1
ಆದರೆ ತೀತನೆ, ನಿನಗಾಗಿ, ದೇವರ ಬಗ್ಗೆ ಸತ್ಯವನ್ನು ನಂಬುವ ಜನರಿಗೆ ಸೂಕ್ತವಾದ ನಡುವಳಿಕೆಯನ್ನು ನೀನು ಜನರಿಗೆ ಕಲಿಸಬೇಕು.
2
ಅವರು ಇತರ ಜನರು ಗೌರವಿಸುವ ರೀತಿಯಲ್ಲಿ ಬದುಕಬೇಕು ಮತ್ತುಅವರು ಪ್ರಜ್ಞಾಪೂರ್ವಕವಾಗಿ ವರ್ತಿಸಬೇಕು, ಎಲ್ಲಾ ಸಮಯದಲ್ಲಿ ತಮ್ಮನ್ನು ನಿಯಂತ್ರಿಸಿಕೊಳ್ಳಬೇಕು ಎಂದು ಹಿರಿಯರಿಗೆ ಹೇಳು. ಅವರು ದೇವರ ಬಗ್ಗೆ ನಿಜವಾದ ವಿಷಯಗಳನ್ನು ದೃಡವಾಗಿ ನಂಬಬೇಕು, ಇತರರನ್ನು ನಿಜವಾಗಿಯೂ ಪ್ರೀತಿಸಬೇಕು, ಮತ್ತು ಕಷ್ಟವಾದಾಗಲೂ ಈ ಎಲ್ಲಾ ಕೆಲಸಗಳನ್ನು ಮಾಡಬೇಕೆಂದು ಅವರಿಗೆ ತಿಳಿಸು .
3
ಪುರುಷರಂತೆ ವೃದ್ದರಾದ ಮಹಿಳೆಯರಿಗೆ ಜೀವಿಸಲು ಹೇಳು, ಇದರಿಂದ ಅವರು ದೇವರನ್ನು ತುಂಬಾ ಗೌರವಿಸುತ್ತಾರೆಂದು ಪ್ರತಿಯೊಬ್ಬರಿಗೂ ತಿಳುಯುತ್ತದೆ. ಅವರು ಇತರ ಜನರ ಬಗ್ಗೆ ನಿಚವಾಗಿ ಅಥವಾ ಸುಳ್ಳಾದ ವಿಷಯಗಳನ್ನು ಹೇಳಬಾರದು, ಮತ್ತು ಅವರು ಬಹಳಷ್ಟು ಮದ್ಯೆಕ್ಕೆ ಗುಲಾಮರಾಗಿರಬಾರದು. ಅದಕ್ಕೆ ಬದಲಾಗಿ ಅವರು ಒಳ್ಳೆದನ್ನುಇತರರಿಗೆ ಬೋಧಿಸಬೇಕು.
4
ಈ ರೀತಿಯಾಗಿ, ಪ್ರಾಯದ ಸ್ತ್ರೀಯರಿಗೆ ತಮ್ಮ ಗಂಡಂದಿರನ್ನು ಮತ್ತು ಮಕ್ಕಳನ್ನು ಪ್ರಿತಿಸುವಂತೆ ಅವರು ಸಲಹೆ ನೀಡಲು ಸಾದ್ಯವಾಗುವದು.
5
ವೃದ್ದರಾದ ಮಹಿಳೆಯರು ತರುಣ ಮಹಿಳೆಯರಿಗೆ ತಾವು ಹೇಳುವದನ್ನುನಿಯಂತ್ರಿಸಲು ಮತ್ತು ಯಾವದೇ ಪುರುಷನ ವಿರುದ್ದ ತಪ್ಪಾದ ರೀತಿಯಲ್ಲಿ ವರ್ತಿಸದಂತೆ, ಮನೆಯಲ್ಲಿ ಚನ್ನಾಗಿ ಕೆಲಸಮಾಡಲು ಮತ್ತು ತಮ್ಮ ಗಂಡಂದಿರು ಹೇಳಿದ್ದನ್ನು ಮಾಡಲು ಕಲಿಸಬೇಕು. ಯಾರು ನಮಗೆ ದೇವರ ಸಂದೇಶವನ್ನುಅಣುಕಿಸದಂತೆ ಅವರು ಈ ಎಲ್ಲಾ ಕೆಲಸಗಳನ್ನು ಮಾಡಬೇಕು.
6
ತರುಣರಿಗೆ ಸಂಬಂಧಿಸಿದಂತೆ ತಮ್ಮನ್ನುತಾವು ಚನ್ನಾಗಿ ನಿಯಂತ್ರಿಸಿಕ್ಕೊಳ್ಳಲು ಎಚ್ಚರಿಸು.
7
ನೀನು ನಿರಂತರವಾಗಿ ಒಳ್ಳೆಯದನ್ನು ಮಾಡಬೇಕು ಇದರಿಂದ ಇತರರು ತಾವು ಏನು ಮಾಡಬೇಕು ಎಂಬದನ್ನು ನೋಡುತ್ತಾರೆ,ನೀನು ವಿಶ್ವಾಗಳಿಗೆ ಕಲಿಸುವಾಗ, ನೀನು ಹೇಳುವದೆಲ್ಲವೂ ಸತ್ಯವೇ ಎಂದು ಖಚಿತಪಡಿಸಿಕೊ ಮತ್ತುಅವರು ಗೌರವಿಸುವ ರೀತಿಯಲ್ಲಿ ಹೇಳು.
8
ಯಾರು ನಿನ್ನನ್ನು ಟೀಕಿಸದ ಸಂದೆಶಗಳೊಂದಿಗೆ ಜನರಿಗೆ ಯಾವದು ಸರಿ ಎಂದು ಕಲಿಸು, ಯಾರಾದರೂ ನಿನ್ನನ್ನು ತಡೆಯಲು ಬಯಸಿದರೆ, ಇತರ ಜನರು ಅವರನ್ನುನಾಚಿಕೆ ಪಡಿಸುತ್ತಾರೆ ಏಕೆಂದರೆ ಅವರು ನಮ್ಮಲ್ಲಿ ಯಾರ ಬಗ್ಗೆಯೂ ಕೆಟ್ಟದ್ದನ್ನುಹೊಂದಿರುವದಿಲ್ಲಾ.
9
ದಾಸರಾಗಿರುವ ಭಕ್ತರ ವಿಷದಲ್ಲಿ, ಅವರು ಯಾವಾಗಲೂ ತಮ್ಮ ಯಜಮಾನರಿಗೆ ಅಧಿನರಾಗಿರಬೇಕೆಂದು ಅವರಿಗೆ ಕಲಿಸು. ಎಲ್ಲಾ ರೀತಿಯಲ್ಲೂ ಯಜಮಾನರಿಗೆ ಇಷ್ಟವಾಗುವ ರೀತಿಯಲ್ಲಿ ಬದುಕಲು ಮತ್ತುಅವರೊಂದಿಗೆ ವಾದಮಾಡದಂತೆ ಹೇಳು.
10
ಅವರು ತಮ್ಮ ಯಜಮಾನರಿಂದ ಯಾವ ಸಣ್ಣ ವಸ್ತುಗಳನ್ನು ಕದಿಯಬಾರದು; ಬದಲಾಗಿ, ಅವರು ಅವರಿಗೆ ನಂಬಿಗಸ್ತರಾಗಿರಬೇಕು ಮತ್ತು ನಮ್ಮನ್ನು ರಕ್ಷಿಸುವ ದೇವರ ಬಗ್ಗೆ ನಾವು ಕಲಿಸುವ ಎಲ್ಲವನ್ನು ಜನರು ಮೆಚ್ಚುವಂತೆ ಮಾಡುವಂತೆ ಅವರು ಎಲ್ಲವನ್ನು ಮಾಡಬೇಕು.
11
ವಿಶ್ವಾಸಿಗಳು ಈ ಒಳ್ಳೆಯರೀತಿಯಲ್ಲಿ ನಡೆದುಕೊಳ್ಳಬೇಕು ಏಕೆಂದರೆ ದೇವರು ಯಾರಿಗೂ ಸ್ವೀಕರಿಸುವ ಯೋಗ್ಯೆತೆ ಇಲ್ಲದಂತ ರಕ್ಷಣೆಯನ್ನು ಉಡುಗೊರೆಯಾಗಿ ಕೊಡಲು ಮುಂದಾಗಿದ್ದಾರೆ.
12
ದೇವರು ನಮಗೆ ರಕ್ಷಣೆಯನ್ನುಉಡುಗೊರೆಯಾಗಿ ಕೊಟ್ಟಿರುವದರಿಂದ, ಪ್ರಾಪಂಚಿಕ ಜನರು ಮಾಡುವದನ್ನು ನಾವು ಮಾಡದಂತೆ ತಡೆಯಲು ಆತನು ನಮಗೆ ತರಬೇತಿ ಕೊಡುತ್ತಾನೆ. ಈ ಸಮಯದಲ್ಲಿ ನಾವು ಜೀವಿಸುತ್ತಿರುವಾಗ ದೇವರನ್ನು ಪಾಲಿಸುವಂತೆ ಆತನು ನಮಗೆ ವಿವೇಕಯುತವಾಗಿರಲು, ಸರಿಯಾದದ್ದನ್ನು ಮಾಡಲು ಕಲಿಸುತ್ತಾನೆ.
13
ಅದೇ ಸಮಯದಲ್ಲಿ, ಭವಿಷ್ಯದಲ್ಲಿ ಆತನು ಕಂಡಿತವಾಗಿಯೂ ಏನು ಮಾಡುತ್ತಾನೆ ಎಂದು ಕಾಯುವಂತೆ ದೇವರು ನಮಗೆ ಕಲಿಸುತ್ತಾನೆ, ಇದು ನಮಗೆ ಸಂತೋಷವನ್ನುನೀಡುತ್ತದೆ. ಅಂದರೆ, ನಮ್ಮ ರಕ್ಷಕ ಮತ್ತು ಶಕ್ತಿಯುತ ದೇವರಾದ ಯೇಸು ಮೆಸ್ಸಿಯನು ಮಾಹಾ ಮಹಿಮೆಯೊಡನೆ ನಮ್ಮ ಬಳಿಗೆ ಹಿಂತಿರುಗುತ್ತಾನೆ.
14
ಆತನು ನಮ್ಮನ್ನು ಸಕಲ ಅಧರ್ಮದಿಂದ ವಿಮೋಚಿಸುವದಕ್ಕೂ ಸತ್ಕ್ರಿಯಗಳಲ್ಲಿ ಆಸಕ್ತರಾದ ಸ್ವಕೀಯ ಜನರನ್ನು ತನಗಾಗಿ ಪರಿಶುದ್ದ ಮಾಡುವದಕ್ಕೂ ನಮಗೋಸ್ಕರ ತನ್ನನ್ನು ಒಪಿಸಿಕೊಟ್ಟನು.
15
ತೀತನೇ, ಈ ವಿಷಯಗಳ ಕುರಿತಾಗಿ ಮಾತನಾಡುತ್ತೇನೆ. ವಿಶ್ವಾಗಳಿಗೆ ನಾನು ವಿವರಿಸಿದಂತೆ ಬದುಕಲು ಪ್ರೇರೇಪಿಸು ಮತ್ತು ಅವರು ಅನುಸರಿಸದಿದ್ದಾಗ ಎಚ್ಚರಿಸುತ್ತಾ ಪೂರ್ಣ ಅಧಿಕಾರದಿಂದ ಖಂಡಿಸುತ್ತಾ ಇರು, ಯಾರು ನಿನ್ನನ್ನು ತಿರಸ್ಕರಿಸದ ಹಾಗೆ ನೋಡಿಕೋ.