1
ತೀತನೇ, ಪೌಲನಾದ ನಾನು ಈ ಪತ್ರಿಕೆಯನ್ನು
ನೀನಗೆ ಬರೆಯುತಿದ್ದೇನೆ. ನಾನು ಕರ್ತನ ಸೇವಕನು ಮತ್ತು ಮೆಸ್ಸಿಯನಾದ ಯೇಸುವಿನ ಅಪೋಸ್ತಲನು. ದೇವರು ತನ್ನವರೆಂದು ಆಯ್ಕಮಾಡಿಕೊಂಡ ಜನಾಂಗದವರು ಆತನನ್ನು ಹೆಚ್ಹಾಗಿ ಆತುಕೊಳ್ಳುವಂತೆ ಭೋದೀಸಲು ನನ್ನನ್ನು ಕಳುಹಿಸಿದ್ದಾನೆ. ಸತ್ಯ ಯಾವದೆಂದು ತಿಳಿದುಕೊಳ್ಳುವಂತೆ ಆತನ ಜನರಿಗೆ ಸಹಾಯಮಾಡುತಿದ್ದೇನೆ, ಅದರಿಂದ ಅವರು ದೇವರಿಗೇ ಮೆಚ್ಹಗೆಯಾಗುವ ರೀತಿಯಲ್ಲಿ ಬದುಕಬಹುದು.
2
ಈ ರೀತಿಯಾಗಿ ಬದುಕುವದು ಹೇಗೆ ಎಂದು ಆತನ ಜನರು ಕಲಿಯಬಹುದು ಕಾರಣ ಅವರು ಯಾವಾಗಲು ಬದಿಕಿರುವದಕ್ಕೆ ದೇವರೇ ಕಾರಣ ಎಂಬ ನಂಬಿಕೆವುಳ್ಳವರಾಗಿದ್ದಾರೆ. ದೇವರು ಎಂದಿಗೂ ಸುಳ್ಳಾಡಲಾರನು. ಲೋಕವು ಉಂಟಾಗುವ ಮುನ್ನವೇ, ಅವರು ನಮ್ಮನ್ನು ಶಾಶ್ವತವಾಗಿ ಬದುಕುವಂತೆ ಮಾಡುವ ಭರವಸೆ ನೀಡಿದರು.
3
ನಂತರ, ಕ್ಲುಪ್ತವಾದ ಸಮಯದಲ್ಲಿ, ಈ ಸಂದೇಶದ ಮೂಲಕ ತನ್ನ ಯೋಜನೆಯನ್ನು ತೀಳಿಸಿದನು ಆತನು ನನ್ನನ್ನು ಭೋದಿಸಲು ನೆಮೀಸಿದನು, ನಮ್ಮನ್ನುರಕ್ಷಿಸುವ ದೇವರ ಆಜ್ಞೆಯನ್ನುಪರಿಪಲಿಸುವದಕ್ಕಾಗಿ ನಾನು ಇದನ್ನು ಮಾಡುತಿದ್ದೇನೆ.
4
ತೀತನೆ, ನಾನು ನೀನಗೆ ಬರೆಯುತಿದ್ದೇನೆ, ನೀನು ನನಗೆ ನೀಜವಾದ ಮಗನಂತೆ ಆಗೀದ್ದಿ ಏಕೆಂದರೆ ನಾವೀಬ್ಬರು ಈಗ ಮೆಸ್ಸಿಯನನ್ನು ನಂಬಿದ್ದೇವೆ. ತಂದೆಯಾದ ದೇವರು ಮತ್ತು ನಮ್ಮನ್ನು ರಕ್ಷಿಸುವ ಮೆಸ್ಸಿಯನಾದ ಯೇಸು ನಿಮಗೆ ಸತತವಾಗಿ ದಯೆ ತೋರಿಸುತ್ತಾರೆ, ಮತ್ತು ನಿಮಗೆ ಶಾಂತಿಯುತ ಮನೋಭಾವವನ್ನು ನೀಡಲಿ.
5
ಈ ಒಂದು ಕಾರಣಕ್ಕಾಗಿ ನಾನು ನೀನ್ನನ್ನು ಕ್ರೆತದ್ವಿಪದಲ್ಲಿ ಬಿಟ್ಟೆನು, ಇನ್ನು ಅಪೂರ್ಣವಾಗಿರುವ ಕೆಲಸವನ್ನು ನೀನು ಮಾಡು, ನಾನು ನೀನಗೆ ತಿಳಿಸಿದ ಪ್ರಕಾರವೇ ಪ್ರತಿಯೊಂದು ಪಟ್ಟಣದಲ್ಲಿರುವ ವಿಸ್ವಾಷಿಗಳ ಗುಂಪುಗಳಿಗೆ ಹಿರಿಯರನ್ನು ನೇಮಕಮಾಡು.
6
ಸಭಾ ಹಿರಿಯನು ನೀನ್ದಾರಹೀತನು ಎಕಪತ್ನಿಯುಲ್ಲವನೂ ಆಗಿರಬೇಕು, ಅವನ ಮಕ್ಕಳು ಕರ್ತನನ್ನು ನಂಬಿದವರಾಗಿರಬೇಕು, ಅವರು ದುರ್ಮರ್ಗಸ್ತರೆನಿಸಿಕೊಂಡವರಾಗಲಿ ಅಧಿಕಾರಕ್ಕೆ ಒಳಗಾಗದವರಾಗಲಿ ಆಗೀರಬಾರದು.
7
ದೇವರ ಜನರನ್ನು ಮುನ್ನೆಡಿಸುವ ಪ್ರತಿಯೊಬ್ಬರೂ ದೇವರ ಮನೆಯನ್ನು ನಿರ್ವಹಿಸುವಂತೆ. ಆದುದರಿಂದ ಈ ವ್ಯಕ್ತಿಗೆ ಒಳ್ಳೆಯ ಹೆಸರು ಇರುವದು ತುಂಬಾ ಒಳ್ಳೆಯದು, ಅವನು ಸ್ವೇಚಪರನಾದರೂ ಮುಂಗೋಪಿಯಾದರೂ ಕುಡಿದು ಜಗಳವಾಡುವವನಾದರೂ ಹೊಡೆದಾಡುವವನಾದರೂ ನೀಚಲಾಭವನ್ನು ಅಪೇಕ್ಸಿಸುವವನಾಗಿರಬಾರದು.
8
ಅದಕ್ಕೆ ಬದಲಾಗಿ, ಅವನು ಅತಿಥಿ ಸತ್ಕಾರಮಾಡುವವನೂ ಒಳ್ಳೆಯದನ್ನು ಪ್ರೀತಿಸುವವನೂ ಆಗಿರಬೇಕು. ಅವನು ಯಾವಾಗಲೂ ಪ್ರಜ್ಞಾಪೂರ್ವಕವಾಗಿ ವರ್ತಿಸಬೇಕು ಮತ್ತು ಇತರರನ್ನು ನ್ಯಾಯಯುತವಾಗಿ ಮತ್ತು ಪ್ರಮಾಣೀಕವಾಗಿ ನಡೆಸಿಕೋಳ್ಳಾಬೇಕು. ಅವನು ಯಾವಾಗಲೂ ದೇವರಿಗೆ ಸಮರ್ಪಿತನಾಗಿರುವವನಿಗೆ ಸರಿಯಾದ ರೀತಿಯಲ್ಲಿ ವರ್ತಿಸಬೇಕು ಮತ್ತುಅವನು ಯಾವಾಗಲೂ ತನ್ನ ಭಾವನೆಗಳನ್ನು ನಿಯಂತ್ರಿಸಬೇಕು.
9
ನಾವು ಕಲಿಸಿದ ಸತ್ಯಸಂಗತಿಗಳನ್ನು ಆತನೂ ಯಾವಾಗಲೂ ನಂಬುವವನಾಗಿರಬೇಕು, ಮತ್ತು ಅವನು ಅವುಗಳಿಗನುಗುಣವಾಗಿ ಜೀವಿಸಬೇಕು. ಜನರನ್ನು ಈ ರೀತಿಯಾಗಿ ಬದುಕುವಂತೆ ಮಾನವಲಿಸಲು ಅವನು ಇದನ್ನುಮಾಡಬೇಕು ಮತ್ತು ಜನರು ಈ ರೀತಿಯಾಗಿ ಬದುಕಲು ಬಯಸದಿದ್ದರೆ ಅವರನ್ನು ಸರಿಪಡಿಸಬೇಕು.
10
ನಾನು ನಿನಗೆ ಈ ವಿಷಯವನ್ನು ಹೇಳುತ್ತೇನೆ ಏಕೆಂದರೆ ಅವರ ಮೇಲೆ ಅಧಿಕಾರ ಹೊಂದಿರುವವರನ್ನು ಪಾಲಿಸಲು ನಿರಾಕರಿಸುವ ಜನರು ಅನೇಕರಿದ್ದಾರೆ. ಈ ಜನರು ಹೇಳುವ ಯಾವದಕ್ಕೂ ಮೌಲ್ಯವಿಲ್ಲ. ಅವರು ತಪ್ಪು ವಿಷಯಗಳನ್ನು ನಂಬುವಂತೆ ಜನರನ್ನು ಮನವಲಿಸುತ್ತಾರೆ. ಈ ರೀತಿ ಇರುವ ಜನರು ಮೆಸ್ಸಿಯನ ಎಲ್ಲಾ ಹಿಂಬಾಲಕರಿಗೆ ಸುನ್ನತಿ ಆಗುವಂತೆ ಹೇಳುತ್ತಾರೆ.
11
ನೀನು ಮತ್ತು ನೀನು ನೇಮಿಸಿರುವ ನಾಯಕರು ವಿಶ್ವಾಸಿಗಳನ್ನು ಭೋದಕರಿಂದ ತಡೆಯಬೇಕು. ಅವರು ಕಲಿಸಬಾರದ ವಿಷಯಗಳನ್ನು ಕಲಿಸುತ್ತಿದ್ದಾರೆ, ಇಡಿe ಕುಟುಂಬಗಳು ತಪ್ಪು ವಿಷಯಗಳನ್ನು ನಂಬುವಂತೆ ಮಾಡುತ್ತಾರೆ. ಜನರು ಅವರಿಗೆ ಹಣ ಕೋಡುತ್ತಾರೆ ಎಂಬ ಉದ್ದೇಶದಿಂದ ಅವರು ಇದನ್ನು ಮಾಡುತ್ತಾರೆ. ಎದು ತುಂಬಾ ನಾಚಿಕೆಗೇಡಿನ ಸಂಗತಿ.
12
ಕ್ರೆeತದವರು ಯಾವಾಗಲೂ ಸುಳ್ಳುಗಾರರು ದುಷ್ಟಮ್ರಗಗಳೂ ಸೋಮರಿಗಳಾದ ಹೊಟ್ಟೆಬಾಕರೂ ಆಗಿದ್ದಾರೆಂದು ಅವರಲ್ಲಿಯೇ ಹುಟ್ಟಿದ ಒಬ್ಬ ಪ್ರವಾದಿಯು ಹೇಳಿದನು.
13
ಆತನು ಹೆಳಿರುವದು ಸತ್ಯವಾಗಿದೆ, ಆದ್ದರಿಂದ ಅವರನ್ನುಸಂಪೂರ್ಣವಾಗಿ ಕ್ರಮ ಪಡಿಸಿ ಇದರಿಂದ ಅವರು ದೇವರ ಬಗ್ಗೆಸರಿಯಾದ ವಿಷಯಗಳನ್ನು ನಂಬಿ ಇತರರರಿಗೆ ಸರಿಯಾಗಿ ಕಲಿಸುವರು.
14
ಯೇಹೂದ್ಯೆರು ಹುಟ್ಟುಹಾಕಿದ ಕಥೆಗಳು ಮತ್ತು ಜನರಿಂದ ಬಂದ ಆಜ್ಞೆಗಳ ಪ್ರಕಾರ ಅವರು ಬದುಕುವದನ್ನು ದೇವರಿಂದಲ್ಲ, ಸತ್ಯವನ್ನು ಪಾಲಿಸುವದನ್ನು ನಿಲ್ಲಿಸಿದ ಜನರಿಂದಲೇ ನಿಲ್ಲಬೇಕು.
15
ಕೆಲವರಿಗೆ ಪಾಪದ ಆಲೋಚನೆಗಳು ಅಥವಾ ಆಶೆಗಳು ಇಲ್ಲದಿದ್ದರೆ, ಆ ಜನರಿಗೆ ಎಲ್ಲವೂ ಒಳ್ಳೆಯದು. ಆದರೆ ಜನರು ದುಷ್ಟರಾಗಿದ್ದರೆ ಮತ್ತು ಮೆಸ್ಸಿಯನಾದ ಯೆಸುವನ್ನು ನಂಬದಿದ್ದರೆ, ಅವರು ಮಾಡುವ ಎಲ್ಲವೂ ಅವರನ್ನು ಅಶುದ್ದಗೋಳಿಸುತ್ತದೆ. ಅಂತಹ ಜನರ ಆಲೋಚನಾ ವಿಧಾನ ಹಾಳಾಗಿದೆ. ಅವರು ಕೆಟ್ಟದ್ಗನ್ನು ಮಾಡುವಾಗ ಅವರು ತಪ್ಪಿತಸ್ಥರೆಂದು ಭಾವಿಸುವದಿಲ್ಲ.
16
ಅವರು ತಾವು ದೇವರನ್ನುಅರಿತವರೆಂದು ಹೇಳಿಕೊಳ್ಳುತ್ತಾರೆ, ಆದರೆ ಅವರು ಅಸಹ್ಯರೂ ಅವಿಧೇಯರೂ ಸತ್ಕಾರಿಗಳಿಗೆಲ್ಲಾಅಪ್ರಯೋಜಕರು ಆಗಿರುವದರಿಂದ ದೇವರನ್ನುಅರಿಯೆವೆಂದು ತಮ್ಮ ಕಾರ್ಯಗಳಿಂದಲೇ ಹೇಳಿದಂತಾಯಿತು.