂತೋಷ, ಸ್ತುತಿ, ಆನಂದಿಸು, ಆತ್ಮ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H762, H2013, H2790, H3956, G1100, G1258, G1447, G2084

ನಾಶಗೊಳಿಸು, ನಾಶಗೊಳಿಸುವುದು, ನಾಶಗೊಳಿಸಿದೆ

# ಪದದ ಅರ್ಥವಿವರಣೆ:

ಯಾವುದಾದರೊಂದನ್ನು “ನಾಶಗೊಳಿಸುವುದು” ಎಂದರೆ ಉಪಯೋಗಕ್ಕೆ ಬಾರದಂತೆ ಮಾಡು ಅಥವಾ ಕೆಡಿಸು, ಧ್ವಂಸಮಾಡು ಎಂದರ್ಥ. “ನಾಶಗೊಳಿಸು” ಅಥವಾ “ನಾಶಗೊಳಿಸುವುದು” ಎನ್ನುವ ಪದಗಳು ನಾಶಗೊಳಿಸಲ್ಪಟ್ಟಿರುವ ಯಾವುದಾದರೊಂದರ ಹಾಳಾದ ಅವಶೇಷಗಳನ್ನು ಮತ್ತು ಕಲ್ಲುಮಣ್ಣುಗಳನ್ನು ಸೂಚಿಸುತ್ತದೆ.

  • ಲೋಕದ ತೀರ್ಪು ನಡೆದಾಗ ಮತ್ತು ಶಿಕ್ಷಿಸಲ್ಪಡುವಾಗ “ನಾಶದ ದಿನ”ವಾಗಿ ದೇವರ ಕೋಪಾಗ್ನಿಯ ದಿನದ ಕುರಿತಾಗಿ ಪ್ರವಾದಿಯಾದ ಜೆಫನ್ಯನು ಮಾತನಾಡುತ್ತಾನೆ.
  • ಅದೈವಿಕವಾಗಿರುವ ಜನರಿಗೆ ನಾಶವು ಮತ್ತು ಕೇಡು ಉಂಟಾಗುತ್ತದೆಯೆಂದು ಜ್ಞಾನೋಕ್ತಿಗಳ ಪುಸ್ತಕವು ಹೇಳುತ್ತಿದೆ.
  • ಸಂದರ್ಭಾನುಸಾರವಾಗಿ, “ನಾಶಗೊಳಿಸು” ಎನ್ನುವ ಪದವನ್ನು “ಧ್ವಂಸಮಾಡು” ಅಥವಾ “ಕೆಡಿಸು” ಅಥವಾ “ನಿರುಪಯೋಗವನ್ನಾಗಿ ಮಾಡು” ಅಥವಾ “ಮುರಿ” ಎಂದೂ ಅನುವಾದ ಮಾಡಬಹುದು.
  • “ನಾಶಗೊಳಿಸು” ಅಥವಾ “ನಾಶಗೊಳಿಸುವುದು” ಎನ್ನುವ ಪದಗಳನ್ನು “ಅವಶೇಷ” ಅಥವಾ “ಮುರಿದುಹೋಗಿರುವ ಭವನಗಳು” ಅಥವಾ “ನಾಶಮಾಡಲ್ಪಟ್ಟ ಪಟ್ಟಣ” ಅಥವಾ “ವಿನಾಶ” ಅಥವಾ “ಮುರಿಯಲ್ಪಡುವಿಕೆ” ಅಥವ “ನಾಶ” ಎಂದೂ ಸಂದರ್ಭಾನುಸಾರವಾಗಿ ಅನುವಾದ ಮಾಡಬಹುದು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H6, H1197, H1530, H1820, H1942, H2034, H2040, H2717, H2719, H2720, H2723, H2930, H3510, H3765, H3782, H3832, H4072, H4288, H4383, H4384, H4654, H4658, H4876, H4889, H5221, H5557, H5754, H5856, H6365, H7451, H7489, H7582, H7591, H7612, H7701, H7703, H7843, H8047, H8074, H8077, H8414, H8510, G2679, G2692, G3639, G4485

ನಿದ್ರಿಸು, ನಿದ್ರೆಯಲ್ಲಿ ಬೀಳುವುದು, ನಿದ್ದೆ ಮಾಡಿತು, ನಿದ್ದೆಯಲ್ಲಿ ಬಿದ್ದಿದೆ, ನಿದ್ದೆ, ನಿದ್ದೆಗಳು, ನಿದ್ದೆ ಮಾಡಿದೆ, ನಿದ್ದೆ ಮಾಡುವುದು, ನಿದ್ದೆ ಮಾಡುವವನು, ನಿದ್ದೆಯಿಲ್ಲದಿರುವುದು, ನಿದ್ದೆಯಿಂದ

# ಪದದ ಅರ್ಥವಿವರಣೆ:

ಈ ಎಲ್ಲಾ ಪದಗಳು ಮರಣಕ್ಕೆ ಸಂಬಂಧಿತವಾಗಿ ಅಲಂಕಾರಿಕ ಅರ್ಥಗಳನ್ನು ಹೊಂದಿರುತ್ತದೆ.

  • “ನಿದ್ದೆ” ಅಥವಾ “ನಿದ್ದೆಯಲ್ಲಿರುವುದು” ಎನ್ನುವ ಪದಗಳಿಗೆ ರೂಪಕಾಲಂಕಾರ ಅರ್ಥವು “ಮರಣಿಸಿದ್ದು” ಎಂದಾಗಿರುತ್ತದೆ. (ನೋಡಿರಿ: ರೂಪಕಾಲಂಕಾರ)
  • “ನಿದ್ರೆಯಲ್ಲಿ ಬೀಳುವುದು” ಎನ್ನುವ ಮಾತಿಗೆ ನಿದ್ದೆ ಮಾಡುವುದಕ್ಕೆ ಆರಂಭಿಸುವುದು ಎಂದರ್ಥ, ಅಥವಾ ಅಲಂಕಾರಿಕವಾಗಿ ಸಾಯುವದು ಎಂದರ್ಥ.
  • “ಒಬ್ಬರ ಪಿತೃಗಳೊಂದಿಗೆ ನಿದ್ರಿಸು” ಎನ್ನುವ ಮಾತಿಗೆ ಒಬ್ಬರ ಪೂರ್ವಜರು ಸತ್ತಿರುವ ರೀತಿಯಲ್ಲಿ ಸಾಯುವುದು ಎಂದರ್ಥ, ಅಥವಾ ಒಬ್ಬರ ಪಿತೃಗಳು ಮರಣಿಸಿದ ಹಾಗೆಯೇ ಮರಣಿಸುವುದು ಎಂದರ್ಥ.

# ಅನುವಾದ ಸಲಹೆಗಳು:

  • “ನಿದ್ರೆಯಲ್ಲಿ ಬೀಳುವುದು” ಎನ್ನುವ ಮಾತನ್ನು “ಆಕಸ್ಮಿಕವಾಗಿ ನಿದ್ದೆಯಲ್ಲಿ ಜಾರಿಹೋಗುವುದು” ಅಥವಾ “ನಿದ್ದೆಯನ್ನು ಆರಂಭಿಸುವುದು” ಅಥವಾ “ಸಾಯುವುದು” ಎಂದು ಸಂದರ್ಭಾನುಸಾರವಾಗಿ ಈ ಮಾತುಗಳನ್ನು ಅನುವಾದ ಮಾಡಬಹುದು.
  • ಸೂಚನೆ: ಓದುಗಾರರು ಇದರ ಅರ್ಥವನ್ನು ಮಾಡಿಕೊಳ್ಳದ ಕೆಲವು ಸಂದರ್ಭದಲ್ಲಿ ರೂಪಕಾಲಂಕಾರವಾದ ಮಾತನ್ನು ಇಟ್ಟಿರುವುದೇ ತುಂಬಾ ಪ್ರಾಮುಖ್ಯ. ಉದಾಹರಣೆಗೆ, ಲಾಜರನು “ನಿದ್ದೆ ಮಾಡುತ್ತಿದ್ದಾನೆ” ಎಂದು ಯೇಸುವು ತನ್ನ ಶಿಷ್ಯರಿಗೆ ಹೇಳಿದಾಗ, ಅವರೆಲ್ಲರು ಲಾಜರನು ಸ್ವಾಭಾವಿಕವಾಗಿ ನಿದ್ದೆ ಮಾಡುತ್ತಿದ್ದಾನೆಂದು ಆಲೋಚನೆ ಮಾಡಿದ್ದರು. ಈ ಸಂದರ್ಭದಲ್ಲಿ ಈ ಮಾತನ್ನು “ಅವನು ಸತ್ತಿದ್ದಾನೆ” ಎಂದು ಅನುವಾದ ಮಾಡಿದರೆ ಅದಕ್ಕೆ ಯಾವ ಅರ್ಥವೂ ಇರುವುದಿಲ್ಲ.
  • ಕೆಲವೊಂದುಬಾರಿ “ನಿದ್ರಿಸು” ಮತ್ತು “ನಿದ್ದೆಯಲ್ಲಿರುವುದು” ಎನ್ನುವ ಪದಗಳು ಮರಣ ಅಥವಾ ಸಾಯುವುದು ಎನ್ನುವ ಅರ್ಥಗಳನ್ನು ಕೊಡದಿರುವಾಗ ಕೆಲವೊಂದು ಭಾಷೆಗಳಲ್ಲಿ ವಿಭಿನ್ನವಾದ ಪದಗಳನ್ನು ಉಪಯೋಗಿಸುತ್ತಾರೆ.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1957, H3462, H3463, H7290, H7901, H8139, H8142, H8153, H8639, G879, G1852, G1853, G2518, G2837, G5258

ನಿರ್ದೋಷಿ, ನಿರ್ದೋಷಗಳು, ನಿರಪರಾಧಿಯಾಗಿರುವುದು

# ನಿರ್ವಚನ:

“ನಿರ್ದೋಷ” ಎನ್ನುವ ಪದಕ್ಕೆ ಅರ್ಥವೇನಂದರೆ ಕಾನೂನುರಹಿತವಾಗಿ ಒಬ್ಬರನ್ನು ನಿರ್ದೋಷಿ ಎಂಬುವುದಾಗಿ ಪ್ರಕಟನೆ ಮಾಡುವುದು ಅಥವಾ ಒಬ್ಬರ ಮೇಲೆ ಆರೋಪ ಮಾಡಿದಾಗ ಮಾಡುವ ಅನೈತಿಕ ನಡತೆಯನ್ನು ತಿಳಿಸುತ್ತದೆ.

  • ಈ ಪದವು ಕೆಲವೊಂದುಸಲ ಸತ್ಯವೇದದಲ್ಲಿ ಪಾಪಿಗಳನ್ನು ಕ್ಷಮಿಸುವುದರ ಕುರಿತಾಗಿ ಮಾತನಾಡುತ್ತದೆ.
  • ದೇವರಿಗೆ ವಿರುದ್ಧವಾಗಿ ತಿರಸ್ಕರಿಸುವ ಮತ್ತು ದುಷ್ಟ ಕಾರ್ಯಗಳನ್ನು ಮಾಡುವ ಜನರನ್ನು ತಪ್ಪಾಗಿ ನಿರ್ದೋಷಿಗಳೆಂದು ಹೇಳುವುದರ ಕುರಿತಾದ ಸಂದರ್ಭದ ಬಗ್ಗೆ ಅನೇಕಸಲ ಮಾತನಾಡುತ್ತದೆ.
  • ಇದನ್ನು “ನಿರ್ದೋಷಿಯೆಂದು ಪ್ರಕಟನೆ ಮಾಡುವುದು” ಅಥವಾ “ದೋಷಿಯಾಗಿರುವವರಿಗೆ ತೀರ್ಪು ಮಾಡಬೇಡ” ಎಂದು ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : /ಕ್ಷಮಿಸು, /ಅಪರಾಧ, /ಪಾಪ

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3444, H5352, H5355, H6403, H6663

ನಿರ್ವಹಣೆ, ನಿರ್ವಹಿಸುವವರು, ಆಡಳಿತ ಮಾಡುವವರು, ನಿರ್ವಹಣೆ ಮಾಡುವಿಕೆ

# ಸತ್ಯಾಂಶಗಳು:

“ನಿರ್ವಹಣೆ” ಮತ್ತು “ನಿರ್ವಹಿಸುವವರು” ಎನ್ನುವ ಪದಗಳನ್ನು ಒಂದು ಕ್ರಮಬದ್ಧವಾದ ರೀತಿಯಲ್ಲಿ ನಡೆಯಲು ಸಹಾಯ ಮಾಡುವುದಕ್ಕೆ ಒಂದು ದೇಶದ ಜನರನ್ನು ಆಡಳಿತ ಮಾಡುವುದಕ್ಕೆ ಅಥವಾ ಕಾರ್ಯಗಳನ್ನು ನಿರ್ವಹಿಸುವುದಕ್ಕೆ ಉಪಯೋಗಿಸಲಾಗುತ್ತದೆ.

  • ದಾನಿಯೇಲನು ಮತ್ತು ಇತರ ಯೆಹೂದ್ಯರ ಮೂವರು ಯೌವನಸ್ಥರು ಕಾರ್ಯನಿರ್ವಹಿಸುವವರಾಗಿ ಆಯ್ಕೆ ಮಾಡಲ್ಪಟ್ಟಿದ್ದಾರೆ. ಅಥವಾ ಆ ಬಾಬೆಲೋನಿನ ಕೆಲವೊಂದು ಪ್ರಾಂತ್ಯಗಳ ಮೇಲೆ ಪ್ರಭುತ್ವದ ಅಧಿಕಾರಿಗಳಾಗಿ ನೇಮಿಸಲ್ಪಟ್ಟಿದ್ದಾರೆ.
  • ಹೊಸ ಒಡಂಬಡಿಕೆಯಲ್ಲಿ, ನಿರ್ವಹಿಸುವದೆನ್ನುವದು ಪವಿತ್ರಾತ್ಮನ ವರಗಳಲ್ಲಿ ಒಂದಾಗಿರುತ್ತದೆ.
  • ಇತರ ಭೂಮಿಗಳನ್ನು ಮತ್ತು ಭವನಗಳನ್ನು ನೋಡಿಕೊಳ್ಳುವ ಮೇಲ್ವೀಚಾರಕನಂಥೆ ನಿರ್ವಹಿಸುವದೆನ್ನುವ ಆತ್ಮೀಯಕ ವರವನ್ನು ಹೊಂದಿದ ಒಬ್ಬ ವ್ಯಕ್ತಿ ಜನರನ್ನು ನಡೆಸುವುದಕ್ಕೆ ಮತ್ತು ಆಳುವುದಕ್ಕೆ ಸಾಮರ್ಥ್ಯವನ್ನು ಹೊಂದಿರುತ್ತಾನೆ.

# ಅನುವಾದ ಸಲಹೆಗಳು

  • ಸಂದರ್ಭಕ್ಕೆ ತಕ್ಕಂತೆ, “ಕಾರ್ಯ ನಿರ್ವಾಹಕರು” ಎನ್ನುವ ಪದವನ್ನು ಬೇರೊಂದು ರೀತಿಯಲ್ಲಿ ಅನುವಾದ ಮಾಡುತ್ತಾರೆ, ಅದರಲ್ಲಿ “ರಾಜ್ಯಪಾಲ” ಅಥವಾ “ಸಂಯೋಜಕರು” ಅಥವಾ “ಮ್ಯಾನೇಜರ್” ಅಥವಾ “ಪಾಲಕರು” ಅಥವಾ “ಸರ್ಕಾರ ಅಧಿಕಾರಿಗಳು” ಎನ್ನುವ ಪದಗಳು ಒಳಗೊಂಡಿರುತ್ತವೆ.
  • “ನಿರ್ವಹಣೆ” ಎನ್ನುವ ಪದವನ್ನು “ಪಾಲಿಸುವುದು” ಅಥವಾ “ಆಡಳಿತ” ಅಥವಾ “ನಾಯಕತ್ವ” ಅಥವಾ “ಸಂಯೋಜನೆ” ಎಂಬುವುದಾಗಿಯೂ ಅನುವಾದ ಮಾಡಬಹುದು.
  • ಈ ಎಲ್ಲಾ ಪದಗಳ ಅನುವಾದನೆಯಲ್ಲಿ “ಉಸ್ತುವಾರಿ” ಅಥವಾ “ಆರೈಕೆಯನ್ನು ತೆಗೆದುಕೊಳ್ಳುವವರು” ಅಥವಾ “ಕ್ರಮ ವಹಿಸುವದು” ಎಂದು ಭಾವ ವ್ಯಕ್ತಗೊಳಿಸುವಂಥಹ ಪದಗಳು ಕೂಡ ಅದರಲ್ಲಿ ಭಾಗವಾಗಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : /ಬಾಬಿಲೋನ, /ದಾನಿಯೇಲ, /ವರ, /ರಾಜ್ಯಪಾಲರು, /ಹನನ್ಯಾ, /ಮೀಶಾಯೇಲ

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H5532, H5608, H5632, H6213, H7860, G2941

ನಿಲುವಂಗಿ, ನಿಲುವಂಗಿಗಳು, ನಿಲುವಂಗಿ ಧರಿಸಲಾಗಿದೆ

# ಪದದ ಅರ್ಥವಿವರಣೆ:

ನಿಲುವಂಗಿ ಎನ್ನುವುದು ಸ್ತ್ರೀ ಪುರುಷರು ಧರಿಸಬಹುದಾದ ಉದ್ದನೆಯ ತೋಳುಗಳಿರುವ ಹೊರ ಉಡುಪಾಗಿರುತ್ತದೆ. ಇದು ಧರಿಸುವ ಕೋಟಿಗೆ ಸಮಾನವಾಗಿರುತ್ತದೆ.

  • ನಿಲುವಂಗಿಗಳು ಮುಂಭಾಗದಲ್ಲಿ ತೆರೆದುಕೊಂಡಿರುತ್ತವೆ ಮತ್ತು ಅದರ ಸುತ್ತ ಕಟ್ಟಿಕೊಳ್ಳುವುದಕ್ಕೆ ಒಂದು ನಡುಕಟ್ಟು ಇರುತ್ತದೆ.
  • ಅವು ಉದ್ದವಾಗಿಯೂ ಅಥವಾ ಚಿಕ್ಕದಾಗಿಯೂ ಇರುತ್ತವೆ.
  • ನೇರಳೆ ಬಣ್ಣದ ನಿಲುವಂಗಿಗಳನ್ನು ದೊರೆತನಕ್ಕೆ, ಸಂಪತ್ತಿಗೆ ಮತ್ತು ಘನತೆಗೆ ಗುರುತಾಗಿರಲು ಅರಸರು ಧರಿಸುತ್ತಿದ್ದರು.

(ಈ ಪದಗಳನ್ನು ಸಹ ನೋಡಿರಿ : ದೊರೆತನ, ಉದ್ದನೆಯ ಕೋಟು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H145, H155, H899, H1545, H2436, H2684, H3671, H3801, H3830, H3847, H4060, H4254, H4598, H5497, H5622, H6614, H7640, H7757, H7897, H8071, G1746, G2066, G2067, G2440, G4749, G4016, G5511

ನಿಶ್ಚಯತೆ, ನಿಶ್ಚಯ, ಆತ್ಮವಿಶ್ವಾಸ

# ಪದದ ಅರ್ಥವಿವರಣೆ:

“ನಿಶ್ಚಯತೆ” ಎನ್ನುವ ಪದವು ಸತ್ಯವಾದ ವಿಷಯದಲ್ಲಿ ಅಥವಾ ನಡೆಯುವ ವಿಷಯಗಳಲ್ಲಿ ಖಚಿತವಾಗಿ ಇರುವುದನ್ನು ಸೂಚಿಸುತ್ತದೆ.

  • ಸತ್ಯವೇದದಲ್ಲಿ “ನಿರೀಕ್ಷೆ” ಎನ್ನುವ ಪದಕ್ಕೆ ಏನಾದರೊಂದು ವಿಷಯವು ಖಚಿತವಾಗಿ ನಡೆಯಬೇಕೆಂದು ಎದುರುನೋಡುತ್ತಾ ತಾಳಿಕೊಳ್ಳುವುದು ಎಂದರ್ಥ. ವಿಶೇಷವಾಗಿ ಇದನ್ನು ಯೇಸುವಿನಲ್ಲಿ ನಂಬಿಕೆಯಿಟ್ಟ ವಿಶ್ವಾಸಿಗಳಿಗೆ ದೇವರು ವಾಗ್ಧಾನ ಮಾಡಿದ್ದನ್ನು ಖಚಿತವಾಗಿ ಪಡೆದುಕೊಳ್ಳುವ ವಿಷಯದಲ್ಲಿ ಯುಎಲ್.ಬಿ ರವರು “ನಿಶ್ಚಯತೆ” ಅಥವಾ “ಭವಿಷ್ಯತ್ತಿಗಾಗಿ ನಿಶ್ಚಯತೆ” ಅಥವಾ “ಭವಿಷ್ಯತ್ತಿನ ನಿಶ್ಚಯತೆ” ಎಂದು ಅನೇಕಬಾರಿ ಅನುವಾದ ಮಾಡಿದ್ದಾರೆ.
  • “ನಿಶ್ಚಯತೆ” ಎನ್ನುವ ಪದವನ್ನು ಅನೇಕಬಾರಿ ಯೇಸುವಿನಲ್ಲಿ ನಂಬಿಕೆಯಿಟ್ಟ ವಿಶ್ವಾಸಿಗಳು ಒಂದಾನೊಂದು ದಿನ ಪರಲೋಕದಲ್ಲಿ ದೇವರೊಂದಿಗೆ ಶಾಶ್ವತವಾಗಿ ಇರುತ್ತಾರೆ ಎನ್ನುವ ಅರ್ಥಕ್ಕೆ ಸೂಚಿಸುತ್ತದೆ.
  • “ದೇವರಲ್ಲಿ ನಿಶ್ಚಯತೆಯಿಂದಿರು” ಎನ್ನುವ ಮಾತಿಗೆ ದೇವರು ಮಾಡಿದ ವಾಗ್ಧಾನವನ್ನು ಅನುಭವಿಸುವುದಕ್ಕೆ ಮತ್ತು ಪಡೆದುಕೊಳ್ಳುವುದಕ್ಕೆ ಸಂಪೂರ್ಣವಾಗಿ ಎದುರುನೋಡುತ್ತಾಯಿರುವುದು ಎಂದರ್ಥ.
  • “ನಿಶ್ಚಯತೆಯಿಂದಿರುವುದು” ಎನ್ನುವ ಮಾತಿಗೆ ದೇವರ ವಾಗ್ಧಾನದಲ್ಲಿ ನಂಬಿಕೆಯಿಡುವುದು ಮತ್ತು ದೇವರು ಹೇಳಿದ ಮಾತನ್ನು ನೆರವೇರಿಸುತ್ತಾರೆನ್ನುವ ಭರವಸೆಯಿಂದ ಜೀವಿಸುವುದು ಎಂದರ್ಥ. ಈ ಪದಕ್ಕೆ ಧೈರ್ಯವಾಗಿ ಜೀವಿಸುವುದು ಮತ್ತು ನಡೆದುಕೊಳ್ಳುವುದು ಎಂದರ್ಥವೂ ಉಂಟು.

# ಅನುವಾದ ಸಲಹೆಗಳು:

  • “ನಿಶ್ಚಯತೆ” ಎನ್ನುವ ಪದವನ್ನು “ಖಚಿತವಾಗಿ” ಅಥವಾ “ಖಂಡಿತವಾಗಿ” ಎಂದೂ ಅನುವಾದ ಮಾಡಬಹುದು.
  • “ನಿಶ್ಚಯತೆಯಿಂದಿರು” ಎನ್ನುವ ಪದವನ್ನು “ಸಂಪೂರ್ಣವಾಗಿ ಭರವಸೆವಿಡು” ಅಥವಾ “ಅದರ ಕುರಿತಾಗಿ ಸಂಪೂರ್ಣ ಖಚಿತವನ್ನು ಹೊಂದಿಕೊ” ಅಥವಾ “ನಿಶ್ಚಯವಾಗಿ ತಿಳಿದುಕೊಳ್ಳಿರಿ” ಎಂದೂ ಅನುವಾದ ಮಾಡಬಹುದು.
  • “ಆತ್ಮವಿಶ್ವಾಸ” ಎನ್ನುವದನ್ನು “ಧೈರ್ಯವಾಗಿ” ಅಥವಾ “ಖಂಡಿತವಾಗಿ” ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಸಾರವಾಗಿ “ನಿಶ್ಚಯತೆ” ಎನ್ನುವ ಪದವನ್ನು ಅನುವಾದ ಮಾಡುವುದರಲ್ಲಿ, “ಸಂಪೂರ್ಣವಾದ ಭರವಸೆ” ಅಥವಾ “ಖಂಡಿತವಾದ ನಿರೀಕ್ಷೆ” ಅಥವಾ “ಖಂಡಿತ” ಎನ್ನುವ ಪದಗಳೂ ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ನಂಬು, ನಂಬು, ಧೈರ್ಯ, ನಂಬಿಕೆ, ನಿರೀಕ್ಷೆ, ಭರವಸೆ)

# ಸತ್ಯವೇದದ ಅನುಬಂಧ ವಾಕ್ಯಗಳು :

{{[ವಿಷಯ>ನಿಶ್ಚಯತೆ&ಯಾವ ವ್ಯಾಖ್ಯೆಗಳಿಲ್ಲ}}

# ಪದ ಡೇಟಾ:

  • Strong's: H982, H983, H985, H986, H3689, H3690, H4009, G1340, G2292, G3954, G3982, G4006, G5287

ನೀಚ ಸಾಕ್ಷಿ, ಸುಳ್ಳು ವರದಿ, ಸುಳ್ಳು ಸಾಕ್ಷಿ, ಸುಳ್ಳು ಸಾಕ್ಷಿಗಳು

# ಪದದ ಅರ್ಥವಿವರಣೆ

“ನೀಚ ಸಾಕ್ಷಿ” ಅಥವಾ “ಸುಳ್ಳು ಸಾಕ್ಷಿ” ಎನ್ನುವ ಪದಗಳು ಒಬ್ಬ ವ್ಯಕ್ತಿ ಅಥವಾ ಸಂದರ್ಭವನ್ನು ಕುರಿತಾಗಿ ನ್ಯಾಯಾಲಯ ಎಂತ ಸ್ಥಳದಲ್ಲಿ ಸುಳ್ಳು ಹೇಳುವ ವ್ಯಕ್ತಿಯನ್ನು ಸೂಚಿಸುತ್ತದೆ.

  • “ಸುಳ್ಳು ವರದಿ” ಎನ್ನುವುದು ಅವರು ಹೇಳಿರುವ ಸುಳ್ಳು ಸಂಗತಿಯಾಗಿದೆ.
  • “ಸುಳ್ಳು ಸಾಕ್ಷಿ ಹೇಳುವುದು” ಎಂದರೆ ಯಾವುದಾದರು ವಿಷಯವನ್ನು ಸುಳ್ಳು ವರದಿ ಕೊಡುವುದೆಂದು ಅರ್ಥ.
  • ಒಬ್ಬ ವ್ಯಕ್ತಿಗೆ ಶಿಕ್ಷೆ ಹಾಕಬೇಕೆಂದು ಅಥವಾ ಕೊಲ್ಲಿಸಬೇಕೆಂದು ಸುಳ್ಳು ಸಾಕ್ಷಿ ಹೇಳಿದ ಅನೇಕರನ್ನು ಕುರಿತಾಗಿ ಸತ್ಯವೇದದಲ್ಲಿ ಬರೆಯಲ್ಪಟ್ಟಿದೆ.

# ಅನುವಾದ ಸಲಹೆಗಳು:

  • “ಸುಳ್ಳು ಸಾಕ್ಷಿ ಹೇಳುವುದು” ಎನ್ನುವದನ್ನು “ಬೇರೆಯವರ ಕುರಿತಾಗಿ ಸುಳ್ಳು ವರದಿ ಕೊಡುವುದು” ಅಥವಾ “ಯಾರೋ ಕುರಿತಾಗಿ ಸುಳ್ಳು ಹೇಳುವುದು” ಅಥವಾ “ಸುಳ್ಳು” ಎಂದು ಅನುವಾದ ಮಾಡಬಹುದು.
  • “ಸುಳ್ಳು ಸಾಕ್ಷಿ” ಒಬ್ಬ ವ್ಯಕ್ತಿಯನ್ನು ಸೂಚಿಸುತ್ತಿದ್ದರೆ, ಅದನ್ನು “ಸುಳ್ಳು ಹೇಳುವ ವ್ಯಕ್ತಿ” ಅಥವಾ “ಸುಳ್ಳು ಹೇಳುವ ವ್ಯಕ್ತಿ” ಅಥವ “ಸತ್ಯವಲ್ಲದ ವಿಷಯಗಳನ್ನು ಹೇಳುವ ವ್ಯಕ್ತಿ” ಎಂದು ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಸಾಕ್ಷಿ, ಸತ್ಯ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H5707, H6030, H7650, H8267, G1965, G3144, G5571, G5575, G5576, G5577

ನೀರಿನಬುಗ್ಗೆ, ನೀರಿನಬುಗ್ಗೆಗಳು, ಬುಗ್ಗೆ, ಬುಗ್ಗೆಗಳು

# ಪದದ ಅರ್ಥವಿವರಣೆ

“ನೀರಿನ ಬುಗ್ಗೆ” ಮತ್ತು “ಬುಗ್ಗೆ” ಎನ್ನುವ ಪದಗಳು ನೆಲದಿಂದ ನೈಸರ್ಗಿಕವಾಗಿ ಹುಕ್ಕಿಬರುವ ನೀರನ್ನು ಸೂಚಿಸುತ್ತದೆ.

  • ಯೆಹೋವನಿಂದ ಬರುವ ಆಶಿರ್ವಾದಗಳಿಗೆ ಅಥವಾ ಶುದ್ಧಿ ಮಾಡಿ ಹಾಗೂ ಪರಿಶುದ್ಧಗೊಳಿಸುವ ವಸ್ತುವುಗಳನ್ನು ಸೂಚಿಸಲು ಈ ಪದಗಳನ್ನು ಸತ್ಯವೇದದಲ್ಲಿ ಅಲಂಕಾರಿಕ ರೂಪದಲ್ಲಿ ಉಪಯೋಗಿಸಿದ್ದಾರೆ.
  • ಪ್ರಸ್ತುತ ಕಾಲದಲ್ಲಿ, ಮನುಷ್ಯನು ಮಾಡಿದ ಒಂದು ವಸ್ತುವಿನಿಂದ ನೀರು ಹರಿಯುವುದನ್ನು ಬುಗ್ಗೆ ಎನ್ನುತ್ತಾರೆ, ಉದಾಹರಣೆಗೆ ಕುಡಿಯುವ ನೀರಿನ ಬುಗ್ಗೆ. ಈ ಪದವನ್ನು ಅನುವಾದ ಮಾಡುವಾಗ ಅದು ನೈಸರ್ಗಿಕವಾಗಿ ಹುಕ್ಕಿಹರಿಯುವ ನೀರನ್ನು ಸೂಚಿಸುವಂತೆ ಗಮನವಹಿಸಿರಿ.
  • ಈ ಪದವನ್ನು ಮತ್ತು “ಪ್ರಳಯ” ಎನ್ನುವ ಪದಗಳ ಅನುವಾದವನ್ನು ಹೋಲಿಸಿ ನೋಡಿರಿ.

(ಈ ಪದಗಳನ್ನು ಸಹ ನೋಡಿರಿ : ಪ್ರಳಯ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H794, H953, H1530, H1543, H1876, H3222, H4002, H4161, H4456, H4599, H4726, H5033, H5869, H5927, H6524, H6779, H6780, H7823, H8444, H8666, G242, G305, G393, G985, G1530, G1816, G4077, G4855, G5453

ನೀರು, ನೀರುಣಿಸುವುದು, ನೀರುಣಿಸಿದೆ, ನೀರು ಹಾಕುವುದು

# ಪದದ ಅರ್ಥವಿವರಣೆ:

ಇದರ ಪ್ರಾಥಮಿಕ ಅರ್ಥದಲ್ಲಿ “ನೀರು” ಎನ್ನವುದು ಸಾಗರ, ಸಮುದ್ರ, ಕೆರೆ ಅಥವಾ ನದಿ ಎನ್ನುವಂತಹ ನೀರಿರುವ ಭಾಗವನ್ನು ಕೂಡ ಅನೇಕಬಾರಿ ಸೂಚಿಸುತ್ತದೆ.

  • “ನೀರುಣಿಸುವುದು” ಎನ್ನುವ ಪದವು ನೀರು ಬರುವುದಕ್ಕೆ ಅನೇಕ ಆಧಾರಗಳನ್ನು ಅಥವಾ ನೀರಿನ ಭಾಗಗಳನ್ನು ಸೂಚಿಸುತ್ತದೆ. ಇದು ಬಹು ಹೆಚ್ಚಾದ ನೀರಿರುವುದನ್ನು ಸೂಚಿಸುವ ಸಾಧಾರಣ ಪದವಾಗಿರುತ್ತದೆ.
  • “ನೀರುಣಿಸುವುದು” ಎನ್ನುವ ಅಲಂಕಾರಿಕ ಉಪಯೋಗವು ಮಹಾ ಯಾತನೆಯನ್ನು, ಸಂಕಷ್ಟಗಳನ್ನು ಮತ್ತು ಹಿಂಸೆಗಳನ್ನು ಸೂಚಿಸುತ್ತದೆ. ಉದಾಹರಣೆಗೆ, ನಾವು “ಜಲಗಳ ಮೂಲಕ ಹಾದು ಹೋಗುತ್ತಿರುವಾಗ”, ಆತನು ನಮ್ಮೊಂದಿಗೆ ಇರುತ್ತಾನೆಂದು ದೇವರು ವಾಗ್ಧಾನ ಮಾಡಿದ್ದನು.
  • “ಅನೇಕವಾದ ಜಲಗಳು” ಎನ್ನುವ ಮಾತು ಸಂಕಷ್ಟಗಳನ್ನು ಎಷ್ಟು ಬಹುಭಯಂಕರವಾಗಿವೆ ಎನ್ನುವುದನ್ನು ಒತ್ತಿ ಹೇಳುತ್ತದೆ.
  • ಪಶುಪ್ರಾಣಿಗಳಿಗೆ ಮತ್ತು ಇತರ ಪ್ರಾಣಿಗಳಿಗೆ “ನೀರು” ಹಾಕುವುದು ಎಂದರೆ ಅವುಗಳಿಗೆ “ನೀರನ್ನು ಒದಗಿಸಿ ಕೊಡುವುದು” ಎಂದರ್ಥ. ಸತ್ಯವೇದ ಕಾಲಗಳಲ್ಲಿ ಇದು ಬಾದಲಿಯನ್ನು ತೆಗೆದುಕೊಂಡು ಬಾವಿಯೊಳಗೆ ಹಾಕಿ ನೀರನ್ನು ಎಳೆದು, ಬೇರೊಂದು ಪಾತ್ರೆಗಳಿಂದ ಪ್ರಾಣಿಗಳು ನೀರು ಕುಡಿಯುವುದಕ್ಕೆ ತೊಟ್ಟಿಯೊಳಗೆ ಹಾಕುವುದನ್ನು ಒಳಗೊಂಡಿರುತ್ತದೆ.
  • ಹಳೇ ಒಡಂಬಡಿಕೆಯಲ್ಲಿ ದೇವರು ತನ್ನ ಜನರಿಗಾಗಿ “ಜೀವಜಲ” ಹುಟ್ಟುವ ಕಾರಂಜಿಯಾಗಿ ಸೂಚಿಸಲ್ಪಟ್ಟಿದ್ದಾನೆ. ಇದಕ್ಕೆ ಅರ್ಥವೇನೆಂದರೆ ಆತನು ಆತ್ಮೀಯ ಶಕ್ತಿಗೆ ಮತ್ತು ಆನಂದಕ್ಕೂ ಆಧಾರವಾಗಿದ್ದಾನೆ.
  • ಹೊಸ ಒಡಂಬಡಿಕೆಯಲ್ಲಿ ಯೇಸು “ಜೀವಜಲ” ಎನ್ನುವ ಮಾತನ್ನು ಉಪಯೋಗಿಸಿದ್ದಾರೆ, ಈ ಮಾತು ಒಬ್ಬ ವ್ಯಕ್ತಿಯಲ್ಲಿ ಹೊಸ ಜೀವವನ್ನು ತರುವುದಕ್ಕೆ ಮತ್ತು ರೂಪಾಂತರಗೊಳಿಸುವುದಕ್ಕೆ ಪವಿತ್ರಾತ್ಮನನ್ನು ಸೂಚಿಸುತ್ತಿದ್ದಾನೆ.

# ಅನುವಾದ ಸಲಹೆಗಳು:

  • “ನೀರನ್ನು ಎಳೆ” ಎನ್ನುವ ಮಾತನ್ನು “ಬಾದಲಿಯನ್ನು ತೆಗೆದುಕೊಂಡು ಬಾವಿಯೊಳಗಿಂದ ನೀರನ್ನು ಮೇಲಕ್ಕೆ ತರುವುದು” ಎಂದೂ ಅನುವಾದ ಮಾಡಬಹುದು.
  • “ಜೀವಜಲದ ಹರಿಗಳು ಅವರಿಂದ ಹರಡುತ್ತವೆ” ಎನ್ನುವ ಮಾತನ್ನು “ಪರಿಶುದ್ಧಾತ್ಮನಿಂದ ಉಂಟಾಗುವ ಶಕ್ತಿ ಮತ್ತು ಆಶೀರ್ವಾದಗಳು ನೀರಿನ ಹರಿಗಳ ಹಾಗೆಯೇ ಅವರೊಳಗಿಂದ ಹರಡಿಬರುವವು” ಎಂದೂ ಅನುವಾದ ಮಾಡಬಹುದು. “ಆಶೀರ್ವಾದಗಳಿಗೆ” ಬದಲಾಗಿ “ವರಗಳು” ಅಥವಾ “ಫಲಗಳು” ಅಥವಾ “ದೈವಿಕ ಗುಣಲಕ್ಷಣಗಳು” ಎನ್ನುವ ಮಾತುಗಳನ್ನು ಉಪಯೋಗಿಸಬಹುದು.
  • ಯೇಸು ಬಾವಿಯ ಬಳಿ ಸಮಾರ್ಯ ಸ್ತ್ರೀಯೊಂದಿಗೆ ಮಾತನಾಡುತ್ತಿರುವಾಗ ಉಪಯೋಗಿಸಿದ “ಜೀವಜಲ” ಎನ್ನುವ ಪದವನ್ನು “ಜೀವವನ್ನು ಕೊಡುವ ನೀರು” ಅಥವಾ “ಜೀವವನ್ನು ಅನುಗ್ರಹಿಸುವ ನೀರು” ಎಂದೂ ಅನುವಾದ ಮಾಡಬಹುದು. ಈ ಸಂದರ್ಭದಲ್ಲಿ ನೀರಿನ ಚಿತ್ರಣವನ್ನು ಅನುವಾದದಲ್ಲಿ ಇಡಲೇಬೇಕಾಗಿರುತ್ತದೆ.
  • ಸಂದರ್ಭಾನುಸಾರವಾಗಿ, “ನೀರುಣಿಸುವುದು” ಅಥವಾ “ಅನೇಕ ಜಲಗಳು” ಎನ್ನುವ ಮಾತುಗಳನ್ನು “ಮಹಾ ಶ್ರಮೆ (ನೀರಿನಂತೆ ನಿನ್ನನ್ನು ಸುತ್ತಿರುವ ಪರಿಸ್ಥಿತಿಗಳು)” ಅಥವಾ “ಹರಿದುಬರುತ್ತಿರುವ ಸಂಕಷ್ಟಗಳು (ನೀರಿನ ಪ್ರಳಯದಂತೆ) ಅಥವಾ “ಹೆಚ್ಚಾಗಿ ನೀರಿರುವ ಭಾಗಗಳು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಜೀವನ, ಆತ್ಮ, ಪವಿತ್ರಾತ್ಮ, ಶಕ್ತಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2222, H4325, H4529, H4857, H7301, H7783, H8248, G504, G4215, G4222, G5202, G5204

ನುಂಗು, ನುಂಗುತ್ತದೆ, ನುಂಗಿದೆ, ನುಂಗುತ್ತಾಯಿದೆ

# ಪದದ ಅರ್ಥವಿವರಣೆ:

“ನುಂಗು” ಎನ್ನುವ ಪದಕ್ಕೆ ಧಾಳಿ ಮಾಡುವ ವಿಧಾನದಲ್ಲಿ ತಿನ್ನುವುದು ಅಥವಾ ಸೇವಿಸುವುದು.

  • ಈ ಪದವನ್ನು ಅಲಂಕಾರಿಕ ಭಾವನೆಯಲ್ಲಿ ಉಪಯೋಗಿಸಿದರೆ, ನೀವು ಒಬ್ಬರನ್ನೊಬ್ಬರು ಕಚ್ಚಾಡಿ, ಹರಕೊಂಡು ತಿನ್ನುವುದಾದರೆ ಒಬ್ಬರಿಂದೊಬ್ಬರು ನಾಶವಾದೀರಿ ಎಂದು ಪೌಲನು ವಿಶ್ವಾಸಿಗಳನ್ನು ಎಚ್ಚರಿಸಿದ್ದಾನೆ, ಇದಕ್ಕೆ ಮಾತುಗಳೊಂದಿಗೆ ಅಥವಾ ಕ್ರಿಯೆಗಳೊಂದಿಗೆ ಒಬ್ಬರನ್ನೊಬ್ಬರು ಧಾಳಿ ಮಾಡಿಕೊಳ್ಳಬೇಡಿರಿ ಅಥವಾ ನಾಶಗೊಳಿಸಿಕೊಳ್ಳಬೇಡಿರಿ ಎಂದರ್ಥ. (ಗಲಾತ್ಯ.5:15).
  • ಅಲಂಕಾರಿಕ ಭಾಷೆಯಲ್ಲಿ ಕೂಡ, “ನುಂಗು” ಎನ್ನುವ ಪದವನ್ನು ಅನೇಕಬಾರಿ “ಸಂಪೂರ್ಣವಾಗಿ ನಾಶಗೊಳಿಸು” ಎಂದು ಅರ್ಥಬರುವ ಪದವನ್ನಾಗಿ ಉಪಯೋಗಿಸಿದ್ದಾರೆ. ಉದಾಹರಣೆಗೆ, ದೇಶಗಳು ಒಂದಕ್ಕೊಂದು ನುಂಗುತ್ತಾ ಇವೆ ಅಥವಾ ಬೆಂಕಿ ಭವನಗಳನ್ನು ಮತ್ತು ಜನರನ್ನು ನುಂಗುತ್ತಾಯಿದೆ.
  • ಈ ಪದವನ್ನು “ಸಂಪೂರ್ಣವಾಗಿ ನಾಶಮಾಡು” ಅಥವಾ “ಒಟ್ಟಾಗಿ ಕೆಡಿಸಿಬಿಡು” ಎಂದೂ ಅನುವಾದ ಮಾಡಬಹುದು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H398, H399, H400, H402, H1104, H1105, H3216, H3615, H3857, H3898, H7462, H7602, G2068, G2666, G2719, G5315

ನೂಕು, ನೂಕಿದೆ, ನೂಕುವುದು

# ಪದದ ಅರ್ಥವಿವರಣೆ:

“ನೂಕು” ಎನ್ನುವ ಪದವು ಅಕ್ಷರಾರ್ಥವಾಗಿ ಬಲವನ್ನು ಉಪಯೋಗಿಸಿ ಯಾವುದಾದರೊಂದನ್ನು ಭೌತಿಕವಾಗಿ ಮುಂದೂಡುವುದು ಎಂದರ್ಥ. ಈ ಪ್ದವಕ್ಕೆ ಅನೇಕವಾದ ಅಲಂಕಾರಿಕ ಅರ್ಥಗಳಿವೆ.

  • “ಪಕ್ಕಕ್ಕೆ ನೂಕು” ಎನ್ನುವ ಮಾತಿಗೆ “ತಿರಸ್ಕರಿಸು” ಅಥವಾ “ಸಹಾಯ ಮಾಡುವುದಕ್ಕೆ ನಿರಾಕರಿಸು” ಎನ್ನುವ ಅರ್ಥಗಳನ್ನೂ ಕೊಡುತ್ತದೆ.
  • “ಕೆಳಕ್ಕೆ ನೂಕು” ಎನ್ನುವ ಮಾತಿಗೆ “ಹತ್ತಿಕ್ಕು” ಅಥವಾ “ಹಿಂಸಿಸು” ಅಥವಾ “ಸೋಲಿಸು” ಎನ್ನುವ ಅರ್ಥಗಳು ಬರುತ್ತವೆ. ಯಾರಾದರೊಬ್ಬರನ್ನು ಅಕ್ಷರಾರ್ಥವಾಗಿ ನೆಲಕ್ಕೆ ಹತ್ತಿಕ್ಕಿಡುವುದು ಎನ್ನುವ ಅರ್ಥವನ್ನೂ ಕೊಡುತ್ತದೆ.
  • “ಯಾರಾದರೊಬ್ಬರನ್ನು ಹೊರಕ್ಕೆ ನೂಕು” ಎನ್ನುವ ಮಾತಿಗೆ ಆ ವ್ಯಕ್ತಿಯನ್ನು “ಹೊರದೂಡು” ಅಥವಾ “ಪಕ್ಕಕ್ಕೆ ಕಳುಹಿಸು” ಎಂದರ್ಥ.
  • “ಮುಂದಕ್ಕೆ ನೂಕು” ಎನ್ನುವ ಮಾತಿಗೆ ಇದು ಸರಿಯಾದದ್ದು ಅಥವಾ ಸಂರಕ್ಷಿಸುವುದು ಎಂದು ಏನೂ ಆಲೋಚನೆ ಮಾಡದೇ ಯಾವುದಾದರೊಂದನ್ನು ಮಾಡುವುದನ್ನು ಮುಂದೆವರಿಸುವುದು ಅಥವಾ ಪಟ್ಟು ಹಿಡಿದು ಮಾಡುವುದು ಎಂದರ್ಥ.

(ಈ ಪದಗಳನ್ನು ಸಹ ನೋಡಿರಿ : ಪೀಡಿಸು, ಹಿಂಸಿಸು, ತಿರಸ್ಕರಿಸು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1556, H1760, H3276, H3423, H5055, H5056, H5186, H8804, G683, G4261

ನೆರಳು, ನೆರಳು ಕೊಡುವುದು, ಮಬ್ಬುಗವಿಸು, ಮಬ್ಬುಗವಿಸಿದೆ

# ಪದದ ಅರ್ಥವಿವರಣೆ:

“ನೆರಳು” ಎನ್ನುವ ಪದವು ಅಕ್ಷರಾರ್ಥವಾಗಿ ಒಂದು ವಸ್ತುವನ್ನು ಅಡ್ಡಿ ಇಟ್ಟು ಬೆಳಕು ಬರದಂತೆ ಮಾಡುವ ಕತ್ತಲನ್ನು ಸೂಚಿಸುತ್ತದೆ. ಇದಕ್ಕೆ ಅನೇಕ ಅಲಂಕಾರಿಕ ಅರ್ಥಗಳಿರುತ್ತವೆ.

  • “ಮರಣದ ನೆರಳು” ಎನ್ನುವ ಮಾತಿಗೆ ಮರಣವು ಪ್ರಸ್ತುತವಾಗಿದೆ ಅಥವಾ ತುಂಬಾ ಹತ್ತಿರವಾಗಿದೆ ಎಂದರ್ಥ, ನೆರಳು ಬರುವುದಕ್ಕೆ ತನ್ನ ವಸ್ತುವನ್ನು ಸೂಚಿಸುವಂತೆಯೇ ಇದು ಮರಣವನ್ನು ಸೂಚಿಸುತ್ತದೆ.
  • ಸತ್ಯವೇದದಲ್ಲಿ ಅನೇಕಬಾರಿ ಮನುಷ್ಯರ ಜೀವನವು ನೆರಳಿಗೆ ಹೋಲಿಸಲಾಗಿರುತ್ತದೆ, ಯಾಕಂದರೆ ಇದು ತುಂಬಾ ಹೆಚ್ಚಿನ ಸಮಯದವರೆಗೂ ಇರುವುದಿಲ್ಲ ಮತ್ತು ಇದು ಯಾವ ಪದಾರ್ಥವೂ ಆಗಿರುವುದಿಲ್ಲ.
  • ಕೆಲವೊಂದುಬಾರಿ “ನೆರಳು” ಎನ್ನುವ ಪದವನ್ನು “ಕತ್ತಲು” ಎನ್ನುವ ಪದಕ್ಕೆ ಪರ್ಯಾಯ ಪದವನ್ನಾಗಿ ಉಪಯೋಗಿಸಲಾಗಿರುತ್ತದೆ.
  • ದೇವರ ರೆಕ್ಕೆಗಳ ಅಥವಾ ಕೈಗಳ ನೆರಳಿನಲ್ಲಿ ಸಂರಕ್ಷಿಸಲ್ಪಡುವುದರ ಕುರಿತಾಗಿ ಅಥವಾ ಮರೆಯಾಗಿರುವುದರ ಕುರಿತಾಗಿ ಸತ್ಯವೇದವು ಮಾತನಾಡುತ್ತದೆ. ಇದು ಅಪಾಯಕರವಾದ ಸ್ಥಿತಿಯಿಂದ ಸಂರಕ್ಷಿಸಲ್ಪಡುವ ಮತ್ತು ಮರೆಯಾಗಿರುವ ಚಿತ್ರಣವಾಗಿರುತ್ತದೆ. ಈ ಸಂದರ್ಭಗಳಲ್ಲಿ “ನೆರಳು” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ, “ಛಾಯೆ” ಅಥವಾ “ಸಂರಕ್ಷಣೆ” ಅಥವಾ “ಸಂರಕ್ಷಣೆ” ಎನ್ನುವ ಪದಗಳು ಒಳಗೊಂಡಿರುತ್ತವೆ.
  • “ನೆರಳು” ಎನ್ನುವ ಪದವನ್ನು ನಿಜವಾದ ನೆರಳನ್ನು ಸೂಚಿಸುವುದಕ್ಕೆ ಉಪಯೋಗಿಸುವ ಸ್ಥಳೀಯ ಪದವನ್ನು ಉಪಯೋಗಿಸಿ ಅನುವಾದ ಮಾಡುವ ಉತ್ತಮವಾಗಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಕತ್ತಲು, ಬೆಳಕು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2927, H6738, H6751, H6752, H6754, H6757, H6767, G644, G1982, G2683, G4639

ನೆರೆಹೊರೆಯವನು, ನೆರೆಹೊರೆಯವರು, ನೆರೆಹೊರೆತನ, ನೆರೆಹೊರೆಯ

# ಪದದ ಅರ್ಥವಿವರಣೆ:

“ನೆರೆಹೊರೆ” ಎನ್ನುವ ಪದವು ಸಹಜವಾಗಿ ತುಂಬಾ ಹತ್ತಿರದಲ್ಲಿ ನಿವಾಸವಾಗಿರುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ. ಈ ಪದವು ಒಂದೇ ಸಮುದಾಯದಲ್ಲಿ ಅಥವಾ ಒಂದೇ ಜನರ ಗುಂಪಿನಲ್ಲಿ ಜೀವಿಸುವ ಒಬ್ಬರನ್ನು ಸಾಧಾರಣವಾಗಿ ಸೂಚಿಸುತ್ತದೆ.

  • “ನೆರೆಹೊರೆಯವನು” ಎನ್ನುವುದು ಒಬ್ಬರು ಒಂದೇ ಸಮುದಾಯಕ್ಕೆ ಭಾಗವಾಗಿರುವುದರಿಂದ ಆ ವ್ಯಕ್ತಿಯನ್ನು ಸಂರಕ್ಷಿಸಲ್ಪಟ್ಟವನನ್ನು ಮತ್ತು ಗೌರವವನ್ನು ಪಡೆಯುವನನ್ನು ಸೂಚಿಸುತ್ತದೆ.
  • ಹೊಸ ಒಡಂಬಡಿಕೆಯಲ್ಲಿ ಹೇಳಲ್ಪಟ್ಟಿರುವ ಒಳ್ಳೇಯ ಸಮಾರ್ಯದವನ ಸಾಮ್ಯದಲ್ಲಿ ಯೇಸು “ನೆರೆಹೊರೆಯವನು” ಎನ್ನುವ ಪದವನ್ನು ಅಲಂಕಾರಿಕವಾಗಿ ಉಪಯೋಗಿಸಿದ್ದಾರೆ, ಇದರ ಅರ್ಥದಲ್ಲಿ ಶತ್ರುವಾಗಿರುವನನ್ನು ಸೇರಿಸಿ, ಎಲ್ಲಾ ಮನುಷ್ಯರು ಒಳಗೊಂಡಿರುತ್ತಾರೆ.
  • ಸಾಧ್ಯವಾದರೆ, “ತುಂಬಾ ಹತ್ತಿರದಲ್ಲಿ ನಿವಾಸವಾಗಿರುವ ವ್ಯಕ್ತಿ” ಎಂದು ಅರ್ಥ ಬರುವ ಪದದೊಂದಿಗೆ ಅಥವಾ ಮಾತಿನೊಂದಿಗೆ ಅಕ್ಷರಾರ್ಥವಾಗಿ ಈ ಪದವನ್ನು ಅನುವಾದ ಮಾಡುವುದು ಉತ್ತಮ.

(ಈ ಪದಗಳನ್ನು ಸಹ ನೋಡಿರಿ : ವಿರೋಧಿ, ಸಾಮ್ಯ, ಜನರ ಗುಂಪು, ಸಮಾರ್ಯ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H5997, H7138, H7453, H7468, H7934, G1069, G2087, G4040, G4139

ನೇಗಿಲು, ಉಳುತ್ತದೆ, ಉಳಲ್ಪಟ್ಟಿದೆ, ಉಳುತ್ತಾಯಿರುವುದು, ಉಳುವವರು, ಉಳುವವನು, ಉಳುವ ಉಪಕರಣಗಳು, ಉಳದಿರುವುದು

# ಪದದ ಅರ್ಥವಿವರಣೆ:

“ನೇಗಿಲು” ಎನ್ನುವ ಪದವು ಒಂದು ಕೃಷಿ ಉಪಕರಣವಾಗಿರುತ್ತದೆ, ಇದನ್ನು ಸಸಿ ಹಚ್ಚುವುದಕ್ಕಾಗಿ ನೆಲವನ್ನು ಸಿದ್ಧಗೊಳಿಸಲು ಭೂಮಿಯನ್ನು ಉಳುವುದಕ್ಕಾಗಿ ಬಳಸುತ್ತಾರೆ.

  • ನೇಗಿಲುಗಳಿಗೆ ಮಣ್ಣನ್ನು ಅಗಿಯುವದಕ್ಕೆ ಚೂಪಾದ ಶಿಖೆಗಳನ್ನು ಹೊಂದಿರುತ್ತವೆ. ನೇಗಿಲನ್ನು ನಿರ್ದೇಶಿಸಲು ರೈತನು ಉಪಯೋಗಿಸುವುದಕ್ಕೆ ಅವುಗಳಿಗೆ ಸಾಧಾರಣವಾಗಿ ಹಿಡಿಕೆಗಳಿರುತ್ತವೆ.
  • ಸತ್ಯವೇದ ಕಾಲಗಳಲ್ಲಿ ನೇಗಿಲುಗಳು ಸಾಧಾರಣವಾಗಿ ಎತ್ತುಗಳಿಂದ ಅಥವಾ ಇತರ ಕೆಲಸ ಮಾಡುವ ಪ್ರಾಣಿಗಳಿಂದ ಉಳುತ್ತಿದ್ದರು.
  • ನೇಗಿಲುಗಳು ಹೆಚ್ಚಾಗಿ ಗಟ್ಟಿಯಾದ ಕಟ್ಟಿಗೆಯಿಂದ ಮಾಡಲ್ಪಡುತ್ತವೆ, ಆದರೆ ಚೂಪಾಗಿರುವ ಆ ಉಪಕರಣವನ್ನು ಕಂಚಿನ ಅಥವಾ ಕಬ್ಬಿಣ ಎನ್ನುವ ಲೋಹಗಳಿಂದ ಮಾಡಲ್ಪಟ್ಟಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಕಂಚು, ಎತ್ತು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H406, H855, H2758, H2790, H5215, H5647, H5656, H5674, H6213, H6398, G722, G723

ನೇರಳೆ ಬಣ್ಣ

# ಸತ್ಯಾಂಶಗಳು:

“ನೇರಳೆ ಬಣ್ಣ” ಎನ್ನುವ ಪದವು ಒಂದು ಬಣ್ಣದ ಹೆಸರಾಗಿರುತ್ತದೆ, ಇದು ನೀಲಿ ಮತ್ತು ಕೆಂಪು ಬಣ್ಣಗಳ ಮಿಶ್ರಣವಾಗಿರುತ್ತದೆ.

  • ಪುರಾತನ ಕಾಲಗಳಲ್ಲಿ ನೇರಳೆ ಬಣ್ಣವನ್ನು ಅರಸರ ಮತ್ತು ಇತರ ಉನ್ನತ ಅಧಿಕಾರಗಳ ಬಟ್ಟೆಗಳಿಗೆ ಬಣ್ಣ ಹಾಕುವುದಕ್ಕೆ ಉಪಯೋಗಿಸುವ ಅತೀ ಹೆಚ್ಚಾದ ಬೆಲೆಯುಳ್ಳ ಅಪರೂಪವಾದ ಬಣ್ಣವಾಗಿರುತ್ತದೆ.
  • ಇದು ತುಂಬಾ ಬೆಲೆಯುಳ್ಳದ್ದಾಗಿರುವದರಿಂದ ಮತ್ತು ಈ ಬಣ್ಣವನ್ನು ಉತ್ಪಾದಿಸುವುದಕ್ಕೆ ಹೆಚ್ಚಿನ ಸಮಯವನ್ನು ಕಳೆಯ ಬೇಕಾದದ್ದರಿಂದ, ನೇರಳೆ ಬಣ್ಣದ ಬಟ್ಟೆಗಳು ಸಂಪತ್ತಿಗೆ, ವಿಶಿಷ್ಟತೆಗೆ ಮತ್ತು ದೊರೆತನಕ್ಕೆ ಗುರುತಾಗಿರುತ್ತವೆ.
  • ಗುಡಾರದಲ್ಲಿ ಮತ್ತು ದೇವಾಲಯದಲ್ಲಿ ಪರದೆಗಳಿಗೆ ಮತ್ತು ಯಾಜಕರು ಧರಿಸುತ್ತಿರುವ ಎಫೋದಕ್ಕೆ ಉಪಯೋಗಿಸಿರುವ ಬಣ್ಣಗಳಲ್ಲಿ ನೇರಳೆ ಬಣ್ಣ ಒಂದಾಗಿರುತ್ತದೆ,
  • ನೇರಳೆ ಬಣ್ಣವನ್ನು ಒಂದು ವಿಧವಾದ ಸಮುದ್ರ ಬಸವನ ಹುಳಗಳನ್ನು ಕುದಿಯುವುದರ ಮೂಲಕವಾಗಲಿ ಅಥವಾ ಅವುಗಳನ್ನು ಒತ್ತಿಡುವುದರ ಮೂಲಕವಾಗಲಿ ಅಥವಾ ಅವುಗಳ ಜೀವಂತವಾಗಿರುವಾಗಲೇ ಬಣ್ಣವನ್ನು ಬಿಡುಗಡೆ ಮಾಡುವಂತೆ ಮಾಡುವದಿಂದಾಗಲಿ ಉತ್ಪಾದನೆ ಮಾಡುವರು. ಇದು ತುಂಬಾ ಹೆಚ್ಚು ಖರ್ಚು ಆಗುವ ವಿಧಾನವಾಗಿರುತ್ತದೆ.
  • ರೋಮಾ ಸೈನಿಕರು ಯೇಸುವನ್ನು ಶಿಲುಬೆಗೆ ಏರಿಸುವುದಕ್ಕೆ ಮುಂಚಿತವಾಗಿ ಆತನ ಮೇಲೆ ನೇರಳೆ ಬಣ್ಣದ ದೊರೆತನದ ನಿಲುವಂಗಿಯನ್ನು ಹಾಕಿದ್ದರು, ಯಾಕಂದರೆ ಯೆಹೂದ್ಯರ ಅರಸನೆಂದು ತನ್ನ ಪ್ರಕಟನೆಯನ್ನು ಹಿಯಾಳಿಸುವುದಕ್ಕೆ ಹೀಗೆ ಮಾಡಿದ್ದರು.
  • ಫಿಲಿಪ್ಪಿ ಪಟ್ಟಣದ ಲುದ್ಯಳು ನೇರಳೆ ಬಣ್ಣದ ಬಟ್ಟೆಯನ್ನು ಮಾರುವುದರ ಮೂಲಕ ಜೀವನವನ್ನು ಮಾಡುತ್ತಿದ್ದಳು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಎಫೋದ್, ಫಿಲಿಪ್ಪಿ, ರಾಜಯೋಗ್ಯ, ಗುಡಾರ, ದೇವಾಲಯ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H710, H711, H713, G4209, G4210, G4211

ನೊಗ, ನೊಗಗಳು, ನೊಗ ಹೂಡಿದೆ

# ಪದದ ಅರ್ಥವಿವರಣೆ:

ನೊಗ ಎನ್ನುವುದು ಒಂದು ಕಟ್ಟಿಯ ತುಂಡು ಅಥವಾ ಲೋಹವಾಗಿರುತ್ತದೆ, ಇದನ್ನು ಒಂದು ಎತ್ತಿನ ಬಂಡಿಯನ್ನು ಅಥವಾ ಒಂದು ನೇಗಿಲನ್ನು ಎಳೆಯುವ ಉದ್ದೇಶಕ್ಕಾಗಿ ಒಂದು ಅಥವಾ ಎರಡು ಪ್ರಾಣಿಗಳನ್ನು ಅವುಗಳಿಗೆ ಕಟ್ಟುವುದಕ್ಕೆ ಉಪಯೋಗಿಸುತ್ತಾರೆ. ಈ ಪದಕ್ಕೆ ಅನೇಕ ವಿಧವಾದ ಅಲಂಕಾರಿಕ ಅರ್ಥಗಳನ್ನು ಹೊಂದಿರುತ್ತದೆ.

  • “ನೊಗ” ಎನ್ನುವ ಪದವು ಜನರೆಲ್ಲರು ಸೇರಿ ಕೆಲಸ ಮಾಡುವ ಉದ್ದೇಶಕ್ಕಾಗಿ ಜನರನ್ನು ಒಂಗೂಡಿಸುವ ಯಾವುದಾದರೊಂದನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಉಪಯೋಗಿಸಲ್ಪಟ್ಟಿರುತ್ತದೆ, ಉದಾಹರಣೆಗೆ, ಯೇಸುವಿಗೆ ಸೇವೆ ಮಾಡುವುದನ್ನು ಸೂಚಿಸುತ್ತದೆ.
  • ಪೌಲನು “ನೊಗಸೇವಕ” ಎನ್ನುವ ಪದವನ್ನು ತನ್ನ ಜೊತೆಯಲ್ಲಿ ತನ್ನ ಹಾಗೆಯೇ ಕ್ರಿಸ್ತನಿಗೆ ಸೇವೆ ಮಾಡುವ ವ್ಯಕ್ತಿಯನ್ನು ಸೂಚಿಸುವುದಕ್ಕೆ ಉಪಯೋಗಿಸಿರುತ್ತಾನೆ. ಇದನ್ನು “ಜೊತೆ ಕೆಲಸದವನು” ಅಥವಾ “ಜೊತೆ ಸೇವಕ” ಅಥವಾ “ಸಹೋದ್ಯೋಗಿ” ಎಂದೂ ಅನುವಾದ ಮಾಡಬಹುದು.
  • “ನೊಗ” ಎನ್ನುವ ಪದವು ಒಬ್ಬ ವ್ಯಕ್ತಿ ಹೆಚ್ಚಿನ ಭಾರವನ್ನು ಹೊತ್ತಿಕೊಂಡು ಹೋಗುತ್ತಿರುವುದನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿಯೂ ಉಪಯೋಗಿಸಲ್ಪಟ್ಟಿರುತ್ತದೆ, ಉದಾಹರಣೆಗೆ, ಗುಲಾಮಗಿರಿಯಿಂದ ಅಥವಾ ಹಿಂಸೆಯಿಂದ ಒತ್ತಡಯಾಗಿರುತ್ತಿರುವುದನ್ನೂ ಸೂಚಿಸುತ್ತದೆ.
  • ಅನೇಕ ಸಂದರ್ಭಗಳಲ್ಲಿ ಈ ಪದವನ್ನು ಅಕ್ಷರಾರ್ಥವಾಗಿ ಅನುವಾದ ಮಾಡುವುದು ಉತ್ತಮ, ಕೃಷಿ ಮಾಡುವುದಕ್ಕೆ ಉಪಯೋಗಿಸುವ ನೊಗವಿಗೆ ಸ್ಥಳೀಯ ಪದವನ್ನು ಉಪಯೋಗಿಸುವುದು ಒಳ್ಳೇಯದು.
  • ಈ ಪದದ ಅಲಂಕಾರಿಕ ಉಪಯೋಗದ ಅನುವಾದದ ಅನೇಕ ವಿಧಾನಗಳಲ್ಲಿ, “ಒತ್ತಡದ ಭಾರ” ಅಥವಾ “ಭಾರವಾದ ಹೊರೆ” ಅಥವಾ “ಬಂಧನ” ಎಂದೂ ಸಂದರ್ಭಾನುಸಾರವಾಗಿ ಉಪಯೋಗಿಸಿಕೊಳ್ಳಬಹುದು.

(ಈ ಪದಗಳನ್ನು ಸಹ ನೋಡಿರಿ : ಬಂಧಿಸು, ಭಾರ, ಒತ್ತಡ, ಹಿಂಸಿಸು, ಸೇವಕ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3627, H4132, H4133, H5674, H5923, H6776, G2086, G2201, G2218, G4805

ನೋವು

# ಪದದ ಅರ್ಥವಿವರಣೆ:

“ನೋವು” ಎನ್ನುವ ಪದವು ಬಹು ಹೆಚ್ಚಾದ ವೇದನೆಯನ್ನು ಅಥವಾ ಯಾತನೆಯನ್ನು ಸೂಚಿಸುತ್ತದೆ.

  • ನೋವು ಎನ್ನುವುದು ಭೌತಿಕವಾದದ್ದು ಅಥವಾ ಭಾವೋದ್ರೇಕವಾದ ನೋವು ಅಥವಾ ಯಾತನೆಯಾಗಿರುತ್ತದೆ.
  • ಅತೀ ಹೆಚ್ಚಾದ ನೋವುನಲ್ಲಿರುವ ಜನರು ಅನೇಕಸಲ ತಮ್ಮ ಮುಖದಲ್ಲಿ ಮತ್ತು ನಡತೆಗಳಲ್ಲಿ ತೋರಿಸಿಕೊಳ್ಳುತ್ತಾರೆ.
  • ಉದಾಹರಣೆಗೆ, ಬಹು ಹೆಚ್ಚಾದ ನೋವಿನಲ್ಲಿದ್ದ ಒಬ್ಬ ವ್ಯಕ್ತಿ ಬಹುಶಃ ಹೆಚ್ಚಾಗಿ ಅಳಬಹುದು ಅಥವಾ ತನ್ನ ಹಲ್ಲುಗಳನ್ನು ಕಡಿಯುತ್ತಿರಬಹುದು.
  • “ನೋವು” ಎನ್ನುವ ಪದವನ್ನು “ಭಾವೋದ್ರೇಕವಾದ ಯಾತನೆ” ಅಥವಾ “ಆಳವಾದ ದುಃಖ” ಅಥವಾ “ಬಹು ಹೆಚ್ಚಾದ ಬಾಧೆ” ಎಂಬುದಾಗಿಯೂ ಅನುವಾದನೆ ಮಾಡಬಹುದು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2342, H2479, H3708, H4164, H4689, H4691, H5100, H6695, H6862, H6869, H7267, H7581, G928, G3600, G4928

ನ್ಯಾಯಾಧೀಶ, ನ್ಯಾಯಾಧೀಶರು

# ಪದದ ಅರ್ಥವಿವರಣೆ:

ನ್ಯಾಯಾಧೀಶ ಎನ್ನುವ ವ್ಯಕ್ತಿ ಜನರ ಮಧ್ಯೆದಲ್ಲಿ ಗೊಡವೆಗಳು ಇರುವಾಗ ಯಾವುದು ಸರಿಯೋ ಅಥವಾ ಯಾವುದು ತಪ್ಪೋ ಎಂದು ನಿರ್ಣಯ ಮಾಡುವ ವ್ಯಕ್ತಿಯಾಗಿರುತ್ತಾನೆ, ಸಾಧಾರಣವಾಗಿ ಕಾನೂನಿನ ಪ್ರಕಾರ ನಡೆಯುವ ವಿಷಯಗಳು.

  • ಸತ್ಯವೇದದಲ್ಲಿ ದೇವರನ್ನು ನ್ಯಾಯಾಧೀಶ ಎಂಬುದಾಗಿ ಸೂಚಿಸಲ್ಪಟ್ಟಿದೆ, ಯಾಕಂದರೆ ಯಾವುದು ಸರಿಯೋ ಅಥವಾ ಯಾವುದು ತಪ್ಪೋ ಎನ್ನುವುದರ ಕುರಿತಾಗಿ ಅಂತಿಮ ನಿರ್ಣಯಗಳನ್ನು ತೆಗೆದುಕೊಳ್ಳುವ ಪರಿಪೂರ್ಣ ನ್ಯಾಯಾಧೀಶ ದೇವರಾಗಿರುತ್ತಾರೆ.
  • ಕಾನಾನ್ ಎನ್ನುವ ಭೂಮಿಯೊಳಗೆ ಇಸ್ರಾಯೇಲ್ಯರು ಸೇರಿದಾದನಂತರ ಮತ್ತು ಅರಸನು ಅವರನ್ನು ಆಳುವುದಕ್ಕೆ ಮುಂಚಿತವಾಗಿ, ಆ ಜನರ ಕಷ್ಟ ಸಮಯಗಳಲ್ಲಿ ನಡೆಸಲು ದೇವರು “ನ್ಯಾಯಾಧೀಶರು” ಎನ್ನುವವರನ್ನು ನೇಮಿಸಿದ್ದರು. ಅನೇಕಬಾರಿ ಇಸ್ರಾಯೇಲ್ಯರ ಶತ್ರುಗಳಿಂದ ಅವರನ್ನು ರಕ್ಷಿಸಿದ ಸೈನ್ಯದ ನಾಯಕರಾಗಿ ಈ ನ್ಯಾಯಾಧೀಶರು ಇದ್ದಿದ್ದರು.
  • “ನ್ಯಾಯಾಧೀಶ” ಎನ್ನುವ ಪದವು “ನಿರ್ಣಯ ತೆಗೆದುಕೊಳ್ಳುವವನು” ಅಥವಾ “ನಾಯಕ” ಅಥವಾ “ವಿಮೋಚಕ” ಅಥವಾ “ಪಾಲಕ” ಎಂದು ಸಂದರ್ಭಕ್ಕೆ ತಕ್ಕಂತೆ ಕರೆಯಲ್ಪಡುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಪಾಲಕ, ನ್ಯಾಯಾಧೀಶ, ಧರ್ಮಶಾಸ್ತ್ರ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H148, H430, H1777, H1778, H1779, H1780, H1781, H1782, H2940, H4055, H6414, H6415, H6416, H6417, H6419, H8196, H8199, H8201, G350, G1252, G1348, G2919, G2922, G2923

ಪಡೆದುಕೋ, ಪಡೆದುಕೊಳ್ಳುವುದು, ಪಡೆದುಕೊಂಡಿದೆ, ಪಡೆದುಕೊಳ್ಳುತ್ತಿದೆ, ಪಡೆದುಕೊಳ್ಳುವವನು

# ಪದದ ಅರ್ಥವಿವರಣೆ:

“ಪಡೆದುಕೋ” ಎನ್ನುವ ಪದವು ಸಾಧಾರಣವಾಗಿ ಕೊಡಲ್ಪಟ್ಟವುಗಳನ್ನು, ಕಾಣಿಕೆಗಳನ್ನು ಅಥವಾ ಉಡುಗೊರೆಗಳನ್ನು ಅಂಗೀಕರಿಸುವುದು ಅಥವಾ ಪಡೆದುಕೊಳ್ಳುವುದು ಎಂದರ್ಥ.

  • “ಪಡೆದುಕೋ” ಎನ್ನುವ ಪದವು ಯಾವುದಾದರೊಂದನ್ನು ಅನುಭವಿಸು ಅಥವಾ ನರಳು ಎಂದರ್ಥವನ್ನೂ ಕೊಡುತ್ತದೆ, ಉದಾಹರಣೆಗೆ, “ಅವನು ಮಾಡಿದ ಕೆಲಸಗಳಿಗೆ ತಕ್ಕ ಶಿಕ್ಷೆಯನ್ನು ಹೊಂದಿಕೊಂಡಿದ್ದಾನೆ” ಎನ್ನುವ ಮಾತಿನಂತೆ ಇರುತ್ತದೆ.
  • ನಾವು ಒಬ್ಬ ವ್ಯಕ್ತಿಯನ್ನು “ಪಡೆದುಕೊಳ್ಳುವುದರಲ್ಲಿ” ಒಂದು ವಿಶೇಷವಾದ ಭಾವನೆಯೂ ಒಳಗೊಂಡಿರುತ್ತದೆ. ಉದಾಹರಣೆಗೆ, ಅತಿಥಿಗಳನ್ನು ಅಥವಾ ಸಂದರ್ಶಕರನ್ನು “ಪಡೆದುಕೊಳ್ಳುವುದು” ಎಂದರೆ ಅವರನ್ನು ಆಹ್ವಾನಿಸುವುದು ಮತ್ತು ಅವರೊಂದಿಗೆ ಸಂಬಂಧವನ್ನು ಬೆಳಸಿಕೊಳ್ಳುವ ಕ್ರಮದಲ್ಲಿ ಅವರನ್ನು ಘನಪಡಿಸುವುದು ಎಂದರ್ಥ.

“ಪವಿತ್ರಾತ್ಮನ ವರವನ್ನು ಪಡೆದುಕೊಳ್ಳುವುದು” ಎಂದರೆ ಪವಿತ್ರಾತ್ಮನು ನಮಗೆ ಕೊಡಲ್ಪಟ್ಟಿದ್ದಾನೆ ಮತ್ತು ನಮ್ಮ ಜೀವನಗಳ ಮೂಲಕ ನಮ್ಮಲ್ಲಿ ಕೆಲಸ ಮಾಡುವುದಕ್ಕೆ ಆತನನ್ನು ಆಹ್ವಾನಿಸಿದ್ದೇವೆ ಎಂದರ್ಥ.

  • “ಯೇಸುವನ್ನು ಪಡೆದುಕೊಳ್ಳುವುದು” ಎಂದರೆ ಯೇಸು ಕ್ರಿಸ್ತನ ಮೂಲಕ ದೇವರು ಕೊಡುವ ರಕ್ಷಣೆಯನ್ನು ಸ್ವೀಕರಿಸುವುದು ಎಂದರ್ಥವಾಗಿರುತ್ತದೆ.
  • ಒಬ್ಬ ಕುರುಡನು “ತನ್ನ ದೃಷ್ಟಿಯನ್ನು ತಿರುಗಿ ಪಡೆದುಕೊಂಡನು” ಎಂದರೆ ದೇವರು ಅವನನ್ನು ಸ್ವಸ್ಥಪಡಿಸಿದ್ದಾನೆ ಮತ್ತು ನೋಡುವುದಕ್ಕೆ ಅವನಿಗೆ ದೃಷ್ಟಿಯನ್ನು ಕೊಟ್ಟಿದ್ದಾನೆ ಎಂದರ್ಥವಾಗಿರುತ್ತದೆ.

# ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ “ಪಡೆದುಕೋ” ಎನ್ನುವ ಪದವನ್ನು “ಅಂಗೀಕರಿಸು” ಅಥವಾ “ಆಹ್ವಾನಿಸು” ಅಥವಾ ‘ಅನುಭವ” ಅಥವಾ “ಕೊಡಲ್ಪಟ್ಟಿರುವ” ಎಂದೂ ಅನುವಾದ ಮಾಡಬಹುದು.
  • “ನೀವು ಶಕ್ತಿಯನ್ನು ಪಡೆದುಕೊಳ್ಳುವಿರಿ” ಎನ್ನುವ ಮಾತನ್ನು “ನಿಮಗೆ ಶಕ್ತಿ ಕೊಡಲ್ಪಡುವುದು” ಅಥವಾ “ದೇವರು ನಿಮಗೆ ಶಕ್ತಿಯನ್ನು ನೀಡುವರು” ಅಥವಾ “(ದೇವರಿಂದ) ನಿಮಗೆ ಶಕ್ತಿ ಅನುಗ್ರಹಿಸಲ್ಪಡುವುದು” ಅಥವಾ “ನಿಮ್ಮಲ್ಲಿ ಶಕ್ತಿಯುತವಾಗಿ ಕೆಲಸ ಮಾಡುವುದಕ್ಕೆ ದೇವರು ನಿಮಗೆ ಪವಿತ್ರಾತ್ಮನನ್ನು ಅನುಗ್ರಹಿಸುವರು” ಎಂದೂ ಅನುವಾದ ಮಾಡಬಹುದು.
  • “ತನ್ನ ದೃಷ್ಟಿಯನ್ನು ಪಡೆದುಕೊಂಡನು” ಎನ್ನುವ ಮಾತು “ಅವನು ನೋಡುತ್ತಿದ್ದಾನೆ” ಅಥವಾ “ಅವನು ತಿರುಗಿ ನೋಡುವವನಾದನು” ಅಥವಾ “ದೇವರಿಂದ ಗುಣವನ್ನು ಹೊಂದಿ, ಅವನು ನೋಡುವ ವ್ಯಕ್ತಿಯಾದನು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಪವಿತ್ರಾತ್ಮ, ಯೇಸು, ಒಡೆಯ, ರಕ್ಷಿಸು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಉದಾಹರಣೆಗಳು:

  • 21:13_ ಮೆಸ್ಸೀಯ ಪರಿಪೂರ್ಣನಾಗಿರುತ್ತಾನೆ, ಆತನು ಯಾವ ಪಾಪ ಮಾಡಿರುವುದಿಲ್ಲ ಎಂದು ಪ್ರವಾದಿಗಳು ಹೇಳಿದ್ದರು. ಇತರ ಜನರ ಪಾಪಗಳಿಗಾಗಿ ಶಿಕ್ಷೆಯನ್ನು ___ ಪಡೆದುಕೊಳ್ಳುವುದಕ್ಕೆ ____ ಆತನು ಮರಣಿಸುವನು. ಆತನ ಶಿಕ್ಷೆಯು ದೇವರಿಗೆ ಮತ್ತು ಜನರಿಗೆ ಮಧ್ಯದಲ್ಲಿ ಸಮಾಧಾನವನ್ನುಂಟು ಮಾಡುತ್ತದೆ.
  • 45:05_ ಸ್ತೆಫನನು ಸಾಯುತ್ತಿರುವಾಗ, “ಯೇಸುವೆ, ನನ್ನ ಆತ್ಮವನ್ನು ___ ತೆಗೆದುಕೋ ___ “ ಎಂದು ಅಳುತ್ತಾ ಕೂಗಿದನು.
  • 49:06_ ನನ್ನನ್ನು ಕೆಲವರು ಅಂಗೀಕರಿಸಿ, ರಕ್ಷಣೆ ಹೊಂದುತ್ತಾರೆ, ಆದರೆ ಕೆಲವರು ನಂಬದೆ ರಕ್ಷಣೆ ಹೊಂದುವುದಿಲ್ಲ ಎಂದು ಆತನು (ಯೇಸು) ಹೇಳಿದನು.
  • 49:10_ ಯೇಸು ಶಿಲುಬೆಯಲ್ಲಿ ಮರಣ ಹೊಂದುತ್ತಿರುವಾಗ, ಆತನು ನಿನ್ನ ಶಿಕ್ಷೆಯನ್ನು ___ ಪಡೆದುಕೊಂಡಿದ್ದಾನೆ ____.
  • 49:13_ ಯೇಸುವಿನಲ್ಲಿ ನಂಬಿಕೆಯಿಟ್ಟು, ಆತನನ್ನು ತಮ್ಮ ಯಜಮಾನನನ್ನಾಗಿ ___ ಸ್ವೀಕರಿಸುವ ____ ಪ್ರತಿಯೊಬ್ಬರನ್ನು ದೇವರು ರಕ್ಷಿಸುವನು.

# ಪದ ಡೇಟಾ:

  • Strong's: H1878, H2505, H3557, H3947, H6901, H6902, H8254, G308, G324, G353, G354, G568, G588, G618, G1183, G1209, G1523, G1653, G1926, G2210, G2865, G2983, G3028, G3335, G3336, G3549, G3858, G3880, G3970, G4327, G4355, G4356, G4687, G4732, G5264, G5274, G5562

ಪತ್ರಿಕೆ, ಪತ್ರ, ಪತ್ರಗಳು

# ಪದದ ಅರ್ಥವಿವರಣೆ:

ಪತ್ರ ಎನ್ನುವುದು ಪತ್ರ ಬರೆಯುತ್ತಿರುವ ರಚನಾಕಾರರಿಂದ ತುಂಬಾ ದೂರದಲ್ಲಿರುವ ಒಂದು ಜನರ ಗುಂಪಿಗೆ ಅಥವಾ ಒಬ್ಬ ವ್ಯಕ್ತಿಗೆ ಬರೆದಿರುವ ಸಂದೇಶವನ್ನು ಕಳುಹಿಸುವುದನ್ನು ಸೂಚಿಸುತ್ತದೆ. ಪತ್ರಿಕೆ ಎನ್ನುವುದು ಒಂದು ವಿಶೇಷವಾದ ಪತ್ರವಾಗಿರುತ್ತದೆ, ಅನೇಕಸಲ ಒಂದು ವಿಶೇಷವಾದ ಉದ್ದೇಶಕ್ಕಾಗಿ ಬೋಧನೆಯನ್ನು ಮಾಡಲು ಒಂದು ಔಪಚಾರಿಕ ಶೈಲಿಯಲ್ಲಿ ಬರೆದಿರುವ ಪತ್ರವಾಗಿರುತ್ತದೆ.

  • ಹೊಸ ಒಡಂಬಡಿಕೆ ಕಾಲಗಳಲ್ಲಿ, ಪತ್ರಿಕೆಗಳು ಮತ್ತು ಇತರ ವಿಧವಾದ ಪತ್ರಗಳು ಪ್ರಾಣಿಗಳ ಚರ್ಮಗಳಿಂದ ಮಾಡಿದ ಚರ್ಮ ಕಾಗದದ ಮೇಲೆ ಬರೆಯುತ್ತಿದ್ದರು ಅಥವಾ ಮರದ ತೊಗಟೆಯಿಂದ ತೆಗೆದ ಒಂದು ತರಹದ ತೆಳುವಾದ ತೊಗಟೆಯಾಗಿರುವ ಪ್ಯಾಪಿರಸ್ ಎನ್ನುವವುಗಳ ಮೇಲೆ ಬರೆಯುತ್ತಿದ್ದರು.
  • ಪೌಲ, ಯೋಹಾನ, ಯಾಕೋಬ, ಯೂದಾ ಮತ್ತು ಪೇತ್ರರಿಂದ ಬರೆಯಲ್ಪಟ್ಟ ಹೊಸ ಒಡಂಬಡಿಕೆಯ ಪತ್ರಿಕೆಗಳೆಲ್ಲವು ಎಚ್ಚರಿಸುವ ಪತ್ರಿಕೆಗಳಾಗಿರುತ್ತವೆ, ಅವರು ಈ ಪತ್ರಿಕೆಗಳನ್ನು ರೋಮಾ ಸಾಮ್ರಾಜ್ಯದಲ್ಲೆಲ್ಲಾ ಇರುವ ಅನೇಕ ಪಟ್ಟಣಗಳಲ್ಲಿ ಆದಿಮ ಕ್ರೈಸ್ತರೆಲ್ಲರನ್ನು ಪ್ರೋತ್ಸಾಹ ಮಾಡುವುದಕ್ಕೆ, ಎಚ್ಚರಿಸುವುದಕ್ಕೆ ಮತ್ತು ಬೋಧನೆ ಮಾಡುವದಕ್ಕೆ ಬರೆದಿರುತ್ತಾರೆ.
  • ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಬರೆದಿರುವ ಸಂದೇಶ” ಅಥವಾ “ಬರೆದಿರುವ ಮಾತುಗಳು” ಅಥವಾ “ಬರವಣಿಗೆ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಪ್ರೋತ್ಸಾಹ, ಎಚ್ಚರಿಕೆ, ಬೋಧನೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H104, H107, H3791, H4385, H5406, H5407, H5612, H6600, G1121, G1989, G1992

ಪರದೆ, ಪರದೆಗಳು

# ಪದದ ಅರ್ಥವಿವರಣೆ

ಸತ್ಯವೇದದಲ್ಲಿ, “ಪರದೆ” ಎನ್ನುವ ಪದವು ಗುಡಾರವನ್ನು ಮಾಡಲು ಮತ್ತು ದೇವಾಲಯವನ್ನು ನಿರ್ಮಿಸಲು ಉಪಯೋಗಿಸಿದ ಒಂದು ದಪ್ಪವಾದ, ಭಾರವಾದ ವಸ್ತುವನ್ನು ಸೂಚಿಸುತ್ತದೆ.

  • ಗುಡಾರದ ಮೇಲಿನ ಭಾಗ ಹಾಗೂ ಸುತ್ತಲಿರುವ ಭಾಗವನ್ನು ನಿರ್ಮಿಸಲು ನಾಲ್ಕು ಪದರ ಪರದೆಗಳನ್ನು ಉಪಯೋಗಿಸಿದರು. ಈ ಪರೆದಗಳು ಬಟ್ಟೆ ಅಥವಾ ಪ್ರಾಣಿಗಳ ಚರ್ಮದಿಂದ ಮಾಡಲ್ಪಟ್ಟಿದ್ದವು.
  • ಗುಡಾರದ ಅಂಗಳ ಸುತ್ತು ಇರುವ ಗೋಡೆಯನ್ನು ನಿರ್ಮಿಸಲು ಬಟ್ಟೆಯ ಪರದೆಗಳನ್ನು ಉಪಯೋಗಿಸಿದರು. ಈ ಪರದೆಗಳು ಅಗಸೆ ಗಿಡದಿಂದ ಮಾಡಲ್ಪಟ್ಟ “ನಾರು” ಎಂಬ ಒಂದು ವಿಧವಾದ ಬಟ್ಟೆಯಿಂದ ಮಾಡಲ್ಪಟ್ಟಿದ್ದವು.
  • ಗುಡಾರದಲ್ಲಿ ಮತ್ತು ದೇವಾಲಯದಲ್ಲಿ ಈ ಎರಡು ಪ್ರಾಂತಗಳಲ್ಲಿ, ಪರಿಶುದ್ಧ ಸ್ಥಳವನ್ನು ಅತಿಪರಿಶುದ್ದ ಸ್ಥಳದಿಂದ ಬೇರ್ಪಡೆಸಲು ಒಂದು ದಪ್ಪವಾದ ಬಟ್ಟೆಯ ಪರದೆಯನ್ನು ತೂಗುಹಾಕ್ಕಿದ್ದರು. ಯೇಸು ಮರಣಿಸಿದಾಗ ಈ ಪರದೆಯು ಎರಡು ಭಾಗಗಳಾಗಿ ಅಧ್ಭುತವಾದ ರೀತಿಯಲ್ಲಿ ಹರಿದುಹೋಯಿತು.

# ಅನುವಾದ ಸಲಹೆಗಳು:

  • ಅಧುನಿಕ ಪ್ರಪಂಚದಲ್ಲಿ ಉಪಯೋಗಿಸುತ್ತಿರುವ ಪರದೆಗಳು ಸತ್ಯವೇದ ಕಾಲದ ಪರದೆಗಳಿಗೆ ವಿಭಿನ್ನವಾಗಿರುವ ಕಾರಣ, ಪರದೆಗಳನ್ನು ವಿವರಿಸಲು ಸೂಕ್ತ ಪದಗಳನ್ನು ಉಪಯೋಗಿಸಿ ಅದರ ಅರ್ಥವನ್ನು ಸ್ಪಷ್ಟಪಡಿಸಬೇಕು.
  • ಸಂಧರ್ಭಾನುಸಾರವಾಗಿ, “ಪರದೆಯ ಹೊದಿಕೆ” ಅಥವಾ “ಹೊದಿಕೆ” ಅಥವಾ “ದಪ್ಪವಾದ ಬಟ್ಟೆ” ಅಥವಾ “ಪ್ರಾಣಿಗಳ ಚರ್ಮದ ಹೊದಿಕೆ” ಅಥವಾ “ತೂಗುಹಕಲ್ಪಟ್ಟಿರುವ ಬಟ್ಟೆಯ ತುಂಡು” ಎಂದು ಅನೇಕ ವಿಧವಾಗಿ ಈ ಪದವನ್ನು ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಪರಿಶುದ್ಧ ಸ್ಥಳ, ಗುಡಾರ, ದೇವಾಲಯ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1852, H3407, H4539, H6532, H7050, G2665

ಪರದೇಶಿ, ಪರದೇಶಿಗಳು, ಅನ್ಯಲೋಕದ, ವಿದೇಶಿ, ವಿದೇಶೀಯ, ವಿದೇಶಿಯರು

# ಪದದ ಅರ್ಥವಿವರಣೆ

“ಪರದೇಶಿ” ಎನ್ನುವ ಪದವು ತನ್ನ ಸ್ವಂತ ದೇಶವಾಗದ ಬೇರೆ ದೇಶದಲ್ಲಿ ನಿವಾಸ ಮಾಡುವ ವ್ಯಕ್ತಿಯನ್ನು ಸೂಚಿಸುತ್ತದೆ. “ವಿದೇಶಿ” ಎನ್ನುವ ಪದವು ಪರದೇಶಿ ಎನ್ನುವ ಪದಕ್ಕೆ ಮತ್ತೊಂದು ಪದವಾಗಿರುತ್ತದೆ.

  • ಹಳೆ ಒಡಂಬಡಿಕೆಯಲ್ಲಿ, ಅವರೊಂದಿಗೆ ನಿವಾಸ ಮಾಡದೇ ಬೇರೆ ಜನರ ಗುಂಪಿನಿಂದ ಬಂದ ವ್ಯಕ್ತಿಯನ್ನು ಸೂಚಿಸಲು ಈ ಪದವನ್ನು ವಿಶೇಷವಾಗಿ ಉಪಯೋಗಿಸುತ್ತಿದ್ದರು.
  • ಒಂದು ಪ್ರದೇಶದ ಜನರಿಗಿಂತ ಬೇರೆ ಭಾಷೆ ಮತ್ತು ಸಂಪ್ರದಾಯಗಳನ್ನು ಹೊಂದಿರುವ ವ್ಯಕ್ತಿಯನ್ನು ವಿದೇಶೀಯನೆಂದು ಕರೆಯುತ್ತಾರೆ.
  • ಉದಾಹರಣೆಗೆ, ನೊವೊಮಿ ಮತ್ತು ಅವಳ ಕುಟುಂಬದವರು ಮೋವಾಬ್ ದೇಶಕ್ಕೆ ಹೋದಾಗ, ಅವರಲ್ಲಿ ಪರದೇಶಿಗಳಾಗಿದ್ದರು. ನೊವೊಮಿ ಮತ್ತು ಅವಳ ಸೊಸೆಯಾದ ರೂತಳು ಇಸ್ರಾಯೇಲ್ ದೇಶಕ್ಕೆ ಹಿಂತಿರುಗಿ ಬಂದಾಗ, ರೂತಳು “ಪರದೇಶಿ”ಯಾಗಿದ್ದಳು ಯಾಕಂದರೆ ಅವಳು ಇಸ್ರಾಯೇಲ್ ದೇಶದವಳು ಆಗಿರಲಿಲ್ಲ.
  • ಎಫೆಸದವರು ಕ್ರಿಸ್ತನನ್ನು ಅರಿಯದ ಮುನ್ನ ಅವರು ದೇವರ ಒಡಂಬಡಿಕೆಗೆ “ವಿದೇಶಿಯರು” ಆಗಿದ್ದರೆಂದು ಅಪೊಸ್ತಲನಾದ ಪೌಲನು ಹೇಳಿದನು.
  • ಕೆಲವೊಮ್ಮೆ “ವಿದೇಶಿಯರು” ಎನ್ನುವ ಪದವನ್ನು “ಅಪರಿಚಿತನು” ಎಂದು ಅನುವಾದ ಮಾಡಬಹುದು, ಆದರೆ ಗೊತ್ತಿಲ್ಲದವನ ಕುರಿತು ಅಥವಾ ಪರಿಚಯವಿಲ್ಲದ ವ್ಯಕ್ತಿ ಕುರಿತು ಮಾತ್ರವೇ ಈ ಪದವನ್ನು ಉಪಯೋಗಿಸಬೇಕು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H312, H628, H776, H1471, H1481, H1616, H2114, H3363, H3937, H4033, H5236, H5237, H5361, H6154, H8453, G241, G245, G526, G915, G1854, G3581, G3927, G3941

ಪರಿಪೂರ್ಣ, ಪರಿಪೂರ್ಣತೆಯುಳ್ಳ, ಪರಿಪೂರ್ಣನು, ಪರಿಪೂರ್ಣತೆ, ಪರಿಪೂರ್ಣತೆಯಿಂದ

# ಪದದ ಅರ್ಥವಿವರಣೆ:

ಸತ್ಯವೇದದಲ್ಲಿ “ಪರಿಪೂರ್ಣ” ಎನ್ನುವ ಪದಕ್ಕೆ ನಮ್ಮ ಕ್ರೈಸ್ತ ಜೀವನದಲ್ಲಿ ಪ್ರಬುದ್ಧರಾಗಿರುವುದು ಎಂದರ್ಥ. ಯಾವುದಾದರೊಂದು ಪರಿಪೂರ್ಣವಾಗಿರುವುದು ಎಂದರೆ ಯಾವುದೇ ಲೋಪಗಳಿಲ್ಲದೇ ಅದು ಅದ್ಭುತವಾಗಿ ರೂಪಿಸಲ್ಪಡುವವರೆಗೂ ಅದರಲ್ಲಿ ಕೆಲಸ ಮಾಡುವುದು ಎಂದರ್ಥ.

  • ಪರಿಪೂರ್ಣನಾಗಿರುವುದು ಮತ್ತು ಪಕ್ವವಾಗಿರುವುದು ಎಂದರೆ ಪಾಪ ಮಾಡದಂತೆ ಕ್ರೈಸ್ತನು ವಿಧೇಯನಾಗಿರುವುದು ಎಂದರ್ಥ.
  • “ಪರಿಪೂರ್ಣ” ಎನ್ನುವ ಪದವು ಕೂಡ “ಸಂಪೂರ್ಣ” ಅಥವಾ “ಪೂರ್ತಿ”ಯಾಗಿರುವ ಎನ್ನುವ ಅರ್ಥವನ್ನು ಹೊಂದಿರುತ್ತದೆ.
  • ಹೊಸ ಒಡಂಬಡಿಕೆಯ ಯಾಕೋಬ ಪುಸ್ತಕವು ಹಿಂಸೆಗಳ ಮೂಲಕ ಹಾದು ಹೋಗುತ್ತಿರುವುದೆನ್ನುವುದು ಒಬ್ಬ ವಿಶ್ವಾಸಿಯಲ್ಲಿ ಪಕ್ವವನ್ನು ಮತ್ತು ಪರಿಪೂರ್ಣತೆಯನ್ನುಂಟು ಮಾಡುತ್ತದೆ.
  • ಕ್ರೈಸ್ತರು ಸತ್ಯವೇದವನ್ನು ಅಧ್ಯಯನ ಮಾಡಿ, ಅದಕ್ಕೆ ವಿಧೇಯತೆ ತೋರಿಸುವಾಗ ಅವರು ಇನ್ನೂ ಹೆಚ್ಚಾಗಿ ಆತ್ಮೀಯತೆಯಲ್ಲಿ ಪರಿಪೂರ್ಣತೆಯಾಗುವರು ಮತ್ತು ಪಕ್ವವುಳ್ಳ ವ್ಯಕ್ತಿಗಳಾಗುವರು, ಯಾಕಂದರೆ ಅವರು ತಮ್ಮ ನಡತೆಯಲ್ಲಿ ಕ್ರಿಸ್ತನಂತೆ ಇನ್ನೂ ಹೆಚ್ಚಾಗಿ ಬೆಳೆಯುತ್ತಾರೆ.

# ಅನುವಾದ ಸಲಹೆಗಳು:

  • ಈ ಪದವನ್ನು “ಯಾವ ದೋಷವಿಲ್ಲದೆ” ಅಥವಾ “ಯಾವ ತಪ್ಪಿಲ್ಲದೆ” ಅಥವಾ “ಯಾವ ಲೋಪಗಳಿಲ್ಲದೆ” ಅಥವಾ “ಯಾವ ನ್ಯೂನತೆಯಿಲ್ಲದೆ” ಅಥವಾ “ಯಾವುದೇ ತಪ್ಪುಗಳನ್ನು ಒಳಗೊಳ್ಳದೆ” ಎನ್ನುವ ಮಾತುಗಳಿಂದ ಅನುವಾದ ಮಾಡಬಹುದು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H724, H998, H1584, H1585, H3632, H3634, H4357, H4359, H4512, H8003, H8502, H8503, H8535, H8537, H8549, H8552, G195, G197, G199, G739, G1295, G2005, G2675, G2676, G2677, G3647, G5046, G5047, G5048, G5050, G5052

ಪರಿಶುದ್ಧ ಪಟ್ಟಣ, ಪರಿಶುದ್ಧ ಪಟ್ಟಣಗಳು

# ಪದದ ಅರ್ಥವಿವರಣೆ:

ಸತ್ಯವೇದದಲ್ಲಿ ಉಪಯೋಗಿಸಲ್ಪಟ್ಟಿರುವ “ಪರಿಶುದ್ಧ ಪಟ್ಟಣ” ಎನ್ನುವುದು ಯೆರೂಸಲೇಮ್ ಪಟ್ಟಣವನ್ನು ಸೂಚಿಸುತ್ತದೆ.

  • ಈ ಪದವನ್ನು ಪುರಾತನ ಯೆರೂಸಲೇಮ್ ಪಟ್ಟಣವನ್ನು, ಹೊಸ ಯೆರೂಸಲೇಮ್ ಪಟ್ಟಣವನ್ನು ಮತ್ತು ದೇವರು ನಿವಾಸವಾಗಿ ತನ್ನ ಜನರ ಮಧ್ಯೆದಲ್ಲಿದ್ದು ಆಳುವ ಪರಲೋಕ ಯೆರೂಸಲೇಮ್ ಪಟ್ಟಣವನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ,
  • ಬೇರೆ ಅನುವಾದದಲ್ಲಿ ಉಪಯೋಗಿಸಿರುವ “ಪರಿಶುದ್ಧ” ಮತ್ತು “ಪಟ್ಟಣ” ಎನ್ನುವ ಪದಗಳನ್ನು ಜೋಡಿಸಿ ಈ ಪದವನ್ನು ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಪರಲೋಕ, ಪರಿಶುದ್ಧ, ಯೆರೂಸಲೇಮ್)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H5892, H6944, G40, G4172

ಪರಿಹಾಸ್ಯ, ಗೇಲಿ, ಗೇಲಿ ಮಾಡಿದರು, ಪರಿಹಾಸ್ಯ ಮಾಡುತ್ತಿರುವುದು, ಅಪಹಾಸ್ಯ ಮಾಡುವವನು, ಅಪಹಾಸ್ಯ ಮಾಡುವವರು, ಹಾಸ್ಯಾಸ್ಪದ, ಹೀಯಾಳಿಸುವುದು, ಹೀಯಾಳಿಸಲಾಗಿರುತ್ತದೆ

# ಪದದ ಅರ್ಥವಿವರಣೆ:

“ಪರಿಹಾಸ್ಯ”, ಹಾಸ್ಯಾಸ್ಪದ”, ಮತ್ತು “ಹೀಯಾಳಿಸುವುದು” ಎನ್ನುವ ಪದಗಳೆಲ್ಲವೂ ಒಬ್ಬರ ವಿಷಯದಲ್ಲಿ ತಮಾಷೆ ಮಾಡುವುದನ್ನು ಸೂಚಿಸುತ್ತದೆ ಆದರೆ ಇದನ್ನು ಕ್ರೂರವಾದ ವಿಧಾನದಲ್ಲಿ ಮಾಡುವುದನ್ನು ಮಾತ್ರ ಸೂಚಿಸುತ್ತದೆ.

  • ಪರಿಹಾಸ್ಯ ಮಾಡುವುದೆನ್ನುವುದು ಅನೇಕಬಾರಿ ಜನರಿಗೆ ತಿರಸ್ಕಾರ ತೋರಿಸುವುದಕ್ಕೆ ಅಥವಾ ಅವರನ್ನು ಮುಜುಗರ ಮಾಡುವ ಉದ್ದೇಶದಿಂದ ಜನರ ಮಾತುಗಳನ್ನು ಅಥವಾ ಕ್ರಿಯೆಗಳನ್ನು ಅನುಸರಿಸುವುದಾಗಿರುತ್ತದೆ.
  • ರೋಮಾ ಸೈನಿಕರು ಯೇಸುವಿನ ಮೇಲೆ ನಿಲುವಂಗಿಯನ್ನು ಹಾಕಿದಾಗ, ಅರಸನಾಗಿ ಆತನನ್ನು ಗೌರವಿಸಲು ನಟಿಸುತ್ತಿರುವಾಗ ಆತನನ್ನು ಹೀಯಾಳಿಸಿದರು ಅಥವಾ ಅಪಹಾಸ್ಯ ಮಾಡಿದರು.
  • ಯೌವನಸ್ಥರಾದ ಒಂದು ಗುಂಪಿನ ಜನರು ಎಲೀಷನ ಬೋಳು ತಲೆಯನ್ನು ನೋಡಿ, ಬೋಳು ತಲೆಯವನು ಎಂದು ಎಲೀಷನನ್ನು ಹೀಯಾಳಿಸದರು ಅಥವಾ ಅಪಹಾಸ್ಯ ಮಾಡಿದರು.
  • “ಹೀಯಾಳಿಸುವುದು” ಎನ್ನುವ ಮಾತು ಪ್ರಾಮುಖ್ಯವಲ್ಲದ ಅಥವಾ ನಂಬುವುದಕ್ಕೆ ಪರಿಗಣಿಸಲಾಗದ ಅಪಹಾಸ್ಯದ ಆಲೋಚನೆಯನ್ನು ಸೂಚಿಸುತ್ತದೆ.
  • “ಅಪಹಾಸ್ಯ ಮಾಡುವವನು” ಎನ್ನುವುದು ಯಾವಾಗಲೂ ಗೇಲಿ ಮಾಡುವ ಮತ್ತು ಹೀಯಾಳಿಸುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ.

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಉದಾಹರಣೆಗಳು:

  • 21:12_ ಜನರು ಮೆಸ್ಸೀಯನನ್ನು ಉಗುಳುತ್ತಾರೆ, ___ ಹೀಯಾಳಿಸುತ್ತಾರೆ ___ ಮತ್ತು ಹೊಡೆಯುತ್ತಾರೆ ಎಂದು ಯೆಶಯಾ ಪ್ರವಾದಿಸಿದನು.
  • 39:05_ “ಇವನು ಸಾಯುವುದಕ್ಕೆ ಅರ್ಹನಾಗಿದ್ದಾನೆ” ಎಂದು ಯೆಹೂದ್ಯ ನಾಯಕರೆಲ್ಲರೂ ಮಹಾ ಯಾಜಕನಿಗೆ ಉತ್ತರ ಕೊಟ್ಟರು. ಆದನಂತರ ಅವರು ಯೇಸುವಿನ ಕಣ್ಣುಗಳಿಗೆ ಬಟ್ಟೆಯನ್ನು ಕಟ್ಟಿ, ಆತನ ಮೇಲೆ ಉಗುಳಿ, ಆತನನ್ನು ಬಡಿದು, ___ ಹೀಯಾಳಿಸಿದರು ___ .
  • 39:12_ ಸೈನಿಕರು ಯೇಸುವನ್ನು ಕೋಲಿನಿಂದ ಹೊಡೆದರು ಮತ್ತು ಆತನ ಮೇಲೆ ರಾಜ ವಸ್ತ್ರ ನಿಲುವಂಗಿಯನ್ನು ಹಾಕಿ, ಆತನ ತಲೆಯ ಮೇಲೆ ಮುಳ್ಳಿನ ಕಿರೀಟವನ್ನು ಧರಿಸಿದರು. ಆದನಂತರ, ಅವರು “ನೋಡು, ಯೆಹೂದ್ಯರ ಅರಸನೇ” ಎಂದು ಹೇಳುವುದರ ಮೂಲಕ ಆತನನ್ನು ___ ಹೀಯಾಳಿಸಿದರು ____ .
  • 40:04_ ಯೇಸುವನ್ನು ಇಬ್ಬರ ಕಳ್ಳರ ಮಧ್ಯೆದಲ್ಲಿ ಶಿಲುಬೆಗೆ ಹಾಕಿದರು. ಅವರಲ್ಲಿ ಒಬ್ಬನು ಯೇಸುವನ್ನು ___ ಹೀಯಾಳಿಸಿದನು ___, ಇನ್ನೊಬ್ಬನು “ನಿಮಗೆ ದೇವರ ಭಯವಿದೆಯಾ?” ಎಂದು ಹೇಳಿದನು.
  • 40:05_ ಯೆಹೂದ್ಯ ನಾಯಕರು ಮತ್ತು ಜನಸಮೂಹದಲ್ಲಿರುವ ಅನೇಕ ಜನರು ಯೇಸುವನ್ನು ___ ಹೀಯಾಳಿಸಿದರು ___ . “ನೀನು ದೇವರ ಮಗನಾಗಿದ್ದರೆ, ಶಿಲುಬೆ ಮೇಲಿಂದ ಕೆಳಗೆ ಇಳಿದು ಬಾ ಮತ್ತು ನಿನ್ನನ್ನು ರಕ್ಷಿಸಿಕೋ, ಅವಾಗ ನಾವು ನಿನ್ನನ್ನು ನಂಬುತ್ತೇವೆ” ಎಂದು ಹೇಳಿದರು.

# ಪದ ಡೇಟಾ:

  • Strong's: H1422, H2048, H2049, H2778, H2781, H3213, H3887, H3931, H3932, H3933, H3934, H3944, H3945, H4167, H4485, H4912, H5058, H5607, H5953, H6026, H6711, H7046, H7048, H7814, H7832, H8103, H8148, H8437, H8595, G1592, G1701, G1702, G1703, G2301, G2606, G3456, G5512

ಪಶು, ಪಶುಗಳು

# ಸತ್ಯಾಂಶಗಳು:

ಸತ್ಯವೇದದಲ್ಲಿ, “ಪಶು” ಎನ್ನುವ ಪದವನ್ನು “ಮೃಗ” ಎನ್ನುವ ಪದದ ಮತ್ತೊಂದು ರೀತಿಯಾದ ಹೇಳಿಕೆಯಾಗಿದೆ.

  • ಕಾಡಿನಲ್ಲಿ ಅಥವಾ ಹೊಲದಲ್ಲಿ ಸ್ವಾತಂತ್ರವಾಗಿ ಜೀವಿಸುವ ಪ್ರಾಣಿಯನ್ನು ಮತ್ತು ಮನುಷ್ಯರಿಂದ ತರಬೇತಿ ಹೊಂದದಿರುವ ಪಶುವನ್ನು ಕಾಡು ಪ್ರಾಣಿ ಎನ್ನುತ್ತಾರೆ.
  • ಸಾದು ಪ್ರಾಣಿ ಎನ್ನುವ ಪಶು ಜನರ ಜೊತೆಯಲ್ಲಿ ಜೀವಿಸುತ್ತದೆ ಮತ್ತು ಆಹಾರಕ್ಕಾಗಿ ಅಥವಾ ಹೊಲ ಉಳುಮೆ ಆ ರೀತಿಯಾದ ಕೆಲಸ ಕಾರ್ಯಗಳನ್ನು ಮಾಡಲು ಇಟ್ಟುಕೊಳ್ಳುತ್ತಾರೆ. ಈ ರೀತಿಯದ ಪಶುವನ್ನು ಸಂಭೋದಿಸಲು “ಪಶುಸಂಪತ್ತು” ಅಥವಾ “ಜಾನುವಾರು” ಎಂದು ಕರೆಯುತ್ತಾರೆ.
  • ಹಳೆಯ ಒಡಂಬಡಿಕೆಯಲ್ಲಿ ದಾನಿಯೇಲ್ ಗ್ರಂಥ ಮತ್ತು ಹೊಸ ಒಡಂಬಡಿಕೆಯಲ್ಲಿ ಪ್ರಕಟನೆ ಗ್ರಂಥದಲ್ಲಿ ದೇವರನ್ನು ಎದುರಿಸುವ ದುಷ್ಟ ಶಕ್ತಿಗಳನ್ನು ಮತ್ತು ಅಧಿಕಾರಗಳನ್ನು ಸೂಚಿಸಲು ಮೃಗವನ್ನು ಹೋಲಿಸಿದ ದರ್ಶನಗಳನ್ನು ಕುರಿತಾಗಿ ಬರೆಯಲ್ಪಟ್ಟಿದೆ. (ಇದನ್ನು ನೋಡಿರಿ: ರೂಪಕಾಲಂಕಾರ
  • ಈ ಪ್ರಕಾರವಾದ ಪಶುಗಳು ಹಲವಾರು ತಲೆಗಳು ಮತ್ತು ಅನೇಕ ಕೊಂಬುಗಳನ್ನು ಹೊಂದಿರುವಂತೆ ಅನೇಕವಾದ ವಿಚಿತ್ರ ವೈಶಿಷ್ಟ್ಯಗಳನ್ನು ಹೊಂದಿದ್ದವು. ಅವು ಅನೇಕಬಾರಿ ಅಧಿಕಾರ ಮತ್ತು ಶಕ್ತಿ ಹೊಂದಿರುತ್ತವೆ, ಅವು ರಾಜ್ಯಗಳನ್ನು, ದೇಶಗಳನ್ನು ಅಥವಾ ರಾಜಕೀಯ ಅಧಿಕಾರಗಳನ್ನು ಸೂಚಿಸಬಹುದು.
  • “ಪ್ರಾಣಿ” ಅಥವಾ “ಸೃಷ್ಟಿಸಲ್ಪಟ್ಟ ವಸ್ತು” ಅಥವಾ “ಪಶು” ಅಥವಾ “ಕಾಡು ಪ್ರಾಣಿ,” ಎಂದು ಅನೇಕ ವಿಧಗಳಾಗಿ ಸಂದರ್ಭಕ್ಕೆ ತಕ್ಕಹಾಗೆ ಅನುವಾದಿಸಬಹುದು.

(ಈ ಪದಗಳನ್ನು ಸಹ ನೋಡಿರಿ : ಅಧಿಕಾರ, ದಾನಿಯೇಲ್, ಜಾನುವಾರು, ಪ್ರಜೆ, ಅಧಿಕಾರ, ಪ್ರತ್ಯಕ್ಷ, ಬೆಲ್ಜೆಬೂಲ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H338, H929, H1165, H2123, H2416, H2423, H2874, H3753, H4806, H7409, G2226, G2341, G2342, G2934, G4968, G5074

ಪಾಕ್ಷಿಕದ, ಪಾಕ್ಷಿಕವಾಗಿ, ಪಕ್ಷಪಾತ

# ಪದದ ಅರ್ಥವಿವರಣೆ;

“ಪಾಕ್ಷಿಕವಾಗಿ” ಮತ್ತು “ಪಕ್ಷಪಾತ ತೋರಿಸುವುದು” ಎನ್ನುವ ಪದಗಳು ಇತರ ಜನರಿಗಿಂತಲೂ ನಿರ್ದಿಷ್ಟವಾದ ಜನರಿಗೆ ಹೆಚ್ಚಾದ ಪ್ರಾಮುಖ್ಯತೆಯನ್ನು ತೋರಿಸುವುದಕ್ಕೆ ಮಾಡುವ ಆಯ್ಕೆಯನ್ನು ಸೂಚಿಸುತ್ತದೆ.

  • ಇದು ಅಭಿಮಾನ ತೋರಿಸುವುದಕ್ಕೆ ಸಮಾನವಾಗಿರುತ್ತದೆ, ಇದಕ್ಕೆ ಕೆಲವೊಂದು ಜನರನ್ನು ಇತರರಿಗಿಂತ ಹೆಚ್ಚಾದ ಪ್ರೀತಿಯನ್ನು ತೋರಿಸುವುದು ಎಂದರ್ಥ.
  • ಪಕ್ಷಪಾತ ಅಥವಾ ಅಭಿಮಾನ ಎನ್ನುವುದು ಸಹಜವಾಗಿ ಜನರಿಗೆ ತೋರಿಸುವುದಾಗಿರುತ್ತದೆ, ಯಾಕಂದರೆ ಅವರು ಇತರ ಜನರಿಗಿಂತ ಹೆಚ್ಚಾದ ಖ್ಯಾತಿಯನ್ನು ಹೊಂದಿರುತ್ತಾರೆ ಅಥವಾ ದೊಡ್ಡ ಶ್ರೀಮಂತರಾಗಿರುತ್ತಾರೆ.
  • ಉನ್ನತ ಸ್ಥಾನವನ್ನು ಪಡೆದಿರುವ ಅಥವಾ ಶ್ರೀಮಂತರಾಗಿರುವ ಜನರಿಗೆ ಪಕ್ಷಪಾತವನ್ನು ಅಥವಾ ಅಭಿಮಾನವನ್ನು ತೋರಿಸಬಾರದೆಂದು ಸತ್ಯವೇದವು ತನ್ನ ಜನರಿಗೆ ಸೂಚನೆ ನೀಡಿದೆ.
  • ಪೌಲನು ರೋಮಾಪುರದವರಿಗೆ ಬರೆದ ತನ್ನ ಪತ್ರಿಕೆಯಲ್ಲಿ ದೇವರು ಜನರಿಗೆ ಯಾವ ಪಕ್ಷಪಾತವಿಲ್ಲದೆ ತೀರ್ಪು ಮಾಡುತ್ತಾರೆಂದು ಆತನು ಬೋಧಿಸಿದ್ದಾನೆ.
  • ಜನರು ಶ್ರೀಮಂತರಾಗಿರುವುದರಿಂದ ಅವರಿಗೆ ಮರ್ಯಾದೆ ಕೊಡುವುದು ಅಥವಾ ಅವರಿಗೆ ಆಸನಗಳನ್ನು ಕೊಡುವುದು ತಪ್ಪು ಎಂದು ಯಾಕೋಬನ ಪುಸ್ತಕವು ಬೋಧನೆ ಮಾಡುತ್ತಿದೆ.

(ಈ ಪದಗಳನ್ನು ಸಹ ನೋಡಿರಿ : ದಯೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H5234, H6440, G991, G1519, G2983, G4299, G4383

ಪಾತಾಳ, ಅಧೋಲೋಕದ ಕೂಪ

# ನಿರ್ವಚನ:

“ಪಾತಾಳ” ಎನ್ನುವ ಪದವು ಅತೀ ದೊಡ್ಡ, ಆಳವಾದ ಕೂಪವನ್ನು ಅಥವಾ ಅಡಿಭಾಗವಿಲ್ಲದ ಕಂದಕವನ್ನು ಸೂಚಿಸುತ್ತದೆ.

  • ಸತ್ಯವೇದದಲ್ಲಿ, “ಪಾತಾಳ” ಎನ್ನುವುದು ಶಿಕ್ಷೆ ಪಡೆಯುವ ಸ್ಥಳವಾಗಿರುತ್ತದೆ.
  • ಉದಾಹರಣೆಗೆ, ಯೇಸು ಒಬ್ಬ ಮನುಷ್ಯನಿಂದ ಅಪವಿತ್ರಾತ್ಮಗಳನ್ನು ಹೊರ ಬರಬೇಕೆಂದು ಅಪ್ಪಣೆ ಕೊಟ್ಟಾಗ, ಅವು ನಮ್ಮನ್ನು ಪಾತಾಳಕ್ಕೆ ಕಳುಹಿಸಬೇಡ ಎಂದು ಆತನಲ್ಲಿ ಕೇಳಿಕೊಂಡರು.
  • “ಪಾತಾಳ” ಎನ್ನುವ ಪದವು “ಅಧೋಲೋಕದ ಕೂಪ” ಎಂದು ಅಥವಾ “ಅಡಿಭಾಗವಿಲ್ಲದ ಆಳವಾದ ಕಂದಕ” ಎಂಬುದಾಗಿಯೂ ಅನುವಾದ ಮಾಡಲ್ಪಟ್ಟಿದೆ.
  • ಈ ಪದವನ್ನು ಇನ್ನೂ ಬೇರೆ ವಿಧವಾದ ಪದಗಳಿಂದಲೂ ಅನುವಾದ ಮಾಡಿ ಕರೆಯುತ್ತಾರೆ, ಅವು ಯಾವುವೆಂದರೆ, “ಹೇದೆಸ್”, “’ಷಿಯೋಲ್,” ಅಥವಾ “ನರಕ”.

(ಈ ಪದಗಳನ್ನು ಸಹ ನೋಡಿರಿ : /ಹೇದೆಸ್, /ನರಕ, , /ಶಿಕ್ಷೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: G12, G5421

ಪಾದಗಳ ಪೀಠ

# ಪದದ ಅರ್ಥವಿವರಣೆ:

“ಪಾದಗಳ ಪೀಠ” ಎನ್ನುವ ಪದವು ಒಬ್ಬ ವ್ಯಕ್ತಿ ಆಸನದಲ್ಲಿ ಕುಳಿತುಕೊಂಡಾಗ ತನ್ನ ಪಾದಗಳನ್ನಿಟ್ಟು ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ ಉಪಯೋಗಿಸುವ ಒಂದು ವಸ್ತುವನ್ನು ಸೂಚಿಸುತ್ತದೆ, ಈ ಪದವು ಅಧೀನವಾಗುವುದನ್ನು ಮತ್ತು ಕೀಳಾದ ಸ್ಥಿತಿಯನ್ನು ಅಲಂಕಾರಿಕ ಅರ್ಥದಲ್ಲಿ ತೋರಿಸುತ್ತದೆ.

  • ಸತ್ಯವೇದ ಕಾಲದಲ್ಲಿ ಜನರು ಇಡೀ ಶರೀರದಲ್ಲಿ ಪಾದಗಳು ಅತೀ ಕಡಿಮೆ ಗೌರವವನ್ನು ಹೊಂದಿರುವ ಅಂಗಗಳೆಂದು ಭಾವಿಸುತ್ತಿದ್ದರು. ಆದ್ದರಿಂದ “ಪಾದಗಳ ಪೀಠ” ಎನ್ನುವುದು ಅದಕ್ಕಿಂತ ಇನ್ನೂ ಕಡಿಮೆ ಗೌರವವನ್ನು ಹೊಂದಿರುತ್ತದೆ, ಯಾಕಂದರೆ ಅದರ ಮೇಲೆ ಕಾಲುಗಳನ್ನಿಟ್ಟು ವಿಶ್ರಾಂತಿ ತೆಗೆದುಕೊಳ್ಳುತ್ತಾರ.
  • “ನಾನು ನನ್ನ ಶತ್ರುಗಳನ್ನು ನನ್ನ ಪಾದಗಳ ಕೆಳಗೆ ಇಡುತ್ತೇನೆ” ಎಂದು ದೇವರು ಹೇಳಿದಾಗ, ಆತನು ತನಗೆ ವಿರುದ್ಧವಾಗಿ ತಿರಸ್ಕಾರ ಮಾಡುತ್ತಿರುವ ಜನರ ಮೇಲೆ ಶಕ್ತಿ, ನಿಯಂತ್ರಣ, ಮತ್ತು ಜಯವನ್ನು ಪ್ರಕಟಿಸುತ್ತಿದ್ದಾನೆ. ದೇವರ ಚಿತ್ತಕ್ಕೆ ವಿಧೇಯರಾಗುವುದಕ್ಕೆ ಅವರು ತಪ್ಪದೇ ತಗ್ಗಿಸಲ್ಪಡುವರು ಮತ್ತು ಸೋಲಿಸಲ್ಪಡುವರು.
  • “ದೇವರ ಪಾದಗಳ ಪೀಠದ ಹತ್ತಿರ ಆರಾಧನೆ ಮಾಡುವುದು” ಎನ್ನುವ ಮಾತಿಗೆ ಆತನು ಸಿಂಹಾಸನದ ಮೇಲೆ ಕುಳಿತಿದ್ದಾನೆಂದು ತಿಳಿದು ಆತನ ಮುಂದೆ ಆರಾಧನೆಯಲ್ಲಿ ತಲೆಯನ್ನು ಭಾಗಿಸು ಎಂದರ್ಥ. ಇದು ದೇವರಿಗೆ ವಿಧೇಯರಾಗುವುದನ್ನು ಮತ್ತು ಆತನ ಮುಂದೆ ತಗ್ಗಿಸಿಕೊಳ್ಳುವುದನ್ನು ವ್ಯಕ್ತಪಡಿಸುತ್ತದೆ.
  • ದಾವೀದನು ದೇವಾಲಯವನ್ನು ದೇವರ “ಪಾದಗಳ ಪೀಠ” ಎಂಬುದಾಗಿ ಸೂಚಿಸುತ್ತಿದ್ದಾನೆ. ಇದು ತನ್ನ ಜನರ ಮೇಲೆ ಆತನಿಗಿರುವ ಅಧಿಕಾರವನ್ನು ಸೂಚಿಸುತ್ತದೆ. ಇದು ಅರಸನಾದ ದೇವರು ತನ್ನ ಸಿಂಹಾಸನದ ಮೇಲೆ ಇದ್ದಾನೆಂದು, ಆತನ ಪಾದಗಳು ತನ್ನ ಪಾದಗಳ ಪೀಠದ ಮೇಲೆ ಇಟ್ಟುಕೊಂಡಿದ್ದಾನೆನ್ನುವ ಚಿತ್ರವನ್ನು ತೋರಿಸುತ್ತದೆ, ಇದರಿಂದ ಎಲ್ಲರು ಆತನಿಗೆ ಒಳಗಾಗಿದ್ದಾರೆಂದೆನ್ನುವ ವಿಷಯವನ್ನು ಸೂಚಿಸುತ್ತದೆ.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1916, H3534, H7272, G4228, G5286

ಪಾನ ದ್ರವ್ಯಗಳು

# ಪದದ ಅರ್ಥವಿವರಣೆ:

ಪಾನ ದ್ರವ್ಯಗಳು ದೇವರಿಗೆ ಅರ್ಪಿಸುವ ಪದಾರ್ಥವಾಗಿರುತ್ತದೆ, ಇದರಲ್ಲಿ ಯಜ್ಞವೇದಿಯ ಮೇಲೆ ಸುರಿಯುವ ಎಣ್ಣೆಯು ಇರುತ್ತದೆ. ಇದನ್ನು ಅನೇಕಬಾರಿ ದಹನ ಬಲಿ ಅರ್ಪಣೆಯೊಂದಿಗೆ ಮತ್ತು ಧಾನ್ಯಗಳ ಅರ್ಪಣೆಯೊಂದಿಗೆ ಬೆರೆತು ದೇವರಿಗೆ ಅರ್ಪಿಸುತ್ತಾರೆ.

  • ಪಾನಾರ್ಪಣೆಯಂತೆ ತನ್ನ ಜೀವನವು ಸುರಿಯಲ್ಪಟ್ಟಿದೆಯೆಂದು ಪೌಲನು ತನ್ನ ಜೀವನದ ಕುರಿತಾಗಿ ಹೇಳಿಕೊಳ್ಳುತ್ತಿದ್ದಾನೆ. ಇದಕ್ಕೆ ಯೇಸುವಿನ ಕುರಿತಾಗಿ ಜನರಿಗೆ ಹೇಳುವುದಕ್ಕೆ ಮತ್ತು ದೇವರ ಸೇವೆ ಮಾಡುವುದಕ್ಕೆ ತನ್ನನ್ನು ಸಂಪೂರ್ಣವಾಗಿ ಪ್ರತಿಷ್ಠಿಸಿಕೊಂಡಿದ್ದಾನೆಂದು ಅರ್ಥವಾಗಿರುತ್ತದೆ, ಇದರಿಂದ ಆತನಿಗೆ ಶ್ರಮೆ ಮತ್ತು ಮರಣ ಬರುತ್ತದೆಯೆಂದು ತಿಳಿದಿದ್ದರೂ ತನ್ನ ಜೀವನವನ್ನು ಅರ್ಪಿಸಿಕೊಂಡಿದ್ದನು.
  • ಶಿಲುಬೆಯಲ್ಲಿ ಯೇಸುವಿನ ಮರಣವು ಅಂತಿಮ ಪಾನಾರ್ಪಣೆಯಾಗಿರುತ್ತದೆ, ನಮ್ಮ ಪಾಪಗಳಿಗೆ ಆತನ ರಕ್ತವು ಸುರಿಸಲ್ಪಟ್ಟಿರುತ್ತದೆ.

# ಅನುವಾದ ಸಲಹೆಗಳು:

  • ಈ ಪದಕ್ಕೆ ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ದ್ರಾಕ್ಷಾರಸದ ಅರ್ಪಣೆ” ಎಂದೂ ಅನುವಾದ ಮಾಡುತ್ತಾರೆ.
  • “ಅರ್ಪಣೆಯಂತೆ ತನ್ನ ಜೀವನವು ಸುರಿಸಲ್ಪಟ್ಟಿದ್ದಾನೆ” ಎಂದು ಪೌಲನು ಹೇಳಿದಾಗ, ಇದನ್ನು ಯಜ್ಞವೇದಿಯ ಮೇಲೆ ಸಂಪೂರ್ಣವಾಗಿ ಎಣ್ಣೆಯನ್ನು ಸುರಿಸಲ್ಪಡುವ ಅರ್ಪಣೆಯಂತೆ “ಜನರಿಗೆ ದೇವರ ಸಂದೇಶವನ್ನು ಬೋಧಿಸುವುದಕ್ಕೆ ನಾನು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದೇನೆ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಸರ್ವಾಂಗ ಹೋಮ, ಧಾನ್ಯಗಳ ಅರ್ಪಣೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H5257, H5261, H5262

ಪಾನಸೇವಕ, ಪಾನಸೇವಕರು

# ಪದದ ಅರ್ಥವಿವರಣೆ

ಹಳೆ ಒಡಂಬಡಿಕೆಯ ಕಾಲದಲ್ಲಿ, ಅರಸನಿಗೆ ತನ್ನ ದ್ರಾಕ್ಷಾರಸದಲ್ಲಿ ವಿಷವಿಲ್ಲವೆಂದು ನೋಡಲು ಮೊದಲು ತಾನು ಕುಡಿದು, ನಂತರ ಅರಸನಿಗೆ ತನ್ನ ಪಾನವನ್ನು ಕೊಡುವ ಸೇವಕನನ್ನು “ಪಾನಸೇವಕ” ಎಂದು ಕರೆಯುತ್ತಿದ್ದರು.

  • “ಪಾನವನ್ನು ತರುವವನು” ಅಥವಾ “ಯಾರು ಪಾನವನ್ನು ತರುವರೋ” ಎಂದು ಈ ಪದದ ಅಕ್ಷರಾರ್ಥವಾಗಿದೆ.
  • ಪಾನಸೇವಕ ತನ್ನ ಅರಸನಿಗೆ ಬಹು ನಂಬಿಗಸ್ತನು ಮತ್ತು ನೀತಿವಂತನಾಗಿರುತ್ತಾನೆ.
  • ನಂಬಿಗಸ್ತವಾದ ಸ್ಥಾನದಲ್ಲಿದ್ದ ಕಾರಣವಾಗಿ, ಅರಸನು ಮಾಡುವ ಅನೇಕ ತೀರ್ಮಾನ ವಿಷಯಗಳಲ ಮೇಲೆ ಅವನ ಪ್ರಭಾವವಿರುತ್ತದೆ.
  • ಬಾಬೆಲೋನಿಯಲ್ಲಿ ಇಸ್ರಾಯೇಲ್ ಜನರು ಸೆರೆಹಿಡಿಯಲ್ಪಟ್ಟಿದ್ದ ಕಾಲದಲ್ಲಿ ನೆಹೆಮೀಯ ಪರ್ಷಿಯ ಅರಸನಾದ ಅರ್ತಷಸ್ತನ ಪಾನಸೇವಕನಾಗಿದ್ದನು.

(ಈ ಪದಗಳನ್ನು ಸಹ ನೋಡಿರಿ : ಅರ್ತಷಸ್ತನ, ಬಾಬೆಲೋನಿ, ಸೆರೆ, ಪರ್ಷಿಯ, ಫರೋಹನು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H8248

ಪಾಪ ಪರಿಹಾರಿಕ ಯಜ್ಞ, ಪಾಪ ಪರಿಹಾರಿಕ ಯಜ್ಞಗಳು

# ಪದದ ಅರ್ಥವಿವರಣೆ:

“ಪಾಪ ಪರಿಹಾರಿಕ ಯಜ್ಞ” ಎನ್ನುವುದು ಇಸ್ರಾಯೇಲ್ಯರು ಅರ್ಪಿಸಬೇಕೆಂದು ದೇವರು ಬಯಸಿದ ಅನೇಕ ಯಜ್ಞಗಳಲ್ಲಿ ಇದೂ ಒಂದಾಗಿರುತ್ತದೆ.

  • ಈ ಯಜ್ಞದಲ್ಲಿ ಎತ್ತನ್ನು ಬಲಿ ಕೊಟ್ಟು, ಅದರ ರಕ್ತವನ್ನು ಮತ್ತು ಕೊಬ್ಬನ್ನು ಯಜ್ಞವೇದಿಯ ಮೇಲಿಟ್ಟು ಸುಡುತ್ತಾರೆ ಮತ್ತು ಉಳಿದ ಪ್ರಾಣಿಯ ದೇಹವನ್ನು ತೆಗೆದುಕೊಂಡು, ಅದನ್ನು ಇಸ್ರಾಯೇಲ್ಯರ ಗುಡಾರಗಳ ಆಚೆ ನೆಲದ ಮೇಲೆ ಸುಡುತ್ತಾರೆ.
  • ಈ ಪ್ರಾಣಿಯ ಯಜ್ಞದಲ್ಲಿ ಇದನ್ನು ಸಂಪೂರ್ಣವಾಗಿ ಸುಡುವುದೆನ್ನುವುದು ದೇವರು ಎಷ್ಟು ಪರಿಶುದ್ಧನೋ ಮತ್ತು ಆ ಪಾಪವು ಎಷ್ಟು ಭಯಂಕರವಾದದ್ದೋ ಎಂದು ತೋರಿಸುತ್ತದೆ.
  • ಪಾಪವನ್ನು ತೊಳೆಯುವ ಕ್ರಮದಲ್ಲಿ ಮಾಡಲ್ಪಟ್ಟಿರುವ ಪಾಪಕ್ಕೆ ಬೆಲೆಯನ್ನು ಸಲ್ಲಿಸುವುದಕ್ಕೆ ರಕ್ತವು ಸುರಿಸಲ್ಪಡಬೇಕೆಂದು ಸತ್ಯವೇದವು ಬೋಧಿಸುತ್ತದೆ.
  • ಪ್ರಾಣಿಯ ಯಜ್ಞಗಳು ಪಾಪಕ್ಕೆ ಕ್ಷಮಾಪಣೆಯನ್ನು ಶಾಶ್ವತವಾಗಿ ತರುವುದಿಲ್ಲ.
  • ಶಾಶ್ವತವಾಗಿ ಪಾಪಗಳಿಗೆ ಕ್ರಯಧನವನ್ನು ಯೇಸುವು ಶಿಲುಬೆಯ ಮರಣದಿಂದ ಸಲ್ಲಿಸಿದ್ದಾರೆ. ಆತನು ಪಾಪ ಪರಿಹಾರ ಮಾಡುವ ಯಜ್ಞವಾಗಿದ್ದಾನೆ.

(ಈ ಪದಗಳನ್ನು ಸಹ ನೋಡಿರಿ : ಯಜ್ಞವೇದಿ, ಹಸು, ಕ್ಷಮಿಸು, ಹೋಮ, ಪಾಪ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2401, H2402, H2398, H2403

ಪಾರಿವಾಳ, ಕಪೋತ

# ಪದದ ಅರ್ಥವಿವರಣೆ:

ಪಾರಿವಾಳಗಳು ಮತ್ತು ಕಪೋತಗಳು ಎರಡು ವಿಧವಾದ ಪಕ್ಷಿಗಳು, ಇವು ಒಂದೇ ರೀತಿಯಾಗಿದ್ದು ಬೂದು ಮತ್ತು ಕಂದು ಬಣ್ಣದಲ್ಲಿರುತ್ತವೆ. ಪಾರಿವಾಳ ಎನ್ನುವುದು ಬಣ್ಣದಲ್ಲಿ ತುಂಬಾ ಹಗುರುವಾಗಿರುತ್ತದೆ, ಬಿಳಿ ಬಣ್ಣವನ್ನು ಹೊಂದಿರುತ್ತದೆ.

  • ಕೆಲವೊಂದು ಭಾಷೆಗಳಲ್ಲಿ ಅವುಗಳಿಗೆ ಎರಡು ವಿಧವಾದ ಹೆಸರುಗಳಿರುತ್ತವೆ, ಇನ್ನೂ ಕೆಲವೊಂದು ಭಾಷೆಗಳಲ್ಲಿ ಎರಡಕ್ಕೂ ಒಂದೇ ಹೆಸರನ್ನಿಟ್ಟು ಕರೆಯುತ್ತಾರೆ.
  • ಪಾರಿವಾಳಗಳು ಮತ್ತು ಕಪೋತಗಳು ದೇವರಿಗೆ ಬಲಿ ಕೊಡುವುದಕ್ಕೆ ಉಪಯೋಗಿಸುತ್ತಿದ್ದರು, ವಿಶೇಷವಾಗಿ ದೊಡ್ಡ ಹಸುಗಳನ್ನು ಕೊಂಡುಕೊಳ್ಳುವುದಕ್ಕಾಗದ ಜನರಿಗೆ ಈ ರೀತಿಯ ಕ್ರಮವು ಇದ್ದಿತ್ತು.
  • ನೋಹನ ಕಾಲದಲ್ಲಿ ಬಂದ ಪ್ರಳಯದ ನೀರೆಲ್ಲಾ ಕಡಿಮೆಯಾದ ಮೇಲೆ ಪಾರಿವಾಳವು ಎಣ್ಣೆ ಮರದ ಹೊಸ ಚಿಗುರನ್ನು ತೆಗೆದುಕೊಂಡು ಬಂದಿತ್ತು.
  • ಪಾರಿವಾಳಗಳು ಕೆಲವೊಂದುಬಾರಿ ಪವಿತ್ರತೆಗೆ, ನಿರ್ದೋಷಕ್ಕೆ ಅಥವಾ ಸಮಾಧಾನಕ್ಕೆ ಚಿಹ್ನೆಯಾಗಿರುತ್ತವೆ.
  • ಅನುವಾದ ಮಾಡುವ ಸ್ಥಳೀಯ ಭಾಷೆಯಲ್ಲಿ ಪಾರಿವಾಳ ಅಥವಾ ಕಪೋತಗಳು ಗೊತ್ತಿಲ್ಲದಿದ್ದರೆ, ಈ ಪದವನ್ನು “ಪಾರಿವಾಳ ಎಂದು ಕರೆಯಲ್ಪಡುವ ಬೂದು ಬಣ್ಣದ ಚಿಕ್ಕ ಪಕ್ಷಿ” ಎಂದೂ ಅಥವಾ “ಚಿಕ್ಕ ಬೂದು ಅಥವಾ ಕಂದು ಬಣ್ಣದ ಪಕ್ಷಿ, ಇದು ಸ್ಥಳೀಯ ಪಕ್ಷಿಗೆ ಸಮಾಂತರ ಪಕ್ಷಿ” ಎಂದೂ ಅನುವಾದ ಮಾಡಬಹುದು.
  • ಪಾರಿವಾಳ ಮತ್ತು ಕಪೋತಗಳೆರಡು ಒಂದೇ ವಚನದಲ್ಲಿ ಹೇಳಲ್ಪಟ್ಟಿವೆ, ಅವುಗಳಿಗೆ ಎರಡು ಹೆಸರುಗಳನ್ನು ಉಪಯೋಗಿಸುವುದು ಒಳ್ಳೇಯದು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಎಣ್ಣೆ ಮರ, ನಿರ್ದೋಷ, ಪವಿತ್ರತೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1469, H1686, H3123, H8449, G4058

ಪಾಲಿಸು, ಪಾಲಿಸುವುದು, ಪಾಲಕ, ಪಾಲಕರು, ಪಾಲನೆ, ಪಾಲನೆಗಳು, ಅತಿಕ್ರಮಿಸು, ಅತಿಕ್ರಮಿಸಿದೆ

# ಪದದ ಅರ್ಥವಿವರಣೆ:

“ಪಾಲಕ” ಎನ್ನುವ ಪದವು ಸಾಧಾರಣವಾಗಿ ಇತರ ಜನರ ಮೇಲೆ ಅಧಿಕಾರವನ್ನು ಪಡೆದ ವ್ಯಕ್ತಿಯನ್ನು ಸೂಚಿಸುತ್ತದೆ, ಉದಾಹರಣೆಗೆ, ದೇಶದ, ರಾಜ್ಯದ ಅಥವಾ ಭಕ್ತಿಯ ಗುಂಪಿನ ನಾಯಕನನ್ನು ಸೂಚಿಸುತ್ತದೆ. ಪಾಲಕ ಎಂದರೆ “ಪಾಲಿಸುವ” ವ್ಯಕ್ತಿಯಾಗಿರುತ್ತಾನೆ, ಮತ್ತು ತನ್ನ ಅಧಿಕಾರವು ತನ್ನ “ಪಾಲನೆ”ಯಾಗಿರುತ್ತದೆ.

  • ಹಳೇ ಒಡಂಬಡಿಕೆಯಲ್ಲಿ ಅರಸನು ಕೆಲವೊಮ್ಮೆ “ಪಾಲಕನಾಗಿ” ಸೂಚಿಸಲ್ಪಟ್ಟಿರುತ್ತಾನೆ, ಉದಾಹರಣೆಗೆ, “ಇಸ್ರಾಯೇಲಿನ ಮೇಲೆ ಇವನನ್ನು ಪಾಲಕನನ್ನಾಗಿ ನೇಮಿಸುತ್ತಿದ್ದೇನೆ” ಎನ್ನುವ ಮಾತಿನಲ್ಲಿರುವುದನ್ನು ನೋಡಬಹುದು.
  • ದೇವರು ಅಂತಿಮ ಪಾಲಕನೆಂದು ಸೂಚಿಸಲ್ಪಟ್ಟಿದ್ದಾನೆ, ಈತನು ಪಾಲಕರಾಗಿರುವ ಎಲ್ಲರನ್ನು ಪಾಲಿಸುವವನಾಗಿರುತ್ತಾನೆ.
  • ಹೊಸ ಒಡಂಬಡಿಕೆಯಲ್ಲಿ ಸಮಾಜ ಮಂದಿರದ ನಾಯಕನನ್ನು “ಪಾಲಕ” ಎಂದು ಕರೆಯುತ್ತಿದ್ದರು.
  • ಹೊಸ ಒಡಂಬಡಿಕೆಯಲ್ಲಿ ಇನ್ನೊಬ್ಬ ರೀತಿಯ ಪಾಲಕನು “ರಾಜ್ಯಪಾಲರು” ಆಗಿರುತ್ತಾರೆ.
  • ಸಂದರ್ಭಾನುಸಾರವಾಗಿ, “ಪಾಲಕ” ಎನ್ನುವ ಪದವನ್ನು “ನಾಯಕ” ಅಥವಾ “ಎಲ್ಲದರ ಮೇಲೆ ಅಧಿಕಾರವನ್ನು ಪಡೆದ ವ್ಯಕ್ತಿ” ಎಂದೂ ಅನುವಾದ ಮಾಡಬಹುದು.
  • “ಪಾಲಿಸುವುದಕ್ಕೆ” ಕ್ರಿಯೆ ಏನೆಂದರೆ “ಎಲ್ಲದರ ಮೇಲೆ ಅಧಿಕಾರವನ್ನು ಪಡೆಯುವುದಕ್ಕೆ” “ನಡಿಸು” ಎಂದರ್ಥ. ಅರಸನ ಪಾಲನೆಯನ್ನು ಸೂಚಿಸುವ “ಆಳ್ವಿಕೆ”ಯನ್ನು ಸೂಚಿಸುವ ಅರ್ಥವಾಗಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಅಧಿಕಾರ, ರಾಜ್ಯಪಾಲರು, ಅರಸ, ಸಮಾಜ ಮಂದಿರ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H995, H1166, H1167, H1404, H2708, H2710, H3027, H3548, H3920, H4043, H4410, H4427, H4428, H4438, H4467, H4474, H4475, H4623, H4910, H4941, H5057, H5065, H5387, H5401, H5461, H5715, H6113, H6213, H6485, H6957, H7101, H7218, H7287, H7300, H7336, H7786, H7860, H7980, H7981, H7985, H7989, H7990, H8199, H8269, H8323, H8451, G746, G752, G755, G757, G758, G932, G936, G1018, G1203, G1299, G1778, G1785, G1849, G2232, G2233, G2525, G2583, G2888, G2961, G3545, G3841, G4165, G4173, G4291

ಪಾಲಿಸು, ಪ್ರಭುತ್ವ, ಪ್ರಭುತ್ವಗಳು, ರಾಜ್ಯಪಾಲ, ರಾಜ್ಯಪಾಲಕರು, ಆಡಳಿತಾಧಿಕಾರಿ, ಆಡಳಿತಾಧಿಕಾರಿಗಳು

# ಪದದ ಅರ್ಥವಿವರಣೆ:

“ರಾಜ್ಯಪಾಲ” ಎನ್ನುವ ಪದವು ಒಂದು ರಾಜ್ಯವನ್ನು, ಒಂದು ಪ್ರಾಂತ್ಯವನ್ನು ಅಥವಾ ಒಂದು ಕ್ಷೇತ್ರವನ್ನು ಪಾಲಿಸುತ್ತಿರುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ. “ಪಾಲಿಸು” ಎನ್ನುವದಕ್ಕೆ ನಡೆಸು, ಸಲಹೆಕೊಡು, ಅಥವಾ ಅವರನ್ನು ನಿರ್ವಹಿಸು ಎಂದರ್ಥ.

  • “ಆಡಳಿತಾಧಿಕಾರಿ” (ಪ್ರೊಕನ್ಸಲ್) ಎನ್ನುವ ಪದವು ರೋಮಾ ಸೀಮೆಯನ್ನು ಆಳುತ್ತಿರುವ ಒಬ್ಬ ಪಾಲಕನಿಗೆ ಕೊಡುವ ಒಂದು ವಿಶೇಷವಾದ ಬಿರುದಾಗಿರುತ್ತದೆ.
  • ಸತ್ಯವೇದ ಕಾಲಗಳಲ್ಲಿ ಪಾಲಕರು ಅರಸನಿಂದಾಗಲಿ ಅಥವಾ ಚಕ್ರವರ್ತಿಯಿಂದಾಗಲಿ ನೇಮಿಸಲ್ಪಡುತ್ತಿದ್ದರು ಮತ್ತು ಅವರೆಲ್ಲರು ಆತನ ಅಧಿಕಾರದ ಕೆಳಗೆ ಇರುತ್ತಿದ್ದರು.
  • “ಪ್ರಭುತ್ವ” ಎನ್ನುವುದು ಒಂದು ದೇಶವನ್ನು ಅಥವಾ ಒಂದು ಸಾಮ್ರಾಜ್ಯವನ್ನು ಆಳುವ ಪಾಲಕರನ್ನು ಸೂಚಿಸುತ್ತದೆ. ಪಾಲಕರು ತಾವು ಪಾಲಿಸುವ ಜನರ ನಡತೆಯನ್ನು ನಿರ್ದೇಶಿಸಲು ಕಾನೂನುಗಳನ್ನು ಮಾಡುತ್ತಾರೆ, ಇದರಿಂದ ದೇಶದಲ್ಲಿರುವ್ ಎಲ್ಲಾ ಜನರಿಗೆ ಸಮಾಧಾನ, ಭದ್ರತೆ ಮತ್ತು ಸಂರಕ್ಷಣೆ ಇರುತ್ತದೆ.

# ಅನುವಾದ ಸಲಹೆಗಳು:

  • “ರಾಜ್ಯಪಾಲ” ಎನ್ನುವ ಪದವನ್ನು “ಪಾಲಕ” ಅಥವಾ “ಮೇಲ್ವಿಚಾರಕ” ಅಥವಾ “ಪ್ರಾಂತ್ಯದ ನಾಯಕ” ಅಥವಾ “ಒಂದು ಚಿಕ್ಕ ಕ್ಷೇತ್ರವನ್ನು ಪಾಲಿಸುವಾತನು” ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಸಾರವಾಗಿ “ಪಾಲಿಸು” ಎನ್ನುವ ಪದವನ್ನು “ಆಳು” ಅಥವಾ “ನಡೆಸು” ಅಥವಾ “ನಿರ್ವಹಿಸು” ಅಥವಾ “ಮೇಲ್ವಿಚಾರಣೆ ಮಾಡು” ಎಂದೂ ಅನುವಾದ ಮಾಡಬಹುದು.
  • “ರಾಜ್ಯಪಾಲ” ಪದವು “ಅರಸ” ಅಥವಾ “ಚಕ್ರವರ್ತಿ” ಎನ್ನುವ ಪದಗಳಿಗೆ ಭಿನ್ನವಾಗಿ ಇರುವಂತೆ ನೋಡಿಕೊಳ್ಳಬೇಕು, ಯಾಕಂದರೆ ರಾಜ್ಯಪಾಲರು ಆವರ ಅಧಿಕಾರದ ಕೆಳಗೆ ಇರುವ ಅತೀ ಕಡಿಮೆ ಶಕ್ತಿಯ ಹೊಂದಿದ ಪಾಲಕರಾಗಿರುತ್ತಾರೆ.
  • “ಪ್ರೋಕನ್ಸಲ್” ಎನ್ನುವ ಪದವನ್ನು “ರೋಮಾ ಚಕ್ರವರ್ತಿ” ಅಥವಾ “ರೋಮಾ ಸೀಮೆಯ ಪಾಲಕ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಅಧಿಕಾರ, ಅರಸ, ಶಕ್ತಿ, ಸೀಮೆ, ರೋಮಾ, ಪಾಲಕ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H324, H1777, H2280, H4951, H5148, H5460, H6346, H6347, H6486, H7989, H8269, H8660, G445, G446, G746, G1481, G2232, G2233, G2230, G4232

ಪೀಡಿಸು, ಪೀಡಿಸುವುದು, ಪೀಡಿಸಲಾಗಿದೆ, ಪೀಡಿಸುತ್ತಾ ಇರುವುದು, ದಬ್ಬಾಳಿಕೆ, ದುರ್ಭರ, ಪೀಡಕ, ಪೀಡಕರು

# ಪದದ ಅರ್ಥವಿವರಣೆ:

“ಪೀಡಿಸು” ಮತ್ತು “ದಬ್ಬಾಳಿಕೆ” ಎನ್ನುವ ಪದಗಳು ಜನರಲ್ಲಿ ಕಠಿಣವಾಗಿ ನಡೆದುಕೊಳ್ಳುವುದನ್ನು ಸೂಚಿಸುತ್ತದೆ. “ಪೀಡಕ” ಎಂದರೆ ಜನರನ್ನು ಪೀಡಿಸುವ ವ್ಯಕ್ತಿ ಎಂದರ್ಥ.

  • “ದಬ್ಬಾಳಿಕೆ” ಎನ್ನುವ ಪದವು ವಿಶೇಷವಾಗಿ ಹೆಚ್ಚಿನ ಜನರನ್ನು ತಪ್ಪಾಗಿ ನಡೆಸುವ ಪರಿಸ್ಥಿತಿಯನ್ನು ಅಥವಾ ಜನರ ತಮ್ಮ ಅಧಿಕಾರದ ಕೆಳಗೆ ಅಥವಾ ತಮ್ಮ ಪಾಲನೆಯ ಕೆಳಗೆ ಅವರನ್ನು ಗುಲಾಮರನ್ನಾಗಿ ಮಾಡುವುದನ್ನು ಸೂಚಿಸುತ್ತದೆ.
  • “ಪೀಡಿಸಲಾಗಿದೆ” ಎನ್ನುವ ಮಾತು ತುಂಬಾ ಕಠಿಣವಾದ ಪರಿಸ್ಥಿತಿಗಳಿಗೆ ಗುರಿಯಾದ ಜನರನ್ನು ವಿವರಿಸುತ್ತದೆ.
  • ಅನೇಕಬಾರಿ ಶತ್ರು ದೇಶಗಳು ಮತ್ತು ಅವರ ಪಾಲಕರು ಇಸ್ರಾಯೇಲ್ ಜನರಿಗೆ ಪೀಡಕರಾಗಿದ್ದರು.

# ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ, “ಪೀಡಿಸು” ಎನ್ನುವ ಪದವನ್ನು “ಗಂಭೀರವಾಗಿ ಕೆಟ್ಟದಾಗಿ ನಡೆದುಕೋ” ಅಥವಾ “ಅತೀ ಹೆಚ್ಚಾದ ಭಾರವನ್ನು ಹೊತ್ತಿಕೊಳ್ಳುವುದಕ್ಕೆ ಕಾರಣವಾಗು” ಅಥವಾ “ಶೋಚನೀಯವಾದ ಬಂಧನದ ಕೆಳಗಿಡು” ಅಥವಾ “ಕಠಿಣವಾಗಿ ಪಾಲಿಸು” ಎಂದೂ ಅನುವಾದ ಮಾಡಬಹುದು.
  • “ದಬ್ಬಾಳಿಕೆ” ಎನ್ನುವ ಮಾತನ್ನು ಅನುವಾದ ಮಾಡುವ ವಿಧಾನಗಳಲ್ಲಿ “ಭಾರೀ ಒತ್ತಡ ಮತ್ತು ಬಂಧನ” ಅಥವಾ “ಭಾರವಾದ ನಿಯಂತ್ರಣ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • “ಪೀಡಿಸಲಾಗಿದೆ” ಎನ್ನುವ ಮಾತು “ಪೀಡಿಸಲ್ಪಟ್ಟ ಜನರು” ಅಥವಾ “ಗಂಭೀರವಾದ ಬಂಧನದಲ್ಲಿರುವ ಜನರು” ಅಥವಾ “ಕಠಿಣವಾದ ಕೆಟ್ಟತನದ ದಬ್ಬಾಳಿಕೆಗೆ ಗುರಿಯಾದವರು” ಎಂದೂ ಅನುವಾದ ಮಾಡಬಹುದು.
  • “ಪೀಡಕ” ಎನ್ನುವ ಪದವನ್ನು “ಪೀಡಿಸುವ ವ್ಯಕ್ತಿ” ಅಥವಾ “ಕಠಿಣವಾಗಿ ಪಾಲಿಸುವ ಮತ್ತು ನಿಯಂತ್ರಿಸುವ ದೇಶ” ಅಥವಾ “ಹಿಂಸಕನು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಬಂಧಿಸು, ಗುಲಾಮಗಿರಿ, ಹಿಂಸಿಸು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1790, H1792, H2541, H2555, H3238, H3905, H3906, H4642, H4939, H5065, H6115, H6125, H6184, H6206, H6216, H6217, H6231, H6233, H6234, H6693, H7429, H7533, H7701, G2616, G2669

ಪುಟ್ಟಿ, ಪುಟ್ಟಿಗಳು, ಪುಟ್ಟಿಗಳ ತುಂಬ

# ಪದದ ಅರ್ಥವಿವರಣೆ

“ಪುಟ್ಟಿ” ಎನ್ನುವ ಪದಕ್ಕೆ ನೇಯ್ದ ವಸ್ತುವಿನ ಪಾತ್ರೆಯನ್ನು ಸೂಚಿಸುತ್ತದೆ.

  • ಬೈಬಿಲ್ ಕಾಲದಲ್ಲಿ, ಸುಲಿದ ಮರದ ಕೊಂಬೆಗಳು ಅಥವಾ ಕೊಂಬೆಗಳಂತೆ ಬಲವಾದ ಗಿಡದ ಪದಾರ್ಥಗಳಿಂದ ಪುಟ್ಟಿಗಳನ್ನು ನೇಯ್ದಿರಬಹುದು.
  • ಪುಟ್ಟಿ ನೀರಿನಲ್ಲಿ ತೇಲಾಡುವಂತೆ ಅದಕ್ಕೆ ಜಲನಿರೋಧಕ ಪದಾರ್ಥವನ್ನು ಹಚ್ಚಿರಬಹುದು.
  • ಮೋಶೆ ಮಗುವಾಗಿದ್ದಾಗ, ಅವನ ತಾಯಿ ಒಂದು ಜಲನಿರೋಧಕ ಪುಟ್ಟಿಯನ್ನು ಮಾಡಿ ಅದರಲ್ಲಿ ಅವನನ್ನು ಮಲಗಿಸಿ ನೈಲ್ ನದಿಯ ಕೊಳಲುಗಳಲ್ಲಿ ತೇಲಾಡಲು ಬಿಟ್ಟಳು.
  • ಆ ಕಥೆಯಲ್ಲಿ ಉಪಯೋಗಿಸಲ್ಪಟ್ಟಿರುವ “ಪುಟ್ಟಿ” ಎನ್ನುವ ಪದವನ್ನು ನೋಹನು ನಿರ್ಮಿಸಿದ “ನಾವೆ”ಯನ್ನು ಸೂಚಿಸುವಂತೆ ಅನುವಾದ ಮಾಡಲಾಗಿದೆ. ಈ ಎರಡು ಸಂದರ್ಭಗಳಲ್ಲಿ “ತೇಲಾಡುವ ಪಾತ್ರೆ” ಎಂದು ಅದರ ಅರ್ಥ ನೀಡುತ್ತಿದೆ.

(ಈ ಪದಗಳನ್ನು ಸಹ ನೋಡಿರಿ : ನಾವೆ, ಮೋಶೆ, ನೈಲ್ ನದಿ, ನೋಹ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H374, H1731, H1736, H2935, H3619, H5536, H7991, G2894, G3426, G4553, G4711

ಪೂರ್ವಕಾಲ ವೃತ್ತಾಂತಗಳು

# ಪದದ ಅರ್ಥವಿವರಣೆ:

“ವೃತ್ತಾಂತ” ಎನ್ನುವ ಪದವು ಒಂದು ಕಾಲಾವಧಿಯಲ್ಲಿ ನಡೆದಿರುವ ಸಂಘಟನೆಗಳ ದಾಖಲಾತಿಯನ್ನು ಸೂಚಿಸುತ್ತದೆ.

  • ಹಳೇ ಒಡಂಬಡಿಕೆಯಲ್ಲಿ “ಪೂರ್ವಕಾಲ ವೃತ್ತಾಂತ ಪ್ರಥಮ ಭಾಗ” ಮತ್ತು “ಪೂರ್ವಕಾಲ ವೃತ್ತಾಂತ ದ್ವಿತೀಯ ಭಾಗ” ಎಂದು ಎರಡು ಪುಸ್ತಕಗಳನ್ನು ಕರೆಯುತ್ತಾರೆ.
  • “ಪೂರ್ವಕಾಲ ವೃತ್ತಾಂತಗಳು” ಎಂದು ಕರೆಯಲ್ಪಡುವ ಪುಸ್ತಕಗಳು ಇಸ್ರಾಯೇಲ್ ಜನರ ಚರಿತ್ರೆಯ ಭಾಗವನ್ನು ದಾಖಲಿಸುತ್ತವೆ. ಇದರಲ್ಲಿ ಆದಾಮನಿಂದ ಹಿಡಿದು ಪ್ರತಿಯೊಬ್ಬರ ವಂಶಾವಳಿಯಲ್ಲಿರುವ ಜನರ ಪಟ್ಟಿಯೊಂದಿಗೆ ಆರಂಭವಾಗುತ್ತದೆ.
  • “ಪೂರ್ವಕಾಲ ವೃತ್ತಾಂತ ಪ್ರಥಮ ಭಾಗ” ಗ್ರಂಥದಲ್ಲಿ ಅರಸನಾದ ಸೌಲನ ಅಂತಿಮ ಜೀವನ ಮತ್ತು ಅರಸನಾದ ದಾವೀದನ ಆಳ್ವಿಕೆಯ ಸಂಘಟನೆಗಳನ್ನು ಬರೆದಿರುತ್ತಾರೆ.
  • “ಪೂರ್ವಕಾಲ ವೃತ್ತಾಂತ ದ್ವಿತೀಯ ಭಾಗ” ಗ್ರಂಥದಲ್ಲಿ ಆರಸನಾದ ಸೊಲೊಮೋನ ಮತ್ತು ಇತರ ಅನೇಕ ಅರಸರ ಆಳ್ವಿಕೆಯ ಚರಿತ್ರೆಯನ್ನು ಬರೆದಿರುತ್ತಾರೆ, ಇದರಲ್ಲಿ ದೇವಾಲಯವನ್ನು ನಿರ್ಮಿಸುವುದು, ದಕ್ಷಿಣ ರಾಜ್ಯವಾದ ಯೂದಾದಿಂದ ಉತ್ತರ ರಾಜ್ಯವಾದ ಇಸ್ರಾಯೇಲನ್ನು ಬೇರ್ಪಡಿಸುವ ವಿಷಯಗಳು ಒಳಗೊಂಡಿರುತ್ತವೆ.
  • 2 ಪೂರ್ವಕಾಲ ವೃತ್ತಾಂತಗಳ ಅಂತಿಮ ಸಂಘಟನೆಗಳು ಬಾಬೆಲೋನಿಯ ಸೆರೆಯ ಪ್ರಾರಂಭದ ವಿಷಯಗಳನ್ನು ವಿವರಿಸುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಬಾಬೆಲೋನಿಯ, ದಾವೀದ, ಹೊರದೂಡು, ಇಸ್ರಾಯೇಲ್ ರಾಜ್ಯ, ಯೂದಾ, ಸೊಲೊಮೋನ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1697

ಪೂರ್ವಜ, ಪೂರ್ವಜರು, ತಂದೆ, ತಂದೆಯರು, ತಂದೆಯಾಗಿದ್ದ, ತಂದೆತನ, ಪಿತೃ, ಪಿತೃಗಳು, ತಾತ

# ಪದದ ಅರ್ಥವಿವರಣೆ:

ಇದನ್ನು ಅಕ್ಷರಾರ್ಥವಾಗಿ ಉಪಯೋಗಿಸಿದರೆ, “ತಂದೆ” ಎನ್ನುವ ಪದವು ಒಬ್ಬ ವ್ಯಕ್ತಿಯ ಪುರುಷ ಪೋಷಕರನ್ನು ಸೂಚಿಸುತ್ತದೆ. ಈ ಪದವನ್ನು ಅನೇಕ ಅಲಂಕಾರಿಕ ಭಾಷೆಯಲ್ಲಿ ಉಪಯೋಗಿಸುತ್ತಾರೆ.

  • “ತಂದೆ” ಮತ್ತು “ಪಿತೃ” ಎನ್ನುವ ಪದಗಳು ಒಬ್ಬ ವ್ಯಕ್ತಿಯ ಅಥವಾ ಒಂದು ಜನರ ಗುಂಪಿನ ಪುರುಷ ಪೂರ್ವಜರನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ. ಇದನ್ನು “ಪೂರ್ವಜ” ಅಥವಾ “ಅನುವಂಶಿಕ ತಂದೆ” ಎಂದೂ ಅನುವಾದ ಮಾಡಬಹುದು.
  • “ಪಿತ” ಎನ್ನುವ ಮಾತು ಎನಾದರೊಂದಕ್ಕೆ ಆಧಾರವಾಗಿರುವ ಅಥವಾ ಒಂದು ವರ್ಗದ ಜನರಿಗೆ ನಾಯಕನಾಗಿರುವ ಒಬ್ಬ ವ್ಯಕ್ತಿಯನ್ನು ಅಲಂಕಾರಿಕವಾಗಿಯೂ ಸೂಚಿಸುವುದಕ್ಕೆ ಉಪಯೋಗಿಸುತ್ತಾರೆ. ಉದಾಹರಣೆಗೆ, ಆದಿಕಾಂಡ 4ನೇ ಅಧ್ಯಾಯದಲ್ಲಿ “ಗುಡಾರಗಳಲ್ಲಿ ವಾಸಿಸುವರ ಮೂಲ ಪುರುಷನು” ಎಂದು ಹೇಳಲಾಗಿದೆ, ಇದಕ್ಕೆ “ಗುಡಾರಗಳಲ್ಲಿ ಮೊಟ್ಟಮೊದಲು ನಿವಾಸ ಮಾಡಿದ ಜನರಿಗೆ ಮೊಟ್ಟ ಮೊದಲ ಕುಲದ ನಾಯಕನು” ಎಂದರ್ಥ.
  • ಅಪೊಸ್ತಲನಾದ ಪೌಲನು ಸುವಾರ್ತೆ ಸಾರುವುದರ ಮೂಲಕ ಕ್ರೈಸ್ತರಾಗುವುದಕ್ಕೆ ಸಹಾಯ ಮಾಡಿದ ಜನರಿಗೆಲ್ಲರಿಗೆ ಅಲಂಕಾರಿಕ ಭಾಷೆಯಲ್ಲಿ “ತಂದೆ” ಎಂದು ಕರೆಯಲ್ಪಟ್ಟಿದ್ದಾನೆ.

# ಅನುವಾದ ಸಲಹೆಗಳು

  • ತಂದೆ ಮತ್ತು ತನ್ನ ಸ್ವಂತ ಮಗನ ಕುರಿತಾಗಿ ಮಾತನಾಡುವಾಗ, ಅನುವಾದ ಭಾಷೆಯಲ್ಲಿ ತಂದೆಯನ್ನು ಸೂಚಿಸುವ ಬೇರೊಂದು ಪದವನ್ನು ಉಪಯೋಗಿಸಿ ಅನುವಾದ ಮಾಡಬಹುದು.
  • “ತಂದೆಯಾದ ದೇವರು” ಎನ್ನುವ ಮಾತನ್ನು “ತಂದೆ”ಗೆ ಉಪಯೋಗಿಸುವ ಸಹಜವಾದ, ಸಾಧಾರಣವಾದ ಪದವನ್ನು ಉಪಯೋಗಿಸಿ ಅನುವಾದ ಮಾಡಬಹುದು.
  • ಪಿತೃಗಳನ್ನು ಸೂಚಿಸಿದಾಗ, ಈ ಪದವನ್ನು “ಪೂರ್ವಜರು” ಅಥವಾ “ಅನುವಂಶಿಕ ತಂದೆಗಳು” ಎಂದು ಅನುವಾದ ಮಾಡಬಹುದು.
  • ಕ್ರಿಸ್ತನಲ್ಲಿರುವ ವಿಶ್ವಾಸಿಗಳೆಲ್ಲರಿಗೆ ತಂದೆಯನ್ನಾಗಿ ಪೌಲನು ತನ್ನನ್ನು ತಾನು ಸೂಚಿಸಿಕೊಂಡಾಗ, ಇದನ್ನು “ಆತ್ಮೀಯಕವಾದ ತಂದೆ” ಅಥವಾ “ಕ್ರಿಸ್ತನಲ್ಲಿ ತಂದೆ” ಎಂದೂ ಅನುವಾದ ಮಾಡಬಹುದು.
  • “ತಂದೆ” ಎನ್ನುವ ಪದವು ಕೆಲವೊಂದುಬಾರಿ “ಕುಲದ ನಾಯಕ” ಎಂದೂ ಅನುವಾದ ಮಾಡಬಹುದು.
  • “ಸುಳ್ಳಿನ ತಂದೆ” ಎನ್ನುವ ಮಾತಿಗೆ “ಎಲ್ಲಾ ಸುಳ್ಳುಗಳಿಗೆ ಅವನೇ ಆಧಾರ” ಅಥವಾ “ಅವನಿಂದಲೇ ಎಲ್ಲಾ ಸುಳ್ಳುಗಳು ಬರುತ್ತವೆ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ತಂದೆಯಾದ ದೇವರು, ಮಗ, ದೇವರ ಮಗ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1, H2, H25, H369, H539, H1121, H1730, H1733, H2524, H3205, H3490, H4940, H5971, H7223, G256, G540, G1080, G2495, G3737, G3962, G3964, G3966, G3967, G3970, G3971, G3995, G4245, G4269, G4613

ಪೌರ, ಪೌರರು, ಪೌರತ್ವ

# ಪದದ ಅರ್ಥವಿವರಣೆ:

ಪೌರ ಎಂದರೆ ಒಂದು ಪಟ್ಟಣದಲ್ಲಿ, ದೇಶದಲ್ಲಿ ಅಥವಾ ರಾಜ್ಯದಲ್ಲಿ ನಿವಾಸ ಮಾಡುವ ವ್ಯಕ್ತಿಯಾಗಿರುತ್ತಾನೆ. ಆ ಸ್ಥಳದಲ್ಲಿ ಕಾನೂನುಬದ್ಧವಾಗಿ ನಿವಾಸವಾಗಿರುವ ಅಧಿಕಾರಿಕವಾಗಿ ಗುರುತಿಸಲ್ಪಟ್ಟಿರುವ ಒಬ್ಬ ವ್ಯಕ್ತಿಯನ್ನು ವಿಶೇಷವಾಗಿ ಸೂಚಿಸುತ್ತದೆ.

  • ಸಂದರ್ಭಾನುಸಾರವಾಗಿ, ಈ ಪದವನ್ನು “ನಾಗರೀಕರು” ಅಥವಾ “ಅಧಿಕೃತ ನಿವಾಸಿ” ಎಂದೂ ಅನುವಾದ ಮಾಡಬಹುದು
  • ಅರಸನಿಂದಾಗಲಿ, ಚಕ್ರವರ್ತಿಯಿಂದಾಗಲಿ ಅಥವಾ ಇತರ ಪಾಲಕರಿಂದಾಗಲಿ ಆಳಲ್ಪಡುತ್ತಿರುವ ಸಾಮ್ರಾಜ್ಯದಲ್ಲಿ ಅಥವಾ ದೊಡ್ಡ ರಾಜ್ಯದಲ್ಲಿ ಭಾಗವಾಗಿರುವ ಒಂದು ಸೀಮೆಯಲ್ಲಿ ಒಬ್ಬ ಪೌರನು ನಿವಾಸವಾಗಿರಬಹುದು. ಉದಾಹರಣೆಗೆ, ಪೌಲನು ಅನೇಕ ಸೀಮೆಗಳನ್ನೊಳಗೊಂಡಿರುವ ರೋಮಾ ಸಾಮ್ರಾಜ್ಯದ ಪೌರನಾಗಿದ್ದನು; ಆ ಸೀಮೆಗಳಲ್ಲಿರುವ ಒಂದು ಪ್ರಾಂತ್ಯದಲ್ಲಿ ಪೌಲನು ನಿವಾಸವಾಗಿದ್ದನು.
  • ಕ್ರಿಸ್ತನನ್ನು ನಂಬಿದ ವಿಶ್ವಾಸಿಗಳೆಲ್ಲರು ಪರಲೋಕದ “ಪೌರರು” ಎಂದು ಕರೆಯಲ್ಪಟ್ಟಿದ್ದಾರೆ, ಒಂದಾನೊಂದು ದಿನ ಈ ಸ್ಥಳದಲ್ಲಿ ಅವರೆಲ್ಲರು ನಿವಾಸವಾಗುವರು. ದೇಶದ ಪೌರನ ಹಾಗೆಯೇ ಕ್ರೈಸ್ತನು ದೇವರ ರಾಜ್ಯಕ್ಕೆ ಸಂಬಂಧಪಟ್ಟವನಾಗಿರುತ್ತಾನೆ.

(ಈ ಪದಗಳನ್ನು ಸಹ ನೋಡಿರಿ : ರಾಜ್ಯ, ಪೌಲ, ಸೀಮೆ, ರೋಮಾ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H6440, G4175, G4177, G4847

ಪ್ರಕಟಿಸು, ಪ್ರಕಟಿಸಿದೆ, ಉಪದೇಶಿಸುವುದು, ಉಪದೇಶಕ, ಸಾರು, ಸಾರುವುದು, ಸಾರಿದೆ, ಸಾರಲ್ಪಡುತ್ತಿದೆ, ಪ್ರಕಟಣೆ, ಪ್ರಕಟಣೆಗಳು

# ಪದದ ಅರ್ಥವಿವರಣೆ:

“ಪ್ರಕಟಿಸು” ಎನ್ನುವ ಪದಕ್ಕೆ ಜನರ ಗುಂಪಿನೊಂದಿಗೆ ಮಾತನಾಡು, ದೇವರ ಕುರಿತಾಗಿ ಅವರಿಗೆ ಬೋಧನೆ ಮಾಡು ಮತ್ತು ದೇವರಿಗೆ ವಿಧೇಯತೆ ತೋರಿಸಬೇಕೆಂದು ಅವರನ್ನು ಬೇಡಿಕೊಳ್ಳು ಎಂದರ್ಥ. “ಪ್ರಕಟಿಸು” ಎನ್ನುವ ಪದಕ್ಕೆ ಧೈರ್ಯವಾಗಿ ಬಹಿರಂಗವಾಗಿ ಯಾವುದಾದರೊಂದನ್ನು ಘೋಷಿಸುವುದು ಅಥವಾ ಸಾರುವುದು ಎಂದರ್ಥ.

  • ಅನೇಕಬಾರಿ ಉಪದೇಶಿಸುವುದೆನ್ನುವುದು ದೊಡ್ಡ ಜನರ ಗುಂಪಿನವರಿಗೆ ಒಬ್ಬರಿಂದ ನಡೆಯುವ ಕಾರ್ಯವಾಗಿರುತ್ತದೆ. ಇದು ಮಾತನಾಡುವುದೇ ಆಗಿರುತ್ತದೆ ಹೊರತು, ಬರೆಯುವುದಾಗಿರುವುದಿಲ್ಲ.
  • “ಪ್ರಕಟಿಸುವುದು” ಮತ್ತು “ಬೋಧಿಸುವುದು” ಎನ್ನುವವು ಒಂದೇಯಾಗಿರುತ್ತವೆ, ಆದರೆ ಪ್ರಸಂಗಿಸುವ ವಿಧಾನವು ಬೇರೆ ಬೇರೆಯಾಗಿರುತ್ತದೆ.
  • “ಉಪದೇಶಿಸುವುದು” ಮುಖ್ಯವಾಗಿ ಬಹಿರಂಗವಾಗಿ ಆತ್ಮೀಯಕವಾದ ಅಥವಾ ನೈತಿಕವಾದ ಸತ್ಯವನ್ನು ಸಾರುವುದನ್ನು ಸೂಚಿಸುತ್ತದೆ ಮತ್ತು ಆ ಮಾತುಗಳಿಗೆ ಎಲ್ಲರು ಸ್ಪಂದಿಸಬೇಕೆಂದು ಬೇಡುವುದಾಗಿರುತ್ತದೆ. “ಬೋಧಿಸುವುದು” ಎನ್ನುವ ಪದವು ಸೂಚನೆ ಕೊಡುವುದನ್ನು ಒತ್ತಿ ಹೇಳುತ್ತದೆ, ಯಾವುದಾದರೊಂದನ್ನು ಯಾವರೀತಿ ಮಾಡಬೇಕೆಂದು ಜನರಿಗೆ ಮಾಹಿತಿಯನ್ನು ಕೊಡುವುದಾಗಿರುತ್ತದೆ ಅಥವಾ ಬೋಧನೆ ಮಾಡುವುದಾಗಿರುತ್ತದೆ.
  • “ಪ್ರಕಟಿಸು” ಎನ್ನುವ ಪದವು ಸಾಧಾರಣವಾಗಿ “ಸುವಾರ್ತೆ” ಎನ್ನುವ ಪದದಿಂದ ಉಪಯೋಗಿಸಲ್ಪಟ್ಟಿರುತ್ತದೆ.
  • ಒಬ್ಬ ವ್ಯಕ್ತಿ ಇತರರಿಗೆ ಏನನ್ನು ಸಾರುತ್ತಿರುತ್ತಾನೋ ಅದು ಕೂಡ ತನ್ನ “ಬೋಧನೆಗಳಾಗಿ” ಸಾಧಾರಣವಾಗಿ ಸೂಚಿಸಲಾಗುತ್ತದೆ.
  • ಸತ್ಯವೇದದಲ್ಲಿ ಅನೇಕಬಾರಿ “ಪ್ರಕಟಿಸು” ಎನ್ನುವ ಪದಕ್ಕೆ ದೇವರು ಆಜ್ಞಾಪಿಸಿದ ವಿಷಯಗಳನ್ನು ಬಹಿರಂಗವಾಗಿ ತಿಳಿಸು ಎಂದರ್ಥ ಅಥವಾ ದೇವರ ಕುರಿತಾಗಿ ಮತ್ತು ಆತನು ಎಷ್ಟು ದೊಡ್ಡವನೆಂದು ಇತರರಿಗೆ ಹೇಳುವುದನ್ನು ಸೂಚಿಸುತ್ತದೆ.
  • ಹೊಸ ಒಡಂಬಡಿಕೆಯಲ್ಲಿ ಅಪೊಸ್ತಲರು ಯೇಸುವಿನ ಕುರಿತಾದ ಶುಭವಾರ್ತೆಯನ್ನು ಅನೇಕವಾದ ಪ್ರಾಂತ್ಯಗಳಲ್ಲಿರುವ ಪಟ್ಟಣಗಳಲ್ಲಿ ಅನೇಕ ಜನರಿಗೆ ಪ್ರಕಟಿಸಿ ಹೇಳಿದ್ದಾರೆ.

“ಪ್ರಕಟಿಸು” ಎನ್ನುವ ಪದವು ಅರಸರ ಮೂಲಕ ಬಂದಿರುವ ಆಜ್ಞೆಗಳಿಗೆ ಕೂಡ ಉಪಯೋಗಿಸುತ್ತಿದ್ದರು ಅಥವಾ ಬಹಿರಂಗವಾಗಿ ದುಷ್ಟತ್ವವನ್ನು ಖಂಡಿಸುವುದಕ್ಕೂ ಈ ಪದವನ್ನು ಉಪಯೋಗಿಸುತ್ತಿದ್ದರು.

  • “ಪ್ರಕಟಿಸು” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಸಾರು” ಅಥವಾ “ಬಹಿರಂಗವಾಗಿ ಪ್ರಸಂಗಿಸು” ಅಥವಾ “ಬಹಿರಂಗವಾಗಿ ಘೋಷಿಸು” ಎನ್ನುವ ಪದಗಳು ಒಳಗೊಂಡಿರುತ್ತವೆ.
  • “ಪ್ರಕಟಣೆ” ಎನ್ನುವ ಪದವನ್ನು “ಘೋಷಣೆ” ಅಥವಾ “ಬಹಿರಂಗವಾಗಿ ಪ್ರಸಂಗಿಸುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಶುಭವಾರ್ತೆ, ಯೇಸು, ದೇವರ ರಾಜ್ಯ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಉದಾಹರಣೆಗಳು:

  • 24:02 “ಮಾನಸಾಂತರ ಹೊಂದಿರಿ, ದೇವರ ರಾಜ್ಯವು ಸಮೀಪವಾಗಿದೆ” ಎಂದು ಅವನು (ಯೋಹಾನು) ಅವರಿಗೆ ___ ಪ್ರಸಂಗ ಮಾಡಿದನು ____ .
  • 30:01 ಅನೇಕ ಗ್ರಾಮಗಳಲ್ಲಿ ಬೋಧನೆ ಮಾಡುವುದಕ್ಕೆ ಮತ್ತು ___ ಪ್ರಕಟಿಸುವುದಕ್ಕೆ ___ ಯೇಸು ತನ್ನ ಶಿಷ್ಯರನ್ನು ಕಳುಹಿಸಿದನು.
  • 38:01 ಮೂವತ್ತು ಮೂರು ವರ್ಷಗಳಾದ ಮೇಲೆ ಯೇಸು ಬಹಿರಂಗವಾಗಿ ಬೋಧಿಸುವುದಕ್ಕೆ ಮತ್ತು ___ ಪ್ರಕಟನೆ ಮಾಡುವುದಕ್ಕೂ ____ ಆರಂಭಿಸಿದನು, ಯೆರೂಸಲೇಮಿನಲ್ಲಿ ಶಿಷ್ಯರೊಂದಿಗೆ ಪಸ್ಕವನ್ನು ಆಚರಿಸುವುದಕ್ಕೆ ತಾನು ಬಯಸುತಿದ್ದೇನೆಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು, ಮತ್ತು ಅಲ್ಲಿ ಆತನನ್ನು ಮರಣಕ್ಕೆ ಗುರಿ ಮಾಡುತ್ತಾನೆ.
  • 45:06 ಈ ಎಲ್ಲಾ ಸಂದರ್ಭಗಳಲ್ಲಿ ಇದ್ದಾಗಲೂ ಅವರು ಹೋದ ಪ್ರತಿಯೊಂದು ಸ್ಥಳದಲ್ಲೂ ಯೇಸುವಿನ ಕುರಿತಾಗಿ ಅವರು ___ ಪ್ರಕಟಿಸಿದನು ____.
  • 45:07 ಅವನು (ಫಿಲಿಪ್ಪನು) ಸಮಾರ್ಯಕ್ಕೆ ಹೋಗಿ, ಯೇಸುವಿನ ಕುರಿತಾಗಿ ಆತನು ಪ್ರಕಟಿಸಿದಾಗ, ಆ ಊರಿನಲ್ಲಿ ಅನೇಕಮಂದಿ ರಕ್ಷಣೆ ಹೊಂದಿದರು.
  • 46:06 ಆ ಕ್ಷಣದಲ್ಲಿಯೇ, ಸೌಲನು ದಮಸ್ಕದಲ್ಲಿರುವ ಯೆಹೂದ್ಯರಿಗೆ ___ ಪ್ರಕಟಣೆ ಮಾಡುವುದಕ್ಕೆ ___ ಆರಂಭಿಸಿದನು.
  • 46:10 ಅನೇಕ ಸ್ಥಳಗಳಲ್ಲಿ ಯೇಸುವಿನ ಶುಭವಾರ್ತೆಯನ್ನು ____ ಪ್ರಕಟಿಸುವುದಕ್ಕೆ ___ ಅವರು ಅವರನ್ನು ಕಳುಹಿಸಿದರು.
  • 47:14 ಪೌಲನು ಮತ್ತು ಇತರ ಕ್ರೈಸ್ತ ನಾಯಕರು ಅನೇಕ ಪಟ್ಟಣಗಳಿಗೆ ಪ್ರಯಾಣ ಮಾಡಿ, ಯೇಸುವಿನ ಕುರಿತಾಗಿ ಶುಭವಾರ್ತೆಯನ್ನು ಜನರಿಗೆ ಬೋಧಿಸಿದರು ಮತ್ತು ___ ಪ್ರಕಟಿಸಿದರು ____.
  • 50:02 “ಸರ್ವಲೋಕದಲ್ಲಿರುವ ಜನರಿಗೆ ಮತ್ತು ಭೂಮಿಯ ಕಟ್ಟಕಡೆಯವರೆಗೂ ದೇವರ ರಾಜ್ಯದ ಕುರಿತಾಗಿ ಶುಭವಾರ್ತೆಯನ್ನು ನನ್ನ ಶಿಷ್ಯರು ___ ಪ್ರಕಟಿಸುವರು” ಎಂದು ಈ ಭೂಮಿಯ ಮೇಲೆ ಯೇಸು ಜೀವಿಸಿದಾಗ ಹೇಳಿದರು.

# ಪದ ಡೇಟಾ:

  • (for proclaim): H1319, H1696, H1697, H2199, H3045, H3745, H4161, H5046, H5608, H6963, H7121, H7440, H8085, G518, G591, G1229, G1861, G2097, G2605, G2782, G2784, G2980, G3142, G4135

ಪ್ರಕಟಿಸು, ಪ್ರಕಟಿಸುವುದು, ಪ್ರಕಟಿಸಲಾಗಿದೆ, ಪ್ರಕಟಿಸಲಾಗುತ್ತಿದೆ, ಪ್ರಕಟನೆ, ಪ್ರಕಟನೆಗಳು

# ಪದದ ಅರ್ಥವಿವರಣೆ:

“ಪ್ರಕಟಿಸು” ಮತ್ತು “ಪ್ರಕಟನೆ” ಎನ್ನುವ ಪದಗಳು ಏನಾದರೊಂದು ವಿಷಯವನ್ನು ಅನೇಕಬಾರಿ ಒತ್ತಿ ಹೇಳುವುದಕ್ಕೆ ಬಹಿರಂಗವಾಗಿ ಅಥವಾ ಸಾಂಪ್ರದಾಯಿಕವಾಗಿ ಮಾಡುವ ವ್ಯಾಖ್ಯೆಯನ್ನು ಸೂಚಿಸುತ್ತದೆ.

  • “ಪ್ರಕಟನೆ” ಎನ್ನುವುದು ಪ್ರಕಟಿಸಲ್ಪಟ್ಟಿರುವ ವಿಷಯದ ಪ್ರಾಮುಖ್ಯತೆಯನ್ನು ಒತ್ತಿ ಹೇಳುವುದು ಮಾತ್ರವಲ್ಲದೇ, ಪ್ರಕಟನೆ ಮಾಡುವ ವ್ಯಕ್ತಿಯನ್ನೂ ಸೂಚಿಸುತ್ತದೆ.
  • ಉದಾಹರಣೆಗೆ, ಹಳೇ ಒಡಂಬಡಿಕೆಯಲ್ಲಿ ದೇವರಿಂದ ಬರುವ ಸಂದೇಶವು ಅನೇಕಬಾರಿ ಆ ಸಂದೇಶವು “ಯೆಹೋವನು ಇಂತೆನ್ನುತ್ತಾನೆ (ಅಥವಾ ಯೆಹೋವನು ನುಡಿದನು ಅಥವಾ ಯೆಹೋವನ ಪ್ರಕಟನೆ )” ಅಥವಾ “ಯೆಹೋವನು ಹೀಗೆ ಹೇಳುತ್ತಾನೆ” ಎನ್ನುವ ಮಾತುಗಳಿಂದ ಮುಂದುವರಿಯುತ್ತದೆ. ಯೆಹೋವನೇ ಈ ಮಾತನ್ನು ಹೇಳುತ್ತಿದ್ದಾನೆಂದು ಆತನನ್ನೇ ಈ ಮಾತುಗಳೆಲ್ಲವು ಸೂಚಿಸುತ್ತವೆ. ಯೆಹೋವನಿಂದ ಬರುವ ಸಂದೇಶವು ಎಷ್ಟು ಪ್ರಾಮುಖ್ಯವಾದದ್ದೆಂದು ತೋರಿಸುವುದೇ ಇಲ್ಲಿರುವ ಸತ್ಯಾಂಶ.

# ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ “ಪ್ರಕಟಿಸು” ಎನ್ನುವ ಪದವನ್ನು “ಸಾರಿ ಹೇಳು” ಅಥವಾ “ಬಹಿರಂಗ ವ್ಯಾಖ್ಯೆ ಮಾಡು” ಅಥವಾ “ಬಲವಾಗಿ ಹೇಳು” ಅಥವಾ “ದೃಢವಾಗಿ ವ್ಯಾಖ್ಯಾನಿಸು” ಎಂದೂ ಅನುವಾದ ಮಾಡಲಾಗುತ್ತದೆ.
  • “ಪ್ರಕಟನೆ” ಎನ್ನುವ ಪದವನ್ನು “ವ್ಯಾಖ್ಯೆ” ಅಥವಾ “ಘೋಷಣೆ” ಎಂದೂ ಅನುವಾದ ಮಾಡಬಹುದು.
  • “ಇದು ಯೆಹೋವನ ಮಾತು (ಅಥವಾ ನುಡಿ)” ಎನ್ನುವ ಮಾತನ್ನು “ಇದನ್ನೇ ಯೆಹೋವನು ಪ್ರಕಟಿಸುತ್ತಿದ್ದಾನೆ” ಅಥವಾ “ಇದೇ ಯೆಹೋವನು ಹೇಳುವ ಮಾತಾಗಿರುತ್ತದೆ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಸಾರು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H262, H559, H560, H816, H874, H952, H1696, H3045, H4853, H5002, H5042, H5046, H5608, H6567, H6575, H7121, H7561, H7878, H8085, G312, G394, G518, G669, G1107, G1213, G1229, G1335, G1344, G1555, G1718, G1732, G1834, G2097, G2511, G2605, G2607, G3140, G3670, G3724, G3822, G3853, G3870, G3955, G5319, G5419

ಪ್ರಚೋದಿಸು, ಪ್ರಚೋದಿಸುವುದು, ಪ್ರಚೋದಿಸಲಾಗಿದೆ, ಪ್ರಚೋದಿಸುವುದು, ಪ್ರಚೋದನೆ

# ಸತ್ಯಾಂಶಗಳು:

“ಪ್ರಚೋದಿಸು” ಎನ್ನುವ ಪದವು ನಕಾರಾತ್ಮಕವಾದ ಭಾವನೆಯನ್ನು ಅನುಭವಿಸುವುದಕ್ಕೆ ಯಾರಾದರೊಬ್ಬರನ್ನು ರೇಗಿಸುವುದು ಎಂದರ್ಥ.

  • ಯಾರಾದರೊಬ್ಬರು ಕೋಪಪಡುವುದಕ್ಕೆ ಕೆಣಕುವುದು ಎಂದರೆ ಒಬ್ಬ ವ್ಯಕ್ತಿ ಕೋಪಪಡುವುದಕ್ಕೆ ಕಾರಣವಾಗುವ ವಿಷಯಗಳನ್ನು ಮಾಡುವುದು ಎಂದರ್ಥ. ಇದನ್ನು “ಕೋಪಪಡುವುದಕ್ಕೆ ಕಾರಣವಾಗುವುದು” ಅಥವಾ “ಕೋಪ ತರುವುದಕ್ಕೆ ಕಾರಣವಾಗುವುದು” ಎಂದೂ ಅನುವಾದ ಮಾಡಬಹುದು.
  • “ಅವನನ್ನು ರೇಗಿಸಬೇಡ” ಎನ್ನುವ ಮಾತನ್ನು ಉಪಯೋಗಿಸಿದಾಗ, ಇದನ್ನು “ಅವನಿಗೆ ಕೋಪವನ್ನು ತರಿಸಬೇಡ” ಅಥವಾ “ಅವನು ಕೋಪಪಡುವಂತೆ ಮಾಡಬೇಡ” ಅಥವಾ “ನಿನ್ನ ವಿಷಯದಲ್ಲಿ ಅವನು ಕೋಪಪಡುವಂತೆ ಮಾಡಬೇಡ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಕೋಪ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3707, H3708, H4784, H4843, H5006, H5496, H7065, H7069, H7107, H7264, H7265, G653, G2042, G3863, G3893, G3947, G3948, G3949, G4292

ಪ್ರತಿಜ್ಞೆ, ಪ್ರತಿಜ್ಞೆ ಮಾಡಲಾಗಿದೆ, ಪ್ರತಿಜ್ಞೆಗಳು

# ಪದದ ಅರ್ಥವಿವರಣೆ:

“ಪ್ರತಿಜ್ಞೆ” ಎನ್ನುವ ಪದವು ಯಾವುದಾದರೊಂದನ್ನು ಕೊಡುವುದಕ್ಕೆ ಅಥವಾ ಏನಾದರೊಂದು ಮಾಡುವುದಕ್ಕೆ ಸಾಂಪ್ರದಾಯಿಕವಾಗಿ ಮತ್ತು ಗಂಭೀರವಾಗಿ ಭರವಸೆ ಕೊಡುವುದನ್ನು ಸೂಚಿಸುತ್ತದೆ.

  • ಹಳೇ ಒಡಂಬಡಿಕೆಯಲ್ಲಿ ಇಸ್ರಾಯೇಲ್ ಅಧಿಕಾರಿಗಳು ಅರಸನಾದ ದಾವೀದನಿಗೆ ನಂಬಿಗಸ್ತರಾಗಿರುತ್ತಾರೆಂದು ಪ್ರತಿಜ್ಞೆ ಮಾಡಿದರು.
  • ಪ್ರತಿಜ್ಞೆಯಾಗಿ ಒಂದು ವಸ್ತುವು ಕೊಡಲಾಗುತ್ತಿತ್ತು, ತನ್ನ ವಾಗ್ಧಾನವನ್ನು ನೆರವೇರಿಸಿದಾಗ ಆ ವಸ್ತುವನ್ನು ಹಿಂದುರಿಗಿ ಕೊಡಲಾಗುತ್ತಿತ್ತು.
  • “ಪ್ರತಿಜ್ಞೆ” ಎನ್ನುವ ಪದವನ್ನು “ಸಾಂಪ್ರದಾಯಿಕವಾಗಿ ಬದ್ಧರಾಗಿರುವುದು” ಅಥವಾ “ಬಲವಾಗಿ ವಾಗ್ಧಾನ ಮಾಡುವುದು” ಎಂದೂ ಅನುವಾದ ಮಾಡಬಹುದು.
  • “ಪ್ರತಿಜ್ಞೆ” ಎನ್ನುವ ಪದವು ಸಾಲವನ್ನು ತೀರಿಸುವ ವಾಗ್ಧಾನವಾಗಿ ಅಥವಾ ಖಾತಿರಿಯಾಗಿ ವಸ್ತುವನ್ನು ಕೊಡುವುದನ್ನು ಸೂಚಿಸುತ್ತದೆ.
  • “ಪ್ರತಿಜ್ಞೆ” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ, “ಗಂಭೀರವಾದ ವಾಗ್ಧಾನ” ಅಥವಾ “ಸಾಂಪ್ರದಾಯಿಕವಾದ ಬದ್ಧತೆ” ಅಥವಾ “ಖಾತರಿ” ಅಥವಾ “ಔಪಚಾರಿಕವಾದ ಭರವಸೆ” ಎನ್ನುವ ಮಾತುಗಳನ್ನು ಸಂದರ್ಭಾನುಸಾರವಾಗಿ ಬಳಸಬಹುದು.

(ಈ ಪದಗಳನ್ನು ಸಹ ನೋಡಿರಿ : ವಾಗ್ಧಾನ, ಪ್ರಮಾಣ ವಚನ, ಆಣೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H781, H2254, H2258, H5667, H5671, H6148, H6161, H6162

ಪ್ರತಿಷ್ಠಿಸು, ಪ್ರತಿಷ್ಠೆ ಮಾಡುವುದು, ಪ್ರತಿಷ್ಠಿಸಲಾಗಿದೆ, ಪ್ರತಿಷ್ಠೆ

# ಪದದ ಅರ್ಥವಿವರಣೆ:

ಪ್ರತಿಷ್ಠಿಸು ಎಂದರೆ ಒಂದು ವಿಶೇಷವಾದ ಕಾರ್ಯಕ್ಕಾಗಿ ಅಥವಾ ಉದ್ದೇಶಕ್ಕಾಗಿ ಪ್ರತ್ಯೇಕಪಡಿಸು ಎಂದರ್ಥ ಅಥವಾ ಸಮರ್ಪಿಸಿಕೊಳ್ಳುವುದು ಎಂದರ್ಥ.

  • ದಾವೀದನು ಕರ್ತನಿಗೆ ಬೆಳ್ಳಿ ಬಂಗಾರಗಳನ್ನು ಸಮರ್ಪಿಸಿದನು.
  • “ಪ್ರತಿಷ್ಠೆ” ಎನ್ನುವ ಪದವು ಅನೇಕಬಾರಿ ಒಂದು ವಿಶೇಷವಾದ ಉದ್ದೇಶಕ್ಕಾಗಿ ಏನಾದರೊಂದನ್ನು ಪ್ರತ್ಯೇಕಿಸುವ ಸಾಂಪ್ರದಾಯಿಕ ಸಮಾರಂಭವನ್ನು ಅಥವಾ ಘಟನೆಯನ್ನು ಸೂಚಿಸುತ್ತದೆ.
  • ಯಜ್ಞವೇದಿ ಪ್ರತಿಷ್ಠೆಯಲ್ಲಿ ದೇವರಿಗೆ ಬಲಿಯನ್ನು ಅರ್ಪಿಸುವುದು ಒಳಗೊಂಡಿರುತ್ತದೆ.
  • ಯೆಹೋವನನ್ನು ಮಾತ್ರ ಸೇವಿಸುವುದಕ್ಕೆ ಮತ್ತು ಆತನ ಪಟ್ಟಣವನ್ನು ಸಂರಕ್ಷಿಸುವುದಕ್ಕೆ ಒಂದು ವಿನೂತನವಾದ ವಾಗ್ಧಾನದೊಂದಿಗೆ ಯೆರೂಸಲೇಮಿನ ಗೋಡೆಗಳನ್ನು ಪುನರ್ ನಿರ್ಮಾಣ ಮಾಡಿದನಂತರ, ಅವುಗಳನ್ನು ಪ್ರತಿಷ್ಠೆ ಮಾಡುವುದರಲ್ಲಿ ನೆಹೆಮೀಯ ಇಸ್ರಾಯೇಲ್ಯರನ್ನು ನಡೆಸಿದನು. ಈ ಸಮಾರಂಭದಲ್ಲಿ ಹಾಡುಗಳು ಹಾಡುವುದರ ಮೂಲಕ ಸಂಗೀತ ವಾದ್ಯಗಳನ್ನು ಬಾರಿಸುವುದರ ಮೂಲಕ ದೇವರಿಗೆ ಕೃತಜ್ಞತೆಯ ವಂದನೆಗಳನ್ನು ಸಲ್ಲಿಸುವುದು ಒಳಗೊಂಡಿರುತ್ತದೆ.
  • “ಪ್ರತಿಷ್ಠಿಸು” ಎನ್ನುವ ಪದಕ್ಕೆ “ಒಂದು ವಿಶೇಷವಾದ ಉದ್ದೇಶಕ್ಕಾಗಿ ಸಮರ್ಪಿಸುವುದು” ಅಥವಾ “ವಿಶೇಷವಾದ ರೀತಿಯಲ್ಲಿ ಉಪಯೋಗಿಸಲ್ಪಡುವುದಕ್ಕೆ ಸಮರ್ಪಿಸಿಕೊಳ್ಳುವುದು” ಅಥವಾ “ಒಂದು ವಿಶೇಷವಾದ ಕೆಲಸವನ್ನು ಮಾಡುವುದಕ್ಕೆ ಯಾರಾದರೊಬ್ಬರನ್ನು ಸಮರ್ಪಿಸುವುದು” ಎಂದರ್ಥ.

(ಈ ಪದಗಳನ್ನು ಸಹ ನೋಡಿರಿ : ಬದ್ಧನಾಗು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2596, H2597, H2598, H2764, H4394, H6942, H6944, G1456, G1457

ಪ್ರಥಮ ಫಲಗಳು

# ಪದದ ಅರ್ಥವಿವರಣೆ:

“ಪ್ರಥಮ ಫಲಗಳು” ಎನ್ನುವ ಪದವು ಪ್ರತಿಯೊಂದು ಕೊಯ್ಲಿನ ಸಮಯದಲ್ಲಿ ಕೊಯ್ಯುವ ತರಕಾರಿ ಮತ್ತು ಮೊದಲ ಬೆಳೆಯ ಮೊದಲ ಭಾಗವನ್ನು ಸೂಚಿಸುತ್ತದೆ.

  • ಇಸ್ರಾಯೇಲ್ಯರು ಈ ಪ್ರಥಮ ಫಲಗಳನ್ನು ದೇವರಿಗೆ ಸಮಾಧಾನ ಯಜ್ಞವನ್ನಾಗಿ ಅರ್ಪಿಸುತ್ತಿದ್ದರು.
  • ಕುಟುಂಬದಲ್ಲಿ ಪ್ರಥಮ ಫಲವಾಗಿ ಹುಟ್ಟುವ ಚೊಚ್ಚಲ ಮಗನನ್ನು ಸೂಚಿಸುವುದಕ್ಕೆ ಈ ಪದವನ್ನು ಅಲಂಕಾರಿಕವಾಗಿಯೂ ಸತ್ಯವೇದದಲ್ಲಿ ಉಪಯೋಗಿಸಿದ್ದಾರೆ. ಆ ಕಾರಣದಿಂದ ಇವನು ಕುಟುಂಬದಲ್ಲಿ ಹುಟ್ಟುವ ಮೊದಲ ಮಗನಾಗಿರುತ್ತಾನೆ, ಇವನೇ ಕುಟುಂಬದ ಹೆಸರನ್ನು ಮತ್ತು ಗೌರವವನ್ನು ಕಾಪಾಡಬೇಕು.
  • ಆದ್ದರಿಂದ ಯೇಸು ಮರಣದಿಂದ ಎದ್ದು ಬಂದನು, ಆತನಲ್ಲಿ ನಂಬಿಕೆಯಿಟ್ಟ ವಿಶ್ವಾಸಗಳೆಲ್ಲರಲ್ಲಿ “ಪ್ರಥಮ ಫಲ” ಎಂದು ಆತನು ಕರೆಯಲ್ಪಟ್ಟಿದ್ದನು, ಮರಣ ಹೊಂದಿದ ವಿಶ್ವಾಸಿಗಳೆಲ್ಲರು ಒಂದಾನೊಂದು ದಿನ ಜೀವಂತವಾಗಿ ಎಬ್ಬಿಸಲ್ಪಡುತ್ತಾರೆ.
  • ಯೇಸುವಿನಲ್ಲಿರುವ ವಿಶ್ವಾಸಿಗಳು ಕೂಡ ಸೃಷ್ಟಿಯಲ್ಲೆಲ್ಲಾ “ಪ್ರಥಮ ಫಲಗಳು” ಎಂದು ಕರೆಯಲ್ಪಟ್ಟಿದ್ದಾರೆ, ಯೇಸು ವಿಮೋಚಿಸಿದವರ ಸ್ಥಾನವು ಮತ್ತು ವಿಶೇಷವಾದ ಹಕ್ಕನ್ನು ಸೂಚಿಸುತ್ತದೆ, ಅಷ್ಟೇ ಅಲ್ಲದೆ ಅವರೆಲ್ಲರು ಆತನ ಪ್ರಜೆಯಾಗಿ ಕರೆಯಲ್ಪಟ್ಟರು.

# ಅನುವಾದ ಸಲಹೆಗಳು:

  • ಈ ಪದಕ್ಕೆ ಅಕ್ಷರಾರ್ಥವಾದ ಅನುವಾದವು “(ಬೆಳೆಗಳ) ಪ್ರಥಮ ಭಾಗ” ಅಥವಾ “ಕೊಯ್ಲಿನಲ್ಲಿ ಮೊದಲ ಭಾಗ” ಎಂದು ಮಾಡಬಹುದು.
  • ಸಾಧ್ಯವಾದರೆ, ಅಲಂಕಾರಿಕ ವಿಧಾನದಲ್ಲಿ ಉಪಯೋಗಿಸುವಾಗ ಈ ಪದವನ್ನು ವಿವಿಧವಾದ ಸಂದರ್ಭಗಳಲ್ಲಿ ವಿವಿಧವಾದ ಅರ್ಥಗಳು ಬರುವಂತೆ ಅಕ್ಷರಾರ್ಥವಾಗಿ ಅನುವಾದ ಮಾಡಬಹುದು. ಈ ಪದವು ಅಕ್ಷರಾರ್ಥ ಅರ್ಥಕ್ಕೂ ಮತ್ತು ಅಲಂಕಾರಿಕ ಉಪಯೋಗಗಳಿಗೂ ಪರಸ್ಪರ ಸಂಬಂಧವನ್ನು ಕೂಡ ತೋರಿಸುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಚೊಚ್ಚಲು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1061, H6529, H7225, G536

ಪ್ರಧಾನ ಯಾಜಕರು

# ಪದದ ಅರ್ಥವಿವರಣೆ:

ಯೇಸು ಈ ಭೂಮಿಯ ಮೇಲೆ ಜೀವಿಸುವ ದಿನಗಳಲ್ಲಿ ಪ್ರಧಾನ ಯಾಜಕರು ತುಂಬಾ ಪ್ರಾಮುಖ್ಯವಾದ ಯೆಹೂದ್ಯ ಧರ್ಮದ ನಾಯಕರಾಗಿರುತ್ತಾರೆ.

  • ಪ್ರಧಾನ ಯಾಜಕರು ದೇವಾಲಯದಲ್ಲಿ ನಡೆಯುವ ಪ್ರತಿಯೊಂದು ಆರಾಧನೆ ಸೇವೆಗಾಗಿ ಬೇಕಾಗುವ ಪ್ರತಿಯೊಂದಕ್ಕೂ ಬಾಧ್ಯರಾಗಿರುತ್ತಾರೆ. ದೇವಾಲಯದಲ್ಲಿ ಕೊಡುವ ಹಣಕ್ಕೂ ಅವರೇ ಬಾಧ್ಯರಾಗಿರುತ್ತಾರೆ.
  • ಅವರು ಸಾಧಾರಣ ಯಾಜಕರಿಗಿಂತ ಹೆಚ್ಚಾದ ಶಕ್ತಿಯನ್ನು ಮತ್ತು ದರ್ಜೆಯನ್ನು ಹೊಂದಿರುತ್ತಾರೆ. ಪ್ರಧಾನ ಯಾಜಕರು ಮಾತ್ರವೇ ಹೆಚ್ಚಾದ ಅಧಿಕಾರವನ್ನು ಹೊಂದಿರುತ್ತಾರೆ.
  • ಪ್ರಧಾನ ಯಾಜಕರಲ್ಲಿ ಕೆಲವರು ಯೇಸುವಿನ ಮುಖ್ಯ ಶತ್ರುಗಳಾಗಿದ್ದರು ಮತ್ತು ಅವರು ಆತನನ್ನು ಬಂಧಿಸಿ, ಕೊಂದು ಹಾಕುವುದಕ್ಕೆ ರೋಮಾ ನಾಯಕರನ್ನು ತುಂಬಾ ಹೆಚ್ಚಾಗಿ ಪ್ರಭಾವಕ್ಕೊಳಗಾಗಿಸಿದ್ದರು.

# ಅನುವಾದ ಸಲಹೆಗಳು:

  • “ಪ್ರಧಾನ ಯಾಜಕರು” ಎನ್ನುವ ಪದವುನ್ನು “ಮುಖ್ಯ ಯಾಜಕರು” ಅಥವಾ “ಪ್ರಮುಖ ಯಾಜಕರು” ಅಥವಾ “ಪಾಲಿಸುವ ಯಾಜಕರು” ಎಂದೂ ಅನುವಾದ ಮಾಡಬಹುದು.
  • ಈ ಪದವನ್ನು “ಮಹಾ ಯಾಜಕ” ಎನ್ನುವ ಪದಕ್ಕೆ ಭಿನ್ನದಾಗಿರುವಂತೆ ಅಥವಾ ಅನುವಾದ ಮಾಡುವಂತೆ ನೋಡಿಕೊಳ್ಳಿರಿ.

(ಈ ಪದಗಳನ್ನು ಸಹ ನೋಡಿರಿ : ಮುಖ್ಯಸ್ಥ, ಮಹಾ ಯಾಜಕ, ಯೆಹೂದ್ಯ ನಾಯಕರು, ಯಾಜಕ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3548, H7218, G749

ಪ್ರಸವ ವೇದನೆ, ಪ್ರಸವ ವೇದನೆಯಲ್ಲಿ, ಪ್ರಸವ ವೇದನೆಗಳು

# ಪದದ ಅರ್ಥವಿವರಣೆ:

“ಪ್ರಸವ ವೇದನೆಯಲ್ಲಿರುವ” ಒಬ್ಬ ಸ್ತ್ರೀಯಳು ತನ್ನ ಮಗುವಿಗೆ ಜನನವನ್ನು ಕೊಡುವುದಕ್ಕೆ ಅನುಭವಿಸುವ ನೋವುಗಳನ್ನು ಅನುಭವಿಸುವಳು. ಅವುಗಳನ್ನೇ “ಪ್ರಸವ ವೇದನೆಗಳು” ಎಂದು ಕರೆಯುತ್ತಾರೆ.

  • ಅಪೊಸ್ತಲನಾದ ಪೌಲನು ಗಲಾತ್ಯದವರಿಗೆ ಬರೆದ ಪತ್ರಿಕೆಯಲ್ಲಿ ಈ ಪದವನ್ನು ಅಲಂಕಾರಿಕವಾಗಿ ಉಪಯೋಗಿಸಿದ್ದಾರೆ, ಇದನ್ನು ತನ್ನ ಸಹ ವಿಶ್ವಾಸಿಗಳೆಲ್ಲರು ಇನ್ನೂ ಹೆಚ್ಚಚ್ಚಾಗಿ ಕ್ರಿಸ್ತನಲ್ಲಿ ಸ್ವಾರೂಪ್ಯದಲ್ಲಿ ಬರಲು ಸಹಾಯ ಮಾಡುವುದಕ್ಕೆ ತನ್ನ ತವಕದ ಉದ್ದೇಶವನ್ನು ವಿವರಿಸುತ್ತದೆ.
  • ಅಂತ್ಯ ದಿನಗಳಲ್ಲಿ ವಿಪತ್ತುಗಳು ಯಾವರೀತಿ ಪರಿಸ್ಥಿತಿಗಳನ್ನು ಹೆಚ್ಚು ಮಾಡುತ್ತಾ ಹೋಗುತ್ತವೆ ಎನ್ನುವದನ್ನು ವಿವರಿಸುವುದಕ್ಕೆ ಸತ್ಯವೇದದಲ್ಲಿ ಪ್ರಸವ ವೇದನೆಯ ಪದ್ಧತಿಯನ್ನು ಉಪಯೋಗಿಸಲಾಗಿದೆ.

(ಈ ಪದಗಳನ್ನು ಸಹ ನೋಡಿರಿ : ಶ್ರಮೆ, ಅಂತ್ಯ ದಿನ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2342, H2470, H3018, H3205, H5999, H6045, H6887, H8513, G3449, G4944, G5088, G5604, G5605

ಪ್ರಸಿದ್ಧ, ಪ್ರಸಿದ್ಧಗೊಳಿಸುವುದು, ಪ್ರಸಿದ್ಧನಾದವನು, ಪ್ರಸಿದ್ಧ ಹೊಂದಿದವರು

# ಪದದ ಅರ್ಥವಿವರಣೆ:

“ಪ್ರಸಿದ್ಧ” ಎನ್ನುವ ಪದವು ಅತ್ಯುತ್ತಮ ಮತ್ತು ಉತ್ತಮ ಉನ್ನತ ಗುಣಮಟ್ಟವನ್ನು ಹೊಂದಿದ ಯಾವುದಾದರೊಂದನ್ನು ಸೂಚಿಸುತ್ತದೆ. “ಪ್ರಸಿದ್ಧನಾದವನು” ಎನ್ನುವುದು ಉನ್ನತವಾದ ರಾಜಕೀಯ ಅಥವಾ ಸಾಮಾಜಿಕ ತರಗತಿಗೆ ಸಂಬಂಧಪಟ್ಟ ವ್ಯಕ್ತಿಯಾಗಿರುತ್ತಾನೆ. “ಪ್ರಸಿದ್ಧ ಜನನದ” ಮನುಷ್ಯ ಎನ್ನುವ ಮಾತು ಪ್ರಸಿದ್ಧನಾಗಿರುವ ವ್ಯಕ್ತಿಗೆ ಹುಟ್ಟಿದವನನ್ನು ಸೂಚಿಸುತ್ತದೆ.

  • ಪ್ರಸಿದ್ಧನಾಗಿರುವ ವ್ಯಕ್ತಿ ಅನೇಕಬಾರಿ ರಾಜ್ಯದ ಅಧಿಕಾರಿಯಾಗಿರುತ್ತಾನೆ, ಅರಸನಿಗೆ ತುಂಬಾ ಹತ್ತಿರವಾದ ದಾಸನಾಗಿರುತ್ತಾನೆ.
  • “ಪ್ರಸಿದ್ಧನಾಗಿರುವವನು” ಎನ್ನುವ ಮಾತನ್ನು “ಅರಸನ ಅಧಿಕಾರಿ” ಅಥವಾ “ಸರ್ಕಾರದ ಅಧಿಕಾರಿ” ಎಂದೂ ಅನುವಾದ ಮಾಡಬಹುದು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H117, H678, H1281, H1419, H2715, H3358, H3513, H5057, H5081, H6440, H6579, H7336, H7261, H8282, H8269, H8321, G937, G2104, G2903

ಪ್ರಸಿದ್ಧ, ಪ್ರಸಿದ್ಧರಾಗಿರುವ

# ಪದದ ಅರ್ಥವಿವರಣೆ:

“ಪ್ರಸಿದ್ಧ” ಎನ್ನುವ ಪದವು ಖ್ಯಾತಿ ಹೊಂದಿದ ಶ್ರೇಷ್ಠತೆಯು ಮತ್ತು ಪ್ರಶಂಶ ಅರ್ಹ ಖ್ಯಾತಿಯನ್ನು ಸೂಚಿಸುತ್ತದೆ. ಯಾವುದೇ ಅಥವಾ ಯಾರೇ ಪ್ರಸಿದ್ಧವನ್ನು ಹೊಂದಿದ್ದರೆ, ಅದನ್ನು ಅಥವಾ ಅವರನ್ನು “ಪ್ರಸಿದ್ಧರಾಗಿರುವ” ಎಂದೂ ಕರೆಯುತ್ತಾರ.

  • ಒಬ್ಬ ವ್ಯಕ್ತಿ “ಪ್ರಸಿದ್ಧನಾಗಿದ್ದಾನೆ” ಎಂದರೆ ಖ್ಯಾತಿಯನ್ನು ಮತ್ತು ಉನ್ನತ ಗೌರವವನ್ನು ಪಡೆದ ವ್ಯಕ್ತಿಯನ್ನು ಸೂಚಿಸುತ್ತದೆ.
  • “ಪ್ರಸಿದ್ಧ” ಎನ್ನುವುದು ವಿಶೇಷವಾಗಿ ದೀರ್ಘ ಕಾಲದವರೆಗೂ ತಿಳಿದಿರುವ ಒಳ್ಳೇಯ ಹೆಸರುವಾಸಿಯನ್ನು ಸೂಚಿಸುತ್ತದೆ.
  • “ಪ್ರಸಿದ್ಧ ಹೊಂದಿದ” ಪಟ್ಟಣ ಎನ್ನವುದು ಅನೇಕಬಾರಿ ಅದರ ಸಂಪತ್ತಿಗೂ ಮತ್ತು ಅಭಿವೃದ್ಧಿಗೂ ಹೆಸರುವಾಸಿಯಾಗಿರುತ್ತದೆ.

# ಅನುವಾದ ಸಲಹೆಗಳು:

  • “ಪ್ರಸಿದ್ಧ” ಎನ್ನುವ ಪದವನ್ನು “ಖ್ಯಾತಿ” ಅಥವಾ “ಗೌರವವುಳ್ಳ ಖ್ಯಾತಿ” ಅಥವಾ “ಅನೇಕ ಜನರ ಮೂಲಕ ಚೆನ್ನಾಗಿ ಗೊತ್ತಿರುವ ಶ್ರೇಷ್ಠತೆ” ಎಂದೂ ಅನುವಾದ ಮಾಡಬಹುದು.
  • “ಪ್ರಸಿದ್ಧ ಹೊಂದಿದ” ಎನ್ನುವ ಮಾತನ್ನು “ಚೆನ್ನಾಗಿ ಗೊತ್ತಿರುವ ಮತ್ತು ಉನ್ನತವಾದ ಗೌರವ ಹೊಂದಿರುವ” ಅಥವಾ “ಅತ್ಯುತ್ತಮ ಖ್ಯಾತಿ” ಎಂದೂ ಅನುವಾದ ಮಾಡಬಹುದು.
  • “ಕರ್ತನ ಹೆಸರು ಇಸ್ರಾಯೇಲಿನಲ್ಲಿ ಪ್ರಸಿದ್ಧವಾಗಬೇಕು” ಎನ್ನುವ ಮಾತನ್ನು “ಕರ್ತನ ನಾಮವು ಎಲ್ಲರಿಗೆ ಚೆನ್ನಾಗಿ ಗೊತ್ತಿರಬೇಕು ಮತ್ತು ಇಸ್ರಾಯೇಲ್ ಜನರಿಂದ ಗೌರವಿಸಲ್ಪಡಬೇಕು” ಎಂದೂ ಅನುವಾದ ಮಾಡಬಹುದು.
  • “ಪ್ರಸಿದ್ಧ ಹೊಂದಿದ ಮನುಷ್ಯರು” ಎನ್ನುವ ಮಾತನ್ನು “ಮನುಷ್ಯರ ಧೈರ್ಯವು ಎಲ್ಲರಿಗೆ ಚೆನ್ನಾಗಿ ಗೊತ್ತಿರುತ್ತದೆ” ಅಥವಾ “ಪ್ರಖ್ಯಾತಿ ಹೊಂದಿದ ಯೋಧರು” ಅಥವಾ “ಬಹು ಉನ್ನತವಾದ ಗೌರವವನ್ನು ಪಡೆದ ಮನುಷ್ಯರು” ಎಂದೂ ಅನುವಾದ ಮಾಡಬಹುದು.

“ನಿನ್ನ ಪ್ರಸಿದ್ಧವು ಎಲ್ಲಾ ತಲೆಮಾರಿನವರೆಗೂ ಇರುತ್ತದೆ” ಎನ್ನುವ ಮಾತನ್ನು “ವರ್ಷಗಳ ಪೂರ್ತಿ ಜನರು ನಿನ್ನ ಶ್ರೇಷ್ಠತೆಯ ಕುರಿತಾಗಿಯೇ ಕೇಳುತ್ತಾ ಇರುವರು” ಅಥವಾ “ನಿನ್ನ ಶ್ರೇಷ್ಠತೆಯು ಕಾಣಿಸಿಕೊಂಡಿದೆ ಮಾತು ಪ್ರತಿಯೊಂದು ತಲೆಮಾರಿನವರಲ್ಲಿರುವ ಜನರಿಂದ ಕೇಳಿಸಲ್ಪಡುತ್ತದೆ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಘನಪಡಿಸು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1984, H7121, H8034

ಪ್ರಳಯ, ಪ್ರಳಯಗಳು, ಪ್ರಳಯ ಬಂದಿದೆ, ಪ್ರಳಯವಾಗುತ್ತಿದೆ, ಪ್ರಳಯದ ನಿರು

# ಪದದ ಅರ್ಥವಿವರಣೆ:

“ಪ್ರಳಯ” ಎನ್ನುವ ಪದವು ಅಕ್ಷರಾರ್ಥವಾಗಿ ಭೂಮಿಯಲ್ಲೆಲ್ಲಾ ಸಂಪೂರ್ಣವಾಗಿ ಹರಡಿರುವ ಅತೀ ಹೆಚ್ಚಾದ ನೀರನ್ನು ಸೂಚಿಸುತ್ತದೆ.

  • ಈ ಪದವನ್ನು ಎನಾದರೊಂದರ ಕುರಿತಾಗಿ ತಡೆಯಲಾರದ ಸ್ಥಿತಿಯನ್ನು ಸೂಚಿಸುತ್ತದೆ, ವಿಶೇಷವಾಗಿ ಏನಾದರೂ ಆಕಸ್ಮಿಕವಾಗಿ ನಡೆಯುವುದನ್ನು ಸೂಚಿಸುತ್ತದೆ.
  • ನೋಹನ ಸಮಯದಲ್ಲಿ ಜನರೆಲ್ಲರೂ ದುಷ್ಟರಾದರು, ಇದರಿಂದ ದೇವರು ಭೂಮಿಯಲ್ಲೆಲ್ಲಾ ಮತ್ತು ಪರ್ವತಗಳನ್ನು ಮುಚ್ಚಿ ಹೋಗುವಷ್ಟು ನೀರು ಬರುವಂತೆ ಮಾಡಿದರು. ನೋಹನೊಂದಿಗೆ ನಾವೆಯಲ್ಲಿರದ ಪ್ರತಿಯೊಬ್ಬರು ಆ ನೀರಿನೊಳಗೆ ಮುಳುಗಿ ಸತ್ತರು. ಬೇರೆ ಪ್ರಳಯಗಳು ಕೇವಲ ಒಂದು ಚಿಕ್ಕ ಪ್ರಾಂತ್ಯವನ್ನು ಮಾತ್ರ ಮುಚ್ಚುತ್ತವೆ.
  • ಈ ಪದಕ್ಕೆ ಕ್ರಿಯೆಯು ಇದೆ, “ನದಿಯ ನೀರಿನಿಂದ ಭೂಮಿಯೆಲ್ಲಾ ಪ್ರವಾಹಕ್ಕೆ ಒಳಗಾಯಿತು” ಎಂದು ಗಮನಿಸಬಹುದು.

# ಅನುವಾದ ಸಲಹೆಗಳು:

  • “ಪ್ರಳಯ” ಎನ್ನುವ ಈ ಪದವನ್ನು ಅಕ್ಷರಾರ್ಥವಾಗಿ ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ತಡೆಯಲಾರದ ನೀರು” ಅಥವಾ “ಹೆಚ್ಚಿನ ಪ್ರಮಾಣದಲ್ಲಿರುವ ನೀರು” ಎನ್ನುವ ಮಾತುಗಳನ್ನು ಉಪಯೋಗಿಸಬಹುದು.
  • “ಪ್ರಳಯದಂತೆ” ಎನ್ನುವ ಅಲಂಕಾರಿಕ ಹೋಲಿಕೆಗೆ ಬಂದಾಗ ಆ ಪದವನ್ನು ಹಾಗೆಯೇ ಇರಿಸಿರಿ, ಅಥವಾ ನದಿಯಂತೆ ಪ್ರವಾಹ ಎನ್ನುವ ಅಂಶವನ್ನು ಸೂಚಿಸುವ ಪದಗಳನ್ನು ಆ ಪದಕ್ಕೆ ಬದಲಾಗಿ ಉಪಯೋಗಿಸಬಹುದು.
  • “ಪ್ರಳಯದ ನೀರಿನಂತೆ” ಎನ್ನುವ ಮಾತಿಗೆ ಅಂದರೆ ಈ ಮಾತಿನಲ್ಲಿ ನೀರು ಎನ್ನುವ ಪದವನ್ನು ಉಪಯೋಗಿಸಿದ ಮಾತಿಗಾಗಿ, “ಪ್ರಳಯ” ಎನ್ನುವ ಪದವನ್ನು “ಪ್ರಬಲವಾಗಿರುವ” ಅಥವಾ “ತಡೆಯಲಾರದ” ಎಂದೂ ಅನುವಾದ ಮಾಡಬಹುದು.
  • “ನನ್ನ ಮೇಲೆ ಪ್ರಳಯದ ಹಾಗೆ ಹೊಡೆದುಕೊಂಡು ಹೋಗಬೇಡ” ಎಂದು ಈ ಪದವನ್ನು ರೂಪಕಲಂಕಾರ ಪದವನ್ನಾಗಿಯೂ ಉಪಯೋಗಿಸಬಹುದು, ಇದಕ್ಕೆ “ಈ ತಡೆಯಲಾರದ ವಿಪತ್ತು ನನಗೆ ಸಂಭವಿಸುವಂತೆ ಮಾಡಬೇಡ” ಅಥವಾ “ವಿಪತ್ತುಗಳಿಂದ ನನ್ನನ್ನು ನಾಶಗೊಳಿಸಬೇಡ” ಅಥವಾ “ನಿನ್ನ ಕೋಪದಿಂದ ನನ್ನನ್ನು ಕೆಡಿಸಬೇಡ” ಎಂದರ್ಥ. (ನೋಡಿರಿ: ರೂಪಕಲಂಕಾರ
  • “ನನ್ನ ಮಂಚವು ಕಣ್ಣೀರಿನಿಂದ ತೇಲಾಡುಟ್ಟಿದೆ” ಎನ್ನುವ ಅಲಂಕಾರಿಕ ಮಾತನ್ನು “ಪ್ರಳಯದಂತೆ ನನ್ನ ಕಣ್ಣೀರಿನಿಂದ ನನ್ನ ಮಂಚವು ತೇಲುತ್ತಿದೆ” ಎಂದು ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ನಾವೆ, ನೋಹ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H216, H2229, H2230, H2975, H3999, H5104, H5140, H5158, H5674, H6556, H7641, H7857, H7858, H8241, G2627, G4132, G4215, G4216

ಪ್ರಿಯ, ಪ್ರಿಯರು

# ಪದದ ಅರ್ಥವಿವರಣೆ:

“ಪ್ರಿಯ” ಎನ್ನುವ ಪದವು ಅಕ್ಷರಾರ್ಥವಾಗಿ “ಪ್ರೀತಿಸುವ ಒಬ್ಬ ವ್ಯಕ್ತಿ” ಎಂದು ವಿವರಿಸಲ್ಪಡುತ್ತದೆ. ಸಾಧಾರಣವಾಗಿ ಈ ಪದವು ಇಬ್ಬರು ವ್ಯಕ್ತಿಗಳು ಒಬ್ಬರಿಗೊಬ್ಬರು ಲೈಂಗಿಕವಾದ ಸಂಬಂಧದಲ್ಲಿರುವುದನ್ನು ಸೂಚಿಸುತ್ತದೆ.

  • ಸತ್ಯವೇದದಲ್ಲಿ ಉಪಯೋಗಿಸಲ್ಪಟ್ಟಿರುವ “ಪ್ರಿಯ” ಎನ್ನುವ ಪದವು ಸಾಧಾರಣವಾಗಿ ವಿವಾಹ ಮಾಡಿಕೊಳ್ಳದ ಒಬ್ಬ ಪುರುಷನು ಅಥವಾ ಒಬ್ಬ ಸ್ತ್ರೀಯಳೊಂದಿಗೆ ಲೈಂಗಿಕವಾದ ಸಂಬಂಧದಲ್ಲಿರುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ.
  • ಇಸ್ರಾಯೇಲ್ಯರು ವಿಗ್ರಹಗಳನ್ನು ಆರಾಧಿಸಿ, ದೇವರಿಗೆ ಅವಿಧೇಯರಾಗಿರುವ ಸ್ಥಿತಿಯನ್ನು ಸೂಚಿಸುವುದಕ್ಕೆ ಸತ್ಯವೇದದಲ್ಲಿ ಅನೇಕಬಾರಿ ಈ ತಪ್ಪು ಲೈಂಗಿಕ ಸಂಬಂಧವು ಉಪಯೋಗಿಸಲ್ಪಟ್ಟಿರುತ್ತದೆ. ಇಸ್ರಾಯೇಲ್ ಜನರು ಆರಾಧನೆ ಮಾಡಿದ ವಿಗ್ರಹಗಳನ್ನು ಸೂಚಿಸುವುದಕ್ಕೆ ಅಲಂಕಾರಿಕ ವಿಧಾನದಲ್ಲಿ “ಪ್ರಿಯರು” ಎನ್ನುವ ಬಹುವಚನ ಪದವು ಕೂಡ ಉಪಯೋಗಿಸಲ್ಪಟ್ಟಿರುತ್ತದೆ. ಈ ಎಲ್ಲಾ ಸಂದರ್ಭಗಳಲ್ಲಿ ಈ ಪದವನ್ನು “ಅನೈತಿಕವಾದ ಪಾಲುದಾರರು” ಅಥವಾ “ವ್ಯಭಿಚಾರದಲ್ಲಿ ಪಾಲುದಾರರು” ಅಥವಾ “ವಿಗ್ರಹಗಳು” ಎನ್ನುವ ಮಾತುಗಳ ಮೂಲಕ ಅನುವಾದ ಮಾಡಬಹುದು. (ನೋಡಿರಿ ಅಲಂಕಾರಿಕ ಮಾತುಗಳು).
  • ಹಣದ “ಪ್ರಿಯ” ಎನ್ನುವ ಮಾತು ಹಣವನ್ನು ಸಂಪಾದನೆ ಮಾಡುವುದಕ್ಕೆ ಹೆಚ್ಚಾದ ಪ್ರಾಮುಖ್ಯತೆಯನ್ನು ಕೊಟ್ಟು, ಶ್ರೀಮಂತನಾಗುವುದಕ್ಕೆ ಬಯಸುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ.
  • ಹಳೇ ಒಡಂಬಡಿಕೆಯ ಪುಸ್ತಕವಾಗಿರುವ ಪರಮಗೀತೆಯಲ್ಲಿ ಉಪಯೋಗಿಸಲ್ಪಟ್ಟಿರುವ “ಪ್ರಿಯ” ಎನ್ನುವ ಪದವು ಒಳ್ಳೇಯ ಅರ್ಥ ಬರುವ ವಿಧಾನದಲ್ಲಿ ಉಪಯೋಗಿಸಲ್ಪಟ್ಟಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ವ್ಯಭಿಚಾರ, ಸುಳ್ಳು ದೇವರು, ಸುಳ್ಳು ದೇವರು, ಪ್ರೀತಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H157, H158, H868, H5689, H7453, H8566, G865, G866, G5358, G5366, G5367, G5369, G5377, G5381, G5382

ಫಲ, ಫಲಗಳು, ಫಲಭರಿತ, ನಿಷ್ಫಲ

# ಪದದ ಅರ್ಥವಿವರಣೆ:

“ಫಲ” ಎನ್ನುವ ಪದಕ್ಕೆ ತಿನ್ನುವುದಕ್ಕಾಗುವ ರೀತಿಯಲ್ಲಿರುವ ಮರದಲ್ಲಿ ಒಂದು ಭಾಗವನ್ನು ಸೂಚಿಸುತ್ತದೆ. “ಫಲಭರಿತ” ವಾಗಿರುವುದು ಅನೇಕ ಫಲಗಳನ್ನು ಒಳಗೊಂಡಿರುತ್ತದೆ. ಈ ಪದಗಳನ್ನು ಕೂಡ ಸತ್ಯವೇದದಲ್ಲಿ ಅಲಂಕಾರಿಕ ಭಾಷೆಯಲ್ಲಿ ಉಪಯೋಗಿಸಲ್ಪಟ್ಟಿರುತ್ತವೆ.

  • “ಫಲ” ಎನ್ನುವ ಪದವನ್ನು ಒಬ್ಬ ವ್ಯಕ್ತಿಯ ಕ್ರಿಯೆಗಳನ್ನು ಸೂಚಿಸುವುದಕ್ಕೆ ಸತ್ಯವೇದದಲ್ಲಿ ಅನೇಕಸಲ ಉಪಯೋಗಿಸಲಾಗಿರುತ್ತದೆ. ಮರದ ಮೇಲಿರುವ ಫಲವು ಆ ಮರ ಯಾವುದೆಂದು ತೋರಿಸುವ ಹಾಗೆಯೇ ಒಬ್ಬ ವ್ಯಕ್ತಿಯ ಮಾತುಗಳು ಮತ್ತು ಕ್ರಿಯೆಗಳು ತನ್ನ ನಡೆತೆಯನ್ನು ತೋರಿಸುತ್ತವೆ.
  • ಒಬ್ಬ ವ್ಯಕ್ತಿ ಒಳ್ಳೇಯ ಅಥವಾ ಕೆಟ್ಟ ಆತ್ಮೀಯ ಫಲವನ್ನುಂಟು ಮಾಡಬಹುದು, ಆದರೆ “ಫಲಭರಿತ” ಎನ್ನುವ ಪದವು ಯಾವಾಗಲೂ ಒಳ್ಳೇಯದಾಗಿ ಫಲಿಸುವ ಹೆಚ್ಚಿನ ಫಲವನ್ನು ಕೊಡುವ ಅನುಕೂಲವಾದ ಅರ್ಥವನ್ನೇ ಹೊಂದಿರುತ್ತದೆ.
  • “ಫಲಭರಿತ” ಎನ್ನುವ ಪದವು “ಸಮೃದ್ಧಿ” ಎನ್ನುವ ಅರ್ಥವನ್ನು ಕೊಡಲು ಅಲಂಕಾರಿಕ ಭಾಷೆಯಲ್ಲಿ ಉಪಯೋಗಿಸಿರುತ್ತಾರೆ. ಇದು ಅನೇಕಸಲ ಅನೇಕಮಂದಿ ಮಕ್ಕಳಿರುವುದನ್ನು ಮತ್ತು ಸಂತಾನವಿರುವುದನ್ನು ಸೂಚಿಸುತ್ತದೆ, ಅದೇ ರೀತಿಯಾಗಿ ಅಧಿಕ ಸಂಪತ್ತು ಮತ್ತು ಸಾಕಷ್ಟು ಆಹಾರ ಇರುವುದನ್ನೂ ಸೂಚಿಸುತ್ತದೆ.
  • ಸಾಧಾರಣವಾಗಿ “ಇದರ ಫಲ” ಎನ್ನುವ ಮಾತು ಬೇರೆ ಕಡೆಯಿಂದ ಬರುವ ಯಾವುದಾದರೊಂದನ್ನು ಅಥವಾ ಬೇರೆ ಯಾವುದಾದರಿಂದ ಉತ್ಪತ್ತಿಯಾಗುವುದನ್ನು ಸೂಚಿಸುತ್ತದೆ. ಉದಾಹರಣೆಗೆ, “ಜ್ಞಾನದ ಫಲ” ಎನ್ನುವ ಮಾತು ಜ್ಞಾನ ಹೊಂದಿರುವುದರಿಂದ ಬರುವ ಒಳ್ಳೇಯ ವಿಷಯಗಳನ್ನು ಸೂಚಿಸುತ್ತದೆ.
  • ‘”ಭೂಮಿಯ ಫಲ” ಎನ್ನುವ ಮಾತು ಸಾಧಾರಣವಾಗಿ ತಿನ್ನುವದಕ್ಕೆ ಜನರಿಗೆ ಆಹಾರವನ್ನು ಕೊಡುವ ಪ್ರತಿಯೊಂದು ಭೂಮಿಯನ್ನು ಸೂಚಿಸುತ್ತದೆ. ಇದರಲ್ಲಿ ದ್ರಾಕ್ಷಿ ಅಥವಾ ಖರ್ಜೂರ ಹಣ್ಣುಗಳು ಮಾತ್ರವಲ್ಲದೆ, ತರಕಾರಿ, ಬೀಜಗಳು ಮತ್ತು ಧಾನ್ಯಗಳು ಕೂಡ ಒಳಗೊಂಡಿರುತ್ತವೆ.
  • “ಆತ್ಮ ಫಲ” ಎನ್ನುವ ಅಲಂಕಾರಿಕ ಮಾತು ಪವಿತ್ರಾತ್ಮನಿಗೆ ವಿಧೇಯತೆ ತೋರಿಸುವ ಜನರಲ್ಲಿ ಆತನು ಹುಟ್ಟಿಸುವ ದೈವಿಕವಾದ ಗುಣಲಕ್ಷಣಗಳನ್ನು ಸೂಚಿಸುತ್ತದೆ.
  • “ಗರ್ಭ ಫಲ” ಎನ್ನುವ ಮಾತು “ಗರ್ಭ ಹುಟ್ಟಿಸುವುದನ್ನು” ಅಂದರೆ ಮಕ್ಕಳನ್ನು ಸೂಚಿಸುತ್ತದೆ.

# ಅನುವಾದ ಸಲಹೆಗಳು:

  • ಹಣ್ಣಿನ ಮರದಿಂದ ತಿನ್ನುವುದಕ್ಕಾಗುವ ಹಣ್ಣುಗಳನ್ನು ಸೂಚಿಸುವುದಕ್ಕೆ ಅನುವಾದ ಭಾಷೆಯಲ್ಲಿ ಉಪಯೋಗಿಸುವ ಸಹಜವಾದ ಪದವನ್ನು “ಫಲ” ಎನ್ನುವ ಪದಕ್ಕೆ ಉಪಯೋಗಿಸಿ ಅನುವಾದಿಸುವುದು ಉತ್ತಮ. ಅನೇಕ ಭಾಷೆಗಳಲ್ಲಿ ಈ ಪದಕ್ಕೆ ತುಂಬಾ ಸ್ವಾಭಾವಿಕವಾಗಿ ಬಹುವಚನದ ಪದವನ್ನು ಉಪಯೋಗಿಸುತ್ತಾರೆ, “ಫಲಗಳು” ಎಂದು ಸೂಚಿಸಿದಾಗ ಇದು ಒಂದಕ್ಕಿಂತ ಹೆಚ್ಚು ಫಲಗಳನ್ನು ಸೂಚಿಸುತ್ತಿದೆ ಎಂದರ್ಥ.
  • ಸಂದರ್ಭಾನುಸಾರವಾಗಿ “ಫಲಭರಿತ” ಎನ್ನುವ ಪದವನ್ನು “ಹೆಚ್ಚು ಆತ್ಮೀಯಕ ಫಲವನ್ನು ಕೊಡುವುದು” ಅಥವಾ “ಹೆಚ್ಚು ಮಕ್ಕಳನ್ನು ಹೊಂದಿರುವುದು” ಅಥವಾ “ಸಮೃದ್ಧಿ” ಎಂದೂ ಅನುವಾದಿಸಬಹುದು.
  • “ಭೂಮಿಯ ಫಲ” ಎನ್ನುವ ಮಾತನ್ನು “ಭೂಮಿಯಿಂದ ಬೆಳೆಸುವ ಫಲ” ಅಥವಾ “ಪ್ರಾಂತ್ಯದಲ್ಲಿ ಬೆಳೆಯುವ ಆಹಾರ ಬೆಳೆಗಳು” ಎಂದೂ ಅನುವಾದ ಮಾಡಬಹುದು.
  • ದೇವರು ಪ್ರಾಣಿಗಳನ್ನು ಮತ್ತು ಜನರನ್ನು ಸೃಷ್ಟಿಸಿದಾಗ, ಆತನು ಅವರಿಗೆ “ನೀವು ಬಹು ಸಂತಾನವುಳ್ಳವರಾಗಿ ಹೆಚ್ಚಿರಿ, ಭೂಮಿಯನ್ನು ತುಂಬಿಕೊಳ್ಳಿರಿ” ಎಂದು ಆಜ್ಞಾಪಿಸಿದನು, ಇದು ಅನೇಕಮಂದಿ ಸಂತಾನವನ್ನು ಹೊಂದಿರುವುದನ್ನು ಸೂಚಿಸುತ್ತದೆ. ಈ ಪದವನ್ನು “ಅಧಿಕ ಸಂತಾನ ಹೊಂದಿರುವುದು” ಅಥವಾ “ಅನೇಕಮಂದಿ ಮಕ್ಕಳನ್ನು ಮತ್ತು ವಂಶದವರನ್ನು ಹೊಂದಿರುವುದು” ಅಥವಾ “ಅನೇಕಮಂದಿ ಮಕ್ಕಳನ್ನು ಹೊಂದಿರು, ಇದರಿಂದ ನೀನು ಅನೇಕಮಂದಿ ವಂಶಸ್ಥರನ್ನು ಹೊಂದಿರುವಿ” ಎಂದೂ ಅನುವಾದ ಮಾಡಬಹುದು.
  • “ಗರ್ಭ ಫಲ” ಎನ್ನುವ ಮಾತನ್ನು “ಗರ್ಭ ಹುಟ್ಟಿಸುವುದು” ಅಥವಾ “ಸ್ತ್ರೀ ಮಕ್ಕಳಿಗೆ ಜನ್ಮ ಕೊಡುವಳು” ಅಥವಾ “ಮಕ್ಕಳು” ಎಂದೂ ಅನುವಾದ ಮಾಡಬಹುದು. ಮರಿಯಳಿಗೆ ಎಲಿಸಬೇತಳಿಗೆ “ನಿನ್ನ ಗರ್ಭಫಲವು ಆಶೀರ್ವಾದ ಹೊಂದಲಿ” ಎಂದು ಹೇಳಿದಳು, ಆಕೆ ಮಾತಿಗೆ “ನೀನು ಜನ್ಮ ಕೊಡುವ ಮಗು ಆಶೀರ್ವಾದ ಹೊಂದುವನು” ಎಂದರ್ಥ. ಈ ಮಾತಿಗೆ ಅನುವಾದ ಮಾಡುವ ಭಾಷೆಯಲ್ಲಿ ಬೇರೊಂದು ಪದಗಳು ಅಥವಾ ಮಾತುಗಳು ಇರಬಹುದು.
  • “ದ್ರಾಕ್ಷಿ ಬಳ್ಳಿಯ ಫಲ” ಎನ್ನುವ ಇನ್ನೊಂದು ಮಾತನ್ನು “ದಾಕ್ಷಿ ಬಳ್ಳಿಯ ಹಣ್ಣು” ಅಥವಾ “ದ್ರಾಕ್ಷಿಗಳು” ಎಂದೂ ಅನುವಾದ ಮಾಡಬಹುದು.
  • ಸಂದರ್ಭಕ್ಕೆ ತಕ್ಕಂತೆ “ಹೆಚ್ಚಾದ ಫಲಭರಿತವಾಗಿರುತ್ತದೆ” ಎನ್ನುವ ಮಾತನ್ನು “ಹೆಚ್ಚು ಫಲವನ್ನು ಕೊಡುತ್ತದೆ” ಅಥವಾ “ಹೆಚ್ಚು ಮಕ್ಕಳನ್ನು ಹೊಂದುತ್ತಾರೆ” ಅಥವಾ “ಸಮೃದ್ಧಿಯನ್ನು ಪಡೆಯುವಿರಿ” ಎಂದೂ ಅನುವಾದ ಮಾಡಬಹುದು.
  • ಅಪೊಸ್ತಲನಾದ ಪೌಲನು ನುಡಿದ “ಫಲಭರಿತವಾದ ಕೆಲಸ” ಎನ್ನುವ ಮಾತನ್ನು “ಒಳ್ಳೇಯ ಫಲಗಳನ್ನು ಕೊಡುವ ಕೆಲಸ” ಅಥವಾ “ಯೇಸುವಿನಲ್ಲಿ ನಂಬುವ ಅನೇಕರಲ್ಲಿ ಪ್ರಯತ್ನಗಳು ಪರಿಣಾಮಕಾರಿಯಾಗಿರುತ್ತವೆ” ಎಂದೂ ಅನುವಾದ ಮಾಡಬಹುದು.
  • “ಆತ್ಮ ಫಲ” ಎನ್ನುವ ಮಾತನ್ನು “ಪವಿತ್ರಾತ್ಮನು ಉಂಟುಮಾಡುವ ಕೆಲಸಗಳು” ಅಥವಾ “ಒಬ್ಬರಲ್ಲಿ ಪವಿತ್ರಾತ್ಮನು ಕೆಲಸ ಮಾಡುತ್ತಿದ್ದಾನೆ ಎನ್ನುವುದಕ್ಕೆ ಅವರ ಕ್ರಿಯೆಗಳು ಮತ್ತು ಮಾತುಗಳು ನಮಗೆ ತೋರಿಸುತ್ತವೆ”.

(ಈ ಪದಗಳನ್ನು ಸಹ ನೋಡಿರಿ : ವಂಶಸ್ಥರು, ಧಾನ್ಯ, ದ್ರಾಕ್ಷಿ, ಪವಿತ್ರಾತ್ಮ, ದ್ರಾಕ್ಷಿ ಬಳ್ಳಿ, ಗರ್ಭ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3, H4, H1061, H1063, H1069, H2173, H2233, H2981, H3206, H3581, H3759, H3899, H3978, H4022, H4395, H5108, H5208, H6500, H6509, H6529, H7019, H8256, H8393, H8570, G1081, G2590, G2592, G2593, G3703, G5052, G5352, G6013

ಬಂಗಾರ, ಬಂಗಾರದ

# ಪದದ ಅರ್ಥವಿವರಣೆ:

ಬಂಗಾರ ಹಳದಿ ಬಣ್ಣದಲ್ಲಿರುವ ಒಂದು ಹೆಚ್ಚಿನ ಗುಣಮಟ್ಟದ ಲೋಹ, ಇದನ್ನು ಧರ್ಮ ಸಂಬಂಧವಾದ ವಸ್ತುಗಳನ್ನು ಮತ್ತು ಆಭರಣಗಳನ್ನು ತಯಾರಿಸುವುದಕ್ಕೆ ಉಪಯೋಗಿಸುತ್ತಾರೆ. ಇದು ಪುರಾತನ ಕಾಲಗಳಲ್ಲಿ ಅತ್ಯಂತ ಬೆಲೆಯುಳ್ಳ ಲೋಹವಾಗಿರುತ್ತದೆ.

  • ಸತ್ಯವೇದದ ಕಾಲಗಳಲ್ಲಿ ಅನೇಕ ವಿಧವಾದ ವಸ್ತುಗಳು ಗಟ್ಟಿ ಚಿನ್ನದಿಂದ ಮಾಡಲ್ಪಟ್ಟಿರುತ್ತವೆ ಅಥವಾ ಅವುಗಳ ಮೇಲೆ ಬಂಗಾರದ ತೆಳುವಾದ ಪದರದೊಂದಿಗೆ ಹೊದಿಸಿರುತ್ತಾರೆ.
  • ಈ ಎಲ್ಲಾ ವಸ್ತುಗಳಲ್ಲಿ ಕಿವಿಯೋಲೆಗಳು ಮತ್ತು ಇತರ ಆಭರಣಗಳು, ವಿಗ್ರಹಗಳು, ಯಜ್ಞವೇದಿಗಳು ಮತ್ತು ಗುಡಾರದಲ್ಲಿಯು ಅಥವಾ ದೇವಾಲಯದಲ್ಲಿ ಉಪಯೋಗಿಸುವ ಇತರ ವಸ್ತುಗಳನ್ನು ಅಂದರೆ ಒಡಂಬಡಿಕೆಯ ಮಂಜೂಷವು ಒಳಗೊಂಡಿರುತ್ತವೆ.
  • ಹಳೇ ಒಡಂಬಡಿಕೆಯ ಕಾಲಗಳಲ್ಲಿ ಬಂಗಾರವನ್ನು ಕೊಂಡುಕೊಳ್ಳುವುದರಲ್ಲಿ ಮತ್ತು ಮಾರುವುದರಲ್ಲಿ ವಿನಿಮಯ ಸಾಧನೆಯನ್ನಾಗಿ ಉಪಯೋಗಿಸುತ್ತಿದ್ದರು. ಇದರ ಬೆಲೆಯನ್ನು ನಿರ್ಧರಿಸಲು ಇದನ್ನು ಒಂದು ಪ್ರಮಾಣದಲ್ಲಿ ತೂಕ ಮಾಡುತ್ತಿದ್ದರು.
  • ಸ್ವಲ್ಪಕಾಲವಾದನಂತರ ಬಂಗಾರ ಮತ್ತು ಬೆಳ್ಳಿಯಂತಹ ಇತರ ಲೋಹಗಳನ್ನು ಕೊಂಡುಕೊಳ್ಳುವುದರಲ್ಲಿ ಮತ್ತು ಮಾರುವುದರಲ್ಲಿ ನಾಣ್ಯಗಳನ್ನಾಗಿ ಮಾಡಿಕೊಳ್ಳುವುದಕ್ಕೆ ಉಪಯೋಗಿಸುತ್ತಿದ್ದರು.
  • ಗಟ್ಟಿ ಬಂಗಾರವಲ್ಲದ್ದನ್ನು ಸೂಚಿಸಿದಾಗ ಕೇವಲ ಅದರ ಮೇಲೆ ಹೊದಿಸಿದ ಬಂಗಾರವನ್ನು ಮಾತ್ರ ಪರಿಗಣಿಸುತ್ತಿದ್ದರು, “ಬಂಗಾರದ” ಅಥವಾ “ಬಂಗಾರ ಹೊದಿಕೆಯಿರುವ” ಅಥವಾ “ಬಂಗಾರ ಪದರು” ಕೂಡ ಉಪಯೋಗಿಸುತ್ತಿದ್ದರು.
  • ಕೆಲವೊಂದುಬಾರಿ ಒಂದು ವಸ್ತುವನ್ನು “ಬಂಗಾರದ ಬಣ್ಣದಿಂದ” ವಿವರಿಸುತ್ತಿದ್ದರು, ಇದಕ್ಕೆ ಬಂಗಾರದ ಹಳದಿ ಬಣ್ಣವಿದೆ ಎಂದರ್ಥ, ಆದರೆ ನಿಜವಾದ ಬಂಗಾರದಿಂದ ಮಾಡಲ್ಪಟ್ಟಿರುವುದಲ್ಲ.

(ಈ ಪದಗಳನ್ನು ಸಹ ನೋಡಿರಿ : ಯಜ್ಞವೇದಿ, ಒಡಂಬಡಿಕೆಯ ಮಂಜೂಷ, ಸುಳ್ಳು ದೇವರು, ಬೆಳ್ಳಿ, ಗುಡಾರ, ದೇವಾಲಯ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1220, H1222, H1722, H2091, H2742, H3800, H4062, H5458, H6884, H6885, G5552, G5553, G5554, G5557

ಬಂಜೆ

# ಪದದ ಅರ್ಥವಿವರಣೆ

“ಬಂಜೆ”ಯಾಗಿರುವುದು ಎಂದರೆ ಫಲವನ್ನು ಕೊಡದೆಯಿರುವುದು ಅಥವಾ ಸಂತಾನವಿಲ್ಲದ್ದಿರುವ ಸ್ಥಿತಿಯಾಗಿರುತ್ತದೆ.

  • ಬಂಜೆಯಗಿರುವ ಭೂಮಿಯಲ್ಲಿ ಯಾವ ವಿಧವಾದ ಗಿಡಗಳು ಬೆಳೆಯುವದಿಲ್ಲ.
  • ಶರೀರಕವಾಗಿ ಮಕ್ಕಳನ್ನು ಹೇರದೆ ಇರುವ ಸ್ತ್ರಿಯನ್ನು ಬಂಜೆ ಎನ್ನುತ್ತಾರೆ.

# ಅನುವಾದ ಸಲಹೆಗಳು:

  • ಭೂಮಿಯನ್ನು ಸೂಚಿಸಲು “ಬಂಜೆ” ಎಂದು ಉಪಯೋಗಿಸಿದರೆ, ಅದು “ಸಾರವಿಲ್ಲ” ಅಥವಾ “ಫಲಕೊಡದ” ಅಥವಾ “ಗಿಡಗಳು ಇಲ್ಲದ ಸ್ಥಳ” ಎಂದು ಅನುವಾದ ಮಾಡಬಹುದು.
  • ಬಂಜೆಯಾಗಿರುವ ಸ್ತ್ರಿಯನ್ನು ಸೂಚಿಸಿದರೆ, ಅದನ್ನು “ಮಕ್ಕಳು ಇಲ್ಲದ” ಅಥವಾ “ಸಂತಾನ ಇಲ್ಲದ” ಅಥವಾ “ಗರ್ಭಿಣಿಯಾಗದೆ ಇರುವುದು” ಎಂದು ಅನುವಾದ ಮಾಡಬಹುದು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H4420, H6115, H6135, H6723, H7909, H7921, G692, G4723

ಬದ್ಧನಾಗು, ಬದ್ಧನಾಗುವಂತೆ ಮಾಡು, ಬದ್ಧನಾದೆ, ಪ್ರತಿಜ್ಞೆ ಮಾಡು, ಜವಾಬ್ದಾರಿ

# ಪದದ ಅರ್ಥವಿವರಣೆ:

“ಬದ್ಧನಾಗು” ಅಥವಾ “ಜವಾಬ್ದಾರಿ” ಎನ್ನುವ ಪದಗಳು ನಿರ್ಣಯ ತೆಗೆದುಕೊಳ್ಳುವುದನ್ನು ಅಥವಾ ಏನಾದರೊಂದನ್ನು ಮಾಡುವುದಕ್ಕೆ ಪ್ರತಿಜ್ಞೆ ಮಾಡುವುದನ್ನು ಸೂಚಿಸುತ್ತದೆ.

  • ಏನಾದರೊಂದನ್ನು ಮಾಡುವುದಕ್ಕೆ ಪ್ರತಿಜ್ಞೆಗಳನ್ನು ಮಾಡಿದ ಒಬ್ಬ ವ್ಯಕ್ತಿಯನ್ನು ಕೂಡ ಅದನ್ನು ಮಾಡುವುದಕ್ಕೆ “ಬದ್ಧನಾಗಿದ್ದಾನೆ” ಎಂದು ವಿವರಿಸುತ್ತದೆ.
  • ಒಬ್ಬರನ್ನು ಒಂದು ಕೆಲಸಕ್ಕೆ “ಬದ್ಧನಾಗುವಂತೆ” ಮಾಡು ಎನ್ನುವುದಕ್ಕೆ ಒಬ್ಬ ವ್ಯಕ್ತಿಗೆ ಆ ಕೆಲಸವನ್ನು ಒಪ್ಪಿಸು ಎಂದರ್ಥ. ಉದಾಹರಣೆಗೆ, ಜನರು ದೇವರೊಂದಿಗೆ ಸಮಾಧಾನ ಹೊಂದುವುದಕ್ಕೆ ಅವರಿಗೆ ಸಹಾಯ ಮಾಡುವ ಸೇವೆಯನ್ನು ದೇವರು ನಮಗೆ “ಒಪ್ಪಿಸಿಕೊಟ್ಟಿದ್ದಾರೆ” (ಅಥವಾ “ಕೊಟ್ಟಿದ್ದಾರೆ” ಎಂದು ಪೌಲನು 2 ಕೊರಿಂಥದಲ್ಲಿ ಹೇಳಿದ್ದಾರೆ.
  • “ಬದ್ಧನಾಗು” ಮತ್ತು “ಬದ್ಧನಾದೆ” ಎನ್ನುವ ಪದಗಳು ಕೂಡ ಒಂದು ನಿರ್ಧಿಷ್ಠವಾದ ತಪ್ಪು ಕ್ರಿಯೆ ಮಾಡುವುದನ್ನು ಸೂಚಿಸುತ್ತದೆ. ಉದಾಹರಣೆಗೆ, “ಮಾಪ ಮಾಡುವುದನ್ನು” ಅಥವಾ “ವ್ಯಭಿಚಾರ ಮಾಡುವುದನ್ನು” ಅಥವಾ “ನರಹತ್ಯೆ ಮಾಡುವುದನ್ನು” ಸೂಚಿಸುತ್ತದೆ.
  • “ಅವನು ಆ ಕೆಲಸಕ್ಕೆ ಬದ್ಧನಾಗುವಂತೆ ಮಾಡು” ಎನ್ನುವ ಮಾತನ್ನು “ಅವನಿಗೆ ಕೆಲಸವನ್ನು ಕೊಡು” ಅಥವಾ “ಆ ಕೆಲಸಕ್ಕೆ ಜವಾಬ್ದಾರಿಯನ್ನು ಕೊಡು” ಅಥವಾ “ಅವನಿಗೆ ಆ ಕೆಲಸವನ್ನು ಒಪ್ಪಿಸಿಕೊಡು” ಎಂದೂ ಅನುವಾದ ಮಾಡಬಹುದು.
  • “ಜವಾಬ್ದಾರಿ” ಎನ್ನುವ ಪದವನ್ನು “ಕೆಲಸ ಕೊಡಲ್ಪಟ್ಟಿದೆ” ಅಥವಾ “ಪ್ರತಿಜ್ಞೆ ಮಾಡಲ್ಪಟ್ಟಿದೆ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ವ್ಯಭಿಚಾರ, ನಂಬಿಗಸ್ಥ, ಪ್ರತಿಜ್ಞೆ, ಪಾಪ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H539, H817, H1361, H1497, H1500, H1540, H1556, H2181, H2388, H2398, H2399, H2403, H4560, H4603, H5003, H5753, H5766, H5771, H6213, H6466, H7683, H7760, H7847, G264, G2038, G2716, G3429, G3431, G3860, G3872, G3908, G4102, G4160, G4203

ಬಂಧಿಸು, ಬಂಧಿಸುವುದು, ಬಂಧಿಸಲಾಗಿದೆ, ಸ್ವಾಧೀನ

# ಪದದ ಅರ್ಥವಿವರಣೆ:

“ಬಂಧಿಸು” ಎನ್ನುವ ಪದಕ್ಕೆ ಬಲಾತ್ಕಾರದಿಂದ ಯಾವುದಾದರೊಂದನ್ನು ಅಥವಾ ಯಾರಾದರೊಬ್ಬರನ್ನು ಹಿಡಿದುಕೊಳ್ಳುವುದು ಅಥವಾ ತೆಗೆದುಕೊಳ್ಳುವುದು. ಯಾರಾದರೊಬ್ಬರ ಮೇಲೆ ನಿಯಂತ್ರಣ ಹೊಂದಿರುವುದು ಮತ್ತು ಅವರನ್ನು ಮೀರುವುದು ಎಂದರ್ಥವೂ ಬರುತ್ತದೆ.

  • ಒಂದು ಪಟ್ಟಣವು ಸೈನಿಕರ ಬಲತ್ಕಾರದಿಂದ ವಶಪಡಿಸಿಕೊಂಡಿದ್ದರೆ, ಸೈನಿಕರು ಜಯಿಸಿದ ಜನರ ಬೆಲೆಯುಳ್ಳ ಅಸ್ತಿಪಾಸ್ತಿಗಳನ್ನು ಬಂಧಿಸುತ್ತಾರೆ.
  • ಈ ಪದವನ್ನು ಅಲಂಕಾರಿಕವಾಗಿ ಉಪಯೋಗಿಸಿದಾಗ, ಒಬ್ಬ ವ್ಯಕ್ತಿ “ಭಯದಿಂದ ಬಂಧಿಸಲ್ಪಟ್ಟವನಾಗಿ” ವಿವರಿಸಲ್ಪಡುತ್ತಾನೆ. ಈ ಮಾತಿಗೆ ಆ ವ್ಯಕ್ತಿ ಆಕಸ್ಮಿಕವಾಗಿ “ಭಯದಿಂದ ಜಯಿಸಲ್ಪಟ್ಟಿರುತ್ತಾನೆ” ಎಂದರ್ಥವಾಗಿರುತ್ತದೆ. ಒಬ್ಬ ವ್ಯಕ್ತಿ “ಭಯದಿಂದ ಬಂಧಿಸಲ್ಪಟ್ಟಿದ್ದರೆ”, ಆ ವ್ಯಕ್ತಿ “ಆಕಸ್ಮಿಕವಾಗಿ ತುಂಬಾ ಹೆಚ್ಚಾಗಿ ಹೆದರಿಕೆ ಹೊಂದಿದ್ದಾನೆ” ಎಂದೂ ಹೇಳಲಾಗುತ್ತದೆ.
  • ಒಬ್ಬ ಸ್ತ್ರೀಯಳನ್ನು “ಬಂಧಿಸುವ” ಹೆರಿಗೆ ನೋವುಗಳ ಸಂದರ್ಭದಲ್ಲಿ, ನೋವುಗಳು ಆಕಸ್ಮಿಕವಾಗಿ ಬಂದಿವೆ ಮತ್ತು ಮೀರಿವೆ ಎನ್ನುವ ಅರ್ಥವನ್ನು ಕೊಡುತ್ತದೆ. ಆ ಸ್ತ್ರೀಯಳ ಮೇಲೆ ನೋವುಗಳು “ಮೀರಿ ಬಂದಿವೆ” ಅಥವಾ “ಇದ್ದಕ್ಕಿದ್ದಂತೆ ಆಕೆಗೆ ಬಂದಿವೆ” ಎಂದೂ ಹೇಳುವುದರ ಮೂಲಕ ಈ ಪದವನ್ನು ಅನುವಾದ ಮಾಡಬಹುದು.
  • ಈ ಪದವನ್ನು “ನಿಯಂತ್ರಿಸು” ಅಥವಾ “ಆಕಸ್ಮಿಕವಾಗಿ ಹೊಂದು” ಅಥವಾ “ಹಿಡಿ” ಎಂದೂ ಅನುವಾದ ಮಾಡಬಹುದು.
  • “ಆಕೆಯೊಂದಿಗೆ ಮಲಗಿದನು ಮತ್ತು ಬಂಧಿಸಲ್ಪಟ್ಟನು” ಎನ್ನುವ ಮಾತನ್ನು “ಆಕೆಯ ಮೇಲೆ ತನ್ನನ್ನು ತಾನು ಬಲವಂತಿಕೆ ಮಾಡಿಕೊಂಡನು” ಅಥವಾ “ಆಕೆಯನ್ನು ಭಂಗಪಡಿಸಿದನು” ಅಥವಾ “ಆಕೆಯನ್ನು ಮಾನಭಂಗ ಮಾಡಿದನು” ಎಂದೂ ಅನುವಾದ ಮಾಡಬಹುದು. ಈ ಉದ್ದೇಶದ ಅನುವಾದವು ಅಂಗೀಕರವಾಗಿರುವಂತೆ ನೋಡಿಕೊಳ್ಳಿರಿ.

(ನೋಡಿರಿ : ಸೌಮ್ಯೋಕ್ತಿಗಳು

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H270, H1497, H2388, H3027, H3920, H3947, H4672, H5377, H5860, H6031, H7760, H8610, G724, G1949, G2638, G2902, G2983, G4815, G4884

ಬರಗಾಲ, ಕ್ಷಾಮಗಳು

# ಪದದ ಅರ್ಥವಿವರಣೆ

“ಬರಗಾಲ” ಎನ್ನುವ ಪದವು ದೇಶದಲ್ಲಿ ಅಥವಾ ಒಂದು ಪ್ರಾಂತ್ಯದಲ್ಲಿ ಮಳೆಯಿಲ್ಲದ ಕಾರಣವಾಗಿ ಆಹಾರ ಸಿಕ್ಕದೆ ಇರುವ ಘೋರವಾದ ಕಾಲವನ್ನು ಸೂಚಿಸುತ್ತದೆ.

  • ಮಳೆಯಿಲ್ಲದೆ ಇರುವುದು, ಬೆಳೆಗೆ ರೋಗ ಅಥವಾ ಕೀಟಗಳು ಎಂಬತ ನೈಸರ್ಗಿಕ ವಿಪತ್ತುಗಳ ಕಾರಣವಾಗಿ ಆಹಾರ ಬೆಳೆ ನಾಶವಾಗುತ್ತವೆ.
  • ಶತ್ರುಗಳು ಬೆಳೆಯನ್ನು ನಾಶ ಮಾಡುವಂತಹ ಮಾನವ ಕಾರಣಗಳಿಂದ ಆಹಾರ ಕೊರತೆ ಬರಬಹುದು.
  • ಸತ್ಯವೇದದಲ್ಲಿ, ಆತನ ವಿರೋಧವಾಗಿ ಜನರು ಪಾಪ ಮಾಡಿದಾಗ ಅವರನ್ನು ಶಿಕ್ಷಿಸುವ ಪ್ರಕ್ರಿಯೆಯಲ್ಲಿ ಯೆಹೋವ ಬರಗಾಲ ದೇಶಗಳ ಮೇಲೆ ಕಳುಹಿಸುತ್ತಿದ್ದನು.
  • ಅಮೋಸ.8:11ನೇ ವಾಕ್ಯದಲ್ಲಿ ಯೆಹೋವ ತನ್ನ ಜನರೊಂದಿಗೆ ಮಾತನಾಡದೆ ಇರುವ ಕಾಲವನ್ನು ಸೂಚಿಸಲು “ಬರಗಾಲ” ಎನ್ನುವ ಪದವನ್ನು ಉಪಯೋಗಿಸಿದ್ದಾರೆ. ನಿಮ್ಮ ಭಾಷೆಯಲ್ಲಿ “ಬರಗಾಲ” ಎನ್ನುವ ಪದಕ್ಕೆ ತಕ್ಕ ಹಾಗೆ ಉಪಯೋಗಿಸಿ, ಅಥವಾ “ತೀವ್ರ ಕೊರತೆ” ಅಥವಾ “ತೀವ್ರ ಅಭಾವ” ಎಂದು ಅನುವಾದ ಮಾಡಬಹುದು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3720, H7458, H7459, G3042

ಬರೆದಿದೆ

# ಪದದ ಅರ್ಥವಿವರಣೆ:

“ಬರೆದಿದೆ” ಅಥವಾ “ಬರೆಯಲ್ಪಟ್ಟಿರುವುದು” ಎನ್ನುವ ಮಾತು ಹೊಸ ಒಡಂಬಡಿಕೆಯಲ್ಲಿ ಅನೇಕಸಲ ಕಂಡುಬರುತ್ತದೆ ಮತ್ತು ಈ ಮಾತು ಸಾಧಾರಣವಾಗಿ ಇಬ್ರಿ ಲೇಖನಗಳಲ್ಲಿ ಬರೆಯಲ್ಪಟ್ಟಿರುವ ಆಜ್ಞೆಗಳನ್ನು ಅಥವಾ ಪ್ರವಾದನೆಗಳನ್ನು ಸೂಚಿಸುತ್ತವೆ.

  • “ಬರೆಯಲ್ಪಟ್ಟಿರುವಂತೆ” ಎನ್ನುವ ಮಾತು ಕೆಲವೊಂದುಬಾರಿ ಮೋಶೆ ಧರ್ಮಶಾಸ್ತ್ರದಲ್ಲಿ ಬರೆಯಲ್ಪಟ್ಟಿರುವದನ್ನು ಸೂಚಿಸುತ್ತದೆ.
  • ಇನ್ನೂ ಕೆಲವೊಂದುಬಾರಿ ಹಳೇ ಒಡಂಬಡಿಕೆಯಲ್ಲಿ ಪ್ರವಾದಿಗಳು ಬರೆದಿರುವವುಗಳಲ್ಲಿ ಒಂದನ್ನು ತೆಗೆದುಕೊಂಡು ಬರೆಯುವ ಉಲ್ಲೇಖವಾಗಿರುತ್ತದೆ.
  • ಈ ಮಾತನ್ನು “ಮೋಶೆ ಧರ್ಮಶಾಸ್ತ್ರದಲ್ಲಿ ಬರೆಯಲ್ಪಟ್ಟಿರುವಂತೆ” ಅಥವಾ “ಬಹು ಹಿಂದಿನ ಕಾಲದಲ್ಲಿ ಪ್ರವಾದಿಗಳು ಬರೆದಿರುವಂತೆ” ಅಥವಾ “ಬಹು ಹಿಂದಿನ ಕಾಲದಲ್ಲಿ ಮೋಶೆ ಬರೆದಿರುವ ದೇವರ ಧರ್ಮಶಾಸ್ತ್ರದಲ್ಲಿ ಹೇಳಿರುವಂತೆಯೇ” ಎಂದು ಅನುವಾದ ಮಾಡಬಹುದು.
  • “ಬರೆದಿದೆ” ಎನ್ನುವ ಮಾತನ್ನು ಇಡುವುದಕ್ಕೆ ಬೇರೊಂದು ಮಾರ್ಗವೇನೆಂದರೆ, ಇದರ ಅರ್ಥವೇನೆಂಬುವದನ್ನು ಕೆಳಭಾಗದಲ್ಲಿ ಬರೆಯಿರಿ.

(ಈ ಪದಗಳನ್ನು ಸಹ ನೋಡಿರಿ : ಆಜ್ಞೆ, ಧರ್ಮಶಾಸ್ತ್ರ, ಪ್ರವಾದಿ, ದೇವರ ವಾಕ್ಯ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3789, H7559, G1125

ಬಲ, ಬಲಪಡಿಸು, ಬಲಪಡಿಸುತ್ತದೆ, ಬಲಪಡಿಸಲಾಗಿದೆ, ಬಲಪಡಿಸುವುದು

# ಸತ್ಯಾಂಶಗಳು:

“ಬಲ” ಎನ್ನುವ ಪದವು ಭೌತಿಕವಾದ, ಮಾನಸಿಕವಾದ ಅಥವಾ ಆತ್ಮೀಕವಾದ ಶಕ್ತಿಯನ್ನು ಸೂಚಿಸುತ್ತದೆ. ಯಾವುದಾದರೊಂದನ್ನು ಅಥವಾ ಒಬ್ಬರನ್ನು “ಬಲಪಡಿಸು’ ಎಂದರೆ ಆ ವ್ಯಕ್ತಿಯನ್ನು ಅಥವಾ ಆ ವಸ್ತುವನ್ನು ಬಲ ಹೊಂದುವಂತೆ ಮಾಡುವುದು ಎಂದರ್ಥ.

  • “ಬಲ” ಎನ್ನುವ ಪದವು ವಿರುದ್ಧವಾಗಿ ಬರುವ ಬಲ ಪ್ರಯೋಗವನ್ನು ತಡೆದಿರುವ ಶಕ್ತಿಯನ್ನು ಸೂಚಿಸುತ್ತದೆ.
  • ಒಬ್ಬ ವ್ಯಕ್ತಿ “ಇಚ್ಚೆಯ ಬಲ” ಹೊಂದಿಕೊಂಡಿದ್ದಾನೆಂದರೆ ಆ ವ್ಯಕ್ತಿ ಶೋಧನೆಗೆ ಗುರಿಯಾದಾಗ ಪಾಪ ಮಾಡದಂತೆ ಸಾಮರ್ಥ್ಯವನ್ನು ಹೊಂದಿಕೊಂಡಿರುತ್ತಾನೆ ಎಂದರ್ಥವಾಗಿರುತ್ತದೆ.
  • ಕೀರ್ತನೆಗಳನ್ನು ಬರೆದ ಒಬ್ಬ ಲೇಖಕರು ಯೆಹೋವನೇ ತನ್ನ “ಬಲ” ಎಂಬುದಾಗಿ ಹೇಳಿಕೊಂಡಿದ್ದಾರೆ, ಯಾಕಂದರೆ ದೇವರು ಆತನನ್ನು ಬಲವುಳ್ಳವನಾಗುವುದಕ್ಕೆ ಸಹಾಯ ಮಾಡಿದನು.
  • ಒಂದು ಗೋಡೆ ಅಥವಾ ಭವನದಂತಿರುವ ಭೌತಿಕ ನಿರ್ಮಾಣವು “ಬಲದಿಂದ” ಇರುತ್ತದೆ, ಜನರು ಕಟ್ಟಡವನ್ನು ಪುರನ್ ನಿರ್ಮಿಸಿಕೊಳ್ಳುವರು, ಇದನ್ನು ಇನ್ನೂ ಹೆಚ್ಚಾದ ಕಲ್ಲುಗಳಿಂದ ಅಥವಾ ಇಟ್ಟಿಗೆಗಳಿಂದ ತಿರುಗಿ ಇನ್ನೂ ಹೆಚ್ಚಾಗಿ ಬಲಪಡಿಸುವರು, ಇದರಿಂದ ಯಾವುದೇ ಧಾಳಿಯನ್ನು ಈ ಕಟ್ಟಡವು ತಡೆಯುತ್ತದೆ.

# ಅನುವಾದ ಸಲಹೆಗಳು:

  • ಸಾಧಾರಣವಾಗಿ “ಬಲಪಡಿಸು” ಎನ್ನುವ ಪದವನ್ನು “ಬಲವಾಗಿರುವುದಕ್ಕೆ ಕಾರಣವಾಗು” ಅಥವಾ “ಇನ್ನೂ ಹೆಚ್ಚಾಗಿ ಶಕ್ತಿಯುತವಾಗಿರಲು ಮಾಡು” ಎಂದೂ ಅನುವಾದ ಮಾಡಬಹುದು.

  • ಆತ್ಮೀಯಕವಾದ ಅರ್ಥದಲ್ಲಿ ಬರುವಾಗ, “ನಿಮ್ಮ ಸಹೋದರರನ್ನು ಬಲಪಡಿಸು” ಎನ್ನುವ ಮಾತನ್ನು “ನಿಮ್ಮ ಸಹೋದರರನ್ನು ಪ್ರೋತ್ಸಾಹಗೊಳಿಸು” ಅಥವಾ “ಸತತವಾಗಿ ನಿಷ್ಠನಾಗಿರುವುದಕ್ಕೆ ನಿಮ್ಮ ಸಹೋದರರಿಗೆ ಸಹಾಯ ಮಾಡು” ಎಂದೂ ಅನುವಾದ ಮಾಡಬಹುದು.

  • ಈ ಪದಗಳಿಗೆ ಈ ಕೆಳಗೆ ಕೊಟ್ಟಿರುವ ಉದಾಹರಣೆಗಳು ಅರ್ಥವನ್ನು ಮತ್ತು ಇದರಿಂದ ಉದ್ದವಾದ ಮಾತುಗಳಲ್ಲಿ ಅವುಗಳು ಒಳಪಟ್ಟಿರುವಾಗ, ಅವುಗಳನ್ನು ಹೇಗೆ ಅನುವಾದ ಮಾಡಬಹುದು ಎನ್ನುವುದನ್ನು ತೋರಿಸುತ್ತವೆ,

  • “ನಡುಕಟ್ಟಿನಂತೆ ನನ್ನ ಮೇಲೆ ಬಲವನ್ನು ಇಡಲಾಗಿದೆ” ಎನ್ನುವ ಮಾತಿಗೆ “ನನ್ನ ನಡುವನ್ನು ಸುತ್ತುವರಿದಿರುವ ನಡುಕಟ್ಟಿನಂತೆಯೇ, ಸಂಪೂರ್ಣ ಬಲವನ್ನು ಹೊಂದಿಕೊಳ್ಳುವುದಕ್ಕೆ ನನಗೆ ಕಾರಣವಾಗಿದೆ” ಎಂದರ್ಥವಾಗಿರುತ್ತದೆ.

  • “ಶಾಂತತೆ ಮತ್ತು ನಂಬಿಕೆಯಲ್ಲಿಯೇ ನಿನ್ನ ಬಲವಿದೆ” ಎನ್ನುವ ಮಾತಿಗೆ “ಮೌನವಾಗಿ ನಡೆದುಕೊಳ್ಳುತ್ತಾ, ದೇವರಲ್ಲಿ ಭರವಸೆ ಇಡುವುದು ನಿನ್ನನ್ನು ಆತ್ಮೀಯಕವಾಗಿ ಬಳಗೊಲಿಸುತ್ತದೆ” ಎಂದರ್ಥವಾಗಿರುತ್ತದೆ.

  • “ಅವರ ಬಲವನ್ನು ಪುನರುಜ್ಜೀವನಗೊಳಿಸುತ್ತದೆ” ಎನ್ನುವ ಮಾತಿಗೆ “ಮತ್ತೊಮ್ಮೆ ಇನ್ನೂ ಹೆಚ್ಚಾದ ಬಲವನ್ನು ಹೊಂದಿಕೊಳ್ಳುತ್ತದೆ” ಎಂದರ್ಥವಾಗಿರುತ್ತದೆ.

  • “ನನ್ನ ಬಲದಿಂದ ಮತ್ತು ನನ್ನ ಜ್ಞಾನದಿಂದ ನಾನು ನಡೆದುಕೊಂಡಿದ್ದೇನೆ” ಎನ್ನುವ ಮಾತಿಗೆ “ನಾನು ಹೆಚ್ಚಿನ ಬಲವನ್ನು ಮತ್ತು ಜ್ಞಾನವನ್ನು ಹೊಂದಿಕೊಂಡಿರುವುದರಿಂದ ನಾನು ಈ ಎಲ್ಲಾ ಕಾರ್ಯಗಳನ್ನು ಮಾಡಿದ್ದೇನೆ” ಎಂದರ್ಥವಾಗಿರುತ್ತದೆ.

  • “ಗೋಡೆಯನ್ನು ಬಲಗೊಳಿಸು” ಎನ್ನುವ ಮಾತಿಗೆ “ಗೋಡೆಯನ್ನು ಪುನರ್ ಬಲಗೊಳಿಸುವುದು” ಅಥವಾ “ಗೋಡೆಯನ್ನು ತಿರುಗಿ ಕಟ್ಟುವುದು” ಎಂದರ್ಥವಾಗಿರುತ್ತದೆ.

  • “ನಾನು ನಿನ್ನನ್ನು ಬಲಪಡಿಸುತ್ತೇನೆ” ಎನ್ನುವ ಮಾತಿಗೆ “ನೀನು ಬಲವಾಗಿರುವಂತೆ ನಾನು ಮಾಡುವೆನು” ಎಂದರ್ಥವಾಗಿರುತ್ತದೆ.

  • “ಯೆಹೋವನಲ್ಲಿಯೇ ರಕ್ಷಣೆಯು ಮತ್ತು ಬಲವು ಇದೆ” ಎನ್ನುವ ಮಾತಿಗೆ “ಯೆಹೋವನು ಮಾತ್ರವೇ ನಮ್ಮನ್ನು ರಕ್ಷಿಸುವನು ಮತ್ತು ನಮ್ಮನ್ನು ಬಲಪಡಿಸುವನು” ಎಂದರ್ಥವಾಗಿರುತ್ತದೆ.

  • “ನಿನ್ನ ಬಲದ ಬಂಡೆ” ಎನ್ನುವ ಮಾತಿಗೆ “ನಿನ್ನನ್ನು ಬಲಪಡಿಸುವ ನಂಬಿಗಸ್ತನಾಗಿರುವ ವ್ಯಕ್ತಿ” ಎಂದರ್ಥವಾಗಿರುತ್ತದೆ.

  • “ರಕ್ಷಿಸುವ ತನ್ನ ಬಲಗೈ ಬಳದಿಂದ” ಎನ್ನುವ ಮಾತಿಗೆ “ಯಾರಾದರೊಬ್ಬರು ತನ್ನ ಕೈಯಿಂದ ನಿನ್ನ ಕೈಯನ್ನು ಗಟ್ಟಿಯಾಗಿ ಅಥವಾ ಸುರಕ್ಷಿತವಾಗಿ ಹಿಡಿದುಕೊಳ್ಳುವ ರೀತಿಯಲ್ಲಿಯೇ ಸಮಸ್ಯೆಯಿಂದ ಆತನು ನಿನ್ನನ್ನು ರಕ್ಷಿಸುವವನಾಗಿದ್ದಾನೆ” ಎಂದರ್ಥವಾಗಿರುತ್ತದೆ.

  • “ಸ್ವಲ್ಪ ಬಲ” ಎನ್ನುವ ಮಾತಿಗೆ “ಹೆಚ್ಚಿನ ಬಲವಿಲ್ಲದಿರುವುದು” ಅಥವಾ ‘ಬಲಹೀನ” ಎಂದರ್ಥವಾಗಿರುತ್ತದೆ.

  • “ನನ್ನ ಪೂರ್ಣ ಬಲದಿಂದ” ಎನ್ನುವ ಮಾತಿಗೆ “ನನ್ನ ಎಲ್ಲಾ ಪ್ರಯತ್ನಗಳನ್ನು ಉಪಯೋಗಿಸುವುದು” ಅಥವಾ “ಬಲವಾಗಿ ಮತ್ತು ಸಂಪೂರ್ಣವಾಗಿ” ಎಂದರ್ಥವಾಗಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ನಂಬಿಗಸ್ತ, ಸಾಧಿಸು, ಬಲಗೈ, ರಕ್ಷಿಸು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H193, H202, H353, H360, H386, H410, H553, H556, H905, H1082, H1369, H1396, H1679, H2220, H2388, H2391, H2392, H2393, H2428, H2633, H3027, H3028, H3559, H3581, H3811, H3955, H4206, H4581, H5326, H5331, H5332, H5582, H5797, H5807, H5810, H5934, H5975, H6106, H6109, H6697, H6965, H7292, H7293, H7296, H7307, H8003, H8443, H8510, H8632, H8633, G461, G772, G950, G1411, G1412, G1743, G1765, G1840, G1849, G1991, G2479, G2480, G2901, G2904, G3619, G3756, G4599, G4732, G4733, G4741

ಬಲವಾದ ಪಾನೀಯ, ಬಲವಾದ ಪಾನೀಯಗಳು

# ಪದದ ಅರ್ಥವಿವರಣೆ:

“ಬಲವಾದ ಪಾನೀಯ” ಎನ್ನುವ ಮಾತು ಹುದುಗಿಸಿದ ಪಾನೀಯಗಳನ್ನು ಮತ್ತು ಅವುಗಳಲ್ಲಿ ಮದ್ಯಪಾನವನ್ನು ಹೊಂದಿರುವ ಪಾನೀಯಗಳನ್ನು ಸೂಚಿಸುತ್ತದೆ.

  • ಮದ್ಯಪಾನೀಯಗಳನ್ನು ಧಾನ್ಯಗಳಿಂದಾಗಲಿ ಅಥವಾ ಹಣ್ಣುಗಳಿಂದಾಗಲಿ ತಯಾರು ಮಾಡುತ್ತಾರೆ ಮತ್ತು ಅವುಗಳನ್ನು ಹುದುಗಿಸುತ್ತಾರೆ.
  • “ಬಲವಾದ ಪಾನೀಯ” ಅನೇಕ ವಿಧಗಳಲ್ಲಿ ದ್ರಾಕ್ಷಾರಸ, ತಾಳೆಮರ ರಸ, ಬೀರ್ ಮತ್ತು ಸೇಬಿನ ರಸಗಳು ಇರುತ್ತವೆ. ಸತ್ಯವೇದದಲ್ಲಿ ದ್ರಾಕ್ಷಾರಸವು ಅನೇಕಬಾರಿ ದಾಖಲಿಸಿದ ಬಲವಾದ ಪಾನೀಯವಾಗಿರುತ್ತದೆ.
  • “ನಾಜಿರು ಪ್ರತಿಜ್ಞೆ” ಎನ್ನುವಂತಹ ಒಂದು ವಿಶೇಷವಾದ ಪ್ರತಿಜ್ಞೆಯನ್ನು ತೆಗೆದುಕೊಂಡಿರುವ ಯಾಜಕರು ಮತ್ತು ಯಾರೇಯಾಗಲಿ ಹುದುಗಿಸಿದ ಪಾನೀಯಗಳನ್ನು ಕುಡಿಯುವುದಕ್ಕೆ ಅನುಮತಿ ಹೊಂದಿರುವುದಿಲ್ಲ.
  • ಈ ಪದವನ್ನು “ಹುದುಗಿಸಿದ ಪಾನೀಯ” ಅಥವಾ “ಮದ್ಯಪಾನೀಯ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ದ್ರಾಕ್ಷಿ, ನಾಜಿರು, ಆಣೆ, ದ್ರಾಕ್ಷಾರಸ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H5435, H7941, G4608

ಬಲಿಯಾಗುವುದು, ಬಲಿಯಾಗುತ್ತಿರುವುದು

# ಪದದ ಅರ್ಥವಿವರಣೆ:

“ಬಲಿಯಾಗುವುದು” ಎನ್ನುವ ಪದವು ಯಾವುದಾದರೊಂದನ್ನು ಬೇಟೆಯಾಡುವುದನ್ನು ಸೂಚಿಸುತ್ತದೆ, ಸಾಧಾರಣವಾಗಿ ಆಹಾರಕ್ಕಾಗಿ ಉಪಯೋಗಿಸುವ ಪ್ರಾಣಿಯನ್ನು ಸೂಚಿಸುತ್ತದೆ.

  • ಅಲಂಕಾರಿಕ ಭಾವನೆಯಲ್ಲಿ “ಬಲಿಯಾಗುವುದು” ಎನ್ನುವ ಪದವು ಒಬ್ಬ ವ್ಯಕ್ತಿಯನ್ನು ಪ್ರಯೋಜನಕರವಾಗಿ ಉಪಯೋಗಿಸಿಕೊಳ್ಳುವುದನ್ನು, ದುರುಪಯೋಗ ಮಾಡುವುದನ್ನು ಸೂಚಿಸುತ್ತದೆ, ಅಥವಾ ಅತೀ ಶಕ್ತಿಯುಳ್ಳ ವ್ಯಕ್ತಿಯಿಂದ ಒತ್ತಡಕ್ಕೆ ಗುರಿಯಾಗುವುದನ್ನು ಸೂಚಿಸುತ್ತದೆ.
  • ಜನರು “ಬಲಿಯಾಗುತ್ತಿರುವುದು” ಎನ್ನುವ ಮಾತಿಗೆ ಅವರಿಂದ ಯಾವುದಾದರೊಂದನ್ನು ಕದಿಯುವುದು ಅಥವಾ ಅವರನ್ನು ಒತ್ತಡಕ್ಕೆ ಗುರಿಮಾಡುವುದರಿಂದ ಅವರನ್ನು ದುರುಪಯೋಗ ಮಾಡುವುದು ಎಂದರ್ಥವಾಗಿರುತ್ತದೆ.
  • “ಬಲಿಯಾಗುವುದು” ಎನ್ನುವ ಪದವನ್ನು “ಬೇಟೆ ಮಾಡಿದ ಪ್ರಾಣಿ” ಅಥವಾ “ಬೇಟೆಗೆ ಗುರಿಯಾದ ಪ್ರಾಣಿ” ಅಥವಾ “ಬಲಿಪಶು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಒತ್ತಡ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H400, H957, H961, H962, H2863, H2963, H2964, H4455, H5706, H5861, H7997, H7998

ಬಹಿಷ್ಕಾರ, ಬಹಿಷ್ಕರಿಸುವುದು, ಬಹಿಷ್ಕರಿಸಲ್ಪಡುವುದು

# ಪದದ ಅರ್ಥವಿವರಣೆ

“ಬಹಿಷ್ಕಾರ” ಎನ್ನುವ ಪದಕ್ಕೆ ಬೇರ್ಪಡಿಸು, ತೊಲಗಿಸು ಅಥವಾ ಮುಖ್ಯ ಗುಂಪಿನಿಂದ ಒಂಟಿಯಾಗಿ ತೆಗೆದುಹಾಕುವುದು ಎಂದರ್ಥ. ಅದು ಪಾಪದ ಶಿಕ್ಷೆಯಾಗಿ ಪರಿಶುದ್ಧವಾದ ತೀರ್ಪಿನಲ್ಲಿ ಕೊಳ್ಳುವ ಕ್ರಿಯೆಯನ್ನು ಸಹ ಸೂಚಿಸುತ್ತದೆ.

  • ಹಳೆ ಒಡಂಬಡಿಕೆಯ ಕಾಲದಲ್ಲಿ, ದೇವರ ಆಜ್ಞೆಗಳಿಗೆ ಅವಿಧೇಯರಾಗಿರುವ ಜನರನ್ನು ದೇವರ ಪ್ರಜೆಗಳಿಂದ ಮತ್ತು ಆತನ ಸನ್ನಿಧಾನದಿಂದ ತೊಲಗಿಸುತ್ತಿದ್ದರು ಅಥವಾ ಬೇರ್ಪಡಿಸುತ್ತಿದ್ದರು.
  • ದೇವರನ್ನು ಆರಾಧಿಸದೆ ಅಥವಾ ಆತನಿಗೆ ಅವಿಧೇಯರಾಗಿದ್ದ ಕಾರಣ ಮತ್ತು ಅವರು ಇಸ್ರಾಯೇಲರಿಗೆ ಶತ್ರುಗಳಾದ ಕಾರಣ, ದೇವರು ಇಸ್ರಾಯೇಲ್ ಅಲ್ಲದ ದೇಶಗಳನ್ನು “ಬಹಿಷ್ಕಾರುಸುತ್ತೇನೆ” ಎಂದು ಹೇಳಿದನು.
  • “ಬಹಿಷ್ಕಾರ” ಎನ್ನುವ ಪದವು ದೇವರು ಒಂದು ನದಿಯ ಪ್ರವಾಹವನ್ನು ನಿಲ್ಲಿಸಿದಕ್ಕೆ ಸಹ ಸೂಚಿಸುತ್ತಿದೆ.

# ಅನುವಾದ ಸಲಹೆಗಳು:

  • “ಬಹಿಷ್ಕಾರಿಸುವುದು” ಎನ್ನುವ ಪದವನ್ನು “ತೊಲಗಿಸಲ್ಪಡು” ಅಥವಾ “ದೂರವಾಗಿ ಕಳುಹಿಸುವುದು” ಅಥವಾ “ಬೇರ್ಪಡಿಸು” ಅಥವಾ “ನಾಶ ಮಾಡುವುದು” ಎಂದು ಅನುವಾದ ಮಾಡಬಹುದು.
  • ಸಂಧರ್ಭಾನುಸಾರವಾಗಿ, “ಬಹಿಷ್ಕಾರ” ಎನ್ನುವ ಪದವನ್ನು “ನಾಶಮಾಡಿ” ಅಥವಾ “ಕಳುಹಿಸು” ಅಥವಾ “ಬೇರ್ಪಡಿಸು” ಅಥವಾ “ನಾಶ ಮಾಡು” ಎಂದು ಅನುವಾದ ಮಾಡಬಹುದು.
  • ಹರಿಯುವ ನೀರನ್ನು ನಿಲ್ಲಿಸಿದ ಸಂಧರ್ಭದಲ್ಲಿ ಇದನ್ನು “ನಿಲ್ಲಿಸಿವುದು” ಅಥವಾ “ಹರಿಯುವದನ್ನು ನಿಲ್ಲಿಸುವುದು” ಅಥವಾ “ವಿಭಾಜಿಸಲ್ಪಡುವುದು” ಎಂದು ಅನುವಾದ ಮಾಡಬಹುದು.
  • ಈ ಪದವನ್ನು ಚಾಕುವಿನಿಂದ ಏನಾದರು ಕತ್ತರಿಸುವುದು ಎನ್ನುವ ಅಕ್ಷರಾರ್ಥವನ್ನು ಮತ್ತು ಈ ಪದದ ಅಲಂಕಾರಿಕ ರೂಪವನ್ನು ವಿಭೇದಿಸುವ ಹಾಗೆ ನೋಡಿಕೊಳ್ಳಬೇಕು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1214, H1219, H1438, H1468, H1494, H1504, H1629, H1820, H1824, H1826, H2498, H2686, H3582, H3772, H5243, H5352, H6202, H6789, H6990, H7082, H7088, H7096, H7112, H7113, G609, G851, G1581, G2407, G5257

ಬಹುಮಾನ, ಬಹುಮಾನಗಳು, ಬಹುಮಾನ ಕೊಡಲಾಗಿದೆ, ಬಹುಮಾನ ಕೊಡುವುದು, ಬಹುಮಾನ ಕೊಡುವವನು

# ಪದದ ಅರ್ಥವಿವರಣೆ:

“ಬಹುಮಾನ” ಎನ್ನುವ ಪದವು ಒಬ್ಬ ವ್ಯಕ್ತಿ ಮಾಡಿದ ಕೆಟ್ಟ ಕಾರ್ಯಕ್ಕಾಗಲಿ ಅಥವಾ ಒಳ್ಳೇಯ ಕಾರ್ಯಕ್ಕಾಗಲಿ ಪಡೆದುಕೊಳ್ಳುವ ಯಾವುದನ್ನಾಗಲಿ ಸೂಚಿಸುತ್ತವೆ. ಒಬ್ಬರಿಗೆ “ಬಹುಮಾನ” ಕೊಡುವುದು ಎಂದರೆ ಆ ವ್ಯಕ್ತಿಗೆ ಅರ್ಹವಾಗಿರುವ ಯಾವುದಾದರೊಂದನ್ನು ಕೊಡುವುದು ಎಂದರ್ಥ.

  • ಒಬ್ಬ ವ್ಯಕ್ತಿ ಪಡೆದುಕೊಳ್ಳುವ ಬಹುಮಾನವು ಒಳ್ಳೇಯದಾಗಿರುತ್ತದೆ ಅಥವಾ ಸಕಾರಾತ್ಮಕವಾದ ವಿಷಯವಾಗಿರುತ್ತದೆ, ಯಾಕಂದರೆ ಆ ವ್ಯಕ್ತಿ ಒಳ್ಳೇಯದನ್ನು ಮಾಡಿರುತ್ತಾನೆ ಅಥವಾ ಆ ವ್ಯಕ್ತಿ ದೇವರಿಗೆ ವಿಧೇಯನಾಗಿರುತ್ತಾನೆ.
  • ಕೆಲವೊಂದುಬಾರಿ ಬಹುಮಾನವು ಕೆಟ್ಟ ನಡತೆಯ ಕಾರಣದಿಂದ ಅದಕ್ಕೆ ತಕ್ಕ ಫಲವಾಗಿ ನಕಾರಾತ್ಮಕವಾದ ವಿಷಯಗಳನ್ನೂ ಸೂಚಿಸುತ್ತದೆ, ಉದಾಹರಣೆಗೆ “ದುಷ್ಟತ್ವದ ಬಹುಮಾನ” ಎನ್ನುವ ಮಾತಿನಂತೆ ಕೊಡಲಾಗುತ್ತದೆ. ಈ ಸಂದರ್ಭದಲ್ಲಿ “ಬಹುಮಾನ” ಎನ್ನುವ ಪದವು ಜನರ ಪಾಪ ಸ್ವಭಾವದ ಕ್ರಿಯೆಗಳ ಕಾರಣದಿಂದ ಅವರು ಪಡೆದುಕೊಳ್ಳುವ ನಕಾರಾತ್ಮಕವಾದ ಪರಿಣಾಮಗಳನ್ನು ಅಥವಾ ಶಿಕ್ಷೆಯನ್ನು ಸೂಚಿಸುತ್ತದೆ.

# ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ, “ಬಹುಮಾನ” ಎನ್ನುವ ಪದವನ್ನು “ಪಾವತಿಸು” ಅಥವಾ “ಅರ್ಹತೆ ಹೊಂದಿರುವ ಯಾವುದೇ ಒಂದು” ಅಥವಾ “ಶಿಕ್ಷೆ” ಎಂದೂ ಅನುವಾದ ಮಾಡಬಹುದು.
  • ಯಾರಾದರೊಬ್ಬರಿಗೆ “ಬಹುಮಾನ” ಕೊಡುವುದು” ಎನ್ನುವ ಮಾತನ್ನು “ತಿರುಗಿ ಪಾವತಿಸು” ಅಥವಾ “ಶಿಕ್ಷಿಸು” ಅಥವಾ “ಅರ್ಹತೆ ಇರುವುದನ್ನು ಕೊಡುವುದು” ಎಂದೂ ಅನುವಾದ ಮಾಡಬಹುದು.
  • ಈ ಪದಕ್ಕೆ ಮಾಡುವ ಅನುವಾದ ಪದವು ಪ್ರತಿದಿನ ಸಂಪಾದಿಸಿಕೊಳ್ಳುವ ಕೂಲಿಯನ್ನು ಸೂಚಿಸದಂತೆ ನೋಡಿಕೊಳ್ಳಿರಿ. ಬಹುಮಾನ ಎನ್ನುವುದು ಉದ್ಯೋಗದಲ್ಲಿ ಭಾಗವಾಗಿ ಸಂಪಾದನೆ ಮಾಡುವ ಹಣವಲ್ಲವೆಂದು ವಿಶೇಷವಾಗಿ ತಿಳಿದುಕೊಳ್ಳಿರಿ.

(ಈ ಪದಗಳನ್ನು ಸಹ ನೋಡಿರಿ : ಶಿಕ್ಷಿಸು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H319, H866, H868, H1576, H1578, H1580, H4864, H4909, H4991, H5023, H6118, H6468, H6529, H7809, H7810, H7936, H7938, H7939, H7966, H7999, H8011, H8021, G469, G514, G591, G2603, G3405, G3406, G3408

ಬಳ್ಳಿ, ಬಳ್ಳಿಗಳು

# ಪದದ ಅರ್ಥವಿವರಣೆ:

“ದ್ರಾಕ್ಷಬಳ್ಳಿ” ಎನ್ನುವ ಪದವು ನೆಲದ ಮೇಲೆ ಜಾಡುಗಳನ್ನು ಹಾಕುವುದರ ಮೂಲಕ ಬೆಳೆಯುವ ಮರವನ್ನು ಸೂಚಿಸುತ್ತದೆ ಅಥವಾ ಮರಗಳನ್ನು ಮೇಲಕ್ಕೆ ಏರಿಸುವುದರ ಮೂಲಕ ಮತ್ತು ಇತರ ಪದ್ಧತಿಗಳ ಮೂಲಕ ಬೆಳೆಯುವ ತೋಟವನ್ನು ಸೂಚಿಸುತ್ತದೆ. ಸತ್ಯವೇದದಲ್ಲಿ “ದ್ರಾಕ್ಷಬಳ್ಳಿ” ಎನ್ನುವ ಪದವು ಫಲಗಳನ್ನು ಕೊಡುವ ದ್ರಾಕ್ಷಿ ಗಿಡಗಳನ್ನು ಮತ್ತು ದ್ರಾಕ್ಷಿ ಬಳ್ಳಿಗಳನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ.

  • ಸತ್ಯವೇದದಲ್ಲಿ “ಬಳ್ಳಿ” ಎನ್ನುವ ಪದವು ಅತೀ ಹೆಚ್ಚಾಗಿ ಯಾವಾಗಲೂ “ದ್ರಾಕ್ಷಿಬಳ್ಳಿ” ಎಂದರ್ಥದಲ್ಲಿಯೇ ಉಪಯೋಗಿಸಲ್ಪಟ್ಟಿರುತ್ತದೆ.
  • ದ್ರಾಕ್ಷಿಬಳ್ಳಿಯ ಕೊಂಬೆಗಳು ಮುಖ್ಯ ಕಾಂಡಕ್ಕೆ ಅಂಟಿಕೊಂಡಿರುತ್ತವೆ, ಯಾಕಂದರೆ ಆ ಕಾಂಡದಿಂದಲೇ ನೀರು ಮತ್ತು ಇತರ ಪೋಷಕಗಳು ಬಳ್ಳಿಗಳಿಗೆ ಹೋಗುತ್ತಿರುತ್ತವೆ, ಇದರಿಂದ ಅವು ಬೆಳೆಯುತ್ತವೆ.
  • ಯೇಸು ತನ್ನ ಕುರಿತು “ದ್ರಾಕ್ಷಿಬಳ್ಳಿ” ಎಂದು ಮತ್ತು ತನ್ನ ಜನರ ಕುರಿತಾಗಿ “ಕೊಂಬೆಗಳು” ಎಂದು ಹೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ “ಬಳ್ಳಿ” ಎನ್ನುವ ಪದವನ್ನು “ದ್ರಾಕ್ಷಿಬಳ್ಳಿ ಕಾಂಡ” ಅಥವಾ “ದ್ರಾಕ್ಷಿ ಗಿಡದ ಕಾಂಡ” ಎಂದೂ ಅನುವಾದ ಮಾಡಬಹುದು. (ನೋಡಿರಿ: ರೂಪಕಾಲಂಕಾರ

(ಈ ಪದಗಳನ್ನು ಸಹ ನೋಡಿರಿ : ದ್ರಾಕ್ಷಿ, ದ್ರಾಕ್ಷಿತೋಟ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H5139, H1612, H8321, G288, G290, G1009, G1092

ಬಾಗಿಲಿನ ನಿಲುವು ಪಟ್ಟಿಗಳು

# ಪದದ ಅರ್ಥವಿವರಣೆ:

“ಬಾಗಿಲಿನ ನಿಲುವು ಪಟ್ಟಿಗಳು” ಎನ್ನುವುದು ಬಾಗಿಲಿಗೆ ಎರುಡು ಕಡೆಗೆ ಲಂಬವಾಗಿ ನಿಲ್ಲಿಸಿರುವ ಸ್ತಂಭಗಳು, ಇವು ಬಾಗಿಲಿನ ಚೌಕಟ್ಟು ಮೇಲ್ಭಾಗವನ್ನು ಬೆಂಬಲವಾಗಿರುತ್ತವೆ.

  • ದೇವರು ಇಸ್ರಾಯೇಲ್ಯರಿಗೆ ಐಗುಪ್ತ ದೇಶದಿಂದ ತಪ್ಪಿಸುವುದಕ್ಕೆ ಸಹಾಯ ಮಾಡುವುದಕ್ಕೆ ಮುಂಚಿತವಾಗಿ, ಒಂದು ಕುರಿಯನ್ನು ಬಲಿ ಕೊಟ್ಟು, ಅದರ ರಕ್ತವನ್ನು ಬಾಗಿಲಿನ ನಿಲುವು ಪಟ್ಟಿಗಳ ಮೇಲೆ ಹಚ್ಚಬೇಕು ಎಂದು ಆತನು ಆಜ್ಞಾಪಿಸಿದ್ದನು.
  • ಹಳೇ ಒಡಂಬಡಿಕೆಯಲ್ಲಿ ತನ್ನ ಜೀವಮಾನವೆಲ್ಲಾ ತನ್ನ ಯಜಮಾನನಿಗೆ ಸೇವೆ ಮಾಡಲು ಇಷ್ಟಪಟ್ಟ ಒಬ್ಬ ದಾಸನು ತನ್ನ ಯಜಮಾನನ ಮನೆಯ ಬಾಗಿಲಿನ ನಿಲುವು ಪಟ್ಟಿಗಳ ಮೇಲೆ ತನ್ನ ಕಿವಿಯನ್ನು ದಬ್ಬಲದಿಂದ ಚುಚ್ಚಿ ಕಡಕ್ಕೆ ಸಿಕ್ಕಿಸಬೇಕಾಗಿತ್ತು.
  • ಇದನ್ನು “ಬಾಗಿಲಿಗೆ ಎರಡು ಕಡೆ ಇರುವ ಕಟ್ಟಿಗೆ ಸ್ತಂಭಗಳು” ಅಥವಾ “ಎರಡು ಕಡೆ ಇರುವ ಚೌಕಟ್ಟಿನ ಸ್ತಂಭಗಳು” ಅಥವಾ “ಬಾಗಿಲಿಗೆ ಎರಡು ಕಡೆಗೆ ಇರುವ ನಿಲುವು ಪಟ್ಟಿಗಳು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಐಗುಪ್ತ, ಪಸ್ಕ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H352, H4201

ಬಾಗಿಲು, ಬಾಗಿಲುಗಳು, ಬಾಗಿಲು ಪ್ರತಿಬಂಧಗಳು, ದ್ವಾರಪಾಲಕ, ದ್ವಾರಪಾಲಕರು, ಬಾಗಿಲು ಕಂಬಗಳು, ಮಹಾದ್ವಾರ, ಮಹಾದ್ವಾರಗಳು

# ಪದದ ಅರ್ಥವಿವರಣೆ:

“ಬಾಗಿಲು (ಅಥವಾ ಆಂಗ್ಲದಲ್ಲಿ ಗೇಟ್)” ಎನ್ನುವುದು ಒಂದು ಮನೆಯ ಅಥವಾ ಪಟ್ಟಣದ ಸುತ್ತಲು ಗೋಡೆಗಳಿದ್ದು ಅಥವಾ ಬೇಲಿಗಳಿದ್ದು ಕೇವಲ ಒಂದು ಸ್ಥಳದಲ್ಲಿ ಮಾತ್ರ ಒಳಗೆ ಪ್ರವೇಶಿಸಲು ಇಟ್ಟುಕೊಳ್ಳುವ ಕೀಲುಗಳುಳ್ಳ ತಡೆಗೋಡೆಯನ್ನು ಸೂಚಿಸುತ್ತದೆ. “ಬಾಗಿಲು ಪ್ರತಿಬಂಧ” ಎನ್ನುವುದು ಬಾಗಿಲನ್ನು ಹಾಕುವುದಕ್ಕೆ ಉಪಯೋಗಿಸುವ ಮರದದಿಂದ ಮಾಡಿದ ಅಥವಾ ಲೋಹದಿಂದ ಮಾಡಿದ ಅಡ್ಡಮರವನ್ನು ಸೂಚಿಸುತ್ತದೆ.

  • ಪಟ್ಟಣದ ಬಾಗಿಲು ಜನರನ್ನು, ಪ್ರಾಣಿಗಳನ್ನು ಮತ್ತು ಬೇರೆ ಪಟ್ಟಣದಿಂದ ಬಂದಿರುವ ಸರಕುಗಳನ್ನು ತೆಗೆದುಕೊಳ್ಳಲು ಅಥವಾ ಈ ಪಟ್ಟಣದಿಂದ ಬೇರೊಂದು ಪಟ್ಟಣಕ್ಕೆ ಕಳುಹಿಸುವ ಸರಕುಗಳನ್ನು ತೆಗೆದುಕೊಂಡು ಹೋಗಲು ಅನುಮತಿಸುವುದಕ್ಕೆ ತೆರೆಯುತ್ತಿರಬಹುದು.
  • ಪಟ್ಟಣವನ್ನು ಕಾಪಾಡುವುದಕ್ಕೆ ಪಟ್ಟಣದ ಗೋಡೆಗಳು ಮತ್ತು ಬಾಗಿಲುಗಳು ದಪ್ಪವಾಗಿಯೂ ಮತ್ತು ಅತ್ಯಂತ ಬಲವಾಗಿಯು ಇರುತ್ತಿದ್ದವು. ಪಟ್ಟಣದೊಳಗೆ ಯಾವ ಶತ್ರುವಿನ ಸೈನಿಕರು ಪ್ರವೇಶಿಸದ ಹಾಗೆ ಬಾಗಿಲುಗಳನ್ನು ಮುಚ್ಚುತ್ತಿದ್ದರು ಮತ್ತು ಅವುಗಳನ್ನು ಮರದ ಕಟ್ಟಿಗೆಯಿಂದ ಅಥವಾ ಲೋಹದಿಂದ ಮಾಡಿರುವ ದೊಡ್ಡ ಅಡ್ಡಿಮರವನ್ನು ಇಡುತ್ತಿದ್ದರು.
  • ಪಟ್ಟಣದ ಬಾಗಿಲು ಅನೇಕಬಾರಿ ಗ್ರಾಮದ ಸಾಮಾಜಿಕ ಕೇಂದ್ರವು ಮತ್ತು ವಾರ್ತೆಗಳಿಗೂ ಕೇಂದ್ರವಾಗಿರುತ್ತಿತ್ತು. ಇದು ವಾಣಿಜ್ಯ ವ್ಯಾಪಾರಗಳು ನಡೆಯುವ ಸ್ಥಳವೂ ಮತ್ತು ತೀರ್ಪುಗಳು ಮಾಡುವ ಸ್ಥಳವೂ ಆಗಿಯೂ ಇದ್ದಿತ್ತು. ಯಾಕಂದರೆ ಪಟ್ಟಣದ ಗೋಡೆಗಳು ತುಂಬಾ ದಪ್ಪವಾಗಿದ್ದವು, ಸೂರ್ಯನಿಂದ ಬರುವ ಬಿಸಿ ಪಟ್ಟಣದೊಳಗೆ ಬೀಳದಂತೆ ತಣ್ಣನೆಯ ನೆರಳು ಬೀಳುವುದಕ್ಕೆ ಬಾಗಿಲುಗಳಿದ್ದವು. ಪಟ್ಟಣದವರು ಈ ಬಾಗಿಲುಗಳ ನೆರಳಿನಲ್ಲಿ ತಮ್ಮ ವಾಣಿಜ್ಯ ವ್ಯಾಪಾರಗಳನ್ನು ನಡೆಸಿಕೊಳ್ಳುವುದಕ್ಕೆ ಮತ್ತು ಕೆಲವೊಂದು ಕಾನೂನು ಪ್ರಕರಣಗಳನ್ನು ತೀರ್ಪು ಮಾಡುವುದಕ್ಕೆ ಚೆನ್ನಾಗಿರುತ್ತದೆಯೆಂದು ತಿಳಿದು ಅಲ್ಲಿ ಕೂಡುತ್ತಿದ್ದರು.

# ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ “ಬಾಗಿಲು” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ದ್ವಾರ” ಅಥವಾ “ತೆರೆಯಲ್ಪಟ್ಟಿರುವ ಗೋಡೆ” ಅಥವಾ “ತಡೆಗೋಡೆ” ಅಥವಾ “ಪ್ರವೇಶದ್ವಾರ” ಎಂದೂ ಅನುವಾದ ಮಾಡಬಹುದು.
  • “ಬಾಗಿಲಿನ ಪ್ರತಿಬಂಧಗಳು” ಎನ್ನುವ ಮಾತನ್ನು “ಬಾಗಿಲಿನ ಅಗಣಿಗಳು” ಅಥವಾ “ಬಾಗಿಲನ್ನು ಮುಚ್ಚುವುದಕ್ಕೆ ದೊಡ್ಡ ತೊಲೆಗಳು” ಅಥವಾ “ಬಾಗಿಲನ್ನು ಮುಚ್ಚುವುದಕ್ಕೆ ಲೋಹದ ಕಡ್ಡೀಗಳು” ಎಂದೂ ಅನುವಾದ ಮಾಡಬಹುದು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1817, H5592, H6607, H8179, H8651, G2374, G4439, G4440

ಬಿಡುಗಡೆ, ಬಿಡುಗಡೆಯಾಗುತ್ತದೆ, ಬಿಡುಗಡೆಯಾದ, ಬಿಡುಗಡೆಯಾಗುತ್ತಿರುವುದು, ಸ್ವಾತಂತ್ರ್ಯ, ಉಚಿತವಾಗಿ, ಸ್ವಾತಂತ್ಯ್ರಯುಳ್ಳವನು, ಸ್ವಚಿತ್ತ, ಸ್ವತಂತ್ರ

# ಪದದ ಅರ್ಥವಿವರಣೆ

“ಬಿಡುಗಡೆ” ಅಥವಾ “ಸ್ವಾತಂತ್ಯ್ರ ಎನ್ನುವ ಪದಗಳು ಗುಲಾಮಗಿರಿಯಲ್ಲಿ ಇಲ್ಲದವರು ಅಥವಾ ಬೇರೆ ಯಾವ ವಿಧವಾದ ಬಂಧನಯಲ್ಲಿ ಇಲ್ಲದವರು ಎಂದರ್ಥ. “ಸ್ವಾತಂತ್ರ್ಯ” ಎನ್ನುವ ಪದಕ್ಕೆ “ಸ್ವತಂತ್ರ” ಎನ್ನುವುದು ಸಮಾನಾರ್ಥಕ ಪದವಾಗಿದೆ.

  • “ಯಾರನ್ನಾದರೂ ಬಿಡುಗಡೆ ಮಾಡುವುದು” ಅಥವಾ “ಯಾರನ್ನಾದರೂ ಸ್ವತಂತ್ರನಾಗಿ ಮಾಡುವುದು” ಎನ್ನುವ ಭಾವನೆಗಳಿಗೆ ಬಂಧನದಿಂದ ಅಥವಾ ಗುಲಾಮಗಿರಿಯಿಂದ ಯಾರನ್ನಾದರೂ ಬಿಡಿಸುವುದು ಎಂದರ್ಥ.
  • ಸತ್ಯವೇದದಲ್ಲಿ, ಯೇಸುವಿನಲ್ಲಿ ನಂಬಿಕೆಯಿಟ್ಟವರು ಪಾಪದ ಶಕ್ತಿಗೆ ಗುಲಾಮರಾಗಿರುವದಿಲ್ಲ ಎಂದು ಹೇಳಲು ಈ ಭಾವನೆಗಳನ್ನು ಅಲಂಕಾರಿಕ ರೂಪದಲ್ಲಿ ಉಪಯೋಗಿಸಿದ್ದಾರೆ.
  • “ಸ್ವಾತಂತ್ಯ್ರ” ಎನ್ನುವ ಪದಕ್ಕೆ ಮೋಶೆ ಧರ್ಮಶಾಸ್ತ್ರಕ್ಕೆ ವಿಧೇಯರಾಗಿರಲು ಇನ್ನು ಅವಶ್ಯಕತೆಯಿಲ್ಲವೆಂದು ಸೂಚಿಸುತ್ತದೆ, ಆದರೆ ಪವಿತ್ರಾತ್ಮನ ನಾಯಕತ್ವದಲ್ಲಿ ಮತ್ತು ಆತನ ಬೋಧನೆಗಳಲ್ಲಿ ಸ್ವತಂತ್ರರಾಗಿ ಜೀವಿಸಬೇಕು.

# ಅನುವಾದ ಸಲಹೆಗಳು:

  • “ಬಿಡುಗಡೆ” ಎನ್ನುವ ಪದವನ್ನು “ಬಂದಿಯಾಗಿಲ್ಲ” ಅಥವಾ “ಗುಲಾಮನಲ್ಲ” ಅಥವಾ “ಗುಲಾಮಗಿರಿಯಲ್ಲಿ ಇಲ್ಲ” ಅಥವಾ “ಬಂಧನೆಯಲ್ಲಿ ಇಲ್ಲ” ಎಂದು ಅರ್ಥಕೊಂಡುವಂತೆ ಅನುವಾದ ಮಾಡಬಹುದು.
  • “ಸ್ವಾತಂತ್ಯ್ರ” ಅಥವಾ “ಸ್ವತಂತ್ರ” ಎನ್ನುವ ಪದಗಳನ್ನು “ಬಿಡುಗಡೆ ಹೊಂದಿದವನು” ಅಥವಾ “ಗುಲಾಮಗಿರಿಯಿಲ್ಲದವನು” ಅಥವಾ “ಬಂಧನೆದಲ್ಲಿ ಇಲ್ಲದವನು” ಎಂದು ಅನುವಾದ ಮಾಡಬಹುದು.
  • “ಸ್ವಾತಂತ್ಯ್ರ ಕೊಡು” ಎನ್ನುವ ಪದವನ್ನು “ಬಿಡುಗಡೆಗೆ ಕಾರಣ” ಅಥವಾ “ಗುಲಾಮಗಿರಿಯಿಂದ ಬಿಡಿಸುವುದು” ಅಥವಾ “ಬಂಧನೆಯಿಂದ ಬಿಡಿಸುವುದು” ಎಂದು ಅನುವಾದ ಮಾಡಬಹುದು.
  • ಒಬ್ಬ ವ್ಯಕ್ತಿ “ಸ್ವಾತಂತ್ಯ್ರಹೊಂದಿದ್ದರೆ” ಅವನು “ಬಿಡುಗಡೆಹೊಂದಿದ್ದಾನೆ” ಅಥವಾ ಬಂಧನೆ ಅಥವಾ ಗುಲಾಮಗಿರಿಯಿಂದ “ಹೊರಗೆ ಕಳುಹಿಸಲ್ಪಟ್ಟಿದ್ದಾನೆ” ಎಂದರ್ಥ.

(ಈ ಪದಗಳನ್ನು ಸಹ ನೋಡಿರಿ : ಬಂಧಿಸು, ಅಧೀನಪಡಿಸು, ಗುಲಾಮ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1865, H2600, H2666, H2668, H2670, H3318, H4800, H5068, H5069, H5071, H5081, H5337, H5352, H5355, H5425, H5674, H5800, H6299, H6362, H7342, H7971, G425, G525, G558, G572, G629, G630, G859, G1344, G1432, G1657, G1658, G1659, G1849, G2010, G3032, G3089, G3955, G4174, G4506, G5483, G5486

ಬಿಲ್ಲು ಮತ್ತು ಬಾಣ, ಬಿಲ್ಲುಗಳು ಮತ್ತು ಬಾಣಗಳು

# ಪದದ ಅರ್ಥವಿವರಣೆ:

ಈ ವಿಧವಾದ ಸಾಧನೆಯನ್ನು ತಂತಿ ಬಿಲ್ಲಿನಿಂದ ಪ್ರಯೋಗಿಸುವ ಬಾಣಗಳನ್ನು ಒಳಗೊಂಡಿರುತ್ತದೆ. ಸತ್ಯವೇದ ಕಾಲದಲ್ಲಿ ಇದನ್ನು ಶತ್ರುಗಳ ವಿರುದ್ಧ ಹೋರಾಡುವುದಕ್ಕೆ, ಆಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ.

  • ಬಿಲ್ಲು ಎನ್ನುವ ಸಾಧನವನ್ನು ಲೋಹ, ಎಲುಬು, ಕಟ್ಟಿಗೆ ಅಥವಾ ಜಿಂಕೆಯ ಕವಲ್ಗೊಂಬಿನಂಥಹ ಇತರ ಗಟ್ಟಿಯಾದ ವಸ್ತುವಿನಿಂದ ತಯಾರಿಸುತ್ತಾರೆ. ಇದು ಬಾಗಿದ ಆಕಾರವನ್ನು ಹೊಂದಿರುತ್ತದೆ ಮತ್ತು ಇದನ್ನು ತಂತಿ, ಹುರಿ, ಅಥವಾ ಬಳ್ಳಿ ಎನ್ನುವದರಲ್ಲಿ ಯಾವುದಾದರೊಂದಿಗೆ ತುಂಬಾ ಬಿಗಿಯಾಗಿ ಕಟ್ಟಿರುತ್ತಾರೆ.
  • ಒಂದು ಬಾಣವು ತೀಕ್ಷಣವಾಗಿದ್ದು ತೆಳುವಾಗಿ ಈಟಿಯ ಕೊನೆಯ ಭಾಗದಂಥೆ ಬಾಣಕ್ಕೆ ಒಂದು ಕಡೆಗೆ ಇಟ್ಟಿರುತ್ತಾರೆ. ಪುರಾತನ ಕಾಲದಲ್ಲಿ ಬಾಣಗಳನ್ನು ಕಟ್ಟಿಗೆ, ಎಲುಬು, ಕಲ್ಲು, ಅಥವಾ ಲೋಹಗಳಿಂದ ತಂಬಾ ವಿಚಿತ್ರವಾಗಿ ಮಾಡುತ್ತಿದ್ದರು.
  • ಬಿಲ್ಲುಗಳು ಮತ್ತು ಬಾಣಗಳು ಸಹಜವಾಗಿ ಬೇಟೆಗಾರರಿಂದ ಮತ್ತು ಯೋಧರಿಂದ ಉಪಯೋಗಿಸಲ್ಪಡುತ್ತಿದ್ದವು.
  • “ಬಾಣ” ಎನ್ನುವ ಪದವು ಕೆಲವೊಂದುಬಾರಿ ಶತ್ರುವಿನ ಧಾಳಿ ಅಥವಾ ದೈವಿಕ ತೀರ್ಪನ್ನು ಸೂಚಿಸುವುದಕ್ಕೆ ಸತ್ಯವೇದದಲ್ಲಿ ಅಲಂಕಾರ ರೂಪದಲ್ಲಿ ಉಪಯೋಗಿಸಿರುತ್ತಾರೆ.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2671, H7198, G5115

ಬಿಲ್ಲುಗಾರ, ಬಿಲ್ಲುಗಾರರು

# ಪದದ ಅರ್ಥವಿವರಣೆ:

“ಬಿಲ್ಲುಗಾರ” ಎನ್ನುವ ಪದವು ಬಾಣಗಳನ್ನು ಆಯುಧಗಳನ್ನಾಗಿ ಉಪಯೋಗಿಸುವ ಚಾತುರ್ಯವನ್ನು ಪಡೆದ ವ್ಯಕ್ತಿಯನ್ನು ಸೂಚಿಸುತ್ತದೆ.

  • ಸತ್ಯವೇದದಲ್ಲಿ ಬಿಲ್ಲುಗಾರನನ್ನು ಸಹಜವಾಗಿ ಸೈನ್ಯದಲ್ಲಿ ಯುದ್ಧ ಮಾಡುವುದಕ್ಕೆ ಬಾಣಗಳನ್ನು ಉಪಯೋಗಿಸುವ ಒಬ್ಬ ಸೈನಿಕನನ್ನು ಸೂಚಿಸುತ್ತದೆ.
  • ಬಿಲ್ಲುಗಾರರು ಅಶ್ಯೂರ್ ಸೈನ್ಯ ದಳದಲ್ಲಿ ತುಂಬಾ ಪ್ರಾಮುಖ್ಯವಾದ ಜನರಾಗಿರುತ್ತಾರೆ.
  • ಕೆಲವೊಂದು ಭಾಷೆಗಳಲ್ಲಿ ಅಥವಾ ಈ ಕನ್ನಡ ಭಾಷೆಯಲ್ಲಿ ಈ ಪದಕ್ಕೆ “ಧನುರ್ಧಾರಿ” ಎಂದೂ ಕರೆಯುತ್ತಾರೆ

(ಈ ಪದಗಳನ್ನು ಸಹ ನೋಡಿರಿ : ಅಶ್ಯೂರ್)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1167, H1869, H2671, H2686, H3384, H7198, H7199, H7228

ಬೀಜ, ವೀರ್ಯ

# ಪದದ ಅರ್ಥವಿವರಣೆ:

ಬೀಜ ಎನ್ನುವುದು ಒಂದೇ ರೀತಿಯ ಸಸ್ಯವನ್ನು ಉತ್ಪಾದಿಸುವುದಕ್ಕೆ ನೆಲದಲ್ಲಿ ನೆಡಲ್ಪಟ್ಟ ಸಸ್ಯವನ್ನು ಹೊಂದುವ ಸಸ್ಯದ ಭಾಗವಾಗಿರುತ್ತದೆ. ಇದಕ್ಕೆ ಅನೇಕವಾದ ಅಲಂಕಾರಿಕವಾದ ಅರ್ಥಗಳಿರುತ್ತವೆ.

  • “ಬೀಜ” ಎನ್ನುವ ಪದವು ಒಬ್ಬ ಸ್ತ್ರೀಯಳಲ್ಲಿ ಶಿಶುವು ಉಂಟಾಗಿ ಬೆಳೆಯುವುದಕ್ಕೆ ಆ ಸ್ತ್ರೀಯ ಕಣಗಳೊಂದಿಗೆ ಬೆರೆತುಗೊಳ್ಳುವ ಮನುಷ್ಯನಲ್ಲಿರುವ ಚಿಕ್ಕ ಕಣವನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಮತ್ತು ಸವ್ಯೋಕ್ತಿಕವಾಗಿ ಉಪಯೋಗಿಸಲ್ಪಟ್ಟಿರುತ್ತದೆ. ಈ ಕಣಗಳ ಸಂಗ್ರಹವನ್ನು ವೀರ್ಯ ಎಂದು ಕರೆಯುತ್ತಾರೆ.
  • ಇದಕ್ಕೆ ಸಂಬಂಧಪಟ್ಟು “ಬೀಜ” ಎನ್ನುವ ಪದವನ್ನು ಒಬ್ಬ ವ್ಯಕ್ತಿಯ ಸಂತಾನವನ್ನು ಅಥವಾ ಪೀಳಿಗೆಯನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ.
  • ಈ ಪದಕ್ಕೆ ಅನೇಕಬಾರಿ ಬಹುವಚನದ ಅರ್ಥವನ್ನು ಹೊಂದಿರುತ್ತದೆ, ಒಂದು ಬೀಜದ ಕಾಳಿಗಿಂತ ಹೆಚ್ಚು ಕಾಳುಗಳನ್ನು ಅಥವಾ ಒಂದು ಸಂತಾನಕ್ಕಿಂತ ಹೆಚ್ಚಿನ ಸಂತಾನವನ್ನು ಸೂಚಿಸುತ್ತದೆ.
  • ರೈತನು ಬೀಜಗಳನ್ನು ಬಿತ್ತುವ ಸಾಮ್ಯದಲ್ಲಿ, ಯೇಸು ಹೇಳಿದ ಸಾಮ್ಯದಲ್ಲಿನ ಬೀಜಗಳನ್ನು ದೇವರ ವಾಕ್ಯಕ್ಕೆ ಹೋಲಿಸಿದ್ದಾನೆ, ಒಳ್ಳೇಯ ಆತ್ಮೀಯಕವಾದ ಫಲವನ್ನು ಉತ್ಪಾದಿಸುವ ಕ್ರಮದಲ್ಲಿ ಜನರ ಹೃದಯಗಳಲ್ಲಿ ಬಿತ್ತಲ್ಪಟ್ಟಿರುತ್ತದೆ.
  • “ಬೀಜ” ಎನ್ನುವ ಪದವನ್ನು ದೇವರ ವಾಕ್ಯವನ್ನು ಸೂಚಿಸುತ್ತಾ ಅಪೊಸ್ತಲನಾದ ಪೌಲನು ಉಪಯೋಗಿಸಿದ್ದಾನೆ.

# ಅನುವಾದ ಸಲಹೆಗಳು:

  • ನಿಜವಾದ ಬೀಜವನ್ನು ಸೂಚಿಸಿದಾಗ, ರೈತರು ತಮ್ಮ ಹೊಲ ಗದ್ದೆಗಳಲ್ಲಿ ಬಿತ್ತುವುದಕ್ಕೆ ಅನುವಾದ ಭಾಷೆಯಲ್ಲಿ ಉಪಯೋಗಿಸುವ “ಬೀಜ ಅಥವಾ ಕಾಳು” ಎನ್ನುವ ಪದವನ್ನು ಉಪಯೋಗಿಸುವುದು ಉತ್ತಮವಾದ ವಿಷಯ.
  • ದೇವರ ವಾಕ್ಯವನ್ನು ಅಲಂಕಾರಿಕವಾಗಿ ಸೂಚಿಸುವ ಸಂದರ್ಭಗಳಲ್ಲಿ ಅಕ್ಷರಾರ್ಥವಾದ ಈ ಪದವನ್ನು ಉಪಯೋಗಿಸಬಹುದು.
  • ಅಲಂಕಾರಿಕ ಉಪಯೋಗದಲ್ಲಿ ಈ ಪದವು ಒಂದೇ ಕುಟುಂಬದ ಸಂತಾನವಾಗಿರುವ ಜನರನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ., ಈ ಸಂದರ್ಭಕ್ಕೆ ಬೀಜ ಎನ್ನುವ ಪದವನ್ನು ಉಪಯೋಗಿಸುವುದಕ್ಕೆ ಬದಲಾಗಿ “ವಂಶಸ್ಥರು” ಅಥವಾ “ಸಂತಾನದವರು” ಎನ್ನುವ ಪದಗಳನ್ನು ಉಪಯೋಗಿಸುವುದು ತುಂಬಾ ಸ್ಪಷ್ಟವಾಗಿರುತ್ತದೆ. ಕೆಲವೊಂದು ಭಾಷೆಗಳಲ್ಲಿ “ಮಕ್ಕಳು ಮತ್ತು ಮೊಮ್ಮೊಕ್ಕಳು” ಎಂದು ಅರ್ಥ ಬರುವ ಪದಗಳನ್ನು ಉಪಯೋಗಿಸುತ್ತಿರಬಹುದು.
  • ಪುರುಷ ಅಥವಾ ಸ್ತ್ರೀಯಳ “ಬೀಜ” ಎಂದು ಹೇಳುವಾಗ, ಜನರನ್ನು ಮುಜುಗರ ಮಾಡದ ಅಥವಾ ಸಮರ್ಥಿಸಿಕೊಳ್ಳದ ವಿಧಾನದಲ್ಲಿ ಇದನ್ನು ಯಾವರೀತಿ ವ್ಯಕ್ತಪಡಿಸಲಾಗುತ್ತಿದೆ ಎಂದು ಪರಿಗಣಿಸಿರಿ. (ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ವಂಶಸ್ಥರು, ಸಂತತಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2232, H2233, H2234, H3610, H6507, G4615, G4687, G4690, G4701, G4703

ಬೂದಿ, ಭಸ್ಮ, ಧೂಳಿ

# ಸತ್ಯಾಂಶಗಳು:

“ಬೂದಿ” ಅಥವಾ “ಭಸ್ಮ” ಎನ್ನುವ ಪದಗಳು ಕಟ್ಟಿಗೆಯನ್ನು ಉರಿದಾದನಂತರ ಕೆಳಗೆ ಬೀಳುವ ಪುಡಿ ಪದಾರ್ಥವನ್ನು ಸೂಚಿಸುತ್ತದೆ. ಉಪಯೋಗವಾಗದಿರುವ ಅಥವಾ ವರ್ಥ್ಯವೆನ್ನುವ ವಿಷಯಗಳನ್ನು ಸೂಚಿಸಲು ಕೆಲವೊಂದುಸಲ ಈ ಪದವನ್ನು ಅಲಂಕಾರ ರೂಪವನ್ನಾಗಿ ಉಪಯೋಗಿಸುತ್ತಾರೆ.

  • ಸತ್ಯವೇದದಲ್ಲಿ ಕೆಲವೊಂದುಸಲ “ಧೂಳಿ” ಎನ್ನುವ ಪದವು ಭಸ್ಮದ ಕುರಿತಾಗಿ ಮಾತನಾಡಲು ಉಪಯೋಗಿಸಿದ್ದಾರೆ. ಇದನ್ನು ಒಣ ನೆಲದ ಮೇಲೆ ಬರುವ ನುಣುಪಾದ ಮಣ್ಣಿಗೆ ಮತ್ತು ದೂಳಿಗೆ ಕೂಡ ಸೂಚಿಸುತ್ತಾರೆ.
  • “ಬೂದಿ ಕುಪ್ಪೆ” ಎನ್ನುವುದು ಭಸ್ಮದ ರಾಶಿಯಾಗಿರುತ್ತದೆ.
  • ಪುರಾತನ ಕಾಲದಲ್ಲಿ ಬೂದಿಯಲ್ಲಿ ಕುಳಿತುಕೊಳ್ಳುವುದೆನ್ನುವುದು ಪ್ರಲಾಪಕ್ಕೆ ಅಥವಾ ಅತೀ ದುಃಖಕ್ಕೆ ಸೂಚನೆಯಾಗಿದ್ದಿತ್ತು.
  • ಪ್ರಲಾಪಿಸುವಾಗ ಹರಿದು ಹೋಗಿರುವ ಗೋಣಿ ಚೀಲಗಳನ್ನು ಧರಿಸುವುದು ಮತ್ತು ಭಸ್ಮದಲ್ಲಿ ಕುಳಿತುಕೊಳ್ಳುವುದು ಅಥವಾ ತಲೆಯ ಮೇಲೆ ಬೂದಿಯನ್ನು ಹಾಕಿಕೊಳ್ಳುವುದು ಸಂಪ್ರದಾಯವಾಗಿತ್ತು.
  • ತಲೆಯ ಮೇಲೆ ಭಸ್ಮವನ್ನು ಹಾಕಿಕೊಳ್ಳುವುದು ಕೂಡ ಅವಮಾನಕ್ಕೆ ಅಥವಾ ಮಜುಗರಕ್ಕೆ ಚಿಹ್ನೆಯಾಗಿತ್ತು.
  • ವರ್ಥ್ಯವಾದವುಗಳಿಗೋಸ್ಕರ ಶ್ರಮಿಸುವುದೆನ್ನುವುದು “ಭಸ್ಮಕ್ಕೆ ಊಟ ಉಣಿಸಿದ ಹಾಗೆ” ಎಂದು ಹೇಳುತ್ತಾರೆ.
  • “ಭಸ್ಮ” ಎನ್ನುವ ಪದವನ್ನು ಅನುವಾದ ಮಾಡುವಾಗ, ಕಟ್ಟಿಗೆಯನ್ನು ಉರಿಸಿದ ಮೇಲೆ ಕೆಳಗೆ ಬೀಳುವ ಪುಡಿ ಪದಾರ್ಥವನ್ನು ಸೂಚಿಸುವ ಭಾಷೆಯ ಪದವನ್ನೇ ಉಪಯೋಗಿಸಿರಿ.
  • “ಬೂದಿ ಮರ” ಎನ್ನುವುದು ಸಂಪೂರ್ಣವಾಗಿ ಬೇರೆ ಪದವಾಗಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಅಗ್ನಿ, ಗೋಣಿ ಚೀಲದ ಬಟ್ಟೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H80, H665, H666, H766, H1854, H6083, H6368, H7834, G2868, G4700, G5077, G5522

ಬೆಂಕಿ, ಉದ್ರೇಕಕಾರಿ, ಧೂಪಾರತಿ, ಅಗ್ಗಿಷ್ಟಿಕೆ, ಕುಲುಮೆ, ಕುಳುಮೆಗಳು

# ಪದದ ಅರ್ಥವಿವರಣೆ

ಏನಾದರೂ ಸುಡುವುದರ ಮೂಲಕ ಬರುವ ಬಿಸಿ, ಬೆಳಕು ಮತ್ತು ಜ್ವಾಲೆಗಳನ್ನು ಬೆಂಕಿ ಎನ್ನುತ್ತಾರೆ.

  • ಮರದ ಕಟ್ಟಿಗೆಯನ್ನು ಸುಟ್ಟಿದರೆ ಅದು ಭಸ್ಮವಾಗುತ್ತದೆ.
  • ನ್ಯಾಯತೀರ್ಪು ಅಥವಾ ಪ್ರಕ್ಷಾಳನೆ ಮಾಡುವುದಕ್ಕೆ ಸೂಚಿಸಲು ಅಲಂಕಾರಿಕ ಭಾಷೆಯಲ್ಲಿ “ಬೆಂಕಿ” ಎನ್ನುವ ಪದವನ್ನು ಉಪಯೋಗಿಸುತ್ತಾರೆ.
  • ಎಲ್ಲಾ ಅವಿಶ್ವಾಸಿಗಳ ಅಂತ್ಯ ತೀರ್ಪು ನರಕದ ಬೆಂಕಿಯಲ್ಲಿರುತ್ತದೆ.
  • ಬಂಗಾರ ಮತ್ತು ಇನ್ನಿತರ ಲೋಹಗಳನ್ನು ಶುಚಿಮಾಡಲು ಬೆಂಕಿಯನ್ನು ಉಪಯೋಗಿಸುತ್ತಾರೆ. ದೇವರು ತನ್ನ ಜನರಿಗೆ ಅವರ ಜೀವನದಲ್ಲಿ ಎದುರಾಗುವ ಕಷ್ಟಗಳ ಮೂಲಕ ಪರಿಶುದ್ಧಗೊಳಿಸಲು ಈ ಪದ್ಧತಿಯನ್ನು ಉಪಯೋಗಿಸುತ್ತಾನೆಂದು ಸತ್ಯವೇದದಲ್ಲಿ ಹೇಳಲ್ಪಟ್ಟಿದೆ.
  • “ಬೆಂಕಿಯ ಮೂಲಕ ದಿಕ್ಷಾಸ್ನಾನ” ಹೊಂದುವುದು ಎನ್ನುವ ಪದವನ್ನು ಅನುವಾದ ಮಾಡಲು “ಪರಿಶುದ್ಧವಾಗಲು ಶ್ರಮಗಳನ್ನು ಅನುಭವಿಸಬೇಕೆಂದು” ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಶುದ್ಧ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H215, H217, H398, H784, H800, H801, H1197, H1200, H1513, H2734, H3341, H3857, H4071, H4168, H5135, H6315, H8316, G439, G440, G1067, G2741, G4442, G4443, G4447, G4448, G4451, G5394, G5457

ಬೆತ್ತ, ಬೆತ್ತಗಳು

# ಪದದ ಅರ್ಥವಿವರಣೆ:

‘ಬೆತ್ತ” ಎನ್ನುವ ಪದವು ಅನೇಕ ವಿಧಾನಗಳಲ್ಲಿ ಉಪಯೋಗಿಸಲ್ಪಡುವ ಚಿಕ್ಕಾದಾದ ಬಲವಾದ ಕೋಲಿನಂತಿರುವ ಉಪಕರಣವನ್ನು ಸೂಚಿಸುತ್ತದೆ. ಇದು ಬಹುಶಃ ಕನಿಷ್ಟಪಕ್ಷ ಉದ್ದದಲ್ಲಿ ಒಂದು ಮೀಟರು ಇರುತ್ತದೆ.

  • ಕಟ್ಟಿಗೆಯ ಬೆತ್ತ ಎನ್ನುವುದು ಇತರ ಪ್ರಾಣಿಗಳಿಂದ ಕುರಿಗಳನ್ನು ರಕ್ಷಿಸುವುದಕ್ಕೆ ಕುರುಬನಿಂದ ಉಪಯೋಗಿಸಲ್ಪಡುವದಾಗಿರುತ್ತದೆ. ಇದನ್ನು ತಪ್ಪಿ ಹೋಗುತ್ತಿರುವ ಕುರಿಯ ಮೇಲೆ ಎಸೆದು, ಅದನ್ನು ಹಿಂಡಿಗೆ ಹಿಂತಿರುಗಿ ತೆಗೆದುಕೊಂಡು ಬರುವುದಕ್ಕೆ ಉಪಯೋಗಿಸುತ್ತಿದ್ದರು.
  • ಕೀರ್ತನೆ 23ರಲ್ಲಿ ಅರಸನಾದ ದಾವೀದನು ತನ್ನ ಜನರಿಗಾಗಿ ದೇವರ ಮಾರ್ಗದರ್ಶನವನ್ನು ಮತ್ತು ಕ್ರಮಶಿಕ್ಷಣಯನ್ನು ಸೂಚಿಸುವುದಕ್ಕೆ “ಬೆತ್ತ” ಮತ್ತು “ದೊಣ್ಣೆ” ಎನ್ನುವ ಪದಗಳನ್ನು ಅಲಂಕಾರಿಕವಾಗಿ ಉಪಯೋಗಿಸಿರುತ್ತಾನೆ.
  • ಕುರುಬನ ಬೆತ್ತ (ದೊಣ್ಣೆ) ಎನ್ನುವುದನ್ನು ಇದರ ಕೆಳಗೆ ಕುರಿಗಳು ಹಾದು ಹೋಗುತ್ತಿರುವಾಗ ಎಣಿಸುವುದಕ್ಕೆ ಉಪಯೋಗಿಸುತ್ತಿದ್ದರು.

“ಕಬ್ಬಿಣದ ಬೆತ್ತ” ಎನ್ನುವ ಇನ್ನೊಂದು ರೂಪಕಾಲಂಕಾರದ ಮಾತು ದೇವರನ್ನು ತಿರಸ್ಕರಿಸಿ, ದುಷ್ಟ ಕಾರ್ಯಗಳನ್ನು ಮಾಡುತ್ತಿರುವ ಜನರಿಗಾಗಿ ಕೊಡಲ್ಪಡುವ ದೇವರ ಶಿಕ್ಷೆಯನ್ನು ಸೂಚಿಸುತ್ತದೆ.

  • ಪುರಾತನ ಕಾಲಗಳಲ್ಲಿ ಅಳತೆ ಮಾಡುವ ಬೆತ್ತಗಳನ್ನು ಲೋಹ, ಕಟ್ಟಿಗೆ, ಅಥವಾ ಕಲ್ಲಿನಿಂದ ತಯಾರು ಮಾಡುತ್ತಿದ್ದರು, ಇವುಗಳನ್ನು ವಸ್ತು ಅಥವಾ ಭವನಗಳ ಉದ್ದವನ್ನು ಅಳತೆ ಮಾಡುವುದಕ್ಕೆ ಉಪಯೋಗಿಸುತ್ತಿದ್ದರು.
  • ಸತ್ಯವೇದದಲ್ಲಿ ಕಟ್ಟಿಗೆಯ ಬೆತ್ತವು ಮಕ್ಕಳನ್ನು ಕ್ರಮಶಿಕ್ಷಣದಲ್ಲಿಡುವುದಕ್ಕೆ ಒಂದು ಉಪಕರಣವನ್ನಾಗಿಯೂ ಸೂಚಿಸಲ್ಪಟ್ಟಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ದೊಣ್ಣೆ, ಕುರಿಗಳು, ಕುರುಬ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2415, H4294, H4731, H7626, G2563, G4463, G4464

ಬೆಸ್ತರು, ಮೀನುಗಾರ

# ಪದದ ಅರ್ಥವಿವರಣೆ

ಹಣ ಸಂಪಾದಿಸಿಕೊಳ್ಳಲು ಮೀನು ಹಿಡಿಯುವವರನ್ನ ಬೆಸ್ತರು ಎನ್ನುತ್ತಾರೆ. ಹೊಸ ಒಡಂಬಡಿಕೆಯಲ್ಲಿ, ಮೀನು ಹಿಡಿಯಲು ದೊಡ್ಡ ಬಲೆಯನ್ನು ಉಪಯೋಗಿಸುತ್ತಿದ್ದರು. ಬೆಸ್ತರು ಎನ್ನುವ ಪದಕ್ಕೆ “ಮೀನುಗಾರರು” ಎನ್ನುವುದು ಇನ್ನೊಂದು ಹೆಸರಾಗಿದೆ.

  • ಯೇಸು ಕರೆಯುವುದಕ್ಕೆ ಮುನ್ನ ಪೇತ್ರನು ಮತ್ತು ಇತರ ಅಪೊಸ್ತಲರು ಬೆಸ್ತರಾಗಿದ್ದರು.
  • ಇಸ್ರಾಯೇಲ್ ದೇಶ ನೀರಿನ ಬಳಿ ಇದ್ದಕಾರಣ, ಮೀನು ಮತ್ತು ಬೆಸ್ತರು ಕುರಿತಾಗಿ ಸತ್ಯವೇದ ಬಹಳ ಹೇಳುತ್ತಿದೆ.
  • ಈ ಪದವನ್ನು “ಮೀನು ಹಿಡಿಯುವ ಜನರು” ಅಥವಾ “ಮೀನು ಹಿಡಿಯುವದರ ಮೂಲಕ ಹಣ ಸಂಪಾದಿಸುವವರು” ಎಂದು ಅನುವಾದ ಮಾಡಬಹುದು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1728, H1771, H2271, G231, G1903

ಬೆಳಕು, ದೀಪಗಳು, ಬೆಳಕಿನ, ಮಿಂಚು, ಹಗಲು, ಸೂರ್ಯಕಾಂತಿ, ಸಂಧಿಪ್ರಕಾಶ, ಜ್ಞಾನೋದಯ, ಬೆಳಗಿಸಿದೆ

# ಪದದ ಅರ್ಥವಿವರಣೆ:

ಸತ್ಯವೇದದಲ್ಲಿ “ಬೆಳಕು” ಎನ್ನುವ ಪದವನ್ನು ಅನೇಕವಾದ ಅಲಂಕಾರಿಕ ಭಾಷೆಯಲ್ಲಿ ಉಪಯೋಗಿಸಲಾಗಿದೆ. ಈ ಪದವನ್ನು ಅಲಂಕಾರಿಕವಾಗಿ ನೀತಿ, ಪರಿಶುದ್ಧತೆ ಮತ್ತು ಸತ್ಯಕ್ಕೆ ಉಪಯೋಗಿಸಲಾಗಿರುತ್ತದೆ. ( ನೋಡಿರಿ: ಅಲಂಕಾರಿಕ

  • ಯೇಸು ದೇವರ ನಿಜವಾದ ಸಂದೇಶವನ್ನು ಈ ಲೋಕ ತರುತ್ತೇನೆಂದು ಮತ್ತು ಸಮಸ್ತ ಜನರ ಪಾಪಗಳ ಕತ್ತಲೆಯಿಂದ ಜನರನ್ನು ರಕ್ಷಿಸುವನೆಂದು ಹೇಳುವುದಕ್ಕೆ ಆತನು “ನಾನು ಲೋಕಕ್ಕೆ ಬೆಳಕಾಗಿದ್ದೇನೆ” ಎಂದು ಹೇಳಿದರು.
  • “ಬೆಳಕಿನಲ್ಲಿ ನಡೆಯಬೇಕೆಂಬುದಾಗಿ” ಕ್ರೈಸ್ತರು ಆಜ್ಞಾಪಿಸಲ್ಪಟ್ಟಿದ್ದಾರೆ, ಅಂದರೆ ಅವರು ಯಾವ ದುಷ್ಟತನವನ್ನು ಮಾಡದೇ ಅವರು ಯಾವರೀತಿ ಇರಬೇಕೆಂದು ದೇವರು ಬಯಸಿದ ರೀತಿಯಲ್ಲಿ ಅವರು ಜೀವಿಸಬೇಕಾಗಿರುತ್ತದೆ.
  • “ದೇವರು ಬೆಳಕಾಗಿದ್ದಾರೆ” ಮತ್ತು ಆತನಲ್ಲಿ ಯಾವ ಕತ್ತಲೆಯೂ ಇಲ್ಲ ಎಂದು ಅಪೊಸ್ತಲನಾದ ಯೋಹಾನನು ಹೇಳಿದ್ದಾನೆ.
  • ಬೆಳಕು ಮತ್ತು ಕತ್ತಲು ಎರಡೂ ಒಂದಕ್ಕೊಂದು ವಿರುದ್ಧವಾಗಿರುತ್ತವೆ. ಕತ್ತಲು ಎನ್ನುವುದು ಬೆಳಕಿಲ್ಲದ ಸ್ಥಿತಿಯಾಗಿರುತ್ತದೆ.
  • ಯೇಸು “ಲೋಕಕ್ಕೆ ಬೆಳಕಾಗಿದ್ದೇನೆ” ಎಂದು ಹೇಳಿದ್ದಾರೆ ಮತ್ತು ತನ್ನ ಶಿಷ್ಯರು ದೇವರು ಎಷ್ಟು ದೊಡ್ಡವರೋ ಎಂದು ತೋರಿಸುವ ಸ್ಪಷ್ಟವಾದ ವಿಧಾನದಲ್ಲಿ ಜೀವಿಸುವುದರ ಮೂಲಕ ಪ್ರಪಂಚದಲ್ಲಿ ದೀಪಗಳಂತೆ ಪ್ರಕಾಶಿಸಬೇಕಾಗಿರುತ್ತದೆ.
  • “ಬೆಳಕಿನಲ್ಲಿ ನಡೆಯುವುದು” ಎನ್ನುವ ಮಾತು ದೇವರನ್ನು ಮೆಚ್ಚಿಸುವ ವಿಧಾನದಲ್ಲಿ ಜೀವಿಸುವುದನ್ನು, ಸರಿಯಾದದ್ದನ್ನೇ ಮಾಡುವುದನ್ನು ಸೂಚಿಸುತ್ತದೆ. ಕತ್ತಲೆಯಲ್ಲಿ ನಡೆಯುವುದೆನ್ನುವುದು ದೇವರಿಗೆ ವಿರುದ್ಧವಾಗಿ ತಿರಸ್ಕಾರ ಮಾಡಿ ಜೀವಿಸುವುದನ್ನು, ಎಲ್ಲಾ ಕೆಟ್ಟ ಕಾರ್ಯಗಳನ್ನು ಮಾಡುತ್ತಾ ಜೀವಿಸುವುದನ್ನು ಸೂಚಿಸುತ್ತದೆ.

# ಅನುವಾದ ಸಲಹೆಗಳು:

  • ಅನುವಾದ ಮಾಡುವಾಗ, ಈ ಪದಗಳನ್ನು ಅಲಂಕಾರಿಕ ಪದ್ಧತಿಯಲ್ಲಿ ಉಪಯೋಗಿಸಿದ್ದರೂ, “ಬೆಳಕು” ಮತ್ತು “ಕತ್ತಲು” ಎನ್ನುವ ಪದಗಳನ್ನು ಹಾಗೆಯೇ ಇಡುವುದು ತುಂಬಾ ಪ್ರಾಮುಖ್ಯ.
  • ವಾಕ್ಯದಲ್ಲಿ ಹೋಲಿಕೆಯನ್ನು ವಿವರಿಸುವುದು ತುಂಬ ಅತ್ಯಗತ್ಯ. ಉದಾಹರಣೆಗೆ, “ಬೆಳಕಿನ ಮಕ್ಕಳಾಗಿ ನಡೆಯಿರಿ” ಎನ್ನುವ ಮಾತನ್ನು “ನೀತಿಯುತವಾದ ಜೀವನಗಳನ್ನು ಬಹಿರಂಗವಾಗಿ ಜೀವಿಸಿರಿ, ಪ್ರಕಾಶವಾದ ಸೂರ್ಯನ ಬೆಳಕಿನಲ್ಲಿ ಒಬ್ಬರು ಜೀವಿಸುವ ರೀತಿಯಲ್ಲಿ ಜೀವಿಸಿರಿ”.
  • “ಬೆಳಕು” ಎನ್ನುವ ಪದವನ್ನು ಉಪಯೋಗಿಸುವಾಗ, ಇದು ಸಹಜವಾಗಿ ಬೆಳಕು ಕೊಡುವ ಒಂದು ದೀಪವನ್ನು ಮಾತ್ರ ಸೂಚಿಸದಂತೆ ನೋಡಿಕೊಳ್ಳಿರಿ. ಈ ಪದದ ಅನುವಾದವು ಕೇವಲ ಬೆಳಕನ್ನು ಮಾತ್ರವೇ ಸೂಚಿಸಬೇಕು.

(ಈ ಪದಗಳನ್ನು ಸಹ ನೋಡಿರಿ : ಕತ್ತಲು, ಪರಿಶುದ್ಧತೆ, ನೀತಿ, ನಿಜ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H216, H217, H3313, H3974, H4237, H5051, H5094, H5105, H5216, H6348, H7052, H7837, G681, G796, G1645, G2985, G3088, G5338, G5457, G5458, G5460, G5462

ಬೆಳ್ಳಿ

# ಪದದ ಅರ್ಥವಿವರಣೆ:

ಬೆಳ್ಳಿ ಎನ್ನುವುದು ನಾಣ್ಯಗಳನ್ನು, ರತ್ನಾಭರಣಗಳನ್ನು, ಪಾತ್ರೆಗಳನ್ನು ಮತ್ತು ಆಭರಣಗಳನ್ನು ಮಾಡುವುದಕ್ಕೆ ಹೊಳೆಯುತ್ತಿರುವ, ಬೂದು ಬಣ್ಣದಲ್ಲಿರುವ ಅಮೂಲ್ಯವಾದ ಲೋಹವಾಗಿರುತ್ತದೆ.

  • ಅನೇಕ ವಿಧವಾದ ಪಾತ್ರೆಗಳಲ್ಲಿ ಬೆಳ್ಳಿ ಬಟ್ಟಲುಗಳು ಒಳಗೊಂಡಿರುತ್ತವೆ, ಮತ್ತು ಅಡುಗೆ ಮಾಡುವುದಕ್ಕೆ, ತಿನ್ನುವುದಕ್ಕೆ ಮತ್ತು ಬಡಿಸುವುದಕ್ಕೆ ಈ ವಸ್ತುಗಳನ್ನು ಉಪಯೋಗಿಸುತ್ತಾರೆ.
  • ಬೆಳ್ಳಿ ಮತ್ತು ಬಂಗಾರಗಳನ್ನು ದೇವಾಲಯವನ್ನು ಮತ್ತು ಗುಡಾರವನ್ನು ನಿರ್ಮಿಸುವುದರಲ್ಲಿ ಉಪಯೋಗಿಸಿದ್ದಾರೆ. ಯೆರೂಸಲೇಮಿನಲ್ಲಿರುವ ದೇವಾಲಯದಲ್ಲಿ ಬೆಳ್ಳಿಯಿಂದ ಮಾಡಲ್ಪಟ್ಟ ಪಾತ್ರೆಗಳು ಇರುತ್ತವೆ.
  • ಸತ್ಯವೇದದಲ್ಲಿ ಶೆಕೆಲ್ ಎನ್ನುವುದು ತೂಕದ ಒಂದು ಘಟಕವಾಗಿರುತ್ತದೆ, ಮತ್ತು ಕೊಂಡುಕೊಳ್ಳುವುದೆನ್ನುವುದು ಅನೇಕಬಾರಿ ಖರೀದಿಸಬೇಕಾದಾಗ ಬೆಳ್ಳಿಯಿಂದ ಮಾಡಲ್ಪಟ್ಟಿರುವ ಶೆಕೆಲುಗಳ ಸಂಖ್ಯೆಯು ಇರುತ್ತಿತ್ತು. ಹೊಸ ಒಡಂಬಡಿಕೆಯ ಕಾಲದ ಪ್ರಕಾರ ಶೆಕೆಲುಗಳಲ್ಲಿ ಅಳತೆ ಮಾಡುವ ಅನೇಕ ವಿಧವಾದ ತೂಕಗಳಲ್ಲಿ ಬೆಳ್ಳಿಯ ನಾಣ್ಯಗಳನ್ನು ತಯಾರು ಮಾಡುತ್ತಿದ್ದರು.
  • ಯೋಸೇಫನ ಸಹೋದರರು ತನ್ನನ್ನು ಬೆಳ್ಳಿಯ ಇಪ್ಪತ್ತು ಶೆಕೆಲುಗಳಿಗೆ ಗುಲಾಮನನ್ನಾಗಿ ಮಾರಿದರು.
  • ಯೂದನು ಯೇಸುವನ್ನು ಮೂವತ್ತು ಬೆಳ್ಳಿ ನಾಣ್ಯಗಳಿಗೆ ಮಾರಿದನು.

(ಈ ಪದಗಳನ್ನು ಸಹ ನೋಡಿರಿ : ಗುಡಾರ, ದೇವಾಲಯ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3701, H3702, H7192, G693, G694, G695, G696, G1406

ಬೇಡು, ಮನವಿ ಮಾಡು, ಬೇಡಿಕೋ, ಬೇಡುವುದು, ಬೇಡಿದೆ, ಬೇಡುತ್ತಾ ಇರುವುದು, ಬೇಡಿಕೆಗಳು

# ಸತ್ಯಾಂಶಗಳು:

“ಬೇಡಿಕೋ” ಮತ್ತು “ಬೇಡುವುದು” ಎನ್ನುವ ಪದಗಳು ಯಾವುದಾದರೊಂದನ್ನು ಮಾಡುವುದಕ್ಕೆ ಯಾರಾದರೊಬ್ಬರನ್ನು ತುರ್ತಾಗಿ ಕೇಳಿಕೊಳ್ಳುವುದು. “ಬೇಡು” ಎನ್ನುವುದು ಒಂದು ತುರ್ತು ಮನವಿಯಾಗಿರುತ್ತದೆ.

  • ಬೇಡಿಕೊಳ್ಳುವುದು ಅನೇಕಬಾರಿ ಒಬ್ಬ ವ್ಯಕ್ತಿ ಹೆಚ್ಚಾದ ಅತ್ಯಗತ್ಯೆಯಲ್ಲಿರುವ ಭಾವನೆಯನ್ನು ಅಥವಾ ಸಹಾಯಕ್ಕಾಗಿ ಬಲವಾದ ಆಶೆಯನ್ನು ಸೂಚಿಸುವುದಕ್ಕೆ ಅನ್ವಯವಾಗುತ್ತದೆ.
  • ಕರುಣೆಗಾಗಿ ಜನರು ದೇವರ ಬಳಿ ಬೇಡಿಕೊಳ್ಳಬಹುದು ಅಥವಾ ತುರ್ತು ಮನವಿಯನ್ನು ಮಾಡಬಹುದು ಅಥವಾ ತಮಗಾಗಿಯೋ ಇನ್ನೊಬ್ಬರಿಗಾಗಿಯೋ ಏನಾದರೊಂದನ್ನು ಮಾಡಬೇಕೆಂದು ಆತನಲ್ಲಿ ಕೇಳಿಕೊಳ್ಳಬಹುದು.
  • ಇದನ್ನು ಬೇರೊಂದು ವಿಧಾನಗಳಲ್ಲಿ ಅನುವಾದ ಮಾಡುವುದಾದರೆ, “ಯಾಚಿಸು” ಅಥವಾ “ಮೊರೆಯಿಡು” ಅಥವಾ “ತುರ್ತಾಗಿ ಕೇಳಿಕೊಳ್ಳು” ಎನ್ನುವ ಪದಗಳು ಒಳಗೊಂಡಿರುತ್ತವೆ.
  • “ಬೇಡು” ಎನ್ನುವ ಪದವನ್ನು “ತುರ್ತು ಮನವಿ” ಅಥವಾ “ಬಲವಾಗಿ ಒತ್ತಾಯಿಸುವುದು” ಎಂದೂ ಅನುವಾದ ಮಾಡಬಹುದು.
  • ಈ ಸಂದರ್ಭದಲ್ಲಿ ಈ ಪದಕ್ಕೆ ಹಣಕ್ಕಾಗಿ ಬೇಡಿಕೊಳ್ಳುವುದು ಎನ್ನುವ ಅರ್ಥವು ಬರದಂತೆ ನೋಡಿಕೊಳ್ಳಿರಿ.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1777, H2603, H3198, H4941, H4994, H6279, H6293, H6664, H6419, H7378, H7379, H7775, H8199, H8467, H8469, G1189, G1793, G2065, G3870

ಬೇಡುವುದು, ಬೇಡಿಕೊಂಡರು, ಬೇಡಿಕೊಳ್ಳುವ, ಭಿಕ್ಷುಕ

# ಪದದ ಅರ್ಥವಿವರಣೆ

“ಬೇಡುವುದು” ಎನ್ನುವ ಪದಕ್ಕೆ ಯಾರನ್ನಾದರೂ ಏನನ್ನಾದರೂ ಕೇಳಿಕೊಳ್ಳುವುದು ಎಂದರ್ಥ. ಇದು ಸಹಜವಾಗಿ ಹಣವನ್ನು ಕೇಳುವುದಕ್ಕೆ ಸೂಚಿಸುತ್ತದೆ, ಆದರೆ ಯಾರರಿಗಾದರು ಮನವಿ ಮಾಡುವುದಕ್ಕೆ ಸಹ ಉಪಯೋಗಿಸುತ್ತಾರೆ.

  • ಸಾಮಾನ್ಯವಾಗಿ ಜನರಿಗೆ ಏನಾದರು ತುಂಬ ಅಗತ್ಯವಿರುವಾಗ ಅವರು ಮನವಿ ಮಾಡುತ್ತಾರೆ ಅಥವಾ ಬೇಡಿಕೊಳ್ಳುತ್ತಾರೆ, ಆದರೆ ಅವರು ಕೇಳಿದವರು ಅವರಿಗೆ ಕೊಡುತ್ತಾರೋ ಇಲ್ಲವೋ ಎಂದು ಅವರು ಅರಿಯರು.
  • “ಭಿಕ್ಷುಕ” ಎನ್ನುವವನು ಸಾರ್ವಜನಿಕ ಸ್ಥಳದಲ್ಲಿ ಪ್ರತಿ ದಿನ ಕೂತುಕೊಂಡು ಅಥವಾ ನಿಂತುಕೊಂಡು ಜನರನ್ನು ಹಣ ಕೇಳಿಕೊಳ್ಳುವನು.
  • ಈ ಪದವನ್ನು “ಮನವಿ” ಅಥವಾ “ತುರ್ತಾಗಿ ಕೇಳುವುದು” ಅಥವಾ “ಹಣ ಬೇಡುವುದು” ಅಥವಾ “ಯಾವಾಗಲು ಹಣ ಕೇಳುವುದು” ಎಂದು ಸಂದರ್ಭಕ್ಕೆ ಅನುಸಾರವಾಗಿ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಮನವಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಕೆಲವು ಉದಾಹರಣೆಗಳು :

  • 10:04 ಐಗುಪ್ತ ದೇಶದ ಮೇಲೆ ಯೆಹೋವನು ಕಪ್ಪೆಗಳನ್ನು ಕಳುಹಿಸಿದನು. ಈ ಕಪ್ಪೆಗಳನ್ನು ತೆಗೆದು ಹಾಕು ಎಂದು ಫರೋಹನು ಮೋಶೆಯೊಂದಿಗೆ ಬೇಡಿಕೊಂಡನು.
  • 29:08 ಒಡೆಯನುತನ್ನ ಸೇವಕನನ್ನು ಕರಸಿ, “ಓ, ದುಷ್ಟ ಸೇವಕನೇ, ನೀನು ನನ್ನನ್ನು ಬೇಡಿಕೊಂಡದ್ದರಿಂದ ನಿನ್ನ ಸಾಲವನ್ನೆಲ್ಲಾ ನಾನು ಮನ್ನಿಸಿಬಿಟ್ಟೆನಲ್ಲವೇ?
  • 32:07 ಆ ದೆವ್ವಗಳು “ನಮ್ಮನ್ನು ಈ ಪ್ರಾಂತದಿಂದ ಹೊರಡಿಸಬೇಡ” ಎಂದು ಯೇಸುವಿನೊಂದಿಗೆ ಬೇಡಿಕೊಂಡವು. ಅಲ್ಲಿಯ ಗುಡ್ಡದಲ್ಲಿ ಹಂದಿಗಳ ದೊಡ್ಡ ಹಿಂಡು ಮೇಯುತ್ತಿತ್ತು. ಅದಕ್ಕೆ, ಆ ಅಶುದ್ಧಾತ್ಮಗಳು, “ಆ ಹಂದಿಗಳೊಳಗೆ ಸೇರಿಕೊಳ್ಳುವುದಕ್ಕೆ ನಮ್ಮನ್ನು ಕಳುಹಿಸಿಕೊಡು” ಎಂದು ಯೇಸುವನ್ನು ಬೇಡಿಕೊಂಡವು.
  • 32:10 ಆ ದೆವ್ವಗಳ ಬಂಧನದಿಂದ ಬಿಡುಗಡೆ ಹೊಂದಿದವನು, ನಾನು ನಿನ್ನ ಬಳಿಯಲ್ಲಿಯೇ ಇರುತ್ತೇನೆಂದು ಆತನನ್ನು ಬೇಡಿದನು.
  • 35:11 ಅವನ ತಂದೆ ಹೊರಗೆ ಬಂದು, ನಮ್ಮೊಂದಿಗೆ ನೀನು ಸಹ ಕೊಂಡಾಡು ಎಂದು ಬೇಡಿಕೊಂಡನು ಆದರೆ ಅವನು ನಿರಾಕರಿಸಿದನು.
  • 44:01 ಒಂದು ದಿನ ಪೇತ್ರ ಮತ್ತು ಯೋಹಾನನು ದೇವಾಲಯಕ್ಕೆ ಹೋದರು. ಅವರು ದೇವಾಲಯದ ಬಾಗಿಲ ಬಳಿ ಹೋಗುತ್ತಿರುವಾಗ, ಕುಂಟನಾಗಿದ್ದ ಒಬ್ಬ ಮನುಷ್ಯನು ಭಿಕ್ಷೆ ಬೇಡುವದನ್ನು ದೃಷ್ಟಿಸಿ ನೋಡಿದರು.

# ಪದ ಡೇಟಾ:

  • Strong's: H34, H7592, G154, G1871, G4319, G4434, G6075

ಬೋಧಕ, ಬೋಧಕರು, ಬೋಧಕ

# ಪದದ ಅರ್ಥವಿವರಣೆ:

ಉಪಾಧ್ಯಾಯ ಎನ್ನುವ ಪದಕ್ಕೆ ಇತರ ಜನರಿಗೆ ಹೊಸ ಮಾಹಿತಿಯನ್ನು ಕೊಡುವ ವ್ಯಕ್ತಿ ಎಂದರ್ಥ. ಬೋಧಕರು ಇತರರಿಗೆ ಕೌಶಲ್ಯಗಳನ್ನು ಮತ್ತು ಜ್ಞಾನವನ್ನು ಪಡೆದುಕೊಂಡು, ಅದನ್ನು ಉಪಯೋಗಿಸಿಕೊಳ್ಳುವುದಕ್ಕೆ ಸಹಾಯ ಮಾಡುತ್ತಾರೆ.

  • ಸತ್ಯವೇದದಲ್ಲಿ “ಬೋಧಕ” ಎನ್ನುವ ಪದವು ದೇವರ ಕುರಿತಾಗಿ ಬೋಧನೆ ಮಾಡುವ ವ್ಯಕ್ತಿಯನ್ನು ಸೂಚಿಸುವುದಕ್ಕೆ ವಿಶೇಷವಾದ ಭಾವನೆಯಲ್ಲಿ ಉಪಯೋಗಿಸಿರುತ್ತಾರೆ.
  • ಬೋಧಕನಿಂದ ಕಲಿತುಕೊಳ್ಳುವ ಜನರನ್ನು “ವಿದ್ಯಾರ್ಥಿಗಳು” ಅಥವಾ “ಶಿಷ್ಯರು” ಎಂದು ಕರೆಯುತ್ತಾರೆ.
  • ಕೆಲವೊಂದು ಬೈಬಲ್ ಅನುವಾದಗಳಲ್ಲಿ ಈ ಪದವನ್ನು (ಬೋಧಕ) ಯೇಸುವಿಗೆ ಬಿರುದಾಗಿ ಉಪಯೋಗಿಸುತ್ತಿರುವಾಗ ಆ ಪದದ ಮೊದಲನೇ ಅಕ್ಷರವನ್ನು ದೊಡ್ಡದಾಗಿ ಮಾಡುತ್ತಾರೆ.

# ಅನುವಾದ ಸಲಹೆಗಳು:

  • ಬೋಧಕ ಎನ್ನುವ ಪದವನ್ನು ಅನುವಾದ ಮಾಡುವುದಕ್ಕೆ ಸಾಧಾರಣವಾಗಿ ಉಪಯೋಗಿಸುವ ಪದವನ್ನಿಟ್ಟು ಅನುವಾದ ಮಾಡಬಹುದು, ಆದರೆ ಇದನ್ನು ಶಾಲೆಯ ಉಪಾಧ್ಯಾಯನಿಗೆ ಮಾತ್ರವೇ ಸೂಚಿಸದಂತೆ ಇರಬಾರದು.
  • ಕೆಲವೊಂದು ಸಂಸ್ಕೃತಿಗಳಲ್ಲಿ ಧರ್ಮ ಸಂಬಂಧವಾದ ಬೋಧಕರಿಗೆ ವಿಶೇಷವಾದ ಬಿರುದುಗಳನ್ನು ಹೊಂದಿರಬಹುದು, ಉದಾಹರಣೆಗೆ, “ಅಯ್ಯಾ” ಅಥವಾ “ರಬ್ಬೀ” ಅಥವಾ “ಪ್ರಸಂಗೀಕ”.

(ಈ ಪದಗಳನ್ನು ಸಹ ನೋಡಿರಿ : ಶಿಷ್ಯ, ಪ್ರಸಂಗಿಸು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಉದಾಹರಣೆಗಳು:

  • 27:01_ ಒಂದು ದಿನ ಯೆಹೂದ್ಯರ ಧರ್ಮಶಾಸ್ತ್ರದಲ್ಲಿ ನಿಪುಣನು ಯೇಸುವನ್ನು ಪರೀಕ್ಷೆ ಮಾಡಲು ಆತನ ಬಳಿಗೆ ಬಂದು, “ಬೋಧಕನೆ, ನಿತ್ಯಜೀವವನ್ನು ಹೊಂದಿಕೊಳ್ಳುವುದಕ್ಕೆ ನಾನೇನು ಮಾಡಬೇಕು?” ಎಂದು ಕೇಳಿದನು.
  • 28:01_ ಒಂದು ದಿನ ಒಬ್ಬ ಯೌವ್ವನ ಪಾಲಕನು ಯೇಸುವಿನ ಬಳಿಗೆ ಬಂದು, “ಒಳ್ಳೇಯ ___ ಬೋಧಕನೆ ___ ನಾನು ನಿತ್ಯಜೀವವನ್ನು ಪಡೆಯುವುದಕ್ಕೆ ಏನು ಮಾಡಬೇಕು?” ಎಂದು ಕೇಳಿದನು.
  • 37:02_ ಎರಡು ದಿನಗಳು ಕಳೆದು ಹೋದನಂತರ, ಯೇಸು ತನ್ನ ಶಿಷ್ಯರೊಂದಿಗೆ, “ನಾವು ಯೂದಾಗೆ ಹಿಂದಿರುಗಿ ಹೋಗೋಣ” ಎಂದು ಹೇಳಿದನು. “ಆದರೆ __ ಬೋಧಕನೆ ___ “ “ಸ್ವಲ್ಪ ಸಮಯದ ಮುಂಚಿತವಾಗಿ ಅಲ್ಲಿರುವ ಜನರು ನಿಮ್ಮನ್ನು ಸಾಯಿಸಬೇಕೆಂದು ಬಯಸಿದ್ದರು” ಎಂದು ಶಿಷ್ಯರು ಹೇಳಿದರು.
  • 38:14_ ಯೂದಾನು ಯೇಸುವಿನ ಬಳಿಗೆ ಬಂದು, “___ ಬೋಧಕನಿಗೆ ___ ಶುಭಗಳು” ಎಂದು ಹೇಳಿ, ಆತನಿಗೆ ಮುದ್ದಿಟ್ಟನು.
  • 49:03_ ಯೇಸು ಕೂಡ ಉತ್ತಮ ಉನ್ನತ __ ಬೋಧಕನಾಗಿದ್ದನು ___, ಆತನು ದೇವರ ಮಗನಾಗಿರುವದರಿಂದ ಅಧಿಕಾರದಿಂದ ಮಾತನಾಡಿದ್ದನು.

# ಪದ ಡೇಟಾ:

  • Strong's: H3384, H3887, H3925, G1320, G2567, G3547, G5572

ಬೋಧಿಸು, ಬೋಧಿಸುವುದು, ಕಲಿಸಿದೆ, ಬೋಧನೆ, ಬೋಧನೆಗಳು, ಕಲಿಸದಿರುವುದು

# ಪದದ ಅರ್ಥವಿವರಣೆ:

ಯಾರಿಗಾದರು “ಬೊಧಿಸು” ಎನ್ನುವುದಕ್ಕೆ ಆ ವ್ಯಕ್ತಿಗೆ ತಿಳಿಯದಿರುವ ವಿಷಯಗಳನ್ನು ತಿಳಿಸುವುದು ಎಂದರ್ಥ. ಇದಕ್ಕೆ ಸಾಧಾರಣವಾಗಿ ಕಲಿತುಕೊಳ್ಳುತ್ತಿರುವ ವ್ಯಕ್ತಿಗೆ ಯಾವ ಸಂಬಂಧವಿಲ್ಲದೆ “ಮಾಹಿತಿಯನ್ನು ಕೊಡುವುದು” ಎಂದರ್ಥವಾಗಿರುತ್ತದೆ, ಸಾಧಾರಣವಾಗಿ ಮಾಹಿತಿ ಕೊಡುವುದೆನ್ನುವುದು ಪದ್ಧತಿ ಪ್ರಕಾರ ಕೊಡುವುದಾಗಿರುತ್ತದೆ. ಒಬ್ಬ ವ್ಯಕ್ತಿಯ “ಬೋಧನೆಯು” ಅಥವಾ ಆ ವ್ಯಕ್ತಿಯ “ಬೋಧನೆಗಳು” ಆತನು ಹೇಳುವ ಮಾತುಗಳಾಗಿರುತ್ತವೆ.

  • “ಬೋಧಕ” ಎಂದರೆ ಬೋಧಿಸುವ ವ್ಯಕ್ತಿ ಎಂದರ್ಥ. “ಬೋಧಿಸು” ಎನ್ನುವ ಪದಕ್ಕೆ ಭೂತ ಕಾಲ ಪದವು “ಕಲಿಸಿದೆ” ಎಂದಾಗಿರುತ್ತದೆ.
  • ಯೇಸು ಬೋಧನೆ ಮಾಡುತ್ತಿರುವಾಗ, ಆತನು ದೇವರ ಕುರಿತಾಗಿ ಮತ್ತು ಆತನ ರಾಜ್ಯದ ಕುರಿತಾಗಿ ವಿವರಿಸುತ್ತಿದ್ದಾನೆ.
  • ಯೇಸುವಿನ ಶಿಷ್ಯರೆಲ್ಲರು ಆತನನ್ನು ದೇವರ ಕುರಿತಾಗಿ ಜನರಿಗೆ ಹೇಳುವ ವ್ಯಕ್ತಿಯನ್ನು ಗೌರವಿಸುವ ವಿಧಾನದಲ್ಲಿ “ಬೋಧಕನು” ಎಂದು ಕರೆದರು.
  • ಕಲಿಸಲ್ಪಟ್ಟಿರುವ ಮಾಹಿತಿಯು ತೋರಿಸಲಾಗುತ್ತದೆ ಅಥವಾ ಬಾಯಿ ಮಾತಿನಿಂದ ಹೇಳಲಾಗುತ್ತದೆ.
  • “ಸಿದ್ಧಾಂತ” ಎನ್ನುವ ಪದವು ದೇವರ ಕುರಿತು ದೇವರಿಂದ ಹೊಂದಿರುವ ಬೋಧನೆಗಳನ್ನು, ಅದೇ ರೀತಿಯಾಗಿ ಹೇಗೆ ಜೀವಿಸಬೇಕೆಂದು ಹೇಳುವ ದೇವರ ಆಜ್ಞೆಗಳನ್ನು ಸೂಚಿಸುತ್ತದೆ. ಇದನ್ನು “ದೇವರಿಂದ ಹೊಂದಿರುವ ಬೋಧನೆಗಳು” ಅಥವಾ “ದೇವರು ನಮಗೆ ಬೋಧಿಸುವ ವಿಷಯಗಳು” ಎಂದೂ ಅನುವಾದ ಮಾಡಬಹುದು.
  • “ನಿಮಗೆ ಕಲಿಸಿದ ವಿಷಯಗಳು” ಎನ್ನುವ ಮಾತನ್ನು “ಈ ಜನರು ನಿಮಗೆ ಕಲಿಸಿದ ವಿಷಯಗಳು” ಅಥವಾ “ದೇವರು ನಿಮಗೆ ಕಲಿಸಿದ ವಿಷಯಗಳು” ಎಂದು ಸಂದರ್ಭಾನುಸಾರವಾಗಿ ಅನುವಾದ ಮಾಡಬಹುದು.
  • “ಬೋಧಿಸು” ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಹೇಳು” ಅಥವಾ “ವಿವರಿಸು” ಅಥವಾ “ಸೂಚಿಸು” ಎನ್ನುವ ಪದಗಳು ಒಳಗೊಂಡಿರುತ್ತವೆ.
  • ಅನೇಕಬಾರಿ ಈ ಪದವನ್ನು “ದೇವರ ಕುರಿತಾಗಿ ಜನರಿಗೆ ಬೋಧನೆ ಮಾಡುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಸೂಚಿಸು, ಬೋಧಕ, ದೇವರ ವಾಕ್ಯ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H502, H2094, H2449, H3045, H3046, H3256, H3384, H3925, H3948, H7919, H8150, G1317, G1321, G1322, G2085, G2605, G2727, G3100, G2312, G2567, G3811, G4994

ಭಯಭಕ್ತಿ ತೋರು, ಭಯಭಕ್ತಿ ತೋರಿಸಲಾಗಿದೆ, ಪೂಜ್ಯಭಾವ, ಭಯಭಕ್ತಿಗಳು, ಭಕ್ತಿ

# ಪದದ ಅರ್ಥವಿವರಣೆ:

“ಪೂಜ್ಯಭಾವ” ಎನ್ನುವ ಪದವು ಯಾವುದಾದರೊಂದರ ಕುರಿತಾಗಿ ಅಥವಾ ಯಾರಾದರೊಬ್ಬರ ಕುರಿತಾಗಿ ಹೆಚ್ಚಿನ ಗೌರವದ, ಘನವಾದ ಭಾವನೆಗಳನ್ನು ಸೂಚಿಸುವುದು. * ಯಾವುದಾದರೊಂದಕ್ಕೆ ಅಥವಾ ಯಾರಾದರೊಬ್ಬರಿಗೆ “ಭಯಭಕ್ತಿ ತೋರು” ಎಂದರೆ ಆ ವ್ಯಕ್ತಿಗೆ ಅಥವಾ ಆ ವಸ್ತುವಿಗೆ ಪೂಜ್ಯಭಾವವನ್ನು ತೋರಿಸುವುದು ಎಂದರ್ಥ.

  • ಪೂಜ್ಯಕ್ಕೆ ಅರ್ಹವಾದ ವ್ಯಕ್ತಿಯನ್ನು ಘನಪಡಿಸುವ ಭಯಭಕ್ತಿಯ ಭಾವನೆಗಳು ಕ್ರಿಯೆಗಳಲ್ಲಿ ಕಾಣಿಸಿಕೊಳ್ಳುತ್ತವೆ.
  • ಕರ್ತನಲ್ಲಿ ಭಯಭಕ್ತಿ ಎಂದರೆ ದೇವರ ಆಜ್ಞೆಗಳಿಗೆ ವಿಧೇಯತೆ ತೋರಿಸುವುದರಲ್ಲಿ ಅಂತಃಹ ಪೂಜ್ಯಭಾವನೆಯು ತನ್ನಷ್ಟಕ್ಕೆ ಅದೇ ತೋರಿಕೆಯಾಗಿರುತ್ತದೆ.
  • ಈ ಪದವನ್ನು “ಭಯ ಮತ್ತು ಘನಪಡಿಸುವುದು” ಅಥವಾ “ಪ್ರಾಮಾಣಿಕ ಗೌರವ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಭಯ, ಘನಪಡಿಸು, ವಿಧೇಯತೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3372, H3373, H3374, H4172, H6342, H7812, G127, G1788, G2125, G2412, G5399, G5401

ಭಯಾನಕ, ಭಯಂಕರ, ಭೀಕರ, ಭೀಕರವಾಗಿ, ಗಾಬರಿಗೊಂಡಿದೆ, ಗಾಬರಿಗೊಳಿಸುತ್ತದೆ

# ಪದದ ಅರ್ಥವಿವರಣೆ:

“ಭಯಾನಕ” ಎನ್ನುವ ಪದವು ಭಯ ಅಥವಾ ಭಯೋತ್ಪಾದನೇಯ ಬಹಳ ತೀವ್ರ ಭಾವನೆಯನ್ನು ಸೂಚಿಸುತ್ತದೆ. ಒಬ್ಬ ವ್ಯಕ್ತಿ ಭಯಾನಕವಾದ ಭಾವನೆಯನ್ನು ಹೊಂದಿದ್ದರೆ, ಅದನ್ನು “ಗಾಬರಿ ಹೊಂದುತ್ತಿದ್ದಾನೆ” ಎಂದರ್ಥ.

  • ಭಯಾನಕ ಎನ್ನುವುದು ಸಾಧಾರಣವಾದ ಭಯಕ್ಕಿಂತ ತುಂಬಾ ತೀವ್ರವಾದ ರೀತಿಯಲ್ಲಿ ನರಳುವ ಸ್ಥಿತಿಯನ್ನು ಹೊಂದಿರುತ್ತದೆ.
  • ಸಾಧಾರಣವಾಗಿ ಒಬ್ಬರು ಗಾಬರಿಗೊಂಡಾಗ, ಅವರು ಆಘಾತದಲ್ಲಿರುತ್ತಾರೆ ಅಥವಾ ದಿಗ್ಭ್ರಾಂತಿಗೆ ಒಳಗಾಗಿರುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ಭಯ, ಭಯೋತ್ಪಾದನೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H367, H1091, H1763, H2152, H2189, H4032, H4923, H5892, H6343, H6427, H7588, H8047, H8074, H8175, H8178, H8186

ಭರ್ಜಿ, ಭರ್ಜಿಗಳು, ಭಲ್ಲೆಯಗಾರ

# ಪದದ ಅರ್ಥವಿವರಣೆ:

ಭರ್ಜಿ ಎನ್ನುವುದು ಉದ್ದವಾದ ಕಟ್ಟಿಗೆಯ ತುದಿ ಭಾಗದಲ್ಲಿ ಚೂಪಾದ ಲೋಹದ ಕತ್ತಿಯನ್ನು ಹೊಂದಿರುವ ಸಾಧನವಾಗಿರುತ್ತದೆ, ಇದನ್ನು ದೂರಕ್ಕೆ ಎಸೆಯುವುದಕ್ಕೆ ಉಪಯೋಗಿಸುತ್ತಾರೆ.

  • ಸತ್ಯವೇದ ಕಾಲಗಳಲ್ಲಿ ಭರ್ಜಿಗಳನ್ನು ಯುದ್ಧದಲ್ಲಿ ಉಪಯೋಗಿಸುತ್ತಿದ್ದರು. ನಿರ್ದಿಷ್ಟವಾದ ಜನರ ಗುಂಪುಗಳ ಮಧ್ಯೆದಲ್ಲಿಯೂ ಈಗಿನ ಕಾಲದಲ್ಲಿ ಇನ್ನೂ ಅವುಗಳನ್ನು ಉಪಯೋಗಿಸುತ್ತಿದ್ದಾರೆ.
  • ಯೇಸುವನ್ನು ಶಿಲುಬೆಗೆ ಏರಿಸಿದನಂತರ ಯೇಸುವಿನ ಪಕ್ಕೆಯಲ್ಲಿ ತಿವಿಯುವುದಕ್ಕೆ ರೋಮಾ ಸೈನಿಕನು ಭರ್ಜಿಯನ್ನು ಉಪಯೋಗಿಸಿರುತ್ತಾನೆ.
  • ಕೆಲವೊಂದುಬಾರಿ ಜನರು ಭರ್ಜಿಗಳನ್ನು ಮೀನುಗಳನ್ನು ಹಿಡಿಯುವದಕ್ಕೆ ಎಸೆಯಲು ಅಥವಾ ಬೇರೊಂದು ಬೇಟಿಯಲ್ಲಿ ಆಹಾರಕ್ಕಾಗಿ ಎಸೆಯಲು ಉಪಯೋಗಿಸಿರುತ್ತಾರೆ.
  • ಇದಕ್ಕೆ ಸಮಾನವಾಗಿ “ಹಗುರಾದ ಈಟಿ” ಅಥವಾ “ಶೂಲ” ಎನ್ನುವ ಸಾಧನೆಗಳು ಇರುತ್ತವೆ.
  • ತಳ್ಳುವುದಕ್ಕೂ, ಅಥವಾ ತಿವಿಯುವುದಕ್ಕೂ, ಎಸೆಯುದಕ್ಕೆ ಉಪಯೋಗಿಸದ “ಖಡ್ಗ” ಎನ್ನುವ ಪದವು “ಭರ್ಜಿ” ಎನ್ನುವ ಪದವು ಬೇರೆ ಬೇರೆಯಾಗಿರುತ್ತದೆ, ಖಡ್ಗ ಎಂದರೆ ಉದ್ದವಾದ ಕತ್ತಿಯಾಗಿರುತ್ತದೆ, ಭರ್ಜಿ ಎನ್ನುವುದು ಬಾಣದಂತಿರುವ ಉದ್ದನೆಯ ಕಟ್ಟಿಗೆಯ ತುದಿಯ ಭಾಗದಲ್ಲಿ ಚಿಕ್ಕ ಕತ್ತಿಯನ್ನು ಹೊಂದಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಬೇಟೆ, ರೋಮ್, ಖಡ್ಗ, ಯೋಧನು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1265, H2595, H3591, H6767, H7013, H7420, G3057

ಭವಿಷ್ಯಜ್ಞಾನ, ಮಾಂತ್ರಿಕ, ಕಣಿ ಹೇಳುವುದು, ಕಣಿ ಹೇಳುವವರು

# ಪದದ ಅರ್ಥವಿವರಣೆ:

“ಭವಿಷ್ಯಜ್ಞಾನ” ಮತ್ತು “ಕಣಿ ಹೇಳುವುದು” ಎನ್ನುವ ಪದಗಳು ಪ್ರಕೃತಾತೀತವಾದ ಪ್ರಪಂಚದಲ್ಲಿ ಆತ್ಮಗಳಿಂದ ಸಮಾಚಾರವನ್ನು ಹೊಂದಿಕೊಳ್ಳುವುದಕ್ಕೆ ಪ್ರಯತ್ನಪಡುವುದನ್ನು ಸೂಚಿಸುತ್ತದೆ. ಕೆಲವೊಂದು ಈ ಅಭ್ಯಾಸವನ್ನು ಮಾಡುವ ವ್ಯಕ್ತಿಯನ್ನು “ಮಾಂತ್ರಿಕ” ಅಥವಾ “ಕಣಿ ಹೇಳುವವನು” ಎಂದು ಕರೆಯುತ್ತಾರೆ.

  • ಹಳೇ ಒಡಂಬಡಿಕೆಯಲ್ಲಿ ಭವಿಷ್ಯ ಹೇಳಿಸಿಕೊಳ್ಳುವುದನ್ನು ಅಥವಾ ಕಣಿ ಹೇಳುವುದನ್ನು ಅಭ್ಯಾಸ ಮಾಡಬಾರದೆಂದು ದೇವರು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದ್ದರು.
  • ಊರೀಮ್ ಮತ್ತು ತುಮ್ಮೀಮ್.ಗಳನ್ನು ಉಪಯೋಗಿಸುವುದರ ಮೂಲಕ ದೇವರಿಂದ ಸಮಾಚಾರ ಹೊಂದುವುದಕ್ಕೆ ಎದುರುನೋಡಬೇಕೆಂದು ದೇವರು ತನ್ನ ಜನರಿಗೆ ಅನುಮತಿಯನ್ನು ಕೊಟ್ಟಿದ್ದರು, ಆ ಉದ್ದೇಶಕ್ಕಾಗಿಯೇ ಮಹಾ ಯಾಜಕನ ಮೂಲಕ ಉಪಯೋಗಿಸುವುದಕ್ಕೆ ದೇವರು ತಯಾರು ಮಾಡಿಕೊಟ್ಟಿರುವ ಕಲ್ಲುಗಳಾಗಿದ್ದವು. ಆದರೆ ಆತನು ತನ್ನ ಜನರಿಗೆ ದುರಾತ್ಮಗಳಿಂದ ಸಮಾಚಾರವನ್ನು ಹೊಂದುವುದಕ್ಕೆ ಅನುಮತಿ ನೀಡಲಿಲ್ಲ.
  • ಅನ್ಯ ಮಾಂತ್ರಿಕರು ಆತ್ಮ ಪ್ರಪಂಚದಿಂದ ಸಮಾಚಾರವನ್ನು ಕಂಡುಕೊಳ್ಳಲು ಪ್ರಯತ್ನಿಸುವ ವಿವಿಧ ವಿಧಾನಗಳನ್ನು ಉಪಯೋಗಿಸುತ್ತಿದ್ದರು. ಕೆಲವೊಂದುಬಾರಿ ಅವರು ಭೂಮಿಯ ಮೇಲೆ ಪ್ರಾಣಿಯ ಎಲುಬುಗಳಿಂದ ಅಥವಾ ಸತ್ತಂತ ಪ್ರಾಣಿಯ ಒಳಭಾಗಗಳಿಂದ ಪರೀಕ್ಷೆ ಮಾಡುತ್ತಾರೆ, ಅವರ ಸುಳ್ಳು ದೇವರುಗಳಿಂದ ಬಂದ ಸಂದೇಶಗಳಂತೆ ಅವರು ಅರ್ಥವಿವರಣೆ ಹೇಳುವುದಕ್ಕೆ ನಮೂನೆಗಳಿಗಾಗಿ ಎದುರುನೋಡುತ್ತಾರೆ.
  • ಹೊಸ ಒಡಂಬಡಿಕೆಯಲ್ಲಿ ಯೇಸು ಮಾತು ಅಪೊಸ್ತಲರು ಕೂಡ ಭವಿಷ್ಯಜ್ಞಾನ ತಿಳಿದುಕೊಳ್ಳುವುದನ್ನು, ಮಾಟಗಾತಿಯನ್ನು, ಮಾಟಮಂತ್ರವನ್ನು ಮತ್ತು ಮಾಯಾಜಾಲವನ್ನು ತಿರಸ್ಕಾರ ಮಾಡಿದ್ದರು. ಈ ಎಲ್ಲಾ ಅಭ್ಯಾಸಗಳಲ್ಲಿ ದುರಾತ್ಮಗಳ ಶಕ್ತಿಯನ್ನು ಉಪಯೋಗಿಸುತ್ತಿದ್ದರು ಮತ್ತು ಇವೆಲ್ಲವೂ ದೇವರಿಂದ ಖಂಡಿಸಲ್ಪಟ್ಟಿದ್ದವು.

(ಈ ಪದಗಳನ್ನು ಸಹ ನೋಡಿರಿ : ಅಪೊಸ್ತಲ, ಸುಳ್ಳು ದೇವರು, ಮಾಯ, ಮಾಟಮಂತ್ರ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1870, H4738, H5172, H6049, H7080, H7081, G4436

ಭೂಮಿ, ಮಣ್ಣಿನಿಂದ ಮಾಡಿದ, ಲೋಕ

# ಪದದ ಅರ್ಥವಿವರಣೆ:

“ಭೂಮಿ” ಎನ್ನುವ ಪದವು ಎಲ್ಲಾ ಜೀವರಾಶಿಗಳೊಂದಿಗೆ ಮನುಷ್ಯರು ಜೀವಿಸುವ ಪ್ರಪಂಚವನ್ನು ಅಥವಾ ಲೋಕವನ್ನು ಸೂಚಿಸುತ್ತದೆ.

  • “ಭೂಮಿ” ಎನ್ನುವುದು ನೆಲದ ಮೇಲಿರುವ ಮಣ್ಣನ್ನು ಕೂಡ ಸೂಚಿಸುತ್ತದೆ.
  • ಭೂಮಿಯ ಮೇಲೆ ನಿವಾಸವಾಗಿರುವ ಜನರನ್ನು ಸೂಚಿಸುವುದಕ್ಕೆ ಈ ಪದವನ್ನು ಅನೇಕಬಾರಿ ಅಲಂಕಾರಿಕ ಭಾಷೆಯಲ್ಲಿ ಉಪಯೋಗಿಸಲಾಗುತ್ತದೆ. (ನೋಡಿರಿ: ಲಾಕ್ಷಣಿಕ ಪ್ರಯೋಗ
  • “ಭೂಮಿ ಸಂತೋಷವಾಗಿರಲಿ” ಮತ್ತು “ಆತನು ಭೂಮಿಗೆ ತೀರ್ಪು ಮಾಡುವನು” ಎನ್ನುವ ಮಾತುಗಳು ಈ ಪದವನ್ನು ಅಲಂಕಾರಿಕ ಮಾತುಗಳಲ್ಲಿ ಉಪಯೋಗಿಸುವುದಕ್ಕೆ ಉದಾಹರಣೆಗಳಾಗಿರುತ್ತವೆ.
  • “ಲೋಕ” ಎನ್ನುವ ಪದವನ್ನು ಸಹಜವಾಗಿ ಆತ್ಮೀಯಕ ವಿಷಯಗಳಿಗೆ ವಿರುದ್ಧವಾಗಿರುವ ಭೌತಿಕ ವಿಷಯಗಳನ್ನು ಸೂಚಿಸುತ್ತದೆ.

# ಅನುವಾದ ಸಲಹೆಗಳು:

  • ಈ ಪದವನ್ನು ಅಥವಾ ಈ ಮಾತನ್ನು ನಾವು ನಿವಾಸವಾಗಿರುವ ಈ ಭೂ ಗ್ರಹವನ್ನು ಸೂಚಿಸುವದಕ್ಕೆ ಸ್ಥಳೀಯ ಅಥವಾ ಜಾತೀಯ ಭಾಷೆಗಳಲ್ಲಿ ಉಪಯೋಗಿಸುವ ಪದದಿಂದ ಅಥವಾ ಮಾತಿನಿಂದ ಅನುವಾದ ಮಾಡಬಹುದು.
  • ಸಂದರ್ಭಾನುಸಾರವಾಗಿ, “ಭೂಮಿ” ಎನ್ನುವ ಪದವನ್ನು “ಲೋಕ” ಅಥವಾ “ನೆಲ” ಅಥವಾ “ಧೂಳಿ” ಅಥವಾ “ಮಣ್ಣು” ಎಂದೂ ಅನುವಾದ ಮಾಡಬಹುದು.
  • ಈ ಪದವನ್ನು ಅಲಂಕಾರಿಕ ರೂಪದಲ್ಲಿ ಉಪಯೋಗಿಸಿದಾಗ, “ಭೂಮಿ” ಎನ್ನುವದನ್ನು “ಭೂಮಿಯ ಮೇಲಿರುವ ಜನರು” ಅಥವಾ “ಭೂಮಿಯ ಮೇಲೆ ನಿವಾಸವಾಗಿರುವ ಜನರು” ಅಥವಾ “ಭೂಮಿಯ ಮೇಲಿರುವ ಸಮಸ್ತವು” ಎಂದೂ ಅನುವಾದ ಮಾಡಬಹುದು.
  • “ಲೋಕ” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ “ಭೌತಿಕತೆ” ಅಥವ “ಭೂಮಿಯ ಮೇಲಿರುವ ವಸ್ತುಗಳು” ಅಥವಾ “ದೃಶ್ಯವಾಗಿರುವ ವಿಷಯಗಳು” ಎನ್ನುವ ಮಾತುಗಳನ್ನು ಉಪಯೋಗಿಸುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ಆತ್ಮ, ಲೋಕ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H127, H772, H776, H778, H2789, H3007, H3335, H6083, H7494, G1093, G1919, G2709, G2886, G3625, G3749, G4578, G5517

ಭೋಜನ ದ್ರವ್ಯ, ಭೋಜನ ದ್ರವ್ಯಗಳು, ಭೋಜನ ನೈವೇದ್ಯಗಳು

# ಪದದ ಅರ್ಥವಿವರಣೆ:

“ಭೋಜನ ನೈವೇದ್ಯ” ಅಥವಾ “ಭೋಜನ ದ್ರವ್ಯ” ಎನ್ನುವ ಮಾತು ಧಾನ್ಯಗಳ ಹಿಟ್ಟಿನಿಂದ ಮಾಡಿದ ರೊಟ್ಟಿ ಅಥವಾ ಧಾನ್ಯಗಳ ರೂಪದಲ್ಲಿ ದೇವರಿಗೆ ಮಾಡುವ ಅರ್ಪಣೆಯಾಗಿರುತ್ತದೆ.

  • “ಭೋಜನ” ಎನ್ನುವ ಪದವು ಹಿಟ್ಟಾಗಿ ಮಾಡಿದ ಭೋಜನ ದ್ರವ್ಯವನ್ನು ಸೂಚಿಸುತ್ತದೆ.
  • ಈ ಹಿಟ್ಟಿನಲ್ಲಿ ನೀರನ್ನು ಹಾಕಿ ಬೆರೆಸುತ್ತಾರೆ ಅಥವಾ ಚಪಾತಿಗಳನ್ನು ಮಾಡುವುದಕ್ಕೆ ಹಿಟ್ಟಿಗೆ ಎಣ್ಣೆಯನ್ನು ಹಾಕುತ್ತಾರೆ. ಕೆಲವೊಂದುಬಾರಿ ರೊಟ್ಟಿಯ ಮೇಲ್ಭಾಗದಲ್ಲಿ ಎಣ್ಣೆಯನ್ನು ಹಚ್ಚುತ್ತಾರೆ.
  • ಈ ರೀತಿಯಾದ ಅರ್ಪಣೆಯನ್ನು ಸಾಧಾರಣವಾಗಿ ದಹನ ಬಲಿ ಮಾಡುವಾಗ ಅರ್ಪಿಸುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ದಹನ ಬಲಿ, ಧಾನ್ಯ, ಸರ್ವಾಂಗಹೋಮ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H4503, H8641

ಭ್ರಷ್ಟ, ಭ್ರಷ್ಟು ಪಡಿಸುತ್ತದೆ, ಭ್ರಷ್ಟರಾದರು, ಭ್ರಷ್ಟಾಚಾರ, ಅಪ್ರಾಮಾಣಿಕತೆ, ಭ್ರಷ್ಟಗೊಳಿಸಲಾಗದಿರುವಿಕೆ

# ಪದದ ಅರ್ಥವಿವರಣೆ:

“ಭ್ರಷ್ಟ” ಮತ್ತು “ಭ್ರಷ್ಟಾಚಾರ” ಎನ್ನುವ ಪದಗಳು ವ್ಯವಹಾರಗಳ ಸ್ಥಿತಿಯನ್ನು ಸೂಚಿಸುತ್ತದೆ, ಇದರಲ್ಲಿ ಜನರು ಕೆಟ್ಟುಹೋಗಿರುತ್ತಾರೆ, ಅನೈತಿಕವಾಗಿ ನಡೆದುಕೊಳ್ಳುತ್ತಾರೆ ಅಥವಾ ಅಪ್ರಾಮಾಣಿಕರಾಗಿ ನಡೆದುಕೊಳ್ಳುತ್ತಾರೆ.

  • “ಭ್ರಷ್ಟ” ಎನ್ನುವ ಪದಕ್ಕೆ ಅಕ್ಷರಾರ್ಥವೇನೆಂದರೆ ನೈತಿಕವಾಗಿ “ಕೆಟ್ಟುಹೋಗುವುದು” ಅಥವಾ “ಬಾಗುವುದು” ಎಂದರ್ಥ.
  • ಭ್ರಷ್ಟನಾದ ಒಬ್ಬ ವ್ಯಕ್ತಿ ಸತ್ಯದಿಂದ ತೊಲಗಿಹೋಗಿದ್ದಾನೆ ಮತ್ತು ಅವನು ಅನೈತಿಕವಾದ ಕ್ರಿಯೆಗಳನ್ನು ಅಥವಾ ಕೆಟ್ಟ ಕಾರ್ಯಗಳನ್ನು ಮಾಡುತ್ತಾ ಇರುತ್ತಾನೆ.
  • ಇನ್ನೊಬ್ಬರನ್ನು ಭ್ರಷ್ಟನಾಗುವಂತೆ ಮಾಡುವುದು ಎಂದರೆ ಒಬ್ಬ ವ್ಯಕ್ತಿಯನ್ನು ಕೆಟ್ಟ ಕಾರ್ಯಗಳನ್ನು ಮತ್ತು ಅನೈತಿಕ ಕಾರ್ಯಗಳನ್ನು ಮಾಡುವುದಕ್ಕೆ ಪ್ರಭಾವಗೊಳಿಸು ಎಂದರ್ಥ.

# ಅನುವಾದ ಸಲಹೆಗಳು:

  • “ಭ್ರಷ್ಟ” ಎನ್ನುವ ಪದವನ್ನು “ದುಷ್ಟ ಕಾರ್ಯವನ್ನು ಮಾಡಲು ಪ್ರಭಾವಗೊಳಿಸು” ಅಥವಾ “ಅನೈತಿಕತೆಯಿಂದ ನಡೆದುಕೊಳ್ಳುವುದಕ್ಕೆ ಕಾರಣವಾಗು” ಎಂದರ್ಥ.
  • ಭ್ರಷ್ಟನಾದ ಒಬ್ಬ ವ್ಯಕ್ತಿಯನ್ನು “ಅನೈತಿಕವಾದ ವ್ಯಕ್ತಿ” ಅಥವಾ “ದುಷ್ಟ ಕಾರ್ಯಗಳನ್ನು ಮಾಡುವ ವ್ಯಕ್ತಿ” ಎಂದು ವಿವರಸಲಾಗುತ್ತದೆ.
  • ಈ ಪದವನ್ನು “ಕೆಟ್ಟ” ಅಥವಾ “ಅನೈತಿಕತೆ” ಅಥವಾ “ದುಷ್ಟತ್ವ” ಎಂದೂ ಅನುವಾದ ಮಾಡುತ್ತಾರೆ.
  • “ಭ್ರಷ್ಟಾಚಾರ” ಎನ್ನುವ ಪದವನ್ನು “ದುಷ್ಟ ಕಾರ್ಯಗಳನ್ನು ಮಾಡುವುದು” ಅಥವಾ “ದುಷ್ಟ” ಅಥವಾ “ಅನೈತಿಕತೆ” ಎಂದೂ ಅನುವಾದ ಮಾಡುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ದುಷ್ಟ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1097, H1605, H2254, H2610, H4167, H4743, H4889, H4893, H7843, H7844, H7845, G853, G861, G862, G1311, G1312, G2585, G2704, G4550, G4595, G5349, G5351, G5356

ಮಂತ್ರ, ಮಂತ್ರವಾಗಿರುವ, ಮಾಂತ್ರಿಕ, ಜೋಯಿಸರು

# ಪದದ ಅರ್ಥವಿವರಣೆ:

“ಮಂತ್ರ” ಎನ್ನುವ ಪದವು ದೇವರಿಂದ ಬರದಂತಹ ಪ್ರಕೃತಾತೀತವಾದ ಶಕ್ತಿಯನ್ನು ಉಪಯೋಗಿಸುವ ಅಭ್ಯಾಸ ಮಾಡುವುದನ್ನು ಸೂಚಿಸುತ್ತದೆ. “ಮಾಂತ್ರಿಕನು” ಎಂದರೆ ಮಂತ್ರ ವಿದ್ಯೆಯನ್ನು ಅಭ್ಯಾಸ ಮಾಡುವವನನ್ನು ಸೂಚಿಸುತ್ತದೆ.

  • ಐಗುಪ್ತದಲ್ಲಿ ಮೋಶೆಯನ ಮೂಲಕ ದೇವರು ಅನೇಕ ಅದ್ಭುತಗಳನ್ನು ಮಾಡುವುದರ ಮೂಲಕ, ಐಗುಪ್ತ ಫರೋಹನ ಜೋಯಿಸರು ದೇವರು ಮಾಡಿದ ಕೆಲವೊಂದು ಕಾರ್ಯಗಳನ್ನು ಮಾಡಿದರು, ಆದರೆ ಅವರ ಶಕ್ತಿ ದೇವರಿಂದ ಬಂದಿರುವುದಿಲ್ಲ.
  • ಮಂತ್ರವು ಅನೇಕಸಲ ಪ್ರಕೃತಾತೀತವಾದ ಕಾರ್ಯವನ್ನು ಮಾಡುವುದಕ್ಕೆ ನುಡಿಯುವುದು ಅಥವಾ ಕೆಲವೊಂದು ಪದಗಳನ್ನು ಪದೇಪದೇ ಹೇಳುವುದೂ ಆಗಿರುತ್ತದೆ.
  • ಈ ರೀತಿಯ ಮಂತ್ರ ವಿದ್ಯೆಗಳನ್ನು ಅಥವಾ ಕಣಿ ಹೇಳುವುದನ್ನು ಅಭ್ಯಾಸ ಮಾಡಬಾರದೆಂದು ದೇವರು ತನ್ನ ಜನರಿಗೆ ಆಜ್ಞಾಪಿಸಿದರು.
  • ಮಾಂತ್ರಿಕನು ಜೋಯಿಸರಲ್ಲಿ ಒಬ್ಬನಾಗಿರುತ್ತಾನೆ, ಇತರರಿಗೆ ಹಾನಿ ಮಾಡುವುದಕ್ಕೆ ಮಂತ್ರವನ್ನು ಉಪಯೋಗಿಸುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಕಣಿ ಹೇಳುವುದು, ಐಗುಪ್ತ, ಫರೋಹ, ಶಕ್ತಿ, ಮಾಂತ್ರಿಕ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2748, H2749, H3049, G3097

ಮದ್ಯ, ದ್ರಾಕ್ಷರಸ, ದ್ರಾಕ್ಷರಸ ಬುದ್ದಲಿ, ದ್ರಾಕ್ಷರಸ ಬುದ್ದಲಿಗಳು, ಹೊಸ ದ್ರಾಕ್ಷಾರಸ

# ಪದದ ಅರ್ಥವಿವರಣೆ:

ಸತ್ಯವೇದದಲ್ಲಿ “ಮದ್ಯ” ಎನ್ನುವ ಪದವನ್ನು ದ್ರಾಕ್ಷಿಗಳು ಎಂದು ಕರೆಯಲ್ಪಡುವ ಹಣ್ಣುಗಳ ರಸದಿಂದ ಮಾಡಿದ ಹುದುಗಿದ ಪಾನೀಯವನ್ನು ಸೂಚಿಸುತ್ತದೆ. ಮದ್ಯಪಾನೀಯವನ್ನು “ದ್ರಾಕ್ಷರಸ ಬುದ್ದಲಿಗಳಲ್ಲಿ” ಸೇಕರಿಸಿ ಇಡುತ್ತಿದ್ದರು, ಈ ಬುದ್ದಲಿಗಳನ್ನು ಪ್ರಾಣಿಯ ಚರ್ಮಗಳಿಂದ ತಯಾರುಸಿದ್ದರು.

  • “ಹೊಸ ದ್ರಾಕ್ಷಾರಸ” ಎನ್ನುವ ಮಾತನ್ನು ದ್ರಾಕ್ಷೆಗಳಿಂದ ಮಾಡಿದ ದ್ರಾಕ್ಷರಸವನ್ನು ಮತ್ತು ಹುದುಗಿಸದ ರಸವನ್ನು ಸೂಚಿಸುತ್ತದೆ. ಕೆಲವೊಂದುಬಾರಿ “ದ್ರಾಕ್ಷಾರಸ” ಎನ್ನುವ ಪದವನ್ನು ಹುದುಗಿಸದ ದ್ರಾಕ್ಷರಸವನ್ನೂ ಸೂಚಿಸುತ್ತದೆ.
  • ದ್ರಾಕ್ಷಾರಸವನ್ನು ತಯಾರಿಸುವುದಕ್ಕೆ ದ್ರಾಕ್ಷಿಗಳನ್ನು ದ್ರಾಕ್ಷಾರಸ ಗಾಣದಲ್ಲಿ ತುಳಿಸಿ, ಅದರಿಂದ ರಸವನ್ನು ಹೊರ ತೆಗೆಯುತ್ತಾರೆ. ಕೊನೆಗೆ ರಸವನ್ನು ಹುದುಗಿಸಿ, ಅದರಲ್ಲಿ ಮದ್ಯವನ್ನುಂಟು ಮಾಡುತ್ತಾರೆ.
  • ಸತ್ಯವೇದ ಕಾಲದಲ್ಲಿ ದ್ರಾಕ್ಷಾರಸವು ಊಟ ಮಾಡುವ ಸಮಯದಲ್ಲಿ ಸಾಧಾರಣವಾದ ಪಾನೀಯವಾಗಿರುತ್ತದೆ. ಈಗಿನ ಕಾಲದಲ್ಲಿರುವ ಮದ್ಯಪಾನೀಯದಂತೆ ಹೆಚ್ಚಾದ ಮದ್ಯವನ್ನು ಆ ಕಾಲದಲ್ಲಿ ಇರುತ್ತಿಲ್ಲ.
  • ಊಟ ಮಾಡುವುದಕ್ಕೆ ದ್ರಾಕ್ಷರಸವನ್ನು ಇಡುವುದಕ್ಕೆ ಮುಂಚಿತವಾಗಿ, ಅದರಲ್ಲಿ ನೀರನ್ನು ಮಿಶ್ರಣ ಮಾಡುತ್ತಿದ್ದರು.
  • ಹಳೇ ಮತ್ತು ಪಡಸಾದ ದ್ರಾಕ್ಷಾರಸ ಬುದ್ದಲಿಯು ಅದರೊಳಗೆ ಒಡೆದು ಹೋಗುತ್ತದೆ, ಇದರಿಂದ ಅದರಲ್ಲಿರುವ ದ್ರಾಕ್ಷಾರಸವು ಸೋರು ಹೋಗುತ್ತದೆ. ಹೊಸ ದ್ರಾಕ್ಷಾರಸ ಬುದ್ದಲಿಗಳು ಮೃದುವಾಗಿ ಮತ್ತು ಮೆದುವಾಗಿ ಇರುತ್ತವೆ, ಅವು
  • ನಿಮ್ಮ ಸಂಸ್ಕೃತಿಯಲ್ಲಿ ದ್ರಾಕ್ಷರಸವು ಗೊತ್ತಿಲ್ಲದಿದ್ದರೆ, “ಹುದುಗಿದ ದ್ರಾಕ್ಷ ರಸ” ಅಥವಾ “ದ್ರಾಕ್ಷಿಗಳೆಂದು ಕರೆಯಲ್ಪಡುವ ಹಣ್ಣಿನಿಂದ ಮಾಡಲ್ಪಟ್ಟಿರುವ ಹುದುಗಿದ ಪಾನೀಯವಾಗಿರುತ್ತದೆ” ಅಥವಾ “ಹುದುಗಿದ ಹಣ್ಣಿನ ರಸ” ಎಂದೂ ಅನುವಾದ ಮಾಡಬಹುದು. (ನೋಡಿರಿ: ಗೊತ್ತಿಲ್ಲದವುಗಳನ್ನು ಹೇಗೆ ಅನುವಾದ ಮಾಡಬೇಕು
  • “ದ್ರಾಕ್ಷಾರಸ ಬುದ್ದಲಿ” ಎನ್ನುವ ಮಾತನ್ನು ಅನುವಾದ ಮಾಡುವ ವಿಧಾನದಲ್ಲಿ “ದ್ರಾಕ್ಷಾರಸಕ್ಕಾಗಿ ಮಾಡಿರುವ ಚೀಲ” ಅಥವಾ “ಪ್ರಾಣಿಯ ಚರ್ಮದ ದ್ರಾಕ್ಷಾರಸ ಚೀಲ” ಅಥವಾ “ದ್ರಾಕ್ಷಾರಸವನ್ನು ಸೇಕರಣೆ ಮಾಡುವುದಕ್ಕೆ ತಯಾರಿಸಿದ ಪ್ರಾಣಿಯ ಚರ್ಮದ ಚೀಲ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ದ್ರಾಕ್ಷಿ, ದ್ರಾಕ್ಷಿಬಳ್ಳಿ, ದ್ರಾಕ್ಷಿತೋಟ, ದ್ರಾಕ್ಷಾರಸ ಗಾಣ)

# ಸತ್ಯವೇದದ ಅನುಬಂಧ ವಾಕ್ಯಗಳು :

ಜಜ್ಜಲ್ಪಟ್ಟಿದೆ

# ಪದ ಡೇಟಾ:

  • Strong's: H2561, H2562, H3196, H4469, H4997, H5435, H6025, H6071, H8492, G1098, G3631, G3820, G3943

ಮಧ್ಯಸ್ಥ

# ಪದದ ಅರ್ಥವಿವರಣೆ:

ಮಧ್ಯಸ್ಥ ಎನ್ನುವುದು ಇಬ್ಬರು ಅಥವಾ ಹೆಚ್ಚಿನ ವ್ಯಕ್ತಿಗಳ ಮಧ್ಯೆದಲ್ಲಿ ಬಂದಿರುವ ಭಿನ್ನಭಿಪ್ರಾಯಗಳು ಅಥವಾ ಘರ್ಷಣೆಗಳನ್ನು ಪರಿಷ್ಕಾರ ಮಾಡುವುದಕ್ಕೆ ಸಹಾಯ ಮಾಡುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ. ಅವರೆಲ್ಲರು ಸಮಾಧಾನ ಹೊಂದುವಂತೆ ಅವನು ಅವರಿಗೆ ಸಹಾಯ ಮಾಡುತ್ತಾನೆ.

  • ಜನರು ಪಾಪ ಮಾಡಿದ್ದ ಕಾರಣದಿಂದ, ಅವರು ದೇವರ ಶತ್ರುಗಳಾಗಿ, ಆತನ ಕ್ರೋಧಕ್ಕೆ ಮತ್ತು ಶಿಕ್ಷೆಗೆ ಗುರಿಯಾಗಿರುತ್ತಾರೆ. ಪಾಪದ ಕಾರಣದಿಂದ ದೇವರು ಮತ್ತು ತನ್ನ ಜನರ ಮಧ್ಯೆದಲ್ಲಿರುವ ಸಂಬಂಧವು ಮುರಿದು ಹೋಗಿದೆ.
  • ತಂದೆಯಾದ ದೇವರಿಗೆ ಮತ್ತು ತನ್ನ ಜನರಿಗೆ ಮಧ್ಯೆದಲ್ಲಿ ಯೇಸುಕ್ರಿಸ್ತ ಮಧ್ಯಸ್ಥನಾಗಿದ್ದನು, ಜನರು ಮಾಡಿದ ಪಾಪಗಳಿಗೋಸ್ಕರ ಕ್ರಯಧನವಾಗಿ ತನ್ನ ಮರಣದ ಮೂಲಕ ಮುರಿದು ಹೋಗಿರುವ ಸಂಬಂಧವನ್ನು ತಿರುಗಿ ಪುನರ್ ಸ್ಥಾಪಿಸುವುದು.

# ಅನುವಾದ ಸಲಹೆಗಳು:

  • “ಮಧ್ಯಸ್ಥ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ, ‘ವ್ಯಕ್ತಿಯ ಮಧ್ಯೆದೊಳಗೆ ಹೋಗುವುದು” ಅಥವಾ “ಸಮಾಧಾನಪಡಿಸುವಾತನು” ಅಥವಾ “ಸಮಾಧಾನವನ್ನು ತೆಗೆದುಕೊಂಡು ಬರುವ ವ್ಯಕ್ತಿ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • ಈ ಪದವನ್ನು “ಯಾಜಕ” ಎನ್ನುವ ಪದಕ್ಕೆ ಹೋಲಿಸಿ ನೋಡಿರಿ. “ಮಧ್ಯಸ್ಥ” ಎನ್ನುವ ಪದವನ್ನು ಹೀಗೆಯೇ ಅನುವಾದ ಮಾಡುವುದು ಒಳ್ಳೇಯದು.

(ಈ ಪದಗಳನ್ನು ಸಹ ನೋಡಿರಿ : ಯಾಜಕ, ಸಮಾಧಾನಪಡಿಸುವುದು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3887, G3312, G3316

ಮನಃಪೂರ್ವಕವಾಗಿ ಕೊಡುವ ಕಾಣಿಕೆ

# ಪದದ ಅರ್ಥವಿವರಣೆ

ಮನಃಪೂರ್ವಕವಾಗಿ ಕೊಡುವ ಕಾಣಿಕೆ ಅಂದರೆ ಯೆಹೋವನಿಗೆ ಕೊಡುವ ಒಂದು ರೀತಿಯದ ಕಾಣಿಕೆಯಾಗಿತ್ತು ಅದು ಮೋಶೆಯ ಧರ್ಮಶಾಸ್ತ್ರದಲ್ಲಿ ಅವಶ್ಯಕತೆಯಿದ್ದಲ್ಲ. ಅದು ಒಬ್ಬ ವ್ಯಕ್ತಿಯ ವೈಯಕ್ತಿಕ ಇಚ್ಛೆಯಿಂದ ಕೊಡುವ ಅರ್ಪಣೆಯಾಗಿತ್ತು.

  • ಮನಃಪೂರ್ವಕವಾಗಿ ಕೊಡುವ ಕಾಣಿಕೆಯಲ್ಲಿ ಒಂದು ಪ್ರಾಣಿಯನ್ನು ಕೊಡಬೇಕೆಂದು ಬಯಸಿ ಅದರಲ್ಲಿ ಸ್ವಲ್ಪ ಕೊರತೆಗಳಿದ್ದರು ಅದು ವೈಯಕ್ತಿಕ ಇಚ್ಛೆಯಿಂದ ಕೊಡುವ ಕಾಣಿಕೆಯಾದಕಾರಣ ಅದು ಅಂಗೀಕರಿಸಲ್ಪಟ್ಟಿತು.
  • ಇಸ್ರಾಯೇಲ್ ಜನರು ಕೊಂಡಾಟದ ಔತಣವಾಗಿ ಬಲಿಯರ್ಪಿಸಿದ ಪ್ರಾಣಿಯ ಮಾಂಸವನ್ನು ತಿನ್ನುತ್ತಿದ್ದರು.
  • ಮನಃಪೂರ್ವಕವಾಗಿ ಕಾಣಿಕೆ ಕೊಟ್ಟಾಗ ಅದು ಇಸ್ರಾಯೇಲ್ ಜನರಿಗೆ ಸಂಬ್ರಮದ ಕಾರಣವಾಗಿತ್ತು ಯಾಕಂದರೆ ಕೊಯ್ಲು ಅಧಿಕವಾಗಿದ್ದು ಅವರಿಗೆ ಬೇಕಾದಷ್ಟು ಆಹಾರ ಬೆಳೆಯಿತೆಂದು ತೋರಿಸುತ್ತದೆ.
  • ಎಜ್ರನು ಬರೆದ ಪುಸ್ತಕದಲ್ಲಿ ದೇವಾಲಯವನ್ನು ಪುನಃ ನಿರ್ಮಿಸಲು ಮನಃಪೂರ್ವಕವಾಗಿ ಕೊಡುವ ಕಾಣಿಕೆಯ ಬೇರೊಂದು ರೂಪವನ್ನು ಕುರಿತು ಬರೆಯಲ್ಪಟ್ಟಿದೆ. ಈ ಕಾಣಿಕೆಯಲ್ಲಿ ಬೆಳ್ಳಿ, ಬಂಗಾರದ ಕಾಸುಗಳು, ಬಟ್ಟಲುಗಳು ಮತ್ತು ಬೆಳ್ಳಿ ಬಂಗಾರದಿಂದ ಮಾಡಲ್ಪಟ್ಟ ಅನೇಕ ವಸ್ತುಗಳನ್ನು ಕಾಣಿಕೆಗಳಾಗಿ ಕೊಟ್ಟರು.

(ಈ ಪದಗಳನ್ನು ಸಹ ನೋಡಿರಿ : ದಹನ ಬಲಿ, ಎಜ್ರ, ಔತಣ, ದಾನ್ಯಾರ್ಪಣೆ, ಅಪರಾದ ಪರಿಹಾರಾರ್ಥ ಬಲಿ, ಧರ್ಮಶಾಸ್ತ್ರ, ದೋಷಪರಿಹಾರಕ ಬಲಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H5068, H5071

ಮನಸ್ಸು, ಮನಸ್ಸುಗಳು, ಮನಸ್ಸಿನಲ್ಲಿಡಲಾಗಿದೆ, ಜ್ಞಾಪಿಸು, ನೆನಪಿಸುತ್ತದೆ, ಜ್ಞಾಪಕ ಮಾಡಲಾಗಿದೆ, ಜ್ಞಾಪಕ, ಜ್ಞಾಪನೆಗಳು, ಜ್ಞಾಪಿಸುವುದು, ಒಂದೇ ಮನಸ್ಸುಳ್ಳವರು

# ಪದದ ಅರ್ಥವಿವರಣೆ:

“ಮನಸ್ಸು” ಎನ್ನುವ ಪದವು ಆಲೋಚನೆ ಮಾಡುವ ಮತ್ತು ನಿರ್ಣಯಗಳನ್ನು ತೆಗೆದುಕೊಳ್ಳುವ ಒಬ್ಬ ವ್ಯಕ್ತಿಯ ಭಾಗವಾಗಿರುತ್ತದೆ.

  • ಪ್ರತಿಯೊಬ್ಬರ ಮನಸ್ಸು ಎನ್ನುವುದು ಅವನ ಅಥವಾ ಆಕೆಯ ಸಂಪೂರ್ಣವಾದ ಆಲೋಚನೆಗಳು ಮತ್ತು ಕಾರಣಗಳೂ ಆಗಿರುತ್ತವೆ.
  • “ಕ್ರಿಸ್ತನ ಮನಸ್ಸನ್ನು ಹೊಂದಿರುವುದು” ಎಂದರೆ ಯೇಸುಕ್ರಿಸ್ತ ಯಾವರೀತಿ ಆಲೋಚನೆ ಮಾಡುತ್ತಾನೋ ಮತ್ತು ಯಾವರೀತಿ ನಡೆದುಕೊಳ್ಳುತ್ತಾನೋ ಅದೇರೀತಿ ಆಲೋಚನೆ ಮಾಡಿ, ನಡೆದುಕೊಳ್ಳುವುದು ಎಂದರ್ಥ. ಈ ಮಾತಿಗೆ ಪವಿತ್ರಾತ್ಮನ ಶಕ್ತಿಯ ಮೂಲಕ ಈ ರೀತಿ ಜೀವನ ಮಾಡುವುದಕ್ಕೆ ಬಲವನ್ನು ಹೊಂದಿರಲು ಕ್ರಿಸ್ತನ ಬೋಧನೆಗಳಿಗೆ ವಿಧೇಯತೆ ತೋರಿಸುವುದು, ತಂದೆಯಾದ ದೇವರಿಗೆ ವಿಧೇಯತೆ ತೋರಿಸುವುದು ಎಂದರ್ಥ.
  • “ತನ್ನ ಮನಸ್ಸನ್ನು ಮಾರ್ಪಾಟು ಮಾಡಿಕೊಳ್ಳುವುದು” ಎಂದರೆ ಒಬ್ಬ ವ್ಯಕ್ತಿ ವಿಭಿನ್ನವಾದ ನಿರ್ಣಯವನ್ನು ಮಾಡುವುದು ಅಥವಾ ಆ ವ್ಯಕ್ತಿ ಮುಂದಿನ ನಿರ್ಣಯಗಿಂತಲೂ ಈಗ ಬೇರೊಂದು ನಿರ್ಣಯವನ್ನು ಮಾಡಿಕೊಳ್ಳುವುದು ಎಂದರ್ಥ.

# ಅನುವಾದ ಸಲಹೆಗಳು:

  • “ಮನಸ್ಸು” ಎನ್ನುವ ಪದವನ್ನು “ಆಲೋಚನೆಗಳು” ಅಥವಾ “ಕಾರಣ ಹೇಳುವುದು” ಅಥವಾ “ಚಿಂತನೆ” ಅಥವಾ “ಅರ್ಥಮಾಡಿಕೊಳ್ಳುವುದು” ಎಂದೂ ಅನುವಾದ ಮಾಡಬಹುದು.
  • “ಮನಸ್ಸಿನಲ್ಲಿಡು” ಎನ್ನುವ ಮಾತನ್ನು “ನೆನಪಿಡು” ಅಥವಾ “ಇದಕ್ಕೆ ಆಸಕ್ತಿಯನ್ನು ತೋರಿಸು” ಅಥವಾ “ಇದನ್ನು ಖಚಿತವಾಗಿ ತಿಳಿದುಕೋ” ಎಂದೂ ಅನುವಾದ ಮಾಡಬಹುದು.
  • “ಹೃದಯ, ಪ್ರಾಣ ಮತ್ತು ಮನಸ್ಸು” ಎನ್ನುವ ಮಾತನ್ನು “ನೀನು ಏನು ಭಾವಿಸುತ್ತಿದ್ದೀಯ, ಏನು ನಂಬುತ್ತಿದ್ದೀಯ ಮತ್ತು ನೀನು ಏನು ಆಲೋಚನೆ ಮಾಡುತ್ತಿದ್ದೀಯ” ಎಂದು ಅನುವಾದ ಮಾಡಬಹುದು.
  • “ಮನಸ್ಸಿನಲ್ಲಿಡಲು ಕರೆ” ಎನ್ನುವ ಮಾತನ್ನು “ಜ್ಞಾಪಿಸಿಕೋ” ಅಥವಾ “ಅದರ ಕುರಿತಾಗಿ ಆಲೋಚನೆ ಮಾಡು” ಎಂದೂ ಅನುವಾದ ಮಾಡಬಹುದು.
  • “ತನ್ನ ಮನಸ್ಸು ಮಾರ್ಪಾಟು ಮಾಡಿಕೊಂಡು, ಹೋದನು” ಎನ್ನುವ ಮಾತನ್ನು “ವಿಭಿನ್ನವಾಗಿ ನಿರ್ಣಯಿಸಿಕೊಂಡು, ಹೋದನು” ಅಥವಾ “ಎಲ್ಲಾ ಆದನಂತರ ಹೋಗುವುದಕ್ಕೆ ನಿರ್ಣಯಿಸಿಕೊಂಡನು” ಅಥವಾ “ತನ್ನ ಅಭಿಪ್ರಾಯವನ್ನು ಮಾರ್ಪಡಿಸಿಕೊಂಡು, ಹೋದನು” ಎಂದು ಅನುವಾದ ಮಾಡಬಹುದು.
  • “ದ್ವಂದ್ವ-ಮನಸ್ಸು” ಎನ್ನುವ ಮಾತನ್ನು “ಅನುಮಾನಪಡುವುದು” ಅಥವಾ “ನಿರ್ಣಯ ತೆಗೆದುಕೊಳ್ಳದಿರುವುದು” ಅಥವಾ “ಸಂಘರ್ಷದ ಆಲೋಚನೆಗಳೊಂದಿಗೆ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ನಂಬು, ಹೃದಯ, ಪ್ರಾಣ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3629, H3820, H3824, H5162, H7725, G1271, G1374, G3328, G3525, G3540, G3563, G4993, G5590

ಮನೆ, ಮನೆಗಳು, ಮೇಲ್ಛಾವಣಿ, ಮನೆಮೆಟ್ಟಿಲುಗಳು, ಕಣಜ, ಕಣಜಗಳು, ಮನೆಯಾಳುಗಳು

# ಪದದ ಅರ್ಥವಿವರಣೆ:

“ಮನೆ” ಎನ್ನುವ ಪದವನ್ನು ಅನೇಕಬಾರಿ ಸತ್ಯವೇದದಲ್ಲಿ ಅಲಂಕಾರಿಕವಾಗಿ ಉಪಯೋಗಿಸಿದ್ದಾರೆ.

  • ಕೆಲವೊಂದುಬಾರಿ ಇದಕ್ಕೆ “ಮನೆಯ ಸದಸ್ಯರು” ಎಂದರ್ಥ, ಅಂದರೆ ಒಂದು ಮನೆಯಲ್ಲಿ ವಾಸಿಸುವ ಜನರನ್ನು ಸೂಚಿಸುತ್ತದೆ.
  • “ಮನೆ” ಎನ್ನುವ ಪದವು ಅನೇಕಬಾರಿ ಒಬ್ಬ ವ್ಯಕ್ತಿಯ ವಂಶಸ್ಥರನ್ನು ಅಥವಾ ಇತರ ಬಂಧುಮಿತ್ರರನ್ನು ಸೂಚಿಸುತ್ತದೆ. ಉದಾಹರಣೆಗೆ, “ದಾವೀದನ ಮನೆ” ಎನ್ನುವ ಮಾತು ಅರಸನಾದ ದಾವೀದನ ಎಲ್ಲಾ ವಂಶಸ್ಥರನ್ನು ಸೂಚಿಸುತ್ತದೆ.
  • “ದೇವರ ಮನೆ” ಮತ್ತು “ಯೆಹೋವನ ಮನೆ” ಎನ್ನುವ ಪದಗಳು ಗುಡಾರವನ್ನಾಗಲಿ ಅಥವಾ ದೇವಾಲಯವನ್ನಾಗಲಿ ಸೂಚಿಸುತ್ತದೆ. ಈ ಮಾತುಗಳು ಸಾಧಾರಣವಾಗಿ ದೇವರು ನಿವಾಸವಾಗಿರುವ ಅಥವ ದೇವರು ಇರುವ ಸ್ಥಳವನ್ನು ಕೂಡ ಸೂಚಿಸುತ್ತವೆ.
  • ಇಬ್ರಿ 3ನೇ ಅಧ್ಯಾಯದಲ್ಲಿ “ದೇವರ ಮನೆ” ಎಂದು ಉಪಗೋಗಿಸಿರುವ ಅಲಂಕಾರಿಕ ಪದವು ದೇವರ ಜನರನ್ನು ಅಥವಾ ದೇವರಿಗೆ ಸಂಬಂಧಪಟ್ಟ ಪ್ರತಿಯೊಂದನ್ನು ಸೂಚಿಸುತ್ತದೆ.
  • “ಇಸ್ರಾಯೇಲ್ ಮನೆ” ಎನ್ನುವ ಮಾತು ಸಾಧಾರಣವಾಗಿ ಇಸ್ರಾಯೇಲ್ ದೇಶವನ್ನೆಲ್ಲಾ ಅಥವಾ ವಿಶೇಷವಾಗಿ ಇಸ್ರಾಯೇಲ್ ಉತ್ತರ ರಾಜ್ಯದಲ್ಲಿರುವ ಎಲ್ಲಾ ಕುಲಗಳನ್ನು ಸೂಚಿಸುತ್ತದೆ.

# ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ, “ಮನೆ” ಎನ್ನುವದನ್ನು “ಕುಟುಂಬ ಸದಸ್ಯರು” ಅಥವಾ “ಜನರು” ಅಥವಾ “ಕುಟುಂಬ” ಅಥವಾ “ಸಂತಾನದವರು” ಅಥವಾ “ದೇವಾಲಯ” ಅಥವಾ “ನಿವಾಸವಾಗಿರುವ ಸ್ಥಳ” ಎಂದೂ ಅನುವಾದ ಮಾಡಬಹುದು.
  • “ದಾವೀದನ ಮನೆ” ಎನ್ನುವ ಮಾತನ್ನು “ದಾವೀದನ ವಂಶದವರು” ಅಥವಾ “ದಾವೀದನ ಕುಟುಂಬ” ಅಥವಾ “ದಾವೀದನ ವಂಶದವರು” ಎಂದೂ ಅನುವಾದ ಮಾಡಬಹುದು. ಸಂಬಂಧಪಟ್ಟ ಮಾತುಗಳು ಇದೇ ಮಾತುಗಳ ವಿಧಾನದಲ್ಲಿ ಅನುವಾದ ಮಾಡಬಹುದು.
  • “ಇಸ್ರಾಯೇಲ್ ಮನೆ” ಎನ್ನುವ ಮಾತನ್ನು ಅನುವಾದ ಮಾಡುವ ವಿಧಾನಗಳಲ್ಲಿ “ಇಸ್ರಾಯೇಲ್ ಜನರು” ಅಥವಾ “ಇಸ್ರಾಯೇಲ್ ವಂಶದವರು” ಅಥವಾ “ಇಸ್ರಾಯೇಲ್ಯರು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • “ಯೆಹೋವನ ಮನೆ” ಎನ್ನುವ ಪದವನ್ನು “ಯೆಹೋವಾನ ದೇವಾಲಯ” ಅಥವಾ “ಯೆಹೋವನನ್ನು ಆರಾಧಿಸುವ ಸ್ಥಳ” ಅಥವಾ “ಯೆಹೋವ ದೇವರು ತನ್ನ ಜನರೊಂದಿಗೆ ಭೇಟಿಯಾಗುವ ಸ್ಥಳ” ಅಥವಾ “ಯೆಹೋವ ನಿವಾಸವಾಗಿರುವ ಸ್ಥಳ” ಎಂದೂ ಅನುವಾದ ಮಾಡಬಹುದು.
  • “ದೇವರ ಮನೆ” ಎನ್ನುವದನ್ನು ಈ ರೀತಿಯ ಮಾತುಗಳಿಂದ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ದಾವೀದ, ಸಂತಾನದವರು, ದೇವರ ಮನೆ, ಕುಟುಂಬ ಸದಸ್ಯರು, ಇಸ್ರಾಯೇಲ್ ರಾಜ್ಯ, ಗುಡಾರ, ದೇವಾಲಯ, ಯೆಹೋವ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1004, H1005, G3609, G3613, G3614, G3624

ಮನೆಯ ಸದಸ್ಯರು, ಮನೆಗೆ ಸಂಬಂಧಪಟ್ಟವುಗಳು

# ಪದದ ಅರ್ಥವಿವರಣೆ:

“ಮನೆಯ ಸದಸ್ಯರು” ಎನ್ನುವ ಪದವು ಒಂದು ಮನೆಯಲ್ಲಿ ಎಲ್ಲರು ಒಟ್ಟಾಗಿ ಸೇರಿ ಜೀವಿಸುವ ಜನರನ್ನು, ಕುಟುಂಬ ಸದಸ್ಯರನ್ನು ಮತ್ತು ಅವರ ಎಲ್ಲಾ ದಾಸರನ್ನು ಸೂಚಿಸುತ್ತದೆ,

  • ಮನೆಯ ಸದಸ್ಯರನ್ನು ನಡೆಸುವುದರಲ್ಲಿ ದಾಸರನ್ನು ನಿರ್ದೇಶಿಸುವುದು ಮತ್ತು ಅಸ್ತಿಪಾಸ್ತಿಗಳ ಸಂರಕ್ಷಣೆಯನ್ನು ನೋಡಿಕೊಳ್ಳುವುದು ಒಳಗೊಂಡಿರುತ್ತದೆ.
  • ಕೆಲವೊಂದುಬಾರಿ “ಮನೆಯ ಸದಸ್ಯರು” ಎನ್ನುವ ಪದವು ಒಬ್ಬರಿಂದ ಬಂದಿರುವ ಇಡೀ ಕುಟುಂಬವನ್ನು, ವಿಶೇಷವಾಗಿ ಅವನ ವಂಶಸ್ಥರನ್ನು ಅಲಂಕಾರಿಕವಾಗಿ ಸೂಚಿಸುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಮನೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1004, H5657, G2322, G3609, G3614, G3615, G3616, G3623, G3624

ಮರಣಿಸು, ಮರಣಿಸುತ್ತಾನೆ, ಮರಣಿಸಿದನು, ಸತ್ತವನಾಗಿ, ಮೃತ ಸ್ಥಿತಿ, ಮರಣ, ಮರಣಗಳು, ಮರಣದಂಡನೆ

# ಪದದ ಅರ್ಥವಿವರಣೆ:

ಈ ಪದವು ಭೌತಿಕವಾದ ಮರಣವನ್ನು ಮತ್ತು ಆತ್ಮೀಯಕವಾದ ಮರಣವನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ. ಭೌತಿಕವಾಗಿ, ಒಬ್ಬ ವ್ಯಕ್ತಿಯ ಭೌತಿಕ ಶರೀರವು ಜೀವಿಸುವುದು ನಿಂತುಹೋದಾಗ ಪ್ರಾಣವಿಲ್ಲದ ದೇಹವನ್ನು ಸೂಚಿಸುತ್ತದೆ. ಆತ್ಮೀಯಕವಾಗಿ, ಪಾಪಿಗಳು ಪರಿಶುದ್ಧನಾದ ದೇವರಿಂದ ದೂರವಾದ ಸ್ಥಿತಿಯನ್ನು ಸೂಚಿಸುತ್ತದೆ, ಯಾಕಂದರೆ ಅವರು ಪಾಪ ಮಾಡಿದ್ದರಿಂದ ಅವರು ಮರಣ ಹೊಂದಿದವರಾಗಿರುತ್ತಾರೆ.

# 1. ಭೌತಿಕವಾದ ಮರಣ

  • “ಮರಣಿಸು” ಎನ್ನುವದಕ್ಕೆ ಬದುಕುವುದನ್ನು ನಿಲ್ಲಿಸು ಎಂದರ್ಥ. ಮರಣವು ಭೌತಿಕ ಜೀವನಕ್ಕೆ ಅಂತ್ಯವಾಗಿರುತ್ತದೆ.
  • ಒಬ್ಬ ವ್ಯಕ್ತಿ ಮರಣಿಸಿದಾಗ ಆ ವ್ಯಕ್ತಿಯ ಆತ್ಮವು ತನ್ನ ದೇಹವನ್ನು ಬಿಟ್ಟುಹೋಗುತ್ತದೆ.
  • ಆದಾಮ ಮತ್ತು ಹವ್ವಳು ಪಾಪ ಮಾಡಿದಾಗ ಕ್ಷಣದಿಂದ ಭೌತಿಕ ಮರಣವು ಲೋಕದೊಳಗೆ ಬಂದಿದೆ.
  • “ಸಾವನ್ನಪ್ಪುವಂತೆ ಮಾಡು” ಎನ್ನುವ ಮಾತು ಒಬ್ಬರನ್ನು ಕೊಂದುಹಾಕು ಅಥವಾ ಸಾಯುವಂತೆ ಮಾಡು ಎನ್ನುವದನ್ನು ಸೂಚಿಸುತ್ತದೆ, ವಿಶೇಷವಾಗಿ ಅರಸನಾಗಲಿ ಅಥವಾ ಇತರ ಬೇರೆ ಆಡಳಿತಗಾರರಾಗಲಿ ಒಬ್ಬರನ್ನು ಸಾಯಿಸಿರಿ ಎಂದು ಆಜ್ಞೆ ಕೊಡುವುದನ್ನು ಸೂಚಿಸುತ್ತದೆ.

# 2. ಆತ್ಮೀಯಕವಾದ ಮರಣ

  • ಆತ್ಮೀಯಕವಾದ ಮರಣ ಎನ್ನುವುದು ದೇವರಿಂದ ಒಬ್ಬ ವ್ಯಕ್ತಿ ದೂರಾಗುವುದನ್ನು ಸೂಚಿಸುತ್ತದೆ.
  • ಆದಾಮನು ದೇವರಿಗೆ ಅವಿಧೇಯತೆಯನ್ನು ತೋರಿಸಿದಾಗ ಆತನು ಆತ್ಮೀಯಕವಾಗಿ ಸತ್ತುಹೋದನು. ದೇವರೊಂದಿಗೆ ಆತನಿಗಿರುವ ಸಂಬಂಧವು ಕಳೆದುಕೊಂಡಿದ್ದಾನೆ. ಅವನು ನಾಚಿಕೆಗೊಂಡು, ದೇವರಿಗೆ ಕಾಣದಂತೆ ಮರೆಯಾಗುವುದಕ್ಕೆ ಪ್ರಯತ್ನಿಸಿದನು.
  • ಆದಾಮನಿಂದ ಬಂದಿರುವ ಪ್ರತಿಯೊಬ್ಬ ವ್ಯಕ್ತಿ ಪಾಪಿಯಾಗಿರುತ್ತಾನೆ, ಮತ್ತು ಆತ್ಮೀಯಕವಾಗಿ ಸತ್ತವನಾಗಿರುತ್ತಾನೆ. ನಾವೆಲ್ಲರು ಯೇಸುವಿನಲ್ಲಿ ನಂಬಿಕೆ ಇಟ್ಟಾಗ ದೇವರು ನಮ್ಮೆಲ್ಲರನ್ನೂ ಮತ್ತೊಮ್ಮೆ ಆತ್ಮೀಯಕವಾಗಿ ಜೀವಿಸುವವರನ್ನಾಗಿ ಮಾಡಿದ್ದಾನೆ.

# ಅನುವಾದ ಸಲಹೆಗಳು:

  • ಈ ಪದವನ್ನು ಅನುವಾದ ಮಾಡುವುದಕ್ಕೆ ಮರಣವನ್ನು ಸೂಚಿಸುವ ಯಾವುದೇ ಸ್ವಾಭಾವಿಕ ಪದವು ಅಥವಾ ಮಾತು ಅನುವಾದ ಮಾಡುವ ಭಾಷೆಯಲ್ಲಿದ್ದರೆ ಅದನ್ನೇ ಪ್ರತಿದಿನ ಉಪಯೋಗಿಸುವುದು ಒಳ್ಳೇಯದು.
  • ಇತರ ಬೇರೆ ಭಾಷೆಗಳಲ್ಲಿ “ಮರಣಿಸು” ಎನ್ನುವ ಮಾತನ್ನು “ಜೀವಿಸಬೇಡ” ಎಂದು ವ್ಯಕ್ತೀಕರಿಸುತ್ತಾರೆ. “ಮೃತ” ಎನ್ನುವ ಪದವನ್ನು “ಜೀವಂತವಾಗಿಲ್ಲ” ಅಥವಾ “ಪ್ರಾಣವಿಲ್ಲ” ಅಥವಾ “ಜೀವಿಸುತ್ತಿಲ್ಲ” ಎಂದೂ ಅನುವಾದ ಮಾಡಬಹುದು.
  • ಮರಣವನ್ನು ವಿವರಿಸುವುದಕ್ಕೆ ಅನೇಕ ಭಾಷೆಗಳಲ್ಲಿ ಅಲಂಕಾರಿಕ ಮಾತುಗಳನ್ನು ಉಪಯೋಗಿಸುತ್ತಾರೆ, “ಸತ್ತು ಹೋದನು” ಎಂದು ಹೇಳುತ್ತಾರೆ. ಆದರೆ, ಸತ್ಯವೇದದಲ್ಲಿ ಮರಣ ಎನ್ನುವ ಪದಕ್ಕೆ ದೈನಂದಿನ ಭಾಷೆಯಲ್ಲಿ ಉಪಯೋಗಿಸುವ ಪದವನ್ನೇ ನೇರವಾಗಿ ಉಪಯೋಗಿಸುವುದು ಒಳ್ಳೇಯದು.
  • ಸತ್ಯವೇದದಲ್ಲಿ ಭೌತಿಕ ಜೀವನ ಮತ್ತು ಮರಣಗಳು ಅನೇಕಬಾರಿ ಆತ್ಮೀಯಕ ಜೀವನ ಮತ್ತು ಮರಣಗಳಿಗೆ ಹೋಲಿಸಲ್ಪಟ್ಟಿದೆ. ಭೌತಿಕ ಮರಣಕ್ಕೂ ಮತ್ತು ಆತ್ಮೀಯಕವಾದ ಮರಣಕ್ಕೂ ಒಂದೇ ಪದವನ್ನು ಅಥವಾ ಒಂದೇ ಮಾತನ್ನು ಉಪಯೋಗಿಸುವುದು ಉತ್ತಮ.
  • ಕೆಲವೊಂದು ಭಾಷೆಗಳಲ್ಲಿ “ಆತ್ಮೀಯಕವಾದ ಮರಣ” ಎಂದು ಸ್ಪಷ್ಟವಾಗಿ ಹೇಳುತ್ತಾರೆ, ಇದು ಆ ಸಂದರ್ಭ ಬಂದಾಗ ಮಾತ್ರವೇ ಆ ಪದವನ್ನು ಉಪಯೋಗಿಸುತ್ತಾರೆ. ಆತ್ಮೀಯಕವಾದ ಮರಣಕ್ಕೆ ವಿರುದ್ಧವಾಗಿ ಹೇಳುವ ಸಂದರ್ಭಗಳಲ್ಲಿ “ಭೌತಿಕ ಮರಣ” ಎಂದು ಹೇಳುವುದು ಉತ್ತಮವೆಂದು ಅನುವಾದಕರಲ್ಲಿ ಕೆಲವರು ಆಲೋಚನೆ ಮಾಡುತ್ತಾರೆ.
  • “ಮೃತ” ಎನ್ನುವ ಮಾತು ಸತ್ತುಹೋದಂತ ಮನುಷ್ಯರನ್ನು ಸೂಚಿಸುವ ನಾಮಾಂಕಿತ ವಿಶೇಷಣವಾಗಿರುತ್ತದೆ. ಕೆಲವೊಂದು ಭಾಷೆಗಳಲ್ಲಿ ಈ ಪದವನ್ನು “ಮೃತಪಟ್ಟವರು” ಎಂದೂ ಅಥವಾ “ಸತ್ತುಹೋದ ಜನರು” ಎಂದೂ ಅನುವಾದ ಮಾಡುತ್ತಾರೆ. (ನೋಡಿರಿ: ನಾಮಾಂಕಿತ ವಿಶೇಷಣ
  • “ಸಾಯಿಸು” ಎನ್ನುವ ಪದವನ್ನು “ಕೊಲ್ಲು” ಅಥವಾ “ನರಹತ್ಯೆಮಾಡು” ಅಥವಾ “ಗಲ್ಲಿಗೇರಿಸು” ಎಂದೂ ಅನುವಾದ ಮಾಡುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ನಂಬು, ನಂಬಿಕೆ, ಜೀವನ, ಆತ್ಮ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಉದಾಹರಣೆಗಳು:

  • 01:11 ಒಳ್ಳೇದರ ಕೆಟ್ಟದರ ಅರಿವನ್ನು ಹುಟ್ಟಿಸುವ ಈ ಮರದ ಹಣ್ಣನ್ನು ಮಾತ್ರ ತಿನ್ನಬಾರದು. ತಿಂದ ದಿನವೇ ಸತ್ತು ಹೋಗುವೆ ಎಂದು ದೇವರು ಆದಾಮನಿಗೆ ಆಜ್ಞಾಪಿಸಿದನು. ಈ ಮರದ ಹಣ್ಣನ್ನು ಅವನು ತಿಂದರೆ, ಅವನು ___ ಸತ್ತು __ ಹೋಗುತ್ತಾನೆ.
  • 02:11 “ನೀನು ___ ಸಾಯುವಿ ____ ಮತ್ತು ನಿನ್ನ ದೇಹವು ಮಣ್ಣಿಗೆ ಹಿಂದುರಿಗೆ ಹೋಗುವುದು.”
  • 07:10 ಇಸಾಕನು ___ ಮರಣ ಹೊಂದಿದನು _____, ಯಾಕೋಬ ಮತ್ತು ಏಸಾವರಿಬ್ಬರು ಅವನನ್ನು ಸಮಾಧಿ ಮಾಡಿದರು.
  • 37:05 “ನಾನೇ ಪುನರುತ್ಥಾನವು ಜೀವವೂ ಆಗಿದ್ದೇನೆ ನನ್ನಲ್ಲಿ ನಂಬಿಕೆ ಇಡುವವನು ____ ಸತ್ತರೂ ___ ಬದುಕುವನು. ಜೀವಿಸುವ ಪ್ರತಿಯೊಬ್ಬನು ನನ್ನಲ್ಲಿ ನಂಬಿಕೆಯಿಟ್ಟರೆ, ಅವನು ಎಂದಿಗೂ _____ ಸಾಯುವುದಿಲ್ಲ ____” ಎಂದು ಯೇಸು ಉತ್ತರಕೊಟ್ಟನು.
  • 40:08 ಆತನ ____ ಮರಣದ ____ ಮೂಲಕ ಜನರೆಲ್ಲರೂ ದೇವರ ಬಳಿಗೆ ಬರುವುದಕ್ಕೆ ಆತನು ಮಾರ್ಗವನ್ನು ತೆರೆದನು.
  • 43:07 “ಯೇಸು ___ ಸತ್ತರೂ ____, ದೇವರು ಆತನನ್ನು ಮರಣ ವೇದನೆಗಳಿಂದ ಬಿಡಿಸಿ ಎಬ್ಬಿಸಿದನು.
  • 48:02 ಅವರು ಪಾಪಮಾಡಿರುವುದರಿಂದ ಭೂಮಿಯ ಮೇಲಿರುವ ಪ್ರತಿಯೊಬ್ಬರೂ ರೋಗಗ್ರಸ್ತರಾಗಿ, ಪ್ರತಿಯೊಬ್ಬರೂ ___ ಸಾಯುತ್ತಿದ್ದಾರೆ ____.
  • 50:17 ಆತನು (ಯೇಸು) ಪ್ರತಿಯೊಬ್ಬರ ಕಣ್ಣೀರನ್ನು ಹೊರೆಸುವನು ಮತ್ತು ಅಲ್ಲಿ ಶ್ರಮೆ, ಬಾಧೆ, ಅಳು, ದುಷ್ಟ, ನೋವು, ಅಥವಾ ____ ಮರಣ ___ ಎನ್ನುವವುಗಳು ಯಾವುವು ಇರುವುದಿಲ್ಲ.

# ಪದ ಡೇಟಾ:

  • Strong's: H6, H1478, H1826, H1934, H2491, H4191, H4192, H4193, H4194, H4463, H5038, H5315, H6297, H6757, H7496, H7523, H8045, H8546, H8552, G336, G337, G520, G581, G599, G615, G622, G684, G1634, G1935, G2079, G2253, G2286, G2287, G2288, G2289, G2348, G2837, G2966, G3498, G3499, G3500, G4430, G4880, G4881, G5053, G5054

ಮರುಭೂಮಿ, ಮರುಭೂಮಿಗಳು, ಬಂಜರಿ, ಬಂಜರಿ ಭೂಮಿಗಳು

# ಪದದ ಅರ್ಥವಿವರಣೆ:

ಮರುಭೂಮಿ ಅಥವಾ ಬಂಜರಿ ಎನ್ನುವುದು ಒಣಗಿದ ನೆಲ, ಕೇವಲ ಕೆಲವು ಮರಗಳು ಮಾತ್ರ ಬೆಳೆಯುವ ಬಂಜೆ ಭೂಮಿಯಾಗಿರುತ್ತದೆ.

  • ಮರುಭೂಮಿ ಎನ್ನುವುದು ಒಣ ವಾತಾವರಣವನ್ನು ಹೊಂದಿರುವ ಪ್ರಾಂತ್ಯ ಮತ್ತು ಕೇವಲ ಕೆಲವು ಮರಗಳು ಅಥವಾ ಪ್ರಾಣಿಗಳು ಇರುವ ಸ್ಥಳವಾಗಿರುತ್ತದೆ.
  • ಕಠಿಣವಾದ ಪರಿಸ್ಥಿತಿಗಳ ಕಾರಣದಿಂದ ಕೇವಲ ಕೆಲವರು ಜನರು ಮಾತ್ರವೇ ಮರುಭೂಮಿಯಲ್ಲಿ ನಿವಸಿಸುತ್ತಾರೆ, ಆದ್ದರಿಂದ ಇದನ್ನು “ಬಂಜರಿ ಭೂಮಿ” ಎಂದೂ ಕರೆಯುತ್ತಾರೆ.
  • “ಬಂಜರಿ ಭೂಮಿ” ಎನ್ನುವ ಪದವು ದೂರಸ್ಥ ಪ್ರಾಂತ್ಯ, ನಿರ್ಜನ ಮತ್ತು ಜನರನ್ನು ನಿಷೇಧಿಸಲ್ಪಟ್ಟ ಪ್ರಾಂತ್ಯ ವೆನ್ನುವ ಅರ್ಥ ಕೊಡುತ್ತದೆ,
  • ಈ ಪದವನ್ನು “ಮರಳುಭೂಮಿಯ ಪ್ರದೇಶ” ಅಥವಾ “ದೂರಸ್ಥ್ಯ” ಅಥವಾ “ಜನರು ನಿವಾಸವಿರದ ಸ್ಥಳ” ಎಂದೂ ಅನುವಾದ ಮಾಡಬಹುದು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H776, H2723, H3293, H3452, H4057, H6160, H6723, H6728, H6921, H8047, H8414, G2047, G2048

ಮರ್ಮ, ಮರ್ಮಗಳು, ಮರೆಯಾದ ಸತ್ಯ, ಮರೆಯಾಗಿರುವ ಸತ್ಯಾಂಶಗಳು

# ಪದದ ಅರ್ಥವಿವರಣೆ:

ಸತ್ಯವೇದದಲ್ಲಿ “ಮರ್ಮ” ಎನ್ನುವ ಪದವು ಯಾವುದಾದರೊಂದನ್ನು ಅರ್ಥಮಾಡಿಕೊಳ್ಳುವದಕ್ಕೆ ಕಷ್ಟವಾಗುವ ಅಥವಾ ತಿಳಿದುಕೊಳ್ಳಲಾಗದ ವಿಷಯವನ್ನು ದೇವರಿಗೆ ಅದನ್ನು ವಿವರಿಸುವುದನ್ನು ಸೂಚಿಸುತ್ತದೆ.

  • ಕಳೆದ ಕಾಲಗಳಲ್ಲಿ ತಿಳಿಯದಿರುವ ಕ್ರಿಸ್ತನ ಸುವಾರ್ತೆಯು ಮರ್ಮವಾಗಿತ್ತೆಂದು ಹೊಸ ಒಡಂಬಡಿಕೆ ಹೇಳುತ್ತಿದೆ.
  • ಮರ್ಮವಾಗಿ ಹೇಳಲ್ಪಟ್ಟ ಅನೇಕ ವಿಶೇಷವಾದ ಅಂಶಗಳಲ್ಲಿ ಯೆಹೂದ್ಯರು ಮತ್ತು ಅನ್ಯರು ಕ್ರಿಸ್ತನಲ್ಲಿ ಸಮಾನವಾಗಿದ್ದಾರೆ ಎನ್ನುವುದು ಒಂದಾಗಿರುತ್ತದೆ.
  • ಈ ಪದವನ್ನು “ರಹಸ್ಯ” ಅಥವಾ “ಮರೆಯಾಗಿರುವ ವಿಷಯಗಳು” ಅಥವಾ “ತಿಳಿಯದ ವಿಷಯ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಕ್ರಿಸ್ತ, ಅನ್ಯನು, ಶುಭವಾರ್ತೆ, ಯೆಹೂದ್ಯ, ನಿಜ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1219, H7328, G3466

ಮಲ, ಸಗಣಿ

# ಪದದ ಅರ್ಥವಿವರಣೆ:

“ಮಲ” ಎನ್ನುವ ಪದವು ಮನುಷ್ಯರಿಂದ ಅಥವಾ ಪ್ರಾಣಿಗಳಿಂದ ಹೊರ ಬರುವ ವ್ಯರ್ಥ ಪದಾರ್ಥವನ್ನು ಸೂಚಿಸುತ್ತದೆ ಮತ್ತು ಇದನ್ನು ಮಲ ವಿಸರ್ಜನೆ ಎಂದೂ ಕರೆಯುತ್ತಾರೆ. ಫಲವತ್ತಾದ ಮಣ್ಣನ್ನು ತಯಾರಿಸುವುದಕ್ಕೆ ರಾಸಾಯನಿಕ ಗೊಬ್ಬರವನ್ನು ಉಪಯೋಗಿಸಿದಾಗ, ಅದನ್ನು “ಗೊಬ್ಬರ ಅಥವಾ ಸಗಣಿ” ಎಂದು ಕರೆಯುತ್ತಾರೆ.

  • ಅಪ್ರಾಮುಖ್ಯ ಅಥವಾ ಬೆಲೆಯಿಲ್ಲದವುಗಳು ಎಂದು ಯಾವುದಾದರೊಂದನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಈ ಪದಗಳನ್ನು ಉಪಯೋಗಿಸುತ್ತಾರೆ.
  • ಪ್ರಾಣಿಯ ಒಣಗಿದ ಸಗಣಿಯನ್ನು ಅನೇಕಬಾರಿ ಇಂಧನಕ್ಕಾಗಿ ಬಳಸುತ್ತಾರೆ.
  • “ಭೂಮಿಯ ಮೇಲೆ ಮಲದಂತಿರು” ಎನ್ನುವ ಮಾತನ್ನು “ಭೂಮಿಯ ಮೇಲೆ ಕೆಲಸಕ್ಕೆಬಾರದ ಮಲದಂತೆ ಚೆದುರಿ ಹೋಗಿರಿ” ಎಂದೂ ಅನುವಾದ ಮಾಡಬಹುದು.
  • ಯೆರೂಸಲೇಮಿನ ದಕ್ಷಿಣ ಗೋಡೆಯಲ್ಲಿರುವ “ತಿಪ್ಪೆ ಬಾಗಿಲು” ಬಹುಶಃ ಪಟ್ಟಣದಿಂದ ಹೊರ ತೆಗೆದುಕೊಂಡು ಬರುವ ಕಸ ಮತ್ತು ಕಚಡವನ್ನು ಹಾಕುವ ಬಾಗಿಲಾಗಿರಬಹುದು.

(ಈ ಪದಗಳನ್ನು ಸಹ ನೋಡಿರಿ : ಬಾಗಿಲು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H830, H1119, H1557, H1561, H1686, H1828, H6569, H6675, G906, G4657

ಮಹಾ ಭೀತಿ, ಭಯೋತ್ಪಾದಿಸು, ಭಯೋತ್ಪಾದಿಸಲಾಗಿದೆ, ಮಹಾ ಭೀತಿಗಳು, ಭಯಭೀತಿಯಿಂದ, ಭಯಭೀತಿಯನ್ನುಂಟು ಮಾಡಿದೆ, ಭಯಭೀತಿಯಿಂದ

# ಪದದ ಅರ್ಥವಿವರಣೆ:

“ಮಹಾ ಭೀತಿ” ಎನ್ನುವ ಪದವು ತೀವ್ರ ಭಯದ ಭಾವನೆಯನ್ನು ಸೂಚಿಸುತ್ತದೆ. ಒಬ್ಬ ವ್ಯಕ್ತಿಯನ್ನು “ಭಯಭೀತಿಗೊಳಿಸು” ಎನ್ನುವ ಮಾತಿಗೆ ಒಬ್ಬ ವ್ಯಕ್ತಿ ತುಂಬಾ ಹೆಚ್ಚಾಗಿ ಹೆದರಿಕೆಗೊಳ್ಳುವಂತೆ ಮಾಡು ಎಂದರ್ಥವಾಗಿರುತ್ತದೆ.

  • “ಮಹಾ ಭಯ” ಎಂದರೆ ಯಾವುದಾದರೊಂದು ಅಥವಾ ಯಾರಾದರೊಬ್ಬರು ಮಹಾ ಭಯವನ್ನುಉಂಟು ಮಾಡುವುದು ಅಥವಾ ಹೆದರಿಕೆಯನ್ನುಂಟು ಮಾಡುವುದು ಎಂದರ್ಥ. ಮಹಾ ಭೀತಿಗೆ ಉದಾಹರಣೆ ಹೇಳಬೇಕೆಂದರೆ, ಶತ್ರುವಿನ ಧಾಳಿ ಮಾಡುವುದು ಅಥವಾ ಮಾರಿರೋಗ ಅಥವಾ ಅತೀ ವಿಸ್ತಾರವಾಗಿ ವ್ಯಾಪಕವಾಗಿರುವ ವ್ಯಾಧಿ, ಅನೇಕ ಜನರನ್ನು ಸಾಯಿಸುವುದು ಎಂದೂ ಹೇಳಬಹುದು.
  • ಈ ಎಲ್ಲಾ ಮಹಾ ಭೀತಿಗಳು “ಭಯಭೀತಿಗಳನ್ನು” ಹುಟ್ಟಿಸುವವುಗಳಾಗಿರುತ್ತವೆ. ಈ ಪದವನ್ನು ಅಥವಾ ಮಾತನ್ನು “ಭಯಕ್ಕೆ ಕಾರಣವಾಗಿರುವುದು” ಅಥವಾ “ಭಯಭೀತಿಯನ್ನುಂಟು ಮಾಡುವುದು” ಎಂದೂ ಅನುವಾದ ಮಾಡಬಹುದು.
  • ದೇವರ ತೀರ್ಪು ಒಂದಾನೊಂದು ದಿನ ಆತನ ಕೃಪೆಯನ್ನು ತಿರಸ್ಕಾರ ಮಾಡಿದ ಜನರಲ್ಲಿ ಭಯಭೀತಿಯನ್ನು ಹುಟ್ಟಿಸುತ್ತದೆ.
  • “ಯೆಹೋವನ ಭಯಭೀತಿ” ಎನ್ನುವ ಮಾತನ್ನು “ಯೆಹೋವನ ಮಹಾ ಭೀತಿಯ ಸಾನ್ನಿಧ್ಯವು” ಅಥವಾ “ಯೆಹೋವನ ಭಯಾನಕವಾದ ತೀರ್ಪು” ಅಥವಾ “ಮಹಾ ಭಯವನ್ನು ಯೆಹೋವನು ಉಂಟು ಮಾಡಿದಾಗ” ಎಂದೂ ಅನುವಾದ ಮಾಡಬಹುದು.
  • “ಮಹಾ ಭೀತಿ” ಎನ್ನುವ ಮಾತನ್ನು ಅನುವಾದ ಮಾಡುವ ವಿಧಾನಗಳಲ್ಲಿ “ಅತೀ ತೀವ್ರವಾದ ಭಯ” ಅಥವಾ “ಆಳವಾದ ಹೆದರಿಕೆ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ವಿರೋಧಿ, ಭಯ, ತೀರ್ಪು ಮಾಡು, ಮಾರಿರೋಗ, ಯೆಹೋವ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H367, H926, H928, H1091, H1161, H1204, H1763, H2111, H2189, H2283, H2731, H2847, H2851, H2865, H3372, H3707, H4032, H4048, H4172, H4288, H4637, H6184, H6206, H6343, H6973, H8541, G1629, G1630, G2258, G4422, G4426, G5401

ಮಹಾಶರೀರಕ, ಮಹಾಶರೀರಕರು

# ಪದದ ಅರ್ಥವಿವರಣೆ

“ಮಹಾಶರೀರಕ” ಎನ್ನುವ ಪದವು ಬಹಳ ಉದ್ದ ಮತ್ತು ಬಲವಂತನಾದ ವ್ಯಕ್ತಿಯನ್ನು ಸೂಚಿಸುತ್ತದೆ.

  • ದಾವೀದನು ಯುದ್ದ ಮಾಡಿದ ಫಿಲಿಷ್ಟಿಯರ ಸೈನಿಕನಾದ ಗೊಲ್ಯಾತನು ಬಹಳ ಉದ್ದವಾಗಿ, ಬಲಶಾಲಿಯಾಗಿದ್ದಕಾರಣ ಅವನನ್ನು ಮಹಾಶರೀರಕ ಎಂದು ಕರೆಯುತ್ತಿದ್ದರು.
  • ಇಸ್ರಾಯೇಲ್ ಗೂಡಾಚಾರಿಗಳು ಕಾನಾನ್ ದೇಶವನ್ನು ಪರಿಶೀಲಿಸಿದಾಗ ಅಲ್ಲಿನ ಜನರು ಮಹಾಶರೀರಕರಾಗಿದ್ದಾರೆಂದು ಅವರು ಹೇಳಿದರು.

(ಈ ಪದಗಳನ್ನು ಸಹ ನೋಡಿರಿ : ಕಾನಾನ್, ಗೊಲ್ಯಾತನು, ಫಿಲಿಷ್ಟಿಯರು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1368, H5303, H7497

ಮಾಂತ್ರಿಕ, ಮಾಂತ್ರಿಕರು, ಮಾಟಗಾರ್ತಿ, ಮಾಟಗಾರಿಕೆ, ಮಾಟ ಮಂತ್ರಗಳು, ಮಂತ್ರ ವಿದ್ಯೆ

# ಪದದ ಅರ್ಥವಿವರಣೆ:

“ಮಾಟಗಾರಿಕೆ” ಅಥವಾ “ಮಂತ್ರ ವಿದ್ಯೆ” ಎನ್ನುವ ಪದಗಳು ಮಾಯ ಮಾಟ ಉಪಯೋಗಿಸುವುದನ್ನು ಸೂಚಿಸುತ್ತದೆ, ಇದರಲ್ಲಿ ದುರಾತ್ಮಗಳ ಸಹಾಯದಿಂದ ಶಕ್ತಿಯುತವಾದ ಕಾರ್ಯಗಳು ಮಾಡುವುದು ಒಳಗೊಂಡಿರುತ್ತದೆ. “ಮಾಂತ್ರಿಕ” ಎನ್ನುವುದು ಇಂಥಹ ಶಕ್ತಿಯುತವಾದ ಮಾಯ ಮಾಟಗಳನ್ನು ಮಾಡುವ ವ್ಯಕ್ತಿ ಎಂದರ್ಥ.

  • ಮಾಯ ಮಾಟ ಮತ್ತು ಮಾಟ ಮಂತ್ರಗಳ ಉಪಯೋಗದಲ್ಲಿ ಪ್ರಯೋಜನಕರವಾದ ವಿಷಯಗಳು (ಬೇರೊಬ್ಬರನ್ನು ಗುಣಪಡಿಸುವುದು) ಮತ್ತು ಹಾನಿಕರವಾದ ವಿಷಯಗಳು (ಒಬ್ಬರನ್ನು ಶಪಿಸುವುದು) ಒಳಗೊಂಡಿರುತ್ತವೆ. ಆದರೆ ಎಲ್ಲಾ ವಿಧವಾದ ಮಾಟಗಾರಿಕೆಗಳು ತಪ್ಪಾಗಿರುತ್ತವೆ, ಯಾಕಂದರೆ ಅವರು ದುರಾತ್ಮಗಳ ಶಕ್ತಿಯನ್ನು ಬಳಸುತ್ತಾರೆ.
  • ಸತ್ಯವೇದದಲ್ಲಿ ಮಾಟಗಾರಿಕೆಯನ್ನು ಉಪಯೋಗಿಸುವುದು ಇತರ ಅನೇಕ ಭಯಂಕರವಾದ ಪಾಪಗಳಂತೆಯೇ (ವ್ಯಭಿಚಾರ, ವಿಗ್ರಹಗಳನ್ನು ಆರಾಧಿಸುವುದು, ಮತ್ತು ಮಕ್ಕಳನ್ನು ಬಲಿ ಕೊಡುವುದು) ದುಷ್ಟ ಕಾರ್ಯವಾಗಿರುತ್ತದೆ.
  • “ಮಾಟಗಾರಿಕೆ” ಮತ್ತು “ಮಾಟ ಮಂತ್ರ” ಎನ್ನುವ ಪದಗಳನ್ನು “ದುರಾತ್ಮ ಶಕ್ತಿ” ಅಥವಾ “ಎರಕಹೊಯ್ದ ಮಂತ್ರಗಳು” ಎಂದೂ ಅನುವಾದ ಮಾಡಬಹುದು.
  • “ಮಾಂತ್ರಿಕ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಮಾಯ ಮಂತ್ರವನ್ನು ಮಾಡುವವನು” ಅಥವಾ “ಎರಕಹೊಯ್ದ ಮಂತ್ರಗಳನ್ನು ನುಡಿಯುವ ವ್ಯಕ್ತಿ” ಅಥವಾ “ದುರಾತ್ಮ ಶಕ್ತಿಯನ್ನು ಉಪಯೋಗಿಸುವುದರ ಮೂಲಕ ಅದ್ಭುತಗಳನ್ನು ಮಾಡುವ ವ್ಯಕ್ತಿ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • ಆತ್ಮ ಪ್ರಪಂಚವನ್ನು ಸಂಪರ್ಕಿಸುವ ಪ್ರಯತ್ನವನ್ನು ಸೂಚಿಸುವ “ಕಣಿ ಹೇಳುವುದು” ಎನ್ನುವ ಪದಕ್ಕಿರುವ ಅರ್ಥಕ್ಕಿಂತ “ಮಾಟಗಾರಿಕೆ” ಎನ್ನುವ ಪದಕ್ಕೆ ವಿಭಿನ್ನವಾದ ಅರ್ಥವನ್ನು ಹೊಂದಿರುತ್ತದೆ,

(ಈ ಪದಗಳನ್ನು ಸಹ ನೋಡಿರಿ : ವ್ಯಭಿಚಾರ, ದೆವ್ವ, ಕಣಿ ಹೇಳುವುದು, ಸುಳ್ಳು ದೇವರು, ಮಾಯ ಮಂತ್ರ, ಹೋಮ, ಆರಾಧನೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3784, H3785, H3786, H6049, G3095, G3096, G3097, G5331, G5332, G5333

ಮಾರಿರೋಗ, ಮಾರಿರೋಗಗಳು

# ಪದದ ಅರ್ಥವಿವರಣೆ:

ಮಾರಿರೋಗಗಳು ಅನೇಕಮಂದಿ ಜನರು ದೊಡ್ಡ ಸಂಖ್ಯೆಯಲ್ಲಿ ಸಾಯುವಂತೆ ಮಾಡುವ ಅಥವಾ ನರಳುವಂತೆ ಮಾಡುವ ಕೆಲವು ಸಂದರ್ಭಗಳಾಗಿರುತ್ತವೆ. ಅನೇಕಸಲ ಮಾರಿರೋಗವು ಒಂದು ವ್ಯಾಧಿಯಾಗಿರುತ್ತದೆ, ಇದನ್ನು ಹರಡದಂತೆ ಮಾಡುವ ಮುಂಚಿತವಾಗಿಯೇ ಅತೀ ಶೀಘ್ರದಲ್ಲಿ ಜನರು ಸಾಯುವಂತೆ ಮಾಡುವ ರೋಗವಾಗಿರುತ್ತದೆ.

  • ಅನೇಕ ಮಾರಿರೋಗಗಳು ಸ್ವಾಭಾವಿಕ ಹುಟ್ಟಿ ಬರುತ್ತವೆ, ಆದರೆ ಜನರು ಪಾಪ ಮಾಡಿದ್ದಕ್ಕಾಗಿ ಅವರನ್ನು ಶಿಕ್ಷಿಸುವುದಕ್ಕೆ ದೇವರಿಂದ ಕೆಲವು ಮಾರಿ ರೋಗಗಳು ಕಳುಹಿಸಲ್ಪಡುತ್ತವೆ.
  • ಮೋಶೆಯ ಕಾಲದಲ್ಲಿ ಇಸ್ರಾಯೇಲ್ಯರು ಐಗುಪ್ತವನ್ನು ಬಿಡುವುದಕ್ಕೆ ಫರೋಹನನ್ನು ಬಲವಂತ ಮಾಡಲು ಐಗುಪ್ತಕ್ಕೆ ವಿರುದ್ಧವಾಗಿ ದೇವರು ಹತ್ತು ಮಾರಿರೋಗಗಳನ್ನು ಕಳುಹಿಸಿದನು. ಈ ಮಾರಿರೋಗಗಳಲ್ಲಿ ನೀರು ರಕ್ತವಾಗಿ ಮಾರ್ಪಡುವುದು, ಭೌತಿಕವಾದ ರೋಗಗಳು ಬರುವುದು, ಅನೆಕಲ್ಲುಗಳಿಂದ ಮತ್ತು ಕೀಟಕಗಳಿಂದ ಬೆಳೆಗಳನ್ನು ನಾಶಗೊಳಿಸುವುದು, ಮೂರು ದಿನಗಳ ಕಾಲ ಸಂಪೂರ್ಣವಾಗಿ ಕತ್ತಲಾಗಿ ಮಾಡುವುದು ಮತ್ತು ಚೊಚ್ಚಲ ಗಂಡು ಮಕ್ಕಳನ್ನು ಸಾಯಿಸುವುದು ಒಳಗೊಂಡಿರುತ್ತವೆ.
  • ಇದನ್ನು “ಬಹು ವಿಸ್ತಾರವಾದ ವಿಪತ್ತುಗಳು” ಅಥವಾ “ಬಹು ವಿಸ್ತಾರವಾದ ರೋಗ” ಎಂದು ಸಂದರ್ಭಾನುಗುಣವಾಗಿ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಆನೆಕಲ್ಲು, ಇಸ್ರಾಯೇಲ್, ಮೋಶೆ, ಫರೋಹ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1698, H4046, H4194, H4347, H5061, H5062, H5063, G3061, G3148, G4127

ಮಿಡತೆ, ಮಿಡತೆಗಳು

# ಸತ್ಯಾಂಶಗಳು:

“ಮಿಡತೆ” ಎನ್ನುವ ಪದವು ಕುಪ್ಪಳಿಸಿ ಮೇಲಕ್ಕೆ ಹಾರುವ ಕೀಟವನ್ನು ಸೂಚಿಸುತ್ತದೆ, ಇದು ಕೆಲವೊಂದುಬಾರಿ ಹೊಲಗಳಲ್ಲಿ ಹಾಕಿರುವ ತರಕಾರಿಯನ್ನು ನಾಶಮಾಡುವುದಕ್ಕೆ ಒಂದೇ ಜಾತಿಯ ಇತರ ಎಲ್ಲಾ ಮಿಡತೆಗಳೊಂದಿಗೆ ಹಾರಿ ಹೋಗುತ್ತಾ ಇರುತ್ತವೆ.

  • ಮಿಡತೆಗಳು ಮತ್ತು ಇತರ ಒಂದೇ ಜಾತಿಯ ಮಿಡತೆಗಳು ದೊಡ್ಡದಾಗಿದ್ದು ನೇರವಾದ ಉದ್ದಕ್ಕಿರುವ ರೆಕ್ಕೆಗಳನ್ನು ಒಳಗೊಂಡಿರುವ ಕೀಟಗಳಾಗಿರುತ್ತವೆ, ತುಂಬಾ ದೂರಕ್ಕೆ ಹಾರುವುದಕ್ಕೆ ಅಥವಾ ಜಿಗಿಯುವುದಕ್ಕೆ ಬೇಕಾದ ಸಾಮರ್ಥ್ಯವನ್ನು ಹೊಂದಿರುವ ಎರಡು ಕಾಲುಗಳನ್ನು ಹೊಂದಿರುತ್ತವೆ.

ಹಳೇ ಒಡಂಬಡಿಕೆಯಲ್ಲಿ ಹಾನಿಮಾಡುವ ಮಿಡತೆಗಳನ್ನು ಇಸ್ರಾಯೇಲ್ಯರ ಅವಿಧೇಯತೆಗೆ ಫಲಿತಾಂಶವಾಗಿ ಬರುವ ವಿನಾಶದ ಚಿತ್ರವನ್ನಾಗಿ ಅಥವಾ ಒಂದು ಗುರುತನ್ನಾಗಿ ಅಲಂಕಾರಿಕವಾಗಿ ಉಪಯೋಗಿಸಲ್ಪಟ್ಟಿರುತ್ತದೆ.

  • ಐಗುಪ್ತರಿಗೆ ವಿರುದ್ಧವಾಗಿ ದೇವರು ಕಳುಹಿಸಿದ ಹತ್ತು ಮಾರಿರೋಗಗಳಲ್ಲಿ ಮಿಡತೆಗಳು ಒಂದಾಗಿತ್ತು.
  • ಸ್ನಾನಿಕನಾದ ಯೋಹಾನನು ಅರಣ್ಯದಲ್ಲಿದ್ದಾಗ, ಈತನು ಆಹಾರವನ್ನಾಗಿ ಮಿಡತೆಗಳನ್ನೇ ತೆಗೆದುಕೊಳ್ಳುತ್ತಿದ್ದನೆಂದು ಹೊಸ ಒಡಂಬಡಿಕೆ ಹೇಳುತ್ತಿದೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಸೆರೆ, ಐಗುಪ್ತ, ಇಸ್ರಾಯೇಲ್, [ಯೋಹಾನ (ಸ್ನಾನಿಕನು), ಮಾರಿರೋಗ](../other/plague.md))

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H697, H1357, H1462, H1501, H2284, H3218, H5556, H6767, G200

ಮೀರು, ಮೀರುತ್ತದೆ, ಹಿಂದೆಹಾಕಲಾಗಿದೆ, ಮೀರಿದೆ

# ಪದದ ಅರ್ಥವಿವರಣೆ:

“ಮೀರು” ಮತ್ತು “ಮೀರಿದೆ” ಎನ್ನುವ ಪದಗಳು ಯಾರಾದರೊಬ್ಬರ ಅಥವಾ ಯಾವುದಾದರೊಂದರ ಮೇಲೆ ನಿಯಂತ್ರಣ ತೆಗೆದುಕೊಳ್ಳುವುದನ್ನು ಸೂಚಿಸುತ್ತದೆ. ಇದು ಸಾಧಾರಣವಾಗಿ ಯಾವುದಾದರೊಂದನ್ನು ಹಿಂಬಾಲಿಸಿದ ಮೇಲೆ ಅದನ್ನು ಹಿಡಿದುಕೊಳ್ಳುವ ಆಲೋಚನೆಯನ್ನೂ ಒಳಗೊಂಡಿರುತ್ತದೆ.

  • ಮಿಲಟರಿ ಪಡೆಗಳು ಶತ್ರುವನ್ನು “ಮೀರಿದಾಗ”, ಈ ಮಾತಿಗೆ ಅವರು ಯುದ್ಧದಲ್ಲಿ ಶತ್ರುವನ್ನು ಸೋಲಿಸಿದ್ದಾರೆ ಎಂದರ್ಥ.
  • ಬೇಟೆಗಾರನು ತನ ಬೇಟೆಯನ್ನು ಮೀರಿದಾಗ ಎನ್ನುವ ಮಾತಿಗೆ ತನ್ನ ಬೇಟೆಯಲ್ಲಿ ಹಿಂಬಾಲಿಸಿದ್ದಾನೆ ಮತ್ತು ಹಿಡಿದಿದ್ದಾನೆ ಎಂದರ್ಥ.
  • ಶಾಪವು ಯಾರಾದರೊಬ್ಬರನ್ನು “ಮೀರಿದರೆ”, ಇದಕ್ಕೆ ಆ ಶಾಪದಲ್ಲಿ ಹೇಳಲ್ಪಟ್ಟ ಪ್ರತಿಯೊಂದು ಮಾತು ಆ ವ್ಯಕ್ತಿಯ ಜೀವನದಲ್ಲಿ ನಡೆಯುತ್ತದೆ ಎಂದರ್ಥ.
  • ಆಶೀರ್ವಾದಗಳು ಜನರನ್ನು “ಮೀರಿದರೆ” ಎನ್ನುವ ಈ ಮಾತಿಗೆ ಆ ಆಶೀರ್ವಾದಗಳನ್ನು ಆ ಜನರು ಅನುಭವಿಸುವರು ಎಂದರ್ಥವಾಗಿರುತ್ತದೆ.
  • ಸಂದರ್ಭಾನುಸಾರವಾಗಿ “ಮೀರು” ಎನ್ನುವ ಪದವನ್ನು “ಜಯಿಸು” ಅಥವಾ “ಹಿಡಿದುಕೋ” ಅಥವಾ “ಸೋಲಿಸು” ಅಥವಾ “ಹಿಡಿ” ಅಥವಾ “ಸಂಪೂರ್ಣವಾಗಿ ಪ್ರಭಾವಗೊಳಿಸು” ಎಂದೂ ಅನುವಾದ ಮಾಡಬಹುದು.
  • ಭೂತ ಕಾಲ ಕ್ರಿಯೆಯಾಗಿರುವ “ಮೀರಿದೆ” ಎನ್ನುವ ಪದವನ್ನು “ಹಿಡಿಯಲ್ಪಟ್ಟಿದೆ” ಅಥವಾ “ಅದರ ಜೊತೆಯಲ್ಲಿ ಬಂದಿದೆ” ಅಥವಾ “ಜಯಿಸಲ್ಪಟ್ಟಿದೆ” ಅಥವಾ “ಸೋಲಿಸಲಾಗಿದೆ” ಅಥವಾ “ಹಾನಿಯನ್ನುಂಟು ಮಾಡಲಾಗಿದೆ” ಎಂದೂ ಅನುವಾದ ಮಾಡಬಹುದು.
  • ಅವರ ಪಾಪದ ಕಾರಣದಿಂದ ಕತ್ತಲೆ ಅಥವಾ ಶಿಕ್ಷೆ ಅಥವಾ ಭಯಗಳು ಜನರನ್ನು ಮೀರಿವೆ ಎಂದು ಎಚ್ಚರಿಕೆ ಕೊಡುವುದರಲ್ಲಿ ಉಪಯೋಗಿಸಿದಾಗ, ಈ ಜನರು ಪಶ್ಚಾತ್ತಾಪ ಹೊಂದದಿದ್ದರೆ ಈ ಎಲ್ಲಾ ಶಾಪಗಳನ್ನು ಅನುಭವಿಸುತ್ತಾರೆಂದು ಇದರ ಅರ್ಥವಾಗಿರುತ್ತದೆ.
  • “ನನ್ನ ಮಾತುಗಳನ್ನು ನಿಮ್ಮ ತಂದೆಗಳನ್ನು ಮೀರಿ ಹೋಗಿವೆ” ಎನ್ನುವ ಮಾತಿಗೆ ಯೆಹೋವನು ಅವರ ಪೂರ್ವಜರಿಗೆ ಕೊಟ್ಟ ಬೋಧನೆಗಳೀಗ ಪೂರ್ವಜರಿಗೆ ಶಿಕ್ಷೆಯನ್ನು ಹೊಂದುವಂತೆ ಮಾಡಿವೆ, ಯಾಕಂದರೆ ಅವರು ಆ ಬೋಧನೆಗಳಿಗೆ ವಿಧೇಯತೆಯನ್ನು ತೋರಿಸಿರಲಿಲ್ಲ.

(ಈ ಪದಗಳನ್ನು ಸಹ ನೋಡಿರಿ : ಆಶೀರ್ವದಿಸು, ಶಪಿಸು, ಬೇಟೆ, ಶಿಕ್ಷಿಸು)

# ಸತ್ಯವೇದದ ಅನುಬಂಧ ವಾಕ್ಯಗಳು :

{{tag>publish ktlink}

# ಪದ ಡೇಟಾ:

  • Strong's: H579, H935, H1692, H4672, H5066, H5381, G2638, G2983

ಮೀರು, ಮೀರುವುದು, ಮೀರಿದೆ, ಮೀರುತ್ತಾಯಿರುವುದು, ಮೀರುವವನು, ಮೀರಿದ, ಮೀರುವಿಕೆ

# ಪದದ ಅರ್ಥವಿವರಣೆ:

“ಮೀರು” ಎನ್ನುವ ಪದಕ್ಕೆ ಒಬ್ಬರ ಅಧಿಕಾರಕ್ಕೆ ಒಳಗಾಗದಂತೆ ತಿರಸ್ಕಾರ ಮಾಡುವುದು ಎಂದರ್ಥ. “ಮೀರುವ” ಒಬ್ಬ ವ್ಯಕ್ತಿ ಅನೇಕಬಾರಿ ಅವಿಧೇಯತೆಯನ್ನು ತೋರಿಸಿ, ಅನೇಕ ಕೆಟ್ಟ ಕಾರ್ಯಗಳನ್ನು ಮಾಡುತ್ತಾ ಇರುವನು. ಈ ರೀತಿಯ ವ್ಯಕ್ತಿಯನ್ನು “ಮೀರುವವನು” ಎಂದು ಕರೆಯುತ್ತಾರೆ.

  • ಒಬ್ಬ ವ್ಯಕ್ತಿಗೆ ತನ್ನ ಅಧಿಕಾರಿಗಳು ಇದನ್ನು ಮಾಡಬೇಡ ಎಂದು ಹೇಳಿದಾಗ ಆ ವ್ಯಕ್ತಿ ತಿರುಗಿಬೀಳುವನು ಅಥವಾ ಮೀರುವನು.
  • ಅಧಿಕಾರಿಗಳು ಇದನ್ನು ಮಾಡಬೇಕೆಂದು ಹೇಳಿದ ಕಾರ್ಯಗಳನ್ನು ಮಾಡದೇ ತಿರಸ್ಕಾರ ಮಾಡುವುದರ ಮೂಲಕ ಕೂಡ ಆ ವ್ಯಕ್ತಿಯು ಮೀರುವ ಅವಕಾಶವಿದೆ.
  • ಕೆಲವೊಂದುಬಾರಿ ಜನರು ತಮ್ಮ ಸರ್ಕಾರಕ್ಕೆ ಅಥವಾ ತಮ್ಮನ್ನು ಆಳುವ ನಾಯಕನಿಗೆ ವಿರುದ್ಧ ತಿರುಗಿಬೀಳುವರು.
  • “ಮೀರು” ಎನ್ನುವ ಪದವನ್ನು “ಅವಿಧೇಯತೆ ತೋರಿಸು” ಅಥವಾ “ಪ್ರತಿಭಟಿಸು” ಎಂದು ಸಂದರ್ಭಾನುಗುಣವಾಗಿ ಅನುವಾದ ಮಾಡಬಹುದು.
  • “ಮೀರುವ” ಎನ್ನುವ ಪದವನ್ನು “ನಿರಂತರವಾಗಿ ಅವಿಧೇಯತೆ ತೋರಿಸು” ಅಥವಾ “ವಿಧೇಯತೆ ತೋರಿಸದೆ ತಿರಸ್ಕಾರ ಮಾಡು” ಎಂದೂ ಅನುವಾದ ಮಾಡಬಹುದು.
  • “ಮೀರುವವನು” ಎನ್ನುವ ಪದಕ್ಕೆ “ವಿಧೇಯತೆ ತೋರಿಸುವುದಕ್ಕೆ ತಿರಸ್ಕಾರ ಮಾಡುವುದು” ಅಥವಾ “ಅವಿಧೇಯತೆ” ಅಥವಾ “ನಿಯಮವನ್ನು ಉಲ್ಲಂಘನೆ ಮಾಡುವುದು” ಎಂದರ್ಥ.
  • “ಮೀರುವವನು” ಅಥವಾ “ತಿರುಗಿಬೀಳುವವನು” ಎನ್ನುವ ಮಾತು ನಿಯಮಗಳನ್ನು ಉಲ್ಲಂಘನೆ ಮಾಡುವುದರ ಮೂಲಕ, ನಾಯಕರನ್ನು ಮತ್ತು ಇತರರನ್ನು ದಾಳಿ ಮಾಡುವುದರ ಮೂಲಕ ಆಳುತ್ತಿರುವ ಅಧಿಕಾರಿಗಳ ವಿರುದ್ಧ ಬಹಿರಂಗವಾಗಿ ತಿರುಗಿಬೀಳುವ ಜನರ ಗುಂಪಿನ ಸಂಸ್ಥೆಯನ್ನೂ ಸೂಚಿಸುತ್ತದೆ. ಅನೇಕಬಾರಿ ತಿರುಗಿಬೀಳುವುದರಲ್ಲಿ ಅನೇಕರನ್ನು ಸೇರಿಸಿಕೊಳ್ಳುವುದಕ್ಕೆ ಅವರು ಪ್ರಯತ್ನಪಡುತ್ತಿರುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ಅಧಿಕಾರ, ಪಾಲಕ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಉದಾಹರಣೆಗಳು:

  • 14:14_ ಇಸ್ರಾಯೇಲ್ಯರು ಸುಮಾರು ನಲವತ್ತು ವರ್ಷಗಳ ಕಾಲ ಅರಣ್ಯದಲ್ಲಿ ಸಂಚಾರ ಮಾಡಿದನಂತರ, ದೇವರಿಗೆ ವಿರುದ್ಧವಾಗಿ ____ ಮೀರಿದ ___ ಪ್ರತಿಯೊಬ್ಬರೂ ಸತ್ತುಹೋದರು.
  • 18:07_ ಇಸ್ರಾಯೇಲ್ ದೇಶದ ಹತ್ತು ಕುಲಗಳು ರೆಹೋಬ್ಬಾಮನಿಗೆ ವಿರುದ್ಧವಾಗಿ ___ ತಿರುಗಿಬಿದ್ದರು ___.
  • 18:09_ ಯಾರೋಬ್ಬಾಮನು ದೇವರಿಗೆ ವಿರುದ್ಧವಾಗಿ ___ ತಿರುಗಿಬಿದ್ದನು ___ ಮತ್ತು ಜನರೆಲ್ಲರು ಪಾಪ ಮಾಡುವುದಕ್ಕೆ ಕಾರಣನಾದನು.
  • 18:13_ ಯೆಹೂದ್ಯರಲ್ಲಿ ಅನೇಕ ಜನರು ದೇವರಿಗೆ ವಿರುದ್ದವಾಗಿ ___ ಮೀರಿದರು ___ ಮತ್ತು ಇತರ ದೇವತೆಗಳನ್ನು ಆರಾಧಿಸಿದರು.
  • 20:07_ ಆದರೆ ಕೆಲವು ವರ್ಷಗಳಾದನಂತರ, ಯೆಹೂದ್ಯ ಅರಸನು ಬಾಬೆಲೋನಿಯಗೆ ವಿರುದ್ಧವಾಗಿ ___ ಮೀರಿದನು ___ .
  • 45:03_ “ಹಠಮಾರಿಗಳೇ, ಮನಶುದ್ಧಿಯೂ, ಕರ್ಣಶುದ್ಧಿಯೂ ಇಲ್ಲದವರೇ, ನಿಮ್ಮ ಪಿತೃಗಳು ಹೇಗೋ ಹಾಗೆಯೇ ನೀವೂ ಯಾವಾಗಲೂ ಪವಿತ್ರಾತ್ಮನಿಗೆ ___ ಎದುರಾಗಿ ___ ನಡೆಯುವವರಾಗಿದ್ದೀರಿ. ಎಂದು ಅವನು (ಸ್ತೆಫೆನ) ಹೇಳಿದನು.

# ಪದ ಡೇಟಾ:

  • Strong's: H4775, H4776, H4777, H4779, H4780, H4784, H4805, H5327, H5627, H5637, H6586, H6588, H7846, G3893, G4955

ಮುಖ, ಮುಖಗಳು, ಅಭಿಮುಖವಾಗಿರು, ಮುಖದ, ಕೆಳಮುಖವಾಗಿ

# ಪದದ ಅರ್ಥವಿವರಣೆ:

“ಮುಖ” ಎನ್ನುವ ಪದವು ಅಕ್ಷರಾರ್ಥವಾಗಿ ಒಬ್ಬ ವ್ಯಕ್ತಿ ತಲೆ ಮುಂಭಾಗವನ್ನು ಸೂಚಿಸುತ್ತದೆ. ಈ ಪದಕ್ಕೆ ಅನೇಕವಾದ ಅಲಂಕಾರಿಕ ಅರ್ಥಗಳು ಇರುತ್ತವೆ.

  • “ನಿನ್ನ ಮುಖ” ಎನ್ನುವ ಮಾತಿಗೆ ಅನೇಕಬಾರಿ ಅಲಂಕಾರಿಕ ವಿಧಾನದಲ್ಲಿ “ನೀನು” ಎಂದು ಹೇಳುವುದಾಗಿರುತ್ತದೆ. ಅದೇರೀತಿಯಾಗಿ, “ನನ್ನ ಮುಖ” ಎನ್ನುವ ಮಾತಿಗೆ ಅನೇಕಬಾರಿ “ನಾನು” ಅಥವಾ “ನನಗೆ” ಎಂದರ್ಥ.
  • ಭೌತಿಕ ಭಾವನೆಯಲ್ಲಿ ಅವರ ಕಡೆಗೆ ಅಥವಾ ಅದರ ಕಡೆಗೆ “ಮುಖವನ್ನು” ತಿರುಗಿಸು ಎನ್ನುವ ಮಾತಿಗೆ ಆ ವಸ್ತುವು ಅಥವಾ ಆ ವ್ಯಕ್ತಿ ಇರುವ ಕಡೆಗೆ ನೋಡು ಎಂದರ್ಥ.
  • “ಒಬ್ಬರಿಗೊಬ್ಬರು ಮುಖವನ್ನು ನೋಡಿಕೊಳ್ಳಿರಿ” ಎನ್ನುವ ಮಾತಿಗೆ “ಒಬ್ಬರಲ್ಲೊಬ್ಬರು ನೇರವಾಗಿ ನೋಡಿಕೊಳ್ಳಿರಿ” ಎಂದರ್ಥ.
  • “ಮುಖಾಮುಖಿಯಾಗಿ” ಇರುವುದು ಎಂದರೆ ಇಬ್ಬರು ವ್ಯಕ್ತಿಗಳು ಬಹಳ ಹತ್ತಿರವಾಗಿದ್ದು ಒಬ್ಬರಲ್ಲೊಬ್ಬರು ನೋಡಿಕೊಳ್ಳುವುದು ಎಂದರ್ಥ.
  • ಯೇಸು “ಯೆರೂಸಲೇಮಿಗೆ ಹೋಗುವುದಕ್ಕೆ ಮನಸ್ಸನ್ನು ದೃಢ ಮಾಡಿಕೊಂಡಾಗ “ ಎನ್ನುವ ಮಾತಿಗೆ ಆತನು ಹೋಗುವುದಕ್ಕೆ ನಿರ್ಧರಿಸಿಕೊಂಡಿದ್ದಾನೆ ಎಂದರ್ಥ.
  • ಜನರಿಗೆ ಅಥವಾ ಪಟ್ಟಣಕ್ಕೆ “ವಿರುದ್ಧವಾಗಿ ಒಬ್ಬರ ಮುಖವನ್ನು ಇರಿಸು ಎನ್ನುವ ಮಾತಿಗೆ ಆ ವ್ಯಕ್ತಿಯನ್ನು ಅಥವಾ ಆ ಪಟ್ಟಣವನ್ನು ತಿರಿಸ್ಕರಿಸು ಅಥವಾ ಎಂದಿಗೂ ಬೆಂಬಲ ಕೊಡದಂತೆ ನಿರ್ಧರಿಸಿಕೋ ಎಂದರ್ಥ.
  • “ಭೂಮಿಯ ಮುಖ” ಎನ್ನುವ ಮಾತು ಭೂಮಿಯ ಮೇಲ್ಮೈಯನ್ನು ಮತ್ತು ಅನೇಕಬಾರಿ ಈ ಮಾತು ಇಡೀ ಭೂ ಲೋಕವನ್ನು ಸೂಚಿಸುತ್ತದೆ. ಉದಾಹರಣೆಗೆ, “ಭೂಮಿಯ ಮೇಲೆ ಬರಗಾಲವು ಆವರಿಸಲ್ಪಟ್ಟಿದೆ” ಎನ್ನುವ ಈ ಮಾತು ಭೂಮಿಯ ಮೇಲೆ ನಿವಾಸವಾಗಿರುವ ಎಲ್ಲಾ ಜನರಿಗೆ ಪ್ರಭಾವವನ್ನು ಬಿರುತ್ತದೆ.
  • “ನಿನ್ನ ಜನರಿಂದ ನಿನ್ನ ಮುಖವನ್ನು ಮರೆಮಾಚಬೇಡ” ಎನ್ನುವ ಅಲಂಕಾರಿಕ ಮಾತಿಗೆ “ನಿನ್ನ ಜನರನ್ನು ತಿರಸ್ಕರಿಸಬೇಡ” ಅಥವಾ “ನಿನ್ನ ಜನರನ್ನು ಕೈಬಿಡಬೇಡ” ಅಥವಾ “ನಿನ್ನ ಜನರ ಸಂಕ್ಷೇಮವು ನೋಡಿಕೊಳ್ಳುವುದನ್ನು ನಿಲ್ಲಿಸಬೇಡ” ಎಂದರ್ಥ.

# ಅನುವಾದ ಸಲಹೆಗಳು:

  • ಸಾಧ್ಯವಾದರೆ ಒಂದೇ ಅರ್ಥ ಬರುವಂಥಹ ಪದವನ್ನು ಅಥವಾ ಮಾತನ್ನು ಅನುವಾದ ಮಾಡುವ ಭಾಷೆಯಲ್ಲಿರುವುದು ಉತ್ತಮ.
  • “ಮುಖ” ಎನ್ನುವ ಪದವನ್ನು “ತಿರುಗು” ಅಥವಾ “ನೇರವಾಗಿ ನೋಡು” ಅಥವಾ “ಮುಖವನ್ನೇ ನೋಡು” ಎಂದೂ ಅನುವಾದ ಮಾಡಬಹುದು.
  • “ಮುಖಾಮುಖಿ” ಎನ್ನುವ ಮಾತಿಗೆ “ತುಂಬಾ ಹತ್ತಿರವಾಗಿ” ಅಥವಾ “ಒಬ್ಬರ ಮುಂದೆ ಒಬ್ಬರು” ಅಥವಾ “ಸಮಕ್ಷಮದಲ್ಲಿ” ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಸಾರವಾಗಿ “ಆತನ ಮುಖದ ಮುಂದೆ” ಎನ್ನುವ ಮಾತನ್ನು “ಆತನ ಮುಂದೆ” ಅಥವಾ “ಆತನ ಎದುರಿನಲ್ಲಿ” ಅಥವಾ “ಆತನು ನಿಂತಿರುವ ಎದುರಿನಲ್ಲೇ” ಅಥವಾ “ಆತನ ಸಮಕ್ಷದಲ್ಲಿ” ಎಂದೂ ಅನುವಾದ ಮಾಡಬಹುದು.
  • “ಆ ದಿಕ್ಕಿಗೆ ತನ್ನ ಮುಖವನ್ನಿರಿಸು” ಎನ್ನುವ ಮಾತಿಗೆ “ಆ ದಿಕ್ಕಿಗೆ ಪ್ರಯಾಣ ಆರಂಭಿಸಿದೆ” ಅಥವಾ “ಹೋಗುವುದಕ್ಕೆ ತನ್ನ ಮನಸ್ಸನ್ನು ಸಿದ್ಧಗೊಳಿಸು” ಎಂದೂ ಅನುವಾದ ಮಾಡಬಹುದು.
  • “ಅವನಿಂದ ಮುಖವನ್ನು ಮರೆಮಾಚು” ಎನ್ನುವ ಮಾತಿಗೆ “ಅವನಿಂದ ತಿರುಗಿಕೋ” ಅಥವಾ “ರಕ್ಷಿಸುವುದನ್ನು ಅಥವಾ ಸಹಾಯ ಮಾಡುವುದನ್ನು ನಿಲ್ಲಿಸು” ಅಥವಾ “ತಿರಸ್ಕರಿಸು” ಎಂದೂ ಅನುವಾದ ಮಾಡಬಹುದು.
  • ಜನರಿಗೆ ಅಥವಾ ಪಟ್ಟಣಕ್ಕೆ “ವಿರುದ್ಧವಾಗಿ ತನ್ನ ಮುಖವನ್ನು ಇರಿಸು” ಎನ್ನುವ ಮಾತಿಗೆ “ಕೋಪದಿಂದಲೂ ಮತ್ತು ಶಿಕ್ಷಿಸುವ ದೃಷ್ಟಿಯಿಂದಲೂ ನೋಡು” ಅಥವಾ “ಅಂಗೀಕಾರ ಮಾಡುವುದಕ್ಕೆ ತಿರಸ್ಕರಿಸು” ಅಥವಾ “ತಿರಸ್ಕಾರ ಮಾಡುವುದಕ್ಕೆ ನಿರ್ಣಯಿಸು” ಅಥವಾ “ಶಿಕ್ಷಿಸು ಮತ್ತು ತಿರಸ್ಕರಿಸು” ಅಥವಾ “ತೀರ್ಪು ಮಾಡು” ಎಂದೂ ಅನುವಾದ ಮಾಡಬಹುದು.
  • “ಅವರ ಮುಖದ ಮೇಲೆ ಹೇಳು” ಎನ್ನುವ ಮಾತನ್ನು “ನೇರವಾಗಿ ಅವರಿಗೆ ಹೇಳು” ಅಥವಾ “ಅವರು ಇರುವಾಗಲೇ ಅವರಿಗೆ ಹೇಳು” ಅಥವಾ “ಅವರಲ್ಲಿ ಒಬ್ಬೊಬ್ಬರಿಗೆ ಹೇಳು” ಎಂದೂ ಅನುವಾದ ಮಾಡಬಹುದು.
  • “ಭೂಮಿಯ ಮುಖದ ಮೇಲೆ” ಎನ್ನುವ ಮಾತಿಗೆ “ಭೂಮಿಯಲ್ಲೆಲ್ಲಾ” ಅಥವಾ “ಸರ್ವ ಭೂಮಿಯ ಮೇಲೆ” ಅಥವಾ “ಭೂಲೋಕದಲ್ಲೆಲ್ಲಾ ಜೀವಿಸುವುದು” ಎಂದೂ ಅನುವಾದ ಮಾಡಬಹುದು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H600, H639, H5869, H6440, H8389, G3799, G4383, G4750

ಮುಖ್ಯಸ್ಥ, ಮುಖ್ಯಸ್ಥರು

# ಪದದ ಅರ್ಥವಿವರಣೆ:

“ಮುಖ್ಯಸ್ಥ” ಎನ್ನುವ ಪದವು ಒಂದು ನಿರ್ಧಿಷ್ಠವಾದ ಗುಂಪಿಗೆ ಇರುವ ಅತೀ ಮುಖ್ಯವಾದ ನಾಯಕನನ್ನು ಅಥವಾ ಅತೀ ಶಕ್ತಿಯುಳ್ಳ ನಾಯಕನನ್ನು ಸೂಚಿಸುತ್ತದೆ.

  • ಇಲ್ಲಿ ಕೆಲವೊಂದು ಉದಾಹರಣೆಗಳಿವೆ ನೋಡಿರಿ, “ಮುಖ್ಯ ಸಂಗೀತಗಾರ”, “ಮುಖ್ಯ ಯಾಜಕ” ಮತ್ತು “ಮುಖ್ಯ ತೆರಿಗೆ ಸಂಗ್ರಾಹಕ” ಮತ್ತು “ಮುಖ್ಯ ಪಾಲಕರು” .
  • ಈ ಪದವನ್ನು ಒಂದು ವಿಶೇಷವಾದ ಕುಟುಂಬದ ಯಜಮಾನನನ್ನು ಸೂಚಿಸುತ್ತದೆ, ಆದಿಕಾಂಡದಲ್ಲಿ 36 ಮಂದಿ ಪುರುಷರ ಹೆಸರುಗಳನ್ನು ತಮ್ಮ ಕುಟುಂಬಗಳ “ಮುಖ್ಯಸ್ಥರನ್ನಾಗಿ” ಬರೆಯಲ್ಪಟ್ಟಿದೆ. ಈ ಸಂದರ್ಭದಲ್ಲಿ, “ಮುಖ್ಯಸ್ಥ” ಎನ್ನುವ ಪದವನ್ನು “ನಾಯಕ” ಅಥವಾ “ತಲೆ ತಂದೆ” ಎಂದೂ ಅನುವಾದ ಮಾಡಬಹುದು.
  • ಒಂದು ನಾಮಪದವನ್ನು ವಿವರಿಸುವುದಕ್ಕೆ ಉಪಯೋಗಿಸಿದಾಗ, ಈ ಪದವನ್ನು “ಪ್ರಮುಖ ಸಂಗೀತಗಾರ” ಅಥವಾ “ಪಾಲಿಸುತ್ತಿರುವ ಯಾಜಕ” ಎಂದು ಈ ಪದಗಳಲ್ಲಿರುವಂತೆ “ಪ್ರಮುಖ” ಅಥವಾ “ಪಾಲಕ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಮುಖ್ಯ ಯಾಜಕರು, ಯಾಜಕ, ತೆರಿಗೆ ಸಂಗ್ರಾಹಕರು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H47, H441, H5057, H5387, H5632, H6496, H7218, H7225, H7227, H7229, H7262, H8269, H8334, G749, G750, G754, G4410, G4413, G5506

ಮುಂತಿಳಿದಿರುವುದು, ಮುನ್ನರಿವು

# ಪದದ ಅರ್ಥವಿವರಣೆ

“ಮುಂತಿಳಿದಿರುವುದು” ಮತ್ತು “ಮುನ್ನರಿವು” ಎನ್ನುವ ಪದಗಳು “ಮುಂತಿಳಿ” ಎನ್ನುವ ಕ್ರಿಯಾ ಪದದಿಂದ ಬಂದಿವೆ, ಇದಕ್ಕೆ ಯಾವುದಾದರೊಂದು ನಡೆಯುವುದಕ್ಕೆ ಮುಂಚಿತವಾಗಿ ಅದರ ಕುರಿತಾಗಿ ಏನಾದರೊಂದು ತಿಳಿದುಕೊಳ್ಳುವುದು ಎಂದರ್ಥ.

  • ದೇವರು ಕಾಲದಿಂದ ಪರಿಮಿತರಾಗಿರುವುದಿಲ್ಲ. ಆತನಿಗೆ ಭೂತ, ವರ್ತಮಾನ ಮತ್ತು ಭವಿಷ್ಯತ್ತಿನಲ್ಲಿ ನಡೆಯುವ ಪ್ರತಿಯೊಂದರ ಕುರಿತಾಗಿ ತಿಳಿದಿರುತ್ತದೆ.
  • ಯೇಸುವನ್ನು ತಮ್ಮ ರಕ್ಷಕನನ್ನಾಗಿ ಸ್ವೀಕರಿಸುವುದರ ಮೂಲಕ ರಕ್ಷಣೆ ಹೊಂದಿಕೊಳ್ಳುವವರ ಕುರಿತಾಗಿ ದೇವರಿಗೆ ಮುಂಚಿತವಾಗಿಯೇ ಗೊತ್ತಿದೆಯೆನ್ನುವ ಸಂದರ್ಭದಲ್ಲಿ ಈ ಪದವು ಹೆಚ್ಚಾಗಿ ಉಪಯೋಗಿಸಲ್ಪಟ್ಟಿರುತ್ತದೆ.

# ಅನುವಾದ ಸಲಹೆಗಳು;

  • “ಮುಂತಿಳಿದಿರುವುದು” ಎನ್ನುವ ಪದವನ್ನು “ಮುಂಚಿತವಾಗಿ ತಿಳಿದುಕೊಂಡಿರುವುದು” ಅಥವಾ “ಮುಂಬರುವ ಸಮಯದ ಕುರಿತಾಗಿ ತಿಳಿದುಕೊಂಡಿರುವುದು” ಅಥವಾ “ಮುಂಚಿತವಾಗಿ ತಿಳಿದುಕೊಂಡಿರುವುದು” ಅಥವಾ “ಈಗಾಗಲೇ ತಿಳಿದುಕೊಂಡಿರುವುದು” ಎಂದೂ ಅನುವಾದ ಮಾಡಬಹುದು.
  • “ಮುನ್ನರಿವು” ಎನ್ನುವ ಪದವನ್ನು “ಮುಂದೇ ಅರಿತಿರುವುದು” ಅಥವಾ “ಮುಂದೆ ಬರುವ ಸಮಯದ ಕುರಿತಾಗಿ ಅರಿತುಕೊಂಡಿರುವುದು” ಅಥವಾ “ಈಗಾಗಲೇ ಅರಿತಿರುವುದು” ಅಥವಾ “ಮುಂಚಿತವಾಗಿಯೇ ಅರಿತಿರುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ತಿಳಿ, ಪೂರ್ವ ನಿರ್ಣಯಿತ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: G4267, G4268

ಮುತ್ತಿಗೆ ಹಾಕು, ಮುತ್ತಿಗೆ ಹಾಕಲ್ಪಟ್ಟಿರುವುದು, ಮುತ್ತಿಗೆ ಹಾಕಲ್ಪಟ್ಟಿದೆ, ಮುತ್ತಿಗೆದಾರರು, ಮುತ್ತಿಗೆ ಹಾಕುತ್ತಿರುವುದು, ಮುತ್ತಿಗೆ ಹಾಕುವ ಕೆಲಸಗಳು

# ಪದದ ಅರ್ಥವಿವರಣೆ:

“ಮುತ್ತಿಗೆ ಹಾಕು” ಎನ್ನುವುದು ಧಾಳಿ ಮಾಡುವ ಸೈನ್ಯವು ಪಟ್ಟಣದ ಸುತ್ತಲೂ ಆವರಿಸಿಕೊಂಡಾಗ ಉಪಯೋಗಿಸಲಾಗುತ್ತದೆ ಮತ್ತು ಯಾವುದೇ ಆಹಾರ ಪಾನೀಯಗಳನ್ನು ಪಡೆಯದೇ ತಡೆಯುವುದನ್ನು ಸೂಚಿಸುತ್ತದೆ. ಪಟ್ಟಣವನ್ನು “ಮುತ್ತಿಗೆ ಹಾಕಲ್ಪಟ್ಟಿರುವುದು” ಅಥವಾ ಅದನ್ನು “ಮುತ್ತಿಗೆಯ ಕೆಳಗೆ ಇರುವುದು” ಎನ್ನುವ ಮಾತುಗಳಿಗೆ ಮುತ್ತಿಗೆ ಹಾಕುವದರಿಂದ ಇದನ್ನು ಧಾಳಿ ಮಾಡುವುದು ಎಂದರ್ಥ.

  • ಬಾಬೆಲೋನಿಯರು ಇಸ್ರಾಯೇಲ್ಯರನ್ನು ಧಾಳಿ ಮಾಡುವುದಕ್ಕೆ ಬಂದಾಗ, ಪಟ್ಟಣದಲ್ಲಿರುವ ಜನರನ್ನು ಬಲಹೀನಪಡಿಸುವುದಕ್ಕೆ ಯೆರೂಸಲೇಮಿಗೆ ವಿರುದ್ಧವಾಗಿ ಮುತ್ತಿಗೆ ಹಾಕುವ ಪದ್ಧತಿಯನ್ನು ಉಪಯೋಗಿಸುವುದು.
  • ಮುತ್ತಿಗೆ ಹಾಕುವ ಸಮಯದಲ್ಲಿ ನಗರವನ್ನು ಆಕ್ರಮಿಸಿ ಮತ್ತು ಪಟ್ಟಣದ ಗೋಡೆಗಳನ್ನು ದಾಟಿ ಹೋಗುವುದಕ್ಕೆ ಧಾಳಿ ಮಾಡುವ ಸೈನ್ಯವನ್ನು ಬಲಪಡಿಸುವುದಕ್ಕೆ ಕೊಳಕು ಇಳಿಜಾರುಗಳನ್ನು ಕ್ರಮೇಣವಾಗಿ ನಿರ್ಮಿಸಲಾಗುತ್ತದೆ.
  • ಪಟ್ಟಣವನ್ನು “ಮುತ್ತಿಗೆ ಹಾಕುತ್ತಿರುವುದು” ಎನ್ನುವ ಮಾತನ್ನು “ಮುತ್ತಿಗೆ ಹಾಕು” ಅಥವಾ ಇದರ ಮೇಲೆ “ಮುತ್ತಿಗೆ ಹಾಕುವ ಕ್ರಿಯೆಯನ್ನು” ಮಾಡಿರಿ ಎಂದಾಗಿಯು ವ್ಯಕ್ತಗೊಳಿಸಬಹುದು.
  • “ಮುತ್ತಿಗೆ ಹಾಕುತ್ತಿರುವುದು” ಎನ್ನುವ ಮಾತಿಗಿರುವ ಅರ್ಥವೇ “ಮುತ್ತಿಗೆ ಹಾಕುವದರ ಕೆಳಗೆ” ಎನ್ನುವ ಮಾತಿಗಿರುವ ಅರ್ಥವು ಒಂದೇಯಾಗಿರುತ್ತೆದೆ. ಈ ಎರಡು ಮಾತುಗಳು ಶತ್ರು ಸೈನ್ಯವು ಸುತ್ತಮುತ್ತಿದೆ ಮತ್ತು ಅವರು ಮುತ್ತಿಗೆ ಹಾಕುವರೆನ್ನುವ ಸಂದೇಶವನ್ನು ವಿವರಿಸುತ್ತೆದೆ.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H4692, H4693, H5341, H5437, H5564, H6693, H6696, H6887

ಮುದ್ದು, ಮುದ್ದುಗಳು, ಮುದ್ದಿಡಲಾಗಿದೆ, ಮುದ್ದು ಕೊಡುವುದು

# ಪದದ ಅರ್ಥವಿವರಣೆ:

ಮುದ್ದು ಎನ್ನುವುದು ಒಬ್ಬ ವ್ಯಕ್ತಿ ತನ್ನ ತುಟಿಗಳನ್ನು ಇನ್ನೊಬ್ಬ ವ್ಯಕ್ತಿಯ ತುಟಿಗಳ ಮೇಲೆ ಅಥವಾ ಮುಖದ ಮೇಲೆ ಇಡುವುದಾಗಿರುತ್ತದೆ. ಈ ಪದವನ್ನು ಅಲಂಕಾರಿಕವಾಗಿಯೂ ಉಪಯೋಗಿಸಬಹುದು.

  • ಕೆಲವೊಂದು ಸಂಸ್ಕ್ರುತಿಗಳಲ್ಲಿ ಶುಭಾಷಯಗಳನ್ನು ಹೇಳುವುದಕ್ಕೆ ಅಥವಾ ಗುಡ್ ಬೈ ಹೇಳಬೇಕೆಂದರೆ ಒಬ್ಬರಿಗೊಬ್ಬರು ಮುದ್ದನ್ನು ತಮ್ಮ ಕೆನ್ನೆಗಳ ಮೇಲೆ ಇಡುತ್ತಾರೆ.
  • ಮುದ್ದು ಎನ್ನುವುದು ಇಬ್ಬರು ವ್ಯಕ್ತಿಗಳ ಮಧ್ಯೆದಲ್ಲಿ ಆಳವಾದ ಪ್ರೀತಿಯನ್ನು ತೋರಿಸುತ್ತದೆ, ಉದಾಹರಣೆಗೆ, ಗಂಡ ಮತ್ತು ಹೆಂಡತಿ.
  • “ಚೆನ್ನಾಗಿ ಒಬ್ಬರಿಗೆ ಮುದ್ದಿಡು” ಎನ್ನುವ ಮಾತಿಗೆ ಮುದ್ದು ಕೊಟ್ಟು ಬಿಳ್ಕೊಡುಗೆ ಹೇಳುವುದು ಎಂದರ್ಥ.
  • ಕೆಲವೊಂದುಬಾರಿ “ಮುದ್ದು” ಎನ್ನುವ ಪದವು ಉಪಯೋಗಿಸಲ್ಪಟ್ಟಿದೆಯೆಂದರೆ “ವಿದಾಯ ಹೇಳುವುದಕ್ಕೆ” ಎಂದರ್ಥ. “ಮೊದಲು ನಾನು ನನ್ನ ತಂದೆಗೆ ಮತ್ತು ತಾಯಿಗೆ ಮುದ್ದಿಡುತ್ತೇನೆ” ಎಂದು ಎಲೀಷನು ಎಲೀಯನಿಗೆ ಹೇಳಿದಾಗ, ಅದಕ್ಕೆ ಆತನು ಎಲೀಯನನ್ನು ಅನುಸರಿಸಲು ಹೋಗುವುದಕ್ಕೆ ಮುಂಚಿತವಾಗಿ ತನ್ನ ತಂದೆತಾಯಿಗೆ ವಿದಾಯವನ್ನು (ಗುಡ್ ಬೈ) ಹೇಳಲು ಬಯಸುತ್ತಿದ್ದಾನೆ ಎಂದರ್ಥ.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H5390, H5401, G2705, G5368, G5370

ಮುದ್ರೆ, ಮುದ್ರೆಗಳು, ಮುದ್ರಿಸಲ್ಪಟ್ಟಿದೆ, ಮುದ್ರಿಸುವುದು, ಮುದ್ರಿಸದಿರುವುದು

# ಪದದ ಅರ್ಥವಿವರಣೆ:

ಒಂದು ವಸ್ತುವನ್ನು ಮುದ್ರಿಸುವುದು ಎಂದರೆ ಮುದ್ರೆಯನ್ನು ಮುರಿಯದಿದ್ದರೆ ತೆರೆಯುವುದಕ್ಕೆ ಸಾಧ್ಯವಾಗದಿರುವುದಕ್ಕೆ ಯಾವುದಾದರೊಂದನ್ನು ಮುಚ್ಚುವುದು ಎಂದರ್ಥವಾಗಿರುತ್ತದೆ.

  • ಅನೇಕಬಾರಿ ಈ ಮುದ್ರೆಯೂ ಯಾರಿಗೆ ಸಂಬಂಧಪಟ್ಟಿರುತ್ತದೆಯೆಂದು ಅದರ ಮೇಲೆ ತಮ್ಮದೇಯಾದ ಅಲಂಕಾರವನ್ನು ಮುದ್ರಿಸಿರುತ್ತಾರೆ.
  • ಭದ್ರವಾಗಿರುವುದಕ್ಕೆ ಪತ್ರಗಳನ್ನು ಅಥವಾ ಇತರ ಕಾಗದಗಳನ್ನು ಮುದ್ರಿಸುವುದಕ್ಕೆ ಕರಗಿದ ಮೇಣವನ್ನು ಉಪಯೋಗಿಸುತ್ತಿದ್ದರು. ಮೇಣವು ತಣ್ಣಗಾಗಿ, ಗಟ್ಟಿಯಾದ ಮೇಲೆ ಆ ಪತ್ರದ ಮುದ್ರೆಯನ್ನು ಮುರಿಯುವುತನಕ ಅದನ್ನು ತೆರೆಯುವುದಕ್ಕೆ ಸಾಧ್ಯವಾಗುವುದಿಲ್ಲ.
  • ಯೇಸುವಿನ ಸಮಾಧಿಗೆ ಇಟ್ಟಿರುವ ಕಲ್ಲನ್ನು ಯಾರೂ ಪಕ್ಕಕ್ಕೆ ತೊಲಗಿಸದೇ ಇರುವುದಕ್ಕೆ ಆ ಕಲ್ಲಿನ ಮೇಲೆ ಮುದ್ರೆಯನ್ನು ಹಾಕಿದ್ದರು.
  • ನಮ್ಮ ರಕ್ಷಣೆಯು ಭದ್ರವಾಗಿದೆಯೆಂದು ತೋರಿಸುವುದಕ್ಕೆ “ಮುದ್ರೆ”ಯನ್ನಾಗಿ ಪವಿತ್ರಾತ್ಮನನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಪೌಲನು ಈ ಪದವನ್ನು ಉಪಯೋಗಿಸಿದ್ದನು.

(ಈ ಪದಗಳನ್ನು ಸಹ ನೋಡಿರಿ : ಪವಿತ್ರಾತ್ಮ, ಸಮಾಧಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2368, H2560, H2856, H2857, H2858, H5640, G2696, G4972, G4973

ಮುಸುಕು, ಮುಸುಕುಗಳು, ಮುಸುಕು ಹಾಕಲಾಗಿದೆ, ಮುಸುಕು ತೆರೆಯುವುದು

# ಪದದ ಅರ್ಥವಿವರಣೆ:

“ಮುಸುಕು” ಎನ್ನುವ ಪವವು ಸಾಧಾರಣವಾಗಿ ತಲೆಯ ಮೇಲೆ ಹಾಕಿಕೊಳ್ಳುವುದಕ್ಕೆ ಉಪಯೋಗಿಸುವ ತೆಳುವಾದ ಬಟ್ಟೆಯನ್ನು ಮತ್ತು ಇದನ್ನು ಮುಖವನ್ನು ಅಥವಾ ತಲೆಯನ್ನು ಕಾಣಿಸಿದಂತೆ ಮುಚ್ಚುಕೊಳ್ಳುವುದಕ್ಕೆ ಉಪಯೋಗಿಸುವುದನ್ನು ಸೂಚಿಸುತ್ತದೆ.

  • ಮೋಶೆಯು ಯೆಹೋವನ ಸನ್ನಿಧಿಯಲ್ಲಿದ್ದು ಬಂದನಂತರ ಆತನು ತನ್ನ ಮುಖಕ್ಕೆ ಮುಸುಕನ್ನು ಹಾಕಿಕೊಂಡಿದ್ದನು, ಇದರಿಂದ ತನ್ನ ಮುಖದ ಮೇಲಿರುವ ಪ್ರಕಾಶಮಾನವಾದ ಮುಖವು ಜನರು ನೋಡದಂತೆ ಬಟ್ಟೆಯಿಂದ ಮುಚ್ಚಿಕೊಂಡಿದ್ದನು.
  • ಸತ್ಯವೇದದಲ್ಲಿ ಸ್ತ್ರೀಯರು ತಮ್ಮ ತಲೆಗಳ ಮೇಲೆ ಮುಸುಕುಗಳನ್ನು ಹಾಕಿಕೊಂಡಿರುತ್ತಾರೆ, ಮತ್ತು ಅವರು ಬಹಿರಂಗ ಸ್ಥಳದಲ್ಲಿ ಬರುವಾಗ ಅಥವಾ ಪುರುಷರಿರುವ ಸ್ಥಳಕ್ಕೆ ಬಂದಾಗ ತಮ್ಮ ಮುಖಕ್ಕೆ ಮುಸುಕನ್ನು ಹಾಕಿಕೊಂಡಿರಬೇಕು.
  • “ಮುಸುಕು” ಎನ್ನುವ ಪದಕ್ಕೆ ಕ್ರಿಯಪದವು ಏನೆಂದರೆ ಮುಸುಕಿನಿಂದ ಯಾವುದಾದರೊಂದನ್ನು ಹೊದಿಸುವುದು ಎಂದರ್ಥ.
  • ಕೆಲವೊಂದು ಆಂಗ್ಲ ಅನುವಾದಗಳಲ್ಲಿ, “ಮುಸುಕು” ಎನ್ನುವ ಪದವನ್ನು ಅತಿ ಪರಿಶುದ್ಧ ಸ್ಥಳಕ್ಕೆ ಹೋಗುವ ಪ್ರವೇಶದ್ವಾರಕ್ಕೆ ದಪ್ಪವಾದ ತೆರೆಯನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ. ಆದರೆ “ತೆರೆ” ಎನ್ನುವುದು ಈ ಸಂದರ್ಭದಲ್ಲಿ ಉತ್ತಮ ಪದವಾಗಿರುತ್ತದೆ, ಯಾಕಂದರೆ ಇದು ತುಂಬಾ ದಪ್ಪವಾಗಿರುವ ಬಟ್ಟೆಯಾಗಿರುತ್ತದೆ.

# ಅನುವಾದ ಸಲಹೆಗಳು:

  • “ಮುಸುಕು” ಎನ್ನುವ ಪದವನ್ನು “ತೆಳುವಾದ ಬಟ್ಟೆಯ ಮುಸುಕು” ಅಥವಾ “ಬಟ್ಟೆಯಿಂದ ಹೊದಿಸುವುದು” ಅಥವಾ “ತಲೆಯನ್ನು ಮುಚ್ಚಿಕೊಳ್ಳುವುದು” ಎಂದೂ ಅನುವಾದ ಮಾಡಬಹುದು.
  • ಕೆಲವೊಂದು ಸಂಸ್ಕೃತಿಗಳಲ್ಲಿ ಸ್ತ್ರೀಯರಿಗೆ ಹಾಕುವ ಮುಸುಕುಗೆ ಒಂದು ವಿಭಿನ್ನವಾದ ಪದವನ್ನು ಹೊಂದಿರಬಹುದು. ಈ ಪದವನ್ನು ಮೋಶೆಗೆ ಉಪಯೋಗಿಸುವಾಗ ಒಂದು ವಿಭಿನ್ನವಾದ ಪದವನ್ನು ಕಂಡುಕೊಂಡುಕೊಳ್ಳುವುದು ಅತ್ಯಗತ್ಯವಾಗಿರಬಹುದು.

(ಈ ಪದಗಳನ್ನು ಸಹ ನೋಡಿರಿ : ಮೋಶೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H7289, G2665

ಮುಳ್ಳು, ಮುಳ್ಳಿನ ಪೊದೆ, ಮುಳ್ಳಿನ ಪೊದೆಗಳು, ಮುಳ್ಳುಗಳು, ಮುಳ್ಳುಗಿಡ, ಮುಳ್ಳುಗಿಡಗಳು

# ಸತ್ಯಾಂಶಗಳು:

ಮುಳ್ಳು ಪೊದೆಗಳು ಮತ್ತು ಮುಳ್ಳಿನ ಗಿಡಗಳು ಮುಳ್ಳು ಕೊಂಬೆಗಳನ್ನು ಅಥವಾ ಹೂವುಗಳನ್ನು ಹೊಂದಿರುವ ಗಿಡಗಳಾಗಿರುತ್ತವೆ. ಈ ಗಿಡಗಳು ಉಪಯೋಗಕರವಾದದ್ದನ್ನು ಅಥವಾ ಹಣ್ಣುಗಳನ್ನು ಹುಟ್ಟಿಸುವುದಿಲ್ಲ.

  • “ಮುಳ್ಳು” ಎನ್ನುವುದು ಗಿಡದ ಕಾಂಡದ ಮೇಲಾಗಲಿ ಅಥವಾ ಕೊಂಬೆಯ ಮೇಲಾಗಲಿ ಚುಪಾಗಿ ಗಟ್ಟಿಯಾಗಿ ಬೆಳೆಯುವುದಾಗಿರುತ್ತದೆ. “ಮುಳ್ಳಿನಪೊದೆ” ಎನ್ನುವುದು ಒಂದು ವಿಧವಾದ ಚಿಕ್ಕ ಮರವಾಗಿರುತ್ತದೆ ಅಥವಾ ಅದರ ಕೊಂಬೆಗಳಲ್ಲಿ ಹೆಚ್ಚಿನ ಮುಳ್ಳುಗಳನ್ನು ಒಳಗೊಂಡಿರುವ ಪೊದರಾಗಿರುತ್ತದೆ.
  • “ಮುಳ್ಳುಗಿಡ” ಎನ್ನುವುದು ಮುಳ್ಳುಗಳಿರುವ ಕಾಂಡವನ್ನು ಮತ್ತು ಎಲೆಗಳನ್ನು ಹೊಂದಿರುವ ಸಸಿಯಾಗಿರುತ್ತದೆ. ಅನೇಕಬಾರಿ ಹೂವುಗಳು ನೇರಳೆ ಬಣ್ಣದಲ್ಲಿರುತ್ತವೆ.
  • ಮುಳ್ಳು ಮತ್ತು ಮುಳ್ಳು ಗಿಡಗಳು ತುಂಬಾ ಶೀಘ್ರವಾಗಿ ಹೆಚ್ಚಾಗಿ ಬೆಳೆಯುತ್ತಿರುತ್ತವೆ ಮತ್ತು ಪಕ್ಕದಲ್ಲಿ ಇತರ ಗಿಡಗಳು ಅಥವಾ ಬೆಳೆಗಳು ಸರಿಯಾಗಿ ಬೆಳೆಯದಂತೆ ಮಾಡುತ್ತವೆ. ಒಬ್ಬ ವ್ಯಕ್ತಿ ತನ್ನ ಪಾಪದಿಂದ ಹೇಗೆ ಒಳ್ಳೇಯ ಆತ್ಮೀಯ ಫಲವನ್ನು ಕೊಡದಂತಾಗುತ್ತಾನೆನ್ನುವದನ್ನು ಈ ಚಿತ್ರಣವು ಚೆನ್ನಾಗಿ ತೋರಿಸುತ್ತದೆ.
  • ಮುಳ್ಳುಗಳಿರುವ ಕೊಂಬೆಗಳನ್ನು ಬಾಗಿಸಿ, ಅವುಗಳಿಂದ ಕಿರೀಟವನ್ನು ಮಾಡಿ ಯೇಸುವನ್ನು ಶಿಲುಬೆಗೇರಿಸುವುದಕ್ಕೆ ಮುಂಚಿತವಾಗಿ ಆತನ ತಲೆಯ ಮೇಲೆ ಇಟ್ಟರು.
  • ಸಾಧ್ಯವಾದರೆ, ಈ ಪದಗಳನ್ನು ಅನುವಾದ ಭಾಷೆಯಲ್ಲಿ ಗೊತ್ತಿರುವ ಗಿಡಗಳ ಅಥವಾ ಪೊದರುಗಳ ಹೆಸರುಗಳನ್ನು ಉಪಯೋಗಿಸಿ ಅನುವಾದ ಮಾಡಬೇಕಾಗಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಕಿರೀಟ, ಫಲ, ಆತ್ಮ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H329, H1863, H2312, H2336, H4534, H5285, H5518, H5544, H6791, H6796, H6975, H7063, H7898, G173, G174, G4647, G5146

ಮೂಲಪಿತೃ, ಮೂಲಪಿತೃಗಳು

# ಪದದ ಅರ್ಥವಿವರಣೆ:

ಸತ್ಯವೇದದಲ್ಲಿರುವ “ಮೂಲಪಿತೃ” ಎನ್ನುವ ಪದವು ಯೆಹೂದ್ಯ ಜನರಿಗೆ ಸ್ಥಾಪಕನಾಗಿರುವ ಪೂರ್ವಜನಾಗಿರುವ ವ್ಯಕ್ತಿಯನ್ನು ಸೂಚಿಸುತ್ತದೆ, ಅಂದರೆ ಅಬ್ರಾಹಾಮ, ಇಸಾಕ, ಅಥವಾ ಯಾಕೋಬ ಎನ್ನುವ ವ್ಯಕ್ತಿಗಳನ್ನು ಸೂಚಿಸುತ್ತದೆ.

  • ಇದು ಇಸ್ರಾಯೇಲ್ 12 ಕುಲಗಳಿಗೆ 12 ಪಿತೃಗಳಾಗಿರುವ ಯಾಕೋಬನ ಹನ್ನೆರಡು ಮಕ್ಕಳನ್ನು ಕೂಡ ಸೂಚಿಸುತ್ತದೆ.
  • “ಮೂಲಪಿತೃ” ಎನ್ನುವ ಪದದ ಅರ್ಥವನ್ನೇ “ಮೂಲಪುರುಷ” ಎನ್ನುವ ಪದಕ್ಕೆ ಇರುತ್ತದೆ, ಆದರೆ ವಿಶೇಷವಾಗಿ ಹೆಚ್ಚಿನ ಜನರ ಗುಂಪಿನ ಹೆಚ್ಚಿನ ಪ್ರಸಿದ್ಧಿ ಹೊಂದಿರುವ ಪುರುಷ ಪೂರ್ವಜ ನಾಯಕರನ್ನು ಸೂಚಿಸುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಪೂರ್ವಜ, ತಂದೆ, ಮೂಲಪುರುಷ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1, H7218, G3966

ಮೇಕೆ, ಮೇಕೆಗಳು, ಮೇಕೆಯ ಚರ್ಮ, ಹೋತ, ಮರಿಗಳು

# ಪದದ ಅರ್ಥವಿವರಣೆ:

ಮೇಕೆ ಎಂದರೆ ಮಧ್ಯಮ ಗಾತ್ರದ ನಾಲ್ಕು ಕಾಲುಗಳಿರುವ ಪ್ರಾಣಿ, ಇದು ಕುರಿ ಹೋಲಿಕೆಯಲ್ಲಿರುತ್ತದೆ ಮತ್ತು ಇದನ್ನು ಪ್ರಾಥಮಿಕವಾಗಿ ಹಾಲಿಗಾಗಿ ಮತ್ತು ಮಾಂಸಕ್ಕಾಗಿ ಸಾಕುತ್ತಾರೆ. ಚಿಕ್ಕ ಮೇಕೆಯನ್ನು “ಮರಿ” ಎಂದು ಕರೆಯುತ್ತಾರೆ.

  • ಕುರಿಗಳು, ಮೇಕೆಗಳು ಸರ್ವಾಂಗ ಹೋಮ ಮಾಡುವುದಕ್ಕೆ ತುಂಬಾ ಪ್ರಾಮುಖ್ಯವಾದ ಪ್ರಾಣಿಗಳಾಗಿರುತ್ತವೆ, ವಿಶೇಷವಾಗಿ ಪಸ್ಕ ಹಬ್ಬದಲ್ಲಿ ತುಂಬಾ ಪ್ರಾಮುಖ್ಯ.

  • ಕುರಿಗಳು ಮತ್ತು ಮೇಕೆಗಳು ಒಂದೇ ಹೋಲಿಕೆಯಲ್ಲಿದ್ದರೂ, ಅವು ವಿಭಿನ್ನವಾದ ಪ್ರಾಣಿಗಳಾಗಿರುತ್ತವೆ:

  • ಮೇಕೆಗಳಿಗೆ ಒರಟಾದ ಕೂದಲು ಇರುತ್ತವೆ; ಕುರಿಗಳಿಗೆ ಉಣ್ಣೆ ಇರುತ್ತದೆ.

  • ಮೇಕೆಯ ಬಾಲ ನಿಂತಿರುತ್ತದೆ; ಕುರಿಯ ಬಾಲ ಇಳಿದಿರುತ್ತದೆ.

  • ಕುರಿಗಳು ಸಹಜವಾಗಿ ಅವುಗಳನ್ನು ಕಾಯುವವನ ಬಳಿ ಇರುವುದಕ್ಕೆ ಇಷ್ಟಪಡುತ್ತವೆ, ಆದರೆ ಮೇಕೆಗಳು ಹೆಚ್ಚಾದ ಸ್ವಾತಂತ್ರ್ಯವನ್ನು ಬಯಸುತ್ತವೆ ಮತ್ತು ಅವು ತಮ್ಮ ಕಾವಲುಗಾರನಿಂದ ದೂರವಿರುವುದಕ್ಕೆ ಇಷ್ಟಪಡುತ್ತವೆ.

  • ಸತ್ಯವೇದದ ಕಾಲಗಳಲ್ಲಿ ಇಸ್ರಾಯೇಲಿನಲ್ಲಿ ಹಾಲಿಗೆ ಮೇಕೆಗಳೇ ಪ್ರಮುಖ ಆಧಾರವಾಗಿದ್ದವು.

  • ಮೇಕೆಗಳ ಚರ್ಮಗಳನ್ನು ಗುಡಾರಗಳಿಗೆ ಮತ್ತು ದ್ರಾಕ್ಷಾರಸವನ್ನು ಇಟ್ಟುಕೊಳ್ಳುವುದಕ್ಕೆ ಚೀಲಗಳನ್ನು ತಯಾರು ಮಾಡುವುದಕ್ಕೆ ಉಪಯೋಗಿಸುತ್ತಿದ್ದರು.

  • ಹಳೇ ಮತ್ತು ಹೊಸ ಒಡಂಬಡಿಕೆಗಳಲ್ಲಿ ಮೇಕೆ ಅನೀತಿವಂತರಾದ ಜನರನ್ನು ಸೂಚಿಸುವುದಕ್ಕೆ ಉಪಯೋಗಿಸಿದ್ದರು, ಬಹುಶಃ ಅದನ್ನು ಕಾಯುವವನಿಗೆ ದೂರವಿರುವುದಕ್ಕೆ ಇಷ್ಟಪಡುವ ಗುಣಲಕ್ಷಣ ಅದರಲ್ಲಿ ಇದ್ದ ಕಾರಣದಿಂದ ಈ ರೀತಿಯಾಗಿ ಉಪಯೋಗಿಸಿರಬಹುದು.

  • ಇಸ್ರಾಯೇಲ್ಯರು ಕೂಡ ಪಾಪ ಧಾರಕರನ್ನು ಸೂಚಿಸುವುದಕ್ಕೆ ಮೇಕೆಗಳನ್ನು ಉಪಯೋಗಿಸುತ್ತಿದ್ದರು. ಒಂದು ಮೇಕೆಯನ್ನು ಬಲಿ ಕೊಟ್ಟಾಗ, ಯಾಜಕನು ತನ್ನ ಹಸ್ತಗಳನ್ನು ಜೀವಂತವಾಗಿರುವ ಎರಡನೇ ಮೇಕೆಯ ಮೇಲೆ ಇಟ್ಟು ಅದನ್ನು ಅರಣ್ಯದೊಳಗೆ ಕಳುಹಿಸಬೇಕು. ಇದೀಗ ಜನರ ಪಾಪಗಳನ್ನು ಹೊತ್ತಿಕೊಂಡು ಹೋಗುವ ಪ್ರಾಣಿ ಎಂದು ಅದನ್ನು ಸೂಚಿಸುತ್ತಿದ್ದರು.

(ಈ ಪದಗಳನ್ನು ಸಹ ನೋಡಿರಿ : ಹಿಂಡು, ಬಲಿ, ಕುರಿ, ನೀತಿ, ದ್ರಾಕ್ಷಾರಸ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H689, H1423, H1429, H1601, H3277, H3629, H5795, H5796, H6260, H6629, H6842, H6939, H7716, H8163, H8166, H8495, G122, G2055, G2056, G5131

ಮೇಲಣ, ಅತ್ಯುನ್ನತದಲ್ಲಿ

# ಪದದ ಅರ್ಥವಿವರಣೆ:

“ಮೇಲಣ” ಮತ್ತು “ಅತ್ಯುನ್ನತದಲ್ಲಿ” ಎನ್ನುವ ಪದಗಳು “ಪರಲೋಕದಲ್ಲಿ” ಎನ್ನುವ ಅರ್ಥವನ್ನು ತಿಳಿಸುವ ಪದಗಳಾಗಿರುತ್ತವೆ.

  • “ಅತ್ಯುನ್ನತದಲ್ಲಿ” ಎನ್ನುವ ಮಾತಿಗೆ ಇನ್ನೊಂದು ಅರ್ಥವು “ಅತ್ಯಂತ ಗೌರವ” ಎಂಬುದಾಗಿರುತ್ತದೆ.
  • ಈ ಮಾತನ್ನು ಅಕ್ಷರಾರ್ಥವಾಗಿಯೂ ಉಪಯೋಗಿಸುತ್ತಾರೆ, ಉದಾಹರಣೆಗೆ “ಅತ್ಯುನ್ನತವಾದ ಮರದಲ್ಲಿ”, ಇದಕ್ಕೆ “ಎತ್ತರವಾದ ಮರದಲ್ಲಿ” ಎಂದರ್ಥ.
  • “ಮೇಲಣ” ಎನ್ನುವ ಮಾತು ಆಕಾಶದಲ್ಲಿರುವ ಉನ್ನತ ಸ್ಥಾನವನ್ನು ಸೂಚಿಸುತ್ತದೆ, ಉದಾಹರಣೆಗೆ, ಮೇಲಣದಲ್ಲಿ ಪಕ್ಷಿಗೂಡು ಇರುತ್ತದೆ. ಸಂದರ್ಭದಲ್ಲಿ ಇದನ್ನು “ಆಕಾಶದಲ್ಲಿರುವ ಮೇಲಣ” ಅಥವಾ “ಎತ್ತರವಾದ ಮರದ ಮೇಲಿನ ತುದಿ ಭಾಗ” ಎಂದೂ ಅನುವಾದ ಮಾಡಬಹುದು.
  • “ಮೇಲಣ” ಎನ್ನುವ ಪದವು ಒಬ್ಬ ವ್ಯಕ್ತಿಯ ಅಥವಾ ಒಂದು ವಸ್ತುವಿನ ಪ್ರಾಮುಖ್ಯತೆ, ಅಥವಾ ಉನ್ನತವಾದ ಸ್ಥಳವನ್ನೂ ಸೂಚಿಸುತ್ತದೆ.
  • “ಮೇಲಣದಿಂದ” ಎನ್ನುವ ಮಾತನ್ನು “ಪರಲೋಕದಿಂದ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಪರಲೋಕ, ಘನಪಡಿಸು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1361, H4605, H4791, H7682, G1722, G5308, G5310, G5311

ಮೇಲ್ವೀಚಾರಣೆ ಮಾಡು, ಮೇಲ್ವೀಚಾರಣೆ, ಮೇಲ್ವೀಚಾರಣೆ ಮಾಡಲಾಗಿದೆ, ಮೇಲ್ವೀಚಾರಕ, ಮೇಲ್ವೀಚಾರಕರು

# ಪದದ ಅರ್ಥವಿವರಣೆ:

“ಮೇಲ್ವೀಚಾರಕ” ಎನ್ನುವ ಪದವು ಜನರ ಸಂರಕ್ಷಣೆಯಲ್ಲಿ ಮತ್ತು ಕೆಲಸದಲ್ಲಿ ಬಾಧ್ಯತೆ ವಹಿಸಿದ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ.

  • ಹಳೇ ಒಡಂಬಡಿಕೆಯಲ್ಲಿ ಮೇಲ್ವೀಚಾರಕನ ಕೆಳಗೆ ಇರುವ ಕೆಲಸಗಾರರೆಲ್ಲರೂ ಕೆಲಸವನ್ನು ಚೆನ್ನಾಗಿ ಮಾಡುತ್ತಿದ್ದಾರೋ ಇಲ್ಲವೋ ಎಂದು ನೋಡಿಕೊಳ್ಳುವ ಹುದ್ದೆಯನ್ನು ಪಡೆದಿರುತ್ತಾನೆ.
  • ಹೊಸ ಒಡಂಬಡಿಕೆಯಲ್ಲಿ ಈ ಪದವನ್ನು ಆದಿ ಕ್ರೈಸ್ತ ಸಭೆಯ ನಾಯಕರನ್ನು ವಿವರಿಸಿ ಹೇಳುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ. ಅವರು ಸಭೆಗೆ ಬೇಕಾದ ಆತ್ಮೀಯಕವಾದ ಅಗತ್ಯತೆಗಳನ್ನು ಪೂರೈಸುವ ಕೆಲಸವನ್ನು ಹೊಂದಿರುತ್ತಾರೆ, ಮತ್ತು ವಿಶ್ವಾಸಿಗಳು ಸರಿಯಾದ ವಾಕ್ಯ ಬೋಧನೆಯನ್ನು ಹೊಂದುತ್ತಿದ್ದಾರೋ ಇಲ್ಲವೋ ಎಂದು ನಿಶ್ಚಯಗೊಳಿಸುತ್ತಾರೆ.
  • ಸ್ಥಳೀಯ ಸಭೆಯಲ್ಲಿರುವ ವಿಶ್ವಾಸಿಗಳನ್ನು ಅಂದರೆ ತನ್ನ “ಹಿಂಡನ್ನು” ಚೆನ್ನಾಗಿ ನೋಡಿಕೊಳ್ಳುವ ಕುರುಬನನ್ನಾಗಿ ಮೇಲ್ವೀಚಾರಕನನ್ನು ಪೌಲನು ಸೂಚಿಸುತ್ತಿದ್ದಾನೆ.
  • ಕುರುಬನಂತೆಯೇ ಮೇಲ್ವೀಚಾರಕನು ಹಿಂಡನ್ನು ನೋಡುತ್ತಾ ಇರುತ್ತಾನೆ. * ಈತನು ವಿಶ್ವಾಸಿಗಳನ್ನು ಸುಳ್ಳು ಆತ್ಮೀಯಕ ಬೋಧನೆಯಿಂದ ಮತ್ತು ಇತರ ದುಷ್ಟ ಪ್ರಭಾವಗಳಿಂದ ಸಂರಕ್ಷಿಸಿ ಕಾಪಾಡುತ್ತಾ ಇರುತ್ತಾನೆ.
  • ಹೊಸ ಒಡಂಬಡಿಕೆಯಲ್ಲಿ ದಾಖಲಿಸಿದ “ಮೇಲ್ವೀಚಾರಕರು”, “ಹಿರಿಯರು”, ಮತ್ತು “ಕುರುಬರು/ಪಾಸ್ಟರುಗಳು” ಎನ್ನುವವರು ಒಂದೇ ರೀತಿಯ ಆತ್ಮೀಯಕ ನಾಯಕರನ್ನು ಸೂಚಿಸುವ ವಿವಿಧ ವಿಧಾನಗಳಾಗಿರುತ್ತವೆ.

# ಅನುವಾದ ಸಲಹೆಗಳು:

  • ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಮೇಲಸ್ತುವಾರಿಗಾರ” ಅಥವಾ “ರಕ್ಷಕ” ಅಥವಾ “ನಿರ್ವಾಹಕ” ಎನ್ನುವ ಪದಗಳನ್ನು ಸೇರಿರುತ್ತವೆ.
  • ದೇವ ಜನರ ಸ್ಥಳೀಯ ಗುಂಪಿನ ನಾಯಕನನ್ನು ಸೂಚಿಸುವಾಗ, ಈ ಪದವನ್ನು “ಆತ್ಮೀಯಕ ಮೇಲಸ್ತುವಾರಿಗಾರ” ಅಥವಾ “ವಿಶ್ವಾಸಿಗಳ ಗುಂಪಿನ ಆತ್ಮೀಯಕವಾದ ಅಗತ್ಯತೆಗಳನ್ನು ಪೂರೈಸುವ ವ್ಯಕ್ತಿ” ಅಥವಾ “ಸಭೆಯ ಆತ್ಮೀಯಕವಾದ ಅಗತ್ಯತೆಗಳ ಮೇಲ್ವೀಚಾರಣೆ ಮಾಡುವ ವ್ಯಕ್ತಿ” ಎಂದು ಅರ್ಥ ಕೊಡುವ ಮಾತುಗಳೊಂದಿಗೆ ಅಥವಾ ಪದಗಳೊಂದಿಗೆ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಸಭೆ, ಹಿರಿಯ, ಸಭಾಪಾಲಕ, ಕುರುಬ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H5329, H6485, H6496, H7860, H8104, G1983, G1984, G1985

ಮೈಲಿಗೆ, ಮೈಲಿಗೆ ಮಾಡುತ್ತದೆ, ಅಶುದ್ಧ, ಮೈಲಿಗೆ ಮಾಡು, ಅಪವಿತ್ರಗೊಳಿಸು, ಅಪವಿತ್ರಗೊಳಿಸಲ್ಪಟ್ಟಿದ್ದಾರೆ

# ಪದದ ಅರ್ಥವಿವರಣೆ:

“ಮೈಲಿಗೆ” ಮತ್ತು “ಮೈಲಿಗೆ ಮಾಡು” ಎನ್ನುವ ಪದಗಳು ಕೊಳಕಾಗಿರುವವುಗಳನ್ನು ಅಥವಾ ಮಾಲಿನ್ಯವಾಗಿರುವವುಗಳನ್ನು ಸೂಚಿಸುತ್ತದೆ. ಎನಾದರೊಂದು ಭೌತಿಕವಾಗಿ, ನೈತಿಕವಾಗಿ ಅಥವಾ ಆಧ್ಯಾತ್ಮಿಕವಾಗಿ ಕೆಟ್ಟುಹೋಗಬಹುದು ಅಥವಾ ಮೈಲಿಗೆ ಆಗಬಹುದು.

  • ದೇವರು “ಅಶುದ್ಧ” ಮತ್ತು “ಅಪವಿತ್ರ” ಎಂದು ಪ್ರಕಟಿಸಿದವುಗಳನ್ನು ತಿನ್ನುವುದರಿಂದ ಅಥವಾ ಮುಟ್ಟುವದರಿಂದ ತಮ್ಮನ್ನು ಮೈಲಿಗೆ ಮಾಡಿಕೊಳ್ಳಬಾರದೆಂದು ದೇವರು ಇಸ್ರಾಯೇಲ್ಯರನ್ನು ಎಚ್ಚರಿಸಿದನು.
  • ಮೃತ ದೇಹಗಳು ಮತ್ತು ಅಂಟು ರೋಗಗಳು ಎನ್ನುವ ಕೆಲವೊಂದು ವಿಷಯಗಳನ್ನು ದೇವರು ಅಶುದ್ಧ ವೆಂದು ತೀರ್ಮಾನ ಮಾಡಿದ್ದಾರೆ ಮತ್ತು ಅವುಗಳನ್ನು ಮುಟ್ಟಿದ ಮನುಷ್ಯರು ಮೈಲಿಗೆಯಾಗುತ್ತಾರೆ.
  • ಲೈಂಗಿಕವಾದ ಪಾಪಗಳನ್ನು ಮಾಡಬಾರದೆಂದು ದೇವರು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದನು. ಇವೆಲ್ಲವು ಅವರನ್ನು ಮೈಲಿಗೆ ಮಾಡಿ, ಅವರನ್ನು ದೇವರು ಅಂಗೀಕಾರ ಮಾಡದ ಹಾಗೆ ಮಾಡುತ್ತವೆ.
  • ಕೆಲವೊಂದು ದೈಹಿಕ ಪ್ರಕ್ರಿಯೆಗಳು ಕೂಡ ಇರುತ್ತವೆ, ಇವು ಒಬ್ಬ ವ್ಯಕ್ತಿಯನ್ನು ತಾತ್ಕಾಲಿಕವಾಗಿ ಮೈಲಿಗೆ ಮಾಡುತ್ತವೆ. ಆ ವ್ಯಕ್ತಿ ತಿರುಗಿ ಆತ್ಮೀಯಕವಾಗಿ ಪವಿತ್ರನಾಗುವವರೆಗೂ ಮೈಲಿಗೆಯಾಗಿರುತ್ತಾನೆ.
  • ಹೊಸ ಒಡಂಬಡಿಕೆಯಲ್ಲಿ ಪಾಪದ ಆಲೋಚನೆಗಳು ಮತ್ತು ಕ್ರಿಯೆಗಳು ಒಬ್ಬ ಮನುಷ್ಯನನ್ನು ಕೆಡಿಸುತ್ತವೆಯೆಂದು ಯೇಸು ಹೇಳಿದ್ದಾರೆ.

# ಅನುವಾದ ಸಲಹೆಗಳು:

  • “ಮೈಲಿಗೆ ಮಾಡು” ಎನ್ನುವ ಪದವನ್ನು “ಅಶುದ್ಧ ವಾಗುವುದಕ್ಕೆ ಕಾರಣವಾಗು” ಅಥವಾ “ಅನೀತಿವಂತನಾಗುವುದಕ್ಕೆ ಕಾರಣವಾಗು” ಅಥವಾ “ಆತ್ಮೀಯಕವಾಗಿ ಸ್ವೀಕರಿಸಲ್ಪಡದಂತೆ ಮಾಡು” ಎಂದೂ ಅನುವಾದ ಮಾಡಬಹುದು.
  • “ಅಪವಿತ್ರಗೊಳಿಸಲ್ಪಡು” ಎನ್ನುವ ಪದಕ್ಕೆ “ಅಶುದ್ಧವಾಗು” ಅಥವಾ “ನೈತಿಕವಾಗಿ (ದೇವರಿಗೆ) ಸ್ವೀಕರಿಸಲ್ಪಡದಂತೆ ಮಾಡು” ಅಥವಾ “ಆತ್ಮೀಯಕವಾಗಿ ಸ್ವೀಕರಿಸಲ್ಪಡದಂತೆ ಮಾರ್ಪಡುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಶುದ್ಧ, ಶುದ್ಧ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1351, H1352, H1602, H2490, H2491, H2610, H2930, H2931, H2933, H2936, H5953, G733, G2839, G2840, G3392, G3435, G4696, G5351

ಮೋಸ ಮಾಡು, ಮೋಸ ಮಾಡುವುದು, ವಂಚನೆ, ಮೋಸ ಮಾಡುತ್ತಾ ಇರುವುದು, ವಂಚನೆ, ಮೋಸಗಾರ, ಮೋಸಗಾರರು, ಮೋಸಗಾರಿಕೆಯ, ಮೋಸದಿಂದ, ಮೋಸ ಸ್ವಭಾವ, ಮೋಸಗೊಳಿಸು (ವಂಚನೆ), ಮೋಸ ಹೋಗುವ

# ಪದದ ಅರ್ಥವಿವರಣೆ:

“ಮೋಸ ಮಾಡು” ಎನ್ನುವ ಪದಕ್ಕೆ ಸತ್ಯವಲ್ಲದ ಏನಾದರೊಂದು ವಿಷಯವನ್ನು ಒಬ್ಬರು ನಂಬುವಂತೆ ಮಾಡುವುದು ಎಂದರ್ಥ. ಒಬ್ಬರನ್ನು ಮೋಸಗೊಳಿಸುವ ಕ್ರಿಯೆಯನ್ನು “ವಂಚನೆ” ಎಂದು ಕರೆಯುತ್ತಾರೆ.

  • “ವಂಚನೆ” ಎನ್ನುವ ಇನ್ನೊಂದು ಪದವೂ ಸತ್ಯವಲ್ಲದ ಏನಾದರೊಂದು ವಿಷಯವನ್ನು ಒಬ್ಬರು ನಂಬುವಂತೆ ಮಾಡುವ ಕ್ರಿಯೆಯನ್ನು ಸೂಚಿಸುತ್ತದೆ.
  • ತಪ್ಪಾಗಿರುವ ಸಂಗತಿಗಳನ್ನು ಇತರರು ನಂಬುವಂತೆ ಮಾಡುವ ವ್ಯಕ್ತಿಯನ್ನು “ಮೋಸಗಾರ” ಎನ್ನುತ್ತಾರೆ. ಉದಾಹರಣೆಗೆ, ಸೈತಾನನು “ಮೋಸಗಾರ” ಎಂದು ಕರೆಯಲ್ಪಟ್ಟಿದ್ದಾನೆ. ಇವನು ನಿಯಂತ್ರಿಸುವ ದುರಾತ್ಮಗಳನ್ನು ಕೂಡ ಮೋಸಗಾರರೆಂದು ಕರೆಯುತ್ತಾರೆ.
  • ಒಬ್ಬ ವ್ಯಕ್ತಿಯ ಸಂದೇಶವು ಅಥವಾ ಕ್ರಿಯೆಯು ಸತ್ಯವಾಗದಿದ್ದರೆ ಅದನ್ನು “ಮೋಸಗೊಳಿಸುವಿಕೆ” ಎಂದು ಹೇಳಲಾಗುತ್ತದೆ.
  • “ಮೋಸ ಮಾಡು” ಮತ್ತು “ಮೋಸಗೊಳಿಸು” ಎನ್ನುವ ಪದಗಳಿಗೆ ಒಂದೇ ಅರ್ಥವು ಇರುತ್ತದೆ, ಆದರೆ ಅವರು ಉಪಯೋಗಿಸುವ ವಿಧಾನದಲ್ಲಿ ಕೆಲವೊಂದು ಚಿಕ್ಕ ಚಿಕ್ಕ ವ್ಯತ್ಯಾಸಗಳು ಇರುತ್ತವೆ.
  • “ಮೋಸದಿಂದ” ಮತ್ತು “ಮೋಸ ಹೋಗುವ” ಎನ್ನುವ ವಿವರಣಾತ್ಮಕವಾದ ಪದಗಳು ಒಂದೇ ಅರ್ಥವನ್ನು ಹೊಂದಿರುತ್ತವೆ ಮತ್ತು ಅವು ಒಂದೇ ಸಂದರ್ಭದಲ್ಲಿ ಉಪಯೋಗಿಸಲ್ಪಟ್ಟಿರುತ್ತವೆ.

# ಅನುವಾದ ಸಲಹೆಗಳು:

  • “ಮೋಸ ಮಾಡು” ಎನ್ನುವ ಪದಕ್ಕೆ ಇತರ ಪರ್ಯಾಯ ಪದಗಳಾಗಿ “ಸುಳ್ಳು ಹೇಳು” ಅಥವಾ “ತಪ್ಪು ಹೊಂದುವುದಕ್ಕೆ ಕಾರಣನಾಗು” ಅಥವಾ “ನಿಜವಲ್ಲದ ವಿಷಯಗಳನ್ನು ಆಲೋಚನೆ ಮಾಡುವುದಕ್ಕೆ ಇನ್ನೊಬ್ಬರನ್ನು ಪ್ರೇರೇಪಿಸು” ಎನ್ನುವ ಮಾತುಗಳನ್ನು ಹೇಳಬಹುದು.
  • “ವಂಚನೆ” ಎನ್ನುವ ಪದಕ್ಕೆ ಪರ್ಯಾಯ ಪದಗಳಾಗಿ “ತಪ್ಪಾದ ವಿಷಯಗಳನ್ನು ಆಲೋಚನೆ ಮಾಡುವುದಕ್ಕೆ ಕಾರಣವಾಗುವುದು” ಅಥವಾ “ಸುಳ್ಳು ಹೇಳಿರುವುದು” ಅಥವಾ “ತಂತ್ರ ಹೂಡಲಾಗಿದೆ” ಅಥವಾ “ಅವಿವೇಕತನಕ್ಕೆ ಗುರಿಮಾಡು” ಅಥವಾ “ದಾರಿತಪ್ಪಿಸಿದೆ” ಎಂದೂ ಹೇಳಬಹುದು.
  • “ಮೋಸಗಾರ” ಎನ್ನುವ ಪದವನ್ನು “ಸುಳ್ಳುಗಾರ” ಅಥವಾ “ದಾರಿ ತಪ್ಪಿಸುವವನು” ಅಥವಾ “ಮೋಸ ಮಾಡುವ ವ್ಯಕ್ತಿ” ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಸಾರವಾಗಿ “ಮೋಸಗೊಳಿಸು” ಅಥವಾ “ವಂಚನೆ” ಎನುವ ಪದಗಳನ್ನು “ಅಸತ್ಯ” ಅಥವಾ “ಸುಳ್ಳಾಡುವುದು” ಅಥವಾ “ತಂತ್ರ ಮಾಡುವುದು” ಅಥವಾ “ಕುಟಿಲತೆ” ಎಂದೂ ಅರ್ಥಬರುವ ಪದಗಳೊಂದಿಗೆ ಅನುವಾದ ಮಾಡಬಹುದು.
  • “ಮೋಸಗೊಳಿಸು” ಅಥವಾ “ಮೋಸಹೋಗುವ” ಎನ್ನುವ ಪದಗಳನ್ನು ಸತ್ಯವಾಗದ ವಿಷಯಗಳನ್ನು ನಂಬುವುದಕ್ಕೆ ಇತರ ಜನರನ್ನು ಪ್ರೇರೇಪಿಸುವ ವಿಧಾನದಲ್ಲಿ ಮಾತನಾಡುವ ವ್ಯಕ್ತಿಯನ್ನು “ಸತ್ಯವಲ್ಲದ” ಅಥವಾ “ದಾರಿ ತಪ್ಪಿಸುವ” ಅಥವಾ “ಸುಳ್ಳಾಡುವ” ಎನ್ನುವ ಪದಗಳೊಂದಿಗೆ ಅನುವಾದ ಮಾಡಬಹುದು,

(ಈ ಪದಗಳನ್ನು ಸಹ ನೋಡಿರಿ : ನಿಜ)

# ಸತ್ಯವೇದದ ಅನುಬಂಧ ವಾಕ್ಯಗಳು :

{{tag>publish review}

# ಪದ ಡೇಟಾ:

  • Strong's: H898, H2048, H3577, H3584, H4123, H4820, H4860, H5230, H5377, H6121, H6231, H6280, H6601, H7411, H7423, H7683, H7686, H7952, H8267, H8496, H8501, H8582, H8591, H8649, G538, G539, G1386, G1387, G1388, G1389, G1818, G3884, G4105, G4106, G4108, G5422, G5423

ಯಜ್ಞ, ಅರ್ಪಣೆಗಳು, ಅರ್ಪಿಸಿದೆ, ಅರ್ಪಿಸುವುದು, ಕಾಣಿಕೆ, ಕಾಣಿಕೆಗಳು

# ಪದದ ಅರ್ಥವಿವರಣೆ:

ಸತ್ಯವೇದದಲ್ಲಿ “ಅರ್ಪಿಸು” ಮತ್ತು “ಕಾಣಿಕೆ” ಎನ್ನುವ ಪದಗಳು ದೇವರನ್ನು ಆರಾಧಿಸುವ ಕಾರ್ಯವನ್ನಾಗಿ ಆತನಿಗೆ ಕೊಡುವ ವಿಶೇಷವಾದ ಬಹುಮಾನಗಳನ್ನು ಕೊಡುವುದನ್ನು ಸೂಚಿಸುತ್ತದೆ. ಜನರು ಕೂಡ ಸುಳ್ಳು ದೇವರುಗಳಿಗೆ ಅರ್ಪಣೆಗಳನ್ನು ಕೊಡುತ್ತಾ ಇರುತ್ತಾರೆ.

  • “ಕಾಣಿಕೆ” ಎನ್ನುವ ಪದವನ್ನು ಸಾಧಾರಣವಾಗಿ ಕೊಡಲ್ಪಟ್ಟಿರುವ ಅಥವಾ ಅರ್ಪಿಸಲ್ಪಟ್ಟಿರುವ ಯಾವುದಾದರೊಂದನ್ನು ಸೂಚಿಸುತ್ತದೆ. “ಯಜ್ಞ” ಎನ್ನುವ ಪದವು ಎಲ್ಲವನ್ನು ಒದಗಿಸಿಕೊಡುವವನಿಗೆ ಬೆಲೆಯುಳ್ಳದ್ದನ್ನು ಮಾಡಿದ ಅಥವಾ ಕೊಡಲ್ಪಟ್ಟ ಯಾವುದಾದರೊಂದನ್ನು ಸೂಚಿಸುತ್ತದೆ.
  • ದೇವರಿಗೆ ಕೊಡಲ್ಪಟ್ಟಿರುವ ಅರ್ಪಣೆಗಳು ವಿಶೇಷವಾದವುಗಳು, ಅವು ದೇವರಿಗೆ ವಿಧೇಯತೆ ಮತ್ತು ಭಕ್ತಿ ಭಾವನೆಯನ್ನು ವ್ಯಕ್ತಪಡಿಸುವ ಕ್ರಮದಲ್ಲಿ ಕೊಡುವುದಕ್ಕೆ ಆತನು ಇಸ್ರಾಯೇಲ್ಯರಿಗೆ ಆಜ್ಞಾಪಿಸಿರುತ್ತಾನೆ.
  • ವಿವಿಧವಾದ ಅರ್ಪಣೆಗಳ ಹೆಸರುಗಳಿವೆ, “ದಹನ ಬಲಿಯರ್ಪಣೆ” ಮತ್ತು ಸಮಾಧಾನ ಅರ್ಪಣೆ” ಎನ್ನುವವುಗಳು ಉದಾಹರಣೆಗೆ ಹೇಳಬಹುದು, ಇವು ಯಾವ ವಿಧವಾದ ಅರ್ಪಣೆಯನ್ನು ಕೊಡುತ್ತಿದ್ದರೆನ್ನುವುದನ್ನು ಸೂಚಿಸುತ್ತವೆ.
  • ದೇವರಿಗೆ ಕೊಡುವ ಅರ್ಪಣೆಗಳಲ್ಲಿ ಅನೇಕಬಾರಿ ಪ್ರಾಣಿಯನ್ನು ಸಾಯಿಸುವುದೂ ಒಳಗೊಂಡಿರುತ್ತದೆ.
  • ದೇವರ ಪರಿಪೂರ್ಣನಾದ ಪಾಪರಹಿತನಾಗಿರುವ ಆತನ ಮಗನಾಗಿರುವ ಯೇಸುವಿನ ಯಜ್ಞವು ಮಾತ್ರವೇ ಪಾಪಗಳಿಂದ ಮನುಷ್ಯರನ್ನು ಸಂಪೂರ್ಣವಾಗಿ ತೊಳೆಯುತ್ತದೆ, ಪ್ರಾಣಿಗಳ ಯಜ್ಞಗಳು ಪಾಪಗಳನ್ನು ತೊಳೆಯುವುದಕ್ಕೆ ಸಾಧ್ಯವಿಲ್ಲ.
  • “ಸಜೀವ ಯಜ್ಞವಾಗಿ ನಿನ್ನನ್ನು ನೀನೇ ಸಮರ್ಪಣೆ ಮಾಡಿಕೊ” ಎನ್ನುವ ಅಲಂಕಾರಿಕ ಮಾತಿಗೆ “ದೇವರಿಗೆ ಸಂಪೂರ್ಣವಾದ ವಿಧೇಯತೆಯನ್ನು ತೋರಿಸುವುದರಲ್ಲಿ ನಿನ್ನ ಜೀವನವನ್ನು ಜೀವಿಸು, ಆತನಿಗೆ ಸೇವೆ ಮಾಡುವ ಕ್ರಮದಲ್ಲಿ ಎಲ್ಲವನ್ನು ಬಿಟ್ಟುಕೊಂಡು ನಡೆ” ಎಂದರ್ಥವಾಗಿರುತ್ತದೆ.

# ಅನುವಾದ ಸಲಹೆಗಳು:

  • “ಕಾಣಿಕೆ” ಎನ್ನುವ ಪದವನ್ನು “ದೇವರಿಗೆ ಬಹುಮಾನ” ಅಥವಾ “ಯಾವುದಾದರೊಂದನ್ನು ದೇವರಿಗೆ ಕೊಡುವುದು” ಅಥವಾ “ದೇವರಿಗೆ ಕೊಡಲ್ಪಟ್ಟ ಬೆಲೆಯುಳ್ಳ ವಸ್ತುವು” ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಸಾರವಾಗಿ, “ಯಜ್ಞ” ಎನ್ನುವ ಪದವನ್ನು “ಆರಾಧನೆಯಲ್ಲಿ ಕೊಡಲ್ಪಟ್ಟ ಬೆಲೆಯುಳ್ಳದ್ದು” ಅಥವಾ “ದೇವರಿ ಅರ್ಪಿಸಲ್ಪಟ್ಟ ಬಲಿಮಾಡಿದ ವಿಶೇಷವಾದ ಪ್ರಾಣಿ” ಎಂದೂ ಅನುವಾದ ಮಾಡಬಹುದು.
  • “ಯಜ್ಞ” ಎನ್ನುವ ಪದಕ್ಕೆ ಕ್ರಿಯೆಯನ್ನು “ಬೆಲೆಯುಳ್ಳದ್ದನ್ನು ಬಿಟ್ಟುಕೊಡು” ಅಥವಾ “ಪ್ರಾಣಿಯನ್ನು ಕೊಂದು, ದೇವರಿಗೆ ಅರ್ಪಿಸು” ಎಂದೂ ಅನುವಾದ ಮಾಡಬಹುದು.
  • “ಸಜೀವ ಯಜ್ಞವಾಗಿ ನಿನ್ನನ್ನು ನೀನು ಸಮರ್ಪಿಸಿಕೋ” ಎನ್ನುವ ಮಾತನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ನೀನು ನಿನ್ನ ಜೀವನವನ್ನು ಜೀವಿಸುತ್ತಿರುವಾಗ, ಯಜ್ಞವೇದಿ ಮೇಲೆ ಪ್ರಾಣಿಯನ್ನು ದಹಿಸುವ ರೀತಿಯಲ್ಲಿ ಸಂಪೂರ್ಣವಾಗಿ ನಿನ್ನನ್ನು ನೀನು ದೇವರಿಗೆ ಸಮರ್ಪಿಸಿಕೊ” ಎನ್ನುವ ಮಾತು ಒಳಗೊಂಡಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಯಜ್ಞವೇದಿ, ಪಾನೀಯ ಅರ್ಪಣೆ, ಸುಳ್ಳು ದೇವರು, ಸಹವಾಸ ಅರ್ಪಣೆ, ಇಷ್ಟಾಪೂರ್ವಕವಾದ ಅರ್ಪಣೆ, ಸಮಾಧಾನ ಅರ್ಪಣೆ, ಯಾಜಕ, ಯಜ್ಞವೇದಿ, ಪಾಪದ ಅರ್ಪಣೆ, ಆರಾಧನೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಉದಾಹರಣೆಗಳು:

  • 03:14 ನೋಹನು ಹಡಗಿನಿಂದ ಇಳಿದು ಬಂದನಂತರ, ಆತನು ಒಂದು ಯಜ್ಞವೇದಿಯನ್ನು ಕಟ್ಟಿದನು ಮತ್ತು ___ ಯಜ್ಞಕ್ಕೆ __ ಉಪಯೋಗಿಸಲ್ಪಡುವ ಪ್ರಾಣಿಗಳಲ್ಲಿ ಪ್ರತಿಯೊಂದನ್ನು ___ ಅರ್ಪಿಸಿಸಿದನು ___. ದೇವರು ಆ __ ಯಜ್ಞದೊಂದಿಗೆ ___ ತುಂಬಾ ಸಂತೋಷದಿಂದ ಇದ್ದಿದ್ದರು, ನೋಹನನ್ನು ಮತ್ತು ಆತನ ಕುಟುಂಬವನ್ನು ಆಶೀರ್ವಾದ ಮಾಡಿದನು.
  • 05:06 “ನಿನ್ನ ಒಬ್ಬನೇ ಮಗನಾಗಿರುವ ಇಸಾಕನನ್ನು ಕರೆದುಕೊಂಡು ಹೋಗಿ, ನನಗೆ ___ ಹೋಮವನ್ನಾಗಿ ___ ಅವನನ್ನು ಅರ್ಪಿಸು.” ಮತ್ತೊಮ್ಮೆ ಅಬ್ರಾಹಾಮನು ದೇವರಿಗೆ ವಿಧೇಯನಾದನು ಮತ್ತು ತನ್ನ ಮಗನನ್ನು ___ ಹೋಮಕ್ಕೆ ___ ಸಿದ್ಧಗೊಳಿಸಿದನು.
  • 05:09 ಇಸಾಕನಿಗೆ ಬದಲಾಗಿ __ ಹೋಮವನ್ನು ___ ಮಾಡಲು ದೇವರು ಕುರಿಯನ್ನು ಅನುಗ್ರಹಿಸಿದರು.
  • 13:09 ದೇವರ ಧರ್ಮಶಾಸ್ತ್ರಕ್ಕೆ ವಿಧೇಯರಾಗುವ ಪ್ರತಿಯೊಬ್ಬರು ದೇವರಿಗೆ ___ ಹೋಮವನ್ನು ___ ಮಾಡುವುದಕ್ಕೆ ಗುಡಾರದ ಬಳಿಗೆ ಒಂದು ಪ್ರಾಣಿಯನ್ನು ತೆಗೆದುಕೊಂಡು ಬರಬೇಕು. ಅಲ್ಲಿರುವ ಯಾಜಕರು ಆ ಪ್ರಾಣಿಯನ್ನು ಕೊಂದು, ಯಜ್ಞದ ಮೇಲೆ ಇಟ್ಟು ದಹಿಸುವರು. ಆ ಪ್ರಾಣಿಯ ರಕ್ತವು ವ್ಯಕ್ತಿಯ ಪಾಪವನ್ನು ಮುಚ್ಚುವುದು ಮತ್ತು ಆ ವ್ಯಕ್ತಿಯ ಪಾಪಕ್ಕಾಗಿ ___ ಹೋಮ ___ ಮಾಡಲ್ಪಟ್ಟಿರುವುದು ಮತ್ತು ಆ ವ್ಯಕ್ತಿಯನ್ನು ದೇವರ ದೃಷ್ಟಿಯಲ್ಲಿ ಶುದ್ಧನಾಗುವಂತೆ ಮಾಡುತ್ತದೆ.
  • 17:06 ಇಸ್ರಾಯೇಲ್ಯರು ದೇವರನ್ನು ಆರಾಧಿಸಿ, ಆತನಿಗೆ ___ ಹೋಮಗಳನ್ನು ___ ಅರ್ಪಿಸುವ ಸ್ಥಳದಲ್ಲಿ ಒಂದು ದೇವಾಲಯವನ್ನು ನಿರ್ಮಿಸಬೇಕೆಂದು ದಾವೀದನು ಬಯಸಿದ್ದನು.
  • 48:06 ಯೇಸು ಮಹೋನ್ನತ ಯಾಜಕನಾಗಿದ್ದನು. ಇತರ ಯಾಜಕರಂತಲ್ಲದೆ, ಲೋಕದಲ್ಲಿರುವ ಎಲ್ಲಾ ಜನರ ಪಾಪಗಳನ್ನು ತೆಗೆದುಹಾಕುವುದಕ್ಕೆ ಆತನು ತನ್ನನ್ನು ತಾನೇ ___ ಹೋಮವನ್ನಾಗಿ ___ ಅರ್ಪಿಸಿಕೊಂಡನು.
  • 48:08 ಆದರೆ ನಮ್ಮ ಸ್ಥಾನದಲ್ಲಿ ಮರಣಿಸುವುದಕ್ಕೆ ___ ಹೋಮವನ್ನಾಗಿ ____, ದೇವರು ಯೇಸುವನ್ನು ದೇವರ ಕುರಿಮರಿಯನ್ನಾಗಿ ಅನುಗ್ರಹಿಸಿದನು.
  • 49:11 ಯಾಕಂದರೆ ಯೇಸು ತನ್ನನ್ನು ತಾನು ___ ಅರ್ಪಿಸಿಕೊಂಡನು ___, ದೇವರು ಎಂಥಹ ಪಾಪವನ್ನಾದರೂ ಕ್ಷಮಿಸುವನು ಮತ್ತು ಅನೇಕ ಭಯಂಕರ ಪಾಪಗಳನ್ನೂ ಕ್ಷಮಿಸುವನು.

# ಪದ ಡೇಟಾ:

  • Strong's: H801, H817, H819, H1685, H1890, H1974, H2076, H2077, H2281, H2282, H2398, H2401, H2402, H2403, H2409, H3632, H4394, H4469, H4503, H4504, H5066, H5068, H5069, H5071, H5257, H5258, H5261, H5262, H5927, H5928, H5930, H6453, H6944, H6999, H7133, H7311, H8002, H8426, H8548, H8573, H8641, G266, G334, G1049, G1435, G1494, G2378, G2380, G3646, G4376, G5485

ಯಾತನೆ, ಯಾತನೆಪಟ್ಟಿದೆ, ಯಾತನೆಪಡುತ್ತಿರುವುದು, ಯಾತನೆ ಕೊಡುವವರು

# ಸತ್ಯಾಂಶಗಳು:

“ಯಾತನೆ” ಎನ್ನುವ ಮಾತು ಭಯಾನಕವಾದ ಶ್ರಮೆಯನ್ನು ಸೂಚಿಸುತ್ತದೆ. ಒಬ್ಬ ವ್ಯಕ್ತಿಗೆ ಚಿತ್ರಹಿಂಸೆ ಕೊಡುವುದು ಎಂದರೆ ಆ ವ್ಯಕ್ತಿ ಭಯಾನಕವಾದ ರೀತಿಯಲ್ಲಿ ಶ್ರಮೆಯನ್ನು ಅನುಭವಿಸುವಂತೆ ಮಾಡು ಎಂದರ್ಥವಾಗಿರುತ್ತದೆ.

  • ಕೆಲವೊಂದುಬಾರಿ “ಯಾತನೆ” ಎನ್ನುವ ಪದವು ಭೌತಿಕ ಬಾಧೆಯನ್ನು ಮತ್ತು ಶ್ರಮೆಯನ್ನು ಸೂಚಿಸುತ್ತದೆ. ಉದಾಹರಣೆಗೆ, ಪ್ರಕಟನೆ ಗ್ರಂಥವು “ಮೃಗವನ್ನು” ಆರಾಧಿಸುವವರು ಅಂತ್ಯಕಾಲದಲ್ಲಿ ಶ್ರಮಿಸುತ್ತಾರೆಂದು ಭೌತಿಕ ಚಿತ್ರಹಿಂಸೆಗಳ ಕುರಿತಾಗಿ ವಿವರಿಸುತ್ತದೆ.
  • ಶ್ರಮೆ ಎನ್ನುವುದು ಯೋಬನು ಅನುಭವಿಸಿದಂತೆಯೇ ಭಾವೋದ್ರೇಕವಾದ ಮತ್ತು ಆತ್ಮೀಕವಾದ ನೋವನ್ನು ತೆಗೆದುಕೊಳ್ಳುದನ್ನೂ ಸೂಚಿಸುತ್ತದೆ.
  • ಅಪೊಸ್ತಲನಾದ ಯೋಹಾನನು ಪ್ರಕಟನೆ ಗ್ರಂಥದಲ್ಲಿ ಯೇಸುವನ್ನು ತಮ್ಮ ರಕ್ಷಕನಾಗಿ ನಂಬದ ಜನರು ಬೆಂಕಿಯ ಕೆರೆಯಲ್ಲಿ ನಿತ್ಯ ಯಾತನೆಯನ್ನು ಅನುಭವಿಸುವರು ಎಂದು ಬರೆದಿದ್ದಾನೆ.
  • ಈ ಪದವನ್ನು “ಭಯಾನಕವಾದ ಶ್ರಮೆ” ಅಥವಾ “ಒಬ್ಬರು ಹೆಚ್ಚಾಗಿ ಶ್ರಮೆಯನ್ನು ಅನುಭವಿಸುವಂತೆ ಮಾಡು” ಅಥವಾ “ಸಂಕಟ” ಎಂದೂ ಅನುವಾದ ಮಾಡಬಹುದು. ಕೆಲವೊಂದು ಅನುವಾದಕರು ಈ ಪದವು ಇನ್ನೂ ಸ್ಪಷ್ಟವಾಗಿರುವುದಕ್ಕೆ “ಭೌತಿಕ” ಅಥವಾ “ಅತ್ಮೀಯಕ” ಎಂದು ಆ ಪದಕ್ಕೆ ಜೋಡಿಸುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ಮೃಗ, ನಿತ್ಯತ್ವ, ಯೋಬ, ರಕ್ಷಕ, ಆತ್ಮ, ಶ್ರಮೆ, ಆರಾಧನೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3013, G928, G929, G930, G931, G2558, G2851, G3600

ಯುಕ್ತಿ, ಯುಕ್ತಿಯುಳ್ಳದ್ದಾಗಿ

# ಪದದ ಅರ್ಥವಿವರಣೆ:

“ಯುಕ್ತಿ” ಎನ್ನುವ ಪದವು ಜಾಣತನವನ್ನು ಮತ್ತು ನಿಪುಣತೆಯನ್ನು ಹೊಂದಿರುವ ವ್ಯಕ್ತಿಯನ್ನು ಸೂಚಿಸುತ್ತದೆ, ವಿಶೇಷವಾಗಿ ಪ್ರಾಯೋಗಾತ್ಮಕವಾದ ವಿಷಯಗಳಲ್ಲಿ ಬುದ್ಧಿವಂತಿಕೆಯನ್ನು ಹೊಂದಿರುವ ವ್ಯಕ್ತಿಯನ್ನು ಸೂಚಿಸುತ್ತದೆ.

  • “ಯುಕ್ತಿ” ಎನ್ನುವ ಪದಕ್ಕೆ ಅನೇಕಬಾರಿ ನಕಾರಾತ್ಮಕವಾದ ಭಾವನೆಯ ಅರ್ಥವನ್ನು ಹೊಂದಿರುತ್ತದೆ, ಯಾಕಂದರೆ ಇದು ಸ್ವಾರ್ಥಚಿಂತನೆಯ ಕ್ರಿಯೆಗಳಲ್ಲಿ ಒಳಗೊಂಡಿರುತ್ತದೆ.
  • ಯುಕ್ತಿಯುಳ್ಳ ವ್ಯಕ್ತಿ ತನಗೆ ಸಹಾಯ ಮಾಡಿಕೊಳ್ಳುವುದರಲ್ಲಿ ಮಾತ್ರವೇ ದೃಷ್ಟಿ ಸಾರುತ್ತಾನೋ ಹೊರತು ಇತರರ ವಿಷಯಗಳಲ್ಲಿ ದೃಷ್ಟಿ ಸಾರುವುದಿಲ್ಲ.
  • ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಕುಯುಕ್ತಿ” ಅಥವಾ “ವಂಚನೆ” ಅಥವಾ “ಚತುರ” ಅಥವಾ “ಕುಶಲ” ಎನ್ನುವ ಪದಗಳು ಸಂದರ್ಭಾನುಗುಣವಾಗಿ ಒಳಗೊಂಡಿರುತ್ತವೆ.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2450, H6175, G5429

ಯೆಹೂದ್ಯರ ಅಧಿಕಾರಿಗಳು, ಯೆಹೂದ್ಯರ ನಾಯಕ

# ಸತ್ಯಾಂಶಗಳು:

“ಯೆಹೂದ್ಯರ ನಾಯಕ” ಅಥವಾ “ಯೆಹೂದ್ಯ ಅಧಿಕಾರ” ಎನ್ನುವ ಪದವು ದೇವರ ಧರ್ಮಶಾಸ್ತ್ರದ ಬೋಧಕರಾಗಿರುವ ಮತ್ತು ಯಾಜಕರಾಗಿರುವ ಧರ್ಮದ ನಾಯಕರನ್ನುಸೂಚಿಸುತ್ತದೆ. ಭಕ್ತಿಗೆ ಅಥವಾ ಧರ್ಮಕ್ಕೆ ಸಂಬಂಧವಿಲ್ಲದ ವಿಷಯಗಳ ಕುರಿತಾಗಿಯೂ ಅವರು ತೀರ್ಪುಗಳನ್ನು ಮಾಡುವ ಅಧಿಕಾರವನ್ನು ಅವರು ಹೊಂದಿರುತ್ತಾರೆ.

  • ಯೆಹೂದ್ಯರ ನಾಯಕರು ಮಹಾ ಯಾಜಕರು, ಪ್ರಧಾನ ಯಾಜಕರು ಮತ್ತು ಶಾಸ್ತ್ರಿಗಳು (ದೇವರ ಧರ್ಮಶಾಸ್ತ್ರದ ಬೋಧಕರು) ಆಗಿದ್ದರು.
  • ಯೆಹೂದ್ಯರ ನಾಯಕರ ಎರಡು ಮುಖ್ಯ ಗುಂಪುಗಳು ಫರಿಸಾಯರು ಮತ್ತು ಸದ್ದುಕಾಯರು ಆಗಿರುತ್ತಾರೆ.
  • ಧರ್ಮಶಾಸ್ತ್ರದ ವಿಷಯಗಳ ಕುರಿತಾಗಿ ತೀರ್ಪುಗಳನ್ನು ಮಾಡುವುದಕ್ಕೆ ಯೆರೂಸಲೇಮಿನಲ್ಲಿ ಯೆಹೂದ್ಯ ಕೌನ್ಸಿಲ್.ನಲ್ಲಿ ಎಪ್ಪತ್ತು ಮಂದಿ ಯೆಹೂದ್ಯ ನಾಯರು ಭೇಟಿಯಾಗಿದ್ದರು.
  • ಅನೇಕಮಂದಿ ಯೆಹೂದ್ಯ ನಾಯಕರು ತಾವು ನೀತಿವಂತರೆಂದು ಆಲೋಚನೆ ಮಾಡುತ್ತಾರೆ ಮತ್ತು ಅಹಂಕಾರಿಗಳಾಗಿರುತ್ತಾರೆ. ಅವರಿಗೆ ಯೇಸು ಅಂದರೆ ಅಸೂಯೆ ಮತ್ತು ಆತನನ್ನು ಸಾಯಿಸಬೇಕೆಂದಿದ್ದರು. ಅವರಿಗೆ ದೇವರಿಗೆ ಗೊತ್ತೆಂದು ಹೇಳಿಕೊಳ್ಳುತ್ತಾರೆ, ಆದರೆ ಆತನಿಗೆ ವಿಧೇಯತೆ ತೋರಿಸುವುದಿಲ್ಲ.
  • “ಯೆಹೂದ್ಯರು” ಎನ್ನುವ ಮಾತು ಅನೇಕಬಾರಿ ಯೆಹೂದ್ಯರ ನಾಯಕರನ್ನು ಸೂಚಿಸುತ್ತದೆ, ವಿಶೇಷವಾಗಿ ಅವರು ಯೇಸುವಿನ ವಿಷಯದಲ್ಲಿ ಕೋಪದಲ್ಲಿದ್ದು, ಆತನಿಗೆ ಹಾನಿಯನ್ನುಂಟು ಮಾಡಬೇಕೆಂದು ಯತ್ನಿಸುವ ಸಂದರ್ಭಗಳಲ್ಲಿ ಸೂಚಿಸಲ್ಪಟ್ಟಿರುತ್ತದೆ.
  • ಈ ಪದಗಳನ್ನು “ಯೆಹೂದ್ಯರ ಪಾಲಕರು” ಅಥವಾ “ಯೆಹೂದ್ಯ ಜನರ ಮೇಲೆ ಆಳುವ ವ್ಯಕ್ತಿಗಳು” ಅಥವಾ “ಯೆಹೂದ್ಯ ಧರ್ಮದ ನಾಯಕರು” ಎಂಬುದಾಗಿ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಯೆಹೂದ್ಯ, ಪ್ರಧಾನ ಯಾಜಕರು, ಕೌನ್ಸಿಲ್, ಮಹಾ ಯಾಜಕ, ಫರಿಸಾಯ, ಯಾಜಕ, ಸದ್ದುಕಾಯ, ಶಾಸ್ತ್ರಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಉದಾಹರಣೆಗಳು:

  • 24:03 ಅನೇಕಮಂದಿ ___ ಧರ್ಮದ ನಾಯಕರು ___ ಯೋಹಾನನಿಂದ ದೀಕ್ಷಾಸ್ನಾನ ಪಡೆದುಕೊಳ್ಳುವುದಕ್ಕೆ ಬಂದಿದ್ದರು, ಆದರೆ ಆವರು ತಮ್ಮ ಪಾಪಗಳನ್ನು ಒಪ್ಪಿಕೊಂಡಿರಲಿಲ್ಲ ಅಥವಾ ಪಾಪಗಳಿಗೆ ಪಶ್ಚಾತ್ತಾಪ ಹೊಂದಿರಲಿಲ್ಲ.
  • 37:11 ಆದರೆ ___ ಯೆಹೂದ್ಯರ ಧರ್ಮದ ನಾಯಕರು ___ ಅಸೂಯೆಪಟ್ಟಿದ್ದರು, ಆದ್ದರಿಂದ ಅವರು ಯೇಸುವನ್ನು ಮತ್ತು ಲಾಜರನನ್ನು ಹೇಗೆ ಕೊಲ್ಲಬೇಕೆಂದು ಪ್ರಣಾಳಿಕೆ ಮಾಡುವುದಕ್ಕೆ ಭೇಟಿಯಾಗಿದ್ದರು.
  • 38:02 ಯೇಸು ಮೆಸ್ಸೀಯನೆಂದು ___ ಯೆಹೂದ್ಯರ ನಾಯಕರು ___ ತಿರಸ್ಕರಿಸುತ್ತಿದ್ದಾರೆಂದು ಮತ್ತು ಅವರು ಆತನನ್ನು ಸಾಯಿಸುವುದಕ್ಕೆ ಆಲೋಚನೆ ಮಾಡುತ್ತಿದ್ದರೆಂದು ಮಾಡುತ್ತಿದ್ದಾರೆಂದು ಅವನಿಗೆ (ಯೂದಾನಿಗೆ) ಗೊತ್ತಿತ್ತು.
  • 38:03 ಮಹಾ ಯಾಜಕನಿಂದ ___ ಯೆಹೂದ್ಯ ನಾಯಕರು ___ ನಡೆಸಲ್ಪಟ್ಟಿದ್ದರು, ಯೇಸುವನ್ನು ಹಿಡಿಸಿಕೊಡುವುದಕ್ಕೆ ಯೂದಾನಿಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ಕೊಟ್ಟಿದ್ದರು.
  • 39:05 “ಆತನು (ಯೇಸು) ಸಾಯುವುದಕ್ಕೆ ಯೋಗ್ಯನು” ಎಂದು ಹೇಳುವುದಕ್ಕೆ ___ ಯೆಹೂದ್ಯರ ನಾಯಕರು ___ ಮಹಾ ಯಾಜಕನಿಗೆ ಎಲ್ಲಾ ಉತ್ತರಗಳನ್ನು ಹೇಳಿದ್ದರು,
  • 39:09 ಆ ಮರುದಿನ ಬೆಳಿಗ್ಗೆ, ___ ಯೆಹೂದ್ಯರ ನಾಯಕರು ___ ರೋಮಾ ಪಾಲಕನಾದ ಪಿಲಾತನ ಬಳಿಗೆ ಯೇಸುವನ್ನು ಕರೆದುಕೊಂಡು ಬಂದರು.
  • 39:11 ಆದರೆ __ ಯೆಹೂದ್ಯ ನಾಯಕರು ____ ಮತ್ತು ಜನ ಸಮೂಹವು “ಅವನ್ನು ಶಿಲುಬೆಗೇರಿಸಿ” ಎಂದು ಜೋರಾಗಿ ಕೂಗಿದರು.
  • 40:09 ಯೇಸು ಮೆಸ್ಸೀಯನೆಂದು ನಂಬಿದ ಇಬ್ಬರು ___ ಯೆಹೂದ್ಯರ ನಾಯಕರಾದ ___ ಯೋಸೇಫ ಮತ್ತು ನಿಕೊದೇಮರು ಯೇಸುವಿನ ದೇಹಕ್ಕಾಗಿ ಪಿಲಾತನನ್ನು ಕೇಳಿಕೊಂಡರು.
  • 44:07 ಆ ದಿನವಾದನಂತರ, ___ ಯೆಹೂದ್ಯ ನಾಯಕರು ___ ಮಹಾ ಯಾಜಕ ಮತ್ತು ಇತರ ___ ಧರ್ಮ ನಾಯಕರ ___ ಬಳಿಗೆ ಪೇತ್ರನನ್ನು ಮತ್ತು ಯೋಹಾನನನ್ನು ಕರೆದುಕೊಂಡು ಬಂದರು.

# ಪದ ಡೇಟಾ:

  • Strong's: G2453

ರಕ್ತಪಾತ

# ಪದದ ಅರ್ಥವಿವರಣೆ:

“ರಕ್ತಪಾತ” ಎನ್ನುವ ಮಾತು ಕೊಲೆ, ಯುದ್ಧ ಅಥವಾ ಇತರ ಬೇರೆ ಹಿಂಸಾತ್ಮಕ ಕ್ರಿಯೆಗಳು ನಡೆದಾಗ ಮನುಷ್ಯರ ಮರಣವನ್ನು ಸೂಚಿಸುತ್ತದೆ.

  • ಈ ಪದಕ್ಕೆ “ರಕ್ತವನ್ನು ಸುರಿಸುವುದು” ಎನ್ನುವುದೇ ಅಕ್ಷರಾರ್ಥ. ಇದು ಒಂದು ಗಾಯದಿಂದ ಒಬ್ಬ ವ್ಯಕ್ತಿಯ ದೇಹದೊಳಗಿನಿಂದ ಬರುವ ರಕ್ತವನ್ನು ಸೂಚಿಸುತ್ತದೆ.
  • ಅನೇಕಬಾರಿ “ರಕ್ತಪಾತ” ಎನ್ನುವ ಪದವನ್ನು ಅತೀ ಹೆಚ್ಚಾಗಿ ಜನರನ್ನು ಸಾಯಿಸುವುದನ್ನು ಸೂಚಿಸುತ್ತದೆ.
  • ಇದು ಕೊಲೆಯೆನ್ನುವ ಪಾಪವನ್ನೂ ಸೂಚಿಸುತ್ತದೆ.

# ಅನುವಾದ ಸಲಹೆಗಳು:

  • “ರಕ್ತಪಾತ” ಎನ್ನುವದನ್ನು “ಜನರನ್ನು ಸಾಯಿಸುವುದು” ಅಥವಾ “ಕೊಲೆ ಮಾಡಲ್ಪಟ್ಟ ಅನೇಕರು” ಎಂದೂ ಅನುವಾದ ಮಾಡಬಹುದು.
  • “ರಕ್ತಪಾತದಿಂದ” ಎನ್ನುವ ಪದವನ್ನು “ಜನರನ್ನು ಸಾಯಿಸುವುದರ ಮೂಲಕ” ಎಂದೂ ಅನುವಾದ ಮಾಡಬಹುದು.
  • “ದೋಷವಿಲ್ಲದ ರಕ್ತಪಾತ” ಎನ್ನುವ ಮಾತನ್ನು “ದೋಷವಿಲ್ಲದ ಜನರನ್ನು ಸಾಯಿಸುವುದು” ಎಂದೂ ಅನುವಾದ ಮಾಡಬಹುದು.
  • “ರಕ್ತಪಾತವು ರಕ್ತಪಾತವನ್ನೇ ಅನುಸರಿಸುವುದು” ಎನ್ನುವ ಮಾತನ್ನು “ಅವರು ಜನರನ್ನು ಸಾಯಿಸುತ್ತಾ ಇರುತ್ತಾರೆ” ಅಥವಾ “ಜನರನ್ನು ಸಾಯಿಸುವುದು ಮುಂದೆವರಿಯುತ್ತಾ ಇರುತ್ತದೆ” ಅಥವಾ “ಅವರು ಅನೇಕ ಜನರನ್ನು ಸಾಯಿಸಿದ್ದಾರೆ ಮತ್ತು ಸಾಯಿಸುವುದನ್ನು ಮುಂದೆವರಿಸುತ್ತಾ ಇರುತ್ತಾರೆ” ಅಥವಾ “ಜನರ ಇತರ ಜನರನ್ನು ಸಾಯಿಸುತ್ತಾ ಇರುತ್ತಾರೆ” ಎಂದೂ ಅನುವಾದ ಮಾಡಬಹುದು.
  • “ರಕ್ತಪಾತವು ನಿನ್ನನ್ನು ಹಿಂಬಾಲಿಸುತ್ತದೆ” ಎನ್ನುವ ಇನ್ನೊಂದು ರೀತಿಯ ಅಲಂಕಾರ ರೂಪದ ಮಾತನ್ನು “ನಿನ್ನ ಜನರು ರಕ್ತಪಾತವನ್ನು ಅನುಭವಿಸುತ್ತಾ ಇರುತ್ತಾರೆ” ಅಥವಾ “ನಿನ್ನ ಜನರು ಸಾಯುತ್ತಾ ಇರುತ್ತಾರೆ” ಅಥವಾ “ನಿನ್ನ ಜನರು ಇತರ ದೇಶಗಳೊಂದಿಗೆ ಹೋರಾಡುತ್ತಾ ಯುದ್ಧದಲ್ಲಿರುತ್ತಾರೆ ಮತ್ತು ಅವರು ಸಾಯುತ್ತಾ ಇರುತ್ತಾರೆ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ರಕ್ತ, ವಧೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1818, G2210

ರಕ್ತಸಂಬಂಧಿ, ನಂಟರು, ಬಂಧುಬಾಂಧವರು, ರಕ್ತಸಂಬಂಧಿಗಳು, ಸೋದರ ಸಂಬಂಧಿಗಳು

# ಪದದ ಅರ್ಥವಿವರಣೆ:

“ರಕ್ತಸಂಬಂಧಿ” ಎನ್ನುವ ಪದವು ಒಬ್ಬ ವ್ಯಕ್ತಿಯ ರಕ್ತ ಸಂಬಂಧಿಗಳನ್ನು, ಒಂದು ಗುಂಪಾಗಿರುವವರನ್ನು ಸೂಚಿಸುತ್ತದೆ. “ಸೋದರ ಸಂಬಂಧಿ” ಎನ್ನುವ ಪದವು ವಿಶೇಷವಾಗಿ ಪುರುಷ ಬಂಧುವನ್ನು ಸೂಚಿಸುತ್ತದೆ.

  • “ರಕ್ತಸಂಬಂಧಿ” ಎನ್ನುವ ಪದವು ಒಬ್ಬ ವ್ಯಕ್ತಿಯ ತುಂಬಾ ಹತ್ತಿರ ಬಂಧುಗಳನ್ನು ಸೂಚಿಸುತ್ತೆದೆ, ಅಂದರೆ ತಂದೆತಾಯಿಗಳನ್ನು ಮತ್ತು ಒಡಹುಟ್ಟಿದವರನ್ನು ಸೂಚಿಸುತ್ತದೆ ಅಥವಾ ಇದರಲ್ಲಿ ತುಂಬಾ ದೂರದಲ್ಲಿರುವ ಸಂಬಂಧಿಕರನ್ನು ಕೂಡ ಸೂಚಿಸುತ್ತದೆ, ಅಂದರೆ ಚಿಕ್ಕಮ್ಮ, ಚಿಕ್ಕಪ್ಪ ಅಥವಾ ಅಣ್ಣತಮ್ಮಂದಿರನ್ನು ಸೂಚಿಸುತ್ತದೆ.

ಪುರಾತನ ಇಸ್ರಾಯೇಲಿನಲ್ಲಿ ಒಬ್ಬ ಪುರುಷನು ಸತ್ತು ಹೋದರೆ, ಅವನಿಗೆ ತುಂಬಾ ಹತ್ತಿರ ಸಂಬಂಧಿಕನು ವಿಧವೆಯಾದ ತನ್ನ ಹೆಂಡತಿಯನ್ನು ಮದುವೆ ಮಾಡಿಕೊಳ್ಳಬೇಕೆಂದು, ತನ್ನ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಬೇಕೆಂದು ಮತ್ತು ತನ್ನ ಕುಟುಂಬದ ಹೆಸರನ್ನು ಮುಂದುವರಿಸುವುದಕ್ಕೆಸಹಾಯ ಮಾಡಲು ಎದುರುನೋಡುತ್ತಿದ್ದನು, ಇಂಥಹ ಸಂಬಂಧಿಕನನ್ನು “ಸೋದರ ಸಂಬಂಧ ವಿಮೋಚಕನು” ಎಂದು ಕರೆಯುತ್ತಿದ್ದರು.

  • “ರಕ್ತಸಂಬಂಧಿ” ಎನ್ನುವ ಈ ಪದವನ್ನು “ಬಂಧು” ಅಥವಾ “ಕುಟುಂಬ ಸದಸ್ಯ” ಎಂದೂ ಅನುವಾದ ಮಾಡಬಹುದು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H251, H1350, H4129, H4130, H7138, H7607, G4773

ರಥ, ರಥಗಳು, ಸಾರಥಿಗಳು

# ಪದದ ಅರ್ಥವಿವರಣೆ:

ಪುರಾತನ ಕಾಲದಲ್ಲಿ ರಥಗಳು ತೆಳುವಾಗಿದ್ದವು, ಎರಡು ಚಕ್ರಗಳ ಬಂಡಿಗಳನ್ನು ಕುದುರೆಗಳಿಂದ ಓಡಿಸುತ್ತಿದ್ದರು.

  • ಜನರು ರಥಗಳನ್ನು ಕುಳಿತುಕೊಳ್ಳುತ್ತಿದ್ದರು ಅಥವಾ ನಿಂತುಕೊಳ್ಳುತ್ತಿದ್ದರು, ಅವುಗಳನ್ನು ಪ್ರಯಾಣಕ್ಕಾಗಿ ಅಥವಾ ಯುದ್ಧಕ್ಕಾಗಿ ಉಪಯೋಗಿಸುತ್ತಿದ್ದರು.
  • ಯುದ್ಧದಲ್ಲಿ ರಥಗಳನ್ನು ಹೊಂದಿರುವ ಸೈನ್ಯಕ್ಕೆ ಒಂದು ದೊಡ್ಡ ಪ್ರಯೋಜನವಿರುತ್ತಿತ್ತು, ಅವು ತುಂಬಾ ವೇಗವಾಗಿ ಚಲಿಸುತ್ತಿದ್ದವು ಮತ್ತು ರಥಗಳಿಲ್ಲದ ಸೈನ್ಯದ ಮೇಲೆ ಚಲನಶೀಲತೆಯಾಗಿರುತ್ತಿದ್ದವು.
  • ಪುರಾತನ ಐಗುಪ್ತರು ಮತ್ತು ರೋಮಾದವರು ಕುದುರೆಗಳನ್ನು, ರಥಗಳನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದರು.

(ಅನುವಾದ ಸಲಹೆಗಳು: /ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಐಗುಪ್ತ, ರೋಮಾ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಉದಾಹರಣೆಗಳು:

  • 12:10_ ಅವರು ಇಸ್ರಾಯೇಲ್ಯರನ್ನು ಸಮುದ್ರ ಮಾರ್ಗದ ಮೂಲಕ ಅನುಸರಿಸಿದ್ದರು, ಆದರೆ ದೇವರು ಐಗುಪ್ತರನ್ನು ಭಯಪಡುವಂತೆ ಮತ್ತು ಅವರ ____ ರಥಗಳ ____ ಚಕ್ರದ ಕೀಲುಗಳಲ್ಲಿ ವ್ಯತ್ಯಾಸ ಮಾಡಿ ನಡೆಯದಂತೆ ಮಾಡಿದರು.

# ಪದ ಡೇಟಾ:

  • Strong's: H668, H2021, H4817, H4818, H5699, H7393, H7395, H7396, H7398, G716, G4480

ರಾಜಕುಮಾರ, ರಾಜಕುಮಾರರು, ರಾಜಕುಮಾರಿ, ರಾಜಕುಮಾರಿಗಳು

# ಪದದ ಅರ್ಥವಿವರಣೆ:

“ರಾಜಕುಮಾರ” ಎಂದರೆ ಅರಸನ ಮಗನಾಗಿರುತ್ತಾನೆ. “ರಾಜಕುಮಾರಿ” ಎಂದರೆ ಅರಸನ ಮಗಳಾಗಿರುತ್ತಾಳೆ.

  • “ರಾಜಕುಮಾರ” ಎನ್ನುವ ಪದವು ಅನೇಕಬಾರಿ ನಾಯಕ, ಪಾಲಕ ಅಥವಾ ಇತರ ಶಕ್ತಿಯುತವಾದ ವ್ಯಕ್ತಿಯನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ.
  • ಅಬ್ರಹಾಮನ ಸಂಪತ್ತು ಮತ್ತು ಪ್ರಸಿದ್ಧಿಯ ಕಾರಣದಿಂದ ಆತನು ಹಿತ್ತಿಯರ ಮಧ್ಯದಲ್ಲಿ ನಿವಾಸವಾಗಿದ್ದಾಗ “ರಾಜಕುಮಾರ” ಎಂಬುದಾಗಿ ಕರೆಯಲ್ಪಡುತ್ತಿದ್ದನು.
  • ದಾನಿಯೇಲ ಗ್ರಂಥದಲ್ಲಿ “ರಾಜಕುಮಾರ” ಎನ್ನುವ ಪದವು “ಪಾರಸಿಯ ರಾಜಕುಮಾರ” ಮತ್ತು “ಗ್ರೀಸ್ ರಾಜಕುಮಾರ” ಎನ್ನುವ ಮಾತುಗಳಲ್ಲಿ ಉಪಯೋಗಿಸಲ್ಪಟ್ಟಿರುತ್ತದೆ, ಆ ಸಂದರ್ಭಗಳಲ್ಲಿ ಬಹುಶಃ ಆ ಪ್ರಾಂತ್ಯಗಳ ಮೇಲೆ ಅಧಿಕಾರವನ್ನು ಹೊಂದಿದ ಶಕ್ತಿಯುತವಾದ ದುಷ್ಟ ಆತ್ಮಗಳನ್ನು ಸೂಚಿಸುತ್ತದೆ.
  • ಪ್ರಧಾನ ದೂತನಾಗಿರುವ ಮಿಕಾಯೇಲನನ್ನು ಕೂಡ ದಾನಿಯೇಲ ಗ್ರಂಥದಲ್ಲಿ “ರಾಜಕುಮಾರ” ಎಂಬುದಾಗಿ ಸೂಚಿಸಲ್ಪಟ್ಟಿದೆ.
  • ಸತ್ಯವೇದದಲ್ಲಿ ಕೆಲವೊಂದುಸಲ ಸೈತಾನನನ್ನು “ಈ ಲೋಕದ ರಾಜಕುಮಾರ” ಎಂಬುದಾಗಿ ಸೂಚಿಸಲ್ಪಟ್ಟಿದೆ.
  • ಯೇಸುವನ್ನು “ಸಮಾಧಾನ ಪ್ರಭು” ಮತ್ತು “ಜೀವಾಧಿಪತಿ” ಎಂದು ಕರೆಯಲಾಗಿದೆ.
  • ಅಪೊ.ಕೃತ್ಯ.2:36 ವಾಕ್ಯದಲ್ಲಿ ಯೇಸುವನ್ನು “ಒಡೆಯ ಮತ್ತು ಕ್ರಿಸ್ತ” ಎಂಬುದಾಗಿ ಕರೆಯಲ್ಪಟ್ಟಿದ್ದಾನೆ, ಮತ್ತು ಅಪೊ.ಕೃತ್ಯ.5:31 ವಾಕ್ಯದಲ್ಲಿ ಈತನನ್ನು “ರಾಜಕುಮಾರ ಮತ್ತು ರಕ್ಷಕ” ಎಂಬುದಾಗಿ ಕರೆಯಲ್ಪಟ್ಟಿದ್ದನು, ಈ ಪದವು “ಒಡೆಯ” ಮತ್ತು “ರಾಜಕುಮಾರ” ಎನ್ನುವ ಪದಗಳ ಅರ್ಥಕ್ಕೆ ಸಮಾನವಾಗಿ ತೋರಿಸಲ್ಪಟ್ಟಿರುತ್ತದೆ.

# ಅನುವಾದ ಸಲಹೆಗಳು:

  • “ರಾಜಕುಮಾರ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಅರಸನ ಮಗ” ಅಥವಾ “ಪಾಲಕ” ಅಥವಾ “ನಾಯಕ” ಅಥವಾ “ಮುಖ್ಯಸ್ಥ” ಅಥವಾ “ಕ್ಯಾಪ್ಟನ್ (ನಾಯಕ)” ಎನ್ನುವ ಪದಗಳು ಒಳಗೊಂಡಿರುತ್ತವೆ.
  • ದೂತರನ್ನು ಸೂಚಿಸಿದಾಗ, ಈ ಪದಕ್ಕೆ “ಆತ್ಮ ನಾಯಕ” ಅಥವಾ “ನಡೆಸುವ ದೂತ” ಎಂದೂ ಅನುವಾದ ಮಾಡಬಹುದು.
  • ಸೈತಾನನನ್ನು ಅಥವಾ ಇತರ ದುಷ್ಟ ಆತ್ಮಗಳನ್ನು ಸೂಚಿಸಿದಾಗ, ಈ ಪದವನ್ನು “ದುಷ್ಟ ಆತ್ಮ ಪಾಲಕ” ಅಥವಾ “ಶಕ್ತಿಯುತವಾದ ಆತ್ಮ ನಾಯಕ” ಅಥವಾ “ಪಾಲಿಸುವ ಆತ್ಮ” ಎಂದು ಸಂದರ್ಭಾನುಗುಣವಾಗಿ ಸಂದರ್ಭದಲ್ಲಿ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ದೂತ, ಅಧಿಕಾರ, ಕ್ರಿಸ್ತ, ದೆವ್ವ, ಒಡೆಯ, ಶಕ್ತಿ, ಪಾಲಕ, ಸೈತಾನ್, ರಕ್ಷಕ, ಆತ್ಮ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1, H117, H324, H2831, H3548, H4502, H5057, H5081, H5139, H5257, H5387, H5633, H5993, H6579, H7101, H7261, H7333, H7336, H7786, H7991, H8269, H8282, H8323, G747, G758, G1413, G2232, G3175

ರಾಜದಂಡ, ರಾಜದಂಡಗಳು

# ಪದದ ಅರ್ಥವಿವರಣೆ:

“ರಾಜದಂಡ” ಎನ್ನುವ ಪದವು ಅರಸನಂತಿರವ ಪಾಲಕರಿಂದ ಹಿಡಿಯಲ್ಪಟ್ಟಿರುವ ಆಭರಣದ ಕೋಲು ಅಥವಾ ಗದೆಯನ್ನು ಸೂಚಿಸುತ್ತದೆ.

  • ರಾಜದಂಡಗಳು ಪ್ರಾಥಮಿಕವಾಗಿ ಕೆತ್ತಲ್ಪಟ್ಟಿರುವ ಅಲಂಕಾರಗಳ ಮರದ ಕೊಂಬುಗಳಾಗಿರುತ್ತಿದ್ದವು. ಸ್ವಲ್ಪ ಕಾಲವಾದನಂತರ ರಾಜದಂಡಗಳನ್ನು ಬಂಗಾರದಂತಹ ಬೆಲೆಯುಳ್ಳ ಲೋಹಗಳಿಂದ ಮಾಡುವುದಕ್ಕೆ ಆರಂಭಿಸಿದರು.
  • ರಾಜದಂಡವು ದೊರೆತನಕ್ಕೆ ಮತ್ತು ಅಧಿಕಾರಕ್ಕೆ ಗುರುತಾಗಿರುತ್ತದೆ, ಅರಸನಿಗೆ ಕೊಡುವ ಘನತೆಗೆ ಮತ್ತು ಹಿರಿಮೆಗೆ ಕೂಡ ಗುರುತಾಗಿರುತ್ತದೆ.
  • ಹಳೇ ಒಡಂಬಡಿಕೆಯಲ್ಲಿ ದೇವರನ್ನು ನೀತಿಯ ದಂಡವನ್ನಾಗಿ ವಿವರಿಸಲ್ಪಟ್ಟಿದ್ದರು, ಯಾಕಂದರೆ ದೇವರು ಅರಸನಾಗಿ ತನ್ನ ಜನರನ್ನು ಆಳುವನು.
  • ಎಲ್ಲಾ ದೇಶಗಳನ್ನು ಆಳುವುದಕ್ಕೆ ಇಸ್ರಾಯೇಲಿನಿಂದ ರಾಜದಂಡಕ್ಕೆ ಗುರುತಾಗಿ ಮೆಸ್ಸಿಯಾನನ್ನು ಸೂಚಿಸುವ ಹಳೇ ಒಡಂಬಡಿಕೆಯ ಪ್ರವಾದನೆಯುಂಟು.
  • ಇದನ್ನು “ಪಾಲಿಸುವ ಕೋಲು” ಅಥವಾ “ಅರಸನ ಕೋಲು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಅಧಿಕಾರ, ಕ್ರಿಸ್ತ, ಅರಸ, ನೀತಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2710, H4294, H7626, H8275, G4464

ರಾಜಯೋಗ್ಯ, ದೊರೆತನ

# ಪದದ ಅರ್ಥವಿವರಣೆ:

“ರಾಜಯೋಗ್ಯ” ಎನ್ನುವ ಪದವು ಅರಸ ಅಥವಾ ರಾಣಿಯೊಂದಿಗೆ ಸಹಕಾರವಾಗಿರುವ ವಸ್ತುಗಳನ್ನು ಮತ್ತು ಜನರನ್ನು ವಿವರಿಸುತ್ತದೆ.

  • “ರಾಜಯೋಗ್ಯ” ಎಂದು ಕರೆಯಲ್ಪಡುವ ಅನೇಕ ವಿಷಯಗಳ ಉದಾಹರಣೆಗಳಲ್ಲಿ ಅರಸನ ವಸ್ತ್ರಗಳು, ಅರಮನೆ, ಸಿಂಹಾಸನ ಮತ್ತು ಕಿರೀಟ ಎನ್ನುವವುಗಳು ಒಳಗೊಂಡಿರುತ್ತವೆ.
  • ಅರಸ ಅಥವಾ ರಾಣಿ ಸಹಜವಾಗಿ ರಾಜಯೋಗ್ಯ ಭವನದಲ್ಲಿ ಅಥವಾ ಅರಮನೆಯಲ್ಲಿ ನಿವಾಸವಾಗಿರುತ್ತಾರೆ.
  • ಅರಸನು ವಿಶೇಷವಾದ ಉಡುಪುಗಳನ್ನು ಧರಿಸಿರುತ್ತಾನೆ, ಕೆಲವೊಂದುಬಾರಿ ಇವುಗಳನ್ನು “ರಾಜಯೋಗ್ಯ ನಿಲುವಂಗಿಗಳು” ಎಂದೂ ಕರೆಯುತ್ತಾರೆ. ಅನೇಕಬಾರಿ ಅರಸನ ನಿಲುವಂಗಿಗಳು ನೇರಳೆ ಬಣ್ಣದಲ್ಲಿರುತ್ತವೆ, ಈ ಬಣ್ಣವು ಅಪರೂಪವಾಗಿ ತಯಾರಿಸುತ್ತಾರೆ ಮತ್ತು ಇದು ತುಂಬಾ ಬೆಲೆಯುಳ್ಳದ್ದಾಗಿರುತ್ತದೆ.
  • ಹೊಸ ಒಡಂಬಡಿಕೆಯಲ್ಲಿ ಯೇಸುವಿನಲ್ಲಿ ನಂಬಿಕೆಯಿಟ್ಟಿರುವ ಪ್ರತಿಯೊಬ್ಬರನ್ನು “ರಾಜವಂಶಸ್ಥರಾದ ಯಾಜಕರು” ಎಂದು ಕರೆಯಲ್ಪಟ್ಟರು. ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಅರಸನಾದ ದೇವರನ್ನು ಸೇವಿಸುವ ಯಾಜಕರು” ಅಥವಾ “ಅರಸನಾದ ದೇವರಿಗಾಗಿ ಕರೆಯಲ್ಪಟ್ಟ ಯಾಜಕರು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • “ರಾಜಯೋಗ್ಯ” ಎನ್ನುವ ಪದವನ್ನು “ಅರಸನ” ಅಥವಾ “ಅರಸನಿಗೆ ಸಂಬಂಧಪಟ್ಟಿರುವ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಅರಸ, ಅರಮನೆ, ಯಾಜಕ, ನೇರಳೆ ಬಣ್ಣ, ರಾಣಿ, ನಿಲುವಂಗಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H643, H1921, H1935, H4410, H4428, H4430, H4437, H4438, H4467, H4468, H7985, H8237, G933, G934, G937

ರಾಜ್ಯ, ರಾಜ್ಯಗಳು

# ಪದದ ಅರ್ಥವಿವರಣೆ:

ರಾಜ್ಯ ಎನ್ನುವುದು ಅರಸನಿಂದ ಒಂದು ಜನರ ಗುಂಪನ್ನು ಆಳ್ವಿಕೆ ಮಾಡುವುದು ಎಂದರ್ಥ. ಇದು ಒಬ್ಬ ಅರಸನಾಗಲಿ ಅಥವಾ ಇನ್ನೊಬ್ಬ ಪಾಲಕನಾಗಲಿ ಒಂದು ಕ್ಷೇತ್ರದ ಮೇಲೆ ಅಥವಾ ರಾಜಕೀಯ ಸೀಮೆಗಳ ಮೇಲೆ ನಿಯಂತ್ರಣವನ್ನು ಮತ್ತು ಅಧಿಕಾರವನ್ನು ಹೊಂದಿರುವುದನ್ನು ಕೂಡಾ ಸೂಚಿಸುತ್ತದೆ.

  • ರಾಜ್ಯ ಎನ್ನುವುದು ಯಾವುದೇ ಭೌಗೋಳಿಕವಾದ ಗಾತ್ರವನ್ನು ಹೊಂದಿರಬಹುದು. ಅರಸನು ಒಂದು ದೇಶವನ್ನು ಅಥವಾ ಒಂದು ಜನರ ಗುಂಪನ್ನು ಅಥವಾ ಒಂದೇ ಒಂದು ಪಟ್ಟಣವನ್ನು ಪಾಲಿಸುವವನಾಗಿರುತ್ತಾನೆ.
  • “ದೇವರ ರಾಜ್ಯ” ಎನ್ನುವ ಮಾತಿನಲ್ಲಿರುವಂತೆ, “ರಾಜ್ಯ” ಎನ್ನುವ ಪದವು ಆತ್ಮೀಯಕವಾದ ಆಡಳಿತವನ್ನು ಅಥವಾ ಅಧಿಕಾರವನ್ನು ಸೂಚಿಸುತ್ತದೆ,
  • ಎಲ್ಲಾ ಸೃಷ್ಟಿಯನ್ನು ಪಾಲಿಸುವಾತನು ದೇವರೊಬ್ಬರೇ, ಆದರೆ “ದೇವರ ರಾಜ್ಯ” ಎನ್ನುವ ಮಾತು ವಿಶೇಷವಾಗಿ ಯೇಸುವಿನಲ್ಲಿ ನಂಬಿದ ಪ್ರತಿಯೊಬ್ಬರ ಮೇಲೆ ಮತ್ತು ಆತನ ಅಧಿಕಾರಕ್ಕೆ ಒಪ್ಪಿಸಿಕೊಟ್ಟ ಪ್ರತಿಯೊಬ್ಬರ ಮೇಲೆ ಆತನ ಆಳ್ವಿಕೆ ಮತ್ತು ಅಧಿಕಾರವನ್ನು ಸೂಚಿಸುತ್ತದೆ.
  • ಸೈತಾನನು ಕೂಡ “ರಾಜ್ಯವನ್ನು” ಹೊಂದಿದ್ದಾನೆನ್ನುವುದರ ಕುರಿತಾಗಿ ಸತ್ಯವೇದವು ಮಾತನಾಡುತ್ತಿದೆ, ಅದರಲ್ಲಿ ಈ ಭೂಮಿಯ ಮೇಲಿರುವ ಅನೇಕ ವಿಷಯಗಳ ಮೇಲೆ ಅವನು ತಾತ್ಕಾಲಿಕವಾಗಿ ಆಳುವವನಾಗಿದ್ದಾನೆ. ಇವನ ರಾಜ್ಯವು ದುಷ್ಟ ರಾಜ್ಯವು ಆಗಿರುತ್ತದೆ ಮತ್ತು ಇದು “ಕತ್ತಲೆಯ ರಾಜ್ಯವನ್ನಾಗಿ” ಸೂಚಿಸುತ್ತದೆ.

# ಅನುವಾದ ಸಲಹೆಗಳು:

  • ಒಬ್ಬ ಅರಸನಿಂದ ಆಳ್ವಿಕೆ ಮಾಡಲ್ಪಡುವ ಭೌತಿಕ ಪಾಲನೆಯನ್ನು ಸೂಚಿಸಿದಾಗ, “ರಾಜ್ಯ” ಎನ್ನುವ ಪದವನ್ನು “ದೇಶ (ಅರಸನಿಂದ ಆಡಳಿತವಾಗುವ)” ಅಥವಾ “ಅರಸನ ಕ್ಷೇತ್ರ” ಅಥವಾ “ಅರಸನಿಂದ ಆಳ್ವಿಕೆ ಮಾಡಲ್ಪಡುತ್ತಿರುವ ಸೀಮೆ” ಎಂದೂ ಅನುವಾದ ಮಾಡಬಹುದು.
  • ಆತ್ಮೀಕವಾದ ಅರ್ಥದಲ್ಲಿ, “ರಾಜ್ಯ” ಎನ್ನುವ ಪದವನ್ನು “ಪಾಲನೆ” ಅಥವಾ “ಆಳ್ವಿಕೆ” ಅಥವಾ “ನಿಯಂತ್ರಿಸುವುದು” ಅಥವಾ “ಪ್ರಭುತ್ವ ಮಾಡುವುದು” ಎಂದು ಅನುವಾದ ಮಾಡಬಹುದು.
  • “ಯಾಜಕರ ರಾಜ್ಯ” ಎನ್ನುವ ಮಾತನ್ನು ಅನುವಾದ ಮಾಡುವ ಇನ್ನೊಂದು ವಿಧಾನದಲ್ಲಿ “ದೇವರಿಂದ ಆಳ್ವಿಕೆ ಮಾಡಲ್ಪಡುವ ಆತ್ಮೀಕವಾದ ಯಾಜಕರು” ಎಂದೂ ಅನುವಾದ ಮಾಡಬಹುದು.
  • “ಬೆಳಕಿನ ರಾಜ್ಯ” ಎನ್ನುವ ಮಾತನ್ನು “ಬೆಳಕಿನಂತೆ ದೇವರ ಆಳ್ವಿಕೆಯು ಒಳ್ಳೇಯದಾಗಿದೆ” ಅಥವಾ “ಬೆಳಕಾಗಿರುವ ದೇವರು ಜನರನ್ನು ಪಾಲಿಸುತ್ತಿದ್ದಾನೆ” ಅಥವಾ “ದೇವರ ರಾಜ್ಯದ ಒಳ್ಳೆತನ ಮತ್ತು ಬೆಳಕು” ಎಂದೂ ಅನುವಾದ ಮಾಡಬಹುದು. ಈ ಮಾತಿನಲ್ಲಿ “ಬೆಳಕು” ಎನ್ನುವ ಪದವನ್ನು ಇಟ್ಟಿರುವುದು ಒಳ್ಳೇಯದು, ಯಾಕಂದರೆ ಆ ಪದವು ಸತ್ಯವೇದದಲ್ಲಿ ತುಂಬಾ ಪ್ರಾಮುಖ್ಯವಾದ ಪದವಾಗಿರುತ್ತದೆ.
  • “ರಾಜ್ಯ” ಎನ್ನುವ ಪದವು ಮತ್ತು ಸಾಮ್ರಾಜ್ಯ ಎನ್ನುವ ಪದವು ಬೇರೆ ಬೇರೆಯಾಗಿರುತ್ತದೆ, ಯಾಕಂದರೆ ಸಾಮ್ರಾಜ್ಯದಲ್ಲಿ ಚಕ್ರವರ್ತಿ ಅನೇಕ ದೇಶಗಳನ್ನು ಆಳುವವನಾಗಿರುತ್ತಾನೆ.

(ಈ ಪದಗಳನ್ನು ಸಹ ನೋಡಿರಿ : ಅಧಿಕಾರ, ಅರಸ, ದೇವರ ರಾಜ್ಯ, ಇಸ್ರಾಯೇಲ್ ರಾಜ್ಯ, ಯೂದಾ, ಯಾಜಕ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಉದಾಹರಣೆಗಳು:

  • 13:02 “ ನೀವು ನನ್ನ ಮಾತುಗಳನ್ನು ಶ್ರದ್ಧೆಯಿಂದ ಕೇಳಿ, ನನ್ನ ಒಡಂಬಡಿಕೆಯನ್ನು ಕಾಪಾಡಿಕೊಂಡರೆ, ನೀವು ಎಲ್ಲಾ ಜನಾಂಗಗಳಲ್ಲಿ ನನಗೆ ಸ್ವಕೀಯ ಜನರಾಗಿರುವಿರಿ, ನೀವು ನನಗೆ ಶ್ರೇಷ್ಠಯಾಜಕರ ___ ರಾಜ್ಯವಾಗಿರುವಿರಿ ___ ಮತ್ತು ಪರಿಶುದ್ಧ ಜನರೂ ಆಗಿರುವಿರಿ” ಎಂದು ದೇವರು ಮೋಶೆಗೆ ಮತ್ತು ಇಸ್ರಾಯೇಲ್ ಜನರಿಗೆ ಹೇಳಿದನು.
  • 18:04 ದೇವರು ಸೊಲೊಮೋನನ ವಿಷಯದಲ್ಲಿ ಕೋಪಗೊಂಡಿದ್ದಾನೆ, ಸೊಲೊಮೋನನ ಅಪನಂಬಿಕೆಗೆ ಶಿಕ್ಷೆಯನ್ನಾಗಿ, ಸೊಲೊಮೋನನ ಮರಣದನಂತರ ಆತನು ಇಸ್ರಾಯೇಲ್ ದೇಶವನ್ನು ಎರಡು ___ ರಾಜ್ಯಗಳಾಗಿ ___ ವಿಂಗಡಿಸುತ್ತೇನೆಂದು ವಾಗ್ಧಾನ ಮಾಡಿದನು.
  • 18:07 ಇಸ್ರಾಯೇಲ್ ದೇಶದ ಹತ್ತು ಕುಲಗಳು ರೆಹಬ್ಬಾಮನಿಗೆ ವಿರುದ್ಧವಾಗಿ ತಿರಸ್ಕಾರ ಮಾಡಿದರು. ಕೇವಲ ಎರಡು ಕುಲಗಳು ಮಾತ್ರ ಆತನಿಗೆ ನಂಬಿಗಸ್ಥರಾಗಿದ್ದರು. ಈ ಎರಡು ಕುಲಗಳು ಯೂದಾ ___ ರಾಜ್ಯವಾಗಿ __ ಮಾರ್ಪಟ್ಟಿತು.
  • 18:08 ಇತರ ಇಸ್ರಾಯೇಲ್ ದೇಶದ ಹತ್ತು ಕುಲಗಳು ರೆಹಬ್ಬಾಮನಿಗೆ ವಿರುದ್ಧವಾಗಿ ತಿರಸ್ಕಾರ ಮಾಡಿ, ತಮಗೆ ಅರಸನನ್ನಾಗಿ ಯಾರೊಬ್ಬಾಮನನ್ನು ನೇಮಿಸಿಕೊಂಡರು. ಅವರು ವಾಗ್ಧಾನ ದೇಶದ ಉತ್ತರ ಭಾಗದಲ್ಲಿ ತಮ್ಮ ___ ರಾಜ್ಯವನ್ನು ____ ಮಾಡಿಕೊಂಡರು ಮತ್ತು ಅದನ್ನು ಇಸ್ರಾಯೇಲ್ ___ ರಾಜ್ಯ ___ ಎಂಬುದಾಗಿ ಕರೆಯಲ್ಪಟ್ಟರು.
  • 21:08 ಅರಸ ಎಂದರೆ ___ ರಾಜ್ಯವನ್ನು __ ಆಳುವ ವ್ಯಕ್ತಿ ಮತ್ತು ಜನರಿಗೆ ತೀರ್ಪು ಮಾಡುವ ವ್ಯಕ್ತಿಯಾಗಿರುತ್ತಾನೆ.

# ಪದ ಡೇಟಾ:

  • Strong's: H4410, H4437, H4438, H4467, H4468, H4474, H4475, G932

ರಾಣಿ, ರಾಣಿಗಳು

# ಪದದ ಅರ್ಥವಿವರಣೆ:

ರಾಣಿ ಎಂದರೆ ದೇಶಕ್ಕೆ ಸ್ತ್ರೀ ಪಾಲಕರು ಅಥವಾ ಅರಸನಿಗೆ ಹೆಂಡತಿಯು ಆಗಿರುತ್ತಾರೆ.

  • ಎಸ್ತೇರಲು ಅರಸನಾದ ಅಹಷ್ವೆರೋಷನನ್ನು ವಿವಾಹ ಮಾಡಿಕೊಂಡಾಗ ಆಕೆ ಪಾರಸಿಯ ಸಾಮ್ರಾಜ್ಯಕ್ಕೆ ರಾಣಿಯಾದಳು.
  • ರಾಣಿ ಈಜೆಬೆಲಳು ಅರಸನಾದ ಆಹಾಬನಿಗೆ ದುಷ್ಟ ಹೆಂಡತಿಯಾಗಿದ್ದಳು.
  • ಸೆಬಾ ರಾಣಿ ಪ್ರಸಿದ್ಧಿ ಹೊಂದಿದ ಪಾಲಕರಾಗಿದ್ದರು, ಈಕೆ ಅರಸನಾದ ಸೊಲೊಮೋನನನ್ನು ಸಂದರ್ಶಿಸುವುದಕ್ಕೆ ಬಂದಿದ್ದಳು.
  • “ರಾಣಿ ತಾಯಿ” ಎನ್ನುವ ಮಾತನ್ನು ಸಾಧಾರಣವಾಗಿ ಪಾಲಿಸುತ್ತಿರುವ ಅರಸನ ಅಜ್ಜಿಯನ್ನು ಅಥವಾ ತಾಯಿಯನ್ನು, ಅಥವಾ ಮುಂಚಿನ ಅರಸನ ವಿಧವೆಯನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ. ರಾಣಿ ತಾಯಿಯು ಹೆಚ್ಚಿನ ಪ್ರಭಾವವನ್ನು ಹೊಂದಿರುತ್ತಾಳೆ; ಉದಾಹರಣೆಗೆ, ಅತಲ್ಯಳು ವಿಗ್ರಹ ಆರಾಧನೆ ಮಾಡುವುದಕ್ಕೆ ಜನರನ್ನು ಪ್ರಭಾವಗೋಳಿಸಿದ್ದಳು.

(ಈ ಪದಗಳನ್ನು ಸಹ ನೋಡಿರಿ : ಅಹಷ್ವೆರೋಷ, ಅತಲ್ಯ, ಎಸ್ತೇರಳು, ಅರಸ, ಪಾರಸಿಯ, ಪಾಲಕ, ಸೆಬಾ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1404, H1377, H4410, H4427, H4433, H4436, H4438, H4446, H7694, H8282, G938

ರಾಯಭಾರಿ, ರಾಯಭಾರಿಗಳು, ಪ್ರತಿನಿಧಿ, ಪ್ರತಿನಿಧಿಗಳು

# ಪದದ ಅರ್ಥವಿವರಣೆ:

ರಾಯಭಾರಿ ಎನ್ನುವವರು ವಿದೇಶಿಗಳಿಗೆ ಸಂಬಂಧವನ್ನುಂಟು ಮಾಡುವುದರಲ್ಲಿ ತಮ್ಮ ದೇಶದ ಪಕ್ಷವಾಗಿ ಪ್ರತಿನಿಧಿ ವಹಿಸುವುದಕ್ಕೆ ಅಧಿಕಾರಿಗಳಾಗಿ ನಿಯಮಿಸಲ್ಪಟ್ಟವರು, ಈ ಪದವು ಅಲಂಕಾರ ರೂಪದಲ್ಲಿಯೂ ಉಪಯೋಗಿಸಲ್ಪಟ್ಟಿದೆ ಮತ್ತು ಇದನ್ನು ಅತೀ ಹೆಚ್ಚಾಗಿ ಸಾಧಾರಣವಾಗಿ “ಪ್ರತಿನಿಧಿ” ಎಂದೂ ಅನುವಾದ ಮಾಡುತ್ತಾರೆ.

  • ರಾಯಭಾರಿ ಅಥವಾ ಪ್ರತಿನಿಧಿ ಎನ್ನುವವರು ತಮ್ಮನ್ನು ಕಳುಹಿಸಿದ ಪಭುತ್ವದಿಂದ ಅಥವಾ ಒಬ್ಬ ವ್ಯಕ್ತಿಯಿಂದ ಕೊಟ್ಟ ಸಂದೇಶವನ್ನು ಜನರಿಗೆ ತಿಳಿಸುತ್ತಾರೆ.
  • “ಪ್ರತಿನಿಧಿ” ಅತೀ ಸಾಧಾರಣವಾದ ಪದವು ಒಬ್ಬ ವ್ಯಕ್ತಿ ಯಾರ ಪಕ್ಷವಾಗಿ ಪ್ರತಿನಿಧಿಯಾಗಿದ್ದಾರೋ, ಅವರ ಪಕ್ಷವಾಗಿ ಮಾತನಾಡುವುದಕ್ಕೆ ಮತ್ತು ನಡೆದುಕೊಳ್ಳುವುದಕ್ಕೆ ಅಧಿಕಾರ ಹೊಂದಿದವರನ್ನು ಸೂಚಿಸುತ್ತದೆ.
  • ಕ್ರೈಸ್ತರೆಲ್ಲರೂ ಕ್ರಿಸ್ತನ “ರಾಯಭಾರಿಗಳು” ಅಥವಾ “ಪ್ರತಿನಿಧಿಗಳು” ಎಂದು ಅಪೊಸ್ತಲನಾದ ಪೌಲನು ತಿಳಿಸಿದ್ದಾನೆ. ಅವರು ಈ ಲೋಕದಲ್ಲಿ ಕ್ರಿಸ್ತನಿಗೆ ಪ್ರತಿನಿಧಿಗಳಾಗಿರುವುದರಿಂದ, ಅವರು ಇತರರಿಗೆ ಆತನ ಸಂದೇಶವನ್ನು ಹಂಚುವವರಾಗಿರುತ್ತಾರೆ.
  • ಸಂದರ್ಭಕ್ಕೆ ತಕ್ಕಂತೆ, “ಅಧಿಕೃತ ಪ್ರತಿನಿಧಿ” ಅಥವಾ “ನೇಮಿಸಿಲ್ಪಟ್ಟ ದೂತ” ಅಥವಾ “ಆಯ್ಕೆಮಾಡಿಕೊಂಡ ಪ್ರತಿನಿಧಿ” ಅಥವಾ “ದೇವರಿಂದ ಆಯ್ಕೆ ಮಾಡಲ್ಪಟ್ಟ ಪ್ರತಿನಿಧಿ” ಎಂದೂ ಈ ಪದವನ್ನು ಅನುವಾದ ಮಾಡಬಹುದು.
  • “ರಾಯಭಾರಿಗಳ ನಿಯೋಗ” ಎನ್ನುವ ಮಾತನ್ನು “ಕೆಲವೊಂದು ಅಧೀಕೃತ ಸಂದೇಶಕರು” ಅಥವಾ “ನೇಮಿಸಲ್ಪಟ್ಟ ಪ್ರತಿನಿಧಿಗಳ ಗುಂಪು” ಅಥವಾ “ಎಲ್ಲಾ ಜನರಿಗೋಸ್ಕರ ಮಾತನಾಡುವುದಕ್ಕೆ ಜನರ ಅಧೀಕೃತ ಪಕ್ಷ” ಎಂಬುದಾಗಿಯೂ ಅನುವಾದ ಮಾಡಬಹುದು.

(ಅನುವಾದ ಸಲಹೆಗಳು: /ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ದೂತ ಅಥವಾ ಸಂದೇಶವಾಹಕ

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3887, H4135, H4136, H4397, H6735, H6737, G4243

ರೊಟ್ಟಿ

# ಪದದ ಅರ್ಥವಿವರಣೆ:

ರೊಟ್ಟಿಯನ್ನು ಹಿಟ್ಟಿನಲ್ಲಿ ನೀರನ್ನು ಹಾಕಿ, ಅದನ್ನು ಚೆನ್ನಾಗಿ ಬೆರೆಸಿ, ನಾದಿದ ಹಿಟ್ಟಾಗಿ ಮಾಡಿಕೊಂಡು, ಅದಕ್ಕೆ ಎಣ್ಣೆಯನ್ನು ಹಚ್ಚಿ ತಯಾರಿಸುತ್ತಾರೆ. ನಾದಿದ ಹಿಟ್ಟನ್ನು ಸ್ವಲ್ಪ ತೆಗೆದುಕೊಂಡು ಅದನ್ನು ವೃತ್ತಾಕಾರದಲ್ಲಿ ಮಾಡಿ, ಅದನ್ನು ಹರಿವಾಣದ ಮೇಲೆ ಹಾಕಿ ಬೇಯಿಸುತ್ತಾರೆ.

  • ಆಂಗ್ಲದಲ್ಲಿ “ಲೋಫ್” ಎನ್ನುವ ಪದಕ್ಕೆ “ವೃತ್ತಾಕಾರದ ರೊಟ್ಟಿ” ಎಂದರ್ಥ.
  • ರೊಟ್ಟಿಯ ನಾದಿದ ಹಿಟ್ಟನ್ನು ಸಹಜವಾಗಿ ಮೇಲಕ್ಕೆ ಉಬ್ಬಲು ಹುಳಿಯನ್ನು ಉಪಯೋಗಿಸುತ್ತಾರೆ.
  • ರೊಟ್ಟಿಯನ್ನು ಹುಳಿಯಿಲ್ಲದಂತೆ ಕೂಡ ಮಾಡಬಹುದು, ಇದರಿಂದ ಅದು ಮೇಲಕ್ಕೆ ಉಬ್ಬುವುದಿಲ್ಲ. ಸತ್ಯವೇದದಲ್ಲಿ ಇದನ್ನು “ಹುಳಿಯಿಲ್ಲದ ರೊಟ್ಟಿ” ಎಂದು ಕರೆಯಲಾಗಿದೆ ಮತ್ತು ಇದು ಯೆಹೂದ್ಯರ ಪಸ್ಕ ಭೋಜನಕ್ಕಾಗಿ ಉಪಯೋಗಿಸುತ್ತಿದ್ದರು.
  • ಸತ್ಯವೇದದ ಕಾಲಗಳಲ್ಲಿ ಅನೇಕಮಂದಿ ಜನರಿಗೆ ರೊಟ್ಟಿಯೇ ಮುಖ್ಯ ಆಹಾರವಾಗಿತ್ತು, ಈ ಪದವನ್ನು ಸತ್ಯವೇದದಲ್ಲಿ ಊಟವನ್ನು ಸೂಚಿಸುವಂತೆ ತುಂಬಾ ಸಹಜವಾಗಿ ಉಪಯೋಗಿಸುತ್ತಿದ್ದರು. (ಇದನ್ನು ನೋಡಿರಿ: ಲಾಕ್ಷಣಿಕ ಪ್ರಯೋಗ
  • “ಸಮುಖದ ರೊಟ್ಟಿ” ಎನ್ನುವ ಮಾತು ದೇವರಿಗೆ ನೈವೇದ್ಯವಾಗಿ ಅರ್ಪಿಸುವುದಕ್ಕೆ ದೇವಾಲಯ ಭವನದಲ್ಲಿ ಅಥವಾ ಗುಡಾರದಲ್ಲಿ ಬಂಗಾರದ ಮೇಜಿನ ಮೇಲೆ ಇಟ್ಟಿರುವ ಹನ್ನೆರಡು ರೊಟ್ಟಿಗಳನ್ನು ಸೂಚಿಸುತ್ತದೆ. ಈ ರೊಟ್ಟಿಗಳು ಇಸ್ರಾಯೇಲ್ಯರ ಹನ್ನೆರಡು ಕುಲಗಳನ್ನು ಪ್ರತಿನಿಧಿಸುತ್ತವೆ ಮತ್ತು ಇವುಗಳನ್ನು ಕೇವಲ ಯಾಜಕರು ಮಾತ್ರವೇ ತಿನ್ನಬೇಕು. ಈ ಪದವನ್ನು “ದೇವರು ಅವರ ಮಧ್ಯೆದಲ್ಲಿ ನಿವಾಸ ಮಾಡುತ್ತಿದ್ದಾರೆಂದು ರೊಟ್ಟಿ ತೋರಿಸುತ್ತದೆ” ಎಂದೂ ಅನುವಾದ ಮಾಡಬೇಕು.
  • “ಪರಲೋಕದಿಂದ ಬಂದ ರೊಟ್ಟಿ” ಎನ್ನುವ ಅಲಂಕಾರ ರೂಪದ ಮಾತು ಇಸ್ರಾಯೇಲ್ಯರು ಅರಣ್ಯದಲ್ಲಿ ಅಲೆದಾಡುತ್ತಿರುವಾಗ ಅವರಿಗಾಗಿ ದೇವರು ಕೊಟ್ಟ ಒಂದು ವಿಶೇಷವಾದ ಬಿಳಿ ಆಹಾರವಾದ “ಮನ್ನ”ವನ್ನು ಸೂಚಿಸುತ್ತದೆ.
  • “ಪರಲೋಕದಿಂದ ಇಳಿದು ಬಂದ ರೊಟ್ಟಿ ನಾನೇ” ಎಂದು ಮತ್ತು “ನಾನೇ ಜೀವದ ರೊಟ್ಟಿ” ಎಂದು ಯೇಸು ಕೂಡ ಹೇಳಿದ್ದರು.
  • ಯೇಸುವಿನ ಮರಣಕ್ಕೆ ಮುಂಚಿತವಾಗಿ ಯೇಸು ಮತ್ತು ತನ್ನ ಶಿಷ್ಯರು ಪಸ್ಕ ಭೋಜನವನ್ನು ತಿನ್ನುತ್ತಿರುವಾಗ, ಶಿಲುಬೆಯಲ್ಲಿ ಜಜ್ಜಲ್ಪಡುವ ತನ್ನ ದೇಹಕ್ಕೆ ಆ ಹುಳಿಯಿಲ್ಲದಿರುವ ಪಸ್ಕ ರೊಟ್ಟಿಯನ್ನು ಹೋಲಿಸಿ ಹೇಳಿದ್ದರು.
  • “ರೊಟ್ಟಿ” ಎನ್ನುವ ಪದವನ್ನು ಸಹಜವಾಗಿ ಅನೇಕಬಾರಿ “ಆಹಾರ” ಎಂದು ಅನುವಾದ ಮಾಡಲಾಗಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಪಸ್ಕ, ಗುಡಾರ, ದೇವಾಲಯ, ಹುಳಿಯಿಲ್ಲದ ರೊಟ್ಟಿ, ಹುಳಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2557, H3899, H4635, H4682, G106, G740, G4286

ಲಂಚ, ಲಂಚಗಳು, ಲಂಚ ತೆಗೆದುಕೊಂಡಿದೆ, ಲಂಚಗಾರಿಕೆ

# ಪದದ ಅರ್ಥವಿವರಣೆ:

“ಲಂಚ” ಎನ್ನುವ ಪದಕ್ಕೆ ಯಾರಾದರೊಬ್ಬರಿಗೆ ಬೆಳೆಯುಳ್ಳದ್ದು ಯಾವುದಾದರೊಂದನ್ನು ಕೊಡುವುದು ಎಂದರ್ಥ. ನೀಚವಾದ ಕಾರ್ಯಗಳನ್ನು ಮಾಡುವುದಕ್ಕೆ ಆ ವ್ಯಕ್ತಿಯನ್ನು ಪ್ರಭಾವಿತಗೊಳಿಸುವುದಕ್ಕೆ ಹಣವನ್ನು ಕೊಡುವುದು ಎಂದರ್ಥ.

  • ಯೇಸುವಿನ ಖಾಲಿ ಸಮಾಧಿಯನ್ನು ಕಾಚಿದ ಕಾವಲುಗಾರರು ನಡೆದಿರುವ ಸಂಘಟನೆಯನ್ನು ಹೇಳದಂತೆ ಸುಳ್ಳು ಹೇಳುವುದಕ್ಕೆ ಲಂಚವನ್ನು ತೆಗೆದುಕೊಂಡಿದ್ದರು.
  • ಕೆಲವೊಂದುಸಲ ಸರ್ಕಾರ ಅಧಿಕಾರಿಗಳು ಅಪರಾಧವನ್ನು ಹೊರಬಾರದಂತೆ ಲಂಚವನ್ನು ತೆಗೆದುಕೊಳ್ಳುತ್ತಾರೆ ಅಥವಾ ಮತದಾನ ಹಾಕಲು ಲಂಚವನ್ನು ಕೊಡುತ್ತಾರೆ.
  • ಲಂಚವನ್ನು ತೆಗೆದುಕೊಳ್ಳುವುದನ್ನು ಅಥವಾ ಲಂಚವನ್ನು ಕೊಡುವುದನ್ನು ಸತ್ಯವೇದವು ನಿಷೇಧಿಸಲಾಗಿದೆ.
  • “ಲಂಚ” ಎನ್ನುವ ಪದವನ್ನು “ನೀಚವಾದ ವೇತನ” ಅಥವಾ “ಸುಳ್ಳು ಹೇಳುವದಕ್ಕಾಗಿ ದುಡ್ಡು” ಅಥವಾ “ನಿಯಮಗಳನ್ನು ಉಲ್ಲಂಘನೆ ಮಾಡುವುದಕ್ಕೆ ಹಣ” ಎಂದೂ ಅನುವಾದ ಮಾಡಬಹುದು.
  • “ಲಂಚ” ಎನ್ನುವ ಪದವನ್ನು “(ಯಾರಾದರೊಬ್ಬರನ್ನು) ಪ್ರಭಾವಿತಗೊಳಿಸುವುದಕ್ಕೆ ಹಣ ಕೊಡು” “ನೀಚವಾದ ಮೆಚ್ಚುಗೆಯನ್ನು ಹೊಂದುವುದಕ್ಕೆ ದುಡ್ಡು ಕೊಡು” ಅಥವಾ “ದಯೆಯನ್ನು ಹೊಂದಿಕೊಳ್ಳುವುದಕ್ಕೆ ಹಣ ಕೊಡು” ಎನ್ನುವ ಅರ್ಥಗಳು ಬರುವ ಪದಗಳೊಂದಿಗೆ ಅಥವಾ ಮಾತುಗಳೊಂದಿಗೆ ಅನುವಾದ ಮಾಡಬಹುದು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3724, H4979, H7809, H7810, H7936, H7966, H8641, G5260

ಲಾಭ, ಪ್ರಯೋಜನಗೊಳಿಸುವುದು, ಪ್ರಯೋಜನಕರ, ಅಪ್ರಯೋಜನಕರ

# ಪದದ ಅರ್ಥವಿವರಣೆ:

ಸಾಧಾರಣವಾಗಿ “ಪ್ರಯೋಜನ” ಮತ್ತು “ಪ್ರಯೋಜನಕರ” ಎನ್ನುವ ಪದಗಳು ಕೆಲವೊಂದು ನಿರ್ದಿಷ್ಟ ಕ್ರಿಯೆಗಳು ಮಾಡುವುದರ ಮೂಲಕ ಯಾವುದಾದರೊಂದರ ಒಳ್ಳೆಯದನ್ನು ಸಂಪಾದಿಸಿಕೊಳ್ಳುವುದನ್ನು ಸೂಚಿಸುತ್ತದೆ.

ಇತರ ಜನರಿಗಾಗಿ ಒಳ್ಳೇಯ ಕಾರ್ಯಗಳ ಕುರಿತಾಗಿ ಸಹಾಯವಾಗುವುದಾದರೆ ಅಥವಾ ಅವರಿಗೆ ಒಳ್ಳೇಯ ಕೆಲಸಗಳು ನಡೆದರೆ ಒಬ್ಬರಿಗೆ “ಪ್ರಯೋಜನಕರವಾದದ್ದು” ನಡೆದಿದೆಯೆಂದರ್ಥ.

  • ಹೆಚ್ಚಿನ ವಿಶೇಷವಾಗಿ “ಲಾಭ” ಎನ್ನುವ ಪದವು ಅನೇಕಬಾರಿ ವ್ಯಾಪಾರ ಮಾಡುವುದರ ಮೂಲಕ ಪಡೆದಿರುವ ಮೊತ್ತದ ಹಣವನ್ನು ಸೂಚಿಸುತ್ತದೆ. ಬಂಡವಾಳ ಹಾಕುವುದಕ್ಕಿಂತ ಹೆಚ್ಚಾದ ಹಣವನ್ನು ಗಳಿಸಿದರೆ ಆ ವ್ಯಾಪಾರವು “ಪ್ರಯೋಜನಕರವಾಗಿರುತ್ತದೆ”.
  • ಜನರಿಗೆ ಒಳ್ಳೇಯ ಕಾರ್ಯಗಳನ್ನು ಮಾಡಿದರೆ ಕ್ರಿಯೆಗಳು ಪ್ರಯೋಜನಕರವಾಗಿರುತ್ತವೆ.
  • ದೈವ ಪ್ರೇರಿತವಾದ ಪ್ರತಿಯೊಂದು ಶಾಸ್ತ್ರವೂ ಉಪದೇಶಕ್ಕೂ, ಖಂಡನೆಗೂ, ತಿದ್ದುಪಡಿಗೂ, ನೀತಿಶಿಕ್ಷೆಗೂ “ಪ್ರಯೋಜನಕರವಾಗಿರುತ್ತವೆ” ಎಂದು 2 ತಿಮೊಥೆ.3:16 ವಚನವು ಹೇಳುತ್ತಿದೆ. ದೇವರ ಚಿತ್ತಾನುಸಾರವಾಗಿ ಜೀವಿಸುವುದಕ್ಕೆ ಜನರಿಗೆ ಬೋಧನೆ ಮಾಡಲು ಸತ್ಯವೇದದ ಬೋಧನೆಗಳು ಸಹಾಯಕರವಾಗಿರುತ್ತವೆ ಮತ್ತು ಉಪಯುಕ್ತವಾಗಿರುತ್ತವೆ ಎಂದು ಈ ಮಾತಿಗೆ ಅರ್ಥವಾಗಿರುತ್ತದೆ.

“ಅಪ್ರಯೋಜನಕರ” ಎನ್ನುವ ಪದಕ್ಕೆ ಉಪಯುಕ್ತವಾಗಿರುವುದಿಲ್ಲವೆಂದರ್ಥ.

  • ಯಾವುದಾದರೊಂದನ್ನು ಪಡೆದುಕೊಳ್ಳುವುದಕ್ಕೆ ಒಬ್ಬ ವ್ಯಕ್ತಿಗೆ ಸಹಾಯಕವಾಗಿರುವುದಿಲ್ಲ ಅಥವಾ ಯಾವ ಲಾಭವೂ ಇರುವುದಿಲ್ಲ ಎಂದು ಈ ಮಾತಿಗೆ ಅಕ್ಷರಾರ್ಥವಾಗಿರುತ್ತದೆ.
  • ಅಪ್ರಯೋಜನಕರವಾದದ್ದು ಯಾವುದೇಯಾಗಿರಲಿ ಅದು ಮಾಡುವುದಕ್ಕೆ ಯೋಗ್ಯವಾಗಿರುವುದಿಲ್ಲ, ಯಾಕಂದರೆ ಅದು ಯಾವ ಪ್ರಯೋಜನವನ್ನೂ ಕೊಡುವುದಿಲ್ಲ.
  • ಈ ಪದವನ್ನು “ಉಪಯೋಗಕರವಲ್ಲದ್ದು” ಅಥವಾ “ಯೋಗ್ಯವಲ್ಲ” ಅಥವಾ “ಉಪಯೋಗಕರವಲ್ಲ” ಅಥವಾ “ಅಯೋಗ್ಯಕರ” ಅಥವಾ “ಪ್ರಯೋಜನವಿಲ್ಲದ್ದು” ಅಥವಾ “ಪ್ರಯೋಜನ ಕೊಡದಿರುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಯೋಗ್ಯ)

# ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ, “ಲಾಭ” ಎನ್ನುವ ಪದವನ್ನು “ಉಪಯುಕ್ತ” ಅಥವಾ “ಸಹಾಯ” ಅಥವಾ “ಪಡೆದುಕೊಳ್ಳುವುದು” ಎಂದೂ ಅನುವಾದ ಮಾಡಬಹುದು.
  • “ಪ್ರಯೋಜನಕರ” ಎನ್ನುವ ಪದವನ್ನು “ಉಪಯೋಗಕರ” ಅಥವಾ “ಪ್ರಯೋಜನಕರ” ಅಥವಾ “ಸಹಾಯಕರ” ಎಂದೂ ಅನುವಾದ ಮಾಡಬಹುದು.
  • ಯಾವುದಾದರೊಂದರಿಂದ “ಲಾಭ ಹೊಂದು” ಎನ್ನುವ ಮಾತನ್ನು “ಲಾಭ ಹೊಂದು” ಅಥವಾ “ಹಣವನ್ನು ಗಳಿಸು” ಅಥವಾ “ಸಹಾಯವನ್ನು ಪಡೆದುಕೋ” ಎಂದೂ ಅನುವಾದ ಮಾಡಬಹುದು.
  • ವ್ಯಾಪಾರ ಸಂದರ್ಭಗಳಲ್ಲಿ “ಲಾಭ” ಎನ್ನುವ ಪದವನ್ನು “ಹಣವನ್ನು ಗಳಿಸಿದೆ” ಅಥವಾ “ಉಳಿತಾಯ ಹಣ” ಅಥವಾ “ಹೆಚ್ಚುವರಿ ಹಣ” ಎಂದು ಅರ್ಥಬರುವ ಮಾತಿನೊಂದಿಗೆ ಅಥವಾ ಪದದೊಂದಿಗೆ ಅನುವಾದ ಮಾಡಬಹುದು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1215, H3148, H3276, H3504, H4195, H4768, H5532, H7737, H7939, G147, G255, G512, G888, G889, G890, G1281, G2585, G2770, G2771, G3408, G4297, G4298, G4851, G5539, G5622, G5623, G5624

ಲೈಂಗಿಕ ಅನೈತಿಕತೆ, ಅನೈತಿಕತೆ, ಅನೈತಿಕ, ಜಾರತ್ವ

# ಪದದ ಅರ್ಥವಿವರಣೆ:

“ಲೈಂಗಿಕ ಅನೈತಿಕತೆ” ಎನ್ನುವ ಪದವು ಒಬ್ಬ ಸ್ತ್ರೀ ಪುರುಷನು ವಿವಾಹ ಮಾಡಿಕೊಳ್ಳದೆ ಅಥವಾ ವಿವಾಹ ಮಾಡಿಕೊಂಡೂ ಹೊರಗಡೆ ಬೇರೆಯವರೊಂದಿಗೆ ಲೈಂಗಿಕ ಸಂಬಂಧಗಳನ್ನಿಟ್ಟುಕೊಳ್ಳುವುದನ್ನು ಸೂಚಿಸುತ್ತದೆ. ಇದು ದೇವರ ಪ್ರಣಾಳಿಕೆಗೆ ವಿರುದ್ಧವಾಗಿರುತ್ತದೆ. ಹಳೇ ಆಂಗ್ಲ ಬೈಬಲ್.ಗಳಲ್ಲಿ ಇದನ್ನು “ಸಂಭೋಗ” ಎಂದು ಕರೆಯುತ್ತಾರೆ.

  • ದೇವರಿಗೆ ವಿರುದ್ಧವಾಗಿರುವ ಯಾವುದೇ ರೀತಿಯ ಲೈಂಗಿಕ ಕ್ರಿಯೆಯನ್ನು ಇದು ಸೂಚಿಸುತ್ತದೆ, ಅಷ್ಟೇಅಲ್ಲದೆ ಇದರಲ್ಲಿ ಸ್ವಲಿಂಗ ಸಂಪರ್ಕ ಕ್ರಿಯೆಗಳು ಮತ್ತು ಅಶ್ಲೀಲತೆಯು ಒಳಗೊಂಡಿರುತ್ತದೆ.
  • ಒಂದು ವಿಧವಾದ ಲೈಂಗಿಕ ಅನೈತಿಕತೆ ಎನ್ನುವುದು ವ್ಯಭಿಚಾರ, ಇದು ಪ್ರತ್ಯೇಕವಾಗಿ ವಿವಾಹ ಮಾಡಿಕೊಂಡ ವ್ಯಕ್ತಿಗೆ ಮತ್ತು ಬೇರೆಯವರ ಹೆಂಡತಿಯೊಂದಿಗೆ ಅಥವಾ ಗಂಡನೊಂದಿಗೆ ಮಧ್ಯೆದಲ್ಲಿ ನಡೆಯುವ ಲೈಂಗಿಕ ಕಾರ್ಯ.
  • ಇನ್ನೊಂದು ರೀತಿಯ ಲೈಂಗಿಕ ಅನೈತಿಕತೆ ಎನ್ನವುದು “ಸೂಳೆಗಾರಿಕೆ”, ಇದು ಬೇರೆಯವರಿಗೆ ಹಣ ಕೊಟ್ಟು ಮಾಡುವ ಲೈಂಗಿಕ ಕಾರ್ಯ.
  • ಇಸ್ರಾಯೇಲ್ಯರು ಸುಳ್ಳು ದೇವರುಗಳನ್ನು ಆರಾಧನೆ ಮಾಡಿದಾಗ, ಅವರು ದೇವರಿಗೆ ತೋರಿಸಿದ ವಿಶ್ವಾಸದ್ರೋಹವನ್ನು ಸೂಚಿಸುವುದಕ್ಕೂ ಈ ಪದವನ್ನು ಅಲಂಕಾರಿಕ ರೂಪದಲ್ಲಿ ಉಪಯೋಗಿಸಿದ್ದಾರೆ.

# ಅನುವಾದ ಸಲಹೆಗಳು:

  • “ಲೈಂಗಿಕ ಅನೈತಿಕತೆ” ಎನ್ನುವ ಪದವನ್ನು “ಅನೈತಿಕತೆ” ಎಂದೂ ಅನುವಾದ ಮಾಡಬಹುದು, ಈ ಪದದ ಅರ್ಥವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವಷ್ಟು ಕಾಲ ಇದನ್ನು ಉಪಯೋಗಿಸಬಹುದು.
  • ಈ ಪದಕ್ಕೆ ಉಪಯೋಗಿಸುವ ಬೇರೊಂದು ಪದಗಳಲ್ಲಿ “ತಪ್ಪಾಗಿ ಮಾಡುವ ಲೈಂಗಿಕ ಕ್ರಿಯೆಗಳು” ಅಥವಾ “ವಿವಾಹದ ಹೊರಗೆ ಮಾಡುವ ಲೈಂಗಿಕ ಕಾರ್ಯಗಳು” ಎಂದೂ ಸೇರಿಸಬಹುದು.
  • ಈ ಪದವನ್ನು “ವ್ಯಭಿಚಾರ” ಎನ್ನುವ ಪದಕ್ಕೆ ಬೇರೆಯಾಗಿ ಅನುವಾದ ಮಾಡಬೇಕಾಗುತ್ತದೆ.
  • ದೇವರಿಗೆ ತೋರಿಸುವ ವಿಶ್ವಾಸ ದ್ರೋಹಕ್ಕೂ ಮತ್ತು ಲೈಂಗಿಕ ಸಂಬಂಧಗಳಲ್ಲಿ ವಿಶ್ವಾಸ ದ್ರೋಹಕ್ಕೂ ಮಧ್ಯೆ ಸತ್ಯವೇದದಲ್ಲಿ ಸಾಮಾನ್ಯ ಹೋಲಿಕೆ ಇರುವುದರಿಂದ ಅನುವಾದಿಸಿದ ಈ ಪದವನ್ನು ಅಲಂಕಾರಿಕ ಭಾಷೆಯ ಪದವನ್ನಾಗಿ ಉಪಯೋಗಿಸುವಾಗ ಸಾಧ್ಯವಾದರೆ ಅಕ್ಷರಾರ್ಥ ಪದವನ್ನೇ ಇರಿಸಬೇಕು.

(ಈ ಪದಗಳನ್ನು ಸಹ ನೋಡಿರಿ : ವ್ಯಭಿಚಾರ, ಸುಳ್ಳು ದೇವರು, ಸೂಳೆಗಾರಿಕೆ, ವಿಶ್ವಾಸ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2181, H8457, G1608, G4202, G4203

ವಧು, ವಧುಗಳು, ವಧುವಿನ

# ಪದದ ಅರ್ಥವಿವರಣೆ:

ವಧು ಎಂದರೆ ವಿವಾಹದಲ್ಲಿ ವರನನ್ನು ತನ್ನ ಗಂಡನನ್ನಾಗಿ ಮಾಡಿಕೊಳ್ಳುವ ಒಬ್ಬ ಕನ್ಯೆಯಾಗಿರುತ್ತಾಳೆ.

  • “ವಧು” ಎನ್ನುವ ಪದವು ಯೇಸುವಿನಲ್ಲಿ ನಂಬಿಕೆಯಿಟ್ಟಿರುವ ವಿಶ್ವಾಸಿಗಳಿಗೆ ಅಂದರೆ ಸಭೆಗೆ ರೂಪಕಲಂಕಾರವಾಗಿ ಉಪಯೋಗಿಸಲಾಗಿದೆ.
  • ಯೇಸು ಸಭೆಗೆ “ವರ” ಎಂಬುದಾಗಿ ರೂಪಕಲಂಕಾರದಲ್ಲಿ ಕರೆಯಲ್ಪಟ್ಟಿದ್ದಾನೆ. (ನೋಡಿರಿ: ರೂಪಕಲಂಕಾರ

(ಈ ಪದಗಳನ್ನು ಸಹ ನೋಡಿರಿ : ವರ, ಸಭೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3618, G3565

ವಧೆ, ವಧೆಗಳು, ವಧೆ ಮಾಡಲ್ಪಟ್ಟಿದೆ, ವಧೆಯಾಗುತ್ತಿರುವುದು

# ಪದದ ಅರ್ಥವಿವರಣೆ:

“ವಧೆ” ಎನ್ನುವ ಪದವು ಹೆಚ್ಚಿನ ಪ್ರಾಣಿಗಳನ್ನು ಅಥವಾ ಜನರನ್ನು ಕೊಲ್ಲುವುದನ್ನು ಸೂಚಿಸುತ್ತದೆ, ಅಥವಾ ಹಿಂಸಾತ್ಮಕವಾದ ವಿಧಾನದಲ್ಲಿ ಕೊಲ್ಲುವುದನ್ನು ಸೂಚಿಸುತ್ತದೆ. ತಿನ್ನುವ ಉದ್ದೇಶಕ್ಕಾಗಿ ಪ್ರಾಣಿಯನ್ನು ಕೊಲ್ಲುವುದನ್ನು ಈ ಪದವು ಸೂಚಿಸುತ್ತದೆ. ಕೊಲ್ಲುವ ಕ್ರಿಯೆಯನ್ನು “ವಧೆ” ಎಂದೂ ಕರೆಯುತ್ತಾರೆ.

  • ಅಬ್ರಾಹಾಮನು ಅರಣ್ಯದಲ್ಲಿ ತನ್ನ ಗುಡಾರದ ಹತ್ತಿರ ಮೂವರು ಸಂದರ್ಶಕರನ್ನು ಸೇರಿಸಿಕೊಂಡಾಗ, ಆತನು ತನ್ನ ಅತಿಥಿಗಳಿಗಾಗಿ ಕರುವನ್ನು ಕೊಂದು, ಅದನ್ನು ಅಡುಗೆ ಮಾಡಬೇಕೆಂದು ತನ್ನ ದಾಸರಿಗೆ ಆಜ್ಞಾಪಿಸಿದನು.
  • ದೇವರ ವಾಕ್ಯವನ್ನು ಅನುಸರಿಸದವರೆಲ್ಲರನ್ನು ವಧಿಸಬೇಕೆಂದು ದೇವರು ತನ್ನ ದೂತನನ್ನು ಕಳುಹಿಸುವನೆಂದು ಪ್ರವಾದಿಯಾದ ಯೆಹೆಜ್ಕೇಲನು ಪ್ರವಾದಿಸಿದನು.
  • ದೇವರಿಗೆ ಅವಿಧೇಯತೆಯನ್ನು ತೋರಿಸುವುದರ ಮೂಲಕ ಇಸ್ರಾಯೇಲ್ಯರು ಸುಮಾರು 30,000 ಮಂದಿ ವಧಿಸಲ್ಪಟ್ಟಿರುವ ದೊಡ್ಡ ಸಂಘಟನೆಯು 1 ಸಮುವೇಲ ಗ್ರಂಥದಲ್ಲಿ ದಾಖಲಿಸಲ್ಪಟ್ಟಿದೆ.
  • “ವಧಿಸುವ ಆಯುಧಗಳು” ಎನ್ನುವ ಮಾತನ್ನು “ಕೊಲ್ಲುವುದಕ್ಕೆ ಉಪಯೋಗಿಸುವ ಆಯುಧಗಳು” ಎಂದೂ ಅನುವಾದ ಮಾಡಬಹುದು.
  • “ವಧೆ ಎನ್ನುವುದು ದೊಡ್ಡ ಸಂಘಟನೆ” ಎನ್ನುವ ಮಾತನ್ನು “ಹೆಚ್ಚಿನ ಜನರು ಕೊಲ್ಲಲ್ಪಡುವುದು” ಅಥವಾ “ಹೆಚ್ಚಿನ ಸಂಖ್ಯೆಯಲ್ಲಿ ಮರಣಗಳು ಉಂಟಾಗುವುದು” ಅಥವಾ “ಅತೀ ಭಯಾನಕವಾಗಿ ಹೆಚ್ಚಿನ ಜನರು ಕೊಲ್ಲಲ್ಪಟ್ಟಿರುವುದು” ಎಂದೂ ಅನುವಾದ ಮಾಡಬಹುದು.
  • “ವಧೆ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಸಾಯಿಸು” ಅಥವಾ “ಕೊಲ್ಲು” ಅಥವಾ “ಕೊಲ್ಲುವುದು” ಎನ್ನುವ ಪದಗಳು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ದೂತ, ಹಸು, ಅವಿಧೇಯತೆ, ಯೆಹೆಜ್ಕೇಲ, ದಾಸನು, ಕೊಲ್ಲು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2026, H2027, H2028, H2076, H2491, H2873, H2874, H2878, H4046, H4293, H4347, H4660, H5221, H6993, H7524, H7819, H7821, G2871, G4967, G4969, G5408

ವಯಸ್ಸು, ವಯಸ್ಸುಗಳು, ವೃದ್ಧ

# ಪದದ ಅರ್ಥ ವಿವರಣೆ:

“ವಯಸ್ಸು” ಎನ್ನುವ ಪದವು ಒಬ್ಬ ವ್ಯಕ್ತಿ ಎಷ್ಟು ವರ್ಷಕಾಲ ಜೀವಿಸಿದ್ದಾನೆ ಎನ್ನುವುದನ್ನು ಸೂಚಿಸುತ್ತದೆ. ಇದನ್ನು ಸಹಜವಾಗಿ ಒಂದು ಕಾಲ ವ್ಯವಧಿಯನ್ನು ಸೂಚಿಸುವುದಕ್ಕೆ ಕೂಡ ಉಪಯೋಗಿಸುತ್ತಾರೆ.

  • ಒಂದು ವಿಸ್ತಾರವಾದ ಕಾಲಾವಧಿಯನ್ನು ಹೇಳುವುದಕ್ಕೆ ಕೂಡ ಇತರ ಪದಗಳನ್ನು ಉಪಯೋಗಿಸುತ್ತಾರೆ, ಅವು ಯಾವುವೆಂದರೆ, “ಯುಗ” ಮತ್ತು “ಋತು”.
  • ದುಷ್ಟತನ, ಪಾಪ ಮತ್ತು ಅವಿಧೇಯತೆಯೆಲ್ಲವುಗಳು ತುಂಬಿದ ಈ ಪ್ರಸ್ತುತ ಭೂಮಿಯನ್ನು “ಈ ಯುಗ” ಎಂದು ಯೇಸು ಸೂಚಿಸಿದ್ದಾರೆ.
  • ಹೊಸ ಆಕಾಶ ಮತ್ತು ಹೊಸ ಭೂಮಿಯನ್ನು ನೀತಿ ಅಳುವ ಭವಿಷ್ಯತ್ತಿನ ಯುಗವು ಒಂದಿದೆ.

# ಅನುವಾದ ಸಲಹೆಗಳು:

  • ಸಂದರ್ಭಕ್ಕೆ ತಕ್ಕಂತೆ, “ವಯಸ್ಸು” ಎನ್ನುವ ಪದವನ್ನು “ಯುಗ” ಅಥವಾ “ಕಳೆದ ವರ್ಷಗಳ ಸಂಖ್ಯೆ” ಅಥವಾ “ಕಾಲಾವಧಿ” ಅಥವಾ “ಸಮಯ” ಎಂಬುದಾಗಿಯೂ ಅನುವಾದ ಮಾಡಬಹುದು.
  • “ಅತೀ ವೃದ್ಧ ಕಾಲ” ಎನ್ನುವ ಪದವನ್ನು “ನಡೆದ ಅನೇಕ ವರ್ಷಗಳು” ಅಥವಾ “ಆತನು ವೃದ್ಧ ವಯಸ್ಸಿನಲ್ಲಿರುವಾಗ” ಅಥವಾ “ಆತನು ಬದುಕಿದ ತುಂಬಾ ಹೆಚ್ಚಿನ ಕಾಲ” ಎಂಬುದಾಗಿಯೂ ಅನುವಾದ ಮಾಡಬಹುದು.
  • “ಈ ಪ್ರಸ್ತುತ ದುಷ್ಟ ಕಾಲ” ಎನ್ನುವ ಮಾತು “ಜನರೆಲ್ಲರು ಅತೀ ದುಷ್ಟರಾಗಿ ನಡೆದುಕೊಳ್ಳುವ ಈ ಪ್ರಸ್ತುತ ಸಮಯದಲ್ಲಿ ಅಥವಾ ಕಾಲದಲ್ಲಿ” ಎನ್ನುವ ಅರ್ಥವನ್ನು ಕೊಡುತ್ತದೆ.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2465, G165, G1074

ವರ, ವರರು

# ಪದದ ಅರ್ಥವಿವರಣೆ:

ವಿವಾಹ ಬಂಧನದಲ್ಲಿ ವಧುವನ್ನು ವಿವಾಹ ಮಾಡಿಕೊಳ್ಳುವ ಪುರುಷನೇ ವರ.

  • ಸತ್ಯವೇದದ ಕಾಲದಲ್ಲಿ ಯೆಹೂದ್ಯರ ಸಂಸ್ಕೃತಿಯಲ್ಲಿ ಈ ಕಾರ್ಯಕ್ರಮವು ವರನು ತನ್ನ ವಧುವನ್ನು ಕರೆದುಕೊಂಡು ಹೋಗುವುದಕ್ಕೆ ಎಲ್ಲರ ಮಧ್ಯೆದಲ್ಲಿದ್ದು ಬರುತ್ತಾನೆ.
  • ಸತ್ಯವೇದದಲ್ಲಿ ಯೇಸುವು ರೂಪಕಲಂಕಾರದಲ್ಲಿ “ಮದಲಿಂಗ” ಎಂದು ಕರೆಯಲ್ಪಟ್ಟಿದ್ದಾನೆ, ಆತನು ಒಂದಾನೊಂದು ದಿನ ತನ್ನ “ವಧು”ವಾಗಿರುವ ಸಭೆಗಾಗಿ ಬರುತ್ತಿದ್ದಾನೆ.
  • ಯೇಸು ತನ್ನ ಶಿಷ್ಯರನ್ನು ಮದಲಿಂಗನೊಂದಿಗೆ ಇರುವ ಸ್ನೇಹಿತರಿಗೆ ಹೋಲಿಸಿ ಹೇಳಿದ್ದಾನೆ, ಅವರು ತಮ್ಮೊಂದಿಗೆ ವರನು ಅಥವಾ ಮದಲಿಂಗ ಇರುವಾಗ ಸಂತೋಷವಾಗಿರುತ್ತಾರೆಂದು ಹೇಳಿದನು. ಆದರೆ ಆತನು ಹೋದಾಗ ಯಾರು ದುಃಖದಿಂದ ಇರುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ವಧು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2860, G3566

ವರದಿ, ವರದಿ ಮಾಡುವುದು, ವರದಿ ಮಾಡಲಾಗಿದೆ

# ಪದದ ಅರ್ಥವಿವರಣೆ:

“ವರದಿ” ಎನ್ನುವ ಪದಕ್ಕೆ ನಡೆದಿರುವ ಯಾವುದಾದರೊಂದರ ಕುರಿತಾಗಿ ಜನರಿಗೆ ಹೇಳುವುದು, ಅನೇಕಬಾರಿ ಸಂಘಟನೆಯ ಕುರಿತಾಗಿ ವಿವರ ಗಳನ್ನು ಕೊಡುವುದು ಎಂದರ್ಥವಾಗಿರುತ್ತದೆ. “ವರದಿ” ಎಂದರೆ ಹೇಳಲ್ಪಟ್ಟಿರುವ ವಿಷಯಗಳು ಎಂದರ್ಥ, ಮತ್ತು ಇವುಗಳನ್ನು ಮಾತುಗಳ ಮೂಲಕ ಹೇಳಬಹುದು ಅಥವಾ ಬರೆಯಬಹುದು.

  • “ವರದಿ” ಎನ್ನುವ ಪದವನ್ನು “ಹೇಳು” ಅಥವಾ “ವಿವರಿಸು” ಅಥವಾ “ಇನ್ನೊಂದರ ಕುರಿತಾಗಿ ವಿವರಗಳನ್ನು ತಿಳಿಸುವುದು” ಎಂದೂ ಅನುವಾದ ಮಾಡಬಹುದು.
  • “ಯಾರಿಗೂ ಈ ವರದಿಯನ್ನು ಹೇಳಬೇಡ” ಎನ್ನುವ ಮಾತಿಗೆ “ಯಾರೊಂದಿಗೂ ಈ ವಿಷಯದ ಕುರಿತಾಗಿ ಮಾತನಾಡಬೇಡ” ಅಥವಾ “ಇದರ ಕುರಿತಾಗಿ ಯಾರೊಂದಿಗೂ ಹಂಚಿಕೊಳ್ಳಬೇಡ” ಎಂದೂ ಅನುವಾದ ಮಾಡಬಹುದು.
  • “ವರದಿ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ವಿವರಣೆ” ಅಥವಾ “ಕಥೆ” ಅಥವಾ “ವಿವರಣಾತ್ಮಕವಾದ ಮಾತುಗಳು” ಎಂದೂ ಸಂದರ್ಭಾನುಸಾರವಾಗಿ ಮಾತುಗಳನ್ನು ಉಪಯೋಗಿಸಬಹುದು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1681, H1696, H1697, H5046, H7725, H8034, H8052, H8085, H8088, G189, G191, G312, G518, G987, G1225, G1310, G1426, G1834, G2036, G2162, G2163, G3004, G3056, G3140, G3141, G3377

ವರ್ಷ, ವರ್ಷಗಳು

# ಪದದ ಅರ್ಥವಿವರಣೆ

ಅಕ್ಷರಾರ್ಥವಾಗಿ ಉಪಯೋಗಿಸಿದರೆ, ಸತ್ಯವೇದದಲ್ಲಿ “ವರ್ಷ” ಎನ್ನುವ ಪದ 354 ದಿನಗಳ ಕಾಲವನ್ನು ಸೂಚಿಸುತ್ತಿದೆ. ಭೂಮಿಯನ್ನು ಸುತ್ತುವದಕ್ಕೆ ಚಂದ್ರನು ತೆಗೆದುಕೊಳ್ಳುವ ಸಮಯದ ಅನುಸಾರವಾಗಿ ಚಂದ್ರಮಾನ ದಿನಾಂಕ ಪಟ್ಟಿ ಇರುತ್ತದೆ.

  • ಅಧುನಿಕ ದಿನಗಳ ಸೂರ್ಯನ ದಿನಾಂಕ ಪಟ್ಟಿಯಲ್ಲಿ ಸೂರ್ಯನ ಸುತ್ತಲು ಭೂಮಿ ಸುತ್ತುವ ಕಾಲದ ಅನುಸಾರವಾಗಿ ಒಂದು ವರ್ಷದಲ್ಲಿ 365 ದಿನಗಳು ಇರುತ್ತವೆ ಅದು 12 ತಿಂಗಳುಗಳಾಗಿ ವಿಭಜಿಸಲ್ಪಟ್ಟಿರುತ್ತದೆ.
  • ಈ ಎರಡು ದಿನಾಂಕ ಪಟ್ಟಿಗಳಲ್ಲಿ ಒಂದು ವರ್ಷದಲ್ಲಿ 12 ತಿಂಗಳುಗಳಿರುತ್ತವೆ. ಸೂರ್ಯನ ವರ್ಷಕ್ಕಿಂತ ಚಂದ್ರಮಾನ ಪದ್ಧತಿಯಲ್ಲಿ 11 ದಿನಗಳು ಕಡಿಮೆ ಇರುವ ಕಾರಣದಿಂದ ಕೆಲವೊಮ್ಮೆ ಚಾಂದ್ರಮಾನ ದಿನಾಂಕ ಪಟ್ಟಿಯಲ್ಲಿ 13ನೇ ತಿಂಗಳನ್ನು ಸೇರಿಸುತ್ತಾರೆ. ಇದು ಮಾಡುವದರ ಮೂಲಕ ಎರಡು ದಿನಾಂಕ ಪಟ್ಟಿಗಳು ಒಂದೇ ರೀತಿಯಲ್ಲಿ ಇರುತ್ತವೆ.
  • ಸತ್ಯವೇದದಲ್ಲಿ, “ವರ್ಷ” ಎನ್ನುವ ಪದವನ್ನು ಒಂದು ವಿಶೇಷ ಕಾರ್ಯಕ್ರಮ ನಡೆಯಲು ತೆಗೆದುಕೊಳ್ಳುವ ಕಾಲವನ್ನು ಸೂಚಿಸಲು ಅಲಂಕಾರ ರೂಪದಲ್ಲಿ ಉಪಯೋಗಿಸಲ್ಪಟ್ಟಿದೆ. “ಯೆಹೋವನ ವರ್ಷ” ಅಥವಾ “ಬರಗಾಲದ ವರ್ಷ” ಅಥವಾ “ಕರ್ತನಿಗೆ ಪ್ರಿಯವಾದ ವರ್ಷ” ಎನ್ನುವವು ಇದಕ್ಕೆ ಉದಾಹರಣೆಗಳಾಗಿರುತ್ತವೆ. ಈ ಸಂದರ್ಭಗಳಲ್ಲಿ, “ವರ್ಷ” ಎನ್ನುವ ಪದವನ್ನು “ಸಮಯ” ಅಥವಾ “ಕಾಲ” ಅಥವಾ “ಸಮಯದ ಅವಧಿ” ಎಂದು ಅನುವಾದ ಮಾಡಬಹುದು.

(ಈ ಪದಗವನ್ನು ಸಹ ನೋಡಿರಿ : ತಿಂಗಳು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3117, H7620, H7657, H8140, H8141, G1763, G2094

ವಂಶ, ವಂಶದವರು

# ಪದದ ಅರ್ಥವಿವರಣೆ:

“ವಂಶ” ಎನ್ನುವ ಪದವು ಒಂದೇ ಪೂರ್ವಿಕರಿಂದ ವಿಸ್ತರಿಸಿದ ಕುಟುಂಬ ಸದಸ್ಯರ ಗುಂಪನ್ನು ಸೂಚಿಸುತ್ತದೆ.

  • ಹಳೇ ಒಡಂಬಡಿಕೆಯಲ್ಲಿ ಇಸ್ರಾಯೇಲ್ಯರು ಅವರ ವಂಶಸ್ಥರ ಪ್ರಕಾರ ಅಥವಾ ಅವರ ಕುಟುಂಬ ಗುಂಪುಗಳ ಪ್ರಕಾರ ಎಣಿಸಲ್ಪಟ್ಟಿದ್ದರು.
  • ವಂಶದವರು ಎಂದು ಅವರಿಗೆ ಚೆನ್ನಾಗಿ ಗೊತ್ತಿರುವ ಪೂರ್ವಿಜರ ಹೆಸರಿಂದ ಬರುತ್ತದೆ.
  • ಕುಟುಂಬದಲ್ಲಿ ವ್ಯಕ್ತಿಗತವಾಗಿ ಒಬ್ಬೊಬ್ಬರನ್ನು ಕೆಲವೊಂದುಸಲ ಅವರ ವಂಶದ ಹೆಸರಿನಿಂದಲೇ ಕರೆಯುತ್ತಾರೆ. ಉದಾಹರಣೆಗೆ, ಮೋಶೆ ಮಾವನಾದ ಇತ್ರೋನನನ್ನು ಕೆಲವೊಮ್ಮೆ ತನ್ನ ವಂಶದ ಹೆಸರಾದ ರೆಗೂವೇಲ ಎಂದು ಕರೆಯಲ್ಪಟ್ಟಿದ್ದಾನೆ.
  • ವಂಶ ಎನ್ನುವ ಪದವನ್ನು “ಕುಟುಂಬ ಗುಂಪು” ಅಥವಾ “ವಿಸ್ತರಿಸಿದ ಕುಟುಂಬ” ಅಥವಾ “ಬಂಧುಗಳು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಕುಟುಂಬ, ಇತ್ರೋ, ಕುಲ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1, H441, H1004, H4940

ವಂಶಾನುಗತವಾಗು, ಸಂತಾನದವರು, ಸಂತಾನದರಾಗಿದ್ದರು, ಸಂತಾನವು, ವಂಶಸ್ಥ, ವಂಶಸ್ಥರು

# ಪದದ ಅರ್ಥವಿವರಣೆ:

“ವಂಶಸ್ಥ” ಎಂದರೆ ಚರಿತ್ರೆಯಲ್ಲಿ ಯಾರಾದರೊಬ್ಬರ ರಕ್ತ ಸಂಬಂಧಿಯಾದ ವ್ಯಕ್ತಿಯನ್ನು ಸೂಚಿಸುತ್ತದೆ.

  • ಉದಾಹರಣೆಗೆ, ಅಬ್ರಹಾಮನು ನೋಹನ ವಂಶಸ್ಥ.
  • ಒಬ್ಬ ವ್ಯಕ್ತಿಯ ವಂಶಸ್ಥರು ಆತನ ಮಕ್ಕಳು, ಮೊಮ್ಮೊಕ್ಕಳು, ಮರಿ ಮೊಮ್ಮೊಕ್ಕಳು ಆಗಿರುತ್ತಾರೆ. ಯಾಕೋಬಿನ ವಂಶಸ್ಥರು ಇಸ್ರಾಯೇಲ್ ಹನ್ನೆರಡು ಕುಲದವರು.
  • “ಇವರ ವಂಶಸ್ಥನು” ಎನ್ನುವ ಮಾತನ್ನು ಇನ್ನೊಂದು ವಿಧಾನದಲ್ಲಿ ಹೇಳಬೇಕೆಂದರೆ ಅಬ್ರಹಾಮನು ನೋಹನ ವಂಶಸ್ಥ ಎಂದು ಹೇಳುವ ಹಾಗೆ “ಅವರಿಂದ ಬಂದ ವಂಶಸ್ಥ” ಎಂದು ಹೇಳಬಹುದು. ಇದನ್ನು “ಕುಟುಂಬದ ಸಾಲಿನಿಂದ” ಬಂದವನು ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಅಬ್ರಾಹಾಮ, ಪೂರ್ವಿಕರು, ಯಾಕೋಬ, ನೋಹ, ಇಸ್ರಾಯೇಲ್ ಹನ್ನೆರಡು ಕುಲದವರು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಉದಾಹರಣೆಗಳು:

  • _02:09 “ಸ್ತ್ರೀಯ ___ ಸಂತಾನವು ____ ನಿನ್ನ ತಲೆಯನ್ನು ಜಜ್ಜುವುದು, ನೀನು ಅವನ ಹಿಮ್ಮಡಿಯನ್ನು ಕಚ್ಚುವಿ.”
  • _04:09 ನಾನು ನಿನ್ನ ___ ಸಂತಾನದವರಿಗೆ ____ ಕಾನಾನ್ ದೇಶವನ್ನು ಕೊಡುವೆನು.
  • _05:10 “ಆಕಾಶದಲ್ಲಿ ನಕ್ಷತ್ರಗಳಿಗಿಂತ ಹೆಚ್ಚಾಗಿ ನಿನ್ನ _____ ಸಂತಾನದವರು _____ ಇರುತ್ತಾರೆ.”
  • _17:07 ನಿನ್ನ ಕುಟುಂಬದೊಳಗಿಂದ ಬರುವ ಒಬ್ಬರು ಯಾವಾಗಲೂ ಇಸ್ರಾಯೇಲ್ ರಾಜ್ಯವನ್ನು ಆಳುತ್ತಾರೆ, ಮತ್ತು ನಿನ್ನ ____ ಸಂತಾನದವರಲ್ಲಿ ____ ಒಬ್ಬರು ಮೆಸ್ಸೀಯನಾಗಿ ಬರುತ್ತಾನೆ!”
  • _18:13 ಯೂದಾ ಅರಸರೆಲ್ಲರೂ ದಾವೀದನ ____ ಸಂತಾನದವರಾಗಿರುತ್ತಾರೆ _____.
  • _21:04 ಮೆಸ್ಸೀಯನು ದಾವೀದನ ಸ್ವಂತ ___ ಸಂತಾನದಲ್ಲಿ ____ ಒಬ್ಬನಾಗಿರುತ್ತಾನೆಂದು ದೇವರು ಅರಸನಾದ ದಾವೀದನಿಗೆ ವಾಗ್ಧಾನ ಮಾಡಿರುತ್ತಾನೆ.
  • _48:13 ಮೆಸ್ಸೀಯನು ದಾವೀದನ ಸ್ವಂತ ___ ಸಂತಾನದಲ್ಲಿ ____ ಒಬ್ಬನಾಗಿರುತ್ತಾನೆಂದು ದೇವರು ದಾವೀದನಿಗೆ ವಾಗ್ಧಾನ ಮಾಡಿರುತ್ತಾನೆ. ಮೆಸ್ಸೀಯನಾದ ಯೇಸುವು ದಾವೀದನ ___ ‘ಸಂತಾನದಲ್ಲಿ ____ ವಿಶೇಷತೆಯನ್ನು ಹೊಂದಿರುತ್ತಾನೆ.

# ಪದ ಡೇಟಾ:

  • Strong's: H319, H1004, H1121, H1323, H1755, H2232, H2233, H3205, H3211, H3318, H3409, H4294, H5220, H6849, H7611, H8435, G1074, G1085, G4690

ವಾಕ್ಯ, ವಾಕ್ಯಗಳು

# ಪದದ ಅರ್ಥವಿವರಣೆ:

“ವಾಕ್ಯ” ಎನ್ನುವ ಪದವು ಒಬ್ಬ ವ್ಯಕ್ತಿ ಹೇಳಿದ ಮಾತು ಅಥವಾ ಮಾತುಗಳನ್ನು ಸೂಚಿಸುತ್ತದೆ.

  • ಈ ಪದಕ್ಕೆ ಉದಾಹರಣೆ ಹೇಳಬೇಕೆಂದರೆ, “ನೀನು ನನ್ನ ಮಾತುಗಳನ್ನು ನಂಬುವುದಿಲ್ಲ” ಎಂದು ದೂತನು ಜೆಕರ್ಯನಿಗೆ ಹೇಳಿದನು, ಈ ಮಾತಿಗೆ “ನಾನು ಹೇಳಿದ್ದನ್ನು ನೀನು ನಂಬಲಿಲ್ಲ” ಎಂದರ್ಥವಾಗಿರುತ್ತದೆ.
  • ಈ ಪದವು ಅತೀ ಹೆಚ್ಚಾಗಿ ಒಂದು ವಾಕ್ಯವನ್ನು ಮಾತ್ರವೇ ಸೂಚಿಸದೇ, ಸಂಪೂರ್ಣವಾದ ಸಂದೇಶವನ್ನು ಸೂಚಿಸುತ್ತದೆ.
  • “ವಾಕ್ಯ” ಎನ್ನುವ ಪದವು ಕೆಲವೊಂದುಬಾರಿ ಸಾಮಾನ್ಯವಾಗಿ ಹೇಳುವ ಮಾತುಗಳನ್ನು ಸೂಚಿಸುತ್ತದೆ, “ಮಾತಿನಲ್ಲಿ ಮತ್ತು ಕ್ರಿಯೆಗಳಲ್ಲಿ ಶಕ್ತಿ” ಎನ್ನುವ ಮಾತಿಗೆ “ಮಾತನಾಡುವುದರಲ್ಲಿ ಮತ್ತು ನಡೆದುಕೊಳ್ಳುವುದರಲ್ಲಿ ಶಕ್ತಿಯುತವಾಗಿರುವುದು” ಎಂದರ್ಥವಾಗಿರುತ್ತದೆ.
  • “ವಾಕ್ಯ” ಎನ್ನುವ ಪದವು ಅನೇಕಬಾರಿ ಸತ್ಯವೇದದಲ್ಲಿ ದೇವರು ಹೇಳಿದ ಪ್ರತಿಯೊಂದು ಮಾತನ್ನು ಅಥವಾ ಆಜ್ಞೆಯನ್ನು ಸೂಚಿಸುವುದು, ಉದಾಹರಣೆಗೆ, “ದೇವರ ವಾಕ್ಯ” ಅಥವಾ “ಸತ್ಯ ವಾಕ್ಯ”
  • ಯೇಸುವನ್ನು “ವಾಕ್ಯ” ಎಂದು ಕರೆಯಲ್ಪಟ್ಟ ಸಂದರ್ಭವೇ ಈ ಪದವನ್ನು ವಿಶೇಷವಾಗಿ ಉಪಯೋಗಿಸಲ್ಪಟ್ಟ ಸಂದರ್ಭವಾಗಿರುತ್ತದೆ. ಇದಕ್ಕೆ ಎರಡು ಅರ್ಥಗಳಿಗಾಗಿ ದೇವರ ವಾಕ್ಯ ಎನ್ನುವ ಪದವನ್ನು ನೋಡಿರಿ

# ಅನುವಾದ ಸಲಹೆಗಳು:

  • “ವಾಕ್ಯ” ಅಥವಾ “ವಾಕ್ಯಗಳು” ಎನ್ನುವ ಪದಗಳನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಬೋಧಿಸು” ಅಥವಾ “ಸಂದೇಶ” ಅಥವಾ “ಶುಭವಾರ್ತೆ” ಅಥವಾ “ಹೇಳಿಕೆ” ಅಥವಾ “ಹೇಳಿರುವ ವಿಷಯ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ದೇವರ ವಾಕ್ಯ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H561, H562, H565, H1697, H1703, H3983, H4405, H4406, H6310, H6600, G518, G1024, G3050, G3054, G3055, G3056, G4086, G4487, G4935, G5023, G5542

ವಾರ, ವಾರಗಳು

# ಪದದ ಅರ್ಥವಿವರಣೆ

“ವಾರ” ಎನ್ನುವ ಪದವು ಏಳು ದಿನಗಳ ಕಾಲವನ್ನು ಸೂಚಿಸುತ್ತದೆ.

  • ಯಹೂದಿಯರ ಪ್ರಕಾರ ಸಮಯವನ್ನು ಲೆಕ್ಕಿಸಲು, ವಾರದ ಮೊದಲನೆಯ ದಿನ ಶನಿವಾರ ಸೂರ್ಯಾಸ್ತದಿಂದ ಪ್ರಾರಂಭವಾಗಿ ಬರುವ ಶನಿವಾರ ಸೂರ್ಯಾಸ್ತಕ್ಕೆ ಮುಗಿಯುತ್ತದೆ.
  • ಸತ್ಯವೇದದಲ್ಲಿ, “ವಾರ” ಎನ್ನುವ ಪದವನ್ನು ಏಳು ಸಮಯದ ಗಳಿಗೆಗಳಿಗೆ, ಅಂದರೆ ಏಳು ವರ್ಷಗಳು ಎನ್ನುವ ಕಾಲವನ್ನು ಸೂಚಿಸಲು ಅಲಂಕಾರ ರೂಪದಲ್ಲಿ ಉಪಯೋಗಿಸಲ್ಪಟ್ಟಿದೆ.
  • “ಸುಗ್ಗಿ ಹಬ್ಬ” ಎನ್ನುವ ಹಬ್ಬವು ಪಸ್ಕ ಹಬ್ಬದ ನಂತರ ಏಳು ವಾರಗಳ ಕಾಲ ಆಚರಿಸುತ್ತಾರೆ. ಅದನ್ನು “ಪಂಚಾಶತ್ತಮ ದಿನ” ಎಂದು ಸಹ ಕರೆಯುತ್ತಾರೆ.

(ಈ ಪದವನ್ನು ಸಹ ನೋಡಿರಿ : ಪಂಚಾಶತ್ತಮ ದಿನ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H7620, G4521

ವಾರಸುದಾರ, ವಾರಸುದಾರರು

# ಪದದ ಅರ್ಥವಿವರಣೆ:

ಒಬ್ಬ “ವಾರಸುದಾರ” ಎನ್ನುವ ಪದವು ಸತ್ತುಹೋಗಿರುವ ಒಬ್ಬ ವ್ಯಕ್ತಿಗೆ ಸಂಬಂಧಪಟ್ಟಿರುವ ಹಣವಾಗಲಿ ಅಥವಾ ಅಸ್ತಿಯನ್ನಾಗಲಿ ಕಾನೂನುಬದ್ಧವಾಗಿ ಪಡೆಯುವ ವ್ಯಕ್ತಿಯನ್ನು ಸೂಚಿಸುತ್ತದೆ.

  • ಸತ್ಯವೇದ ಕಾಲಗಳಲ್ಲಿ ಮುಖ್ಯ ವಾರಸುದಾರನು ಮೊಟ್ಟ ಮೊದಲು ಹುಟ್ಟಿದ ಗಂಡು ಮಗನಾಗಿರುತ್ತಾನೆ, ಇವನೇ ತನ್ನ ತಂದೆಯ ಹಣವನ್ನು ಮತ್ತು ಆಸ್ತಿಯನ್ನು ಪಡೆದುಕೊಳ್ಳುತ್ತಾನೆ.
  • ಆತ್ಮೀಯ ತಂದೆಯಾದ ದೇವರಿಂದ ಆತ್ಮೀಯ ಪ್ರಯೋಜನಗಳನ್ನು ಪಡೆದುಕೊಳ್ಳುವ ಕ್ರೈಸ್ತನಾದ ಒಬ್ಬ ವ್ಯಕ್ತಿಯನ್ನು ಸೂಚಿಸುವುದಕ್ಕೆ ಸತ್ಯವೇದವೂ “ವಾರಸುದಾರ” ಎನ್ನುವ ಪದವನ್ನು ಅಲಂಕಾರಿಕ ಭಾವನೆಯಲ್ಲಿ ಉಪಯೋಗಿಸುತ್ತದೆ.
  • ದೇವರ ಮಕ್ಕಳಾಗಿ ಕ್ರೈಸ್ತರು ಯೇಸು ಕ್ರಿಸ್ತನೊಂದಿಗೆ “ಜೊತೆ ವಾರಸುದಾರು” ಎಂದು ಹೇಳಲ್ಪಟ್ಟಿದ್ದಾರೆ. ಇದನ್ನು “ಸಹ-ವಾರಸುದಾರರು” ಅಥವಾ “ಜೊತೆ ವಾರಸುದಾರರು” ಅಥವಾ “ಎಲ್ಲರು ಸೇರಿ ವಾರಸುದಾರರು” ಎಂದೂ ಅನುವಾದ ಮಾಡಬಹುದು.
  • “ವಾರಸುದಾರ” ಎನ್ನುವ ಪದವನ್ನು “ಪ್ರಯೋಜನಗಳನ್ನು ಹೊಂದುವ ವ್ಯಕ್ತಿ” ಎಂದೂ ಅನುವಾದ ಮಾಡಬಹುದು ಅಥವಾ ತಂದೆತಾಯಿಗಳು/ಇತರ ಬಂಧುಗಳು ಸತ್ತುಹೋದಾಗ ಇತರ ವಸ್ತುಗಳನ್ನು ಮತ್ತು ಆಸ್ತಿಪಾಸ್ತಿಗಳನ್ನು ಪಡೆದುಕೊಳ್ಳುವ ವ್ಯಕ್ತಿಯನ್ನು ಸೂಚಿಸುವುದಕ್ಕೆ ಅನುವಾದ ಭಾಷೆಯಲ್ಲಿ ಉಪಯೋಗಿಸುವ ಯಾವುದೇ ಪದವನ್ನು ಇಟ್ಟು ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಚೊಚ್ಚಲು ಮಗ, ಸ್ವಾಸ್ತ್ಯ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1121, H3423, G2816, G2818, G2820, G4789

ವಿಘ್ನ, ವಿಘ್ನಗಳು, ಎಡವು ಕಲ್ಲು

# ಪದದ ಅರ್ಥವಿವರಣೆ:

“ವಿಘ್ನ” ಅಥವಾ “ಎಡವು ಕಲ್ಲು” ಎನ್ನುವ ಪದವು ಒಬ್ಬ ವ್ಯಕ್ತಿಯನ್ನು ಬೀಳಿಸುವ ಮತ್ತು ಮುಗ್ಗರಿಸಿ ಬೀಳಿಸುವ ಒಂದು ಭೌತಿಕ ವಸ್ತುವನ್ನು ಸೂಚಿಸುತ್ತದೆ.

  • ಅಲಂಕಾರಿಕ ಎಡವು ಕಲ್ಲು ಎನ್ನುವುದು ನೈತಿಕತೆಯಲ್ಲಿ ಅಥವಾ ಆತ್ಮೀಯ ಭಾವನೆಯಲ್ಲಿ ಬೀಳಿಸುವುದಕ್ಕೆ ಒಬ್ಬ ವ್ಯಕ್ತಿಗೆ ಕಾರಣವಾಗುವ ಯಾವುದೇ ವಿಷಯವನ್ನು ಸೂಚಿಸುತ್ತದೆ.
  • ಅಲಂಕಾರಿಕವಾಗಿಯೂ, “ವಿಘ್ನ” ಅಥವಾ “ಎಡವು ಕಲ್ಲು” ಎನ್ನುವುದು ಯೇಸುವಿನಲ್ಲಿ ವಿಶ್ವಾಸವನ್ನಿಡದೆ ಯಾರಾದರೊಬ್ಬರನ್ನು ತಪ್ಪಿಸುವ ಯಾವುದೇ ಒಂದು ವಿಷಯವನ್ನು ಅಥವಾ ಯಾರಾದರೊಬ್ಬರನ್ನು ಆತ್ಮೀಯಕವಾಗಿ ಬೆಳೆಯದಂತೆ ಮಾಡುವುದು ಎಂದರ್ಥವಾಗಿರುತ್ತದೆ.
  • ಅನೇಕಬಾರಿ ಒಬ್ಬರಿಗೆ ಅಥವಾ ಅನೇಕರಿಗೆ ವಿಘ್ನವನ್ನು ಮಾಡುವ ರೀತಿಯಲ್ಲಿಯೇ ಇದು ಪಾಪವಾಗಿರುತ್ತದೆ.
  • ಕೆಲವೊಂದುಬಾರಿ ದೇವರು ತನಗೆ ವಿರುದ್ಧವಾಗಿ ತಿರಸ್ಕಾರ ಮಾಡುವ ಜನರ ಮಾರ್ಗಗಳಲ್ಲಿ ವಿಘ್ನವನ್ನುಂಟು ಮಾಡುತ್ತಾರೆ.

# ಅನುವಾದ ಸಲಹೆಗಳು:

  • ಎಡವಿ ಬೀಳಿಸುವಂತೆ ಮಾಡುವ ಒಂದು ವಸ್ತುವಿಗೆ ಅನುವಾದ ಭಾಷೆಯಲ್ಲಿ ಪದ ಇದ್ದಾಗ, ಈ ಪದವನ್ನು ಅನುವಾದ ಮಾಡುವುದಕ್ಕೆ ಉಪಯೋಗಿಸಬಹುದು.
  • ಈ ಪದವನ್ನು ಅಥವಾ ಮಾತನ್ನು “ಎಡವಿ ಬೀಳುವಂತೆ ಮಾಡುವ ಕಲ್ಲು” ಅಥವಾ “ಯಾರಾದರೊಬ್ಬರು ನಂಬದಂತೆ ಮಾಡದಿರುವುದು” ಅಥವಾ “ಸಂದೇಹವನ್ನುಂಟು ಮಾಡುವ ಅಡೆತಡೆ” ಅಥವಾ “ನಂಬಿಕೆಗೆ ಅಡ್ಡಿ” ಅಥವಾ “ಯಾರಾದರೊಬ್ಬರು ಪಾಪ ಮಾಡುವಂತೆ ಮಾಡುವ ವಿಷಯ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಎಡಬಿ ಬೀಳುವುದು, ಪಾಪ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H4383, G3037, G4349, G4625

ವಿಚಾರಣೆ, ವಿಚಾರಣೆಗಳು

# ಪದದ ಅರ್ಥವಿವರಣೆ:

“ವಿಚಾರಣೆ” ಎನ್ನುವ ಪದವು ಯಾವುದಾದರೊಂದು ಅಥವಾ ಯಾರಾದರೊಬ್ಬರು “ವಿಚಾರಿಸಲ್ಪಡುವ” ಅಥವಾ “ಪರೀಕ್ಷಿಸಲ್ಪಡುವ” ಸ್ಥಿತಿಯನ್ನು ಸೂಚಿಸುತ್ತದೆ.

  • ವಿಚಾರಣೆಯು ನ್ಯಾಯಾಂಗ ಕೇಳಿಕೆಯಾಗಿರಬಹುದು, ಇದರಲ್ಲಿ ಒಬ್ಬ ವ್ಯಕ್ತಿ ನಿರ್ದೋಷಿಯೋ ಅಥವಾ ತಪ್ಪು ಮಾಡಿದ ಅಪರಾಧಿಯೆಂದು ನಿರೂಪಣೆ ಮಾಡುವುದಕ್ಕೆ ಆಧಾರವು ಕೊಡಲ್ಪಟ್ಟಿರುತ್ತದೆ.
  • “ವಿಚಾರಣೆ” ಎನ್ನುವ ಪದವು ದೇವರು ಜನರ ನಂಬಿಕೆಯನ್ನು ಪರೀಕ್ಷಿಸುವುದರ ಮೂಲಕ ಹಾದು ಹೋಗುವ ಕಠಿಣ ಪರಿಸ್ಥಿತಿಗಳನ್ನು ಸೂಚಿಸುತ್ತದೆ. ಈ ಪದಕ್ಕೆ ಇನ್ನೊಂದು ಪರ್ಯಾಯ ಪದವು “ಪರೀಕ್ಷಿಸುವುದು” ಅಥವಾ “ಶೋಧಿಸುವುದು” ಆಗಿರುತ್ತದೆ, ಇದು ಒಂದು ರೀತಿಯ ವಿಚಾರಣೆಯ ಪದ್ಧತಿಯಾಗಿರುತ್ತದೆ.
  • ಸತ್ಯವೇದದಲ್ಲಿ ಅನೇಕಮಂದಿ ದೇವರ ನಂಬಿಕೆಯಲ್ಲಿರುತ್ತಾರೋ ಇಲ್ಲವೋ ಮತ್ತು ದೇವರಿಗೆ ವಿಧೇಯರಾಗಿರುತ್ತಾರೋ ಇಲ್ಲವೋ ಎಂದು ನೋಡುವುದಕ್ಕೆ ಪರೀಕ್ಷಸಲ್ಪಟ್ಟಿರುತ್ತಾರೆ. ಅವರು ಅನೇಕ ವಿಚಾರಣೆಗಳ ಮೂಲಕ ಹಾದು ಹೋಗಿರುತ್ತಾರೆ, ಇವುಗಳಲ್ಲಿ ಹೊಡೆಸಿಕೊಳ್ಳುವುದು, ಸೆರೆಗೊಯ್ಯುವುದು, ಅಥವಾ ಅವರ ನಂಬಿಕೆಗಾಗಿ ಸಾಯಿಸಲ್ಪಡುವುದು ಎನ್ನುವ ವಿಷಯಗಳು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಶೋಧಿಸು, ಪರೀಕ್ಷಿಸು, ನಿರ್ದೋಷಿ , ಅಪರಾಧ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H974, H4531, H4941, H7378, G178, G1382, G1383, G2919, G3984, G3986, G4451

ವಿಚಾರಣೆ, ವಿಚಾರಿಸು, ವಿಚಾರಿಸಲಾಗಿದೆ, ವಿಚಾರಣೆಗಳು

# ಸತ್ಯಾಂಶಗಳು:

“ವಿಚಾರಣೆ” ಎನ್ನುವಪದಕ್ಕೆ ಮಾಹಿತಿಗಾಗಿ ಯಾರಾದರೊಬ್ಬರನ್ನು ಕೇಳು ಎಂದರ್ಥ. “ಯಾವುದಾದರೊಂದರ ಕುರಿತಾಗಿ ವಿಚಾರಿಸು” ಎನ್ನುವ ಮಾತು ಅನೇಕಸಲ ಸಹಾಯಕ್ಕಾಗಿ ಅಥವಾ ಜ್ಞಾನಕ್ಕಾಗಿ ದೇವರನ್ನು ಬೇಡಿಕೊಳ್ಳುವುದನ್ನು ಸೂಚಿಸುತ್ತದೆ.

  • ಹಳೇ ಒಡಂಬಡಿಕೆಯಲ್ಲಿ ದೇವರ ಕುರಿತಾಗಿ ವಿಚಾರಿಸಿದ ಅನೇಕರ ಸಂಘಟನೆಗಳನ್ನು ದಾಖಲಿಸಲಾಗಿರುತ್ತದೆ.
  • ಅಧಿಕಾರಿಕ ಬರವಣಿಗೆಯ ದಾಖಲಾತಿಗಳ ಮೂಲಕ ಪರಿಶೋಧನೆ ಮಾಡುವ ಅಧಿಕಾರಿಕ ಪ್ರಭುತ್ವದಿಂದ ಅಥವಾ ಅರಸನಿಂದ ಈ ಪದವು ಉಪಯೋಗಿಸಲ್ಪಡುತ್ತದೆ.
  • ಸಂದರ್ಭಾನುಸಾರವಾಗಿ “ವಿಚಾರಣೆ” ಎನ್ನುವ ಪದವನ್ನು “ಕೇಳು” ಅಥವಾ “ಮಾಹಿತಿಗಾಗಿ ಕೇಳು” ಎಂದೂ ಅನುವಾದ ಮಾಡಬಹುದು.
  • “ಯೆಹೋವನ ವಿಚಾರಣೆ” ಎನ್ನುವ ಮಾತನ್ನು “ಮಾರ್ಗದರ್ಶನಕ್ಕಾಗಿ ಯೆಹೋವನನ್ನು ಕೇಳು” ಅಥವಾ “ಏನು ಮಾಡಬೇಕೆಂದು ಯೆಹೋವನನ್ನು ಕೇಳು” ಎಂದೂ ಅನುವಾದ ಮಾಡಬಹುದು.
  • ಒಂದು ವಿಷಯದ “ನಂತರ ವಿಚಾರಿಸಿ” ಎನ್ನುವ ಮಾತನ್ನು “ಅದರ ಕುರಿತಾಗಿ ಪ್ರಶ್ನೆಗಳನ್ನು ಕೇಳು” ಅಥವಾ “ಅದರ ಕುರಿತಾಗಿ ಮಾಹಿತಿಯನ್ನು ಪಡೆಯಲು ಕೇಳು” ಎಂದೂ ಅನುವಾದ ಮಾಡಬಹುದು.
  • “ನಿನ್ನಿಂದ ನಾನು ವಿಚಾರಿಸಲ್ಪಡುವುದಿಲ್ಲ” ಎಂದು ಯೆಹೋವನು ಹೇಳಿದಾಗ, ಇದನ್ನು “ಮಾಹಿತಿಗಾಗಿ ನನ್ನನ್ನು ಕೇಳುವುದಕ್ಕೆ ನಿನಗೆ ಅನುಮತಿ ನೀಡುವುದಿಲ್ಲ” ಅಥವಾ “ನನ್ನಿಂದ ಸಹಾಯ ಪಡೆದುಕೊಳ್ಳುವುದಕ್ಕೆ ನಿನಗೆ ಅನುಮತಿ ಕೊಡುವುದಿಲ್ಲ” ಎಂದೂ ಅನುವಾದ ಮಾಡಬಹುದು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1240, H1245, H1875, G1830

ವಿಚ್ಛೇದನ

# ಪದದ ಅರ್ಥವಿವರಣೆ:

ವಿಚ್ಛೇದನ ಎನ್ನುವುದು ವಿವಾಹವನ್ನು ಕೊನೆಗೊಳಿಸುವುದಕ್ಕೆ ಕಾನೂನುಕ್ರಮವಾದ ಕ್ರಿಯೆಯಾಗಿರುತ್ತದೆ. “ವಿಚ್ಛೇದನ” ಎನ್ನುವ ಪದಕ್ಕೆ ಮದುವೆಯನ್ನು ಕೊನೆಗೊಳಿಸಿಕೊಳ್ಳುವುದಕ್ಕೆ ಗಂಡ ಹೆಂಡತಿಯರಿಬ್ಬರು ಸಾಂಪ್ರದಾಯಿಕವಾಗಿ ಮತ್ತು ಕಾನೂನುಕ್ರಮವಾಗಿ ಬೇರ್ಪಡುವುದು ಎಂದರ್ಥ.

  • ವಿಚ್ಛೇದನ ಎನ್ನುವ ಪದಕ್ಕೆ “ಹೊರ ಕಳುಹಿಸು” ಅಥವಾ “ಸಾಂಪ್ರದಾಯಿಕವಾಗಿ ಬೇರ್ಪಾಟಾಗುವುದು” ಎಂದು ಅಕ್ಷರಾರ್ಥ. ವಿಚ್ಛೇದನ ಎನ್ನುವ ಪದವನ್ನು ಸೂಚಿಸಲು ಇತರ ಭಾಷೆಗಳು ಬಹುಶಃ ಸಮಾನವಾದ ಪದಗಳನ್ನು ಬಳಸುತ್ತಿರಬಹುದು.
  • “ವಿಚ್ಛೇದನ ಪತ್ರ” ಎನ್ನುವ ಪದವನ್ನು “ಮದುವೆ ಕೊನೆಯಾಗಿಸಲ್ಪಟ್ಟಿದೆ ಎಂದು ವ್ಯಾಖ್ಯಾನಿಸುವ ಪತ್ರ” ಎಂದೂ ಅನುವಾದ ಮಾಡಬಹುದು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1644, H3748, H5493, H7971, G630, G647, G863

ವಿದ್ವಾಂಸರು, ಜೋಯಿಸರು

# ಪದದ ಅರ್ಥವಿವರಣೆ:

ಯೇಸುವಿನ ಜನನ ಕ್ರಮದಲ್ಲಿ ದಾಖಲಿಸಿದ ಮತ್ತಾಯನ ಸುವಾರ್ತೆಯಲ್ಲಿ “ಕಲಿತವರು” ಅಥವಾ “ವಿದ್ಯಾವಂತರು” ಆಗಿರುವ ಮನುಷ್ಯರಾಗಿರುವ “ಜೋಯಿಸರು” ಯೇಸುವು ಬೆತ್ಲೆಹೇಮಿನಲ್ಲಿ ಜನಿಸಿದನಂತರ ಆತನಿಗೆ ಬಹುಮಾನಗಳನ್ನು ತೆಗೆದುಕೊಂಡುಬಂದಿದ್ದರು. ನಕ್ಷತ್ರಗಳನ್ನು ಅಧ್ಯಯನ ಮಾಡಿದ ಅನೇಕಮಂದಿ “ಜೋಯಿಸರು” ಇದ್ದಿರುತ್ತಾರೆ.

  • ಈ ಮನುಷ್ಯರು ಎಷ್ಟೋ ದೂರದಲ್ಲಿರುವ ಬೇರೊಂದು ದೇಶದಿಂದ ಇಸ್ರಾಯೇಲ್ ಪೂರ್ವ ದಿಕ್ಕಿಗೆ ಪ್ರಯಾಣ ಮಾಡಿಕೊಂಡು ಬಂದಿದ್ದರು. ಅವರು ಯಾರೆಂದು ಅಥವಾ ಅವರು ಎಲ್ಲಿಂದ ಬಂದವರೆಂದು ಖಚಿತವಾಗಿ ಗೊತ್ತಿಲ್ಲ. ಆದರೆ ಅವರು ಖಂಡಿತವಾಗಿ ನಕ್ಷತ್ರಗಳನ್ನು ಅಧ್ಯಯನ ಮಾಡಿದ ಪಂಡಿತರಾಗಿರುತ್ತಾರೆ.
  • ಅವರು ಬಹುಶಃ ದಾನಿಯೇಲನ ಕಾಲದಲ್ಲಿ ಬಾಬೆಲೋನಿಯ ಅರಸರಿಗೆ ಸೇವೆ ಮಾಡಿದ ಜ್ಞಾನಿಗಳ ಸಂತಾನದವರಾಗಿರಬಹುದು ಮತ್ತು ಅವರು ಅನೇಕ ವಿಷಯಗಳಲ್ಲಿ ತರಬೇತಿಯನ್ನು ಪಡೆದಿರಬಹುದು, ಅದರಲ್ಲಿ ನಕ್ಷತ್ರಗಳ ಅಧ್ಯಯನವು ಮತ್ತು ಕನಸುಗಳಿಗೆ ಅರ್ಥವಿವರಣೆ ಹೇಳುವುದೂ ಇರಬಹುದು.
  • ಸಾಂಪ್ರದಾಯಿಕವಾಗಿ ಮೂವರು ಜೋಯಿಸರು ಅಥವಾ ವಿದ್ಯಾವಂತರು ಇದ್ದಾರೆಂದು ಹೇಳಲ್ಪಟ್ಟಿದೆ, ಯಾಕಂದರೆ ಅವರು ಮೂರು ಬಹುಮಾನಗಳನ್ನು ಮಾತ್ರವೇ ಯೇಸುವಿಗೆ ತೆಗೆದುಕೊಂಡು ಬಂದಿದ್ದರು. ಏನೇಯಾಗಲಿ, ಸತ್ಯವೇದದಲ್ಲಿ ಮಾತ್ರ ಅವರು ಎಷ್ಟು ಮಂದಿ ಬಂದಿದ್ದಾರೆಂದು ಸಂಖ್ಯೆಗೆ ಅಧಾರಗಳಿಲ್ಲ.

(ಈ ಪದಗಳನ್ನು ಸಹ ನೋಡಿರಿ : ಬಾಬೆಲೋನಿಯ, ಬೆತ್ಲೆಹೇಮ್, ದಾನಿಯೇಲ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1505, G3097

ವಿಧ, ವಿಧಗಳು, ದಯೆ, ದಯಾಳುತನ

# ಪದದ ಅರ್ಥವಿವರಣೆ:

“ವಿಧ” ಮತ್ತು “ವಿಧಗಳು” ಎನ್ನುವ ಪದಗಳು ಗುಣಲಕ್ಷಣಗಳನ್ನು ಹಂಚಿಕೊಳ್ಳುವುದರ ಮೂಲಕ ಸಂಪರ್ಕಿಸಲಾಗುವ ವಿಷಯಗಳ ಗುಂಪುಗಳನ್ನು ಅಥವಾ ವರ್ಗೀಕರಣಗಳನ್ನು ಸೂಚಿಸುತ್ತದೆ.

  • ಸತ್ಯವೇದದಲ್ಲಿ ಈ ಪದವು ವಿಶೇಷವಾಗಿ ದೇವರು ಈ ಸರ್ವ ಪ್ರಪಂಚವನ್ನು ಸೃಷ್ಟಿ ಮಾಡಿದಾಗ ಪ್ರಾಣಿಗಳನ್ನು ಮತ್ತು ಮರಗಳ ವಿಶಿಷ್ಟ ರೀತಿಯನ್ನು ಸೂಚಿಸುವುದಕ್ಕೆ ಉಪಯೋಗಿಸಲಾಗಿರುತ್ತದೆ.
  • ಅನೇಕಬಾರಿ ಪ್ರತಿಯೊಂದು “ವಿಧದಲ್ಲಿಯು” ಅನೇಕ ವಿಧವಾದ ವ್ಯತ್ಯಾಸಗಳು ಅಥವಾ ವರ್ಗಗಳು (ಅಥವಾ ಜಾತಿಗಳು) ಇರುತ್ತವೆ. ಉದಾಹರಣೆಗೆ, ಕುದುರೆಗಳು, ಜೀಬ್ರಾಗಳು ಮತ್ತು ಕತ್ತೆಗಳು ಒಂದೇ “ವಿಧಕ್ಕೆ” ಸಂಬಂಧಪಟ್ಟ ಪ್ರಾಣಿಗಳಾಗಿರುತ್ತವೆ, ಆದರೆ ಅವು ಒಂದಕ್ಕೊಂದು ವಿಭಿನ್ನ ವರ್ಗಗಳಿಗೆ ಸಂಬಂಧಪಟ್ಟವುಗಳಾಗಿರುತ್ತವೆ.
  • ಪ್ರತಿಯೊಂದು ಗುಂಪನ್ನಾಗಿ ಪ್ರತಿಯೊಂದು “ವಿಧವನ್ನು” ವ್ಯತ್ಯಾಸಗೊಳಿಸುವ ಮುಖ್ಯವಾದ ವಿಷಯವೇನೆಂದರೆ ಆ ಗುಂಪಿಗೆ ಸಂಬಧಪಟ್ಟವುಗಳು ಅದೇ “ವಿಧವಾದ” ಪ್ರಾಣಿಗಳನ್ನು ಹುಟ್ಟಿಸುತ್ತವೆ. ಬೇರೆ ಬೇರೆ ವಿಧವಾದ ಪ್ರಾಣಿಗಳು ಒಂದಕ್ಕೊಂದು ಏನು ಮಾಡುವುದಿಲ್ಲ.

# ಅನುವಾದ ಸಲಹೆಗಳು:

  • ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಬಗೆ” ಅಥವಾ “ತರಗತಿ” ಅಥವಾ “ಗುಂಪು” ಅಥವಾ “ಪ್ರಾಣಿ (ಮರ) ಗುಂಪು” ಅಥವಾ “ವರ್ಗ” ಎನ್ನುವ ಪದಗಳು ಸೇರಿರುತ್ತವೆ.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2178, H3978, H4327, G1085, G5449

ವಿಧಾನಸಭೆ, ವಿಧಾನಸಭೆಗಳು, ಗುಂಪುಸೇರಿಸು, ಗುಂಪು ಗೂಡಿಸಲ್ಪಟ್ಟಿದೆ

# ಪದದ ಅರ್ಥವಿವರಣೆ:

“ಗುಂಪು” ಎನ್ನುವ ಪದವನ್ನು ಸಹಜವಾಗಿ ಜನರೆಲ್ಲರು ಸಮಸ್ಯೆಗಳನ್ನು ಚರ್ಚಿಸುವುದಕ್ಕೆ, ಸಲಹೆ ಕೊಡುವುದಕ್ಕೆ ಮತ್ತು ನಿರ್ಣಯಗಳನ್ನು ತೆಗೆದುಕೊಳ್ಳುವುದಕ್ಕೆ ಸೇರಿ ಬರುವ ಒಂದು ಗುಂಪನ್ನು ಸೂಚಿಸುತ್ತದೆ.

  • ಸ್ಥಿರವಾಗಿರಲು ಮತ್ತು ಅಧೀಕೃತವಾಗಿ ಕ್ರಮಪಡಿಸಿದ ಗುಂಪು ವಿಧಾನಸಭೆಯಾಗಿರಬಹುದು ಅಥವಾ ಒಂದು ಉದ್ದೇಶಕ್ಕಾಗಿ ತಾತ್ಕಾಲಿಕವಾಗಿ ಜನರು ಸೇರಿ ಬರುವ ಗುಂಪು ಸಭೆಯಾಗಿರಬಹುದು.
  • ಹಳೇ ಒಡಂಬಡಿಕೆಯಲ್ಲಿ ಯೆಹೋವಾನನ್ನು ಆರಾಧನೆ ಮಾಡುವುದಕ್ಕೆ ಇಸ್ರಾಯೇಲ್ ಜನರೆಲ್ಲರು ಸೇರಿಬರುವ ಒಂದು ವಿಶೇಷವಾದ ಸಭೆಯನ್ನು “ಪರಿಶುದ್ಧ ಸಭೆ” ಎಂದು ಕರೆಯುತ್ತಾರೆ.
  • “ವಿಧಾನಸಭೆ” ಎನ್ನುವ ಪದವು ಕೆಲವೊಂದುಬಾರಿ ಸಾಧಾರಣವಾಗಿ ಒಂದು ಗುಂಪಾಗಿರುವ ಇಸ್ರಾಯೇಲ್ಯರಿಗೆ ಸೂಚಿಸುತ್ತದೆ.
  • ಶತ್ರು ಸೈನಿಕರು ದೊಡ್ಡ ಗುಂಪಾಗಿ ಕೂಡಿಬರುವುದನ್ನು ಕೆಲವೊಂದುಸಲ “ಸಭೆ”ಯನ್ನಾಗಿ ಸೂಚಿಸುತ್ತದೆ. ಇದನ್ನು “ಸೈನ್ಯ” ಎಂದು ಅನುವಾದ ಮಾಡಬಹುದು.
  • ಹೊಸ ಒಡಂಬಡಿಕೆಯಲ್ಲಿ 70 ಮಂದಿ ಯೆಹೂದ್ಯ ನಾಯಕರ ಸಭೆ ಯೆರೂಸಲೇಮ್ ಎನ್ನುವ ದೊಡ್ಡ ಪಟ್ಟಣಗಳಲ್ಲಿ ಇರುತ್ತಿತ್ತು, ಆ ಸಭೆ ಜನರ ಮಧ್ಯೆದಲ್ಲಿರುವ ವಿವಾದಗಳನ್ನು ಪರಿಷ್ಕರಿಸಲು ಮತ್ತು ಕಾನೂನುಬದ್ಧವಾದ ವಿಷಯಗಳಿಗೆ ತೀರ್ಪು ಮಾಡುವುದಕ್ಕೆ ಕೂಡಿಕೊಳ್ಳುತ್ತಿದ್ದರು. ಈ ಸಭೆಯನ್ನೇ “ಸೇನ್ಹೆದ್ರಿನ್” ಅಥವಾ “ಕೌನ್ಸಿಲ್” ಎಂಬುದಾಗಿ ಕರೆಯುತ್ತಾರೆ.

# ಅನುವಾದ ಸಲಹೆಗಳು

  • ಸಂದರ್ಭಕ್ಕೆ ತಕ್ಕಂತೆ, “ಸಭೆ” ಎನ್ನುವುದನ್ನು “ವಿಶೇಷವಾದ ಕೂಟ” ಅಥವಾ “ಸಮೂಹ” ಅಥವಾ “ಕೌನ್ಸಿಲ್” ಅಥವಾ “ಸೈನ್ಯ” ಅಥವಾ “ದೊಡ್ಡ ಗುಂಪು” ಎಂದೂ ಅನುವಾದ ಮಾಡಬಹುದು.
  • “ಸಭೆ” ಎನ್ನುವ ಪದವು ಇಸ್ರಾಯೇಲ್ಯರೆಲ್ಲರನ್ನು ಸೂಚಿಸುವಾಗ, ಅದನ್ನು “ವರ್ಗ” ಅಥವಾ “ಇಸ್ರಾಯೇಲ್ ಜನರು” ಎಂಬುದಾಗಿಯೂ ಅನುವಾದ ಮಾಡಬಹುದು.
  • “ಸಭೆಯೆಲ್ಲರು” ಎನ್ನುವ ಮಾತನ್ನು “ಜನರೆಲ್ಲರು” ಅಥವಾ “ಇಸ್ರಾಯೇಲ್ಯರ ಸರ್ವ ಸಮಾಜ” ಅಥವಾ “ಪ್ರತಿಯೊಬ್ಬರು” ಎಂಬುದಾಗಿಯೂ ಅನುವಾದ ಮಾಡಬಹುದು. (ನೋಡಿರಿ: ಅತಿಶಯೋಕ್ತಿ

(ಈ ಪದಗಳನ್ನು ಸಹ ನೋಡಿರಿ : ಕೌನ್ಸಿಲ್)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H622, H627, H1413, H1481, H2199, H3259, H4150, H4186, H4744, H5475, H5712, H5789, H6116, H6633, H6908, H6950, H6951, H6952, H7284, G1577, G1997, G3831, G4863, G4864, G4871, G4905

ವಿರೋಧಿ, ವಿರೋಧಿಗಳು, ಶತ್ರು, ಶತ್ರುಗಳು

# ಪದದ ಅರ್ಥ ವಿವರಣೆ:

“ವಿರೋಧಿ” ಎನ್ನುವವನು ಒಬ್ಬ ವ್ಯಕ್ತಿ ಅಥವಾ ಯಾವುದಾದರೊಂದನ್ನು ಮತ್ತು ಯಾರಾದರೊಬ್ಬರನ್ನು ವಿರೋಧಿಸುವ ಒಂದು ಗುಂಪು. “ಶತ್ರು” ಎನ್ನುವ ಪದಕ್ಕೆ ಕೂಡ ಅದೇ ಅರ್ಥ ಬರುತ್ತದೆ.

  • ನಿಮ್ಮ ವಿರೋಧಿ ಒಬ್ಬ ವ್ಯಕ್ತಿಯಾಗಿರಬಹುದು, ಅವನು ನಿಮಗೆ ವಿರುದ್ಧವಾಗಿ ನಡೆದುಕೊಳ್ಳುವುದಕ್ಕೆ ಅಥವಾ ನಿಮಗೆ ಹಾನಿಯನ್ನುಂಟು ಮಾಡುವುದಕ್ಕೆ ಪ್ರಯತ್ನ ಮಾಡುತ್ತಿರಬಹುದು.
  • ಎರಡು ದೇಶಗಳು ಒಂದಕ್ಕೊಂದು ಯುದ್ಧ ಮಾಡುತ್ತಿರುವಾಗ ಅವರೆಡನ್ನು ಒಂದಕ್ಕೊಂದು “ವಿರೋಧಿ” ಎಂದು ಕರೆದುಕೊಳ್ಳುತ್ತಾರೆ.
  • ಸತ್ಯವೇದದಲ್ಲಿ ಸೈತಾನನನ್ನು “ವಿರೋಧಿಯಾಗಿ” ಮತ್ತು ಒಬ್ಬ “ಶತ್ರುವನ್ನಾಗಿ” ಸೂಚಿಸಲ್ಪಟ್ಟಿದೆ.
  • ವಿರೋಧಿಯನ್ನು ಬಹುಶಃ “ಎದುರಾಳಿ” ಎಂದು ಅಥವಾ “ಶತ್ರು” ಎಂದು ಅನುವಾದ ಮಾಡಬಹುದು, ಆದರೆ ಇದು ಬಲವಾದ ಪ್ರತಿಪಕ್ಷದ ರೂಪವನ್ನು ತೋರಿಸುತ್ತಿದೆ.

(ಈ ಪದಗಳನ್ನು ಸಹ ನೋಡಿರಿ : /ಸೈತಾನ್

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H341, H6146, H6887, H6862, H6965, H7790, H7854, H8130, H8324, G476, G480, G2189, G2190, G4567, G5227

ವಿವೇಚಿಸು, ವಿವೇಚಿಸಲ್ಪಟ್ಟಿದೆ, ವಿವೇಚಿಸಲ್ಪಡುತ್ತಿದೆ, ವಿವೇಚನೆ

# ಪದದ ಅರ್ಥವಿವರಣೆ:

“ವಿವೇಚಿಸು” ಎನ್ನುವ ಪದಕ್ಕೆ ಏನಾದರೊಂದು ವಿಷಯವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದು ಎಂದರ್ಥ, ವಿಶೇಷವಾಗಿ ಏನಾದರೊಂದು ವಿಷಯವು ಸರಿಯೋ ಅಥವಾ ತಪ್ಪೋ ಎಂದೂ ತಿಳಿದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದು ಎಂದರ್ಥ.

  • “ವಿವೇಚನೆ” ಎನ್ನುವ ಪದವು ಒಂದು ನಿರ್ಧಿಷ್ಠವಾದ ವಿಷಯದ ಕುರಿತಾಗಿ ಜ್ಞಾನವುಳ್ಳ ರೀತಿಯಲ್ಲಿ ನಿರ್ಣಯಿಸುವುದನ್ನು ಮತ್ತು ಅರ್ಥಮಾಡಿಕೊಳ್ಳುವುದನ್ನು ಸೂಚಿಸುತ್ತದೆ.
  • ಇದಕ್ಕೆ ಜ್ಞಾನವನ್ನು ಮತ್ತು ಒಳ್ಳೇಯ ತೀರ್ಪು ಮಾಡುವ ಶಕ್ತಿಯನ್ನು ಹೊಂದಿರುವುದು ಎಂದರ್ಥ.

# ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ, “ವಿವೇಚಿಸು” ಎನ್ನುವ ಪದವನ್ನು “ಅರ್ಥಮಾಡಿಕೋ” ಅಥವಾ “ಅವುಗಳ ಮಧ್ಯೆದಲ್ಲಿರುವ ವ್ಯತ್ಯಾಸವನ್ನು ತಿಳಿ” ಅಥವಾ “ಒಳ್ಳೇಯದನ್ನು ಮತ್ತು ಕೆಟ್ಟದ್ದನ್ನು ತಿಳಿ” ಅಥವಾ “ಅದರ ಕುರಿತಾಗಿ ಸರಿಯಾಗಿ ತೀರ್ಪು ಮಾಡು” ಅಥವಾ “ಕೆಟ್ಟದ್ದರಿಂದ ಒಳ್ಳೇಯದನ್ನು ಗ್ರಹಿಸು” ಎಂದೂ ಅನುವಾದ ಮಾಡಬಹುದು.
  • “ವಿವೇಚನೆ” ಎನ್ನುವ ಪದವನ್ನು “ಅರ್ಥಮಾಡಿಕೊಳ್ಳುವುದು” ಅಥವಾ “ಒಳ್ಳೇಯದನ್ನು ಮತ್ತು ಕೆಟ್ಟದ್ದನ್ನು ವ್ಯತ್ಯಾಸಗೊಳಿಸುವ ಸಾಮರ್ಥ್ಯ ಹೊಂದಿರುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ತೀರ್ಪು, ಜ್ಞಾನ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H995, H2940, H4209, H5234, H8085, G350, G1252, G1253, G1381, G2924

ವಿಶ್ರಾಂತಿ, ವಿಶ್ರಾಂತಿ ಕೊಡುವುದು, ವಿಶ್ರಾಂತಿ ತೆಗೆದುಕೊಳ್ಳಲಾಗಿದೆ, ವಿಶ್ರಮಿಸುವುದು, ವಿಶ್ರಾಂತಿ ಇಲ್ಲದ

# ಪದದ ಅರ್ಥವಿವರಣೆ:

“ವಿಶ್ರಾಂತಿ” ಎನ್ನುವ ಪದಕ್ಕೆ ಅಕ್ಷರಾರ್ಥವಾಗಿ ಬಲವನ್ನು ತಿರುಗಿ ಹೊಂದಿಕೊಳ್ಳುವುದಕ್ಕೆ ಅಥವಾ ವಿರಾಮ ತೆಗೆದುಕೊಳ್ಳುವ ಕ್ರಮದಲ್ಲಿ ಕೆಲಸವನ್ನು ನಿಲ್ಲಿಸುವುದು ಎಂದರ್ಥ. “ಇನ್ನೊಂದರಿಂದ ವಿಶ್ರಾಂತಿ” ಎನ್ನುವ ಮಾತು ಯಾವುದಾದರೊಂದರ ಉಳಿಕೆಯನ್ನು ಸೂಚಿಸುತ್ತದೆ. “ವಿಶ್ರಾಂತಿ” ಎನ್ನುವ ಪದಕ್ಕೆ ಕೆಲಸವನ್ನು ನಿಲ್ಲಿಸು ಎಂದರ್ಥ.

  • ಯಾವುದಾದರೊಂದರ ಸ್ಥಳದಲ್ಲಿ “ವಿಶ್ರಾಂತಿ” ತೆಗೆದುಕೊಳ್ಳುವುದು ಎಂದರೆ ಒಂದು ಸ್ಥಳದಲ್ಲಿ “ನಿಂತಿರುವುದು” ಅಥವಾ “ಕುಳಿತಿರುವುದು” ಎಂದರ್ಥವಾಗಿರುತ್ತದೆ.
  • ಒಂದು ಹಡಗು ಯಾವುದಾದರೊಂದರ ಸ್ಥಳಕ್ಕೆ “ಬಂದು ವಿಶ್ರಮಿಸಿದೆ” ಎಂದರೆ ಅದನ್ನು ಆ ಸ್ಥಳದಲ್ಲಿ “ನಿಲ್ಲಿಸಿದೆ” ಅಥವಾ “ತಲುಪಿದೆ” ಎಂದರ್ಥವಾಗಿರುತ್ತದೆ.
  • ಒಬ್ಬ ವ್ಯಕ್ತಿ ಅಥವಾ ಒಂದು ಪ್ರಾಣಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವಾಗ, ತಮ್ಮನ್ನು ತಾವು ತಂಪುಗೊಳಿಸಿಕೊಳ್ಳುವ ಕ್ರಮದಲ್ಲಿ ಅವರು ಕುಳಿತಿದ್ದಾರೆ, ಮಲಗಿದ್ದಾರೆ ಅಥವಾ ಅವು ಕುಳಿತಿವೆ ಅಥವಾ ಮಲಗಿವೆ ಎಂದರ್ಥವಾಗಿರುತ್ತದೆ.
  • ಇಸ್ರಾಯೇಲ್ಯರು ವಾರದ ಏಳನೇಯ ದಿನದಂದು ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ದೇವರು ಆಜ್ಞಾಪಿಸಿದ್ದಾರೆ. ಕೆಲಸ ಮಾಡದ ಈ ದಿನವನ್ನು “ಸಬ್ಬತ್” ದಿನ ಎಂದು ಕರೆಯುತ್ತಾರೆ.
  • ಯಾವುದಾದರೊಂದರ ಮೇಲೆ ಒಂದು ವಸ್ತುವನ್ನು ವಿಶ್ರಾಂತಿಗೊಳಿಸುವುದು ಎಂದರೆ ಆ ಸ್ಥಳದಲ್ಲಿ ಅದನ್ನು “ಇಡುವುದು” ಅಥವಾ “ನಿಲ್ಲಿಸುವುದು” ಎಂದರ್ಥವಾಗಿರುತ್ತದೆ.

# ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ, “(ತನ್ನನ್ನು ತಾನು) ವಿಶ್ರಾಂತಿಗೊಳಿಸಿಕೊಳ್ಳುವುದು” ಎನ್ನುವ ಮಾತನ್ನು “ಕೆಲಸವನ್ನು ನಿಲ್ಲಿಸುವುದು” ಅಥವಾ “ತನ್ನನ್ನು ತಾನು ತಂಪು ಮಾಡಿಕೊಳ್ಳುವುದು” ಅಥವಾ “ಭಾರಗಳನ್ನು ಒಯ್ಯುವುದನ್ನು ನಿಲ್ಲಿಸುವುದು” ಎಂದೂ ಅನುವಾದ ಮಾಡಬಹುದು.
  • ಯಾವುದಾದರೊಂದರ ಮೇಲೆ ಒಂದು ವಸ್ತುವನ್ನು “ವಿಶ್ರಾಂತಿಗೊಳಿಸುವುದು” ಎನ್ನುವ ಮಾತನ್ನು ಯಾವುದಾದರೊಂದರ ಆ ವಸ್ತುವನ್ನು “ಇಡುವುದು” ಅಥವಾ “ನಿಲ್ಲಿಸುವುದು” ಅಥವಾ “ಜೋಡಿಸುವುದು” ಎಂದೂ ಅನುವಾದ ಮಾಡಬಹುದು.
  • “ನಾನು ನಿನಗೆ ವಿಶ್ರಾಂತಿಯನ್ನು ಕೊಡುತ್ತೇನೆ” ಎಂದು ಯೇಸು ಹೇಳಿದಾಗ, ಇದಕ್ಕೆ “ನೀನು ಹೊತ್ತಿಕೊಂಡು ಹೋಗುವ ಭಾರವನ್ನು ನಾನು ನಿಲ್ಲಿಸುತ್ತೇನೆ” ಅಥವಾ “ಸಮಾಧಾನವಿರುವಂತೆ ನಾನು ನಿನಗೆ ಸಹಾಯ ಮಾಡುತ್ತೇನೆ” ಅಥವಾ “ನನ್ನಲ್ಲಿ ಭರವಸೆವಿಡುವುದಕ್ಕೆ ಮತ್ತು ನನ್ನಲ್ಲಿ ವಿಶ್ರಮಿಸುವುದಕ್ಕೆ ನಾನು ನಿನ್ನನ್ನು ಬಲಗೊಳಿಸುತ್ತೇನೆ” ಎಂದೂ ಅನುವಾದ ಮಾಡಬಹುದು.
  • “ಅವರು ನನ್ನ ವಿಶ್ರಾಂತಿಯಲ್ಲಿ ಪ್ರವೇಶಿಸುವುದಿಲ್ಲ” ಎಂದು ದೇವರು ಹೇಳಿದಾಗ, ಈ ಮಾತನ್ನು “ಅವರು ವಿಶ್ರಾಂತಿಯ ನನ್ನ ಆಶೀರ್ವಾದಗಳನ್ನು ಅನುಭವಿಸುವುದಿಲ್ಲ” ಅಥವಾ “ನನ್ನಲ್ಲಿ ಭರವಸೆವಿಡುವುದರ ಮೂಲಕ ಬರುವಂತಹ ಸಂತೋಷ, ಸಮಾಧಾನಗಳನ್ನು ಅವರು ಅನುಭವಿಸುವುದಿಲ್ಲ” ಎಂದೂ ಅನುವಾದ ಮಾಡಬಹುದು.
  • “ಶೇಷ” ಎನ್ನುವ ಪದವನ್ನು “ಉಳಿದಿರುವವುಗಳು” ಅಥವಾ “ಇತರ ಎಲ್ಲಾ ಜನರು” ಅಥವಾ “ಬಿಡಲ್ಪಟ್ಟಿರುವ ಪ್ರತಿಯೊಂದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಶೇಷ, ಸಬ್ಬತ್)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H14, H1824, H1826, H2308, H3498, H3499, H4494, H4496, H4771, H5117, H5118, H5183, H5564, H6314, H7258, H7280, H7599, H7604, H7605, H7606, H7611, H7673, H7677, H7901, H7931, H7954, H8058, H8172, H8252, H8300, G372, G373, G425, G1515, G1879, G1954, G1981, G2270, G2663, G2664, G2681, G2838, G3062, G4520

ವಿಸ್ಮಯ, ಭಯಂಕರನು

# ಪದದ ಅರ್ಥವಿವರಣೆ:

“ವಿಸ್ಮಯ” ಎನ್ನುವ ಪದವು ಬೆರಗಾಗುವ ಭಾವನೆಯನ್ನು ಮತ್ತು ಅತೀ ದೊಡ್ಡದಾಗಿರುವುದನ್ನು, ಶಕ್ತಿಯುತವಾದದ್ದನ್ನು ಮತ್ತು ಮಹತ್ತರವಾದದ್ದನ್ನು ನೋಡುವುದರಿಂದ ಉಂಟಾಗುವ ಆಳವಾದ ಭಾವನೆಯನ್ನು ಸೂಚಿಸುತ್ತದೆ.

  • “ಭಯಂಕರನು” ಎನ್ನುವ ಪದವು ಭಯದ ಭಾವನೆಯನ್ನಾಗಲಿ ಅಥವಾ ವಿಸ್ಮಯ ಭಾವನೆಯನ್ನಾಗಲಿ ಉಂಟುಮಾಡುವದನ್ನಾಗಲಿ ಅಥವಾ ವ್ಯಕ್ತಿಯನ್ನಾಗಲಿ ವಿವರಿಸುತ್ತದೆ.
  • ಪ್ರವಾದಿ ಯೆಹೆಜ್ಕೇಲನು ಕಂಡ ದೇವರ ಮಹಿಮೆಯ ದರ್ಶನಗಳು “ಭಯಂಕರವಾಗಿದ್ದವು” ಅಥವಾ “ವಿಸ್ಮಯವನ್ನುಂಟುಮಾಡಿದ್ದವು”.
  • ವಿಶಿಷ್ಟವಾದ ಮನುಷ್ಯನ ಸ್ಪಂದನೆಗಳು ದೇವರ ಸನ್ನಿಧಿಯಲ್ಲಿ ವಿಸ್ಮಯವಾಗಿರುತ್ತವೆ, ಅದರಲ್ಲಿ, ಭಯ, ಬಾಗುವುದು ಅಥವಾ ಮೊಣಕಾಲೂರುವುದು, ಮುಖವನ್ನು ಮುಚ್ಚಿಕೊಳ್ಳುವುದು, ಮತ್ತು ಭಯಗೊಳ್ಳುವುದು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಭಯ, ಮಹಿಮೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H366, H1481, H3372, H6206, H7227, G2124

ವೀಕ್ಷಿಸು, ವೀಕ್ಷಿಸುವುದು, ವೀಕ್ಷಿಸಿದೆ, ವೀಕ್ಷಿಸುತ್ತಿರುವುದು, ಕಾವಲುಗಾರ, ಕಾವಲುಗಾರರು, ಎಚ್ಚರವಾಗಿರುವುದು

# ಪದದ ಅರ್ಥವಿವರಣೆ:

“ವೀಕ್ಷಿಸು” ಎನ್ನುವ ಪದಕ್ಕೆ ಯಾವುದಾದರೊಂದನ್ನು ತುಂಬಾ ಹತ್ತಿರವಾಗಿ ಮತ್ತು ಜಾಗೃತಿಯಾಗಿ ನೋಡುವುದು ಎಂದರ್ಥ. ಇದಕ್ಕೆ ಅನೇಕವಾದ ಅಲಂಕಾರಿಕ ಅರ್ಥಗಳು ಇರುತ್ತವೆ. “ಕಾವಲುಗಾರ” ಎಂದರೆ ಪಟ್ಟಣದಲ್ಲಿರುವ ಜನರಿಗೆ ಯಾವ ಅಪಾಯವು ಅಥವಾ ಹಾನಿಯೂ ಉಂಟಾಗದಂತೆ ತನ್ನ ಸುತ್ತಮುತ್ತಲು ತುಂಬಾ ಜಾಗೃತಿಯಾಗಿ ನೋಡುವುದರ ಮೂಲಕ ಪಟ್ಟಣವನ್ನು ಕಾಯುವ ಉದ್ಯೋಗವನ್ನು ಹೊಂದಿರುವ ವ್ಯಕ್ತಿ ಎಂದರ್ಥ.

  • “ನಿನ್ನ ಜೀವನವನ್ನು ನೋಡಿಕೊಂಡು, ಸಿದ್ಧಾಂತೆಯನ್ನು ಹತ್ತಿರವಾಗಿ ನೋಡು” ಎಂದೆನ್ನುವ ಆಜ್ಞೆಗೆ ನಿನ್ನ ಜೀವನವನ್ನು ಜ್ಞಾನದಿಂದ ನಡೆಸಿಕೊ, ಯಾವ ಸುಳ್ಳು ಬೋಧನೆಗಳನ್ನು ನಂಬದಿರು ಎಂದರ್ಥವಾಗಿರುತ್ತದೆ.
  • “ಎಚ್ಚರವಾಗಿರು” ಎನ್ನುವದಕ್ಕೆ ಹಾನಿಯಂಟನ್ನು ಮಾಡುವ ಪ್ರಭಾವದಿಂದ ಅಥವಾ ಅಪಾಯವನ್ನು ತಪ್ಪಿಸಿಕೊಳ್ಳುವುದಕ್ಕೆ ಎಚ್ಚರಿಕೆಯಿಂದಿರುವುದಕ್ಕೆ ಕೊಡುವ ಎಚ್ಚರಿಕೆ ಎಂದರ್ಥ.
  • “ವೀಕ್ಷಿಸು” ಅಥವಾ “ವೀಕ್ಷಿಸುತ್ತಿರು” ಎನ್ನುವ ಪದಕ್ಕೆ ಯಾವಾಗಲೂ ಎಚ್ಚರಿಕೆಯಿಂದಿರು ಮತ್ತು ಪಾಪ ದುಷ್ಟ ಕಾರ್ಯಗಳಿಗೆ ವಿರುದ್ಧವಾಗಿ ನಿನ್ನನ್ನು ಕಾಪಾಡಿಕೋ ಎಂದರ್ಥ. ಇದಕ್ಕೆ “ಸಿದ್ಧವಾಗಿರು” ಎಂದರ್ಥವೂ ಇದೆ.
  • “ಎಲ್ಲಾವುದರ ಮೇಲೆ ಎಚ್ಚರಿಕೆಯಿಂದಿರು” ಅಥವಾ “ತುಂಬಾ ಹತ್ತಿರವಾಗಿದ್ದು ವಿಕ್ಷೀಸುತ್ತಾ ಇರ್ರಿ” ಎನ್ನುವ ಈ ಮಾತುಗಳಿಗೆ ಯಾವುದಾದರೊಂದರ ಕುರಿತಾಗಿ ಅಥವಾ ಯಾರಾದರೊಬ್ಬರ ಕುರಿತಾಗಿ ಜಾಗೃತಿ ತೆಗೆದುಕೋ, ಸಂರಕ್ಷಿಸು, ಕಾಪಾಡು ಎಂದೆನ್ನುವ ಅರ್ಥಗಳಿವೆ.
  • ವೀಕ್ಷಿಸು” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ತುಂಬಾ ಹತ್ತಿರವಾಗಿ ಶ್ರದ್ಧೆಯನ್ನು ಕೊಡು” ಅಥವಾ “ದೃಢಪ್ರಯತ್ನದಿಂದಿರು” ಅಥವಾ “ತುಂಬಾ ಜಾಗೃತಿಯಾಗಿರು” ಅಥವಾ “ಕಾಪಾಡುವುದರಲ್ಲಿರು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • “ಕಾವಲುಗಾರ” ಎನ್ನುವುದಕ್ಕೆ ಇತರ ಪದಗಳು “ರಕ್ಷಣೆ ಕೊಡುವ ಸೈನಿಕ” ಅಥವಾ “ಸಿಬ್ಬಂದಿ” ಎಂದಾಗಿರುತ್ತವೆ.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H821, H2370, H4929, H4931, H5027, H5341, H5894, H6486, H6822, H6836, H6974, H7462, H7789, H7919, H8104, H8108, H8245, G69, G70, G991, G1127, G1492, G2334, G2892, G3525, G3708, G3906, G4337, G4648, G5083, G5438

ವೈಭವ

# ಪದದ ಅರ್ಥವಿವರಣೆ:

“ವೈಭವ” ಎನ್ನುವ ಪದವು ಅತೀ ಹೆಚ್ಚಾದ ಸೌಂದರ್ಯ ಮತ್ತು ಸೊಬಗನ್ನು ಸೂಚಿಸುತ್ತದೆ, ಇದು ಅನೇಕಬಾರಿ ಸಂಪತ್ತು ಮತ್ತು ಶೋಭಾಯಮಾನಗಳೊಂದಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುತ್ತದೆ.

  • ಅನೇಕಬಾರಿ ವೈಭವ ಎನ್ನುವುದು ಅರಸನಿಗೆ ಇರುವ ಸಂಪತ್ತನ್ನು ವಿವರಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ, ಅಥವಾ ತನ್ನ ಬೆಲೆಯುಳ್ಳ ಜೀವನದಲ್ಲಿ, ಸುಂದರವಾದ ಮನಸ್ಸಿನಲ್ಲಿ ಹೇಗೆ ಕಾಣಿಸಿಕೊಲ್ಲುತ್ತಾನೆ ಎನ್ನುವುದನ್ನು ವಿವರಿಸುತ್ತದೆ.
  • “ವೈಭವ” ಎನ್ನುವ ಪದವನ್ನು ಮರಗಳ, ಪರ್ವತಗಳ, ಮತ್ತು ದೇವರು ಸೃಷ್ಟಿ ಮಾಡಿದ ಪ್ರತಿಯೊಂದರ ಸುಂದರವನ್ನು ವಿವರಿಸುವುದಕ್ಕೂ ಉಪಯೋಗಿಸಲ್ಪಟ್ಟಿರುತ್ತದೆ.
  • ನಿರ್ದಿಷ್ಟವಾದ ನಗರಗಳು ತಮ್ಮಲ್ಲಿ ಸಿಗುವ ಸ್ವಾಭಾವಿಕ ಸಂಪನ್ಮೂಲಗಳಿಂದ, ಭವನಗಳನ್ನು ಮತ್ತು ರಹದಾರಿಗಳನ್ನು ನಿರ್ಮಿಸುವುದರಿಂದ, ಶ್ರೀಮಂತಿಕೆಯ ಬಟ್ಟೆಗಳು, ಬಂಗಾರ ಮತ್ತು ಬೆಳ್ಳಿ ಲೋಹಗಳನ್ನು ಒಳಗೊಂಡಿರುವ ಜನರ ಸಂಪತ್ತು ಇರುವದರಿಂದ ಅವುಗಳು ವೈಭವನ್ನು ಪಡೆದುಕೊಂಡಿವೆಯೆಂದು ಹೇಳಲಾಗುತ್ತದೆ.
  • ಸಂದರ್ಭಾನುಸಾರವಾಗಿ, ಈ ಪದವನ್ನು “ಭವ್ಯವಾದ ಸೌಂದರ್ಯ” ಅಥವಾ “ಅದ್ಭುತವಾದ ಘನತೆ” ಅಥವಾ “ಅರಸನ ದೊಡ್ಡತನ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಮಹಿಮೆ, ಅರಸ, ಘನತೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1925, H1926, H1927, H1935, H2091, H2122, H2892, H3314, H3519, H6643, H7613, H8597

ವ್ಯರ್ಥ್ಯ, ವ್ಯರ್ಥವಾಗಿ

# ಅರ್ಥವಿವರಣೆ:

“ವ್ಯರ್ಥ” ಎನ್ನುವ ಪದವು ಯಾವ ಉದ್ಧೇಶವಿಲ್ಲದ್ದು ಅಥವಾ ಯಾವ ಉಪಯೋಗಕ್ಕೆ ಬಾರದದ್ದು ಎಂದರ್ಥ. ವ್ಯರ್ಥ್ಯ ವಿಷಯಗಳು ಖಾಲಿಯಾಗಿರುತ್ತವೆ ಮತ್ತು ಅಯೋಗ್ಯವಾಗಿರುತ್ತವೆ.

  • “ವ್ಯರ್ಥವಾಗಿ” ಎನ್ನುವ ಪದವು ನಿಷ್ಪ್ರಯೋಜಕ ಅಥವಾ ಶೂನ್ಯತೆಯನ್ನು ಸೂಚಿಸುತ್ತದೆ. ಈ ಪದವು ಗರ್ವ ಅಥವಾ ಅಹಂಕಾರವನ್ನೂ ಸೂಚಿಸುತ್ತದೆ.
  • ಹಳೇ ಒಡಂಬಡಿಕೆಯಲ್ಲಿ ವಿಗ್ರಹಗಳು ಬಿಡುಗಡೆ ಕೊಡದ ಅಥವಾ ರಕ್ಷಿಸದ ವ್ಯರ್ಥ ವಸ್ತುಗಳನ್ನಾಗಿ ವಿವರಿಸಲ್ಪಟ್ಟಿವೆ. ಅವು ನಿಷ್ಪ್ರಯೋಜಕವಾಗಿರುತ್ತವೆ ಮತ್ತು ಅವುಗಳಿಂದ ಯಾವ ಉಪಯೋಗವೂ ಇರುವುದಿಲ್ಲ ಅಥವಾ ಅವುಗಳಿಗೆ ಯಾವ ಉದ್ದೇಶವೂ ಇರುವುದಿಲ್ಲ.
  • “ವ್ಯರ್ಥ್ಯವಾಗಿ” ಯಾವುದಾದರೊಂದು ಮಾಡಿದರೆ, ಇದರಿಂದ ಯಾವ ಒಳ್ಳೇಯ ಫಲಿತಾಂಶವು ಉಂಟಾಗುವುದಿಲ್ಲ ಎಂದರ್ಥ. ಪ್ರಯಾಸೆ ಅಥವಾ ಕ್ರಿಯೆ ಎನ್ನುವವು ಯಾವುದನ್ನೂ ಪೂರ್ತಿಯಾಗಿ ಮುಗಿಸುವುದಿಲ್ಲ.
  • “ವ್ಯರ್ಥದಲ್ಲಿ ನಂಬುವುದು” ಎನ್ನುವ ಮಾತಿಗೆ ಸುಳ್ಳಿನ ನಿರೀಕ್ಷೆಯಾಗಿರುವುದರಲ್ಲಿ ಮತ್ತು ನಿಜವಲ್ಲದ ವಿಷಯಗಳಲ್ಲಿ ನಂಬಿಕೆ ಇಡುವುದು ಎಂದರ್ಥ.

# ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ, “ವ್ಯರ್ಥ್ಯ” ಎನ್ನುವ ಮಾತನ್ನು “ಖಾಲಿ” ಅಥವಾ “ನಿರುಪಯೋಗ” ಅಥವಾ “ನಿರೀಕ್ಷೆರಹಿತ” ಅಥವಾ “ಅಯೋಗ್ಯ” ಅಥವಾ “ಅರ್ಥರಹಿತ” ಎಂದೂ ಅನುವಾದ ಮಾಡಬಹುದು.
  • “ವ್ಯರ್ಥದಲ್ಲಿ” ಎನ್ನುವ ಮಾತನ್ನು “ಫಲಿತಾಂಶವಿಲ್ಲದ” ಅಥವಾ “ಫಲವಿಲ್ಲದ” ಅಥವಾ “ಕಾರಣವಿಲ್ಲದ” ಅಥವಾ “ಉದ್ದೇಶವಿಲ್ಲದ” ಎಂದೂ ಅನುವಾದ ಮಾಡಬಹುದು.
  • “ವ್ಯರ್ಥ” ಎನ್ನುವ ಪದವನ್ನು “ಗರ್ವ” ಅಥವಾ “ಯೋಗ್ಯವಲ್ಲದ” ಅಥವಾ “ನಿರೀಕ್ಷೆರಹಿತವಾದ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಸುಳ್ಳು ದೇವರು, ಯೋಗ್ಯ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H205, H1891, H1892, H2600, H3576, H5014, H6754, H7307, H7385, H7386, H7387, H7723, H8193, H8267, H8414, G945, G1432, G1500, G2755, G2756, G2757, G2758, G2761, G3150, G3151, G3152, G3153, G3154, G3155

ಶಂಕುಮರ (ಸೈಪ್ರಿಸ್ ಮರ)

# ಪದದ ಅರ್ಥವಿವರಣೆ

“ಶಂಕುಮರ” ಎನ್ನುವ ಪದವು ಒಂದು ವಿಧವಾದ ತುರಾಯಿ ಮರವಾಗಿದೆ. ಈ ಮರವು ಸತ್ಯವೇದದ ಕಾಲದಲ್ಲಿ ಜನರು ವಾಸಿಸುತ್ತಿದ್ದ ಸ್ಥಳದಲ್ಲಿ ಹೆಚ್ಚಾಗಿ ಬೆಳೆದಿದ್ದವು, ವಿಶೇಷವಾಗಿ ಮೆಡಿಟರೇನಿಯನ್ ಸಮುದ್ರದ ದಡದಲ್ಲಿದ್ದ ದೇಶಗಳಲ್ಲಿ ಹೆಚ್ಚಾಗಿದ್ದವು.

  • ಕುಪ್ರ ಮತ್ತು ಲೆಬನೋನ್ ಎಂಬ ಎರಡು ಪ್ರಾಂತ್ಯಗಳಲ್ಲಿ ಶಂಕುಮರಗಳು ಹೆಚ್ಚಾಗಿವೆ ಎಂದು ಸತ್ಯವೇದದಲ್ಲಿ ವಿಶೇಷವಾಗಿ ಬರೆಯಲ್ಪಟ್ಟಿದೆ
  • ನೋಹ ನಾವೆಯನ್ನು ಕಟ್ಟಲು ಉಪಯೋಗಿಸಿದ ಮರದಲ್ಲಿ ಶಂಕುಮರ ಇದ್ದಿರಬಹುದು.
  • ಯಾಕಂದರೆ ಶಂಕುಮರ ತುಂಬ ದೃಢವಾದದ್ದು ಮತ್ತು ಹೆಚ್ಚಿನ ಬಾಲಿಕೆಯುಳದ್ದು, ನಾವೆಯನ್ನು ಕಟ್ಟಲು ಮತ್ತು ಇತರ ಕಟ್ಟಡಗಳನ್ನು ನಿರ್ಮಿಸಲು ಜನರು ಅದನ್ನು ಉಪಯೋಗಿಸುತ್ತಿದ್ದರು.

(ಈ ಪದಗಳನ್ನು ಸಹ ನೋಡಿರಿ : ನಾವೆ, ಕುಪ್ರ, ತುರಾಯಿ, ಲೆಬನೋನ್)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H8645

ಶಕ್ತಿ, ಶಕ್ತಿಯುಳ್ಳ, ಶಕ್ತಿಶಾಲಿ, ಶಕ್ತಿಯುತವಾಗಿ

# ಪದದ ಅರ್ಥವಿವರಣೆ:

“ಶಕ್ತಿಯುಳ್ಳ” ಮತ್ತು “ಶಕ್ತಿ” ಎನ್ನುವ ಪದಗಳು ಹೆಚ್ಚಿನ ಬಲವನ್ನು ಅಥವಾ ಶಕ್ತಿಯನ್ನು ಹೊಂದಿಕೊಂಡಿರುವುದನ್ನು ಸೂಚಿಸುತ್ತದೆ.

  • “ಶಕ್ತಿ” ಎನ್ನುವ ಪದವು ಅನೇಕಬಾರಿ “ಬಲ” ಎನ್ನುವ ಇನ್ನೊಂದು ಪದವನ್ನು ಸೂಚಿಸುತ್ತದೆ. ದೇವರ ಕುರಿತಾಗಿ ಮಾತನಾಡುವಾಗ, ಇದು “ಶಕ್ತಿ” ಎಂಬುದಾಗಿ ಸೂಚಿಸಲ್ಪಡುತ್ತದೆ.
  • “ಶಕ್ತಿಯುಳ್ಳ ಮನುಷ್ಯರು” ಎನ್ನುವ ಮಾತು ಅನೇಕಸಲ ಯುದ್ಧದಲ್ಲಿ ಜಯವನ್ನು ಹೊಂದಿದ ಮತ್ತು ಧೈರ್ಯವನ್ನು ಪಡೆದ ಮನುಷ್ಯರನ್ನು ಸೂಚಿಸುತ್ತದೆ. ದಾವೀದನನ್ನು ಸಂರಕ್ಷಿಸಲು ಸಹಾಯ ಮಾಡಿದ ಆತನ ನಂಬಿಗಸ್ತ ಗುಂಪಿನ ಜನರನ್ನು ಅನೇಕಸಲ “ಶಕ್ತಿಯುಳ್ಳ ಮನುಷ್ಯರು” ಎಂದು ಕರೆಯಲ್ಪಟ್ಟಿದ್ದರು.
  • ದೇವರನ್ನು ಕೂಡ “ಶಕ್ತಿಯುಳ್ಳವರೆಂದು” ಸೂಚಿಸಲ್ಪಟ್ಟಿದ್ದಾರೆ.
  • “ಶಕ್ತಿಯುಳ್ಳ ಕಾರ್ಯಗಳು” ಎನ್ನುವ ಮಾತು ಸಹಜವಾಗಿ ದೇವರು ಮಾಡಿದ ಅನೇಕ ಅದ್ಭುತ ಕಾರ್ಯಗಳನ್ನು, ವಿಶೇಷವಾಗಿ ಆಶ್ಚರ್ಯ ಕಾರ್ಯಗಳನ್ನು ಸೂಚಿಸುತ್ತದೆ.
  • ಈ ಪದವು “ಸರ್ವಶಕ್ತಿಯುಳ್ಳ” ಎನ್ನುವ ಪದಕ್ಕೆ ಸಂಬಂಧಪಟ್ಟಿರುತ್ತದೆ, ಇದು ಸಾಧಾರಣವಾಗಿ ದೇವರನ್ನು ಮಾತ್ರವೇ ವಿವರಿಸುವ ಪದವಾಗಿರುತ್ತದೆ, ಈ ಪದಕ್ಕೆ ಆತನಿಗೆ ಸಂಪೂರ್ಣ ಶಕ್ತಿಯಿದೆ ಎಂದರ್ಥ.

# ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ, “ಶಕ್ತಿಯುಳ್ಳ” ಎನ್ನುವ ಪದವನ್ನು “ಬಲವುಳ್ಳ” ಅಥವಾ “ಅದ್ಭುತವಾಗಿ” ಅಥವಾ “ತುಂಬಾ ಹೆಚ್ಚಿನ ಬಲವುಳ್ಳ” ಎಂದೂ ಅನುವಾದ ಮಾಡಬಹುದು.
  • “ಆತನ ಶಕ್ತಿ” ಎನ್ನುವ ಮಾತು “ಆತನ ಬಲ” ಅಥವಾ “ಆತನ ಅಧಿಕಾರ” ಎಂದೂ ಅನುವಾದ ಮಾಡಬಹುದು.
  • ಅಪೊಸ್ತಲರ ಕೃತ್ಯ 7ನೇ ಅಧ್ಯಾಯದಲ್ಲಿ ಮೋಶೆಯನ್ನು “ಮಾತಿನಲ್ಲಿಯು ಮತ್ತು ಕ್ರಿಯೆಗಳಲ್ಲಿಯೂ ಶಕ್ತಿಯನ್ನು” ಹೊಂದಿದ ಮನುಷ್ಯನೆಂದು ವಿವರಿಸಲ್ಪಟ್ಟಿದೆ. ಈ ಮಾತನ್ನು “ಮೋಶೆ ದೇವರಿಂದ ಬಂದಿರುವ ಶಕ್ತಿಯುಳ್ಳ ಮಾತುಗಳನ್ನು ಮಾತನಾಡಿದ್ದಾನೆ ಮತ್ತು ಅನೇಕವಾದ ಅದ್ಭುತ ಕಾರ್ಯಗಳನ್ನು ಮಾಡಿದ್ದಾನೆ” ಅಥವಾ “ಮೋಶೆ ದೇವರ ವಾಕ್ಯವನ್ನು ಶಕ್ತಿಯುತವಾಗಿ ಮಾತನಾಡಿದನು ಮತ್ತು ಅನೇಕ ಅದ್ಭುತ ಕಾರ್ಯಗಳನ್ನು ಮಾಡಿದನು” ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಗುಣವಾಗಿ, “ಶಕ್ತಿಯುಳ್ಳ ಕಾರ್ಯಗಳು” ಎನ್ನುವ ಮಾತನ್ನು “ದೇವರು ಮಾಡಿದ ಅದ್ಭುತ ಕಾರ್ಯಗಳು” ಅಥವಾ “ಆಶ್ಚರ್ಯ ಕಾರ್ಯಗಳು” ಅಥವಾ “ದೇವರು ಶಕ್ತಿಯುತವಾಗಿ ಮಾಡುವ ಕಾರ್ಯಗಳು” ಎಂದೂ ಅನುವಾದ ಮಾಡಬಹುದು.
  • “ಶಕ್ತಿ” ಎನ್ನುವ ಪದವನ್ನು “ಬಲ” ಅಥವಾ “ಅಧಿಕ ಬಲ” ಎಂದೂ ಅನುವಾದ ಮಾಡಬಹುದು.
  • ಆಂಗ್ಲ ಭಾಷೆಯಲ್ಲಿ "It might rain" (“ಇಟ್ ಮೈಟ್ ರೇನ್”) ಎಂದು ಹೇಳುವ ಮಾತಿನಲ್ಲಿರುವ ಮೈಟ್ ಎನ್ನುವ ಪದದೊಂದಿಗೆ ಈ ಪದವು ಗೊಂದಲಪಡಿಸಬಾರದು.

(ಈ ಪದಗಳನ್ನು ಸಹ ನೋಡಿರಿ : ಸರ್ವಶಕ್ತಿಯುಳ್ಳ, ಆಶ್ಚರ್ಯ, ಶಕ್ತಿ, ಬಲ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H46, H47, H117, H193, H202, H352, H386, H410, H430, H533, H650, H1219, H1368, H1369, H1370, H1396, H1397, H1401, H1419, H2220, H2389, H2394, H2428, H3201, H3524, H3581, H3966, H4101, H5794, H5797, H5807, H5868, H6099, H6105, H6108, H6184, H6697, H6743, H7227, H7580, H7989, H8623, H8624, H8632, G972, G1411, G1413, G1414, G1415, G1498, G1752, G1754, G2159, G2478, G2479, G2900, G2904, G3168, G3173, G5082

ಶಮೆದಮೆ, ಶಮೆದಮೆ ಹೊಂದಿದೆ, ಸ್ವಯಂ ಶಮೆದಮೆ

# ಪದದ ಅರ್ಥವಿವರಣೆ:

ಶಮೆದಮೆ ಎಂದರೆ ಪಾಪವನ್ನು ಮಾಡದಂತೆ ಒಬ್ಬರ ನಡತೆಯನ್ನು ನಿಯಂತ್ರಿಸುವ ಸಾಮರ್ಥ್ಯವಾಗಿರುತ್ತದೆ.

  • ಇದು ಒಳ್ಳೇಯ ನಡತೆಯನ್ನು ಸೂಚಿಸುತ್ತದೆ, ಹೇಗೆಂದರೆ ಪಾಪ ಸ್ವಭಾವದ ಆಲೋಚನೆಗಳನ್ನು, ಮಾತುಗಳನ್ನು ಮತ್ತು ಕ್ರಿಯೆಗಳನ್ನು ಮಾಡದಂತೆ ಸಹಾಯ ಮಾಡುತ್ತದೆ.
  • ಶಮೆದಮೆ ಎನ್ನುವುದು ಪವಿತ್ರಾತ್ಮನು ಕ್ರೈಸ್ತರಿಗೆ ಅನುಗ್ರಹಿಸುವ ಫಲವಾಗಿರುತ್ತದೆ ಅಥವಾ ಗುಣಲಕ್ಷಣವಾಗಿರುತ್ತದೆ.
  • ಶಮೆದಮೆಯನ್ನು ಉಪಯೋಗಿಸುವ ವ್ಯಕ್ತಿ ತಾನು ಮಾಡಬೇಕಿಂದಿರುವ ಪಾಪವನ್ನು ಮಾಡದೇ ತನ್ನನ್ನು ತಾನು ನಿಯಂತ್ರಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾನೆ. ಒಬ್ಬ ವ್ಯಕ್ತಿ ಶಮೆದಮೆಯನ್ನು ಹೊಂದಿಕೊಳ್ಳಲು ದೇವರೊಬ್ಬನೇ ಬಲಪಡಿಸುವವನಾಗಿರುತ್ತಾನೆ.

(ಈ ಪದಗಳನ್ನು ಸಹ ನೋಡಿರಿ : ಫಲ, ಪವಿತ್ರಾತ್ಮ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H4623, H7307, G192, G193, G1466, G1467, G1468, G4997

ಶಾಸನ, ಶಾಸನಗಳು

# ಪದದ ಅರ್ಥವಿವರಣೆ:

ಶಾಸನ ಎನ್ನುವುದು ಜನರು ಹೇಗೆ ಜೀವಿಸಬೇಕೆನ್ನುವುದರ ಕುರಿತಾಗಿ ಮಾರ್ಗದರ್ಶನವನ್ನು ಕೊಡುವ ವಿಶೇಷವಾಗಿ ಬರೆದುಕೊಂಡಿರುವ ಕಾನೂನುಕ್ರಮವಾಗಿರುತ್ತದೆ.

  • “ಶಾಸನ” ಎನ್ನುವ ಪದವು “ನಿಯಮ” ಮತ್ತು “ಆಜ್ಞೆ” ಮತ್ತು “ಕಾನೂನು” ಮತ್ತು “ಕಟ್ಟಳೆ” ಎನ್ನುವ ಪದಗಳಿಗೆ ಇರುವ ಅರ್ಥಗಳಿಗೆ ಸಮಾನಾಂತರವಾಗಿ ಇರುತ್ತದೆ. ಜನರಿಗೆ ಕೊಡುವದಕ್ಕೆ ದೇವರು ತನ್ನ ಪಾಲಕರಿಗೆ ಅಥವಾ ಜನರಿಗೆ ಕೊಟ್ಟಿರುವ ಅಗತ್ಯತೆಗಳನ್ನು ಮತ್ತು ಸೂಚನೆಗಳನ್ನು ಈ ಪದಗಳೆಲ್ಲವೂ ಒಳಗೊಂಡಿರುತ್ತವೆ.
  • ಅರಸನಾದ ದಾವೀದನು ಯೆಹೋವನ ಶಾಸನಗಳಲ್ಲಿ ಆನಂದಪಟ್ಟಿದ್ದಾನೆಂದು ಆತನು ಹೇಳಿಕೊಂಡಿದ್ದಾನೆ.
  • “ಶಾಸನ” ಎನ್ನುವ ಪದವನ್ನು “ವಿಶೇಷವಾದ ಆಜ್ಞೆ” ಅಥವಾ “ವಿಶೇಷವಾದ ಕಟ್ಟಳೆ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಆಜ್ಞೆ, ಕಟ್ಟಳೆ, ಕಾನೂನು, ನಿಯಮ, ಯೆಹೋವ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2706, H2708, H6490, H7010

ಶಿಕ್ಷಿಸು, ಶಿಕ್ಷಿಸುವುದು, ಶಿಕ್ಷಿಸಿದೆ, ಶಿಕ್ಷಿಸುತ್ತಾ ಇರುವುದು, ಶಿಕ್ಷೆ, ಶಿಕ್ಷಿಸದಿರುವುದು

# ಪದದ ಅರ್ಥವಿವರಣೆ:

“ಶಿಕ್ಷಿಸು” ಎನ್ನುವ ಪದಕ್ಕೆ ಎನಾದಾರೊಂದು ತಪ್ಪು ಮಾಡಿದ್ದಕ್ಕಾಗಿ ನಕಾರಾತ್ಮಕವಾದ ಪರಿಣಾಮವನ್ನು ಹೊಂದುವಂತೆ ಯಾರಾದರೊಬ್ಬರನ್ನು ಗುರಿ ಮಾಡುವುದು ಎಂದರ್ಥ. “ಶಿಕ್ಷೆ” ಎನ್ನುವ ಪದವು ತಪ್ಪು ನಡತೆಗೆ ಫಲವಾಗಿ ಕೊಡುವ ನಕಾರಾತ್ಮಕವಾದ ಪರಿಣಾಮವನ್ನು ಸೂಚಿಸುತ್ತದೆ.

  • ಅನೇಕಬಾರಿ ಶಿಕ್ಷೆ ಎನ್ನುವುದು ಒಬ್ಬ ವ್ಯಕ್ತಿ ಪಾಪವನ್ನು ಮಾಡದಂತೆ ಪ್ರೇರೇಪಿಸುವುದಕ್ಕೆ ಉದ್ದೇಶಿಸಲಾಗಿರುತ್ತದೆ.
  • ಇಸ್ರಾಯೇಲ್ಯರು ದೇವರಿಗೆ ಅವಿಧೇಯರಾದಾಗ ಆತನು ಅವರನ್ನು ಶಿಕ್ಷಿಸಿದನು, ವಿಶೇಷವಾಗಿ ಅವರು ಸುಳ್ಳು ದೇವರುಗಳಿಗೆ ಆರಾಧನೆ ಮಾಡಿದಾಗ ಹೆಚ್ಚಾಗಿ ಶಿಕ್ಷಿಸಿದರು. ಅವರ ಪಾಪದ ಕಾರಣದಿಂದ ಅವರ ಮೇಲೆ ಧಾಳಿ ಮಾಡಿ, ಅವರನ್ನು ಸೆರೆಗೊಯ್ಯುವುದಕ್ಕೆ ದೇವರು ಅವರ ಶತ್ರುಗಳಿಗೆ ಅನುಮತಿ ಕೊಟ್ಟನು.
  • ದೇವರು ನೀತಿವಂತನು ಮತ್ತು ನ್ಯಾಯವಂತನು, ಆದ್ದರಿಂದ ಆತನು ತಪ್ಪದೇ ಪಾಪವನ್ನು ಶಿಕ್ಷಿಸಲೇ ಬೇಕು. ಪ್ರತಿಯೊಬ್ಬ ಮನುಷ್ಯನು ದೇವರಿಗೆ ವಿರುದ್ಧವಾಗಿ ಪಾಪ ಮಾಡಿದ್ದಾನೆ ಮತ್ತು ಶಿಕ್ಷಿಗೆ ಅರ್ಹನಾಗಿದ್ದಾನೆ.
  • ಪ್ರತಿಯೊಬ್ಬ ಮನುಷ್ಯನು ಮಾಡಿದ ದುಷ್ಟ ಕಾರ್ಯಗಳಿಗೋಸ್ಕರ ಯೇಸುವು ಶಿಕ್ಷೆಯನ್ನು ಅನುಭವಿಸಿದ್ದಾನೆ. ಆತನು ಯಾವ ಪಾಪವೂ ಮಾಡದಿದ್ದರೂ, ಯಾವ ಶಿಕ್ಷೆಗೂ ಅರ್ಹನಾಗದಿದ್ದರೂ ಪ್ರತಿಯೊಬ್ಬರ ಶಿಕ್ಷೆಯನ್ನು ತನ್ನ ಮೇಲೆ ಹಾಕಿಕೊಂಡನು.
  • “ಶಿಕ್ಷೆಯಿಲ್ಲದಂತೆ ಹೋಗು” ಮತ್ತು “ಶಿಕ್ಷೆಯಿಲ್ಲದಂತೆ ಬಿಡು” ಎನ್ನುವ ಮಾತುಗಳಿಗೆ ಜನರು ಮಾಡಿದ ತಪ್ಪು ಕಾರ್ಯಗಳಿಗೆ ಅವರನ್ನು ಶಿಕ್ಷಿಸಬಾರದೆಂದು ನಿರ್ಣಯಿಸಿಕೊಳ್ಳುವುದು ಎಂದರ್ಥ. ದೇವರು ತನ್ನ ಜನರು ಪಶ್ಚಾತ್ತಾಪಪಡಬೇಕೆಂದು ಎದುರುನೋಡುತ್ತಾ ಇರುವಾಗ ಪಾಪವು ಶಿಕ್ಷೆ ಹೊಂದದಂತೆ ಹೋಗುವುದಕ್ಕೆ ಆತನು ಅನೇಕಬಾರಿ ಪಾಪಕ್ಕೆ ಅನುಮತಿ ಕೊಡುತ್ತಾನೆ.

(ಈ ಪದಗಳನ್ನು ಸಹ ನೋಡಿರಿ : ನ್ಯಾಯ, ಪಶ್ಚಾತ್ತಾಪ, ನೀತಿ, ಪಾಪ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಉದಾಹರಣೆಗಳು:

  • 13:07 ಅನುಸರಿಸುವುದಕ್ಕೆ ದೇವರು ಅನೇಕವಾದ ನಿಯಮಗಳನ್ನು ಮತ್ತು ಆಜ್ಞೆಗಳನ್ನು ಕೂಡ ಕೊಟ್ಟಿದ್ದಾರೆ. ಈ ಆಜ್ಞೆಗಳಿಗೆ ಜನರು ವಿಧೇಯರಾದರೆ, ಆತನು ಅವರನ್ನು ಆಶೀರ್ವಾದ ಮಾಡುತ್ತೇನೆಂದು ಮತ್ತು ಅವರನ್ನು ಸಂರಕ್ಷಿಸುತ್ತಾನೆಂದು ದೇವರು ವಾಗ್ಧಾನ ಮಾಡಿದ್ದಾರೆ. ಒಂದುವೇಳೆ ಅವರು ಅವಿಧೇಯರಾದರೆ, ದೇವರು ಅವರನ್ನು ___ ಶಿಕ್ಷಿಸುತ್ತಾನೆ ____.
  • 16:02 ಇಸ್ರಾಯೇಲ್ಯರು ದೇವರಿಗೆ ಅವಿಧೇಯರಾಗುತ್ತಾ ಬಂದಿದ್ದ ಕಾರಣದಿಂದ, ಅವರನ್ನು ಸೋಲಿಸುವುದಕ್ಕೆ ಅವರ ಶತ್ರುಗಳನ್ನು ಅನುಮತಿಸುವುದರ ಮೂಲಕ ಆತನು ಅವರನ್ನು ___ ಶಿಕ್ಷಿಸಿದ್ದಾನೆ ___.
  • 19:16 ಜನರು ದುಷ್ಟ ಕಾರ್ಯಗಳನ್ನು ಮಾಡುವುದನ್ನು ಬಿಟ್ಟು, ದೇವರಿಗೆ ವಿಧೇಯರಾಗುವುದಕ್ಕೆ ಆರಂಭಿಸದಿದ್ದರೆ, ದೇವರು ಅವರನ್ನು ಅಪರಾಧಿಗಳೆಂದು ತೀರ್ಪು ಮಾಡಿ, ಆತನು ಅವರನ್ನು ___ ಶಿಕ್ಷಿಸುತ್ತಾನೆ ___ ಎಂದು ಪ್ರವಾದಿಗಳು ಜನರನ್ನು ಎಚ್ಚರಿಸಿದರು.
  • 48:06 ಯೇಸು ಪರಿಪೂರ್ಣನಾದ ಮಹಾ ಯಾಜಕನಾಗಿದ್ದಾನೆ, ಯಾಕಂದರೆ ಪ್ರತಿಯೊಬ್ಬನು ಮಾಡಿದ ಪ್ರತಿಯೊಂದು ಪಾಪಕ್ಕಾಗಿ ಆತನು ___ ಶಿಕ್ಷೆಯನ್ನು ___ ಪಡೆದುಕೊಂಡನು.
  • 48:10 ಯೇಸುವಿನಲ್ಲಿ ಯಾರಾದಾರು ನಂಬಿದಾಗ, ಯೇಸುವಿನ ರಕ್ತವು ಆ ವ್ಯಕ್ತಿ ಮಾಡಿದ ಪಾಪವನ್ನು ತೆಗೆದು ಹಾಕುವುದು, ಮತ್ತು ದೇವರ __ ಶಿಕ್ಷೆಯು ___ ಅವನ ಮೇಲೆ ಇರುವುದಿಲ್ಲ.
  • 49:09 ಆದರೆ ದೇವರು ತನ್ನ ಒಬ್ಬನೇ ಮಗನನ್ನು ಕೊಡುವಷ್ಟು ಹೆಚ್ಚಾಗಿ ಲೋಕದಲ್ಲಿರುವ ಪ್ರತಿಯೊಬ್ಬರನ್ನು ಪ್ರೀತಿಸಿದ್ದಾನೆ. ಆದ್ದರಿಂದ ಯೇಸುವಿನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬರು ತಮ್ಮ ಪಾಪಗಳಿಗೆ ___ ಶಿಕ್ಷೆಯನ್ನು ___ ಹೊಂದಿಕೊಳ್ಳದೆ, ದೇವರೊಂದಿಗೆ ನಿತ್ಯವೂ ಜೀವಿಸುತ್ತಾರೆ.
  • 49:11 ಯೇಸು ಪಾಪ ಮಾಡಲಿಲ್ಲ, ಆದರೆ ಆತನು ___ ಶಿಕ್ಷೆಯನ್ನು ___ ಅನುಭವಿಸುವುದಕ್ಕೆ ಆಯ್ಕೆ ಮಾಡಿಕೊಂಡನು ಮತ್ತು ಲೋಕದಲ್ಲಿ ಪ್ರತಿಯೊಬ್ಬರ ಪಾಪಗಳನ್ನು ತೆಗೆದು ಹಾಕಲು ಮತ್ತು ನಿಮ್ಮ ಪಾಪಗಳನ್ನು ತೆಗೆದು ಹಾಕಲು ಆತನು ತನ್ನನ್ನು ಪರಿಪೂರ್ಣವಾದ ಯಜ್ಞವನ್ನಾಗಿ ಅರ್ಪಿಸಿಕೊಂಡಿದ್ದಾನೆ.

# ಪದ ಡೇಟಾ:

  • Strong's: H3027, H3256, H4148, H4941, H5221, H5414, H6031, H6064, H6213, H6485, H7999, H8199, G1349, G1556, G1557, G2849, G3811, G5097

ಶೋಕಿಸು, ದುಃಖಿಸುತ್ತಾನೆ, ಪ್ರಲಾಪಿಸಿದೆ, ಪ್ರಲಾಪಿಸುವುದು, ದುಃಖಿಸುವನು, ದುಃಖಿಸುವವರು, ದುಃಖಭರಿತ, ದುಃಖಭರಿತವಾಗಿ

# ಸತ್ಯಾಂಶಗಳು:

“ಶೋಕಿಸು” ಮತ್ತು “ಪ್ರಲಾಪಿಸುವುದು” ಎನ್ನುವ ಪದಗಳು ಆಳವಾದ ಕೊರಗನ್ನು ಸೂಚಿಸುತ್ತದೆ, ಸಾಧಾರಣವಾಗಿ ಒಬ್ಬರ ಮರಣಕ್ಕೆ ಪ್ರತಿಸ್ಪಂದನೆಯಾಗಿ ತೋರಿಸುವ ಮನೋಭಾವವಾಗಿರುತ್ತದೆ.

  • ಅನೇಕ ಸಂಸ್ಕೃತಿಗಳಲ್ಲಿ ಪ್ರಲಾಪಿಸುವುದೆನ್ನುವುದು ಈ ಬಾಧೆಯನ್ನು ಮತ್ತು ಕೊರಗನ್ನು ತೋರಿಸುಕೊಳ್ಳುವ ನಿರ್ಧಿಷ್ಟವಾದ ಬಾಹ್ಯ ವರ್ತನೆಗಳಾಗಿರುತ್ತವೆ.
  • ಇಸ್ರಾಯೇಲ್ಯರು ಮತ್ತು ಪುರಾತನ ಕಾಲಗಳಲ್ಲಿರುವ ಇತರ ಗುಂಪುಗಳು ಈ ಪ್ರಲಾಪವನ್ನು ಜೋರಾಗಿ ಅಳುತ್ತಾ ಮತ್ತು ದುಃಖಿಸುತ್ತಾ ವ್ಯಕ್ತಪಡಿಸುತ್ತಾರೆ. ಅವರು ಗೋಣಿ ತಟ್ಟುಗಳನ್ನು ಧರಿಸಿಕೊಂಡು, ಅವರ ಮೇಲೆ ಬೂದಿಯನ್ನು ಹಾಕಿಕೊಳ್ಳುತ್ತಿದ್ದರು.
  • ಸಾಧಾರಣವಾಗಿ ಬಾಡಿಗೆಗೆ ಕರೆ ಕಳುಹಿಸಲ್ಪಟ್ಟ ಪ್ರಲಾಪಿಸುವವರು ತಮ್ಮ ಮುಂದಿರುವ ಶವವನ್ನು ಸಮಾಧಿಯೊಳಗೆ ಇಡುವುದಕ್ಕೆ ತೆಗೆದುಕೊಂಡು ಹೋಗುವವರೆಗೂ ಜೋರಾಗಿ ಅಳುತ್ತಾ, ದುಃಖಿಸುತ್ತಾ ಇರುತ್ತಾರೆ.
  • ಪ್ರಲಾಪಿಸುವ ಕಾಲಾವಧಿಯು ಏಳು ದಿನಗಳು ಇರುತ್ತಿತ್ತು, ಹೆಚ್ಚಾದರೆ ಮೂವತ್ತು ದಿನಗಳವರೆಗೆ ಪ್ರಲಾಪಿಸುತ್ತಿದ್ದರು (ಮೋಶೆ ಮತ್ತು ಆರೋನನ ಕುರಿತಾಗಿ ದುಃಖಪಟ್ಟಿದ್ದರು) ಅಥವಾ ಇನ್ನೂ ಹೆಚ್ಚಂದರೆ ಎಪ್ಪತ್ತು ದಿನಗಳು ಅಳುತ್ತಿದ್ದರು (ಯಾಕೋಬಿನಗಾಗಿ ದುಃಖಪಟ್ಟಿದ್ದರು).
  • ಪಾಪದ ಕಾರಣದಿಂದ “ಪ್ರಲಾಪಿಸುವುದರ” ಕುರಿತಾಗಿ ಮಾತನಾಡುವುದಕ್ಕೆ ಸತ್ಯವೇದವು ಅಲಂಕಾರಿಕ ಪದವನ್ನು ಉಪಯೋಗಿಸುತ್ತಿತ್ತು. ಪಾಪವು ದೇವರನ್ನು ಮತ್ತು ಜನರನ್ನು ನೋಯಿಸಿರುವ ಕಾರಣದಿಂದ ಇದು ತುಂಬಾ ಹೆಚ್ಚಾದ ಕೊರಗುಪಡುವುದನ್ನು ಸೂಚಿಸುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಗೋಣಿ ತಟ್ಟು, ಪಾಪ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H56, H57, H60, H205, H578, H584, H585, H1058, H1065, H1068, H1669, H1671, H1897, H1899, H1993, H4553, H4798, H5092, H5098, H5110, H5594, H6937, H6941, H6969, H7300, H8386, G2354, G2875, G3602, G3996, G3997

ಶ್ರಮೆ, ಶ್ರಮೆಗಳು, ಶ್ರಮೆ ಪಟ್ಟಿದೆ, ಕಾರ್ಮಿಕ, ಕಾರ್ಮಿಕರು

# ಪದದ ಅರ್ಥವಿವರಣೆ:

“ಶ್ರಮೆ” ಎನ್ನುವ ಪದವು ಯಾವುದೇ ಒಂದು ಕೆಲಸದಲ್ಲಿ ಹೆಚ್ಚಾಗಿ ಕಷ್ಟಪಡುವುದನ್ನು ಸೂಚಿಸುತ್ತದೆ.

  • ಸಾಧಾರಣವಾಗಿ, ಶಕ್ತಿಯನ್ನು ಉಪಯೋಗಿಸಿಕೊಳ್ಳುವ ಯಾವುದೇ ಒಂದು ಕೆಲಸ ಕಾರ್ಯವನ್ನು ಶ್ರಮೆ ಎನ್ನುತ್ತಾರೆ. ಈ ಪದವು ಕೊಟ್ಟ ಕೆಲಸವು ತುಂಬಾ ಕಠಿಣವಾಗಿರುತ್ತದೆ ಎನ್ನುವುದನ್ನು ಅನೇಕಸಾರಿ ತೋರಿಸುತ್ತದೆ.
  • ಯಾವುದೇ ರೀತಿಯ ಶ್ರಮೆಯನ್ನು ಮಾಡುವ ಒಬ್ಬ ವ್ಯಕ್ತಿಯನ್ನು ಕಾರ್ಮಿಕ ಎನ್ನುತ್ತಾರೆ.
  • ಆಂಗ್ಲ ಭಾಷೆಯಲ್ಲಿ “ಶ್ರಮೆ (ಅಥವಾ ಲೇಬರ್)” ಎನ್ನುವ ಪದವನ್ನು ಜನನ ಕೊಡುವ ವಿಧಾನದ ಭಾಗದಲ್ಲಿ ಉಪಯೋಗಿಸುತ್ತಾರೆ. ಈ ಸಂದರ್ಭಕ್ಕೆ ಇತರ ಭಾಷೆಗಳಲ್ಲಿ ಸಂಪೂರ್ಣವಾಗಿ ಬೇರೆ ಬೇರೆ ಪದಗಳನ್ನು ಉಪಯೋಗಿಸುತ್ತಾರೆ.
  • “ಶ್ರಮೆ” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನದಲ್ಲಿ “ಕೆಲಸ” ಅಥವಾ “ಕಠಿಣ ಕೆಲಸ” ಅಥವಾ “ಕಷ್ಟಕರವಾದ ಕೆಲಸ” ಅಥವಾ “ಕೆಲಸವನ್ನು ಹೆಚ್ಚಾಗಿ ಮಾಡುವುದು” ಎನ್ನುವ ಪದಗಳು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಕಠಿಣ, ಪ್ರಸವ ವೇದನೆಗಳು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H213, H3018, H3021, H3022, H3023, H3205, H5447, H4522, H4639, H5445, H5647, H5656, H5998, H5999, H6001, H6089, H6468, H6635, G75, G2038, G2040, G2041, G2872, G2873, G4704, G4866, G4904, G5389

ಸಂಕಟ, ಸಂಕಟಗಳು, ಸಂಕಟಪಟ್ಟಿದೆ, ಸಂಕಟಪಡುವುದು, ಸಂಕಟಗಾರ, ಸಂಕಟ ಕೊಡು

# ಪದದ ಅರ್ಥವಿವರಣೆ:

“ಸಂಕಟ” ಎನ್ನುವುದು ಅತೀ ಹೆಚ್ಚಾದ ನೋವನ್ನು ಮತ್ತು ಕಷ್ಟವನ್ನು ಹೊಂದುತ್ತಿರುವ ಜೀವನದಲ್ಲಿ ಒಂದು ಅನುಭವವಾಗಿರುತ್ತದೆ. ಒಬ್ಬ ವ್ಯಕ್ತಿಗೆ “ಸಂಕಟ” ಕೊಡು ಎಂದರೆ ಆ ವ್ಯಕ್ತಿಯನ್ನು “ಬಾಧೆಗೆ’ ಒಳಗಾಗಿಸು ಅಥವಾ ಯಾರಾದರೊಬ್ಬರು ಯಾತನೆಪಡುವಂತೆ ಮಾಡು ಎಂದರ್ಥವಾಗಿರುತ್ತದೆ. “ಸಂಕಟಪಡು” ಎನ್ನುವ ಪದಕ್ಕೆ ಯಾವುದಾದರೊಂದರ ಕುರಿತಾಗಿ ಯಾತನೆಪಡುವುದು ಅಥವಾ ಕುಗ್ಗಿ ಹೋಗುವ ಭಾವನೆಯನ್ನು ಹೊಂದಿರುವುದು ಎಂದರ್ಥ.

  • ಸಂಕಟಗಳು ಒಬ್ಬ ವ್ಯಕ್ತಿಯನ್ನು ನೋಯಿಸುವ ಭೌತಿಕ, ಮಾನಸಿಕ, ಅಥವಾ ಆತ್ಮೀಯ ಸಂಗತಿಗಳಾಗಿರಬಹುದು.
  • ಸತ್ಯವೇದದಲ್ಲಿ ಅನೇಕಬಾರಿ ಸಂಕಟಗಳು ವಿಶ್ವಾಸಿಗಳು ತಮ್ಮ ನಂಬಿಕೆಯಲ್ಲಿ ಬೆಳೆಯುವುದಕ್ಕೆ ಮತ್ತು ಪರಿಪಕ್ವವುಳ್ಳವರಾಗಿರುವುದಕ್ಕೆ ಸಹಾಯ ಮಾಡಲು ದೇವರು ಉಪಯೋಗಿಸುವ ಪರೀಕ್ಷೆಯ ಸಮಯಗಳಾಗಿರುತ್ತವೆ.
  • ಹಳೇ ಒಡಂಬಡಿಕೇ ಉಪಯೋಗಿಸುವ “ಸಂಕಟ” ಎನ್ನುವ ಪದವು ದೇವರನ್ನು ತಿರಸ್ಕರಿಸಿದ ಮತ್ತು ನೈತಿಕವಾಗಿ ಕೆಟ್ಟುಹೋಗಿರುವ ಜನರ ಗುಂಪುಗಳ ಮೇಲೆ ಬಂದಿರುವ ತೀರ್ಪನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ.

# ಅನುವಾದ ಸಲಹೆಗಳು:

  • “ಸಂಕಟ” ಅಥವಾ “ಸಂಕಟಗಳು” ಎನ್ನುವ ಪದವು “ಅಪಾಯ” ಅಥವಾ “ನಡೆದ ನೋವಿನ ವಿಷಯಗಳು” ಅಥವಾ “ಹಿಂಸೆ” ಅಥವಾ “ಕಷ್ಟಕರವಾದ ಅನುಭವಗಳು” ಅಥವಾ “ಯಾತನೆ” ಎಂದೂ ಅನುವಾದ ಮಾಡಬಹುದು.
  • “ಸಂಕಟ ಹೊಂದಿದೆ” ಎನ್ನುವ ಪದವು “ಯಾತನೆಯಿಂದ ಹಾದುಹೋಗುವುದು” ಅಥವಾ “ಭಯಾನಕವಾದ ಯಾತನೆಯನ್ನು ಭಾವಿಸುವುದು” ಅಥವಾ “ಚಿಂತಿಸುವುದು” ಅಥವಾ “ಕಳವಳ” ಅಥವಾ “ಯಾತನೆಪಟ್ಟಿದೆ” ಅಥವಾ “ಭಯಭೀತಿಗೊಳಗಾದೆ” ಅಥವಾ “ತೊಂದರೆ ಮಾಡಿದೆ” ಎಂದು ಅರ್ಥಗಳು ಕೊಡುವ ಮಾತುಗಳನ್ನು ಅಥವಾ ಪದಗಳನ್ನು ಉಪಯೋಗಿಸಿ ಅನುವಾದ ಮಾಡಬಹುದು.
  • “ಆಕೆಗೆ ಸಂಕಟ ಕೊಡಬೇಡ” ಎನ್ನುವ ಮಾತನ್ನು “ಆಕೆಯನ್ನು ಬಾಧಿಸಬೇಡ” ಅಥವಾ “ಆಕೆಯನ್ನು ವಿಮರ್ಶಿಸಬೇಡ” ಎಂದೂ ಅನುವಾದ ಮಾಡಬಹುದು.

“ಸಂಕಟ ದಿನ” ಅಥವಾ “ಸಂಕಟ ಸಮಯಗಳು” ಎನ್ನುವ ಮಾತನ್ನು “ನೀನು ಯಾತನೆಯನ್ನು ಅನುಭವಿಸುವ ಸಮಯ” ಅಥವಾ “ನಿನಗೆ ಸಂಕಷ್ಟಗಳು ಬಂದ ಸಮಯ” ಅಥವಾ “ಯಾತನೆಯನ್ನು ಹುಟ್ಟಿಸುವ ಸಂಘಟನೆಗಳು ದೇವರು ಉಂಟು ಮಾಡಿದಾಗ” ಎಂದೂ ಅನುವಾದ ಮಾಡಬಹುದು.

  • “ಸಂಕಟಪಡಿಸು” ಅಥವಾ “ಸಂಕಟ ತರು” ಎನ್ನುವ ಮಾತನ್ನು ಅನುವಾದ ಮಾಡುವ ವಿಧಾನದಲ್ಲಿ “ಯಾತನೆಪಡಿಸುವ ವಿಷಯಗಳು ನಡೆಯುವಂತೆ ಮಾಡು” ಅಥವಾ “ಸಂಕಷ್ಟಗಳನ್ನು ಉಂಟು ಮಾಡು” ಅಥವಾ “ಅತೀ ಕಷ್ಟಕರವಾದ ವಿಷಯಗಳು ಅವರು ಅನುಭವಿಸುವಂತೆ ಮಾಡು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ತೊಂದರೆ ಕೊಡು, ಹಿಂಸಿಸು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H205, H598, H926, H927, H928, H1204, H1205, H1607, H1644, H1804, H1993, H2000, H2113, H2189, H2560, H2960, H4103, H5590, H5753, H5916, H5999, H6031, H6040, H6470, H6696, H6862, H6869, H6887, H7264, H7267, H7451, H7481, H7489, H7515, H7561, H8513, G387, G1298, G1613, G1776, G2346, G2347, G2350, G2360, G2553, G2873, G3636, G3926, G3930, G3986, G4423, G4660, G5015, G5016, G5182

ಸಂತಾನದವರು

# ಪದದ ಅರ್ಥವಿವರಣೆ:

“ಸಂತಾನದವರು” ಎನ್ನುವ ಪದವು ಜನರ ಅಥವಾ ಪ್ರಾಣಿಗಳ ಜೈವಿಕ ಸಂತಾನದವರನ್ನು ಸಾಧಾರಣವಾಗಿ ಸೂಚಿಸುತ್ತದೆ.

  • ಸತ್ಯವೇದದಲ್ಲಿ ಅನೇಕಬಾರಿ “ಸಂತಾನದವರು’ ಎನ್ನುವ ಪದಕ್ಕೆ “ಮಕ್ಕಳು” ಅಥವಾ “ವಂಶಸ್ಥರು” ಎನ್ನುವ ಪದಗಳಿಗೆ ಬರುವ ಅರ್ಥವನ್ನೇ ಹೊಂದಿರುತ್ತದೆ.
  • “ಬೀಜ” ಎನ್ನುವ ಪದವನ್ನು ಕೆಲವೊಂದುಬಾರಿ ಸಂತಾನದವರನ್ನು ಸೂಚಿಸುವುದಕ್ಕೆ ಅಲಂಕಾರಿಕ ಭಾಷೆಯಲ್ಲಿ ಉಪಯೋಗಿಸಿರುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ವಂಶಸ್ಥರು, ಬೀಜ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1121, H2233, H5209, H6363, H6529, H6631, G1081, G1085

ಸದಸ್ಯ, ಸದಸ್ಯರು

# ಪದದ ಅರ್ಥವಿವರಣೆ:

“ಸದಸ್ಯ” ಎನ್ನುವ ಪದವು ಸಂಕೀರ್ಣ ಗುಂಪಿನ ಅಥವಾ ದೇಹದ ಒಂದು ಭಾಗವನ್ನು ಸೂಚಿಸುತ್ತದೆ.

  • ಹೊಸ ಒಡಂಬಡಿಕೆಯು ಕ್ರೈಸ್ತರನ್ನು ಕ್ರಿಸ್ತ ದೇಹದ “ಸದಸ್ಯರೆಂದು” ವಿವರಿಸುತ್ತದೆ. ಕ್ರಿಸ್ತನಲ್ಲಿ ವಿಶ್ವಾಸಿಗಳು ಅನೇಕಮಂದಿ ಇರುವ ಸದಸ್ಯರಾಗಿರುವ ಒಂದು ಗುಂಪಿಗೆ ಸಂಬಂಧಪಟ್ಟಿರುತ್ತದೆ.
  • ದೇಹಕ್ಕೆ ಯೇಸು ಕ್ರೀಸ್ತನೇ “ತಲೆಯಾಗಿರುತ್ತಾನೆ” ಮತ್ತು ದೇಹದಲ್ಲಿರುವ ಅಂಗಗಳಂತೆ ವಿಶ್ವಾಸಿಗಳಾಗಿರುವ ಪ್ರತಿಯೊಬ್ಬರೂ ವೈಯುಕ್ತಿಕವಾಗಿ ಕೆಲಸ ಮಾಡಬೇಕು. ದೇಹವೆಲ್ಲವೂ ಚೆನ್ನಾಗಿ ನಡೆದುಕೊಳ್ಳುವುದಕ್ಕೆ ಸಹಾಯ ಮಾಡಲು ದೇಹದಲ್ಲಿರುವ ಪ್ರತಿಯೊಬ್ಬರಿಗೂ ಪವಿತ್ರಾತ್ಮ ದೇವರು ಒಂದು ವಿಶೇಷವಾದ ಪಾತ್ರೆಯನ್ನು ಕೊಡುತ್ತಾನೆ.
  • ಯೆಹೂದ್ಯ ಮತ್ತು ಫರಿಸಾಯರ ಕೌನ್ಸಿಲ್.ಗಳ ಹಾಗೆಯೇ ಬೇರೊಂದು ಗುಂಪುಗಳಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ವ್ಯಕ್ತಿಯನ್ನೂ ಈ ಗುಂಪುಗಳ “ಸದಸ್ಯರಾಗಿ” ಕರೆಯಲ್ಪಡುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ದೇಹ, ಫರಿಸಾಯ, ಕೌನ್ಸಿಲ್)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1004, H1121, H3338, H5315, H8212, G1010, G3196, G3609

ಸಂದೇಶವಾಹಕ, ಸಂದೇಶವಾಹಕರು

# ಸತ್ಯಾಂಶಗಳು:

“ಸಂದೇಶವಾಹಕ” ಎನ್ನುವ ಪದವು ಇತರರಿಗೆ ಹೇಳುವದಕ್ಕೆ ಒಂದು ಸಂದೇಶವನ್ನು ಹೊಂದಿರುವ ವ್ಯಕ್ತಿಯನ್ನು ಸೂಚಿಸುತ್ತದೆ.

  • ಪುರಾತನ ಕಾಲಗಳಲ್ಲಿ ಸಂದೇಶವಾಹಕನನ್ನು ಯುದ್ಧದಲ್ಲಿ ನಡೆದ ಸಂಗತಿಗಳನ್ನು ಪಟ್ಟಣದಲ್ಲಿರುವ ಜನರಿಗೆ ಹೇಳಲು ಯುದ್ಧರಂಗದಿಂದ ಕಳುಹಿಸಲ್ಪಡುತ್ತಿದ್ದರು.
  • ದೂತನು ದೇವರಿಂದ ಕಳುಹಿಸಲ್ಪಟ್ಟ ಒಂದು ವಿಶೇಷವಾದ ಸಂದೇಶವಾಹಕನಾಗಿರುತ್ತಾನೆ, ಈ ದೂತನು ಜನರಿಗೆ ದೇವರ ಸಂದೇಶಗಳನ್ನು ಹೇಳುತ್ತಾನೆ. “ದೂತನು” ಎನ್ನುವ ಪದವನ್ನು ಕೆಲವೊಂದು ಭಾಷೆಗಳಲ್ಲಿ ‘ಸಂದೇಶವಾಹಕ” ಎಂದೂ ಅನುವಾದ ಮಾಡುತ್ತಾರೆ.
  • ಮೆಸ್ಸೀಯನನ್ನು ಜನರೆಲ್ಲರು ಸ್ವೀಕರಿಸುವುದಕ್ಕೆ ಮತ್ತು ಮೆಸ್ಸೀಯನು ಬರುತ್ತಿದ್ದಾನೆಂದು ಪ್ರಕಟಿಸುವುದಕ್ಕೆ ಯೇಸುವಿನಗಿಂತ ಮುಂಚಿತವಾಗಿ ಬಂದ ಸಂದೇಶವಾಹಕನೆಂದು ಸ್ನಾನೀಕನಾದ ಯೋಹಾನ ಕರೆಯಲ್ಪಟ್ಟಿದ್ದನು.
  • ಯೇಸುವಿನ ಅಪೊಸ್ತಲರೆಲ್ಲರು ಆತನ ಸಂದೇಶವಾಹಕರಾಗಿದ್ದರು, ಇವರು ದೇವರ ರಾಜ್ಯದ ಕುರಿತಾಗಿರುವ ಸುವಾರ್ತೆಯನ್ನು ಇತರ ಜನರೊಂದಿಗೆ ಹಂಚಿಕೊಳ್ಳುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ದೂತನು, ಅಪೊಸ್ತಲ, ಯೋಹಾನ (ಸ್ನಾನಿಕನು))

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1319, H4397, H4398, H5046, H5894, H6735, H6737, H7323, H7971, G32, G652

ಸಂಪ್ರದಾಯ, ಸಂಪ್ರದಾಯಗಳು

# ಪದದ ಅರ್ಥವಿವರಣೆ:

“ಸಂಪ್ರದಾಯ” ಎನ್ನುವ ಪದವು ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಅಭ್ಯಾಸ ಅಥವಾ ಆಚಾರವನ್ನು ಸೂಚಿಸುತ್ತದೆ ಮತ್ತು ಇದು ಮುಂದೆ ಬರುವಂತಹ ತಲೆಮಾರುಗಳ ಜನರಿಗೆ ಕೊಡಲ್ಪಡುತ್ತದೆ.

  • ಅನೇಕಬಾರಿ ಸತ್ಯವೇದದಲ್ಲಿ “ಸಂಪ್ರದಾಯಗಳು” ಎನ್ನುವ ಪದವು ದೇವರ ಆಜ್ಞೆಗಳನ್ನು ಬಿಟ್ಟು, ಜನರು ತಯಾರಿಸಿಕೊಂಡಿರುವ ಹವ್ಯಾಸಗಳನ್ನು ಮತ್ತು ಬೋಧನೆಗಳನ್ನು ಸೂಚಿಸುತ್ತದೆ. “ಮನುಷ್ಯರ ಸಂಪ್ರದಾಯಗಳು” ಅಥವಾ “ಮನುಷ್ಯ ಸಂಪ್ರದಾಯ” ಎನ್ನುವ ಮಾತು ಇದನ್ನು ಸ್ಪಷ್ಟ ಮಾಡುತ್ತದೆ.
  • “ಹಿರಿಯರ ಸಂಪ್ರದಾಯಗಳು” ಅಥವಾ “ನನ್ನ ಪಿತೃಗಳ ಸಂಪ್ರದಾಯಗಳು” ಎನ್ನುವ ಮಾತುಗಳು ದೇವರು ಮೋಶೆಯ ಮೂಲಕ ಇಸ್ರಾಯೇಲ್ಯರಿಗೆ ಕೊಟ್ಟಿರುವ ಧರ್ಮಶಾಸ್ತ್ರಕ್ಕೆ ಯೆಹೂದ್ಯರ ನಾಯಕರು ಇನ್ನೂ ಹೆಚ್ಚಾಗಿ ಜೋಡಿಸಿದ ಅಭ್ಯಾಸಗಳು ಮತ್ತು ಯೆಹೂದ್ಯ ಆಚಾರಗಳನ್ನು ವಿಶೇಷವಾಗಿ ಸೂಚಿಸುತ್ತದೆ. ಜೋಡಿಸಲ್ಪಟ್ಟ ಈ ಆಚಾರಗಳು ದೇವರಿಂದ ಬರದಿದ್ದರೂ, ನೀತಿವಂತರಾಗುವುದಕ್ಕೆ ಅವುಗಳಿಗೂ ವಿಧೇಯರಾಗಿರಬೇಕೆಂದು ಜನರು ಆಲೋಚನೆ ಮಾಡಿದ್ದರು.
  • ದೇವರಿಂದ ಬಂದಿರುವ, ಪೌಲನು ಮತ್ತು ಇತರ ಅಪೊಸ್ತಲರು ಹೊಸ ವಿಶ್ವಾಸಿಗಳಿಗೆ ಬೋಧಿಸಿರುವ ಕ್ರೈಸ್ತ ಅಭ್ಯಾಸದ ಕುರಿತಾದ ಬೋಧನೆಗಳನ್ನು ಸೂಚಿಸುವುದಕ್ಕೆ ವಿಭಿನ್ನವಾದ ವಿಧಾನದಲ್ಲಿ “ಸಂಪ್ರದಾಯ” ಎನ್ನುವ ಪದವನ್ನು ಅಪೊಸ್ತಲನಾದ ಪೌಲನು ಉಪಯೋಗಿಸಿದ್ದಾನೆ.
  • ಆಧುನಿಕ ಕಾಲದಲ್ಲಿ ಅನೇಕಮಂದಿ ಕ್ರೈಸ್ತರು ಅನುಸರಿಸುತ್ತಿರುವ ಸಂಪ್ರದಾಯಗಳು ಸತ್ಯವೇದದಲ್ಲಿಲ್ಲ, ಆದರೆ ಚಾರಿತ್ರಾತ್ಮಕವಾಗಿ ಆಚಾರಗಳ ಮತ್ತು ಅಭ್ಯಾಸಗಳ ಫಲವಾಗಿರುತ್ತವೆ. ಈ ಸಂಪ್ರದಾಯಗಳು ತಪ್ಪದೇ ಸತ್ಯವೇದದಲ್ಲಿ ದೇವರು ನಮಗೆ ಬೋಧಿಸಿರುವ ಬೆಳಕಿನಲ್ಲಿ ಪರಿಶೀಲನೆಯಲ್ಲಿಡಬೇಕಾಗಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಅಪೊಸ್ತಲ, ನಂಬು, ಕ್ರೈಸ್ತ, ಪೂರ್ವಜ, ತಲೆಮಾರು, ಯೆಹೂದ್ಯ, ಧರ್ಮಶಾಸ್ತ್ರ, ಮೋಶೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: G3862, G3970

ಸಂಬಂಧಗಳನ್ನು ಹೊಂದಿರುವುದು, ಪ್ರೀತಿ ಮಾಡುವುದು, ಇನ್ನೊಬ್ಬರೊಂದಿಗೆ ಮಲಗುವುದು, ಮಲಗಿಸುವುದು, ಇನ್ನೊಬ್ಬರೊಂದಿಗೆ ಮಲಗಿದೆ, ಇನ್ನೊಬ್ಬರೊಂದಿಗೆ ಮಲಗುತ್ತಾಯಿರುವುದು

# ಪದದ ಅರ್ಥವಿವರಣೆ:

ಸತ್ಯವೇದದಲ್ಲಿ ಈ ಪದಗಳೆಲ್ಲವೂ ಲೈಂಗಿಕ ಸಂಬಂಧಗಳನ್ನು ಸೂಚಿಸುವುದಕ್ಕೆ ಉಪಯೋಗಿಸಿರುವ ಸವ್ಯೋಕ್ತಿಗಳಾಗಿರುತ್ತವೆ. (ನೋಡಿರಿ; ಸವ್ಯೋಕ್ತಿಗಳು

  • “ಒಬ್ಬರೊಂದಿಗೆ ಮಲಗುವುದು” ಎನ್ನುವ ಮಾತು ಸಾಧಾರಣವಾಗಿ ಆ ವ್ಯಕ್ತಿಯೊಂದಿಗೆ ಲೈಂಗಿಕ ಸಂಬಂಧಗಳನ್ನು ಹೊಂದಿರುವುದನ್ನು ಸೂಚಿಸುತ್ತದೆ. ಈ ಮಾತಿಗೆ ಭೂತಕಾಲದ ಮಾತು “ಮಲಗಿದೆ” ಎಂದಾಗಿರುತ್ತದೆ.
  • ಹಳೇ ಒಡಂಬಡಿಕೆ ಪುಸ್ತಕವಾಗಿರುವ “ಪರಮಗೀತೆಗಳು” ಎನ್ನುವ ಪುಸ್ತಕದಲ್ಲಿ “ಪ್ರೀತಿ” ಎನ್ನುವ ಪದವನ್ನು ಅನುವಾದ ಮಾಡುವುದಕ್ಕೆ “ಪ್ರೀತಿ ಮಾಡುವುದು” ಎನ್ನುವ ಪದವನ್ನು ಯುಎಲ್.ಬಿ ಉಪಯೋಗಿಸುತ್ತದೆ, ಇದು ಲೈಂಗಿಕ ಸಂಬಂಧಗಳಿಗೆ ಸೂಚಿಸುವ ಸಂದರ್ಭದಲ್ಲಿ ಉಪಯೋಗಿಸಲ್ಪಟ್ಟಿರುತ್ತದೆ. “ಇನ್ನೊಬ್ಬರೊಂದಿಗೆ ಪ್ರೀತಿಯನ್ನು ಮಾಡು” ಎನ್ನುವ ಮಾತಿಗೆ ಈ ಪದವು ಸಂಬಂಧಪಟ್ಟಿರುತ್ತದೆ.

# ಅನುವಾದ ಸಲಹೆಗಳು:

  • ಈ ಮಾತುಗಳು ಮದುವೆ ಮಾಡಿಕೊಂಡವರಿಗೆ ಅಥವಾ ಮದುವೆ ಮಾಡಿಕೊಳ್ಳದೇ ಇರುವವರೆಗೂ ಅನೇಕವಾದ ಸಂಬಂಧಗಳ ಮೇಲೆ ಆಧಾರಪಟ್ಟು, ಅನೇಕವಾದ ಸಂದರ್ಭಗಳಲ್ಲಿ ಈ ಪದಗಳಿಗೆ ಅನೇಕವಾದ ಮಾತುಗಳನ್ನು ಕೆಲವೊಂದು ಭಾಷೆಗಳಲ್ಲಿ ಉಪಯೋಗಿಸಿರುತ್ತಾರೆ, ಈ ಪದಗಳಿಗೆ ಮಾಡುವ ಅನುವಾದವು ಪ್ರತಿಯೊಂದು ಸಂದರ್ಭದಲ್ಲಿ ಸರಿಯಾದ ಅರ್ಥವನ್ನು ಹೊಂದಿರುವಂತೆ ನೋಡಿಕೊಳ್ಳುವುದು ತುಂಬಾ ಪ್ರಾಮುಖ್ಯವಾದ ವಿಷಯ.
  • ಸಂದರ್ಭಾನುಸಾರವಾಗಿ ಈ ರೀತಿಯ ಮಾತುಗಳನ್ನು “ಒಬ್ಬರೊಂದಿಗೆ ಮಲಗು” ಎನ್ನುವದನ್ನು ಅನುವಾದ ಮಾಡುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತವೆ: “ಮಲಗು” ಅಥವಾ “ಪ್ರೀತಿ ಮಾಡು” ಅಥವಾ “ಒಬ್ಬರೊಂದಿಗೆ ಸಹವಾಸ ಮಾಡು”
  • “ಒಬ್ಬರೊಂದಿಗೆ ಸಂಬಂಧಗಳನ್ನು ಹೊಂದಿರು” ಎನ್ನುವ ಮಾತನ್ನು ಅನುವಾದ ಮಾಡುವ ವಿಧಾನಗಳಲ್ಲಿ “ಲೈಂಗಿಕ ಸಂಬಂಧಗಳನ್ನು ಹೊಂದಿರು” ಅಥವಾ “ವೈವಾಹಿಕ ಸಂಬಂಧಗಳನ್ನು ಹೊಂದಿರು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • “ಪ್ರೀತಿ ಮಾಡು” ಎನ್ನುವ ಮಾತನ್ನು “ಪ್ರೀತಿ ಮಾಡುವುದು” ಅಥವಾ “ಸಹವಾಸದಲ್ಲಿರುವುದು” ಎಂದೂ ಅನುವಾದ ಮಾಡಬಹುದು, ಅಥವಾ ಅನುವಾದ ಭಾಷೆಯಲ್ಲಿ ಈ ಪದವನ್ನು ಅನುವಾದ ಮಾಡುವ ಸ್ವಾಭಾವಿಕ ವಿಧಾನದಲ್ಲಿರುವ ಮಾತು ಇರಬಹುದು.
  • ಈ ಉದ್ದೇಶವನ್ನೇ ಅನುವಾದಿಸಲು ಉಪಯೋಗಿಸಲ್ಪಟ್ಟಿರುವ ಪದಗಳು ಬೈಬಲ್ ಅನುವಾದವನ್ನು ಮಾಡುವ ಜನರಿಗೆ ಅಂಗೀಕೃತವಾಗಿರುತ್ತವೆಯೆಂದು ಪರಿಶೀಲನೆ ಮಾಡುವುದು ತುಂಬಾ ಪ್ರಾಮುಖ್ಯ.

(ಈ ಪದಗಳನ್ನು ಸಹ ನೋಡಿರಿ : ಲೈಂಗಿಕ ಅನೈತಿಕತೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H160, H935, H1540, H2181, H2233, H3045, H3212, H6172, H7250, H7901, H7903, G1097

ಸಮಾಧಾನ ಯಜ್ಞ, ಸಮಾಧಾನ ಯಜ್ಞಗಳು

# ಸತ್ಯಾಂಶಗಳು:

  • “ಸಮಾಧಾನ ಯಜ್ಞ” ಎನ್ನುವುದು ದೇವರು ಇಸ್ರಾಯೇಲ್ಯರಿಗೆ ಅಜ್ಞಾಪಿಸಿದ ಅನೇಕ ತ್ಯಾಗಪೂರಿತವಾದ ಯಜ್ಞಗಳಲ್ಲಿ ಒಂದಾಗಿರುತ್ತದೆ. ಇದನ್ನು ಕೆಲವೊಂದುಬಾರಿ “ಕೃತಜ್ಞತೆಯ ಯಜ್ಞ” ಅಥವಾ “ಸಹವಾಸ ಯಜ್ಞ” ಎಂದು ಕರೆಯುತ್ತಾರೆ.

  • ಈ ಯಜ್ಞಗಳಲ್ಲಿ ಯಾವ ದೋಷಗಳೂ ಇಲ್ಲದ ಪ್ರಾಣಿಯನ್ನು ಬಲಿ ಕೊಡುವುದು, ಪ್ರಾಣಿಯ ರಕ್ತವನ್ನು ಯಜ್ಞದ ಮೇಲೆ ಚಿಮುಕಿಸುವುದು, ಮತ್ತು ಪ್ರಾಣಿಯ ಕೊಬ್ಬನ್ನು ದಹಿಸುವುದು, ಅದೇ ರೀತಿಯಾಗಿ ಉಳಿದ ಪ್ರಾಣಿಯ ಭಾಗವನ್ನು ಪ್ರತ್ಯೇಕಿಸುವುದು ಒಳಗೊಂಡಿರುತ್ತದೆ.

  • ಇನ್ನೂ ಈ ಯಜ್ಞದಲ್ಲಿ ಹುಳಿಯಿರುವ ಮತ್ತು ಹುಳಿಯಿಲ್ಲದ ರೊಟ್ಟಿಯನ್ನು ಅರ್ಪಿಸುವುದು ಒಳಗೊಂಡಿರುತ್ತದೆ, ಇವುಗಳನ್ನು ದಹನಬಲಿ ಯಜ್ಞದ ಮೇಲೆ ಸುಡುತ್ತಾರೆ.

  • ಯಾಜಕನು ಮತ್ತು ಯಜ್ಞದ ಅರ್ಪಿಸುವವನು ಅರ್ಪಿಸಿರುವ ಆಹಾರವನ್ನು ತಿನ್ನುವುದರಲ್ಲಿ ಹಂಚಿಕೊಳ್ಳುವುದಕ್ಕೆ ಅನುಮತಿ ನೀಡಲಾಗಿರುತ್ತದೆ.

  • ಈ ಯಜ್ಞವು ದೇವರು ತನ್ನ ಜನರೊಂದಿಗೆ ಹೊಂದಿರುವ ಸಹವಾಸಕ್ಕೆ ಗುರುತಾಗಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ದಹನ ಬಲಿ, ಸಹವಾಸ, ಸಹವಾಸ ಯಜ್ಞ, ಧಾನ್ಯ ಯಜ್ಞ, ಯಾಜಕ, ಸರ್ವಾಂಗ ಹೋಮ, ಹುಳಿಯಿಲ್ಲದ ರೊಟ್ಟಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H8002

ಸಮಾಧಾನ, ಸಮಾಧಾನಭರಿತ, ಸಮಾಧಾನಪೂರ್ವಕವಾಗಿ, ಸಮಾಧಾನವಾದ, ಸಮಾಧಾನವನ್ನುಂಟು ಮಾಡುವವರು

# ಪದದ ಅರ್ಥವಿವರಣೆ:

“ಸಮಾಧಾನ” ಎನ್ನುವ ಪದವು ಯಾವ ಭಯವಿಲ್ಲದ, ಯಾವ ಕಳವಳವಿಲ್ಲದ, ಯಾವ ಹೋರಾಟವಿಲ್ಲದ ಭಾವನೆಯನ್ನು ಅಥವಾ ಸ್ಥಿತಿಯನ್ನು ಸೂಚಿಸುತ್ತದೆ. “ಸಮಾಧಾನಭರಿತ”ನಾಗಿರುವ ಒಬ್ಬ ವ್ಯಕ್ತಿ ಯಾವಾಗಲೂ ಶಾಂತಿಯುತವಾಗಿ, ಸಂರಕ್ಷಿತವಾಗಿ ಮತ್ತು ಭದ್ರತೆಯುಳ್ಳ ವಾತಾವರಣವನ್ನು ಅನುಭವಿಸುತ್ತಾ ಇರುತ್ತಾನೆ.

  • “ಸಮಾಧಾನ” ಎನ್ನುವ ಪದವು ಜನರ ಗುಂಪುಗಳು ಅಥವಾ ದೇಶಗಳು ಇತರರೊಂದಿಗೆ ಅಥವಾ ಇತರ ದೇಶಗಳೊಂದಿಗೆ ಯಾವ ಯುದ್ಧಗಳಿಲ್ಲದ ಸಮಯವನ್ನು ಸೂಚಿಸುತ್ತದೆ. “ಸಮಾಧಾನಕರವಾದ ಸಂಬಂಧಗಳು” ಹೊಂದಿರುವ ಜನರು ಎಂದು ಇವರನ್ನು ಕರೆಯುತ್ತಾರೆ.
  • ಯಾರಾದರೊಬ್ಬರೊಂದಿಗೆ ಅಥವಾ ಜನರ ಗುಂಪಿನೊಂದಿಗೆ “ಸಮಾಧಾನವನ್ನುಂಟು ಮಾಡು” ಎನ್ನುವ ಮಾತಿಗೆ ಯುದ್ಧವನ್ನು ನಿಲ್ಲಿಸುವುದಕ್ಕೆ ಕಾರ್ಯಗಳನ್ನು ಕೈಗೊಳ್ಳು ಎಂದರ್ಥ.
  • “ಸಮಾಧಾನವನ್ನುಂಟು ಮಾಡುವವನು” ಎನ್ನುವ ಮಾತು ಒಬ್ಬರೊಂದಿಗೆ ಒಬ್ಬರು ಸಮಾಧಾನದಿಂದ ಜೀವಿಸಬೇಕೆಂದು ಜನರನ್ನು ಪ್ರಭಾವಗೊಳಿಸುವುದಕ್ಕೆ ಮಾತುಗಳನ್ನು ಹೇಳುವ ಅಥವಾ ಮಾಡುವ ವ್ಯಕ್ತಿಯನ್ನು ಸೂಚಿಸುತ್ತದೆ.
  • ಇತರ ಜನರೊಂದಿಗೆ “ಸಮಾಧಾನದಿಂದಿರುವುದು” ಎನ್ನುವುದಕ್ಕೆ ಆ ಜನರೊಂದಿಗೆ ವಿರುದ್ಧವಾಗಿ ಹೋರಾಟ ಮಾಡದಿರದ ಸ್ಥಿತಿಯಲ್ಲಿರುವುದು ಎಂದರ್ಥ.
  • ದೇವರು ಜನರ ಪಾಪಗಳಿಂದ ಬಿಡಿಸಿದಾಗ ದೇವರು ಮತ್ತು ಜನರ ಮಧ್ಯದಲ್ಲಿ ಒಳ್ಳೇಯ ಅಥವಾ ಸರಿಯಾದ ಸಂಬಂಧವು ಹೊಂದಿಕೊಂಡಿರುತ್ತಾರೆ. ಇದನ್ನೇ “ದೇವರೊಂದಿಗೆ ಸಮಾಧಾನ ಹೊಂದಿಕೊಳ್ಳುವುದು” ಎಂದು ಕರೆಯುತ್ತಾರೆ.
  • “ಕೃಪೆ ಮತ್ತು ಸಮಾಧಾನ” ಶುಭಾಷಯಗಳನ್ನು ಆಶೀರ್ವಾದ ವಚನಗಳಾಗಿ ಅಪೊಸ್ತಲರು ತಮ್ಮ ಸಹ ವಿಶ್ವಾಸಿಗಳಿಗೆ ಬರೆಯುವ ಪತ್ರಿಕೆಗಳಲ್ಲಿ ಉಪಯೋಗಿಸಿದ್ದಾರೆ.
  • “ಸಮಾಧಾನ” ಎನ್ನುವ ಪದವನ್ನು ದೇವರೊಂದಿಗೆ ಅಥವಾ ಇತರ ಜನರೊಂದಿಗೆ ಒಳ್ಳೇಯ ಸಂಬಂಧದಲ್ಲಿ ಇರುವ ಸ್ಥಿತಿಯನ್ನು ಸೂಚಿಸುತ್ತದೆ.

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಉದಾಹರಣೆಗಳು:

  • 15:06 ಕಾನಾನಿನಲ್ಲಿರುವ ಇತರ ಜನಾಂಗಗಳೊಂದಿಗೆ ಯಾವುದೇ ರೀತಿಯ __ ಸಮಾಧಾನವನ್ನು ___ ಮಾಡಿಕೊಳ್ಳಬಾರದೆಂದು ದೇವರು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದರು.
  • 15:12 ದೇವರು ಇಸ್ರಾಯೇಲ್ ಗಡಿಗಳೊಳಗೆ ಇರುವ ಜನರೆಲ್ಲರಿಗೆ ___ ಸಮಾಧಾನವನ್ನು ___ ಕೊಟ್ಟನು.
  • 16:03 ಇಸ್ರಾಯೇಲ್ಯರನ್ನು ತಮ್ಮ ಶತ್ರುಗಳಿಂದ ಬಿಡಿಸುವ ನಾಯಕನನ್ನು ದೇವರು ಅನುಗ್ರಹಿಸಿದರು ಮತ್ತು ಭೂಮಿಗೆ ___ ಸಮಾಧಾನವನ್ನು ____ ಕೊಟ್ಟರು.
  • 21:13 ಇತರ ಜನರು ಮಾಡಿದ ಪಾಪಗಳಿಗೋಸ್ಕರ ಶಿಕ್ಷೆಯನ್ನು ಪಡೆದುಕೊಳ್ಳುವುದಕ್ಕೆ ಆತನು (ಮೆಸ್ಸೀಯ) ಮರಣ ಹೊಂದಿದನು. ಆತನ ಶಿಕ್ಷೆಯು ದೇವರು ಮತ್ತು ಜನರ ಮಧ್ಯದೊಳಗೆ ___ ಸಮಾಧಾನವನ್ನು ___ ತಂದಿತ್ತು.
  • 48:14 ದಾವೀದನು ಇಸ್ರಾಯೇಲಿಗೆ ಅರಸನಾಗಿದ್ದನು, ಆದರೆ ಯೇಸು ಸರ್ವ ಸೃಷ್ಟಿಗೆ ಅರಸನಾಗಿದ್ದಾನೆ. ಆತನು ತಿರುಗಿ ಬಂದು, ತನ್ನ ರಾಜ್ಯವನ್ನು ನ್ಯಾಯದಿಂದ ಮತ್ತು ___ ಸಮಾಧಾನದಿಂದ ____ ಸದಾಕಾಲವೂ ಆಳುತ್ತಾನೆ.
  • 50:17 ಯೇಸು ತನ್ನ ರಾಜ್ಯವನ್ನು ನ್ಯಾಯದಿಂದ ಮತ್ತು ____ ಸಮಾಧಾನದಿಂದ ___ ಆಳುತ್ತಾನೆ ಮತ್ತು ಆತನು ತನ್ನ ಜನರೊಂದಿಗೆ ಸದಾಕಾಲವೂ ಇರುತ್ತಾನೆ.

# ಪದ ಡೇಟಾ:

  • Strong's: H5117, H7961, H7962, H7965, H7999, H8001, H8002, H8003, H8252, G269, G31514, G1515, G1516, G1517, G1518, G2272

ಸಮಾಧಿ, ಸಮಾಧಿ ತೋಡುವವನು, ಸಮಾಧಿಗಳು, ಗೋರಿ, ಗೋರಿಗಳು, ಹೂಣಿಡುವ ಸ್ಥಳ

# ಪದದ ಅರ್ಥವಿವರಣೆ:

“ಗೋರಿ” ಮತ್ತು “ಸಮಾಧಿ” ಎನ್ನುವ ಪದಗಳು ಸತ್ತಂತ ವ್ಯಕ್ತಿಯ ದೇಹವನ್ನು ಜನರು ಇಡುವ ಸ್ಥಳವನ್ನು ಸೂಚಿಸುತ್ತದೆ. “ಹೂಣಿಡುವ ಸ್ಥಳ” ಎಂದರೆ ಈ ವಿಷಯವನ್ನೇ ಸೂಚಿಸುವ ಸರ್ವ ಸಾಧಾರಣ ಪದವಾಗಿರುತ್ತದೆ.

  • ಯೆಹೂದ್ಯರು ಕೆಲವೊಂದುಬಾರಿ ಗುಹೆಗಳನ್ನು ಸಮಾಧಿಗಳನ್ನಾಗಿ ಉಪಯೋಗಿಸುತ್ತಿದ್ದರು, ಮತ್ತು ಕೆಲವೊಂದುಬಾರಿ ದೊಡ್ಡ ಕಲ್ಲು ಬಂಡೆಗಳನ್ನು ಗುಹೆಗಳನ್ನಾಗಿ ಅಗೆದು ಅವುಗಳನ್ನು ಸಮಾಧಿಗಳನ್ನಾಗಿ ಉಪಯೋಗಿಸುತ್ತಿದ್ದರು.
  • ಹೊಸ ಒಡಂಬಡಿಕೆಯ ಕಾಲದಲ್ಲಿ ಸಮಾಧಿಯಾಗಿರುವ ಗುಹೆಯನ್ನು ಮುಚ್ಚುವುದಕ್ಕೆ ಒಂದು ದೊಡ್ಡ ಕಲ್ಲನ್ನು ಉರುಳಿಸುವುದು ಸಾಧಾರಣವಾಗಿ ನಡೆಯುವ ವಿಷಯವಾಗಿತ್ತು.
  • ಅನುವಾದ ಮಾಡುವ ಭಾಷೆಯಲ್ಲಿ ಸಮಾಧಿಗೆ ಉಪಯೋಗಿಸುವ ಪದವು ನೆಲವನ್ನು ಅಗೆದು ಶವವನ್ನು ಇಡುವ ಸ್ಥಳವನ್ನು ಮಾತ್ರ ಸೂಚಿಸುವುದಾಗಿದ್ದರೆ, ಇದನ್ನು “ಗುಹೆ” ಅಥವಾ “ಬೆಟ್ಟದ ಪಕ್ಕದಲ್ಲಿ ರಂಧ್ರವನ್ನು ಅಗೆಯುವುದು” ಎಂದೂ ಅನುವಾದ ಮಾಡಬಹುದು.
  • “ಸಮಾಧಿ” ಎನ್ನುವ ಮಾತು ಅನೇಕಬಾರಿ ಸತ್ತಂತ ಜನರ ಆತ್ಮಗಳು ಇರುವ ಸ್ಥಳ ಅಥವಾ ಸತ್ತಂತ ಸ್ಥಿತಿಯನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಮತ್ತು ಸಾಧಾರಣವಾಗಿ ಉಪಯೋಗಿಸಲ್ಪಟ್ಟಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಹೂಣಿಡುವುದು, ಮರಣ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಉದಾಹರಣೆಗಳು:

  • 32:04_ ಆ ಪ್ರಾಂತ್ಯದಲ್ಲಿ ___ ಸಮಾಧಿಗಳ ___ ಮಧ್ಯೆದಲ್ಲಿ ಆ ಮನುಷ್ಯನು ಜೀವಿಸಿದ್ದನು.
  • 37:06_ “ಲಾಜರನನ್ನು ಎಲ್ಲಿ ಇಟ್ಟಿದ್ದೀರಿ?” ಎಂದು ಯೇಸು ಅವರನ್ನು ಕೇಳಿದನು. “____ ಸಮಾಧಿಯಲ್ಲಿ ___ , ಬಂದು, ನೋಡಿ” ಎಂದು ಅವರು ಆತನಿಗೆ ಹೇಳಿದರು.
  • 37:07_ ___ ಸಮಾಧಿಯು ____ ಗುಹೆಯಾಗಿದ್ದಿತ್ತು, ಈ ಗುಹೆಯ ದ್ವಾರದ ಮುಂದೆ ಒಂದು ದೊಡ್ಡ ಕಲ್ಲನ್ನು ಉರುಳಿಸಿರುತ್ತಾರೆ.
  • 40:09_ ಆದನಂತರ ಯೋಸೇಫ ಮತ್ತು ನಿಕೊದೇಮ ಎನ್ನುವ ಇಬ್ಬರು ಯೆಹೂದ್ಯರ ನಾಯಕರು ಯೇಸುವು ಮೆಸ್ಸೀಯನೆಂದು ನಂಬಿದ್ದರು, ಇವರು ಯೇಸುವಿನ ದೇಹಕ್ಕಾಗಿ ಪಿಲಾತನ ಬಳಿಗೆ ಬಂದು ಕೇಳಿಕಂಡರು ಅವರು ಆತನ ದೇಹವನ್ನು ಬಟ್ಟೆಯಲ್ಲಿ ಸುತ್ತಿ, ಬಂಡೆಯ ಗುಹೆಯಂತಿರುವ ___ ಸಮಾಧಿಯೊಳಗೆ ___ ಇಟ್ಟರು. ಆದನಂತರ ಆ ____ ಸಮಾಧಿಯನ್ನು ___ ತೆರೆಯುವುದಕ್ಕಾಗದಿರುವಂತೆ ಅದರ ಮುಂಭಾಗದಲ್ಲಿ ಒಂದು ದೊಡ್ಡ ಕಲ್ಲನ್ನು ಉರುಳಿಸಿದರು.
  • 41:04_ ಅವನು (ದೂತನು)___ ಸಮಾಧಿಯ ___ ಪ್ರವೇಶ ದ್ವಾರವನ್ನು ಮುಚ್ಚಿರುವ ದೊಡ್ಡ ಕಲ್ಲು ಬಂಡೆಯನ್ನು ಉರುಳಿಸಿ, ಅದರ ಮೇಲೆ ಕುಳಿತುಕೊಂಡನು. ___ ಸಮಾಧಿಗೆ ___ ಕಾವಲು ಇರುವರು ತುಂಬಾ ಭಯಭ್ರಾಂತಿಗೆ ಗುರಿಯಾದರು ಮತ್ತು ಅವರು ಸತ್ತ ಮನುಷ್ಯರಂತೆ ನೆಲದ ಮೇಲೆ ಬಿದ್ದರು.
  • 41:05_ ಸ್ತ್ರೀಯರು __ ಸಮಾಧಿಯ __ ಬಳಿಗೆ ಬಂದಾಗ, “ಹೆದರಬೇಡಿರಿ, ಯೇಸು ಇಲ್ಲಿಲ್ಲ. ಆತನು ಹೇಳಿದ ಪ್ರಕಾರವೇ ಆತನು ಮರಣದಿಂದ ಎದ್ದಿದ್ದಾನೆ ___ ಸಮಾಧಿಯೊಳಗೆ ___ ಹೋಗಿ, ನೋಡಿರಿ” ಎಂದು ದೂತ ಅವರಿಗೆ ಹೇಳಿದನು. ಸ್ತ್ರೀಯರು ___ ಸಮಾಧಿಯೊಳಗೆ ___ ಹೋಗಿ, ಯೇಸುವಿನ ದೇಹವನ್ನು ಇಟ್ಟಿರುವ ಸ್ಥಳವನ್ನು ನೋಡಿದರು. ಆತನ ದೇಹವು ಅಲ್ಲಿರಲಿಲ್ಲ!

# ಪದ ಡೇಟಾ:

  • Strong's: H1164, H1430, H6900, H6913, H7585, H7845, G86, G2750, G3418, G3419, G5028

ಸಮುದ್ರ ಹಸು

# ಪದದ ಅರ್ಥವಿವರಣೆ:

“ಸಮುದ್ರ ಹಸು” ಎನ್ನುವ ಪದವು ಸಮುದ್ರದ ತಳ ಭಾಗದಲ್ಲಿ ತರಕಾರಿಯನ್ನು ಮತ್ತು ಸಮುದ್ರದ ಹುಲ್ಲನ್ನು ತಿನ್ನುವ ದೊಡ್ಡ ಸಮುದ್ರದ ಪ್ರಾಣಿಯನ್ನು ಸೂಚಿಸುತ್ತದೆ.

  • ಸಮುದ್ರ ಹಸು ದಪ್ಪ ಚರ್ಮವನ್ನು ಹೊಂದಿರುವ ಬೂದಿ ಬಣ್ಣದಲ್ಲಿರುತ್ತದೆ. ಇದು ನೀರಿನಲ್ಲಿ ಈಜುತ್ತಾ ಹೋಗುತ್ತಿರುವುದು.
  • ಸಮುದ್ರ ಹಸುವಿನ ಚರ್ಮಗಳನ್ನು ಅಥವಾ ಚಕ್ಕಳಗಳನ್ನು ಗುಡಾರಗಳನ್ನು ಮಾಡುವುದಕ್ಕೆ ಸತ್ಯವೇದದಲ್ಲಿರುವ ಅನೇಕ ಜನರು ಉಪಯೋಗಿಸುತ್ತಿದ್ದರು. ಈ ಪ್ರಾಣಿಗಳ ಚಕ್ಕಳಗಳು ಗುಡಾರವನ್ನು ಕಟ್ಟುವದಕ್ಕೋಸ್ಕರ ಉಪಯೋಗಿಸುತ್ತಿದ್ದರು.
  • “ಸಮುದ್ರ ಹಸು” ಎನ್ನುವ ಹೆಸರನ್ನು ಇಡುವುದಕ್ಕೆ ಕಾರಣವೇನೆಂದರೆ ಇದು ಹಸುವಿನಂತೆ ಹುಲ್ಲನ್ನು ತಿನ್ನುತ್ತಿತ್ತು, ಆದರೆ ಇದು ನಿಜವಾದ ಹಸುವಿಗೆ ಹೋಲಿಕೆಯಾಗಿರುವುದಿಲ್ಲ.
  • ಸಂಬಂಧಪಟ್ಟಿರುವ ಪ್ರಾಣಿಗಳ ಹೆಸರುಗಳು ಯಾವುವೆಂದರೆ “ಕಡಲು ಪ್ರಾಣಿ” ಮತ್ತು “ಕಡಲು ಪ್ರಾಣಿಯ ತೊಗಲು”

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಗುಡಾರ)

# ಸತ್ಯವೇದದ ಅನುಬಂಧ ವಾಕ್ಯಗಳು :

ಸುರುಳಿಯನ್ನು ಪಡೆದುಕೊಳ್ಳುವ ವ್ಯಕ್ತಿ ಈ ಮುದ್ರೆಯನ್ನು ಯಾರು ಮುರಿದಿಲ್ಲವೆಂದು ಮತ್ತು ಇದನ್ನು ಯಾರೂ ತೆರೆದಿಲ್ಲವೆಂದು ತಿಳಿದುಕೊಳ್ಳುವನು.

# ಪದ ಡೇಟಾ:

  • Strong's: H8476

ಸರ್ಪ, ಸರ್ಪಗಳು, ಹಾವು, ಹಾವುಗಳು, ವಿಷಸರ್ಪ, ವಿಷಸರ್ಪಗಳು

# ಸತ್ಯಾಂಶಗಳು:

ಈ ಎಲ್ಲಾ ಪದಗಳು ತೆಳುವಾದ ಆಕಾರವಿದ್ದು, ವಿಷದ ಹಲ್ಲುಗಳನ್ನು ಒಳಗೊಂಡಿರುವ ಉದ್ದವಾಗಿರುವ ಹರಿದಾಡುವ ಜಂತುವನ್ನು ಸೂಚಿಸುತ್ತವೆ ಮತ್ತು ಇದು ನೆಲದ ಮೇಲೆ ಜಾರುತ್ತಾ ಹಿಂದಕ್ಕೆ, ಮುಂದಕ್ಕೆ ಚಲಿಸುತ್ತಾ ಹೋಗುತ್ತಿರುತ್ತದೆ. “ಸರ್ಪ” ಎನ್ನುವ ಪದವು ಸಾಧಾರಣವಾಗಿ ದೊಡ್ಡ ಹಾವನ್ನು ಸೂಚಿಸುತ್ತದೆ ಮತ್ತು “ವಿಷಸರ್ಪ” ಎನ್ನುವ ಪದವು ಹಾವು ತನ್ನ ಬೇಟೆಯಲ್ಲಿ ವಿಷವನ್ನು ಉಪಯೋಗಿಸುವ ಒಂದು ವಿಧವಾದ ಹಾವನ್ನು ಸೂಚಿಸುತ್ತದೆ.

  • ಈ ಪ್ರಾಣಿಯನ್ನು ಕೂಡ ದುಷ್ಟನಾಗಿರುವ ಒಬ್ಬ ವ್ಯಕ್ತಿಯನ್ನು ಸೂಚಿಸುವುದಕ್ಕೆ, ವಿಶೇಷವಾಗಿ ಮೋಸ ಮಾಡುವ ವ್ಯಕ್ತಿಯನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಉಪಯೋಗಿಸಲ್ಪಟ್ಟಿರುತ್ತದೆ.
  • “ಸರ್ಪಗಳ ಸಂತಾನದವರು” ಎಂದು ಯೇಸುವು ಧರ್ಮದ ನಾಯಕರನ್ನು ಕರೆದನು, ಯಾಕಂದರೆ ಅವರು ನೀತಿವಂತರೆಂದು ನಟಿಸುತ್ತಾ, ಜನರನ್ನು ಮೋಸಗೊಳಿಸುತ್ತಿದ್ದರು ಮತ್ತು ಜನರಲ್ಲಿ ಅಸಹ್ಯವಾಗಿ ನಡೆದುಕೊಳ್ಳುತ್ತಿದ್ದರು.
  • ಎದೆನ್ ತೋಟದಲ್ಲಿ ಸೈತಾನನು ಹವ್ವ ಜೊತೆಯಲ್ಲಿ ಮಾತನಾಡಿದಾಗ ಮತ್ತು ಆಕೆಯನ್ನು ದೇವರಿಗೆ ಅವಿಧೇಯಳನ್ನಾಗಿ ಶೋಧಿಸಿದಾಗ ಅವನು ಹಾವಿನ ರೂಪದಲ್ಲಿದ್ದನು.
  • ಹವ್ವಳು ಪಾಪ ಮಾಡುವಂತೆ ಸೈತಾನನು ಆಕೆಯನ್ನು ಶೋಧಿಸಿದನಂತರ, ಹವ್ವ ಮತ್ತು ತನ್ನ ಗಂಡನಾದ ಆದಾಮನು ಪಾಪ ಮಾಡಿದರು, ದೇವರು ಆ ಹಾವನ್ನು ಶಪಿಸಿ, ಎಲ್ಲಾ ಹಾವುಗಳು ಇನ್ನು ಮೇಲೆ ನೆಲದ ಮೇಲೆ ಹರಿದಾಡುತ್ತವೆ ಎಂದು ಹೇಳಿದನು, ಇದರ ಆಧಾರದಿಂದ ಹಾವುಗಳು ಶಾಪವನ್ನು ಹೊಂದುವುದಕ್ಕೆ ಮುಂಚಿತವಾಗಿ ಅವು ನಡೆಯುತ್ತಿದ್ದವು ಎಂದು ಅರ್ಥವಾಗುತ್ತಿದೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಶಪಿಸು, ಮೋಸಗೊಳಿಸು, ಅವಿಧೇಯತೆ, ಎದೆನ್, ದುಷ್ಟ, ಸಂತಾನ, ಬೇಟೆ, ಸೈತಾನ, ಪಾಪ, ಶೋಧಿಸು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H660, H2119, H5175, H6620, H6848, H8314, H8577, G2191, G2062, G3789

ಸರ್ವಾಂಗಹೋಮ, ಸರ್ವಾಂಗಹೋಮಗಳು

# ಸತ್ಯಾಂಶಗಳು:

ಹಳೆ ಒಡಂಬಡಿಕೆಯಲ್ಲಿ, ಯೆಹೋವನಿಗೆ ಕೃತಜ್ಞತಾರ್ಪಣಕ್ಕಾಗಿ ಅಥವಾ ಹರಕೆಯನ್ನು ಪೂರೈಸುವಂತ ಅನೇಕ ಕಾರಣಗಳಿಗಾಗಿ ಅರ್ಪಿಸುವ ಬಲಿಗಳಲ್ಲಿ “ಸರ್ವಾಂಗಹೋಮ” ಒಂದು.

  • ಈ ಹೋಮಕ್ಕಾಗಿ ಗಂಡಾಗಲಿ ಹೆಣ್ಣಾಗಲಿ ಒಂದು ಜೀವಿಯ ಅವಶ್ಯಕತೆ ಇತ್ತು. ಗಂಡು ಪ್ರಾಣಿಯೇ ಬೇಕಾಗುವ ದಹನ ಬಲಿಯಂತೆ ಈ ಬಲಿಯಿರುವದಿಲ್ಲ.
  • ದೇವರಿಗೆ ಬಲಿಯರ್ಪಣೆಯನ್ನು ಅರ್ಪಿಸಿದ ಮೇಲೆ ಸರ್ವಾಂಗಹೋಮವನ್ನು ತಂದವರು ಮಾಂಸವನ್ನು ಯಾಜಕರು ಮತ್ತು ಇತರ ಇಸ್ರಾಯೇಲರ ಜೊತೆ ಹಂಚಿಕೊಳ್ಳುತ್ತಿದ್ದರು.
  • ಹುಳಿಯಿಲ್ಲದ ರೊಟ್ಟಿ ಸೇರಿಸಲ್ಪಟ್ಟ ಭೋಜನೆ ಈ ಕಾಣಿಕೆಯಲ್ಲಿ ಭಾಗವಾಗಿತ್ತು.
  • ಇದನ್ನು ಕೆಲವೊಮ್ಮೆ “ಸಮಾಧಾನ ಬಲಿ” ಎಂದು ಕರೆಯುತ್ತಿದ್ದರು.

(ಈ ಪದಗಳನ್ನು ಸಹ ನೋಡಿರಿ : ದಹನ ಬಲಿ, ನೆರವೇರಿಸು, ದಾನ್ಯಾರ್ಪಣೆ, ಅಪರಾದ ಪರಿಹಾರಾರ್ಥ ಬಲಿ, ಸಮಾಧಾನ ಬಲಿ, ಯಾಜಕನು, ಬಲಿ, ಹುಳಿಯಿಲ್ಲದ ರೊಟ್ಟಿ, ಹರಕೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H8002

ಸಲಹೆ, ಸೂಚನೆ, ಸಲಹೆ ಕೊಡಲ್ಪಟ್ಟಿದೆ, ಸಲಹೆಗಾರ, ಸಲಹೆಗಾರರು, ಜ್ಞಾನದ ಆಲೋಚನೆ, ಆಲೋಚನೆ ಹೇಳುವಾತ, ಆಲೋಚನೆ ಹೇಳುವವರು, ಜ್ಞಾನದ ಆಲೋಚನೆಗಳು

# ಪದದ ಅರ್ಥವಿವರಣೆ:

“ಜ್ಞಾನದ ಆಲೋಚನೆ” ಮತ್ತು “ಸಲಹೆ” ಎನ್ನುವ ಪದಗಳು ಒಂದೇ ಅರ್ಥವನ್ನು ಹೊಂದಿರುತ್ತವೆ, ಒಂದು ನಿರ್ಧಿಷ್ಟವಾದ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದೆನ್ನುವದರ ಕುರಿತಾಗಿ ಒಬ್ಬರಿಗೆ ಜ್ಞಾನದ ನಿರ್ಣಯವನ್ನು ತೆಗೆದುಕೊಳ್ಳಲು ಸಹಾಯ ಮಾಡುವುದನ್ನು ಸೂಚಿಸುತ್ತದೆ. ಜ್ಞಾನವುಳ್ಳ “ಆಲೋಚನೆ ಹೇಳುವಾತನು” ಅಥವಾ “ಸಲಹೆಗಾರನು” ಎಂದರೆ ಒಬ್ಬ ವ್ಯಕ್ತಿ ಸರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳುವುದಕ್ಕೆ ಸಲಹೆಗಳನ್ನು ಅಥವಾ ಜ್ಞಾನದ ಆಲೋಚನೆಗಳನ್ನು ಕೊಡುವ ವ್ಯಕ್ತಿ ಎಂದರ್ಥ.

  • ಅರಸರು ತಾವು ಆಳುತ್ತಿರುವ ಜನರ ಮೇಲೆ ಪ್ರಭಾವ ಬೀರುವಂತಹ ಪ್ರಾಮುಖ್ಯವಾದ ನಿರ್ಣಯಗಳನ್ನು ತೆಗೆದುಕೊಳ್ಳುವುದಕ್ಕೆ ಸಹಾಯ ಮಾಡಲು ತಮ್ಮ ಬಳಿ ಅಧೀಕೃತ ಸಲಹೆಗಾರರನ್ನು ಅಥವಾ ಜ್ಞಾನದ ಆಲೋಚನೆಗಳನ್ನು ಹೇಳುವವರನ್ನು ಇಟ್ಟುಕೊಳ್ಳುತ್ತಿದ್ದರು.
  • ಕೆಲವೊಂದುಬಾರಿ ಕೊಡಲ್ಪಟ್ಟ ಸಲಹೆ ಅಥವಾ ಜ್ಞಾನದ ಆಲೋಚನೆಯು ಸರಿಯಾಗಿರುವುದಿಲ್ಲ. ದುಷ್ಟ ಸಲಹೆಗಾರರು ಅರಸನಿಗೂ ಅಥವಾ ತನ್ನ ಜನರಿಗೂ ಹಾನಿಯನ್ನುಂಟು ಮಾಡುವ ನಿರ್ಣಯಗಳನ್ನು ತೆಗೆದುಕೊಳ್ಳುವಂತೆ ಅಥವಾ ಕಾರ್ಯಗಳನ್ನು ಮಾಡುವಂತೆ ಅರಸನನ್ನು ಒತ್ತಾಯ ಮಾಡುತ್ತಾರೆ.
  • ಸಂದರ್ಭಾನುಸಾರವಾಗಿ “ಸಲಹೆ” ಅಥವಾ “ಜ್ಞಾನದ ಆಲೋಚನೆ” ಎನ್ನುವ ಪದಗಳನ್ನು “ನಿರ್ಣಯ ತೆಗೆದುಕೊಳ್ಳುವುದರಲ್ಲಿ ಸಹಾಯ ಮಾಡುವುದು” ಅಥವಾ “ಎಚ್ಚರಿಕೆಗಳು” ಅಥವಾ “ಸೂಚನೆಗಳು” ಅಥವಾ “ಮಾರ್ಗದರ್ಶನಗಳು” ಎಂದೂ ಅನುವಾದ ಮಾಡಬಹುದು.
  • “ಜ್ಞಾನದ ಆಲೋಚನೆ” ಎನ್ನುವ ಪದಕ್ಕೆ “ಸಲಹೆ” ಅಥವಾ “ಸಲಹೆಗಳನ್ನು ಕೊಡು” ಅಥವಾ “ಎಚ್ಚರಿಸು” ಎನ್ನುವ ಪರ್ಯಾಯ ಪದಗಳುಂಟು.
  • “ಜ್ಞಾನದ ಆಲೋಚನೆ” (ಕೌನ್ಸಲ್) ಎನ್ನುವ ಪದವು ಮತ್ತು ಜನರ ಗುಂಪನ್ನು ಸೂಚಿಸುವ “ಹಿರಿಸಭೆ” (ಕೌನ್ಸಿಲ್) ಎನ್ನುವ ಪದವು ಬೇರೆ ಬೇರೆಯಾಗಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಎಚ್ಚರಿಸು, ಪವಿತ್ರಾತ್ಮ, ಜ್ಞಾನಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1697, H1847, H1875, H1884, H1907, H2940, H3245, H3272, H3289, H3982, H4156, H4431, H5475, H5779, H5843, H6440, H6963, H6098, H7592, H8458, G1010, G1011, G1012, G1106, G4823, G4824, G4825

ಸಸಿ ನಡು, ಸಸಿ ನೆಡುವುದು, ಸಸಿ ನೆಡಲಾಗಿದೆ, ಸಸಿ ನೆಡುತ್ತಾಯಿರುವುದು, ಸಸಿ ಹಚ್ಚಲ್ಪಟ್ಟರಿತ್ತದೆ, ಪುನರ್ ನೆಡಲಾಗಿದೆ, ವರ್ಗಾಯಿಸಲಾಯಿತು, ಬಿತ್ತು, ಬಿತ್ತುವುದು, ಬಿತ್ತಿದೆ, ಬಿತ್ತನೆಯ, ಬಿತ್ತುತ್ತಿರುವುದು

# ಪದದ ಅರ್ಥವಿವರಣೆ:

“ಸಸಿ ನಡು” ಎನ್ನುವುದು ಸಾಧಾರಣವಾಗಿ ಬೆಳೆಯುವಂತದ್ದನ್ನು ಮತ್ತು ನೆಲದಲ್ಲಿ ನಾಟಿದ್ದನ್ನು ಸೂಚಿಸುತ್ತದೆ. “ಬಿತ್ತು” ಎನ್ನುವ ಪದಕ್ಕೆ ಸಸ್ಯಗಳನ್ನು ಬೆಳೆಸುವ ಕ್ರಮದಲ್ಲಿ ನೆಲದಲ್ಲಿ ಬೀಜಗಳನ್ನು ನಾಟುವುದು ಎಂದರ್ಥ. “ಬಿತ್ತುವವನು” ಎಂದರೆ ಸಸಿಗಳ ಬೀಜಗಳನ್ನು ಅಥವಾ ಬಿತ್ತುವ ವ್ಯಕ್ತಿ ಎಂದರ್ಥ.

  • ಬಿತ್ತುವ ಅಥವಾ ನೆಡುವ ವಿಧಾನವು ಬೇರೆ ಬೇರೆಯಾಗಿರುವುದು, ಆದರೆ ಒಂದು ವಿಧಾನವೇನೆಂದರೆ ಕೈತುಂಬ ಬೀಜಗಳನ್ನು ತೆಗೆದುಕೊಂಡು, ಅವುಗಳನ್ನು ನೆಲದ ಮೇಲೆ ಚೆಲ್ಲುವುದಾಗಿರುತ್ತದೆ.
  • ಬೀಜಗಳನ್ನು ನೆಡುವುದಕ್ಕೆ ಇನ್ನೊಂದು ವಿಧಾನ ಏನೆಂದರೆ ನೆಲದಲ್ಲಿ ರಂಧ್ರಗಳನ್ನು ಮಾಡಿ, ಆ ರಂಧ್ರಗಳಲ್ಲಿ ಬೀಜಗಳನ್ನು ಹಾಕುವುದಾಗಿರುತ್ತದೆ.
  • “ಬಿತ್ತು” ಎನ್ನುವ ಪದವನ್ನು ಅಲಂಕಾರಿಕವಾಗಿಯೂ ಉಪಯೋಗಿಸಿಕೊಳ್ಳಬಹುದು, ಉದಾಹರಣೆಗೆ, “ಒಬ್ಬ ವ್ಯಕ್ತಿ ಏನನ್ನು ಬಿತ್ತುವವನೋ ಅದನ್ನೇ ಕೊಯ್ಯುವವನು.” ಅಂದರೆ ಆ ವ್ಯಕ್ತಿ ಏನಾದರೊಂದು ದುಷ್ಟ ಕಾರ್ಯವನ್ನು ಮಾಡಿದರೆ, ಅವನು ನಕಾರಾತ್ಮಕವಾದ ಫಲವನ್ನು ಹೊಂದಿಕೊಳ್ಳುವನು, ಆದರೆ ಆ ವ್ಯಕ್ತಿ ಒಳ್ಳೇಯ ಕಾರ್ಯವನ್ನು ಮಾಡಿದರೆ, ಅವನು ಸಕಾರಾತ್ಮಕ ಫಲವನ್ನು ಪಡೆಯುವನು.

# ಅನುವಾದ ಸಲಹೆಗಳು:

  • “ಬಿತ್ತು” ಎನ್ನುವ ಪದವನ್ನು “ಸಸಿ ನೆಡು” ಎಂದೂ ಅನುವಾದ ಮಾಡಬಹುದು. ಈ ಪದವನ್ನು ಅನುವಾದ ಮಾಡುವದಕ್ಕೆ ಉಪಯೋಗಿಸಿದ ಪದವು ಬೀಜಗಳನ್ನು ಬಿತ್ತುವುದೂ ಒಳಗೊಂಡಿರುವಂತೆ ನೋಡಿಕೊಳ್ಳಿರಿ.
  • “ಬಿತ್ತುವವನು” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ತೋಟದ ಮಾಲಿಕ” ಅಥವಾ “ರೈತ” ಅಥವಾ “ಬೀಜಗಳನ್ನು ನೆಡುವ ವ್ಯಕ್ತಿ” ಎನ್ನುವ ಅನೇಕ ಮಾತುಗಳು ಒಳಗೊಂಡಿರುತ್ತವೆ.
  • ಆಂಗ್ಲ ಭಾಷೆಯಲ್ಲಿ “ಬಿತ್ತು” ಎನ್ನುವ ಪದವನ್ನು ಕೇವಲ ಬೀಜಗಳನ್ನು ಬಿತ್ತುವುದಕ್ಕೆ ಮಾತ್ರವೇ ಉಪಯೋಗಿಸುತ್ತಾರೆ, ಆದರೆ “ಸಸಿ ನಡು” ಎನ್ನುವ ಮಾತನ್ನು ಕೂಡ ಬೀಜಗಳನ್ನು ಬಿತ್ತುವುದಕ್ಕೆ ಉಪಯೋಗಿಸುತ್ತಾರೆ, ಹಾಗೆಯೇ ಮರಗಳನ್ನು ನೆಡುವುದಕ್ಕೂ ಉಪಯೋಗಿಸುತ್ತಾರೆ. ಯಾವುದು ನೆಡಲ್ಪಟ್ಟಿದೆ ಎನ್ನುವುದರ ಮೇಲೆ ಆಧಾರಪಟ್ಟು ಇತರ ಭಾಷೆಗಳು ಅನೇಕ ವಿಭಿನ್ನ ಪದಗಳನ್ನು ಉಪಯೋಗಿಸುತ್ತಿರಬಹುದು.
  • “ಒಬ್ಬ ವ್ಯಕ್ತಿ ತಾನು ಬಿತ್ತಿದ್ದನ್ನೇ ಕೊಯ್ಯುವನು” ಎನ್ನುವ ಮಾತನ್ನು “ಕೆಲವೊಂದು ನಿರ್ದಿಷ್ಟವಾದ ಬೀಜಗಳೇ ಕೆಲವೊಂದು ಸಸ್ಯಗಳನ್ನು ಉಂಟುಮಾಡುತ್ತದೆ, ಇದೇ ರೀತಿಯಲ್ಲಿ ಒಬ್ಬ ವ್ಯಕ್ತಿಯ ಒಳ್ಳೇಯ ಕಾರ್ಯಗಳು ಒಳ್ಳೇಯ ಫಲವನ್ನು ಕೊಡುತ್ತವೆ ಮತ್ತು ಒಬ್ಬ ವ್ಯಕ್ತಿಯ ದುಷ್ಟ ಕಾರ್ಯಗಳು ದುಷ್ಟ ಫಲವನ್ನೇ ತೆಗೆದುಕೊಂಡು ಬರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ದುಷ್ಟ, ಒಳ್ಳೇಯ, ಕೊಯ್ಯು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2221, H2232, H2233, H2236, H4218, H4302, H5193, H7971, H8362, G4687, G4703, G5300, G5452 , G6037

ಸಂಹರಿಸು, ಸಂಹರಿಸುವುದು, ಸಂಹರಿಸಿದೆ, ಸಂಹಾರಕ, ಸಂಹಾರಕರು, ಸಂಹರಿಸುತ್ತಿದೆ

# ಪದದ ಅರ್ಥವಿವರಣೆ:

ಏನಾದರೊಂದನ್ನು ಸಂಹರಿಸು ಎಂದರೆ ಅದನ್ನು ಸಂಪೂರ್ಣವಾಗಿ ಕೊನೆಗೊಳ್ಳುವಂತೆ ಮಾಡು ಎಂದರ್ಥ. ಇದರಿಂದ ಅದು ಇನ್ನೆಂದಿಗೂ ಅಸ್ತಿತ್ವದಲ್ಲಿರಬಾರದು.

  • “ಸಂಹಾರಕ” ಎನ್ನುವದಕ್ಕೆ “ಸಂಹರಿಸುವ ವ್ಯಕ್ತಿ” ಎಂದು ಅಕ್ಷರಾರ್ಥವಿದೆ.
  • ಈ ಪದವನ್ನು ಹಳೇ ಒಡಂಬಡಿಕೆಯಲ್ಲಿ ಅನೇಕಬಾರಿ ಇತರ ಜನರನ್ನು ಅಂದರೆ ಆಕ್ರಮಿಸುವ ಸೈನ್ಯವನ್ನು ಸಂಹರಿಸುವ ಪ್ರತಿಯೊಬ್ಬರಿಗೆ ಸಾಧಾರಣವಾಗಿ ಉಪಯೋಗಿಸಲಾಗಿರುತ್ತದೆ,
  • ಐಗುಪ್ತದಲ್ಲಿ ಮೊದಲ ಸಂತಾನವನ್ನು ಸಾಯಿಸುವುದಕ್ಕೆ ದೇವರು ದೂತನನ್ನು ಕಳುಹಿಸಿದಾಗ, ಆ ದೂತನನ್ನು “ಮೊದಲ ಸಂತಾನದ ಸಂಹಾರಕ” ಎಂದು ಸೂಚಿಸಲಾಗಿದೆ. ಇದನ್ನು “ಮೊದಲ ಸಂತಾನವಾಗಿರುವ ಗಂಡು ಮಕ್ಕಳನ್ನು ಸಾಯಿಸುವ ದೂತ” ಎಂದೂ ಅನುವಾದ ಮಾಡಬಹುದು.
  • ಅಂತ್ಯ ಕಾಲದ ಕುರಿತಾಗಿ ಪ್ರಕಟನೆ ಗ್ರಂಥದಲ್ಲಿ ಸೈತಾನನನ್ನು ಅಥವಾ ಇತರ ದುಷ್ಟ ಆತ್ಮವನ್ನು “ಸಂಹಾರಕ” ಎಂದು ಕರೆಯಲಾಗಿದೆ. ಇವನೇ “ಸಂಹಾರಕನು” ಯಾಕಂದರೆ ದೇವರು ಉಂಟು ಮಾಡಿದ ಪ್ರತಿಯೊಂದನ್ನು ನಾಶಗೊಳಿಸುವುದು ಮತ್ತು ಸಂಹರಿಸುವುದೇ ಅವನ ಮುಖ್ಯ ಉದ್ದೇಶ.

(ಈ ಪದಗಳನ್ನು ಸಹ ನೋಡಿರಿ : ದೂತ, ಐಗುಪ್ತ, ಪಸ್ಕ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H6, H7, H622, H398, H1104, H1197, H1820, H1942, H2000, H2015, H2026, H2040, H2254, H2255, H2717, H2718, H2763, H2764, H3238, H3341, H3381, H3423, H3582, H3615, H3617, H3772, H3807, H4191, H4199, H4229, H4591, H4889, H5218, H5221, H5307, H5362, H5420, H5422, H5428, H5595, H5642, H6789, H6979, H7665, H7667, H7703, H7722, H7760, H7843, H7921, H8045, H8074, H8077, H8316, H8552, G355, G396, G622, G853, G1311, G1842, G2049, G2506, G2507, G2647, G2673, G2704, G3089, G3645, G4199, G5351, G5356

ಸಹಿಸು, ಸಹಿಸುಕೊಳ್ಳುವುದು, ಸಹಿಸಿಕೊಂಡಿದೆ, ಸಹಿಸುಕೊಳ್ಳುತ್ತಾಯಿರು, ಸಹನೆ

# ಪದದ ಅರ್ಥವಿವರಣೆ:

“ಸಹಿಸು” ಎನ್ನುವ ಪದಕ್ಕೆ ಅಂತಿಮವರೆಗೂ ಜೀವಿಸುವುದು ಅಥವಾ ಸಹನೆಯಿಂದ ಕಠಿಣವಾದದ್ದನ್ನು ತಾಳಿಕೊಂಡಿರುವುದು.

  • ಇದಕ್ಕೆ ಪರೀಕ್ಷೆ ಸಮಯ ಬಂದಾಗ ಕೈಬಿಡದೆ ಸ್ಥಿರವಾಗಿರು ಎನ್ನುವ ಅರ್ಥವೂ ಬರುತ್ತದೆ.
  • “ಸಹನೆ” ಎನ್ನುವ ಪದಕ್ಕೆ “ತಾಳ್ಮೆ” ಅಥವಾ “ವಿಚಾರಣೆ ಕೆಳಗೆ ಸಹಿಸಿಕೊಂಡಿರುವುದು” ಅಥವಾ “ಹಿಂಸೆಗಳಲ್ಲಿರುವಾಗ ದೃಢವಾಗಿರುವುದು” ಎಂದರ್ಥ.
  • “ಅಂತ್ಯದವರೆಗೂ ಸಹಿಸಿಕೊಂಡಿರುವುದಕ್ಕೆ” ಕ್ರೈಸ್ತರಿಗೆ ಪ್ರೋತ್ಸಾಹ ಕೊಡುವುದು ಎನ್ನುವುದಕ್ಕೆ ಯೇಸುವಿಗೆ ವಿಧೇಯರಾಗಿರೆಂದು ಅವರಿಗೆ ಹೇಳುವುದು ಎಂದರ್ಥ, ಅಂದರೆ ಅವರಿಗೆ ಶ್ರಮೆಗಳು ಬಂದರೂ ಸಹಿಸಿಕೊಂಡಿರ್ರಿ ಎಂದು ಹೇಳುವುದು ಎಂದರ್ಥ.
  • “ಶ್ರಮೆಗಳನ್ನು ಸಹಿಸಿಕೊಳ್ಳಿರಿ” ಎನ್ನುವ ಮಾತಿಗೆ “ಶ್ರಮೆಗಳನ್ನು ಅನುಭವಿಸಿರಿ” ಎಂದರ್ಥವೂ ಬರುತ್ತದೆ.

# ಅನುವಾದ ಸಲಹೆಗಳು:

  • “ಸಹಿಸು” ಎನ್ನುವ ಪದವನ್ನು ಅನುವಾದಿಸುವ ಬೇರೊಂದು ವಿಧಾನಗಳಲ್ಲಿ “ದೃಢ ನಿಶ್ಚಯತೆಯಿಂದಿರು” ಅಥವಾ “ನಂಬಿಕೆಯಿಂದಿರು” ಅಥವಾ “ನೀನು ಮಾಡಬೇಕೆಂದು ದೇವರು ಹೇಳಿದ್ದನ್ನು ಮಾಡುವುದರಲ್ಲಿ ಮುಂದಕ್ಕೆ ಸಾಗು” ಅಥವಾ “ಸ್ಥಿರವಾಗಿರು” ಎನ್ನುವ ಮಾತುಗಳನ್ನು ಉಪಯೋಗಿಸುತ್ತಾರೆ.
  • ಕೆಲವೊಂದು ಸಂದರ್ಭಗಳಲ್ಲಿ “ಸಹಿಸು” ಎನ್ನುವ ಪದವನ್ನು “ಅನುಭವಿಸು” ಅಥವಾ “ಅದರ ಮೂಲಕ ಹಾದು ಹೋಗು” ಎಂದೂ ಅನುವಾದ ಮಾಡುತ್ತಾರೆ.
  • ಅಂತಿಮವರೆಗೂ ಜೀವಿಸು ಎನ್ನುವ ಮಾತಿನ ಅರ್ಥದೊಂದಿಗೆ, “ಸಹಿಸು” ಎನ್ನುವ ಪದವನ್ನು “ಅಂತಿಮವರೆಗೂ” ಅಥವಾ “ಮುಂದುವರೆ” ಎಂದೂ ಅನುವಾದ ಮಾಡುತ್ತಾರೆ. “ಸಹಿಸಿಕೊಳ್ಳುವುದಿಲ್ಲ” ಎನ್ನುವ ಮಾತಿಗೆ “ಅಂತಿಮವರೆಗೂ ಇರುವುದಿಲ್ಲ” ಅಥವಾ “ಜೀವಿಸುವುದಕ್ಕೆ ಮುಂದುವರೆಯುವುದಿಲ್ಲ” ಎಂದೂ ಅನುವಾದ ಮಾಡಬಹುದು.
  • “ಸಹನೆ” ಎನ್ನುವ ಪದವನ್ನು ಅನುವಾದ ಮಾಡುವ ಅನೇಕ ವಿಧಾನಗಳಲ್ಲಿ “ದೃಢ ನಿಶ್ಚಯತೆಯಿಂದಿರು” ಅಥವ “ನಂಬುತ್ತಾಯಿರು” ಅಥವಾ “ನಂಬಿಗಸ್ಥನಾಗಿರು” ಎನ್ನುವ ಮಾತುಗಳನ್ನು ಸೇರಿಸುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ದೃಢ ನಿಶ್ಚಯತೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H386, H3201, H3557, H3885, H5331, H5375, H5975, G430, G907, G1526, G2005, G2076, G2553, G2594, G3114, G3306, G4722, G5278, G5281, G5297, G5342

ಸಹೋದರಿ, ಸಹೋದರಿಯರು

# ಪದದ ಅರ್ಥವಿವರಣೆ:

ಸಹೋದರಿ ಎನ್ನುವ ಪದವು ಇನ್ನೊಬ್ಬ ವ್ಯಕ್ತಿಯೊಂದಿಗೆ ಕನಿಷ್ಟ ಒಬ್ಬ ಪೋಷಕರನ್ನು ಹೊಂದಿರುವ ಇನ್ನೊಬ್ಬ ಹೆಣ್ಣುವ್ಯಕ್ತಿ ಎಂದರ್ಥವಾಗಿರುತ್ತದೆ. ಈಕೆಯನ್ನು ಇನ್ನೊಬ್ಬ ವ್ಯಕ್ತಿಯ ಸಹೋದರಿಯೆಂದು ಹೇಳಲ್ಪಡುತ್ತದೆ ಅಥವಾ ಇತರ ವ್ಯಕ್ತಿಯ ಸಹೋದರಿ ಎಂದು ಹೇಳಲ್ಪಡುತ್ತದೆ.

  • ಹೊಸ ಒಡಂಬಡಿಕೆಯಲ್ಲಿ “ಸಹೋದರಿ” ಎನ್ನುವ ಪದವನ್ನು ಕ್ರಿಸ್ತ ಯೇಸುವಿನಲ್ಲಿರುವ ಸಹ ವಿಶ್ವಾಸಿಯಾದ ಸ್ತ್ರೀಯಳನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಉಪಯೋಗಿಸಲ್ಪಟ್ಟಿರುತ್ತದೆ.
  • “ಸಹೋದರರು ಮತ್ತು ಸಹೋದರಿಯರು” ಎನ್ನುವ ಮಾತು ಕೆಲವೊಂದುಬಾರಿ ಕ್ರಿಸ್ತನಲ್ಲಿರುವ ವಿಶ್ವಾಸಿಗಳಾಗಿರುವ ಸ್ತ್ರೀ ಪುರುಷರೆಲ್ಲರನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ.
  • ಹಳೇ ಒಡಂಬಡಿಕೆ ಪುಸ್ತಕವಾಗಿರುವ ಪರಮಗೀತೆಗಳು ಎನ್ನುವ ಪುಸ್ತಕದಲ್ಲಿ “ಸಹೋದರಿ” ಎನ್ನುವ ಪದವು ಪ್ರೀತಿ ಮಾಡುವ ಸ್ತ್ರೀಯಳನ್ನು ಅಥವಾ ಹೆಂಡತಿಯನ್ನು ಸೂಚಿಸುತ್ತದೆ.

# ಅನುವಾದ ಸಲಹೆಗಳು:

  • ಈ ಪದವು ಬೇರೆ ಅರ್ಥವನ್ನು ಅಂದರೆ ತಪ್ಪು ಅರ್ಥವನ್ನು ಕೊಡದವರೆಗೂ ಸ್ವಂತ ಸಹೋದರಿಯನ್ನು ಸೂಚಿಸುವುದಕ್ಕೆ ಅನುವಾದ ಮಾಡುವ ಭಾಷೆಯಲ್ಲಿ ಉಪಯೋಗಿಸುವ ಅಕ್ಷರಾರ್ಥವಾದ ಪದದೊಂದಿಗೆ ಈ ಪದವನ್ನು ಅನುವಾದ ಮಾಡುವುದು ಉತ್ತಮ.
  • ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನದಲ್ಲಿ “ಕ್ರಿಸ್ತನಲ್ಲಿ ಸಹೋದರಿ” ಅಥವಾ “ಅತ್ಮೀಕವಾದ ಸಹೋದರಿ” ಅಥವಾ “ಯೇಸುವಿನಲ್ಲಿ ನಂಬಿಕೆಯಿಟ್ಟಿರುವ ಸ್ತ್ರೀ” ಅಥವ “ಸಹ ಸ್ತ್ರೀ ವಿಶ್ವಾಸಿ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • ಸಾಧ್ಯವಾದರೆ ಕುಟುಂಬದಲ್ಲಿ ಉಪಯೋಗಿಸುವ ಪದವನ್ನು ಉಪಯೋಗಿಸುವುದು ಒಳ್ಳೇಯದು.
  • “ವಿಶ್ವಾಸಿ” ಎನ್ನುವ ಪದಕ್ಕೆ ಭಾಷೆಯಲ್ಲಿ ಸ್ತ್ರೀಯನ್ನು ಸೂಚಿಸುವ ಪದವು ಇದ್ದರೆ, ಅದನ್ನೇ ಉಪಯೋಗಿಸುವುದು ಒಳ್ಳೇಯದು.
  • ಈ ಪದವನ್ನು ಪ್ರೇಮಿಗೆ ಅಥವಾ ಹೆಂಡತಿಗೆ ಸೂಚಿಸಿದಾಗ, “ಇಷ್ಟಪಟ್ಟವಳು” ಅಥವಾ “ಪ್ರೀತಿಯ” ಎಂದೂ ಸ್ತ್ರೀಯನ್ನು ಸೂಚಿಸುವ ಅನುವಾದವನ್ನು ಬಳಸಬಹುದು..

(ಈ ಪದಗಳನ್ನು ಸಹ ನೋಡಿರಿ : ಸಹೋದರ, ಕ್ರಿಸ್ತನಲ್ಲಿ, ಆತ್ಮ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H269, H1323, G27, G79

ಸಾತ್ವಿಕ, ಸಾಧುತ್ವ

# ಪದದ ಅರ್ಥವಿವರಣೆ:

“ಸಾತ್ವಿಕ” ಎನ್ನುವ ಪದವು ಒಳ್ಳೇಯವನಾಗಿ, ಅಧೀನದಲ್ಲಿರಲು ಮತ್ತು ಅನ್ಯಾಯವನ್ನು ಅನುಭವಿಸಲು ಸಿದ್ಧನಾಗಿರುವ ಒಬ್ಬ ವ್ಯಕ್ತಿಯನ್ನು ವಿವರಿಸುತ್ತದೆ. ಸಾಧುತ್ವ ಎನ್ನುವುದು ಕಠಿಣತ್ವ ಅಥವಾ ಬಲವಂತಿಕೆ ಕಾಣಿಸಿಕೊಂಡಾಗಲೂ ಒಳ್ಳೇಯತನದಿಂದ ಇರುವ ಸಾಮರ್ಥ್ಯವನ್ನು ಹೊಂದಿರುವುದು ಎಂದರ್ಥ.

  • ಸಾಧುತ್ವ ಎನ್ನುವುದು ಅನೇಕಬಾರಿ ದೀನತ್ವದೊಂದಿಗೆ ಸಂಬಂಧಿಸಲ್ಪಟ್ಟಿರುತ್ತದೆ.
  • ಈ ಪದವನ್ನು “ಮೃದುವಾದ” ಅಥವಾ “ಸೌಮ್ಯ-ವರ್ತನೆ” ಅಥವಾ “ಸಿಹಿ-ಮೃದುವಾದ” ಎಂದೂ ಅನುವಾದ ಮಾಡಬಹುದು.
  • “ಸಾಧುತ್ವ” ಎನ್ನುವ ಪದವು “ಮೃದುತ್ವ” ಅಥವಾ “ದೀನತ್ವ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ದೀನತ್ವ

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H6035, H6037, H6038, G4235, G4236, G4239, G4240

ಸಾಧಿಸು, ದೃಢ ಮತ್ತು ಅವಿರತ ಯತ್ನ

# ಪದದ ಅರ್ಥವಿವರಣೆ:

“ಸಾಧಿಸು” ಮತ್ತು “ದೃಢ ಮತ್ತು ಅವಿರತ ಯತ್ನ” ಎನ್ನುವ ಪದಗಳು ಎಷ್ಟೇ ಕಷ್ಟವಿದ್ದರೂ ಅಥವಾ ಎಷ್ಟೇ ಸಮಯ ತೆಗೆದುಕೊಂಡರೂ ಯಾವುದಾದರೊಂದನ್ನು ಮಾಡುವುದಕ್ಕೆ ಮುಂದೆವರಿಸುತ್ತಾ ಇರುವುದನ್ನು ಸೂಚಿಸುತ್ತದೆ.

ಸಾಧಿಸು ಎನ್ನುವ ಮಾತಿಗೆ ಅನೇಕ ವಿಧವಾದ ಕಷ್ಟ, ಹಿಂಸೆಗಳ ಮುಖಾಂತರ ಅಥವಾ ಕಠಿಣ ಪರಿಸ್ಥಿತಿಗಳ ಮುಖಾಂತರ ಹಾದು ಹೋಗುತ್ತಿದ್ದರೂ ಕ್ರಿಸ್ತನ ವಿಧಾನದಲ್ಲಿಯೇ ನಡೆದುಕೊಳ್ಳುವುದನ್ನೂ ಸೂಚಿಸುತ್ತದೆ.

  • “ದೃಢ ಮತ್ತು ಅವಿತರ ಯತ್ನ”ವನ್ನು ಒಬ್ಬ ವ್ಯಕ್ತಿ ಹೊಂದಿದ್ದಾನೆಂದರೆ, ಇದಕ್ಕೆ ಆ ವ್ಯಕ್ತಿ ಮಾಡಬೇಕಾದ ಕಾರ್ಯವನ್ನು ಎಷ್ಟೇ ಕಷ್ಟವಾಗಿದ್ದರೂ ಅಥವಾ ಎಷ್ಟೇ ನೋವನ್ನುಂಟು ಮಾಡಿದರೂ ಆ ಕಾರ್ಯವನ್ನು ಮಾಡುತ್ತಾ ಇರುವುದಕ್ಕೆ ಸಾಮರ್ಥ್ಯವನ್ನು ಹೊಂದಿದ್ದಾನೆ ಎಂದರ್ಥ,
  • ವಿಶೇಷವಾಗಿ ಸುಳ್ಳು ಬೋಧನೆಗಳನ್ನು ಎದುರುಗೊಳ್ಳುತ್ತಾ, ದೃಢ ಮತ್ತು ಅವಿತರ ಯತ್ನ ಬೇಕಾಗಿರುತ್ತದೆಯೆನ್ನುವುದರ ದೇವರ ಬೋಧನೆಯನ್ನು ನಂಬಲು ಮುಂದೆವರಿಯುವುದನ್ನು ಸೂಚಿಸುತ್ತದೆ.
  • ನಕಾರಾತ್ಮಕವಾದ ಅರ್ಥವನ್ನು ಹೊಂದಿದ “ಮೊಂಡು” ಎನ್ನುವ ಪದವನ್ನು ಸೂಚಿಸದಂತೆ ನೋಡಿಕೊಳ್ಳಿರಿ.

(ಈ ಪದಗಳನ್ನು ಸಹ ನೋಡಿರಿ : ಸಹನೆ, ವಿಚಾರಣೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: G3115, G4343, G5281

ಸಾಷ್ಟಾಂಗ ನಮಸ್ಕರಿಸು, ಸಾಷ್ಟಾಂಗ ನಮಸ್ಕರಿಸಿದೆ

# ಪದದ ಅರ್ಥವಿವರಣೆ:

“ಸಾಷ್ಟಾಂಗ ನಮಸ್ಕರಿಸು” ಎನ್ನುವ ಮಾತಿಗೆ ಮುಖವನ್ನು ನೆಲದ ದಿಕ್ಕಿಗೆ ತಿರುಗಿಸಿ ನೆಲದ ಮೇಲೆ ಉದ್ದಕ್ಕೆ ಮಲಗಿ ಕೈಗಳನ್ನು ಮುಂದಕ್ಕೆ ಚಾಚಿ ನಮಸ್ಕರಿಸುವುದು ಎಂದರ್ಥ.

  • ಯಾರಾದರೊಬ್ಬರ ಮುಂದೆ “ಅಡ್ಡಬಿದ್ದು ಸಾಷ್ಟಾಂಗ ಮಾಡು” ಅಥವಾ “ತನ್ನಷ್ಟಕ್ಕೆ ತಾನು ಸಾಷ್ಟಾಂಗ ಮಾಡುವುದು” ಎನ್ನುವ ಮಾತಿಗೆ ಆ ವ್ಯಕ್ತಿಯ ಮುಂದೆ ಆಕಸ್ಮಿಕವಾಗಿ ತುಂಬಾ ಕೆಳಕ್ಕೆ ಬಿದ್ದು ಬಾಗಿ ನಮಸ್ಕರಿಸುವುದು ಎಂದರ್ಥ.
  • ಸಾಧಾರಣವಾಗಿ ಈ ರೀತಿಯ ಸಾಷ್ಟಾಂಗ ನಮಸ್ಕಾರ ಮಾಡುವ ಸ್ಥಿತಿಯು ಯಾವುದಾದರೊಂದು ಅದ್ಭುತವನ್ನು ನಡೆದ ಕಾರಣದಿಂದ ಆಶ್ಚರ್ಯವನ್ನು, ಅಂಜುತನವನ್ನು ಮತ್ತು ವಿಸ್ಮಯವನ್ನು ತೋರಿಸುವ ಸ್ಪಂದನೆಯಾಗಿರುತ್ತದೆ. ಬಾಗಿ ಸಾಷ್ಟಾಂಗ ನಮಸ್ಕಾರ ಮಾಡಿರುವ ವ್ಯಕ್ತಿಗೆ ಘನವನ್ನು ಮತ್ತು ಗೌರವವನ್ನು ಕೂಡ ಈ ಪದವು ಸೂಚಿಸುತ್ತದೆ.
  • ಸಾಷ್ಟಾಂಗ ನಮಸ್ಕಾರ ಮಾಡುವುದೆನ್ನುವುದು ದೇವರನ್ನು ಆರಾಧಿಸುವ ಒಂದು ವಿಧಾನವಾಗಿರುತ್ತದೆ. ಯೇಸುವು ಅದ್ಭುತವನ್ನು ಮಾಡಿದ್ದಕ್ಕಾಗಿ ಆರಾಧನೆಯಲ್ಲಿ ಮತ್ತು ಕೃತಜ್ಞತೆಯನ್ನು ಸಲ್ಲಿಸುವುದರಲ್ಲಿ ಜನರು ಯೇಸುವಿಗೆ ಈ ವಿಧಾನದಲ್ಲಿ ಸ್ಪಂದನೆ ಮಾಡುತ್ತಿರುತ್ತಾರೆ ಅಥವಾ ಆತನು ದೊಡ್ಡ ಬೋಧಕನನ್ನಾಗಿ ಆತನನ್ನು ಘನಪಡಿಸಲು ಈ ರೀತಿಯಾಗಿ ಮಾಡುತ್ತಿರುತ್ತಾರೆ.
  • ಸಂದರ್ಭಾನುಸಾರವಾಗಿ “ಸಾಷ್ಟಾಂಗ ನಮಸ್ಕಾರ” ಎನ್ನುವ ಮಾತನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ನೆಲಕ್ಕೆ ಮುಖವನ್ನಿಟ್ಟು ಕೆಳಭಾಗಕ್ಕೆ ಬಾಗಿ ನಮಸ್ಕರಿಸುವುದು” ಅಥವಾ “ಆತನ ಮುಂದೆ ಮುಖವನ್ನು ಕೆಳಕ್ಕೆ ಬಾಗಿಸಿ ಆತನನ್ನು ಆರಾಧನೆ ಮಾಡುವುದು” ಅಥವಾ “ಆಶ್ಚರ್ಯಕರವಾದ ರೀತಿಯಲ್ಲಿ ನೆಲಕ್ಕೆ ಬಾಗಿ ನಮಸ್ಕರಿಸುವುದು” ಅಥವಾ “ಆರಾಧನೆ ಮಾಡುವುದು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • “ನಮಗೆ ನಾವು ಸಾಷ್ಟಾಂಗ ನಮಸ್ಕರಿಸುವುದಕ್ಕೆ ಆಗುವುದಿಲ್ಲ” ಎನ್ನುವ ಮಾತನ್ನು “ಆರಾಧನೆ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ” ಅಥವಾ “ಆರಾಧನೆಯಲ್ಲಿ ಮುಖವನ್ನು ಬಾಗಿಸಿ ನಮಸ್ಕರಿಸಿಕೊಳ್ಳುವುದಕ್ಕಾಗುವುದಿಲ್ಲ” ಅಥವಾ “ಕೆಳಕ್ಕೆ ಬಾಗಿ ಆರಾಧನೆ ಮಾಡಿಕೊಳ್ಳುವುದುದಕ್ಕಾಗುವುದಿಲ್ಲ” ಎಂದೂ ಅನುವಾದ ಮಾಡಬಹುದು.
  • “ತನ್ನಷ್ಟಕ್ಕೆ ಸಾಷ್ಟಾಂಗ ನಮಸ್ಕರಿಸು” ಎನ್ನುವ ಮಾತನ್ನು “ಆರಾಧನೆ” ಅಥವಾ “ಅವರ ಮುಂದೆ ಕೆಳಕ್ಕೆ ಬಾಗು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ವಿಸ್ಮಯ, ಬಾಗು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H5307, H5457, H6440, H6915, H7812

ಸಿದ್ಧಾಂತೆ

# ಪದದ ಅರ್ಥವಿವರಣೆ:

“ಸಿದ್ಧಾಂತೆ” ಎನ್ನುವ ಪದಕ್ಕೆ “ಬೋಧನೆ” ಎಂದು ಅಕ್ಷರಾರ್ಥವಿರುತ್ತದೆ. ಇದು ಧರ್ಮ ಸಂಬಂಧವಾದ ಬೋಧನೆಯನ್ನು ಸೂಚಿಸುತ್ತದೆ.

  • ಕ್ರೈಸ್ತ ಬೋಧನೆಗಳ ಸಂದರ್ಭದಲ್ಲಿ ನೋಡಿದಾಗ, “ಸಿದ್ಧಾಂತೆ” ಎನ್ನುವ ಪದವು ತಂದೆಯಾದ ದೇವರನ್ನು, ಮಗನಾದ ದೇವರನ್ನು ಮತ್ತು ಪವಿತ್ರಾತ್ಮ ದೇವರನ್ನು ಕುರಿತು ಹೇಳುವ ಬೋಧನೆಗಳೆಲ್ಲವನ್ನು, ಅಷ್ಟೇ ಅಲ್ಲದೇ ಅವರ ಗುಣಲಕ್ಷಣಗಳೆಲ್ಲವನ್ನು ಮತ್ತು ಅವರು ಮಾಡಿದ ಪ್ರತಿಯೊಂದು ಕಾರ್ಯವನ್ನು ಸೂಚಿಸುತ್ತದೆ
  • ಅಷ್ಟೇಅಲ್ಲದೆ ಇದು ದೇವರಿಗೆ ಮಹಿಮೆ ತರುವಂತಹ ಪರಿಶುದ್ಧವಾದ ಜೀವನವನ್ನು ಯಾವರೀತಿ ಜೀವಿಸಬೇಕೆಂದೆನ್ನುವುದರ ಕುರಿತಾಗಿ ದೇವರು ಬೋಧಿಸುವ ಪ್ರತಿಯೊಂದನ್ನು ಸೂಚಿಸುತ್ತದೆ.
  • “ಸಿದ್ಧಾಂತೆ” ಎನ್ನುವ ಪದವು ಕೆಲವೊಂದುಬಾರಿ ಮನುಷ್ಯರಿಂದ ಬರುವ ಲೌಕಿಕವಾದ ಧರ್ಮ ಬೋಧನೆಗಳನ್ನು ಅಥವಾ ತಪ್ಪು ಬೋಧನೆಗಳನ್ನು ಸೂಚಿಸುವುದಕ್ಕೆ ಉಪಯೋಗಿಸುತ್ತಾರೆ. ಸಂದರ್ಭವು ಸರಿಯಾದ ಅರ್ಥವನ್ನು ಸ್ಪಷ್ಟಪಡಿಸುತ್ತದೆ.
  • ಈ ಪದವನ್ನು “ಬೋಧನೆ” ಎಂದೂ ಅನುವಾದ ಮಾಡುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ಬೋಧನೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3948, H4148, H8052, G1319, G1322, G2085

ಸಿಂಹಗಳು, ಸಿಂಹ, ಹೆಣ್ಣು ಸಿಂಹ, ಹೆಣ್ಣು ಸಿಂಹಗಳು

# ಪದದ ಅರ್ಥವಿವರಣೆ:

ಸಿಂಹ ಎನ್ನುವುದು ಬೆಕ್ಕಿನ ಹಾಗೆ ಇರುವ ದೊಡ್ಡ ಪ್ರಾಣಿಯಾಗಿರುತ್ತದೆ, ಇದು ಬೇಟೆಯಾಡುವಾಗ ಕಡಿಯುವುದಕ್ಕೆ ಮತ್ತು ಸಾಯಿಸುವುದಕ್ಕೆ ಶಕ್ತಿಯುಳ್ಳ ಹಲ್ಲುಗಳನ್ನು ಮತ್ತು ಉಗುರುಗಳನ್ನು ಹೊಂದಿರುತ್ತದೆ.

  • ಸಿಂಹಗಳಿಗೆ ಬಲವಾದ ದೇಹಗಳಿರುತ್ತವೆ ಮತ್ತು ಅವುಗಳ ಬೇಟೆಯಲ್ಲಿ ಹಿಡಿಯುವಕ್ಕೆ ತುಂಬಾ ವೇಗವಾಗಿ ಓಡುತ್ತವೆ. ಅವುಗಳ ಕೂದಲುಗಳು ತುಂಬಾ ಚಿಕ್ಕದಾಗಿದ್ದು, ಅವು ಬಂಗಾರದ ಗೋಧಿ ಕಂದು ಬಣ್ಣದಲ್ಲಿರುತ್ತವೆ.
  • ಗಂಡು ಸಿಂಹಗಳ ತಲೆಯ ಮೇಲೆ ವೃತ್ತಾಕಾರದಲ್ಲಿ ಉದ್ದನೆಯ ಕೂದಲುಗಳನ್ನು ಒಳಗೊಂಡಿರುತ್ತದೆ.
  • ಸಿಂಹಗಳು ತಿನ್ನುವುದಕ್ಕೆ ಇತರ ಪ್ರಾಣಿಗಳನ್ನು ಕೊಲ್ಲುತ್ತವೆ ಮತ್ತು ಅವು ಮನುಷ್ಯರಿಗೆ ತುಂಬಾ ಹಾನಿಕರವಾಗಿರುತ್ತವೆ.
  • ಅರಸನಾದ ದಾವೀದನು ಚಿಕ್ಕವನಾಗಿದ್ದಾಗ, ಅವನು ಕಾಯುತ್ತಿರುವ ಕುರಿಗಳ ಮೇಲೆ ಸಿಂಹಗಳು ಧಾಳಿ ಮಾಡಿದಾಗ, ಆ ಸಿಂಹಗಳನ್ನು ಕೊಂದಿದ್ದನು.
  • ಸಂಸೋನನು ಕೂಡ ತನ್ನ ಬರಿದ ಕೈಗಳಿಂದಲೇ ಸಿಂಹವನ್ನು ಕೊಂದಿದ್ದನು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ದಾವೀದ, ಚಿರತೆ, ಸಂಸೋನ, ಕುರಿಗಳು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H738, H739, H744, H3715, H3833, H3918, H7826, H7830, G3023

ಸಿಂಹಾಸನ, ಸಿಂಹಾಸನಗಳು, ಸಿಂಹಾಸನದಲ್ಲಿರುವುದು

# ಪದದ ಅರ್ಥವಿವರಣೆ:

ಸಿಂಹಾಸನ ಎನ್ನುವುದು ಪಾಲಕನು ಕುಳಿತುಕೊಳ್ಳುವುದಕ್ಕೆ ವಿಶೇಷವಾಗಿ ತಯಾರು ಮಾಡಿಸಿರುವ ಕುರ್ಚಿಯಾಗಿರುತ್ತದೆ, ಪಾಲಕನು ಅದರಲ್ಲಿ ಕುಳಿತುಕೊಂಡು ಜನರು ಹೇಳಿಕೊಳ್ಳುವ ಪ್ರತಿಯೊಂದು ಮನವಿಯನ್ನು ಕೇಳಿ, ಪ್ರಾಮುಖ್ಯವಾದ ವಿಷಯಗಳಲ್ಲಿ ನಿರ್ಣಯ ತೆಗೆದುಕೊಲ್ಲುತ್ತಾನೆ.

  • ಸಿಂಹಾಸನ ಎನ್ನುವುದು ಪಾಲಕನಿಗಿರುವ ಶಕ್ತಿಗೆ ಮತ್ತು ಅಧಿಕಾರಕ್ಕೆ ಗುರುತಾಗಿರುತ್ತದೆ.
  • “ಸಿಂಹಾಸನ” ಎನ್ನುವ ಪದವು ಅನೇಕಬಾರಿ ಅಲಂಕಾರಿಕವಾಗಿ ಪಾಲಕನನ್ನು, ಆತನ ಆಳ್ವಿಕೆಯನ್ನು, ಅಥವಾ ತನ್ನ ಶಕ್ತಿಯನ್ನು ಸೂಚಿಸುತ್ತದೆ. (ನೋಡಿರಿ: ಲಾಕ್ಷಣಿಕ ಪ್ರಯೋಗ
  • ಸತ್ಯವೇದದಲ್ಲಿ ದೇವರನ್ನು ಅನೇಕಬಾರಿ ಸಿಂಹಾನದಲ್ಲಿ ಕುಳಿತಿರುವ ಅರಸನನ್ನಾಗಿ ಚಿತ್ರೀಕರಿಸಲ್ಪಟ್ಟಿದ್ದಾನೆ. ತಂದೆಯಾದ ದೇವರ ಬಲಗೈಯಲ್ಲಿರುವ ಸಿಂಹಾಸನದ ಮೇಲೆ ಕುಳಿತಿದ್ದವನನ್ನಾಗಿ ಚಿತ್ರೀಕರಿಸಲ್ಪಟ್ಟಿದ್ದಾನೆ.
  • ಆಕಾಶವು ದೇವರ ಸಿಂಹಾಸನವಾಗಿದೆಯೆಂದು ಯೇಸು ಹೇಳಿದ್ದಾರೆ. ಈ ಪದವನ್ನು ಅನುವಾದ ಬೇರೊಂದು ವಿಧಾನಗಳಲ್ಲಿ “ದೇವರು ಅರಸನಾಗಿ ಆಳುವ ಸ್ಥಳ” ಎನ್ನುವ ಮಾತು ಗೊಂಡಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಅಧಿಕಾರ, ಶಕ್ತಿ, ಅರಸ, ಆಳ್ವಿಕೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3427, H3676, H3678, H3764, H7675, G968, G2362

ಸೀಮೆ, ಸೀಮೆಗಳು, ಪ್ರಾಂತೀಯ

# ಸತ್ಯಾಂಶಗಳು:

ಸೀಮೆ ಎನ್ನುವುದು ಒಂದು ದೇಶದ ಅಥವಾ ಒಂದು ಸಾಮ್ರಾಜ್ಯದ ಭಾಗವಾಗಿರುತ್ತದೆ ಅಥವಾ ವಿಭಾಗ ವಾಗಿರುತ್ತದೆ. “ಪ್ರಾಂತೀಯ” ಎನ್ನುವ ಪದವು ಸೀಮೆಗೆ ಸಂಬಂಧಪಟ್ಟಿರುವ ಯಾವುದಾದರೊಂದನ್ನು ವಿವರಿಸುತ್ತದೆ, ಉದಾಹರಣೆಗೆ ಪ್ರಾಂತೀಯ ಪಾಲಕನು.

  • ಉದಾಹರಣೆಗೆ, ಪುರಾತನ ಪಾರಸಿಯ ಸಾಮ್ರಾಜ್ಯವು ಪ್ರಾಂತ್ಯಗಳಾಗಿ ವಿಭಾಗಸಿಲ್ಪಟ್ಟಿದ್ದವು, ಉದಾಹರಣೆಗೆ, ಮಿದ್ಯಾ, ಪಾರಸಿಯ, ಸಿರಿಯಾ ಮತ್ತು ಐಗುಪ್ತ.
  • ಹೊಸ ಒಡಂಬಡಿಕೆಯ ಕಾಲದಲ್ಲಿ ರೋಮಾ ಸಾಮ್ರಾಜ್ಯ ಅನೇಕ ಪ್ರಾಂತ್ಯಗಳಾಗಿ ವಿಭಾಗಿಸಲ್ಪಟ್ಟಿದ್ದವು, ಉದಾಹರಣೆ, ಮೆಕೆದೋನ್ಯ, ಆಸ್ಯ, ಸಿರಿಯಾ, ಯೂದಾ, ಸಮಾರ್ಯ, ಗಲಿಲಾಯ ಮತ್ತು ಗಲಾತ್ಯ.
  • ಪ್ರತಿಯೊಂದು ಸೀಮೆಯು ತನ್ನದೇಯಾದ ಪಾಲಿಸುವ ಅಧಿಕಾರವನ್ನು ಹೊಂದಿರುತ್ತದೆ, ಇವರೆಲ್ಲರೂ ಅರಸನಿಗೆ ಅಥವಾ ಆ ಸಾಮ್ರಾಜ್ಯದ ಪಾಲಕನಿಗೆ ಒಳಗಾಗಿರುತ್ತಾರೆ. ಈ ಪಾಲಕನನ್ನು ಕೆಲವೊಂದುಬಾರಿ “ಸೀಮೆಯ ಅಧಿಕಾರಿ” ಅಥವಾ “ಪ್ರಾಂತ್ಯದ ಪಾಲಕ” ಎಂದೂ ಕರೆಯುತ್ತಾರೆ.
  • “ಸೀಮೆ” ಮತ್ತು “ಪ್ರಾಂತ್ಯ” ಎನ್ನುವ ಪದಗಳನ್ನು “ಪ್ರದೇಶ” ಮತ್ತು “ಪ್ರಾದೇಶಿಕ” ಎಂದೂ ಕರೆಯುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ಆಸ್ಯ, ಐಗುಪ್ತ, ಎಸ್ತೇರಳು, ಗಲಾತ್ಯ, ಗಲಿಲಾಯ, ಯೂದಾ, ಮೆಕದೋನ್ಯ, ಮೇದ್ಯ, ರೋಮಾ, ಸಮಾರ್ಯ, ಸಿರಿಯಾ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H4082, H4083, H5675, H5676, G1885

ಸುಂಕ, ಸುಂಕಗಳು, ಸುಂಕ ಹಾಕಿದೆ, ಸುಂಕ ಹಾಕುವುದು, ತೆರಿಗೆ, ಸುಂಕವನ್ನು ಕಟ್ಟುವವರು, ತೆರಿಗೆ ಅಧಿಕಾರಿ, ತೆರಿಗೆ ಅಧಿಕಾರಿಗಳು

# ಪದದ ಅರ್ಥವಿವರಣೆ:

“ಸುಂಕ” ಮತ್ತು “ಸುಂಕಗಳು” ಎನ್ನುವ ಪದಗಳು ಜನರ ಮೇಲೆ ಅಧಿಕಾರದಲ್ಲಿರುವ ಪ್ರಭುತ್ವಕ್ಕೆ ಜನರು ಸಲ್ಲಿಸುವ ಹಣವನ್ನು ಅಥವಾ ವಸ್ತುಗಳನ್ನು ಸೂಚಿಸುತ್ತದೆ. “ತೆರಿಗೆ ಅಧಿಕಾರಿ” ಪ್ರಭುತ್ವದ ಕೆಲಸಗಾರನಾಗಿರುತ್ತಾನೆ, ಜನರು ತೆರಿಗೆಗಳನ್ನು ಪ್ರಭುತ್ವಕ್ಕೆ ಸಲ್ಲಿಸಬೇಕಾದ ಹಣವನ್ನು ಪಡೆದುಕೊಳ್ಳುವ ಕೆಲಸವನ್ನು ಹೊಂದಿರುತ್ತಾನೆ.

  • ತೆರಿಗೆಯಾಗಿ ಕೊಟ್ಟ ಹಣದ ಮೊತ್ತವು ಸಾಧಾರಣವಾಗಿ ಒಬ್ಬ ವ್ಯಕ್ತಿಯ ಆಸ್ತಿ ಅಥವಾ ಒಂದು ವಸ್ತುವಿನ ಬೆಲೆಯ ಮೇಲೆ ಆಧಾರಪಟ್ಟಿರುತ್ತದೆ.
  • ಯೇಸು ಮತ್ತು ಅಪೊಸ್ತಲರ ಕಾಲದಲ್ಲಿ ರೋಮಾ ಪ್ರಭುತ್ವವು ರೋಮಾ ಸೀಮೆಯಲ್ಲಿ ನಿವಾಸವಾಗಿರುವ ಪ್ರತಿಯೊಬ್ಬರಿಂದ ಸುಂಕವನ್ನು ಕಟ್ಟಿಸಿಕೊಳ್ಳುತ್ತಿದ್ದರು, ಇವರಲ್ಲಿ ಯೆಹೂದ್ಯರು ಇದ್ದಿದ್ದರು.
  • ಒಂದುವೇಳೆ ಸುಂಕವನ್ನು ಕಟ್ಟದ ವ್ಯಕ್ತಿಯ ವಿರುದ್ಧವಾಗಿ ಪ್ರಭುತ್ವವು ಕಾನೂನುಬದ್ಧವಾದ ಕ್ರಮವನ್ನು ಕೈಗೊಂಡು, ಅವನು ಸಲ್ಲಿಸಬೇಕಾದ ಹಣವನ್ನು ಹಿಂಪಡೆಯಬಹುದು.
  • ರೋಮಾ ಸಾಮ್ರಾಜ್ಯದಲ್ಲಿ ನಿವಾಸವಾಗಿರುವ ಪ್ರತಿಯೊಬ್ಬರಿಗೆ ಸುಂಕವನ್ನು ಹಾಕುವುದಕ್ಕೆ ಜನಗಣತಿಯನ್ನು ನಿರ್ವಹಿಸಿದ್ದರು, ಇದಕ್ಕೆ ಯೋಸೇಫನು ಮತ್ತು ಮರಿಯಳು ಕೂಡ ಜನಗಣತಿಯಲ್ಲಿ ತಮ್ಮ ಹೆಸರುಗಳನ್ನು ಸೇರಿಸಲು ಬೆತ್ಲೆಹೇಮಿಗೆ ಪ್ರಯಾಣ ಮಾಡಿದರು.
  • “ಸುಂಕ” ಎನ್ನುವ ಪದವನ್ನು “ಕಟ್ಟಬೇಕಾದ ಪಾವತಿ” ಅಥವಾ “ಪ್ರಭುತ್ವದ ಹಣ” ಅಥವಾ “ದೇವಾಲಯದ ಹಣ” ಎಂದು ಸಂದರ್ಭಾನುಗುಣವಾಗಿ ಅನುವಾದ ಮಾಡಬಹುದು.
  • “ಸುಂಕವನ್ನು ಪಾವತಿಸು” ಎನ್ನುವ ಮಾತನ್ನು “ಪ್ರಭುತ್ವಕ್ಕೆ ಹಣವನ್ನು ಕಟ್ಟು” ಅಥವಾ “ಪ್ರಭುತ್ವಕ್ಕಾಗಿ ಹಣವನ್ನು ಪಡೆದುಕೋ” ಅಥವಾ “ಕಟ್ಟಬೇಕಾದ ಹಣವನ್ನು ಸಲ್ಲಿಸು” ಎಂದೂ ಅನುವಾದ ಮಾಡಬಹುದು. “ಸುಂಕಗಳನ್ನು ಸಂಗ್ರಹಿಸು” ಎನ್ನುವ ಮಾತನ್ನು “ಪ್ರಭುತ್ವಕ್ಕಾಗಿ ಹಣವನ್ನು ಸಂಗ್ರಹಿಸು” ಎಂದೂ ಅನುವಾದ ಮಾಡಬಹುದು.
  • “ತೆರಿಗೆ ಅಧಿಕಾರಿ” ಎನ್ನುವ ಮಾತು ಪ್ರಭುತ್ವಕ್ಕಾಗಿ ಕೆಲಸ ಮಾಡುವ ವ್ಯಕ್ತಿಯನ್ನು ಮತ್ತು ಜನರು ಕಟ್ಟಬೇಕಾದ ಹಣವನ್ನು ಕಟ್ಟಿಸಿಕೊಳ್ಳುವ ವ್ಯಕ್ತಿಯನ್ನು ಸೂಚಿಸುತ್ತದೆ.
  • ರೋಮಾ ಪ್ರಭುತ್ವಕ್ಕೆ ತೆರಿಗೆಗಳನ್ನು ಸಂಗ್ರಹಿಸುವ ಜನರು ಅನೇಕಬಾರಿ ಪ್ರಭುತ್ವಕ್ಕೆ ಕಟ್ಟಬೇಕಾದ ಹಣಕ್ಕಿಂತ ಹೆಚ್ಚಿನ ಹಣವನ್ನು ಜನರಿಂದ ಪಡೆದುಕೊಳ್ಳುತ್ತಿದ್ದರು. ತೆರಿಗೆ ಅಧಿಕಾರಿಗಳು ಬರುವಂತಹ ಹೆಚ್ಚಿನ ಮೊತ್ತವನ್ನು ತಮಗಾಗಿಯೇ ಇಟ್ಟುಕೊಳ್ಳುತ್ತಿದ್ದರು.
  • ತೆರಿಗೆ ಅಧಿಕಾರಿಗಳು ಈ ರೀತಿಯಾಗಿ ಜನರನ್ನು ಮೋಸಗೊಳಿಸುವುದರಿಂದ, ಯೆಹೂದ್ಯರು ಅವರನ್ನು ಪಾಪಿಗಳಲ್ಲಿ ಅತೀ ಕೆಟ್ಟವರೆಂದು ಪರಿಗಣಿಸಿದ್ದರು.
  • ಯೆಹೂದ್ಯರು ಕೂಡ ಯೆಹೂದ್ಯ ಸುಂಕದ ಅಧಿಕಾರಿಗಳನ್ನು ತಮ್ಮ ಸ್ವಂತ ಜನರ ದ್ರೋಹಿಗಳನ್ನಾಗಿ ಪರಿಗಣಿಸಿದ್ದರು, ಯಾಕಂದರೆ ಯೆಹೂದ್ಯ ಜನರನ್ನು ಒತ್ತಡಕ್ಕೆ ಗುರಿ ಮಾಡಿದ ರೋಮಾ ಪ್ರಭುತ್ವಕ್ಕೆ ಅವರು ಕೆಲಸ ಮಾಡಿದ್ದರು.
  • “ಸುಂಕ ಅಧಿಕಾರಿಗಳು ಮತ್ತು ಪಾಪಿಗಳು” ಎನ್ನುವ ಮಾತು ಹೊಸ ಒಡಂಬಡಿಕೆಯಲ್ಲಿ ತುಂಬಾ ಸಾಧಾರಣವಾದ ಮಾತಾಗಿದ್ದಿತ್ತು, ಇದು ಯೆಹೂದ್ಯರು ತೆರಿಗೆ ಅಧಿಕಾರಿಗಳನ್ನು ಎಷ್ಟು ಹೆಚ್ಚಾಗಿ ತೊರೆಯುತ್ತಿದ್ದರೆನ್ನುವುದನ್ನು ತೋರಿಸುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಯೆಹೂದ್ಯ, ರೋಮ್, ಪಾಪ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಉದಾಹರಣೆಗಳು:

34:06 “ಪ್ರಾರ್ಥನೆ ಮಾಡಿಕೊಳ್ಳುವುದಕ್ಕೆ ಇಬ್ಬರು ವ್ಯಕ್ತಿಗಳು ದೇವಾಲಯಕ್ಕೆ ಹೋದರು. ಅವರಲ್ಲಿ ಒಬ್ಬರು ತೆರಿಗೆ ವಸೂಲಿದಾರನಾಗಿದ್ದನು, ಮತ್ತು ಇನ್ನೊಬ್ಬ ವ್ಯಕ್ತಿ ಧರ್ಮದ ನಾಯಕನಾಗಿದ್ದನು.” 34:07 “ನಾನು ಇತರ ಮನುಷ್ಯರಂತೆ - ಅಂದರೆ ಕಳ್ಳರು, ಅನ್ಯಾಯಸ್ತರು, ವ್ಯಭಿಚಾರಿಗಳು ಅಥವಾ ಸುಂಕದವನಂತೆ ನಾನು ಪಾಪಿಯಾಗಿರುವುದಿಲ್ಲದಿದ್ದಕ್ಕಾಗಿ ದೇವರೇ ನಿಮಗೆ ವಂದನೆಗಳು” ಎಂದು ಧರ್ಮದ ನಾಯಕನು ಪ್ರಾರ್ಥನೆ ಮಾಡಿದನು. 34:09 “ಆದರೆ ಸುಂಕದವನು ಧರ್ಮದ ನಾಯಕನಿಗೆ ತುಂಬಾ ದೂರವಾಗಿ ನಿಂತಿದ್ದನು, ಕನಿಷ್ಟ ಪರಲೋಕದ ಕಡೆಗೆ ಕಣ್ಣುಗಳನ್ನು ಎತ್ತಿ ನೋಡಲಿಲ್ಲ. ಆದರೆ ಅವನು ತನ್ನ ಎದೆಯನ್ನು ನೆಲಕ್ಕೆ ಬಾಗಿಸಿ, “ದೇವರೆ ನಾನು ಪಾಪಿಯಾಗಿದ್ದರಿಂದ ನನ್ನನ್ನು ಕರುಣಿಸು” ಎಂದು ಪ್ರಾರ್ಥನೆ ಮಾಡಿದನು.” 34:10 “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ, ದೇವರು ಸುಂಕದವನ ಪ್ರಾರ್ಥನೆಯನ್ನು ಕೇಳಿ, ಅವನನ್ನು ನೀತಿವಂತನೆಂದು ಪ್ರಕಟಿಸಿದನು” ಎಂದು ಯೇಸು ಹೇಳಿದನು. 35:01 ಒಂದು ದಿನ ಯೇಸು ಅನೇಕಮಂದಿ ಸುಂಕದವರಿಗೆ ಮತ್ತು ಅಲ್ಲಿಗೆ ಬಂದಿರುವ ಪಾಪಿಗಳಿಗೆ ಬೋಧನೆ ಮಾಡುತ್ತಿದ್ದನು.

# ಪದ ಡೇಟಾ:

  • Tax Collector: Strong's: H5065, H5674, G5057, G5058

ಸುತ್ತಿ, ಕಟ್ಟಿಕೋ

# ಪದದ ಅರ್ಥವಿವರಣೆ

“ಕಟ್ಟಿಕೊಳ್ಳುವುದು” ಎನ್ನುವ ಪದವು ಏನಾದರು ಒಂದರ ಸುತ್ತಲು ಯಾವುದಾದರು ಒಂದನ್ನು ಕಟ್ಟುವುದು ಎಂದರ್ಥ. ಅದು ಸಹಜವಾಗಿ ನಿಲುವಂಗಿ ಅಥವಾ ವಸ್ತ್ರವನ್ನು ಅದರ ಸ್ಥಾನದಲ್ಲಿ ಇರಲು ನಡುಕಟ್ಟು ಅಥವಾ ಚೌಕಟ್ಟನ್ನು ಸೊಂಟದ ಸುತ್ತಲು ಕಟ್ಟಿಕೊಳ್ಳುವುದನ್ನು ಸೂಚಿಸುತ್ತದೆ.

  • ಸತ್ಯವೇದದಲ್ಲಿ ಸಹಜವಾಗಿ ಉಪಯೋಗಿಸಲ್ಪಟ್ಟಿರುವ “ನಡುವನ್ನು ಕಟ್ಟಿಕೋ” ಎನ್ನುವ ಮಾತು ಒಬ್ಬ ವ್ಯಕ್ತಿ ಯಾವ ಅಡಚಣೆಗಳಿಲ್ಲದೆ ನಡೆಯುವದಕ್ಕೆ ಅಥವಾ ಕೆಲಸ ಮಾಡಲು ತಮ್ಮ ವಸ್ತ್ರಗಳನ್ನು ನಡುಕಟ್ಟಿನಲ್ಲಿ ಸಿಕ್ಕಿಸಿಕೊಳ್ಳುವುದನ್ನು ಸೂಚಿಸುತ್ತದೆ.
  • ಈ ವಾಕ್ಯವು “ಕೆಲಸ ಮಾಡಲು ಸಿದ್ಧನಾಗು” ಅಥವಾ ಕಷ್ಟಕರವಾದ ಕೆಲಸ ಮಾಡಲು ಸಿದ್ಧವಾಗುವುದನ್ನು ಸಹ ಸೂಚಿಸುತ್ತದೆ.
  • “ನಡುವನ್ನು ಕಟ್ಟಿಕೋ” ಎನ್ನುವ ವಾಕ್ಯವು ಅದೇ ಅರ್ಥವುಳ್ಳ ಪದಗಳನ್ನು ಉಪಯೋಗಿಸಿ ಬೇಕಾದ ಭಾಷೆಯಲ್ಲಿ ಅನುವಾದ ಮಾಡಬಹುದು. ಅಥವಾ “ಹೋರಾಟಕ್ಕಾಗಿ ನಿನ್ನನ್ನು ನೀನು ಸಿದ್ಧಪಡಿಸಿಕೊ” ಅಥವಾ “ನಿನ್ನನ್ನು ನೀನು ಸಿದ್ಧಪಡಿಸಿಕೋ” ಎಂದು ಅಲಂಕಾರಿಕ ರೂಪದಲ್ಲಿ ಅನುವಾದ ಮಾಡಬಹುದು.
  • “ಕಟ್ಟಿಕೋ” ಎನ್ನುವ ಪದವನ್ನು “ಸುತ್ತಲು” ಅಥವಾ “ಹೊದಿಕೆ” ಅಥವಾ “ನಡುಕಟ್ಟಿನಿಂದ” ಎಂದು ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ನಡು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H247, H640, H2290, H2296, H8151, G328, G1241, G2224, G4024

ಸುರುಳಿ, ಸುರುಳಿಗಳು

# ಪದದ ಅರ್ಥವಿವರಣೆ:

ಪುರಾತನ ಕಾಲಗಳಲ್ಲಿ ಸುರುಳಿ ಎನ್ನುವುದು ಚರ್ಮದಿಂದ ಅಥವಾ ಪಾಪಿರಸ್ (ಮರದ ತೊಗಟೆ) ಎನ್ನುವುದರಿಂದ ತಯಾರಿಸಲ್ಪಟ್ಟ ಉದ್ದವಾದ, ಸುತ್ತಿರುವ ಹಾಳೆಯಾಗಿರುತ್ತದೆ.

  • ಸುರುಳಿಯ ಮೇಲೆ ಬರೆದನಂತರ ಅಥವಾ ಸುರುಳಿಯಲ್ಲಿರುವುದನ್ನು ಓದಿದನಂತರ, ಈ ಸುರುಳಿಯ ಎರಡು ಬದಿಗೆ ಕಟ್ಟಿರುವ ಕಟ್ಟಿಗೆಗಳನ್ನು ಉಪಯೋಗಿಸುವುದರಿಂದ ಜನರು ಸುತ್ತಿರುತ್ತಾರೆ.
  • ಸುರುಳಿಗಳು ಲೇಖನಗಳಿಗೆ ಮತ್ತು ಕಾನೂನುಬದ್ಧವಾದ ಪತ್ರಗಳಿಗೆ ಉಪಯೋಗಿಸುತ್ತಿದ್ದರು.
  • ಕೆಲವೊಂದುಬಾರಿ ಸುರುಳಿಗಳಲ್ಲಿ ಸಂದೇಶಗಳನ್ನು ಬರೆದು, ಮೇಣದಿಂದ ಮುದ್ರಿಸಿ ಅವುಗಳನ್ನು ಸಂದೇಶವಾಹಕರಿಂದ ಕಳುಹಿಸುತ್ತಿದ್ದರು. ಸುರುಳಿಯನ್ನು ಪಡೆದುಕೊಳ್ಳುತ್ತಿರುವಾಗ ಮೇಣವು ಇನ್ನೂ ಇರುತ್ತಿದ್ದರೆ, ಆ ಸುರುಳಿಯನ್ನು ತೆಗೆದುಕೊಳ್ಳುವವನು ಅದನ್ನು ಯಾರು ತೆರೆದಿಲ್ಲವೆಂದು, ಆ ಸುರುಳಿಯನ್ನು ಓದಲಿಲ್ಲವೆಂದು ತಿಳಿದುಕೊಳ್ಳುವನು.
  • ಈ ಸುರುಳಿಗಳಲ್ಲಿ ಇಬ್ರಿ ಲೇಖನಗಳನ್ನು ಒಳಗೊಂಡಿರುತ್ತವೆ, ಇವುಗಳನ್ನು ಸಮಾಜ ಮಂದಿರಗಳಲ್ಲಿ ಗಟ್ಟಿಯಾಗಿ ಓದುತ್ತಿದ್ದರು.

(ಈ ಪದಗಳನ್ನು ಸಹ ನೋಡಿರಿ : ಮುದ್ರೆ, ಸಮಾಜ ಮಂದಿರ, ದೇವರ ವಾಕ್ಯ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H4039, H4040, H5612, G974, G975

ಸುಳ್ಳು ಪ್ರವಾದಿ, ಸುಳ್ಳು ಪ್ರವಾದಿಗಳು

# ಪದದ ಅರ್ಥವಿವರಣೆ

ತನ್ನ ಸಂದೇಶ ದೇವರಿಂದ ಅವನು ಪಡೆದಿದ್ದಾನೆಂದು ಸುಳ್ಳಾಗಿ ಹೇಳಿಕೊಳ್ಳುವವನನ್ನು ಸುಳ್ಳು ಪ್ರವಾದಿಯೆಂದು ಕರೆಯುತ್ತಾರೆ.

  • ಸಹಜವಾಗಿ ಸುಳ್ಳು ಪ್ರವಾದಿಗಳ ಪ್ರವಾದನೆ ನೆರವೇರುವುದಿಲ್ಲ. ಅಂದರೆ, ಅವು ನಿಜವಾಗುವದಿಲ್ಲ.
  • ಸುಳ್ಳು ಪ್ರವಾದಿಗಳು ಬೋಧಿಸುವ ಸಂಗತಿಗಳು ಸತ್ಯವೇದಕ್ಕೆ ಪಾಕ್ಷಿಕವಾಗಿ ಅಥವಾ ಸಂಪೂರ್ಣವಾಗಿ ವಿರೋದವಾಗಿರುತ್ತವೆ.
  • ಈ ಪದವನ್ನು “ದೇವರ ಪ್ರತಿನಿಧಿ ಎಂದು ಸುಳ್ಳಾಗಿ ಹೇಳಿಕೊಳ್ಳುವ ವ್ಯಕ್ತಿ” ಅಥವಾ “ದೇವರ ಮಾತುಗಳನ್ನು ಹೇಳುತ್ತಿದ್ದೇನೆಂದು ಸುಳ್ಳು ಹೇಳುವವನು” ಎಂದು ಅನುವಾದ ಮಾಡಬಹುದು.
  • ತಾವು ದೇವರಿಂದ ಬಂದಿದ್ದೇವೆಂದು ಜನರನ್ನು ಮೋಸಮಾಡುವ ಅನೇಕ ಸುಳ್ಳು ಪ್ರವಾದಿಗಳು ಅಂತ್ಯಕಾಲದಲ್ಲಿ ಬರುತ್ತಾರೆಂದು ಹೊಸ ಒಡಂಬಡಿಕೆ ಭೋದಿಸುತ್ತಿದೆ.

(ಈ ಪದಗಳನ್ನು ಸಹ ನೋಡಿರಿ : ನೆರವೇರಿಸು, ಪ್ರವಾದಿ, ಸತ್ಯ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: G5578

ಸೂಳೆ, ಸೂಳೆತನ ಮಾಡಿದೆ, ಸೂಳೆಯಾಗಿಸು, ವೇಶ್ಯೆ, ಹಾದರಗಿತ್ತಿ

# ಪದದ ಅರ್ಥವಿವರಣೆ:

“ಸೂಳೆ” ಮತ್ತು “ವೇಶ್ಯೆ” ಎನ್ನುವ ಪದಗಳೆರಡು ಭಕ್ತಿಪರವಾದ ಹಕ್ಕುಗಳಿಗೋಸ್ಕರ ಅಥವಾ ಹಣಕ್ಕಾಗಿ ಲೈಂಗಿಕ ಕ್ರಿಯೆಗಳನ್ನು ಮಾಡುವ ವ್ಯಕ್ತಿಯನ್ನು ಸೂಚಿಸುತ್ತದೆ. ಸೂಳೆಯರು ಅಥವಾ ವೇಶ್ಯರು ಎನ್ನುವವರು ಸಾಧಾರಣವಾಗಿ ಸ್ತ್ರೀಯರಾಗಿರುತ್ತಾರೆ, ಆದರೆ ಕೆಲವುಮಂದಿ ಪುರುಷರೂ ಇರುತ್ತಾರೆ.

  • ಸತ್ಯವೇದದಲ್ಲಿ “ಸೂಳೆ” ಎನ್ನುವ ಪದವು ಕೆಲವೊಂದುಬಾರಿ ಕಣಿಯನ್ನು ಅಭ್ಯಾಸ ಮಾಡುವ ಅಥವಾ ಸುಳ್ಳು ದೇವರುಗಳನ್ನು ಆರಾಧಿಸುವ ವ್ಯಕ್ತಿಯನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಉಪಯೋಗಿಸಲ್ಪಟ್ಟಿರುತ್ತದೆ.
  • “ವೇಶ್ಯಯಾಗಿ ನಡೆದುಕೋ” ಎನ್ನುವ ಮಾತಿಗೆ ಅನೈತಿಕವಾದ ಲೈಂಗಿಕತೆಯಿಂದ ವೇಶ್ಯಯಂತೆ ನಡೆದುಕೋ ಎಂದರ್ಥವಾಗಿರುತ್ತದೆ. ಈ ಮಾತನ್ನು ವಿಗ್ರಹಗಳನ್ನು ಆರಾಧನೆ ಮಾಡುವ ವ್ಯಕ್ತಿಯನ್ನು ಸೂಚಿಸುವುದಕ್ಕೆ ಬೈಬಲಿನಲ್ಲಿ ಉಪಯೋಗಿಸಲ್ಪಟ್ಟಿರುತ್ತದೆ.
  • ಯಾವುದಾದರೊಂದಕ್ಕೆ “ಸೂಳೆ ಸ್ವತಃವಾಗಿ” ಹೋಗುವುದು ಎನ್ನುವ ಮಾತಿಗೆ ಲೈಂಗಿಕವಾಗಿ ಅನೈತಿಕತೆ ಎಂದರ್ಥ ಅಥವಾ ಅಲಂಕಾರಿಕವಾಗಿ ಸೂಚಿಸಿದಾಗ, ಸುಳ್ಳು ದೇವರುಗಳನ್ನು ಆರಾಧನೆ ಮಾಡುವುದರ ಮೂಲಕ ದೇವರಿಗೆ ಅಪನಂಬಿಗಸ್ತರಾಗಿರುವುದು ಎಂದರ್ಥ.
  • ಪುರಾತನ ಕಾಲಗಳಲ್ಲಿ ಕೆಲವೊಂದು ಅನ್ಯ ದೇವಾಲಯಗಳಲ್ಲಿ ತಮ್ಮ ಪೂಜೆಗಳಲ್ಲಿರುವಂತೆ ಪುರುಷ ಮತ್ತು ಸ್ತ್ರೀ ವೇಶ್ಯರನ್ನು ಉಪಯೋಗಿಸುತ್ತಿದ್ದರು.
  • ಈ ಪದವನ್ನು ಸೂಳೆಯನ್ನು ಸೂಚಿಸುವುದಕ್ಕೆ ಅನುವಾದ ಭಾಷೆಯಲ್ಲಿ ಉಪಯೋಗಿಸುವ ಬೇರೊಂದು ಪದದೊಂದಿಗೆ ಅಥವಾ ಮಾತಿನೊಂದಿಗೆ ಅನುವಾದ ಮಾಡಬಹುದು. ಕೆಲವೊಂದು ಭಾಷೆಗಳಲ್ಲಿ ಈ ಪದಕ್ಕೆ ನಯನುಡಿಯ ಪದವನ್ನು ಉಪಯೋಗಿಸಲ್ಪಟ್ಟಿರುತ್ತಾರೆ. (ನೋಡಿರಿ: ಸಮ್ಯೋಕ್ತಿ

(ಈ ಪದಗಳನ್ನು ಸಹ ನೋಡಿರಿ : ವ್ಯಭಿಚಾರ, ಸುಳ್ಳು ದೇವರು, ಲೈಂಗಿಕ ಅನೈತಿಕತೆ, ಸುಳ್ಳು ದೇವರು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2154, H2181, H2183, H2185, H6945, H6948, H8457, G4204

ಸೃಷ್ಟಿಸು, ಸೃಷ್ಟಿಸುತ್ತದೆ, ಸೃಷ್ಟಿಸಲ್ಪಟ್ಟ, ಸೃಷ್ಟಿ, ಸೃಷ್ಟಿಕರ್ತ

# ಪದದ ಅರ್ಥವಿವರಣೆ

“ಸೃಷ್ಟಿಸು” ಎನ್ನುವ ಪದಕ್ಕೆ ಏನನ್ನಾದರೂ ಮಾಡುವುದು ಅಥವಾ ಏನಾದರು ಉಂಟುಮಾಡುವುದು ಎಂದು ಅರ್ಥ. ಏನಾದರು ಸೃಷ್ಟಿಸಲ್ಪಟ್ಟಿದ್ದರೆ ಅದನ್ನು “ಸೃಷ್ಟಿ” ಎಂದು ಕರೆಯುತ್ತಾರೆ. ದೇವರನ್ನು “ಸೃಷ್ಟಿಕರ್ತ” ಎಂದು ಕರೆಯುತ್ತಾರೆ ಯಾಕಂದರೆ ಈ ವಿಶ್ವವನ್ನೆಲ್ಲ ಅಸ್ತಿತ್ವಕ್ಕೆ ಬರುವಂತೆ ಆತನೇ ಮಾಡಿದ್ದಾನೆ.

  • ದೇವರು ಲೋಕವನ್ನು ಸೃಷ್ಟಿಸಿದ್ದಾನೆ ಎಂದು ಸೂಚಿಸಲು ಈ ಪದವನ್ನು ಉಪಯೋಗಿಸಿದರೆ, ಆತನು ಶೂನ್ಯದಿಂದ ಅದನ್ನು ಮಾಡಿದ್ದಾನೆ ಎಂದು ಅದು ಅರ್ಥನೀಡುತ್ತದೆ.
  • ಮನುಷ್ಯರು ಏನಾದರು “ಸೃಷ್ಟಿಸಿದರೆ”, ಅವರು ಈಗಾಗಲೇ ಇರುವ ವಸ್ತುವುಗಳನ್ನು ಉಪಯೋಗಿಸಿ ಬೇರೆ ವಸ್ತುವನ್ನು ಮಾಡಿದ್ದರೆ ಎಂದು ಅದರ ಅರ್ಥವಾಗಿರುತ್ತದೆ.
  • ಕೆಲವೊಮ್ಮೆ “ಸೃಷ್ಟಿಸು” ಎನ್ನುವ ಪದವನ್ನು ಅಮೂರ್ತವಾದ ವಸ್ತುಗಳನ್ನು ವಿವರಿಸಲು ಉಪಯೋಗಿಸುತ್ತಾರೆ, ಉದಾಹರಣೆಗೆ ಶಾಂತಿಯನ್ನು ಸೃಷ್ಟಿಸುವುದು, ಅಥವಾ ಯಾರಲ್ಲಾದರೂ ಪವಿತ್ರವಾದ ಹೃದಯವನ್ನು ಉಂಟುಮಾಡುವುದು.
  • ದೇವರು ಮೊಟ್ಟಮೊದಲು ಲೋಕದಲ್ಲಿರುವ ಎಲ್ಲವನ್ನು ಸೃಷ್ಟಿಸಿದನ್ನು ಸೂಚಿಸುವಂತೆ “ಸೃಷ್ಟಿ” ಎನ್ನುವ ಪದವನ್ನು ಉಪಯೋಗಿಸಬಹುದು. ದೇವರು ಸೃಷ್ಟಿಸಿದ ಎಲ್ಲವನ್ನು ಸೂಚಿಸಲು ಈ ಪದವನ್ನು ಉಪಯೋಗಿಸಬಹುದು. ಕೆಲವೊಮ್ಮೆ “ಸೃಷ್ಟಿ” ಎನ್ನುವ ಪದವು ಲೋಕದಲ್ಲಿರುವ ಮನುಷ್ಯರನ್ನು ಮಾತ್ರವೇ ಸೂಚಿಸುತ್ತದೆ.

# ಅನುವಾದ ಸಲಹೆಗಳು:

  • ಕೆಲವೊಂದು ಭಾಷೆಗಳಲ್ಲಿ ದೇವರು ಲೋಕವನ್ನು “ಶೂನ್ಯದಿಂದ” ಸೃಷ್ಟಿಸಿದನು ಎನ್ನುವ ಅರ್ಥವನ್ನು ಸ್ಪಷ್ಟಪಡಿಸಲು ಆ ರೀತಿ ನೇರವಾಗಿ ಹೇಳಬೇಕಾಗಿರುತ್ತದೆ.
  • “ಲೋಕದ ಸೃಷ್ಟಿಯಾದ ಕಾಲದಿಂದ” ಎನ್ನುವ ವಾಕ್ಯಕ್ಕೆ “ದೇವರು ಲೋಕವನ್ನು ಸೃಷ್ಟಿಸಿದ ಕಾಲದಿಂದ” ಎಂದರ್ಥ.
  • ಅದೇರೀತಿಯಾಗಿ, “ಸೃಷ್ಟಿಯ ಪ್ರಾರಂಭದಲ್ಲಿ” ಎನ್ನುವ ವಾಕ್ಯವನ್ನು “ದೇವರು ಆದಿಯಲ್ಲಿ ಲೋಕವನ್ನು ಸುಷ್ಟಿಸಿದಾಗ”, ಅಥವಾ “ಲೋಕವು ಪ್ರಪ್ರಥಮವಾಗಿ ಸೃಷ್ಟಿಸಲ್ಪಟ್ಟಾಗ” ಎಂದು ಅನುವಾದ ಮಾಡಬಹುದು.
  • “ಸರ್ವ ಸೃಷ್ಟಿಗೆ” ಶುಭವಾರ್ತೆಯನ್ನು ಹೇಳಬೇಕು ಅಂದರೆ “ಭೂಲೋಕದಲ್ಲಿ ಇರುವ ಎಲ್ಲಾ ಜನರಿಗೆ” ಶುಭವಾರ್ತೆ ಹೇಳಬೇಕು ಎಂದರ್ಥ.
  • “ಸಮಸ್ತ ಸೃಷ್ಟಿ ಆನಂದಿಸಲಿ” ಎಂದರೆ “ದೇವರು ಸೃಷ್ಟಿಸಿದ ಸಮಸ್ತವು ಆನಂದಿಸಲಿ” ಎಂದರ್ಥ.
  • ಸಂಧರ್ಭಾನುಸಾರವಾಗಿ, “ಸೃಷ್ಟಿಸು” ಎನ್ನುವ ಪದವನ್ನು “ಮಾಡು” ಅಥವಾ “ಉಂಟುಮಾಡು” ಅಥವಾ “ಶೂನ್ಯದಿಂದ ಉಂಟುಮಾಡು” ಎಂದು ಅನುವಾದ ಮಾಡಬಹುದು.
  • “ಸೃಷ್ಟಿಕರ್ತ” ಎನ್ನುವ ಪದವನ್ನು “ಎಲ್ಲವನ್ನು ಸೃಷ್ಟಿಸಿದಾತನು” ಅಥವಾ “ಸರ್ವ ಪ್ರಪಂಚವನ್ನು ಉಂಟುಮಾಡಿದ ದೇವರು” ಎಂದು ಅನುವಾದ ಮಾಡಬಹುದು.
  • “ನಿಮ್ಮ ಸೃಷ್ಟಿಕರ್ತ” ಎನ್ನುವ ಪದಗಳನ್ನು “ನಿಮ್ಮನ್ನುಂಟುಮಾಡಿದ ದೇವರು” ಅಥವಾ “ನಿಮ್ಮನ್ನು ಸೃಷ್ಟಿಸಿದ ದೇವರು” ಎಂದು ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ದೇವರು, ಶುಭವರ್ತೆ, ಲೋಕ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3335, H4639, H6213, H6385, H7069, G2041, G2602, G2675, G2936, G2937, G2939, G4160, G5480

ಸೆರೆ ಸಿಕ್ಕುವುದು, ಬಂಧಿತರು, ಬಂಧಿಸುವುದು, ಸೆರೆ ಸಿಕ್ಕಿದ್ದಾರೆ, ಸೆರೆಯಲ್ಲಿ

# ಪದದ ಅರ್ಥವಿವರಣೆ:

“ಸೆರೆ” ಮತ್ತು “ಸೆರೆಯಲ್ಲಿ” ಎನ್ನುವ ಪದಗಳು ಜನರನ್ನು ಹಿಡಿದುಕೊಂಡು ಹೋಗುವುದನ್ನು ಮತ್ತು ಅವರು ನಿವಾಸ ಮಾಡುವುದಕ್ಕೆ ಇಷ್ಟಪಡದ ಸ್ಥಳದಲ್ಲಿ ಅಂದರೆ ವಿದೇಶದಲ್ಲಿ ನಿವಾಸ ಮಾಡುವಂತೆ ಬಲವಂತಿಕೆ ಮಾಡುವುದನ್ನು ಸೂಚಿಸುತ್ತದೆ.

  • ಯೂದಾ ರಾಜ್ಯದಿಂದ ಬಂದಿರುವ ಇಸ್ರಾಯೇಲ್ಯರು ಸುಮಾರು ಎಪ್ಪತ್ತು ವರ್ಷಗಳ ಕಾಲ ಬಾಬೆಲೋನಿಯದಲ್ಲಿ ಸೆರೆಯಲ್ಲಿದ್ದರು.
  • ಯಾವ ದೇಶವು ಸೆರೆಗೊಯ್ಯಲ್ಪಟ್ಟಿರುತ್ತದೋ, ಆ ದೇಶಕ್ಕಾಗಿ ಅಥವಾ ಆ ಜನರಿಗಾಗಿ ಬಂಧಿತರಾಗಿರುವ ಜನರು ಕೆಲಸ ಮಾಡಬೇಕಾಗಿರುತ್ತದೆ.
  • ದಾನಿಯೇಲ ಮತ್ತು ನೆಹೆಮೀಯರವರು ಬಾಬೆಲೋನಿಯ ಅರಸನಾಗಿ ಕೆಲಸ ಮಾಡಿದ ಬಂಧಿತರಾಗಿದ್ದರು (ಅಥವಾ ಸೆರೆಗೊಯ್ಯಲ್ಪಟ್ಟವರಾಗಿದ್ದರು).
  • “ಸೆರೆ ಹಿಡಿಯುವುದು” ಎನ್ನುವ ಮಾತಿನ ಭಾವವ್ಯಕ್ತೀಕರಣ ಏನಂದರೆ ಒಬ್ಬರನ್ನು ಹಿಡಿದುಕೊಂಡು ಹೋಗುವುದರ ಕುರಿತಾಗಿ ಇನ್ನೊಂದು ರೀತಿಯಲ್ಲಿ ಮಾತನಾಡುವ ವಿಧಾನವಾಗಿರುತ್ತದೆ.
  • “ನಿಮ್ಮನ್ನು ಸೆರೆ ಹಿಡಿದುಕೊಂಡು ಹೋಗುತ್ತೇವೆ” ಎನ್ನುವ ಭಾವವ್ಯಕ್ತೀಕರಣವನ್ನು “ಬಂಧಿತರಾಗಿ ಜೀವಿಸುವುದಕ್ಕೆ ನಿಮ್ಮನ್ನು ಬಲವಂತಿಕೆ ಮಾಡುತ್ತೇವೆ” ಅಥವಾ “ನಿಮ್ಮ ಖೈದಿಗಳನ್ನಾಗಿ ಇನ್ನೊಂದು ದೇಶಕ್ಕೆ ಸೆರೆ ಹಿಡಿದುಕೊಂಡು ಹೋಗುತ್ತೇವೆ” ಎಂದೂ ಅನುವಾದ ಮಾಡಬಹುದು.
  • ಅಲಂಕಾರ ಭಾವನೆಯಲ್ಲಿ, ಪ್ರತಿಯೊಂದು ಆಲೋಚನೆಯನ್ನು “ಸೆರೆಹಿಡಿದು”, ಕ್ರಿಸ್ತನಿಗೆ ವಿಧೇಯರಾಗುವಂತೆ ಮಾಡಬೇಕು ಎಂದು ಅಪೊಸ್ತಲನಾದ ಪೌಲನು ಕ್ರೈಸ್ತರಿಗೆ ಹೇಳಿದ್ದಾನೆ.
  • ಪಾಪ ಮಾಡುವದರಿಂದ ಯಾವರೀತಿ ಒಬ್ಬ ವ್ಯಕ್ತಿ “ಸೆರೆಗೊಯ್ಯಲ್ಪಡುತ್ತಾನೋ” ಎನ್ನುವುದರ ಕುರಿತಾಗಿಯೂ ಆತನು ಮಾತನಾಡಿದ್ದಾನೆ. ಇದಕ್ಕೆ ಅವನು ಪಾಪದಿಂದ “ನಿಯಂತ್ರಿಸಲ್ಪಡುತ್ತಿದ್ದಾನೆ” ಎಂದರ್ಥ.

# ಅನುವಾದ ಸಲಹೆಗಳು

  • ಸಂದರ್ಭಕ್ಕೆ ತಕ್ಕಂತೆ, “ಸೆರೆ ಹಿಡಿ” ಎನ್ನುವ ಮಾತನ್ನು, “ಸ್ವತಂತ್ರದಿಂದಿರುವುದಕ್ಕೆ ಅನುಮತಿಸಬೇಡಿ” ಅಥವಾ “ಸೆರೆಯಲ್ಲಿ ಹಾಕಿರಿ” ಅಥವಾ “ವಿದೇಶದಲ್ಲಿ ಜೀವಿಸುವುದಕ್ಕೆ ಬಲವಂತಿಕೆ ಮಾಡಿರಿ” ಎಂದೂ ಅನುವಾದ ಮಾಡಬಹುದು.
  • “ಸೆರೆ ಹಿಡಿದಿದ್ದೇವೆ” ಅಥವಾ “ಸೆರೆ ತೆಗೆದುಕೊಂಡಿದ್ದೇವೆ” ಎನ್ನುವ ಭಾವವನ್ನು ಕೊಡುವ ಮಾತುಗಳನ್ನು “ಬಂಧಿಸಿದ್ದೇವೆ” ಅಥವಾ “ಸೆರೆಗೆ ಹಾಕಿದ್ದೇವೆ” ಅಥವಾ “ವಿದೇಶಿ ಭೂಮಿಗೆ ಹೋಗುವುದಕ್ಕೆ ಬಲವಂತಿಕೆ ಮಾಡಿದ್ದೇವೆ” ಎಂದೂ ಅನುವಾದ ಮಾಡಬಹುದು.
  • “ಬಂಧಿತರು” ಎನ್ನುವ ಪದವನ್ನು “ಸೆರೆಗೆ ಸಿಕ್ಕಿದ ಜನರು” ಅಥವಾ “ಬಾನಿಸರಾದ ಜನರು” ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಸಾರವಾಗಿ “ಸೆರೆಯಲ್ಲಿ” ಎನ್ನುವ ಪದವನ್ನು “ಸೆರೆವಾಸ” ಅಥವಾ “ಹೊರ ಹಾಕಲ್ಪಡುವುದು” ಅಥವಾ “ವಿದೇಶದಲ್ಲಿ ಜೀವಿಸುವುದಕ್ಕೆ ಬಲವಂತಿಕೆ ಮಾಡುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಬಾಬೆಲೋನ, ಹೊರದೂಡು, ಸೆರೆ, ಮುಟ್ಟುಗೋಲು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1123, H1473, H1540, H1546, H1547, H2925, H6808, H7617, H7622, H7628, H7633, H7686, H7870, G161, G162, G163, G164, G2221

ಸೆರೆ, ಖೈದಿ, ಖೈದಿಗಳು, ಸೆರೆಗಳು, ಬಂಧಿಸು, ಬಂಧಿಸುವುದು, ಬಂಧಿಸಲಾಗಿದೆ, ಬಂಧನ, ಬಂಧನಗಳು

# ಪದದ ಅರ್ಥವಿವರಣೆ:

“ಸೆರೆ” ಎನ್ನುವ ಪದವು ಖೈದಿಗಳು ತಾವು ಮಾಡಿದ ಅಪರಾಧಗಳಿಗೆ ಶಿಕ್ಷೆಯಾಗಿ ಅವರನ್ನು ಒಂದು ಇರಿಸುವ ಒಂದು ಕೊಠಡಿ ಸ್ಥಳವನ್ನು ಸೂಚಿಸುತ್ತದೆ. “ಖೈದಿ” ಎಂದರೆ ಸೆರೆಯಲ್ಲಿ ಹಾಕಲ್ಪಟ್ಟ ವ್ಯಕ್ತಿ ಎಂದರ್ಥ.

  • ನ್ಯಾಯ ವಿಚಾರಣೆಯಲ್ಲಿ ತೀರ್ಪು ಹೊಂದುವುದಕ್ಕೆ ನಿರೀಕ್ಷಿಸಲು ಸೆರೆಯಲ್ಲಿ ಈ ವ್ಯಕ್ತಿಯನ್ನು ಇಟ್ಟಿರುತ್ತಾರೆ.
  • “ಬಂಧಿಸಲ್ಪಟ್ಟಿದೆ” ಎನ್ನುವ ಪದಕ್ಕೆ “ಸೆರೆಮನೆಯಲ್ಲಿ ಹಾಕಲ್ಪಡುವುದು” ಅಥವಾ “ಸೆರೆಯಲ್ಲಿ ಇಟ್ಟಿರುವುದು” ಎಂದರ್ಥ.
  • ಅನೇಕಮಂದಿ ಪ್ರವಾದಿಗಳು ಮತ್ತು ಇತರ ದೇವರ ದಾಸರು ಏನೂ ತಪ್ಪು ಮಾಡದಿದ್ದರೂ ಅವರನ್ನು ಸೆರೆಯಲ್ಲಿ ಹಾಕಿದ್ದರು.

# ಅನುವಾದ ಸಲಹೆಗಳು:

  • “ಸೆರೆ” ಎನ್ನುವ ಪದಕ್ಕೆ ಇನ್ನೊಂದು ಪರ್ಯಾಯ ಪದ “ಜೈಲು” ಆಗಿರುತ್ತದೆ.
  • ಈ ಪದವನ್ನು “ನೆಲಮನೆ” ಎಂದೂ ಅನುವಾದ ಮಾಡಬಹುದು, ಅನೇಕ ಸಂದರ್ಭಗಳಲ್ಲಿ ಸೆರೆಯು ನೆಲ ಭಾಗದಲ್ಲಿದ್ದಿರಬಹುದು ಅಥವಾ ಭವನದ ಮುಖ್ಯ ಅಳ ಭಾಗದಲ್ಲಿರಬಹುದು ಅಥವಾ ಇಂತರ ಭವನದಲ್ಲಿರಬಹುದು.
  • “ಖೈದಿಗಳು” ಎನ್ನುವ ಪದವನ್ನು ಶತ್ರುವಿನಿಂದ ಸೆರೆ ಹಿಡಿಯಲ್ಪಟ್ಟ ಜನರನ್ನು ಸಾಧಾರಣವಾಗಿ ಸೂಚಿಸುತ್ತದೆ, ಸೆರೆಗೊಯ್ದವರನ್ನು ಅವರ ಇಷ್ಟಕ್ಕೆ ವಿರುದ್ಧವಾಗಿ ಬೇರೊಂದು ಸ್ಥಳದಲ್ಲಿ ಇಡುತ್ತಾರೆ. ಈ ಅರ್ಥವನ್ನು ಅನುವಾದ ಮಾಡುವ ಇನ್ನೊಂದು ವಿಧಾನದಲ್ಲಿ “ಬಂಧಿತರು” ಎನ್ನುವ ಪದವನ್ನು ಉಪಯೋಗಿಸುತ್ತಾರೆ.
  • “ಬಂಧಿಸಲಾಗಿದೆ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಖೈದಿಯಾಗಿ ಇಡಲಾಗಿದೆ” ಅಥವಾ “ಸೆರೆಗೊಯ್ಯಲಾಗಿದೆ” ಅಥವಾ “ಸೆರೆ ಹಿಡಿದಿದೆ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಬಂಧಿಸು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H612, H613, H615, H616, H631, H1004, H1540, H3608, H3628, H3947, H4115, H4307, H4455, H4525, H4929, H5470, H6115, H6495, H7617, H7622, H7628, G1198, G1199, G1200, G1201, G1202, G1210, G2252, G3612, G4788, G4869, G5084, G5438, G5439

ಸೆರೆ, ಸೆರೆಗೊಯ್ಯುವುದು, ಸೆರೆಗೆ ಹಾಕುವುದು

# ಪದದ ಅರ್ಥವಿವರಣೆ:

“ಸೆರೆ” ಎನ್ನುವ ಪದವು ಜನರ ತಮ್ಮ ಸ್ವದೇಶದಿಂದ ಅತೀ ದೂರದಲ್ಲಿರುವ ಇನ್ನೊಂದು ದೇಶದಲ್ಲಿ ನಿವಾಸ ಮಾಡುವುದಕ್ಕೆ ಜನರನ್ನು ಬಲವಂತಿಕೆ ಮಾಡುವುದನ್ನು ಸೂಚಿಸುತ್ತದೆ.

  • ರಾಜಕೀಯ ಕಾರಣಗಳಿಂದ ಅಥವಾ ಶಿಕ್ಷಿಸುವ ಕಾರಣದಿಂದ ಜನರು ಸಹಜವಾಗಿ ಸೆರೆಗೆ ಹೊಯ್ಯಲ್ಪಡುತ್ತಾರೆ.
  • ಜಯವನ್ನು ಹೊಂದಿದ ಸೈನ್ಯದ ದೇಶಕ್ಕೆ ಬಂದೀಗಳಾಗಿರುವ ಜನರನ್ನು ಅವರಿಗಾಗಿ ಕೆಲಸ ಮಾಡಿಸಿಕೊಳ್ಳಿಸುವುದಕ್ಕೆ ಸೆರೆಗೆ ಕರೆದುಕೊಂಡು ಹೋಗುತ್ತಿದ್ದರು.
  • “ಬಾಬೆಲೋನಿಯ ಸೆರೆ” (ಅಥವಾ “ಗಡಿಪಾರು”) ಎನ್ನುವುದು ಸತ್ಯವೇದದಲ್ಲಿ ನಡೆದ ಒಂದು ಸಂಘಟನೆ, ಆಗ ಯೂದಾ ಪ್ರಾಂತ್ಯದಲ್ಲಿರುವ ಯೆಹೂದ್ಯರನ್ನು ತಮ್ಮ ಮನೆಗಳಿಂದ ಸೆರೆಗೊಯ್ದರು ಮತ್ತು ಬಾಬೆಲೋನಿಯಾದಲ್ಲಿ ನಿವಾಸವಾಗಿರಬೇಕೆಂದು ಬಲವಂತಿಕೆ ಮಾಡಿದರು. ಇದು ಸುಮಾರು 70 ವರ್ಷಗಳ ಕಾಲ ಇದ್ದಿತ್ತು.
  • “ಸೆರೆಗೊಯ್ಯಲ್ಪಟ್ಟವರು” ಎನ್ನುವ ಮಾತು ಸೆರೆಯಲ್ಲಿರುವ ಜನರನ್ನು ಸೂಚಿಸುತ್ತದೆ, ಅಂದರೆ ತಮ್ಮ ಮನೆಗಳಿಂದ ಗಡಿಪಾರಾಗಿದ್ದವರು ಎಂದರ್ಥ.

# ಅನುವಾದ ಸಲಹೆಗಳು:

  • “ಸೆರೆ” ಎನ್ನುವ ಪದಕ್ಕೆ “ಹೊರ ಕಳುಹಿಸು” ಅಥವಾ “ಬಲವಂತಿಕೆಯಿಂದ ಹೊರದೊಬ್ಬು” ಅಥವಾ “ಬಹಿಷ್ಕೃತ ಮಾಡು” ಎಂದೂ ಅನುವಾದ ಮಾಡಬಹುದು.
  • “ಸೆರೆ” ಎನ್ನುವ ಪದವನ್ನು “ಹೊರ ಕಳುಹಿಸಲ್ಪಟ್ಟ ಸಮಯ” ಅಥವಾ “ಬಹಿಷ್ಕಾರ ಮಾಡಿದ ಸಮಯ” ಅಥವಾ “ಬಲವಂತಿಕೆಮಾಡಿದ ಸಮಯ” ಅಥವಾ “ಬಹಿಷ್ಕೃತ ಮಾಡಿದ ಸಮಯ” ಎಂದು ಅರ್ಥಬರುವ ಮಾತುಗಳೊಂದಿಗೆ ಅನುವಾದ ಮಾಡಬಹುದು.
  • “ಸೆರೆಗೊಯ್ಯಲ್ಪಟ್ಟವರು” ಎನ್ನುವ ಮಾತನ್ನು ಅನುವಾದ ಮಾಡುವ ವಿಧಾನಗಳಲ್ಲಿ “ಸೆರೆಗೊಯ್ದ ಜನರು” ಅಥವಾ “ಬಹಿಷ್ಕಾರ ಮಾಡಿದ ಜನರು” ಅಥವಾ “ಬಾಬಿಲೋನಿಯಾಗೆ ಸೆರೆಗೊಯ್ಯಲ್ಪಟ್ಟ ಜನರು” ಎಂದೆನ್ನುವ ಮಾತುಗಳನ್ನು ಉಪಯೋಗಿಸುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ಬಾಬಿಲೋನಿಯ, ಯೂದಾ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1123, H1473, H1540, H1541, H1546, H1547, H3212, H3318, H5080, H6808, H7617, H7622, H8689, G3927

ಸೆಲಾ

# ಪದದ ಅರ್ಥವಿವರಣೆ:

“ಸೆಲಾ” ಎನ್ನುವ ಪದವು ಹೆಚ್ಚಾಗಿ ಕಿರ್ತನೆಗಳ ಗ್ರಂಥದಲ್ಲಿ ಕಂಡುಬರುವ ಇಬ್ರಿ ಭಾಷೆಯ ಪದವಾಗಿರುತ್ತದೆ, ಇದಕ್ಕೆ ಅನೇಕವಾದ ಅರ್ಥಗಳಿರುತ್ತವೆ.

  • ಈ ಪದಕ್ಕೆ “ವಿರಾಮ ಮತ್ತು ಸ್ತುತಿಸು” ಎನ್ನುವ ಅರ್ಥಗಳಿವೆ, ಅಂದರೆ ಅದುವರೆಗೂ ಹೇಳಲ್ಪಟ್ಟಿರುವ ಮಾತುಗಳ ಕುರಿತಾಗಿ ಪ್ರೇಕ್ಷಕರು ಆಲೋಚನೆ ಮಾಡುವುದಕ್ಕೆ ಆಹ್ವಾನಿಸಲ್ಪಡುತ್ತಾರೆ.
  • ಕೀರ್ತನೆಗಳಲ್ಲಿ ಅನೇಕವು ಹಾಡುಗಳಾಗಿ ಬರೆಯಲ್ಪಟ್ಟಿವೆ, “ಸೆಲಾ” ಎನ್ನುವುದು ಹಾಡಿನಲ್ಲಿರುವ ಪದಗಳ ಕುರಿತಾಗಿ ಆಲೋಚನೆ ಮಾಡುವುದಕ್ಕೆ ಕೇಳುವವರಿಗೆ ಪ್ರೋತ್ಸಾಹವನ್ನು ಕೊಡುವುದಕ್ಕೆ ಅಥವಾ ಸಂಗೀತವನ್ನು ಬಾರಿಸುವುದಕ್ಕೆ ಅನುಮತಿಸಲು ಗಾಯಕರು ಹಾಡುವುದನ್ನು ಸ್ವಲ್ಪ ಹೊತ್ತು ನಿಲ್ಲಿಸಿ ಗಾಯಕನಿಗೆ ಸೂಚನೆಯನ್ನು ಕೊಡುವುದಕ್ಕೆ ಉಪಯೋಗಿಸುವ ಸಂಗೀತದ ಪದವಾಗಿರಬಹುದು.

(ಈ ಪದಗಳನ್ನು ಸಹ ನೋಡಿರಿ : ಕೀರ್ತನೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H5542

ಸೇನಾಧಿಪತಿ, ಸೇನಾಧಿಪತಿಗಳು

# ಪದದ ಅರ್ಥವಿವರಣೆ:

“ಸೇನಾಧಿಪತಿ” ಎನ್ನುವ ಪದವು ಒಂದು ನಿರ್ಧಿಷ್ಟವಾದ ಸೈನಿಕರ ಗುಂಪನ್ನು ಆದೇಶಿಸುವುದಕ್ಕೆ ಮತ್ತು ನಡೆಸುವುದಕ್ಕೆ ಬಾಧ್ಯತೆ ತೆಗೆದುಕೊಂಡ ಒಬ್ಬ ಸೈನ್ಯದ ನಾಯಕನನ್ನು ಅಥವಾ ಮುಖಂಡನನ್ನು ಸೂಚಿಸುತ್ತದೆ.

  • ಒಬ್ಬ ಸೇನಾಧಿಪತಿ ಸೈನಿಕರ ಚಿಕ್ಕ ಗುಂಪಿಗೂ ನಾಯಕನಾಗಿರಬಹುದು ಅಥವಾ ಸಾವಿರಮಂದಿ ಇರುವ ದೊಡ್ಡ ಸೈನಿಕ ಗುಂಪಿಗೂ ನಾಯಕನಾಗಿರಬಹುದು.
  • ಈ ಪದವನ್ನು ದೂತರ ಸೇನೆಗಳ ಅಧಿಪತಿ ಎಂದೂ ಯೆಹೋವನಿಗೂ ಸೂಚಿಸುವುದಕ್ಕೆ ಉಪಯೋಗಿಸುತ್ತಿದ್ದರು.
  • “ಸೇನಾಧಿಪತಿ” ಎನ್ನುವ ಪದವನ್ನು ಇತರ ಅನುವಾದಗಳಲ್ಲಿ “ನಾಯಕ” ಅಥವಾ “ದಳ ಸಾರಥಿ” ಅಥವಾ “ಅಧಿಕಾರಿ” ಎಂದೂ ಸೇರಿಸಬಹುದು.
  • “ಆಜ್ಞಾಪಿಸು” ಎನ್ನುವ ಪದಕ್ಕೆ ಸೈನ್ಯದವರು “ನಡೆಸು” ಅಥವಾ “ಬಾಧ್ಯತೆ ವಹಿಸು” ಎನ್ನುವ ಪದಗಳನ್ನು ಇಟ್ಟು ಸೈನ್ಯದವರು ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಆಜ್ಞೆ, [ಪಾಲಕ), ಶತಾಧಿಪತಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2710, H2951, H1169, H4929, H5057, H6346, H7101, H7262, H7218, H7227, H7229, H7990, H8269, G5506

ಸೇವಿಸು, ಸೇವಿಸುವುದು, ಸೇವಿಸಲ್ಪಟ್ಟಿದೆ, ಸೇವಿಸುವ

# ಪದದ ಅರ್ಥವಿವರಣೆ:

“ಸೇವಿಸು” ಎನ್ನುವ ಪದಕ್ಕೆ ಎನಾದರೊಂದನ್ನು ಉಪಯೋಗಿಸುವುದು ಎಂದು ಅಕ್ಷರಾರ್ಥವಾಗಿರುತ್ತದೆ. ಇದಕ್ಕೆ ಅನೇಕವಾದ ಅಲಂಕಾರಿಕ ಅರ್ಥಗಳಿರುತ್ತವೆ.

  • ಸತ್ಯವೇದದಲ್ಲಿ “ಸೇವಿಸು” ಎನ್ನುವ ಪದವು ಅನೇಕಬಾರಿ ಜನರನ್ನು ಅಥವಾ ವಸ್ತುಗಳನ್ನು ನಾಶಗೊಳಿಸುವ ಕ್ರಿಯೆಯನ್ನು ಸೂಚಿಸುತ್ತದೆ.
  • ಅಗ್ನಿ ಎಂದರೆ ವಸ್ತುಗಳನ್ನು ದಹಿಸುವುದೆಂದು ಹೇಳಲ್ಪಟ್ಟಿದೆ, ಇದಕ್ಕೆ ಅದು ಅವುಗಳನ್ನು ದಹಿಸುವುದರ ಮೂಲಕ ಅವುಗಳನ್ನು ನಾಶಗೊಳಿಸುವುದು ಎಂದರ್ಥ.
  • ದೇವರು “ದಹಿಸುವ ಅಗ್ನಿ” ಎಂದು ಹೇಳಲ್ಪಟ್ಟಿದೆ, ಇದು ಪಾಪಕ್ಕೆ ವಿರುದ್ಧವಾಗಿ ಆತನ ಕೋಪವನ್ನು ಸೂಚಿಸುತ್ತದೆ. ಪಶ್ಚಾತ್ತಾಪ ಹೊಂದದ ಪಾಪಿಗಳ ವಿಷಯದಲ್ಲಿ ಆತನ ಕೋಪವು ಭಯಂಕರವಾಗಿ ಶಿಕ್ಷಿಸುವುದರಲ್ಲಿ ಕಾಣಿಸಿಕೊಳ್ಳುತ್ತದೆ.
  • ಆಹಾರವನ್ನು ಸೇವಿಸು ಎಂದರೆ ಎನಾದರೊಂದನ್ನು ತಿನ್ನು ಅಥವಾ ಕುಡಿ ಎಂದರ್ಥ.
  • “ಭೂಮಿಯನ್ನು ದಹಿಸು” ಎನ್ನುವ ಮಾತನ್ನು “ಭೂಮಿಯನ್ನು ನಾಶಪಡಿಸು” ಎಂದೂ ಅನುವಾದ ಮಾಡಬಹುದು.

# ಅನುವಾದ ಸಲಹೆಗಳು:

  • ಜನರನ್ನು ಅಥವಾ ಭೂಮಿಯನ್ನು ದಹಿಸುವ ಸಂದರ್ಭದಲ್ಲಿ ಈ ಪದವನ್ನು “ನಾಶಗೊಳಿಸು” ಎಂದೂ ಅನುವಾದ ಮಾಡಬಹುದು.
  • ಅಗ್ನಿಯನ್ನು “ದಹಿಸು” ಎಂದು ಸೂಚಿಸಿದಾಗ, “ಸುಟ್ಟು ಹಾಕು” ಎಂದೂ ಅನುವಾದ ಮಾಡಬಹುದು.
  • ಮೋಶೆ ನೋಡಿದ ಉರಿಯುತ್ತಿರುವ ಪೊದೆಯು “ಸುಟ್ಟುಹೋಗಲಿಲ್ಲ”, ಇದನ್ನು “ಅದು ಸುಟ್ಟು ಹೋಗಲಿಲ್ಲ” ಅಥವಾ “ಅದು ಸುಡಲ್ಪಟ್ಟಿಲ್ಲ” ಎಂದೂ ಅನುವಾದ ಮಾಡಬಹುದು.
  • ಆಹಾರ ತಿನ್ನುವುದಕ್ಕಾಗಿ ಉಪಯೋಗಿಸಿದಾಗ, “ಸೇವಿಸು” ಎನ್ನುವದನ್ನು “ತಿನ್ನು” ಅಥವಾ “ನುಂಗು” ಎಂದೂ ಅನುವಾದ ಮಾಡಬಹುದು.
  • ಒಬ್ಬರ ಬಲವು “ಸೇವಿಸಲ್ಪಟ್ಟಿದೆ”, ಈ ಮಾತಿಗೆ ಆತನ ಬಲವನ್ನು “ಉಪಯೋಗಿಸಲಾಗಿದೆ” ಅಥವಾ ಆತನ ಬಲವು “ಹೋಗಿದೆ” ಎಂದರ್ಥ.
  • “ದೇವರು ದಹಿಸುವ ಅಗ್ನಿ” ಎನ್ನುವ ಮಾತನ್ನು “ದೇವರು ವಸ್ತುಗಳನ್ನು ಸುಡುವ ಅಗ್ನಿಯಂತೆ ಇದ್ದಾರೆ” ಅಥವಾ “ದೇವರು ಪಾಪ ವಿಷಯದಲ್ಲಿ ಕೋಪಗೊಳ್ಳುತ್ತಾರೆ ಮತ್ತು ಅಗ್ನಿ ಸುಟ್ಟು ಹಾಕುವಂತೆ ಆತನು ಪಾಪಿಗಳನ್ನು ನಾಶಮಾಡುತ್ತಾನೆ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ನುಂಗು, ಕೋಪಾಗ್ನಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H398, H402, H1086, H1104, H1197, H1497, H1846, H2000, H2628, H3615, H3617, H3631, H3857, H4127, H4529, H4743, H5486, H5487, H5595, H6244, H6789, H7332, H7646, H7829, H8046, H8552, G355, G1159, G2618, G2654, G2719, G5315, G5723

ಸೈನಿಕ, ಸೈನಿಕರು, ಯೋಧ, ಯೋಧರು

# ಸತ್ಯಾಂಶಗಳು:

“ಯೋಧ” ಮತ್ತು “ಸೈನಿಕ” ಎನ್ನುವ ಪದಗಳೆರಡು ಸೈನ್ಯದಲ್ಲಿ ಹೋರಾಟ ಮಾಡುವ ವ್ಯಕ್ತಿಯನ್ನು ಸೂಚಿಸುತ್ತವೆ. ಆದರೆ ಈ ಎರಡು ಪದಗಳ ನಡುವೆ ಕೆಲವೊಂದು ವ್ಯತ್ಯಾಸಗಳಿವೆ.

  • ಸಾಧಾರಣವಾಗಿ “ಯೋಧ” ಎನ್ನುವುದು ಸಾರ್ವತ್ರಿಕ, ವಿಶಾಲವಾದ ಪದವು ಯುದ್ಧದಲ್ಲಿ ಧೈರ್ಯಶಾಲಿಯಾದ ಮತ್ತು ವರವನ್ನು ಪಡೆದ ಒಬ್ಬ ಮನುಷ್ಯನನ್ನು ಸೂಚಿಸುತ್ತದೆ.
  • ಯೆಹೋವನನ್ನು ಅಲಂಕಾರಿಕವಾಗಿ “ಯೋಧ” ಎಂದು ಕರೆಯಲಾಗಿರುತ್ತದೆ.
  • “ಸೈನಿಕ” ಎನ್ನುವ ಪದವು ಹೆಚ್ಚಾಗಿ ವಿಶೇಷವಾಗಿ ಒಂದು ನಿರ್ದಿಷ್ಟವಾದ ಸೈನ್ಯಕ್ಕೆ ಸಂಬಂಧಪಟ್ಟ ವ್ಯಕ್ತಿಯನ್ನು ಅಥವಾ ನಿರ್ದಿಷ್ಟವಾದ ಯುದ್ಧದಲ್ಲಿ ಹೋರಾಟ ಮಾಡುವ ವ್ಯಕ್ತಿಯನ್ನು ಸೂಚಿಸುತ್ತದೆ.
  • ಯೆರೂಸಲೇಮಿನಲ್ಲಿರುವ ರೋಮಾ ಸೈನಿಕರು ಖೈದಿಗಳನ್ನು ಸಾಯಿಸುವಂತಹ ಕರ್ತವ್ಯಗಳನ್ನು ಮಾಡುವುದಕ್ಕೂ ಮತ್ತು ಆದೇಶಗಳನ್ನು ಕೈಗೊಳ್ಳುವುದಕ್ಕೂ ಇರುತ್ತಾರೆ. ಅವರು ಯೇಸುವನ್ನು ಶಿಲುಬೆಗೆ ಏರಿಸುವುದಕ್ಕೆ ಮುಂಚಿತವಾಗಿ ಆತನಿಗೆ ಕಾವಲು ಇದ್ದರು, ಮತ್ತು ಆತನ ಸಮಾಧಿಯ ಬಳಿ ನಿಲ್ಲುವುದಕ್ಕೆ ಇನ್ನೂ ಕೆಲವರು ಆದೇಶಗಳನ್ನು ಹೊಂದಿಕೊಂಡಿದ್ದರು.
  • ಅನುವಾದ ಮಾಡುವ ಭಾಷೆಯಲ್ಲಿ “ಯೋಧ” ಮತ್ತು “ಸೈನಿಕ” ಎನ್ನುವ ಎರಡು ಪದಗಳು ಒಂದೇಯಾಗಿದ್ದಾವೋ ಇಲ್ಲವೋ ಅಥವಾ ಅವುಗಳು ಅರ್ಥದಲ್ಲಿ ಬೇರೆ ಬೇರೆಯಾಗಿದ್ದಾವೋ ಇಲ್ಲವೋ ಎಂದು ನೋಡಬೇಕಾಗಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಧೈರ್ಯ, ಶಿಲುಬೆಗೆ ಹಾಕು, ರೋಮ್, ಸಮಾಧಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: , H352, H510, H1368, H1416, H1995, H2389, H2428, H2502, H3715, H4421, H5431, H5971, H6518, H6635, H7273, H7916, G4686, G4753, G4754, G4757, G4758, G4961

ಸ್ತಂಭ, ಸ್ತಂಭಗಳು, ಕಂಬ, ಕಂಬಗಳು

# ಪದದ ಅರ್ಥವಿವರಣೆ:

“ಕಂಬ” ಎನ್ನುವ ಪದವನ್ನು ಸಾಧಾರಣವಾಗಿ ಒಂದು ಭವನದ ಮೇಲ್ಛಾವಣಿಯನ್ನು ಅಥವಾ ಭವನದ ಇತರ ಭಾಗವನ್ನು ಹಿಡಿದುಕೊಂಡಿರುವುದಕ್ಕೆ ಉಪಯೋಗಿಸುವ ಉದ್ದವಾಗಿರುವ ನಿರ್ಮಾಣವನ್ನು ಸೂಚಿಸುವುದಕ್ಕೆ ಉಪಯೋಗಿಸುತ್ತಾರೆ. “ಕಂಬ” ಎನ್ನುವ ಪದಕ್ಕೆ “ಸ್ತಂಭ” ಎನ್ನುವ ಪದವನ್ನು ಉಪಯೋಗಿಸುತ್ತಾರೆ.

  • ಸತ್ಯವೇದ ಕಾಲಗಳಲ್ಲಿ ಕಂಬಗಳನ್ನು ಭವನಗಳನ್ನು ನಿರ್ಮಾಣ ಮಾಡುವುದರಲ್ಲಿ ಬೆಂಬಲ ಕೊಡುವುದಕ್ಕಾಗಿ ಉಪಯೋಗಿಸುತ್ತಿದ್ದರು, ಇವುಗಳನ್ನು ಸಾಧಾರಣವಾಗಿ ಒಂದೇ ಬಂಡೆಯಿಂದ ಕೆತ್ತನೆ ಮಾಡುತ್ತಿದ್ದರು..
  • ಹಳೇ ಒಡಂಬಡಿಕೆಯಲ್ಲಿ ಸಂಸೋನನನ್ನು ಫಿಲಿಷ್ಟಿಯನ್ನರು ಹಿಡಿದುಕೊಂಡಾಗ, ಅವನು ಸ್ತಂಭಗಳ ಆಧಾರದಿಂದ ದೇವಾಲಯವನ್ನು ಕೆಡಿಸುವುದರ ಮೂಲಕ ಅವರ ಅನ್ಯ ದೇವಾಲಯವನ್ನು ನಾಶಗೊಳಿಸಿದ್ದನು.
  • “ಕಂಬ” ಎನ್ನುವ ಪದವು ಕೆಲವೊಂದುಬಾರಿ ಒಂದು ವಿಶೇಷವಾದ ಸಂಘಟನೆಯು ನಡೆದದ್ದನ್ನು ನೆನಪಿಸುವ ಸ್ಥಳವನ್ನು ಗುರುತಿಸುವುದಕ್ಕೆ ಅಥವಾ ಒಂದು ಸಮಾಧಿಯನ್ನು ಗುರುತಿಸಲು ನೆನಪಿಸಿಕೊಳ್ಳುವುದಕ್ಕಾಗಿ ಇಟ್ಟಿರುವ ಒಂದು ದೊಡ್ಡ ಬಂಡೆಯನ್ನು ಸೂಚಿಸುತ್ತದೆ.
  • ಈ ಪದವು ಸುಳ್ಳು ದೇವರನ್ನು ಆರಾಧನೆ ಮಾಡುವುದಕ್ಕೆ ತಯಾರು ಮಾಡಿಟ್ಟಿರುವ ವಿಗ್ರಹವನ್ನು ಸೂಚಿಸುತ್ತದೆ. ಇದಕ್ಕೆ ಇನ್ನೊಂದು ಹೆಸರು “ಕೆತ್ತಿದ ರೂಪ” ಎಂದಾಗಿರುತ್ತದೆ ಮತ್ತು ಇದನ್ನು “ಪ್ರತಿಮೆ” ಎಂದು ಅನುವಾದ ಮಾಡುತ್ತಾರೆ.
  • “ಕಂಬ” ಎನ್ನುವ ಪದವನ್ನು ಕಂಬಾಕಾರದಲ್ಲಿರುವ ಯಾವುದಾದರೊಂದನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ, ಅರಣ್ಯದ ಮೂಲಕ ರಾತ್ರಿಯಲ್ಲಿ ಇಸ್ರಾಯೇಲ್ಯರನ್ನು ನಡೆಸುವುದಕ್ಕೆ “ಅಗ್ನಿ ಸ್ತಂಭ” ಎಂದು ಕರೆದಿದ್ದಾರೆ ಅಥವಾ ಲೋಟನ ಹೆಂಡತಿ ಪಟ್ಟಣವನ್ನು ಹಿಂದುರಿಗಿ ನೋಡಿದಾಗ “ಉಪ್ಪು ಸ್ತಂಭ” ಎಂದು ಕರೆಯಲಾಗಿದೆ.
  • ಒಂದು ಭವನವನ್ನು ಬೆಂಬಲಿಸುವುದಕ್ಕೆ ಕಟ್ಟುವ ನಿರ್ಮಾಣವನ್ನು ಕರೆಯುವ “ಕಂಬ” ಅಥವಾ “ಸ್ತಂಭ” ಎನ್ನುವ ಪದಗಳನ್ನು “ತೊಲೆಯನ್ನು ಬೆಂಬಲಿಸುವುದಕ್ಕೆ ಉಪಯೋಗಿಸುವ ಉದ್ದವಾದ ಕಲ್ಲು” ಅಥವಾ “ಬೆಂಬಲಿಸುವ ಕಲ್ಲಿನ ನಿರ್ಮಾಣ” ಎಂದೂ ಅನುವಾದ ಮಾಡಬಹುದು.
  • “ಕಂಬ” ಎನ್ನುವ ಪದದ ಇತರ ಪದಗಳು “ಪ್ರತಿಮೆ” ಅಥವಾ “ಎತ್ತರವಾಗಿರುವ ದೊಡ್ಡ ಕಟ್ಟಡ” ಅಥವಾ “ದಿಬ್ಬ” ಅಥವಾ “ಸ್ಮಾರಕ” ಅಥವಾ “ಎತ್ತರದ ಕಟ್ಟಡ” ಎಂದು ಸಂದರ್ಭಾನುಗುಣವಾಗಿ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಸ್ಥಾಪನೆ, ಸುಳ್ಳು ದೇವರು, ರೂಪ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H352, H547, H2106, H2553, H3730, H4552, H4676, H4678, H4690, H5324, H5333, H5982, H8490, G4769

ಸ್ತುತಿ, ಸ್ತುತಿಗಳು, ಸ್ತುತಿಸಿದೆ, ಸ್ತುತಿಸುವುದು, ಸ್ತುತಿಯೋಗ್ಯನು

# ಪದದ ಅರ್ಥವಿವರಣೆ:

ಯಾರಾದರೊಬ್ಬರನ್ನು ಸ್ತುತಿಸಬೇಕೆಂದರೆ ಆ ವ್ಯಕ್ತಿಯನ್ನು ಗೌರವಿಸುವುದನ್ನು ಮತ್ತು ಮೆಚ್ಚಿಕೊಳ್ಳುವುದನ್ನು ವ್ಯಕ್ತಪಡಿಸುವುದು ಎಂದರ್ಥ.

  • ಜನರು ದೇವರನ್ನು ಸ್ತುತಿಸುತ್ತಾರೆ ಯಾಕಂದರೆ ಆತನು ಎಷ್ಟು ದೊಡ್ದವನೋ ಎಂದು ತಿಳಿದು, ಲೋಕ ರಕ್ಷಕನನ್ನಾಗಿ ಮತ್ತು ಸೃಷ್ಟಿಕರ್ತನನ್ನಾಗಿ ಆತನು ಮಾಡಿದ ಅನೇಕ ಅದ್ಭುತಕಾರ್ಯಗಳನ್ನು ತಿಳಿದು ಆತನನ್ನು ಸ್ತುತಿಸುತ್ತಾರೆ.
  • ದೇವರಿಗಾಗಿ ಸಲ್ಲಿಸುವ ಸ್ತುತಿ ಅನೇಕಬಾರಿ ಆತನು ಮಾಡಿದ ಕಾರ್ಯಗಳಿಗೆ ಕೃತಜ್ಞತೆಯನ್ನು ಸಲ್ಲಿಸುವುದಾಗಿರುತ್ತದೆ.
  • ಸಂಗೀತ ಮತ್ತು ಹಾಡುವುದೆನ್ನುವುದು ಅನೇಕಬಾರಿ ದೇವರನ್ನು ಸ್ತುತಿಸುವ ವಿಧಾನವನ್ನಾಗಿ ಉಪಯೋಗಿಸಲಾಗುತ್ತದೆ.
  • ದೇವರನ್ನು ಸ್ತುತಿಸುವುದೆನ್ನುವುದು ಆತನನ್ನು ಆರಾಧಿಸುವುದರಲ್ಲಿ ಒಂದು ಭಾಗವಾಗಿರುತ್ತದೆ.
  • “ಸ್ತುತಿ” ಎನ್ನುವ ಪದವನ್ನು “ಚೆನ್ನಾಗಿ ಮಾತನಾಡು” ಅಥವಾ “ಮಾತುಗಳೊಂದಿಗೆ ಉನ್ನತವಾಗಿ ಗೌರವಿಸು” ಅಥವಾ “ಆತನ ಕುರಿತು ಒಳ್ಳೇಯ ವಿಷಯಗಳನ್ನು ಹೇಳು” ಎಂದೂ ಅನುವಾದ ಮಾಡಬಹುದು.
  • “ಸ್ತುತಿ” ಎನ್ನುವ ನಾಮಪದವನ್ನು “ಹೇಳುವುದರ ಮೂಲಕ ಗೌರವ” ಅಥವಾ “ಗೌರವಿಸುವುದಕ್ಕೆ ಮಾತನಾಡುವುದು” ಅಥವಾ “ಒಬ್ಬರ ಕುರಿತಾಗಿ ಒಳ್ಳೇಯ ವಿಷಯಗಳನ್ನು ಹೇಳುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಆರಾಧನೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಉದಾಹರಣೆಗಳು:

  • 12:13 ಇಸ್ರಾಯೇಲ್ಯರು ತಮ್ಮ ಹೊಸ ಸ್ವಾತಂತ್ರ್ಯವನ್ನು ಆಚರಿಸಿಕೊಳ್ಳುವುದಕ್ಕೆ ಮತ್ತು ದೇವರನ್ನು ___ ಸ್ತುತಿಸುವುದಕ್ಕೆ ____ ಅನೇಕ ಹಾಡುಗಳನ್ನು ಹಾಡಿದರು, ಯಾಕಂದರೆ ಐಗುಪ್ತ ಸೈನ್ಯದಿಂದ ಆತನು ಅವರನ್ನು ರಕ್ಷಿಸಿದನು.
  • 17:08 ಈ ಮಾತುಗಳನ್ನು ದಾವೀದನು ಕೇಳಿಸಿಕೊಂಡಾಗ, ಆತನು ತಕ್ಷಣವೇ ಕೃತಜ್ಞತೆಗಳನ್ನು ಸಲ್ಲಿಸಿ, ದೇವರನ್ನು ___ ಸ್ತುತಿಸಿದನು ___, ಯಾಕಂದರೆ ಈ ಎಲ್ಲಾ ಉನ್ನತವಾದ ಮತ್ತು ಅನೇಕ ಆಶೀರ್ವಾದಗಳೊಂದಿಗೆ ಆತನು ದಾವೀದನು ವಾಗ್ಧಾನ ಮಾಡಿದ್ದನು.
  • 22:07 “ದೇವರನ್ನು ___ ಸ್ತುತಿಸಿ ___, ಯಾಕಂದರೆ ಆತನು ತನ್ನ ಜನರನ್ನು ಜ್ಞಾಪಕ ಮಾಡಿಕೊಂಡನು!” ಎಂದು ಜೆಕರ್ಯನು ಹೇಳಿದನು.
  • 43:13 ಅವರು (ಶಿಷ್ಯರು) ಎಲ್ಲರು ಸೇರಿ ದೇವರನ್ನು ___ ಸ್ತುತಿಸುವುದರಲ್ಲಿ ___ ಸಂತೋಷಪಟ್ಟರು ಮತ್ತು ಅವರೊಂದಿಗೆ ಇರುವ ಎಲ್ಲವುಗಳನ್ನು ಒಬ್ಬರೊಂದಿಗೆ ಒಬ್ಬರು ಹಂಚಿಕೊಂಡರು.
  • 47:08 ಅವರು ಪೌಲ ಮತ್ತು ಸೀಲರನ್ನು ಸೆರೆಯ ಅತೀ ಭದ್ರವಾದ ಭಾಗದಲ್ಲಿ ತಮ್ಮ ಕಾಲುಗಳನ್ನು ಕಟ್ಟಿ ಹಾಕಿದ್ದರು. ಆದರೂ ಮಧ್ಯರಾತ್ರಿಯಲ್ಲಿ ಅವರು ದೇವರನ್ನು ___ ಸ್ತುತಿಸುವ ___ ಹಾಡುಗಳನ್ನು ಹಾಡುತ್ತಾ ಇದ್ದರು.

# ಪದ ಡೇಟಾ:

  • Strong's: H1319, H6953, H7121, H7150, G1229, G1256, G2097, G2605, G2782, G2783, G2784, G2980, G3853, G3955, G4283, G4296

ಸ್ಥಾಪಿಸು, ಸ್ಥಾಪಿಸಲಾಗಿದೆ, ಸ್ಥಾಪಕರು, ಸ್ಥಾಪನೆ, ಸ್ಥಾಪನೆಗಳು

# ಪದದ ಅರ್ಥವಿವರಣೆ:

ಕ್ರಿಯಾ ಪದವಾದ “ಸ್ಥಾಪಿಸು” ಎನ್ನುವ ಪದಕ್ಕೆ ನಿರ್ಮಿಸು, ಸೃಷ್ಟಿಸು, ಅಥವಾ ಅಡಿಪಾಯ ಹಾಕು ಎಂದರ್ಥ. “ಅದರ ಮೇಲೆ ಸ್ಥಾಪಿಸಲಾಗಿದೆ” ಎನ್ನುವ ಮಾತಿಗೆ ಅದರ ಆಧಾರದ ಮೇಲೆ ಅಥವಾ ಅದರಿಂದ ಬೆಂಬಲಿತವಾಗಿದೆ ಎಂದರ್ಥ. “ಸ್ಥಾಪನೆ” ಎನ್ನುವುದು ಎನಾದರೊಂದು ನಿರ್ಮಿಸಲ್ಪಡುವುದಕ್ಕೆ ಅಥವಾ ಸೃಷ್ಟಿಸುವುದಕ್ಕೆ ಹಾಕುವ ಅಡಿಪಾಯ ಎಂದರ್ಥ.

  • ಒಂದು ಮನೆಯ ಅಥವಾ ಭವನದ ಅಡಿಪಾಯವು ತುಂಬಾ ಬಲವಾಗಿರಬೇಕು ಮತ್ತು ನಿರ್ಮಿಸುವ ಕಟ್ಟಡಕ್ಕೆಲ್ಲಾ ಅದೇ ಬೆಂಬಲವಾಗಿರುತ್ತದೆ.
  • “ಸ್ಥಾಪನೆ” ಎನ್ನುವ ಪದವು ಯಾವುದಾದರೊಂದರ ಆರಂಭವನ್ನು ಅಥವಾ ಮೊಟ್ಟ ಮೊದಲು ಸೃಷ್ಟಿಸಲ್ಪಟ್ಟ ಯಾವುದಾದರೊಂದರ ಸಮಯವನ್ನು ಕೂಡ ಸೂಚಿಸುತ್ತದೆ.
  • ಅಲಂಕಾರಿಕ ಭಾಷೆಯಲ್ಲಿ ಕ್ರಿಸ್ತನಲ್ಲಿರುವ ವಿಶ್ವಾಸಿಗಳು ಪ್ರವಾದಿಗಳ ಮತ್ತು ಅಪೊಸ್ತಲರ ಬೋಧನೆಗಳ ಮೇಲೆ ಸ್ಥಾಪಿಸಲ್ಪಟ್ಟಿರುವ ಭವನಕ್ಕೆ ಹೊಲಿಸಲಾಗಿದೆ, ಮತ್ತು ಆ ಭವನಕ್ಕೆ ಮೂಲೆಗಲ್ಲು ಯೇಸು ಕ್ರಿಸ್ತನಾಗಿರುತ್ತಾನೆ.
  • “ಅಡಿ ಗಲ್ಲು” ಎನ್ನುವುದು ಸ್ಥಾಪನೆ ಮಾಡುವಾಗ ಹಾಕುವ ಮೂಲೆಗಲ್ಲು ಆಗಿರುತ್ತದೆ. ಈ ಕಲ್ಲುಗಳನ್ನು ಪರೀಕ್ಷೆ ಮಾಡಲಾಗುತ್ತದೆ, ಯಾಕಂದರೆ ನಿರ್ಮಿಸುವ ಭವನಕ್ಕೆಲ್ಲಾ ಸರಿಹೋಗುವ ಬಲವು ಅವುಗಳಿಂದಲೆ ಬರಬೇಕಾಗುತ್ತದೆ.

# ಅನುವಾದ ಸಲಹೆಗಳು:

“ಲೋಕ ಸ್ಥಾಪನೆಯಾಗುವುದಕ್ಕೆ ಮುಂಚಿತವಾಗಿ” ಎನ್ನುವ ಮಾತನ್ನು “ಲೋಕವು ಸೃಷ್ಟಿಸಲ್ಪಡುವುದಕ್ಕೆ ಮುಂಚಿತವಾಗಿ” ಅಥವಾ “ಲೋಕವು ಮೊಟ್ಟ ಮೊದಲು ಅಸ್ತಿತ್ವದಲ್ಲಿರುವುದಕ್ಕೆ ಮುಂಚಿತವಾಗಿ” ಅಥವಾ “ಪ್ರತಿಯೊಂದು ಮೊಟ್ಟ ಮೊದಲು ಸೃಷ್ಟಿಸಲ್ಪಡುವುದಕ್ಕೆ ಮುಂಚಿತವಾಗಿ” ಎಂದೂ ಅನುವಾದ ಮಾಡಬಹುದು.

  • “ಅದರ ಮೇಲೆ ಸ್ಥಾಪಿಸಲ್ಪಟ್ಟಿದೆ” ಎನ್ನುವ ಮಾತನ್ನು “ಭದ್ರವಾಗಿ ನಿರ್ಮಿಸಲಾಗಿದೆ” ಅಥವಾ “ಸ್ಥಿರವಾಗಿ ಹಾಕಲ್ಪಟ್ಟಿದೆ” ಎಂದೂ ಅನುವಾದ ಮಾಡಬಹುದು.
  • ಸಂದರ್ಭಕ್ಕೆ ತಕ್ಕಂತೆ, “ಸ್ಥಾಪನೆ” ಎನ್ನುವ ಪದವನ್ನು “ಬಲವಾದ ಆಧಾರ” ಅಥವಾ “ಗಟ್ಟಿಯಾದ ಬೆಂಬಲ” ಅಥವಾ “ಆರಂಭ” ಅಥವಾ “ಸೃಷ್ಟಿ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಮೂಲೆಗಲ್ಲು, ಸೃಷ್ಟಿಸು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H134, H787, H803, H808, H2713, H3245, H3247, H3248, H4143, H4144, H4146, H4328, H4349, H4527, H6884, H8356, G2310, G2311, G2602

ಸ್ವರ, ಸ್ವರಗಳು

# ಪದದ ಅರ್ಥವಿವರಣೆ:

“ಸ್ವರ” ಎನ್ನುವ ಪದವು ಅನೇಕಬಾರಿ ಮಾತನಾಡುವುದನ್ನು ಅಥವಾ ಏನಾದರೊಂದನ್ನು ಸಂಭಾಷಿಸುವುದನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಉಪಯೋಗಿಸಲ್ಪಟ್ಟಿರುತ್ತದೆ.

  • ಮನುಷ್ಯರು ಮಾತನಾಡುವ ರೀತಿಯಲ್ಲಿ ದೇವರು ಮಾತನಾಡದಿದ್ದರೂ, ಆತನು ತನ್ನ ಸ್ವರವನ್ನು ಉಪಯೋಗಿಸಿದ್ದಾನೆಂದು ಹೇಳಲ್ಪಟ್ಟಿದೆ.
  • “ಕರ್ತನ ಮಾರ್ಗವನ್ನು ಸಿದ್ಧಪಡಿಸಿರಿ” ಎಂದು ಹೇಳುವ ಸ್ವರವನ್ನು ಅರಣ್ಯದಲ್ಲಿ ಕೇಳಿದೆನು” ಎನ್ನುವ ಮಾತಿನಲ್ಲಿರುವಂತೆಯೇ, ಈ ಪದವು ಸಂಪೂರ್ಣ ವ್ಯಕ್ತಿಯನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ. ಈ ಮಾತನ್ನು “ಒಬ್ಬ ವ್ಯಕ್ತಿ ಅರಣ್ಯದೊಳಗಿಂದ ಕೂಗುತ್ತಿರುವ ಸ್ವರವನ್ನು ಕೇಳಿಸಿಕೊಳ್ಳುವುದು” ಎಂದೂ ಅನುವಾದ ಮಾಡಬಹುದು. (ನೋಡಿರಿ: ಲಾಕ್ಷಣಿಕ ಪ್ರಯೋಗ
  • “ಯಾರಾದರೊಬ್ಬರ ಸ್ವರವನ್ನು ಕೇಳು” ಎನ್ನುವ ಮಾತನ್ನು “ಯಾರಾದರೊಬ್ಬರು ಮಾತನಾಡುತ್ತಿರುವಾಗ ಕೇಳು” ಎಂದೂ ಅನುವಾದ ಮಾಡಬಹುದು.
  • ಕೆಲವೊಂದುಬಾರಿ “ಸ್ವರ” ಎನ್ನುವ ಪದವನ್ನು ನಿಜವಾಗಿ ಮಾತನಾಡದ ವಸ್ತುಗಳಿಗೋಸ್ಕರ ಉಪಯೋಗಿಸಲ್ಪಟ್ಟಿರಬಹುದು, ಆಕಾಶಗಳ “ಸ್ವರವು” ದೇವರ ಅದ್ಭುತ ಕಾರ್ಯಗಳನ್ನು ವಿವರಿಸುತ್ತಿದೆ ಎಂದು ದಾವೀದನು ತನ್ನ ಕೀರ್ತನೆಗಳಲ್ಲಿ ವಿವರಿಸಿದ ಸಂದರ್ಭವನ್ನು ನೋಡಬಹುದು. ಇದನ್ನು “ಅವುಗಳ ವೈಭವವು ದೇವರು ಎಷ್ಟು ದೊಡ್ಡವನೆಂದು ಸ್ಪಷ್ಟವಾಗಿ ತೋರಿಸುತ್ತವೆ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಕರೆ, ಪ್ರಕಟನೆ, ವೈಭವ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H6963, H7032, H7445, H8193, G2906, G5456, G5586

ಸ್ವರಮಂಡಲ, ಕಿನ್ನರಿ, ಕಿನ್ನರಿಗಳು

# ಪದದ ಅರ್ಥವಿವರಣೆ:

ಸ್ವರಮಂಡಲ ಮತ್ತು ಕಿನ್ನರಿ ಎನ್ನುವವುಗಳು ತಂತಿಗಳಿಂದ ಮಾಡಿದ ಚಿಕ್ಕ ಚಿಕ್ಕ ಸಂಗೀತ ಉಪಕರಣಗಳಾಗಿರುತ್ತವೆ, ಅವು ದೇವರನ್ನು ಆರಾಧನೆ ಮಾಡುವುದಕ್ಕೆ ಇಸ್ರಾಯೇಲ್ಯರಿಂದ ಉಪಯೋಗಿಸಲ್ಪಡುತ್ತಿದ್ದವು.

  • ಕಿನ್ನರಿ ಎನ್ನುವುದು ಚಿಕ್ಕ ತಂತಿವಾದ್ಯದಂತಿರುತ್ತದೆ, ಇದಕ್ಕೆ ಚೌಕಟ್ಟಿನ ಸುತ್ತ ತಂತಿಗಳು ಇರುತ್ತವೆ.
  • ಸ್ವರಮಂಡಲ ಎನ್ನುವುದು ಆಧುನಿಕ ದಿನಗಳಲ್ಲಿರುವ ಅಕುಸ್ಟಿಕ್ ಗಿಟಾರ್.ಗೆ ತುಂಬಾ ಹೋಲಿಕೆಯಾಗಿರುತ್ತದೆ, ಇದಕ್ಕೆ ಕಟ್ಟಿಗೆಯಿಂದ ಮಾಡಿದ ಶಬ್ದ ಪೆಟ್ಟಿಗೆ ಇರುತ್ತದೆ ಮತ್ತು ಆ ಪೆಟ್ಟಿಗೆ ಉದ್ದವಾದ ಕಟ್ಟಿಗೆ ಇದ್ದು, ಅದರ ಮೇಲೆ ತಂತಿಗಳನ್ನು ಕಟ್ಟಿರುತ್ತಾರೆ.
  • ಸ್ವರಮಂಡಲವನ್ನು ಅಥವಾ ಒಂದು ಕಿನ್ನರಿಯನ್ನು ಬಾರಿಸುವುದರಲ್ಲಿ ಕೆಲವೊಂದು ತಂತಿಗಳನ್ನು ಒಂದು ಕೈ ಬೆರಳುಗಳಿಂದ ಹಿಡಿದುಕೊಂಡು, ಮತ್ತೊಂದು ಕೈಯಿಂದ ಇತರ ತಂತಿಗಳನ್ನು ಎಳೆಯುತ್ತಾರೆ ಅಥವಾ ನಾದ ಹೊಡೆಯುತ್ತಾರೆ.
  • ಸ್ವರಮಂಡಲ, ಕಿನ್ನರಿ ಮತ್ತು ತಂತಿವಾದ್ಯಗಳನ್ನು ಅವುಗಳ ತಂತಿಗಳನ್ನು ಎಳೆಯುವುದರ ಮೂಲಕ ಬಾರಿಸುತ್ತಾರೆ.
  • ತಂತಿಗಳ ಸಂಖ್ಯೆ ಬದಲಾಗುತ್ತದೆ, ಆದರೆ ಹಳೇ ಒಡಂಬಡಿಕೆಯಲ್ಲಿ ವಿಶೇಷವಾಗಿ ಹತ್ತು ತಂತಿಗಳ ಉಪಕರಣಗಳನ್ನೇ ದಾಖಲಿಸಲಾಗಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ತಂತಿವಾದ್ಯ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3658, H5035, H5443

ಸ್ವಾಧೀನಪಡಿಸಿಕೊ, ಹೊಂದಿದೆ, ಸ್ವಾಧೀನ ಮಾಡಿಕೊಳ್ಳಲಾಗಿದೆ, ಸ್ವಾಸ್ಥ್ಯ, ಸ್ವಾಸ್ಥ್ಯಗಳು, ಹೊರದೂಡು

# ಸತ್ಯಾಂಶಗಳು:

“ಹೊಂದು” ಮತ್ತು “ಸ್ವಾಧೀನ ಮಾಡಿಕೊಳ್ಳುವುದು” ಎನ್ನುವ ಪದಗಳು ಸಾಧಾರಣವಾಗಿ ಯಾವುದಾದರೊಂದನ್ನು ಸ್ವಂತ ಮಾಡಿಕೊಳ್ಳುವುದನ್ನು ಸೂಚಿಸುತ್ತದೆ. ಒಂದು ಭೂಭಾಗವನ್ನು ವಶಪಡಿಸಿಕೊಳ್ಳುವುದನ್ನು ಅಥವಾ ಯಾವುದಾದರೊಂದರ ಮೇಲೆ ನಿಯಂತ್ರಣ ಪಡೆದುಕೊಳ್ಳುವುದನ್ನು ಆ ಪದಗಳು ವಿವರಿಸುತ್ತವೆ.

  • ಹಳೇ ಒಡಂಬಡಿಕೆಯಲ್ಲಿ ಈ ಪದವು ಅನೇಕಬಾರಿ ಒಂದು ಭೂಮಿಯನ್ನು “ಸ್ವಾಧೀನಪಡಿಸಿಕೊಳ್ಳುವುದು” ಅಥವಾ “ಹೊಂದಿಕೊಳ್ಳುವುದು” ಎನ್ನುವ ಸಂದರ್ಭದಲ್ಲಿ ಉಪಯೋಗಿಸಲ್ಪಟ್ಟಿರುತ್ತದೆ.
  • ಕಾನಾನ್ ಭೂಮಿಯನ್ನು “ಸ್ವಾಧೀನಮಾಡಿಕೊಳ್ಳಬೇಕೆಂದು” ಯೆಹೋವನು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದಾಗ, ಇದಕ್ಕೆ ಅವರು ಆ ಭೂಮಿಯೊಳಗೆ ಪ್ರವೇಶಿಸಿ, ಅಲ್ಲಿ ನಿವಾಸವಾಗಿರಬೇಕೆಂದು ಅದರ ಅರ್ಥವಾಗಿರುತ್ತದೆ. ಇದರಲ್ಲಿ ಮೊಟ್ಟ ಮೊದಲು ಆ ಭೂಮಿಯಲ್ಲಿ ಜೀವಿಸುತ್ತಿರುವ ಕಾನಾನ್ ಜನರನ್ನು ಜಯಿಸುವ ಕಾರ್ಯವು ಒಳಗೊಂಡಿರುತ್ತದೆ.
  • “ಇಸ್ರಾಯೇಲ್ಯರ ಸ್ವತ್ತಾಗಿ” ಕಾನಾನ್ ಭೂಮಿಯನ್ನು ನಾನು ಅವರಿಗೆ ಕೊಡುತ್ತೇನೆ ಎಂದು ಯೆಹೋವನು ಇಸ್ರಾಯೇಲ್ಯರಿಗೆ ಹೇಳಿದನು. ಈ ಮಾತನ್ನು “ಜೀವಿಸುವುದಕ್ಕೆ ಅವರಿಗೆ ಹಕ್ಕಿರುವ ಸ್ಥಳ” ಎಂಬುದಾಗಿಯೂ ಅನುವಾದ ಮಾಡಬಹುದು.
  • ಇಸ್ರಾಯೇಲ್ ಜನರು ಯೆಹೋವನ “ವಿಶೇಷವಾದ ಸ್ವತ್ತು ಅಥವಾ ಸ್ವಾಸ್ಥ್ಯ” ಎಂದು ಕರೆಯಲ್ಪಟ್ಟಿದ್ದರು. ಆತನನ್ನು ಆರಾಧನೆ ಮಾಡುವುದಕ್ಕೆ ಮತ್ತು ಆತನನ್ನು ಸೇವಿಸುವುದಕ್ಕೆ ವಿಶೇಷವಾಗಿ ಕರೆಯಲ್ಪಟ್ಟ ತನ್ನ ಜನರಾಗಿ ಅವರು ಆತನಿಗೆ ಸಂಬಂಧಪಟ್ಟವರು ಎಂದು ಇದಕ್ಕೆ ಅರ್ಥವಿರುತ್ತದೆ.

# ಅನುವಾದ ಸಲಹೆಗಳು:

  • “ಸ್ವಾಧೀನಪಡಿಸಿಕೋ” ಎನ್ನುವ ಪದವನ್ನು “ಸ್ವಂತಮಾಡಿಕೊ” ಅಥವಾ “ಹೊಂದಿಕೊ” ಅಥವಾ “ಎಲ್ಲಾವುದರ ಮೇಲೆ ಅಧಿಕಾರ ಹೊಂದಿರು” ಎಂದೂ ಅನುವಾದ ಮಾಡಬಹುದು.
  • “ಸ್ವತ್ತನ್ನು ತೆಗೆದುಕೋ” ಎನ್ನುವ ಮಾತನ್ನು “ನಿಯಂತ್ರಣ ತೆಗೆದುಕೋ” ಅಥವಾ “ವಶಪಡಿಸಿಕೋ” ಅಥವಾ “ಆ ಸ್ಥಳದಲ್ಲಿ ಜೀವಿಸು” ಎಂದು ಸಂದರ್ಭಾನುಸಾರವಾಗಿ ಅನುವಾದ ಮಾಡಬಹುದು.
  • ಜನರು ಸ್ವಂತ ಮಾಡಿಕೊಂಡಿರುವ ವಸ್ತುಗಳನ್ನು ಸೂಚಿಸಿದಾಗ, “ಸ್ವತ್ತುಗಳು” ಎನ್ನುವ ಪದವನ್ನು “ಸಂಬಂಧಪಟ್ಟವುಗಳು” ಅಥವಾ “ಆಸ್ತಿ” ಅಥವಾ “ಸ್ವಂತಮಾಡಿಕೊಂಡಿರುವ ವಿಷಯಗಳು” ಅಥವಾ “ಸ್ವಾಧೀನ ಮಾಡಿಕೊಂಡಿರುವ ವಿಷಯಗಳು” ಎಂದೂ ಅನುವಾದ ಮಾಡಬಹುದು.
  • ಯೆಹೋವನು ಇಸ್ರಾಯೇಲ್ಯರನ್ನು ಕರೆದಾಗ, “ನನ್ನ ವಿಶೇಷವಾದ ಸ್ವಾಸ್ಥ್ಯ” ಎನ್ನುವ ಈ ಮಾತನ್ನು “ನನ್ನ ವಿಶೇಷವಾದ ಜನರು” ಅಥವಾ “ನನಗೆ ಸಂಬಂಧಪಟ್ಟ ಜನರು” ಅಥವಾ “ನಾನು ಪ್ರೀತಿಸಿದ ಮತ್ತು ಪಾಲಿಸಿದ ನನ್ನ ಜನರು” ಎಂದೂ ಅನುವಾದ ಮಾಡಬಹುದು.
  • “ಅವರು ಅವರ ಸ್ವಾಸ್ಥ್ಯವಾಗಿ ಮಾರ್ಪಟ್ಟಿದ್ದರು” ಎಂದು ಭೂಮಿಯನ್ನು ಸೂಚಿಸಿದಾಗ, ಈ ಮಾತಿಗೆ “ಅವರು ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ” ಅಥವಾ “ಭೂಮಿ ಅವರಿಗೆ ಸಂಬಂಧಪಟ್ಟಿದ್ದಾಗಿರುತ್ತದೆ” ಎಂದರ್ಥ.
  • “ಆತನ ಸ್ವಾಸ್ಥ್ಯದಲ್ಲಿ ಕಂಡುಬಂದಿದೆ” ಎನ್ನುವ ಮಾತನ್ನು “ಆತನು ಹಿಡಿದುಕೊಂಡಿರುವ” ಅಥವಾ “ಆತನೊಂದಿಗೆ ಅವನಿದ್ದಾನೆ” ಎಂದೂ ಅನುವಾದ ಮಾಡಬಹುದು.
  • “ನಿಮ್ಮ ಸ್ವಾಸ್ಥ್ಯವಾಗಿ” ಎನ್ನುವ ಮಾತನ್ನು “ನಿನಗೆ ಸಂಬಂಧಪಟ್ಟ ವಿಷಯವನ್ನಾಗಿ” ಅಥವಾ “ನಿಮ್ಮ ಜನರು ಜೀವಿಸುವ ಸ್ಥಳವನ್ನಾಗಿ” ಎಂದೂ ಅನುವಾದ ಮಾಡಬಹುದು.
  • “ಆತನ ಸ್ವಾಸ್ಥ್ಯದಲ್ಲಿ” ಎನ್ನುವ ಮಾತನ್ನು “ಆತನು ಸ್ವಂತ ಮಾಡಿಕೊಂಡಿರುವ” ಅಥವಾ “ಆತನಿಗೆ ಸಂಬಂಧಪಟ್ಟಿರುವ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಕಾನಾನ್, ಆರಾಧನೆ

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H270, H272, H834, H2505, H2631, H3027, H3423, H3424, H3425, H3426, H4180, H4181, H4672, H4735, H4736, H5157, H5159, H5459, H7069, G1139, G2192, G2697, G2722, G2932, G2933, G2935, G4047, G5224, G5564

ಹಕ್ಕಲಾಯು, ಹಕ್ಕಲಾಯುವುದು, ಹಕ್ಕಲಾಯ್ದದ್ದು, ಹಕ್ಕಲಾಯುತ್ತಿರುವುದು

# ಪದದ ಅರ್ಥವಿವರಣೆ

“ಹಕ್ಕಲಾಯು” ಎನ್ನುವ ಪದಕ್ಕೆ ಹೊಲದಲ್ಲಿ ಅಥವಾ ಹಣ್ಣುತೋಟದಲ್ಲಿ ಕೊಯ್ಯುವವರು ಬಿಟ್ಟಿರುವ ಧಾನ್ಯವನ್ನು ಅಥವಾ ಹಣ್ಣುಗಳನ್ನು ಎತ್ತಿಕೊಳ್ಳುವುದನ್ನು ಸೂಚಿಸುತ್ತದೆ.

  • ವಿಧವೆಯರು, ಬಡವರು ಮತ್ತು ಪರದೇಶಿಯರು ಮಿಕ್ಕಿರುವ ಧಾನ್ಯವು ಅವರಿಗೆ ಆಹಾರವಾಗುವ ಹಾಗೆ ಹಕ್ಕಲಾಯಲಿ ಎಂದು ಯೆಹೋವನು ಇಸ್ರಾಯೇಲ್ಯರಿಗೆ ಅಪ್ಪಣೆ ಕೊಟ್ಟಿದ್ದನು.
  • ಕೆಲವೊಮ್ಮೆ ಹೊಲದ ಯಜಮಾನರು ಕೊಯ್ಯುವವರ ಹಿಂದೆಯೇ ಹಕ್ಕಲಾಯುವವರು ಹೋಗುವಂತೆ ಅನುಮತಿಕೊಡುತ್ತಿದ್ದರು ಅದು ಅವರಿಗೆ ಹೆಚ್ಚಿನ ಧಾನ್ಯ ಎತ್ತಿಕೊಳ್ಳುವುದಕ್ಕೆ ಅವಕಾಶವಾಗಿತ್ತು.
  • ಇದು ಹೇಗೆ ನಡೆಯುತ್ತಿತ್ತು ಎನ್ನುವದಕ್ಕೆ ಒಳ್ಳೆಯ ಉದಾಹರಣೆ ರೂತಳ ಕಥೆಯಲ್ಲಿದೆ. ಅವಳ ಬಂಧುವಾದ ಬೋವಜನ ಹೊಲದಲ್ಲಿ ಆಕೆ ಕೊಯ್ಯುವವರ ನಡುವೆ ಹಕ್ಕಲಾಯುವದಕ್ಕೆ ಅನುಮತಿಹೊಂದಿದ್ದಳು.
  • “ಹಕ್ಕಲಾಯು” ಎನ್ನುವ ಪದವನ್ನು “ಎತ್ತಿಕೋ” ಅಥವಾ “ಸೇರಿಸು” ಅಥವಾ “ಸೇಕರಿಸು” ಎಂದು ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಬೋವಜ, ಧಾನ್ಯ, ಕೊಯ್ಲು, ರೂತಳು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H3950, H3951, H5953, H5955

ಹಠಮಾರಿ, ವಿಪರ್ಯಾಸವಾಗಿ, ವಕ್ರಮಾರ್ಗ, ವಕ್ರಮಾರ್ಗಗಳು, ವಿಪರೀತತೆಗಳು, ವಿರೂಪಗೊಳಿಸು, ವಿರೂಪಗೊಳಿಸುವುದು, ವಕ್ರಮಾರ್ಗವಾಗಿದೆ, ವಕ್ರಮಾರ್ಗವಾಗುತ್ತಿದೆ

# ಪದದ ಅರ್ಥವಿವರಣೆ:

“ಹಠ” ಎನ್ನುವ ಪದವನ್ನು ಒಬ್ಬ ವ್ಯಕ್ತಿಯು ಅಥವಾ ಒಂದು ಕ್ರಿಯೆಯು ನೈತಿಕವಾಗಿ ಬಾಗಲ್ಪಟ್ಟಿರುವುದನ್ನು ಅಥವಾ ವಕ್ರೀಕರಣವಾಗಿರುವುದನ್ನು ವಿವರಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ. “ವಿಪರ್ಯಾಸವಾಗಿ” ಎನ್ನುವ ಪದಕ್ಕೆ “ಹಠಮಾರಿ ನಡತೆಯಲ್ಲಿ” ಎಂದರ್ಥ. ಯಾವುದಾದರೊಂದನ್ನು “ವಿರೂಪಗೊಳಿಸುವುದು” ಎಂದರೆ ಸರಿಯಾದದ್ದರಿಂದ ಅಥವಾ ಒಳ್ಳೇಯ ವಿಷಯದಿಂದ ಪಕ್ಕಕ್ಕೆ ತಿರುಗಿಸುವುದು ಅಥವಾ ಅದನ್ನು ವಕ್ರೀಕರಣ ಮಾಡುವುದು ಎಂದರ್ಥ.

  • ಹಠಮಾರಿಯಾದ ಒಬ್ಬನು ಅಥವಾ ಯಾವುದೇ ಒಂದು ಸರಿಯಾದ ವಿಷಯದಿಂದ ಮತ್ತು ಒಳ್ಳೇಯ ಕಾರ್ಯದಿಂದ ವಿಂಗಡನೆ ಹೊಂದುವುದು ಎಂದರ್ಥ.
  • ಸತ್ಯವೇದದಲ್ಲಿ ಇಸ್ರಾಯೇಲ್ಯರು ದೇವರಿಗೆ ಅವಿಧೇಯತೆಯನ್ನು ತೋರಿಸಿದಾಗ ಹಠಮಾರಿಗಳಾಗಿ ನಡೆದುಕೊಂಡರು. ಅವರು ಇದನ್ನು ಸುಳ್ಳು ದೇವರುಗಳನ್ನು ಆರಾಧಿಸುವುದರ ಮೂಲಕ ಮಾಡಿ ತೋರಿಸಿದ್ದಾರೆ.
  • ದೇವರ ಪ್ರಾಮಾಣಿಕತೆಗಳಿಗೆ ಅಥವಾ ವರ್ತನೆಗೆ ವಿರುದ್ಧವಾಗಿರುವ ಯಾವುದೇ ಕ್ರಿಯೆಯನ್ನು ಹಠಮಾರಿಯನ್ನಾಗಿ ಪರಿಗಣಿಸಲಾಗುತ್ತದೆ.
  • “ಹಠಮಾರಿ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ನೈತಿಕವಾಗಿ ವಕ್ರಿಕರಿಸಲ್ಪಡುವುದು” ಅಥವಾ “ಅನೈತಿಕತೆ” ಅಥವಾ “ದೇವರ ನೇರವಾದ ಮಾರ್ಗದಿಂದ ಪಕ್ಕಕ್ಕೆ ಹೋಗುವುದು” ಎಂದು ಸಂದರ್ಭಾನುಗುಣವಾಗಿ ಉಪಯೋಗಿಸಿಕೊಳ್ಳಬಹುದು.

“ಹಠಮಾರಿಯ ಪ್ರಸಂಗ” ಎನ್ನುವ ಮಾತನ್ನು “ದುಷ್ಟತ್ವ ವಿಧಾನದಲ್ಲಿ ಮಾತನಾಡುವುದು” ಅಥವಾ “ಮೋಸಗೊಳಿಸುವ ಮಾತು” ಅಥವಾ “ಅನೈತಿಕವಾದ ವಿಧಾನದಲ್ಲಿ ಮಾತನಾಡುವುದು” ಎಂದೂ ಅನುವಾದ ಮಾಡಬಹುದು. “ಹಠ ಮಾಡುವ ಜನರು” ಎನ್ನುವ ಮಾತನ್ನು “ಅನೈತಿಕ ಜನರು” ಅಥವಾ “ನೈತಿಕವಾಗಿ ತಪ್ಪಿಹೋದ ಜನರು” ಅಥವಾ “ದೇವರಿಗೆ ಯಾವಾಗಲೂ ಅವಿಧೇಯತೆಯನ್ನು ತೋರಿಸುವ ಜನರು” ಎಂದೂ ವಿವರಿಸಬಹುದು.

  • “ವಿಪರ್ಯಾಸವಾಗಿ ನಡೆದುಕೊಳ್ಳುವುದು” ಎನ್ನುವ ಮಾತನ್ನು “ದುಷ್ಟ ವಿಧಾನದಲ್ಲಿ ನಡೆದುಕೊಳ್ಳುವುದು” ಅಥವಾ “ದೇವರ ಆಜ್ಞೆಗಳಿಗೆ ವಿರುದ್ಧವಾಗಿ ಕಾರ್ಯಗಳನ್ನು ಮಾಡುವುದು” ಅಥವಾ “ದೇವರ ಬೋಧನೆಗಳನ್ನು ತಿರಸ್ಕರಿಸುವ ವಿಧಾನದಲ್ಲಿ ಜೀವಿಸುವುದು” ಎಂದೂ ಅನುವಾದ ಮಾಡಬಹುದು.
  • “ಹಠಮಾರಿ” ಎನ್ನುವ ಪದವನ್ನು “ಭ್ರಷ್ಟದಲ್ಲಿರಲು ಕಾರಣವಾಗು” ಅಥವಾ “ಯಾವುದಾದರೊಂದನ್ನು ದುಷ್ಟತ್ವದೊಳಗೆ ನಡೆಸುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಭ್ರಷ್ಟ, ಮೋಸಗೊಳಿಸು, ಅವಿಧೇಯತೆ, ದುಷ್ಟ, ತಿರುಗಿಕೋ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1942, H2015, H3399, H3868, H3891, H4297, H5186, H5557, H5558, H5753, H5766, H5773, H5791, H5999, H6140, H6141, H8138, H8397, H8419, G654, G1294, G3344, G3859

ಹತ್ತನೆಯ, ಹತ್ತರಲ್ಲಿ, ದಶಮಾಂಶ, ದಶಮಾಂಶಗಳು

# ಪದದ ಅರ್ಥವಿವರಣೆ:

“ಹತ್ತನೆಯ” ಮತ್ತು “ದಶಮಾಂಶ” ಎನ್ನುವ ಪದಗಳು “ಶೇಕಡಾ ಹತ್ತು” ಅಥವಾ ಒಬ್ಬರ ಹಣದಲ್ಲಿ, ಬೆಳೆಗಳಲ್ಲಿ, ಪಶುಪ್ರಾಣಿಗಳಲ್ಲಿ, ಅಥವಾ ಅವರ ಆಸ್ತಿಪಾಸ್ತಿಗಳಲ್ಲಿ ದೇವರಿಗೆ ಕೊಡುವ “ಹತ್ತನೆಯ ಭಾಗ” ಎನ್ನುವದನ್ನು ಸೂಚಿಸುತ್ತದೆ.

  • ಹಳೇ ಒಡಂಬಡಿಕೆಯಲ್ಲಿ ದೇವರು ತನಗೆ ಕೃತಜ್ಞತೆಯ ಅರ್ಪಣೆಯನ್ನಾಗಿ ತಮಗೆ ಸಂಬಂಧಪಟ್ಟ ಪ್ರತಿಯೊಂದರಲ್ಲಿಯೂ ದಶಮಾಂಶಗಳನ್ನು ಕೊಡಬೇಕೆಂದು ಆತನು ಇಸ್ರಾಯೇಲ್ಯರಿಗೆ ಸೂಚಿಸಿದ್ದನು.
  • ಗುಡಾರವನ್ನು ಮತ್ತು ಸ್ವಲ್ಪ ಕಾಲವಾದನಂತರ ದೇವಾಲಯವನ್ನು ನೋಡಿಕೊಳ್ಳುತ್ತಾ ಸೇವೆ ಮಾಡುತ್ತಾ, ಯಾಜಕರಾಗಿರುವ ಇಸ್ರಾಯೇಲ್ಯರಿಗೆ ಸೇವೆ ಮಾಡುವ ಇಸ್ರಾಯೇಲ್ ಕುಲವಾದ ಲೇವಿಗೆ ಬೆಂಬಲ ಕೊಡುವುದಕ್ಕೆ ಈ ಅರ್ಪಣೆಯನ್ನು ಉಪಯೋಗಿಸುತ್ತಿದ್ದರು.
  • ಹೊಸ ಒಡಂಬಡಿಕೆಯಲ್ಲಿ ದೇವರಿಗೆ ದಶಮಾಂಶಗಳನ್ನು ಕೊಡುವ ಅವಶ್ಯಕತೆಯಿದ್ದಿಲ್ಲ, ಆದರೆ ಕ್ರೈಸ್ತ ಸೇವೆಯ ಕೆಲಸವನ್ನು ಬಲಪಡಿಸುವುದಕ್ಕೆ ಮತ್ತು ಅಗತ್ಯತೆಯಲ್ಲಿರುವ ಜನರಿಗೆ ಧಾರಾಳವಾಗಿ, ಸಂತೋಷವಾಗಿ ಸಹಾಯ ಮಾಡಬೇಕೆಂದು ವಿಶ್ವಾಸಿಗಳಿಗೆ ಆಜ್ಞಾಪಿಸಿದ್ದಾರೆ.
  • ಇದನ್ನು “ಹತ್ತನೆಯ ಭಾಗ” ಅಥವಾ “ಹತ್ತರಲ್ಲಿ ಒಂದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ನಂಬು, ಇಸ್ರಾಯೇಲ್, ಲೇವಿ, ಕುರಿದನಗಳು, ಮೆಲ್ಕೀಚೆದೆಕ, ಹೋಮ, ಗುಡಾರ, ದೇವಾಲಯ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H4643, H6237, H6241, G586, G1181, G1183

ಹತ್ತು ಆಜ್ಞೆಗಳು

# ಸತ್ಯಾಂಶಗಳು:

“ಹತ್ತು ಆಜ್ಞೆಗಳು” ಎಂದರೆ ಇಸ್ರಾಯೇಲ್ಯರು ಕಾನಾನ್ ಭೂಮಿಗೆ ಹೋಗುವ ಪ್ರಯಾಣದಲ್ಲಿ ಅವರು ಅರಣ್ಯದಲ್ಲಿರುವಾಗ ಸೀನಾಯಿ ಬೆಟ್ಟದ ಮೇಲೆ ದೇವರು ಮೋಶೆಗೆ ಕೊಟ್ಟಿರುವ ಆಜ್ಞೆಗಳಾಗಿದ್ದವು. ದೇವರು ಈ ಆಜ್ಞೆಗಳನ್ನು ಎರಡು ದೊಡ್ಡ ಶಿಲಾಶಾಸನಗಳ ಮೇಲೆ ಬರೆದಿದ್ದರು.

  • ಇಸ್ರಾಯೇಲ್ಯರು ವಿಧೇಯತೆ ತೋರಿಸುವುದಕ್ಕೆ ದೇವರು ಆವರಿಗೆ ಅನೇಕ ಆಜ್ಞೆಗಳನ್ನು ಕೊಟ್ಟಿದ್ದರು, ಆದರೆ ಇಸ್ರಾಯೇಲ್ಯರು ದೇವರನ್ನು ಆರಾಧಿಸುವುದಕ್ಕೆ, ಪ್ರೀತಿಸುವುದಕ್ಕೆ ಮತ್ತು ಇತರ ಜನರನ್ನು ಪ್ರೀತಿ ಮಾಡುವುದಕ್ಕೆ ಸಹಾಯ ಮಾಡಲು ಹತ್ತು ಆಜ್ಞೆಗಳು ತುಂಬಾ ವಿಶೇಷವಾಗಿದ್ದವು.
  • ಈ ಆಜ್ಞೆಗಳು ದೇವರು ತನ್ನ ಜನರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯಲ್ಲಿಯೂ ಭಾಗವಾಗಿದ್ದವು. ಅವರು ಏನು ಮಾಡಬೇಕೆಂದು ದೇವರು ಆಜ್ಞಾಪಿಸಿದ್ದಾರೋ ಅವುಗಳಿಗೆ ವಿಧೇಯತೆಯನ್ನು ತೋರಿಸುವುದರ ಮೂಲಕ, ಇಸ್ರಾಯೇಲ್ ಜನರು ದೇವರನ್ನು ಪ್ರೀತಿಸುತ್ತಿದ್ದಾರೆಂದು ಮತ್ತು ಆತನಿಗೆ ಸಂಬಂಧಪಟ್ಟವರಾಗಿರುತ್ತಾರೆಂದು ತೋರಿಕೆಯಾಗುತ್ತದೆ.
  • ಶಿಲಾಶಾಸನಗಳ ಮೇಲೆ ಬರೆಯಲ್ಪಟ್ಟಿರುವ ಆಜ್ಞೆಗಳನ್ನು ಒಡಂಬಡಿಕೆಯ ಮಂಜೂಷದ ಮೇಲೆ ಇಟ್ಟಿದ್ದರು, ಈ ಮಂಜೂಷವನ್ನು ಗುಡಾರದಲ್ಲಿ ಅತೀ ಪರಿಶುದ್ಧ ಸ್ಥಳದಲ್ಲಿ ಇಟ್ಟಿದ್ದರು ಮತ್ತು ಇದಾದನಂತರ, ದೇವಾಲಯದಲ್ಲಿ ಇಟ್ಟಿದ್ದರು.

(ಈ ಪದಗಳನ್ನು ಸಹ ನೋಡಿರಿ : ಒಡಂಬಡಿಕೆಯ ಮಂಜೂಷ, ಆಜ್ಞೆ, ಒಡಂಬಡಿಕೆ, ಅರಣ್ಯ, ಧರ್ಮಶಾಸ್ತ್ರ, ವಿಧೇಯತೆ ತೋರಿಸು, ಸೀನಾಯಿ, ಆರಾಧನೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಉದಾಹರಣೆಗಳು:

  • 13:07_ ದೇವರು ಎರಡು ಶಿಲಾಶಾಸನಗಳ ಮೇಲೆ ಈ __ ಹತ್ತು ಆಜ್ಞೆಗಳನ್ನು ___ ಬರೆದು, ಮೋಶೆಗೆ ಅವುಗಳನ್ನು ಕೊಟ್ಟನು.
  • 13:13_ ಮೋಶೆಯು ಪರ್ವತದಿಂದ ಕೆಳಗೆ ಇಳಿದು ಬಂದಾಗ, ಇಸ್ರಾಯೇಲ್ಯರು ಇಟ್ಟುಕೊಂಡಿರುವ ಪ್ರತಿಮೆಯನ್ನು ನೋಡಿ, ತುಂಬಾ ಕೋಪಗೊಂಡು, ದೇವರು ಬರೆದು ಕೊಟ್ಟಿರುವ ___ ಹತ್ತು ಆಜ್ಞೆಗಳ ___ ಶಿಲಾಶಾಸನಗಳನ್ನು ತುಂಡು ತುಂಡುಗಳಾಗಿ ಮಾಡಿದನು.
  • 13:15_ ಮೋಶೆ ಮುರಿದ ಶಿಲಾಶಾಸನಗಳಿಗೆ ಬದಲಾಗಿ, ಹೊಸ ಶಿಲಾಶಾಸನಗಳ ಮೇಲೆ___ ಹತ್ತು ಆಜ್ಞೆಗಳನ್ನು ___ ತಿರುಗಿ ಬರೆದನು.

# ಪದ ಡೇಟಾ:

  • Strong's: H1697, H6235

ಹಂದಿ, ಹಂದಿಗಳು, ಹಂದಿಮಾಂಸ, ಹಂದಿಗಳ ಗುಂಪು

# ಪದದ ಅರ್ಥವಿವರಣೆ:

ಹಂದಿ ಎನ್ನುವುದು ಮಾಂಸಕ್ಕಾಗಿ ಬೆಳೆಸುವ ನಾಲ್ಕು ಕಾಲುಗಳುಳ್ಳ ಗೊರಸು ಪ್ರಾಣಿಯಾಗಿರುತ್ತದೆ. ಇದರ ಮಾಂಸವನ್ನು “ಹಂದಿ ಮಾಂಸ (ಪೋರ್ಕ್)” ಎಂದು ಕರೆಯುತ್ತಾರೆ. ಹಂದಿಗಳಿಗೆ ಸಾಧಾರಣವಾಗಿ ಉಪಯೋಗಿಸುವ ಪದ ಮತ್ತು ಅವುಗಳಿಗೆ ಸಂಬಂಧಪಟ್ಟ ಪ್ರಾಣಿಗಳನ್ನು “ಹಂದಿಯ ಗೊರಸು” ಎಂದು ಕರೆಯುತ್ತಾರೆ.

  • ಹಂದಿಯ ಮಾಂಸವನ್ನು ತಿನ್ನಬಾರದೆಂದು ದೇವರು ಇಸ್ರಾಯೇಲ್ಯರಿಗೆ ಹೇಳಿದರು ಮತ್ತು ಅದನ್ನು ಅಶುದ್ಧವೆಂದು ಪರಿಗಣಿಸಲು ಹೇಳಿದ್ದಾರೆ. ಇವತ್ತಿನ ಯೆಹೂದ್ಯರು ಕೂಡ ಹಂದಿಗಳನ್ನು ಅಶುದ್ಧವೆಂದು ಮತ್ತು ಅವುಗಳನ್ನು ತಿನ್ನಬಾರದೆಂದು ಪರಿಗಣಿಸುತ್ತಾರೆ.
  • ಹಂದಿಗಳ ಮಾಂಸವನ್ನು ಜನರಿಗೆ ಮಾರುವುದಕ್ಕೆ ಕೃಷಿ ಕ್ಷೇತ್ರಗಳಲ್ಲಿ ಹಂದಿಗಳನ್ನು ಬೆಳೆಸುತ್ತಾರೆ.
  • ಕೃಷಿ ಕ್ಷೇತ್ರಗಳಲ್ಲಿ ಬೆಳೆಸದ ಹಂದಿಗಳ ಗುಂಪು ಒಂದಿರುತ್ತದೆ, ಆದರೆ ಇವು ಅರಣ್ಯಗಳಲ್ಲಿ ಜೀವಿಸುತ್ತವೆ; ಇವುಗಳನ್ನು “ಕಾಡು ಹಂದಿಗಳು” ಎಂದು ಕರೆಯುತ್ತಾರೆ. ಕಾಡು ಹಂದಿಗಳು ಕೋರೆ ಹಲ್ಲುಗಳನ್ನು ಹೊಂದಿರುತ್ತವೆ ಮತ್ತು ಇವುಗಳನ್ನು ಅಪಾಯಕರವಾದ ಪ್ರಾಣಿಗಳೆಂದು ಪರಿಗಣಿಸಲಾಗುತ್ತದೆ.
  • ಕೆಲವೊಂದುಬಾರಿ ದೊಡ್ಡ ಹಂದಿಗಳನ್ನು “ಹೊಟ್ಟೆ ಬಾಕ ಹಂದಿಗಳು” ಎಂದು ಸೂಚಿಸುತ್ತಾರೆ.

(ಅನುವಾದ ಸಲಹೆಗಳು: ಗೊತ್ತಿಲ್ಲದವುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಶುದ್ಧ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2386, G5519

ಹದ್ದು, ಹದ್ದುಗಳು

# ಪದದ ಅರ್ಥವಿವರಣೆ

ಹದ್ದು ಶಕ್ತಿವಂತವಾದ ದೊಡ್ಡ ಪಕ್ಷಿ, ಅದು ಮೀನು, ಇಲಿ, ಹಾವು, ಮತ್ತು ಕೋಳಿಯಂತಹ ಸಣ್ಣ ಪ್ರಾಣಿಗಳನ್ನು ಆಹಾರವಾಗಿ ತಿನ್ನುತ್ತದೆ.

  • ಹದ್ದು ಯಾವ ರೀತಿಯಲ್ಲಿ ಬೇಗನೆ ಮತ್ತು ಅಕಸ್ಮಾತಾಗಿ ತನ್ನ ಆಹಾರವನ್ನು ಎತ್ತಿಕೊಂಡು ಹೋಗುವುದು ಅದನ್ನು ಸತ್ಯವೇದದಲ್ಲಿ ಒಂದು ಸೈನ್ಯದ ಬಲ ಮತ್ತು ವೇಗಕ್ಕೆ ಹೋಲಿಸಲಾಗಿದೆ.
  • ಯೆಹೋವನನ್ನು ನಿರೀಕ್ಷಿಸುವವರೋ ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು ಏರುವರು ಎಂದು ಯೆಶಯ ಹೇಳಿದ್ದಾನೆ. ಇದು ದೇವರನ್ನು ನಂಬಿದವರಿಗೆ ಮತ್ತು ಆತನಿಗೆ ವಿಧೇಯರಾಗಿದ್ದವರಿಗೆ ಸಿಗುವ ಸ್ವಾತಂತ್ರ ಮತ್ತು ಬಲವನ್ನು ಸೂಚಿಸುವ ಅಲಂಕಾರಿಕ ಭಾಷೆಯಾಗಿದೆ.
  • ದಾನಿಯೇಲ್ ಪುಸ್ತಕದಲ್ಲಿ, ನೆಬುಕದ್ನೆಚರನ ಕೂದಲಿನ ಉದ್ದವನ್ನು ಹದ್ದಿನ ಗರಿಗಳ ಉದ್ದಕ್ಕೆ ಹೋಲಿಸಲಾಗಿದೆ, ಅವು 50 ಸೆಂಟಿಮೀಟರುಗಳಿಗಿಂತ ಉದ್ದವಾಗಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ದಾನಿಯೇಲ್, ಉಚಿತ, ನೆಬುಕದ್ನೆಚರ್, ಬಲ)

(ಈ ಪದಗಳನ್ನು ಸಹ ನೋಡಿರಿ : ಗೊತ್ತಿಲ್ಲದ ವಿಷಯಗಳನ್ನು ಹೇಗೆ ಅನುವಾದ ಮಾಡಬೇಕು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H5403, H5404, H7360, G105

ಹಬ್ಬ, ಹಬ್ಬಗಳು

# ಪದದ ಅರ್ಥವಿವರಣೆ:

ಸಾಧಾರಣವಾಗಿ ಹಬ್ಬ ಎನ್ನುವುದು ಸಮುದಾಯದಲ್ಲಿರುವ ಜನರಿಂದ ಆಚರಿಸಲ್ಪಡುತ್ತದೆ.

  • ಹಳೇ ಒಡಂಬಡಿಕೆಯಲ್ಲಿ “ಹಬ್ಬ” ಎನ್ನುವ ಪದಕ್ಕೆ “ನೇಮಿಸಲ್ಪಟ್ಟ ಸಮಯ” ಎಂದು ಅಕ್ಷರಾರ್ಥವಿದೆ.

  • ಇಸ್ರಾಯೇಲ್ಯರು ಆಚರಿಸುವ ಹಬ್ಬಗಳು ವಿಶೇಷವಾಗಿ ನೇಮಿಸಲ್ಪಟ್ಟ ಸಮಯಗಳು ಅಥವಾ ಕಾಲಗಳು ಆಗಿರುತ್ತವೆ, ಇವುಗಳನ್ನು ಆಚರಿಸಬೇಕೆಂದು ದೇವರು ಅವರಿಗೆ ಆಜ್ಞಾಪಿಸಿದ್ದರು.

  • ಕೆಲವೊಂದು ಆಂಗ್ಲ ಅನುವಾದಗಳಲ್ಲಿ ಹಬ್ಬ ಎನ್ನುವ ಪದವನ್ನು ಉಪಯೋಗಿಸುವುದಕ್ಕೆ ಬದಲಾಗಿ “ಔತಣ” ಎಂದು ಉಪಯೋಗಿಸಿದ್ದಾರೆ, ಯಾಕಂದರೆ ಆಚರಿಸುವ ಹಬ್ಬಗಳಲ್ಲಿ ಎಲ್ಲರು ಸೇರಿ ಊಟ ಮಾಡುವ ಕಾರ್ಯಕ್ರಮವು ಇರುತ್ತದೆ.

  • ಪ್ರತೀ ವರ್ಷ ಇಸ್ರಾಯೇಲ್ಯರು ಆಚರಿಸುವ ಅನೇಕ ಮುಖ್ಯ ಹಬ್ಬಗಳಿವೆ:

  • ಪಸ್ಕ

  • ಹುಳಿಯಿಲ್ಲದ ರೊಟ್ಟಿಯ ಹಬ್ಬ

  • ಪ್ರಥಮ ಫಲಗಳು

  • ವಾರಗಳ ಹಬ್ಬ (ಪಂಚಾಶತ್ತಮ)

  • ತುತೂರಿಗಳ ಹಬ್ಬ

  • ಪಾಪ ಪರಿಹಾರಕ ದಿನ

  • ಗುಡಾರಗಳ ಹಬ್ಬ

  • ಈ ಎಲ್ಲಾ ಹಬ್ಬಗಳ ಉದ್ದೇಶವು ದೇವರಿಗೆ ವಂದನೆಗಳನ್ನು ಸಲ್ಲಿಸುವುದು ಮತ್ತು ತನ್ನ ಜನರನ್ನು ರಕ್ಷಿಸಿದ, ಸಂರಕ್ಷಿಸಿದ, ಮತ್ತು ಅವರಿಗೆ ಅನುಗ್ರಹಿಸಿದ ಅನೇಕ ಅದ್ಭುತ ಕಾರ್ಯಗಳನ್ನು ನೆನಪಿಸಿಕೊಳ್ಳುವುದು ಆಗಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಔತಣ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1974, H2166, H2282, H2287, H6213, H4150, G1456, G1858, G1859

ಹಸ್ತ, ಹಸ್ತಗಳು, ಕೈಗೆ ಕೊಡಲ್ಪಟ್ಟಿದೆ, ಹಸ್ತಾಂತರ, ಹಸ್ತದಿಂದ, ಮೇಲೆ ಹಸ್ತವನ್ನಿಡು, ಮೇಲೆ ತನ್ನ ಹಸ್ತವನ್ನಿಡುವುದು, ಬಲಗೈ, ನೀತಿ ಹಸ್ತಗಳು, ಹಸ್ತದಿಂದ

# ಪದದ ಅರ್ಥವಿವರಣೆ:

ಸತ್ಯವೇದದಲ್ಲಿ “ಹಸ್ತ” ಎನ್ನುವ ಪದವನ್ನು ಅನೇಕವಾದ ಅಲಂಕಾರಿಕ ವಿಧಾನಗಳಲ್ಲಿ ಉಪಯೋಗಿಸಲಾಗಿರುತ್ತದೆ.

  • ಒಬ್ಬರಿಗೆ “ಕೈಯನ್ನು” ಕೊಡುವುದು ಎನ್ನುವುದಕ್ಕೆ ಒಬ್ಬರ ಕೈಗಳಲ್ಲಿ ಏನಾದರೊಂದನ್ನು ಕೊಡುವುದು ಎನ್ನುವ ಅರ್ಥ ಬರುತ್ತದೆ.

  • “ಹಸ್ತ” ಎನ್ನುವ ಪದವು ದೇವರ ಶಕ್ತಿಯನ್ನು ಮತ್ತು ಆತನ ಕಾರ್ಯವನ್ನು ಸೂಚಿಸುವುದರಲ್ಲಿ ಅನೇಕಬಾರಿ ಉಪಯೋಗಿಸಲ್ಪಟ್ಟಿದೆ, “ಈ ಎಲ್ಲಾ ಕಾರ್ಯಗಳನ್ನು ನನ್ನ ಹಸ್ತವು ಮಾಡಲಿಲ್ಲವೋ?” ಎಂದು ದೇವರು ಹೇಳಿದ ಸಂದರ್ಭಗಳಿವೆ. (ನೋಡಿರಿ: ಲಾಕ್ಷಣಿಕ ಪ್ರಯೋಗ

  • “ಕೈಗೆ ಒಪ್ಪಿಸಲಾಗಿದೆ” ಅಥವಾ “ಕೈಗಳಲ್ಲಿ ಇಡಲಾಗಿದೆ” ಎನ್ನುವ ಮಾತುಗಳು ಒಬ್ಬರ ಶಕ್ತಿಯ ಕೆಳಗೆ ಅಥವಾ ನಿಯಂತ್ರಣದ ಕೆಳಗೆ ಇನ್ನೊಬ್ಬರನ್ನಿರಿಸುವುದನ್ನು ಸೂಚಿಸುತ್ತದೆ.

  • “ಹಸ್ತ” ಎನ್ನುವ ಪದವನ್ನು ಅಲಂಕಾರಿಕವಾಗಿ ಉಪಯೋಗಿಸಿದ ಕೆಲವೊಂದು ಉದಾಹರಣೆಗಳು:

  • “ಮೇಲೆ ಹಸ್ತವನ್ನಿಡು” ಎನ್ನುವದಕ್ಕೆ “ ಹಾನಿ ಮಾಡುವುದು” ಎಂದರ್ಥ.

  • “ಅವನ ಹಸ್ತದಿಂದ ರಕ್ಷಿಸು” ಎನ್ನುವ ಮಾತಿಗೆ ಇನ್ನೊಬ್ಬರನ್ನು ಹಾನಿ ಮಾಡುವುದರಿಂದ ಒಬ್ಬರನ್ನು ರಕ್ಷಿಸು ಎಂದರ್ಥ.

  • “ಬಲಗೈ ಮೇಲೆ” ಇರುವ ಸ್ಥಾನ ಎನ್ನುವದಕ್ಕೆ “ಬಲಗಡೆಯಲ್ಲಿರುವುದು” ಅಥವಾ “ಬಲ ಬದಿಗೆ” ಎಂದರ್ಥ.

  • ಇನ್ನೊಬ್ಬರ “ಹಸ್ತದಿಂದ” ಎನ್ನುವ ಮಾತಿಗೆ ಒಬ್ಬ ವ್ಯಕ್ತಿಯ ಕ್ರಿಯೆಯ “ಮೂಲಕ” ಅಥವಾ ಕ್ರಿಯೆ “ದಿಂದ” ಎಂದರ್ಥ. ಉದಾಹರಣೆಗೆ, “ಕರ್ತನ ಹಸ್ತದಿಂದ” ಎನ್ನುವ ಮಾತಿಗೆ ಏನಾದರೊಂದು ಮಾಡುವುದಕ್ಕೆ ಕರ್ತನೊಬ್ಬನೇ ಎಂದರ್ಥ.

  • ಒಬ್ಬರ ಮೇಲೆ ಹಸ್ತಗಳನ್ನಿಡುವುದೆನ್ನುವುದು ಅನೇಕಬಾರಿ ಆ ವ್ಯಕ್ತಿಯನ್ನು ಆಶೀರ್ವಾದ ಮಾಡುವಾಗ ಮಾಡುವ ಕ್ರಿಯೆಯಾಗಿರುತ್ತದೆ.

  • “ಹಸ್ತಗಳನ್ನಿಡುವುದು” ಎನ್ನುವ ಮಾತು ಸ್ವಸ್ಥತೆಗಾಗಿ ಪ್ರಾರ್ಥನೆ ಮಾಡುವುದಕ್ಕೆ ಅಥವಾ ದೇವರ ಸೇವೆಗೆ ಒಬ್ಬ ವ್ಯಕ್ತಿಯನ್ನು ಪ್ರತಿಷ್ಠೆ ಮಾಡುವ ಕ್ರಮದಲ್ಲಿ ಆ ವ್ಯಕ್ತಿಯ ಮೇಲೆ ಹಸ್ತಗಳನ್ನಿಡುವುದನ್ನು ಸೂಚಿಸುತ್ತದೆ.

  • “ನನ್ನ ಹಸ್ತಗಳಿಂದ ಬರೆಯುತ್ತಿದ್ದೇನೆ” ಎಂದು ಪೌಲನು ಹೇಳಿದಾಗ, ಆ ಮಾತಿಗೆ ಈ ಪತ್ರವನ್ನು ನಾನು ಹೇಳುತ್ತಿರುವಾಗ ಇನ್ನೊಬ್ಬರು ಬರೆಯದೇ, ನನ್ನ ಸ್ವಂತ ಹಸ್ತಗಳಿಂದ ಬರೆಯಲ್ಪಟ್ಟಿದೆ ಎಂದರ್ಥ,

# ಅನುವಾದ ಸಲಹೆಗಳು:

  • ಈ ಮಾತುಗಳು ಮತ್ತು ಇತರ ಅಲಂಕಾರಿಕ ಹೇಳಿಕೆಗಳು ಒಂದೇ ಅರ್ಥ ಬರುವ ಇತರ ಅಲಂಕಾರಿಕ ಮಾತುಗಳನ್ನು ಉಪಯೋಗಿಸಿ ಅನುವಾದ ಮಾಡಬಹುದು. ಅಥವಾ ಅರ್ಥವನ್ನು ನೇರವಾದ, ಅಕ್ಷರಾರ್ಥ ಭಾಷೆಯನ್ನೂ ಉಪಯೋಗಿಸಿ ಅನುವಾದ ಮಾಡಬಹುದು (ಉದಾಹರಣೆಗಳನ್ನು ಮೇಲೆ ನೋಡಿರಿ).
  • “ಅವನಿಗೆ ಗ್ರಂಥದ ಸುರಳಿಯನ್ನು ಕೊಡಲಾಗಿದೆ” ಎನ್ನುವ ಮಾತಿಗೆ “ಸುರಳಿಯನ್ನು ಅವನಿಗೆ ಕೊಡಲಾಗಿದೆ” ಅಥವಾ “ಅವನ ಕೈಯಲ್ಲಿ ಸುರಳಿಯನ್ನಿಡು” ಎಂದೂ ಅನುವಾದ ಮಾಡಬಹುದು. ಅದನ್ನು ಅವನಿಗೆ ಶಾಶ್ವತವಾಗಿ ಕೊಡಲ್ಪಟ್ಟಿಲ್ಲ, ಆದರೆ ಆ ಸಮಯದಲ್ಲಿ ಅದನ್ನು ಉಪಯೋಗಿಸುವುದರ ಉದ್ದೇಶಕ್ಕಾಗಿ ಕೊಡಲ್ಪಟ್ಟಿರುತ್ತದೆ.
  • “ “ದೇವರ ಹಸ್ತವು ಇದನ್ನು ಮಾಡಿದೆ” ಎನ್ನುವ ಮಾತಿನಲ್ಲಿರುವಂತೆ ಹಸ್ತ” ಎನ್ನುವ ಪದವು ಒಬ್ಬ ವ್ಯಕ್ತಿಗೆ ಸೂಚಿಸಿದಾಗ, ಇದನ್ನು “ಇದನ್ನು ದೇವರು ಮಾಡಿದ್ದಾನೆ” ಎಂದು ಅನುವಾದ ಮಾಡಿದ್ದಾನೆ.
  • “ಅವರ ಶತ್ರುಗಳ ಹಸ್ತಗಳಿಗೆ ಅವರನ್ನು ಒಪ್ಪಿಸಲಾಗಿದೆ” ಅಥವಾ “ಅವರ ಶತ್ರುಗಳಿಗೆ ಅವರನ್ನು ಕೈವಶಮಾಡಲಾಗಿದೆ” ಎನ್ನುವ ಮಾತುಗಳನ್ನು “ಅವರನ್ನು ಜಯಿಸುವುದಕ್ಕೆ ಅವರ ಶತ್ರುಗಳಿಗೆ ಅನುಮತಿ ಕೊಡಿರಿ” ಅಥವಾ “ಅವರ ಶತ್ರುಗಳಿಂದ ಅವರೆಲ್ಲರು ಸೆರೆಗೊಯ್ಯುವಂತೆ ಕಾರಣವಾಗಿರಿ” ಅಥವಾ “ಅವರ ಮೇಲೆ ನಿಯಂತ್ರಣವನ್ನು ತೆಗೆದುಕೊಳ್ಳಲು ಅವರ ಶತ್ರುಗಳನ್ನು ಬಲಪಡಿಸಿರಿ” ಎಂದೂ ಅನುವಾದ ಮಾಡಬಹುದು.
  • “ಅವರ ಹಸ್ತದಿಂದ ಸಾಯುವುದು” ಎನ್ನುವ ಮಾತನ್ನು “ಅವರಿಂದ ಕೊಲ್ಲಲ್ಪಡುವುದು” ಎಂದರ್ಥ.
  • “ಅವರ ಬಲಗೈ ಮೇಲೆ” ಎನ್ನುವ ಮಾತನ್ನು “ಅವರ ಬಲ ಬದಿಗೆ” ಎಂದೂ ಅನುವಾದ ಮಾಡಬಹುದು.
  • ಯೇಸು “ದೇವರ ಬಲಗಡೆಯಲ್ಲಿ ಆಸೀನನಾಗಿರುವನು” ಎನ್ನುವ ಮಾತಿಗೆ ಸಂಬಂಧಪಟ್ಟು, ಒಂದು ವೇಳೆ ಈ ಮಾತು ಸಮಾನ ಅಧಿಕಾರ ಮತ್ತು ಉನ್ನತ ಗೌರವ ಸ್ಥಾನ ಎನ್ನುವ ಅರ್ಥ ಅನುವಾದ ಭಾಷೆಯಲ್ಲಿ ಬರದಿದ್ದರೆ, ಆ ಅರ್ಥ ಬರುವ ಬೇರೊಂದು ಮಾತನ್ನು ಉಅಪಯೋಗಿಸಬಹುದು. ಅಥವಾ ಒಂದು ಚಿಕ್ಕ ವಿವರಣೆಯನ್ನು ಜೋಡಿಸಿ ಹೇಳಬಹುದು: “ದೇವರ ಬಲಗಡೆಯಲ್ಲಿ, ಅತ್ಯುನ್ನತ ಅಧಿಕಾರದ ಸ್ಥಾನದಲ್ಲಿ ಆಸೀನನಾಗಿರುವನು” ಎಂದು ಹೇಳಬಹುದು.

(ಈ ಪದಗಳನ್ನು ಸಹ ನೋಡಿರಿ : ವಿರೋಧಿ, ಆಶೀರ್ವದಿಸು, ಸೆರೆ, ಘನಪಡಿಸು, ಶಕ್ತಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H405, H2026, H2651, H2947, H2948, H3027, H3028, H3225, H3231, H3233, H3709, H7126, H7138, H8040, H8042, H8168, G710, G1188, G1448, G1451, G1764, G2021, G2092, G2176, G2902, G4084, G4474, G4475, G5495, G5496, G5497

ಹಾಳು ಮಾಡು, ವಿನಾಶ, ಹಾಳುಬಿದ್ದ

# ಪದದ ಅರ್ಥವಿವರಣೆ:

“ಹಾಳುಮಾಡು” ಮತ್ತು “ವಿನಾಶ” ಎನ್ನುವ ಪದಗಳು ಜನರು ನಿವಾಸವಾಗಿರುವ ಪ್ರಾಂತ್ಯಗಳನ್ನು ನಾಶಗೊಳಿಸುವುದನ್ನು ಸೂಚಿಸುತ್ತವೆ, ಇದರಿದ ಅವು ವಾಸಯೋಗ್ಯವಲ್ಲದ ಪ್ರಾಂತ್ಯಗಳಾಗಿ ಮಾರ್ಪಡುತ್ತವೆ.

  • ಈ ಪದವನ್ನು ಒಬ್ಬ ವ್ಯಕ್ತಿಗೆ ಸೂಚಿಸಿದಾಗ, “ಹಾಳುಮಾಡು” ಎನ್ನುವ ಪದವು ಪ್ರಲಾಪವನ್ನು, ಒಬ್ಬಂಟಿಗತನವನ್ನು, ನಾಶವಾದ ಸ್ಥಿತಿಯನ್ನು ವಿವರಿಸುತ್ತದೆ.
  • “ವಿನಾಶ” ಎನ್ನುವ ಪದವು ನಾಶವಾಗಿರುವ ಸ್ಥಿತಿಯನ್ನು ಸೂಚಿಸುತ್ತದೆ.
  • ಹೊಲಗದ್ದೆಗಳಲ್ಲಿ ಬೆಳೆಯುತ್ತಿರುವ ಬೆಳೆಗಳು ನಾಶವಾದರೆ, ಈ ಬೆಳೆಗಳನ್ನು ನಾಶಪಡಿಸಿದ್ದು ಯಾವುದಾದರೊಂದು ಅಂದರೆ ಕ್ರಿಮಿ ಕೀಟಗಳು ಅಥವಾ ಆಕ್ರಮಣಕಾರಿ ಸೈನ್ಯ ಇರುತ್ತದೆ ಎಂದರ್ಥ.
  • “ಹಾಳುಬಿದ್ದ ಪ್ರಾಂತ್ಯವು” ಅತೀ ಕಡಿಮೆ ಜನರು ನಿವಾಸವಾಗಿರುವ ಪ್ರಾಂತ್ಯವನ್ನು ಸೂಚಿಸುತ್ತದೆ, ಯಾಕಂದರೆ ಅಲ್ಲಿ ಕೇವಲ ಕೆಲವೊಂದು ಬೆಳೆಗಳನ್ನು ಅಥವಾ ಇತರ ತರಕಾರಿ ಬೆಳೆಗಳನ್ನು ಬೆಳೆಸುತ್ತಾರೆ.
  • “ಹಾಳುಬಿದ್ದ ಪ್ರಾಂತ್ಯ” ಅಥವಾ “ಬಂಜರಿ ಭೂಮಿ” ಎನ್ನುವ ಪದಗಳು ಅನೇಕಬಾರಿ ಹೊರ ಹಾಕಿದ ಜನರು (ಕುಷ್ಟು ರೋಗಿಗಳಾಗಿರುವ ಜನರನ್ನು) ಮತ್ತು ಅಪಾಯಕರವಾದ ಪ್ರಾಣಿಗಳು ನಿವಾಸ ಮಾಡುವ ಸ್ಥಳವನ್ನು ಸೂಚಿಸುತ್ತದೆ.
  • ಒಂದುವೇಳೆ ಪಟ್ಟಣವನ್ನು “ಹಾಳು ಮಾಡಲ್ಪಟ್ಟಿದೆ” ಎಂದಾಗ ಅದರಲ್ಲಿರುವ ಭವನಗಳು ಮತ್ತು ವಸ್ತುಗಳು ನಾಶಗೊಳಿಸಲ್ಪಟ್ಟಿವೆ ಅಥವಾ ಕದಿಯಲ್ಪಟ್ಟಿವೆ ಎಂದರ್ಥ ಮತ್ತು ಆ ಪಟ್ಟಣದಲ್ಲಿರುವ ಜನರನ್ನು ಕೊಂದಿದ್ದಾರೆ ಅಥವಾ ಸೆರೆಗೆ ಹೊಯ್ಯಲ್ಪಟ್ಟಿದ್ದಾರೆ ಎಂದರ್ಥ. ಆ ಪಟ್ಟಣವು “ಖಾಲಿ” ಆಗುತ್ತದೆ ಮತ್ತು “ನಾಶವಾಗುತ್ತದೆ”. “ವಿನಾಶಕಾರಿ” ಅಥವಾ “ವಿನಾಶ ಮಾಡಲ್ಪಟ್ಟಿದೆ” ಎನ್ನುವ ಪದಗಳಿಗೆ ಸಮಾನಾರ್ಥಕವಾದ ಪದವಾಗಿರುತ್ತದೆ, ಆದರೆ ಖಾಲಿಯಾಗಿರುವುದರ ಮೇಲೆ ಹೆಚ್ಚಿನ ಒತ್ತು ಇರುತ್ತದೆ.
  • ಸಂದರ್ಭಕ್ಕೆ ತಕ್ಕಂತೆ, ಈ ಪದವನ್ನು “ನಾಶಮಾಡಲಾಗಿದೆ” ಅಥವಾ “ವಿನಾಶವಾಗಿದೆ” ಅಥವಾ “ವ್ಯರ್ಥ ಸ್ಥಳದಂತೆ ಮಾಡಲಾಗಿದೆ” ಅಥವಾ “ಒಂಟಿಯಾಗಿ ಮತ್ತು ಬಹಿಷ್ಕೃತ ಮಾಡಲಾಗಿದೆ” ಅಥವಾ “ಬಂಜರುಗೊಳಿಸಲಾಗಿದೆ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಮರುಭೂಮಿ, ವಿನಾಶ, ನಾಶಗೊಳಿಸು, ವ್ಯರ್ಥ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H490, H816, H820, H910, H1327, H1565, H2717, H2720, H2721, H2723, H3173, H3341, H3456, H3582, H4875, H4876, H4923, H5352, H5800, H7582, H7612, H7701, H7722, H8047, H8074, H8076, H8077, G2048, G2049, G2050, G3443

ಹಾಳು, ಹಾಳುಮಾಡುವುದು, ಹಾಳು ಮಾಡಿದೆ, ಹಾಳು ಮಾಡುತ್ತಿರುವುದು, ಹಾಳು ಭೂಮಿ, ಹಾಳು ಭೂಮಿಗಳು

# ಪದದ ಅರ್ಥವಿವರಣೆ:

ಯಾವುದಾದರೊಂದನ್ನು ಹಾಳು ಮಾಡುವುದು ಎಂದರೆ ಇದನ್ನು ಯಾವ ಆಲೋಚನೆಯಿಲ್ಲದೆ ಬಿಸಾಡುವುದು ಅಥವಾ ಅಜ್ಞಾನವನ್ನು ಇದನ್ನು ಉಪಯೋಗಿಸುವುದು ಎಂದರ್ಥ. “ಹಾಳು ಭೂಮಿ” ಅಥವಾ “ಹಾಳು” ಮಾಡಲ್ಪಟ್ಟಿರುವುದು ಎನ್ನುವ ಪದಗಳು ನಾಶ ಮಾಡಲ್ಪಟ್ಟ ಪಟ್ಟಣವನ್ನು ಅಥವಾ ಭೂಮಿಯನ್ನು ಸೂಚಿಸುತ್ತದೆ, ಆದ್ದರಿಂದ ಅಂಥಹ ಪಟ್ಟಣದಲ್ಲಿ ಇನ್ನಾವುದೂ ಜೀವಿಸುವುದಿಲ್ಲ.

  • “ಹಾಳಾಗುವುದು” ಎನ್ನುವ ಮಾತಿಗೆ ಇನ್ನೂ ಹೆಚ್ಚಚ್ಚಾಗಿ ರೋಗದಿಂದ ನರಳುವುದು ಅಥವಾ ನಾಶವಾಗುತ್ತಿರುವುದು ಎಂದರ್ಥವಾಗಿರುತ್ತದೆ. ಹಾಳಾಗುತ್ತಿರುವ ಒಬ್ಬ ವ್ಯಕ್ತಿ ಸಾಧಾರಣವಾಗಿ ಆಹಾರವಿಲ್ಲದ ಕಾರಣದಿಂದ ಅಥವಾ ರೋಗದ ಕಾರಣದಿಂದ ತುಂಬಾ ತೆಳುವಾಗುತ್ತಿರುತ್ತಾನೆ.
  • ಪಟ್ಟಣವನ್ನು ಅಥವಾ ಒಂದು ಸ್ಥಳವನ್ನು “ಹಾಳು ಮಾಡು” ಎನ್ನುವ ಮಾತಿಗೆ ಅದನ್ನು ನಾಶಮಾಡು ಎಂದರ್ಥ.
  • “ಹಾಳುಭುಉಮಿ” ಎನ್ನುವ ಪದಕ್ಕೆ ಇನ್ನೊಂದು ಪದವು “ಅಡವಿ” ಅಥವಾ “ಅರಣ್ಯ” ಎಂದಾಗಿರುತ್ತದೆ. ಆದರೆ ಹಾಳುಭೂಮಿಯು ಅಲ್ಲಿ ನಿವಾಸವಾಗುತ್ತಿರುವ ಜನರನ್ನೂ ಮತ್ತು ಫಲಗಳನ್ನು ಕೊಡುವ ಗಿಡ ಮರಗಳನ್ನು ಹೊಂದಿರುವ ಭೂಮಿಯೆಂದೂ ಸೂಚಿಸಲ್ಪಟ್ಟಿರುತ್ತದೆ.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H535, H1086, H1104, H1110, H1197, H1326, H2100, H2490, H2522, H2717, H2720, H2721, H2723, H3615, H3765, H3856, H4087, H4127, H4198, H4592, H4743, H4875, H5307, H5327, H7334, H7582, H7703, H7722, H7736, H7843, H8047, H8074, H8077, H8414, H8437, G684, G1287, G2049, G2673, G4199

ಹಿಂಡು, ಹಿಂಡುಗಳು, ಸಮೂಹ, ಮಂದೆ, ಮಂದೆಗಳು

# ಪದದ ಅರ್ಥವಿವರಣೆ

ಸತ್ಯವೇದದಲ್ಲಿ, “ಹಿಂಡು” ಎನ್ನುವ ಪದವು ಕುರಿಗಳ ಅಥವಾ ಮೇಕೆಗಳ ಗುಂಪನ್ನು ಸೂಚಿಸುತ್ತದೆ ಮತ್ತು “ಮಂದೆ” ಎನ್ನುವ ಪದವು ಜಾನುವಾರು, ಎತ್ತುಗಳು ಅಥವಾ ಹಂದಿಗಳ ಗುಂಪನ್ನು ಸೂಚಿಸುತ್ತದೆ.

  • ಪಶುಗಳ ಅಥವಾ ಪಕ್ಷಿಗಳ ಗುಂಪುಗಳಿಗೆ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಪದಗಳು ಇರುತ್ತವೆ.
  • ಉದಾಹರಣೆಗೆ, ಅಂಗ್ಲ ಭಾಷೆಯಲ್ಲಿ “ಮಂದೆ” ಎನ್ನುವ ಪದವನ್ನು ಕುರಿ ಅಥವಾ ಮೇಕೆಗಳ ಗುಂಪಿಗೆ ಉಪಯೋಗಿಸಬಹುದು ಆದರೆ ಸತ್ಯವೇದದ ಸಂಧರ್ಭದಲ್ಲಿ ಆ ರೀತಿಯಲ್ಲಿ ಉಪಯೋಗಿಸುವುದು ಸರಿಯಲ್ಲ.
  • “ಹಿಂಡು” ಎನ್ನುವ ಪದವನ್ನು ಅಂಗ್ಲ ಭಾಷೆಯಲ್ಲಿ ಪಕ್ಷಿಗಳ ಗುಂಪಿಗೆ ಉಪಯೋಗಿಸಬಹುದು ಆದರೆ ಅದು ಹಂದಿಗಳು, ಎತ್ತುಗಳು ಅಥವಾ ಜಾನುವಾರುಗಳಿಗೆ ಉಪಯೋಗಿಸಲು ಸಾಧ್ಯವಿಲ್ಲ.
  • ನಿಮ್ಮ ಭಾಷೆಯಲ್ಲಿ ಪ್ರಾಣಿಗಳ ಗುಂಪುಗಳನ್ನು ಸೂಚಿಸುವ ಅನೇಕ ಹೆಸರುಗಳನ್ನು ಕುರಿತು ಗಮನಿಸಿರಿ.
  • “ಹಿಂಡು ಮತ್ತು ಮಂದೆ” ಎನ್ನುವ ಪದಗಳಿರುವ ವಚನಗಳಲ್ಲಿ “ಕುರಿಗಳ” ಅಥವಾ “ಜಾನುವಾರುದ” ಎಂತ ಪದಗಳನ್ನು ಜೋಡಿಸುವುದು ಉತ್ತಮ, ಉದಾಹರಣೆಗೆ ಒಂದು ಭಾಷೆಯಲ್ಲಿ ಬೇರೆ ಬೇರೆ ಪ್ರಾಣಿಗಳ ಗುಂಪುಗಳಿಗೆ ಬೇರೆ ಬೇರೆ ಹೆಸರುಗಳು ಇಲ್ಲದಿದ್ದರೆ ಈ ರೀತಿ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಮೇಕೆ, ಎತ್ತು, ಹಂದಿ, ಕುರಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H951, H1241, H2835, H4029, H4735, H4830, H5349, H5739, H6251, H6629, H7399, H7462, G34, G4167, G4168

ಹಿಂತಿರುಗಿ, ಹಿಂತಿರುಗುವುದು, ಹಿಂತಿರುಗಿದೆ, ಹಿಂತಿರುಗುತ್ತಾಯಿದೆ

# ಪದದ ಅರ್ಥವಿವರಣೆ:

“ಹಿಂತಿರುಗಿ” ಎನ್ನುವ ಪದಕ್ಕೆ ಹಿಂದಕ್ಕೆ ಹೋಗುವುದು ಅಥವಾ ಯಾವುದಾದರೊಂದನ್ನು ಹಿಂದಕ್ಕೆ ಕೊಡುವುದು ಎಂದರ್ಥ.

ಯಾವುದಾದರೊಂದಕ್ಕೆ “ಹಿಂತಿರುಗುವುದು” ಎಂದರೆ ಆ ಕಾರ್ಯವನ್ನು ತಿರುಗಿ ಮಾಡುವುದಕ್ಕೆ ಪ್ರಾರಂಭಿಸುವುದು ಎಂದರ್ಥ. ಒಂದು ಸ್ಥಳಕ್ಕೆ ಅಥವಾ ಒಬ್ಬ ವ್ಯಕ್ತಿಯ ಬಳಿಗೆ “ಹಿಂತಿರುಗುವುದು” ಎಂದರೆ ಆ ಸ್ಥಳಕ್ಕೆ ಅಥವಾ ಆ ವ್ಯಕ್ತಿಯ ಬಳಿಗೆ ಮತ್ತೊಮ್ಮೆ ಹಿಂತಿರುಗಿ ಹೋಗುವುದು ಎಂದರ್ಥವಾಗಿರುತ್ತದೆ.

  • ಇಸ್ರಾಯೇಲ್ಯರು ಸುಳ್ಳು ದೇವರುಗಳ ಬಳಿಗೆ ಹಿಂತಿರುಗಿ ಹೋದಾಗ, ಅವರು ಆ ವಿಗ್ರಹಗಳನ್ನು ಆರಾಧಿಸುವುದಕ್ಕೆ ಪ್ರಾರಂಭಿಸಿದರು.
  • ಅವರು ಯೆಹೋವನ ಬಳಿಗೆ ಹಿಂತಿರುಗಿ ಬರುವಾಗ, ಅವರು ಪಶ್ಚಾತ್ತಾಪಪಟ್ಟರು ಮತ್ತು ತಿರುಗಿ ಯೆಹೋವನನ್ನು ಆರಾಧನೆ ಮಾಡಿದರು.
  • ಇನ್ನೊಬ್ಬರಿಂದ ಪಡೆದುಕೊಂಡ ಅಥವಾ ತೆಗೆದುಕೊಂಡ ವಸ್ತುಗಳನ್ನು ಅಥವಾ ಭೂಮಿಯನ್ನು ಹಿಂತಿರುಗಿಸುವುದು ಎಂದರೆ ಅವುಗಳು ಯಾವ ವ್ಯಕ್ತಿಗೆ ಸಂಬಂಧಪಟ್ಟಿರುತ್ತವೋ ಅವರಿಗೆ ಆ ಆಸ್ತಿಯನ್ನು ಕೊಡುವುದು ಎಂದರ್ಥವಾಗಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ತಿರುಗು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H5437, H7725, H7729, H8421, H8666, G344, G360, G390, G1877, G1880, G1994, G5290

ಹಿಮ, ಹಿಮ ಬಿದ್ದಿದೆ, ಹಿಮ ಬೀಳುತ್ತಿದೆ

# ಸತ್ಯಾಂಶಗಳು:

“ಹಿಮ” ಎನ್ನುವ ಪದವು ವಾಯು ತಾಪಮಾನವು ತಣ್ಣಗಾಗಿರುವ ಸ್ಥಳಗಳಲ್ಲಿ ಮೇಘಗಳಿಂದ ಕೆಳಗೆ ಬೀಳುವ ಹೆಪ್ಪುಗಟ್ಟಿದ ನೀರಿನ ಬಿಳಿ ಪದರುಗಳನ್ನು ಸೂಚಿಸುತ್ತದೆ.

  • ಇಸ್ರಾಯೇಲಿನಲ್ಲಿ ಎತ್ತರ ಸ್ಥಳಗಳಲ್ಲಿ ಹಿಮವು ಬೀಳುತ್ತಾ ಇರುತ್ತದೆ, ಆದರೆ ಅದು ನೆಲದ ಮೇಲೆ ಬಿದ್ದಾಗ ಹೆಚ್ಚಿನ ಸಮಯವಿರದೆ, ಅತೀ ಶೀಘ್ರವಾಗಿ ಕರಗಿ ಹೋಗುತ್ತದೆ. ಪರ್ವತಗಳ ಶಿಖರ ಭಾಗಗಳಲ್ಲಿ ಹೆಚ್ಚಿನ ಕಾಲದವರೆಗೆ ಹಿಮವು ಇರುತ್ತಿರಬಹುದು. ಸತ್ಯವೇದದಲ್ಲಿ ದಾಖಲು ಮಾಡಿದ ಹಿಮವು ಹೆಚ್ಚಾಗಿರುವ ಸ್ಥಳವು ಲೆಬಾನೋನ್ ಪರ್ವತವಾಗಿತ್ತು.
  • ಬಿಳಿಯ ಬಣ್ಣವನ್ನು ಅನೇಕಬಾರಿ ಹಿಮದ ಬಣ್ಣಕ್ಕೆ ಹೋಲಿಸುತ್ತಾರೆ. ಉದಾಹರಣೆಗೆ, ಪ್ರಕಟನೆ ಗ್ರಂಥದಲ್ಲಿ ಯೇಸುವು ಧರಿಸಿದ್ದ ವಸ್ತ್ರಗಳು ಮತ್ತು ಕೂದಲುಗಳು “ಹಿಮದಂತೆ ಬಿಳಿಯಾಗಿವೆ” ಎಂದು ವಿವರಿಸಲ್ಪಟ್ಟಿವೆ.
  • ಹಿಮದ ಬಿಳುಪು ಕೂಡ ಪವಿತ್ರತೆಗೆ ಮತ್ತು ಶುದ್ಧತೆಗೆ ಚಿಹ್ನೆಯಾಗಿರುತ್ತದೆ. ಉದಾಹರಣೆಗೆ, “ಹಿಮದಂತೆ ನಮ್ಮ ಪಾಪಗಳು ತೊಳೆಯಲ್ಪಟ್ಟಿವೆ” ಎನ್ನುವ ಮಾತಿಗೆ ದೇವರು ತನ್ನ ಜನರನ್ನು ಸಂಪೂರ್ಣವಾಗಿ ತಮ್ಮ ಪಾಪಗಳಿಂದ ಶುದ್ಧೀಕರಣೆ ಮಾಡುವನು ಎಂದರ್ಥ.
  • ಕೆಲವೊಂದು ಭಾಷೆಗಳಲ್ಲಿ ಹಿಮವನ್ನು “ಹೆಪ್ಪುಗಟ್ಟಿದ ಮಳೆ” ಅಥವಾ “ಮಂಜುಗಡ್ಡೆ ಪರದಗಳು” ಅಥವಾ “ಹೆಪ್ಪುಗಟ್ಟಿದ ಪರದಗಳು” ಎಂದೂ ಸೂಚಿಸುತ್ತಾರೆ.
  • “ಹಿಮದ ನೀರು” ಎನ್ನುವ ಮಾತು ಕರಗಿದ ಹಿಮದಿಂದ ಬಂದಿರುವ ನೀರನ್ನು ಸೂಚಿಸುತ್ತದೆ.

(ನೋಡಿರಿ: ಗೊತ್ತಿಲ್ಲವುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ

(ಈ ಪದಗಳನ್ನು ಸಹ ನೋಡಿರಿ : ಲೆಬಾನೋನ್, ಪವಿತ್ರ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H7949, H7950, H8517, G5510

ಹಿರಿಯ, ಹಿರಿಯರು

# ಪದದ ಅರ್ಥವಿವರಣೆ:

ಹಿರಿಯರು ಎನ್ನುವವರು ದೇವರ ಪ್ರಜೆಗಳ ಮಧ್ಯೆದಲ್ಲಿ ಪ್ರಾಯೋಗಾತ್ಮಕವಾದ ನಾಯಕತ್ವವನ್ನು ಮತ್ತು ಆತ್ಮೀಯಕವದ ಬಾಧ್ಯತೆಗಳನ್ನು ಹೊಂದಿರುವ ಆತ್ಮೀಯಕವಾದ ಪರಿಪಕ್ವವುಳ್ಳ ಮನುಷ್ಯರಾಗಿರುತ್ತಾರೆ.

  • “ಹಿರಿಯ” ಎನ್ನುವ ಪದವು ವೃದ್ಧರಾದ ಮನುಷ್ಯರಿಂದ ಬಂದ ಪದವಾಗಿರುತ್ತದೆ, ಯಾಕಂದರೆ ಅವರ ವಯಸ್ಸು ಮತ್ತು ಅನುಭವವು ಹೆಚ್ಚಾದ ಜ್ಞಾನವನ್ನು ಹೊಂದಿರುತ್ತದೆ.
  • ಹಳೇ ಒಡಂಬಡಿಕೆಯಲ್ಲಿ ಮೋಶೆಯ ಧರ್ಮಶಾಸ್ತ್ರ ವಿಷಯದಲ್ಲಿ ಮತ್ತು ಸಾಮಾಜಿಕ ನ್ಯಾಯ ಮಾಡುವ ವಿಷಯಗಳಲ್ಲಿ ಇಸ್ರಾಯೇಲ್ಯರನ್ನು ನಡೆಸುವದರಲ್ಲಿ ಹಿರಿಯರು ಸಹಾಯ ಮಾಡಿದ್ದರು.
  • ಹೊಸ ಒಡಂಬಡಿಕೆಯಲ್ಲಿ ಯೆಹೂದ್ಯ ಹಿರಿಯರು ತಮ್ಮ ಸಮುದಾಯಗಳಲ್ಲಿ ನಾಯಕರಾಗಿ ಮುಂದೆವರಿದರು ಮತ್ತು ತಮ್ಮ ಜನರಿಗೆ ನ್ಯಾಯಾಧೀಶರಾಗಿದ್ದರು.
  • ಆದಿ ಕ್ರೈಸ್ತ ಸಭೆಗಳಲ್ಲಿ ಕ್ರೈಸ್ತ ಹಿರಿಯರು ಸ್ಥಳೀಯ ಸಭೆಗಳಲ್ಲಿರುವ ವಿಶ್ವಾಸಿಗಳಿಗೆ ಒಳ್ಳೇಯ ಆತ್ಮೀಯ ನಾಯಕತ್ವವನ್ನು ಕೊಟ್ಟರು.
  • ಈ ಸಭೆಗಳಲ್ಲಿರುವ ಹಿರಿಯರಲ್ಲಿ ಆತ್ಮೀಯಕವಾದ ಪರಿಪಕ್ವತೆಯನ್ನು ಹೊಂದಿರುವ ಯೌವನಸ್ಥರೂ ಒಳಗೊಂಡಿದ್ದರು.
  • ಈ ಪದವನ್ನು “ವೃದ್ಧ ಮನುಷ್ಯರು” ಅಥವಾ “ಸಭೆಯನ್ನು ನಡೆಸುವುದಕ್ಕೆ ಆತ್ಮೀಯಕವಾಗಿ ಪರಿಪಕ್ವತೆಯನ್ನು ಹೊಂದಿರುವ ಮನುಷ್ಯರು” ಎಂಬುದಾಗಿಯೂ ಅನುವಾದ ಮಾಡಬಹುದು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1419, H2205, H7868, G1087, G3187, G4244, G4245, G4850

ಹಿರಿಸಭೆ, ಹಿರಿಸಭೆಗಳು

# ಪದದ ಅರ್ಥವಿವರಣೆ:

ಹಿರಿಸಭೆ (ಕೌನ್ಸಿಲ್) ಎನ್ನುವ ಪದಕ್ಕೆ ಪ್ರಾಮುಖ್ಯವಾದ ವಿಷಯಗಳ ಕುರಿತಾಗಿ ಚರ್ಚೆ ಮಾಡಲು, ಸಲಹೆಗಳನ್ನು ಕೊಡಲು ಮತ್ತು ನಿರ್ಣಯಗಳನ್ನು ತೆಗೆದುಕೊಳ್ಳಲು ಭೇಟಿಯಾಗುವ ಜನರ ಗುಂಪು ಎಂದರ್ಥ.

  • ಹಿರಿಸಭೆ (ಕೌನ್ಸಿಲ್) ಎನ್ನುವದನ್ನು ಸಹಜವಾಗಿ ಒಂದು ವಿಶೇಷವಾದ ಉದ್ದೇಶಕ್ಕಾಗಿ ಯಾವಾಗಲೂ ಸ್ಥಿರವಾಗಿರಲು ಮತ್ತು ಅಧೀಕೃತವಾಗಿರಲು ಆಯೋಜನೆಮಾಡಲಾಗುತ್ತದೆ. ಅಷ್ಟೇಅಲ್ಲದೇ ಕಾನೂನುಬದ್ಧವಾದ ವಿಷಯಗಳ ಕುರಿತಾಗಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ.
  • ಯೆರೂಸಲೇಮಿನಲ್ಲಿರುವ “ಯೆಹೂದ್ಯ ಕೌನ್ಸಿಲ್ (ಹಿರಿಸಭೆ)” ಅಥವಾ 70 ಸದಸ್ಯರು ಇರುವ “ಸೆನ್ಹೆದ್ರಿನ್” ಸಭೆಯಲ್ಲಿ ಪ್ರಧಾನ ಯಾಜಕರು, ಹಿರಿಯರು, ಶಾಸ್ತ್ರಿಗಳು, ಫರಿಸಾಯರು, ಮತ್ತು ಸದ್ದುಕಾಯರು ಯೆಹೂದ್ಯರ ಧರ್ಮಶಾಸ್ತ್ರ ವಿಷಯಗಳನ್ನು ನಿರ್ಣಯಿಸಲು ನಿಯಮಿತವಾಗಿ ಕೂಡಿಕೊಳ್ಳುತ್ತಿದ್ದರು. ಈ ಹಿರಿಸಭೆಯ (ಕೌನ್ಸಿಲ್) ಧರ್ಮದ ನಾಯಕರೆಲ್ಲರು ಸೇರಿ ಯೇಸುವನ್ನು ತೀರ್ಪಿಗೆ ನಿಲ್ಲಿಸಿದರು ಮತ್ತು ಆತನು ಕೊಂದುಹಾಕಬೇಕೆಂದು ನಿರ್ಣಯಿಸಿದರು.
  • ಇತರ ಪಟ್ಟಣಗಳಲ್ಲಿ ಚಿಕ್ಕ ಚಿಕ್ಕ ಯೆಹೂದ್ಯ ಹಿರಿಸಭೆಗಳು (ಕೌನ್ಸಿಲ್.ಗಳು) ಇದ್ದಿದ್ದವು.
  • ಸುವಾರ್ತೆಯನ್ನು ಬೋಧಿಸುತ್ತಿದ್ದಕ್ಕೆ ಅಪೊಸ್ತಲನಾದ ಪೌಲನನ್ನು ಸೆರೆಮನೆ ಹಾಕಿದಾಗ, ಆತನನ್ನು ರೋಮಾ ಕೌನ್ಸಿಲ್ ಮುಂದಕ್ಕೆ ಕರೆದುಕೊಂಡು ಬಂದಿದ್ದರು.
  • ಸಂದರ್ಭಕ್ಕೆ ತಕ್ಕಂತೆ, “ಹಿರಿಸಭೆ (ಕೌನ್ಸಿಲ್)” ಎನ್ನುವ ಪದವನ್ನು “ಕಾನೂನು ಸಭೆ” ಅಥವಾ “ರಾಜಕೀಯ ಸಭೆ” ಎಂದೂ ಅನುವಾದ ಮಾಡಬಹುದು.
  • “ಹಿರಿಸಭೆಯಲ್ಲಿ (ಕೌನ್ಸಿಲ್.ನಲ್ಲಿ) ಎನ್ನುವ ಪದಕ್ಕೆ ಏನಾದರೊಂದು ವಿಷಯವನ್ನು ನಿರ್ಣಯಿಸುವುದಕ್ಕೆ ಭೇಟಿಯಾಗುವ ವಿಶೇಷವಾದ ಕೂಟ ಎಂದರ್ಥ.
  • ಆಂಗ್ಲ ಭಾಷೆಯಲ್ಲಿ “ಕೌನ್ಸಲ್ (counsel)” ಎಂದು ಇನ್ನೊಂದು ಪದವುಂಟು, ಆದರೆ ಈ ಪದಕ್ಕೆ “ಜ್ಞಾನವುಳ್ಳ ಸಲಹೆ” ಎಂದರ್ಥ. `

(ಈ ಪದಗಳನ್ನು ಸಹ ನೋಡಿರಿ : ವಿಧಾನಸಭೆ, ಜ್ಞಾನದ ಜ್ಞಾನದ ಆಲೋಚನೆ, ಫರಿಸಾಯ, ಧರ್ಮಶಾಸ್ತ್ರ, ಯಾಜಕ, ಸದ್ದುಕಾಯ, ಶಾಸ್ತ್ರಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H4186, H5475, H7277, G1010, G4824, G4892

ಹಿಂಸಿಸು, ಹಿಂಸಿಸಿದೆ, ಹಿಂಸಿಸುತ್ತಾ ಇರುವುದು, ಹಿಂಸೆ, ಹಿಂಸೆಗಳು, ಹಿಂಸಕನು, ಹಿಂಸಕರು

# ಪದದ ಅರ್ಥವಿವರಣೆ:

“ಹಿಂಸಿಸು” ಮತ್ತು “ಹಿಂಸೆ” ಎನ್ನುವ ಪದಗಳು ಜನರಿಗೆ ಹಾನಿಯನ್ನುಂಟು ಮಾಡುವ ಕಠಿಣ ಮಾರ್ಗದಲ್ಲಿ ಒಂದು ನಿರ್ದಿಷ್ಟವಾದ ಜನರ ಗುಂಪನ್ನು ಅಥವಾ ಒಬ್ಬ ವ್ಯಕ್ತಿಯನ್ನು ನಿರಂತರವಾಗಿ ಹಿಂಸೆಗೆ ಗುರಿ ಮಾಡುತ್ತಿರುವುದನ್ನು ಸೂಚಿಸುತ್ತದೆ.

  • ಹಿಂಸೆ ಎನ್ನುವುದು ಒಬ್ಬರಿಗೆ ವಿರುದ್ಧವಾಗಿ ಅಥವಾ ಅನೇಕ ಜನರ ಗುಂಪಿಗೆ ವಿರುದ್ಧವಾಗಿ ಮಾಡುವಂಥದ್ದು ಮತ್ತು ಸಹಜವಾಗಿ ಇದರಲ್ಲಿ ನಿರಂತರವಾಗಿ ದಾಳಿ ಮಾಡುವುದು ಒಳಗೊಂಡಿರುತ್ತದೆ.
  • ಇಸ್ರಾಯೇಲ್ಯರು ಅನೇಕ ಗುಂಪುಗಳ ಜನರ ಮೂಲಕ ದಾಳಿ ಮಾಡಲ್ಪಟ್ಟು, ಹಿಂಸೆಸಲ್ಪಟ್ಟಿರುತ್ತದೆ, ಅನೇಕ ವಸ್ತುಗಳನ್ನು ಅವರಿಂದ ಕದಿಯಲ್ಪಟ್ಟಿರುತ್ತದೆ.
  • ಜನರು ಅನೇಕಬಾರಿ ವಿಭಿನ್ನವಾದ ಧರ್ಮ ವಿಶ್ವಾಸಗಳನ್ನೊಳಗೊಂಡ ಅಥವಾ ಬಲಹೀನವಾದ ಇತರ ಜನರನ್ನು ಹಿಂಸೆಗೆ ಗುರಿ ಮಾಡಿರುತ್ತಾರೆ.
  • ಯೆಹೂದ್ಯ ಧರ್ಮದ ನಾಯಕರು ಯೇಸುವನ್ನು ಹಿಂಸಿಸಿದರು, ಯಾಕಂದರೆ ಆತನು ಬೋಧನೆ ಮಾಡುತ್ತಿರುವುದನ್ನು ಅವರು (ಯೆಹೂದ್ಯರ ನಾಯಕರು) ಇಷ್ಟಪಟ್ಟಿದ್ದಿಲ್ಲ.
  • ಯೇಸು ಹಿಂದಿರುಗಿ ಪರಲೋಕಕ್ಕೆ ಹೋದನು, ಯೆಹೂದ್ಯರ ಧರ್ಮದ ನಾಯಕರು ಮತ್ತು ರೋಮಾ ಪ್ರಭುತ್ವವು ಆತನ ಹಿಂಬಾಲಕರನ್ನು ಹಿಂಸಿಸಿದರು.
  • “ಹಿಂಸಿಸು” ಎನ್ನುವ ಪದವನ್ನು “ತುಳಿಯುತ್ತಾ ಇರುವುದು” ಅಥವಾ “ಕಠಿಣವಾಗಿ ನಡೆದುಕೊಳ್ಳುವುದು” ಅಥವಾ “ನಿರಂತರವಾಗಿ ತಪ್ಪಾಗಿ ನಡೆದುಕೊಳ್ಳುವುದು” ಎಂದೂ ಅನುವಾದ ಮಾಡಬಹುದು.

“ಹಿಂಸೆ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಕಠಿಣವಾದ ದೌರ್ಜನ್ಯ” ಅಥವಾ “ದಬ್ಬಾಳಿಕೆ” ಅಥವಾ “ಕಠಿಣವಾದ ದೌರ್ಜನ್ಯವನ್ನು ಮುಂದೆವರಿಸುವುದು” ಎನ್ನುವ ಮಾತುಗಳನ್ನು ಒಳಗೊಂಡಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಕ್ರೈಸ್ತ, ಸಭೆ, ದಬ್ಬಾಳಿಕೆ, ರೋಮಾ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಉದಾಹರಣೆಗಳು:

  • 33:07_ “ಬಂಡೆಯ ನೆಲವು ದೇವರ ವಾಕ್ಯವನ್ನು ಕೇಳಿದ ವ್ಯಕ್ತಿಯನ್ನು ಮತ್ತು ಅದನ್ನು ಸಂತೋಷದಿಂದ ಸ್ವೀಕರಿಸುವ ವ್ಯಕ್ತಿಯನ್ನು ಸೂಚಿಸುತ್ತದೆ. ಆದರೆ ಅವನು ಕಠಿಣವಾದ ಪರಿಸ್ಥಿತಿಗಳನ್ನು ಅಥವಾ ____ ಹಿಂಸೆಗಳನ್ನು ____ ಅನುಭವಿಸಿದಾಗ, ಅವನು ಪಕ್ಕಕ್ಕೆ ತೊಲಗಿ ಹೋಗುವನು.
  • 45:06_ ಆ ದಿನದಂದು ಯೆರೂಸಲೇಮಿನಲ್ಲಿರುವ ಅನೇಕ ಜನರು ಯೇಸುವಿನ ಹಿಂಬಾಲಕರನ್ನು ___ ಹಿಂಸಿಸುವುದನ್ನು ___ ಆರಂಭಿಸುತ್ತಾರೆ, ಇದರಿಂದ ವಿಶ್ವಾಸಿಗಳು ಅನೇಕ ಸ್ಥಳಗಳಿಗೆ ಚೆದುರಿಹೋದರು.
  • 46:02_ “ಸೌಲಾ! ಸೌಲಾ! ನನ್ನನ್ನು ಯಾಕೆ ___ ಹಿಂಸೆ ___ ಪಡಿಸುತ್ತೀಯಾ?” ಎಂದು ಯಾರೋ ಮಾತನಾಡುತ್ತಿರುವಂತೆ ಸೌಲನು ಕೇಳಿಸಿಕೊಂಡನು. “ನೀನು ಯಾರು, ಬೋಧಕನೇ?” ಎಂದು ಸೌಲನು ಕೇಳಿದನು. “ನೀನು ನನ್ನನ್ನು ____ ಹಿಂಸೆ ಪಡಿಸುತ್ತಿರುವ ____, ಯೇಸು” ಎಂದು ಯೇಸು ಅವನಿಗೆ ಉತ್ತರ ಕೊಟ್ಟನು.
  • 46:04_ ಆದರೆ “ಬೋಧಕನೆ, ಈ ಮನುಷ್ಯನು ಯಾವರೀತಿ ವಿಶ್ವಾಸಿಗಳನ್ನು ___ ಹಿಂಸೆಗೆ ___ ಗುರಿ ಮಾಡಿದ್ದನೆನ್ನುವ ವಿಷಯವನ್ನು ನಾನು ಕೇಳಿಸಿಕೊಂಡಿದ್ದೆನು” ಎಂದು ಅನನೀಯ ಹೇಳಿದನು.

# ಪದ ಡೇಟಾ:

  • Strong's: H1814, H4783, H7291, H7852, G1375, G1376, G1377, G1559, G2347

ಹಿಂಸೆ

# ಪದದ ಅರ್ಥವಿವರಣೆ:

“ಹಿಂಸೆ” ಎನ್ನುವ ಪದವು ಸಂಕಷ್ಟ, ನೋವು, ಮತ್ತು ಯಾತನೆಯ ಸಮಯವನ್ನು ಸೂಚಿಸುತ್ತದೆ.

  • ಕ್ರೈಸ್ತರು ಹಿಂಸೆಯ ಕಾಲವನ್ನು ಮತ್ತು ಅನೇಕ ವಿಧವಾದ ಶ್ರಮೆಯ ಕಾಲವನ್ನು ಎದುರಿಸುತ್ತಾರೆಂದು ಹೊಸ ಒಡಂಬಡಿಕೆಯಲ್ಲಿ ಈ ಪದದ ಕುರಿತು ವಿವರಿಸಲ್ಪಟ್ಟಿದೆ, ಯಾಕಂದರೆ ಈ ಲೋಕದಲ್ಲಿರುವ ಅನೇಕಮಂದಿ ಜನರು ಯೇಸುವಿನ ಬೋಧನೆಗಳನ್ನು ತಿರಸ್ಕಾರ ಮಾಡಿದ್ದಾರೆ.
  • “ಮಹಾ ಹಿಂಸೆ” ಎನ್ನುವ ಪದವು ಅನೇಕ ವರ್ಷಗಳ ಕಾಲ ಭೂಮಿಯ ಮೇಲೆ ದೇವರ ಕ್ರೋಧವನ್ನು ಸುರಿಸುವಾಗ ಯೇಸುವಿನ ಬರೋಣ ಬರುವುದಕ್ಕೆ ಮುಂಚಿತವಾಗಿ ಒಂದು ನಿರ್ದಿಷ್ಟ ಕಾಲವನ್ನು ವಿವರಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ.
  • “ಹಿಂಸೆ” ಎನ್ನುವ ಪದವು “ಮಹಾ ಶ್ರಮೆಗಳ ಸಮಯ” ಅಥವಾ “ಆಳವಾದ ನೋವು” ಅಥವಾ “ತೀವ್ರವಾದ ಸಂಕಷ್ಟಗಳು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಭೂಮಿ, ಬೋಧಿಸು, ಕ್ರೋಧ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H6869, G2346, G2347

ಹುಡುಕು, ಹುಡುಕುವುದು, ಹುಡುಕುತ್ತಾ ಇರುವುದು, ಪಡೆ

# ಪದದ ಅರ್ಥವಿವರಣೆ:

“ಹುಡುಕು” ಎನ್ನುವ ಪದಕ್ಕೆ ಯಾರಾದರೊಬ್ಬರಿಗಾಗಿ ಅಥವಾ ಯಾವುದಾದರೊಂದಕ್ಕಾಗಿ ನೋಡುವುದು ಎಂದರ್ಥ. ಇದಕ್ಕೆ ಭೂತ ಕಾಲ ಪದವು “ಪಡೆ” ಎಂದಾಗಿರುತ್ತದೆ. ಈ ಪದಕ್ಕೆ ಯಾವುದಾದರೊಂದನ್ನು ಮಾಡುವುದಕ್ಕೆ “ಹೆಚ್ಚಾಗಿ ಪ್ರಯತ್ನಿಸು” ಅಥವಾ “ಪ್ರಯಾಸೆಪಡು” ಎಂದರ್ಥ.

  • ಯಾವುದಾದರೊಂದನ್ನು ಮಾಡುವುದಕ್ಕೆ ಅವಕಾಶಕ್ಕಾಗಿ “ಹುಡುಕು” ಅಥವಾ “ಎದುರುನೋಡು” ಎನ್ನುವುದಕ್ಕೆ ಇದನ್ನು ಮಾಡುವುದಕ್ಕೆ “ಸಮಯವನ್ನು ಕಂಡುಕೊಳ್ಳುವುದಕ್ಕೆ ಪ್ರಯತ್ನಿಸು” ಎಂದರ್ಥ.
  • “ಯೆಹೋವನನ್ನು ಎದುರುನೋಡು” ಎಂದರೆ “ಯೆಹೋವನನ್ನು ತಿಳಿದುಕೊಳ್ಳುವುದಕ್ಕೆ ಮತ್ತು ಆತನಿಗೆ ವಿಧೇಯತೆ ತೋರಿಸಲು ಕಲಿತುಕೊಳ್ಳುವುದಕ್ಕೆ ಶಕ್ತಿಯನ್ನು ಪಡೆದು, ಸಮಯವನ್ನು ಕಳೆ” ಎಂದರ್ಥವಾಗಿರುತ್ತದೆ.
  • “ಸಂರಕ್ಷಣೆಗಾಗಿ ಹುಡುಕು” ಎಂದರೆ “ಅಪಾಯದಿಂದ ನಿನ್ನನ್ನು ಸಂರಕ್ಷಿಸುವ ಸ್ಥಳವನ್ನು ಅಥವಾ ವ್ಯಕ್ತಿಯನ್ನು ಕಂಡುಕೊಳ್ಳುವುದಕ್ಕೆ ಪ್ರಯತ್ನಿಸು” ಎಂದರ್ಥವಾಗಿರುತ್ತದೆ.
  • “ನ್ಯಾಯಕ್ಕಾಗಿ ಹುಡುಕು” ಎಂದರೆ “ಜನರು ನ್ಯಾಯವನ್ನು ಹೊಂದುವಂತೆ ಅಥವಾ ಚೆನ್ನಾಗಿರಲು ನೋಡುವುದಕ್ಕೆ ಪ್ರಯಾಸಪಡು” ಎಂದರ್ಥವಾಗಿರುತ್ತದೆ.
  • “ಸತ್ಯವನ್ನು ಹುಡುಕು” ಎಂದರೆ “ಸತ್ಯವು ಏನೆಂಬುವುದನ್ನು ಕಂಡುಕೊಳ್ಳುವುದಕ್ಕೆ ಪ್ರಯಾಸೆಪಡು” ಎಂದರ್ಥವಾಗಿರುತ್ತದೆ.
  • “ದಯೆಗಾಗಿ ಹುಡುಕು” ಎಂದರೆ “ದಯೆಯನ್ನು ಪಡೆದುಕೊಳ್ಳುವುದಕ್ಕೆ ಪ್ರಯತ್ನಿಸು” ಅಥವಾ “ಯಾರಾದರೊಬ್ಬರು ನಿಮಗೆ ಸಹಾಯ ಮಾಡುವಂತೆ ಕಾರ್ಯಗಳನ್ನು ಮಾಡು” ಎಂದರ್ಥ.

(ಈ ಪದಗಳನ್ನು ಸಹ ನೋಡಿರಿ : ನ್ಯಾಯ, ನಿಜ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H579, H1156, H1239, H1243, H1245, H1556, H1875, H2470, H2603, H2658, H2664, H2713, H3289, H7125, H7592, H7836, H8446, G327, G1567, G1934, G2052, G2212

ಹುಳಿ, ಹುದುಗು ಹಿಟ್ಟು, ಹುದುಗುವುದು, ಹುದುಗಿದೆ, ಹುದುಗಿಲ್ಲ

# ಪದದ ಅರ್ಥವಿವರಣೆ:

“ಹುದುಗು ಹಿಟ್ಟು” ಎನ್ನುವ ಪದವು ಸಾಧಾರಣವಾಗಿ ನಾದಿದ ರೊಟ್ಟೆ ಹಿಟ್ಟು ಉಬ್ಬುವುದಕ್ಕೆ ಮತ್ತು ಇನ್ನೂ ಆ ಹಿಟ್ಟು ಹೆಚ್ಚಾಗುವುದಕ್ಕೆ ಉಪಯೋಗಿಸುವ ಪದಾರ್ಥಕ್ಕಾಗಿ ಉಪಯೋಗಿಸುವ ಪದವಾಗಿರುತ್ತದೆ. “ಹುಳಿ” ಎನ್ನುವುದು ಒಂದು ವಿಧವಾದ ಹುದುಗು ಹಿಟ್ಟಾಗಿರುತ್ತದೆ.

  • ಕೆಲವೊಂದು ಆಂಗ್ಲ ಅನುವಾದಗಳಲ್ಲಿ, ಹುದುಗು ಹಿಟ್ಟು ಎನ್ನುವ ಮಾತಿಗೆ “ಹುಳಿ” ಎಂದೂ ಅನುವಾದ ಮಾಡಿದ್ದರೆ, ಇದು ಅಧುನಿಕವಾಗಿ ಹುದುಗಿಸುವ ಕ್ರಿಯೆ ಮಾಡುವಂಥದ್ದು, ಇದು ನಾದಿದ ಹಿಟ್ಟನ್ನು ಅನಿಲ ಗುಳ್ಳೆಗಳಿಂದ ತುಂಬಿಸುತ್ತದೆ, ಆ ನಾದಿದ ಹಿಟ್ಟನ್ನು ಸುಡುವುದಕ್ಕೆ ಮುಂಚಿತವಾಗಿ ಅದನ್ನು ಉಬ್ಬುವಂತೆ ಮಾಡುತ್ತದೆ. ಹುಳಿ ಎನ್ನುವುದು ನಾದಿದ ಹಿಟ್ಟಿನಲ್ಲಿ ಹಾಕಿ ಹಿಸುಕುಬೇಕಾಗಿರುತ್ತದೆ, ಇದರಿಂದ ಆ ಹಿಟ್ಟಿನಲ್ಲಿ ಇದು ಎಲ್ಲಾ ಕಡೆಗೆ ವಿಸ್ತರಿಸಲ್ಪಡುತ್ತದೆ.
  • ಹಳೇ ಒಡಂಬಡಿಕೆಯ ಕಾಲದಲ್ಲಿ ಹುಳಿಯುವಂತೆ ಮಾಡುವುದು ಅಥವಾ ಉಬ್ಬುವಂತೆ ವಾಗುವುದೆನ್ನುವುದು ನಾದಿದ ಹಿಟ್ಟನ್ನು ಸ್ವಲ್ಪ ಹೊತ್ತು ಹಾಗೆಯೇ ಇಡುವುದರ ಮೂಲಕ ನಡೆಯುತ್ತದೆ. ನಾದಿದ ಹಿಟ್ಟಿನಿಂದ ತೆಗೆದುಕೊಂಡಿರುವ ಚಿಕ್ಕ ಚಿಕ್ಕ ಚೂರುಗಳನ್ನು ಭದ್ರಪಡಿಸಿ, ಮತ್ತೊಮ್ಮೆ ಹಿಟ್ಟನ್ನು ಹುಳಿಯುವಂತೆ ಮಾಡುವುದಕ್ಕೆ ಉಪಯೋಗಿಸುತ್ತಾರೆ.
  • ಇಸ್ರಾಯೇಲ್ಯರು ಐಗುಪ್ತದಿಂದ ಬಿಡುಗಡೆ ಹೊಂದಿದಾಗ, ಅವರ ಬಳಿ ಇರುವಂಥಹ ರೊಟ್ಟಿಯ ಹಿಟ್ಟು ಉಬ್ಬುವವರೆಗೂ ಎದುರುನೋಡುವ ಸಮಯವಿದ್ದಿರಲಿಲ್ಲ, ಇದರಿಂದ ಅವರ ಪ್ರಯಾಣದಲ್ಲಿ ಆ ನಾದಿದ ಹಿಟ್ಟಿನಿಂದ ಹುಳಿಯದ ರೊಟ್ಟಿಗಳನ್ನು ಮಾಡಿಕೊಂಡಿರುತ್ತಾರೆ. ಇದರ ನೆನಪಿಗಾಗಿ, ಯೆಹೂದ್ಯ ಜನರು ಪ್ರತಿ ವರ್ಷ ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿಕೊಂಡು ತಿನ್ನುವುದರ ಮೂಲಕ ಪಸ್ಕ ಹಬ್ಬವನ್ನು ಆಚರಿಸಿಕೊಳ್ಳುತ್ತಾರೆ.
  • “ಹುದುಗಿಸುವ” ಅಥವಾ “ಹುಳಿ” ಎನ್ನುವ ಪದವು ಒಬ್ಬ ವ್ಯಕ್ತಿಯ ಜೀವನದ ಮೂಲಕ ಪಾಪವು ಹೇಗೆ ಹರಡುತ್ತದೆ ಅಥವಾ ಪಾಪವು ಇತರ ಜನರನ್ನು ಹೇಗೆ ಪ್ರಭಾವಗೊಳಿಸುತ್ತದೆ ಎನ್ನುವ ಚಿತ್ರಣವನ್ನು ತೋರಿಸುವುದಕ್ಕೆ ಸತ್ಯವೇದದಲ್ಲಿ ಅಲಂಕಾರಿಕವಾಗಿ ಉಪಯೋಗಿಸಲ್ಪಟ್ಟಿರುತ್ತದೆ.
  • ಇದು ಅನೇಕಮಂದಿಯನ್ನು ಪ್ರಭಾವಗೊಳಿಸುವ ಮತ್ತು ಅನೇಕ ಜನರಿಗೆ ಅತೀ ಸುಲಭವಾಗಿ ಹರಡಿಸುವ ಸುಳ್ಳು ಬೋಧನೆಯನ್ನು ಕೂಡ ಸೂಚಿಸುತ್ತದೆ.
  • “ಹುದುಗಿಸುವುದು” ಎನ್ನುವ ಪದವು ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಯ ಕಡೆಗೆ ದೇವರ ರಾಜ್ಯವು ಯಾವರೀತಿ ಪ್ರಭಾವ ಬೀರುತ್ತದೆಯೆಂದು ವಿವರಿಸುವುದಕ್ಕೆ ಸಕಾರಾತ್ಮಕವಾದ ವಿಧಾನದಲ್ಲಿಯೂ ಉಪಯೋಗಿಸಲಾಗುತ್ತದೆ.

# ಅನುವಾದ ಸಲಹೆಗಳು:

  • “ಹುದುಗಿಸುವ” ಅಥವಾ “ನಾದಿದ ಹಿಟ್ಟನ್ನು ಉಬ್ಬಿಸುವ ಪದಾರ್ಥ” ಅಥವಾ “ಹರಡಿಸುವ ಕಾರ್ಯಕಾರಿ” ಎಂದೂ ಅನುವಾದ ಮಾಡಬಹುದು. “ಉಬ್ಬುವುದು” ಎನ್ನುವ ಪದವು “ವಿಸ್ತರಿಸುವುದು” ಅಥವಾ “ದೊಡ್ಡದಾಗಿ ಮಾಡುವುದು” ಅಥವಾ “ಉಬ್ಬಿಕೊಳ್ಳುವುದು” ಎಂದೂ ವ್ಯಕ್ತೀಕರಿಸ ಬಹುದು.
  • ಒಂದುವೇಳೆ ಸ್ಥಳೀಯವಾಗಿ ಹುದುಗಿಸುವ ಪದಾರ್ಥವನ್ನು ಉಪಯೋಗಿಸಿ ನಾದಿದ ಹಿಟ್ಟನ್ನು ಉಬ್ಬಿಕೊಳ್ಳುವಂತೆ ಮಾಡುವಂತಿದ್ದರೆ, ಆ ಪದಾರ್ಥದ ಹೆಸರನ್ನೇ ನೀವು ಉಪಯೋಗಿಸಬಹುದು. “ಹುದುಗಿಸುವ” ಎನ್ನುವ ಅರ್ಥ ಬರುವ ಪದವು ಭಾಷೆಯಲ್ಲಿ ಚೆನ್ನಾಗಿ ಗೊತ್ತಿದ್ದರೆ, ಈ ಪದವನ್ನೇ ಉಪಯೋಗಿಸುವುದು ಒಳ್ಳೆಯದು.

(ಈ ಪದಗಳನ್ನು ಸಹ ನೋಡಿರಿ : ಐಗುಪ್ತ, ಪಸ್ಕ, ಹುಳಿಯಿಲ್ಲದ ರೊಟ್ಟಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2556, H2557, H4682, H7603, G106, G2219, G2220

ಹೂಳಿಡುವುದು, ಸಮಾಧಿ ಮಾಡುವುದು, ಸಮಾಧಿ ಮಾಡಿದೆ, ಸಮಾಧಿ ಮಾಡುತ್ತಿದ್ದೇವೆ, ಸಮಾಧಿ ಕ್ರಿಯೆ

# ಪದದ ಅರ್ಥವಿವರಣೆ:

“ಹೂಳಿಡುವುದು” ಎನ್ನುವ ಪದವು ಸಾಧಾರಣವಾಗಿ ಒಂದು ಗುಂಡಿಯಲ್ಲಿ ಶವವನ್ನು ಇಡುವುದನ್ನು ಅಥವಾ ಇತರ ಸಮಾಧಿ ಮಾಡುವ ಸ್ಥಳದಲ್ಲಿ ಸತ್ತಂತವರನ್ನಿಡುವುದನ್ನು ಸೂಚಿಸುತ್ತದೆ. “ಸಮಾಧಿ ಕ್ರಿಯೆ” ಎನ್ನುವ ಪದವು ಯಾವುದಾದರೊಂದನ್ನು ಸಮಾಧಿ ಮಾಡುವ ಕ್ರಿಯೆಯನ್ನು ಸೂಚಿಸುತ್ತದೆ ಅಥವಾ ಯಾವುದಾದರೊಂದನ್ನು ಸಮಾಧಿ ಮಾಡುವುದಕ್ಕೆ ಉಪಯೋಸಿಸುವ ಸ್ಥಳವನ್ನು ವಿವರಿಸಲು ಉಪಯೋಗಿಸಲ್ಪಡಬಹುದು.

  • ಅನೇಕಬಾರಿ ಜನರು ನೆಲದಲ್ಲಿ ಒಂದು ಆಳವಾದ ಗುಂಡಿಯನ್ನು ಅಗೆದು, ಅದರೊಳಗೆ ಶವವನ್ನಿಟ್ಟು ಸಮಾಧಿ ಮಾಡುತ್ತಾರೆ ಮತ್ತು ಆದರ ಮೇಲೆ ಮಣ್ಣನ್ನು ಹಾಕುತ್ತಾರೆ.
  • ಕೆಲವೊಂದುಬಾರಿ ಶವವನ್ನು ಸಮಾಧಿ ಮಾಡುವುದಕ್ಕೆ ಮುಂಚಿತವಾಗಿ ಒಂದು ಶವ ಪೆಟ್ಟಿಗೆಯಲ್ಲಿ ಇಟ್ಟಿರುತ್ತಾರೆ.
  • ಸತ್ಯವೇದದ ಕಾಲದಲ್ಲಿ ಸತ್ತವರನ್ನು ಒಂದು ಗುಹೆಯಲ್ಲಿ ಅಥವಾ ಗುಹೆಯಂಥಿರುವ ಸ್ಥಳಗಳಲ್ಲಿ ಸಮಾಧಿ ಮಾಡುತ್ತಿದ್ದರು. ಯೇಸು ಮರಣ ಹೊಂದಿದನಂತರ, ಆತನ ದೇಹವನ್ನು ಬಟ್ಟೆಗಳಿಂದ ಸುತ್ತಿ, ಅದನ್ನು ಕಲ್ಲಿನ ಸಮಾಧಿಯಲ್ಲಿಟ್ಟಿದ್ದರು, ಆ ಸಮಾಧಿಗೆ ಒಂದು ದೊಡ್ಡ ಕಲ್ಲನ್ನು ಹೊರೆಸಿ ಮೊಹರು ಮಾಡಿದ್ದರು.
  • “ಸಮಾಧಿ ಸ್ಥಳ” ಅಥವಾ “ಸಮಾಧಿ ಕೊಠಡಿ” ಅಥವಾ “ಸಮಾಧಿ ಕೋಣೆ” ಅಥವಾ “ಸಮಾಧಿ ಗುಹೆ” ಎನ್ನುವ ಪದಗಳೆಲ್ಲವೂ ಶವಗಳನ್ನು ಸಮಾಧಿ ಮಾಡುವ ಸ್ಥಳವನ್ನು ಸೂಚಿಸುತ್ತವೆ.
  • ಆಕಾನನು ಯೆರಿಕೋಯಿಂದ ಕದ್ದಿರುವ ಬೆಳ್ಳಿ ಮತ್ತು ಇತರ ವಸ್ತುಗಳನ್ನು ಸಮಾಧಿ ಮಾಡಿದ ಹಾಗೆ ಇತರ ಬೇರೆ ವಸ್ತುಗಳನ್ನು ಸಮಾಧಿ ಮಾಡಬಹುದು,
  • “ತನ್ನ ಮುಖವನ್ನು ಸಮಾಧಿಮಾಡಿದ್ದಾನೆ” ಎನ್ನುವ ಮಾತಿಗೆ “ತನ್ನ ಕೈಗಳಿಂದ ತನ್ನ ಮುಖವನ್ನು ಬಚ್ಚಿಟ್ಟುಕೊಂಡಿದ್ದಾನೆ” ಎಂದರ್ಥ.
  • ಆಕಾನನು ಯೆರಿಕೋಯಿಂದ ಕದ್ದಿರುವ ವಸ್ತುಗಳನ್ನು ನೆಲದಲ್ಲಿ ಬಚ್ಚಿಟ್ಟಿರುವ ಹಾಗೆಯೇ “ಬಚ್ಚಿಡುವುದು” ಎನ್ನುವ ಪದವು ಕೆಲವೊಂದುಬಾರಿ “ಸಮಾಧಿ” ಎಂದು ಅರ್ಥವನ್ನು ತರುತ್ತದೆ. ಅವನು ನೆಲದಲ್ಲಿ ಅವುಗಳನ್ನು ಸಮಾಧಿ ಮಾಡಿದನು ಎಂದರ್ಥ ಬರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಯೆರಿಕೋ, ಸಮಾಧಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H6900, H6912, H6913, G1779, G1780, G2290, G4916, G5027

ಹೆಣ್ಣುಕುರಿ, ಹೆಣ್ಣುಕುರಿಗಳು, ಟಗರು, ಟಗರುಗಳು, ಕುರಿ, ಕುರಿಮರಿ, ಕುರಿಮರಿಗಳು, ಕುರಿಗಳ ಕುರುಬರು, ಕುರಿ ಚರ್ಮಗಳು

# ಪದದ ಅರ್ಥವಿವರಣೆ:

“ಕುರಿ” ಎನ್ನುವುದು ಮಧ್ಯಮ ಗಾತ್ರದ ನಾಲ್ಕುಗಳ ಪ್ರಾಣಿಯಾಗಿರುತ್ತದೆ, ಇದರ ದೇಹದ ಸುತ್ತಲೂ ಉಣ್ಣೆಯನ್ನು ಹೊಂದಿರುತ್ತದೆ. ಗಂಡು ಕುರಿಯನ್ನು “ಟಗರು” ಎಂದು ಕರೆಯುತ್ತಾರೆ. ಹೆಣ್ಣು ಕುರಿಯನ್ನು “ಮೇಷಿ” ಎಂದು ಕರೆಯುತ್ತಾರೆ. “ಕುರಿ” ಎನ್ನುವ ಪದಕ್ಕೆ ಬಹುವಚನ ಪದವು “ಕುರಿಗಳು” ಎಂದಾಗಿರುತ್ತದೆ.

  • ಕುರಿಗೆ ಹುಟ್ಟಿದ ಮರಿಯನ್ನು “ಕುರಿಮರಿ” ಎಂದು ಕರೆಯುತ್ತಾರೆ.
  • ಇಸ್ರಾಯೇಲ್ಯರು ಅನೇಕಬಾರಿ ಕುರಿಗಳನ್ನು ಸರ್ವಾಂಗ ಹೋಮಗಳಿಗಾಗಿ ಉಪಯೋಗಿಸುತ್ತಿದ್ದರು, ವಿಶೇಷವಾಗಿ ಗಂಡು ಕುರಿಯನ್ನು ಮತ್ತು ಕುರಿಮರಿಯನ್ನು ಹೆಚ್ಚಾಗಿ ಬಳಸುತ್ತಿದ್ದರು.
  • ಜನರು ಕುರಿಯ ಮಾಂಸವನ್ನು ತಿನ್ನುತ್ತಾರೆ ಮತ್ತು ಅದರ ಉಣ್ಣೆಯನ್ನು ಬಟ್ಟೆಗಳನ್ನು ಮಾಡುವದಕ್ಕೆ ಮತ್ತು ಇತರ ವಸ್ತುಗಳನ್ನು ಮಾಡುವುದಕ್ಕೆ ಉಪಯೋಗಿಸುತ್ತಾರೆ.
  • ಕುರಿಗಳು ನಂಬಿಗಸ್ತವುಗಳಾಗಿದ್ದವು, ಬಲಹೀನವಾಗಿದ್ದವು ಮತ್ತು ಹೆದರುವ ಪ್ರಾಣಿಗಳಾಗಿದ್ದವು. ಅವು ತುಂಬಾ ಸುಲಭವಾಗಿ ಮಾರ್ಗವನ್ನು ತಪ್ಪುತ್ತಾ ಹೋಗುತ್ತಾ ಇರುತ್ತವೆ. ಅವುಗಳನ್ನು ನಡೆಸುವುದಕ್ಕೆ, ಸಂರಕ್ಷಿಸುವುದಕ್ಕೆ, ಮತ್ತು ಅವುಗಳಿಗೆ ಆಹಾರವನ್ನು, ನೀರನ್ನು, ತಂಗುದಾಣವನ್ನು ಒದಗಿಸಿಕೊಡುವುದಕ್ಕೆ ಒಬ್ಬ ಕುರುಬನ ಅಗತ್ಯತೆ ಇದ್ದಿತ್ತು.
  • ಸತ್ಯವೇದದಲ್ಲಿ ದೇವರು ಕುರುಬನಾಗಿ ಮತ್ತು ಆತನಿಗೆ ಸಂಬಂಧಪಟ್ಟ ಜನರು ಕುರಿಗಳಾಗಿ ಹೋಲಿಸಲಾಗಿರುತ್ತದೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಇಸ್ರಾಯೇಲ್, ಕುರಿಮರಿ, ಹೋಮ, ಕುರುಬ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಉದಾಹರಣೆಗಳು:

  • 09:12 ಒಂದು ದಿನ ಮೋಶೆ ತನ್ನ ___ ಕುರಿಗಳನ್ನು ___ ಕಾಯುತ್ತಿರುವಾಗ, ಆತನು ಉರಿಯುತ್ತಿರುವ ಒಂದು ಪೊದೆಯನ್ನು ನೋಡಿದನು.
  • 17:02 ಬೆತ್ಲೆಹೇಮಿನಲ್ಲಿ ದಾವೀದನು ಕುರುಬನಾಗಿದ್ದನು. ಅನೇಕ ಸಂದರ್ಭಗಳಲ್ಲಿ ತನ್ನ ತಂದೆ ___ ಕುರಿಗಳನ್ನು ___ ಕಾಯುತ್ತಿರುವಾಗ, ತನ್ನ ___ ಕುರಿಗಳ ___ ಮೇಲೆ ಧಾಳಿ ಮಾಡಿದ ಸಿಂಹವನ್ನು ಮತ್ತು ಕರಡಿಯನ್ನು ಕೊಂದು ಹಾಕಿದನು.
  • ___30:03___ಈ ಜನರೆಲ್ಲರು ಕುರುಬನಿಲ್ಲದ ___ ಕುರಿಗಳಾಗಿದ್ದಾರೆ ___ ಎಂದು ಯೇಸು ಹೇಳಿದನು.
  • 38:08 “ಈ ರಾತ್ರಿ ನೀವೆಲ್ಲರೂ ನನ್ನನ್ನು ಕೈ ಬಿಡುತ್ತೀರಿ, “ನಾನು ಕುರುಬನನ್ನು ಹೊಡೆಯುತ್ತೇನೆ ಮತ್ತು ಎಲ್ಲಾ ___ ಕುರಿಗಳು ___ ಚೆದರಿಹೋಗುತ್ತವೆ” ಎಂದು ಬರೆಯಲ್ಪಟ್ಟಿದೆಯೆಂದು ಯೇಸು ಹೇಳಿದ್ದಾನೆ.

# ಪದ ಡೇಟಾ:

  • Strong's: H352, H1494, H1798, H2169, H3104, H3532, H3535, H3733, H3775, H5739, H5763, H6260, H6629, H6792, H7353, H7462, H7716, G4165, G4262, G4263

ಹೆಮ್ಮೆ, ಹೆಮ್ಮೆಯ, ಗರ್ವ, ಗರ್ವದ

# ಪದದ ಅರ್ಥವಿವರಣೆ:

“ಗರ್ವ” ಮತ್ತು “ಗರ್ವಭರಿತ” ಎನ್ನುವ ಪದಗಳು ಒಬ್ಬ ವ್ಯಕ್ತಿ ತನ್ನ ಕುರಿತಾಗಿ ಅತೀ ಉನ್ನತವಾಗಿ ಆಲೋಚನೆ ಮಾಡಿಕೊಳ್ಳುವುದನ್ನು, ವಿಶೇಷವಾಗಿ, ಇತರ ಜನರಿಗಿಂತ ತಾನು ಉತ್ತಮನೆಂದು ಆಲೋಚನೆ ಮಾಡಿಕೊಳ್ಳುವುದನ್ನು ಸೂಚಿಸುತ್ತದೆ.

  • ಗರ್ವವುಳ್ಳ ವ್ಯಕ್ತಿ ಅನೇಕಬಾರಿ ತನ್ನ ತಪ್ಪುಗಳನ್ನು ಗುರುತಿಸುವುದಿಲ್ಲ. ಇವನು ವಿನಯವುಳ್ಳವನಲ್ಲ.
  • ಗರ್ವವು ಇತರ ಮಾರ್ಗಗಳಲ್ಲಿ ದೇವರಿಗೆ ಅವಿಧೇಯತೆಯನ್ನು ತೋರಿಸುವುದಕ್ಕೆ ನಡೆಸುತ್ತದೆ.
  • “ಹೆಮ್ಮೆ” ಮತ್ತು “ಗರ್ವ” ಎನ್ನುವ ಪದಗಳು ಸಕಾರಾತ್ಮಕ ಭಾವನೆಯಲ್ಲಿಯೂ ಉಪಯೋಗಿಸಲ್ಪಡುತ್ತವೆ, ಉದಾಹರಣೆಗೆ, ಯಾರಾದರೊಬ್ಬರು ಏನಾದರೊಂದು ಸಾಧನೆ ಮಾಡಿದಾಗ ಅವರ ವಿಷಯದಲ್ಲಿ “ಹೆಮ್ಮೆ” ಪಡುತ್ತೇವೆ ಮತ್ತು ನಿಮ್ಮ ಮಕ್ಕಳನ್ನು ನೋಡಿ “ಗರ್ವ” ಪಡುತ್ತೇವೆ. “ನಿನ್ನ ಕೆಲಸದಲ್ಲಿ ಹೆಮ್ಮೆ ಪಡು” ಎನ್ನುವ ಮಾತಿಗೆ ನೀನು ನಿನ್ನ ಕೆಲಸವನ್ನು ಮಾಡುತ್ತಿರುವಾಗ ಸಂತೋಷವನ್ನು ಹೊಂದಿಕೊಳ್ಳುವುದು ಎಂದರ್ಥ.
  • ಒಬ್ಬ ವ್ಯಕ್ತಿ ತಾನು ಸಾಧನೆ ಮಾಡಿರುವುದರ ವಿಷಯದಲ್ಲಿ ಅದರ ಕುರಿತಾಗಿ ಗರ್ವದಿಂದರದಂತೆ ಹೆಮ್ಮೆ ಪಡಬಹುದು. “ಗರ್ವ” ಎನ್ನುವ ಈ ಎರಡು ವಿಭಿನ್ನವಾದ ಅರ್ಥಗಳಿಗೆ ಕೆಲವೊಂದು ಭಾಷೆಗಳಲ್ಲಿ ವಿಭಿನ್ನವಾದ ಪದಗಳನ್ನು ಒಳಗೊಂಡಿರುತ್ತವೆ.
  • “ಗರ್ವಭರಿತ” ಎನ್ನುವ ಪದವು ಯಾವಾಗಲೂ ನಕಾರಾತ್ಮಕವಾಗಿರುತ್ತದೆ, ಈ ಪದಕ್ಕೆ “ಅಹಂಕಾರಿ” ಅಥವಾ “ಸ್ವಯಂ ಚಿಂತನೆ” ಅಥವಾ “ಸ್ವಯಂ ಪ್ರಾಮುಖ್ಯತೆ” ಎನ್ನುವ ಅರ್ಥಗಳಿಂದ ಕೂಡಿರುತ್ತದೆ.

# ಅನುವಾದ ಸಲಹೆಗಳು:

  • “ಗರ್ವ” ಎನ್ನುವ ಪದವನ್ನು “ಅಹಂಕಾರ” ಅಥವಾ “ಜಂಭ” ಅಥವಾ “ಸ್ವಯಂ-ಪ್ರಾಮುಖ್ಯತೆ” ಎಂದೂ ಅನುವಾದ ಮಾಡಬಹುದು.
  • ಇತರ ಸಂದರ್ಭಗಳಲ್ಲಿ “ಗರ್ವ” ಎನ್ನುವ ಪದವನ್ನು “ಸಂತೋಷ” ಅಥವಾ “ತೃಪ್ತಿ” ಅಥವಾ “ಹರ್ಷ” ಎಂದೂ ಅನುವಾದ ಮಾಡಬಹುದು.
  • “ಗರ್ವದಿಂದ ಇರುವುದು” ಎನ್ನುವ ಮಾತನ್ನು “ಆರೊಂದಿಗೆ ಸಂತೋಷದಿಂದ ಇರುವುದು” ಅಥವಾ “ಅದರೊಂದಿಗೆ ತೃಪ್ತಿಪಡುವುದು” ಅಥವಾ “(ಸಾಧನೆಗಳನ್ನು ಮಾಡಿದವುಗಳ) ಕುರಿತಾಗಿ ಸಂತೋಷಪಡುವುದು” ಎಂದೂ ಅನುವಾದ ಮಾಡಬಹುದು.
  • “ನಿನ್ನ ಕೆಲಸಲ್ಲಿ ಗರ್ವಪಡು” ಎನ್ನುವ ಮಾತನ್ನು “ಚೆನ್ನಾಗಿ ಮಾಡುತ್ತಿರುವ ನಿನ್ನ ಕೆಲಸದಲ್ಲಿ ತೃಪ್ತಿಯನ್ನು ಪಡೆದುಕೊಳ್ಳು” ಎಂದೂ ಅನುವಾದ ಮಾಡಬಹುದು.
  • “ಯೆಹೋವನಲ್ಲಿ ಹೆಮ್ಮೆಪಡು” ಎನ್ನುವ ಮಾತನ್ನು “ಯೆಹೋವನು ಮಾಡಿದ ಅಧ್ಬುತವಾದ ಕಾರ್ಯಗಳ ಕುರಿತಾಗಿ ಸಂತೋಷಪಡುವುದು” ಅಥವಾ “ಯೆಹೋವನು ಎಷ್ಟು ಆಶ್ಚರ್ಯಕರನೆನ್ನುವುದರ ಕುರಿತಾಗಿ ಆನಂದಪಡುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಅಹಂಕಾರಿ, ತಗ್ಗಿಸಿಕೋ, ಸಂತೋಷ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಸತ್ಯವೇದದಿಂದ ಉದಾಹರಣೆಗಳು:

  • 04:02 ಅವರು ತುಂಬಾ ___ ಅಹಂಕಾರಿಗಳಾಗಿದ್ದರು ___ , ಮತ್ತು ಅವರು ದೇವರು ಹೇಳಿದ ಮಾತುಗಳ ಕುರಿತಾಗಿ ಅವರು ಎಚ್ಚರಿಕೆ ತೆಗೆದುಕೊಳ್ಳಲಿಲ್ಲ.
  • 34:10 “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ, ತೆರಿಗೆದಾರನ ಪ್ರಾರ್ಥನೆಯನ್ನು ದೇವರು ಕೇಳಿದನು ಮತ್ತು ನೀತಿವಂತರಾಗಿರಬೇಕೆಂದು ಪ್ರಕಟಿಸಿದನು. ಆದರೆ ಆತನು ಧರ್ಮದ ನಾಯಕ ಪ್ರಾರ್ಥನೆಯನ್ನು ಇಷ್ಟಪಡಲಿಲ್ಲ. ದೇವರು ___ ಅಹಂಕಾರಿಗಳನ್ನು ___ ತಿರಸ್ಕರಿಸುವನು, ಮತ್ತು ಆತನು ತಗ್ಗಿಸಿಕೊಂಡಿರುವವರನ್ನು ಮೇಲಕ್ಕೆ ಎತ್ತುವನು.”

# ಪದ ಡೇಟಾ:

  • Strong's: H1341, H1343, H1344, H1346, H1347, H1348, H1349, H1361, H1362, H1363, H1364, H1396, H1466, H1467, H1984, H2086, H2087, H2102, H2103, H2121, H3093, H3238, H3513, H4062, H1431, H4791, H5965, H7293, H7295, H7312, H7342, H7311, H7407, H7830, H8597, G212, G1391, G1392, G2744, G2745, G2746, G3173, G5187, G5229, G5243, G5244, G5308, G5309, G5426, G5450

ಹೊಟ್ಟು

# ಪದದ ಅರ್ಥವಿವರಣೆ:

ಹೊಟ್ಟು ಎನ್ನುವುದು ಧಾನ್ಯ ಬೀಜದ ಮೇಲೆ ಸುತ್ತಲೂ ಒಣಗಿದ ಸಂರಕ್ಷಣೆಯ ಕವಚ ಎಂದು ಹೇಳಬಹುದು. ಹೊಟ್ಟು ಆಹಾರಕ್ಕೆ ಒಳ್ಳೆಯದಲ್ಲ, ಆದ್ದರಿಂದ ಜನರು ಇದನ್ನು ಬೀಜಗಳಿಂದ ಅಥವಾ ಕಾಳುಗಳಿಂದ ಬೇರ್ಪಡಿಸಿ, ಅದನ್ನು ಬಿಸಾಡುತ್ತಾರೆ.

  • ಅನೇಕಸಲ ಧಾನ್ಯವನ್ನು ಗಾಳಿಯಲ್ಲಿ ಹಾರಿಸುವುದರ ಮೂಲಕ ಕಾಳುಗಳಿಂದ ಈ ಹೊಟ್ಟನ್ನು ಬೇರ್ಪಡಿಸುತ್ತಾರೆ. ಆ ಗಾಳಿಯು ಹೊಟ್ಟೆಲ್ಲಾ ಪಕ್ಕಕ್ಕೆ ಹೋಗುವಂತೆ ಮಾಡಿ, ಕಾಳುಗಳು ಮಾತ್ರ ನೆಲದ ಮೇಲೆ ಬೀಳುವಂತೆ ಮಾಡುತ್ತದೆ. ಈ ಪದ್ಧತಿಯನ್ನೇ “ತೂರಾಡುವುದು ಅಥವಾ ತೂರು ಎತ್ತುವುದು” ಎಂದು ಕರೆಯುತ್ತಾರೆ.
  • ಸತ್ಯವೇದದಲ್ಲಿ ಈ ಪದವನ್ನು ದುಷ್ಟ ಜನರಿಗೆ ಮತ್ತು ದುಷ್ಟತನಕ್ಕೆ, ವ್ಯರ್ಥ್ಯವಾದ ವಿಷಯಗಳಿಗೆ ಅಲಂಕಾರ ರೂಪಕವಾಗಿ ಬಳಸುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ಧಾನ್ಯ, ಗೋಧಿ, ತೂರು)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2842, H4671, H5784, H8401, G892

ಹೊಟ್ಟೆಕಿಚ್ಚು, ಆಸೆಪಡುವುದು

# ಪದದ ಅರ್ಥವಿವರಣೆ

“ಹೊಟ್ಟೆಕಿಚ್ಚು” ಎನ್ನುವ ಪದವು ಒಬ್ಬ ವ್ಯಕ್ತಿಗಿರುವ ಸಂಪತ್ತನ್ನು ನೋಡಿ ಅಥವಾ ಅವನಿಗಿರುವ ಒಳ್ಳೆ ಸದ್ಗುಣಗಳ ಕಾರಣ ಅವನನ್ನು ನೋಡಿ ಅಸೂಯೆ ಪಡುವುದನ್ನು ಸೂಚಿಸುತ್ತದೆ. “ಆಸೆಪಡುವುದು” ಎನ್ನುವ ಪದಕ್ಕೆ ಏನಾದರು ಬೇಕೆಂದು ಬಲವಾಗಿ ಬಯಸುವುದು ಎಂದರ್ಥ.

  • ಬೇರೆಯವರ ಯಶಸ್ವಿಯನ್ನು, ಸಿರಿ ಸಂಪತ್ತು ಅಥವಾ ಒಳ್ಳೆ ಭಾಗ್ಯವನ್ನು ನೋಡಿ ಅಸಮಧಾನ ಹೊಂದಿರುವ ನಕಾರಾತ್ಮಕವಾದ ಭಾವನೆಯನ್ನು ಹೊಟ್ಟೆಕಿಚ್ಚು ಎನ್ನುತ್ತಾರೆ.
  • ಬೇರೆಯವರ ಆಸ್ತಿ, ಅಥವಾ ಬೇರೆಯವರ ಹೆಂಡತಿಯನ್ನು ಸಹ ಬೇಕೆಂದು ಬಲವಾಗಿ ಬಯಸುವದನ್ನು ಆಸೆಪಡುವುದು ಎನ್ನುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ಅಸೂಯೆ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H183, H1214, H1215, H2530, H3415, H5869, H7065, H7068, G866, G1937, G2205, G2206, G3713, G3788, G4123, G4124, G4190, G5354, G5355, G5366

ಹೊತ್ತಿಕೊ, ಸಹಿಸು, ತಾಳಿಕೊಳ್ಳುವುದು, ಆಳು

# ಸತ್ಯಾಂಶಗಳು:

“ಹೊತ್ತಿಕೊ” ಎನ್ನುವ ಪದಕ್ಕೆ ಏನ್ನನಾದರು “ಒಯ್ಯು” ಎಂದು ಅಕ್ಷರಾರ್ಥವಾದ ಅರ್ಥ. ಈ ಪದವನ್ನು ಅನೇಕ ಅಲಂಕಾರ ರೂಪದಲ್ಲಿ ಉಪಯೋಗಗಳುಂಟು.

  • ಒಂದು ಸ್ತ್ರೀ ಮಗುವನ್ನು ಹೊತ್ತಿಕೊಳ್ಳುತ್ತಿರುವಾಗ, ಮಗುವಿಗೆ “ಜನ್ಮ ನೀಡುವುದು” ಎಂದರ್ಥ.
  • “ಭಾರವನ್ನು ಹೊತ್ತಿಕೊಳ್ಳುವುದು” ಎಂದರೆ “ಕಷ್ಟಗಳನ್ನು ಅನುಭವಿಸುವದು” ಎಂದರ್ಥ. ಈ ಕಷ್ಟಗಳು ಮಾನಸಿಕವಾಗಿ ಅಥವಾ ಭೌತಿಕವಾಗಿರಬಹುದು.
  • ಸತ್ಯವೇದದಲ್ಲಿ ಸಾಧಾರಣವಾಗಿ “ಫಲವನ್ನು ಕೊಡು” ಎನ್ನುವ ಮಾತಿಗೆ “ಫಲಿಸು” ಅಥವಾ “ಫಲ ಹೊಂದಿರು” ಎಂದರ್ಥ.
  • “ಸಾಕ್ಷಿಯಾಗಿರು” ಎನ್ನುವ ಮಾತಿಗೆ “ಒಬ್ಬನು ಅನುಭವಿಸಿದ ಅಥವಾ ನೋಡಿದ ಸಂಗತಿಗಳನ್ನು ಕುರಿತು ವರದಿ ಮಾಡುವುದು” ಎಂದರ್ಥ.
  • “ತನ್ನ ತಂದೆ ಮಾಡಿದ ಪಾಪಗಳಿಗೆ ಮಗನು ದೋಷವನ್ನು ಹೊತ್ತಿಕೊಳ್ಳುವದಿಲ್ಲ” ಎನ್ನುವ ವಾಕ್ಯಕ್ಕೆ “ಅವನು ಭದ್ಯನಲ್ಲ” ಅಥವಾ ತಂದೆಯ ಪಾಪಗಳಿಗೆ “ಅವನು ಶಿಕ್ಷೆಯನ್ನು ಹೊಂದುವದಿಲ್ಲ” ಎಂದರ್ಥ.
  • ಸರ್ವಸಾಮಾನ್ಯವಾಗಿ, ಈ ಪದವನ್ನು “ಹೊತ್ತಿಕೊ” ಅಥವಾ “ಭಾದ್ಯನಾಗು” ಅಥವಾ “ಫಲಿಸು” ಅಥವಾ “ಹೊಂದಿರುವುದು” ಅಥವಾ “ತಾಳಿಕೊಳ್ಳುವುದು” ಎಂದು ಸಂದರ್ಭಕ್ಕೆ ಅನುಸಾರವಾಗಿ ಅನುವಾದ ಮಾಡಬಹುದು.

(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ

(ಈ ಪದಗಳನ್ನು ಸಹ ನೋಡಿರಿ : ಭಾರ, ಎಲೀಷ, ಸಹಿಸು, ಫಲ, ದೋಷ, ವರದಿ, ಕುರಿ, ಬಲ, ಸಾಕ್ಷಿ, ಸಾಕ್ಷಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2232, H3201, H3205, H5187, H5375, H5445, H5449, H6030, H6509, H6779, G142, G399, G430, G503, G941, G1080, G1627, G2592, G3114, G3140, G4064, G4160, G4722, G4828, G4901, G5041, G5088, G5297, G5342, G5409, G5576

ಹೊರ ಹಾಕು, ಹೊರ ಕಳುಹಿಸುತ್ತಿದ್ದೇನೆ, ಹೊರ ನಡೆಸುತ್ತಿದ್ದೇನೆ, ಹೊರ ಹಾಕು, ಹೊರ ಹಾಕುತ್ತಿದ್ದೇನೆ

# ಪದದ ಅರ್ಥವಿವರಣೆ:

ಒಬ್ಬರನ್ನು ಅಥವಾ ಯಾವುದಾದರೊಂದನ್ನು “ಹೊರ ಹಾಕು” ಅಥವಾ “ಹೊರ ನಡೆಸು” ಎನ್ನುವದಕ್ಕೆ ಒಬ್ಬ ವ್ಯಕ್ತಿಯನ್ನಾಗಲಿ ಅಥವಾ ಯಾವುದಾದರೊಂದು ವಸ್ತುವನ್ನಾಗಲಿ ಹೊರ ಹಾಕುವುದಕ್ಕೆ ಬಲವಂತಿಕೆ ಮಾಡುವುದು ಎಂದರ್ಥ.

  • “ಹಾಕು” ಎನ್ನುವ ಪದಕ್ಕೆ “ಎಸೆ” ಎಂದು ಹೇಳುವ ಅರ್ಥವೇ ಇರುತ್ತದೆ. ಬಲೆಯನ್ನು ಹಾಕು ಎಂದರೆ ನೀರಿನೊಳಗೆ ಬಲೆಯನ್ನು ಎಸೆ ಎಂದರ್ಥ.
  • ಅಲಂಕಾರ ಭಾವನೆಯಲ್ಲಿ ಒಬ್ಬರನ್ನು “ಹೊರ ಹಾಕು” ಅಥವಾ “ಹೊರ ಕಳುಹಿಸು” ಎನ್ನುವದಕ್ಕೆ ಆ ವ್ಯಕ್ತಿಯನ್ನು ಪಕ್ಕಕ್ಕೆ ಕಳುಹಿಸು ಮತ್ತು ಆ ವ್ಯಕ್ತಿಯನ್ನು ತಿರಸ್ಕರಿಸು ಎನ್ನುವ ಅರ್ಥವು ಬರುತ್ತದೆ.

# ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ, ಇದನ್ನು ಇನ್ನೊಂದು ರೀತಿಯಲ್ಲಿ ಅನುವಾದ ಮಾಡುವುದಾದರೆ, “ಬಲವಂತ ಮಾಡು” ಅಥವಾ “ಪಕ್ಕಕ್ಕೆ ಕಳುಹಿಸು” ಅಥವಾ “ತೊಲಗಿಸು” ಎಂದು ಅನುವಾದ ಮಾಡಬಹುದು.
  • “ದೆವ್ವಗಳನ್ನು ಹೊರ ಹಾಕು” ಎನ್ನುವ ಮಾತನ್ನು “ದೆವ್ವಗಳು ಬಿಟ್ಟು ಹೋಗುವಂತೆ ಮಾಡು” ಅಥವಾ “ದುಷ್ಟ ಆತ್ಮಗಳನ್ನು ಹೊರ ನಡೆಸು” ಅಥವಾ “ದೆವ್ವಗಳನ್ನು ಹೊರತಳ್ಳು” ಅಥವಾ “ಹೊರ ಬರುವುದಕ್ಕೆ ದೆವ್ವಗಳಿಗೆ ಆಜ್ಞಾಪಿಸು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಹಾಮ್, ವಾಗ್ಧಾನ ಭೂಮಿ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H1272, H1644, H1920, H3423, H7971, H7993, G1544

ಹೊರೆ, ಹೊರೆಗಳು, ಭಾರವಾದ, ಪ್ರಯಾಸಕರವಾದ

# ಪದದ ಅರ್ಥವಿವರಣೆ:

ಹೊರೆ ಎನ್ನುವ ಪದಕ್ಕೆ ಹೆಚ್ಚಾದ ಭಾರ ಎಂದರ್ಥ. ಈ ಪದವು ಅಕ್ಷರಾರ್ಥವಾಗಿ ಭಾರ ಹೊತ್ತಿಕೊಂಡು ಹೋಗುವ ಒಂದು ಪ್ರಾಣಿಯಂತೆ ಭೌತಿಕವಾದ ಭಾರವನ್ನು ಸೂಚಿಸುತ್ತದೆ. “ಹೊರೆ” ಎನ್ನುವ ಪದಕ್ಕೆ ಅನೇಕವಾದ ಸಾಂಕೇತಿಕ ಅರ್ಥಗಳಿವೆ:

  • ಹೊರೆ ಎನ್ನುವುದು ಒಂದು ಕಠಿಣವಾದ ಕರ್ತವ್ಯವನ್ನು ಸೂಚಿಸುತ್ತದೆ ಅಥವಾ ಒಬ್ಬ ವ್ಯಕ್ತಿ ಮಾಡಬಹುದಾದ ತುಂಬಾ ಪ್ರಾಮುಖ್ಯವಾದ ಬಾಧ್ಯತೆಯನ್ನು ಸೂಚಿಸುತ್ತದೆ. ಅದಕ್ಕೆ ಆ ಹೊರೆಯನ್ನು ಹೊತ್ತಿಕೊಂಡು ಹೋಗುವ ವ್ಯಕ್ತಿಯನ್ನು ಕುರಿತು “ತಾಳಿಕೊಳ್ಳುತ್ತಿದ್ದಾನೆ” ಅಥವಾ “ಅತೀ ಹೆಚ್ಚಾದ ಭಾರವನ್ನು” “ಹೊತ್ತಿಕೊಂಡು ಹೋಗುತ್ತಿದ್ದಾನೆ” ಎಂದು ಹೇಳುತ್ತಾರೆ.
  • ಒಬ್ಬ ಕ್ರೂರ ನಾಯಕನು ತಾನು ಆಳುತ್ತಿರುವ ಜನರ ಮೇಲೆ ಕಠಿಣವಾದ ಭಾರಗಳನ್ನು ಇಡಬಹುದು, ಉದಾಹರಣೆಗೆ ಬಹು ಹೆಚ್ಚಾದ ತೆರಿಗೆಗಳನ್ನು ಕಟ್ಟಬೇಕೆಂದು ಅವರನ್ನು ಬಲವಂತಿಕೆ ಮಾಡಬಹುದು.
  • ಇನ್ನೊಬ್ಬರಿಗೆ ಭಾರವಾಗಿರಬಾರದೆಂದು ಬಯಸುವ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ತೊಂದರೆ ಕೊಡುವ ವ್ಯಕ್ತಿಯಾಗಿರಬಾರದು.
  • ಒಬ್ಬ ವ್ಯಕ್ತಿಯ ಪಾಪದ ಅಪರಾಧವು ಅವನಿಗೆ ತುಂಬಾ ಭಾರವಾಗಿರುತ್ತದೆ.
  • “ಕರ್ತನ ಭಾರ” ಎನ್ನುವ ಪದವನ್ನು ಪ್ರವಾದಿ ತಪ್ಪದೇ ಜನರಿಗೆ ತಿಳಿಸುವ “ದೇವರಿಂದ ಸಂದೇಶ” ಎನ್ನುವದನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಉಪಯೋಗಿಸಲಾಗಿದೆ.
  • “ಹೊರೆ” ಎನ್ನುವ ಪದವನ್ನು “ಬಾಧ್ಯತೆ” ಅಥವಾ “ಕರ್ತವ್ಯ” ಅಥವಾ “ಅತೀ ಹೆಚ್ಚಾದ ಭಾರ” ಅಥವಾ “ಸಂದೇಶ” ಎಂದು ಸಂದರ್ಭಕ್ಕೆ ತಕ್ಕಂತೆ ಅನುವಾದ ಮಾಡಿಕೊಳ್ಳಬಹುದು.

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H92, H3053, H4614, H4853, H4858, H4864, H4942, H5445, H5447, H5448, H5449, H5450, H6006, G4, G916, G922, G1117, G2347, G2599, G2655, G5413

ಹೊಲೆ, ಹೊಲೆಮಾಡಿದೆ, ಹೊಲೆ ಮಾಡುತ್ತಿದ್ದೇವೆ

# ಪದದ ಅರ್ಥವಿವರಣೆ:

“ಹೊಲೆ” ಎನ್ನುವ ಪದಕ್ಕೆ ಆರಾಧನೆಯಲ್ಲಿ ಉಪಯೋಗಿಸುವುದಕ್ಕೆ ಅಂಗೀಕೃತವಾಗದ ವಿಧಾನದಲ್ಲಿ ವಸ್ತುಗಳನ್ನಾಗಲಿ ಅಥವಾ ಪರಿಶುದ್ಧವಾದ ಸ್ಥಳವನ್ನು ಕಲುಷಿತಗೊಳಿಸುವುದಾಗಲಿ ಅಥವಾ ಹಾನಿ ಮಾಡುವುದಾಗಲಿ ಎಂದರ್ಥ.

  • ಅನೇಕಬಾರಿ ಯಾವುದನ್ನಾದರು ಹೊಲೆ ಮಾಡುವುದರಲ್ಲಿ ಅದನ್ನು ಅತೀ ಹೆಚ್ಚಾಗಿ ಅವಮಾನಕ್ಕೆ ಗುರಿಮಾಡುವುದನ್ನು ಒಳಗೊಂಡಿರುತ್ತದೆ.
  • ಉದಾಹರಣೆಗೆ, ಅನ್ಯ ಅರಸರು ತಾವು ತಮ್ಮ ಅರಮನೆಗಳಲ್ಲಿ ಔತಣ ಕೂಟಗಳಲ್ಲಿ ಉಪಯೋಗಿಸುವುದರ ಮೂಲಕ ದೇವರ ಆಲಯದಿಂದ ವಿಶೇಷವಾದ ಆಹಾರ ಪದಾರ್ಥಗಳನ್ನು ಹೊಲೆ ಮಾಡುತ್ತಿದ್ದರು.
  • ದೇವರ ಆಲಯದಲ್ಲಿ ಯಜ್ಞವೇದಿಯನ್ನು ಹೊಲೆ ಮಾಡುವುದಕ್ಕೆ ಶತ್ರುಗಳು ಸತ್ತವರಿಂದ ತೆಗೆದ ಎಲುಬುಗಳನ್ನು ಉಪಯೋಗಿಸುತ್ತಿದ್ದರು.
  • ಈ ಪದವನ್ನು “ಅಪರಿಶುದ್ಧವಾಗುವುದಕ್ಕೆ ಕಾರಣವಾಗು” ಅಥವಾ “ಅಪವಿತ್ರಗೊಳಿಸುವದರಿಂದ ಅವಮಾನ ಮಾಡು” ಅಥವಾ “ಅಗೌರವದಿಂದ ಅಶುದ್ಧ ಮಾಡುವುದು” ಅಥವಾ “ಅಪವಿತ್ರವಾಗುವುದಕ್ಕೆ ಕಾರಣವಾಗು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಯಜ್ಞವೇದಿ, ಮೈಲಿಗೆ, ಅವಮಾನ, ಅಶುದ್ಧ, ಪವಿತ್ರ, ದೇವಾಲಯ, ಪರಿಶುದ್ಧ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H2490, H2610, H2930, G953

ಹೊಸ್ತಿಲು, ಹೊಸ್ತಿಲುಗಳು

# ಪದದ ಅರ್ಥವಿವರಣೆ:

“ಹೊಸ್ತಿಲು” ಎನ್ನುವ ಪದವು ಬಾಗಿಲಲ್ಲಿ ಕೆಳಭಾಗವನ್ನು ಸೂಚಿಸುತ್ತದೆ ಅಥವಾ ಬಾಗಿಲಿನ ಒಳಗಿರುವ ಭವನದ ಚಿಕ್ಕ ಭಾಗವನ್ನು ಸೂಚಿಸುತ್ತದೆ.

  • ಕೆಲವೊಂದುಬಾರಿ ಹೊಸ್ತಿಲು ಎನ್ನುವುದು ಕೊಠಡಿಯೊಳಗೆ ಅಥವಾ ಭವನದೊಳಗೆ ಪ್ರವೇಶಿಸುವುದಕ್ಕೆ ಹೆಜ್ಜೆ ಹಾಕಬೇಕಾದಗ ತಪ್ಪದೇ ದಾಟ ಬೇಕಾದ ಕಟ್ಟಿಗೆಯ ತುಂಡಾಗಿರುತ್ತದೆ ಅಥವಾ ಕಲ್ಲಾಗಿರುತ್ತದೆ.
  • ಬಾಗಿಲು ಮತ್ತು ಗುಡಾರ ದ್ವಾರಗಳೆರಡಕ್ಕೂ ಹೊಸ್ತಿಲು ಇಟ್ಟಿರುತ್ತಾರೆ.
  • ಒಬ್ಬ ವ್ಯಕ್ತಿ ದಾಟಿ ಹೋಗುವುದಕ್ಕೆ ಮನೆಯ ಮೊದಲ ಪ್ರವೇಶ ದ್ವಾರದ ಸ್ಥಳವನ್ನು ಸೂಚಿಸುವುದಕ್ಕೆ ಅನುವಾದ ಭಾಷೆಯಲ್ಲಿ ಉಪಯೋಗಿಸುವ ಪದದೊಂದಿಗೆ ಈ ಪದವನ್ನು ಅನುವಾದ ಮಾಡಬಹುದು.
  • ಒಂದು ಈ ಪದಕ್ಕೆ ಯಾವ ಪದವೂ ಇಲ್ಲದಿದ್ದರೆ, “ಹೊಸ್ತಿಲು” ಎನ್ನುವ ಪದವನ್ನು “ಬಾಗಿಲು ಮಾರ್ಗ” ಅಥವಾ “ತೆರೆದಿರುವ” ಅಥವಾ “ಪ್ರವೇಶ ಮಾರ್ಗ” ಎಂದು ಸಂದರ್ಭಕ್ಕೆ ತಕ್ಕಂತೆ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಬಾಗಿಲು, ಗುಡಾರ)

# ಸತ್ಯವೇದದ ಅನುಬಂಧ ವಾಕ್ಯಗಳು :

# ಪದ ಡೇಟಾ:

  • Strong's: H624, H4670, H5592